ನವದೆಹಲಿ, ಜುಲೈ 23: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಇತ್ತೀಚೆಗೆ ವೇತನದಾರರಿಗೆ (Salaried Employees) ಒಂದು ಪ್ರಮುಖ ಜಾಗೃತಿ ಸಂದೇಶ ರವಾನಿಸಿದೆ. ಮ್ಯೂಚುಯಲ್ ಫಂಡ್‌ಗಳಲ್ಲಿ (Mutual Funds) ಹೆಚ್ಚಿನ ಲಾಭ ಗಳಿಸುವ ಆಸೆಯಿಂದ ಇಪಿಎಫ್ (EPF) ಖಾತೆಯಲ್ಲಿರುವ ಹಣವನ್ನು ಅವಧಿಗೂ ಮುನ್ನ ಹಿಂಪಡೆಯದಂತೆ ಇಪಿಎಫ್‌ಒ ತನ್ನ ಚಂದಾದಾರರಿಗೆ ಕಟ್ಟುನಿಟ್ಟಿನ ಸಲಹೆ ನೀಡಿದೆ.
ಸಾಮಾಜಿಕ ಜಾಲತಾಣ X ನಲ್ಲಿ “ಸಮಜ್ದಾರ್ ಕೋ EPF ಕಾಫಿ ಹೈ” (ಬುದ್ಧಿವಂತರಿಗೆ ಇಪಿಎಫ್ ಸಾಕು) ಎಂಬ ಸಾಲಿನೊಂದಿಗೆ ವಿಡಿಯೋ ಹಂಚಿಕೊಂಡಿರುವ ಇಪಿಎಫ್‌ಒ, ಇಪಿಎಫ್ ಮತ್ತು ಮ್ಯೂಚುಯಲ್ ಫಂಡ್‌ಗಳ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ವಿವರಿಸಿದೆ.
ಇಪಿಎಫ್ ಮತ್ತು ಮ್ಯೂಚುಯಲ್ ಫಂಡ್: ವ್ಯತ್ಯಾಸವೇನು?
ಇಪಿಎಫ್‌ಒ ಪ್ರಕಾರ, ಇವೆರಡೂ ಆರ್ಥಿಕ ಉತ್ಪನ್ನಗಳ ಉದ್ದೇಶ ಸಂಪೂರ್ಣವಾಗಿ ಭಿನ್ನವಾಗಿದೆ. ಇಪಿಎಫ್ ಎಂಬುದು ನಿವೃತ್ತಿಯ ನಂತರದ ಜೀವನಕ್ಕೆ ಕಡ್ಡಾಯ ಹಾಗೂ ಸುಸ್ಥಿರ ಆರ್ಥಿಕ ಭದ್ರತೆ ನೀಡುವ ಸರ್ಕಾರಿ ಯೋಜನೆಯಾಗಿದೆ. ಮ್ಯೂಚುಯಲ್ ಫಂಡ್‌ಗಳು ಕೇವಲ ಹಣ/ಸಂಪತ್ತನ್ನು ಬೆಳೆಸಲು ಬಳಸುವ ಮಾರುಕಟ್ಟೆ ಆಧಾರಿತ (Market-linked) ಐಚ್ಛಿಕ ಹೂಡಿಕೆ ಸಾಧನಗಳಾಗಿವೆ.
ಇಪಿಎಫ್‌ನ 5 ಪ್ರಮುಖ ಅನುಕೂಲಗಳು
- ಡಬಲ್ ಧಮಾಕ: ಇಪಿಎಫ್‌ನಲ್ಲಿ ನೌಕರ ಮಾತ್ರವಲ್ಲದೆ, ಆತನ ಸಂಸ್ಥೆ/ಮಾಲೀಕರು ಸಹ ಸಮಾನ ವಂತಿಕೆ ನೀಡುತ್ತಾರೆ. ಆದರೆ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆದಾರರೇ ಸಂಪೂರ್ಣ ಹಣ ಹಾಕಬೇಕಾಗುತ್ತದೆ.
- ಖಚಿತ ಮತ್ತು ಸುರಕ್ಷಿತ ರಿಟರ್ನ್ಸ್: ಸರ್ಕಾರವು ಪ್ರತಿ ವರ್ಷ ಇಪಿಎಫ್‌ಗೆ ನಿಗದಿತ ಬಡ್ಡಿದರವನ್ನು (ಆಕರ್ಷಕ ಬಡ್ಡಿ) ನೀಡುತ್ತದೆ. ಇದರಿಂದ ನಿವೃತ್ತಿ ನಿಧಿ ಸುರಕ್ಷಿತವಾಗಿ ಬೆಳೆಯುತ್ತದೆ.
