IND vs AFG: ಮಾನವ್ ಮ್ಯಾಜಿಕ್; 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಅಫ್ಘಾನಿಸ್ತಾನ

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಏಕೈಕ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಅಂತ್ಯವಾಗಿದೆ. ನ್ಯೂ ಚಂಡೀಗಢದ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 8 ವಿಕೆಟ್ ಕಳೆದುಕೊಂಡು 564 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದಾದ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಅಫ್ಘಾನಿಸ್ತಾನ ತಂಡ ಎರಡನೇ ದಿನದಾಟದಂತ್ಯಕ್ಕೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಪ್ರಸ್ತುತ 113 ರನ್ ಕಲೆಹಾಕಿರುವ ಅಫ್ಘನ್ ಪಡೆ 451 ರನ್​ಗಳ ಹಿನ್ನಡೆಯಲ್ಲಿದೆ. ಭಾರತದ ಪರ ಬೌಲಿಂಗ್​ನಲ್ಲಿ ಮಿಂಚಿದ ಯುವ ಸ್ಪಿನ್ನರ್ ಮಾನವ್ ಸುತಾರ್ ಪ್ರಮುಖ 3 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ.

Source link

ಅಮೆರಿಕದಲ್ಲಿ ಭಾರತೀಯ ಯುವಕನ ಹತ್ಯೆ; ಪೀಜ್ಜಾ ಡೆಲಿವರಿಗೆಂದು ಕರೆಸಿ ಸಾಯಿಸಿದ ಹಂತಕರು – Kannada News

ಪೀಜ್ಜಾ ಡೆಲಿವರಿ ಸಾಂದರ್ಭಿಕ ಚಿತ್ರImage Credit source: Getty Images

ವಾಷಿಂಗ್ಟನ್, ಜೂನ್ 7: ಭಾರತ ಮೂಲದ 28 ವರ್ಷದ ಯುವಕನೊಬ್ಬನನ್ನು ನಕಲಿ ಪೀಜ್ಜಾ ಆರ್ಡರ್ ನೀಡಿ, ಹೊಂಚು ಹಾಕಿ ಗುಂಡಿಕ್ಕಿ ಕೊಂದಿರುವ ಅತ್ಯಂತ ದಾರುಣ ಘಟನೆ ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆದಿದೆ. ಕುಟುಂಬಸ್ಥರು ಇದು ಕೇವಲ ಕೊಲೆ ಮಾಡುವ ಉದ್ದೇಶದಿಂದಲೇ ರೂಪಿಸಲಾಗಿದ್ದ ಸಂಚು ಎಂದು ಆರೋಪಿಸಿದ್ದಾರೆ. ತೆಲಂಗಾಣ ರಾಜಧಾನಿ ಹೈದರಾಬಾದ್ ಮೂಲದ ಅನ್ಶುಲ್ ಕುಂಚ (28) ಕೊಲೆಯಾಗಿರುವ ಯುವಕ. ಇವರ ಕುಟುಂಬ ಹೈದರಾಬಾದ್‌ನ ಹೊರವಲಯದ ಮೇಡ್ಚಲ್ ಮಲ್ಕಾಜ್‌ಗಿರಿ ಜಿಲ್ಲೆಯ ಗುಂಡ್ಲಪೋಚಂಪಲ್ಲಿಯಲ್ಲಿ ವಾಸಿಸುತ್ತಿದೆ.

ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಉತ್ತರ ಫಿಲಡೆಲ್ಫಿಯಾದ ವಸತಿ ಸಂಕೀರ್ಣವೊಂದರ ನಿರ್ಜನ ಪ್ರದೇಶದಲ್ಲಿ ಈ ಹತ್ಯೆ ನಡೆದಿದೆ. ಯುವಕನನ್ನು ಕೊಲ್ಲಲೆಂದೇ ಖಾಲಿ ಇರುವ ಅಪಾರ್ಟ್‌ಮೆಂಟ್‌ಗೆ ನಕಲಿ ಪೀಜ್ಜಾ ಆರ್ಡರ್ (Decoy Order) ಮಾಡಿ ಕರೆಯಿಸಿಕೊಳ್ಳಲಾಗಿತ್ತು ಎನ್ನಲಾಗಿದೆ.

ಘಟನೆ ಹೇಗೆ ನಡೆಯಿತು?

ಅನ್ಶುಲ್ ಕಳೆದ ನಾಲ್ಕು ವರ್ಷಗಳಿಂದ ಅಮೆರಿಕದಲ್ಲಿದ್ದು, ಅಲ್ಲಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ (MNC) ಉದ್ಯೋಗಿಯಾಗಿದ್ದರು. ಹೆಚ್ಚುವರಿ ಆದಾಯ ಗಳಿಸಲು ಅವರು ವಾರಾಂತ್ಯದಲ್ಲಿ (ವೀಕೆಂಡ್) ಪಾರ್ಟ್-ಟೈಮ್ ಪೀಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಮಧ್ಯರಾತ್ರಿ 12:30ರ ಸುಮಾರಿಗೆ ಅವರಿಗೆ ಮೂರು ಪೀಜ್ಜಾಗಳನ್ನು ತಲುಪಿಸುವಂತೆ ಒಂದು ಆರ್ಡರ್ ಬಂದಿತ್ತು. ಅವರು ನಿಗದಿಪಡಿಸಿದ ವಿಳಾಸಕ್ಕೆ ಹೋದಾಗ, ಅಲ್ಲಿ ಯಾರೂ ಇರಲಿಲ್ಲ. ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಕಪ್ಪು ಬಟ್ಟೆ ಧರಿಸಿ ಬೆನ್ನಿಗೆ ಬ್ಯಾಗ್ (Backpack) ಹಾಕಿಕೊಂಡಿದ್ದ ಇಬ್ಬರು ಮುಖವಾಡಧಾರಿಗಳು ಅನ್ಶುಲ್ ಅವರನ್ನು ಹಿಂಬಾಲಿಸಿ, ತಲೆಯ ಹಿಂಭಾಗಕ್ಕೆ ಅತ್ಯಂತ ಹತ್ತಿರದಿಂದ ಹಲವು ಬಾರಿ ಗುಂಡು ಹಾರಿಸಿದ್ದಾರೆ. ಅನ್ಶುಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ದೆಹಲಿಯ ಪ್ರಾಧ್ಯಾಪಕಿಯನ್ನು ಕೊಲ್ಲಲು 1,400 ಕಿ.ಮೀ ದೂರದಿಂದ ಬಂದಿದ್ದ ಹಂತಕರು

ಇದು ದರೋಡೆಯಲ್ಲ, ಪಕ್ಕಾ ಪ್ಲಾನ್ ಎಂದ ಕುಟುಂಬ

ಸಾಮಾನ್ಯವಾಗಿ ಅಮೆರಿಕದಲ್ಲಿ ಇಂತಹ ಘಟನೆಗಳು ದರೋಡೆಗಾಗಿ ನಡೆಯುತ್ತವೆ. ಆದರೆ, ಹಂತಕರು ಅನ್ಶುಲ್ ಬಳಿ ಇದ್ದ ನಗದು, ಫೋನ್ ಅಥವಾ ಯಾವುದೇ ಬೆಲೆಬಾಳುವ ವಸ್ತುಗಳನ್ನು ಕದ್ದಿಲ್ಲ. ಪೀಜ್ಜಾ ಬಾಕ್ಸ್ ಸಹ ಖಾಲಿ ಅಪಾರ್ಟ್‌ಮೆಂಟ್‌ನಲ್ಲಿ ಹಾಗೇ ಉಳಿದಿದೆ. ಈ ಹಿಂದೆ ಅನ್ಶುಲ್ ಅಮೆರಿಕದಲ್ಲಿದ್ದಾಗ ಒಮ್ಮೆ ದರೋಡೆಗೆ ಒಳಗಾಗಿದ್ದರು (ಅವರ ಚಿನ್ನದ ಸರ, ಫೋನ್ ಕಳುವಾಗಿತ್ತು). ಆದರೆ ಈ ಬಾರಿ ಯಾವುದೇ ಲೂಟಿ ನಡೆಯದಿರುವುದರಿಂದ, ಇದು ಕೇವಲ ಅವರ ಜೀವ ತೆಗೆಯಲು ಹೂಡಿದ ಸಂಚು ಎಂದು ಕುಟುಂಬದವರು ಖಚಿತಪಡಿಸಿದ್ದಾರೆ.

