ಬೆಂಗಳೂರು, (ಏಪ್ರಿಲ್ 09): ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿರುವವರಿಗೆ ಹಾಗೂ ಬಿಪಿಎಲ್ ಕಾರ್ಡ್ಗೆ (BPL Card) ಈಗಾಗಲೇ ಅರ್ಜಿ ಹಾಕಿದವರಿಗೆ ಆಹಾರ ಇಲಾಖೆ ಸಚಿವ ಕೆಚ್ಎಚ್ ಮುನಿಯಪ್ಪ (Minister KH Muniyappa )ಗುಡ್ ನ್ಯೂಸ್ ನೀಡಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುನಿಯಪ್ಪ, ರಾಜ್ಯದಲ್ಲಿ ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಿಲ್ಲ. ಈ ಬಗ್ಗೆ ಈಗಾಗಲೇ ಸದನದಲ್ಲಿ ಕೂಡ ಇದಕ್ಕೆ ಉತ್ತರ ನೀಡಿದ್ದೇನೆ.ಒಂದು ವೇಳೆ ಕಾರ್ಡ್ ರದ್ದಾಗಿದ್ರೆ ತಹಶೀಲ್ದಾರರಿಗೆ ಅರ್ಜಿ ಹಾಕಬೇಕು. 15 ದಿನದೊಳಗೆ ಅರ್ಹರಿಗೆ ಬಿಪಿಎಲ್ ಕಾರ್ಡ್ ಕೋಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಎಪಿಎಲ್ ಕಾರ್ಡ್ ಗೆ ನಾವು ಏನು ಮಾಡುತ್ತಿಲ್ಲ. ಎಪಿಎಲ್ ಗೆ ಸಾಕಷ್ಟು ಜನರು ಅರ್ಜಿ ಹಾಕಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಹೇಳಿದಂತೆ ಪರಿಷ್ಕರಣೆ ಮಾಡುತ್ತಿದ್ದೇವೆ. ಬಿಪಿಎಲ್ ಅರ್ಹರರಲ್ಲದವರು ಎಪಿಎಲ್ ಪಡೆಯಲಿ. ಏಳು ಲಕ್ಷ ಕಾರ್ಡುಗಳು ಅರ್ಹತೆ ಮಿರಿ ಎಪಿಎಲ್ ನವರು ಇದ್ದಾರೆ. ಸುಮಾರು 14 ಲಕ್ಷ ಕಾರ್ಡುಗಳು ಎಪಿಎಲ್ ನವರು ಬಿಪಿಎಲ್ ನಲ್ಲಿ ಇದ್ದಾರೆ. ನಿಧಾನವಾಗಿ ಬಿಪಿಎಲ್ ಗೆ ತೊಂದರೆಯಾಗದಂತೆ ಪರಿಷ್ಕರಣೆ ಮಾಡಬೇಕಿದ್ದು, ಹಂತ ಹಂತವಾಗಿ ಪರಿಷ್ಕರಣೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಮಿಯಾ ಖಲೀಫಾ (Mia Khalifa), ವಿಶ್ವದ ಬಲು ಜನಪ್ರಿಯ ನೀಲಿ ಚಿತ್ರತಾರೆಯರಲ್ಲಿ ಒಬ್ಬರು. ಬಹು ಬೇಗನೇ ನಿವೃತ್ತಿ ಪಡೆದರಾದರೂ ಅವರ ಜನಪ್ರಿಯತೆ ಇಂದಿಗೂ ತಗ್ಗಿಲ್ಲ. ನೀಲಿ ಚಿತ್ರಗಳಲ್ಲಿ ನಟಿಸುವುದು ಬಿಟ್ಟ ಬಳಿಕ ಮಿಯಾ ಖಲೀಫಾ, ಇನ್ಸ್ಟಾಗ್ರಾಂ ಇನ್ಫ್ಲಯುಯೆನ್ಸರ್ ಆಗಿ, ವೆಬ್ ಕ್ಯಾಮ್ ಮಾಡೆಲ್ ಹಾಗೂ ಸ್ಪೋರ್ಟ್ ಕಮೆಂಟೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ವೆಬ್ ಕ್ಯಾಮ್ ಮಾಡೆಲಿಂಗ್ ಮೂಲಕ ದೊಡ್ಡ ಗಳಿಕೆಯನ್ನೇ ಮಾಡುತ್ತಿರುವ ಮಿಯಾ ಖಲೀಫಾ, ಇದೀಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋನಲ್ಲಿ ಕಣ್ಣೀರು ಹಾಕಿದ್ದಾರೆ.
ಮಿಯಾ ಖಲೀಫಾ, ನೆಲೆಸಿರುವುದು ಅಮೆರಿಕನಲ್ಲಿ ಆದರೆ ಅವರು ಮೂಲತಃ ಲೆಬನಾನ್ನವರು. ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವೆ ಹಲವು ದಿನಗಳಿಂದ ನಡೆಯುತ್ತಿದ್ದ ಯುದ್ಧಕ್ಕೆ ಇದೀಗ ವಿರಾಮ ಬಿದ್ದಿದೆ. ಆದರೆ ಈ ಕದನ ವಿರಾಮದ ಬಳಿಕ ಇಸ್ರೇಲ್, ಲೆಬನಾನ್ ಮೇಲೆ ಭಾರಿ ಪ್ರಮಾಣದ ಬಾಂಬ್ ದಾಳಿ ಮಾಡಿದ್ದು, 250ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ಇದನ್ನು ನಟಿ ಮಿಯಾ ಖಲೀಫಾ ಖಂಡಿಸಿದ್ದು, ತಮ್ಮ ಮಾತೃಭೂಮಿ ಮೇಲೆ ನಡೆದ ದಾಳಿಯಿಂದ ತೀವ್ರ ದುಃಖಿತರಾಗಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋನಲ್ಲಿ ಅಳುತ್ತಲೇ ಮಾತನಾಡಿರುವ ಮಿಯಾ ಖಲೀಫಾ, ‘ಇದು ಬಹಳ ನೋವಿನ ದಿನ. ನಾವು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿರುವುದನ್ನು ಇಷ್ಟು ವರ್ಷಗಳಲ್ಲಿ ನೋಡಿಯೇ ಇಲ್ಲ. ನರಮೇಧವನ್ನೇ ನಡೆಸಲಾಗುತ್ತಿದೆ. ಕಳೆದೊಂದು ದಶಕದಲ್ಲಿ ಇಂಥಹಾ ನರಮೇಧ ಯಾರೂ ನೋಡಿದ್ದಿಲ್ಲ. ಕೇವಲ 10 ನಿಮಿಷದಲ್ಲಿ 160 ವಾಯುದಾಳಿಗಳನ್ನು ಲೆಬನಾನ್ ಮೇಲೆ ಮಾಡಲಾಗಿದೆ. ಸ್ಕೂಲು, ಆಸ್ಪತ್ರೆ, ಸಾರ್ವಜನಿಕರು ವಾಸಿಸುವ ಪ್ರದೇಶಗಳು, ಸ್ಮಶಾನಗಳನ್ನು ಗುರಿ ಮಾಡಿಕೊಂಡು ಈ ದಾಳಿಯನ್ನು ಇಸ್ರೇಲ್ ನಡೆಸಿದೆ, ಅದೂ ಕದನ ವಿರಾಮದ ಅವಧಿಯಲ್ಲಿ’ ಎಂದಿದ್ದಾರೆ ಮಿಯಾ ಖಲೀಫಾ.
