ಬೀದರ್​: ಕಾರಂಜಾ ಕಾಲುವೆ ದುರಸ್ತಿಗೆ 181 ಕೋಟಿ ರೂ ಬಿಡುಗಡೆಗೆ ಸಂಪುಟ ಅಸ್ತು; ಈಗಲಾದ್ರೂ ಸಿಗುತ್ತಾ ರೈತರಿಗೆ ನೀರು? – Kannada News | Bidar Karanga Canal Project Gets 181 Crore Boost, Reviving Farmers’ Irrigation Hopes After Decades

ಕಾರಂಜಾ ಬಲದಂಡೆ ಕಾಲುವೆImage Credit source: tv9 kannada

ಬೀದರ್, ಜುಲೈ 22: ಜಿಲ್ಲೆಯ ಸಾವಿರಾರು ರೈತರ (Farmers) ನೀರಾವರಿ ಕನಸಿಗೆ ಆಸರೆಯಾಗಬೇಕಿದ್ದ ಕಾರಂಜಾ ಬಲದಂಡೆ ಕಾಲುವೆ (Karanga Canal), ಇದೀಗ ರೈತರ ಪಾಲಿಗೆ ಕೇಲವ ಭರವಸೆಯಾಗಿ ಉಳಿದಿದೆ. ಕಾಲುವೆ ನಿರ್ಮಾಣವಾಗಿ ಎರಡು ದಶಕಗಳು ಕಳೆದರೂ ಕೊನೆಯ ಭಾಗದವರೆಗೆ ನೀರು ತಲುಪದ ಕಾರಣ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರತಿ ವರ್ಷ ಕಾಲುವೆ ದುರಸ್ತಿಗೆ ಲಕ್ಷಾಂತರ ರೂ ವೆಚ್ಚ ಮಾಡಿದರೂ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಇದೀಗ ಕಾರಂಜಾ ಬಲದಂಡೆ ಕಾಲುವೆ ಸಮಗ್ರ ದುರಸ್ತಿಗೆ 181 ಕೋಟಿ ರೂ ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ರೈತರ ಖುಷಿ ಹೆಚ್ಚಿಸಿದೆ.

ಪ್ರತಿ ವರ್ಷ ನೀರಿಗೆ ರೈತರು ಪರದಾಟ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಳ್ಳಿ ಕೆ. ಗ್ರಾಮದ ಬಳಿಯಿರುವ ಕಾರಂಜಾ ಜಲಾಶಯದ ನೀರು ಜಿಲ್ಲೆಯ ಸಾವಿರಾರು ಎಕರೆ ಕೃಷಿ ಭೂಮಿಗೆ ಜೀವನಾಡಿಯಾಗಬೇಕಿತ್ತು. ಆದರೆ ವಾಸ್ತವದಲ್ಲಿ ಕಾರಂಜಾ ಬಲದಂಡೆ ಕಾಲುವೆಯ ಕೊನೆಯ ಭಾಗದ ರೈತರಿಗೆ ಮಾತ್ರ ಇನ್ನೂ ನೀರು ಸಿಗುತ್ತಿಲ್ಲ. ಪ್ರತಿ ವರ್ಷ ಮಳೆಗಾಲ ಅಥವಾ ನೀರು ಬಿಡುವ ಮುನ್ನ ಕಾಲುವೆ ಸ್ವಚ್ಛತೆ, ದುರಸ್ತಿ ಮತ್ತು ನಿರ್ವಹಣೆ ಹೆಸರಿನಲ್ಲಿ ಲಕ್ಷಾಂತರ ರೂ ವೆಚ್ಚ ಮಾಡಲಾಗುತ್ತದೆ. ಆದರೆ ನೀರು ಮಾತ್ರ ಮಧ್ಯದಲ್ಲೇ ನಿಂತುಹೋಗುತ್ತದೆ. ಪರಿಣಾಮ ಕಾಲುವೆಯ ಕೊನೆಯ ಭಾಗದ ನೂರಾರು ಗ್ರಾಮಗಳ ರೈತರು ಪ್ರತಿ ವರ್ಷ ನೀರು ಸಿಗದೇ ಪರದಾಡುವಂತಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಭೀಕರ ಬರಗಾಲದ ಛಾಯೆ: ಕೆರೆಗಳು ಬರಡು, ಬೆಳೆ ಒಣಗಿ ಅನ್ನದಾತ ಕಂಗಾಲು!

ಕೃಷಿಗಾಗಿ ಕಾಲುವೆಯನ್ನೇ ನಂಬಿಕೊಂಡಿರುವ ರೈತರು ನೀರು ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಕಾಯುವಂತಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಇಂದು ನೀರು ಬರುತ್ತದೆ, ನಾಳೆ ನೀರು ಬರುತ್ತದೆ ಎಂದು ಹೇಳುತ್ತಲೇ ಇದ್ದಾರೆ. ಆದರೆ ನೀರು ಮಾತ್ರ ಕೊನೆಯ ಭಾಗದವರೆಗೆ ತಲುಪುವುದಿಲ್ಲ. ಹೀಗಾಗಿ ಕಾಲುವೆಯತ್ತ ರೈತರು ನೀರಿಗಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ.

ಮೂಲ ಸಮಸ್ಯೆಗೆ ಸಿಗದ ಶಾಶ್ವತ ಪರಿಹಾರ

ಕಾಲುವೆ ನಿರ್ಮಾಣವಾಗಿ ಸುಮಾರು ಎರಡು ದಶಕಗಳು ಕಳೆದಿವೆ. ಈ ಅವಧಿಯಲ್ಲಿ ಹಲವು ಬಾರಿ ದುರಸ್ತಿ ಕಾಮಗಾರಿ ನಡೆದಿದ್ದರೂ ಮೂಲ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಕೆಲವೆಡೆ ಕಾಲುವೆ ಒಡೆದು ಹೋಗಿರುವುದು ಮತ್ತೆ ಕೆಲವೆಡೆ ಹೂಳು ತುಂಬಿರುವುದು, ಇನ್ನೂ ಕೆಲವೆಡೆ ನೀರು ಸೋರುತ್ತಿದೆ. ಹೀಗಾಗಿ ಕೊನೆಯ ಭಾಗದ ರೈತರಿಗೆ ನೀರಾವರಿ ಸೌಲಭ್ಯ ದೊರೆಯುತ್ತಿಲ್ಲ. ಮಳೆ ಕೈಕೊಟ್ಟರೆ ಕಾರಂಜಾ ನೀರೇ ಆಧಾರ ಎಂದು ಭಾವಿಸಿದ್ದ ರೈತರು ಇದೀಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೋರ್‌ವೆಲ್‌ಗಳಲ್ಲೂ ನೀರಿನ ಮಟ್ಟ ಕುಸಿದಿರುವ ಕಾರಣ ಕಾಲುವೆಯ ನೀರಿನ ಮೇಲಿನ ಅವಲಂಬನೆ ಹೆಚ್ಚಾಗಿದೆ. ಆದರೆ ನೀರೇ ತಲುಪದ ಕಾರಣ ಬೆಳೆ ಬೆಳೆಯುವುದು ದುಸ್ತರವಾಗಿದೆ. ಇಂತಹ ಪರಿಸ್ಥಿತಿಯ ನಡುವೆಯೇ ಜುಲೈ 19ರಂದು ನಡೆದ ರಾಜ್ಯ ಸಚಿವ ಸಂಪುಟದ ತುರ್ತು ಸಭೆಯಲ್ಲಿ ಕಾರಂಜಾ ಬಲದಂಡೆ ಕಾಲುವೆಯ ಸಮಗ್ರ ದುರಸ್ತಿಗೆ 181 ಕೋಟಿ ರೂ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಈ ನಿರ್ಧಾರ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಕಾಲುವೆಯ ಸಂಪೂರ್ಣ ದುರಸ್ತಿ, ಕಾಂಕ್ರೀಟೀಕರಣ, ಸೋರಿಕೆ ತಡೆ ಹಾಗೂ ನೀರಿನ ಹರಿವಿಗೆ ಇರುವ ಅಡ್ಡಿಗಳನ್ನು ನಿವಾರಿಸಿದರೆ ಮಾತ್ರ ಕೊನೆಯ ಭಾಗದ ರೈತರಿಗೂ ನೀರು ತಲುಪಲಿದೆ ಎಂಬುದು ರೈತರ ಅಭಿಪ್ರಾಯವಾಗಿದೆ. ಪ್ರತಿ ವರ್ಷ ಕೇವಲ ತಾತ್ಕಾಲಿಕ ದುರಸ್ತಿಗೆ ಸೀಮಿತವಾಗದೆ, ಈ ಬಾರಿ ಶಾಶ್ವತ ಕಾಮಗಾರಿ ಕೈಗೊಳ್ಳಬೇಕು. ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ರೈತ ಪ್ರವೀಣ ಹೇಳಿದ್ದಾರೆ.