ಮಕ್ಕಳನ್ನು ಅಮೆರಿಕಕ್ಕೆ ಕಳುಹಿಸಬೆಡಿ: ಸಹೋದರಿಯ ಕಣ್ಣೀರಿನ ಮನವಿ

ಅನ್ಶುಲ್ ಅವರ ಸಹೋದರಿ ತನ್ವಿ ಮಾಧ್ಯಮಗಳ ಮುಂದೆ ತೀವ್ರ ಆಕ್ರೋಶ ಮತ್ತು ದುಃಖ ವ್ಯಕ್ತಪಡಿಸಿದ್ದು, “ಅವನಿಗೆ ಅಮೆರಿಕಕ್ಕೆ ಹೋಗಲು ಇಷ್ಟವಿರಲಿಲ್ಲ, ಕುಟುಂಬದ ಒತ್ತಾಸೆಗಾಗಿ ಹೋದ. ಅಲ್ಲಿ ಕತ್ತಲು ರಸ್ತೆಯಲ್ಲಿ ತಲೆಗೆ ಗುಂಡಿಟ್ಟು ಕೊಂದಿದ್ದಾರೆ. ದಯವಿಟ್ಟು ಯಾರೂ ನಿಮ್ಮ ಮಕ್ಕಳನ್ನು ಅಮೆರಿಕಕ್ಕೆ ಕಳುಹಿಸಬೇಡಿ,” ಎಂದು ಪೋಷಕರಿಗೆ ಕಣ್ಣೀರಿನ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತೆ ಕಿಡ್ನಾಪ್ ವೇಳೆ ಅಡ್ಡ ಬಂದ ವ್ಯಕ್ತಿಯ ಕೊಲೆ: ಕೊನೆಗೂ ಸಿಕ್ಕಿಬಿದ್ದ ಲವ್ ಬರ್ಡ್ಸ್ ಹಾಗೂ ಹಂತಕರು!

ಭಾರತೀಯ ರಾಯಭಾರ ಕಚೇರಿ ಮತ್ತು ತನಿಖೆ

ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿಯು ಈ ಘಟನೆಗೆ ತೀವ್ರ ಸಂತಾಪ ಸೂಚಿಸಿದೆ. ಸ್ಥಳೀಯ ತನಿಖಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಅನ್ಶುಲ್ ಅವರ ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ತರಲು ಎಲ್ಲಾ ರೀತಿಯ ಕಾನೂನು ನೆರವು ನೀಡುವುದಾಗಿ ತಿಳಿಸಿದೆ.

ಪ್ರಸ್ತುತ ಫಿಲಡೆಲ್ಫಿಯಾ ಪೊಲೀಸರು ಹಂತಕರ ಪತ್ತೆಗಾಗಿ $20,000 (ಸುಮಾರು 19 ಲಕ್ಷ ರೂಪಾಯಿ) ಬಹುಮಾನ ಘೋಷಿಸಿದ್ದಾರೆ. ಆರ್ಡರ್ ಬಂದ ಫೋನ್ ನಂಬರ್ ಆಧರಿಸಿ ತನಿಖೆ ಚುರುಕುಗೊಳಿಸಲಾಗಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನೆಪೊಟಿಸಮ್ ಚರ್ಚೆ: ಶಿವಣ್ಣ-ಅಪ್ಪು ಹೆಸರು ಹೇಳಿದ್ದಕ್ಕೆ ಸುದೀಪ್ ಸ್ಪಷ್ಟನೆ

ಬಾಲಿವುಡ್​ನಲ್ಲಿ (Bollywood) ಬಲು ಜೋರಾಗಿ ನಡೆದಿದ್ದ ನೆಪೊಟಿಸಮ್ ಚರ್ಚೆ ಆಗೊಮ್ಮೆ-ಈಗೊಮ್ಮೆ ಕನ್ನಡ ಚಿತ್ರರಂಗದಲ್ಲೂ ಕೇಳಿ ಬರುತ್ತದೆ. ಇದೀಗ ಸುದೀಪ್ ಅವರು ತಮ್ಮ ಅಕ್ಕನ ಮಗ ಸಂಚಿತ್ ಸಂಜಯ್ ಅವರನ್ನು ‘ಮ್ಯಾಂಗೊ ಪಚ್ಚ’ ಮೂಲಕ ಚಿತ್ರರಂಗಕ್ಕೆ ಲಾಂಚ್ ಮಾಡಿದ್ದು, ಸಿನಿಮಾಕ್ಕಾಗಿ ಸಖತ್ ಪ್ರಚಾರವನ್ನೂ ಮಾಡುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಬಗ್ಗೆ ಕರೆದಿದ್ದು ಸುದ್ದಿಗೋಷ್ಠಿಯಲ್ಲಿ ಸುದೀಪ್ ಅವರಿಗೆ ನೆಪೊಟಿಸಮ್ ಪ್ರಶ್ನೆ ಎದುರಾಯ್ತು.

ಪ್ರಶ್ನೆಗೆ ಉತ್ತರಿಸಿದ ನಟ ಸುದೀಪ್, ‘ದೊಡ್ಮನೆಯರನ್ನು ಏಕೆ ಪ್ರಶ್ನೆ ಕೇಳಲ್ಲ, ಶಿವಣ್ಣ ಅವರನ್ನು ಏಕೆ ಕೇಳಲ್ಲ’ ಎಂದಿದ್ದರು. ಆದರೆ ಅವರ ಉದ್ದೇಶ ಇದ್ದಿದ್ದು, ದೊಡ್ಮನೆಯವರು ತಮ್ಮ ಕಲೆಯಿಂದ ಮೇಲೆ ಬಂದು ಹೆಸರು ಗಳಿಸಿದವರು ಎಂಬುದಾಗಿತ್ತು. ಆದರೆ ಅವರ ಮಾತನ್ನು ಬೇರೆ ರೀತಿಯಾಗಿ ಅರ್ಥ ಮಾಡಿಕೊಂಡು, ಸುದೀಪ್ ಅವರನ್ನು ಟೀಕೆ ಸಹ ಮಾಡಲಾಗಿತ್ತು. ಇದೀಗ ಮತ್ತೊಂದು ಸಂದರ್ಶನದಲ್ಲಿ ಈ ಬಗ್ಗೆ ಸುದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ.

ಮಾಜಿ ಬಿಗ್​​ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸುದೀಪ್, ‘ಆ ಮನೆ, ಈ ಮನೆ ಅಂಥ ಅಲ್ಲ, ಅವರು (ದೊಡ್ಮನೆಯವರು) ನಮಗೆ ಬಹಳ ಬೇಕಾದವರು, ನಾನು ಬಹಳ ಪ್ರೀತಿಯಿಂದ ಅವರನ್ನು ಶಿವಣ್ಣ ಎಂದು ಕರೆಯುತ್ತೇನೆ. ಶಿವಣ್ಣ ಅವರನ್ನು ನೆಪೊಟಿಸನ್ ಎಂದು ಹೇಳ್ತೀವಾ ಅಥವಾ ಕಲೆ ಎಂದು ಹೇಳ್ತೀವಾ? ಅಪ್ಪು ಸಾಧಿಸಿದ್ದು ಕಲೆಯಿಂದಲೇ ಅಲ್ಲವೇ?’ ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:‘ಮ್ಯಾಂಗೊ ಪಚ್ಚ’ ಕಟೌಟ್​​ನಲ್ಲಿ ನಟ ದರ್ಶನ್ ಚಿತ್ರ: ಸುದೀಪ್ ಹೇಳಿದ್ದೇನು?

‘ಶಿವಣ್ಣ ಮತ್ತು ಅಪ್ಪು ನಾಡಿನ ಅತ್ಯುತ್ತಮ ಪ್ರತಿಭೆಗಳು. ಎಷ್ಟೋ ಜನ ಅವರನ್ನು ನೋಡಿ ಸ್ಪೂರ್ತಿ ಪಡೆದಿದ್ದಾರೆ. ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಜನ ಸುಮ್ಮ-ಸುಮ್ಮನೆ ಅಭಿಮಾನಿಗಳಾಗಿಬಿಡ್ತಾರಾ? ನೆಪೊಟಿಸಮ್ ಮಾತ್ರವೇ ಆಗಿದ್ದಲ್ಲಿ, ಎಲ್ಲ ಸ್ಟಾರ್ ನಟರ ಮಕ್ಕಳು ಸ್ಟಾರ್​​ಗಳಾಗಿಬಿಡಬೇಕಿತ್ತು ಅಲ್ಲವೆ? ರಾಜ್​​ಕುಮಾರ್ ಅವರ ಕಾಲದಿಂದಲೂ ನಮ್ಮ ಕರ್ನಾಟಕದ ಜನ ನೋಡುವುದು ಕಲೆಯನ್ನು ಮಾತ್ರ. ನಿಮ್ಮಲ್ಲಿ ಕಲೆ ಇದ್ದರೆ ನೀವು ಬೆಳೆಯುವುದು ಗ್ಯಾರೆಂಟಿ, ಯಾವ ಕುಟುಂಬದವರು ಎಂದೆಲ್ಲ ನೋಡುವುದಿಲ್ಲ’ ಎಂದು ಸುದೀಪ್ ವಿವರಿಸಿ ಹೇಳಿದ್ದಾರೆ.

