Jana Nayagan Movie Review: ದೇಶಭಕ್ತಿಯೋ? ರಾಜಕೀಯ ಲಾಭವೋ? – Kannada News | Jana Nayagan Movie Review: Is Vijay’s movie good or bad

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾನಲ್ಲಿ ಸಮಾಜಕ್ಕೆ ಮುಖ್ಯವಾದ, ಪ್ರಜಾಪ್ರಭುತ್ವಕ್ಕೆ ಅಗತ್ಯವಾದ, ಮಹಿಳಾ ಸಬಲೀಕರಣಕ್ಕೆ ಪೂರಕವಾದ ಸಾಕಷ್ಟು ವಿಷಯಗಳನ್ನು ಒತ್ತಿ-ಒತ್ತಿ ಹೇಳಲಾಗಿದೆ. ಸಂದೇಶಗಳಾಗಿ ಇವು ಮಹತ್ವವಾದುವು, ಇಂದಿನ ಕಮರ್ಶಿಯಲ್ ಸಿನಿಮಾಗಳಲ್ಲಿ ಬಹಳ ವಿರಳವಾಗಿ ಕಾಣಸಿಗುವಂಥಹವು. ಆದರೆ ವಿಜಯ್ ಕೇವಲ ನಟರಷ್ಟೆ ಅಲ್ಲ, ಅವರೊಬ್ಬ ಪಕ್ಷದ ಮುಖಂಡ, ರಾಜಕೀಯ ಮಹಾತ್ವಾಕಾಂಕ್ಷೆ ಹೊಂದಿರುವ ವ್ಯಕ್ತಿ, ಹಾಗಾಗಿ ಈ ಸಂದೇಶಗಳ ಹಿಂದೆ ರಾಜಕೀಯ ಲಾಭದ ಘಾಟು ‘ಜನ ನಾಯಗನ್’ ಸಿನಿಮಾ ನೋಡುವ ಪ್ರೇಕ್ಷಕರ ಮೂಗಿಗೆ ಬಡಿಯದೇ ಇರದು.

ಎಚ್ ವಿನೋದ್ ನಿರ್ದೇಶನ ಮಾಡಿರುವ ‘ಜನ ನಾಯಗನ್’ ಸಿನಿಮಾ, ವಿಜಯ್ ಅವರ ಇತ್ತೀಚೆಗಿನ ಕೆಲವು ಸಿನಿಮಾಗಳ ರೀತಿಯಲ್ಲಿಯೇ ‘ವಿಜಯ್ ವೈಭವೀಕರಣ’ಕ್ಕಾಗಿಯೇ ಮಾಡಿದ ಅಪ್ಪಟ ಕಮರ್ಶಿಯಲ್ ಸಿನಿಮಾ, ಆದರೆ ಈ ಸಿನಿಮಾನಲ್ಲಿ ವಿಜಯ್ ಅನ್ನು ಒಬ್ಬ ‘ಪ್ರಜಾ ರಕ್ಷಕ’, ಪ್ರಜಾಪ್ರಭುತ್ವ ರಕ್ಷಕ, ಮಹಿಳಾ ಸಬಲೀಕರಣದ ಚಾಂಪಿಯನ್, ಶಿಷ್ಟರ ರಕ್ಷಕ ಎಂದು ಪರದೆಯ ಮೇಲೆ ತೋರಿಸುವ ಜವಾಬ್ದಾರಿಯೂ ಇತ್ತು. ಅದರಲ್ಲಿ ಅವರು ಪೂರ್ಣ ಯಶಸ್ವಿ ಆಗಿಲ್ಲ. ಒಂದು ಒಳ್ಳೆ ಸಿನಿಮಾ ಚೌಕಟ್ಟಿನಲ್ಲಿ ವಿಜಯ್ ಅವರನ್ನು ‘ಜನ ನಾಯಕ’ನಂತೆ ಬಿಂಬಿಸುವುದರಲ್ಲಿ ಅವರು ಸೋತಿದ್ದಾರೆ.

ಸಿನಿಮಾ ಪ್ರಾರಂಭವಾಗುವುದು ಜೈಲಿನಿಂದ, ವಿಜಯ್ ಜೈಲಿನಲ್ಲಿರುತ್ತಾರೆ, ಆದರೆ ಅವರು ಜೈಲಿಗೆ ಹೋಗಿದ್ದೇಕೆ ಎಂಬುದಕ್ಕೆ ಉತ್ತರ ಸಿಗುವುದು ದ್ವಿತೀಯಾರ್ಧದಲ್ಲಿ. ಜೈಲಿನಲ್ಲಿರುವಾಗ ಅವರಿಗೆ ಪರಿಚಯವಾಗುವ ಜೈಲರ್​​ನ ಮಗಳನ್ನು ನಾಯಕ ಸಾಕುತ್ತಾನೆ. ಜೈಲರ್​​ನ ಪತ್ನಿಯ ಆಸೆಯಂತೆ ಆ ಮಗುವನ್ನು ಸೈನ್ಯಕ್ಕೆ ಸೇರಿಸಬೇಕೆನ್ನುವುದು ವಿಜಯ್ ಗುರಿ. ಸಿನಿಮಾದ ಈ ಎಳೆ ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದಿಂದ ಎತ್ತಿಕೊಂಡಿರುವುದು, ಆದರೆ ಇದು ಸಂಪೂರ್ಣ ರೀಮೇಕ್ ಅಲ್ಲ. ನಿರ್ದೇಶಕರು ನಾಯಕನ ಇಮೇಜನ್ನು ಎತ್ತರಿಸಿ ತೋರಿಸಲು ಹಲವು ಸೀನುಗಳನ್ನು, ವಿಲನ್​​ಗಳನ್ನು ಸೃಷ್ಟಿಸಿದ್ದಾರೆ.

ಇದನ್ನೂ ಓದಿ:ಜುಲೈ 23ಕ್ಕೆ ಬಿಡುಗಡೆ ಆಗಲಿದೆ ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’

ನಾಯಕನಿಗೆ ಒಂದು ಫ್ಲ್ಯಾಷ್​ ಬ್ಯಾಕ್ ಸಹ ಇದೆ. ನಾಯಕನಿಗೆ ಮಾತ್ರವಲ್ಲ ವಿಲನ್​​ಗೂ ಫ್ಲ್ಯಾಷ್​​ ಬ್ಯಾಕ್ ಇದೆ. ಪೊಲೀಸ್ ಅಧಿಕಾರಿಗಳಾಗಿದ್ದ ನಾಯಕ ಮತ್ತು ವಿಲನ್ ಪರಸ್ಪರ ವಿರೋಧಿಗಳಾಗಿದ್ದು ಏಕೆ? ನಾಯಕ ಜೈಲು ಸೇರಿದ್ದೇಕೆ? ಸ್ನೇಹಿತರ ಪುತ್ರಿಯನ್ನು ಸೈನ್ಯಾಧಿಕಾರಿಯನ್ನಾಗಿ ಮಾಡಿದನಾ ನಾಯಕ? ಅದರ ಜೊತೆಗೆ ನಾಯಕ ಇನ್ನೂ ಏನೇನು ಸಾಹಸ ಮಾಡಿದ ಎಂಬುದ ತಿಳಿಯಲು ಸಿನಿಮಾ ನೋಡಬೇಕು.

ಸಿನಿಮಾ ಸಂಪೂರ್ಣ ವಿಜಯ್ ಮಯ. ಸಿನಿಮಾದ ಪ್ರತಿ ದೃಶ್ಯವೂ ನಾಯಕನ ಎಲಿವೇಷನ್​​ಗಾಗಿಯೇ ಇರುವುದು. ಸಿನಿಮಾದ ಪ್ರತಿ ಪಾತ್ರಗಳು ಒಂದೋ ನಾಯಕನ ಹೊಗುಳುತ್ತಿರುತ್ತಾರೆ, ಇಲ್ಲವೇ ನಾಯಕನ ಕೊಲ್ಲಲು ಯೋಜನೆ ಹಾಕುತ್ತಿರುತ್ತವೆ. ಇಲ್ಲ ಖುದ್ದು ನಾಯಕ ಹೊಡೆದಾಡುತ್ತಿರುತ್ತಾನೆ. ಇಲ್ಲವೇ ಭಾಷಣ ಮಾಡುತ್ತಿರುತ್ತಾನೆ. ಸಿನಿಮಾನಲ್ಲಿ ವಿಜಯ್​​ಗೆ ಕನಿಷ್ಟ ಹತ್ತಾರು ಎಂಟ್ರಿ ಸೀನ್​ಗಳು, ಒಂದು 30 ಆದರೂ ಎಲಿವೇಷನ್​​ ಸೀನ್​​ಗಳು ಇರಬಹುದು. ವಿಜಯ್ ಅವರ ಪ್ರತಿ ಕದಲಿಕೆಗೂ ಶಿಳ್ಳೆ-ಚಪ್ಪಾಳೆ ಹೊಡೆಯುವ ಅವರ ಅಭಿಮಾನಿಗಳಿಗಾಗಿಯೇ ಮಾಡಿರುವ ಸಿನಿಮಾ ಇದು.

