Headlines

ಭಾರತದ ವಿರುದ್ಧದ ಸರಣಿಗೂ ಮುನ್ನ ಶ್ರೀಲಂಕಾಗೆ ‘ಡಬಲ್’ ಟ್ರಬಲ್ – Kannada News | Double Injury Blow for Sri Lanka Ahead of India Test Series

ಭಾರತ ಮತ್ತು ಶ್ರೀಲಂಕಾ ನಡುವಣ ಟೆಸ್ಟ್ ಸರಣಿಯು ಆಗಸ್ಟ್ 15 ರಿಂದ ಶುರುವಾಗಲಿದೆ. ಈ ಸರಣಿ ಆರಂಭಕ್ಕೂ ಮುನ್ನವೇ ಶ್ರೀಲಂಕಾ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಇಬ್ಬರು ಪ್ರಮುಖ ಸ್ಟಾರ್ ಆಟಗಾರರಾದ ಕುಸಾಲ್ ಮೆಂಡಿಸ್ ಮತ್ತು ಪಾತುಮ್ ನಿಸ್ಸಂಕಾ ಗಾಯದ ಸಮಸ್ಯೆಯಿಂದಾಗಿ ಈ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಲಂಕಾ ಪ್ರೀಮಿಯರ್ ಲೀಗ್ (LPL) 2026ರಲ್ಲಿ ಕೊಲಂಬೊ ಕ್ಯಾಪ್ಸ್ ತಂಡವನ್ನು ಮುನ್ನಡೆಸುತ್ತಿದ್ದ ವಿಕೆಟ್‌ಕೀಪರ್ ಬ್ಯಾಟರ್ ಕುಸಲ್ ಮೆಂಡಿಸ್, ಜುಲೈ 19 ರಂದು ನಡೆದ ಪಂದ್ಯದಲ್ಲಿ ರನ್ ಗಳಿಸಲು ಓಡುವಾಗ ಬಲಗಾಲಿನ…

Read More

ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಕ್ರಿಕೆಟ್​ ಯಾಕಿಲ್ಲ? ಇಲ್ಲಿದೆ ಉತ್ತರ – Kannada News | Why Cricket is Out of Commonwealth Games 2026

ಈ ಬಾರಿಯ ಕಾಮನ್​ವೆಲ್ತ್ ಗೇಮ್ಸ್​ನಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಅಧಿಕೃತವಾಗಿ ಕೈ ಬಿಡಲಾಗಿದೆ. ಕಳೆದ 2022ರ ಬರ್ಮಿಂಗ್​ಹ್ಯಾಮ್ ಕ್ರೀಡಾಕೂಟದಲ್ಲಿ ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿತ್ತಾದರೂ, ಈ ಬಾರಿ ಕ್ರೀಡಾಭಿಮಾನಿಗಳಿಗೆ ಯಾವುದೇ ಕ್ರಿಕೆಟ್​ ಪಂದ್ಯಗಳ ರಸದೌತಣ ಸಿಗುವುದಿಲ್ಲ. ಹಾಗಿದ್ರೆ ಈ ಬಾರಿಯ ಕ್ರೀಡಾಕೂಟದಿಂದ ಕ್ರಿಕೆಟ್ ಅನ್ನು ಕೈ ಬಿಡಲು ಕಾರಣಗಳೇನು ಎಂದು ನೋಡುವುದಾದರೆ… ಆತಿಥೇಯರ ಬಿಕ್ಕಟ್ಟು ಮತ್ತು ಬಜೆಟ್ ಕಡಿತ: 2026ರ ಕಾಮನ್​ವೆಲ್ತ್ ಕ್ರೀಡಾಕೂಟವನ್ನು ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯ ಆಯೋಜಿಸಬೇಕಿತ್ತು. ಆದರೆ ವಿಪರೀತ ವೆಚ್ಚದ ಕಾರಣ…

