ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು: ಮಾಕ್​​ಡ್ರಿಲ್​​ ಎಂದು ತಿಳಿಯದೆ ಕಂಗಾಲಾದ ಜನ – Kannada News | NSG Commandos Conduct Intensive Mock Drill in Mangaluru Simulating Counter Terrorism Operations

ಮಂಗಳೂರು, ಜುಲೈ 23: ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಕಮಾಂಡೋಗಳು ಮಂಗಳೂರಿನಲ್ಲಿ ಬೃಹತ್ ಅಣಕು ಕಾರ್ಯಾಚರಣೆಯನ್ನು ನಡೆಸಿವೆ. ಭಯೋತ್ಪಾದಕ ದಾಳಿಗಳನ್ನು ಎದುರಿಸಲು ಮತ್ತು ಸಂಕಷ್ಟದ ಸಂದರ್ಭಗಳನ್ನು ನಿರ್ವಹಿಸಲು ಕೈಗೊಳ್ಳುವ ಕ್ರಮಗಳನ್ನು ಈ ಮಾಕ್​​ಡ್ರಿಲ್​​ನಲ್ಲಿ ಪ್ರದರ್ಶಿಸಲಾಗಿದೆ. ಕಡಿಮೆ ಎತ್ತರದಲ್ಲಿ ಹಾರುತ್ತಿದ್ದ ಸೇನಾ ಹೆಲಿಕಾಪ್ಟರ್‌ಗಳನ್ನು ನೋಡಿ ಸ್ಥಳೀಯ ನಿವಾಸಿಗಳಲ್ಲಿ ಕೆಲ ಕಾಲ ಆತಂಕ ಮನೆ ಮಾಡಿತ್ತು. ಆದರೆ ಇದು ಕೇವಲ ತಾಲೀಮು ಎಂದು ತಿಳಿದ ನಂತರ ಸಾರ್ವಜನಿಕರು ನಿರಾಳರಾದರು. ಎನ್ಎಂಪಿಎ, ಇನ್ಫೋಸಿಸ್ ಮತ್ತು ಕೆಲವು ಶಿಕ್ಷಣ ಸಂಸ್ಥೆಗಳ ಬಳಿ ಈ ಡ್ರಿಲ್ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹನಿಮೂನ್​ಗೆ ಕರೆದೊಯ್ದು ಪತಿ ಹತ್ಯೆ ಪ್ರಕರಣ: ಆರೋಪಿ ಸೋನಮ್ ರಘುವಂಶಿ ಜಾಮೀನು ರದ್ದು, ಶರಣಾಗಲು 3 ವಾರ ಗಡುವು – Kannada News | Honeymoon Death Case, Supreme Court Cancels Sonam Raghuvanshi’s Bail; 3 Weeks to Surrender

ನವದೆಹಲಿ, ಜುಲೈ 23: ಮೇಘಾಲಯಕ್ಕೆ ಹನಿಮೂನ್(Honeymoon)​ಗೆಂದು ತೆರಳಿದ್ದಾಗ ಪತಿ ರಾಜಾ ರಘುವಂಶಿ ಅವರನ್ನು ಕೊಲೆ ಮಾಡಿದ  ಪ್ರಕರಣದ ಪ್ರಮುಖ ಆರೋಪಿ ಸೋನಮ್ ರಘುವಂಶಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಪಿ.ಬಿ. ವರಾಳೆ ಅವರಿದ್ದ ಪೀಠವು ಮೇಘಾಲಯ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ವಜಾಗೊಳಿಸಿದ್ದು, ಮೂರು ವಾರಗಳ ಒಳಗಾಗಿ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗುವಂತೆ ಸೋನಂ ರಘುವಂಶಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಪ್ರಕರಣದ ವಾಸ್ತವಾಂಶಗಳು ಹಾಗೂ ಆರೋಪಗಳ ಗಂಭೀರತೆಯನ್ನು ಗಮನಿಸಿದಾಗ ಆರೋಪಿಯು ಜಾಮೀನಿಗೆ ಅರ್ಹಳಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ಈ ಹಿಂದೆ ಮೂರು ಬಾರಿ ಜಾಮೀನು ನಿರಾಕರಿಸಲ್ಪಟ್ಟಿದ್ದನ್ನು ನ್ಯಾಯಾಲಯ ಉಲ್ಲೇಖಿಸಿದೆ. ಪ್ರಸ್ತುತ ಪ್ರಕರಣದ ವಿಚಾರಣೆ ಪ್ರಾರಂಭವಾಗಿದ್ದು, ಈ ನಿರ್ಣಾಯಕ ಹಂತದಲ್ಲಿ ಆರೋಪಿ ಹೊರಗಿದ್ದರೆ ನ್ಯಾಯಸಮ್ಮತ ವಿಚಾರಣೆಗೆ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಅಡ್ಡಿಯಾಗಬಹುದು ಎಂದು ನ್ಯಾಯಾಲಯ ಹೇಳಿದೆ.

ಮೂರು ವಾರಗಳಲ್ಲಿ ಶರಣಾದ ನಂತರ, ಮುಂದಿನ ಆರು ತಿಂಗಳೊಳಗೆ ಪ್ರಕರಣದ ವಿಚಾರಣೆ ಪೂರ್ಣಗೊಳ್ಳದಿದ್ದರೆ ಆರೋಪಿಯು ಮತ್ತೆ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್ ಸ್ವಾತಂತ್ರ್ಯ ನೀಡಿದೆ.

ಮತ್ತಷ್ಟು ಓದಿ: ಪುಣೆಯಲ್ಲಿ ಕಾರಿನ ಮೇಲೆ ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ

ಪ್ರಕರಣದ ಹಿನ್ನೆಲೆ ಏನು?

ಇಂದೋರ್ ಮೂಲದ ಸೋನಮ್ ರಘುವಂಶಿ ಹಾಗೂ ಆಕೆಯ ಪತಿ ರಾಜಾ ರಘುವಂಶಿ ಮೇ 2025 ರಲ್ಲಿ ಮೇಘಾಲಯದ ಪೂರ್ವ ಖಾಸಿ ಬೆಟ್ಟಗಳಿಗೆ ಹನಿಮೂನ್​ಗೆಂದು ತೆರಳಿದ್ದರು. ಅಲ್ಲಿ ಪತಿಯನ್ನು ಕೊಲೆ ಮಾಡಲು ಆಕೆ ಸಂಚು ರೂಪಿಸಿದ್ದಳು ಎನ್ನಲಾಗಿದೆ. ಜೂನ್ 2025 ರಲ್ಲಿ ಆಕೆಯನ್ನು ಉತ್ತರ ಪ್ರದೇಶದ ಗಾಜಿಪುರದಲ್ಲಿ ಬಂಧಿಸಿ, ಕೊಲೆ ಮತ್ತು ಸಂಚು ರೂಪಿಸಿದ ಆರೋಪದಡಿ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು.