ಕಾಲುವೆಯ ಕೊನೆಯ ಭಾಗದವರೆಗೂ ನೀರು ಹರಿಸುವಂತೆ ಆಗ್ರಹ

ಕಾರಂಜಾ ಬಲದಂಡೆ ಕಾಲುವೆ ಸಮರ್ಪಕವಾಗಿ ದುರಸ್ತಿಯಾದರೆ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದ್ದು, ರೈತರ ಬದುಕಿಗೆ ಹೊಸ ಚೈತನ್ಯ ಸಿಗಲಿದೆ. ಸರ್ಕಾರ ಘೋಷಿಸಿರುವ 181 ಕೋಟಿ ರೂ ಅನುದಾನ ಫಲಪ್ರದವಾಗಿ ಬಳಕೆಯಾಗಿ, ಕಾಲುವೆಯ ಕೊನೆಯ ಭಾಗದವರೆಗೂ ನೀರು ಹರಿಯಲಿ ಎಂಬುದು ಜಿಲ್ಲೆಯ ರೈತರ ಒಕ್ಕೊರಲಿನ ಆಗ್ರಹವಾಗಿದೆ.

ಇದನ್ನೂ ಓದಿ: ಬರದ ನಡುವೆ ಮರುಬಿತ್ತನೆ ಮಾಡಿದ ವೃದ್ಧ ದಂಪತಿ!

ಒಟ್ಟಾರೆ ಹಲವು ವರ್ಷಗಳಿಂದ ನಿರೀಕ್ಷೆಯಲ್ಲಿರುವ ಕಾರಂಜಾ ಬಲದಂಡೆ ಕಾಲುವೆಯ ರೈತರಿಗೆ 181 ಕೋಟಿ ರೂ ದುರಸ್ತಿ ಯೋಜನೆ ಹೊಸ ಭರವಸೆ ಮೂಡಿಸಿದೆ. ಆದರೆ ಈ ಭರವಸೆ ಮತ್ತೊಮ್ಮೆ ಭರವಸೆಯಾಗಿಯೇ ಉಳಿಯುತ್ತದೆಯೇ ಅಥವಾ ಕೊನೆಯ ಭಾಗದ ರೈತರ ಜಮೀನಿಗೆ ನೀರು ತಲುಪುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಏಕದಿನ ವಿಶ್ವಕಪ್​ಗೆ ಅಚ್ಚರಿಯ ಹೆಸರುಗಳಿರುವ ತಂಡ ಪ್ರಕಟಿಸಿದ ಮಾಜಿ ಕೋಚ್ ರವಿಶಾಸ್ತ್ರಿ – Kannada News | Ravi Shastri Predicts India’s ODI World Cup Squad 2027: Kohli, Rohit, Pant Inclusions!

ಮುಂದಿನ ವರ್ಷ ಅಂದರೆ 2027 ರಲ್ಲಿ ನಡೆಯಲಿರುವ  ಏಕದಿನ ವಿಶ್ವಕಪ್​ಗೆ (ODI World Cup 2027) ಟೀಂ ಇಂಡಿಯಾದಲ್ಲಿ (Team India) ಯಾರಿಗೆಲ್ಲ ಅವಕಾಶ ಸಿಗಲಿದೆ ಎಂಬುದು ಇದುವರೆಗೂ ಖಚಿತವಾಗಿಲ್ಲ. ಅದರಲ್ಲೂ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿಗೆ ಸ್ಥಾನ ಸಿಗುತ್ತದೆಯೇ? ಇಶಾನ್ ಕಿಶನ್ ವಿಕೆಟ್ ಕೀಪರ್ ಆಗುತ್ತಾರೆಯೇ ಅಥವಾ ರಿಷಭ್ ಪಂತ್ ಏಕದಿನ ತಂಡಕ್ಕೆ ಮರಳುತ್ತಾರೆಯೇ? ಎಂಬುದನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಇದೆಲ್ಲದರ ನಡುವೆ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri) 2027 ರ ಏಕದಿನ ವಿಶ್ವಕಪ್​ಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡಿದ್ದಾರೆ.

ಬ್ಯಾಟಿಂಗ್‌ ವಿಭಾಗದಲ್ಲಿ ಯಾರ್ಯಾರು?

ರವಿಶಾಸ್ತ್ರಿ ಅವರ ಏಕದಿನ ವಿಶ್ವಕಪ್ ತಂಡದಲ್ಲಿ ಶುಭ್​ಮನ್ ಗಿಲ್ ಆರಂಭಿಕನಾಗಿ ಆಯ್ಕೆಯಾಗಿದ್ದರೆ, ಇನ್ನೊಂದು ಆರಂಭಿಕ ಸ್ಥಾನಕ್ಕೆ ರೋಹಿತ್ ಮತ್ತು ಯಶಸ್ವಿ ಜೈಸ್ವಾಲ್ ಇಬ್ಬರನ್ನೂ ಆಯ್ಕೆ ಮಾಡಲಾಗಿದೆ. ಶಾಸ್ತ್ರಿ ಪ್ರಕಾರ, ರೋಹಿತ್ ಖಂಡಿತವಾಗಿಯೂ ಏಕದಿನ ವಿಶ್ವಕಪ್‌ನಲ್ಲಿ ಆಡಬೇಕು, ಆದರೆ ಜೈಸ್ವಾಲ್ ಬ್ಯಾಕಪ್ ಓಪನರ್ ಆಗಿರಬೇಕು. ಇವರಲ್ಲದೆ, ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರಂತಹ ಹೆಸರುಗಳಿವೆ. ಕುತೂಹಲಕಾರಿಯಾಗಿ, ಶಾಸ್ತ್ರಿ ಅವರು ಇಶಾನ್ ಕಿಶನ್ ಬದಲಿಗೆ ರಿಷಭ್ ಪಂತ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ.

ಮೂವರು ಆಲ್‌ರೌಂಡರ್‌ಗಳ ಆಯ್ಕೆ

ಆಲ್‌ರೌಂಡರ್ ವಿಭಾಗದಲ್ಲಿ ರವಿಶಾಸ್ತ್ರಿ ಹಾರ್ದಿಕ್ ಪಾಂಡ್ಯ ಅವರನ್ನು ಮೊದಲ ಆಯ್ಕೆಯ ಆಲ್‌ರೌಂಡರ್ ಆಗಿ ಆಯ್ಕೆ ಮಾಡಿದ್ದಾರೆ. ಹಾಗೆಯೇ ಸ್ಪಿನ್ ಆಲ್‌ರೌಂಡರ್​ಗಳಾಗಿ ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಸ್ಥಾನ ಪಡೆದಿದ್ದಾರೆ. ಇನ್ನು ಬೌಲಿಂಗ್‌ ವಿಭಾಗದಲ್ಲಿ ರವಿಶಾಸ್ತ್ರಿ, ಬುಮ್ರಾ ಜೊತೆಗೆ ಮೊಹಮ್ಮದ್ ಶಮಿ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದ್ದಾರೆ. ಮೊಹಮ್ಮದ್ ಸಿರಾಜ್ ಕೂಡ ಏಕದಿನ ವಿಶ್ವಕಪ್‌ನಲ್ಲಿ ಆಡಬೇಕು ಎಂಬುದು ಅವರ ಅಭಿಪ್ರಾಯವಾಗಿದೆ.