ನೆಪೊಟೀಸಮ್​ ಅಲ್ಲ ಪ್ರತಿಭೆ ಮುಖ್ಯ ಎಂದು ಹೇಳಲು ಶಿವಣ್ಣ ಮತ್ತು ಅಪ್ಪು ಅವರಿಗಿಂತಲೂ ಹೆಚ್ಚು ಸೂಕ್ತವಾದ ವ್ಯಕ್ತಿಗಳು ಯಾರೂ ಇಲ್ಲ. ಆ ಇಬ್ಬರೂ ಸಹ ಕಲೆಯಿಂದಾಗಿ ಇಷ್ಟು ಎತ್ತರಕ್ಕೆ ಬಂದು ನಿಂತಿದ್ದಾರೆಯೇ ಹೊರತು ನೆಪೊಟಿಸಮ್​ ಇಂದ ಅಲ್ಲ’ ಎಂದು ಸುದೀಪ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪೊಲೀಸ್ ಇಲಾಖೆ ನೇಮಕಾತಿ: 3,395 ಸಿವಿಲ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅಧಿಸೂಚನೆ, ಅರ್ಹತೆ-ಸಂಬಳ ವಿವರ ಇಲ್ಲಿದೆ – Kannada News

ಬೆಂಗಳೂರು, (ಜೂನ್ 07: ಕರ್ನಾಟಕ  ಪೊಲೀಸ್  (Karnataka Police) ಇಲಾಖೆಯು ಹೊಸ ನೇಮಕಾತಿ ಅಧಿಸೂಚನೆಯನ್ನು  ಪ್ರಕಟಿಸಿಲಾಗಿದೆ. ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಜಿಲ್ಲಾ, ನಗರ ಹಾಗೂ ಘಟಕಗಳಲ್ಲಿ ಖಾಲಿ ಇರುವ ಒಟ್ಟು 3,395 ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗಳಿಗೆ ((Police Constable Recruitment ) )ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜೂನ್ 8ರಿಂದ ಆನ್​​ಲೈನ್ ಮೂಲಕ ಅರ್ಹ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದಾಗಿದ್ದು, ಜೂನ್ 3ರಂದು ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ಇನ್ನು ಶುಲ್ಕ ಪಾವತಿಗೆ ಜುಲೈ 4 ಕಡೆ ದಿನವಾಗಿದೆ ಎಂದು ಅಧಿಕಸೂಚನೆಯಲ್ಲಿ ತಿಳಿಸಲಾಗಿದೆ.

ನೇಮಕಾತಿ ಪರೀಕ್ಷೆ ವಿವರ

ಪರೀಕ್ಷೆ ಆಗಸ್ಟ್ 2, 2026 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00ರವರೆಗೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ಭಾರತ ಸಂವಿಧಾನ, ಸ್ವಾತಂತ್ರ್ಯ ಚಳವಳಿ, ಕರ್ನಾಟಕದ ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ಸಂಸ್ಕೃತಿ ಮತ್ತು ಸಾಹಿತ್ಯ ವಿಷಯಗಳ ಪ್ರಶ್ನೆಗಳು ಇರಲಿವೆ. ಒಟ್ಟು 100 ಪ್ರಶ್ನೆಗಳು, 100 ಅಂಕಗಳು ಮತ್ತು 90 ನಿಮಿಷಗಳ ಅವಧಿ ನಿಗದಿಯಾಗಿದೆ. ತಪ್ಪು ಉತ್ತರಕ್ಕೆ 0.25 ಅಂಕಗಳ ನಕಾರಾತ್ಮಕ ಮೌಲ್ಯಮಾಪನ ಅನ್ವಯವಾಗಲಿದೆ.

ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ; ಎಸ್‌ಎಸ್‌ಸಿ ಸ್ಟೆನೋಗ್ರಾಫರ್ ಹುದ್ದೆಗಳ ಸಂಖ್ಯೆ 1,170ಕ್ಕೆ ಹೆಚ್ಚಳ!

ಉದ್ಯೋಗಕ್ಕೆ ಅರ್ಹತೆ

ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಪಿ.ಯು.ಸಿ (PUC) ಅಥವಾ ಸಿ.ಬಿ.ಎಸ್.ಇ, ಐ.ಎಸ್.ಸಿ, ಎನ್.ಐ.ಓ.ಎಸ್ ಹಾಗೂ ಮೂರು ವರ್ಷಗಳ ಡಿಪ್ಲೊಮಾ ಸೇರಿದಂತೆ ಸರ್ಕಾರದ ನಿಯಮಾವಳಿಗಳನ್ವಯ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಜನ್ಮ ದಿನಾಂಕದ ಆಧಾರದ ಮೇಲೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕಾಗಿದ್ದು, ಸರ್ಕಾರವು ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಿದೆ. ಇದರನ್ವಯ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 33 ವರ್ಷಗಳು, SC/ST ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 35 ವರ್ಷಗಳು ಹಾಗೂ ಬುಡಕಟ್ಟು ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ದೇಹದಾರ್ಢ್ಯತೆ ಮತ್ತು ಸಹನಶಕ್ತಿ ಪರೀಕ್ಷೆ

ಅಭ್ಯರ್ಥಿಗಳು ದೇಹದಾರ್ಢ್ಯತೆ ಮತ್ತು ಸಹನಶಕ್ತಿ ಪರೀಕ್ಷೆಗಳಲ್ಲಿ ಭಾಗವಹಿಸಬೇಕಾಗಿದ್ದು, ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 168 ಸೆಂ.ಮೀ. ಮತ್ತು ಮಹಿಳಾ ಅಭ್ಯರ್ಥಿಗಳಿಗೆ 157 ಸೆಂ.ಮೀ. ಇರಬೇಕು. ಪುರುಷರು 1600 ಮೀಟರ್ ಓಟವನ್ನು 6 ನಿಮಿಷ 30 ಸೆಕೆಂಡಿನೊಳಗೆ ಪೂರ್ಣಗೊಳಿಸಬೇಕು. ಎತ್ತರ ಜಂಪ್ ಕನಿಷ್ಠ 1.20 ಮೀಟರ್ ಮತ್ತು ಅಡ್ಡ ಜಂಪ್ 3.80 ಮೀಟರ್ ಇರಬೇಕು. ಮಹಿಳಾ ಅಭ್ಯರ್ಥಿಗಳಿಗೆ ಎತ್ತರ ಜಂಪ್ 0.90 ಮೀಟರ್ ಮತ್ತು ಅಡ್ಡ ಜಂಪ್ 2.50 ಮೀಟರ್ ಇರಬೇಕು.

ಪರೀಕ್ಷಾ ಶುಲ್ಕ

ಪರೀಕ್ಷಾ ಶುಲ್ಕದಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು 750 ಪಾವತಿಸಬೇಕಾಗಿದ್ದು, ಪಂಗು, ಪರಿಷ್ಕೃತ ಜಾತಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 500 ನಿಗದಿಯಾಗಿದೆ. ನೇಮಕಗೊಂಡ ಅಭ್ಯರ್ಥಿಗಳಿಗೆ ಎರಡು ವರ್ಷಗಳ ತರಬೇತಿ ನೀಡಲಾಗುತ್ತದೆ. ತರಬೇತಿ ಪೂರ್ಣಗೊಂಡ ನಂತರ ಖಾಯಂ ನೇಮಕಾತಿ ನಡೆಯಲಿದ್ದು, ವೇತನ ಶ್ರೇಣಿ ₹37,500 ರಿಂದ 76,100ರವರೆಗೆ ನಿಗದಿಯಾಗಿದೆ.

ಏನೇನು ದಾಖಲೆಗಳು ಬೇಕು?

ಅಭ್ಯರ್ಥಿಗಳು ತಮ್ಮ ಅರ್ಜಿಯೊಂದಿಗೆ ಇತ್ತೀಚಿನ ಫೋಟೋ ಮತ್ತು ಸಹಿಯನ್ನು JPEG ರೂಪದಲ್ಲಿ ಅಪ್‌ಲೋಡ್ ಮಾಡಬೇಕಾಗಿದ್ದು, ಫೋಟೋ 50KB ರಿಂದ 200KB ಹಾಗೂ ಸಹಿ 50KB ರಿಂದ 70KB ಗಾತ್ರದೊಳಗೆ ಇರಬೇಕು. ಅರ್ಜಿ ಸಲ್ಲಿಸುವಾಗ ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಸೇವಾ ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ, ನಿವೃತ್ತ ಸೈನಿಕರ ಪಿಂಚಣಿ ಪುಸ್ತಕ ಅಥವಾ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ವೇತನ ಶ್ರೇಣಿ

ಒಟ್ಟು 3,395 ಹುದ್ದೆಗಳಲ್ಲಿ ಪುರುಷ ಅಭ್ಯರ್ಥಿಗಳಿಗೆ 2266, ಮಹಿಳಾ ಅಭ್ಯರ್ಥಿಗಳಿಗೆ 755, ಸೇವಾನಿರತ ಪುರುಷರಿಗೆ 257, ಸೇವಾನಿರತ ಮಹಿಳೆಯರಿಗೆ 82 ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ 35 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 37,500 ರಿಂದ 76,100 ರವರೆಗಿನ ವೇತನ ಶ್ರೇಣಿ ಅನ್ವಯವಾಗಲಿದ್ದು, ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸೌಲಭ್ಯ ದೊರೆಯಲಿದೆ.