ಸಿನಿಮಾನಲ್ಲಿ ಕೆಲವು ಒಳ್ಳೆಯ ಸಂದೇಶಗಳು ಸಹ ನಾಯಕ ನೀಡುತ್ತಾನೆ. ಅದರಲ್ಲೂ ಪ್ರಸ್ತುತ ನಡೆಯುತ್ತಿರುವ ಧರ್ಮ ರಾಜಕಾರಣ, ಸಾಮಾಜಿಕ ಜಾಲತಾಣಗಳ ಮೂಲಕ ಹರಡಲಾಗುತ್ತಿರುವ ದ್ವೇಷ, ಅದರಿಂದ ಭವಿಷ್ಯದಲ್ಲಿ ಆಗಬಹುದಾದ ತೊಂದರೆಗಳು, ಧರ್ಮ ದ್ವೇಷದ ಮೂಲಕ ರಾಜಕಾರಣಿಗಳು ಪಡೆಯುತ್ತಿರುವ ಲಾಭ. ಮಹಿಳಾ ಸಬಲೀಕರಣ, ಮತದಾನದ ಪ್ರಾಮುಖ್ಯತೆ, ಶಿಕ್ಷಣದ ಮಹತ್ವ ಇನ್ನೂ ಕೆಲವು ಅಗತ್ಯ ವಿಷಯಗಳ ಬಗ್ಗೆ ಮಾತನಾಡುತ್ತಾನೆ. ನಾಯಕ ಆಡುವ ಮಾತಿನ ಹಿಂದೆ ಸರ್ಕಾರಗಳನ್ನು ಟೀಕಿಸುವ ಧ್ವನಿಯೂ ಇಣುಕುತ್ತದೆ. ನಾಯಕನ ಎಷ್ಟೋ ಸಂಭಾಷಣೆಗಳು ಪಾತ್ರಗಳಿಗೆ ಹೇಳುವ ಬದಲಿಗೆ ನೇರವಾಗಿ ಪ್ರೇಕ್ಷಕನಿಗೆ ಹೇಳುತ್ತಿರುವಂತೆ ಭಾಸವಾಗುತ್ತವೆ, ನಿರ್ದೇಶಕರ ಉದ್ದೇಶವೂ ಅದೇ ಎಂಬುದು ಸ್ಪಷ್ಟ.

ಸಿನಿಮಾನಲ್ಲಿ ಪೂಜಾ ಹೆಗ್ಡೆ ನಾಯಕಿ, ಅವರಿಗೆ ಹೆಚ್ಚಿಗೇನೂ ಕೆಲಸವಿಲ್ಲ. ಮಮಿತಾ ಬಿಜು, ನಾಯಕನ ಸಾಕು ಪುತ್ರಿ. ಅವರು ಭಾವುಕ ಸನ್ನವೇಶಗಳು, ಆಕ್ಷನ್ ಮತ್ತು ತಮ್ಮ ಕ್ಯೂಟ್​​ನೆಸ್​​ನಿಂದ ಗಮನ ಸೆಳೆಯುತ್ತಾರೆ. ಸಿನಿಮಾನಲ್ಲಿ ಪ್ರಕಾಶ್ ರೈ ಮತ್ತು ಬಾಬಿ ಡಿಯೋಲ್ ವಿಲನ್​​ಗಳಾಗಿ ನಟಿಸಿದ್ದಾರೆ. ಬಾಬಿ ಅವರನ್ನು ಅತ್ಯಂತ ಕ್ರೂರ ವ್ಯಕ್ತಿಯಾಗಿ ತೋರಿಸಲಾಗಿದೆ. ಪ್ರಕಾಶ್ ರೈ ಅವರದ್ದು ಕೆಟ್ಟ ರಾಜಕಾರಣಿಯ ಪಾತ್ರ. ಪ್ರಿಯಾಮಣಿಯೂ ಸಿನಿಮಾನಲ್ಲಿದ್ದಾರೆ ಅವರಿಗೆ ಸಹ ಹೆಚ್ಚು ಕೆಲಸವಿಲ್ಲ.

ಸಿನಿಮಾದ ‘ಜನ ನಾಯಕ’ ಹಾಡು ಚೆನ್ನಾಗಿದೆ. ಇನ್ನೂ ಕೆಲವು ಹಾಡುಗಳು ಮತ್ತು ಆಕ್ಷನ್ ದೃಶ್ಯಗಳು ಚೆನ್ನಾಗಿವೆ. ಕೊನೆಯಲ್ಲಂತೂ ಸುಮಾರು ಅರ್ಧ ಗಂಟೆಯ ಕ್ಲೈಮ್ಯಾಕ್ಸ್ ಆಕ್ಷನ್ ದೃಶ್ಯವಿದೆ. ಅತಿಯಾದ ಗ್ರಾಫಿಕ್ಸ್ ಬಳಕೆ ಮಾಡಲಾಗಿದೆ. ಸಿನಿಮಾನಲ್ಲಿ ಹಲವು ಎಐ ಜನರೇಟೆಡ್ ದೃಶ್ಯಗಳು ಸಹ ಇವೆ. ಒಟ್ಟಾರೆ ವಿಜಯ್ ಅವರ ತಮ್ಮ ರಾಜಕೀಯ ಲಾಭದ ಜೊತೆಗೆ ಅವರ ಅಭಿಮಾನಿಗಳನ್ನು ಖುಷಿ ಪಡಿಸುವ ಉದ್ದೇಶದಿಂದ ನಿರ್ಮಿಸಲಾದ ಪಕ್ಕಾ ಮಾಸ್ ಎಂಟರ್ಟೈನರ್​​ ಸಿನಿಮಾ ಇದಾಗಿದೆ. ವಿಜಯ್ ಅಭಿಮಾನಿಗಳಾದವರಿಗೆ ಸಿನಿಮಾ ಬಲು ಇಷ್ಟವಾದರೆ ಸಾಮಾನ್ಯ ಪ್ರೇಕ್ಷಕ ಇಷ್ಟಪಡಲು ಕಷ್ಟಪಡಬೇಕಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Bhagavad Gita: ಜೀವನದಲ್ಲಿ ಭರವಸೆ ಕಳೆದುಕೊಂಡಾಗ ಧೈರ್ಯ ತುಂಬುವ ಭಗವದ್ಗೀತೆಯ 5 ಅಮೂಲ್ಯ ಪಾಠಗಳು! – Kannada News | Bhagavad Gita Lessons: 5 Ways to Overcome Life’s Challenges and Find Inner Peace

ಪ್ರತಿಯೊಬ್ಬರ ಜೀವನದಲ್ಲೂ ಎಲ್ಲವನ್ನೂ ಕಳೆದುಕೊಂಡಂತೆ ಭಾಸವಾಗುವ ಒಂದು ಕ್ಷಣ ಬಂದೇ ಬರುತ್ತದೆ. ದುಃಖಗಳು ಅಂತ್ಯವಿಲ್ಲದಂತೆ ಕಾಣುತ್ತವೆ ಮತ್ತು ತೊಂದರೆಗಳು ಒಂದರ ನಂತರ ಒಂದರಂತೆ ಬರುತ್ತಲೇ ಇರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಮನುಷ್ಯನು ತನ್ನ ಎಲ್ಲಾ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾನೆ. ಒಂದು ವೇಳೆ ಅಂತಹ ಕಠಿಣ ಕ್ಷಣ ನಿಮ್ಮ ಜೀವನದಲ್ಲೂ ಬಂದರೆ, ಶ್ರೀಮದ್ ಭಗವದ್ಗೀತೆಯ ಈ 5 ಜೀವನಪ್ರೀತಿಯ ಪಾಠಗಳನ್ನು ಖಂಡಿತ ಓದಿ. ಇವು ನಿಮ್ಮಲ್ಲಿ ಗೆಲ್ಲುವ ಹೊಸ ಧೈರ್ಯ ಮತ್ತು ಹುಮ್ಮಸ್ಸನ್ನು ನೀಡುತ್ತವೆ.

ನಿಮ್ಮ ಕೆಲಸ ಮಾಡಿ, ಫಲದ ನಿರೀಕ್ಷೆ ಬೇಡ:

ಶ್ರೀಕೃಷ್ಣ ಪರಮಾತ್ಮನು ಗೀತೆಯಲ್ಲಿ ಹೇಳುವಂತೆ, ಒಬ್ಬ ವ್ಯಕ್ತಿಯ ನಿಯಂತ್ರಣವು ತನ್ನ ಕರ್ತವ್ಯಗಳನ್ನು ಎಷ್ಟು ಚೆನ್ನಾಗಿ ನಿರ್ವಹಿಸುತ್ತಾನೆ ಎಂಬುದರ ಮೇಲೆ ಮಾತ್ರ ಇರುತ್ತದೆ. ಫಲಿತಾಂಶದ ಬಗ್ಗೆ ಅತಿಯಾಗಿ ಚಿಂತಿಸುತ್ತಾ ಕೆಲಸ ಮಾಡಿದರೆ, ಸರಿಯಾಗಿ ಕಾರ್ಯನಿರ್ವಹಿಸಲು ಅಥವಾ ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಫಲಿತಾಂಶದ ಹಂಗಿಲ್ಲದೆ ಕಷ್ಟಪಟ್ಟು ಕೆಲಸ ಮಾಡಿ; ವೈಫಲ್ಯದ ಭಯದಿಂದ ಸುಮ್ಮನೆ ಕುಳಿತುಕೊಳ್ಳಬೇಡಿ.

