ಮತದಾರರ ಪಟ್ಟಿ ಪರಿಷ್ಕರಣೆ; ಆ. 8ರೊಳಗೆ ಫಾರ್ಮ್ ಸಲ್ಲಿಸದಿದ್ದರೆ ವೋಟರ್ ಐಡಿಯಿಂದ ಹೆಸರು ಔಟ್; 17.19 ಲಕ್ಷ ಫಾರ್ಮ್‌ಗಳಲ್ಲಿ ಸರಿಯಾದ ಮಾಹಿತಿ ಇಲ್ಲ – Kannada News | Karnataka Voter List Revision 2024: Missing Mapping Data, Deadline August 8

ಬೆಂಗಳೂರು, ಜು.23: ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಸಂದರ್ಭದಲ್ಲಿ, ಬೇಸ್ ವರ್ಷದ (ಆಧಾರ ವರ್ಷ) ವಿವರಗಳನ್ನು ಹಿಂಪಡೆಯಲು ಸಾಧ್ಯವಾಗದ ಕಾರಣ ಬರೋಬ್ಬರಿ 17.19 ಲಕ್ಷ ಎನ್ಯುಮರೇಶನ್ (ಗಣತಿ) ಫಾರ್ಮ್‌ಗಳು ‘ಪ್ರೊಜೆನಿ ಮ್ಯಾಪಿಂಗ್’ (ವಂಶಾವಳಿ/ವಂಶವೃಕ್ಷ ಜೋಡಣೆ) ಮಾಹಿತಿಯಿಲ್ಲದೆ ಸಲ್ಲಿಕೆಯಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ರಾಜ್ಯಾದ್ಯಂತ ಮನೆ-ಮನೆ ಗಣತಿಯ ವೇಳೆ ವಿತರಿಸಲಾದ ಒಟ್ಟು 5.53 ಕೋಟಿ ಎಸ್‍ಐಆರ್ ಫಾರ್ಮ್‌ಗಳಲ್ಲಿ ಇದುವರೆಗೆ 3.67 ಕೋಟಿ (ಶೇ. 66.35) ಫಾರ್ಮ್‌ಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. 1.56 ಕೋಟಿ ಮತದಾರರ ಸ್ವಯಂ ಮ್ಯಾಪಿಂಗ್, 1.93 ಕೋಟಿ ಮತದಾರರು ವಂಶಾವಳಿ ಮ್ಯಾಪಿಂಗ್, 17.19 ಲಕ್ಷ (ಶೇ. 3.1) ಫಾರ್ಮ್‌ಗಳನ್ನು ಯಾವುದೇ ಮ್ಯಾಪಿಂಗ್ ವಿವರಗಳಿಲ್ಲದೆ ಸಲ್ಲಿಸಲಾಗಿದೆ.

ಮ್ಯಾಪಿಂಗ್ ವಿವರಗಳು ಲಭ್ಯವಿಲ್ಲದಿದ್ದರೂ ಸಹ, ಮತದಾರರು ತಮ್ಮ ಫಾರ್ಮ್‌ಗಳನ್ನು ಆಗಸ್ಟ್ 8 ರೊಳಗೆ ತಮ್ಮ ಮತಗಟ್ಟೆ ಹಂತದ ಅಧಿಕಾರಿಗಳಿಗೆ (BLO) ಕಡ್ಡಾಯವಾಗಿ ಸಲ್ಲಿಸಬೇಕು.  ಮ್ಯಾಪಿಂಗ್ ವಿವರಗಳು ಲಭ್ಯವಿಲ್ಲದಿದ್ದರೂ ಸಹ, ಮತದಾರರು ತಮ್ಮ ಫಾರ್ಮ್‌ಗಳನ್ನು ಆಗಸ್ಟ್ 8 ರೊಳಗೆ ತಮ್ಮ ಮತಗಟ್ಟೆ ಹಂತದ ಅಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸಬೇಕು. ಫಾರ್ಮ್‌ಗಳನ್ನು ಸಲ್ಲಿಸಲು ಕುಟುಂಬದ ಯಾವುದೇ ವಯಸ್ಕ ಸದಸ್ಯರು/ಪ್ರಬುದ್ಧರು ಕ್ರಮ ಕೈಗೊಳ್ಳಬಹುದು. ಫಾರ್ಮ್ ಸಲ್ಲಿಸುವ ಪ್ರತಿಯೊಬ್ಬರ ಹೆಸರನ್ನು ಆಗಸ್ಟ್ 17 ರಂದು ಪ್ರಕಟವಾಗಲಿರುವ ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (CEO) ವಿ. ಅನ್ಬುಕ್ಕುಮಾರ್ ಅವರು ಮತದಾರರಲ್ಲಿ ವಿನಂತಿಸಿದ್ದಾರೆ.

ಮಾಹಿತಿಯಲ್ಲಿ ವ್ಯತ್ಯಾಸವಿದ್ದರೆ ಅಥವಾ ಡೇಟಾ ಇಲ್ಲದಿದ್ದರೆ ಮತದಾರರಿಗೆ ನೋಟಿಸ್ ನೀಡಲಾಗುವುದು. ಅವರು ಫಾರ್ಮ್ ಹಿಂಭಾಗದಲ್ಲಿ ನಮೂದಿಸಿರುವ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಿ ಸರಿಪಡಿಸಿಕೊಳ್ಳಬಹುದು. ರಾಜ್ಯದಲ್ಲಿ ‘ASDDO’ (ಆಬ್ಸೆಂಟ್, ಶಿಫ್ಟೆಡ್, ಡೆಡ್, ಡುಪ್ಲಿಕೇಟ್, ಅದರ್ಸ್) ವಿಭಾಗದಡಿ ಗುರುತಿಸಲಾದ ಮತದಾರರ ಸಂಖ್ಯೆ 44.84 ಲಕ್ಷಕ್ಕೆ ಏರಿಕೆಯಾಗಿದೆ. ಗೈರುಹಾಜರಿ 5.87 ಲಕ್ಷ, ಶಾಶ್ವತವಾಗಿ ಸ್ಥಳಾಂತರ 26.32 ಲಕ್ಷ, ಮೃತಪಟ್ಟವರು 9.81 ಲಕ್ಷ, ನಕಲಿ ದಾಖಲಾತಿ 2.70 ಲಕ್ಷ, ಇತರರು 12,344 ಜನ ಎಂದು ಹೇಳಲಾಗಿದೆ.

ಇದನ್ನೂ ಓದಿ: ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ: 3 ಸಾಕಾನೆಗಳೊಂದಿಗೆ ಬರೋಬ್ಬರಿ 6 ಗಂಟೆ ಭರ್ಜರಿ ಕಾರ್ಯಾಚರಣೆ

ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಹೆಚ್ಚಿದ ಗಮನ

ಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿಯೇ ಬರೋಬ್ಬರಿ 23.86 ಲಕ್ಷ ASDDO ಪ್ರಕರಣಗಳು ದಾಖಲಾಗಿವೆ. ಇಲ್ಲಿ ಡಿಜಿಟಲೀಕರಣ ಪ್ರಕ್ರಿಯೆ ಕೇವಲ ಶೇ. 30 ರಷ್ಟಾಗಿದೆ. ಬೆಂಗಳೂರಿನಲ್ಲಿ 4.51 ಲಕ್ಷ ಗೈರುಹಾಜರಿ, 16.62 ಲಕ್ಷ ಸ್ಥಳಾಂತರಗೊಂಡವರು, 2.40 ಲಕ್ಷ ಮೃತಪಟ್ಟವರು, 27,480 ನಕಲಿ ಹಾಗೂ 5,189 ಇತರೆ ದಾಖಲೆಗಳು ಪತ್ತೆಯಾಗಿವೆ.

ಉತ್ತರಹಳ್ಳಿ (40 ಭಾಗಗಳು) ಮತ್ತು ಯಲಹಂಕದಲ್ಲಿ (24 ಭಾಗಗಳು) 2002ರ ಪಟ್ಟಿಯ ‘ಕಾಣೆಯಾದ’ ಮತಗಟ್ಟೆಗಳಿಗೆ ಸಂಬಂಧಿಸಿದಂತೆ ಆರಂಭದಲ್ಲಿ ಪಿಡಿಎಫ್ ಆವೃತ್ತಿಗಳನ್ನು ಮಾತ್ರ ಅಪ್‌ಲೋಡ್ ಮಾಡಲಾಗಿದ್ದು, ಎಕ್ಸೆಲ್ ಫೈಲ್‌ಗಳನ್ನು ಮಾಡದಿರುವುದೇ ಸಮಸ್ಯೆಗೆ ಕಾರಣವಾಗಿತ್ತು. ಪ್ರಸ್ತುತ ಈ ದೋಷವನ್ನು ಪರಿಹರಿಸಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀಟ್ ಪೇಪರ್ ಸೋರಿಕೆ: ಮೌನ ಮುರಿದ ಪ್ರಧಾನಿ, ಫಾಸ್ಟ್​ ಟ್ರ್ಯಾಕ್ ಕೋರ್ಟ್​ ಮಾಡಿ ಅಪರಾಧಿಗಳಿಗೆ ಶಿಕ್ಷೆ ಕೊಡ್ತೀವಿ ಎಂದ ಮೋದಿ – Kannada News | NEET Paper Leak: PM Modi Vows Fast Track Courts for Offenders, Ensures Swift Justice

ನವದೆಹಲಿ, ಜುಲೈ 23: ದೇಶಾದ್ಯಂತ ಕಾವೇರಿರುವ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಯುವಜನರ ಭಾರಿ ಪ್ರತಿಭಟನೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ಪರೀಕ್ಷಾ ಅಕ್ರಮ ಎಸಗಿದ ಅಪರಾಧಿಗಳಿಗೆ ತಕ್ಷಣವೇ ಕಠಿಣ ಶಿಕ್ಷೆ ಖಚಿತಪಡಿಸಲು ‘ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು’ ಸ್ಥಾಪಿಸುವುದಾಗಿ ಪ್ರಧಾನಿ ಮೋದಿ ಪ್ರಮುಖ ಘೋಷಣೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ, ದೇಶದ ಯುವಜನತೆಯ ಭವಿಷ್ಯ ಮತ್ತು ಕಲ್ಯಾಣಕ್ಕಿಂತ ಸರ್ಕಾರಕ್ಕೆ ಬೇರೆ ಯಾವುದೂ ಮುಖ್ಯವಲ್ಲ ಎಂದು ಪ್ರತಿಪಾದಿಸಿದ್ದಾರೆ.