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಅರ್ಹ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡುವ ಪ್ರಕ್ರಿಯೆ 1:5 ಅನುಪಾತದಲ್ಲಿ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಹದಾರ್ಢ್ಯತೆ ಮತ್ತು ಸಹನಶಕ್ತಿ ಪರೀಕ್ಷೆಗಳಲ್ಲಿ ಭಾಗವಹಿಸಬೇಕಾಗುತ್ತದೆ.

ಜೂನ್‌ 8 ರಿಂದ ಅರ್ಜಿ ಸಲ್ಲಿಕೆ ಆರಂಭ

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜೂನ್ 08, 2026 ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 03, 2026 ಕೊನೆಯ ದಿನಾಂಕವಾಗಿರುತ್ತದೆ. ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea/ ಲಿಂಕ್ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕಿದ್ದು,

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಮಾರಾಟ ಕೇಂದ್ರದ ದೂರವಾಣಿ ಸಂಖ್ಯೆ 080‑23460460 (ಬೆಳಿಗ್ಗೆ 10.00 ರಿಂದ ಸಂಜೆ 6.00ರವರೆಗೆ) ಸಂಪರ್ಕಿಸಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Vasthu Tips: ಮನೆಯ ಈ ದಿಕ್ಕಿನಲ್ಲಿ ಕಸದ ಬುಟ್ಟಿ ಇಟ್ಟರೆ ಹಣದ ಸಮಸ್ಯೆ ಗ್ಯಾರಂಟಿ! ಇಂದೇ ದಿಕ್ಕು ಬದಲಿಸಿ – Kannada News

ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ದಿಕ್ಕಿಗೂ ತನ್ನದೇ ಆದ ವಿಶೇಷ ಮಹತ್ವವಿದೆ. ವಾಸ್ತು ನಿಯಮಗಳನ್ನು ಸರಿಯಾಗಿ ಪಾಲಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಹಾಗೂ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತವೆ ಎಂಬುದು ನಂಬಿಕೆ. ಆದರೆ, ಅನೇಕರು ಮನೆಯ ಸ್ವಚ್ಛತೆಗೆ ಬಳಸುವ ಕಸದ ಬುಟ್ಟಿಯ (Dustbin) ವಿಷಯದಲ್ಲಿ ದೊಡ್ಡ ವಾಸ್ತು ತಪ್ಪುಗಳನ್ನು ಮಾಡುತ್ತಾರೆ.

ವಾಸ್ತು ಶಾಸ್ತ್ರದ ಪ್ರಕಾರ, ಕಸದ ಬುಟ್ಟಿಯನ್ನು ನಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ತಪ್ಪು ದಿಕ್ಕಿನಲ್ಲಿ ಇಡುವುದರಿಂದ ಕುಟುಂಬದ ಸದಸ್ಯರು ತೀವ್ರ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಮತ್ತು ಜೀವನದಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಹಾಗಾದರೆ, ಮನೆಯಲ್ಲಿ ಕಸದ ಬುಟ್ಟಿಯನ್ನು ಇಡಲು ಸೂಕ್ತವಾದ ದಿಕ್ಕುಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ.

ಕಸದ ಬುಟ್ಟಿಯನ್ನು ಇಡಲು ಅತ್ಯಂತ ಶುಭ ದಿಕ್ಕುಗಳು:

ಮನೆಯಲ್ಲಿ ಕಸದ ಬುಟ್ಟಿಯನ್ನು ಇಡಲು ವಾಯುವ್ಯ ದಿಕ್ಕನ್ನು ಅತ್ಯಂತ ಉತ್ತಮ ಎಂದು ಪರಿಗಣಿಸಲಾಗಿದೆ. ಈ ದಿಕ್ಕನ್ನು ವಾಯು ದೇವನ ಸ್ಥಾನ ಎನ್ನಲಾಗುತ್ತದೆ. ಇದು ಮನೆಯ ಕಸ ಮತ್ತು ನಕಾರಾತ್ಮಕತೆಯನ್ನು ಹೊರಹಾಕಲು ಸಹಾಯ ಮಾಡುತ್ತದೆ. ಈ ದಿಕ್ಕಿನಲ್ಲಿ ಡಸ್ಟ್‌ಬಿನ್ ಇಡುವುದರಿಂದ ಮನೆಯಲ್ಲಿ ಕೆಟ್ಟ ಶಕ್ತಿಗಳು ಮನೆಮಾಡುವುದಿಲ್ಲ. ಇದರೊಂದಿಗೆ ಮನೆಯ ನೈಋತ್ಯ ದಿಕ್ಕಿನಲ್ಲಿಯೂ ಸಹ ಕಸದ ಬುಟ್ಟಿಯನ್ನು ಇಡಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಈ ದಿಕ್ಕಿನಲ್ಲಿ ಡಸ್ಟ್‌ಬಿನ್ ಇಡುವುದರಿಂದ ಜೀವನದಲ್ಲಿ ಸ್ಥಿರತೆ ಮತ್ತು ನಿರ್ಧಾರಗಳಲ್ಲಿ ದೃಢತೆ ಬರುತ್ತದೆ.

ಈ ದಿಕ್ಕುಗಳಲ್ಲಿ ಮರೆತೂ ಕೂಡ ಕಸದ ಬುಟ್ಟಿ ಇಡಬೇಡಿ:

ವಾಸ್ತು ಪ್ರಕಾರ ಈಶಾನ್ಯ ದಿಕ್ಕನ್ನು ದೇವತೆಗಳ ವಾಸಸ್ಥಾನ (ದೇವ ಮೂಲೆ) ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ದಿಕ್ಕಿನಲ್ಲಿ ಮರೆತೂ ಕೂಡ ಕಸದ ಬುಟ್ಟಿಯನ್ನು ಇಡಬಾರದು. ಒಂದು ವೇಳೆ ಇಲ್ಲಿ ಕಸ ಸಂಗ್ರಹಿಸಿದರೆ ಕುಟುಂಬದ ಸದಸ್ಯರು ನಿರಂತರ ಮಾನಸಿಕ ಒತ್ತಡ ಅನುಭವಿಸಬೇಕಾಗುತ್ತದೆ ಮತ್ತು ಭಾರಿ ಧನಹಾನಿಯಾಗುತ್ತದೆ. ಇದಲ್ಲದೇ ಆಗ್ನೇಯ ದಿಕ್ಕು ಅಗ್ನಿ ದೇವನಿಗೆ ಸಂಬಂಧಿಸಿದ್ದಾಗಿದ್ದು, ಇಲ್ಲಿ ಅಡುಗೆ ಮನೆಯ ಗ್ಯಾಸ್ ಸ್ಟವ್ ಇಡಲಾಗುತ್ತದೆ. ಹಾಗಾಗಿ ಈ ದಿಕ್ಕಿನಲ್ಲಿ ಡಸ್ಟ್‌ಬಿನ್ ಇಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈ ತಪ್ಪು ಮಾಡುವುದರಿಂದ ಮನೆಯಲ್ಲಿ ಅನಗತ್ಯ ಖರ್ಚುಗಳು ದುಪ್ಪಟ್ಟಾಗುತ್ತವೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ಉತ್ತರ ದಿಕ್ಕಿನಲ್ಲಿ ಇಟ್ಟರೆ ಉದ್ಯೋಗಕ್ಕೆ ಕಂಟಕ:

ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ ದಿಕ್ಕು ಧನದೇವನಾದ ಕುಬೇರನಿಗೆ ಸೇರಿದ್ದಾಗಿದೆ. ಆದ್ದರಿಂದ ಈ ದಿಕ್ಕಿನಲ್ಲಿ ಎಂದಿಗೂ ಕಸದ ಬುಟ್ಟಿಯನ್ನು ಇಡಬಾರದು. ಇಲ್ಲಿ ಡಸ್ಟ್‌ಬಿನ್ ಇಡುವುದರಿಂದ ವ್ಯಕ್ತಿಯ ವೃತ್ತಿಜೀವನ (Career) ಮತ್ತು ಉದ್ಯೋಗದಲ್ಲಿ ದೊಡ್ಡ ಸಮಸ್ಯೆಗಳು ಎದುರಾಗುತ್ತವೆ. ಮಾಡುತ್ತಿರುವ ಕೆಲಸಗಳಲ್ಲಿ ಸದಾ ಅಡೆತಡೆಗಳು ಉಂಟಾಗುತ್ತವೆ ಮತ್ತು ಲಕ್ಷ್ಮಿ ದೇವಿಯ ಕೃಪೆ ದೂರವಾಗುತ್ತದೆ.