ಬದಲಾವಣೆಯೇ ಜಗತ್ತಿನ ನಿಯಮ:

ಬದಲಾವಣೆಯು ಜೀವನದ ಶಾಶ್ವತ ಸತ್ಯ. ಇಂದಿನ ಕಷ್ಟದ ಪರಿಸ್ಥಿತಿಗಳು ನಾಳೆಯೂ ಹಾಗೆಯೇ ಇರುತ್ತವೆ ಎಂದು ಭಾವಿಸುವುದು ತಪ್ಪು. ಪ್ರತಿದಿನ, ಪ್ರತಿ ಕ್ಷಣವೂ ನಮ್ಮ ಸುತ್ತಲೂ ಬದಲಾವಣೆಗಳು ಸಂಭವಿಸುತ್ತಿರುತ್ತವೆ. ಆರಂಭದಲ್ಲಿ ನಮಗೆ ಈ ಬದಲಾವಣೆಗಳನ್ನು ಇಷ್ಟಪಡಲು ಅಥವಾ ಬೇಗನೆ ಹೊಂದಿಕೊಳ್ಳಲು ಸಾಧ್ಯವಾಗದಿರಬಹುದು. ಆದರೆ, ಬದಲಾವಣೆಗೆ ಹೊಂದಿಕೊಳ್ಳುವ ಮೊದಲು ಅದನ್ನು ಮನಸ್ಸಿನಿಂದ ಸ್ವೀಕರಿಸುವುದು ಮುಖ್ಯ.

ಏನೇ ನಡೆದರೂ ಅದು ಒಳ್ಳೆಯದಕ್ಕೇ…:

ಕೆಲವೊಮ್ಮೆ, ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ನಕಾರಾತ್ಮಕವಾಗಿಯೇ ತೋರುತ್ತದೆ. ಈ ಆಲೋಚನೆಯಿಂದ ನಾವು ನಿರುತ್ಸಾಹಗೊಳ್ಳುತ್ತೇವೆ. ಆದರೆ ಸತ್ಯವೆಂದರೆ—ಜೀವನದಲ್ಲಿ ನಡೆಯುವ ಪ್ರತಿಯೊಂದಕ್ಕೂ ಒಂದು ಬಲವಾದ ಕಾರಣವಿರುತ್ತದೆ ಮತ್ತು ಅದೆಲ್ಲವೂ ಒಳ್ಳೆಯದಕ್ಕಾಗಿಯೇ ಇರುತ್ತದೆ. ಆದ್ದರಿಂದ, ಸಂದರ್ಭಗಳು ಎಷ್ಟೇ ಕಠಿಣವಾಗಿದ್ದರೂ ನಿಮ್ಮ ಪ್ರಯತ್ನವನ್ನು ಎಂದಿಗೂ ನಿಲ್ಲಿಸಬೇಡಿ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಮನಸ್ಸಿನ ಸಮತೋಲನದಲ್ಲೇ ನಿಜವಾದ ಶಾಂತಿ ಇದೆ ಧಾರಣೆ:

ಶ್ರೀಕೃಷ್ಣನ ಪ್ರಕಾರ, ಗೆಲುವು ಮತ್ತು ಸೋಲು, ಸಂತೋಷ ಮತ್ತು ದುಃಖ, ಯಶಸ್ಸು ಮತ್ತು ವೈಫಲ್ಯ—ಇವೆಲ್ಲವೂ ಜೀವನದ ನಾಣ್ಯದ ಎರಡು ಮುಖಗಳು. ಪ್ರತಿಯೊಬ್ಬರೂ ಪ್ರತಿ ಬಾರಿಯೂ ಗೆಲ್ಲುತ್ತಲೇ ಇರಲು ಸಾಧ್ಯವಿಲ್ಲ. ಈ ಎಲ್ಲಾ ಏಳುಬೀಳುಗಳ ನಡುವೆ ಮನಸ್ಸಿನ ಸಮತೋಲನವನ್ನು ಕಾಯ್ದುಕೊಳ್ಳುವುದೇ ನಿಜವಾದ ಶಾಂತಿ. ಸಕಾರಾತ್ಮಕ ಮತ್ತು ನಕಾರಾತ್ಮಕ ಸಂದರ್ಭಗಳೆರಡನ್ನೂ ಸಮಾನವಾಗಿ ಸ್ವೀಕರಿಸುವುದನ್ನು ಕಲಿಯಬೇಕು.

ನಂಬಿಕೆ ಮತ್ತು ಆತ್ಮವಿಶ್ವಾಸ:

ಯಾವುದೇ ದೊಡ್ಡ ಸವಾಲನ್ನು ಎದುರಿಸಲು ಮನುಷ್ಯನಿಗೆ ತನ್ನ ಮೇಲೆ ಆತ್ಮವಿಶ್ವಾಸ ಮತ್ತು ದೇವರ ಮೇಲೆ ನಂಬಿಕೆ—ಎರಡೂ ಅತ್ಯಗತ್ಯ. ಆದರೆ ಏನೂ ಪ್ರಯತ್ನಿಸದೆ, ಕೇವಲ ದೇವರಿಗೆ ವಿಷಯಗಳನ್ನು ಬಿಟ್ಟು ಕುಳಿತುಕೊಳ್ಳುವುದು ತಪ್ಪು. ನಂಬಿಕೆಯೊಂದಿಗೆ ಮಾಡುವ ಸ್ವಪ್ರಯತ್ನ ಮತ್ತು ಕ್ರಿಯೆಗಳು ಮಾತ್ರ ಒಬ್ಬ ವ್ಯಕ್ತಿಗೆ ತನ್ನದೇ ಆದ ಯಶಸ್ಸಿನ ಮಾರ್ಗವನ್ನು ಸೃಷ್ಟಿಸಿಕೊಡುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮದ್ಯಪಾನ’ದಿಂದ ಡೇವಿಡ್ ವಾರ್ನರ್ ನಾಯಕತ್ವಕ್ಕೆ ಕುತ್ತು! – Kannada News | David Warner Drink Driving Case: BBL Captaincy in Jeopardy

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ನಡೆದಿದ್ದ ‘ಮದ್ಯಪಾನ ಮಾಡಿ ವಾಹನ ಚಾಲನೆ’ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ್ನರ್ ಪರ ವಕೀಲರು ಜುಲೈ 22ರಂದು ಸಿಡ್ನಿಯ ನ್ಯಾಯಾಲಯದಲ್ಲಿ ತಮ್ಮ ತಪ್ಪನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಈ ಬೆಳವಣಿಗೆಯಿಂದಾಗಿ ಮುಂಬರುವ ಬಿಗ್ ಬ್ಯಾಷ್ ಲೀಗ್ ಸೀಸನ್‌ನಲ್ಲಿ ಸಿಡ್ನಿ ಥಂಡರ್​ ತಂಡದ ನಾಯಕತ್ವವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಘಟನೆಯ ಹಿನ್ನಲೆ:

ಏಪ್ರಿಲ್ 5 ರಂದು ಸಿಡ್ನಿಯ ಮರೌಬ್ರಾ ಉಪನಗರದಲ್ಲಿ ಡೇವಿಡ್ ವಾರ್ನರ್ ತಮ್ಮ ವ್ಯಾನ್ ಚಲಾಯಿಸುತ್ತಿದ್ದರು. ರಸ್ತೆಯಲ್ಲಿ ಪೊಲೀಸರು ನಡೆಸುತ್ತಿದ್ದ ಡ್ರಿಂಕ್ ಅ್ಯಂಡ್ ಡ್ರೈವ್ ಟೆಸ್ಟ್​ ಕಂಡು ವಾರ್ನರ್ ತಮ್ಮ ವಾಹನವನ್ನು ಸ್ವಲ್ಪ ದೂರದಲ್ಲೇ ನಿಲ್ಲಿಸಿದ್ದರು.

ಅನುಮಾನಗೊಂಡು ಪೊಲೀಸರು ತಪಾಸಣೆ ನಡೆಸಿದಾಗ ವಾರ್ನರ್ ಮದ್ಯಪಾನ ಮಾಡಿರುವುದು ದೃಢಪಟ್ಟಿತು. ತಕ್ಷಣವೇ ಅವರನ್ನು ಮರೌಬ್ರಾ ಪೊಲೀಸ್ ಠಾಣೆಗೆ ಕರೆದೊಯ್ದು ಮರುಪರೀಕ್ಷೆ ನಡೆಸಿದಾಗ, ಅವರ ರಕ್ತದಲ್ಲಿ ಆಲ್ಕೋಹಾಲ್ ಪ್ರಮಾಣ 0.104 BAC ಇರುವುದು ಪತ್ತೆಯಾಯಿತು. ಇದು ಆಸ್ಟ್ರೇಲಿಯಾದ ಕಾನೂನುಬದ್ಧ ಮಿತಿ (0.05) ಗಿಂತ ಎರಡೂವರೆ ಪಟ್ಟು ಹೆಚ್ಚು ಇತ್ತು.