- ಮಾರುಕಟ್ಟೆ ಏರಿಳಿತದಿಂದ ರಕ್ಷಣೆ: ಮ್ಯೂಚುಯಲ್ ಫಂಡ್‌ಗಳು ಶೇರ್ ಮಾರ್ಕೆಟ್‌ಗೆ ಒಳಪಟ್ಟಿರುವುದರಿಂದ ಅದರಲ್ಲಿ ನಷ್ಟದ ಅಪಾಯವಿರುತ್ತದೆ. ಆದರೆ ಇಪಿಎಫ್‌ನಲ್ಲಿ ಹೂಡಿಕೆ ಮಾಡಿದ ಹಣ ಸಂಪೂರ್ಣ ಸುರಕ್ಷಿತ.
- ಪಿಂಚಣಿ ಮತ್ತು ಉಚಿತ ಇನ್ಶೂರೆನ್ಸ್: ಇಪಿಎಫ್ ಸದಸ್ಯರಿಗೆ ನಿವೃತ್ತಿಯ ನಂತರ ‘ಇಪಿಎಸ್’ (EPS) ಮೂಲಕ ಆಜೀವ ಪಿಂಚಣಿ ಸಿಗುತ್ತದೆ. ಅಲ್ಲದೆ, ಅಕಸ್ಮಾತ್ ನೌಕರ ಮೃತಪಟ್ಟರೆ ‘ಇಡಿಎಲ್‌ಐ’ (EDLI) ಯೋಜನೆ ಅಡಿಯಲ್ಲಿ ಕುಟುಂಬಕ್ಕೆ ₹7 ಲಕ್ಷದವರೆಗೆ ವಿಮೆ ಪರಿಹಾರ ಲಭ್ಯವಿರುತ್ತದೆ.
- ಶಿಸ್ತುಬದ್ಧ ಉಳಿತಾಯ: ಪ್ರತಿ ತಿಂಗಳು ಸಂಬಳದಿಂದ ಹಣ ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳುವುದರಿಂದ, ನೌಕರರಿಗೆ ಅರಿಯದಂತೆ ದೊಡ್ಡ ನಿವೃತ್ತಿ ನಿಧಿ (Retirement Corpus) ರೂಪುಗೊಳ್ಳುತ್ತದೆ.
ಇದನ್ನೂ ಓದಿ: ಪಿಎಫ್ ಸದಸ್ಯರಿಗೆ ಪೆನ್ಷನ್; ಕನಿಷ್ಠ ಪಿಂಚಣಿಯನ್ನು 3,000 ಅಲ್ಲ, 7,500 ರೂಗೆ ಏರಿಸಬೇಕೆಂದು ಒತ್ತಾಯ; ಸರ್ಕಾರದ ಪ್ರತಿಕ್ರಿಯೆಯೇನು?
ಮ್ಯೂಚುಯಲ್ ಫಂಡ್‌ಗಳು ನಿಮ್ಮ ಒಟ್ಟಾರೆ ಹೂಡಿಕೆಯ ಭಾಗವಾಗಿರಲಿ (Diversified Portfolio). ಅಪಾಯ ತಡೆಯಬಲ್ಲ ಸಾಮರ್ಥ್ಯ (Risk Appetite) ಇದ್ದರೆ ಮ್ಯೂಚುಯಲ್ ಫಂಡ್‌ಗಳಲ್ಲಿ ಹೆಚ್ಚುವರಿ ಹಣ ಹೂಡಿಕೆ ಮಾಡಿ. ಆದರೆ, ನಿಮ್ಮ ನಿವೃತ್ತಿ ಜೀವನದ ಮೂಲ ಅಡಿಪಾಯವಾಗಿ ಇಪಿಎಫ್ ಅನ್ನು ಎಂದಿಗೂ ಮುರಿಯಬೇಡಿ ಎಂದು ಇಪಿಎಫ್‌ಒ ಸ್ಪಷ್ಟಪಡಿಸಿದೆ.
