ಎಂಜಿಆರ್​​ To ದಳಪತಿ ವಿಜಯ್: ಸಿಎಂ ಕುರ್ಚಿಯಲ್ಲಿ ಕುಳಿತ ಬಳಿಕ ಪ್ರೇಕ್ಷಕರ ಮುಂದೆ ಬಂದ ನಾಯಕರು – Kannada News | MGR To Thalapathy Vijay: Iconic Last Films of South Indian Stars Who Became Chief Ministers

ದಕ್ಷಿಣ ಭಾರತದಲ್ಲಿ ಚಿತ್ರರಂಗ ಮತ್ತು ರಾಜಕೀಯಕ್ಕೆ ದಶಕಗಳ ಕಾಲದ ಅವಿನಾಭಾವ ಸಂಬಂಧವಿದೆ. ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಂತೂ ಸಿನಿ ತಾರೆಗಳು ಕೇವಲ ನಟರಾಗಿ ಉಳಿಯದೆ, ಜನರ ಆಶಾಕಿರಣವಾಗಿ, ರಾಜಕೀಯ ಶಕ್ತಿಯಾಗಿ ಬೆಳೆದ ಇತಿಹಾಸವಿದೆ. 2026ರಲ್ಲಿ ದಳಪತಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಅವರ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ಜುಲೈ 23 ರಂದು ತೆರೆಗೆ ಬರುತ್ತಿದೆ. ಈ ಹಿಂದೆ ಮುಖ್ಯಮಂತ್ರಿ ಪಟ್ಟಕ್ಕೇರಿದ ಎಂ.ಜಿ.ಆರ್, ಎನ್‌ಟಿಆರ್ ಮತ್ತು ಜಯಲಲಿತಾ ಅವರ ಜೀವನದಲ್ಲೂ ಸಿಎಂ ಆದ ಬಳಿಕ ಅಥವಾ ಆ ಸಂಕ್ರಮಣ ಅವಧಿಯಲ್ಲಿ ಸಿನಿಮಾಗಳು ರಿಲೀಸ್ ಆದ ಸ್ವಾರಸ್ಯಕರ ಇತಿಹಾಸವಿದೆ.

ಮುಖ್ಯಮಂತ್ರಿಯಾದ ಬಳಿಕ ತೆರೆಕಂಡ ಸ್ಟಾರ್ ನಟರ ಚಿತ್ರಗಳು

ದಳಪತಿ ವಿಜಯ್ – ‘ಜನ ನಾಯಗನ್’ (2026)

ಈ ವರ್ಷ ನಡೆದ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಗನ್’. 2024ರ ಸೆಪ್ಟೆಂಬರ್‌ನಲ್ಲಿ ಅಧಿಕೃತವಾಗಿ ಘೋಷಣೆಯಾಗಿದ್ದ ಈ ಚಿತ್ರವು ಸೆನ್ಸಾರ್ ಮಂಡಳಿಯ ಸಮಸ್ಯೆಗಳು ಹಾಗೂ ಲೀಕ್ಸ್‌ ಕಾರಣದಿಂದ ತಡವಾಗಿತ್ತು. ಇದೀಗ ವಿಜಯ್ ಅವರು ಮುಖ್ಯಮಂತ್ರಿಯಾದ ಬಳಿಕ ಜುಲೈ 23ರಂದು ಈ ಚಿತ್ರ ಅದ್ಧೂರಿಯಾಗಿ ತೆರೆಕಾಣುತ್ತಿದ್ದು, ರಾಜಕೀಯವಾಗಿ ಮತ್ತು ಸಿನಿಮೀಯವಾಗಿ ಭಾರಿ ಸಂಚಲನ ಮೂಡಿಸಿದೆ.

ಎಂ. ಜಿ. ರಾಮಚಂದ್ರನ್

ಭಾರತೀಯ ರಾಜಕಾರಣದಲ್ಲಿ ಸಿನಿಮಾ ವರ್ಚಸ್ಸನ್ನು ಯಶಸ್ವಿಯಾಗಿ ಬಳಸಿ ಸಿಎಂ ಆದ ಮೊದಲ ಸೂಪರ್‌ಸ್ಟಾರ್ ಎಂ.ಜಿ.ಆರ್. 1977ರಲ್ಲಿ ಅವರು ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕ ತೆರೆಕಂಡ ಮೊದಲ ಸಿನಿಮಾ ಎಂದರೆ ಅದು ‘ಇಂದ್ರು ಪೋಲ್ ಎಂದ್ರು ವಾಳಗ. 1978ರಲ್ಲಿ ‘ಮಧುರೈಯೈ ಮೀಟ್ಟ ಸುಂದರಪಾಂಡಿಯನ್’ ಚಿತ್ರ ಬಿಡುಗಡೆಯಾಯಿತು. ಈ ಚಿತ್ರದ ಬಹುತೇಕ ಚಿತ್ರೀಕರಣ ಅವರು ಸಿಎಂ ಆಗುವ ಮುನ್ನವೇ ಮುಕ್ತಾಯಗೊಂಡಿತ್ತು. ಸಿಎಂ ಆದ ಬಳಿಕ ಅವರು ಸಿನಿಮಾ ಮಾಡಿಲ್ಲ.

ಎನ್. ಟಿ. ರಾಮರಾವ್

ತೆಲುಗು ಆತ್ಮಗೌರವದ ಮುಖವಾಡವಾಗಿ ಮೂಡಿಬಂದವರು ಎನ್‌ಟಿಆರ್. 1984ರಲ್ಲಿ ಅವರು ಸಿಎಂ ಆದರು. ಅವರು ಮುಖ್ಯಮಂತ್ರಿಯಾದ ಬಳಿಕ ‘ಶ್ರೀಮದ್ವಿರಾಟ್ ವೀರಬ್ರಹ್ಮೇಂದ್ರ ಸ್ವಾಮಿ ಚರಿತ್ರೆ’ ಸಿನಿಮಾ ತೆರೆಗೆ ಬಂತು. ಸಿಎಂ ಆಗುವ ಮುನ್ನವೇ ಈ ಚಿತ್ರದ ಶೂಟಿಂಗ್ ಆರಂಭಿಸಿದ್ದರೂ, ಚಿತ್ರ ಸಂಪೂರ್ಣವಾಗಿ ಪ್ರೇಕ್ಷಕರ ಮುಂದೆ ಬಂದದ್ದು ಅವರು ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆಯೇ ಎಂಬುದು ವಿಶೇಷ.