ತಪ್ಪೊಪ್ಪಿಕೊಂಡ ವಾರ್ನರ್:

“ಸ್ನೇಹಿತರ ಮನೆಯಲ್ಲಿ 3 ಗ್ಲಾಸ್ ವೈನ್ ಕುಡಿದ ಬಳಿಕ ಉಬರ್ ಬುಕ್ ಮಾಡುವ ಬದಲು ತಾವೇ ಕಾರು ಚಲಾಯಿಸಲು ನಿರ್ಧರಿಸಿದ್ದು ವಾರ್ನರ್ ಮಾಡಿದ ದೊಡ್ಡ ತಪ್ಪು. ತಮ್ಮ ನಡೆ ಅತ್ಯಂತ ಮೂರ್ಖತನ ಹಾಗೂ ಬೇಜವಾಬ್ದಾರಿತನದಿಂದ ಕೂಡಿತ್ತು ಎಂಬುದನ್ನು ವಾರ್ನರ್ ಒಪ್ಪಿಕೊಂಡಿದ್ದಾರೆ ಎಂದು ಅವರ ವಕೀಲ ಬಾಬಿ ಹಿಲ್ ಕೋರ್ಟ್​ಗೆ ತಿಳಿಸಿದ್ದಾರೆ.

ಆಗಸ್ಟ್ 18 ರಂದು ಅಂತಿಮ ತೀರ್ಪು:

ವೇವರ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ಡೇವಿಡ್ ವಾರ್ನರ್ ಗೈರಾಗಿದ್ದರು. ಹೀಗಾಗಿ ನ್ಯಾಯಾಲಯವು ಆಗಸ್ಟ್ 18 ಕ್ಕೆ ಅಂತಿಮ ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿದೆ. ಆಸ್ಟ್ರೇಲಿಯಾದ ಸಂಚಾರ ನಿಯಮಗಳ ಅಡಿಯಲ್ಲಿ ಅವರ ಡ್ರೈವಿಂಗ್ ಲೈಸನ್ಸ್ ಅನ್ನು 6 ತಿಂಗಳುಗಳ ಕಾಲ ನಿಷೇಧಿಸುವ ಸಾಧ್ಯತೆಯಿದೆ. ಹಾಗೆಯೇ ಗರಿಷ್ಠ A$2,200 (ಸುಮಾರು ₹1.21 ಲಕ್ಷಕ್ಕೂ ಅಧಿಕ) ದಂಡ ವಿಧಿಸಬಹುದು.

ನಾಯಕತ್ವಕ್ಕೆ ಕುತ್ತು:

2018 ರ ಬಾಲ್-ಟ್ಯಾಂಪರಿಂಗ್ ಹಗರಣದ ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾ ವಾರ್ನರ್ ಮೇಲಿದ್ದ ಜೀವಿತಾವಧಿ ನಾಯಕತ್ವದ ನಿಷೇಧವನ್ನು 2024 ರಲ್ಲಿಷ್ಟೇ ತೆರವುಗೊಳಿಸಿತ್ತು. ಅದರ ಬೆನ್ನಲ್ಲೇ ಅವರು ಸಿಡ್ನಿ ಥಂಡರ್ ತಂಡದ ನಾಯಕರಾಗಿ ನೇಮಕಗೊಂಡಿದ್ದರು. ಆದರೆ ಈಗಿನ ಪ್ರಕರಣ ಸಿಡ್ನಿ ಥಂಡರ್ ಫ್ರಾಂಚೈಸಿಗೆ ಭಾರಿ ಮುಜುಗರ ತಂದಿಟ್ಟಿದೆ.

ಇದನ್ನೂ ಓದಿ: RCB ಆಟಗಾರರಿಗೆ ಅನ್ಯಾಯ: ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ

ಹೀಗಾಗಿ ಮುಂಬರುವ ಬಿಗ್ ಬ್ಯಾಷ್ ಲೀಗ್​ ಸೀಸನ್ ಆರಂಭಕ್ಕೂ ಮುನ್ನವೇ ಡೇವರಡ್ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ಸಿಡ್ನಿ ಥಂಡರ್ ಮಂಡಳಿ ಗಂಭೀರ ಚಿಂತನೆ ನಡೆಸಿದೆ. ಅಂದರೆ ಮುಂಬರುವ ಬಿಬಿಎಲ್​ನಲ್ಲಿ ವಾರ್ನರ್ ಕೇವಲ ಆಟಗಾರನಾಗಿ ಕಣಕ್ಕಿಳಿಯಬಹುದು.

Published On – 3:04 pm, Thu, 23 July 26

Source link

IND U19 vs SL U19: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತ ಯುವ ಪಡೆ – Kannada News | India U19 Dominates Sri Lanka, Secures Unofficial Test Series Win by 211 Runs

ಭಾರತ ಹಾಗೂ ಶ್ರೀಲಂಕಾ ಅಂಡರ್-19 ತಂಡಗಳ (India U19 vs Sri Lanka U19) ನಡುವೆ ನಡೆದ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯನ್ನು ಭಾರತ ಯುವ ಪಡೆ 1-0 ಅಂತರದಿಂದ ಗೆದ್ದುಕೊಂಡಿದೆ. ಉಭಯ ತಂಡಗಳ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು. ಹೀಗಾಗಿ ಎರಡನೇ ಪಂದ್ಯವನ್ನು ಗೆಲ್ಲುವ ತಂಡಕ್ಕೆ ಸರಣಿ ಕೈವಶವಾಗುತ್ತಿತ್ತು. ಅದರಂತೆ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಅಂಡರ್-19 ತಂಡವನ್ನು 211 ರನ್‌ಗಳಿಂದ ಸೋಲಿಸಿದ ಭಾರತ ಯುವ ಪಡೆ ಸರಣಿ ಎತ್ತಿ ಹಿಡಿದಿದೆ. ತಂಡದ ಈ ಗೆಲುವಿನಲ್ಲಿ ಮನಲ್ ಚೌಹಾಣ್, ಕುಶಾಗ್ರ ಓಜಾ ಮತ್ತು ಲಕ್ಷ್ಯ ರಾಜೇಶ್ ರಾಯ್‌ಚಂದಾನಿ ಅವರ ಶತಕಗಳ ಜೊತೆಗೆ ರೋಹಿತ್ ಯಾದವ್ ಮತ್ತು ಚಿಗುರುಪತಿ ವೆಂಕಟ್ ಅವರ ಅತ್ಯುತ್ತಮ ಬೌಲಿಂಗ್‌ ಪ್ರಮುಖ ಪಾತ್ರವಹಿಸಿತು.

260 ರನ್‌ಗಳಿಗೆ ಲಂಕಾ ಆಲೌಟ್

ಎರಡನೇ ಟೆಸ್ಟ್‌ನಲ್ಲಿ ಶ್ರೀಲಂಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 411 ರನ್ ಕಲೆಹಾಕಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 148 ರನ್‌ಗಳಿಗೆ ಆಲೌಟ್ ಆಯಿತು. 263 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ ತಂಡ 3 ವಿಕೆಟ್‌ಗಳಿಗೆ 208 ರನ್‌ಗಳನ್ನು ಕಲೆಹಾಕಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. ಅಂತಿಮವಾಗಿ 472 ರನ್‌ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ಎರಡನೇ ಇನ್ನಿಂಗ್ಸ್‌ನಲ್ಲಿ 260 ರನ್‌ಗಳಿಗೆ ಆಲೌಟ್ ಆಗುವ ಮೂಲಕ 211 ರನ್​ಗಳ ಸೋಲನುಭವಿಸಿತು.

ರೋಹಿತ್ ಮಾರಕ ಬೌಲಿಂಗ್

ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಪರ ಅದ್ಭುತ ಬೌಲಿಂಗ್ ಮಾಡಿದ ರೋಹಿತ್ ಯಾದವ್ ಒಟ್ಟು 4 ವಿಕೆಟ್‌ಗಳನ್ನು ಪಡೆದರು. ಇವರ ಜೊತೆಗೆ ಚಿಗುರುಪತಿ ವೆಂಕಟ್ ಕೂಡ 3 ವಿಕೆಟ್‌ಗಳನ್ನು ಪಡೆದರು. ನಾಯಕ ಯಶವರ್ಧನ್, ಜಗನ್ನಾಥ್ ಮತ್ತು ಪ್ರಣವ್ ಕೂಡ ತಲಾ ಒಂದು ವಿಕೆಟ್ ಪಡೆದರು. ಇದಕ್ಕೂ ಮೊದಲು ಮೊದಲ ಇನ್ನಿಂಗ್ಸ್​ನಲ್ಲಿ ರೋಹಿತ್ ಎರಡು ವಿಕೆಟ್‌ಗಳನ್ನು ಪಡೆದರೆ, ವೆಂಕಟ್ ಮೊದಲ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್‌ಗಳನ್ನು ಪಡೆದರು. ಪ್ರಣವ್ ಮತ್ತು ಜಗನ್ನಾಥ್ ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ರನ್​ಗಳ ಮಳೆ ಹರಿಸಿದ ಭಾರತ ಯುವ ಪಡೆ