Read More

ಮರಿ ಮೊಮ್ಮಗಳ ಜೊತೆ ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​ – Kannada News | Viral Video: Heartwarming Clip of Late Chennamma and HD Deve Gowda Spending Time with Great Granddaughter Moves Netizens

ಬೆಂಗಳೂರು, ಜುಲೈ 23: ಮಾಜಿ ಪ್ರಧಾನಿ ಹೆಚ್​​​.ಡಿ. ದೇವೇಗೌಡರ ಪತ್ನಿ ಚೆನ್ನಮ್ಮನವರ ನಿಧನದ ಬಳಿಕ ಈ ಇಳಿವಯಸ್ಸಿನಲ್ಲಿಯೂ ದಂಪತಿಯ ನಡುವಿದ್ದ ಪ್ರೀತಿ ಮತ್ತು ಅನ್ಯೋನ್ಯತೆಯ ಕುರಿತಾದ ವಿಚಾರಗಳು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿವೆ. ಪತ್ನಿಯ ಪಾರ್ಥಿವ ಶರೀರದ ಎದುರು ಚಿಕ್ಕ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದ ದೊಡ್ಡಗೌಡರ ವಿಡಿಯೋಗಳೂ ಸಾಕಷ್ಟು ಜನರ ಕಣ್ಣಂಚಲ್ಲಿ ನೀರು ತರಿಸಿತ್ತು. ಈ ನಡುವೆ ದೇವೇಗೌಡ ಮತ್ತು ಚೆನ್ನಮ್ಮ ದಂಪತಿಯ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಅನಾರೋಗ್ಯದ ನಡುವೇ ಚೆನ್ನಮ್ಮನವರು ಮರಿ ಮೊಮ್ಮಗಳ ಜೊತೆ…

Read More

ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಉತ್ತರ ಹೇಳಿಕೊಟ್ಟ ಸೂಪರ್​ವೈಸರ್: ರಾಜಸ್ಥಾನ ಕಾಲೇಜಿನಲ್ಲಿ ಮಾಸ್ ಕಾಪಿ – Kannada News | Rajasthan Exam Cheating Scandal: Supervisor Helps Students Mass Copy in Jaisalmer BA Exam

ಜೈಸಲ್ಮೇರ್,ಜುಲೈ 23: ದೇಶಾದ್ಯಂತ ಪರೀಕ್ಷಾ ಅಕ್ರಮಗಳ ಸರಣಿ ವಿವಾದ ನಡೆಯುತ್ತಿರುವ ಬೆನ್ನಲ್ಲೇ, ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಪರೀಕ್ಷಾ(Exam) ಅಕ್ರಮದ ಘಟನೆಯೊಂದು ಬೆಳಕಿಗೆ ಬಂದಿದೆ. ಬಿಎ (BA) ದ್ವಿತೀಯ ವರ್ಷದ ಪರೀಕ್ಷೆ ನಡೆಯುತ್ತಿದ್ದಾಗ, ಪರೀಕ್ಷಾ ಮೇಲ್ವಿಚಾರಕರೇ ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಜೋರಾಗಿ ಹೇಳಿಕೊಡುತ್ತಿದ್ದುದನ್ನು ವಿಶ್ವವಿದ್ಯಾಲಯದ ಫ್ಲೈಯಿಂಗ್ ಸ್ಕ್ವಾಡ್ ರೆಡ್‌ಹ್ಯಾಂಡ್‌ ಆಗಿ ಹಿಡಿದಿದೆ. ಘಟನೆಗೆ ಸಂಬಂಧಿಸಿದಂತೆ ಜೋಧ್‌ಪುರದ ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯ ಅಧಿಕಾರಿಗಳು ಪರೀಕ್ಷಾ ಹಾಲ್‌ನಲ್ಲಿದ್ದ ಎಲ್ಲಾ 93 ಉತ್ತರ ಪತ್ರಿಕೆಗಳನ್ನು ಸೀಲ್ ಮಾಡಿದ್ದು, ‘ಸಾಮೂಹಿಕ ನಕಲು’ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರೀಕ್ಷಾ…