ಮನೆಯಲ್ಲಿ ಬಳಸುವ ಕಸದ ಬುಟ್ಟಿ ಯಾವಾಗಲೂ ಮುಚ್ಚಳವನ್ನು ಹೊಂದಿರಬೇಕು (Covered Dustbin). ತೆರೆದ ಕಸದ ಬುಟ್ಟಿಯನ್ನು ಇಡುವುದರಿಂದ ಅದರಿಂದ ಹೊರಡುವ ನಕಾರಾತ್ಮಕ ಶಕ್ತಿ ಮತ್ತು ದುರ್ವಾಸನೆ ಇಡೀ ಮನೆಯಲ್ಲಿ ಹರಡಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ಕೇವಲ ನಾಲ್ಕು ಎಸೆತಗಳಲ್ಲಿ ಚೊಚ್ಚಲ ಟೆಸ್ಟ್ ವಿಕೆಟ್ ಪಡೆದ ಮಾನವ್ – Kannada News

ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಟೀಂ ಇಂಡಿಯಾದ ಯುವ ಆಲ್‌ರೌಂಡರ್ ಮಾನವ್ ಸುತಾರ್ ಚೊಚ್ಚಲ ಪಂದ್ಯದಲ್ಲಿತೇ ತಮ್ಮ ಛಾಪು ಮೂಡಿಸಿದ್ದಾರೆ. ಮೊದಲು ಬ್ಯಾಟಿಂಗ್​ನಲ್ಲಿ 28 ರನ್​ಗಳ ಇನ್ನಿಂಗ್ಸ್ ಆಡಿದ ಸುತಾರ್, ವಾಷಿಂಗ್ಟನ್ ಸುಂದರ್ ಅವರೊಂದಿಗೆ 54 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡು ತಂಡವನ್ನು 500 ರನ್​ಗಳ ಗಡಿ ದಾಟಿಸಿದರು. ಸುತಾರ್ ತಮ್ಮ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು.

ಬ್ಯಾಟಿಂಗ್‌ ಬಳಿಕ ಬೌಲಿಂಗ್​ನಲ್ಲೂ ಕಮಾಲ್ ಮಾಡಿದ ಸುತಾರ್, ತಾನು ಬೌಲ್ ಮಾಡಿದ ಮೊದಲ ಓವರ್​ನಲ್ಲಿಯೇ ವಿಕೆಟ್ ಉರುಳಿಸಿದರು. ಸುತಾರ್ ಬೌಲ್ ಮಾಡಿದ 6ನೇ ಓವರ್​ನ ಮೊದಲ 3 ಎಸೆತಗಳಲ್ಲಿ ಯಾವುದೇ ರನ್ ಬರಲಿಲ್ಲ. ಹೀಗಾಗಿ ಸ್ಟ್ರೈಕ್​ನಲ್ಲಿದ್ದ ಅಫ್ಘನ್ ಆರಂಭಿಕ ಅಬ್ದುಲ್ ಮಲಿಕ್ ಸ್ಲಾಗ್ ಸ್ವೀಪ್ ಆಡಲು ಯತ್ನಿಸಿದರು. ಆದರೆ ಚೆಂಡು ಮೊದಲು ಬ್ಯಾಟ್​​ನ ಅಂಚಿಗೆ ಬಡಿದು ನಂತರ ಅವರ ಹೆಲ್ಮೆಟ್​ಗೆ ತಾಗಿ ಮೇಲಕ್ಕೆ ಹೋಯಿತು. ಇತ್ತ ಸಿರಾಜ್ ಕ್ಯಾಚ್ ತೆಗೆದುಕೊಳ್ಳುವಲ್ಲಿ ಯಾವುದೇ ತಪ್ಪು ಮಾಡಲಿಲ್ಲ. ಈ ಮೂಲಕ ಸುತಾರ್ ತಮ್ಮ ವೃತ್ತಿಜೀವನದ ಮೊದಲ ವಿಕೆಟ್ ಅನ್ನು ಮೊದಲ ಓವರ್​ನಲ್ಲಿಯೇ ಪಡೆದರು.

Source link

Viral Video: ಸೊಂಟ ಮುಟ್ಟಿದ ಯುವಕ; ವೇದಿಕೆ ಮೇಲೆಯೇ ಕಪಾಳಮೋಕ್ಷ ಮಾಡಿದ ಡ್ಯಾನ್ಸರ್! – Kannada News

ಕಪಾಳಮೋಕ್ಷ ಮಾಡಿದ ಡ್ಯಾನ್ಸರ್Image Credit source: instagram

ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದ ಕಲಾವಿದೆಯೊಂದಿಗೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಡ್ಯಾನ್ಸರ್, ಯುವಕನಿಗೆ ವೇದಿಕೆಯಲ್ಲೇ ಕಪಾಳಮೋಕ್ಷ ಮಾಡಿರುವ ದೃಶ್ಯ ಇದೀಗ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ವೇದಿಕೆಯ ಸಮೀಪದಲ್ಲಿದ್ದ ಯುವಕನೊಬ್ಬ ಡ್ಯಾನ್ಸರ್ ಜೊತೆ ಅಸಭ್ಯವಾಗಿ ವರ್ತಿಸಿ, ಆಕೆಯ ಸೊಂಟ ಮುಟ್ಟಿರುವುದು ಕಾಣಿಸುತ್ತದೆ. ಇದರಿಂದ ಆಕ್ರೋಶಗೊಂಡ ಕಲಾವಿದೆ ತಕ್ಷಣವೇ ಯುವಕನಿಗೆ ಕಪಾಳಕ್ಕೆ ಹೊಡೆದು ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಈ ವೇಳೆ ಅಲ್ಲಿದ್ದ ಕೆಲವರು ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾಗಿದ್ದು, ಘಟನೆಯ ಸಂಪೂರ್ಣ ದೃಶ್ಯವನ್ನು ಯಾರೋ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಇದನ್ನೂ ಓದಿ: ಆಟೋ ಬಾಡಿಗೆ 150ರೂ., ಖಾತೆಗೆ ಬಂದಿದ್ದು 15 ಸಾವಿರ; ಪ್ರಯಾಣಿಕನ ಹಣವನ್ನು ಮರಳಿಸಿ ಮಾದರಿಯಾದ ಚಾಲಕ

ಈ ವಿಡಿಯೋವನ್ನು ‘dimpal__choudhary_77‘ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಕೆಲವೇ ಸಮಯದಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅನೇಕರು ಕಲಾವಿದೆಯ ಧೈರ್ಯವನ್ನು ಮೆಚ್ಚಿಕೊಂಡಿದ್ದು, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ. ಆದರೆ, ಈ ಘಟನೆ ಎಲ್ಲಿ ನಡೆದಿದೆ ಹಾಗೂ ವಿಡಿಯೋದಲ್ಲಿರುವ ವ್ಯಕ್ತಿಗಳ ಕುರಿತು ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಲಿಷ್ಠ ಭಾರತದೊಂದಿಗೆ ಉತ್ತಮ ಸ್ನೇಹ ಸಂಬಂಧ ಬಯಸುತ್ತೇವೆ: ನೇಪಾಳ ವಿದೇಶಾಂಗ ಸಚಿವ ಶಿಶಿರ್ ಖನಾಲ್ – Kannada News

ಶಿಶಿರ್ ಖನಾಲ್, ಜೈಶಂಕರ್Image Credit source: PTI

ನವದೆಹಲಿ, ಜೂನ್ 7: ವಿಶ್ವದ ಪ್ರಮುಖ ತಂತ್ರಜ್ಞಾನ ಮತ್ತು ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತದೊಂದಿಗೆ ನೇಪಾಳ ಉತ್ತಮ ಸ್ನೇಹ ಹಾಗೂ ಆರ್ಥಿಕ ಸಂಬಂಧ ಬಯಸುತ್ತದೆ ಎಂದು ನೇಪಾಳ ವಿದೇಶಾಂಗ ಸಚಿವ ಶಿಶಿರ್ ಖನಾಲ್ (Shishir Khanal) ಹೇಳಿದ್ದಾರೆ. ಭಾರತಕ್ಕೆ ಭೇಟಿ ನೀಡಿರುವ ನೇಪಾಳದ ವಿದೇಶಾಂಗ ಸಚಿವರು, ಭಾರತವನ್ನು ಕೇವಲ ನೆರೆಹೊರೆಯ ರಾಷ್ಟ್ರವಾಗಿ ಮಾತ್ರವಲ್ಲದೆ, ಜಾಗತಿಕ ಮಟ್ಟದ ತಾಂತ್ರಿಕ ಮತ್ತು ಆರ್ಥಿಕ ಪವರ್‌ಹೌಸ್ (Economic Powerhouse) ಎಂದು ಬಣ್ಣಿಸಿದರು.