ಇಲ್ಲಿ ರವಿಶಾಸ್ತ್ರಿ ಅವರ ಇನ್ನೊಂದು ಅಚ್ಚರಿಯ ಆಯ್ಕೆ ಎಂದರೆ ಭುವನೇಶ್ವರ್ ಕುಮಾರ್. ಬುಮ್ರಾ ಗಾಯಗೊಂಡರೆ, ಅವರ ಅನುಪಸ್ಥಿತಿಯಲ್ಲಿಯೂ ಭಾರತ ತಂಡ ಬಲಿಷ್ಠವಾಗಿ ಕಾಣಿಸಿಕೊಳ್ಳಲು ವಿಶ್ವಕಪ್‌ನಲ್ಲಿ ಅನುಭವಿ ವೇಗದ ಬೌಲಿಂಗ್ ದಾಳಿಯನ್ನು ಬಳಸಬೇಕೆಂದು ಶಾಸ್ತ್ರಿ ನಂಬುತ್ತಾರೆ. ರವಿಶಾಸ್ತ್ರಿ ಅವರು ಕುಲ್ದೀಪ್ ಯಾದವ್ ಅವರನ್ನು ವಿಶೇಷ ಸ್ಪಿನ್ನರ್ ಆಗಿ ಆಯ್ಕೆ ಮಾಡಿದ್ದಾರೆ.

ಟೀಂ ಇಂಡಿಯಾದ ಈ ಮೂವರಿಗೆ ಏಕದಿನ ವಿಶ್ವಕಪ್ ತಂಡದಲ್ಲಿ ಜಾಗವಿಲ್ಲ

ರವಿಶಾಸ್ತ್ರಿ ತಂಡದಲ್ಲಿ ಇವರಿಲ್ಲ

ಭಾರತದ ಪ್ರಸ್ತುತ ಏಕದಿನ ತಂಡದಿಂದ ಹಲವಾರು ಆಟಗಾರರನ್ನು ರವಿಶಾಸ್ತ್ರಿ ಹೊರಗಿಟ್ಟಿದ್ದಾರೆ. ಅವರುಗಳಲ್ಲಿ ಇಶಾನ್ ಕಿಶನ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್ ಮತ್ತು ಹರ್ಷಿತ್ ರಾಣಾ ಸೇರಿದ್ದಾರೆ.

ಏಕದಿನ ವಿಶ್ವಕಪ್‌ಗೆ ರವಿಶಾಸ್ತ್ರಿ ಅವರ ತಂಡ: ಶುಭ್​ಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Mahakaleshwar Temple: ಮಹಾಕಾಳೇಶ್ವರದಲ್ಲಿ ಹೈಟೆಕ್ ಸ್ಪರ್ಶ; ಕೇವಲ 30 ಸೆಕೆಂಡುಗಳಲ್ಲಿ ಚಿನ್ನ-ಬೆಳ್ಳಿ ಆಭರಣಗಳ ಶುದ್ಧತೆ ಪರೀಕ್ಷೆ! – Kannada News | Mahakaleshwar Temple Adopts Karatometer for Transparent Gold and Silver Donations

ಶ್ರೀ ಮಹಾಕಾಳೇಶ್ವರ ದೇವಸ್ಥಾನImage Credit source: Getty Images

ವಿಶ್ವಪ್ರಸಿದ್ಧ ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ದಾನ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯು ಅತ್ಯಂತ ಪ್ರಮುಖ ನಿರ್ಧಾರವನ್ನು ಕೈಗೊಂಡಿದೆ. ಇನ್ಮುಂದೆ ಭಕ್ತರು ಶ್ರೀ ಮಹಾಕಾಳೇಶ್ವರನಿಗೆ ದೇವೋತ್ತರ ರೂಪದಲ್ಲಿ ಅರ್ಪಿಸುವ ಚಿನ್ನ ಮತ್ತು ಬೆಳ್ಳಿ ಆಭರಣಗಳ ಶುದ್ಧತೆಯನ್ನು ಕೇವಲ 30 ಸೆಕೆಂಡುಗಳಲ್ಲಿ ನಿಖರವಾಗಿ ನಿರ್ಧರಿಸಬಹುದಾಗಿದೆ. ಈ ನೂತನ ತಾಂತ್ರಿಕ ಸೌಲಭ್ಯಕ್ಕಾಗಿ ಶ್ರೀ ಮಹಾಕಾಳೇಶ್ವರ ದೇವಸ್ಥಾನ ನಿರ್ವಹಣಾ ಸಮಿತಿಯು ಸುಮಾರು 1.5 ಮಿಲಿಯನ್ ರೂಪಾಯಿ (15 ಲಕ್ಷ ರೂ.) ವೆಚ್ಚದಲ್ಲಿ ಅತ್ಯಾಧುನಿಕ ಕ್ಯಾರಟೋಮೀಟರ್ ಯಂತ್ರವನ್ನು (Karatometer Machine) ಸ್ಥಾಪಿಸಿದೆ.

ದಾನ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನದ ಸ್ಪರ್ಶ:

ಇಲ್ಲಿಯವರೆಗೆ ದೇವಾಲಯ ಆಡಳಿತ ಮಂಡಳಿಯು ದೇಣಿಗೆಗಳ ಸುರಕ್ಷತೆ ಮತ್ತು ರಕ್ಷಣೆಗಾಗಿ ಸಿಸಿಟಿವಿ ಕಣ್ಗಾವಲು ಹಾಗೂ ಡಿಜಿಟಲ್ ಪಾವತಿಗಳಿಗಾಗಿ ಕ್ಯೂಆರ್ ಕೋಡ್ (QR Code) ಸೌಲಭ್ಯಗಳನ್ನು ಅಳವಡಿಸಿಕೊಂಡಿತ್ತು. ಆದರೆ, ಈಗ ಈ ಹೊಸ ಕ್ಯಾರಟೋಮೀಟರ್ ಯಂತ್ರದ ಸ್ಥಾಪನೆಯೊಂದಿಗೆ ಭಕ್ತರು ನೀಡುವ ಲೋಹದ ಕಾಣಿಕೆಗಳನ್ನು ತಾಂತ್ರಿಕವಾಗಿ ಸಂಪೂರ್ಣ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಯಂತ್ರವು ದಾನವಾಗಿ ಬಂದ ಚಿನ್ನ ಅಥವಾ ಬೆಳ್ಳಿಯಲ್ಲಿರುವ ಶುದ್ಧತೆಯ ಶೇಕಡಾವಾರು ಪ್ರಮಾಣ ಮತ್ತು ಅದರಲ್ಲಿರುವ ಕಲಬೆರಕೆಯನ್ನು ತಕ್ಷಣವೇ ಪತ್ತೆ ಹಚ್ಚಿ ಬಹಿರಂಗಪಡಿಸುತ್ತದೆ.