Read More

ಜೀವದ ಹಂಗು ತೊರೆದು ಮಲಪ್ರಭಾ ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ – Kannada News | Mallikarjuna Ganiger: Bailhongal Youth Bravely Rescues Woman from Swollen Malaprabha

ಬೈಲಹೊಂಗಲ, ಜು.23: ನದಿಯ ನೀರಿನ ಭಾರಿ ಸೆಳೆತದ ನಡುವೆಯೂ ಯುವಕನೊಬ್ಬ ತನ್ನ ಪ್ರಾಣದ ಹಂಗು ತೊರೆದು ಮಲಪ್ರಭಾ ನದಿಗೆ ಧುಮುಕಿ, ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯನ್ನು ಸಾಹಸಿಕವಾಗಿ ರಕ್ಷಿಸಿರುವ ಶ್ಲಾಘನೀಯ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಬಳಿ ನಡೆದಿದೆ. ನದಿಗೆ ಜಿಗಿದು ಯುವತಿಯ ಜೀವ ಉಳಿಸಿದ ಈ ಸಾಹಸಿ ಯುವಕನನ್ನು ಮಲ್ಲಿಕಾರ್ಜುನ ಗಾಣಿಗೇರ ಎಂದು ಗುರುತಿಸಲಾಗಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮನನೊಂದಿದ್ದ ಯುವತಿ, ಬೈಲಹೊಂಗಲ ತಾಲೂಕಿನ ನಯಾನಗರ ಸಮೀಪದ ಸೇತುವೆಯ ಮೇಲಿಂದ ಬರೋಬ್ಬರಿ 120 ಅಡಿ ಎತ್ತರದಿಂದ…

Read More

Sanchaya Converter: ಕನ್ನಡಕ್ಕೆ ಬರುತ್ತಿದೆ ಹೊಸ ಫಾಂಟ್ ಕನ್ವರ್ಟರ್; ASCII ಇಂದ ಯೂನಿಕೋಡ್, ಯೂನಿಕೋಡ್​ನಿಂದ ASCII ಗೆ ಸುಲಭವಾಗಿ ಪರಿವರ್ತಿಸಿ – Kannada News | Sanchaya Converter, new Kannada font converter for Unicode and ASCII texts

ಸಂಚಯ ಕನ್ವರ್ಟರ್Image Credit source: Screenshot @ converter.sanchaya.net ಬೆಂಗಳೂರು, ಜುಲೈ 23: ಕನ್ನಡದ ಮುದ್ರಣ ಕ್ಷೇತ್ರದ ದಶಕಗಳ ಸಮಸ್ಯೆಗೆ ಮತ್ತೊಂದು ಪರಿಹಾರ ಲಭ್ಯವಾಗುತ್ತಿದೆ. ಶ್ರೀಲಿಪಿ, ನುಡಿ, ಬರಹ ಇತ್ಯಾದಿ ಆಸ್ಕಿ (ASCII) ಫಾಂಟ್​ಗಳಿಂದ ಯೂನಿಕೋಡ್​ಗೆ ಪರಿವರ್ತಿಸಬಲ್ಲ, ಮತ್ತು ಯೂನಿಕೋಡ್​ನಿಂದ ವಿವಿಧ ಆಸ್ಕಿ ಫಾಂಟ್​ಗಳಿಗೆ ಪರಿವರ್ತಿಸಬಲ್ಲ ಸಮಗ್ರ ಕನ್ವರ್ಟರ್​ವೊಂದನ್ನು ಕನ್ನಡದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಸಂಚಿ ಫೌಂಡೇಶನ್​ನ ಸಂಚಯ ಸಂಸ್ಥೆಯು ಈ ಕನ್ವರ್ಟ್ ಅಭಿವೃದ್ಧಿಪಡಿಸುತ್ತಿರುವುದು. ಈಗಾಗಲೇ ಕನ್ನಡದಲ್ಲಿ ಕೆಲವು ಕನ್ವರ್ಟರ್​​ಗಳು ಲಭ್ಯ ಇದ್ದರೂ ಯಾವುದೂ ಕೂಡ ಸಮಗ್ರ ಫಾಂಟ್ ಪರಿವರ್ತನೆ…

