NEET UG 2026: ಕಡಿಮೆ ಅಂಕ ಪಡೆದವರಿಗೂ NRI ಕೋಟಾದಡಿ ಸಿಗಲಿದೆ ಎಂ.ಬಿ.ಬಿ.ಎಸ್ ಸೀಟು! – Kannada News | NEET UG 2026: NRI Quota MBBS and BDS Admission – New Supreme Court Rules and Counselling Guide

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಇತ್ತೀಚೆಗಷ್ಟೇ ‘ನೀಟ್ ಯುಜಿ 2026′ (NEET UG 2026) ಫಲಿತಾಂಶಗಳನ್ನು ಪ್ರಕಟಿಸಿದ್ದು, ಉತ್ತೀರ್ಣರಾದ ಅಭ್ಯರ್ಥಿಗಳು ಪ್ರವೇಶ ಪ್ರಕ್ರಿಯೆಗೆ ಕಾಯುತ್ತಿದ್ದಾರೆ. ಎಂ.ಬಿ.ಬಿ.ಎಸ್ (MBBS) ಮತ್ತು ಬಿ.ಡಿ.ಎಸ್ (BDS) ಕೋರ್ಸ್‌ಗಳ ಪ್ರವೇಶಕ್ಕಾಗಿ ಅಖಿಲ ಭಾರತ ಮತ್ತು ರಾಜ್ಯ ಮಟ್ಟದ ಕೌನ್ಸೆಲಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಕೇವಲ ಹೆಚ್ಚಿನ ಅಂಕ ಪಡೆದವರಿಗೆ ಮಾತ್ರವಲ್ಲದೆ, ಕಡಿಮೆ ಅಂಕ ಗಳಿಸಿದ ಅಭ್ಯರ್ಥಿಗಳಿಗೂ ಅನಿವಾಸಿ ಭಾರತೀಯ (NRI) ಕೋಟಾದಡಿ ಮೆಡಿಕಲ್ ಸೀಟು ಪಡೆಯಲು ಸುವರ್ಣ ಅವಕಾಶವಿದೆ.

ಎನ್‍ಆರ್‌ಐ (NRI) ಕೋಟಾ ಪ್ರವೇಶಕ್ಕೆ ಸುಪ್ರೀಂ ಕೋರ್ಟ್‌ನ ಹೊಸ ಮಾನದಂಡಗಳು:

2026-2027ರ ಶೈಕ್ಷಣಿಕ ವರ್ಷದಲ್ಲಿ ಎಂ.ಬಿ.ಬಿ.ಎಸ್ ಸೀಟುಗಳಿಗೆ ಎನ್‌ಆರ್‌ಐ ಕೋಟಾದಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸುಪ್ರೀಂ ಕೋರ್ಟ್ ಅರ್ಹತಾ ಮಾನದಂಡಗಳನ್ನು ತಿದ್ದುಪಡಿ ಮಾಡಿದೆ. ಪ್ರವೇಶದ ವ್ಯಾಖ್ಯಾನವನ್ನು ವಿಸ್ತರಿಸಲಾಗಿದ್ದು, ಅರ್ಹ ಸಂಬಂಧಿಕರ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ.

ಸೀಟು ಹಂಚಿಕೆಯಲ್ಲಿ ಆದ್ಯತಾ ವ್ಯವಸ್ಥೆ (Priority System) ಹೇಗೆ ಕೆಲಸ ಮಾಡುತ್ತದೆ?

ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (MCC) ಪ್ರಕಾರ, ಎನ್‌ಆರ್‌ಐ ಕೋಟಾದ ಸೀಟುಗಳನ್ನು ನಿರ್ದಿಷ್ಟ ಆದ್ಯತೆಯ ಆಧಾರದ ಮೇಲೆ ಹಂಚಲಾಗುತ್ತದೆ:

  • ಮೊದಲ ಆದ್ಯತೆ (First Priority): ನೇರವಾಗಿ ಎನ್‌ಆರ್‌ಐ ಅಭ್ಯರ್ಥಿಗಳು ಮತ್ತು ಅವರ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
  • ಎರಡನೇ ಆದ್ಯತೆ (Second Priority): ಮೊದಲ ಆದ್ಯತೆಯ ಸೀಟುಗಳು ಭರ್ತಿಯಾದ ನಂತರ, ಉಳಿದ ಸೀಟುಗಳನ್ನು ಎನ್‌ಆರ್‌ಐಗಳ ಒಡಹುಟ್ಟಿದವರು, ಸೋದರಳಿಯರು, ಸೊಸೆಯಂದಿರು ಅಥವಾ ಮೊಮ್ಮಕ್ಕಳು ಸೇರಿದಂತೆ ನಿಕಟ ಸಂಬಂಧಿಗಳಿಗೆ ನೀಡಲಾಗುತ್ತದೆ.

ಇದನ್ನೂ ಓದಿ: ಎಸ್​​ಐಆರ್​​ ಕಾರ್ಯಕ್ಕೆ ಶೇ.30ರಷ್ಟು ಶಿಕ್ಷಕರ ಬಳಕೆ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾಡೋರಿಲ್ಲ ಪಾಠ ಪ್ರವಚನ!

ಪ್ರವೇಶದ ಸಮಯದಲ್ಲಿ ಸಲ್ಲಿಸಬೇಕಾದ ಪ್ರಮುಖ ದಾಖಲೆಗಳು:

ಕಾಲೇಜಿಗೆ ವರದಿ ಮಾಡುವಾಗ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಸರಿಯಾದ ರೂಪದಲ್ಲಿ ಸಲ್ಲಿಸುವುದು ಕಡ್ಡಾಯವಾಗಿದೆ. ಯಾವುದೇ ದಾಖಲೆ ನಕಲಿ ಎಂದು ಕಂಡುಬಂದರೆ ಸೀಟು ರದ್ದಾಗುವುದಲ್ಲದೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ:

  • ಎನ್‌ಆರ್‌ಐ ಪ್ರಮಾಣಪತ್ರ (ರಾಯಭಾರ ಕಚೇರಿ ಅಥವಾ ಮಿಷನ್ ನೀಡಿರಬೇಕು).
  • ಅಭ್ಯರ್ಥಿ ಮತ್ತು ಎನ್‌ಆರ್‌ಐ ವ್ಯಕ್ತಿಯ ನಡುವಿನ ಸಂಬಂಧದ ಪುರಾವೆ.
  • NEET UG 2026 ಅಂಕಪಟ್ಟಿ.
  • ಸಂಪೂರ್ಣ ಕೋರ್ಸ್ ಶುಲ್ಕವನ್ನು ಪಾವತಿಸಲು ಪೋಷಕರು ಜವಾಬ್ದಾರರಾಗಿದ್ದಾರೆ ಎಂದು ತಿಳಿಸುವ ರಾಯಭಾರ ಕಚೇರಿಯ ಅಫಿಡವಿಟ್.