ಎಕ್ಸ್-ರೇ ಫ್ಲೋರೊಸೆನ್ಸ್ (XRF) ತಂತ್ರಜ್ಞಾನದ ಬಳಕೆ:

ಈ ಪರೀಕ್ಷಾ ವಿಧಾನದ ಕುರಿತು ಮಾಹಿತಿ ಹಂಚಿಕೊಂಡ ಶ್ರೀ ಮಹಾಕಾಳೇಶ್ವರ ದೇವಾಲಯದ ಸಹಾಯಕ ಆಡಳಿತಾಧಿಕಾರಿ ಸಿಮ್ಮಿ ಯಾದವ್ ಅವರು, ದಾನ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಈ ಯಂತ್ರವನ್ನು ಖರೀದಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಕ್ಯಾರಟೋಮೀಟರ್ ‘ಎಕ್ಸ್-ರೇ ಫ್ಲೋರೊಸೆನ್ಸ್’ (XRF) ತಂತ್ರಜ್ಞಾನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಆಭರಣವನ್ನು ಯಂತ್ರದಲ್ಲಿರಿಸಿದ ತಕ್ಷಣ, ಅದು ವಿಶೇಷ ಶಕ್ತಿಯ ತರಂಗಗಳ ಮೂಲಕ ಲೋಹದ ಸಂಯೋಜನೆಯನ್ನು ವಿಶ್ಲೇಷಿಸಿ, ಕೇವಲ 30 ಸೆಕೆಂಡುಗಳಲ್ಲಿ ಶುದ್ಧತೆಯ ವರದಿಯನ್ನು ನೀಡುತ್ತದೆ. ಈ ಪರೀಕ್ಷೆಯ ಆಧಾರದ ಮೇಲೆಯೇ ದೇವಸ್ಥಾನದ ಸಮಿತಿಯು ಭಕ್ತರಿಗೆ ಅಧಿಕೃತ ದೇಣಿಗೆ ರಶೀದಿಯನ್ನು ನೀಡಲಿದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಸಮಿತಿಯ ಅನುಭವ ಮತ್ತು ಹೊಸ ಯಂತ್ರದ ನಿಖರತೆ:

ಈ ನೂತನ ತಂತ್ರಜ್ಞಾನ ಬರುವ ಮೊದಲು, ದೇವಾಲಯಕ್ಕೆ ಬರುವ ಆಭರಣಗಳನ್ನು ಪರಿಶೀಲಿಸಲು ಮೂವರು ಅನುಭವಿ ಸದಸ್ಯರ ಸಮಿತಿಯೊಂದಿತ್ತು. ಈ ಸದಸ್ಯರು ಉಚಿತವಾಗಿ ಸೇವೆ ಸಲ್ಲಿಸುತ್ತಾ ತಮ್ಮ ಸುದೀರ್ಘ ಅನುಭವದ ಆಧಾರದ ಮೇಲೆ ಆಭರಣಗಳ ಶುದ್ದತೆಯನ್ನು ಅಂದಾಜಿಸುತ್ತಿದ್ದರು ಎಂದು ಸಮಿತಿ ಸದಸ್ಯ ರವೀಂದ್ರ ಸೋನಿ ವಿವರಿಸಿದ್ದಾರೆ. ಇದೀಗ ಕ್ಯಾರಟೋಮೀಟರ್ ಬಂದಿರುವುದರಿಂದ ಪರೀಕ್ಷಾ ಪ್ರಕ್ರಿಯೆಯು ಮೊದಲಿಗಿಂತಲೂ ಅತ್ಯಂತ ವೇಗವಾಗಿ ಮತ್ತು ನಿಖರವಾಗಿ ನಡೆಯಲಿದೆ. ತಂತ್ರಜ್ಞಾನ ಬಂದಿದ್ದರೂ ಸಹ, ಈ ಸಮಿತಿಯು ಮೊದಲಿನಂತೆಯೇ ತನ್ನ ಜವಾಬ್ದಾರಿಯನ್ನು ಮುಂದುವರಿಸಲಿದ್ದು, ಅಗತ್ಯಬಿದ್ದಾಗ ತಾಂತ್ರಿಕ ತನಿಖೆಗಳಿಗೆ ಸಹಕಾರ ನೀಡಲಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:16 pm, Wed, 22 July 26

Source link

ಮುಂದಿನ ಟೈರ್ ಸ್ಫೋಟಗೊಂಡು ಸರ್ಕಾರಿ ಬಸ್ ಪಲ್ಟಿ: ಮಹಿಳೆ ಸಾವು, 8 ಮಂದಿ ಪ್ರಯಾಣಿಕರಿಗೆ ಗಾಯ – Kannada News | Karnataka Road Mishaps: Government Bus Overturns in Dharwad After Tyre Burst Killing One; Pedestrian Mowed Down by Car in Chitradurga

ಟೈರ್ ಸ್ಫೋಟಗೊಂಡು ಸರ್ಕಾರಿ ಬಸ್ ಪಲ್ಟಿImage Credit source: Tv9 Kannada

ಧಾರವಾಡ/ಚಿತ್ರದುರ್ಗ, ಜುಲೈ 22: ಚಲಿಸುತ್ತಿರುವಾಗಲೇ ಮುಂದಿನ ಟೈರ್ ಸ್ಫೋಟಗೊಂಡು ಸರ್ಕಾರಿ ಬಸ್ ಪಲ್ಟಿಯಾದ ಪರಿಣಾಮ ಗಂಭೀರ ಗಾಯಗೊಂಡು ಮಹಿಳೆಯೋರ್ವರು ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಬಳಿ ನಡೆದಿದೆ. ಮೃತರನ್ನು ಬೆಳಗಾವಿ ಜಿಲ್ಲೆಯ ಮುನವಳ್ಳಿಯ ಹುಸೇನಾಬಿ ಕೆಂಗನೂರ ಎಂದು ಗುರುತಿಸಲಾಗಿದ್ದು, ಅಪಘಾತದಲ್ಲಿ 8 ಮಂದಿ ಪ್ರಯಾಣಿಕರಿಗೆ ಗಾಯಗೊಂಡಿದ್ದಾರೆ. ಗಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬಸ್​​ನ ಗ್ಲಾಸ್​​ಗಳು ಪೀಸ್​​ ಪೀಸ್​​

ಟೈರ್ ಸ್ಫೋಟಗೊಂಡ ಪರಿಣಾಮ ಧಾರವಾಡದಿಂದ ಮಿರಜ್​ಗೆ ತೆರಳುತ್ತಿದ್ದ ಸರ್ಕಾರಿ ಬಸ್​​ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ನುಗ್ಗಿ ಪಲ್ಟಿಯಾಗಿದೆ. ಘಟನೆಯಲ್ಲಿ ಮಹಿಳೆಯರು, ವೃದ್ಧರು ಸೇರಿ ಸುಮಾರು 8 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅಪಘಾತ ನಡೆದ ಕೂಡಲೇ ಇತರ ವಾಹನಗಳ ಸವಾರರು ಮತ್ತು ಸ್ಥಳೀಯರು ಬಸ್​​ನಲ್ಲಿದ್ದವರ ರಕ್ಷಣೆಗೆ ಮುಂದಾಗಿದ್ದಾರೆ. ಅಪಘಾತದ ತೀವ್ರತೆಗೆ ಬಸ್​​ನ ಗ್ಲಾಸ್​​ಗಳು ಪೀಸ್​​ ಪೀಸ್​​ ಆಗಿದ್ದು, ಮುಂಭಾಗ ಜಖಂಗೊಂಡಿದೆ. ಸ್ಥಳಕ್ಕೆ ಧಾರವಾಡ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 1600ಕ್ಕೂ ಅಧಿಕ ಬಾಲ ಗರ್ಭಿಣಿಯರ ಕೇಸ್ ಪತ್ತೆ!

