ಹೈದರಾಬಾದ್‌ನಲ್ಲಿ ತಿಂಡಿ ತಿಂದು ವಿಮಾನ ಹತ್ತಿದ್ದ ಬ್ರಿಟಿಷ್ ಏರ್ವೇಸ್ನ ಮೂವರು ಪೈಲಟ್‌ಗಳು ಅಸ್ವಸ್ಥ – Kannada News | British Airways Pilots Food Poisoning in Hyderabad: BA Investigates Flight Safety Incident
ಹೈದರಾಬಾದ್, ಜುಲೈ 23: ಹೈದರಾಬಾದ್‌ನಿಂದ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಬ್ರಿಟಿಷ್ ಏರ್‌ವೇಸ್ (BA276) ವಿಮಾನದ ಮೂವರು ಪೈಲಟ್‌ಗಳು ಅಸ್ವಸ್ಥಗೊಂಡ ಭೀಕರ ಘಟನೆಯೊಂದು ನಡೆದಿದೆ. ಹೈದರಾಬಾದ್‌ನಲ್ಲಿ ರಾತ್ರಿ ತಂಗಿದ್ದ ವೇಳೆ ಸೇವಿಸಿದ ಆಹಾರದಿಂದಾಗಿ ಪೈಲಟ್(Pilot)ಗಳಿಗೆ ಫುಡ್ ಪಾಯ್ಸನ್ ಆಗಿತ್ತು ಎನ್ನಲಾಗಿದೆ, ಈ ಕುರಿತು ಬ್ರಿಟಿಷ್ ಏರ್‌ವೇಸ್ ಸಂಸ್ಥೆ ತನಿಖೆಗೆ ಆದೇಶಿಸಿದೆ. ವರದಿಗಳ ಪ್ರಕಾರ, ವಿಮಾನವು ಆಕಾಶದಲ್ಲಿ ಸುಮಾರು 30,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ, ಮುಖ್ಯ ಪೈಲಟ್‌ಗಳಲ್ಲಿ ಒಬ್ಬರು ತೀವ್ರ ಹೊಟ್ಟೆನೋವು ಹಾಗೂ ಅನಾರೋಗ್ಯದಿಂದ ಕರ್ತವ್ಯ…