ತಾತ್ಕಾಲಿಕ ಪಟ್ಟಿ ಹಾಗೂ ಪಾರದರ್ಶಕತೆ:

ಪ್ರಸ್ತುತ ಬಿಡುಗಡೆ ಮಾಡುವ ಅಭ್ಯರ್ಥಿಗಳ ಪಟ್ಟಿಯು ತಾತ್ಕಾಲಿಕವಾಗಿದ್ದು, ಮೂಲ ದಾಖಲೆಗಳ ಪರಿಶೀಲನೆಯ ನಂತರವೇ ಅಂತಿಮ ಹಂಚಿಕೆ ಮಾಡಲಾಗುತ್ತದೆ ಎಂದು ಎಂಸಿಸಿ (MCC) ಸ್ಪಷ್ಟಪಡಿಸಿದೆ. ಆದ್ದರಿಂದ, ಅಭ್ಯರ್ಥಿಗಳು ಯಾವುದೇ ಗಡುವನ್ನು ತಪ್ಪಿಸಿಕೊಳ್ಳದಿರಲು ಎಂಸಿಸಿ ಅಧಿಕೃತ ವೆಬ್‌ಸೈಟ್ ಹಾಗೂ ಇಮೇಲ್ (adgme@nic.in) ಸೂಚನೆಗಳನ್ನು ನಿರಂತರವಾಗಿ ಗಮನಿಸುತ್ತಿರಲು ಸೂಚಿಸಲಾಗಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಲ್ಲಿ ದುಬಾರಿ ಟಿಕೆಟ್ ಬೆಲೆಗೆ ‘ಜನ ನಾಯಗನ್’ ಡಲ್; ಶೋಗಳಿಗಿಲ್ಲ ಹೌಸ್​​ಫುಲ್ ಬೋರ್ಡ್ – Kannada News | Jana Nayagan Box Office: Thalapathy Vijay Film Starts Dull in Bengaluru Due to High Ticket Prices

ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ (Jana Nayagan Movie) ಚಿತ್ರ ಇಂದು (ಜುಲೈ 23) ರಿಲೀಸ್ ಆಗಿದೆ. ಈ ಸಿನಿಮಾ ಒಳ್ಳೆಯ ಓಪನಿಂಗ್ ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಮೊದಲ ದಿನದ ಗಳಿಕೆ ಭಾರತದಲ್ಲಿ 100 ಕೋಟಿ ರೂಪಾಯಿ ದಾಟೋ ನಿರೀಕ್ಷೆ ಇದೆ. ಆದರೆ, ಈ ಚಿತ್ರಕ್ಕೆ ಬೆಂಗಳೂರಲ್ಲಿ ಡಲ್ ಓಪನಿಂಗ್ ಸಿಕ್ಕಿದೆ. ಬಹುತೇಕ ಮಲ್ಟಿಪ್ಲೆಕ್ಸ್​​ಗಳಲ್ಲಿ ಹೌಸ್​​ಫುಲ್ ಬೋರ್ಡ್ ಬಿದ್ದಿಲ್ಲ. ದುಬಾರಿ ಟಿಕೆಟ್ ದರ ಕೂಡ ಇದಕ್ಕೆ ಕಾರಣ ಎಂಬ ಮಾತು ವ್ಯಕ್ತವಾಗುತ್ತಿದೆ.

ಯಾವುದಾದರೂ ಒಂದು ಸಿನಿಮಾ ಗೆಲ್ಲಬೇಕು ಎಂದರೆ ಅದು ಕೇವಲ ಅಭಿಮಾನಿಗಳನ್ನು ಮಾತ್ರ ಖುಷಿಪಡಿಸುವ ರೀತಿಯಲ್ಲಿ ಇರಬಾರದು. ಅಂದಾಗ ಮಾತ್ರ ಸಿನಿಮಾ ದೊಡ್ಡ ಯಶಸ್ಸು ಕಾಣಲು ಸಾಧ್ಯ. ಆಗಲೇ ಒಳ್ಳೆಯ ಕಲೆಕ್ಷನ್ ಆಗೋದು. ಆದರೆ, ‘ಜನ ನಾಯಗನ್’ ಸಿನಿಮಾ ಅಭಿಮಾನಿಗಳನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿದ ಚಿತ್ರ. ಹೀಗಾಗಿ, ಮೊದಲ ದಿನ ಮೊದಲ ಶೋ ಅಭಿಮಾನಿಗಳಿಂದ ತುಂಬಿದೆ.

ಬುಕ್ ಮೈ ಶೋ ಓಪನ್ ಮಾಡಿ ನೋಡಿದರೆ ಬೆಂಗಳೂರಿನಲ್ಲಿ 9 ಗಂಟೆಯ ಬಳಿಕದ ಬಹುತೇಕ ಶೋಗಳು ಹಸಿರು ಬಣ್ಣದಲ್ಲೇ ಇವೆ. ಅಂದರೆ, ಸಿನಿಮಾ ಹಾಲ್ ಬುಕ್ ಆಗುತ್ತಿಲ್ಲ ಎಂಬ ಅರ್ಥ ಇದು. ಇನ್ನು, ಕೆಲವೇ ಕೆಲವು ಶೋಗಳು ಆರೆಂಜ್ ಬಣ್ಣಕ್ಕೆ ತಿರುಗಿವೆ. ಆರೆಂಜ್ ಎಂದರೆ, ಸೀಟ್​​​ಗಳು ತುಂಬಲು ಆರಂಭಿಸಿದೆ ಎಂದರ್ಥ.

ಇದನ್ನೂ ಓದಿ: ಅಕ್ರಮವಾಗಿ ‘ಜನ ನಾಯಗನ್’ ಟಿಕೆಟ್ ದರ ಏರಿಕೆ: ಕ್ರಮ ತೆಗೆದುಕೊಳ್ಳಲು ವಿಜಯ್ ಅಭಿಮಾನಿಗಳ ಆಗ್ರಹ

‘ಜನ ನಾಯಗನ್’ ಸಿನಿಮಾ ಈಗಾಗಲೇ ಲೀಕ್ ಕಾಟ ಅನುಭವಿಸಿದೆ. ಇದು ಸಿನಿಮಾ ತಂಡಕ್ಕೆ ಚಾಲೆಂಜ್ ಆಗಿತ್ತು. ಈ ಕಾರಣದಿಂದ ಅನೇಕರು ಸಿನಿಮಾ ನೋಡುವ ಸಾಹಸಕ್ಕೆ ಹೋಗಿಲ್ಲ. ಇನ್ನು ಸಿನಿಮಾ ಟಿಕೆಟ್ ಬೆಲೆ ಮಲ್ಟಿಪ್ಲೆಕ್ಸ್​​ಗಳಲ್ಲಿ 400 ರೂಪಾಯಿ ದಾಟಿದೆ. ಇಷ್ಟೊಂದು ಹಣ ಕೊಟ್ಟು ಸಿನಿಮಾ ವೀಕ್ಷಿಸಲು ಪ್ರೇಕ್ಷಕ ಸಿದ್ಧನಿಲ್ಲ.
‘ಜನ ನಾಯಗನ್’ ಸಿನಿಮಾಗೆ ಎಚ್​​. ವಿನೋದ್ ನಿರ್ದೇಶನ ಇದೆ. ಈ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿ. ಮಲಯಾಳಂ ನಟಿ ಮಮಿತಾ ಬೈಜು ಅವರು ಈ ಸಿನಿಮಾದಲ್ಲಿ ವಿಜಯ್ ಸಹೋದರಿ ಪಾತ್ರ ಮಾಡಿದ್ದಾರೆ. ತೆಲುಗಿನ ‘ಭಗವಂತ ಕೇಸರಿ’ ಚಿತ್ರದ ರಿಮೇಕ್ ಇದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪೇಪರ್​ ಲೀಕ್​​ನಿಂದ ಪಾಸ್ ಆಗ್ತಿದ್ದ ಸಲ್ಮಾನ್ ಖಾನ್; ಹಳೆಯ ಹೇಳಿಕೆ ವೈರಲ್ – Kannada News | NEET Row: Salman Khan Support to Students Triggers Troll over Old Leaked Papers Video