ಇದನ್ನೂ ಓದಿ: ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ದೊಡ್ಡ ಸೀಕ್ರೆಟ್ ರಿವೀಲ್

ಜೆ. ಜಯಲಲಿತಾ

ನಟನೆಯಿಂದ ರಾಜಕೀಯಕ್ಕೆ ಬಂದು ತಮಿಳುನಾಡಿನ ಜನರ ‘ಅಮ್ಮ’ ಆಗಿ ಗುರುತಿಸಿಕೊಂಡವರು ಜಯಲಲಿತಾ. ಇವರು 1980ರ ಸುಮಾರಿಗೆ ತಮ್ಮ ಪೂರ್ಣಾವಧಿ ನಟನಾ ವೃತ್ತಿಗೆ ಬ್ರೇಕ್ ಹಾಕಿದ್ದರು. ಅವರು ರಾಜಕೀಯ ನಾಯಕಿಯಾಗಿ, ಮುಖ್ಯಮಂತ್ರಿಯಾದ ಬಳಿಕ ‘ನೀಂಗ ನಲ್ಲ ಇರುಕ್ಕನುಮ್’ ಎಂಬ ಚಿತ್ರದಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಸಿಎಂ ಪಾತ್ರವನ್ನೇ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Apply Now: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ; 395 ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | UBI Recruitment 2026 27: 395 Officer Posts – Apply Online Now!

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿImage Credit source: Getty Images

ಬ್ಯಾಂಕಿಂಗ್ ವಲಯದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (UBI) ಸುವರ್ಣಾವಕಾಶವನ್ನು ನೀಡಿದೆ. ದೇಶಾದ್ಯಂತ ಇರುವ ತನ್ನ ವಿವಿಧ ಶಾಖೆಗಳು ಮತ್ತು ಕಚೇರಿಗಳಲ್ಲಿ 2026-27ನೇ ಸಾಲಿನ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಬೃಹತ್ ಅಧಿಸೂಚನೆಯನ್ನು ಹೊರಡಿಸಿದ್ದು, ಒಟ್ಟು 395 ಖಾಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ ಮತ್ತು ಹಂಚಿಕೆ:

ಯೂನಿಯನ್ ಬ್ಯಾಂಕ್ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಹುದ್ದೆಗಳ ಹಂಚಿಕೆ ಈ ಕೆಳಗಿನಂತಿದೆ:

  • ಮ್ಯಾನೇಜರ್ (MMGS-II): 163 ಹುದ್ದೆಗಳು
  • ಹಿರಿಯ ವ್ಯವಸ್ಥಾಪಕ / ಸೀನಿಯರ್ ಮ್ಯಾನೇಜರ್ (MMGS-III): 153 ಹುದ್ದೆಗಳು
  • ಮುಖ್ಯ ವ್ಯವಸ್ಥಾಪಕ / ಚೀಫ್ ಮ್ಯಾನೇಜರ್ (SMGS-IV): 52 ಹುದ್ದೆಗಳು
  • ಸಹಾಯಕ ಜನರಲ್ ಮ್ಯಾನೇಜರ್ / ಎಜಿಎಂ (SMGS-V): 20 ಹುದ್ದೆಗಳು
  • ಡೆಪ್ಯೂಟಿ ಜನರಲ್ ಮ್ಯಾನೇಜರ್ / ಡಿಜಿಎಂ (TEGS-VI): 07 ಹುದ್ದೆಗಳು

ಅರ್ಹತೆಗಳು ಮತ್ತು ವಯೋಮಿತಿ:

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ, B.Com, B.E / B.Tech, MBA, MCA, CA, CMA, CS, M.Tech, ಅಥವಾ M.Sc ಉತ್ತೀರ್ಣರಾಗಿರಬೇಕು. ಸಂಬಂಧಿತ ಹುದ್ದೆಗೆ ಅನುಗುಣವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಡ್ಡಾಯ ಕಾರ್ಯಾನುಭವವನ್ನು ಹೊಂದಿರಬೇಕು. 22 ರಿಂದ 50 ವರ್ಷಗಳ ನಡುವಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಸರ್ಕಾರದ ನಿಯಮಾವಳಿಗಳ ಪ್ರಕಾರ SC/ST ಅಭ್ಯರ್ಥಿಗಳಿಗೆ 5 ವರ್ಷಗಳು, OBC ಅಭ್ಯರ್ಥಿಗಳಿಗೆ 3 ವರ್ಷಗಳು ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಇದನ್ನೂ ಓದಿ: ಇಸ್ರೋದಲ್ಲಿ 460 ಅಪ್ರೆಂಟಿಸ್ ಹುದ್ದೆಗಳ ಭರ್ತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ!

ಆಯ್ಕೆ ಪ್ರಕ್ರಿಯೆ ಮತ್ತು ವೇತನ ಶ್ರೇಣಿ:

  • ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ, ಗುಂಪು ಚರ್ಚೆ (Group Discussion), ವೈಯಕ್ತಿಕ ಸಂದರ್ಶನ, ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ತಪಾಸಣೆಯ ಆಧಾರದ ಮೇಲೆ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.
  • ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಯ ಶ್ರೇಣಿಗೆ ಅನುಗುಣವಾಗಿ ತಿಂಗಳಿಗೆ 64,820 ರಿಂದ 1,56,500 ರೂ. ವರೆಗೆ ಮೂಲ ವೇತನ ದೊರೆಯಲಿದೆ. ಇದರೊಂದಿಗೆ ಬ್ಯಾಂಕ್ ನಿಯಮಗಳ ಪ್ರಕಾರ ಇತರ ಭತ್ಯೆಗಳು ಮತ್ತು ಸೌಲಭ್ಯಗಳು ಲಭ್ಯವಿರುತ್ತವೆ.