Read More

CSAB Counseling 2026: NIT, IIIT ಗಳಲ್ಲಿ ಖಾಲಿ ಇರುವ B.Tech ಸೀಟುಗಳ ಭರ್ತಿಗೆ ಜುಲೈ 28 ರಿಂದ ನೋಂದಣಿ ಆರಂಭ! – Kannada News | CSAB Special Counseling 2026: Last Chance for NIT, IIIT, GFTI Admissions

ನವದೆಹಲಿ: JoSAA (ಜಾಯಿಂಟ್ ಸೀಟ್ ಅಲೋಕೇಶನ್ ಅಥಾರಿಟಿ) ಕೌನ್ಸೆಲಿಂಗ್‌ನ ಎಲ್ಲಾ ಸುತ್ತುಗಳು ಮುಕ್ತಾಯಗೊಂಡ ನಂತರ, ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಖಾಲಿ ಉಳಿದಿರುವ ಸೀಟುಗಳನ್ನು ಭರ್ತಿ ಮಾಡಲು ಕೇಂದ್ರ ಸೀಟ್ ಹಂಚಿಕೆ ಮಂಡಳಿ (CSAB) ವಿಶೇಷ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಘೋಷಿಸಿದೆ. JEE Main 2026 ಅಂಕಗಳ ಆಧಾರದ ಮೇಲೆ ನಡೆಯುವ ಈ ವಿಶೇಷ ಕೌನ್ಸೆಲಿಂಗ್ ಮೂಲಕ NIT, IIIT ಹಾಗೂ ಇತರ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ (GFTI) ಪ್ರವೇಶ ಪಡೆಯಲು ಜುಲೈ 28 ರಿಂದ ನೋಂದಣಿ ಆರಂಭವಾಗಲಿದೆ….

Read More

‘ಪುನೀತ್ ರಾಜ್​​ಕುಮಾರ್ ಊಟಕ್ಕೆ ಬನ್ನಿ ಅಂದಿದ್ರು’; ಮೈಸೂರಿನ ಭೇಟಿ ನೆನೆದ ರಾವ್ ರಮೇಶ್ – Kannada News | Rao Ramesh Recalls Heartwarming Memory With Puneeth Rajkumar During KGF 2 Shooting in Mysuru

ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ನಟನೆಯ ಮೂಲಕ ಗುರುತಿಸಿಕೊಂಡಿರುವ ನಟ ಕೋಮಲ್ ಕುಮಾರ್ ಅಭಿನಯದ ‘ತೆನಾಲಿ ಡಿಎ, ಎಲ್‌ಎಲ್‌ಬಿ’ ಸಿನಿಮಾ ಸದ್ಯ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವ ಬಹುಭಾಷಾ ನಟ ರಾವ್ ರಮೇಶ್ ಅವರು ಚಿತ್ರದ ಕುರಿತು ಮಾತನಾಡಿದ್ದಾರೆ. ಈ ವೇಳೆ ಅವರು ಪುನೀತ್ ರಾಜ್​​ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ. ‘ತೆನಾಲಿ ಡಿಎ, ಎಲ್‌ಎಲ್‌ಬಿ’ ಸಿನಿಮಾದಲ್ಲಿ ತಮ್ಮ ಪಾತ್ರಕ್ಕೆ ರಾವ್ ರಮೇಶ್ ಅವರೇ ಸ್ವತಃ ಕನ್ನಡದಲ್ಲಿ ಡಬ್ ಮಾಡಲಿದ್ದಾರೆ. ಈ ಮೂಲಕ ಅವರು…