ರಸ್ತೆ ಬದಿ ನಿಂತಿದ್ದವರ ಮೇಲೆ ಹರಿದ ಕಾರು

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಟಿ.ನುಲೇನೂರು ಗ್ರಾಮದಲ್ಲಿ ದಾರುಣ ಘಟನೆಯೊಂದು ನಡೆದಿದ್ದು, ರಸ್ತೆ ಬದಿ ನಿಂತಿದ್ದವರ ಮೇಲೆ ಕಾರು ಹರಿದ ಪರಿಣಾಮ ಓರ್ವರು ಅಸುನೀಗಿದ್ದಾರೆ. ಹೊಳಲ್ಕೆರೆ ತಾಲೂಕಿನ ದಗ್ಗೆ ಗ್ರಾಮದ ಪ್ರದೀಪ್(30) ಮೃತ ದುರ್ದೈವಿಯಾಗಿದ್ದು, ಮತ್ತೋರ್ವ ಮಹಿಳೆಯ ಕಾಲು ಮುರಿದಿದೆ. ಗಂಭೀರವಾಗಿ ಗಾಯಗೊಂಡಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಫುಟ್​ಪಾತ್​ಗೆ ಕಾರು ನುಗ್ಗಿದ್ದು, ಘಟನೆ ಸಂಬಂಧ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೆಲಸದ ಅವಧಿ ಮುಗಿದರೂ ಗೇಟ್‌ಗೆ ಬೀಗ: ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ – Kannada News | Kaveri Grameena Bank: Manager Locks Staff Post Work, Viral Video Shows Harassment

ಹಾಸನ, ಜು.22: ಕೆಲಸದ ಸಮಯ ಮುಗಿದಿದ್ದರೂ ಹೊರಹೋಗಲು ಬಿಡದೆ, ಗೇಟ್‌ಗೆ ಬೀಗ ಹಾಕಿ ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್‌ ಒಬ್ಬರು ಕಿರುಕುಳ ನೀಡಿದ್ದಾರೆನ್ನಲಾದ ಆಘಾತಕಾರಿ ಘಟನೆ ಹಾಸನ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕಾವೇರಿ ಗ್ರಾಮೀಣ ಬ್ಯಾಂಕ್‌ನ ಶಾಖೆಯಲ್ಲಿ ಈ ಘಟನೆ ನಡೆದಿದ್ದು, ಮ್ಯಾನೇಜರ್‌ನ ದೌರ್ಜನ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಬ್ಯಾಂಕ್‌ನ ಸಿಬ್ಬಂದಿಯೊಬ್ಬರು, “ಸಂಜೆ 5 ಗಂಟೆಯಾಗಿದೆ, ನನ್ನ ಪಾಲಿನ ಕೆಲಸ ಸಂಪೂರ್ಣವಾಗಿ ಮುಗಿದಿದೆ. ನನಗೆ ಬೇರೆ ಕೆಲಸವಿರುವುದರಿಂದ ಹೋಗಲು ಬಿಡಿ, ನಾನು ಓವರ್ ಟೈಮ್ ಮಾಡುವುದಿಲ್ಲ” ಎಂದು ಮ್ಯಾನೇಜರ್ ಬಳಿ ವಿನಂತಿಸಿಕೊಂಡಿದ್ದಾರೆ. ಆದರೆ, ಸಿಬ್ಬಂದಿಯ ಮಾತಿಗೆ ಕಿವಿಕೊಡದ ಮ್ಯಾನೇಜರ್, ಕೂಡಲೇ ಓಡಿಹೋಗಿ ಬ್ಯಾಂಕ್‌ನ ಪ್ರಮುಖ ಗೇಟ್‌ಗೆ ಬೀಗ ಜಡಿದು, ಹೊರಹೋಗದಂತೆ ತಡೆದು ನಿಂತು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಬ್ಯಾಂಕ್ ಮ್ಯಾನೇಜರ್ ಸಿಬ್ಬಂದಿಯನ್ನು ಒತ್ತಾಯಪೂರ್ವಕವಾಗಿ ತಡೆದು ನಿಲ್ಲಿಸಿ ಗೇಟ್‌ಗೆ ಬೀಗ ಹಾಕುತ್ತಿರುವ ದೃಶ್ಯಗಳನ್ನು ಸಿಬ್ಬಂದಿ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಪ್ರಸ್ತುತ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಮೇಲಧಿಕಾರಿಗಳ ಈ ರೀತಿಯ ದೌರ್ಜನ್ಯ ಹಾಗೂ ಕಿರುಕುಳದ ವಿರುದ್ಧ ಸಾರ್ವಜನಿಕರು ಮತ್ತು ಬ್ಯಾಂಕಿಂಗ್ ನೌಕರರ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸಂಬಂಧ ಕಾವೇರಿ ಗ್ರಾಮೀಣ ಬ್ಯಾಂಕ್‌ನ ಉನ್ನತ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ವಿಜಯ್ ಬಗ್ಗೆ ಪ್ರಕಾಶ್ ರೈ ಟೀಕೆ, ಮಾರನೇಯ ದಿನ ಸೆಟ್​​ನಲ್ಲಿ ನಡೆದಿದ್ದೇನು?

ನಟ ವಿಜಯ್ (Vijay) ಈಗ ತಮಿಳುನಾಡಿನ ಸಿಎಂ. ವಿಜಯ್ ರಾಜಕೀಯ ಪಕ್ಷ ಸ್ಥಾಪಿಸಿ, ಸಕ್ರಿಯವಾಗಿ ಚುನಾವಣಾ ರಾಜಕೀಯಕ್ಕೆ ಇಳಿದಾಗ ಹಲವಾರು ಟೀಕೆ, ಅನುಮಾನಗಳನ್ನು ಎದುರಿಸಬೇಕಾಯ್ತು. ಅವರದ್ದೇ ಚಿತ್ರರಂಗದ ಕೆಲವರು ಸಹ ವಿಜಯ್ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಅವರಲ್ಲಿ ನಟ ಪ್ರಕಾಶ್ ರೈ ಸಹ ಒಬ್ಬರು. ಪ್ರಕಾಶ್ ರೈ ಅಂತೂ ಒಮ್ಮೆ ವಿಜಯ್ ಅವರನ್ನು ಟೀಕೆಯ ಜೊತೆಗೆ ಕೆಟ್ಟದಾಗಿ ವ್ಯಂಗ್ಯ ಸಹ ಮಾಡಿದ್ದರು. ವಿಜಯ್ ನಟಿಸಿದ್ದ ‘ಗಿಲ್ಲಿ’ ಸಿನಿಮಾನಲ್ಲಿ ಪ್ರಕಾಶ್, ತ್ರಿಷಾರನ್ನು ‘ಚೆಲ್ಲಂ’ ಎಂದು ಕರೆಯುತ್ತಾರೆ, ಆ ಡೈಲಾಗ್ ವೈರಲ್ ಆಗಿದೆ. ವಿಜಯ್ ಅವರನ್ನು ಟೀಕೆ ಮಾಡುವಾಗ ಪ್ರಕಾಶ್ ರೈ, ವಿಜಯ್ ಅವರನ್ನು ‘ಚೆಲ್ಲಂ’ ಎಂದು ಕರೆದು ಹಿಯಾಳಿಸಿದ್ದರು.

ವಿಶೇಷವೆಂದರೆ ಪ್ರಕಾಶ್ ರೈ ಅವರು ವಿಜಯ್ ಅನ್ನು ಟೀಕೆ ಮಾಡಿದ ಮರುದಿನವೇ ಈ ಇಬ್ಬರೂ ಒಂದೇ ಸಿನಿಮಾನಲ್ಲಿ ಒಂದೇ ದೃಶ್ಯದಲ್ಲಿ ನಟಿಸಬೇಕಿತ್ತು. ಟೀಕೆಯ ಬಳಿಕ ಇಬ್ಬರು ಸಿನಿಮಾ ಸೆಟ್​​ನಲ್ಲಿ ಎದುರಾಗ ನಡೆದಿದ್ದೇನು ಎಂದು ಸಿನಿಮಾದ ನಿರ್ದೇಶಕ ಎಚ್ ವಿನೋದ್ ವಿವರಿಸಿದ್ದಾರೆ. ‘ಜನ ನಾಯಗನ್’ ಸಿನಿಮಾದ ಚಿತ್ರೀಕರಣ ನಡೆಯುವಾಗ ವಿಜಯ್ ಅವರು ಒಂದು ರಾಜಕೀಯ ಸಭೆಯಲ್ಲಿ ಭಾಗವಹಿಸಿ ಭಾಷಣ ಮಾಡಿದ್ದರು. ಆ ಭಾಷಣದ ಕೆಲವು ವಿಷಯಗಳ ಬಗ್ಗೆ ಪ್ರಕಾಶ್ ರೈ ಟೀಕೆ ಮಾಡಿ ಟ್ವೀಟ್ ಮಾಡಿದ್ದರು. ಟ್ವೀಟ್​ನಲ್ಲಿ ‘ಚಲ್ಲಂ’ ಎಂದು ವಿಜಯ್ ಅವರನ್ನು ಹೀಯಾಳಿಸುವಂತೆ ಕರೆದಿದ್ದರು.

