ಕೈಕೋಳಗಳ ಬದಲು ಹೂಮಾಲೆ: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜೋಡಿಯ ‘ಜೈಲು ಕಲ್ಯಾಣ’ – Kannada News | Jodhpur Jail Wedding: Life Term Inmates Find Love and Marry in Open Prison
ಜೈಪುರ, ಜುಲೈ 23: ಸಾಮಾನ್ಯವಾಗಿ ಜೈಲು(Jail) ಎಂದರೆ ಕಟ್ಟುನಿಟ್ಟಿನ ಶಿಸ್ತು, ಎತ್ತರದ ಕಲ್ಲಿನ ಗೋಡೆಗಳು ಹಾಗೂ ತಾವೆಸಗಿದ ಅಪರಾಧಗಳ ಕಹಿ ನೆನಪುಗಳನ್ನು ಬಿಟ್ಟು ಕೈದಿಗಳಿಗೆ ಮತ್ತೇನು ಸಿಗಲು ಸಾಧ್ಯ. ಆದರೆ ಜೋಧ್ಪುರದ ಮಂಡೋರ್ ಓಪನ್ ಜೈಲಿನಲ್ಲಿ ಜೈಲಾಧಿಕಾರಿಗಳ ಆಜ್ಞೆಯ ಬದಲು ಮದುವೆಯ ಮಂತ್ರಗಳು ಮೊಳಗಿವೆ, ಕೈಕೋಳ ಧರಿಸಿದ್ದ ಕೈಗಳಲ್ಲಿ ಕೈದಿಗಳು ಹೂಮಾಲೆ ವಿನಿಮಯ ಮಾಡಿಕೊಂಡಿದ್ದಾರೆ. ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮುಲಾರಾಮ್ ಮತ್ತು ಸೀಮಾ ಎಂಬ ಇಬ್ಬರು ಕೈದಿಗಳು, ರಾಜಸ್ಥಾನ ಹೈಕೋರ್ಟ್‌ನ ವಿಶೇಷ ಅನುಮತಿ…