Headlines

ದಿ ಫೌಂಡ್ರಿ- 5,000 ರೂ ಶುಲ್ಕ, 90 ದಿನ ವಸತಿ, ಹೊಸ ಸ್ಟಾರ್ಟಪ್ ಕಟ್ಟಿ, ಹೂಡಿಕೆದಾರರ ಬೆಂಬಲವೂ ಪಡೆಯಿರಿ – Kannada News | The Foundry by Nikhil Kamath intends to help aspiring entrepreneurs to build products

ಬೆಂಗಳೂರು, ಜೂನ್ 29: ಭಾರತದ ಪ್ರಸಿದ್ಧ ಬಿಲಿಯನೇರ್ ಮತ್ತು ಝೀರೋಧಾ (Zerodha) ಸಹ-ಸಂಸ್ಥಾಪಕ ನಿಖಿಲ್ ಕಾಮತ್, ಫ್ಯೂಚರ್ ಗ್ರೂಪ್‌ನ ಕಿಶೋರ್ ಬಿಯಾನಿ ಮತ್ತು ಅಪ್‌ಗ್ರಾಡ್‌ನ ರೋನಿ ಸ್ಕ್ರೂವಾಲಾ ಮೊದಲಾದವರು ಸೇರಿ ‘ದಿ ಫೌಂಡ್ರಿ’ (The Foundery) ಎಂಬ ವಿನೂತನ ಸ್ಟಾರ್ಟ್‌ಅಪ್ ಇನಿಶಿಯೇಟಿವ್ ಅನ್ನು ಪ್ರಾರಂಭಿಸಿದ್ದಾರೆ. ಇದನ್ನು ಸಾಂಪ್ರದಾಯಿಕ ಕಾಲೇಜು ಅಥವಾ ಬಿಸಿನೆಸ್ ಸ್ಕೂಲ್ ಎನ್ನುವ ಬದಲು “ಕೋ-ಫೌಂಡರ್ ಫ್ಯಾಕ್ಟರಿ” (ಸಹ-ಸಂಸ್ಥಾಪಕರನ್ನು ಸೃಷ್ಟಿಸುವ ಕಾರ್ಖಾನೆ) ಎಂದು ಕರೆಯಲಾಗುತ್ತಿದೆ. ಈಗಾಗಲೇ ಮೊದಲ ಬ್ಯಾಚ್ ಮುಗಿದಿದೆ. ಎರಡನೇ ಬ್ಯಾಚ್ ಸದ್ಯದಲ್ಲೇ ಆರಂಭವಾಗಬಹುದು….

Read More

ಮುಸ್ಲಿಂ ಎಂಬ ಕಾರಣಕ್ಕೆ ಹಿಂದಿಯಲ್ಲಿ ನನಗೆ ಆಫರ್​​ಗಳು ಬರುತ್ತಿಲ್ಲ; ಎಆರ್ ರೆಹಮಾನ್ – Kannada News | AR Rahman: No Bollywood offers due to religion Unpacking the controversy

ಎಆರ್ ರೆಹಮಾನ್ ಅವರು ಖ್ಯಾತ ಸಂಗೀತ ಸಂಯೋಜಕ. ಅವರು ಆಸ್ಕರ್ ಕೂಡ ಗೆದ್ದಿದ್ದಾರೆ. ಅವರು ಪಡೆದ ಖ್ಯಾತಿ ತುಂಬಾನೇ ದೊಡ್ಡದು. ಈಗ ರೆಹಮಾನ್ ಅವರು ನೀಡಿದ ಹೇಳಿಕೆ ಚರ್ಚೆಗೆ ಕಾರಣ ಆಗಿದೆ. ‘ಹಿಂದಿ ಚಿತ್ರರಂಗದಲ್ಲಿ ಧರ್ಮದ ಕಾರಣಕ್ಕೆ ನನಗೆ ಆಫರ್ ಸಿಗುತ್ತಿಲ್ಲ’ ಎಂಬ ಆರೋಪವನ್ನು ಅವರು ಮಾಡಿದ್ದಾರೆ. ರೆಹಮಾನ್ ಹೇಳಿಕೆಯನ್ನು ಅನೇಕರು ಟೀಕೆ ಮಾಡಿದ್ದಾರೆ. ಅವರ ಹೇಳಿಕೆ ಸರಿ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಬಿಬಿಸಿ ಏಷ್ಯನ್ ನೆಟ್ವರ್ಕ್​​ಗೆ ನೀಡಿದ ಸಂದರ್ಶನದಲ್ಲಿ ರೆಹಮಾನ್ ಮಾತನಾಡಿದರು. ‘ಕಳೆದ ಎಂಟು…