ಇನ್ನು ಭಾರತ ಯುವ ಪಡೆಯ ಬ್ಯಾಟಿಂಗ್‌ ವಿಚಾರಕ್ಕೆ ಬರುವುದಾದರೆ.. ಕುಶಾಗ್ರ ಓಜಾ ಮೊದಲ ಇನ್ನಿಂಗ್ಸ್‌ನಲ್ಲಿ 111 ರನ್ ಗಳಿಸಿದರೆ, ಮನಲ್ ಚೌಹಾಣ್ 150 ರನ್ ಬಾರಿಸಿದರು. ಹಾಗೆಯೇ ಎರಡನೇ ಇನ್ನಿಂಗ್ಸ್‌ನಲ್ಲಿ ಲಕ್ಷ್ಯ ಕೂಡ ಅದ್ಭುತ ಪ್ರದರ್ಶನ ನೀಡಿ 100 ರನ್ ಗಳಿಸಿ ಅಜೇಯರಾಗಿ ಉಳಿದರು. ಮನಾಲ್ ಕೂಡ 46 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಏಳು ಬೌಂಡರಿಗಳನ್ನು ಒಳಗೊಂಡಂತೆ 51 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರ ಜೊತೆಗೆ ನಾಯಕ ಯಶವರ್ಧನ್ ಚೌಹಾಣ್ ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ 78 ರನ್ ಗಳಿಸಿ ಉಪಯುಕ್ತ ಇನ್ನಿಂಗ್ಸ್ ಆಡಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಪರ ಸೆನುಜಾ ವೆಕುನಗೋಡ ಮತ್ತು ವಿಮತ್ ದಿನಸಾರ ತಲಾ 64 ರನ್ ಗಳಿಸಿದರೆ, ದುಲ್ನಿತ್ ಸಿಗೇರಾ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಪರ 31 ರನ್ ಗಳಿಸಿ ಅತ್ಯಧಿಕ ಸ್ಕೋರರ್ ಎನಿಸಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:00 pm, Thu, 23 July 26

Source link

ಕೊಪ್ಪಳದಲ್ಲಿ ತೀವ್ರಗೊಂಡ ಪ್ರತಿಭಟನೆ, ಕಾಂಗ್ರೆಸ್ ಕಚೇರಿಗೆ ಇಟ್ಟಿಗೆ ಎಸೆದ ಬಿಜೆಪಿ ಎಂಎಲ್​​​ಸಿ – Kannada News | BJP Workers Intensifies Protest In Koppal, Pushes Barricades And Tries To Gherao Congress Office

ಕೊಪ್ಪಳ, (ಜುಲೈ 23): ಬಿಜೆಪಿ ಶಾಸಕ ಬಿ.ಪಿ.ಹರೀಶ್ ಮೇಲೆ ಮೊಟ್ಟೆ ಎಸೆತ ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi) ನಿವಾಸದ ಮುಂದೆ ಕಾಂಗ್ರೆಸ್ ಪ್ರತಿಭಟನೆ ಖಂಡಿಸಿ ಬಿಜೆಪಿ (BJP) ಸಹ ಕರ್ನಾಟಕದಾದ್ಯಂತ ಪ್ರತಿಭಟನೆ ನಡೆಸಿದೆ. ಅದರಂತೆ ಕೊಪ್ಪಳದಲ್ಲೂ ಸಹ ಬಿಜೆಪಿ, ಕಾಂಗ್ರೆಸ್ (Congress) ನಡೆ ವಿರುದ್ಧ ಪ್ರತಿಭಟನೆ ನಡೆಸಿದ್ದು, ವಿಪಕ್ಷ ನಾಯಕ ರಾಹುಲ್ ಗಾಂಧಿ ಫೋಟೋಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಬಳಿಕ ಪ್ರತಿಭಟನೆ ತೀವ್ರಗೊಂಡಿದ್ದು, ಕೊಪ್ಪಳ ನಗರದಲ್ಲಿರುವ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿ ನಡೆದಿದೆ. ಈ ವೇಳೆ ಬಿಜೆಪಿ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯರ್ ಅವರು ಕಾಂಗ್ರೆಸ್ ಕಚೇರಿಗೆ ಇಟ್ಟಿಗೆ ಎಸೆದಿರುವ ಪ್ರಸಂಗ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಇನ್ಮುಂದೆ ಅತಿಥಿ ಪಾತ್ರ ಮಾಡುತ್ತೇನೋ ಗೊತ್ತಿಲ್ಲ’; ‘ಕರಾವಳಿ’ ವಿವಾದದ ಬೆನ್ನಲ್ಲೇ ರಾಜ್ ಬಿ. ಶೆಟ್ಟಿ ಬೇಸರ – Kannada News | Raj B Shetty Cameo Controversy: Actor Rethinks Guest Appearances After Karavali Trailer Launch Incident

ರಾಜ್ ಬಿ. ಶೆಟ್ಟಿ (Raj B Shetty) ಹೀರೋ ಆಗಿ ಮಿಂಚುವುದರ ಜೊತೆಗೆ ಕೆಲವು ಸಿನಿಮಾಗಳಲ್ಲಿ ಅತಿಥಿ ಪಾತ್ರ ಕೂಡ ಮಾಡಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಹಿಂದಿಯ ‘ಬಂದರ್’ ಸಿನಿಮಾದಲ್ಲಿ ರಾಜ್ ಅವರು ಅತಿಥಿ ಪಾತ್ರ ಮಾಡಿದ್ದರು. ಈಗ ‘ಕರಾವಳಿ’ ಸಿನಿಮಾದಲ್ಲೂ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಇದರ ಸುತ್ತ ವಿವಾದ ಎದ್ದಿದ್ದು, ಇದು ಅವರಿಗೆ ಬೇಸರ ತರಿಸಿದೆ. ಸದ್ಯದ ಪರಿಸ್ಥಿತಿಗಳು ಅವರು ತಮ್ಮ ನಿರ್ಧಾರವನ್ನು ಬದಲಿಸುವಂತೆ ಮಾಡಿವೆ.

‘ನಾನು ಅತಿಥಿ ಪಾತ್ರ ಮಾಡುತ್ತೇನೆ ಎಂಬುದು ಮುಖ್ಯವಲ್ಲ. ನಾನು ಯಾವಾಗಲೂ ಒಬ್ಬ ತಂತ್ರಜ್ಞನಾಗಿ ಯೋಚಿಸುತ್ತೇನೆ. ಎಲ್ಲರೂ ಕಥಾನಾಯಕರಾಗಲು ಸಾಧ್ಯವಿಲ್ಲ, ಯಾರಾದರೂ ಇತರ ಪಾತ್ರಗಳನ್ನೂ ಮಾಡಬೇಕಾಗುತ್ತದೆ. ಕರಾವಳಿ ಸಿನಿಮಾ ಒಬ್ಬ ವ್ಯಕ್ತಿ ಅಥವಾ ಒಂದು ಪಾತ್ರದ ಬಗ್ಗೆ ಅಲ್ಲ, ಇದು ಆ ಮಣ್ಣಿನ ಕಥೆ’ ಎಂದು ಅವರು ಹೇಳಿದ್ದಾರೆ.

ರಾಜ್ ಬಿ ಶೆಟ್ಟಿ ಅವರಿಗೆ ದೊಡ್ಡ ಮಾರುಕಟ್ಟೆ ಸೃಷ್ಟಿ ಆಗಿದೆ. ಹೀಗಾಗಿ, ‘ಕರಾವಳಿ’ ಸಿನಿಮಾದಲ್ಲಿ ಅವರ ಪಾತ್ರ ಹೈಲೈಟ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂತು. ಈ ದುರದೃಷ್ಟಕರ ಘಟನೆಗಳು ಅವರ ಮನಸ್ಸಿಗೆ ತೀವ್ರ ಬೇಸರ ತಂದಿವೆ.

ಇದನ್ನೂ ಓದಿ: ‘ಕರಾವಳಿ’ ವಿವಾದ, ಕ್ಷಮೆ ಕೇಳಿದ ರಾಜ್ ಬಿ ಶೆಟ್ಟಿ

‘ಈ ಸಿನಿಮಾದಲ್ಲಿ ನನ್ನ ಅತಿಥಿ ಪಾತ್ರದ ಸುತ್ತ ಎದ್ದಿರುವ ದುರದೃಷ್ಟಕರ ವಿವಾದಗಳು ಹಾಗೂ ಇತ್ತೀಚಿನ ಇತರ ಘಟನೆಗಳನ್ನು ನೋಡಿದರೆ, ಭವಿಷ್ಯದಲ್ಲಿ ನಾನು ಮತ್ತೆ ಅತಿಥಿ ಪಾತ್ರಗಳನ್ನು ಮಾಡುತ್ತೇನೆಯೋ ಇಲ್ಲವೋ ಗೊತ್ತಿಲ್ಲ. ನಾನು ‘ರಾಕ್ಷಸಪುರದೋಳ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾಗಲೂ, ಚೊಚ್ಚಲ ನಟ ಅನಿರುದ್ಧ್ ಭಟ್ ಮಾಡಿದ್ದ ವಿಲನ್ ಪಾತ್ರವೇ ಚಿತ್ರದ ಹೈಲೈಟ್ ಆಗಿತ್ತು. ಅದಕ್ಕೆ ನಾನು ಎಂದಿಗೂ ತಲೆಕೆಡಿಸಿಕೊಂಡಿಲ್ಲ. ಅಭದ್ರತೆ ನನಗೆ ಕಾಡಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ ಎಂಬುದು ನನಗೆ ಗೊತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನಡೆದ ಘಟನೆಗಳು ನಾನು ಅತಿಥಿ ಪಾತ್ರಗಳನ್ನು ಒಪ್ಪಿಕೊಳ್ಳುವ ಮುನ್ನ ಮರುಚಿಂತನೆ ನಡೆಸುವಂತೆ ಮಾಡಿವೆ’ ಎಂದು ನೇರವಾಗಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

HPCL Recruitment 2026: HPCL ಗ್ರಾಜುಯೇಟ್ ಅಪ್ರೆಂಟಿಸ್ ನೇಮಕಾತಿ; 358 ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | HPCL Recruitment 2026: 358 Graduate Apprentice Engineering Jobs, Apply Now!