ಅರ್ಜಿ ಸಲ್ಲಿಸುವ ವಿವರಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: ಜುಲೈ 21, 2026
  • ಅರ್ಜಿ ಸಲ್ಲಿಸುವ ವಿಧಾನ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಕಾಲಮಿತಿಯೊಳಗೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

Vastu Shastra: ಮನೆಯಲ್ಲಿ ಗಿಳಿ ಸಾಕುವುದು ಅಥವಾ ಅದರ ಚಿತ್ರ ಇಡುವುದು ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು? – Kannada News | Keeping Parrots at Home: Auspicious, Inauspicious Effects and Vastu Tips for Good Fortune

ಮನೆಯಲ್ಲಿ ಗಿಳಿ ಸಾಕುವುದರ ಧಾರ್ಮಿಕ ನಂಬಿಕೆImage Credit source: Getty Images

ಅನೇಕ ಜನರು ತಮ್ಮ ಮನೆಗಳಲ್ಲಿ ಗಿಳಿಗಳನ್ನು ಸಾಕಲು ಬಯಸುತ್ತಾರೆ. ಗಿಳಿಯ ಆಕರ್ಷಕ ರೂಪ ಮತ್ತು ಮಧುರ ಧ್ವನಿ ಮನಸ್ಸಿಗೆ ಮುದ ನೀಡುತ್ತದೆ. ಆದರೆ ಶಾಸ್ತ್ರಗಳು ಮತ್ತು ಜಾನಪದ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಗಿಳಿಯನ್ನು ಸಾಕುವುದರಿಂದ ಅಥವಾ ಅದರ ಚಿತ್ರವನ್ನು ಇಡುವುದರಿಂದ ಕೆಲವು ನಿರ್ದಿಷ್ಟ ಶುಭ ಹಾಗೂ ಅಶುಭ ಫಲಗಳು ಎದುರಾಗಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ಗ್ರಹ ದೋಷಗಳ ನಿವಾರಣೆ:

ಮನೆಯಲ್ಲಿ ಗಿಳಿಯನ್ನು ಸಾಕುವುದರಿಂದ ಅಥವಾ ಅದರ ಸುಂದರ ಚಿತ್ರವನ್ನು ಗೋಡೆಯ ಮೇಲಿಡುವುದರಿಂದ ರಾಹು, ಕೇತು ಹಾಗೂ ಶನಿ ಗ್ರಹಗಳ ಕೆಟ್ಟ ದೃಷ್ಟಿ ಕುಟುಂಬದ ಮೇಲೆ ಬೀಳುವುದಿಲ್ಲ. ವಿಶೇಷವಾಗಿ ಗಿಳಿಯ ಉಪಸ್ಥಿತಿಯು ಮನೆಯ ಸದಸ್ಯರಿಗೆ ಎದುರಾಗಬಹುದಾದ ಅಕಾಲಿಕ ಮರಣದ ಗಂಡಾಂತರಗಳನ್ನು ತಪ್ಪಿಸುತ್ತದೆ ಎಂಬ ಭಕ್ತಿಯ ನಂಬಿಕೆಯಿದೆ.

ದಾಂಪತ್ಯ ಹಾಗೂ ವಾಸ್ತು ಸುಧಾರಣೆ:

ಗಿಳಿಯನ್ನು ಇರಿಸುವುದರಿಂದ ಪತಿ-ಪತ್ನಿಯರ ನಡುವಿನ ಭಿನ್ನಾಭಿಪ್ರಾಯಗಳು ಶಮನಗೊಂಡು ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಮನೆಯ ವಾತಾವರಣದಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ. ವಾಸ್ತು ಪ್ರಕಾರ ಗಿಳಿಯನ್ನು ಮನೆಯ ಪೂರ್ವ-ಉತ್ತರ (ಈಶಾನ್ಯ) ದಿಕ್ಕಿನಲ್ಲಿ ಇಡುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ, ಇದು ಮನೆಗೆ ಸದಾ ಸಂತೋಷ ಮತ್ತು ನೆಮ್ಮದಿಯನ್ನು ತರುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಪಂಜರದಲ್ಲಿ ಗಿಳಿ ಇಡುವಾಗ ವಹಿಸಬೇಕಾದ ಎಚ್ಚರಿಕೆ:

ಮನೆಯಲ್ಲಿ ಗಿಳಿಯನ್ನು ಪಂಜರದಲ್ಲಿ ಇರಿಸಿದ್ದರೆ, ಅದು ಸದಾ ಸಂತೋಷದಿಂದಿರುವುದು ಅತ್ಯಗತ್ಯ. ಒಂದು ವೇಳೆ ಗಿಳಿಯು ಅಸಮಾಧಾನಗೊಂಡರೆ ಅಥವಾ ದುಃಖಿತವಾದರೆ, ಅದು ಮನೆಗೆ ದುರದೃಷ್ಟವನ್ನು ತರಬಹುದು ಮತ್ತು ಕುಟುಂಬದ ಸದಸ್ಯರ ಜೀವನದ ಮೇಲೆ ತೀವ್ರ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು. ಆದ್ದರಿಂದ ಅದನ್ನು ಸೂಕ್ತ ಕಾಳಜಿಯಿಂದ ನೋಡಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:49 am, Wed, 22 July 26

Source link

ಎನ್‌ಡಿಎ ಜೊತೆ ಎನ್‌ಸಿಪಿ ವಿಲೀನ ವದಂತಿ: ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಶರದ್ ಪವಾರ್, ಸುಪ್ರಿಯಾ ಸುಳೆ – Kannada News | Sharad Pawar, Supriya Sule Meet PM Modi Amid NCP NDA Merger Rumors and Delimitation Talks

ನವದೆಹಲಿ, ಜುಲೈ 22: ಎನ್​ಸಿಪಿ ಎನ್​ಡಿಎ ಜತೆ ವಿಲೀನವಾಗಲಿದೆ ಎನ್ನುವ ಅಂತೆ ಕಂತೆ ಹರಿದಾಡುತ್ತಿರುವ ಹೊತ್ತಿನಲ್ಲೇ ಶರದ್ ಪವಾರ್(Sharad Pawar) ಹಾಗೂ ಸುಪ್ರಿಯಾ ಸುಳೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದು, ಈ ಸುದ್ದಿಗೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ. ಸಂಸತ್ತಿನಲ್ಲಿ ನೀಟ್ ಅಕ್ರಮ ಮತ್ತು ಇತರ ವಿಷಯಗಳ ಕುರಿತು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ದೆಹಲಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದೆ.

ಎನ್‌ಸಿಪಿ (ಶರದ್ ಪವಾರ್ ಬಣ) ಮುಖ್ಯಸ್ಥ ಶರದ್ ಪವಾರ್ ಹಾಗೂ ಅವರ ಪುತ್ರಿ ಸಂಸದೆ ಸುಪ್ರಿಯಾ ಸುಳೆ ಅವರು ಬುಧವಾರ ಸಂಸತ್ ಭವನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಲ್ಲಿ ಪ್ರಧಾನಿಯವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.