ನೀಟ್ ಪೇಪರ್ ಲೀಕ್ ಪ್ರಕರಣದ ವಿರುದ್ಧ ಸಿಜೆಪಿ (CJP) ನೇತೃತ್ವದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟಕ್ಕೆ ಸಲ್ಮಾನ್ ಖಾನ್ ಬೆಂಬಲ ಸೂಚಿಸಿದ್ದಾರೆ. ಪೇಪರ್ ಲೀಕ್ ಅತ್ಯಂತ ಗಂಭೀರ ಸಮಸ್ಯೆ ಎಂದು ಅವರು ಹೇಳಿದ್ದಾರೆ. ಜುಲೈ 20 ರ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಗಾಯಗೊಂಡಿದ್ದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಈ ಬೆಂಬಲದ ಬೆನ್ನಲ್ಲೇ ಸಲ್ಮಾನ್ ಖಾನ್‌ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮುಖಭಂಗವಾಗಿದೆ. ಅವರ ಹಳೆಯ ವಿಡಿಯೋವೊಂದನ್ನು ನೆಟ್ಟಿಗರು ಈಗ ರೀ-ಶೇರ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

ಸಲ್ಮಾನ್ ಖಾನ್ ಕಾಲೆಳೆದ ನೆಟ್ಟಿಗರು

ವಿದ್ಯಾರ್ಥಿಗಳ ಪರ ಬ್ಯಾಟಿಂಗ್ ಮಾಡಿದ ಬೆನ್ನಲ್ಲೇ ಸಲ್ಮಾನ್ ಖಾನ್ ಅವರ ಹಳೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಮುಂಚೂಣಿಗೆ ಬಂದಿದೆ. 2020 ರಲ್ಲಿ ‘ದಿ ಕಪಿಲ್ ಶರ್ಮಾ ಶೋ’ನಲ್ಲಿ ಸಲ್ಮಾನ್ ತಂದೆ ಸಲೀಂ ಖಾನ್ ಒಂದು ರಹಸ್ಯ ಬಿಚ್ಚಿಟ್ಟಿದ್ದರು. ಶಾಲಾ ದಿನಗಳಲ್ಲಿ ಸಲ್ಮಾನ್ ಖಾನ್ ಅವರಿಗೆ ಗಣೇಶ್ ಎಂಬಾತ ಲೀಕ್ ಆದ ಪ್ರಶ್ನೆ ಪತ್ರಿಕೆಗಳನ್ನು ತಂದುಕೊಡುತ್ತಿದ್ದ ಎಂದು ಸಲೀಂ ಖಾನ್ ತಮಾಷೆ ಮಾಡಿದ್ದರು. ಇದಕ್ಕೆ ಸಲ್ಮಾನ್ ಕೂಡ ನಗುತ್ತಲೇ ಒಪ್ಪಿಕೊಂಡಿದ್ದರು. ಈ ವಿಡಿಯೋ ಇಟ್ಟುಕೊಂಡು ನೆಟ್ಟಿಗರು ಸಲ್ಮಾನ್ ಅವರ ಡಬಲ್ ಸ್ಟ್ಯಾಂಡರ್ಡ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜಕೀಯ ಬಣ್ಣ ಬಳಿಯದಂತೆ ಸಲ್ಲು ಮನವಿ

ಸಲ್ಮಾನ್ ಖಾನ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳ ಶಾಂತಿಯುತ ಹೋರಾಟವನ್ನು ಶ್ಲಾಘಿಸಿದ್ದಾರೆ. ‘ಇದು ವಿದ್ಯಾರ್ಥಿಗಳು ಮತ್ತು ಶಿಕ್ಷಣ ವ್ಯವಸ್ಥೆಯ ನಡುವಿನ ಹೋರಾಟ. ಇದನ್ನು ಯಾವುದೇ ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಬಾರದು’ ಎಂದು ಅವರು ಮನವಿ ಮಾಡಿದ್ದಾರೆ. ದೇಶದ ಶಿಕ್ಷಣ ವ್ಯವಸ್ಥೆ ಜಾಗತಿಕ ಮಟ್ಟಕ್ಕೆ ಬೆಳೆಯಬೇಕು ಎಂದು ಅವರು ಆಶಿಸಿದ್ದಾರೆ. ಆದರೆ ಹಳೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಜನರು ಇಂಟರ್ನೆಟ್‌ನಲ್ಲಿ ಇವರ ಕಾಲೆಳೆಯುತ್ತಿದ್ದಾರೆ.

ಇದನ್ನೂ ಓದಿ: ನೀಟ್ ಪೇಪರ್ ಲೀಕ್ ಪ್ರತಿಭಟನೆಗೆ ಸಲ್ಮಾನ್ ಖಾನ್ ಬೆಂಬಲ; ಹಿಂಸಾಚಾರಕ್ಕೆ ಸಲ್ಲು ಬೇಸರ

ಏನಿದು ನೀಟ್ ಪೇಪರ್ ಲೀಕ್ ವಿವಾದ?

ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಿಂದಾಗಿ ದೇಶದ ಸುಮಾರು 20 ಲಕ್ಷ ವೈದ್ಯಕೀಯ ಅಭ್ಯರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಿದೆ. ಈ ಬಿಕ್ಕಟ್ಟಿನಿಂದಾಗಿ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಭಟನಾಕಾರರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಇದರೊಂದಿಗೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:46 am, Thu, 23 July 26

Source link

Samudrika Shastra: ಹೊಕ್ಕುಳ ಬಳಿ ಜನ್ಮ ಗುರುತು ಇದೆಯೇ? ಈ ಬಗ್ಗೆ ಸಾಮುದ್ರಿಕ ಶಾಸ್ತ್ರ ಹೇಳುವುದೇನು ಗೊತ್ತಾ? – Kannada News | Navel Birthmark Meaning: Samudrika Shastra Reveals Personality and Luck

ಸಾಮುದ್ರಿಕ ಶಾಸ್ತ್ರImage Credit source: nextmedclinic

ಭಾರತೀಯ ಸಾಂಪ್ರದಾಯಿಕ ಸಾಮುದ್ರಿಕ ಶಾಸ್ತ್ರದಲ್ಲಿ (Samudrika Shastra) ದೇಹದ ಮೇಲಿನ ಪ್ರತಿಯೊಂದು ಜನ್ಮ ಗುರುತು ಹಾಗೂ ಹುಟ್ಟುಮಚ್ಚೆಗೆ ತನ್ನದೇ ಆದ ಆಳವಾದ ಅರ್ಥವಿದೆ. ಇವುಗಳಲ್ಲಿ ಹೊಕ್ಕುಳಿನ (Navel) ಭಾಗವನ್ನು ಅತ್ಯಂತ ಮುಖ್ಯವಾದ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಹೊಕ್ಕುಳು ವ್ಯಕ್ತಿಯ ಪ್ರಸ್ತುತ ಜೀವನಕ್ಕೆ ಮಾತ್ರವಲ್ಲದೆ, ಆತನ ಹಿಂದಿನ ಜನ್ಮದ ಕರ್ಮಗಳಿಗೂ ಸಂಬಂಧಿಸಿದೆ ಎಂಬ ನಂಬಿಕೆ ಇದೆ. ಈ ಶಕ್ತಿ ಕೇಂದ್ರದ ಸುತ್ತಮುತ್ತಲಿರುವ ಜನ್ಮ ಗುರುತುಗಳು ವ್ಯಕ್ತಿಯ ವ್ಯಕ್ತಿತ್ವ, ಅದೃಷ್ಟ ಮತ್ತು ಭವಿಷ್ಯದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತವೆ? ವಿವರವಾದ ಮಾಹಿತಿ ಇಲ್ಲಿದೆ.