ಮುಂದುವರೆದು ಮಾತನಾಡಿ, ‘ನನ್ನ ತೆರಿಗೆ ಹಣವನ್ನು ನನ್ನ ಮಾತೃಭೂಮಿಯನ್ನು ಧ್ವಂಸ ಮಾಡಲು ಬಳಸಲಾಗುತ್ತಿದೆ. ಇದಕ್ಕೆ ಹೇಗೆ ನಾನು ಪ್ರತಿಕ್ರಿಯಿಸಬೇಕು ಅರ್ಥವಾಗುತ್ತಿಲ್ಲ. ನನಗೆ ಏನು ಹೇಳಲು ಸಹ ತೋಚುತ್ತಿಲ್ಲ. ನನಗೆ ಪದಗಳೇ ಹೊಳೆಯುತ್ತಿಲ್ಲ. ಇಷ್ಟು ದಿನ ನನಗೆ ಸರಿ ಎನಿಸುವ ಬೇರೆಯವರ ಅಭಿಪ್ರಾಯಗಳನ್ನು ನಾನು ಹಂಚಿಕೊಳ್ಳುತ್ತಿದ್ದೆ. ಆದರೆ ಈಗ ನಾನೇ ಮಾತನಾಡುತ್ತಿದ್ದೇನೆ’ ಎಂದಿದ್ದಾರೆ ನಟಿ.
‘ಏನಾಗುತ್ತಿದೆ? ನಾವು ಮಂಗಳ ಗ್ರಹಕ್ಕೆ ಜನರನ್ನು ಕಳಿಸಿ ಜೀವ ಇರಬಹುದೇನೋ ಎಂದು ಹುಡುಕುತ್ತಿದ್ದೇವೆ, ಆದರೆ ಇಲ್ಲಿ ಭೂಮಿಯ ಮೇಲೆ ಇನ್ನೊಬ್ಬ ಜೀವಿಯನ್ನು ಕೊಲ್ಲಲಾಗುತ್ತಿದೆ. ಇದು ಅನಾಗರೀಕತೆ. ಇದೇ ರೀತಿಯ ದೌರ್ಜನ್ಯಕ್ಕೆ ತುತ್ತಾದ ದೇಶವನ್ನು ನಾವು ನೋಡಿದ್ದೇವೆ, ಈಗ ಮತ್ತೊಂದು ದೇಶದ ಮೇಲೆ ದೌರ್ಜನ್ಯ ಎಸೆಗಲಾಗುತ್ತಿದೆ. ಆದರೆ ಇದು ನಿಲ್ಲುವುದು ಯಾವಾಗ? ಎಂದು ಮಿಯಾ ಖಲೀಫಾ ಪ್ರಶ್ನೆ ಮಾಡಿದ್ದಾರೆ. ಮಿಯಾ ಖಲೀಫಾ ಅಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನವದೆಹಲಿ, ಏಪ್ರಿಲ್ 9: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (AMU) ಹಾಸ್ಟೆಲ್ ಕೊಠಡಿಯಿಂದ ಜೀವಂತ ಕಾರ್ಟ್ರಿಡ್ಜ್‌ಗಳು ಮತ್ತು ನಕಲಿ ಕರೆನ್ಸಿ ಸೇರಿದಂತೆ ಹಲವು ಅಪರಾಧ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬುಧವಾರ ಪೊಲೀಸರು ತಮಗೆ ಸಿಕ್ಕ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದರು. ಆಗ ಸರ್ ಜಿಯಾವುದ್ದೀನ್ ಹಾಲ್‌ನ ಕೊಠಡಿಯಿಂದ 32 ಬೋರ್ ಪಿಸ್ತೂಲ್ ಗುಂಡುಗಳು, 12 ಬೋರ್ ಕಾರ್ಟ್ರಿಡ್ಜ್‌ಗಳು, ನಕಲಿ ಕರೆನ್ಸಿ, 8 ಮೊಬೈಲ್ ಫೋನ್‌ಗಳು ಮತ್ತು ಖಾಲಿ ಮ್ಯಾಗಜೀನ್ ಕವರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಶೇವಾಜ್ ಆ ಕೊಠಡಿಯಲ್ಲಿ ವಾಸವಾಗಿದ್ದನು. ಅವನು ಅಲ್ಲಿದ್ದ ನಿವಾಸಿಗಳನ್ನು ಬಲವಂತವಾಗಿ ಹೊರಗೆ ಕಳುಹಿಸಿದ್ದನು. ಹಲವಾರು ತಿಂಗಳುಗಳಿಂದ ಅಲ್ಲಿಯೇ ವಾಸಿಸುತ್ತಿದ್ದನು ಎಂದು ಎಎಂಯು ಪ್ರಾಕ್ಟರ್ ನವೇದ್ ಖಾನ್ ಹೇಳಿದ್ದಾರೆ.
ಪೊಲೀಸರು ಆ ಕೋಣೆಯ ಅಧಿಕೃತ ನಿವಾಸಿಗಳಲ್ಲಿ ಒಬ್ಬರನ್ನು ಬಂಧಿಸಿ ಪ್ರಶ್ನಿಸಿದರು. ಆ ಕೊಠಡಿಯಿಂದ ವಶಪಡಿಸಿಕೊಂಡ ದಾಖಲೆಗಳು ಆರೋಪಿಯು ಅನಿವಾಸಿ ವಿದ್ಯಾರ್ಥಿಯಾಗಿ ಎಎಂಯುಗೆ ಪ್ರವೇಶ ಪಡೆದಿದ್ದಾನೆ ಎಂದು ಸೂಚಿಸುತ್ತವೆ ಎಂದು ಪೊಲೀಸರು ಹೇಳಿದ್ದಾರೆ.
ಏಪ್ರಿಲ್ 6ರಂದು ಅಲಿಗಢದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯ ಘಟನೆಯ ತನಿಖೆ ನಡೆಯುತ್ತಿರುವ ಮಧ್ಯೆ ಈ ಬೆಳವಣಿಗೆ ಸಂಭವಿಸಿದೆ. ಏಪ್ರಿಲ್ 6ರಂದು ಅಲಿಘಢದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ವರದಿಯಾದ ಗುಂಡಿನ ದಾಳಿಯ ತನಿಖೆಗೆ ಈ ಚೇತರಿಕೆ ಸಂಬಂಧಿಸಿದೆ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ಹಿಂದೆ ಮೂವರು ಶಂಕಿತರನ್ನು ಬಂಧಿಸಿದ್ದರು. ಅದರ ವಿಚಾರಣೆಯ ಸಮಯದಲ್ಲಿ ಶೆವಾಜ್ ಹೆಸರು ಕೇಳಿಬಂದಿತ್ತು.