ಸಭೆಯ ವೇಳೆ ಪ್ರಧಾನಿ ಮೋದಿ ಹಾಗೂ ಶರದ್ ಪವಾರ್ ಅತ್ಯಂತ ಆತ್ಮೀಯವಾಗಿ ನಗುಮುಖದಿಂದ ಮಾತುಕತೆ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿವೆ.

ಭೇಟಿಗೆ ಕಾರಣವೇನು?

ಕ್ಷೇತ್ರ ಪುನರ್ವಿಂಗಡಣೆ ಮಸೂದೆ

ಕೇಂದ್ರ ಸರ್ಕಾರವು ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ‘ಕ್ಷೇತ್ರ ಪುನರ್ವಿಂಗಡಣೆ ಮಸೂದೆ’ಯನ್ನು ತರಲು ಯೋಜಿಸುತ್ತಿದ್ದು, ಇದನ್ನು ಅಂಗೀಕರಿಸಲು ಸಂಸತ್ತಿನಲ್ಲಿ ಮೂರನೇ ಎರಡರಷ್ಟು (2/3rd) ಭಾರಿ ಬಹುಮತದ ಅಗತ್ಯವಿದೆ. ಲೋಕಸಭೆಯಲ್ಲಿ ಶರದ್ ಪವಾರ್ ಬಣದ 8 ಸಂಸದರು ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಮತ್ತಷ್ಟು ಓದಿ: ಮಹಾರಾಷ್ಟ್ರ: ದೇವೇಂದ್ರ ಫಡ್ನವೀಸ್ ನಿವಾಸದಲ್ಲಿ 3 ರಹಸ್ಯ ಸಭೆಗಳು, ಎನ್‌ಸಿಪಿಯಲ್ಲಿ ಮತ್ತೊಂದು ಒಡಕು

ಶೇ. 50 ರಷ್ಟು ಸೀಟು ಹೆಚ್ಚಳದ ಷರತ್ತು

ಮಸೂದೆಯಲ್ಲಿ ಶೇಕಡಾ 50 ರಷ್ಟು ಸಂಸತ್ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಸರ್ಕಾರ ಲಿಖಿತ ಭರವಸೆ ನೀಡಿದರೆ ಬೆಂಬಲ ನೀಡುವ ಸುಳಿವನ್ನು ಎನ್‌ಸಿಪಿ ನೀಡಿದೆ. ನಿಮ್ಮ ನಿಲುವನ್ನು ಕಾಗದದ ಮೇಲೆ ಸ್ಪಷ್ಟಪಡಿಸಿ, ನಂತರ ಚರ್ಚಿಸೋಣ ಎಂದು ಸುಪ್ರಿಯಾ ಸುಳೆ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಮಹಾರಾಷ್ಟ್ರ ರಾಜಕೀಯ ಮತ್ತು ಎನ್‌ಸಿಪಿ ಪುನರ್ ಏಕೀಕರಣದ ವದಂತಿ

ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಶರದ್ ಪವಾರ್ ಬಣದ ನಡುವೆ ಮತ್ತೆ ಒಂದಾಗುವ ಚರ್ಚೆಗಳು ಮಹಾರಾಷ್ಟ್ರದಲ್ಲಿ ತೆರೆಮರೆಯಲ್ಲಿ ನಡೆಯುತ್ತಿವೆ. ಶರದ್ ಪವಾರ್ ಅವರ ಬಣ ಎನ್‌ಡಿಎ (NDA) ಮೈತ್ರಿಕೂಟ ಸೇರಲಿದೆ ಎಂಬ ವದಂತಿಗಳೂ ಇವೆ.

ಶರದ್ ಪವಾರ್ ಅಥವಾ ಅವರ ನಾಯಕರನ್ನು ವೈಯಕ್ತಿಕವಾಗಿ ಎನ್‌ಡಿಎ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಬಿಜೆಪಿಗೆ ಆಸಕ್ತಿಯಿಲ್ಲ. ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಮತ್ತು ಶರದ್ ಪವಾರ್ ಅವರ ಎರಡೂ ಎನ್‌ಸಿಪಿ ಬಣಗಳು ತಮ್ಮ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡು ಸಂಪೂರ್ಣವಾಗಿ ಒಂದಾದರೆ ಮಾತ್ರ ಎನ್‌ಡಿಎ ಜೊತೆಗಿನ ನಿಕಟ ಮೈತ್ರಿ ಬಗ್ಗೆ ಪರಿಗಣಿಸಲಾಗುವುದು.

ಸಂಸತ್ತಿನಲ್ಲಿ ವಿಪಕ್ಷಗಳು ಸರ್ಕಾರದ ವಿರುದ್ಧ ಸರಣಿ ಹೋರಾಟ ನಡೆಸುತ್ತಿರುವ ಮಧ್ಯೆಯೇ, ವಿಪಕ್ಷಗಳ ಪ್ರಮುಖ ರೂವಾರಿಯಾದ ಶರದ್ ಪವಾರ್ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿರುವುದು ಮುಂಬರುವ ದಿನಗಳಲ್ಲಿ ಭಾರಿ ರಾಜಕೀಯ ಬದಲಾವಣೆಯ ಮುನ್ಸೂಚನೆ ಎನ್ನಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಜನ ನಾಯಗನ್’ ಟಿಕೆಟ್ ಲೂಟಿ: ಹೊಸೂರಿನಲ್ಲಿ 180, ಬೆಂಗಳೂರಿನಲ್ಲಿ 1500 – Kannada News | Jana Nayagan movie ticket price hiked in Bengaluru