ಏಪ್ರಿಲ್ 2026 ರಲ್ಲಿ, ಪೋಲಿಸರು ಬಂಧನದ ಸೂಕ್ತ ಕಾರಣಗಳನ್ನು ನೀಡಲು ವಿಫಲರಾಗಿದ್ದಾರೆ ಎಂಬ ತಾಂತ್ರಿಕ ಕಾರಣ ನೀಡಿ ವಿಚಾರಣಾ ನ್ಯಾಯಾಲಯ ಜಾಮೀನು ನೀಡಿತ್ತು. ಜೂನ್‌ನಲ್ಲಿ ಮೇಘಾಲಯ ಹೈಕೋರ್ಟ್ ಕೂಡ ಇದನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಮೇಘಾಲಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ವಿಚಾರಣೆಯ ಸಂದರ್ಭದಲ್ಲಿ ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶ ಮತ್ತು ಯುವಜನರ ಮಾನಸಿಕ ಸ್ಥಿತಿಯ ಕುರಿತು ನ್ಯಾಯಾಲಯ ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನಡುವೆ ಆಸಕ್ತಿಕರ ಚರ್ಚೆ ನಡೆಯಿತು. ನ್ಯಾಯಮೂರ್ತಿ ವರಾಳೆ ಮಾತನಾಡಿ, ಇಂದಿನ ಪೀಳಿಗೆಗೆ ಜ್ಞಾನ ಹೆಚ್ಚಿರಬಹುದು, ಆದರೆ ಮಾನಸಿಕ ಒತ್ತಡಗಳನ್ನು ನಿಭಾಯಿಸುವ ವಿಷಯದಲ್ಲಿ ಅವರು ಬಹಳ ದುರ್ಬಲರಾಗಿದ್ದಾರೆ ಎಂದಿದ್ದಾರೆ. ಪ್ರಕರಣದಲ್ಲಿ ಒಟ್ಟು 94 ಸಾಕ್ಷಿಗಳಿದ್ದು, ಇದುವರೆಗೆ ಕೇವಲ ನಾಲ್ವರ ವಿಚಾರಣೆ ಮಾತ್ರ ಪೂರ್ಣಗೊಂಡಿದೆ. ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಸೋನಂ ರಘುವಂಶಿ ಮತ್ತೆ ಜೈಲು ಪಾಲಾಗುವುದು ಖಚಿತವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:59 pm, Thu, 23 July 26

Source link

Video: ತನ್ನ ಮೇಲೆ ಅಟ್ಯಾಕ್‌ ಮಾಡಲು ಬಂದ ಕಿಂಗ್ ಕೋಬ್ರಾವನ್ನೇ ಹಿಮ್ಮೆಟ್ಟಿಸಿದ ಬೆಕ್ಕು – Kannada News | Big fight Between Cat and King Cobra, video goes viral

ನೀವು ಹಾವು ಮುಂಗುಸಿಯ ಕಾದಾಟದ ವಿಡಿಯೋ ನೋಡಿರುತ್ತೀರಿ. ಆದರೆ ಇಲ್ಲೊಂದು ಬೆಕ್ಕು ಹಾಗೂ ಕಿಂಗ್ ಕೋಬ್ರಾದೊಂದಿಗೆ ಕಾದಾಟಕ್ಕೆ ಇಳಿದಿದೆ. ಬೆಕ್ಕೊಂದು ತನ್ನನ್ನು ಕೆಣಕಲು ಬಂದ ಕಿಂಗ್ ಕೋಬ್ರಾವನ್ನೇ (King Cobra) ಒಂದು ಕ್ಷಣ ಬೆದರಿಸಿದೆ. ಈ ಬಿಗ್ ಫೈಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.

ಘರ್ ಕೆ ಕಲೇಶ್ (gharkekalesh) ಹೆಸರಿನ ಎಕ್ಸ್ ಖಾತೆಯಲ್ಲಿ ಬೆಕ್ಕು ಹಾಗೂ ಕಿಂಗ್ ಕೋಬ್ರಾದ ಕಾದಾಟದ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಬಯಲು ಪ್ರದೇಶವೊಂದರಲ್ಲಿ ಬೆಕ್ಕು ಹಾಗೂ ಕಿಂಗ್ ಕೋಬ್ರಾ ಮುಖಾಮುಖಿಯಾಗುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಪ್ರಾರಂಭದಲ್ಲಿ ಕೋಬ್ರಾವು ತನ್ನ ಹೆಡೆಯನ್ನು ಬಿಚ್ಚಿ ಬೆಕ್ಕನ್ನು ಹೆದರಿಸುತ್ತವೆ. ಆದರೆ ಬೆಕ್ಕು ಮಾತ್ರ ಏನೇ ಮಾಡಿದ್ರೂ ಭಯ ಪಡದೇ ಈ ವಿಷಕಾರಿ ಹಾವಿನ ಎದುರೇ ಸುಮ್ಮನೆ ಕುಳಿತುಕೊಳ್ಳುತ್ತದೆ. ಬೆಕ್ಕಿನ ಮೇಲೆ ಕಿಂಗ್ ಕೋಬ್ರಾ ದಾಳಿಗೆ ಮುಂದಾಗುತ್ತದೆ. ಬೆಕ್ಕು ತನ್ನ ಚತುರತೆಯಿಂದ ತಪ್ಪಿಸಿಕೊಳ್ಳುತ್ತದೆ. ತದನಂತರದಲ್ಲಿ ಬೆಕ್ಕಿಗೆ ತನ್ನ ಪಂಜದಿಂದ ಪಂಜದಿಂದ ಹಾವನ್ನು ಹೆದರಿಸಿ, ಎಚ್ಚರಿಕೆ ನೀಡುವಂತಿದೆ. ಕೊನೆಗೆ ಕಿಂಗ್‌ ಕೋಬ್ರಾ ಅಲ್ಲಿಂದ ಹೊರಟು ಹೋಗಿದೆ.

ಇದನ್ನೂ ಓದಿ: ಹಠಾತ್ತನೆ ಯುವಕನ ಮೇಲೆ ದಾಳಿಗೆ ಬಂದ ನಾಯಿಗಳ ಹಿಂಡು, ಆಮೇಲಾಗಿದ್ದೇನು ನೋಡಿ?

ಈ ವಿಡಿಯೋ ನಲವತ್ತೆಂಟು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಹಾವಿಗೆ ಬೆಕ್ಕಿನ ವೇಗವನ್ನು ಹಿಂದಿಕ್ಕಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಬೆಕ್ಕನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಬೇಡಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಕಿಂಗ್ ಕೋಬ್ರಾದ ಎದುರಿಗೆ ಕಾದಾಡಲು ಧೈರ್ಯ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:53 pm, Thu, 23 July 26

Source link

KPSCಯಲ್ಲಿ ಮತ್ತೊಂದು ಬ್ರಹ್ಮಾಂಡ ಅಕ್ರಮ? 80 ಲಕ್ಷ ರೂಪಾಯಿಗೆ ಒಂದು ಪಶು ವೈದ್ಯಾಧಿಕಾರಿ ಸೀಟ್​​ ಬಿಕರಿ? – Kannada News | KPSC Recruitment Scam: Over 50 Candidates Rush to Police Station Alleging Veterinary Officer Posts Sold for 80 Lakh Rupees Each

KPSCಯಲ್ಲಿ ಮತ್ತೊಂದು ಬ್ರಹ್ಮಾಂಡ ಅಕ್ರಮ?

