ಜಮೀರ್ ಅಹ್ಮದ್ಗೆ ಡಿಕೆ ಶಿವಕುಮಾರ್ ಸಂಪುಟದಲ್ಲಿ ಮುಂದೆಯೂ ಸ್ಥಾನ ಸಿಗೋದು ಅನುಮಾನ! – Kannada News
ಬೆಂಗಳೂರು, ಜೂನ್ 4: ಸಿದ್ದರಾಮಯ್ಯ ಸರ್ಕಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ಮುಖವಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ಗೆ (Zameer Ahmed Khan) ಡಿಕೆ ಶಿವಕುಮಾರ್ (DK Shivakumar) ನೂತನ ಸಂಪುಟದಲ್ಲಿ ಮೊದಲ ಅವಕಾಶ ಕೈತಪ್ಪಿದೆ. ಸಚಿವ ಸಂಪುಟ ವಿಸ್ತರಣೆ ವೇಳೆಯೂ ಸ್ಥಾನ ತಪ್ಪುವ ಸಾಧ್ಯತೆ ದಟ್ಟವಾಗಿದೆ. ಮುಂದಿನ ದಿನಗಳಲ್ಲೂ ಕಾಂಗ್ರೆಸ್ 2.0 ಸರ್ಕಾರದಲ್ಲಿ ಜಮೀರ್ಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಕ್ಷೀಣಿಸಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ದಾವಣಗೆರೆ ದಕ್ಷಿಣ ಉಪಚುನಾವಣೆಯ ವೇಳೆ ಉಂಟಾದ…