Headlines

ಕೆಪಿಎಸ್ಸಿ ಕರ್ಮಕಾಂಡ ಬಗ್ಗೆ ರಾಹುಲ್ ಗಾಂಧಿ ಮೌನ ಯಾಕೆ?: ಕಾಂಗ್ರೆಸಿಗರ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ – Kannada News | Pralhad Joshi Questions Rahul Gandhi’s Silence on KPSC Scam Amid Congress’s NEET Protests

ಕಾಂಗ್ರೆಸಿಗರ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಕಿಡಿImage Credit source: PTI ನವದೆಹಲಿ/ಬೆಂಗಳೂರು, ಜುಲೈ 23: ನೀಟ್ ಬಗ್ಗೆ ಧ್ವನಿ ಎತ್ತುತ್ತಿರುವ ರಾಹುಲ್ ಗಾಂಧಿ ಕರ್ನಾಟಕದ ಕೆಪಿಎಸ್ಸಿ ಕರ್ಮಕಾಂಡ ಬಗ್ಗೆ ಏಕೆ ಧ್ವನಿ ಅಡಗಿಸಿದ್ದಾರೆ? ಇದೆಂಥ ದ್ವಿಮುಖ ನೀತಿ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ವಿಪಕ್ಷಗಳು ರಾಷ್ಟ್ರೀಯ ಪರೀಕ್ಷೆ ವಿಷಯದಲ್ಲಿ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ನೀಟ್ ವಿವಾದ ಕುರಿತು ಸಂಸತ್ತಿನಲ್ಲಿ ಮುಕ್ತ ಹಾಗೂ…

Read More

IND vs ZIM: ಸತತ ಗೆಲುವು; ಧೋನಿಯ ಸಾರ್ವಕಾಲಿಕ ದಾಖಲೆ ಮುರಿದ ಶ್ರೇಯಸ್ – Kannada News | Shreyas Iyer Breaks MS Dhoni’s Toss Record in India vs Zimbabwe T20

ಹರಾರೆಯಲ್ಲಿ ಜಿಂಬಾಬ್ವೆ ಹಾಗೂ ಭಾರತ (India vs Zimbabwe ) ನಡುವಿನ ಮೊದಲ ಟಿ20 ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೇಯಸ್ ಅಯ್ಯರ್ (Shreyas Iyer) ಮೊದಲು ಬೌಲಿಂಗ್‌ ಮಾಡಲು ನಿರ್ಧರಿಸಿದರು. ವಾಸ್ತವವಾಗಿ ಭಾರತದ ಟಿ20 ನಾಯಕನಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಶ್ರೇಯಸ್ ಅಯ್ಯರ್​ಗೆ ನಿರೀಕ್ಷಿಸಿದ ಯಶಸ್ಸು ಸಿಗದಿರಬಹುದು, ಆದರೆ ಟಾಸ್‌ನಲ್ಲಿ ಅವರ ಅದೃಷ್ಟ ಅದ್ಭುತವಾಗಿದೆ. ನಾಯಕನಾಗಿ ಶ್ರೇಯಸ್ ಅಯ್ಯರ್​ಗೆ ಇದು 8ನೇ ಅಂತರರಾಷ್ಟ್ರೀಯ ಟಿ20 ಪಂದ್ಯವಾಗಿದ್ದು, ಈ 8 ಪಂದ್ಯಗಳಲ್ಲೂ ಶ್ರೇಯಸ್ ಟಾಸ್ ಗೆದ್ದಿದ್ದಾರೆ….

Read More

‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ – Kannada News | Kannada actor Dhanush Manjunath talks about Jana Nayagan Movie and Thalapathy Vijay

ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ (Jana Nayagan) ಸಿನಿಮಾದಲ್ಲಿ ಕನ್ನಡದ ನಟ ಧನುಷ್ ಮಂಜುನಾಥ್ ಅವರು ಅಭಿನಯಿಸಿದ್ದಾರೆ. ಇಂದು (ಜುಲೈ 23) ವಿಶ್ವಾದ್ಯಂತ ಈ ಚಿತ್ರ ಬಿಡುಗಡೆ ಆಗಿದೆ. ವಿಜಯ್ ಅಭಿಮಾನಿಯೂ ಆಗಿರುವ ಧನುಷ್ ಮಂಜುನಾಥ್ ಅವರು ತಮ್ಮ ನೆಚ್ಚಿನ ಹೀರೋ ಜೊತೆ ಅಭಿನಯಿಸಿದ ಅನುಭವವನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ. ‘ಚಿಕ್ಕ ವಯಸ್ಸಿನಿಂದಲೂ ನಾನು ವಿಜಯ್ ಅವರ ಫ್ಯಾನ್. ಅವರನ್ನು ನೋಡಿ ನಾನು ಸ್ಫೂರ್ತಿ ಪಡೆದುಕೊಂಡೆ. ಅವರ ಜೊತೆ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು….