Read More

ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರು: ಮಾರ್ಚ್ 5ರಂದು ಬೃಹತ್ ಹೋರಾಟಕ್ಕೆ ಕರೆ – Kannada News | Contractors Call for Massive Strike on March 5 Over Delayed Bill Payments

ಗುತ್ತಿಗೆದಾರರ ಸಂಘದ ಪೂರ್ವಭಾವಿ ಸಭೆImage Credit source: tv9 kannada ಮಂಡ್ಯ, ಫೆಬ್ರವರಿ 11: ರಾಜ್ಯ ಸರ್ಕಾರ ಬಿಲ್ ಬಾಕಿ ಉಳಿಸಿಕೊಂಡ ವಿಚಾರವಾಗಿ ಸರ್ಕಾರದ ವಿರುದ್ಧ ಗುತ್ತಿಗೆದಾರರು ಸಮರಕ್ಕೆ ಮುಂದಾಗಿದ್ದಾರೆ. ಸಾವಿರಾರು ಕೋಟಿ ರೂ ಬಾಕಿ ಬಿಲ್ ಬಿಡುಗಡೆ (Pending Bills) ಮಾಡದ ಹಿನ್ನೆಲೆ ರಾಜ್ಯ ಕಾಂಗ್ರೆಸ್​​ ಸರ್ಕಾರದ ವಿರುದ್ಧ ತಿರುಗಿಬಿದ್ದ ಗುತ್ತಿಗೆದಾರರು, ಮಾರ್ಚ್ 5ರಂದು ಬೃಹತ್ ಹೋರಾಟಕ್ಕೆ ಕರೆ (Contractors Protest) ನೀಡಿದ್ದಾರೆ. ಮಂಡ್ಯದ ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಲ್ಲಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್…

Read More

Video: ಎಷ್ಟು ಚಂದ ಈ ಬಾಂಧವ್ಯ; ಮಗಳ ಕಾಳಜಿಯುತ ಮಾತು ಕೇಳಿ ತಂದೆ ಭಾವುಕ – Kannada News | The father became emotional upon hearing his daughter’s caring words.

ತಂದೆ ಮಗಳ ಸಂಬಂಧವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅಪ್ಪನಿಗೆ (father) ಮಗಳು ಪ್ರಪಂಚವಾದರೆ, ಮಗಳಿಗೆ ಅಪ್ಪನೇ ಫಸ್ಟ್ ಹೀರೋ ಆಗಿರುತ್ತಾನೆ. ಇದೀಗ ಮಗಳ ಕಾಳಜಿಯುತ ಮಾತು ವೈರಲ್ ಆಗಿದೆ. ಆಟೋ ಡ್ರೈವರ್ ಆಗಿರುವ ಅಪ್ಪನಿಗೆ ಹುಷಾರಾಗಿ ವಾಹನ ಓಡಿಸು, ಮನೆಯಲ್ಲಿ ನಾನು ನನ್ನ ಅಮ್ಮ ಕಾಯುತ್ತಿರುತ್ತೇವೆ ಎನ್ನುತ್ತಿದ್ದಂತೆ ತಂದೆಯ ಕಣ್ಣು ಒದ್ದೆಯಾಗಿದೆ. ಈ ಹೃದಯ ಸ್ಪರ್ಶಿ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ. ರಜಿತಾ (rajitha494) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಗಳ…

Read More

ಸಲ್ಲು ತಂದೆ ಆರೋಗ್ಯ ಸ್ಥಿತಿ ಗಂಭೀರ? ಮೆದುಳು ಭಾಗದಲ್ಲಿ ಸರ್ಜರಿ – Kannada News | Salim Khan Hospitalized: Salman Khan’s Father in ICU with Brain Hemorrhage

ನಟ ಸಲ್ಮಾನ್ ಖಾನ್ ಅವರ ತಂದೆ ಮತ್ತು ಹಿರಿಯ ಕಥೆ ಬರಹಗಾರ ಸಲೀಂ ಖಾನ್ (Salim Khan) ಅವರನ್ನು ಮಂಗಳವಾರ (ಫೆಬ್ರವರಿ 17)ಅನಾರೋಗ್ಯದ ಕಾರಣ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ಬೆಳಿಗ್ಗೆ ಅವರ ಸ್ಥಿತಿ ಹದಗೆಟ್ಟ ನಂತರ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಅವರಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಆರಂಭಿಸಲಾಯಿತು. 90 ವರ್ಷದ ಸಲೀಂ ಖಾನ್ ಅವರ ರಕ್ತದೊತ್ತಡ ಹಠಾತ್ತನೆ ಹೆಚ್ಚಾಯಿತು. ಇದರಿಂದಾಗಿ ಅವರ ಮೆದುಳಿನ ಬಲಭಾಗದಲ್ಲಿ ಆಂತರಿಕ ರಕ್ತಸ್ರಾವವಾಗಿದೆ. ಇದರಿಂದಾಗಿ…