ಹೊಕ್ಕುಳಿನ ಮೇಲೆಯೇ ಜನ್ಮ ಗುರುತು ಇದೆಯೇ?

ನಿಮ್ಮ ಹೊಕ್ಕುಳಿನ ಮೇಲೆಯೇ ಹುಟ್ಟುಮಚ್ಚೆ ಅಥವಾ ಜನ್ಮ ಗುರುತು ಇದ್ದರೆ, ನೀವು ಎಲ್ಲರೊಂದಿಗೆ ಬೇಗನೇ ಬೆರೆಯುವ ಆಕರ್ಷಕ ವ್ಯಕ್ತಿತ್ವದವರಾಗಿರುತ್ತೀರಿ. ಸಮುದ್ರಿಕ ಶಾಸ್ತ್ರದ ಪ್ರಕಾರ, ಇಂತಹ ವ್ಯಕ್ತಿಗಳು ಜೀವನದಲ್ಲಿ ಉತ್ತಮ ಸಂಪತ್ತು, ಸುಖ ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ. ಆದರೆ, ಇಷ್ಟೆಲ್ಲಾ ಇದ್ದರೂ ಇವರಿಗೆ ತಕ್ಕಂತೆ ಸಮಯ ಕಳೆಯುವ ಮತ್ತು ಭಾವನಾತ್ಮಕವಾಗಿ ಅರ್ಥ ಮಾಡಿಕೊಳ್ಳುವ ಸೂಕ್ತ ಸಂಬಂಧಗಳು ಸಿಗುವುದು ತೀರ ವಿರಳ. ಹೀಗಾಗಿ, ಇವರು ಜೀವನದಲ್ಲಿ ಹಲವು ಬಾರಿ ತೀವ್ರ ಒಂಟಿತನವನ್ನು ಅನುಭವಿಸುವ ಸಾಧ್ಯತೆಯಿರುತ್ತದೆ.

ಹೊಕ್ಕುಳಿನ ಸುತ್ತಮುತ್ತ ಜನ್ಮ ಗುರುತು:

ಹೊಕ್ಕುಳಿನ ಬಲ ಅಥವಾ ಎಡಭಾಗದ ಹತ್ತಿರದಲ್ಲೇ ಜನ್ಮ ಗುರುತು ಇದ್ದರೆ, ನೀವು ತಮಾಷೆಯ ಮತ್ತು ಉಲ್ಲಾಸದಾಯಕ ಸ್ವಭಾವದವರಾಗಿರುತ್ತೀರಿ. ಇಂತಹ ವ್ಯಕ್ತಿಗಳು ಹುಟ್ಟಿನಿಂದಲೇ ಬಲವಾದ ಅದೃಷ್ಟವನ್ನು ಹೊಂದಿರುತ್ತಾರೆ. ಜೀವನದ ಗುರಿಗಳನ್ನು ತಲುಪಲು ಇವರು ಕಷ್ಟಪಟ್ಟು ಶ್ರಮಿಸಬೇಕಾಗಿ ಬಂದರೂ, ತಮ್ಮ ಅದೃಷ್ಟದ ಬಲದಿಂದ ಅಂತಿಮವಾಗಿ ಯಶಸ್ಸನ್ನು ಸಾಧಿಸುತ್ತಾರೆ. ಇವರಿಗೆ ಸದಾ ಹೆತ್ತವರ ಬೆಂಬಲವಿರುತ್ತದೆ ಹಾಗೂ ಪೂರ್ವಜರ ಆಸ್ತಿ ಹರಿದು ಬರುವುದರಿಂದ ಆರ್ಥಿಕ ಮುಕ್ಕಟ್ಟು ಎಂದಿಗೂ ಎದುರಾಗುವುದಿಲ್ಲ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಹೊಕ್ಕುಳಿನ ಕೆಳಭಾಗದಲ್ಲಿ ಜನ್ಮ ಗುರುತು:

ಹೊಕ್ಕುಳಿನ ಕೆಳಭಾಗದಲ್ಲಿ ಹುಟ್ಟುಮಚ್ಚೆ ಇರುವುದನ್ನು ಸಮುದ್ರಿಕ ಶಾಸ್ತ್ರದಲ್ಲಿ ಕೊಂಚ ಅಶುಭಕರವೆಂದು ಪರಿಗಣಿಸಲಾಗುತ್ತದೆ. ಇದು ವ್ಯಕ್ತಿಯ ಹಿಂದಿನ ಜನ್ಮದ ಕರ್ಮಗಳ ಪ್ರತಿಫಲವನ್ನು ಸೂಚಿಸುತ್ತದೆ. ಇವರು ಜೀವನದುದ್ದಕ್ಕೂ ಸಾಕಷ್ಟು ಸವಾಲುಗಳು ಮತ್ತು ಹೋರಾಟಗಳನ್ನು ಎದುರಿಸಬೇಕಾಗಬಹುದು. ಆದಾಗ್ಯೂ, ಈ ಗುರುತು ಇರುವ ಜನರು ತಮ್ಮ ವೃತ್ತಿಜೀವನದಲ್ಲಿಅತ್ಯುನ್ನತ ಎತ್ತರಕ್ಕೆ ಬೆಳೆಯುತ್ತಾರೆ ಮತ್ತು ಅದ್ಭುತ ಯಶಸ್ಸನ್ನು ಸಾಧಿಸುತ್ತಾರೆ.

ಮಸುಕಾದ ಜನ್ಮ ಗುರುತು:

ನಿಮ್ಮ ಹೊಕ್ಕುಳಿನ ಬಳಿ ಅತ್ಯಂತ ಮಸುಕಾದ (Faint) ಜನ್ಮ ಗುರುತು ಇದ್ದರೆ, ಸಮುದ್ರಿಕ ಶಾಸ್ತ್ರದ ಪ್ರಕಾರ ನೀವು ಜಗತ್ತಿನ ಅತ್ಯಂತ ಅದೃಷ್ಟವಂತರಲ್ಲಿ ಒಬ್ಬರು. ಇಂತಹ ಜನರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅತ್ಯಂತ ಸುಲಭವಾಗಿ ಯಶಸ್ಸನ್ನು ಕಾಣುತ್ತಾರೆ. ಇವರ ದಾಂಪತ್ಯ ಜೀವನವು ಅತ್ಯಂತ ಪ್ರೀತಿ ಮತ್ತು ನೆಮ್ಮದಿಯಿಂದ ಕೂಡಿರುತ್ತದೆ. ಅದ್ಭುತ ಮನೋನಿಗ್ರಹ ಮತ್ತು ಸಮತೋಲನ ಸ್ವಭಾವ ಹೊಂದಿರುವ ಇವರ ವ್ಯಕ್ತಿತ್ವವು ಇತರರನ್ನು ಸುಲಭವಾಗಿ ಆಕರ್ಷಿಸುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BJP ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ ಕೇಸ್​​: ಆರೋಪಿ ಪುಣ್ಯೇಶ್ ಬಂಧನ, ಮುಂದುವರಿದ ತನಿಖೆ – Kannada News | Egg Attack on MLA B.P. Harish: Accused Punyesh Arrested, Conspiracy Investigation Underway