ಇದನ್ನೆಲ್ಲ ನೋಡಿ ‘ಜನ ನಾಯಗನ್’ ಸಿನಿಮಾದ ನಿರ್ದೇಶಕ ಎಚ್ ವಿನೋದ್ ಅವರಿಗೆ ಬಹಳ ಭಯವಾಗಿತ್ತಂತೆ. ಏಕೆಂದರೆ ಪ್ರಕಾಶ್ ರೈ ಟ್ವೀಟ್ ಮಾಡಿದ ಮರು ದಿನವೇ ಇಬ್ಬರೂ ನಟರು ಒಟ್ಟಿಗೆ ಒಂದೇ ಸೀನ್​​ನಲ್ಲಿ ನಟಿಸಬೇಕಿತ್ತಂತೆ. ಸೆಟ್​​ನಲ್ಲಿ ಏನಾಗುತ್ತದೆಯೋ ಎಂಬ ಭಯದಲ್ಲಿಯೇ ವಿನೋದ್ ಅವರು ಸೆಟ್​​ಗೆ ಹೋದರಂತೆ. ಹೋಗುವಷ್ಟರಲ್ಲಿ ನಟ ಪ್ರಕಾಶ್ ರೈ ಅವರು ಬಂದಿದ್ದರಂತೆ. ಅದಾದ ಸ್ವಲ್ಪ ಹೊತ್ತಿನ ಬಳಿಕ ವಿಜಯ್ ಸಹ ಬಂದರಂತೆ. ಆಗಂತೂ ವಿನೊದ್ ಅವರಿಗೆ ಎದೆ ಬಡಿತ ಹೆಚ್ಚಾಗಿತ್ತಂತೆ. ಆದರೆ ವಿಜಯ್ ಹಾಗೂ ಪ್ರಕಾಶ್ ರೈ, ಏನೂ ನಡೆದೇ ಇಲ್ಲವೇನೋ ಎಂಬಂತೆ ಪರಸ್ಪರರಿಗೆ ವಿಶ್ ಮಾಡಿ, ನಗುತ್ತಾ ಮಾತನಾಡಿಕೊಂಡರಂತೆ. ಶೂಟಿಂಗ್ ವೇಳೆಯಲ್ಲೂ ಸಹ ತಮಾಷೆ ಮಾಡುತ್ತಾ, ಮಾತನಾಡುತ್ತಾ ಆರಾಮವಾಗಿ ಇದ್ದರಂತೆ.

ಇದನ್ನೂ ಓದಿ:ಬಿಡುಗಡೆಗೂ ಮುನ್ನ ‘ಜನ ನಾಯಗನ್’ ಚಿತ್ರದಲ್ಲಿ ಬದಲಾವಣೆ: ಟೈಟಲ್ ಕಾರ್ಡ್‌ನಲ್ಲಿ ವಿಜಯ್ ಹೆಸರು ಹೇಗಿದೆ?

ಇಬ್ಬರೂ ನಟರು ರಾಜಕೀಯ ಬೇರೆ, ಸಿನಿಮಾ ಬೇರೆ ಎಂಬುದನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ವಿಜಯ್ ಸಹ ರಾಜಕೀಯ ಟೀಕೆಯನ್ನು ವೈಯಕ್ತಿಕ ನೆಲೆಯಲ್ಲಿ ನೋಡುವ ವ್ಯಕ್ತಿಯಲ್ಲ ಎಂದು ವಿನೋದ್ ಹೇಳಿದ್ದಾರೆ. ಪ್ರಕಾಶ್ ಅವರು ಈ ಹಿಂದೆ ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರನ್ನೂ ಸಹ ಸಾಕಷ್ಟು ಟೀಕೆ ಮಾಡಿದ್ದರು. ಆದರೆ ಪವನ್ ಕಲ್ಯಾಣ್ ಮತ್ತು ಪ್ರಕಾಶ್ ರೈ ಅವರು ಒಟ್ಟಿಗೆ ‘ಓಜಿ’ ಸಿನಿಮಾನಲ್ಲಿ ನಟಿಸಿದರು. ಆ ಸಿನಿಮಾನಲ್ಲಿ ಪ್ರಕಾಶ್ ರೈ ಪಾತ್ರದ ಬಲಗೈ ಭಂಟನ ಪಾತ್ರದಲ್ಲಿ ಪವನ್ ಕಲ್ಯಾಣ್ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳೆಯ ಶವ ಸಾಗಿಸುವಾಗ ಆ್ಯಂಬುಲೆನ್ಸ್ ಚಾಲಕ ಏನು ಮಾಡಿದ ಗೊತ್ತಾ? – Kannada News | Andhra Pradesh Kadapa Ambulance Driver Stole Gold Bangle From Woman’s Dead body

ಕಡಪ, ಜುಲೈ 22: ಆ್ಯಂಬುಲೆನ್ಸ್ ಚಾಲಕ ಮಾಡಿದ ಹೇಯ ಕೃತ್ಯ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಆಸ್ಪತ್ರೆಯಲ್ಲಿ ಮೃತಪಟ್ಟ ಮಹಿಳೆಯನ್ನು ಮನೆಗೆ ಕರೆದೊಯ್ಯುವಾಗ ಆಕೆಯಿಂದ ಕೈಯಲ್ಲಿದ್ದ ಚಿನ್ನದ ಬಳೆಯನ್ನು ಕದ್ದ ಘಟನೆ ಬೆಳಕಿಗೆ ಬಂದಿದೆ. ಕಡಪದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ನಂತರ, ಆಕೆಯ ಶವವನ್ನು ಆ್ಯಂಬುಲೆನ್ಸ್‌ನಲ್ಲಿ (Ambulance) ಮನೆಗೆ ಕರೆದೊಯ್ಯುತ್ತಿದ್ದಾಗ, ಚಾಲಕ ವಾಹನವನ್ನು ಅರ್ಧದಾರಿಯಲ್ಲೇ ನಿಲ್ಲಿಸಿ ಈ ಕೃತ್ಯ ಎಸಗಿದ್ದಾನೆ.

ಕುತಂತ್ರದಿಂದ ನಡೆಸಿದ ಕಳವು:

ಮಾರ್ಗಮಧ್ಯದಲ್ಲಿ ಆ್ಯಂಬುಲೆನ್ಸ್ ನಿಲ್ಲಿಸಿದ ಚಾಲಕ ಮೃತರ ಮಗನಿಗೆ ಕುಡಿಯುವ ನೀರಿನ ಬಾಟಲಿ ತೆಗೆದುಕೊಂಡು ಬರುವಂತೆ ಹೇಳಿ ಕೆಳಗಿಳಿಸಿದನು. ಮಗ ಕೆಳಗಿಳಿದ ತಕ್ಷಣವೇ, ಆ್ಯಂಬುಲೆನ್ಸ್‌ನಲ್ಲಿದ್ದ ಮೃತ ಮಹಿಳೆಯ ಕೈಯಲ್ಲಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನದ ಬಳೆಯನ್ನು ತೆಗೆದುಕೊಂಡಿದ್ದಾನೆ. ನಂತರ ಯಾವುದೇ ಅನುಮಾನ ಬರದಂತೆ ಆ ಮೃತದೇಹವನ್ನು ಅವರ ಮನೆಗೆ ತಲುಪಿಸಿ ಅಲ್ಲಿಂದ ಕಾಲ್ಕಿತ್ತಿದ್ದ.

ಇದನ್ನೂ ಓದಿ: ಅಣ್ಣನ ಜೊತೆ ಮದುವೆ ನಿರಾಕರಿಸಿದ್ದಕ್ಕೆ ತಮ್ಮನಿಂದ ಯುವತಿ ಕೊಲೆ ಕೇಸ್​​ಗೆ ಬಿಗ್​​ ಟ್ವಿಸ್ಟ್​​: ಯುವತಿ ಪಾಲಿಗೆ ಮುಳುವಾದ ತಾಯಿಯ ಚೀಟಿ ವ್ಯವಹಾರ!