Read More

ಚಳಿಗಾಲದಲ್ಲಿ ರಕ್ತದೊಡ್ಡ ಅಪಾಯ ಹೆಚ್ಚು; ಇಲ್ಲಿದೆ ಉಪಯುಕ್ತವಾಗಬಲ್ಲ ಕೆಲ ಯೋಗಾಸನಗಳು

ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ (ಬಿಪಿ) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಚಳಿಗಾಲದಲ್ಲಿ ಈ ಸಮಸ್ಯೆ ವಿಶೇಷವಾಗಿ ಗಂಭೀರವಾಗುತ್ತದೆ. ಶೀತವು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ಇದು ರಕ್ತದೊತ್ತಡ ಹೆಚ್ಚಿಸುತ್ತದೆ. ಹೈಬ್ಲಡ್ ಪ್ರೆಷರ್ ಸ್ಥಿತಿಯನ್ನು ದೀರ್ಘಕಾಲದವರೆಗೆ ನಿಯಂತ್ರಿಸದಿದ್ದರೆ, ಅದು ಹೃದಯ, ಮೂತ್ರಪಿಂಡಗಳು ಮತ್ತು ಮೆದುಳಿಗೆ ಹಾನಿಯನ್ನುಂಟುಮಾಡುತ್ತದೆ. ವೃದ್ಧರು, ಬೊಜ್ಜು ಹೊಂದಿರುವವರು ಮತ್ತು ಈಗಾಗಲೇ ಬಿಪಿ ಸಮಸ್ಯೆ ಹೊಂದಿರುವವರಿಗೆ ಈ ಚಳಿಗಾಲ ಹೆಚ್ಚಿನ ಅಪಾಯಕಾರಿಯಾಗಬಹುದು. ಆದ್ದರಿಂದ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವುದು ಬಹಳ ಮುಖ್ಯ. ಯೋಗ ಆಸನಗಳು ದೇಹವನ್ನು ಸಕ್ರಿಯವಾಗಿಡುವುದಲ್ಲದೆ, ಒತ್ತಡವನ್ನು ಕಡಿಮೆ ಮಾಡಲು…

Read More

‘ವಾರಣಾಸಿ’ ಸಿನಿಮಾ ಅಬ್ಬರ; 3,500 ಜೂನಿಯರ್ ಆರ್ಟಿಸ್ಟ್‌ಗಳ ಜತೆ ಮಹೇಶ್ ಬಾಬು ಮಹಾಯುದ್ಧ – Kannada News | SS Rajamouli to shoot Varanasi movie massive war sequence ft Mahesh Babu and 3500 junior artists

ಪ್ರಖ್ಯಾತ ನಿರ್ದೇಶಕ ಎಸ್‌ಎಸ್‌ ರಾಜಮೌಳಿ (SS Rajamouli) ಸಾರಥ್ಯದಲ್ಲಿ ಮೂಡಿಬರುತ್ತಿರುವ, ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು (Mahesh Babu) ನಟನೆಯ ಬಹುನಿರೀಕ್ಷಿತ ಚಿತ್ರ ‘ವಾರಣಾಸಿ’ (Varanasi) ಚಿತ್ರೀಕರಣದ ಬಗ್ಗೆ ರೋಮಾಂಚನಕಾರಿ ಅಪ್‌ಡೇಟ್ ಒಂದು ಹೊರಬಿದ್ದಿದೆ. ಜುಲೈ 7ರಿಂದ ಹೈದರಾಬಾದ್‌ನಲ್ಲಿ ಚಿತ್ರದ ಬೃಹತ್ ಶೂಟಿಂಗ್ ಶೆಡ್ಯೂಲ್ ಆರಂಭವಾಗಲಿದ್ದು, ಭಾರತೀಯ ಚಿತ್ರರಂಗದಲ್ಲೇ ಹಿಂದೆಂದೂ ಕಾಣದ ಭೀಕರ ಯುದ್ಧದ ದೃಶ್ಯವೊಂದನ್ನು ಸೆರೆಹಿಡಿಯಲು ರಾಜಮೌಳಿ ಸಜ್ಜಾಗಿದ್ದಾರೆ. ‘ಮಿಡ್-ಡೇ’ ವರದಿಯ ಪ್ರಕಾರ, ಈ ಯುದ್ಧದ ದೃಶ್ಯವು ರಾಜಮೌಳಿ ಅವರ ಈ ಹಿಂದಿನ ‘ಬಾಹುಬಲಿ’ ಅಥವಾ…

Read More

ಬೆಂಗಳೂರಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಅಡ್ವಾನ್ಸ್ ಬುಕಿಂಗ್ ಪ್ರಾರಂಭ: ಟಿಕೆಟ್ ಬೆಲೆ ಎಷ್ಟು?