ಬೆಂಗಳೂರು, ಜುಲೈ 23: ಸ್ವಜನಪಕ್ಷಪಾತ ಸೇರಿದಂತೆ ವಿವಿಧ ಗಂಭೀರ ಆರೋಪಗಳ ಹಿನ್ನೆಲೆ ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತ್ತಿನ ನಡುವೆಯೇ ಕೆಪಿಎಸ್​​ಸಿಯಲ್ಲಿ ಮತ್ತೊಂದು ಬ್ರಹ್ಮಾಂಡ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಗೋಲ್ಮಾಲ್ ನಡೆದಿದೆ ಎಂದು ದೂರಲಾಗಿದ್ದು, ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಗೊಳಿಸುವಂತೆ ಆಕಾಂಕ್ಷಿಗಳು ಒತ್ತಾಯಿಸಿದ್ದಾರೆ. ನೇಮಕಾತಿಯಲ್ಲಿ ಶೇ.60ರಷ್ಟು ಅಕ್ರಮ ಆಗಿರುವ ಬಗ್ಗೆ ಆರೋಪಿಸಲಾಗಿದ್ದು, ಇದರಲ್ಲಿಯೂ ಇತ್ತೀಚೆಗಷ್ಟೇ ಅಮಾನತ್ತಾಗಿರುವ ಶಿವಶಂಕರಪ್ಪ ಸಾಹುಕಾರ್ ಹೆಸರು ತಳಕುಹಾಕಿಕೊಂಡಿದೆ.

80 ಲಕ್ಷ ರೂಪಾಯಿಗೆ ಒಂದು ಸೀಟ್​​ ಬಿಕರಿ ಆರೋಪ

ಜನವರಿ 8 ರಂದು 400 ಪಶು ವೈದ್ಯಾಧಿಕಾರಿಗಳ ಹುದ್ದೆಗೆ ಪರೀಕ್ಷೆ ನಡೆದಿದ್ದು, ಜುಲೈ 17ರಂದು ಹೊರಬಿದ್ದ ಫಲಿತಾಂಶ ಕಂಡು ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಒಂದು ಹುದ್ದೆ ಬರೋಬ್ಬರಿ 80 ಲಕ್ಷ ರೂಪಾಯಿಗೆ ಬಿಕರಿ ಆಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ 50ಕ್ಕೂ ಹೆಚ್ಚು ಅಭ್ಯರ್ಥಿಗಳು ಆಗಮಿಸಿ ವಿಧಾನಸೌಧ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರೋದೀಗ ಹೊಸ ಚರ್ಚೆ ಹುಟ್ಟುಹಾಕಿದೆ.

ಇದನ್ನೂ ಓದಿ: ‘ವ್ಯವಸ್ಥೆ ಶುದ್ಧೀಕರಿಸದಿದ್ದರೆ ಅರ್ಹತೆಯಿರುವ ಯುವಜನತೆ ನರಳುತ್ತಾರೆ’; KPSC ಅಧ್ಯಕ್ಷಗೆ ಶಾಕ್ ಕೊಟ್ಟ ಕೋರ್ಟ್

ಶಿವಶಂಕರಪ್ಪ, ಸೇರಿ ಹಲವು ಕೆಪಿಎಸ್ಸಿ ಸದಸ್ಯರೂ ಅಕ್ರಮದಲ್ಲಿ ಭಾಗಿ ಆಗಿದ್ದಾರೆ. ಮಧ್ಯವರ್ತಿಗಳ ಮೂಲಕ ಭಾರೀ ಮಟ್ಟದಲ್ಲಿ ವ್ಯವಹಾರ ನಡೆದಿದೆ. ಇಂಥವರ ವಿರುದ್ಧ ಕೇವಲ ಕ್ರಮವಲ್ಲ, ಗಲ್ಲು ಶಿಕ್ಷೆ ಆಗಬೇಕು ಎಂದು ವಿಧ್ಯಾರ್ಥಿ ಸಂಘಟನೆ ಅಧ್ಯಕ್ಷ ಕಾಂತ್ ಕುಮಾರ್ ಆಗ್ರಹಿಸಿದ್ದಾರೆ. ಗ್ರೂಪ್ ಎ ಹುದ್ದೆಯಾಗಿರುವ ಪಶು ವೈದ್ಯಾಧಿಕಾರಿಗಳ ಸೀಟ್​​​ಗೆ ದುಡ್ಡು ಕೊಡಿ ಎಂದು ಅಭ್ಯರ್ಥಿಗಳಿಗೆ ಕರೆ ಮಾಡಿ ಬೇಡಿಕೆ ಇಟ್ಟಿದ್ದಾರೆ . ಹೀಗಾಗಿ ನೇಮಕಾತಿ ಪ್ರಕ್ರಿಯೆಯನ್ನೇ ರದ್ದು ಮಾಡಬೇಕು. UPSC ಬರೆದ ಅಭ್ಯರ್ಥಿಗಳು ಪಾಸ್ ಆಗಲು ಕಷ್ಟ ಪಟ್ಟಿದ್ದರೆ, ಶಿವಶಂಕರಪ್ಪ ಸಂಬಂಧಿಕರು ಮೆರಿಟ್ ಅಂಕ ಗಳಿಸಿದ್ದಾರೆ. ಪ್ರತಿಭಾವಂತ ವಿಧ್ಯಾರ್ಥಿಗಳು 300 ಅಂಕ ದಾಟುವುದು ಕಷ್ಟ ಇರುವಾಗ ಇದು ಹೇಗೆ ಸಾಧ್ಯ ಎಂದವರು ಪ್ರಶ್ನಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:36 pm, Thu, 23 July 26

Source link

RCB ಆಟಗಾರರಿಗೆ ಅನ್ಯಾಯ: ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ – Kannada News | Sadagoppan Ramesh Fumes After Zero RCB Players Named In India Squad

ಭಾರತ ಮತ್ತು ಝಿಂಬಾಬ್ವೆ ನಡುವಣ ಟಿ20 ಸರಣಿಯು ಇಂದಿನಿಂದ ಶುರುವಾಗಲಿದೆ. ಈ ಸರಣಿ ಆರಂಭಕ್ಕೆ ಕೌಂಟ್​ ಡೌನ್ ಶುರುವಾದರೂ ಟೀಮ್ ಇಂಡಿಯಾದ ಆಯ್ಕೆ ಬಗ್ಗೆಗಿನ ಚರ್ಚೆ ನಿಂತಿಲ್ಲ. ಇದಕ್ಕೆ ಮುಖ್ಯ ಕಾರಣ ಝಿಂಬಾಬ್ವೆ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾದ ತಂಡದಲ್ಲಿ ಸತತ ಎರಡು ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಒಬ್ಬೇ ಒಬ್ಬ ಆಟಗಾರ ಇಲ್ಲದಿರುವುದು. ಬಿಸಿಸಿಐ ಆಯ್ಕೆ ಸಮಿತಿಯ ಈ ಧೋರಣೆಯನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ಸಡಗೋಪನ್ ರಮೇಶ್ “ಸಂಪೂರ್ಣ ತಾರತಮ್ಯ ಮತ್ತು ಬೂಟಾಟಿಕೆ” ಕರೆದಿದ್ದಾರೆ.

ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ  ಆಯ್ಕೆ ಸಮಿತಿಯ ನಿರ್ಧಾರಗಳನ್ನು ಸಡಗೋಪನ್ ರಮೇಶ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಪ್ರಶ್ನಿಸಿದ್ದಾರೆ.

ಕೆಲವು ಆಟಗಾರರನ್ನು ಆಯ್ಕೆ ಮಾಡಲು ಐಪಿಎಲ್ ಪ್ರದರ್ಶನವನ್ನು ಪ್ರಮುಖ ಮಾನದಂಡವಾಗಿ ಬಳಸುವ ಆಯ್ಕೆಗಾರರು, ಆರ್‌ಸಿಬಿ ಆಟಗಾರರ ವಿಷಯದಲ್ಲಿ ಅದನ್ನು ಸಂಪೂರ್ಣವಾಗಿ ಮರೆತಿದ್ದಾರೆ ಎಂದು ರಮೇಶ್ ಆರೋಪಿಸಿದ್ದಾರೆ.

ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣಕ್ಕೆ ಶ್ರೇಯಸ್ ಅಯ್ಯರ್‌ಗೆ ತಂಡದ ನಾಯಕತ್ವ ಹಾಗೂ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆದರೆ ಇದೇ ನಿಯಮ ಆರ್‌ಸಿಬಿ ಆಟಗಾರರಿಗೆ ಏಕೆ ಅನ್ವಯಿಸಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಆರ್‌ಸಿಬಿ ಆಟಗಾರರಿಗೆ ಅನ್ಯಾಯ:

2025 ಮತ್ತು 2026ರ ಐಪಿಎಲ್ ಸೀಸನ್‌ಗಳಲ್ಲಿ ಸತತವಾಗಿ ಟ್ರೋಫಿ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಆರ್‌ಸಿಬಿ ತಂಡದ ರಜತ್ ಪಾಟೀದಾರ್ ಅಥವಾ ಭುವನೇಶ್ವರ್ ಕುಮಾರ್ ಅವರಂತಹ ಪ್ರಮುಖ ಆಟಗಾರರನ್ನು ಕಡೆಗಣಿಸಿರುವುದು ಸರಿಯಲ್ಲ. ಒಬ್ಬರಿಗೆ ಒಂದು ನ್ಯಾಯ, ಮತ್ತೊಬ್ಬರಿಗೆ ಅನ್ಯಾಯ ಮಾಡಬಾರದು ಎಂದು ಸಡಗೋಪನ್ ರಮೇಶ್ ಹೇಳಿದ್ದಾರೆ.

ಐಪಿಎಲ್ ಟೂರ್ನಿಯ ದ್ವಿತೀಯಾರ್ಧದಲ್ಲಿ ತಮ್ಮದೇ ಫ್ರಾಂಚೈಸಿಯ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ರವಿ ಬಿಷ್ಣೋಯ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿರುವುದನ್ನು ಆಯ್ಕೆ ಸಮಿತಿಯ ದ್ವಂದ್ವ ನೀತಿಗೆ ಹಿಡಿದ ಕನ್ನಡಿ. ನೀವು ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಮಾಡಿದ್ದರೆ ಆರ್​ಸಿಬಿ ಆಟಗಾರರಿಗೆ ಚಾನ್ಸ್ ಸಿಗಬೇಕಿತ್ತು. ಇಲ್ಲಿ ನೀವು ನಿಮಗೆ ಬೇಕಾದವರನ್ನು ಮಾತ್ರ ಆಯ್ಕೆ ಮಾಡಿದ್ದೀರಿ ಎಂದು ಸಡಗೋಪನ್ ರಮೇಶ್ ಆಕ್ರೋಶ ಹೊರಹಾಕಿದ್ದಾಋಎ.

ರ‍್ಯಾಂಕ್ ಮಾನದಂಡ:

ಒಂದು ವೇಳೆ 104 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ಅದರ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆದರೆ, ಅತಿ ಹೆಚ್ಚು ಅಂಕ ಗಳಿಸಿದ ಮೊದಲ 10 ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದು ಸಾಮಾನ್ಯ ಮತ್ತು ನ್ಯಾಯಯುತ ನಿಯಮವಾಗಿದೆ ಎಂದು ರಮೇಶ್ ಹೇಳಿದ್ದಾರೆ.

ಇದೇ ನಿಯಮವನ್ನು ಐಪಿಎಲ್‌ಗೆ ಹೋಲಿಸಿದರೆ, 2026ರ ಐಪಿಎಲ್ ಸೀಸನ್‌ನಲ್ಲಿ ಕನಿಷ್ಠ ಒಂದು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ರೇಸ್‌ನಲ್ಲಿದ್ದ ಒಟ್ಟು ಬೌಲರ್‌ಗಳ ಸಂಖ್ಯೆ 104. ಈ ಪೈಕಿ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ 10 ಬೌಲರ್‌ಗಳಲ್ಲಿ ಐದು ಜನ ಭಾರತೀಯರೇ ಇದ್ದಾರೆ. ಈ ಟಾಪ್ 10 ಪಟ್ಟಿಯಲ್ಲಿ ಆರ್‌ಸಿಬಿ ತಂಡದ ಭುವನೇಶ್ವರ್ ಕುಮಾರ್ (28 ವಿಕೆಟ್) ಕೂಡ ಒಬ್ಬರಾಗಿದ್ದಾರೆ.  ಪರೀಕ್ಷೆಯಲ್ಲಿ ಟಾಪ್ ಅಂಕ ಗಳಿಸಿದ ವಿದ್ಯಾರ್ಥಿಯಂತೆ ಅತ್ಯುತ್ತಮ ಪ್ರದರ್ಶನ ನೀಡಿದ್ದರೂ, ಅವರನ್ನು ಝಿಂಬಾಬ್ವೆ ಸರಣಿಗೆ ಆಯ್ಕೆ ಮಾಡದಿರುವುದು ಸಂಪೂರ್ಣ ತಾರತಮ್ಯ ಎಂದು ಸಡಗೋಪನ್ ರಮೇಶ್ ಕಿಡಿಕಾರಿದ್ದಾರೆ.