ಪೊಲೀಸರ ತನಿಖೆ ಹಾಗೂ ಬಂಧನ:

ಆ ಮನೆಯಲ್ಲಿ ಮೃತದೇಹದ ಅಂತಿಮ ಸಂಸ್ಕಾರದ ಸಿದ್ಧತೆ ವೇಳೆ ಕೈಯಲ್ಲಿದ್ದ ಚಿನ್ನದ ಬಳೆ ನಾಪತ್ತೆಯಾಗಿರುವುದು ಕುಟುಂಬಸ್ಥರ ಗಮನಕ್ಕೆ ಬಂದಿದೆ. ಸಂಶಯಗೊಂಡ ಅವರು ತಕ್ಷಣವೇ ದೂರು ನೀಡಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಸಿಸಿಟಿವಿ ಫೂಟೇಜ್ ಮತ್ತು ಇತರ ಸಾಕ್ಷ್ಯಗಳ ಆಧಾರದ ಮೇಲೆ ಆ್ಯಂಬುಲೆನ್ಸ್ ಚಾಲಕನೇ ಈ ಕೃತ್ಯ ಎಸಗಿದ್ದಾನೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಕಡಪದ ಬಿಲ್ಡಪ್ ಸರ್ಕಲ್ ಸಮೀಪ ಆರೋಪಿಯನ್ನು ಬಂಧಿಸಿದ ಪೊಲೀಸರು, ಆತನಿಂದ ಕಳವು ಮಾಡಲಾಗಿದ್ದ ಚಿನ್ನದ ಬಳೆಯನ್ನು ವಶಪಡಿಸಿಕೊಂಡಿದ್ದಾರೆ. ಸೇವೆಯ ಹೆಸರಿನಲ್ಲಿ ಮೃತದೇಹದ ಮೇಲಿದ್ದ ಆಭರಣವನ್ನೇ ಕದ್ದ ಚಾಲಕನ ಈ ಕೃತ್ಯ ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಿಎಲ್​ಐಗೆ ಮುಂದುವರಿದ ಭರ್ಜರಿ ಸ್ಪಂದನೆ; ಮಾರ್ಚ್ ವೇಳೆಗೆ 2.40 ಲಕ್ಷ ಕೋಟಿ ರೂ ಹೂಡಿಕೆ: ಸಚಿವ ಜಿತಿನ್ ಪ್ರಸಾದ – Kannada News | PLI Scheme, investments, employment, sector benefitted and other details revealed by Jitin Prasada

ನವದೆಹಲಿ, ಜುಲೈ 22: ಪಿಎಲ್​ಐ (PLI) ಯೋಜನೆಗಳ ಅಡಿಯಲ್ಲಿ ಈ ವರ್ಷದ ಮಾರ್ಚ್ ವೇಳೆಗೆ ₹2.40 ಲಕ್ಷ ಕೋಟಿಗೂ ಅಧಿಕ ನೈಜ ಹೂಡಿಕೆ ಬಂದಿದ್ದು, 14.15 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು (ನೇರ ಮತ್ತು ಪರೋಕ್ಷ) ಸೃಷ್ಟಿಯಾಗಿವೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ. ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಜಿತಿನ್ ಪ್ರಸಾದ ಅವರು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ಇದೆ. ಯೋಜನೆಯು ಆರಂಭವಾದಂದಿನಿಂದ ಜಾಗತಿಕ ಮೌಲ್ಯವರ್ಧನೆ ಸರಪಳಿಯಲ್ಲಿ ಭಾರತದ ಪಾತ್ರವನ್ನು ಬಲಪಡಿಸಿದ್ದು, ₹15.2 ಲಕ್ಷ ಕೋಟಿಗೂ ಅಧಿಕ ರಫ್ತಿಗೆ ನೆರವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಪ್ರಮುಖ ವಲಯವಾರು ಪಿಎಲ್​ಐ ಹೂಡಿಕೆ ವಿವರಗಳು

  • ಸೋಲಾರ್ ಪಿವಿ ಮಾಡ್ಯೂಲ್: ₹64,873 ಕೋಟಿ ಹೂಡಿಕೆ (ಅತಿ ಹೆಚ್ಚು ಹೂಡಿಕೆ ಕಂಡ ವಲಯವಾಗಿದೆ)
  • ಫಾರ್ಮಾಸ್ಯುಟಿಕಲ್ಸ್ (ಔಷಧ ವಲಯ): ₹45,158 ಕೋಟಿ
  • ಆಟೋಮೊಬೈಲ್: ₹44,326 ಕೋಟಿ
  • ಸ್ಪೆಷಾಲಿಟಿ ಸ್ಟೀಲ್: ₹23,896 ಕೋಟಿ
  • ಎಲೆಕ್ಟ್ರಾನಿಕ್ಸ್: ₹20,580 ಕೋಟಿ

ಇದನ್ನೂ ಓದಿ: ಭಾರತಕ್ಕೆ ಸರಾಗವಾಗಿ ಬರುತ್ತಿರುವ ವಿದೇಶೀ ನೇರ ಹೂಡಿಕೆ; ಕರ್ನಾಟಕಕ್ಕೆ ಭರ್ಜರಿ ಹೂಡಿಕೆ ಹೆಚ್ಚಳ; ಎರಡನೇ ಸ್ಥಾನಕ್ಕೆ ಜಿಗಿತ

ಸಚಿವರು ಪ್ರಸ್ತುತಪಡಿಸಿದ ವರದಿಯಲ್ಲಿನ ಇತರ ಪ್ರಮುಖ ವಿವರಗಳು

  • ಸ್ಟಾರ್ಟ್‌ಅಪ್ ಸೀಡ್ ಫಂಡ್: ಜೂನ್ 30ರ ವೇಳೆಗೆ ‘ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್’ ಯೋಜನೆಯಡಿ 219 ಇನ್‌ಕ್ಯುಬೇಟರ್‌ಗಳನ್ನು ಆಯ್ಕೆ ಮಾಡಲಾಗಿದ್ದು, ಒಟ್ಟು ₹945 ಕೋಟಿ ಅನುಮೋದಿತ ನಿಧಿಯಲ್ಲಿ ₹650 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ.
  • ಅಮೆರಿಕದಲ್ಲಿ ಭಾರತೀಯ ಹೂಡಿಕೆ: ಕಳೆದ 5 ವರ್ಷಗಳಲ್ಲಿ (2021–2026) ಭಾರತೀಯ ಕಂಪನಿಗಳು ಅಮೆರಿಕದಲ್ಲಿ $15.9 ಶತಕೋಟಿ ಡಾಲರ್ (ಅಂದಾಜು ₹1.3 ಲಕ್ಷ ಕೋಟಿ) ವಿದೇಶಿ ಹೂಡಿಕೆ ಮಾಡಿವೆ.