“ನಮ್ಮ ಯುವಕರ ಕಲ್ಯಾಣ ಮತ್ತು ಭವಿಷ್ಯಕ್ಕಿಂತ ನಮಗೆ ಬೇರೇನೂ ಮುಖ್ಯವಲ್ಲ, ಪ್ರಶ್ನೆಪತ್ರಿಕೆ ಸೋರಿಕೆ ದಂಧೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ತ್ವರಿತ ಹಾಗೂ ಕಠಿಣ ಶಿಕ್ಷೆಯಾಗುವುದನ್ನು ಖಚಿತಪಡಿಸಲು ನಾವು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುವ ಯಾರನ್ನೂ ಸರ್ಕಾರ ಬಿಡುವುದಿಲ್ಲ.” ಎಂದಿದ್ದಾರೆ.

ಪ್ರಧಾನಿ ನೀಡಿದ ಮುಖ್ಯ ಭರವಸೆಗಳು
ತ್ವರಿತ  ವಿಚಾರಣೆ: ನೀಟ್ ಸೇರಿದಂತೆ ಎಲ್ಲಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ಸಾಮಾನ್ಯ ನ್ಯಾಯಾಲಯಗಳಲ್ಲಿ ವಿಳಂಬ ಮಾಡದೇ, ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳ ಮೂಲಕವೇ ಶೀಘ್ರವಾಗಿ ವಿಚಾರಣೆ ನಡೆಸಿ ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಲಾಗುವುದು.

ವಿದ್ಯಾರ್ಥಿಗಳ ಹಿತರಕ್ಷಣೆ: ಪರೀಕ್ಷಾ ಪಾರದರ್ಶಕತೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡಲು ಸರ್ಕಾರ ನಿರಂತರವಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು, ಇದು ಆ ಸರಣಿ ಸುಧಾರಣೆಗಳ ಪ್ರಮುಖ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಜಂತರ್ ಮಂತರ್‌ನಲ್ಲಿ ಮತ್ತೆ ಭುಗಿಲೆದ್ದ ಗಲಭೆ; ಪ್ರತಿಭಟನೆಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ, ಎಸಿಪಿಗಳಿಗೆ ಗಾಯ

ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್  ಜನತಾ ಪಾರ್ಟಿ (CJP) ಸೇರಿದಂತೆ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪ್ರಸಿದ್ಧ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಕಳೆದ ಒಂದು ತಿಂಗಳಿನಿಂದ ನಿರಂತರ ಉಪವಾಸ ಸತ್ಯಾಗ್ರಹ ಮತ್ತು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರಧಾನಿ ನಿವಾಸದ ಹೊರಗೆ ಧರಣಿ ನಡೆಸಿದ್ದರು. ಶಿಕ್ಷಣ ಸಚಿವರು ವಿಪಕ್ಷಗಳು ವಿದ್ಯಾರ್ಥಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದರು.

ಮೋದಿ ಪೋಸ್ಟ್​

ಪ್ರತಿಭಟನಾಕಾರರ ಮೇಲಿನ ಪೋಲಿಸ್ ಕ್ರಮದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ತಳ್ಳಿಹಾಕಿದ್ದವು. ಈ ಬೆನ್ನಲ್ಲೇ, ವಿದ್ಯಾರ್ಥಿಗಳ ಆಕ್ರೋಶ ತಣ್ಣಗಾಗಿಸಲು ಮತ್ತು ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ವಿಷಯವನ್ನು ಹತೋಟಿಗೆ ತರಲು ಪ್ರಧಾನಿ ಮೋದಿ ಈ ಫಾಸ್ಟ್ ಟ್ರ್ಯಾಕ್ ಕೋರ್ಟ್ ಅಸ್ತ್ರವನ್ನು ಬಳಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:31 am, Thu, 23 July 26

Source link

‘ಬಿಲ್ಲ ರಂಗ ಭಾಷಾ’ ಚಿತ್ರದಲ್ಲಿ ಇರಲಿದೆ ಶೇ.90 ಸಿಜಿ, 2027ರ ಅಕ್ಟೋಬರ್​​ಗೆ ರಿಲೀಸ್ – Kannada News | Kiccha Sudeep Billa Ranga Baashaa Shoot Update: Release Date and VFX Details Revealed

‘ಬಿಲ್ಲ ರಂಗ ಭಾಷಾ’ ಸಿನಿಮಾದ (Billa Ranga Bhasha) ಶೂಟ್ ಭರದಿಂದ ಸಾಗುತ್ತಿದೆ. ಮೊದಲನೆಯ ಶೆಡ್ಯೂಲ್​​ಗೂ ಎರಡನೆಯ ಶೆಡ್ಯೂಲ್​​ಗೂ ಸಾಕಷ್ಟು ಗ್ಯಾಪ್ ಆಯಿತು. ಆದರೆ, ನಟ ಸುದೀಪ್ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಮತ್ತೆ ಸಿನಿಮಾ ಕೆಲಸಕ್ಕೆ ಮರಳಿದ್ದಾರೆ. ಈ ಸಿನಿಮಾದ ಶೂಟಿಂಗ್ ಹಾಗೂ ಬಿಡುಗಡೆಯ ದಿನಾಂಕದ ಬಗ್ಗೆ ಚಿತ್ರತಂಡದಿಂದ ಕೊನೆಗೂ ದೊಡ್ಡ ಅಪ್‌ಡೇಟ್ ಸಿಕ್ಕಿದೆ. ನಿರ್ಮಾಪಕ ನಿರಂಜನ್ ರೆಡ್ಡಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಶೇಕಡಾ 40 ರಷ್ಟು ಶೂಟಿಂಗ್ ಕಂಪ್ಲೀಟ್

ಸಿನಿಮಾದ ಚಿತ್ರೀಕರಣ ಸದ್ಯ ಬಿರುಸಿನಿಂದ ಸಾಗುತ್ತಿದೆ. ಈಗ ನಡೆಯುತ್ತಿರುವ ಶೆಡ್ಯೂಲ್ ಮುಗಿಯುತ್ತಿದ್ದಂತೆ ಚಿತ್ರದ ಶೇಕಡಾ 40ರಷ್ಟು ಶೂಟಿಂಗ್ ಪೂರ್ಣಗೊಳ್ಳಲಿದೆ. ಇನ್ನುಳಿದ ಚಿತ್ರೀಕರಣವನ್ನು ಇದೇ ವರ್ಷದ ಡಿಸೆಂಬರ್ ಅಥವಾ ಮುಂದಿನ ವರ್ಷದ ಜನವರಿ ವೇಳೆಗೆ ಸಂಪೂರ್ಣವಾಗಿ ಮುಗಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

2027ಕ್ಕೆ ರಿಲೀಸ್?

ಚಿತ್ರೀಕರಣ ಮುಗಿಯುತ್ತಿದ್ದಂತೆ ಸಿನಿಮಾವನ್ನು ತೆರೆಗೆ ತರಲು ಸಿದ್ಧತೆಗಳು ನಡೆಯಲಿವೆ. ಸದ್ಯಕ್ಕೆ ಚಿತ್ರತಂಡ 2027ರ ಅಕ್ಟೋಬರ್​ನಲ್ಲಿ ಸಿನಿಮಾವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲು ತಾತ್ಕಾಲಿಕ ಯೋಜನೆ ಹಾಕಿಕೊಂಡಿದೆ.

90% ಸಿಜಿ ಕೆಲಸ

ಈ ಸಿನಿಮಾ ಪ್ರೇಕ್ಷಕರಿಗೆ ಹೊಸದೊಂದು ದೃಶ್ಯ ವೈಭವವನ್ನು ಉಣಬಡಿಸಲಿದೆ. ಚಿತ್ರದಲ್ಲಿ ಬರೋಬ್ಬರಿ ಶೇಕಡಾ 90 ರಷ್ಟು ಸಿಜಿಐ (Computer Generated Imagery) ಮತ್ತು ವಿಎಫ್‌ಎಕ್ಸ್ ಕೆಲಸಗಳು ಇರಲಿವೆ. ಹೀಗಾಗಿ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಹೆಚ್ಚಿನ ಸಮಯ ಮೀಸಲಿಡಲಾಗಿದೆ.