ಸರಳವಾಗಿ ಹೇಳುವುದಾದರೆ, “ಅತಿ ಹೆಚ್ಚು ವಿಕೆಟ್ ಪಡೆದು ‘ಪರೀಕ್ಷೆ’ಯಲ್ಲಿ ಪಾಸ್ ಆದ ಟಾಪ್ ಆಟಗಾರರನ್ನು ಬಿಟ್ಟು, ಆಯ್ಕೆ ಸಮಿತಿಯು ತನಗೆ ಇಷ್ಟ ಬಂದವರನ್ನು ತಂಡಕ್ಕೆ ಸೇರಿಸಿಕೊಂಡಿದೆ” ಎಂಬುದು ಸಡಗೋಪನ್ ರಮೇಶ್ ಅವರ ನೇರ ಆರೋಪವಾಗಿದೆ.

ಇದನ್ನೂ ಓದಿ: ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಕ್ರಿಕೆಟ್​ ಯಾಕಿಲ್ಲ? ಇಲ್ಲಿದೆ ಉತ್ತರ

ಒಟ್ಟಾರೆಯಾಗಿ ಹೇಳುವುದಾದರೆ, ಸತತ ಎರಡು ಬಾರಿ ಐಪಿಎಲ್ ಮುಕುಟ ಧರಿಸಿದರೂ ಆರ್‌ಸಿಬಿ ಆಟಗಾರರನ್ನು ಕಡೆಗಣಿಸಿರುವುದು ಬಿಸಿಸಿಐ ಆಯ್ಕೆ ಮಾನದಂಡಗಳ ಮೇಲೆಯೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ.

Source link

ಬೊಮ್ಮಸಂದ್ರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಸಿಲಿಂಡರ್ ಸ್ಫೋಟ!: 8ಕ್ಕೂ ಹೆಚ್ಚು ಕಾರ್ಮಿಕರಿಗೆ ಗಂಭೀರ ಗಾಯ – Kannada News | Bommasandra Gas Leak Tragedy: Anekal Cylinder Blast Injures 8 Workers

ಆನೇಕಲ್, ಜು.23: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಭೀಕರ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, 8ಕ್ಕೂ ಹೆಚ್ಚು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ವಾಸವಿದ್ದ ಕಟ್ಟಡದಲ್ಲಿ ಇಂದು ಮುಂಜಾನೆ ಸುಮಾರು 6 ಗಂಟೆಯ ವೇಳೆಗೆ ಈ ದುರಂತ ಸಂಭವಿಸಿದೆ. ಬುಧವಾರ ರಾತ್ರಿ ಕೊಠಡಿಯಲ್ಲಿದ್ದ ಸಿಲಿಂಡರ್‌ನ ಗ್ಯಾಸ್ ಲೀಕ್ ಆಗಿತ್ತು. ಇದನ್ನು ಗಮನಿಸದ ಕಾರ್ಮಿಕರು, ಬೆಳಿಗ್ಗೆ ಎದ್ದು ಕೊಠಡಿಯ ಲೈಟ್ ಆನ್ ಮಾಡುತ್ತಿದ್ದಂತೆ ಒಮ್ಮೆಗೆ ವಿದ್ಯುತ್ ಸಂಚಾರದಿಂದ ಗ್ಯಾಸ್ ಸ್ಪೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಕೊಠಡಿಗಳಲ್ಲಿ ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿ ಉರಿದಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸ್ಫೋಟದ ರಭಸಕ್ಕೆ ಕಟ್ಟಡದ ಬಾಗಿಲುಗಳು ಮತ್ತು ಕಿಟಕಿಗಳು ಪುಡಿಪುಡಿಯಾಗಿವೆ. ಈ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡ ಎಂಟಕ್ಕೂ ಹೆಚ್ಚು ಕಾರ್ಮಿಕರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿ, ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ನಮ್ಮ ಪ್ರತಿಭಟನೆ: ಅಭಿಜಿತ್ ದೀಪ್ಕೆ – Kannada News | CJP Demands Education Minister Dharmendra Pradhans Resignation Amid NEET Paper Leak Protest

ನವದೆಹಲಿ, ಜುಲೈ 23: ನೀಟ್ ಪರೀಕ್ಷಾ ಅಕ್ರಮದ ಕುರಿತು ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿದ್ದು, ಸಿಜೆಪಿ (ಕಾಕ್ರೋಚ್ ಜನತಾ ಪಾರ್ಟಿ) ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪ್ರಬಲವಾಗಿ ಆಗ್ರಹಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಯುವಜನರ ಹಿತಾಸಕ್ತಿ ಕಾಪಾಡುವ ಕುರಿತು ಟ್ವೀಟ್ ಮಾಡಿದ ಬೆನ್ನಲ್ಲೇ, ಸಿಜೆಪಿ ಪ್ರಧಾನಿ ಮೋದಿ ಅವರ ಟ್ವೀಟ್‌ಗೆ ತಿರುಗೇಟು ನೀಡಿದೆ. ಮೊದಲು ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ.

ಸಿಜೆಪಿಯ ಸ್ಥಾಪಕ ಅಭಿಜೀತ್ ದೀಪ್ಕೆ ಅವರು, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ತಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಈ ಹೋರಾಟ ಆರಂಭದಿಂದಲೂ ಶಿಕ್ಷಣ ಸಚಿವರ ರಾಜೀನಾಮೆಯನ್ನೇ ಮುಖ್ಯ ಬೇಡಿಕೆಯಾಗಿ ಇಟ್ಟುಕೊಂಡಿದೆ. ನೀಟ್ ಅಕ್ರಮ ವಿಚಾರ ದಿನದಿಂದ ದಿನಕ್ಕೆ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದ್ದು, ಪ್ರತಿಭಟನೆಯು ಮತ್ತಷ್ಟು ಉಗ್ರ ರೂಪ ಪಡೆದುಕೊಂಡಿದೆ.

ನೀಟ್ ವಿಚಾರವು ದಿನದಿಂದ ದಿನಕ್ಕೆ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದ್ದು, ಈ ಹೋರಾಟದ ದಿಕ್ಕು ದಾರಿ ತಪ್ಪುತ್ತಿದೆಯೇ ಎಂಬ ಮಾತುಗಳೂ ಕೇಳಿಬರುತ್ತಿವೆ. ಸಂಜೆ ವೇಳೆಗೆ ಪ್ರತಿಭಟನೆ ವೇಳೆ ಸಂಘರ್ಷಗಳು ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಿಂಚಿನ ಸಂಚಾರ; ಸ್ಟಾರ್ಟಪ್​ಗಳ ಸಂಖ್ಯೆ 450ಕ್ಕೂ ಅಧಿಕ; IN-SPACe ಬೆಂಬಲಕ್ಕೆ ಭರ್ಜರಿ ಸ್ಪಂದನೆ – Kannada News | Indian space sector has over 450 startups, IN SPACe receives over 800 applications in 4 years