ಮಂಗಳವಾರ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಆ ಸಮಯದಲ್ಲಿ ಆರೋಪಿಯ ಹೆಸರು ಬೆಳಕಿಗೆ ಬಂದಿದ್ದು, ತನಿಖಾಧಿಕಾರಿಗಳು ಹಾಸ್ಟೆಲ್ ಕೋಣೆಗೆ ಕರೆದೊಯ್ಯಲಾಯಿತು. ಈ ಪ್ರಕರಣದ ಕುರಿತು ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏಪ್ರಿಲ್ 09: ರಾಜ್ಯದ ಜನರಿಗೆ ಕರ್ನಾಟಕ ಸರ್ಕಾರ ಗುಡ್ ನ್ಯೂಸ್ ಒಂದನ್ನು ನೀಡಿದ್ದು, ಹಲ್ಲಿನ ಚಿಕಿತ್ಸೆಗೂ ವಿಮಾ ಯೋಜನೆ ಸಹಾಯ ಸಿಗುವ ನಿಟ್ಟಿನಲ್ಲಿ ಮಹತ್ವದ ನಿರ್ಣಯ ಕೈಗೊಂಡಿದೆ. ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಜನ್ ಆರೋಗ್ಯ-ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ಹಲ್ಲಿನ ರೂಟ್ ಕ್ಯಾನಲ್ ಚಿಕಿತ್ಸೆ ಸೇರ್ಪಡೆಗೆ ಅನುಮೋದನೆ ನೀಡಲಾಗಿದೆ. ಹೀಗಾಗಿ ದಂತ ಚಿಕಿತ್ಸೆಯನ್ನೂ ಈ ಯೋಜನೆಯಡಿ ಫಲಾನುಭವಿಗಳು ಮಾಡಿಸಿಕೊಳ್ಳಬಹುದಾಗಿದ್ದು, ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡುವ ಮೂಲಕ ಸ್ವತಃ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.
ಸಚಿವರು ಹೇಳಿದ್ದೇನು?
Strengthening public healthcare, one gap at a time.
The Government of Karnataka has approved the inclusion of Root Canal Treatment under the AB PMJAY–CM’s Arogya Karnataka scheme, extending access to essential dental care for PHH and NPHH beneficiaries.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 9, 2026
ಸಾರ್ವಜನಿಕ ಆರೋಗ್ಯ ಸೇವೆಯನ್ನು ಹಂತ ಹಂತವಾಗಿ ಬಲಪಡಿಸುವ ದಿಸೆಯಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆ ಎಂದಿರುವ ಸಚಿವರು, ಈ ಯೋಜನೆ ಮುಂಭಾಗ (Anterior) ಮತ್ತು ಹಿಂಭಾಗ (Posterior) ಹಲ್ಲುಗಳ ರೂಟ್ ಕ್ಯಾನಲ್ ಚಿಕಿತ್ಸೆಯನ್ನೂ ಒಳಗೊಂಡಿದ್ದು, ರಾಜ್ಯದಾದ್ಯಂತ ಸಮಯೋಚಿತ, ಕೈಗೆಟುಕುವ ಹಾಗೂ ಗುಣಮಟ್ಟದ ದಂತ ಆರೋಗ್ಯ ಸೇವೆಗಳನ್ನು ಒದಗಿಸಲು ಇದು ನೆರವಾಗಲಿದೆ. CGHS ಟಿಯರ್-3 ಮಾನದಂಡದ ಪ್ಯಾಕೇಜ್ ದರಗಳು ಮತ್ತು ಸ್ಪಷ್ಟ ಕ್ಲಿನಿಕಲ್ ವರ್ಗೀಕರಣದೊಂದಿಗೆ, ಚಿಕಿತ್ಸೆಗಳಲ್ಲಿ ಏಕತೆಯನ್ನು ತರಲು ಇದು ಸಹಾಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ಜಾರಿಗೆ ತರಲಾಗುತ್ತಿರುವ ಈ ಪ್ಯಾಕೇಜ್ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ರೀತಿಯ ವೆಚ್ಚಗಳನ್ನು ಒಳಗೊಂಡಿದ್ದು, ರೋಗಿಗಳು ಹೆಚ್ಚುವರಿ ಶುಲ್ಕಗಳನ್ನು ಭರಿಸಬೇಕಾಗುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನ ಅತ್ಯಂತ ನಿರ್ಣಾಯಕ ಘಟ್ಟಗಳು. ಫಲಿತಾಂಶ ಬಂದ ನಂತರ “ಮುಂದೇನು ಓದಬೇಕು? ಯಾವ ಕೆಲಸಕ್ಕೆ ಬೇಡಿಕೆಯಿದೆ?” ಎಂಬ ಗೊಂದಲ ಸಹಜ. ನೀವು ಆಯ್ದುಕೊಳ್ಳುವ ಒಂದು ಕೋರ್ಸ್ ನಿಮ್ಮ ಇಡೀ ವೃತ್ತಿಜೀವನದ ದಿಕ್ಕನ್ನೇ ಬದಲಿಸಬಹುದು. ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಪಿಯುಸಿ ನಂತರ ಲಭ್ಯವಿರುವ ಅತ್ಯುತ್ತಮ ಮತ್ತು ಉದ್ಯೋಗಾಧಾರಿತ ಕೋರ್ಸ್‌ಗಳ ವಿವರ ಇಲ್ಲಿದೆ:
ವಿಜ್ಞಾನ ವಿಭಾಗ (Science):
ವಿಜ್ಞಾನ ವಿಭಾಗದಲ್ಲಿ ಓದಿದವರಿಗೆ ಕೇವಲ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಕ್ಷೇತ್ರ ಮಾತ್ರವಲ್ಲದೆ, ಹತ್ತಾರು ಹೊಸ ಹಾದಿಗಳಿವೆ.
ವೈದ್ಯಕೀಯ ಮತ್ತು ಅಲೈಡ್ ಸೈನ್ಸ್: MBBS ಹೊರತುಪಡಿಸಿ ನರ್ಸಿಂಗ್, ಪ್ಯಾರಾ ಮೆಡಿಕಲ್, ಮತ್ತು ಬಿ.ಫಾರ್ಮಾ ಕೋರ್ಸ್‌ಗಳಿಗೆ ಈಗ ಭಾರಿ ಬೇಡಿಕೆಯಿದೆ.
ತಾಂತ್ರಿಕ ಕೋರ್ಸ್‌ಗಳು: ಬಿ.ಸಿ.ಎ (BCA) ಅಥವಾ ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್ ಮಾಡುವ ಮೂಲಕ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಮಿಂಚಬಹುದು.
ಸಂಶೋಧನಾ ಕ್ಷೇತ್ರ: ಫೋರೆನ್ಸಿಕ್ ಸೈನ್ಸ್, ಬಯೋಕೆಮಿಸ್ಟ್ರಿ, ಓಸಿಯೋನೋಗ್ರಫಿ (ಸಮುದ್ರ ವಿಜ್ಞಾನ) ಮತ್ತು ಬಯೋಮೆಡಿಕಲ್ ವೃತ್ತಿಗಳು ಭವಿಷ್ಯದ ದೃಷ್ಟಿಯಿಂದ ಅತ್ಯುತ್ತಮವಾಗಿವೆ.
ಇತರೆ: ಆರ್ಕಿಟೆಕ್ಚರ್, ಏವಿಯೇಷನ್ (ವಿಮಾನಯಾನ), ಮತ್ತು ಸೌಂಡ್ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಆಸಕ್ತಿ ಇದ್ದರೆ ನೂರಕ್ಕೆ ನೂರರಷ್ಟು ಉದ್ಯೋಗ ಖಚಿತ.