ಇದನ್ನೂ ಓದಿ: ಬಿಡುಗಡೆ ಆಯ್ತು ‘ಬಿಲ್ಲ ರಂಗ ಭಾಷಾ’ ಪೋಸ್ಟರ್, ಖಡಕ್ ಅವತಾರದಲ್ಲಿ ಕಿಚ್ಚ

ವಿಕ್ರಾಂತ್ ರೋಣ ಚಿತ್ರದ ನಂತರ ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಫೈ ಫ್ಯಾಂಟಸಿ ಚಿತ್ರದ ಮೇಲೆ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ನಿರೀಕ್ಷೆಗಳಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 9:31 am, Thu, 23 July 26

Source link

ಕೊಹ್ಲಿಯಿಂದ ನಾಯಕತ್ವ ಕಿತ್ತುಕೊಂಡಿದ್ದು ಬಿಸಿಸಿಐ ಮಾಡಿದ ಅತೀ ದೊಡ್ಡ ತಪ್ಪು! – Kannada News | Madan Lal Slams Selectors: Virat Kohli Left Test Captaincy Too Soon

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವಿರಾಟ್ ಕೊಹ್ಲಿ, 2022ರಲ್ಲಿ ತಮ್ಮ ನಾಯಕತ್ವಕ್ಕೆ ದಿಢೀರ್ ರಾಜೀನಾಮೆ ನೀಡಿದ್ದು ಇಂದಿಗೂ ಕ್ರಿಕೆಟ್ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಇದೀಗ 1983ರ ವಿಶ್ವಕಪ್ ವಿಜೇತ ತಂಡದ ಮಾಜಿ ಆಟಗಾರ ಮದನ್ ಲಾಲ್ ಈ ಕುರಿತು ಸ್ಪೋಟಕ ಹೇಳಿಕೆ ನೀಡಿದ್ದು, ಕೊಹ್ಲಿ ನಾಯಕತ್ವ ಬಿಡುವಂತೆ ಮಾಡಿದ್ದು ಬಿಸಿಸಿಐ ಮತ್ತು ಅಂದಿನ ಆಯ್ಕೆ ಸಮಿತಿ ಮಾಡಿದ ಅತ್ಯಂತ ದೊಡ್ಡ ತಪ್ಪು ಎಂದು ಕಿಡಿಕಾರಿದ್ದಾರೆ.

ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮದನ್ ಲಾಲ್, ಅಂದಿನ ಕ್ರಿಕೆಟ್ ಮಂಡಳಿಯ ನಿರ್ಧಾರಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಂದು ಆಯ್ಕೆಗಾರರು ಮತ್ತು ಕೊಹ್ಲಿ ನಡುವೆ ಸರಿಯಾದ ಸಂವಹನ ಇರಲಿಲ್ಲ. ಇದು ತಂಡದಲ್ಲಿ ಗೊಂದಲ ಸೃಷ್ಟಿಸಿತು.

ಕೊಹ್ಲಿ ಟೆಸ್ಟ್ ತಂಡವನ್ನು ಮುನ್ನಡೆಸಲು ಇನ್ನೂ ಕನಿಷ್ಠ 2 ರಿಂದ 3 ವರ್ಷಗಳ ಕಾಲ ಸಮರ್ಥರಾಗಿದ್ದರು. ಅವರನ್ನು ನಾಯಕತ್ವದಲ್ಲೇ ಮುಂದುವರಿಯುವಂತೆ ಮಂಡಳಿ ಒಪ್ಪಿಸಬೇಕಿತ್ತು ಎಂದಿದ್ದಾರೆ.

ವಿರಾಟ್ ಕೊಹ್ಲಿ ಅವರಂತಹ ಅಗ್ರ ಕ್ರಮಾಂಕದ ಆಟಗಾರ ಇಷ್ಟು ಬೇಗ ನಾಯಕತ್ವದಿಂದ ಕೆಳಗಿಳಿದಿದ್ದು ಭಾರತೀಯ ಟೆಸ್ಟ್‌ ಕ್ರಿಕೆಟ್‌ಗೆ ತುಂಬಲಾರದ ನಷ್ಟ ಎಂದು ಲಾಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಖಡಕ್ ಕ್ಯಾಪ್ಟನ್ ಕೊಹ್ಲಿ:

ವಿರಾಟ್ ಕೊಹ್ಲಿ ನಾಯಕತ್ವದ ಶೈಲಿಯನ್ನು ಶ್ಲಾಘಿಸಿದ ಮದನ್ ಲಾಲ್, ಭಾರತೀಯ ಟೆಸ್ಟ್ ಕ್ರಿಕೆಟ್‌ಗೆ ಆಕ್ರಮಣಕಾರಿ ಗುಣವನ್ನು ತಂದಿದ್ದೇ ಕೊಹ್ಲಿ ಎಂದು ನೆನಪಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಸೌತ್ ಆಫ್ರಿಕಾದಂತಹ ಕಠಿಣ ವಿದೇಶಿ ಪಿಚ್‌ಗಳ ಮೇಲೆ ಎದುರಾಳಿಗಳ ಕಣ್ಣಲ್ಲಿ ಕಣ್ಣಿಟ್ಟು ಹೋರಾಡುವ ಮತ್ತು ಪಂದ್ಯಗಳನ್ನು ಗೆಲ್ಲುವ ಹೊಸ ಆಟದ ಸಂಸ್ಕೃತಿಯನ್ನು ಅವರು ತಂಡದಲ್ಲಿ ಬಿತ್ತಿದ್ದರು ಎಂದು ಕೊಂಡಾಡಿದ್ದಾರೆ.

ಇದಾಗ್ಯೂ ಆಯ್ಕೆ ಸಮಿತಿ ಅವರನ್ನು ಬೇಗನೆ ನಾಯಕತ್ವದಿಂದ ಕೆಳಗಿಳಿಸಿದ್ದು ಅಪಕ್ವದ ನಿರ್ಧಾರ. ಕೊಹ್ಲಿ ಟೆಸ್ಟ್ ತಂಡವನ್ನು ಮುನ್ನಡೆಸಲು ಇನ್ನೂ ಕನಿಷ್ಠ 2 ರಿಂದ 3 ವರ್ಷಗಳ ಕಾಲ ಸಮರ್ಥರಾಗಿದ್ದರು. ಹೀಗಾಗಿ ಅವರನ್ನೇ ನಾಯಕತ್ವದಲ್ಲೇ ಮುಂದುವರಿಯುವಂತೆ ಬಿಸಿಸಿಐ ಮನವೊಲಿಸಬೇಕಿತ್ತು. ಆದರೆ ಬಿಸಿಸಿಐ ಆಗಲಿ, ಆಯ್ಕೆ ಸಮಿತಿ ಆಗಲಿ ಅಂತಹ ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಮದನ್ ಲಾಲ್ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜೀನಾಮೆಯ ಹಿನ್ನೆಲೆ:

ಜನವರಿ 2022ರಲ್ಲಿ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ತಮ್ಮ ನಾಯಕತ್ವ ತ್ಯಜಿಸಿದ್ದರು. ಇದಕ್ಕೆ ಮುಖ್ಯ ಕಾರಣ ಬಿಸಿಸಿಐ ಪದಾಧಿಕಾರಿಗಳ ಜೊತೆಗಿನ ಶೀತಲ ಸಮರ.

ಇದನ್ನೂ ಓದಿ: ಕಾಮನ್‌ವೆಲ್ತ್ ಗೇಮ್ಸ್ 2026: ಕಣದಲ್ಲಿರುವ 126 ಭಾರತೀಯರ ಪಟ್ಟಿ ಇಲ್ಲಿದೆ

ಕೊಹ್ಲಿ ಟಿ20 ನಾಯಕತ್ವದಿಂದ ಸ್ವಯಂಪ್ರೇರಿತರಾಗಿ ಕೆಳಗಿಳಿದ ಬೆನ್ನಲ್ಲೇ, ಅವರನ್ನು ಏಕದಿನ  ತಂಡದ ನಾಯಕತ್ವದಿಂದಲೂ ಬಿಸಿಸಿಐ ಬಲವಂತವಾಗಿ ಕೆಳಗಿಳಿಸಿತ್ತು. ಇದರಿಂದ ಮನನೊಂದು ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸಿದ್ದರು. ಆದರೆ ಅಂದು ಕೊಹ್ಲಿಯನ್ನು ಮನವೊಲಿಸಿ ನಾಯಕತ್ವದಲ್ಲೇ ಮುಂದುವರೆಸಬೇಕಿತ್ತು ಎಂದು ಮದನ್ ಲಾಲ್ ಬಲವಾಗಿ ಪ್ರತಿಪಾದಿಸಿದ್ದಾರೆ.

Source link

Planetary Plants: ನವಗ್ರಹಗಳ ಶಾಂತಿ ಮತ್ತು ಸಮೃದ್ಧಿಗೆ ಈ ಗಿಡಗಳನ್ನು ನೆಟ್ಟು ಬೆಳೆಸಿ; ವಾಸ್ತು ಸಲಹೆ ಇಲ್ಲಿದೆ – Kannada News | Planetary plants grow trees for astrological benefits and family prosperity

ಮಳೆಗಾಲದಲ್ಲಿ ಮಣ್ಣಿನಲ್ಲಿರುವ ಹೆಚ್ಚಿನ ತೇವಾಂಶದಿಂದಾಗಿ ಈ ಸಮಯವನ್ನು ಹೊಸ ಗಿಡಗಳನ್ನು ನೆಡಲು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಸನಾತನ ಧರ್ಮದಲ್ಲಿ ವೃಕ್ಷಾರೋಪಣೆಯು ಕೇವಲ ಪರಿಸರ ಸಂರಕ್ಷಣೆಯಷ್ಟೇ ಅಲ್ಲದೆ, ಒಂದು ಪವಿತ್ರ ಧಾರ್ಮಿಕ ಕಾರ್ಯವೂ ಹೌದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹ ಮತ್ತು ನಕ್ಷತ್ರಕ್ಕೂ ನಿರ್ದಿಷ್ಟ ಸಸ್ಯಗಳೊಂದಿಗೆ ನಿಕಟ ಬಾಂಧವ್ಯವಿದೆ. ಜಾತಕದಲ್ಲಿ ದುರ್ಬಲವಾಗಿರುವ ಗ್ರಹಗಳನ್ನು ಬಲಪಡಿಸಲು ಮತ್ತು ಕುಟುಂಬದಲ್ಲಿ ಸಮೃದ್ಧಿ ತರಲು ಯಾವ ಗ್ರಹಕ್ಕೆ ಯಾವ ಸಸ್ಯವನ್ನು ನೆಡಬೇಕು ಎಂಬುದರ ವಿವರ ಇಲ್ಲಿದೆ.