Read More

ತೂಕ ಇಳಿಕೆ, ಜೀರ್ಣಕ್ರಿಯೆ, ಹೃದಯ ಆರೋಗ್ಯ ಕಾಪಾಡಲು ಒಂದು ಮುಷ್ಟಿ ಮೊಳಕೆ ಬಂದ ಮೆಂತ್ಯೆ ಸಾಕು..! – Kannada News | Sprouted Fenugreek: Health Benefits, Uses and Expert Tips

ಮೆಂತ್ಯೆ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಮಸಾಲೆಯಾಗಿದ್ದರೂ, ಇದರ ಆರೋಗ್ಯ ಪ್ರಯೋಜನಗಳು ಸಾಕಷ್ಟಿದೆ. ವಿಶೇಷವಾಗಿ ಮೊಳಕೆ ಬಂದ ಮೆಂತ್ಯೆ (Sprouted Fenugreek) ಕಾಳುಗಳು ಪೌಷ್ಟಿಕಾಂಶಗಳ ಉತ್ತಮ ಮೂಲವಾಗಿದ್ದು, ಜೀರ್ಣಕ್ರಿಯೆ ಸುಧಾರಿಸುವುದರಿಂದ ಹಿಡಿದು ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಅದರಲ್ಲಿಯೂ ಮೆಂತ್ಯೆ ಕಾಳುಗಳನ್ನು ಮೊಳಕೆ ಬರಿಸಿದಾಗ ಅವುಗಳಲ್ಲಿರುವ ಕೆಲವು ವಿಟಮಿನ್‌, ಖನಿಜಾಂಶಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ದೇಹಕ್ಕೆ ಸುಲಭವಾಗಿ ಹೀರಿಕೊಳ್ಳಲು ಸಹಾಯ ನಡುತ್ತದೆ. ಮೊಳಕೆ ಬಂದ ಮೆಂತ್ಯೆ ಆರೋಗ್ಯಕ್ಕೆ ಹೇಗೆ…

Read More

ಹೊಸ ಏರ್ಲೈನ್ಸ್ ಕಟ್ಟಲಿರುವ ಅದಾನಿ; ಎರಡೇ ಕಂಪನಿಗಳ ಪ್ರಾಬಲ್ಯದ ವೈಮಾನಿಕ ಕ್ಷೇತ್ರದಲ್ಲಿ ಹೊಸ ಸಂಚಲನ ಸಾಧ್ಯತೆ – Kannada News | Adani Group may enter Airlines business in India, says report

ನವದೆಹಲಿ, ಜುಲೈ 23: ಭಾರತದ ಪ್ರಮುಖ ಕೈಗಾರಿಕೋದ್ಯಮಿ ಗೌತಮ್ ಅದಾನಿ (Gautam Adani) ಅವರು ವೈಮಾನಿಕ ಕ್ಷೇತ್ರಕ್ಕೆ ಲಗ್ಗೆ ಇಡಲು ಯೋಚಿಸುತ್ತಿದ್ದಾರೆ. ಈಗಾಗಲೇ ಪೋರ್ಟ್, ಏರ್​ಪೋರ್ಟ್​ಗಳ ನಿರ್ಮಾಣ ಮತ್ತು ನಿರ್ವಹಣೆಯ ಬ್ಯುಸಿನೆಸ್​ನಲ್ಲಿರುವ ಅದಾನಿ ಗ್ರೂಪ್ ಈಗ ವೇಗವಾಗಿ ಬೆಳೆಯುತ್ತಿರುವ ವೈಮಾನಿಕ ಕ್ಷೇತ್ರಕ್ಕೆ (Airlines Business) ಅಡಿ ಇಟ್ಟರೆ ಅಚ್ಚರಿ ಇಲ್ಲ. ಏರ್ಪೋರ್ಟ್​ಗಳನ್ನು ನಿರ್ವಹಿಸುತ್ತಿದ್ದರೂ ಏರ್ಲೈನ್ಸ್ ಸಂಸ್ಥೆ ಸ್ಥಾಪಿಸುವ ಇರಾದೆ ಇಲ್ಲ ಎಂದು ಅದಾನಿ ಹೇಳಿದ್ದರಾದರೂ ಮಾಧ್ಯಮಗಳ ವರದಿ ಪ್ರಕಾರ ಅವರು ಆ ಹೆಜ್ಜೆಯನ್ನೂ ಇರಿಸಬಹುದು ಎನ್ನಲಾಗಿದೆ. ವರದಿಗಳ…