ವಾಣಿಜ್ಯ ವಿಭಾಗ (Commerce):
ಲೆಕ್ಕಾಚಾರ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಆಸಕ್ತಿ ಇರುವವರಿಗೆ ವಾಣಿಜ್ಯ ವಿಭಾಗವು ಬಂಗಾರದಂತಹ ಅವಕಾಶ ನೀಡುತ್ತದೆ.
ಪದವಿ ಕೋರ್ಸ್‌ಗಳು: ಬಿ.ಕಾಂ (B.Com) ಅಥವಾ ಬಿ.ಬಿ.ಎ (BBA) ಮಾಡುವ ಮೂಲಕ ಕಂಪನಿಗಳಲ್ಲಿ ಅಕೌಂಟೆಂಟ್ ಅಥವಾ ಮ್ಯಾನೇಜರ್ ಹುದ್ದೆ ಪಡೆಯಬಹುದು.
ವೃತ್ತಿಪರ ಕೋರ್ಸ್‌ಗಳು: ಅತ್ಯಂತ ಹೆಚ್ಚು ಸಂಬಳ ತರುವ ಸಿಎ (CA – Chartered Accountancy) ಮಾಡುವುದು ವಾಣಿಜ್ಯ ವಿದ್ಯಾರ್ಥಿಗಳ ಮೊದಲ ಆದ್ಯತೆ. ಇದಲ್ಲದೆ ಕಂಪನಿ ಸೆಕ್ರೆಟರಿ (CS), ಸಿಪಿಎ (CPA) ಕೋರ್ಸ್‌ಗಳೂ ಇವೆ. ಚಾರ್ಟೆಡ್ ಅಕೌಂಟೆನ್ಸಿ ಇದು ಕಠಿಣವಾದರೂ, ಶ್ರಮವಹಿಸಿ ಪಾಸಾದರೆ ಸಮಾಜದಲ್ಲಿ ಗೌರವ ಮತ್ತು ಉನ್ನತ ಸಂಬಳ ಸಿಗುವುದು ಖಚಿತ. ವಾಣಿಜ್ಯ ವಿದ್ಯಾರ್ಥಿಗಳಿಗೆ ಇದು ‘ಗೋಲ್ಡನ್ ಚಾನ್ಸ್’.
ಆಧುನಿಕ ಆಯ್ಕೆಗಳು: ಡಿಜಿಟಲ್ ಮಾರ್ಕೆಟಿಂಗ್, ಬ್ಯಾಂಕಿಂಗ್ ಮತ್ತು ಅಕೌಂಟೆನ್ಸಿ ಕ್ಷೇತ್ರಗಳು ಈಗಿನ ಕಾಲಕ್ಕೆ ತಕ್ಕಂತ ಉದ್ಯೋಗಗಳನ್ನು ನೀಡುತ್ತವೆ.
ಟಾಲಿವುಡ್ ನಟ ಪ್ರಭಾಸ್ (Prabhas) ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಈಗ ‘ಸ್ಪಿರಿಟ್’ (Spirit) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಸಿನಿಮಾದ ಕೆಲಸಗಳ ನಡುವೆ ಸಣ್ಣ ವಿರಾಮ ಪಡೆದುಕೊಂಡು ಚಿತ್ರಮಂದಿರಕ್ಕೆ ಬಂದಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ (Dhurandhar 2) ಸಿನಿಮಾ ವೀಕ್ಷಿಸಲು ಸಂದೀಪ್ ರೆಡ್ಡಿ ವಂಗಾ ಮತ್ತು ಪ್ರಭಾಸ್ ಅವರು ಥಿಯೇಟರ್‌ಗೆ ಭೇಟಿ ನೀಡಿದ್ದಾರೆ. ಚಿತ್ರಮಂದಿರದಲ್ಲಿ ಅವರಿಬ್ಬರು ಜೊತೆಯಾಗಿ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಹೈದರಾಬಾದ್‌ನ ಅಲ್ಲು ಸಿನಿಮಾಸ್‌ನಲ್ಲಿ ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ ಸಿನಿಮಾ ವೀಕ್ಷಿಸಲು ಆಗಮಿಸಿದ ದೃಶ್ಯಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿವೆ. ಚಿತ್ರಮಂದಿರದ ಆಡಳಿತ ಮಂಡಳಿಯು ಪ್ರಭಾಸ್ ಅವರಿಗೆ ಆತ್ಮೀಯ ಸ್ವಾಗತ ಕೋರಿದ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಪ್ರಭಾಸ್ ಸಿನಿಮಾ ನೋಡಿದ್ದರಿಂದ ‘ಧುರಂಧರ್ 2’ ಹೈಪ್ ಇನ್ನಷ್ಟು ಹೆಚ್ಚಾಗಿದೆ.
ಈ ಹಿಂದೆಯೇ ಸಂದೀಪ್ ರೆಡ್ಡಿ ವಂಗಾ ಅವರು ‘ಧುರಂಧರ್’ ಚಿತ್ರದ ಮೊದಲ ಭಾಗವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಿರ್ದೇಶಕ ಆದಿತ್ಯ ಧರ್ ಅವರ ಮೇಕಿಂಗ್ ಮತ್ತು ರಣವೀರ್ ಸಿಂಗ್, ಅಕ್ಷಯ್ ಖನ್ನಾ ಅವರ ನಟನೆಯನ್ನು ಕೊಂಡಾಡಿದ್ದರು. ‘ಧುರಂಧರ್ ಸಿನಿಮಾ ಹೆಚ್ಚು ಮಾತನಾಡದ, ಗಾಂಭೀರ್ಯವುಳ್ಳ ವ್ಯಕ್ತಿಯಂತೆ ನಿರ್ಮಾಣವಾಗಿದೆ. ಶೀರ್ಷಿಕೆಗೆ ತಕ್ಕಂತೆ ಸಿನಿಮಾ ತೀವ್ರತೆಯಿಂದ ಸಾಗುತ್ತದೆ’ ಎಂದು ಸಂದೀಪ್ ಅವರು ಎಕ್ಸ್‌ನಲ್ಲಿ (ಟ್ವಿಟರ್) ಬರೆದುಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ನಿರ್ದೇಶಕ ಆದಿತ್ಯ ಧರ್, ‘ಸಂದೀಪ್, ನಿಮ್ಮಂತಹ ಧೈರ್ಯವಂತ ನಿರ್ದೇಶಕರಿಂದ ಇಂತಹ ಮಾತುಗಳು ಕೇಳಿಬರುವುದು ಹೆಮ್ಮೆಯ ವಿಷಯ. ಸಿನಿಮಾ ಯಾವಾಗಲೂ ಧೈರ್ಯಶಾಲಿಗಳನ್ನು ನೆನಪಿಟ್ಟುಕೊಳ್ಳುತ್ತದೆ’ ಎಂದು ಧನ್ಯವಾದ ಅರ್ಪಿಸಿದ್ದರು. ‘ಧುರಂಧರ್ 2’ ಸಿನಿಮಾ ನೋಡಿ ಅನೇಕ ಸೆಲೆಬ್ರಿಟಿಗಳು ಫಿದಾ ಆಗಿದ್ದಾರೆ.