ಬೆಂಗಳೂರು, ಜುಲೈ 23: ಯುವ ಕಾಂಗ್ರೆಸ್​​ ಕಾರ್ಯಕರ್ತರ ಪ್ರತಿಭಟನೆಗೆ ಕೌಂಟರ್​​ ಆಗಿ ಕಾಂಗ್ರೆಸ್​​ ಕಚೇರಿ ಬಳಿ ಬಿಜೆಪಿಗರ ಪ್ರೊಟೆಸ್ಟ್​​ ವೇಳೆ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಪುಣ್ಯೇಶ್ ಎಂಬಾತನನ್ನು ಬಂಧಿಸಿದ್ದಾರೆ. ಬೆಂಗಳೂರಿನ ಶಿವಾಜಿನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು ತಡರಾತ್ರಿಯವರೆಗೂ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ, ಪುಣ್ಯೇಶ್ ಒಂದು ಬಾಕ್ಸ್‌ನಲ್ಲಿ ಮೊಟ್ಟೆಗಳನ್ನು ತಂದಿದ್ದ ಎಂದು ತಿಳಿದುಬಂದಿದೆ. ಈ ಕೃತ್ಯದಲ್ಲಿ ಪುಣ್ಯೇಶ್ ಜೊತೆ ಇನ್ನೂ ಕೆಲವರು ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೊಟ್ಟೆಗಳನ್ನು ಎಲ್ಲಿಂದ ತರಲಾಯಿತು, ಮೊಟ್ಟೆ ಎಸೆಯಲು ಯಾರು ಹೇಳಿದರು, ಮತ್ತು ಪುಣ್ಯೇಶ್ ಜೊತೆಗಿದ್ದವರು ಯಾರು ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ್ಯ ಅಥವಾ ಷಡ್ಯಂತ್ರವೇ ಎಂಬ ಆಯಾಮದಲ್ಲೂ ತನಿಖೆ ಮುಂದುವರಿದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಮೆರಿಕ-ಸೌದಿ ಬೃಹತ್ ಪರಮಾಣು ಒಪ್ಪಂದಕ್ಕೆ ಸಹಿ, ಜಾಗತಿಕ ವಲಯದಲ್ಲಿ ತೀವ್ರ ಆತಂಕ – Kannada News | US Saudi Nuclear Deal Ignites Global Alarm: Proliferation Risks and Middle East Tensions

ರಿಯಾದ್, ಜುಲೈ 23: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರು ಸೌದಿ ಅರೇಬಿಯಾ ಜೊತೆಗಿನ ಬಹು-ಶತಕೋಟಿ ಡಾಲರ್ ಮೌಲ್ಯದ ಐತಿಹಾಸಿಕ ‘ನಾಗರಿಕ ಪರಮಾಣು ಒಪ್ಪಂದಕ್ಕೆ’ ಸಹಿ ಹಾಕಿದ್ದಾರೆ. ಮುಂದಿನ 30 ವರ್ಷಗಳ ಕಾಲ ಬಾಳಿಕೆ ಬರುವ ಈ ಒಪ್ಪಂದವು ಸೌದಿ ಅರೇಬಿಯಾದಲ್ಲಿ ಪರಮಾಣು ಮೂಲಸೌಕರ್ಯಗಳನ್ನು ನಿರ್ಮಿಸಲು ಅಮೆರಿಕನ್ ಕಂಪನಿಗಳಿಗೆ ಪೂರ್ಣ ಮುಕ್ತ ಅವಕಾಶ ನೀಡಲಿದೆ. ಆದರೆ, ಈ ಒಪ್ಪಂದದಲ್ಲಿ ಇರಬೇಕಾಗಿದ್ದ ಕಠಿಣ ಜಾಗತಿಕ ಸುರಕ್ಷತಾ ನಿಯಮಗಳನ್ನು ಸಡಿಲಗೊಳಿಸಿರುವುದು ವಿಶ್ವಮಟ್ಟದಲ್ಲಿ, ವಿಶೇಷವಾಗಿ ಅಣ್ವಸ್ತ್ರ ಪ್ರಸರಣದ ಕಳವಳವನ್ನು ಹೆಚ್ಚಿಸಿದೆ.

ಏನಿದು ‘123 ಒಪ್ಪಂದ’?
ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಮತ್ತು ಸೌದಿ ಇಂಧನ ಸಚಿವ ಪ್ರಿನ್ಸ್ ಅಬ್ದುಲಜೀಜ್ ಬಿನ್ ಸಲ್ಮಾನ್ ಅವರು ‘123 ಒಪ್ಪಂದ’ ಎಂದು ಕರೆಯಲ್ಪಡುವ ಈ ಶಾಂತಿಯುತ ಪರಮಾಣು ಸಹಕಾರ ಒಪ್ಪಂದಕ್ಕೆ ಅಂಕಿತ ಹಾಕಿದ್ದಾರೆ. ಈ ಒಪ್ಪಂದದ ಮೂಲಕ ಸೌದಿ ಅರೇಬಿಯಾದಲ್ಲಿ ವಾಣಿಜ್ಯ ಪರಮಾಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವ ಹಕ್ಕನ್ನು ಅಮೆರಿಕದ ಕಂಪನಿಗಳು ಪಡೆಯಲಿವೆ ಹಾಗೂ ರಷ್ಯಾ-ಚೀನಾದಂತಹ ವಿದೇಶಿ ಸ್ಪರ್ಧಿಗಳನ್ನು ಈ ರೇಸ್‌ನಿಂದ ಹೊರಗಿಡಲಾಗಿದೆ.

ಒಪ್ಪಂದದ ಮೇಲಿರುವ ಜಾಗತಿಕ ಆತಂಕಗಳೇನು?
ಸಾಮಾನ್ಯವಾಗಿ ಅಮೆರಿಕ ಯಾವುದೇ ದೇಶದ ಜೊತೆ ಪರಮಾಣು ಒಪ್ಪಂದ ಮಾಡಿಕೊಳ್ಳುವಾಗ, ಆ ದೇಶವು ‘ಯುರೇನಿಯಂ ಉತ್ಕೃಷ್ಟಗೊಳಿಸುವುದನ್ನು’ ನಿಷೇಧಿಸುವ ಕಠಿಣ ಷರತ್ತು ವಿಧಿಸುತ್ತದೆ. ಆದರೆ ಸೌದಿಯೊಂದಿಗಿನ ಈ ಒಪ್ಪಂದದಲ್ಲಿ ಆ ನಿಷೇಧವಿಲ್ಲ, ಇದರಿಂದ ಸೌದಿ ಅರೇಬಿಯಾ ತನ್ನದೇ ನೆಲದಲ್ಲಿ ಯುರೇನಿಯಂ ಉತ್ಕೃಷ್ಟಗೊಳಿಸಲು ಹಾದಿ ಸುಗಮವಾಗಲಿದೆ. ಯುರೇನಿಯಂ ಉತ್ಕೃಷ್ಟಗೊಳಿಸುವ ತಂತ್ರಜ್ಞಾನವು ನಾಗರಿಕ ವಿದ್ಯುತ್ ಉತ್ಪಾದನೆಗೆ ಮಾತ್ರವಲ್ಲದೆ, ಪರಮಾಣು ಬಾಂಬ್ ತಯಾರಿಕೆಗೂ ಬಾಗಿಲು ತೆರೆಯುತ್ತದೆ.

ಮತ್ತಷ್ಟು ಓದಿ: ‘ಟ್ರಂಪ್‌ನನ್ನು ಕೊಲ್ಲುತ್ತೇವೆ’; ಇರಾನ್‌ನಲ್ಲಿ ಬೃಹತ್ ಬ್ಯಾನರ್!