ಸ್ಕೈರೂಟ್​ನ ವಿಕ್ರಮ್ ರಾಕೆಟ್ ಉಡಾವಣೆImage Credit source: PTI

ನವದೆಹಲಿ, ಜುಲೈ 23: ಭಾರತೀಯ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಹೂಡಿಕೆಗೆ ಮುಕ್ತಗೊಳಿಸಿದ ನಂತರ ದೇಶದಲ್ಲಿ ಬಾಹ್ಯಾಕಾಶ ನವೋದ್ಯಮಗಳ (Space Startups) ಕ್ರಾಂತಿಯೇ ಸಂಭವಿಸಿದೆ. ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದ (IN-SPACe – Indian National Space Promotion and Authorisation Centre) ಮಾಹಿತಿಯಂತೆ, ಕಳೆದ ನಾಲ್ಕು ವರ್ಷಗಳಲ್ಲಿ ಖಾಸಗಿ ವಲಯದಿಂದ 800ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಎಎಫ್​ಐನ ಬಾಹ್ಯಾಕಾಶ ನೀತಿ ಸಮ್ಮೇಳನ 2026 ಅನ್ನು (AIFI space policy conference) ಉದ್ದೇಶಿಸಿ ಮಾತನಾಡುತ್ತಿದ್ದ IN-SPACe ನ ಪ್ರೋಗ್ರಾಮ್ ಮ್ಯಾನೇಜ್ಮೆಂಟ್ ಮತ್ತು ಆಥರೈಸೇಶನ್ ಡೈರೆಕ್ಟೋರೇಟ್​ನ ನಿರ್ದೇಶಕ ಪಿ.ಕೆ. ಜೈನ್ ಅವರು ಸರ್ಕಾರದಿಂದ ಕೈಗೊಳ್ಳಲಾದ ಸುಧಾರಣೆಗಳು ಹಾಗೂ ಇತರ ಉಪಕ್ರಮಗಳು ಈ ಕ್ಷೇತ್ರಕ್ಕೆ ಒಂದು ನಿರ್ದಿಷ್ಟತೆ ತಂದುಕೊಟ್ಟಿದೆ ಎಂದಿದ್ದಾರೆ. ಜೈನ್ ಅವರು ಈ ಕಾನ್ಫೆರೆನ್ಸ್​ನಲ್ಲಿ ನೀಡಿದ ಕೆಲ ಕುತೂಹಲಕಾರಿ ಮಾಹಿತಿ ಈ ಕೆಳಕಂಡಂತಿದೆ:

ಇದನ್ನೂ ಓದಿ:ಸೈಲೆಂಟಾಗಿ ನಿಮ್ಮ ಕ್ರೆಡಿಟ್ ಲಿಮಿಟ್​ಗೆ ಕತ್ತರಿ ಬೀಳಬಹುದು; ಬ್ಯಾಂಕುಗಳು ಯಾಕೆ ಈ ಕೆಲಸ ಮಾಡುತ್ತವೆ ಗೊತ್ತಾ?

  • ಸ್ಟಾರ್ಟಪ್​ಗಳ ಏರಿಕೆ: 6 ವರ್ಷಗಳ ಹಿಂದೆ ಒಂದಂಕಿಯಲ್ಲಿದ್ದ ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಇಂದು 450ರ ಗಡಿ ದಾಟಿದೆ.
  • ಬಹಳಷ್ಟು ಅನುಮೋದನೆ: ಸ್ವೀಕೃತವಾದ 800ಕ್ಕೂ ಅಧಿಕ ಅರ್ಜಿಗಳಲ್ಲಿ IN-SPACe ಸಂಸ್ಥೆಯು ಈಗಾಗಲೇ 130ಕ್ಕೂ ಹೆಚ್ಚು ಯೋಜನೆಗಳಿಗೆ ಅಧಿಕೃತ ಅನುಮೋದನೆ ನೀಡಿದೆ.
  • ತಂತ್ರಜ್ಞಾನ ಹಸ್ತಾಂತರ: ಇಸ್ರೋ (ISRO) ಅಭಿವೃದ್ಧಿಪಡಿಸಿದ 100ಕ್ಕೂ ಹೆಚ್ಚು ತಂತ್ರಜ್ಞಾನಗಳನ್ನು ಖಾಸಗಿ ಉದ್ದಿಮೆಗಳಿಗೆ ಹಸ್ತಾಂತರಿಸಲಾಗಿದೆ.
  • ಹೂಡಿಕೆ ಹರಿವು: ಕಳೆದ ಮೂರು ವರ್ಷಗಳಲ್ಲಿ ಭಾರತೀಯ ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳು ಸುಮಾರು $390 ಮಿಲಿಯನ್ (ಸುಮಾರು ₹3,750 ಕೋಟಿ) ಹೂಡಿಕೆಯನ್ನು ಆಕರ್ಷಿಸಿವೆ.

‘ಇಸ್ರೋ’ ಸೌಲಭ್ಯಗಳ ಬಳಕೆ ಮತ್ತು ಸಿಂಗಲ್-ವಿಂಡೋ ವ್ಯವಸ್ಥೆ

“ಖಾಸಗಿ ಕಂಪನಿಗಳಿಗೆ ಇಸ್ರೋದ ಟೆಸ್ಟಿಂಗ್ ಸೆಂಟರ್​ಗಳು, ತಾಂತ್ರಿಕ ಬೆಂಬಲ ಮತ್ತು ತಂತ್ರಜ್ಞಾನ ಹಸ್ತಾಂತರದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ” ಎಂದು IN-SPACe ನಿರ್ದೇಶಕ ಪಿ. ಕೆ. ಜೈನ್ ಅವರು ತಿಳಿಸಿದ್ದಾರೆ.

ಅಲ್ಲದೆ, ಉದ್ಯಮಿಗಳು ವಿವಿಧ ಸರ್ಕಾರಿ ಇಲಾಖೆಗಳಿಗೆ ಅಲೆಯುವುದನ್ನು ತಪ್ಪಿಸಲು, ‘ಒಂದೇ ಕಿಟಕಿ ವ್ಯವಸ್ಥೆ’ (Single-window interface) ಜಾರಿಗೆ ತರಲು ಟೆಲಿಕಾಂ ಮತ್ತು ವಾರ್ತಾ ಹಾಗೂ ಪ್ರಸಾರ ಸಚಿವಾಲಯಗಳೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಪಿಎಫ್ ಸದಸ್ಯರಿಗೆ ಪೆನ್ಷನ್; ಕನಿಷ್ಠ ಪಿಂಚಣಿಯನ್ನು 3,000 ಅಲ್ಲ, 7,500 ರೂಗೆ ಏರಿಸಬೇಕೆಂದು ಒತ್ತಾಯ; ಸರ್ಕಾರದ ಪ್ರತಿಕ್ರಿಯೆಯೇನು?