ಕಲೆಕ್ಷನ್ ವಿಚಾರದಲ್ಲಿ ‘ಧುರಂಧರ್ 2’ ಹೊಸ ಇತಿಹಾಸ ಸೃಷ್ಟಿಸಿದೆ. ಪ್ರಭಾಸ್ ಅಭಿನಯದ ‘ಬಾಹುಬಲಿ 2’ ಚಿತ್ರವು ಭಾರತದಲ್ಲಿ ಮಾಡಿದ್ದ ಒಟ್ಟು ಗಳಿಕೆಯನ್ನು (ಅಂದಾಜು 1,030 ಕೋಟಿ ರೂ.) ಈ ಸಿನಿಮಾ ಹಿಂದಿಕ್ಕಿದೆ. ವರದಿಗಳ ಪ್ರಕಾರ, ‘ಧುರಂಧರ್ 2’ ಇದುವರೆಗೆ ಬರೋಬ್ಬರಿ 1,041 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿದೆ. ಈ ಬದಲಾವಣೆಯ ಮುಂಚೂಣಿಯಲ್ಲಿರುವುದು ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ ಅಥವಾ ಕೃತಕ ಬುದ್ಧಿಮತ್ತೆ (AI). ಪಿಯುಸಿ ಬಳಿಕ ಕೇವಲ ಸೈನ್ಸ್ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಆರ್ಟ್ಸ್ ಮತ್ತು ಕಾಮರ್ಸ್ ವಿಭಾಗದ ವಿದ್ಯಾರ್ಥಿಯಾಗಿದ್ದರೂ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಇಂದು ಹಲವು ಅವಕಾಶಗಳಿವೆ. ಯಂತ್ರಗಳಿಗೆ ಮನುಷ್ಯನಂತೆ ಆಲೋಚಿಸುವ ಮತ್ತು ಕಲಿಯುವ ಶಕ್ತಿಯನ್ನು ತುಂಬುವ ಈ ತಂತ್ರಜ್ಞಾನವು ಮುಂಬರುವ ದಶಕಗಳಲ್ಲಿ ಜಗತ್ತನ್ನು ಆಳಲಿದೆ. ಇದು ಪ್ರತಿಯೊಂದು ಕ್ಷೇತ್ರವನ್ನೂ ಆವರಿಸಿಕೊಳ್ಳುತ್ತಿರುವುದರಿಂದ, ನಿಮ್ಮ ಆಸಕ್ತಿಯ ಕ್ಷೇತ್ರಕ್ಕೆ ಅನುಗುಣವಾಗಿ ಸರಿಯಾದ ಕೋರ್ಸ್ ಆಯ್ಕೆ ಮಾಡಿಕೊಳ್ಳಿ. ನಿಮ್ಮ ವಿಭಾಗಕ್ಕೆ ಅನುಗುಣವಾಗಿ ನೀವು ಆಯ್ಕೆ ಮಾಡಬಹುದಾದ ಅತ್ಯುತ್ತಮ AI ಕೋರ್ಸ್‌ಗಳ ಮಾಹಿತಿ ಇಲ್ಲಿದೆ.
ವಿಜ್ಞಾನ ವಿಭಾಗದ (Science) ವಿದ್ಯಾರ್ಥಿಗಳಿಗೆ:
ತಾಂತ್ರಿಕ ಕೋರ್ಸ್‌ಗಳು ನೀವು ಪಿಯುಸಿಯಲ್ಲಿ ಪಿಸಿಎಂ (PCM) ವಿಷಯಗಳನ್ನು ಓದಿದ್ದರೆ, AI ಕ್ಷೇತ್ರದಲ್ಲಿ ತಾಂತ್ರಿಕವಾಗಿ ಆಳವಾಗಿ ಕಲಿಯಲು ನಿಮಗೆ ಹೆಚ್ಚಿನ ಅವಕಾಶಗಳಿವೆ. B.Tech in Artificial Intelligence and Machine Learning (AI & ML) ಅತ್ಯಂತ ಜನಪ್ರಿಯ ಆಯ್ಕೆಯಾಗಿದೆ. ಇದು 4 ವರ್ಷಗಳ ಕೋರ್ಸ್ ಆಗಿದ್ದು, ಇದರಲ್ಲಿ ಅಲ್ಗಾರಿದಮ್‌ಗಳು, ರೋಬೋಟಿಕ್ಸ್ ಮತ್ತು ಡೇಟಾ ಸೈನ್ಸ್ ಬಗ್ಗೆ ಸಂಪೂರ್ಣ ತರಬೇತಿ ನೀಡಲಾಗುತ್ತದೆ. ಇದಲ್ಲದೆ, B.Sc. in Data Science or AI ಕೂಡ ಒಂದು ಉತ್ತಮ ಆಯ್ಕೆಯಾಗಿದ್ದು, ಇದು 3 ವರ್ಷಗಳ ಕೋರ್ಸ್ ಆಗಿದೆ. ಇಂಜಿನಿಯರಿಂಗ್‌ಗೆ ಹೋಲಿಸಿದರೆ ಇದು ಹೆಚ್ಚು ಸಂಶೋಧನೆ ಮತ್ತು ವಿಶ್ಲೇಷಣೆಗೆ ಒತ್ತು ನೀಡುತ್ತದೆ.
ವಾಣಿಜ್ಯ ವಿಭಾಗದ (Commerce) ವಿದ್ಯಾರ್ಥಿಗಳಿಗೆ:
ವ್ಯವಹಾರ ಮತ್ತು ವಿಶ್ಲೇಷಣೆ ಕಾಮರ್ಸ್ ವಿದ್ಯಾರ್ಥಿಗಳು AI ಅನ್ನು ನೇರವಾಗಿ ಕೋಡಿಂಗ್ ಮೂಲಕ ಕಲಿಯುವ ಬದಲು, ಅದನ್ನು ವ್ಯವಹಾರದಲ್ಲಿ ಹೇಗೆ ಬಳಸಬಹುದು ಎಂಬುದರ ಮೇಲೆ ಗಮನ ಹರಿಸಬಹುದು. BCA (Bachelor of Computer Applications) with AI Specialization ಕಾಮರ್ಸ್ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಆಯ್ಕೆ. ಇದಕ್ಕೆ ಹೆಚ್ಚಿನ ಕಾಲೇಜುಗಳಲ್ಲಿ ಗಣಿತ ವಿಷಯ ಕಡ್ಡಾಯವಲ್ಲ. ಅಲ್ಲದೆ, BBA in Business Analytics ಎಂಬ ಕೋರ್ಸ್ ಕೂಡ ಲಭ್ಯವಿದ್ದು, ಇದರಲ್ಲಿ ಡೇಟಾವನ್ನು ಬಳಸಿಕೊಂಡು ವ್ಯವಹಾರದ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುವುದು ಮತ್ತು AI ಪರಿಕರಗಳನ್ನು ಹೇಗೆ ಬಳಸುವುದು ಎಂದು ಕಲಿಸಲಾಗುತ್ತದೆ. ಇದು ಫಿನ್‌ಟೆಕ್ (FinTech) ಕ್ಷೇತ್ರದಲ್ಲಿ ದೊಡ್ಡ ಅವಕಾಶಗಳನ್ನು ತೆರೆಯುತ್ತದೆ.