Read More

ಕೇಂದ್ರ ಸರ್ಕಾರ ಭರವಸೆಗೂ ಒಪ್ಪದ ಸಿಜೆಪಿ; ನಾಳೆ ದೇಶಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ – Kannada News | Cockroach Janta Party CJP calls nationwide protest on July 24 despite Government assurance on paper leaks

ನವದೆಹಲಿ, ಜುಲೈ 23: ನೀಟ್ ಯುಜಿ (NEET UG) ಪರೀಕ್ಷೆಯಲ್ಲಿ ನಡೆದ ಅಕ್ರಮಗಳನ್ನು ಖಂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಾಳೆ (ಜುಲೈ 24) ದೇಶಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಚರ್ಚೆ ನಡೆಸುವುದಾಗಿ ಕೇಂದ್ರ ಸರ್ಕಾರವು ಪದೇ ಪದೇ ಭರವಸೆ ನೀಡಿ, ಮಾತುಕತೆಗೆ ಆಹ್ವಾನಿಸುತ್ತಿದ್ದರೂ ಸಿಜೆಪಿ ಬೆಂಬಲಿಗರು ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ಒಂದೇ ದಿನ, ಒಂದೇ ಬೇಡಿಯೊಂದಿಗೆ ಎಲ್ಲ ಜಿಲ್ಲೆಗಳಲ್ಲೂ…

Read More

Aadhaar: ನಿಮ್ಮ ಆಧಾರ್ ಬಯೋಮೆಟ್ರಿಕ್‌ ಡೇಟಾ ಸುರಕ್ಷಿತವಾಗಿರಲು ಈ ರೀತಿ ಲಾಕ್ ಮಾಡಿ – Kannada News | Aadhaar: How to lock Aadhaar biometrics Data

ಬ್ಯಾಂಕ್, ಸಿಮ್ ಕಾರ್ಡ್ ಖರೀದಿ, ಸರ್ಕಾರದ ಸೌಲಭ್ಯ ಸೇರಿದಂತೆ ಪ್ರತಿಯೊಂದು ಕೆಲಸಗಳಿಗೂ ಆಧಾರ್ ಕಾರ್ಡ್ (Aadhaar Card) ಬಹಳ ಮುಖ್ಯ. ಇದು ಪ್ರತಿಯೊಬ್ಬ ಭಾರತೀಯನ ಅತ್ಯಂತ ಪ್ರಮುಖ ಗುರುತಿನ ದಾಖಲೆಯಲ್ಲಿ ಒಂದಾಗಿದೆ. ಹೀಗಿರುವಾಗ ಆಧಾರ್ ಕಾರ್ಡ್ ನಲ್ಲಿ ಮಾಹಿತಿಯನ್ನು ದುರುಪಯೋಗ ಆಗದಂತೆ ನೋಡಿಕೊಳ್ಳುವುದು ಮುಖ್ಯ. ಈ ಹಿನ್ನಲೆಯಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ವಿಶೇಷ ಸೌಲಭ್ಯವನ್ನು ತಂದಿದೆ. ಮಾಹಿತಿ ದುರಪಯೋಗ ಆಗಬಾರದು ಎನ್ನುವ ದೃಷ್ಟಿಯಿಂದ ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮತ್ತು ಅನ್‌ಲಾಕ್ ಮಾಡುವ ವಿಶೇಷ ಸೌಲಭ್ಯ ಒದಗಿಸಿದೆ….

Read More

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ದರ ಮತ್ತೆ ಏರಿಕೆ: ಎಷ್ಟು ಹೆಚ್ಚಳ? ಇಲ್ಲಿದೆ ಮಾಹಿತಿ – Kannada News | Bengaluru Mysore Expressway Toll Rates Hiked Again: Check New Toll Tariffs for Cars, Buses, and Heavy Vehicles

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ದರ ಮತ್ತೆ ಏರಿಕೆ ಬೆಂಗಳೂರು, ಜುಲೈ 23: ಮೂರು ತಿಂಗಳೊಳಗೆ ಎರಡನೇ ಬಾರಿಗೆ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಯ ಟೋಲ್​​ ದರಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪರಿಷ್ಕರಿಸಿದ್ದು, ಕನಿಮಿಣಿಕೆ ಮತ್ತು ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ದರ ಹೆಚ್ಚಳ ಮಾಡಲಾಗಿದೆ. ಆ ಮೂಲಕ ವಾಹನ ಸವಾರರಿಗೆ ಮತ್ತೆ ದರ ಏರಿಕೆಯ ಬಿಸಿ ತಟ್ಟಿದೆ. ಹೊಸ ದರಗಳು ಜುಲೈ 21ರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದ್ದು, ಎನ್‌ಎಚ್-275ರ ಆರು ಪಥದ ಬೆಂಗಳೂರು–ನಿಡಘಟ್ಟ ಮಾರ್ಗಕ್ಕೆ ಅನ್ವಯವಾಗಲಿವೆ. 2023ರಲ್ಲಿ ಎಕ್ಸ್‌ಪ್ರೆಸ್‌ವೇ…