ಭಾರತ ಮತ್ತು ನೇಪಾಳ ನಡುವಿನ ಯಾವುದೇ ಗಡಿ ವಿವಾದವನ್ನು ಎರಡು ದೇಶಗಳು ‘ಮುಕ್ತ ಮನಸ್ಸಿನಿಂದ’ (Open Heart) ಚರ್ಚಿಸಿದರೆ ಬಗೆಹರಿಸಲು ಸಾಧ್ಯವಿಲ್ಲದಷ್ಟು ದೊಡ್ಡ ಸಮಸ್ಯೆಯೇನಲ್ಲ ಎಂದು ಸಚಿವರು ಹೇಳಿದ್ದಾರೆ. ನೇಪಾಳದ ಹೊಸ ಸರ್ಕಾರವು ಭಾರತವನ್ನು 21ನೇ ಶತಮಾನದ ಅತಿ-ಸೂಕ್ಷ್ಮ ಭೌಗೋಳಿಕ ರಾಜಕೀಯದ (Geopolitics) ದೃಷ್ಟಿಕೋನದಿಂದ ನೋಡುತ್ತಿಲ್ಲ. ಬದಲಿಗೆ ನೇಪಾಳದ ಆರ್ಥಿಕ ಅಭಿವೃದ್ಧಿಗಾಗಿ ಭಾರತದೊಂದಿಗೆ ಮುಕ್ತ ಮತ್ತು ಪಾರದರ್ಶಕ ಸಹಭಾಗಿತ್ವವನ್ನು ಬಯಸುತ್ತಿದೆ ಎಂದಿದ್ದಾರೆ ಶಿಶಿರ್ ಖನಾಲ್.

ಭಾರತದ ಅತ್ಯಾಧುನಿಕ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (UPI ನಂತಹ ಕ್ರಾಸ್-ಬಾರ್ಡರ್ ಪೇಮೆಂಟ್ ಸಿಸ್ಟಂ) ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ನೇಪಾಳದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಪ್ರಗತಿ ಸಾಧಿಸುವುದು ನೇಪಾಳದ ಉದ್ದೇಶವಾಗಿದೆ ಎಂದೂ ಶಿಶಿರ್ ವಿವರಿಸಿದರು.

ಇದನ್ನೂ ಓದಿ: ಸ್ಪೇಸ್​ಎಕ್ಸ್ ಕಂಪ್ಯೂಟಿಂಗ್ ಬಳಸಲು ತಿಂಗಳಿಗೆ 9,000 ಕೋಟಿ ರೂ ಬಾಡಿಗೆ ಪಾವತಿಸುವ ಗೂಗಲ್

ಗಡಿ ವಿವಾದಕ್ಕೆ ರಾಜತಾಂತ್ರಿಕ ಪರಿಹಾರ

ಇತ್ತೀಚೆಗೆ ನೇಪಾಳದ ಪ್ರಧಾನಿ ಬಾಳೇಂದ್ರ ಶಾ (Balen Shah) ಅವರು ಗಡಿ ವಿವಾದದ ಕುರಿತು ಮಾಡಿದ್ದ ಕೆಲವು ಕಾಮೆಂಟ್‌ಗಳಿಂದ ಉಭಯ ದೇಶಗಳ ನಡುವೆ ಸಣ್ಣ ಮಟ್ಟದ ವಿವಾದ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಖನಾಲ್, “ನಾವು ಮುಕ್ತ ಮನಸ್ಸಿನಿಂದ ಕುಳಿತು ಚರ್ಚಿಸಿದಾಗ ಯಾವುದೇ ಗಡಿಯೂ ಸಂಕೀರ್ಣವಾಗಿ ಉಳಿಯುವುದಿಲ್ಲ. ಅತಿ-ರಾಷ್ಟ್ರೀಯತೆಯ (Hyper-nationalistic) ರಾಜಕೀಯ ಪ್ರದರ್ಶನ ಮಾಡುವ ಬದಲು, ನಾವು ಶಾಂತಿಯುತವಾಗಿ, ದತ್ತಾಂಶ ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿದ್ದೇವೆ,” ಎಂದು ಸ್ಪಷ್ಟಪಡಿಸಿದರು.

ಭಾರತದ ಆರ್ಥಿಕ ಬೆಳವಣಿಗೆಗೆ ಪ್ರಶಂಸೆ

ಭಾರತದ ಆರ್ಥಿಕ ಪ್ರಗತಿಯನ್ನು ಕೊಂಡಾಡಿದ ಅವರು, “ನಾವು ಗಡಿಯ ಆಚೆ ನೋಡಿದಾಗ ಉದಯಿಸುತ್ತಿರುವ ಭಾರತ ಕಾಣುತ್ತಿದೆ. ಜಾಗತಿಕ ಮಟ್ಟದಲ್ಲಿ ತಾಂತ್ರಿಕ ಹಾಗೂ ಆರ್ಥಿಕ ಶಕ್ತಿಯಾಗಿ ಭಾರತ ತನ್ನನ್ನು ತಾನು ಅದ್ಭುತವಾಗಿ ಮರುರೂಪಿಸಿಕೊಂಡಿದೆ. ತಂತ್ರಜ್ಞಾನ ಮತ್ತು ಉನ್ನತ ಆಕಾಂಕ್ಷೆಗಳಿರುವ ಈ ಭಾರತದೊಂದಿಗೆ ನಾವು ಕೈಜೋಡಿಸಲು ಬಯಸುತ್ತೇವೆ,” ಎಂದರು.

ಇದನ್ನೂ ಓದಿ: ಎಲ್ ನಿನೊ ಪರಿಣಾಮ; ಭಾರತದ ಆರ್ಥಿಕತೆಗೆ 1 ಬಿಲಿಯನ್ ಡಾಲರ್ ಗಂಡಾಂತರ? ಇದು ಹೇಗೆ ಸಾಧ್ಯ?

ಜೈಶಂಕರ್ ಅವರೊಂದಿಗೆ ಉನ್ನತ ಮಟ್ಟದ ಮಾತುಕತೆ

ತಮ್ಮ ಮೂರು ದಿನಗಳ ಭಾರತ ಪ್ರವಾಸದ ಭಾಗವಾಗಿ, ಶಿಶಿರ್ ಖನಾಲ್ ಅವರು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರೊಂದಿಗೆ ಸುದೀರ್ಘ ಹಾಗೂ ಫಲಪ್ರದ ಚರ್ಚೆ ನಡೆಸಿದರು. ಈ ಸಭೆಯಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ, ಗಡಿ ಸಂಪರ್ಕ (Cross-border connectivity), ಇಂಧನ ಪಾಲುದಾರಿಕೆ (Energy partnership) ಮತ್ತು ಜನರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಕುರಿತು ಸಮಾಲೋಚನೆ ನಡೆಸಲಾಯಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಲೋಪತಿ ಬಗ್ಗೆ ಅನುಷ್ಕಾ ಶರ್ಮಾ ಪೋಸ್ಟ್, ವೈದ್ಯರಿಂದ ತೀವ್ರ ಟೀಕೆ – Kannada News

ನಟಿ ಅನುಷ್ಕಾ ಶರ್ಮಾ (Anushka Sharma) ಸಿನಿಮಾಗಳಿಂದ ದೂರ ಉಳಿದಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯ ಜವಾಬ್ದಾರಿಯನ್ನು ಸಹ ತಮ್ಮ ಸಹೋದರನಿಗೆ ವಹಿಸಿ, ಪತಿಯೊಟ್ಟಿಗೆ ಆರಾಮವಾಗಿ ಇಂಗ್ಲೆಂಡ್​​ನಲ್ಲಿ ಕಾಲ ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅನುಷ್ಕಾ ಶರ್ಮಾ, ಆಗೊಮ್ಮೆ ಈಗೊಮ್ಮೆ, ಆರೋಗ್ಯ, ಪಾಸಿಟಿವಿಟಿ, ಅಧ್ಯಾತ್ಮದ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆರೋಗ್ಯದ ಬಗ್ಗೆ ಅನುಷ್ಕಾ ಶರ್ಮಾ ಹಂಚಿಕೊಂಡಿದ್ದ ಪೋಸ್ಟ್ ಒಂದಕ್ಕೆ ವೈದ್ಯರುಗಳಿಂದ ತೀವ್ರ ಟೀಕೆ, ವಿಮರ್ಶೆ ವ್ಯಕ್ತವಾಗಿದೆ.