ಕಲಾ ವಿಭಾಗದ (Arts) ವಿದ್ಯಾರ್ಥಿಗಳಿಗೆ:
ಸೃಜನಶೀಲ AI ಮತ್ತು ಡಿಪ್ಲೊಮಾ ಆರ್ಟ್ಸ್ ಅಥವಾ ಕಲಾ ವಿಭಾಗದ ವಿದ್ಯಾರ್ಥಿಗಳು ಕೂಡ AI ಕ್ಷೇತ್ರಕ್ಕೆ ಬರಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ. B.Des (Bachelor of Design) with AI Integration ಕೋರ್ಸ್ ಮೂಲಕ ಸೃಜನಶೀಲ ಕೆಲಸಗಳಲ್ಲಿ AI ಬಳಕೆಯನ್ನು ಕಲಿಯಬಹುದು. ಉದಾಹರಣೆಗೆ, ಚಿತ್ರಕಲೆ, ಯುಎಕ್ಸ್ (UX) ಡಿಸೈನ್ ಮತ್ತು ಜಾಹೀರಾತು ಕ್ಷೇತ್ರಗಳಲ್ಲಿ AI ಅಪ್ಲಿಕೇಶನ್‌ಗಳ ಬಳಕೆ ಹೆಚ್ಚಿದೆ. ಇದರ ಜೊತೆಗೆ, ಯಾವುದೇ ಪದವಿ ಪಡೆಯುತ್ತಿರುವಾಗ ಅಥವಾ ಪಿಯುಸಿ ನಂತರ 6 ತಿಂಗಳಿನಿಂದ 1 ವರ್ಷದ ಡಿಪ್ಲೊಮಾ ಇನ್ AI (Diploma in AI) ಕೋರ್ಸ್‌ಗಳನ್ನು ಮಾಡಬಹುದು. ಗೂಗಲ್ (Google), ಐಬಿಎಂ (IBM) ಮತ್ತು ಮೈಕ್ರೋಸಾಫ್ಟ್‌ನಂತಹ ಸಂಸ್ಥೆಗಳು ನೀಡುವ ಆನ್‌ಲೈನ್ ಪ್ರಮಾಣಪತ್ರ ಕೋರ್ಸ್‌ಗಳು (Certifications) ಇದಕ್ಕೆ ಪೂರಕವಾಗಿವೆ.
ಆನ್‌ಲೈನ್ ಸಾರ್ಟಿಫಿಕೇಶನ್ ಮತ್ತು ಸ್ಕಿಲ್ ಕೋರ್ಸ್‌ಗಳು (ಎಲ್ಲಾ ವಿಭಾಗದವರಿಗೂ)ಪಿಯುಸಿ ಮುಗಿಸಿದ ಯಾರೇ ಆಗಲಿ, ತಕ್ಷಣ ಕೆಲಸಕ್ಕೆ ಸೇರಲು ಅಥವಾ ಜ್ಞಾನ ಹೆಚ್ಚಿಸಿಕೊಳ್ಳಲು Coursera, Udemy ಅಥವಾ Google ನಂತಹ ವೇದಿಕೆಗಳಲ್ಲಿ Generative AI ಅಥವಾ Prompt Engineering ಕೋರ್ಸ್‌ಗಳನ್ನು ಮಾಡಬಹುದು. “AI for Everyone” ನಂತಹ ಕೋರ್ಸ್‌ಗಳು ತಾಂತ್ರಿಕವಲ್ಲದವರಿಗೂ AI ಬಗ್ಗೆ ಸರಳವಾಗಿ ತಿಳಿಸಿಕೊಡುತ್ತವೆ. ಇವು ನಿಮ್ಮ ರೆಸ್ಯೂಮೆಗೆ (Resume) ಹೆಚ್ಚಿನ ಮೌಲ್ಯ ತಂದುಕೊಡುತ್ತವೆ ಮತ್ತು ಇಂದಿನ ಡಿಜಿಟಲ್ ಜಗತ್ತಿನಲ್ಲಿ ಸ್ಪರ್ಧಿಸಲು ಸಹಾಯ ಮಾಡುತ್ತವೆ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪಾಟ್ನಾ, ಏಪ್ರಿಲ್ 09: ಬಿಹಾರದ ರಾಜಕೀಯ ಇತಿಹಾಸದಲ್ಲಿ ಒಂದು ಸುದೀರ್ಘ ಮತ್ತು ಪ್ರಭಾವಶಾಲಿ ಅಧ್ಯಾಯ ಈಗ ಅಂತ್ಯದತ್ತ ಸಾಗುತ್ತಿದೆ. ಕಳೆದ ಎರಡು ದಶಕಗಳಿಂದ ಬಿಹಾರ ರಾಜಕಾರಣದಲ್ಲಿ ಆಳವಾಗಿ ಬೇರೂರಿದ್ದ ನಿತೀಶ್ ಕುಮಾರ್(Nitish Kumar), ಈಗ ಪಾಟ್ನಾದಿಂದ ದೆಹಲಿಯ ರಾಜಕೀಯ ಅಂಗಳಕ್ಕೆ ತಮ್ಮ ಪಯಣ ಬೆಳೆಸಿದ್ದಾರೆ.
ನಿತೀಶ್ ಯುಗಾಂತ್ಯ: ಬಿಹಾರದ ಚಾಣಕ್ಯನ ದೆಹಲಿ ಪಯಣ
ಬಿಹಾರ ರಾಜಕೀಯದಲ್ಲಿ ‘ಸುಶಾಸನ್ ಬಾಬು’ ಎಂದೇ ಖ್ಯಾತರಾದ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರ ಎರಡು ದಶಕಗಳ ಮುಖ್ಯಮಂತ್ರಿ ಪರ್ವ ಮುಕ್ತಾಯವಾಗುತ್ತಿದೆ. ರಾಜ್ಯ ರಾಜಕಾರಣವನ್ನು ದಶಕಗಳ ಕಾಲ ಆಳಿದ ಅವರು, ಈಗ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಗೆ ಪದಾರ್ಪಣೆ ಮಾಡುತ್ತಿದ್ದಾರೆ.
ರಾಜ್ಯಸಭಾ ಸದಸ್ಯರಾಗಿ ಹೊಸ ಜವಾಬ್ದಾರಿ
ನಿತೀಶ್ ಕುಮಾರ್ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲು ನವದೆಹಲಿಗೆ ತಲುಪಲಿದ್ದಾರೆ. ಅವರ ಜೊತೆಯಲ್ಲಿ ಆಪ್ತ ನಾಯಕರಾದ ಸಂಜಯ್ ಝಾ ಮತ್ತು ವಿಜಯ್ ಕುಮಾರ್ ಚೌಧರಿ ಕೂಡ ಇದ್ದು, ಇಬ್ಬರೂ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮುಂದಿನ ಸಿಎಂ ಯಾರು?
ಮೂಲಗಳ ಪ್ರಕಾರ, ಏಪ್ರಿಲ್ 14 ರಂದು ನಿತೀಶ್ ಕುಮಾರ್ ಅವರು ಅಧಿಕೃತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಅಂದೇ ಎನ್‌ಡಿಎ (NDA) ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಬಿಹಾರದ ನೂತನ ಮುಖ್ಯಮಂತ್ರಿಯ ಆಯ್ಕೆಯಾಗಲಿದೆ.