ಸ್ಕೈರೂಟ್ ಸಾಧನೆಯನ್ನು ಮೆಚ್ಚಿದ ಜೈನ್

ಸ್ಕೈರೂಟ್ ಸಾಧನೆಯನ್ನು ಉಲ್ಲೇಖಿಸಿದ IN-SPACe ನಿರ್ದೇಶಕರು, ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಭಾರತದ ಮೊದಲ ಸ್ಪೇಸ್ ಯೂನಿಕಾರ್ನ್ ಆಗಿ ಹೊರಹೊಮ್ಮಿದ್ದು, ವಿಕ್ರಮ್-1 ರಾಕೆಟ್ ಉಡಾವಣೆಯ ಮೂಲಕ ಖಾಸಗಿ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Jana Nayagan First Half Review: ‘ಜನ ನಾಯಗನ್’ ಮೊದಲಾರ್ಧ ಹೇಗಿದೆ? – Kannada News | Jana Nayagan Movie First Half Review TN CM Thalapathy Vijay Starrer Cinema Decoded

ತಮಿಳುನಾಡಿನ ಸಿಎಂ ವಿಜಯ್ (Thalapathy Vijay) ನಟಿಸಿರುವ ‘ಜನ ನಾಯಗನ್’ (Jana Nayagan) ಸಿನಿಮಾ ಇಂದು (ಜುಲೈ 23) ದೇಶದಾದ್ಯಂತ ಬಿಡುಗಡೆ ಆಗಿದೆ. ಜನವರಿ ತಿಂಗಳಲ್ಲೇ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಸಾಕಷ್ಟು ಅಡೆ-ತಡೆಗಳ ಬಳಿಕ ಕೊನೆಗೂ ಇದೀಗ ಬಿಡುಗಡೆ ಆಗಿದೆ. ಈ ಸಿನಿಮಾ ವಿಜಯ್ ನಟನೆಯ ಕೊನೆಯ ಸಿನಿಮಾ ಎನ್ನಲಾಗಿದ್ದು, ಇದೇ ಕಾರಣಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ವಿಜಯ್, ‘ಜನ ನಾಯಗನ್’ ಮೂಲಕ ಅಭಿಮಾನಿಗಳಿಗೆ ಭಾವುಕ ವಿದಾಯ ಹೇಳಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾದ ಮೊದಲಾರ್ಧ ಹೇಗಿದೆ? ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ರಂಜಿಸಿತೆ? ಸಿನಿಮಾದ ಮೊದಲಾರ್ಧದಲ್ಲಿ ಏನೆಲ್ಲ ಇದೆ? ಮಾಹಿತಿ ಇಲ್ಲಿದೆ…

  1. ವಿಜಯ್ ಎಂಟ್ರಿ ಸೀನ್​ ಸಖತ್ ಕಿಕ್ ಕೊಡುವಂತಿದೆ. ತಮ್ಮ ಪಕ್ಷವಾದ ಟಿವಿಕೆಯ ಬ್ರ್ಯಾಂಡ್ ಅವರ ಕೈಮೇಲೆ ಹಚ್ಚೆಯ ರೂಪದಲ್ಲಿದೆ.
  2. ಮೊದಲಾರ್ಧದಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳಿವೆ, ವಿಜಯ್ ಎಂದಿನಂತೆ ಆಕ್ಷನ್ ದೃಶ್ಯಗಳಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಆಕ್ಷನ್ ದೃಶ್ಯಗಳ ಹಿನ್ನೆಲೆ ಸಂಗೀತ ಭರ್ಜರಿಯಾಗಿದೆ.
  3. ಜನ ನಾಯಗನ್ ಸಿನಿಮಾದ ಮೊದಲಾರ್ಧ ಮಾಸ್ ಆಕ್ಷನ್, ಭಾವುಕತೆ, ಪಂಚ್ ಡೈಲಾಗ್, ಜಬರ್ದಸ್ತ್ ಹಾಡುಗಳ ಮಿಕ್ಸ್ ಮಸಾಲ.
  4. ವಿಜಯ್ ಎಂಟ್ರಿ ಸೀನ್ ಅಭಿಮಾನಿಗಳಿಂದ ಭರ್ಜರಿ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತದೆ. ಆದರೆ ವಿಜಯ್ ಜೈಲಿಗೆ ಬಂದಿದ್ದು ಹೇಗೆಂಬ ಸಂಗತಿ ಕತೆಯಲ್ಲಿ ದ್ವಿತೀಯಾರ್ಧದಲ್ಲಿ ಬಯಲಾಗುತ್ತದೆ.
  5. ಗೆಳೆಯನಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಆತನ ಮಗಳನ್ನು ಕಾಪಾಡುವುದು, ತಾಯಿಯ ಆಸೆಯಂತೆ ಮಿಲಿಟರಿ ಅಧಿಕಾರಿ ಆಗಿ ಮಾಡುವುದು ನಾಯಕನ ಗುರಿ.
  6. ಜನ ನಾಯಗನ್, ತೆಲುಗಿನ ಭಗವಂತ ಕೇಸರಿ ಸಿನಿಮಾದ ರೀಮೇಕ್, ಆದರೆ ಅಲ್ಲಲ್ಲಿ ಕೆಲ ಬದಲಾವಣೆ ಗಳನ್ನು ಸಹ ಮಾಡಲಾಗಿದೆ.
  7. ನಾಯಕನಿಗೆ ಫ್ಲ್ಯಾಶ್​ ಬ್ಯಾಕ್ ಸಹ ಇದೆ. ಆ ಫ್ಲ್ತಾಷ್ ಬ್ಯಾಕ್ ದ್ವಿತೀಯಾರ್ಧದಲ್ಲಿ ಓಪನ್ ಆಗಲಿದೆ.
  8. ಸಿನಿಮಾದ ವಿಲನ್ ಆಗಿ ಬಾಬಿ ಡಿಯೋಲ್ ಅವರನ್ನು ಸಹ ಭರ್ಜರಿಯಾಗಿ ತೋರಿಸಲಾಗಿದೆ. ಅತ್ಯಂತ ಕ್ರೂರವಾದ ವಿಲನ್ ಆಗಿ ತೋರಿಸಲಾಗಿದೆ. ಭಾರತದಲ್ಲಿ ಭಯೋತ್ಪಾದಕತೆ ಬಿತ್ತುವುದು ವಿಲನ್ ಉದ್ದೇಶ.
  9. ಪೂಜಾ ಹೆಗ್ಡೆಯದ್ದು ಜರ್ನಲಿಸ್ಟ್ ಪಾತ್ರ. ನಾಯಕನಿಗೆ ಬಿಲ್ಡಪ್ ಕೊಡುವುದರ ಹೊರತಾಗಿ ಹೆಚ್ಚು ಕೆಲಸವಿಲ್ಲ.
  10. ಮಮಿತಾ ಬೈಜು, ನಾಯಕನ ಸಾಕು ಪುತ್ರಿ ಪಾತ್ರ. ತಮ್ಮ ಕ್ಯೂಟ್ ನೆಸ್ ನಿಂದ ಗಮನ ಸೆಳೆಯುತ್ತಾರೆ ಮಮಿತಾ.
  11. ಸಿನಿಮಾದ ಮೊದಲಾರ್ಧದಲ್ಲಿ ಸಾಕಷ್ಟು ಮಾಸ್ ದೃಶ್ಯಗಳಿವೆ, ಸಂಭಾಷಣೆಗಳು ಗಮನ ಸೆಳೆಯುತ್ತವೆ.
  12. ಮೊದಲಾರ್ಧದಲ್ಲಿ ಮೂರು ಫೈಟ್, ಎರಡು ಹಾಡುಗಳಿವೆ. ವಿಜಯ್ ಡ್ಯಾನ್ಸ್ ಚೆನ್ನಾಗಿದೆ. ಅಭಿಮಾನಿಗಳಿಗಾಗಿ ವಿಶೇಷ ಡ್ಯಾನ್ಸ್ ಮಾಡಿದ್ದಾರೆ ವಿಜಯ್.
  13. ವಿಜಯ್ ಅಭಿಮಾನಿಗಳಿಗಾಗಿ ಮಾಡಿದ ಸಿನಿಮಾ ಜನ ನಾಯಗನ್, ಅಲ್ಲಲ್ಲಿ ವಿಜಯ್ ರಾಜಕೀಯ ಅಜೆಂಡವನ್ನು ಸಹ ಜಾಣತನದಿಂದ ಸೇರಿಸಲಾಗಿದೆ.