ವಿಶ್ವಸಂಸ್ಥೆಯ ಅತ್ಯಂತ ಕಠಿಣ ಹಂತದ ತಪಾಸಣೆಗಳಿಗೆ ಸೌದಿಯನ್ನು ಒಳಪಡಿಸುವ ‘ಹೆಚ್ಚುವರಿ ಶಿಷ್ಟಾಚಾರ’ವನ್ನು ಈ ಒಪ್ಪಂದದಲ್ಲಿ ಸೇರಿಸಲಾಗಿಲ್ಲ ಎಂಬ ವರದಿಗಳಿವೆ.

ರಾಜಕೀಯ ಹಾಗೂ ಮಧ್ಯಪ್ರಾಚ್ಯ ಹಿನ್ನೆಲೆ
ಇರಾನ್ ಯುದ್ಧ ಮತ್ತು ಪಾಕಿಸ್ತಾನದ ಬೆಂಬಲ: ಮಧ್ಯಪ್ರಾಚ್ಯದಲ್ಲಿ ಇರಾನ್ ಜೊತೆಗಿನ ಯುದ್ಧ ತೀವ್ರಗೊಂಡಿರುವ ಬೆನ್ನಲ್ಲೇ ಈ ಒಪ್ಪಂದ ಬಂದಿದೆ. ಒಂದು ವೇಳೆ ಇರಾನ್ ಪರಮಾಣು ಅಸ್ತ್ರ ಪಡೆದರೆ, ತಾವೂ ಪಡೆಯುವುದಾಗಿ ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ (MBS) ಈ ಹಿಂದೆ ಎಚ್ಚರಿಸಿದ್ದರು.

ಸೌದಿ ಅರೇಬಿಯಾ ಈಗಾಗಲೇ ಪರಮಾಣು ಶಕ್ತಿ ಹೊಂದಿರುವ ಪಾಕಿಸ್ತಾನದ ಜೊತೆ ಪರಸ್ಪರ ರಕ್ಷಣಾ ಒಪ್ಪಂದ ಮಾಡಿಕೊಂಡಿದ್ದು, ಅಗತ್ಯಬಿದ್ದರೆ ತನ್ನ ಪರಮಾಣು ಕಾರ್ಯಕ್ರಮವನ್ನು ಸೌದಿಗೆ ಲಭ್ಯಗೊಳಿಸುವುದಾಗಿ ಪಾಕಿಸ್ತಾನ ಹೇಳಿತ್ತು.

ಯೆಮೆನ್ ಯುದ್ಧ ಮತ್ತು ತೈಲ ಕೋಟಾಗಳ ವಿಷಯದಲ್ಲಿ ಸೌದಿ ಮತ್ತು ಯುಎಇ ನಡುವೆ ಉಂಟಾಗಿದ್ದ ಉದ್ವಿಗ್ನತೆಗಳು ಶಮನಗೊಳ್ಳುತ್ತಿದ್ದು, ಗಲ್ಫ್ ರಾಷ್ಟ್ರಗಳು ಮತ್ತೆ ಒಂದಾಗುತ್ತಿರುವ ಬೆನ್ನಲ್ಲೇ ಅಮೆರಿಕದ ಈ ತೀರ್ಮಾನ ಹೊರಬಿದ್ದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಿಲಿಂಡರ್ ಹೊರಗಿಡಿ, ತಾಜಾ ಎಣ್ಣೆ ಬಳಸಿ: ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ – Kannada News | Veerappas Bagalkote Inspection: Food Hygiene and LPG Safety in Bakeries Under Scrutiny

ಬೆಂಗಳೂರು, ಜು.23: ಉಪಲೋಕಾಯುಕ್ತ ಬಿ. ವೀರಪ್ಪ ಅವರು ಬಾಗಲಕೋಟೆಗೆ ಭೇಟಿ ನೀಡಿ ಬೆಳ್ಳಂಬೆಳಗ್ಗೆ ವಿವಿಧ ಬೇಕರಿಗಳಿಗೆ ದಿಢೀರ್ ತಪಾಸಣೆ ನಡೆಸಿದರು. ಈ ವೇಳೆ ಆಹಾರ ತಿನಿಸುಗಳ ಗುಣಮಟ್ಟ, ಸುರಕ್ಷತೆ ಹಾಗೂ ನೈರ್ಮಲ್ಯದ ಕುರಿತು ಕೂಲಂಕಷ ಪರಿಶೀಲನೆ ನಡೆಸಲಾಯಿತು. ತಪಾಸಣೆಯ ಸಂದರ್ಭದಲ್ಲಿ, ಬೇಕರಿ ಮಾಲೀಕರಿಗೆ ಎಫ್‌ಎಸ್‌ಎಸ್‌ಎಐ (FSSAI) ಪ್ರಮಾಣಪತ್ರದ ಲಭ್ಯತೆ ಕುರಿತು ಉಪಲೋಕಾಯುಕ್ತರು ಪ್ರಶ್ನಿಸಿದರು. ಅಲ್ಲದೆ, ಬೇಕರಿಯ ಒಳಗಿದ್ದ ಎಲ್‌ಪಿಜಿ ಸಿಲಿಂಡರ್ ಸುರಕ್ಷಿತವಲ್ಲ ಎಂದು ಗಮನಿಸಿ, “ಸಿಲಿಂಡರ್ ಅನ್ನು ಹೊರಗೆ ಇಡಿ, ಇದು ಅಪಾಯಕಾರಿ. ಅಗತ್ಯವಿದ್ದರೆ ಒಳಗೆ ದೀಪ ಇಟ್ಟುಕೊಳ್ಳಿ, ಆದರೆ ಸಿಲಿಂಡರ್ ಅನ್ನು ಹೊರಗೆ ಕಂಬಿ ಹಾಕಿ ಸುರಕ್ಷಿತವಾಗಿಡಿ” ಎಂದು ಸೂಚಿಸಿದರು. ಸಿಲಿಂಡರ್‌ನಿಂದ ಪೈಪ್ ಅನ್ನು ಸರಿಯಾಗಿ ಅಳವಡಿಸುವಂತೆ ಸಲಹೆ ನೀಡಿದರು. ದಾಸ್ತಾನು ಕುರಿತು ಪರಿಶೀಲನೆ ನಡೆಸಿದಾಗ, “ಇದು ಹೋಲ್ ಸೇಲ್ ದಾಸ್ತಾನೇ? ನಿಮ್ಮದೇ ದಾಸ್ತಾನೇ?” ಎಂದು ಕೇಳಿದರು. ಅವಧಿ ಮೀರಿದ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ ಅವರು, “ಪ್ರತಿದಿನ ಹೊಸ ಉತ್ಪನ್ನಗಳನ್ನು ಇರಿಸಿ” ಎಂದು ತಿಳಿಸಿದರು. ಉಪಯೋಗಿಸುತ್ತಿರುವ ಎಣ್ಣೆಯು ತಾಜಾ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದರು. ಸುರಕ್ಷತಾ ನಿಯಮಗಳ ಉಲ್ಲಂಘನೆ ಮತ್ತು ಲೋಪಗಳ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಗೆ ಶೋ-ಕಾಸ್ ನೋಟಿಸ್ ನೀಡಲು ಉಪಲೋಕಾಯುಕ್ತ ಬಿ. ವೀರಪ್ಪ ಆದೇಶಿಸಿದರು. ಈ ತಪಾಸಣೆಯು ಗ್ರಾಹಕರಿಗೆ ಸುರಕ್ಷಿತ ಆಹಾರ ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rate: ಗುರುವಾರ ಮತ್ತಷ್ಟು ಏರಿದ ಚಿನ್ನದ ಬೆಲೆ; ಗುರುವಾರ ಗ್ರಾಮ್​ಗೆ 70 ರೂ ಏರಿಕೆ – Kannada News | Gold Price Today on 23rd July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 23: ಬಂಗಾರದ ದರ ಗುರುವಾರವೂ ಏರಿದೆ. ಇದರೊಂದಿಗೆ ಈ ಹಳದಿ ಲೋಹದ ಬೆಲೆ ಸತತ ಐದು ದಿನಗಳಿಂದ ಏರುತ್ತಲೇ ಬಂದಂತಾಗಿದೆ. ಗುರುವಾರ ಇದರ ಬೆಲೆ (Gold Price) ಗ್ರಾಮ್​ಗೆ 70 ರೂ ಹೆಚ್ಚಿದೆ. ನಿನ್ನೆ ಬರೋಬ್ಬರಿ 210 ರೂಗಳಷ್ಟು ಏರಿಕೆಯಾಗಿತ್ತು. ಇವತ್ತು, 18 ಕ್ಯಾರಟ್ ಚಿನ್ನದ ಬೆಲೆ 11,000 ರೂ ಗಡಿ ದಾಟಿ ಹೋಗಿದೆ. ವಿದೇಶಗಳಲ್ಲೂ ಸ್ವರ್ಣ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ಯಥಾಸ್ಥಿತಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,35,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,47,280 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,35,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 23ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,728 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,500 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,046 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,728 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,500 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,500 ರೂ
  • ಚೆನ್ನೈ: 13,500 ರೂ
  • ಮುಂಬೈ: 13,500 ರೂ
  • ದೆಹಲಿ: 13,515 ರೂ
  • ಕೋಲ್ಕತಾ: 13,500 ರೂ
  • ಕೇರಳ: 13,500 ರೂ
  • ಅಹ್ಮದಾಬಾದ್: 13,505 ರೂ
  • ಜೈಪುರ್: 13,515 ರೂ
  • ಲಕ್ನೋ: 13,515 ರೂ
  • ಭುವನೇಶ್ವರ್: 13,500 ರೂ