ಸೂರ್ಯ ಗ್ರಹ (ಆತ್ಮವಿಶ್ವಾಸ ಮತ್ತು ನಾಯಕತ್ವ):

ಸೂರ್ಯನು ವ್ಯಕ್ತಿಯ ಆತ್ಮವಿಶ್ವಾಸ, ನಾಯಕತ್ವದ ಗುಣ ಹಾಗೂ ದೈಹಿಕ ಆರೋಗ್ಯಕ್ಕೆ ಕಾರಣಕರ್ತನಾಗಿದ್ದಾನೆ. ಜಾತಕದಲ್ಲಿ ಸೂರ್ಯನ ಶುಭ ದೃಷ್ಟಿಗಾಗಿ ರವಿ (ಅಶ್ವತ್ಥ), ಆಲದ ಮರ ಹಾಗೂ ಬೇವಿನಂತಹ ಬಲವಾದ ಕಾಂಡಗಳನ್ನು ಹೊಂದಿರುವ ಮರಗಳನ್ನು ನೆಟ್ಟು ಪೋಷಿಸುವುದು ಒಳ್ಳೆಯದು. ಇವು ವ್ಯಕ್ತಿಯ ಧೈರ್ಯ ಮತ್ತು ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತವೆ.

ಚಂದ್ರ ಗ್ರಹ (ಮಾನಸಿಕ ಶಾಂತಿ ಮತ್ತು ಭಾವನಾತ್ಮಕ ಸಮತೋಲನ):

ಚಂದ್ರನು ಮನಸ್ಸು, ಭಾವನೆಗಳು ಮತ್ತು ಆಂತರಿಕ ಶಾಂತಿಯನ್ನು ಸಂಕೇತಿಸುತ್ತಾನೆ. ಮಾನಸಿಕ ಅಸ್ಥಿರತೆ ಅಥವಾ ಒತ್ತಡವನ್ನು ನಿವಾರಿಸಿಕೊಂಡು ಭಾವನಾತ್ಮಕ ಸಮತೋಲನ ಪಡೆಯಲು ಪಲಾಶ (ಮುತ್ತುಗ) ಹಾಗೂ ಹಾಲಿನ ರಸಭರಿತ ಸಸ್ಯಗಳನ್ನು ನೆಡುವುದು ಅತ್ಯಂತ ಸೂಕ್ತ.

ಮಂಗಳ ಗ್ರಹ (ಧೈರ್ಯ ಮತ್ತು ರೋಗನಿರೋಧಕ ಶಕ್ತಿ):

ಮಂಗಳನು ಶೌರ್ಯ, ಶಕ್ತಿ ಮತ್ತು ದೈಹಿಕ ಬಲದ ಪ್ರತಿಯಾಗಿದ್ದಾನೆ. ಮಂಗಳನ ಶುಭ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಬೇವು ಮತ್ತು ಮೆಂತ್ಯ ಮುಂತಾದ ಔಷಧೀಯ ಗುಣಗಳುಳ್ಳ ಸಸ್ಯಗಳನ್ನು ನೆಡಬೇಕು. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಧೈರ್ಯವೂ ವೃದ್ಧಿಸುತ್ತದೆ.

ಬುಧ ಗ್ರಹ (ಬುದ್ಧಿವಂತಿಕೆ ಮತ್ತು ವ್ಯವಹಾರ ಕೌಶಲ್ಯ):

ಬುಧನು ಶಿಕ್ಷಣ, ಸಂವಹನ ಕೌಶಲ್ಯ, ವಾಗ್ಮಿತ್ವ ಹಾಗೂ ಉದ್ಯೋಗ-ವ್ಯವಹಾರದ ಅಧಿಪತಿಯಾಗಿದ್ದಾನೆ. ಜಾತಕದಲ್ಲಿ ಬುಧನನ್ನು ಬಲಪಡಿಸಲು ಅತ್ಯಂತ ಪವಿತ್ರವಾದ ತುಳಸಿ ಸಸ್ಯವನ್ನು ನೆಟ್ಟು ಪೂಜಿಸಬೇಕು. ಇದು ಶಿಕ್ಷಣ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ನೀಡುತ್ತದೆ.

ಗುರು ಗ್ರಹ (ಜ್ಞಾನ, ಧರ್ಮ ಮತ್ತು ಸಂಪತ್ತು):

ಗುರು ಎಂದರೆ ಜ್ಞಾನ, ಸುಖ-ಸಂತೋಷ ಮತ್ತು ಕುಟುಂಬದ ಸಮೃದ್ಧಿಯ ಸಂಕೇತ. ಗುರುವಿನ ಕೃಪೆಗೆ ಪಾತ್ರರಾಗಲು ಮಾವು, ನೆಲ್ಲಿಕಾಯಿ ಮತ್ತು ಹಲಸಿನ ಹಣ್ಣಿನಂತಹ ಹಣ್ಣು ನೀಡುವ ಮರಗಳನ್ನು ನೆಡಬೇಕು. ಇವುಗಳಿಂದ ಜ್ಞಾನ, ಸದ್ಗುಣಗಳು ಹಾಗೂ ಮನೆತನದ ಐಶ್ವರ್ಯ ಹೆಚ್ಚಾಗುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಶುಕ್ರ ಗ್ರಹ (ಸೌಂದರ್ಯ, ಕಲೆ ಮತ್ತು ಐಷಾರಾಮಿ):

ಶುಕ್ರನು ಜೀವನದ ಪ್ರೀತಿ, ಆಕರ್ಷಣೆ, ಕಲಾತ್ಮಕತೆ ಮತ್ತು ಸೌಕರ್ಯಗಳಿಗೆ ಕಾರಣವಾದ ಗ್ರಹ. ಶುಕ್ರನ ಅನುಗ್ರಹ ಪಡೆಯಲು ಮಲ್ಲಿಗೆ, ಗುಲಾಬಿ ಮತ್ತು ಪಾರಿಜಾತದಂತಹ ಸುವಾಸನೆ ಬೀರುವ ಹೂವಿನ ಗಿಡಗಳನ್ನು ನೆಡಬೇಕು. ಇದು ಜೀವನದಲ್ಲಿ ಸಂತೋಷ ಮತ್ತು ಸೌಂದರ್ಯವನ್ನು ತರುತ್ತದೆ.

ಶನಿ ಗ್ರಹ (ಶಿಸ್ತು, ತಾಳ್ಮೆ ಮತ್ತು ಕಠಿಣ ಪರಿಶ್ರಮ):

ಶನಿಯು ಕಠಿಣ ಪರಿಶ್ರಮ, ಶಿಸ್ತು ಮತ್ತು ಸ್ಥಿರತೆಗೆ ಪ್ರತಿಫಲ ನೀಡುವ ಗ್ರಹವಾಗಿದ್ದಾನೆ. ಶನಿದೇವನ ಆಶೀರ್ವಾದ ಪಡೆಯಲು ಮತ್ತು ಜೀವನದಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಿಕೊಳ್ಳಲು ‘ಶಮಿ ವೃಕ್ಷ’ವನ್ನು (ಬನ್ನಿ ಮರ) ನೆಡುವುದು ಅತ್ಯಂತ ಶುಭ. ಇದು ಮನಸ್ಸಿಗೆ ಸ್ಥಿರತೆ ಮತ್ತು ತಾಳ್ಮೆಯನ್ನು ನೀಡುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಬಿಎಫ್​​ಸಿ ಮತ್ತು ‘ಜನ ನಾಯಗನ್’ ನಡುವೆ ನಿಜಕ್ಕೂ ನಡೆದಿದ್ದೇನು? ವಿವರಿಸಿದ ನಿರ್ದೇಶಕ ವಿನೋದ್ – Kannada News | What realy happened between CBFC and Jana Nayagan team director explains

ವಿಜಯ್ (Vijay) ನಟನೆಯ ‘ಜನ ನಾಯಗನ್’ ಇಂದು (ಜುಲೈ 23) ಬಿಡುಗಡೆ ಆಗಿದೆ. ಜನವರಿ ತಿಂಗಳಲ್ಲಿ ಬಿಡುಗಡೆ ಆಗಬೇಕಿದ್ದ ಸಿನಿಮಾ ಹಲವಾರು ಸಮಸ್ಯೆಗಳನ್ನು ಎದುರಿಸಿ ಕೊನೆಗೂ ಇಂದು ರಿಲೀಸ್ ಆಗಿದೆ. ವಿಜಯ್ ಅವರ ಯಾವೊಂದು ಸಿನಿಮಾ ಸಹ ಸಿಬಿಎಫ್​​ಸಿ ಇಂದ ಸಮಸ್ಯೆಗೆ ಒಳಗಾಗಿದ್ದಿಲ್ಲ. ಸಿಬಿಎಫ್​​ಸಿಯಲ್ಲಿ ಸಮಸ್ಯೆಗೆ ಒಳಗಾಬಹುದಾದಂಥಹ ಕಂಟೆಂಟ್ ಉಳ್ಳ ಸಿನಿಮಾಗಳನ್ನು ವಿಜಯ್ ಒಪ್ಪಿಕೊಳ್ಳುವುದೇ ಇಲ್ಲ. ಕೌಟುಂಬಿಕ ಪ್ರೇಕ್ಷಕರು ಹೆಚ್ಚಿಗಿರುವ ವಿಜಯ್ ರಿಸ್ಕ್​​ಗಳನ್ನು ತೆಗೆದುಕೊಳ್ಳುವುದಿಲ್ಲ. ಆದರೂ ಸಹ ಅವರ ನಟನೆಯ ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಲಿಲ್ಲ. ಸಿಬಿಎಫ್​​ಸಿಯಿಂದ ಸಿನಿಮಾಕ್ಕೆ ಸಾಕಷ್ಟು ಸಮಸ್ಯೆಗಳು ಎದುರಾಯ್ತು. ನ್ಯಾಯಾಲಯದಲ್ಲಿಯೂ ಶೀಘ್ರ ನ್ಯಾಯ ದೊರಕಲಿಲ್ಲ. ಆದರೆ ನಿಜಕ್ಕೂ ಸಿಬಿಎಫ್​​ಸಿ ಮತ್ತು ‘ಜನ ನಾಯಗನ್’ ಚಿತ್ರತಂಡದ ನಡುವೆ ಉಂಟಾದ ಸಮಸ್ಯೆ ಏನು ಎಂಬುದನ್ನು ಸಿನಿಮಾದ ನಿರ್ದೇಶಕ ವಿನೋದ್ ವಿವರಿಸಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿರುವ ವಿನೋದ್, ಹೆಚ್ಚಿನ ಜನರು ಚಲನಚಿತ್ರ ಬಿಡುಗಡೆಗೆ ಸುಮಾರು 10 ದಿನಗಳ ಮೊದಲು ಪ್ರಮಾಣೀಕರಣ (ಸೆನ್ಸಾರ್) ಪ್ರಕ್ರಿಯೆಯನ್ನು ಪ್ರಾರಂಭಿಸಿದರೆ, ತಾವು ಸುಮಾರು 20 ದಿನಗಳ ಮುಂಚಿತವಾಗಿ ಅದನ್ನು ಮಾಡಿದ್ದೆವು ಎಂದು ಹೇಳಿದ್ದಾರೆ. ಸಿಬಿಎಫ್​​ಸಿ ಸಮಿತಿಯು ಚಲನಚಿತ್ರವನ್ನು ವೀಕ್ಷಿಸಿ, ಚಿತ್ರದಲ್ಲಿ ‘ಯಾವುದೇ ಸಮಸ್ಯೆಗಳಿಲ್ಲ’ ಎಂದು ಹೇಳಿತು ಮತ್ತು ಮೌಖಿಕವಾಗಿ U/A 16+ ಪ್ರಮಾಣಪತ್ರ ನೀಡುವುದಾಗಿ ಭರವಸೆ ನೀಡಿತು. ಕೆಲ ಹಿಂಸಾತ್ಮಕ ದೃಶ್ಯಗಳನ್ನು ತೆಗೆದುಹಾಕುವ ಷರತ್ತಿನೊಂದಿಗೆ ಇದು ಬಂದಿತು ಮತ್ತು ತಂಡವು ಅದಕ್ಕೆ ಒಪ್ಪಿಕೊಂಡಿತ್ತಂತೆ.