ಅನುಷ್ಕಾ ಶರ್ಮಾ ಅವರು ಹೋಮಿಯೋಪತಿಯನ್ನು ಬೆಂಬಲಿಸಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಪ್ರಖ್ಯಾತ ಹೋಮಿಯೋಪತಿ ವೈದ್ಯ ರಾಜನ್ ಸಂಕರನ್ ಅವರು ಉದ್ಯಮಿ ನಮಿತಾ ಥಾಪರ್ ಅವರೊಂದಿಗೆ ನಡೆಸಿದ ಸಂವಾದದ ವಿಡಿಯೋವನ್ನು ಹಂಚಿಕೊಂಡಿದ್ದ ಅನುಷ್ಕಾ ಶರ್ಮಾ, ಹೋಮಿಯೋಪತಿಯನ್ನು ಅನುಸರಿಸುವಂತೆ ಕರೆ ನೀಡಿದ್ದರು. ಪರ್ಯಾಯ ವೈದ್ಯಕೀಯ ಪದ್ಧತಿಯನ್ನು ನಂಬುವವರಿಂದ ಅನುಷ್ಕಾರ ಪೋಸ್ಟ್​​ಗೆ ಬೆಂಬಲ ವ್ಯಕ್ತವಾದರೆ, ವೈಜ್ಞಾನಿಕ ವೈದ್ಯಕೀಯ ಪದ್ಧತಿ ಬೆಂಬಲಿಸುವವರಿಂದ ತೀವ್ರ ಟೀಕೆಗೂ ಗುರಿಯಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹಂಚಿಕೊಂಡ ಅನುಷ್ಕಾ, ತಮ್ಮ ಜೀವನದಲ್ಲಿ ಹೋಮಿಯೋಪತಿ ವಹಿಸಿದ ಪಾತ್ರದ ಬಗ್ಗೆ ಹೇಳಿದ್ದು ಮತ್ತು ಆರೋಗ್ಯ ಹಾಗೂ ಸ್ವಾಸ್ಥ್ಯದ ಕುರಿತು ಡಾ ರಾಜನ್ ಸಂಕರನ್ ಅವರ ವಿಧಾನವನ್ನು ಶ್ಲಾಘಿಸಿದ್ದಾರೆ. ‘ನನ್ನ ಜೀವನದಲ್ಲಿ ಹೋಮಿಯೋಪತಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಡಾ. ರಾಜನ್ ಸಂಕರನ್ ಆ ಪಯಣದ ಪ್ರಮುಖ ಭಾಗವಾಗಿದ್ದಾರೆ. ಆರೋಗ್ಯ ಮತ್ತು ಜಾಗರೂಕ ಜೀವನಶೈಲಿಯ ಕುರಿತಾದ ಅವರ ಒಳನೋಟಗಳನ್ನು ನಾನು ಆಳವಾಗಿ ಗೌರವಿಸುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ;ಅನುಷ್ಕಾ ಶರ್ಮಾ ಧರಿಸಿದ ಬಿಳಿ ಉಡುಪು, ವಾಚ್ ಬೆಲೆ ಎಷ್ಟು?

ಹಲವು ವೈದ್ಯರು ಅನುಷ್ಕಾ ಶರ್ಮಾರ ಪೋಸ್ಟ್ ಅನ್ನು ತೀವ್ರವಾಗಿ ಟೀಕೆ ಮಾಡಿದ್ದಾರೆ. ‘ದಿ ಲಿವರ್ ಡಾಕ್’ ಎಂದೇ ಹೆಸರಾಗಿರುವ ಖ್ಯಾತ ಹೆಪಟಾಲಜಿಸ್ಟ್ ಸಿರಿಯಾಕ್ ಅಬಿ ಫಿಲಿಫ್ಸ್, ಪೋಸ್ಟ್ ಹಂಚಿಕೊಂಡಿರುವ ಅನುಷ್ಕಾ ಶರ್ಮಾ, ಪಾಡ್​​ಕಾಸ್ಟ್ ಮಾಡಿರುವ ಉದ್ಯಮಿ ನಮಿತಾ ಥಾಪರ್ ಮತ್ತು ಹೋಮಿಯೋಪತಿ ಡಾಕ್ಟರ್ ಮೂವರನ್ನೂ ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ.

‘ಸಪ್ಲಿಮೆಂಟ್ ಮಾರಾಟಗಾರ್ತಿ (ನಮಿತಾ ಥಾಪರ್), ಕಾನೂನುಬದ್ಧ ನಕಲಿ ವೈದ್ಯ (ಹೋಮಿಯೋಪತಿ ವೈದ್ಯ ರಂಜನ್), ಅನಕ್ಷರಸ್ಥ ಸೆಲೆಬ್ರಿಟಿ (ಅನುಷ್ಕಾ ಶರ್ಮಾ)’ ಎಂದು ಅವರು ತಮ್ಮ ಕಟು ಶಬ್ದಗಳ ಪ್ರಯೋಗ ಮಾಡಿರುವ ವೈದ್ಯ ಫಿಲಿಫ್ಸ್, ‘ಹೋಮಿಯೋಪತಿ ಚಿಕಿತ್ಸೆಗಳಲ್ಲಿ ಯಾವುದೇ ಸಕ್ರಿಯ ಔಷಧೀಯ ಪದಾರ್ಥಗಳು ಇರುವುದಿಲ್ಲ. ಹೋಮಿಯೋಪತಿ ಎಂಬುದು ನೀರು, ಆಲ್ಕೋಹಾಲ್ ಮತ್ತು ಸಕ್ಕರೆಯಿಂದ ಮಾಡಲ್ಪಟ್ಟ ‘ಔಷಧ’. ಹಾಗಾಗಿ ನೀವು ಯಾವುದೇ ಔಷಧವೇ ಇಲ್ಲದ ಕೇವಲ ಸಕ್ಕರೆ ಮಾತ್ರೆಗಳಿಗೆ ಭಾರಿ ಬೆಲೆ ಕೊಡುತ್ತಿದ್ದೀರಿ’ ಎಂದು ಅವರು ಬರೆದಿದ್ದಾರೆ.

ಹೋಮಿಯೋಪತಿ ಕೇವಲ ನಂಬಿಕೆ ಆಧಾರದ ಮೇಲೆ ನಡೆಯುವ ಚಿಕಿತ್ಸೆ ಆಗಿದೆ. ಹೋಮಿಯೋಪತಿಗೆ ಯಾವುದೇ ವೈದ್ಯಕೀಯ ತಳಹದಿ ಇಲ್ಲ ಎಂದು ಖುದ್ದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ. ಮಾತ್ರವಲ್ಲದೆ ಹಲವು ಪ್ರಮುಖ ಖಾಯಿಲೆಗಳಿಗೆ ಹೋಮಿಯೋಪತಿ ಬಳಸುವುದನ್ನು ನಿಷೇಧಿಸಿದೆ. ಈಗ ಅನುಷ್ಕಾ ಶರ್ಮಾ ಅವರು ವೈಜ್ಞಾನಿಕ ಆಧಾರ ಇಲ್ಲದ ಹೋಮಿಯೋಪತಿಗೆ ಬೆಂಬಲ ಸೂಚಿಸಿದ್ದರಿಂದ ಸಹಜವಾಗಿಯೇ ಅವರ ವಿರುದ್ಧ ಟೀಕೆ ವ್ಯಕ್ತವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:01 pm, Sun, 7 June 26

Source link

ಅಡುಗೆ ಎಣ್ಣೆ ಪ್ಯಾಕೆಟ್ ಗಾತ್ರ ಇಷ್ಟಬಂದಂತಿರುವಂತಿಲ್ಲ; 9 ಸ್ಟ್ಯಾಂಡರ್ಡ್ ಸೈಜ್ ನಿಗದಿ ಮಾಡಿದ ಸರ್ಕಾರ – Kannada News

ನವದೆಹಲಿ, ಜೂನ್ 7: ಇನ್ಮುಂದೆ ಕಂಪನಿಗಳು ತಮಗೆ ಇಷ್ಟಬಂದ ಅಳತೆಯಲ್ಲಿ ಎಣ್ಣೆ ಪ್ಯಾಕೆಟ್ ತಯಾರಿಸುವಂತಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿದ 9 ನಿರ್ದಿಷ್ಟ ಅಳತೆಗಳಲ್ಲಿ ಮಾತ್ರ ಅಡುಗೆ ಎಣ್ಣೆಯನ್ನು ಮಾರಾಟ ಮಾಡಬೇಕಾಗುತ್ತದೆ. ಪ್ಯಾಕೆಟ್‌ನ ಮೇಲೆ ಎಣ್ಣೆಯ ಪ್ರಮಾಣವನ್ನು ಲೀಟರ್ ಅಥವಾ ಮಿಲಿಲೀಟರ್‌ಗಳಲ್ಲಿ (Volume) ನಮೂದಿಸಿದರೆ, ಅದರ ಜೊತೆಗೆ ಕಡ್ಡಾಯವಾಗಿ ಅದಕ್ಕೆ ಸಮಾನವಾದ ಕಿಲೋಗ್ರಾಂ ಅಥವಾ ಗ್ರಾಮ್ (Weight) ತೂಕವನ್ನೂ ಮುದ್ರಿಸಬೇಕಾಗುತ್ತದೆ. ಗ್ರಾಹಕರು ಅಡುಗೆ ಎಣ್ಣೆ (Cooking Oil) ಖರೀದಿಸುವಾಗ ಎದುರಿಸುತ್ತಿದ್ದ ಗೊಂದಲವನ್ನು ನಿವಾರಿಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ‘ಲೀಗಲ್ ಮೆಟ್ರೋಲಜಿ’ (Legal Metrology) ನಿಯಮಾವಳಿಗಳ ಅಡಿಯಲ್ಲಿ ಹೊಸ ಕಡ್ಡಾಯ ನಿಯಮಗಳನ್ನು ಜಾರಿಗೆ ತರುತ್ತಿದೆ. ಅಡುಗೆ ಎಣ್ಣೆ ಕಂಪನಿಗಳಿಗೆ ಈ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಲು ಸರ್ಕಾರ 3 ತಿಂಗಳ ಕಾಲಾವಕಾಶ (Transition Period) ನೀಡಿದೆ.