ಮುಂಚೂಣಿಯಲ್ಲಿ ಸಾಮ್ರಾಟ್ ಚೌಧರಿ ಹೆಸರು
ಪ್ರಸ್ತುತ ಉಪಮುಖ್ಯಮಂತ್ರಿಯಾಗಿರುವ ಸಾಮ್ರಾಟ್ ಚೌಧರಿ ಅವರು ನಿತೀಶ್ ಕುಮಾರ್ ಅವರ ಉತ್ತರಾಧಿಕಾರಿಯಾಗುವ ಸಾಧ್ಯತೆ ದಟ್ಟವಾಗಿದೆ. ಅವರು ನಾಯಕತ್ವ ಬದಲಾವಣೆ ಕುರಿತು ಬಿಜೆಪಿಯ ಕೇಂದ್ರ ನಾಯಕತ್ವದೊಂದಿಗೆ ಚರ್ಚಿಸಲು ಈಗಾಗಲೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ನಿತೀಶ್ ಕುಮಾರ್ ಅವರ ಈ ನಡೆ ಕೇವಲ ಅಧಿಕಾರ ಬದಲಾವಣೆಯಲ್ಲ, ಬದಲಿಗೆ ಅವರ ಒಂದು ದೀರ್ಘಕಾಲದ ವೈಯಕ್ತಿಕ ಬಯಕೆಯ ಈಡೇರಿಕೆ ಕೂಡ ಹೌದು. ಬಿಜೆಪಿಯಿಂದ ದಿಲೀಪ್ ಜೈಸ್ವಾಲ್, ಸಾಮ್ರಾಟ್ ಚೌಧರಿ , ಸಂಜೀವ್ ಚೌರಾಸಿಯಾ ಮತ್ತು ಕೇಂದ್ರ ಸಚಿವ ನಿತ್ಯಾನಂದ್ ರೈ ಅವರ ಹೆಸರುಗಳು ಮುಖ್ಯಮಂತ್ರಿ ಹುದ್ದೆಗೆ ಚರ್ಚೆಯಾಗುತ್ತಿವೆ.ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ.
ಬಿಹಾರ ವಿಧಾನಸಭೆಯ ಎರಡೂ ಸದನಗಳು (ವಿಧಾನಸಭೆ ಮತ್ತು ವಿಧಾನ ಪರಿಷತ್ತು) ಹಾಗೂ ಸಂಸತ್ತಿನ ಎರಡೂ ಸದನಗಳ (ಲೋಕಸಭೆ ಮತ್ತು ರಾಜ್ಯಸಭೆ) ಸದಸ್ಯರಾಗುವ ಅಪರೂಪದ ಗೌರವ ಪಡೆಯುವುದು ನನ್ನ ಬಯಕೆಯಾಗಿತ್ತು ಎಂದು ಅವರು ಈ ಹಿಂದೆ ಹೇಳಿದ್ದರು.
ಮಾರ್ಚ್ 17 ರಂದು ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಅವರು, ಮಾರ್ಚ್ 30 ರಂದು ವಿಧಾನ ಪರಿಷತ್ತು ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೂಲಕ ದೆಹಲಿಗೆ ತೆರಳುವ ಪ್ರಕ್ರಿಯೆ ಆರಂಭಿಸಿದ್ದರು.
ರಾಜಕೀಯ ಟೀಕೆ ಮತ್ತು ವಿಶ್ಲೇಷಣೆ
ನಿತೀಶ್ ಅವರ ಈ ನಿರ್ಧಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ತೇಜಸ್ವಿ ಯಾದವ್ ವಾಗ್ದಾಳಿ: ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಇದು ಬಲವಂತದ ನಿವೃತ್ತಿ ಎಂದು ಟೀಕಿಸಿದ್ದಾರೆ. ಬಿಜೆಪಿ ಸೂಚನೆಯ ಮೇರೆಗೆ ನಿತೀಶ್ ಅವರನ್ನು ರಾಜ್ಯದಿಂದ ಹೊರಗೆ ಕಳುಹಿಸಲಾಗುತ್ತಿದೆ ಮತ್ತು ಬಿಜೆಪಿಯು ಜೆಡಿ(ಯು) ಪಕ್ಷವನ್ನು ಸಂಪೂರ್ಣವಾಗಿ ಮುಗಿಸಲು ಈ ತಂತ್ರ ರೂಪಿಸಿದೆ ಎಂದು ಅವರು ಆರೋಪಿಸಿದ್ದಾರೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ನಿತೀಶ್ ಅವರು ಬಿಹಾರದಿಂದ ದೂರವಾಗುವುದು ಅವರ ಪ್ರಾದೇಶಿಕ ಪ್ರಭಾವವನ್ನು ಕುಗ್ಗಿಸಬಹುದು. ರಾಜ್ಯದ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದ ನಾಯಕ ದೆಹಲಿಗೆ ತೆರಳುವುದು ಅವರ ಪಕ್ಷದ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದಿದ್ದಾರೆ.
ಒಟ್ಟಾರೆಯಾಗಿ, ಎನ್‌ಡಿಎ ಮೈತ್ರಿಕೂಟವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದ ಕೆಲವೇ ತಿಂಗಳಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನ ತ್ಯಜಿಸುತ್ತಿರುವುದು ಬಿಹಾರದ ರಾಜಕೀಯ ಭೂಪಟದಲ್ಲಿ ದೊಡ್ಡ ಬದಲಾವಣೆಗಳಿಗೆ ನಾಂದಿ ಹಾಡಿದೆ. ಸಾಮ್ರಾಟ್ ಚೌಧರಿ ಅವರ ನೇತೃತ್ವದಲ್ಲಿ ಬಿಹಾರದಲ್ಲಿ ಹೊಸ ಪರ್ವ ಆರಂಭವಾಗಲಿದೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಬೆಂಗಳೂರು, (ಏಪ್ರಿಲ್ 09): 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ (Karnataka 2nd PUC Result 2026) ಹೊರಬಿದ್ದಿದೆ. ಆನ್‌ಲೈನ್ ನಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಬಳಿಕ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಇಂದು (ಏಪ್ರಿಲ್ 09) ಸಂಜೆ 6ಕ್ಕೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ. ಇದಕ್ಕೂ ಮೊದಲು ಆನ್ಲೈನ್ನಲ್ಲಿ https://karresults.nic.in ವೆಬ್‌ಸೈಟ್ ಮೂಲಕ ಫಲಿತಾಂಶವನ್ನು ಪರಿಶೀಲನೆ ಮಾಡಬಹುದು. ಒಂದು ವೇಳೆ ಸರ್ವರ್ ಸಮಸ್ಯೆ ಎದುರಾದರೆ ಡಿಜಿಲಾಕರ್ ಮೂಲಕವೂ ರಿಸ್ಟಲ್ ಚೆಕ್ ಮಾಡಬಹುದಾಗಿದ್ದು ಹೇಗೆ ಎನ್ನುವುದು ಈ ಕೆಳಗಿನಂತಿದೆ ನೋಡಿ.