ಆ ಬಳಿಕ ಇನ್ನೂ ಕೆಲವು ಬದಲಾವಣೆಗಳನ್ನು ಮಾಡಲು ಕೇಳಲಾಯಿತು. ಮತ್ತೆ, ನಮ್ಮ ತಂಡ ಬದಲಾವಣೆ ಮಾಡಲು ಒಪ್ಪಿಕೊಂಡಿತು. ಆದರೆ ಪರಿಷ್ಕೃತ ಆವೃತ್ತಿಯನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಪ್ರಯತ್ನಿಸಿದಾಗ, ಅದು ಸಾಧ್ಯವಾಗಲಿಲ್ಲ. ನಾವು ಫೋನ್ ಕರೆಗಳು, ಇಮೇಲ್ ಮತ್ತು ಮುಖ್ಯ ಕಚೇರಿಗೆ ಸಂದೇಶ ಕಳುಹಿಸುವ ಮೂಲಕ ಸಿಬಿಎಫ್​​ಸಿ ಗೆ ಈ ಬಗ್ಗೆ ಮಾಹಿತಿ ನೀಡಿದೆವು. ಆಗಲೇ ನಮಗೆ ತಿಳಿದಿದ್ದು ಚಿತ್ರವನ್ನು ಪರಿಷ್ಕರಣಾ ಸಮಿತಿಗೆ ಕಳುಹಿಸಲಾಗಿದೆ ಎಂದು. ಚಿತ್ರದ ತಂಡವು ನ್ಯಾಯಾಲಯಕ್ಕೂ ಈ ಘಟನೆಗಳನ್ನು ತಿಳಿಸಿತ್ತು, ಆದರೆ ಅಲ್ಲಿಯೂ ಅವರಿಗೆ ಯಾವುದೇ ಪರಿಹಾರ ದೊರೆಯಲಿಲ್ಲ’ ಎಂದಿದ್ದಾರೆ ವಿನೋದ್.

ಇದನ್ನೂ ಓದಿ:‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ

ನಂತರ ವಿನೋದ್ ಅವರು ‘ಜನ ನಾಯಕನ್’ ವಿರುದ್ಧ ಸಿಬಿಎಫ್​​ಸಿಗೆ ಬಂದ ದೂರಿನ ಬಗ್ಗೆ ಮಾತನಾಡಿದರು. “ಚಿತ್ರದ ವಿರುದ್ಧ ಬಂದ ದೂರಿನಿಂದಾಗಿ ಪೋರ್ಟಲ್ ಅನ್ನು ಬ್ಲಾಕ್ ಮಾಡಲಾಗಿದೆ ಎಂದು ನಮಗೆ ತಿಳಿಸಲಾಯಿತು. ಅಷ್ಟರೊಳಗೆ ಚಿತ್ರಮಂದಿರಗಳು, ವಿತರಕರು ಮತ್ತು ಅಭಿಮಾನಿಗಳು ಬಿಡುಗಡೆಗಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡಿದ್ದರು. ನಾವು ಎಲ್ಲರಿಗೂ ಉತ್ತರಿಸಬೇಕಿತ್ತು, ಆದರೆ ಚಿತ್ರಕ್ಕೆ ಪ್ರಮಾಣಪತ್ರ ಸಿಗುತ್ತದೋ ಇಲ್ಲವೋ ಎಂಬುದು ನಮಗೂ ತಿಳಿದಿರಲಿಲ್ಲ” ಎಂದು ಅವರು ಹೇಳಿದರು.

ಸ್ಪಷ್ಟತೆ ಪಡೆಯಲು ತಾವು ಮಾಡಿದ ಪ್ರಯತ್ನಗಳು ವಿಫಲವಾದವು, ‘ನಮಗೆ ಅನುಮೋದನೆಯೂ ಸಿಗಲಿಲ್ಲ ಅಥವಾ ತಿರಸ್ಕಾರವೂ ಸಿಗಲಿಲ್ಲ. ಮೊಕದ್ದಮೆ ಹೂಡಿದ ನಂತರವೇ ಚಿತ್ರ ಮರುಪರಿಶೀಲನೆಗೆ ಒಳಪಡಲಿದೆ ಎಂಬ ಪ್ರತಿಕ್ರಿಯೆ ಸಿಕ್ಕಿತು. ಸೆನ್ಸಾರ್ ಬೋರ್ಡ್‌ನಲ್ಲಿ ಎಂದಿಗೂ ಸಮಸ್ಯೆಯಿರಲಿಲ್ಲ ಎಂದು ನಾನು ನಂಬುತ್ತೇನೆ. ವಿಳಂಬದ ಹಿಂದೆ ಇತರ ಕಾರಣಗಳು ಇರಬಹುದು, ಆದರೆ ಸಾಕ್ಷ್ಯವಿಲ್ಲದೆ ನಾನು ಯಾರ ಹೆಸರನ್ನೂ ಹೇಳಲಾರೆ. ಕಾನೂನು ತನ್ನದೇ ಆದ ಅಧಿಕಾರವನ್ನು ಹೊಂದಿದೆ, ಮತ್ತು ಪುರಾವೆಗಳಿಲ್ಲದೆ ಆರೋಪ ಮಾಡಲು ನಾನು ಬಯಸುವುದಿಲ್ಲ” ಎಂದು ವಿನೋದ್ ಹೇಳಿದ್ದಾರೆ.

ಇದೇ ಮೇ ತಿಂಗಳಲ್ಲಿ ‘ಪರಿಮಳ ಆಂಡ್ ಕೋ’ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಅವರನ್ನು ಚಿತ್ರದ ಬಿಡುಗಡೆಯ ಬಗ್ಗೆ ಕೇಳಲಾಗಿತ್ತು. “ಅದು ನನ್ನ ಕೈಯಲ್ಲಿಲ್ಲ. ಸತ್ಯವನ್ನು ಹೇಳುವ ಧೈರ್ಯವೂ ನನಗೆ ಇಲ್ಲ. ಒಂದು ವೇಳೆ ನನಗೆ ಧೈರ್ಯವಿದ್ದರೂ, ಅದನ್ನು ಹಂಚಿಕೊಳ್ಳುವ ಧೈರ್ಯ ನಿಮಗಿರುವುದಿಲ್ಲ” ಎಂದು ಅವರು ಹೇಳಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:13 am, Thu, 23 July 26

Source link

ಸೂಟ್​ಕೇಸ್​ನಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣ ಭೇದಿಸಿದ ಬೆಂಗಳೂರು ಪೊಲೀಸರು: 24 ಗಂಟೆಯಲ್ಲಿ ಆರೋಪಿಯ ಬಂಧನ – Kannada News | Bengaluru Murder Case: 21 Year Old Arrested Within 24 Hours for Killing Woman to Rob Gold Jewellery

ಬೆಂಗಳೂರು, ಜುಲೈ 23: ಬೆಂಗಳೂರಿನ (Bengaluru) ಕೆಂಗೇರಿ ಸಮೀಪದ ರಾಮೋಹಳ್ಳಿಯ ತಿಮ್ಮಪ್ಪ ಕೆರೆಯಲ್ಲಿ ಸೂಟ್‌ಕೇಸ್‌ನಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ, ಶವ ಪತ್ತೆಯಾದ 24 ಗಂಟೆಯೊಳಗೆ 21 ವರ್ಷದ ಯುವಕನನ್ನು ಬಂಧಿಸಲಾಗಿದ್ದು, ಚಿನ್ನಾಭರಣ ದೋಚುವ ಉದ್ದೇಶದಿಂದ ಮಹಿಳೆಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಚಿನ್ನಾಭರಣಕ್ಕಾಗಿ ಚಲ್ಲಘಟ್ಟ ಜಯಮ್ಮ ಹತ್ಯೆ ಶಂಕೆ

ಪೊಲೀಸರ ಮಾಹಿತಿ ಪ್ರಕಾರ, ಮೃತರನ್ನು ಕೆಂಗೇರಿ ಸಮೀಪದ ಚಲ್ಲಘಟ್ಟ ನಿವಾಸಿ 61 ವರ್ಷದ ಜಯಮ್ಮ ಎಂದು ಗುರುತಿಸಲಾಗಿದೆ. ಅವರು ನಾಪತ್ತೆಯಾಗಿದ್ದ ಬಗ್ಗೆ ಕುಟುಂಬದವರು ದೂರು ನೀಡಿದ್ದರು. ಜುಲೈ 21ರಂದು ತಿಮ್ಮಪ್ಪ ಕೆರೆಯಲ್ಲಿ ಕೆಂಪು ಬಣ್ಣದ ಸೂಟ್‌ಕೇಸ್‌ನಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.