ಗ್ರಾಹಕರಿಗೆ ಇದ್ದ ಗೊಂದಲವೇನು?

ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್‌ಗಳ ಅಡುಗೆ ಎಣ್ಣೆಗಳು 650g, 700g, 810g, 850g, 870g 970g ಇತ್ಯಾದಿ ವಿಚಿತ್ರ ಅಳತೆಗಳ ಪ್ಯಾಕೆಟ್‌ಗಳಲ್ಲಿ ಲಭ್ಯವಿವೆ. ಇವು ನೋಡಲು ಒಂದೇ ತರಹ ಕಂಡರೂ ತೂಕದಲ್ಲಿ ವ್ಯತ್ಯಾಸ ಇರುತ್ತದೆ. ಇದರಿಂದಾಗಿ ಗ್ರಾಹಕರಿಗೆ ಎರಡು ವಿಭಿನ್ನ ಬ್ರ್ಯಾಂಡ್‌ಗಳ ಬೆಲೆಯನ್ನು ಹೋಲಿಕೆ ಮಾಡಿ, ಯಾವುದು ಅಗ್ಗ ಮತ್ತು ಯಾವುದು ದುಬಾರಿ ಎಂದು ನಿಖರವಾಗಿ ತಿಳಿಯಲು ಸಾಧ್ಯವಾಗುತ್ತಿರಲಿಲ್ಲ. ಕೆಲವು ಕಂಪನಿಗಳು ಬೆಲೆ ಕಡಿಮೆ ಇರುವಂತೆ ತೋರಿಸಲು ಪ್ಯಾಕೆಟ್‌ನ ತೂಕವನ್ನು ಗುಟ್ಟಾಗಿ ಕಡಿಮೆ ಮಾಡುತ್ತಿದ್ದವು (ಇದನ್ನು ‘ಶ್ರಿಂಕ್‌ಫ್ಲೇಷನ್’ ಎನ್ನಲಾಗುತ್ತದೆ). ಮಹಾಭಾರತದಲ್ಲಿ ಧರ್ಮರಾಯ ದ್ರೋಣನಿಗೆ ‘ಅಶ್ವತ್ಥಾಮ ಹತಃ ನರಃ ವಾ ಕುಂಜರಃ’ (ಅಶ್ವತ್ಥಾಮ ಎನ್ನುವ ಮನುಷ್ಯನೋ ಅಥವಾ ಆನೆಯೋ ಕೊಲಲ್ಪಟ್ಟಿದೆ) ಎಂದು ಹೇಳುವಾಗ ಶ್ರೀಕೃಷ್ಣನು ‘ನರಃ’ ಪದ ಕೇಳಿಸದಂತೆ ಶಂಖ ಊದುತ್ತಾನೆ. ಆ ರೀತಿಯ ಕಂಡೂ ಕಾಣದ ಸತ್ಯವನ್ನು ಅಡುಗೆ ಎಣ್ಣೆಯ ಪ್ಯಾಕೆಟ್​ಗಳಲ್ಲಿ ಹಾಕಲಾಗುತ್ತದೆ.

ಇದನ್ನೂ ಓದಿ: ಸ್ಪೇಸ್​ಎಕ್ಸ್ ಕಂಪ್ಯೂಟಿಂಗ್ ಬಳಸಲು ತಿಂಗಳಿಗೆ 9,000 ಕೋಟಿ ರೂ ಬಾಡಿಗೆ ಪಾವತಿಸುವ ಗೂಗಲ್

ನಿಗದಿಪಡಿಸಲಾದ 9 ಸ್ಟ್ಯಾಂಡರ್ಡ್ ಸೈಜ್‌ಗಳು

ಹೊಸ ನಿಯಮದ ಪ್ರಕಾರ, ಪ್ರಮುಖ ಅಡುಗೆ ಎಣ್ಣೆಗಳಾದ ಪಾಮ್ ಆಯಿಲ್, ಸೂರ್ಯಕಾಂತಿ (Sunflower), ಸಾಸಿವೆ (Mustard), ಸೋಯಾಬೀನ್, ಶೇಂಗಾ (Groundnut), ಎಳ್ಳೆಣ್ಣೆ, ತೌಡು ಎಣ್ಣೆ (Rice Bran), ಹತ್ತಿಬೀಜದ ಎಣ್ಣೆ ಮತ್ತು ಜೋಳದ ಎಣ್ಣೆಗಳನ್ನು ಈ ಕೆಳಗಿನ ಸೈಜ್‌ಗಳಲ್ಲಿ ಮಾತ್ರ ಪ್ಯಾಕ್ ಮಾಡಬೇಕು:

ಸಣ್ಣ ಮತ್ತು ಮಧ್ಯಮ ಪ್ಯಾಕ್: 200 ml/g, 500 ml/g, 1 ಲೀಟರ್/kg, 2 ಲೀಟರ್/kg, 3 ಲೀಟರ್/kg, 4 ಲೀಟರ್/kg, 5 ಲೀಟರ್/kg.

ಬಲ್ಕ್ (ದೊಡ್ಡ) ಪ್ಯಾಕ್: 15 ಲೀಟರ್/kg ಮತ್ತು 20 ಲೀಟರ್/kg.

ಬಜೆಟ್ ಪ್ಯಾಕ್​ಗಳಿಗೆ ವಿನಾಯಿತಿ

ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸುಲಭ ಬೆಲೆಯಲ್ಲಿ ಸಿಗುವ 200 ಮಿಲಿಲೀಟರ್ ಅಥವಾ 200 ಗ್ರಾಮ್‌ಗಿಂತ ಕಡಿಮೆ ಇರುವ ಸಣ್ಣ ಸ್ಯಾಚೆಟ್‌ಗಳಿಗೆ (Sachets) ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಹಾಗೆಯೇ ಬಾದಾಮಿ ಎಣ್ಣೆ, ಆಲಿವ್ ಆಯಿಲ್, ಅಕ್ರೋಟ್ (Walnut) ಎಣ್ಣೆಯಂತಹ ಮೈನರ್/ನಿಶ್ (Minor/Niche) ತೈಲಗಳಿಗೂ ಇದರಿಂದ ವಿನಾಯಿತಿ ಇದೆ.

ಇದನ್ನೂ ಓದಿ: ಎಲ್ ನಿನೊ ಪರಿಣಾಮ; ಭಾರತದ ಆರ್ಥಿಕತೆಗೆ 1 ಬಿಲಿಯನ್ ಡಾಲರ್ ಗಂಡಾಂತರ? ಇದು ಹೇಗೆ ಸಾಧ್ಯ?

ತೂಕ ಮತ್ತು ಲೀಟರ್ ಲೆಕ್ಕ ಕಡ್ಡಾಯ

ತಾಪಮಾನಕ್ಕೆ ಅನುಗುಣವಾಗಿ ಎಣ್ಣೆಯ ಸಾಂದ್ರತೆ (Density) ಬದಲಾಗುತ್ತದೆ. ಉದಾಹರಣೆಗೆ, 1 ಲೀಟರ್ ಅಡುಗೆ ಎಣ್ಣೆಯ ತೂಕ ಸಾಮಾನ್ಯವಾಗಿ ಸುಮಾರು 910 ಗ್ರಾಮ್ ಇರುತ್ತದೆ. ಈ ವ್ಯತ್ಯಾಸದಿಂದ ಗ್ರಾಹಕರು ಮೋಸ ಹೋಗಬಾರದು ಎಂಬ ಕಾರಣಕ್ಕೆ ಲೀಟರ್ ಜೊತೆಗೆ ಅದರ ನಿಖರ ತೂಕವನ್ನೂ (ಗ್ರಾಮ್/ಕೆಜಿ ಯಲ್ಲಿ) ಕಡ್ಡಾಯವಾಗಿ ಮುದ್ರಿಸಲು ಸೂಚಿಸಲಾಗಿದೆ.

ಕಂಪನಿಗಳು ತಮ್ಮ ಹಳೆಯ ಪ್ಯಾಕೇಜಿಂಗ್ ಸ್ಟಾಕ್ ಅನ್ನು ಖಾಲಿ ಮಾಡಲು 3 ತಿಂಗಳ ಸಮಯಾವಕಾಶ ನೀಡಲಾಗಿದ್ದು, ಇಲಾಖೆಯ ಈ ಕ್ರಮದಿಂದಾಗಿ ಮಾರುಕಟ್ಟೆಯಲ್ಲಿ ಪಾರದರ್ಶಕತೆ ಬರಲಿದೆ ಮತ್ತು ಗ್ರಾಹಕರು ಸುಲಭವಾಗಿ ಬೆಲೆಗಳನ್ನು ಹೋಲಿಕೆ ಮಾಡಿ ಖರೀದಿಸಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version