ವಿಜಯ್ (Vijay) ನಟನೆಯ ‘ಜನ ನಾಯಗನ್’ ಸಿನಿಮಾ ನಾಳೆ (ಜುಲೈ 23) ಬಿಡುಗಡೆ ಆಗಲಿದೆ. ಇದು ವಿಜಯ್ ನಟನೆಯ ಕೊನೆಯ ಸಿನಿಮಾ ಎಂದೇ ಪ್ರಚಾರ ಮಾಡಲಾಗಿದ್ದು, ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾದ ಟಿಕೆಟ್​​ಗಳ ಮುಂಗಡ ಬುಕಿಂಗ್ ಆರಂಭವಾಗಿ ಕೆಲ ದಿನಗಳಾಗಿದ್ದು, ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಟಿಕೆಟ್​​ಗಳು ಮುಂಗಡವಾಗಿ ಸೋಲ್ಡ್ ಔಟ್ ಆಗಿವೆ. ಆದರೆ ಬೆಂಗಳೂರಿನಲ್ಲಿ ‘ಜನ ನಾಯಗನ್’ ಸಿನಿಮಾದ ಪ್ರೀಮಿಯರ್ ಶೋ ಟಿಕೆಟ್​​ಗಳನ್ನು ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿದೆ. ಆದರೆ ಅದೇ ಬೇರೆ ನಗರಗಳಲ್ಲಿ ಇದೇ ಸಿನಿಮಾದ ಟಿಕೆಟ್ ಬೆಲೆ ಅತ್ಯಂತ ಕಡಿಮೆ ಇದೆ. ‘ಜನ ನಾಯಗನ್’ ಸಿನಿಮಾವನ್ನು ಬೆಂಗಳೂರಿನ ಬದಲು ಹತ್ತಿರದ ಬೇರೆ ನಗರಗಳಲ್ಲಿ ನೋಡಿದರೆ ಅಭಿಮಾನಿಗಳಿಗೆ ಹಣ ಉಳಿತಾಯ ಆಗಲಿದೆ.

ಬೆಂಗಳೂರಿನಲ್ಲಿ ‘ಜನ ನಾಯಗನ್’ ಸಿನಿಮಾದ ಪ್ರೀಮಿಯರ್ ಶೋ ಟಿಕೆಟ್ ಬೆಲೆ ಕನಿಷ್ಟ 1000 ರೂಪಾಯಿ ಇದೆ. ಗರಿಷ್ಠ ಬೆಲೆ 2500 ರೂಪಾಯಿಗಳಿದೆ. ಮಲ್ಟಿಪ್ಲೆಕ್ಸ್​​ನಲ್ಲಿ ಕನಿಷ್ಟ ಬೆಲೆ 1400-1500 ರೂಪಾಯಿಗಳಿವೆ. ಸಾಮಾನ್ಯ ಶೋಗಳಿಗೂ ಸಹ ಬೆಂಗಳೂರಿನ ಮಲ್ಟಿಪ್ಲೆಕ್ಸ್​​ನಲ್ಲಿ ಕನಿಷ್ಟ ಬೆಲೆ 450 ರಿಂದ 500 ರೂಪಾಯಿಗಳಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರದಲ್ಲಿ ಸುಮಾರು 250 ರಿಂದ 350 ವರೆಗೆ ಇದೆ.

ಅದೇ ಬೆಂಗಳೂರಿನಲ್ಲಿ ಕೇವಲ 30-40 ಕಿ.ಮೀ ದೂರದಲ್ಲಿರುವ ಹೊಸೂರಿನಲ್ಲಿ ಇದೇ ಸಿನಿಮಾದ ಟಿಕೆಟ್ ಬೆಲೆ ಕೇವಲ 180 ರೂಪಾಯಿಗಳಿವೆ. ಅದೇ ಬೆಂಗಳೂರಿನಲ್ಲಿ ಕನಿಷ್ಟ ಟಿಕೆಟ್ ದರ 1000 ರೂಪಾಯಿಗಳಿವೆ. ಬೆಂಗಳೂರಿನ ಅಭಿಮಾನಿಗಳು ಅಥವಾ ಸಿನಿಮಾ ಪ್ರೇಮಿಗಳು, ಬೆಂಗಳೂರಿನಿಂದ ಬೈಕಿನಲ್ಲಿ ಹೊಸೂರಿಗೆ ಹೋಗಿ ಸಿನಿಮಾ ನೋಡಿಕೊಂಡು ಮರಳಿ ಬಂದರೂ ಸಹ ದೊಡ್ಡ ಮೊತ್ತದ ಹಣ ಉಳಿತಾಯ ಆಗಲಿದೆ. ಜೊತೆಗೆ ಪ್ರಯಾಣದ ಅನುಭವವೂ ಸಿಗಲಿದೆ.

ಇದನ್ನೂ ಓದಿ:ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ದೊಡ್ಡ ಸೀಕ್ರೆಟ್ ರಿವೀಲ್

ದೇಶದ ಹಲವು ಪ್ರಮುಖ ನಗರಗಳಲ್ಲಿ ‘ಜನ ನಾಯಗನ್’ ಸಿನಿಮಾದ ಪ್ರೀಮಿಯರ್ ಶೋಗಳು ಆಯೋಜಿಸಲಾಗಿವೆ. ಆದರೆ ಬೆಂಗಳೂರಿನಷ್ಟು ದುಬಾರಿ ಟಿಕೆಟ್ ಬೆಲೆ ಇನ್ನೆಲ್ಲೂ ಇರಿಸಲಾಗಿಲ್ಲ. ಮುಂಬೈನಲ್ಲಿ ಸಹ ಬೆಳಿಗಿನ ಜಾವ 7 ಗಂಟೆಗೆ ‘ಜನ ನಾಯಗನ್’ ಸಿನಿಮಾದ ಶೋಗಳು ಆರಂಭವಾಗುತ್ತಿವೆ. ಆದರೆ ಅಲ್ಲಿ ಟಿಕೆಟ್ ಬೆಲೆ 350 ರಿಂದ 450 ರೂಪಾಯಿ ಮಾತ್ರವೇ ಇದೆ. ಆದರೆ ಬೆಂಗಳೂರಿನ ಸಿನಿಮಾ ಪ್ರೇಮಿಗಳನ್ನು ಮಾತ್ರ ಲೂಟಿ ಮಾಡಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ವಿರುದ್ಧದ ಸರಣಿಗೆ ಝಿಂಬಾಬ್ವೆ ತಂಡ ಪ್ರಕಟ – Kannada News | Zimbabwe squad for T20I series against India

ಭಾರತದ ವಿರುದ್ಧದ ಟಿ20 ಸರಣಿಗೆ ಝಿಂಬಾಬ್ವೆ ತಂಡವನ್ನು ಪ್ರಕಟಿಸಲಾಗಿದೆ. ಅನುಭವಿ ಹಾಗೂ ಯುವ ಆಟಗಾರರನ್ನು ಒಳಗೊಂಡಿರುವ 15 ಸದಸ್ಯರುಗಳ ಈ ತಂಡವನ್ನು ಸಿಕಂದರ್ ರಾಝ ಮುನ್ನಡೆಸಲಿದ್ದಾರೆ. ಇನ್ನು ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಂಡಿದ್ದ ಕೆಲ ಆಟಗಾರರನ್ನು ಈ ಬಾರಿ ಕೈ ಬಿಡಲಾಗಿದೆ.