ತನಿಖೆ ವೇಳೆ ಕುಂಬಳಗೋಡು ಪೊಲೀಸರು ಚಲ್ಲಘಟ್ಟ ನಿವಾಸಿ 21 ವರ್ಷದ ಗಗನ್ ಆರ್‌ನನ್ನು ಬಂಧಿಸಿದ್ದಾರೆ. ಆರೋಪಿ ಚಿನ್ನಾಭರಣ ಕಳವು ಮಾಡುವ ಉದ್ದೇಶದಿಂದ ಜಯಮ್ಮ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ ಆರೋಪಿ

ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಯು ಮಹಿಳೆಯ ಚಿನ್ನದ ಸರ ಹಾಗೂ ಕಿವಿಯೋಲೆಗಳನ್ನು ತೆಗೆದುಕೊಂಡ ನಂತರ ಮೃತದೇಹವನ್ನು ಮನೆಯಲ್ಲಿದ್ದ ಸೂಟ್‌ಕೇಸ್‌ನಲ್ಲಿ ಇರಿಸಿ, ಅದನ್ನು ಕೆರೆಯಲ್ಲಿ ಬಿಸಾಡಿದ್ದಾನೆ. ಈ ಮೂಲಕ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಮೈಸೂರಿನಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿಯ ಮೇಲೆ ಗ್ಯಾಂಗ್ ರೇಪ್: ಮೂವರು ಅರೆಸ್ಟ್

ಪ್ರಕರಣವನ್ನು ವಿಶೇಷ ತನಿಖಾ ತಂಡ 24 ಗಂಟೆಯೊಳಗೆ ಭೇದಿಸಿದ್ದು, ಸಿಸಿಟಿವಿ ದೃಶ್ಯಗಳು ಸೇರಿದಂತೆ ವೈಜ್ಞಾನಿಕ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಸ್ಲಿಮರು ಸಹ ಪೂಜೆ ಸಲ್ಲಿಸುವ ಅಪರೂಪದ ಹಿಂದೂ ದೇವಾಲಯ; ಜೆಜುರಿ ಖಂಡೋಬಾ ದೇವಾಲಯದ ಹಿಂದಿನ ವಿಶೇಷತೆ ಇದು..! – Kannada News | Jejuri Khandoba Temple: Golden Jejuri’s Ancient Hindu Muslim Harmony in Maharashtra

ಜೆಜುರಿ ಖಂಡೋಬಾ ದೇವಾಲಯImage Credit source: Wikipedia

ಭಾರತವು ವೈವಿಧ್ಯಮಯ ಸಂಸ್ಕೃತಿ ಮತ್ತು ಆಚಾರ-ವಿಚಾರಗಳ ನೆಲೆವೀಡು. ಇದಕ್ಕೆ ಅತ್ಯುತ್ತಮ ಉದಾಹರಣೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜೆಜುರಿಯ ಬೆಟ್ಟದ ಮೇಲಿರುವ ಖಂಡೋಬಾ ದೇವಾಲಯ. ಈ ಆಧ್ಯಾತ್ಮಿಕ ಕ್ಷೇತ್ರವು ತನ್ನ ವಿಶಿಷ್ಟ ಆಚರಣೆಗಳು ಮತ್ತು ಧಾರ್ಮಿಕ ಸಹಬಾಳ್ವೆಯಿಂದಾಗಿ ದೇಶದಲ್ಲೇ ಅತ್ಯಂತ ಅಪರೂಪದ ಯಾತ್ರಾಸ್ಥಳವಾಗಿ ಗುರುತಿಸಿಕೊಂಡಿದೆ.

‘ಸೋನ್ಯಾಚಿ ಜೆಜುರಿ’ (ಚಿನ್ನದ ಜೆಜುರಿ):

ಜೆಜುರಿ ದೇವಾಲಯಕ್ಕೆ ಕಾಲಿಡುತ್ತಿದ್ದಂತೆ ಇಡೀ ಆವರಣವು ಹಳದಿ ಬಣ್ಣದಿಂದ ಕಂಗೊಳಿಸುತ್ತದೆ. ಪ್ರಸಿದ್ಧ ‘ಭಂಡಾರ ಉತ್ಸವ’ ಹಾಗೂ ‘ಚಂಪಾ ಷಷ್ಠಿ’ ಸಂದರ್ಭದಲ್ಲಿ ಸಾವಿರಾರು ಭಕ್ತರು ಗಾಳಿಯಲ್ಲಿ ಅರಿಶಿನ ಪುಡಿಯನ್ನು (ಭಂಡಾರ) ಎರಚುತ್ತಾ, “ಖಂಡೋಬಾ ಮಲ್ಹಾರ್” ಎಂದು ಜಪಿಸುತ್ತಾರೆ. ಕೆಲವೇ ಕ್ಷಣಗಳಲ್ಲಿ ಇಡೀ ದೇವಾಲಯವು ಚಿನ್ನದಂತೆ ಹೊಳೆಯುವುದರಿಂದ ಇದನ್ನು ಪ್ರೀತಿಯಿಂದ “ಸೋನ್ಯಾಚಿ ಜೆಜುರಿ” (ಗೋಲ್ಡನ್ ಜೆಜುರಿ) ಎಂದು ಕರೆಯಲಾಗುತ್ತದೆ. ಇಲ್ಲಿ ಅರಿಶಿನವನ್ನು ಸಮೃದ್ಧಿ ಮತ್ತು ದೈವಿಕ ಆಶೀರ್ವಾದದ ಸಂಕೇತವೆಂದು ಭಾವಿಸಲಾಗುತ್ತದೆ.

ಯಾರು ಈ ಖಂಡೋಬಾ?

ಹಲವರು ಇದನ್ನು ಶಿವನ ದೇವಾಲಯವೆಂದು ಪರಿಗಣಿಸಿದರೂ, ಇದು ಶಿವನ ಅವತಾರವಾದ ಖಂಡೋಬ ಸ್ವಾಮಿಗೆ (ಮಲ್ಹಾರಿ ಮಾರ್ತಾಂಡ) ಸಮರ್ಪಿತವಾಗಿದೆ. ಪುರಾಣಗಳ ಪ್ರಕಾರ, ಋಷಿ-ಮುನಿಗಳನ್ನು ಪೀಡಿಸುತ್ತಿದ್ದ ಮಣಿ ಮತ್ತು ಮಲ್ಲ ಎಂಬ ರಾಕ್ಷಸರನ್ನು ಸಂಹರಿಸಲು ಖಂಡೋಬನು ಅವತರಿಸಿದನು. ಡೆಕ್ಕನ್ ಪ್ರಸ್ಥಭೂಮಿ, ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ರೈತರು, ಕುರುಬರು, ಯೋಧರು ಹಾಗೂ ಗ್ರಾಮೀಣ ಸಮುದಾಯಗಳಿಗೆ ಇವನು ಮನೆದೇವರಾಗಿದ್ದು, ರಕ್ಷಕ ದೇವತೆಯಾಗಿ ಪೂಜಿಸಲ್ಪಡುತ್ತಾನೆ.

ಧಾರ್ಮಿಕ ಸಾಮರಸ್ಯದ ಜೀವಂತ ಸಾಕ್ಷಿ:

ಈ ದೇವಾಲಯದ ಅತ್ಯಂತ ವಿಶಿಷ್ಟ ಲಕ್ಷಣವೆಂದರೆ ಹಿಂದೂ-ಮುಸ್ಲಿಂ ಸೌಹಾರ್ದತೆ. ತಲೆಮಾರುಗಳಿಂದ ಸ್ಥಳೀಯ ಮುಸ್ಲಿಂ ಕುಟುಂಬಗಳು ಖಂಡೋಬನನ್ನು ತಮ್ಮ ರಕ್ಷಕನೆಂದು ನಂಬಿ ಪೂಜಿಸುತ್ತಾ ಬಂದಿವೆ. ಮುಸ್ಲಿಂ ಭಕ್ತರು ದೇವನನ್ನು ಪ್ರೀತಿಯಿಂದ “ಮಲ್ಲು ಖಾನ್” ಮತ್ತು “ಅಜ್ಮತ್ ಖಾನ್” ಎಂದು ಕರೆಯುತ್ತಾರೆ. ಐತಿಹಾಸಿಕವಾಗಿ ಮುಸ್ಲಿಂ ಆಡಳಿತಗಾರರು ಈ ದೇವಾಲಯಕ್ಕೆ ದೇಣಿಗೆ ನೀಡಿದ್ದು, ದೇವಾಲಯದ ಉತ್ಸವದ ಕುದುರೆಗಳ ಉಸ್ತುವಾರಿಯಂತಹ ಆನುವಂಶಿಕ ಜವಾಬ್ದಾರಿಗಳನ್ನು ಮುಸ್ಲಿಂ ಕುಟುಂಬಗಳು ಇಂದಿಗೂ ನಿರ್ವಹಿಸುತ್ತವೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

800 ವರ್ಷಗಳ ಸುದೀರ್ಘ ಇತಿಹಾಸ:

12 ನೇ ಶತಮಾನದಷ್ಟು ಹಳೆಯದಾದ ಈ ದೇವಾಲಯವನ್ನು ಹೇಮದ್ಪಂಥಿ ವಾಸ್ತುಶಿಲ್ಪ ಶೈಲಿಯಲ್ಲಿ ಜೆಜುರಿಗಡ್ ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಸುಂದರ ದೀಪಸ್ತಂಭಗಳ ನಡುವಿರುವ 385 ಕಲ್ಲಿನ ಮೆಟ್ಟಿಲುಗಳನ್ನು ಹತ್ತಿ ದೇವಾಲಯವನ್ನು ತಲುಪಬೇಕು. ಇತಿಹಾಸಕಾರರ ಪ್ರಕಾರ, ಇದು ಹಿಂದೂ, ಜೈನ ಮತ್ತು ಮುಸ್ಲಿಂ ಸಂಪ್ರದಾಯಗಳ ಸಾಂಸ್ಕೃತಿಕ ಸಮ್ಮಿಲನಕ್ಕೆ ಭಾಸವಾಗುವ ಅಪರೂಪದ ತಾಣ.