‘ಜನ ನಾಯಗನ್’ ಸಿನಿಮಾ ಅನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಬಾಬಿ ಡಿಯೋಲ್ ವಿಲನ್, ಪೂಜಾ ಹೆಗ್ಡೆ, ಮಮಿತಾ ಬಿಜು ನಾಯಕಿಯರು. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಕೆವಿಎನ್ ವೆಂಕಟ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿಡಿಯೋ ಕಾಲ್ ಮಾಡಿದ್ದ ಅಪರಿಚಿತ ಮಹಿಳೆ ಹೇಳಿದ್ದಕ್ಕೆ ಬಟ್ಟೆಬಿಚ್ಚಿ ಲಕ್ಷಾಂತರ ರೂ. ಕಳೆದುಕೊಂಡ ಯುವ ಕ್ರಿಕೆಟಿಗ! – Kannada News | Bengaluru Cyber Fraud: Young Cricketer Blackmailed After Dating App Video Call, Cyber Police Issue Warning

ಬೆಂಗಳೂರು, ಜುಲೈ 23: ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಅಪರಿಚಿತ ಮಹಿಳೆಯೊಬ್ಬಳು ವಿಡಿಯೋ ಕಾಲ್ ಮಾಡಿ ಯುವ ಕ್ರಿಕೆಟಿಗನನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಿದ ಪ್ರಕರಣ ಬೆಂಗಳೂರಿನಲ್ಲಿ (Bengaluru) ಬೆಳಕಿಗೆ ಬಂದಿದೆ. ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಹಣ ಪಡೆದುಕೊಂಡ ಬಳಿಕವೂ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಸಂತ್ರಸ್ತ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.

ಮಹಿಳೆ ವಿಡಿಯೋ ಕಾಲ್​ಗೆ ಫಿದಾ ಆಗಿದ್ದ ಮಹಾರಾಷ್ಟ್ರದ ಕ್ರಿಕೆಟಿಗ

ಮಹಾರಾಷ್ಟ್ರ ಮೂಲದ ಯುವ ಕ್ರಿಕೆಟಿಗ ಬೆಂಗಳೂರಿನ ಉತ್ತರ ಭಾಗದ ಖಾಸಗಿ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದ ವೇಳೆ ಈ ಘಟನೆ ನಡೆದಿದೆ. ಅವರು ಡೇಟಿಂಗ್ ಆ್ಯಪ್‌ನಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿದ್ದರು. ಅದರಲ್ಲಿ ಪರಿಚಯವಾದ ಮಹಿಳೆಯಿಂದ ವಿಡಿಯೋ ಕರೆ ಬಂದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಆರಂಭದಲ್ಲಿ ಮಹಿಳೆ ವಿಡಿಯೋ ಕರೆಯಲ್ಲೇ ಅಶ್ಲೀಲ ವರ್ತನೆ ತೋರಿದ್ದಳು. ಅದರಿಂದ ಪ್ರಚೋದನೆಗೆ ಒಳಗಾದ ಯುವಕ ಕೂಡ ಬಟ್ಟೆಬಿಚ್ಚಿದ್ದ. ಸುಮಾರು 30 ಸೆಕೆಂಡ್ ಬಳಿಕ ಮಹಿಳೆ ಕರೆ ಕಡಿತಗೊಳಿಸಿದ್ದಳು.

ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್

ಸ್ವಲ್ಪ ಸಮಯದ ನಂತರ ಅದೇ ಮಹಿಳೆ ಹಾಗೂ ಆಕೆಯ ಗ್ಯಾಂಗ್, ಕ್ರಿಕೆಟಿಗನ ವಿಡಿಯೋ ಮತ್ತು ಚಿತ್ರಗಳನ್ನು ಕಳುಹಿಸಿ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದೆ. ಮಾನಹಾನಿಯ ಭಯದಿಂದ ಯುವ ಕ್ರಿಕೆಟಿಗ ಹಣ ವರ್ಗಾವಣೆ ಮಾಡಿದ್ದಾರೆ. ಆದರೆ ಹಣ ಪಡೆದ ನಂತರವೂ ಮತ್ತಷ್ಟು ಹಣಕ್ಕಾಗಿ ನಿರಂತರವಾಗಿ ಕರೆ ಮಾಡಿ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ನಗರ ಪೊಲೀಸ್ ಆಯುಕ್ತರ ಹೆಸರಲ್ಲೇ ಡಿಜಿಟಲ್ ಅರೆಸ್ಟ್​​ಗೆ ಯತ್ನ: ಸೈಬರ್ ಕ್ರೈಂ ಪೊಲೀಸರಿಗೆ ದೂರು

ಈ ಬೆಳವಣಿಗೆಯಿಂದ ಆತಂಕಗೊಂಡ ಯುವ ಕ್ರಿಕೆಟಿಗ ಸ್ನೇಹಿತರ ಸಲಹೆ ಪಡೆದು ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಅಪರಿಚಿತರಿಂದ ವಿಡಿಯೋ ಕರೆ ಬಂದರೆ ಎಚ್ಚರ

ಈ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿರುವ ಸೈಬರ್ ಪೊಲೀಸರು, ಅಪರಿಚಿತ ವಿಡಿಯೋ ಕರೆಗಳನ್ನು ಸ್ವೀಕರಿಸುವುದು, ಡೇಟಿಂಗ್ ಆ್ಯಪ್‌ಗಳಲ್ಲಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದು ಹಾಗೂ ಅಪರಿಚಿತರ ಪ್ರಚೋದನೆಗೆ ಒಳಗಾಗುವುದು ಅಪಾಯಕಾರಿಯಾಗಿದೆ ಎಂದು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಸೇರಿದಂತೆ ವಿವಿಧ ತಂತ್ರಜ್ಞಾನಗಳನ್ನು ಬಳಸಿ ಇಂತಹ ವಂಚನೆಗಳು ಹೆಚ್ಚುತ್ತಿರುವುದರಿಂದ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:07 pm, Thu, 23 July 26

Source link

Exit mobile version