Read More

ಧಾರವಾಡ: ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ! – Kannada News | Karnataka Farmers in Crisis: Dharwad Farmer Destroys Chilli Crop as Prices Crash, Bidar Soybean Fields Dry Up

ಧಾರವಾಡ, ಬೀದರ್, ಜುಲೈ 23: ಕರ್ನಾಟಕದ ರೈತರು ಪ್ರಸ್ತುತ ಎರಡೆರಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಕಡೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ಮಳೆಯ ಕೊರತೆಯಿಂದ ಬೆಳೆ ಒಣಗಿ ಹೋಗುತ್ತಿದೆ. ಧಾರವಾಡ ಜಿಲ್ಲೆಯ ಗೋವನಕೊಪ್ಪ ಗ್ರಾಮದ ರೈತರೊಬ್ಬರು ಮೂರು ಎಕರೆಯಲ್ಲಿ ಬೆಳೆದ ಮೆಣಸಿನಕಾಯಿ ಬೆಳೆಯನ್ನು ದರ ಕುಸಿತದಿಂದಾಗಿ ನಾಶಪಡಿಸಿದ್ದಾರೆ. ಪ್ರತಿ ಕೆಜಿ ಮೆಣಸಿನಕಾಯಿಗೆ ಕೇವಲ 6 ರೂಪಾಯಿ ದರ ಕೇಳುತ್ತಿದ್ದರಿಂದ, ಕಟಾವು ಮತ್ತು ಸಾಗಣೆಗೆ ತಗಲುವ ವೆಚ್ಚವನ್ನೂ ಭರಿಸಲು ಸಾಧ್ಯವಾಗದೆ ರೈತರು ಲಕ್ಷಾಂತರ…

Read More

ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು: ಮಾಕ್​​ಡ್ರಿಲ್​​ ಎಂದು ತಿಳಿಯದೆ ಕಂಗಾಲಾದ ಜನ – Kannada News | NSG Commandos Conduct Intensive Mock Drill in Mangaluru Simulating Counter Terrorism Operations

ಮಂಗಳೂರು, ಜುಲೈ 23: ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಕಮಾಂಡೋಗಳು ಮಂಗಳೂರಿನಲ್ಲಿ ಬೃಹತ್ ಅಣಕು ಕಾರ್ಯಾಚರಣೆಯನ್ನು ನಡೆಸಿವೆ. ಭಯೋತ್ಪಾದಕ ದಾಳಿಗಳನ್ನು ಎದುರಿಸಲು ಮತ್ತು ಸಂಕಷ್ಟದ ಸಂದರ್ಭಗಳನ್ನು ನಿರ್ವಹಿಸಲು ಕೈಗೊಳ್ಳುವ ಕ್ರಮಗಳನ್ನು ಈ ಮಾಕ್​​ಡ್ರಿಲ್​​ನಲ್ಲಿ ಪ್ರದರ್ಶಿಸಲಾಗಿದೆ. ಕಡಿಮೆ ಎತ್ತರದಲ್ಲಿ ಹಾರುತ್ತಿದ್ದ ಸೇನಾ ಹೆಲಿಕಾಪ್ಟರ್‌ಗಳನ್ನು ನೋಡಿ ಸ್ಥಳೀಯ ನಿವಾಸಿಗಳಲ್ಲಿ ಕೆಲ ಕಾಲ ಆತಂಕ ಮನೆ ಮಾಡಿತ್ತು. ಆದರೆ ಇದು ಕೇವಲ ತಾಲೀಮು ಎಂದು ತಿಳಿದ ನಂತರ ಸಾರ್ವಜನಿಕರು ನಿರಾಳರಾದರು. ಎನ್ಎಂಪಿಎ, ಇನ್ಫೋಸಿಸ್ ಮತ್ತು ಕೆಲವು ಶಿಕ್ಷಣ ಸಂಸ್ಥೆಗಳ ಬಳಿ ಈ…

Read More