ತಲುಪುವುದು ಹೇಗೆ?

  • ಸ್ಥಳ: ಪುಣೆ ನಗರದಿಂದ ಸುಮಾರು 50 ಕಿ.ಮೀ ದೂರದಲ್ಲಿದೆ.
  • ರೈಲು ಮಾರ್ಗ: ಪುಣೆ-ಮಿರಜ್ ಮಾರ್ಗದಲ್ಲಿರುವ ‘ಜೆಜುರಿ ರೈಲು ನಿಲ್ದಾಣ’ಕ್ಕೆ ತಲುಪಬಹುದು.
  • ರಸ್ತೆ/ವಿಮಾನ: ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಥವಾ ಪುಣೆಯಿಂದ ಟ್ಯಾಕ್ಸಿ/MSRTC ಬಸ್‌ಗಳ ಮೂಲಕ 1.5 ರಿಂದ 2 ಗಂಟೆಗಳಲ್ಲಿ ತಲುಪಬಹುದು.

ಧರ್ಮಕ್ಕಿಂತ ನಂಬಿಕೆ ಮತ್ತು ಭಾವನೆ ದೊಡ್ಡದು ಎಂಬುದಕ್ಕೆ ಜೆಜುರಿಯ ಖಂಡೋಬಾ ದೇವಾಲಯವು ಭಾರತೀಯ ಆಧ್ಯಾತ್ಮಿಕ ಸಹಬಾಳ್ವೆಯ ಶ್ರೇಷ್ಠ ಸಂಕೇತವಾಗಿ ನಿಂತಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ – Kannada News | Ragini Dwivedi on Sarkari Nyayabele Angadi: Ambareesh Legacy at Trailer Launch

ಬಹುನಿರೀಕ್ಷಿತ ಸರ್ಕಾರಿ ನ್ಯಾಯಬೆಲೆ ಅಂಗಡಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವು ಇತ್ತೀಚೆಗೆ ನಡೆಯಿತು. ಈ ವೇಳೆ ಮಾತನಾಡಿದ ನಟಿ ರಾಗಿಣಿ ದ್ವಿವೇದಿ, ಈ ಸಿನಿಮಾ ತಮಗೆ ಕೇವಲ ಒಂದು ಚಿತ್ರವಲ್ಲ, ಅದೊಂದು ಸುಂದರ ಪ್ರಯಾಣ ಎಂದು ಬಣ್ಣಿಸಿದರು. ಈ ಕಥೆಯನ್ನು ಕೇಳಿದಾಗ, ತಮ್ಮ ವಿಭಿನ್ನ ಇಮೇಜ್‌ನಿಂದಾಗಿ ಈ ಪಾತ್ರವನ್ನು ನಿರ್ವಹಿಸಲು ಸಾಧ್ಯವಾಗುತ್ತದೆಯೇ ಎಂದು ತಮಗೆ ತಾವೇ ಪ್ರಶ್ನೆ ಮಾಡಿಕೊಂಡರಂತೆ.

ರಾಗಿಣಿ ದ್ವಿವೇದಿ ಅವರು, ಚಿತ್ರದ ಪಾತ್ರಕ್ಕಾಗಿ ಹಲವು ಹೋಮ್‌ವರ್ಕ್‌ ಮತ್ತು ಕಾರ್ಯಾಗಾರಗಳನ್ನು ನಡೆಸಿದ ಬಗ್ಗೆ ವಿವರಿಸಿದರು. ಲೇಖಕರ ಬರಹ ಶೈಲಿ, ಸಂಭಾಷಣೆಗಳು ಮತ್ತು ಚಿತ್ರದ ಧ್ವನಿಯು ಸವಾಲಿನಿಂದ ಕೂಡಿದ್ದು, ಇದು ಅಮೇಜಿಂಗ್ ಅನುಭವ ನೀಡಿದೆ ಎಂದರು. ಇಡೀ ತಂಡಕ್ಕೆ ಅಂಬರೀಷ್ ಅಂಕಲ್ ಅವರ ಆಶೀರ್ವಾದವಿದೆ. ಮಂಡ್ಯದಲ್ಲಿ, ಅಂಬಿ ಅಂಕಲ್ ಅವರ ಊರಿನಲ್ಲಿಯೇ ಚಿತ್ರೀಕರಣ ನಡೆಸಿರುವುದು ವಿಶೇಷ. ಕನ್ನಡ ಚಿತ್ರರಂಗಕ್ಕೆ ಅಂಬರೀಷ್ ಅವರ ಕೊಡುಗೆಯನ್ನು ಸ್ಮರಿಸಿದ ರಾಗಿಣಿ, ಇದು ಭಾವನಾತ್ಮಕ ಪ್ರಯಾಣ ಎಂದು ಹೇಳಿದರು. ಸರಳ ಕುಟುಂಬದ ಕಥೆ, ಪ್ರೀತಿ ಮತ್ತು ತ್ಯಾಗದ ಬಗ್ಗೆ ಚಿತ್ರವಿರುವುದಾಗಿ ತಿಳಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾಮನ್‌ವೆಲ್ತ್ ಗೇಮ್ಸ್ 2026: ಕಣದಲ್ಲಿರುವ 126 ಭಾರತೀಯರ ಪಟ್ಟಿ ಇಲ್ಲಿದೆ – Kannada News | Commonwealth games 2026 indian players full list

ಬಹುನಿರೀಕ್ಷಿತ 2026ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಇಂದು (ಜುಲೈ 23) ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ಅದ್ಧೂರಿ ಚಾಲನೆ ಸಿಗಲಿದೆ. ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತವು 126 ಸದಸ್ಯರ ಬಲಿಷ್ಠ ಅಥ್ಲೀಟ್‌ಗಳ ತಂಡವನ್ನು ಕಣಕ್ಕಿಳಿಸುತ್ತಿದೆ. ಇದರಲ್ಲಿ 77 ಪುರುಷರು ಮತ್ತು 48 ಮಹಿಳಾ ಕ್ರೀಡಾಪಟುಗಳು ಒಳಗೊಂಡಿದ್ದು, ಒಟ್ಟು 8 ಪ್ರಮುಖ ಕ್ರೀಡೆಗಳು ಹಾಗೂ 5 ಪ್ಯಾರಾ-ಕ್ರೀಡೆಗಳಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ವೇಟ್‌ಲಿಫ್ಟಿಂಗ್ ತಾರೆ ಮೀರಾಬಾಯಿ ಚಾನು ಮತ್ತು ಸಮಾರೋಪ ಸಮಾರಂಭದಲ್ಲಿ ಬಾಕ್ಸಿಂಗ್ ಚಾಂಪಿಯನ್ ಲವ್ಲಿನಾ ಬೊರ್ಗೊಹೈನ್ ಭಾರತದ ಧ್ವಜಧಾರಿಗಳಾಗಿ ಹೆಮ್ಮೆಯಿಂದ ಮುನ್ನಡೆಯಲಿದ್ದಾರೆ.  ಇನ್ನು ಈ ಬಾರಿ ಭಾರತದ ಪರ ಕಣಕ್ಕಿಳಿಯಲಿರುವ ಕ್ರೀಡಾಪಟುಗಳ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ:

ಅಥ್ಲೆಟಿಕ್ಸ್ (32 ಕ್ರೀಡಾಪಟುಗಳು):

  • ಪುರುಷರು: ನೀರಜ್ ಚೋಪ್ರಾ, ಮುರಳಿ ಶ್ರೀಶಂಕರ್, ಪ್ರವೀಣ್ ಚಿತ್ರವೇಲ್, ಸೆಲ್ವ ಪ್ರಭು, ತಜಿಂದರ್ ಪಾಲ್ ಸಿಂಗ್ ತೂರ್, ತೇಜಸ್ವಿನ್ ಶಂಕರ್, ಗುರುಇಂದರ್ವೀರ್ ಸಿಂಗ್, ಅನಿಮೇಶ್ ಕುಜುರ್, ಕುಲದೀಪ್ ಕುಮಾರ್, ದೇವ್ ಕುಮಾರ್ ಮೀನಾ, ಸರ್ವೇಶ್ ಅನಿಲ್ ಕುಶಾರೆ, ಸಮರ್ದೀಪ್ ಸಿಂಗ್ ಗಿಲ್, ಆದರ್ಶ್ ರಾಮ್, ಲೋಕೇಶ್ ಸತ್ಯನಾಥನ್, ಜಿ ಪ್ರೀತಮ್, ಜಿ ಸೌರಭ್, ಟಿ ಶಿರ್ಸೆ, ವೈ ಪಾಲಾಕ್ಷ, ಎಸ್ ಕೆ ತಮಿಲರಸನ್, ಆರ್ ಯಾದವ್, ವೈ ವಿ ಸಿಂಗ್, ವಿ ಟಿಕೆ, ಆರ್ ರಮೇಶ್.
  • ಮಹಿಳೆಯರು: ಪಾರುಲ್ ಚೌಧರಿ, ಪ್ರಿಯಾಂಕಾ ಗೋಸ್ವಾಮಿ, ಪೂಜಾ ಸಿಂಗ್, ಮನ್‌ಪ್ರೀತ್ ಕೌರ್, ಸೀಮಾ ಕಲಿರಾಮ್ನಾ, ನಿಧಿ ರಾಣಿ, ರವೀನಾ, ಆರ್ ಕೌರ್, ಎನ್ ಪಾಠಕ್, ಎ ಬಾಬು.