ಮರಳಿದ ಸ್ಟಾರ್ಸ್, ಹೊಸ ಮುಖಕ್ಕೆ ಚಾನ್ಸ್!

  • ತಫಾಡ್ಜ್ವಾ ತ್ಸೀಗಾಗೆ ಚೊಚ್ಚಲ ಅವಕಾಶ: ವಿಕೆಟ್ ಕೀಪರ್ ಬ್ಯಾಟರ್ ತಫಾಡ್ಜ್ವಾ ತ್ಸೀಗಾ ಅವರು ಇದೇ ಮೊದಲ ಬಾರಿಗೆ ಝಿಂಬಾಬ್ವೆ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
  • ವೆಸ್ಲಿ ಮಾಧೆವೆರೆ ಕಂಬ್ಯಾಕ್: ಬಾಂಗ್ಲಾದೇಶ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಸ್ಟಾರ್ ಆಲ್‌ರೌಂಡರ್ ವೆಸ್ಲಿ ಮಾಧೆವೆರೆ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ.
  • ನ್ಯೂಮನ್ ರಿಎಂಟ್ರಿ: ಗಾಯದಿಂದ ಚೇತರಿಸಿಕೊಂಡಿರುವ ಯುವ ವೇಗಿ ನ್ಯೂಮನ್ ನ್ಯಾಮೂರಿ ಕೂಡ ತಂಡಕ್ಕೆ ಮರಳಿದ್ದಾರೆ.

ತಂಡದಿಂದ ಹೊರಬಿದ್ದ ಪ್ರಮುಖರು:

ಬಾಂಗ್ಲಾದೇಶ್ ವಿರುದ್ಧದ ಕಳಪೆ ಪ್ರದರ್ಶನದಿಂದಾಗಿ ಕ್ಲೈವ್ ಮದಂಡೆ, ತಿನೊಟೆಂಡಾ ಮಾಪೋಸಾ ಮತ್ತು ತಾಶಿಂಗಾ ಮುಸೇಕಿವಾ ಅವರನ್ನು ಈ ಸರಣಿಯಿಂದ ಕೈಬಿಡಲಾಗಿದೆ. ಅದರಂತೆ ಝಿಂಬಾಬ್ವೆ ಟಿ20 ತಂಡ ಈ ಕೆಳಗಿನಂತಿದೆ…

ಝಿಂಬಾಬ್ವೆ ಟಿ20 ತಂಡ: ಸಿಕಂದರ್ ರಝಾ (ನಾಯಕ), ಬ್ರಿಯಾನ್ ಬೆನೆಟ್, ರಿಯಾನ್ ಬರ್ಲ್, ತನಕಾ ಚಿವಂಗಾ, ಬೆನ್ ಕರ್ರಾನ್, ಬ್ರಾಡ್ ಇವಾನ್ಸ್, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ಲೆಸ್ಸಿಂಗ್ ಮುಝರಬಾನಿ, ಡಿಯೋನ್ ಮೈಯರ್ಸ್, ರಿಚರ್ಡ್ ನ್ಗಾರವಾ, ನ್ಯೂಮನ್ ನ್ಯಾಮೂರಿ, ಮಿಲ್ಟನ್ ಶುಂಬಾ, ತಫಾಡ್ಜ್ವಾ ತ್ಸೀಗಾ.

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ , ಇಶಾನ್ ಕಿಶನ್ (ವಿಕೆಟ್ ಕೀಪರ್), ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ ಮತ್ತು ಮಯಾಂಕ್ ಯಾದವ್.

ಭಾರತ vs ಝಿಂಬಾಬ್ವೆ ಟಿ20 ಸರಣಿ ವೇಳಾಪಟ್ಟಿ:

  • ಜುಲೈ 23, 2026 (ಗುರುವಾರ): 1ನೇ ಟಿ20 ಪಂದ್ಯ – ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಜುಲೈ 25, 2026 (ಶನಿವಾರ): 2ನೇ ಟಿ20 ಪಂದ್ಯ – ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಜುಲೈ 26, 2026 (ಭಾನುವಾರ): 3ನೇ ಟಿ20 ಪಂದ್ಯ – ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ.

ಇದನ್ನೂ ಓದಿ: ‘ಸನ್​ರೈಸರ್ಸ್’ ಪರ ಕಣಕ್ಕಿಳಿದ ಪಾಕಿಸ್ತಾನ್ ಆಟಗಾರ..!

ಈ ಎಲ್ಲಾ ಮೂರು ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 4:30 ಕ್ಕೆ (ಸ್ಥಳೀಯ ಸಮಯ ಮಧ್ಯಾಹ್ನ 1:00 ಗಂಟೆಗೆ) ಆರಂಭವಾಗಲಿವೆ.

Source link

ಬಿಜೆಪಿ ಕಚೇರಿ ಮುತ್ತಿಗೆಗೆ ಯುವ ಕಾಂಗ್ರೆಸ್​​ ಕಾರ್ಯಕರ್ತರ ಯತ್ನ: ಬೆಂಗಳೂರಲ್ಲಿ ಭಾರಿ ಹೈಡ್ರಾಮಾ – Kannada News | Bengaluru Sees Tense Scenes as Youth Congress Workers Attempt BJP Office Siege

ಬೆಂಗಳೂರು, ಜುಲೈ 21: ನೀಟ್​​​ ಹಗರಣ ಖಂಡಿಸಿ ಹೋರಾಟದ ವೇಳೆ ರಾಹುಲ್ ಗಾಂಧಿ ಅವರನ್ನು ವಶಕ್ಕೆ ಪಡೆದಿದ್ದನ್ನು ಖಂಡಿಸಿ ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವ ಯತ್ನವನ್ನೂ ನಡೆಸಿದ್ದಾರೆ. ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದು, ಈ ವೇಳೆ ಬಿಜೆಪಿ ವಿರುದ್ಧ ಘೋಷಣೆಗಳು ಮೊಳಗಿವೆ. ಈ ವೇಳೆ ಪ್ರತಿಭಟನಾಕಾರರನ್ನು ಸುತ್ತುವರೆದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕರಾವಳಿ ಕರ್ನಾಟಕದಲ್ಲೂ ಈ ವರ್ಷ ಭಾರೀ ಮಳೆ ಕೊರತೆ: ಬರದ ಮುನ್ಸೂಚನೆ – Kannada News | Coastal Karnataka Rainfall Deficit 2026: Dakshina Kannada, Udupi Record 39 Percent Rain Shortfall, Drought Concerns Rise