ಇದನ್ನೂ ಓದಿ: ಸೈಲೆಂಟಾಗಿ ನಿಮ್ಮ ಕ್ರೆಡಿಟ್ ಲಿಮಿಟ್​ಗೆ ಕತ್ತರಿ ಬೀಳಬಹುದು; ಬ್ಯಾಂಕುಗಳು ಯಾಕೆ ಈ ಕೆಲಸ ಮಾಡುತ್ತವೆ ಗೊತ್ತಾ?

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 556 ರಿಂಗಿಟ್ (13,126 ರುಪಾಯಿ)
  • ದುಬೈ: 500.75 ಡಿರಾಮ್ (13,158 ರುಪಾಯಿ)
  • ಅಮೆರಿಕ: 137 ಡಾಲರ್ (13,225 ರುಪಾಯಿ)
  • ಸಿಂಗಾಪುರ: 182 ಸಿಂಗಾಪುರ್ ಡಾಲರ್ (13,629 ರುಪಾಯಿ)
  • ಕತಾರ್: 501 ಕತಾರಿ ರಿಯಾಲ್ (13,267 ರೂ)
  • ಸೌದಿ ಅರೇಬಿಯಾ: 515 ಸೌದಿ ರಿಯಾಲ್ (13,243 ರುಪಾಯಿ)
  • ಓಮನ್: 53.20 ಒಮಾನಿ ರಿಯಾಲ್ (13,338 ರುಪಾಯಿ)
  • ಕುವೇತ್: 41.89 ಕುವೇತಿ ದಿನಾರ್ (13,139 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 240 ರೂ
  • ಚೆನ್ನೈ: 245 ರೂ
  • ಮುಂಬೈ: 240 ರೂ
  • ದೆಹಲಿ: 240 ರೂ
  • ಕೋಲ್ಕತಾ: 240 ರೂ
  • ಕೇರಳ: 245 ರೂ
  • ಅಹ್ಮದಾಬಾದ್: 240 ರೂ
  • ಜೈಪುರ್: 240 ರೂ
  • ಲಕ್ನೋ: 240 ರೂ
  • ಭುವನೇಶ್ವರ್: 245 ರೂ
  • ಪುಣೆ: 240

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 11:07 am, Thu, 23 July 26

Source link

ನನಗೆ ಆಪರೇಷನ್ ಆಗಿಲ್ಲ, ನಾನು ಚೆನ್ನಾಗಿದ್ದೇನೆ; ವದಂತಿಗೆ ಬ್ರೇಕ್ ಹಾಕಿದ ಅಮಿತಾಭ್ ಬಚ್ಚನ್ – Kannada News | Amitabh Bachchan Denies ICU Admission and Surgery Rumors, Clarifies Messi and Argentina Post

ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ (Amitabh Bachchan) ಸರ್ಜರಿ ಆಗಿದೆ ಮತ್ತು ಐಸಿಯುಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಭಾರೀ ಆತಂಕ ಮೂಡಿಸಿತ್ತು. ಆದರೆ ಈಗ ಸ್ವತಃ ಬಿಗ್ ಬಿ ಅವರೇ ಈ ಎಲ್ಲಾ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಬ್ಲಾಗ್ ಪೋಸ್ಟ್ ಅನ್ನು ಜನರು ತಪ್ಪು ತಿಳಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಇದರಿಂದ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.

ಅರ್ಜೆಂಟೀನಾ ಸೋಲಿನ ಬಗ್ಗೆ ಬರೆದಿದ್ದ ಬಿಗ್ ಬಿ

ಅಮಿತಾಭ್ ಬಚ್ಚನ್ ಅವರಿಗೆ ಈಗ 83 ವರ್ಷ ವಯಸ್ಸು. ಅವರು ತಾವು ಸಂಪೂರ್ಣವಾಗಿ ಆರಾಮಾಗಿ ಇರುವುದಾಗಿ ತಿಳಿಸಿದ್ದಾರೆ. ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಅರ್ಜೆಂಟೀನಾ ಸೋತಿದ್ದರ ಬಗ್ಗೆ ಅವರು ಬ್ಲಾಗ್‌ನಲ್ಲಿ ಬರೆದಿದ್ದರು. ಚಾಂಪಿಯನ್ ಮೆಸ್ಸಿ ಸೋತಾಗ ಆಗುವ ಮಾನಸಿಕ ಸ್ಥಿತಿಯನ್ನು ವಿವರಿಸಲು ಅವರು ಆಸ್ಪತ್ರೆಯ ಉದಾಹರಣೆ ನೀಡಿದ್ದರು. ಆದರೆ ಜನರು ಅದನ್ನು ತಮಗೆ ಸಂಬಂಧಿಸಿದ್ದು ಎಂದು ತಪ್ಪಾಗಿ ಭಾವಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗೊಂದಲ ಮೂಡಿಸಿದ ಬ್ಲಾಗ್ ಪೋಸ್ಟ್

ಬಿಗ್ ಬಿ ತಮ್ಮ ಬ್ಲಾಗ್‌ನಲ್ಲಿ ‘ಆಸ್ಪತ್ರೆ, ಸರ್ಜರಿ ಮತ್ತು ಐಸಿಯು ಮುಗಿಸಿ ಮನೆಗೆ ಮರಳುವ ಸಮಯ ಅತ್ಯಂತ ಕಷ್ಟಕರ ಹಂತ’ ಎಂದು ಬರೆದುಕೊಂಡಿದ್ದರು. ’ನೀವು ದೊಡ್ಡ ಚಾಂಪಿಯನ್ ಆಗಿದ್ದಾಗ ಒಂದು ದಿನ ಸೋಲು ಎದುರಾಗುತ್ತದೆ. ಅದು ಜೀವನದ ಕಠಿಣ ಹಂತ’ ಎಂದೂ ಉಲ್ಲೇಖಿಸಿದ್ದರು. ಈ ಸಾಲುಗಳನ್ನು ನೋಡಿ ಅಭಿಮಾನಿಗಳು ಅಮಿತಾಭ್ ಅವರ ಆರೋಗ್ಯ ಕೈಕೊಟ್ಟಿದೆ ಎಂದು ಗಾಬರಿಯಾಗಿದ್ದರು.