ಕೇಂದ್ರ ಸರ್ಕಾರದ ಪ್ರಮುಖ ತೈಲ ಕಂಪನಿಯಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL), 2026-27ನೇ ಸಾಲಿಗೆ ಗ್ರಾಜುಯೇಟ್ ಅಪ್ರೆಂಟಿಸ್ (ಎಂಜಿನಿಯರಿಂಗ್) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಅಭಿಯಾನದ ಅಡಿಯಲ್ಲಿ ದೇಶಾದ್ಯಂತ ಒಟ್ಟು 358 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಎಂಜಿನಿಯರಿಂಗ್ ಪದವೀಧರರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳು ಸಿವಿಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್ ವಿಭಾಗಗಳಲ್ಲಿ ಲಭ್ಯವಿವೆ.

ರಾಜ್ಯವಾರು ಖಾಲಿ ಹುದ್ದೆಗಳ ವಿವರ:

ರಾಜ್ಯವಾರು ಖಾಲಿ ಹುದ್ದೆಗಳ ವಿವರಗಳನ್ನು ನೋಡುವುದಾದರೆ, ಮಹಾರಾಷ್ಟ್ರದಲ್ಲಿ ಗರಿಷ್ಠ 64 ಹುದ್ದೆಗಳು, ಕರ್ನಾಟಕದಲ್ಲಿ 14, ಉತ್ತರ ಪ್ರದೇಶದಲ್ಲಿ 37, ಗುಜರಾತ್‌ನಲ್ಲಿ 32, ತಮಿಳುನಾಡಿನಲ್ಲಿ 20, ತೆಲಂಗಾಣದಲ್ಲಿ 19, ದೆಹಲಿಯಲ್ಲಿ 18, ರಾಜಸ್ಥಾನದಲ್ಲಿ 17, ಪಂಜಾಬ್‌ನಲ್ಲಿ 16 ಹಾಗೂ ಆಂಧ್ರಪ್ರದೇಶದಲ್ಲಿ 15 ಹುದ್ದೆಗಳು ಲಭ್ಯವಿವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ ಪದವಿ (B.E/B.Tech) ಪೂರ್ಣಗೊಳಿಸಿರಬೇಕು.

ಇದನ್ನೂ ಓದಿ: ಇಸ್ರೋದಲ್ಲಿ 460 ಅಪ್ರೆಂಟಿಸ್ ಹುದ್ದೆಗಳ ಭರ್ತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ!

ವಯೋಮಿತಿಗೆ ಸಂಬಂಧಿಸಿದ ವಿವರ:

ವಯೋಮಿತಿಗೆ ಸಂಬಂಧಿಸಿದಂತೆ, ಜುಲೈ 31, 2026 ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಗಳ ವಯಸ್ಸು 18 ರಿಂದ 25 ವರ್ಷಗಳ ನಡುವೆ ಇರಬೇಕು. ಸರ್ಕಾರದ ನಿಯಮಾವಳಿಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಯ ಅವಧಿಯಲ್ಲಿ ಪ್ರತಿ ತಿಂಗಳಿಗೆ 25,000ರೂ. ಸ್ಟೈಫಂಡ್ ನೀಡಲಾಗುತ್ತದೆ.

ಯಾವುದೇ ಲಿಖಿತ ಪರೀಕ್ಷೆಯಿಲ್ಲ:

ಈ ನೇಮಕಾತಿಯ ವಿಶೇಷತೆಯೆಂದರೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ. ಶೈಕ್ಷಣಿಕ ಅರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ, ಪ್ರಮಾಣಪತ್ರಗಳ ಪರಿಶೀಲನೆ ಮತ್ತು ಸಂಸ್ಥೆಯ ನಿಯಮಾವಳಿಗಳನ್ನು ಅನುಸರಿಸಿ ನೇರ ಆಯ್ಕೆ ಮಾಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜುಲೈ 31 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ನೀಟ್​​ ವಿಚಾರವಾಗಿ ರಾಜ್ಯದಲ್ಲಿ ಹೋರಾಟ: ಕಾಂಗ್ರೆಸ್​​ಗೆ 2016ರ ಇತಿಹಾಸ ನೆನಪಿಸಿ ತಿವಿದ ಜೆಡಿಎಸ್​​ – Kannada News | NEET Row: JDS Revives 2016 PUC Paper Leak, Calls Congress’ Exam Outrage Pure Hypocrisy

ನೀಟ್​​ ವಿಚಾರವಾಗಿ ಹೋರಾಟ: ಕಾಂಗ್ರೆಸ್​​ಗೆ 2016ರ ಇತಿಹಾಸ ನೆನಪಿಸಿದ JDSImage Credit source: PTI and JDS X Page

ಬೆಂಗಳೂರು, ಜುಲೈ 23: ನೀಟ್​​ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​​ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ಕಾಂಗ್ರೆಸ್​​ ಸೇರಿ ಇತರ ಪಕ್ಷ ಮತ್ತು ಸಂಘಟನೆಗಳು ಹೋರಾಟ ನಡೆಸುತ್ತಿವೆ. ಕರ್ನಾಟಕದಲ್ಲಿಯೂ ಈ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್​​ನ ಕಾರ್ಯಕರ್ತರು ಪ್ರೊಟೆಸ್ಟ್​​ ನಡೆಸುತ್ತಿದ್ದಾರೆ. ಈ ನಡುವೆ ‘ಕೈ’ ನಾಯಕರಿಗೆ 2016ರ ಇತಿಹಾಸವನ್ನು ಜೆಡಿಎಸ್​​ ನೆನಪಿಸಿದೆ. ಬೇರೆಯವರ ಕಣ್ಣಿನ ಕಸ ಹುಡುಕುವ ಮುನ್ನ, ನಿಮ್ಮ ಕಣ್ಣಿನ ದಿಮ್ಮಿಯನ್ನು ತೆಗೆಯಿರಿ ಎಂದು ಎಕ್ಸ್​​ ಪೋಸ್ಟ್​​ ಮೂಲಕ ವ್ಯಂಗ್ಯವಾಡಿದೆ.

‘ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ನಾಚಿಕೆಗೇಡು’

ನಿಮ್ಮದೆ ಸರ್ಕಾರವಿದ್ದಾಗ 2016ರಲ್ಲಿ ಒಂದಲ್ಲ, ಎರೆಡೆರಡು ಬಾರಿ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಅಂದು ಲಕ್ಷಾಂತರ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಕಲ್ಲು ಹಾಕಿದ್ದು ಮರೆತುಹೋಯಿತೇ ? ಅಂದಿನ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ರಾಜೀನಾಮೆ ಆಗ್ರಹಿಸಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡಿದ್ದರು. ಆಗ ಶಿಕ್ಷಣ ಸಚಿವರು ರಾಜೀನಾಮೆ ಕೊಟ್ಟಿದ್ದರೇ? ಎಂದು ಜೆಡಿಎಸ್​​ ಪ್ರಶ್ನಿಸಿದೆ. ಈಗ NEET ವಿಚಾರವಾಗಿ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ, ಪ್ರಚೋದನೆ ನೀಡುವ ಮೂಲಕ ವಾಮಮಾರ್ಗದಲ್ಲಿ ಕಾಂಗ್ರೆಸ್‌ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ನಾಚಿಕೆಗೇಡು ಅಂತಲೂ ವಾಗ್ದಾಳಿ ನಡೆಸಿದೆ.

ಇದನ್ನೂ ಓದಿ: NEET ಪ್ರತಿಭಟನೆ; ವಿದ್ಯಾರ್ಥಿಗಳ ಪರ ನಿಂತ ಯುವರಾಜ್ ಸಿಂಗ್!

‘ಈಗ ಮಾತನಾಡಲು ಯಾವ ನೈತಿಕತೆ ಇದೆ ?’