ಮಂಗಳೂರಿನಲ್ಲಿ ಕೆಲವು ದಿನಗಳ ಹಿಂದೆ ಸುರಿದ ಮಳೆ (ಸಂಗ್ರಹ ಚಿತ್ರ)Image Credit source: tv9

ಮಂಗಳೂರು, ಜುಲೈ 22: ಕರ್ನಾಟಕದಲ್ಲಿ ಸಾಮಾನ್ಯವಾಗಿ ಅತಿ ಹೆಚ್ಚು ಮಳೆ ಪಡೆಯುವ ಕರಾವಳಿ ಭಾಗವೇ ಈ ಬಾರಿ ಮಳೆ ಕೊರತೆಯ ಆತಂಕ ಎದುರಿಸುತ್ತಿದೆ. ದಕ್ಷಿಣ ಕನ್ನಡ (Dakshina Kannada) ಹಾಗೂ ಉಡುಪಿ ಜಿಲ್ಲೆಗಳಲ್ಲಿ 2026 ರ ಜನವರಿ 1ರಿಂದ ಜುಲೈ 19ರವರೆಗೆ ದಾಖಲಾಗಿರುವ ಮಳೆಯ (Monsoon Rain) ಪ್ರಮಾಣ ವಾಡಿಕೆಗಿಂತ ಗಣನೀಯವಾಗಿ ಕಡಿಮೆಯಾಗಿದ್ದು, ಕೃಷಿ ಚಟುವಟಿಕೆಗಳ ಮೇಲೆ ಅದರ ಪರಿಣಾಮ ಕಾಣಿಸತೊಡಗಿದೆ. ವಿಶೇಷವಾಗಿ ಭತ್ತದ ನಾಟಿ ನಡೆಯುವ ಜೂನ್ ತಿಂಗಳಲ್ಲಿ ಮಳೆ ಕೈಕೊಟ್ಟಿರುವುದು ರೈತರ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಲಭ್ಯ ಮಾಹಿತಿಯ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ 1,929.8 ಮಿ.ಮೀ. ಮಳೆ ದಾಖಲಾಗಬೇಕಿದ್ದರೆ, ಈ ವರ್ಷ ಕೇವಲ 1,174.9 ಮಿ.ಮೀ. ಮಳೆಯಷ್ಟೇ ಸುರಿದಿದೆ. ಅಂದರೆ ಜಿಲ್ಲೆಯಲ್ಲಿ ಶೇ 39ರಷ್ಟು ಮಳೆ ಕೊರತೆ ದಾಖಲಾಗಿದೆ. ಇದೇ ರೀತಿ ಉಡುಪಿ ಜಿಲ್ಲೆಯಲ್ಲಿ ಸಾಮಾನ್ಯ 2,203.4 ಮಿ.ಮೀ. ಮಳೆಯ ಬದಲಿಗೆ 1,348.2 ಮಿ.ಮೀ. ಮಳೆಯಾಗಿ ಅಲ್ಲಿಯೂ ಶೇ 39ರಷ್ಟು ಕೊರತೆ ಕಂಡುಬಂದಿದೆ.

ಭತ್ತ ನಾಟಿ ಸಮಯದಲ್ಲೇ ಮಳೆ ಕೊರತೆಯ ಹೊಡೆತ

ಭತ್ತದ ಕೃಷಿಗೆ ಅತ್ಯಂತ ಮಹತ್ವದ ಜೂನ್ ತಿಂಗಳಲ್ಲಿಯೇ ಮಳೆ ಕೈಕೊಟ್ಟಿರುವುದು ರೈತರಿಗೆ ದೊಡ್ಡ ಹೊಡೆತವಾಗಿದೆ. ಜೂನ್ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 57ರಷ್ಟು ಹಾಗೂ ಉಡುಪಿ ಜಿಲ್ಲೆಯಲ್ಲಿ ಶೇ 50ರಷ್ಟು ಮಳೆ ಕೊರತೆ ದಾಖಲಾಗಿದೆ. ಇದರಿಂದ ಭತ್ತದ ನಾಟಿ ಮತ್ತು ಇತರ ಕೃಷಿ ಚಟುವಟಿಕೆಗಳು ತೀವ್ರವಾಗಿ ಹಿನ್ನಡೆಯಾಗಿವೆ.

ಪುತ್ತೂರು ತಾಲೂಕಿನಲ್ಲಿ ಅತಿಹೆಚ್ಚು ಮಳೆ ಕೊರತೆ

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ಪೈಕಿ ಪುತ್ತೂರು ತಾಲೂಕಿನಲ್ಲಿ ಅತಿ ಹೆಚ್ಚು, ಅಂದರೆ ಶೇ 48ರಷ್ಟು ಮಳೆ ಕೊರತೆ ದಾಖಲಾಗಿದೆ. ಬಳಿಕ ಬಂಟ್ವಾಳ ಹಾಗೂ ಮಂಗಳೂರು ತಾಲೂಕುಗಳಲ್ಲಿ ತಲಾ ಶೇ 45, ಮೂಡುಬಿದಿರೆ ಶೇ 44, ಬೆಳ್ತಂಗಡಿ ಶೇ 43, ಉಳ್ಳಾಲ ಶೇ 37, ಕಡಬ ಶೇ 27 ಹಾಗೂ ಸುಳ್ಯ ತಾಲೂಕಿನಲ್ಲಿ ಶೇ 26ರಷ್ಟು ಮಳೆ ಕೊರತೆ ದಾಖಲಾಗಿದೆ.

ಇದನ್ನೂ ಓದಿ: ಕರಾವಳಿ ಸೇರಿ ಕರ್ನಾಟಕದ ಹಲವೆಡೆ ಇನ್ನೆರಡು ದಿನ ಮಳೆ, ಉತ್ತರ ಒಳನಾಡಿನಲ್ಲಿ ಭಾರೀ ಗಾಳಿ

ಕಳೆದ ವರ್ಷದ ಇದೇ ಅವಧಿಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿತ್ತು. ಆದರೆ ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಸುರಿಯದಿರುವುದರಿಂದ ಕೃಷಿ ಮಾತ್ರವಲ್ಲದೆ ಜಲಮೂಲಗಳ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದರೆ ಕರಾವಳಿ ಭಾಗದಲ್ಲೂ ಬರದ ಲಕ್ಷಣಗಳು ತೀವ್ರಗೊಳ್ಳುವ ಆತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸನ್​ರೈಸರ್ಸ್’ ಪರ ಕಣಕ್ಕಿಳಿದ ಪಾಕಿಸ್ತಾನ್ ಆಟಗಾರ..!