    ರಿಟೇಲ್ ವಲಯದಲ್ಲಿ ಎಫ್‌ಡಿಐ: ಸಿಂಗಲ್-ಬ್ರ್ಯಾಂಡ್ (Single-brand) ರಿಟೇಲ್‌ನಲ್ಲಿ 100% ಎಫ್‌ಡಿಐಗೆ ಅವಕಾಶವಿದ್ದು, ಏಪ್ರಿಲ್ 2021 ರಿಂದ ಮಾರ್ಚ್ 2026 ರ ನಡುವೆ $1,528.66 ಮಿಲಿಯನ್ ವಿದೇಶಿ ನೇರ ಹೂಡಿಕೆ ಹರಿದುಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ICC Rankings: ಕೇವಲ ಒಂದು ಪಾಯಿಂಟ್‌ನಿಂದ ನಂ.1 ಸ್ಥಾನ ಕಳೆದುಕೊಂಡ ಶುಭ್​ಮನ್ ಗಿಲ್

Source link

ಊಟಕ್ಕೂ ಪರದಾಡುತ್ತಿದ್ದಾರೆ ಆಮಿರ್ ಖಾನ್ ಸಹೋದರ, ಗುಡಿಸಿಲಿನಲ್ಲಿ ವಾಸ – Kannada News | Aamir Khan’s brother Hyder Ali Khan is living in very bad situation

ಆಮಿರ್‌ ಖಾನ್‌ (Aamir Khan) ದೊಡ್ಡ ಸ್ಟಾರ್ ನಟ ಜೊತೆಗೆ ನಿರ್ಮಾಪಕರೂ ಸಹ. ಅವರ ಒಟ್ಟು ಆಸ್ತಿ ಮೌಲ್ಯ 1880 ಕೋಟಿ ಎನ್ನಲಾಗುತ್ತದೆ. ಸಿನಿಮಾ ನಿರ್ಮಾಣ, ನಟನೆ ಜೊತೆಗೆ ಬೇರೆ ಕೆಲವು ಉದ್ಯಮಗಳಲ್ಲಿಯೂ ಹೂಡಿಕೆ ಮಾಡಿದ್ದಾರೆ. ತಮ್ಮ ಮಗನಿಗಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ, ಮಗಳ ಸಿನಿಮಾ ಮೇಲೆ ಹೂಡಿಕೆ ಮಾಡಿದ್ದಾ. ಮಗಳಿಗೆ ಉದ್ಯಮ ಹಾಕಿಕೊಂಡಿದ್ದಾರೆ. ಆದರೆ ಆಮಿರ್ ಖಾನ್ ಅವರ ಸಹೋದರ ಹೈದರ್‌ ಅಲಿ ಖಾನ್‌ ಮಾತ್ರ ಊಟಕ್ಕೂ ಪರದಾಡುತ್ತಿದ್ದಾರೆ ಮತ್ತು ಗುಡಿಸಿನಂಥಹಾ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆಮಿರ್ ಅವರ ಸಹೋದರನ ಮಾಜಿ ಪತ್ನಿ ಇವಾ ಗ್ರೋವರ್‌ ಈ ವಿಷಯ ಬಹಿರಂಗಪಡಿಸಿದ್ದಾರೆ.

ಆಮಿರ್‌ ಖಾನ್‌ ಅವರ ಮಲ ಸಹೋದರ ಹೈದರ್‌ ಅಲಿ ಖಾನ್‌ ಅವರ ಮಾಜಿ ಪತ್ನಿ ಇವಾ ಗ್ರೋವರ್ ನಟಿ ಆಗಿದ್ದು, ‘ಕರೇಜ್ಮಾ ಕಾ ಕರೇಜ್ಮಾ’, ‘ಶರಾರತ್’ ಮತ್ತು ‘ಬಡೆ ಅಚ್ಛೇ ಲಗ್ತೆ ಹೈ’ ಮುಂತಾದ ಧಾರಾವಾಹಿಗಳಲ್ಲಿನ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಇವಾ, ಆಮಿರ್‌ ಖಾನ್‌ ಅವರ ಮಲ ಸಹೋದರ ಹೈದರ್‌ ಅಲಿ ಖಾನ್‌ ಅವರೊಂದಿಗೆ ತಮ್ಮ ಮದುವೆಯನ್ನು ಸ್ಮರಿಸಿಕೊಂಡಿದ್ದಾರೆ. ಹೈದರ್ ಜೊತೆಗಿನ ಮದುವೆಯ ಸಂದರ್ಭದಲ್ಲಿ ದೈಹಿಕ ದೌರ್ಜನ್ಯವನ್ನು ಎದುರಿಸಬೇಕಾಯಿತು ಎಂದಿದ್ದಾರೆ.

ಇದನ್ನೂ ಓದಿ:ಮೂರನೇ ವಿವಾಹದ ಬಳಿಕ ವಿವಾದಕ್ಕೆ ಸಿಲುಕಿದ ಆಮಿರ್ ಖಾನ್

ಹೈದರ್‌ ಪ್ರಸ್ತುತ ಕಷ್ಟಕರ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸುತ್ತಾ ಅವರು ಹೇಳಿದ್ದು, ‘ಇವತ್ತು ಹೈದರ್‌ ಉತ್ತಮ ಸ್ಥಿತಿಯಲ್ಲಿಲ್ಲ. ಅವರಿಗೆ ಸ್ವಂತ ಮನೆಯಿಲ್ಲ ಮತ್ತು ಊಟಕ್ಕೂ ಪರದಾಡುತ್ತಿದ್ದಾರೆ. ಕೆಲವೊಮ್ಮೆ ಯಾರಾದರೂ ಅವರನ್ನು ಗುಡಿಸಿನಲ್ಲಿ ಇರಲು ಬಿಡುತ್ತಾರೆ, ಕೆಲವೊಮ್ಮೆ ಸ್ನೇಹಿತರು ಸಹಾಯ ಮಾಡುತ್ತಾರೆ. ನನಗೆ ಬೇಸರವಾಗುತ್ತದೆ. ಏನೇ ಆಗಿರಲಿ, ಅವರು ಒಂದು ಕಾಲದಲ್ಲಿ ನನ್ನ ಪತಿಯಾಗಿದ್ದರು. ಅವರ ಸುತ್ತಮುತ್ತ ಅವರಿಗೆ ನಿರಂತರವಾಗಿ ಮದ್ಯ ನೀಡುವ ಜನರಿದ್ದಾರೆ. ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ. ಅವರ ಸಮಯ ಬಂದಾಗ ಅವರಿಗೆ ಶಾಂತಿ ಸಿಗಲಿ ಎಂದು ಮಾತ್ರ ನಾನು ಪ್ರಾರ್ಥಿಸುತ್ತೇನೆ. ಅವರು ಬಹಳಷ್ಟು ನರಳುತ್ತಿದ್ದಾರೆ’ ಎಂದಿದ್ದಾರೆ.

ತಮ್ಮ ಮದುವೆಯ ಬಗ್ಗೆಯೂ ಮಾತನಾಡಿರು ನಟಿ, ನಾನು ಹೈದರ್ ಅವರನ್ನು ಮದುವೆಯಾದ ಮೂರನೇ ದಿನದಂದೇ ಹೈದರ್‌ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಲು ಆರಂಭಿಸಿದರು ಎಂದು ನಟಿ ಆರೋಪಿಸಿದ್ದಾರೆ. ಇದರಿಂದ ತಮ್ಮ ಮೈಮೇಲೆ ಗಾಯದ ಗುರುತುಗಳಾಗಿದ್ದವು ಮತ್ತು ತೀವ್ರ ಆಘಾತಕ್ಕೊಳಗಾಗಿದ್ದೆ, ಹೈದರ್‌ ಹೆಚ್ಚು ಶಂಕಿತ ಸ್ವಭಾವದವರಾಗುತ್ತಾ ಹೋದರು, ಆಗಿರದ ವಿಷಯಗಳನ್ನೂ ಊಹಿಸಿಕೊಳ್ಳುತ್ತಿದ್ದರು, ಅತಿಯಾದ ಮದ್ಯಪಾನವು ಅವರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು, ಅವರಿಗೆ ಮಾನಸಿಕ ಸಮಸ್ಯೆ ಇತ್ತು ಎಂದು ಅವರು ಹೇಳಿದ್ದಾರೆ.

ಹೈದರ್‌ ಅಲಿ ಖಾನ್‌ ಅವರು ಆಮಿರ್‌ ಖಾನ್‌ ಅವರ ಮಲ ಸಹೋದರ. ಆಮಿರ್ ಖಾನ್ ಅವರ ತಂದೆ ತಾಹಿರ್ ಖಾನ್ ಅವರ ಎರಡನೇ ಪತ್ನಿ ಶೆಹನಾಜ್ ಅವರ ಮಗ. ಕೆಲ ಸಿನಿಮಾಗಳಲ್ಲಿ ಸಹ ಹೈದರ್ ಅಲಿ ಖಾನ್ ನಟಿಸಿದ್ದರು. ಆದರೆ ಈಗ ಹೀನಾಯ ಸ್ಥಿತಿಯಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:08 pm, Wed, 22 July 26

Source link

Exit mobile version