ವಾಲ್ಮೀಕಿ ಹಗರಣ, SCSP/TSP ಹಣ ದುರ್ಬಳಕೆ, ಕೆಪಿಎಸ್ಸಿ (KPSC) ಹಗರಣ, ಗೃಹಲಕ್ಷ್ಮಿ (5000 ಕೋಟಿ ) ಹಗರಣ ಸೇರಿ ಸಾಲು ಸಾಲು ಹಗರಣಗಳಾದಾಗ ಬಾಯಿ ಮುಚ್ಚಿಕೊಳ್ಳುವ ಕಾಂಗ್ರೆಸ್‌ ನಾಯಕರಿಗೆ, ಈಗ ಮಾತನಾಡಲು ಯಾವ ನೈತಿಕತೆ ಇದೆ ? ಧಾರವಾಡದಲ್ಲಿ ಉದ್ಯೋಗ ನೇಮಕಾತಿಗಾಗಿ ಹೋರಾಡಿದ ವಿದ್ಯಾರ್ಥಿಗಳ ಮೇಲೆ , ನರಗುಂದದಲ್ಲಿ ಕಬ್ಬು ಬೆಳೆಗಾರರ ಮೇಲೆ, ಬಿಡದಿಯಲ್ಲಿ ಭೂಸ್ವಾಧೀನ ವಿರೋಧಿಸುತ್ತಿರುವ ರೈತರ ಮೇಲೆ ಲಾಠಿ ಏಟು ಕೊಟ್ಟ ಜನವಿರೋಧಿ ಸರ್ಕಾರ ನಿಮ್ಮದು. ದಲಿತರ ಮನೆಗೆ ಬೆಂಕಿ ಬಿದ್ದಾಗ, ಹುಬ್ಬಳ್ಳಿಯಲ್ಲಿ ಗಲಭೆಯಾದಾಗ ನಿಮ್ಮ ಬಾಯಿ ಏಕೆ ಮುಚ್ಚಿತ್ತು ಕಾಂಗೆಸ್ಸಿಗರೇ ಎಂದು ಜೆಡಿಎಸ್​​ ಪ್ರಶ್ನಿಸಿದೆ. ಕಾಂಗ್ರೆಸ್‌ ಸರ್ಕಾರ ಮತ್ತು ಕಾಂಗ್ರೆಸ್‌ ನಾಯಕರ ಭ್ರಷ್ಟಾಚಾರ, ಬೂಟಾಟಿಕೆ ಹಾಗೂ ದ್ವಂದ್ವ ನೀತಿಯನ್ನು ರಾಜ್ಯದ ಯುವಜನತೆ ಗಮನಿಸುತ್ತಿದ್ದಾರೆ ಎಂದೂ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:08 pm, Thu, 23 July 26

Source link

ಗ್ಯಾಸ್ ಸಿಲಿಂಡರ್ ಬಳಸುವ ಮುನ್ನ ಈ ಎಚ್ಚರಿಕೆಗಳನ್ನು ಮರೆಯಬೇಡಿ: ಸಣ್ಣ ನಿರ್ಲಕ್ಷ್ಯವೂ ಜೀವಕ್ಕೆ ಅಪಾಯ – Kannada News | LPG Cylinder Safety Tips: How to Prevent Gas Leaks and Explosions at Home After Bengaluru Bommasandra Blast

ಬೆಂಗಳೂರು, ಜುಲೈ 23: ಬೆಂಗಳೂರು (Bengaluru) ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ 8ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿರುವ ಘಟನೆ ಮತ್ತೊಮ್ಮೆ ಗ್ಯಾಸ್ ಸುರಕ್ಷತೆಯ ಮಹತ್ವವನ್ನು ನೆನಪಿಸಿದೆ. ಮನೆಗಳಲ್ಲಿ ಎಲ್‌ಪಿಜಿ ಹಾಗೂ ಇತರ ಗ್ಯಾಸ್ ಸಿಲಿಂಡರ್‌ಗಳನ್ನು ಬಳಸುವಾಗ ಕೆಲ ಸರಳ ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ ಅಪಘಾತದ ಸಾಧ್ಯತೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು ಎಂದು ಸುರಕ್ಷತಾ ತಜ್ಞರು ಸಲಹೆ ನೀಡಿದ್ದಾರೆ.

ಗ್ಯಾಸ್ ಸಿಲಿಂಡರ್ ಮನೆಗೆ ಬಂದ ತಕ್ಷಣ ಏನು ಪರಿಶೀಲಿಸಬೇಕು?

  • ಸಿಲಿಂಡರ್ ಮೇಲಿನ ಕಂಪನಿಯ ಸೀಲ್ ಮತ್ತು ಸೇಫ್ಟಿ ಕ್ಯಾಪ್ ಸರಿಯಾಗಿದೆಯೇ ಎಂದು ಪರಿಶೀಲಿಸಿ.
  • ಸಿಲಿಂಡರ್ ಮೇಲೆ ನಮೂದಿಸಿರುವ ಟೆಸ್ಟ್ ದಿನಾಂಕ ಹಾಗೂ ‘Due for Test’ ಮಾಹಿತಿಯನ್ನು ಗಮನಿಸಿ.
  • ವಿತರಕರು ಮನೆ ಬಾಗಿಲಿನಲ್ಲೇ ಮಾಡುವ Pre-Delivery Inspection (PDI) ನಡೆಸುವಂತೆ ಒತ್ತಾಯಿಸಿ.

ಸಿಲಿಂಡರ್ ಲೀಕ್ ಇದೆಯೇ? ಹೀಗೆ ಪರೀಕ್ಷಿಸಿ

  • ರೆಗ್ಯುಲೇಟರ್ ಅಳವಡಿಸುವ ಭಾಗದಲ್ಲಿ ಸೋಪು ಮಿಶ್ರಿತ ನೀರು ಹಾಕಿ (ಉದಾಹರಣೆಗೆ; ವಾಹನಗಳ ಟೈರ್ ಪಂಚರ್ ಪರಿಶೀಲಿಸುವಂತೆ).
  • ಗುಳ್ಳೆಗಳು (Bubbles) ಕಾಣಿಸಿಕೊಂಡರೆ ಗ್ಯಾಸ್ ಸೋರಿಕೆ ಇರುವ ಸಾಧ್ಯತೆ ಇದೆ.
  • ಇಂತಹ ಸಿಲಿಂಡರ್‌ಗಳನ್ನು ಸ್ವೀಕರಿಸದೆ ತಕ್ಷಣ ವಿತರಕರಿಗೆ ಹಿಂತಿರುಗಿಸಿ.
  • ಅಧಿಕೃತ ಗ್ಯಾಸ್ ಏಜೆನ್ಸಿಗಳಿಂದ ಮಾತ್ರ ಸಿಲಿಂಡರ್ ಪಡೆಯಿರಿ.
  • ಸಿಲಿಂಡರ್ ಇಡುವಾಗ ನೆಟ್ಟಗೆ (Upright) ಸಮತಟ್ಟಾದ ಮತ್ತು ಗಾಳಿ ಸಂಚಾರ ಇರುವ ಸ್ಥಳದಲ್ಲಿ ಇಡಿ.
  • ISI/BIS ಪ್ರಮಾಣಿತ ರೆಗ್ಯುಲೇಟರ್ ಹಾಗೂ ಹೋಸ್ ಮಾತ್ರ ಬಳಸಿ.
  • ಸಾಮಾನ್ಯ ರಬ್ಬರ್ ಹೋಸ್ ಅನ್ನು ಪ್ರತಿ ಎರಡು ವರ್ಷಕ್ಕೊಮ್ಮೆ, ಸುರಕ್ಷಾ (Suraksha) ಹೋಸ್ ಅನ್ನು ಐದು ವರ್ಷಕ್ಕೊಮ್ಮೆ ಬದಲಾಯಿಸಿ.
  • ಸಿಲಿಂಡರ್ ಅನ್ನು ವಿದ್ಯುತ್ ತಂತಿ, ಹೀಟರ್ ಅಥವಾ ಹೆಚ್ಚು ಉಷ್ಣ ಇರುವ ಸ್ಥಳದ ಬಳಿ ಇಡಬೇಡಿ.
  • ಹೆಚ್ಚುವರಿ (Spare) ಸಿಲಿಂಡರ್‌ಗಳನ್ನು ಅಡುಗೆ ಕೋಣೆಯಲ್ಲೇ ಸಂಗ್ರಹಿಸಿಡುವುದನ್ನು ತಪ್ಪಿಸಿ.

ಗ್ಯಾಸ್ ಸೋರಿಕೆ ಅನುಮಾನ ಬಂದರೆ ಏನು ಮಾಡಬೇಕು?

  • ತಕ್ಷಣ ಗಾಬರಿಯಾಗಿ ಏನೋ ಮಾಡಲು ಹೋಗಬೇಡಿ.
  • ಗ್ಯಾಸ್ ಸ್ಟೌವ್, ದೀಪ, ಅಗರಬತ್ತಿ ಸೇರಿದಂತೆ ಎಲ್ಲ ಬೆಂಕಿಯ ಮೂಲಗಳನ್ನು ತಕ್ಷಣ ನಂದಿಸಿ.
  • ಯಾವುದೇ ಕಾರಣಕ್ಕೂ ವಿದ್ಯುತ್ ಸ್ವಿಚ್, ಡೋರ್‌ಬೆಲ್, ಟಾರ್ಚ್ ಅಥವಾ ಮೊಬೈಲ್ ಫೋನ್ ಬಳಸಬೇಡಿ, ಏಕೆಂದರೆ ಸಣ್ಣ ಸ್ಪಾರ್ಕ್ ಕೂಡ ಅಪಾಯಕ್ಕೆ ಕಾರಣವಾಗಬಹುದು.
  • ಮನೆಯ ಎಲ್ಲಾ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಿರಿ.
  • ಸಾಧ್ಯವಾದರೆ ಸಿಲಿಂಡರ್ ಅನ್ನು ಸುರಕ್ಷಿತವಾಗಿ ಹೊರಗಿನ ತೆರೆದ ಸ್ಥಳಕ್ಕೆ ಸ್ಥಳಾಂತರಿಸಿ.
  • ಗ್ಯಾಸ್ ವಾಸನೆ ಹೆಚ್ಚಾಗುತ್ತಿದ್ದರೆ ಅಥವಾ ಬೆಂಕಿ ಕಾಣಿಸಿಕೊಂಡರೆ ತಕ್ಷಣ ಸ್ಥಳ ಖಾಲಿ ಮಾಡಿ ಅಗ್ನಿಶಾಮಕ ದಳ ಅಥವಾ ಪೊಲೀಸರಿಗೆ ಮಾಹಿತಿ ನೀಡಿ.