Source link

ನಮ್ಮ ಸಮಯ ವ್ಯರ್ಥ ಮಾಡಬೇಡಿ, ಸಿಜೆಪಿ ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮದ ವಿರುದ್ಧದ ಅರ್ಜಿ ತಳ್ಳಿ ಹಾಕಿದ ಸುಪ್ರೀಂ – Kannada News | Supreme Court Rejects Plea Against Police Action on CJP Protestors, Citing Time Waste

ನವದೆಹಲಿ, ಜುಲೈ 22: ದೆಹಲಿಯ ಜಂತರ್ ಮಂತರ್​ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ನಡೆಸಿರುವ ಬಲ ಪ್ರಯೋಗ, ಲಾಠಿಚಾರ್ಜ್​ ಖಂಡಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್(Supreme Court)​ ನಿರಾಕರಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರಿದ್ದ ಪೀಠವು, “ನಮ್ಮ ಸಮಯವನ್ನೂ ವ್ಯರ್ಥ ಮಾಡಬೇಡಿ, ನಿಮ್ಮ ಸಮಯವನ್ನೂ ವ್ಯರ್ಥ ಮಾಡಿಕೊಳ್ಳಬೇಡಿ” ಎಂದು ಅರ್ಜಿದಾರ ಪರ ವಕೀಲರಿಗೆ ಖಡಕ್ ಆಗಿ ತಿಳಿಸಿದೆ.

ವೀಡಿಯೊ ನೋಡಲು ನಮಗೆ ಸಮಯವಿಲ್ಲ: ಸಿಜೆಐ ಸೂರ್ಯ ಕಾಂತ್
ಅರ್ಜಿ ಪ್ರಸ್ತಾಪಿಸಿದ ವಕೀಲ ನರೇಂದ್ರ ಮಿಶ್ರಾ, ಪೊಲೀಸರ ಕ್ರೌರ್ಯ ಮತ್ತು ಲಾಠಿಚಾರ್ಜ್ ಪ್ರದರ್ಶಿಸುವ ವೀಡಿಯೊ ಆಧಾರಗಳು ತಮ್ಮ ಬಳಿಯಿವೆ ಎಂದು ಪೀಠದ ಗಮನಕ್ಕೆ ತರಲು ಯತ್ನಿಸಿದರು. ನಮಗೆ ವೀಡಿಯೊಗಳನ್ನು ವೀಕ್ಷಿಸಲು ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ. ಈ ವಿಷಯದಲ್ಲಿ ನ್ಯಾಯಾಲಯದ ಸಮಯವನ್ನು ದಯವಿಟ್ಟು ವ್ಯರ್ಥ ಮಾಡಬೇಡಿ ಎಂದು ಸಿಜೆಐ ಅರ್ಜಿದಾರರ ಮಾತಿಗೆ ಅಡ್ಡಿಪಡಿಸಿದರು.

ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಇನ್ನೂ ಸ್ಥಳದಲ್ಲೇ ಇದ್ದಾರೆ, ದಯವಿಟ್ಟು ಗುರುವಾರ ವಿಚಾರಣೆಗೆ ಪಟ್ಟಿ ಮಾಡಿ ಎಂದು ವಕೀಲರು ವಿನಂತಿಸಿದಾಗ, ಇಲ್ಲ, ನಾಳೆ ನಮಗೆ ಸಮಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು. ಸುಪ್ರೀಂ ಕೋರ್ಟ್‌ಗಿಂತ ಒಂದು ದಿನ ಮುಂಚಿತವಾಗಿ, ಅಂದರೆ ಮಂಗಳವಾರವಷ್ಟೇ ದೆಹಲಿ ಹೈಕೋರ್ಟ್ ಕೂಡ ಇದೇ ರೀತಿಯ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿತ್ತು. ಈ ರೀತಿಯ ವಿಷಯಗಳು ಮತ್ತು ರಾಜಕೀಯ ಪ್ರತಿಭಟನೆಗಳೊಳಗೆ ನ್ಯಾಯಾಲಯವನ್ನು ಎಳೆದು ತರಬೇಡಿ ಎಂದು ಹೈಕೋರ್ಟ್ ಖಾರವಾಗಿ ಪ್ರತಿಕ್ರಿಯಿಸಿತ್ತು.

ಮತ್ತಷ್ಟು ಓದಿ: ಪ್ರಶ್ನೆಪತ್ರಿಕೆ ಸೋರಿಕೆ ಇಡೀ ದೇಶದ ಸಮಸ್ಯೆ, ತಡೆಯಲು ಗೆಹ್ಲೋಟ್ ಯತ್ನಿಸಿದರೂ ಸಾಧ್ಯವಾಗಲಿಲ್ಲ, ಪ್ರಿಯಾಂಕಾ ಗಾಂಧಿ ಮುಕ್ತ ಮಾತು

ಸಿಜೆಪಿ ಪ್ರತಿಭಟನೆಯ ಹಿನ್ನೆಲೆ
ನೀಟ್  ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಜೂನ್ 20 ರಿಂದ ಜಂತರ್ ಮಂತರ್‌ನಲ್ಲಿ ಸಿಜೆಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಜುಲೈ 20 ರಂದು ನಡೆದ ‘ಸಂಸತ್ ಚಲೋ’ ಮೆರವಣಿಗೆಯ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಭಾರಿ ಘರ್ಷಣೆ ನಡೆದು, ಪೊಲೀಸರು ಲಾಠಿಚಾರ್ಜ್ ಹಾಗೂ ಅಶ್ರುವಾಯು ಸಿಡಿಸಿದ್ದರು. ಈ ಘಟನೆಯಲ್ಲಿ 170 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಪೊಲೀಸರ ಈ ಅತಿಯಾದ ಬಲಪ್ರಯೋಗದ ವಿರುದ್ಧ ತನಿಖೆ ನಡೆಸಬೇಕೆಂದು ಕೋರಿ ನ್ಯಾಯಾಲಯದ ಬಾಗಿಲು ತಟ್ಟಿದ್ದ ಪ್ರತಿಭಟನಾಕಾರರಿಗೆ ಈಗ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಎರಡರಿಂದಲೂ ಹಿನ್ನಡೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version