ಪವನ್ ಕಲ್ಯಾಣ್ (Pawan Kalyan) ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಬಿಡುಗಡೆ ಮಾರ್ಚ್ 19ರಂದು ಆಗಲಿದೆ. ಸಾಮಾನ್ಯವಾಗಿ ಸಿನಿಮಾ ಬಿಡುಗಡೆಯ ಹಿಂದಿನ ದಿನ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಮಾರ್ಚ್ 18ರಂದು ‘ಧುರಂಧರ್ 2’ ಪೇಯ್ಡ್ ಪ್ರೀಮಿಯರ್ ಶೋ ಆಯೋಜನೆ ಮಾಡಿರುವ ಕಾರಣ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಸ್ಪೆಷನ್ ಶೋಗಳನ್ನು ಮಾತ್ರವೇ ಪ್ರದರ್ಶಿಸುತ್ತಿದೆ. ಬಿಡುಗಡೆಯ ದಿನ ಅಂದರೆ ಮಾರ್ಚ್ 19ರಂದು ಬೆಳಿಗಿನ ಜಾವ ಸಿನಿಮಾದ ಸ್ಪೆಷಲ್ ಶೋಗಳನ್ನು ಆಯೋಜಿಸಲಾಗಿದ್ದು, ಬೆಂಗಳೂರಿನಲ್ಲಿ ಸಹ ಅಡ್ವಾನ್ಸ್…

Read More

RCB vs KKR ಪಂದ್ಯಕ್ಕೆ 5 ಆಟಗಾರರು ಅಲಭ್ಯ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 57ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಮುಖಾಮುಖಿಯಾಗಲಿದೆ. ರಾಯ್​ಪುರದ ಶಾಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಐವರು ಆಟಗಾರರು ಅಲಭ್ಯರಾಗಲಿದ್ದಾರೆ. ಅವರೆಂದರೆ… (PC: IPL) ಹರ್ಷಿತ್ ರಾಣಾ: ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ವೇಗಿ ಹರ್ಷಿತ್ ರಾಣಾ ಮೊಣಕಾಲು ಗಾಯದ ಕಾರಣ ಇಡೀ ಟೂರ್ನಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ…

Read More

ರಿಷಿಕೇಷದ ಗಂಗಾ ತಟದಲ್ಲಿ ವಿವಾಹ ಆದ ‘ಮನದ ಕಡಲು’ ಹೀರೋ; ಇಲ್ಲಿವೆ ಸುಂದರ ಫೋಟೋಗಳು

ಕನ್ನಡದ ಯುವ ನಟ ಸುಮುಖ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆರ್ಕಿಟೆಕ್ಟ್ ಮೈತ್ರಿ ಉಕಾ ಎಂಬುವವರ ಜೊತೆ ಸುಮುಖ್ ವಿವಾಹ ನಡೆದಿದೆ ಎಂಬುದು ವಿಶೇಷ. ಸೆಲೆಬ್ರಿಟಿಗಳು, ಉದ್ಯಮಿಗಳು ಸಾಮಾನ್ಯವಾಗಿ ಡೆಸ್ಟಿನೇಷನ್ ವಿವಾಹ ಆಗೋಕೆ ಇಷ್ಟಪಡುತ್ತಾರೆ. ಇದಕ್ಕೆ ಸುಮುಖ್ ಕೂಡ ಹೊರತಾಗಿಲ್ಲ. ಅವರು ತಮ್ಮ ಕನಸಿನಂತೆ ಮದುವೆ ಆಗಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿ ವಿವಾಹ ಎಂದಾಗ ನೆನಪಾಗೋದು ರಾಜಸ್ಥಾನ. ಉದಯಪುರದಲ್ಲಿ ಸೆಲೆಬ್ರಿಟಿಗಳು ಮದುವೆ ಆಗುತ್ತಾರೆ. ಆದರೆ, ಇವರು ಮದುವೆ ಆಗಿದ್ದು ರಿಷಿಕೇಷದಲ್ಲಿ ಎಂಬುದು ವಿಶೇಷ. ರಿಷಿಕೇಷದಲ್ಲಿ ಗಂಗಾ ನದಿ ಹರಿದು…

Read More