ಇಪಿಎಫ್‌ಗೆ ವಿಪಿಎಫ್ ಸೇರಿಸಿದರೆ ಕೋಟಿ ಸಾಧ್ಯ
ಇಪಿಎಫ್ ಸ್ಕೀಮ್ನಲ್ಲಿರುವ ಪ್ರಮುಖ ಫೀಚರ್ ಎಂದರೆ ಅದು ವಿಪಿಎಫ್. ಇದು ಉದ್ಯೋಗಿಗಳು ತಮ್ಮ ಕೊಡುಗೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಇಪಿಎಫ್ನಂತೆಯೇ ವಿಪಿಎಫ್ ಕೊಡುಗೆಯೂ ಸಂಬಳದಲ್ಲೇ ಮುರಿದುಕೊಳ್ಳುತ್ತದೆ. ಆದರೆ, ಉದ್ಯೋಗದಾತರಾದ ಕಂಪನಿಯ ಕೊಡುಗೆಯು ಇಪಿಎಫ್ ಅಕೌಂಟ್ಗೆ ಸೀಮಿತವಾಗಿರುತ್ತದೆ. ವಿಪಿಎಫ್ಗೆ ಇರುವುದಿಲ್ಲ.
ಈ ವಿಪಿಎಫ್ ಅನ್ನು ಬಳಸಿಕೊಂಡು ಉದ್ಯೋಗಿಗಳು ತಮ್ಮ ನಿವೃತ್ತಿ ಜೀವನಕ್ಕೆ ಭದ್ರ ಬುನಾದಿ ಹಾಕಬಹುದು. ಒಂದು ಕೋಟಿ ರೂ ಕಾರ್ಪಸ್ ನಿರ್ಮಿಸಲು ಸಾಧ್ಯ.
ಇದನ್ನೂ ಓದಿ: ಪಿಎಲ್ಐಗೆ ಮುಂದುವರಿದ ಭರ್ಜರಿ ಸ್ಪಂದನೆ; ಮಾರ್ಚ್ ವೇಳೆಗೆ 2.40 ಲಕ್ಷ ಕೋಟಿ ರೂ ಹೂಡಿಕೆ: ಸಚಿವ ಜಿತಿನ್ ಪ್ರಸಾದ
ಉದಾಹರಣೆಗೆ, ನೀವು 10 ವರ್ಷದಿಂದ ಕೆಲಸ ಮಾಡುತ್ತಿದ್ದು ನಿಮ್ಮ ಇಪಿಎಫ್ ಅಕೌಂಟ್ನಲ್ಲಿರುವ ಹಣ 6 ಲಕ್ಷ ರೂ ಇದೆ. ನೀವು ಇನ್ನೂ 20 ವರ್ಷ ಸೇವೆಯಲ್ಲಿರುತ್ತೀರಿ ಎಂದು ಭಾವಿಸೋಣ. ಹಾಗೆಯೇ, ಈಗಿರುವ ಶೇ. 8.25 ಬಡ್ಡಿದರವೇ ಮುಂದುವರಿಯುತ್ತದೆ ಎಂದುಕೊಳ್ಳೋಣ. ಈ 20 ವರ್ಷ ನಿಮ್ಮ ಇಪಿಎಫ್+ವಿಪಿಎಫ್ ಕೊಡುಗೆ ಒಟ್ಟು 11,000-12,000 ರೂ ಆಗಿದ್ದರೆ ಆಗ ನಿಮ್ಮ ಸಂಪತ್ತಿನ ಮೌಲ್ಯ 1 ಕೋಟಿ ರೂ ಮುಟ್ಟಬಲ್ಲುದು.
ನಿಮ್ಮ ಸೇವಾವಧಿ ಕಡಿಮೆ ಇದ್ದಾಗ ವಿಪಿಎಫ್ಗೆ ಕೊಡುಗೆ ಹೆಚ್ಚಿಸಬಹುದು. ಈ ರೀತಿ ಒಬ್ಬ ಉದ್ಯೋಗಿಯು ರಿಟೈರ್ಮೆಂಟ್ ಪ್ಲಾನ್ ಮಾಡಿಕೊಳ್ಳಬಹುದು. ಇಪಿಎಫ್‌ಗೆ ಮಾಡುವ ಹೂಡಿಕೆಯು ಸುಭದ್ರವಾಗಿರುತ್ತದೆ. ಹೆಚ್ಚುವರಿ ಸಂಪಾದನೆ ಇದ್ದು ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಬಯಸಿದರೆ, ಒಂದಷ್ಟು ಹಣವನ್ನು ರಿಟೈರ್ಮೆಂಟ್ಗೆಂದು ಮ್ಯೂಚುವಲ್ ಫಂಡ್ನಲ್ಲೂ ಹೂಡಿಕೆ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On – 3:17 pm, Thu, 23 July 26