Read More

ಬೆಂಗಳೂರು ಇತಿಹಾಸದಲ್ಲೇ ಅತ್ಯಂತ ಎತ್ತರ ಅಪಾರ್ಟ್ಮೆಂಟ್ ಕಟ್ಟಡ ತೆರವಿಗೆ ಜಿಬಿಎ ತೀರ್ಮಾನ: ಏಕೆ, ಏನಿದು? – Kannada News | GBA Decides to Demolish Bengaluru’s Tallest Apartment Building

ಬೆಂಗಳೂರು, ಜುಲೈ 23: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಈಗಾಗಲೇ ನಗರದಲ್ಲಿ ಫುಟ್‌ಪಾತ್‌ಗಳ ಒತ್ತುವರಿ ತೆರವು ಮಾಡುತ್ತಿದೆ. ಇನ್ನು ಇತ್ತೀಚೆಗೆ ಅಕ್ರಮ ಕಟ್ಟಡಗಳ ವಿರುದ್ಧ ಸಮರ ಸಾರುವ ಮೂಲಕ ತೆರವುಗೊಳಿಸಲಾಗಿತ್ತು. ಇದೀಗ ಬಿಜಿಎ ಮತ್ತೊಂದು ಕಾರ್ಯಕ್ಕೆ ಮುಂದಾಗಿದೆ. ಬೆಂಗಳೂರಿನ ಇತಿಹಾಸದಲ್ಲೇ ಅತ್ಯಂತ ಎತ್ತರದ ಬಹುಮಹಡಿ ಕಟ್ಟಡವೊಂದನ್ನು ನೆಲಸಮಗೊಳಿಸಲು ತೀರ್ಮಾನಿಸಲಾಗಿದ್ದು, ಅಪಾಯಕಾರಿ ಹಂತ ತಲುಪಿರುವ 18 ಮಹಡಿಗಳ ಬೃಹತ್ ಅಪಾರ್ಟ್‌ಮೆಂಟ್ ಕಟ್ಟಡವನ್ನು ತೆರವುಗೊಳಿಸಲು ಅಧಿಕಾರಿಗಳು ಸಂಪೂರ್ಣ ಸಿದ್ಧತೆ ನಡೆಸಿದ್ದಾರೆ. 200 ಕೋಟಿ ರೂ ವೆಚ್ಚದ ಕಟ್ಟಡ ವಾಲಿದ್ದೇಗೆ? ಎಸ್​​ಎನ್​​ಎನ್​…

Read More

ಆಸಿಡ್ ದಾಳಿ ಆಗದಿದ್ರೆ ನಮ್ಮ ತಾಯಿ ಇನ್ನೂ 10 ವರ್ಷ ಬದುಕುತ್ತಿದ್ರು ಎಂದ HD ರೇವಣ್ಣ – Kannada News | JDS MLA HD Revanna Revels Acid Attack On His Mother Chennamma On 2001

ಹಾಸನ, (ಜುಲೈ 23): ಜೆಡಿಎಸ್ ಶಾಸಕ ಹೆಚ್​​ಡಿ ರೇವಣ್ಣ ಅವರು ತಮ್ಮ ತಾಯಿ ನಿಧನದ ಬಳಿಕ ಮೊದಲ ಸುದ್ದಿಗೋಷ್ಠಿ ಮಾಡಿದ್ದು, ತಮ್ಮ ತಾಯಿ ಚೆನ್ನಮ್ಮರ ಕೆಲ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲೂ ಪ್ರಮುಖವಾಗಿ ಆ್ಯಸಿಡ್ ದಾಳಿ ಘಟನೆ ಬಗ್ಗೆಯೂ ಬಹಿರಂಗಪಡಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, 2001ರಲ್ಲಿ ಆಸಿಡ್ ದಾಳಿ ಆಗದೆ ಹೋಗಿದ್ದರೆ ಅವರಿಗೆ (ಚೆನ್ನಮ್ಮ) ಇಷ್ಟು ಬೇಗ ಸಾವು ಬರ್ತಿರಲಿಲ್ಲ. ರೇವಣ್ಣನನ್ನ ಮುಗಿಸಲೇ ಬೇಕು ಎಂದು ಸಂಚು ರೂಪಿಸಿದ್ದರು. ಅಂದು ನಾನು ಇದ್ದಿದ್ದರೆ ನನ್ನ ಮೇಲೆ ದಾಳಿ…

Read More