ಬಾಕ್ಸಿಂಗ್ (14 ಕ್ರೀಡಾಪಟುಗಳು):

  • ಮಹಿಳೆಯರು: ಲವ್ಲಿನಾ ಬೊರ್ಗೊಹೈನ್ (75 ಕೆಜಿ), ಪ್ರೀತಿ ಪವಾರ್ (54 ಕೆಜಿ), ಸಾಕ್ಷಿ ಚೌಧರಿ (51 ಕೆಜಿ), ಜೈಸ್ಮಿನ್ ಲ್ಯಾಂಬೋರಿಯಾ (57 ಕೆಜಿ), ಪ್ರಿಯಾ ಘಂಘಾಸ್ (60 ಕೆಜಿ), ಪರ್ವೀನ್ ಹೂಡಾ (65 ಕೆಜಿ), ಅರುಂಧತಿ ಚೌಧರಿ (70 ಕೆಜಿ).
  • ಪುರುಷರು: ಜಾಡುಮಣಿ ಸಿಂಗ್ (55 ಕೆಜಿ), ಸಚಿನ್ ಸಿವಾಚ್ (60 ಕೆಜಿ), ಆದಿತ್ಯ ಪ್ರತಾಪ್ ಸಿಂಗ್ (65 ಕೆಜಿ), ಸುಮಿತ್ ಕುಂದು (70 ಕೆಜಿ), ಅಂಕುಶ್ (80 ಕೆಜಿ), ಕಪಿಲ್ ಪೋಖರಿಯಾ (90 ಕೆಜಿ), ನರೇಂದರ್ ಬರ್ವಾಲ್ (+90 ಕೆಜಿ).

ಜೂಡೋ (14 ಕ್ರೀಡಾಪಟುಗಳು):

  • ಮಹಿಳೆಯರು: ಅಸ್ಮಿತಾ ಡೇ (-48 ಕೆಜಿ), ಶ್ರದ್ಧಾ ಕಡುಬಾಳ್ ಚೋಪಾಡೆ (-52 ಕೆಜಿ), ಯಾಮಿನಿ ಮೌರ್ಯ (-57 ಕೆಜಿ), ಉನ್ನತಿ ಶರ್ಮಾ (-63 ಕೆಜಿ), ಇನುಂಗಂಬಿ ತಖೇಲ್ಲಂಬಮ್ (-70 ಕೆಜಿ), ಇಶcomponents್ರೂಪ್ ನಾರಂಗ್ (-78 ಕೆಜಿ), ತುಲಿಕಾ ಮಾನ್ (+78 ಕೆಜಿ).
  • ಪುರುಷರು: ಹರ್ಷ್ ಸಿಂಗ್ (-60 ಕೆಜಿ), ರೋಹಿತ್ ಬಶೀರ್ ಮಜ್ಗುಲ್ (-66 ಕೆಜಿ), ಅರುಣ್ ಕುಮಾರ್ (-73 ಕೆಜಿ), ಹರ್ಷ್ ತೋಕಸ್ (-81 ಕೆಜಿ), ಕರಂಜಿತ್ ಸಿಂಗ್ ಮಾನ್ (-90 ಕೆಜಿ), ಅವತಾರ್ ಸಿಂಗ್ (-100 ಕೆಜಿ), ಯಶ್ ಘಂಘಾಸ್ (+100 ಕೆಜಿ).

ವೇಟ್‌ಲಿಫ್ಟಿಂಗ್ (12 ಕ್ರೀಡಾಪಟುಗಳು):

  • ಮಹಿಳೆಯರು: ಸೈಖೋಮ್ ಮೀರಾಬಾಯಿ ಚಾನು (48 ಕೆಜಿ), ಗ್ಯಾನೇಶ್ವರಿ ಯಾದವ್, ಬಿಂದ್ಯಾರಾಣಿ ದೇವಿ (58 ಕೆಜಿ), ಹರ್‌ಜಿಂದರ್ ಕೌರ್, ಸಂಜನಾ, ಎಸ್ ನಿರುಪಮಾ ದೇವಿ, ಮನ್‌ಪ್ರೀತ್ ಕೌರ್.
  • ಪುರುಷರು: ರಿತಿಕ್ ಸಿಂಗ್, ಮಧವನ್ ರಾಜಾ, ಆಚಿಂತ ಶೆಯುಲಿ, ಪ್ರದೀಪ್ ಸಿಂಗ್, ಲವ್‌ಪ್ರೀತ್ ಸಿಂಗ್.

ಜಿಮ್ನಾಸ್ಟಿಕ್ಸ್ (8 ಕ್ರೀಡಾಪಟುಗಳು):

  • ಮಹಿಳೆಯರು: ಪ್ರಣತಿ ನಾಯಕ್, ನವ್ಯಾ ಅಗರ್ವಾಲ್, ಇಶಿತಾ ರೇವ್ಲೆ, ಪ್ರೊಟಿಸ್ತಾ ಸಮಂತಾ.
  • ಪುರುಷರು: ತಪನ್ ಮೊಹಾಂತಿ, ತಸ್ಮಿತ್ ದಾಸ್, ಸತ್ಯಜಿತ್ ಕೃಷ್ಣ ಪಾಲ್, ಯೋಗೇಶ್ವರ ಸಿಂಗ್.

ಲಾನ್ ಬೌಲ್ಸ್ (6 ಕ್ರೀಡಾಪಟುಗಳು):

  • ಮಹಿಳೆಯರು: ನಯನಮೋನಿ ಸೈಕಿಯಾ, ರೂಪಾ ರಾಣಿ ತಿರ್ಕಿ, ಪಿಂಕಿ ಸಿಂಗ್.
  • ಪುರುಷರು: ಪುಟುಲ್ ಸೊನೊವಾಲ್, ನವನೀತ್ ಸಿಂಗ್, ದಿನೇಶ್ ಕುಮಾರ್.

ಪ್ಯಾರಾ-ಅಥ್ಲೆಟಿಕ್ಸ್ (11 ಕ್ರೀಡಾಪಟುಗಳು):

  • ಸ್ಪರ್ಧಿಗಳು: ಧರ್ಮವೀರ್ ಕುಮಾರ್, ದೇವೇಂದ್ರ ಗಾವಿತ್, ಸಚಿನ್ ರಾಣಾ, ಶ್ರೇಯಾಂಶ್ ತ್ರಿವೇದಿ, ರಂಜಿತ್ ಭಟ್, ಸೂರಜ್ ಜುಯಲ್, ಮೊಹಮ್ಮದ್ ಬಾಸಿಲ್, ರಘು ಷಣ್ಮುಗಂ, ಸಾಗರ್ ಥಾಯತ್, ಶರ್ಮಿಳಾ, ಎಸ್ ಕೆ ಶೈಲಾ.

ಪ್ಯಾರಾ-ಪವರ್‌ಲಿಫ್ಟಿಂಗ್ (7 ಕ್ರೀಡಾಪಟುಗಳು):

  • ಸ್ಪರ್ಧಿಗಳು: ಸುಧೀರ್, ಪ್ರಮೋದ್ ಕುಮಾರ್, ಅಶೋಕ್ ಕುಮಾರ್ ಮಲಿಕ್, ಝಂಡು ಕುಮಾರ್, ಜಸ್‌ಪ್ರೀತ್ ಕೌರ್, ಸುಮನ್ ದೇವಿ, ಕಸ್ತೂರಿ ರಾಜಾಮಣಿ.

ಪ್ಯಾರಾ-ಸ್ವಿಮ್ಮಿಂಗ್ (6 ಕ್ರೀಡಾಪಟುಗಳು):

  • ಸ್ಪರ್ಧಿಗಳು: ಸುಯಶ್ ನಾರಾಯಣ್ ಜಾಧವ್, ಅಲಿ ಇಮಾಮ್, ರವಿ ವೀರ ವೆಂಕಟ ಬುಡಿಗಿನ, ಚೈತನ್ಯ ವಿಶ್ವಾಸ್ ಕುಲಕರ್ಣಿ, ತೇಜಸ್ ನಂದಕುಮಾರ್, ಸ್ವಸ್ತಿಕ್ ಪಾಟೀಲ್.

ಇದನ್ನೂ ಓದಿ: IND vs ZIM: ಟೀಮ್ ಇಂಡಿಯಾದ 7 ಆಟಗಾರರು ಅಲಭ್ಯ..!

ವೀಲ್‌ಚೇರ್ ಬಾಸ್ಕೆಟ್‌ಬಾಲ್:

  • ಮಹಿಳಾ ತಂಡ: ರೀನಾ ರಮೇಶ್‌ಚಂದ್ರ ಗುಪ್ತಾ, ಐರೆಂಗ್ಬಾಮ್ ರಿತು ಚಾನು, ಜಾಧವ್ ಮೀನಾಕ್ಷಿ ಹರಿಶ್ಚಂದ್ರ, ರಾಯಣ್ಣವರ್ ಲಕ್ಷ್ಮಿ ರಾಯಪ್ಪ.

ಪ್ಯಾರಾ-ಟ್ರ್ಯಾಕ್ ಸೈಕ್ಲಿಂಗ್:

  • ಸ್ಪರ್ಧಿ: ಲಿಶಾ ದಾಸ್.

Source link

Exit mobile version