ಮನೆಯಲ್ಲೇ ಗ್ಯಾಸ್ ಲೀಕ್ ಡಿಟೆಕ್ಟರ್ ಅಳವಡಿಸಬಹುದು

  • ಮಾರುಕಟ್ಟೆಯಲ್ಲಿ ₹1,000 ರಿಂದ ₹2,500ರೊಳಗೆ ಗ್ಯಾಸ್ ಲೀಕ್ ಡಿಟೆಕ್ಟರ್ಗಳು ಲಭ್ಯವಿದ್ದು, ಸೋರಿಕೆ ಕಂಡುಬಂದ ಕೂಡಲೇ ಅಲಾರಂ ನೀಡುತ್ತವೆ.
  • ಜೊತೆಗೆ ಸಣ್ಣ ಗಾತ್ರದ ಫೈರ್ ಎಕ್ಸ್‌ಟಿಂಗ್ವಿಷರ್ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಆರಂಭಿಕ ಹಂತದಲ್ಲೇ ಬೆಂಕಿ ನಿಯಂತ್ರಿಸಲು ಸಹಕಾರಿಯಾಗುತ್ತದೆ.

ತುರ್ತು ಪರಿಸ್ಥಿತಿಯಲ್ಲಿ ಏನು ಮಾಡಬೇಕು?

  • ಗ್ಯಾಸ್ ಸೋರಿಕೆ ಕಂಡುಬಂದರೆ ಮೊದಲು ಕುಟುಂಬದವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಿರಿ.
  • ತುರ್ತು ಕರೆಗಳನ್ನು ಮನೆಯ ಹೊರಹೋಗಿಯೇ ಮಾಡಿ.
  • ಗ್ಯಾಸ್ ಕಂಪನಿಯ 24×7 ತುರ್ತು ಸಹಾಯವಾಣಿ ಸಂಖ್ಯೆ 1906 ಅಥವಾ ಅಗ್ನಿಶಾಮಕ ದಳವನ್ನು ತಕ್ಷಣ ಸಂಪರ್ಕಿಸಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:21 pm, Thu, 23 July 26

Source link

ಹೈದರಾಬಾದ್​ನಲ್ಲಿ ತಿಂಡಿ ತಿಂದು ವಿಮಾನ ಹತ್ತಿದ್ದ ಬ್ರಿಟಿಷ್ ಏರ್​ವೇಸ್​ನ ಮೂವರು ಪೈಲಟ್​ಗಳು ಅಸ್ವಸ್ಥ – Kannada News | British Airways Pilots Food Poisoning in Hyderabad: BA Investigates Flight Safety Incident

ಹೈದರಾಬಾದ್, ಜುಲೈ 23: ಹೈದರಾಬಾದ್‌ನಿಂದ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಬ್ರಿಟಿಷ್ ಏರ್‌ವೇಸ್ (BA276) ವಿಮಾನದ ಮೂವರು ಪೈಲಟ್‌ಗಳು ಅಸ್ವಸ್ಥಗೊಂಡ ಭೀಕರ ಘಟನೆಯೊಂದು  ನಡೆದಿದೆ. ಹೈದರಾಬಾದ್‌ನಲ್ಲಿ ರಾತ್ರಿ ತಂಗಿದ್ದ ವೇಳೆ ಸೇವಿಸಿದ ಆಹಾರದಿಂದಾಗಿ ಪೈಲಟ್‌(Pilot)ಗಳಿಗೆ ಫುಡ್ ಪಾಯ್ಸನ್ ಆಗಿತ್ತು ಎನ್ನಲಾಗಿದೆ, ಈ ಕುರಿತು ಬ್ರಿಟಿಷ್ ಏರ್‌ವೇಸ್ ಸಂಸ್ಥೆ ತನಿಖೆಗೆ ಆದೇಶಿಸಿದೆ.

ವರದಿಗಳ ಪ್ರಕಾರ, ವಿಮಾನವು ಆಕಾಶದಲ್ಲಿ ಸುಮಾರು 30,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ, ಮುಖ್ಯ ಪೈಲಟ್‌ಗಳಲ್ಲಿ ಒಬ್ಬರು ತೀವ್ರ ಹೊಟ್ಟೆನೋವು ಹಾಗೂ ಅನಾರೋಗ್ಯದಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದೆ ಅಸಹಾಯಕರಾಗಿದ್ದರು. ವಿಮಾನವು ಲಂಡನ್‌ಗೆ ತಲುಪಿ ಸುರಕ್ಷಿತವಾಗಿ ಲ್ಯಾಂಡ್ ಆದ ತಕ್ಷಣವೇ ಆ ಪೈಲಟ್‌ಗೆ ಆಮ್ಲಜನಕ ನೀಡಿ, ತುರ್ತು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಯಿತು.

ಉಳಿದ ಇಬ್ಬರು ಪೈಲಟ್‌ಗಳಿಗೂ ಅಲ್ಪಪ್ರಮಾಣದ ಅನಾರೋಗ್ಯ ಉಂಟಾಗಿದ್ದರೂ, ಸಮಯಪ್ರಜ್ಞೆಯಿಂದ ವಿಮಾನವನ್ನು ನಿಯಂತ್ರಿಸಿ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು. ಯಾವುದೇ ಹಂತದಲ್ಲೂ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯಾಗಿಲ್ಲ ಎಂದು ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿದೆ.

ಅಸ್ವಸ್ಥತೆಗೆ ಕಾರಣವೇನು?

ಹೈದರಾಬಾದ್‌ನಿಂದ ವಿಮಾನವೇರುವ ಮುನ್ನ ಮೂವರೂ ಪೈಲಟ್‌ಗಳು ತಂಗಿದ್ದ ಪಂಚತಾರಾ ಹೋಟೆಲ್‌ನಲ್ಲಿ ಒಟ್ಟಿಗೆ ಉಪಹಾರ (Breakfast) ಸೇವಿಸಿದ್ದರು. ಇದರ ಜೊತೆಗೆ ಸ್ಥಳೀಯ ಖಾಸಗಿ ಕಂಪನಿಯೊಂದರ ಬಾಟಲ್ ನೀರನ್ನು ಕುಡಿದಿದ್ದರು. ಇದೇ ಆಹಾರ ಅಥವಾ ನೀರಿನಿಂದಲೇ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ.

ಮತ್ತಷ್ಟು ಓದಿ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಲಗೇಜ್ ಬ್ಯಾಗ್‌ನಲ್ಲಿ ಅಡಗಿಸಿಟ್ಟಿದ್ದ 12 ಕೆಜಿ ಗಾಂಜಾ ಜಪ್ತಿ; ಆರೋಪಿ ಬಂಧನ

ಹೋಟೆಲ್ ವಸತಿ ವ್ಯವಸ್ಥೆ ಮರುಪರಿಶೀಲನೆ

ಸಂಸ್ಥೆಯ ಸಹೋದ್ಯೋಗಿಗಳ ಆರೋಗ್ಯವೇ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿರುವ ಬ್ರಿಟಿಷ್ ಏರ್‌ವೇಸ್, ಹೈದರಾಬಾದ್‌ನಲ್ಲಿ ಸಿಬ್ಬಂದಿಗೆ ನೀಡಲಾಗುವ ಹೋಟೆಲ್ ವಸತಿ ಹಾಗೂ ಆಹಾರ ಪೂರೈಕೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮರುಪರಿಶೀಲಿಸುತ್ತಿರುವುದಾಗಿ ತಿಳಿಸಿದೆ. ಬ್ರಿಟಿಷ್ ಏರ್‌ವೇಸ್ ಯುನೈಟೆಡ್ ಕಿಂಗ್‌ಡಮ್‌ನ (UK) ಅತಿದೊಡ್ಡ ಹಾಗೂ ಪ್ರಮುಖ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾಗಿದೆ.

ಲಂಡನ್‌ನ ‘ಹೀಥ್ರೂ’ ಮತ್ತು ‘ಗ್ಯಾಟ್ವಿಕ್’ ವಿಮಾನ ನಿಲ್ದಾಣಗಳನ್ನು ಕೇಂದ್ರವಾಗಿಸಿಕೊಂಡು, ಏಷ್ಯಾ, ಯುರೋಪ್, ಅಮೆರಿಕ ಸೇರಿದಂತೆ ಪ್ರಪಂಚದ 200 ಕ್ಕೂ ಹೆಚ್ಚು ನಗರಗಳಿಗೆ ನಿರಂತರ ವಿಮಾನ ಸೇವೆ ಒದಗಿಸುತ್ತದೆ. ಈ ಸಂಸ್ಥೆಯು ಬೋಯಿಂಗ್ 777, ಬೋಯಿಂಗ್ 787 ಡ್ರೀಮ್‌ಲೈನರ್ ಮತ್ತು ಭಾರಿ ಗಾತ್ರದ ಏರ್‌ಬಸ್ A380 ಸೇರಿದಂತೆ ಅತ್ಯಾಧುನಿಕ ವಿಮಾನಗಳನ್ನು ಹೊಂದಿದ್ದು, ಪ್ರತಿವರ್ಷ ಕೋಟ್ಯಂತರ ಪ್ರಯಾಣಿಕರನ್ನು ಹೊತ್ತೊಯ್ಯುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version