ಇದನ್ನೂ ಓದಿ: 83ನೇ ವಯಸ್ಸಲ್ಲಿ ಅಮಿತಾಭ್ ಬಚ್ಚನ್​ಗೆ ಸರ್ಜರಿ? ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ ಪೋಸ್ಟ್

ಸಿನಿಮಾಗಳಲ್ಲಿ ಬ್ಯುಸಿ ಇರುವ ನಟ

ತಮ್ಮ ಆರೋಗ್ಯದ ವದಂತಿಗಳಿಗೆ ಪೂರ್ಣ ವಿರಾಮ ಇಟ್ಟಿರುವ ಬಿಗ್ ಬಿ ಸದ್ಯ ತಮ್ಮ ಶೂಟಿಂಗ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ಶೀಘ್ರದಲ್ಲೇ ‘ಕೌನ್ ಬನೇಗಾ ಕರೋಡ್‌ಪತಿ’ ಸೀಸನ್ 18 ರ ಹೋಸ್ಟಿಂಗ್ ಆರಂಭಿಸಲಿದ್ದಾರೆ. ಇದರೊಂದಿಗೆ ಸೂಪರ್ ಹಿಟ್ ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್‌ನಲ್ಲಿ ಅಶ್ವತ್ಥಾಮ ಪಾತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ‘ಸೆಕ್ಷನ್ 84’ ಮತ್ತು ‘ಸರ್ಕಾರ್ 4’ ಚಿತ್ರಗಳ ಕೆಲಸಗಳೂ ನಡೆಯುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಇದು ಕಾರ್ಪೋರೆಟ್ ಜಗತ್ತು; ಟ್ರಾಫಿಕ್ ಜಾಮ್‌ ನಡುವೆಯೇ ಬೈಕ್‌ನಲ್ಲಿ ಲ್ಯಾಪ್ ಟಾಪ್ ತೆರೆದು ಕೆಲಸ ಮಾಡಿದ ವ್ಯಕ್ತಿ – Kannada News | Man opens laptop and starts working while waiting at a traffic signal for 5 minutes.

ಕಾರ್ಪೊರೇಟ್ (Corporate) ಜಗತ್ತೇ ಹಾಗೆ, ಕೈ ತುಂಬಾ ಸಂಬಳ ಸಿಕ್ಕಿದ್ರು ಒತ್ತಡ ಮಾತ್ರ ಹೆಚ್ಚೇ ಆಗುತ್ತದೆ ಹೊರತು ಕಡಿಮೆಯಾಗಲ್ಲ. ಈ ಉದ್ಯೋಗಿಯದ್ದು ಅದೇ ಪಾಡಾಗಿದೆ. ಹೌದು, ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ತನ್ನ ಲ್ಯಾಪ್ ಟಾಪ್ ತೆರೆದು ಕುಳಿತು ಕೆಲಸ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ. ಈ ವಿಡಿಯೋ ಈ ವ್ಯಕ್ತಿಗೆ ಕೆಲಸದ ಒತ್ತಡ ಎಷ್ಟಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಈ ಕ್ಲಿಪಿಂಗ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾರ್ಪೊರೇಟ್ ಕೆಲಸದ ಸಂಸ್ಕೃತಿಯನ್ನು ಟೀಕಿಸಿದ್ದಾರೆ.

ಸಾಫ್ಫ್ರೆಂನ್ ಚಾರ್ಜರ್ಸ್ (Saffron Chargers) ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ಗೆ ಸಿಗ್ನಲ್ ನಲ್ಲಿ 5 ನಿಮಿಷಗಳ ಟ್ರಾಫಿಕ್ ಜಾಮ್. ಆದರೆ ಈ ವ್ಯಕ್ತಿ ಬೈಕ್ ಮೇಲೆ ಕುಳಿತು, ತನ್ನ ಲ್ಯಾಪ್‌ಟಾಪ್ ತೆಗೆದು ಕೆಲಸ ಮಾಡಲು ಪ್ರಾರಂಭಿಸಿದ್ದಾನೆ. 8 ಗಂಟೆಗಳ ಕೆಲಸದ ಬಳಿಕವು ಅವನು ಮನೆಗೆ ಹೋಗುವ ದಾರಿಯಲ್ಲಿ ಕೆಲಸ ಮಾಡಬೇಕಾಗಿದೆ. ಮನೆ ತಲುಪಿದ ಬಳಿಕ ಈ ಕೆಲಸವು ಮುಂದುವರೆಯುತ್ತದೆ. ಭಾರತದಲ್ಲಿ ಜನರು ನಿಧಾನವಾಗಿ ಯಂತ್ರಗಳಾಗಿ ಬದಲಾಗಿದ್ದಾರೆ ಎಂದು ಶೀರ್ಷಿಕೆ ನೀಡಲಾಗಿದೆ.

ವೈರಲ್‌ ಪೋಸ್ಟ್‌ ಇಲ್ಲಿದೆ

ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ 5 ನಿಮಿಷದ ಸಿಗ್ನಲ್ ನನ್ನು ಬಳಸಿಕೊಂಡಿದ್ದಾನೆ. ವ್ಯಕ್ತಿಯೊಬ್ಬ ಟ್ರಾಫಿಕ್ ಜಾಮ್ ನಡುವೆ ಬೈಕ್ ಮೇಲೆ ತನ್ನ ಲ್ಯಾಪ್ ಟಾಪ್ ತೆರೆದು ಕೆಲಸ ಮಾಡಲು ಕುಳಿತುಕೊಂಡಿರುವ ದೃಶ್ಯ ಕಾಣಬಹುದು.

ಇದನ್ನೂ ಓದಿ: ಓವರ್ ಟೈಮ್ ಡ್ಯೂಟಿ ಮಾಡಿದ್ರೂ ಸಂಬಳ ಹೆಚ್ಚು ಕೊಡಲ್ಲ; ಮ್ಯಾನೇಜರ್ ವರ್ತನೆಗೆ ಬೇಸತ್ತು ಜಾಬ್ ರಿಸೈನ್ ಮಾಡಿದ ಉದ್ಯೋಗಿ

ಈ ವಿಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತಂತ್ರಜ್ಞಾನ ಅವಕಾಶಗಳನ್ನು ಸೃಷ್ಟಿಸುತ್ತಿದೆ, ಆದರೆ ವೈಯುಕ್ತಿಕ ಸಮಯವನ್ನು ಕಸಿದುಕೊಳ್ಳುತ್ತಿದೆ ಎಂದಿದ್ದಾರೆ. ಇನ್ನೊಬ್ಬರು, ನನ್ನ ಪರಿಸ್ಥಿತಿ ಕೂಡ ಹೀಗೆಯೇ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಕಾರ್ಪೊರೇಟ್ ಜಗತ್ತು ಉದ್ಯೋಗಿಗಳನ್ನು ಶೋಷಿಸುತ್ತಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version