ಪರೀಕ್ಷೆಗೆ ಎದುರಿಸಿದ ವಿದ್ಯಾರ್ಥಿಗಳ ಸಂಖ್ಯೆ
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಫೆಬ್ರವರಿ 28ರಿಂದ ಮಾರ್ಚ್ 12ರವರೆಗೆ ರಾಜ್ಯಾದ್ಯಂತ ಒಟ್ಟು 1217 ಕೇಂದ್ರಗಳಲ್ಲಿ ನಡೆದಿದ್ದು, 5174 ಕಾಲೇಜುಗಳ ಒಟ್ಟು 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೊಂದಣಿ ಮಾಡಿಕೊಂಡಿದ್ದರು. ಈ ಪೈಕಿ ಸೈನ್ಸ್ ವಿಷಯದಲ್ಲಿ 2.92 ಲಕ್ಷ, ವಾಣಿಜ್ಯ ವಿಭಾಗದಲ್ಲಿ 2.11 ಲಕ್ಷ ಹಾಗೂ ಕಲಾ ವಿಭಾಗದಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು.
ದ್ವಿತೀಯ ಪಿಯುಸಿ ಫಲಿತಾಂಶದ ಮಾಹಿತಿ ಅಧಿಕೃತ ವೆಬ್‌ಸೈಟ್ https://karresults.nic.in
ಲಿಂಕ್ ಮೂಲಕ ರಿಸಲ್ಟ್ ವೀಕ್ಷಿಸಬಹುದಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ, ‘Submit’ ಬಟನ್ ಒತ್ತಿದ ತಕ್ಷಣ ಅಂಕಪಟ್ಟಿ ಪರದೆ ಓಪನ್ ಆಗಲಿದೆ.
ಈ ಬಾರಿ ಡಿಜಿಲಾಕರ್‌ನಲ್ಲೂ ಫಲಿತಾಂಶ ಲಭ್ಯ
ಇನ್ನುಳಿದಂತೆ ಕರ್ನಾಟಕ ಒನ್ ಮೊಬೈಲ್ ಆ್ಯಪ್ ನಲ್ಲಿ ಸಿಗಲಿದೆ. ವಿದ್ಯಾರ್ಥಿಗಳ ಮೊಬೈಲ್‌ಗೆ SMS ಮೂಲಕ ಫಲಿತಾಂಶದ ಮಾಹಿತಿ ರವಾನೆಯಾಗುತ್ತದೆ. ಇನ್ನು ಈ ವರ್ಷ ಪ್ರಥಮ ಬಾರಿಗೆ ಡಿಜಿಲಾಕರ್‌ನಲ್ಲೂ https://www.digilocker.govt.in ನಲ್ಲೂ ರಿಸಲ್ಟ್ ವೀಕ್ಷಿಸಬಹುದಾಗಿದೆ.
ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯು ಡಿಜಿಲಾಕರ್ ಮೂಲಕ ಲಭ್ಯವಾಗಲಿದೆ. ಒಂದು ವೇಳೆ ವೆಬ್ಸೈಟ್ನಲ್ಲಿ ರಿಸಲ್ಟ್ ನೋಡುವಾಗ ಸರ್ವರ್ ಸಮಸ್ಯೆ ಎದುರಾದರೆ ಡಿಜಿಲಾಕರ್ ಮೂಲಕವೇ ಮಾರ್ಕ್ಸ್ ಕಾರ್ಡ್ ಪಡೆದುಕೊಳ್ಳಬಹುದು.
ಸಾಮಾನ್ಯವಾಗಿ ಫಲಿತಾಂಶ ಪ್ರಕಟವಾದ ತಕ್ಷಣ ಲಕ್ಷಾಂತರ ವಿದ್ಯಾರ್ಥಿಗಳು ಒಮ್ಮೆಗೆ ಅಧಿಕೃತ ವೆಬ್‌ಸೈಟ್‌ಗಳ ಮೇಲೆ ಮುಗಿಬೀಳುತ್ತಾರೆ. ಇದರಿಂದ ಸರ್ವರ್ ಸಮಸ್ಯೆ ಅಥವಾ ಪೇಜ್ ಲೋಡ್ ಆಗಲು ಬಹಳ ಸಮಯ ತೆಗೆದುಕೊಳ್ಳುವುದು ಮಾಮೂಲಿ. ಆದರೆ ಈ ಬಾರಿ ನೀವು ವೆಬ್‌ಸೈಟ್ ಓಪನ್ ಆಗುವವರೆಗೆ ಕಾಯಬೇಕಾದ ಅಗತ್ಯವಿಲ್ಲ. ಡಿಜಿಲಾಕರ್ ಮೂಲಕವೇ ನೇರವಾಗಿ ಅಂಕಪಟ್ಟಿ ಡೌನ್ ಲೋಡ್ ಮಾಡಿಕೊಂಡು ನಿಮ್ಮ ಫಲಿತಾಂಶ ಪಡೆಯಬಹುದು. ವೆಬ್‌ಸೈಟ್‌ಗಿಂತಲೂ ವೇಗವಾಗಿ ಮತ್ತು ಸುಲಭವಾಗಿ ನಿಮ್ಮ ಅಂಕಪಟ್ಟಿ ಪಡೆಯಲು ನಿಮ್ಮ ಮೊಬೈಲ್ ನಲ್ಲಿ ‘DigiLocker’ ಡೌನ್‌ಲೋಡ್ ಮಾಡಿ. ಅಪ್ಲಿಕೇಶನ್ ಇಲ್ಲದಿದ್ದರೆ ನೇರವಾಗಿ digilocker.gov.in ವೆಬ್‌ಸೈಟ್‌ಗೂ ಭೇಟಿ ನೀಡಬಹುದು.
ಇತ್ತೀಚೆಗಷ್ಟೆ ಕನ್ನಡದ ಮೂರು ಸಿನಿಮಾಗಳ (Cinema) ಮುಹೂರ್ತ ಒಟ್ಟಿಗೆ ನಡೆದಿದೆ. ‘ದರ್ಶನ’, ‘ಸೀತಾರಾಮ ರಾಜು’ ಮತ್ತು ‘ಕಾಡ’ ಸಿನಿಮಾದ ಮುಹೂರ್ತಗಳು ಒಟ್ಟಿಗೆ ನಡೆದಿದ್ದು, ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಮುಖ ನಟ, ನಟಿಯರು ಮುಹೂರ್ತದಲ್ಲಿ ಹಾಜರಾಗಿದ್ದರು. ಮಾಧ್ಯಮಗಳೊಟ್ಟಿಗೆ ಸಿನಿಮಾಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಪೃಥ್ವಿ ಅಂಬರ್ ನಟಿಸುತ್ತಿರುವ ‘ದರ್ಶನ’ ಸಿನಿಮಾನಲ್ಲಿ ನಟಿಸಲಿರುವ ಪೋಷಕ ನಟ ತಬಲಾ ನಾಣಿ ಮುಹೂರ್ತದ ವೇಳೆ ಮಾತನಾಡಿದ್ದು, ಅವರ ತಮಾಷೆ ಮಾತುಗಳು ಕೇಳಿ ಸಭಿಕರು ನಕ್ಕು ಹಗುರಾದರು. ವಿಡಿಯೋ ನೋಡಿ…