ದುಲೀಪ್ ಟ್ರೋಫಿಗೆ ಪಶ್ಚಿಮ ವಲಯ ತಂಡ ಪ್ರಕಟ – Kannada News | Ruturaj Gaikwad to lead West Zone in Duleep Trophy

ದೇಶೀಯ ಟೆಸ್ಟ್ ಟೂರ್ನಿ ದುಲೀಪ್ ಟ್ರೋಫಿಗಾಗಿ ವೆಸ್ಟ್ ಝೋನ್ (ಪಶ್ಚಿಮ ವಲಯ) ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡವನ್ನು ರುತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದು, ಉಪನಾಯಕನಾಗಿ ಮುಂಬೈನ ಎಡಗೈ ಸ್ಪಿನ್ ಆಲ್-ರೌಂಡರ್ ಶಮ್ಸ್ ಮುಲಾನಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ತಂಡದಲ್ಲಿ ಸರ್ಫರಾಝ್, ಪೃಥ್ವಿ ಶಾ, ಶಾರ್ದೂಲ್ ಠಾಕೂರ್ ಸೇರಿದಂತೆ ಸ್ಟಾರ್ ಆಟಗಾರರ ದಂಡೇ ಕಾಣಿಸಿಕೊಂಡಿದೆ.

ಪೃಥ್ವಿ ಶಾ ಕಂಬ್ಯಾಕ್, ಆಯುಷ್ ಔಟ್:

ಕಳೆದ ಸೀಸನ್‌ನಲ್ಲಿ ತಂಡದಿಂದ ಹೊರಗುಳಿದಿದ್ದ ಮುಂಬೈನ ಡ್ಯಾಶಿಂಗ್ ಓಪನರ್ ಪೃಥ್ವಿ ಶಾ, ರಣಜಿ ಟ್ರೋಫಿಯಲ್ಲಿ 537 ರನ್ ಗಳಿಸಿದ ಬಲದೊಂದಿಗೆ ವೆಸ್ಟ್ ಝೋನ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಆದರೆ, ಇತ್ತೀಚೆಗೆ ಭರ್ಜರಿ ಫಾರ್ಮ್‌ನಲ್ಲಿದ್ದ 19 ವರ್ಷದ ಯುವ ಪ್ರತಿಭೆ ಆಯುಷ್ ಮ್ಹಾತ್ರೆ ಅವರು ಮಣಿಕಟ್ಟಿನ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ.

ಗಾಯಕ್ವಾಡ್ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ?

ಮೂಲಗಳ ಪ್ರಕಾರ, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗುವ ದೀರ್ಘಕಾಲೀನ ಗುರಿ ಹೊಂದಿರುವ ನಾಯಕ ರುತುರಾಜ್ ಗಾಯಕ್ವಾಡ್, ಈ ಬಾರಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಬದಲು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಭಾರತ ಟೆಸ್ಟ್ ತಂಡಕ್ಕೆ ಮಿಡಲ್ ಆರ್ಡರ್ ಬ್ಯಾಟರ್ ಆಗಿ ಆಯ್ಕೆಯಾಗಲು ಪ್ಲ್ಯಾನ್ ರೂಪಿಸಿದ್ದಾರೆ.

ಬೆಂಗಳೂರಿನಲ್ಲಿ ಪಂದ್ಯಗಳು:

ಈ ಬಾರಿಯ ದುಲೀಪ್ ಟ್ರೋಫಿ ಟೂರ್ನಿಯು ಆಗಸ್ಟ್ 23 ರಿಂದ ಸೆಪ್ಟೆಂಬರ್ 10 ರವರೆಗೆ ಬೆಂಗಳೂರಿನ ಆಲೂರು ಹತ್ತಿರವಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಕ್ರೀಡಾಂಗಣದಲ್ಲಿ ನಡೆಯಲಿದೆ. ಆಗಸ್ಟ್ 23 ರಿಂದ 26 ರವರೆಗೆ ನಡೆಯಲಿರುವ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಝೋನ್ ತಂಡವು ನಾರ್ತ್ ಝೋನ್ (ಉತ್ತರ ವಲಯ) ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ: ನೋ ಬಾಲ್ ಎಸೆದರೆ ಬೌಲರ್ ಬೌಲ್ಡ್​: 10 ಹೊಸ ನಿಯಮ ಪರಿಚಯಿಸಿದ ಬಿಸಿಸಿಐ

ಪಶ್ಚಿಮ ವಲಯ ತಂಡ : ರುತುರಾಜ್ ಗಾಯಕ್‌ವಾಡ್ (ನಾಯಕ), ಶಮ್ಸ್ ಮುಲಾನಿ (ಉಪನಾಯಕ), ಶಾರ್ದೂಲ್ ಠಾಕೂರ್, ಸರ್ಫರಾಝ್ ಖಾನ್, ಮುಶೀರ್ ಖಾನ್, ತುಷಾರ್ ದೇಶಪಾಂಡೆ, ತನುಷ್ ಕೋಟ್ಯಾನ್, ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್, ಜಯಮೀತ್ ಪಟೇಲ್, ಉರ್ವಿಲ್ ಪಟೇಲ್, ಸಿದ್ಧಾರ್ಥ್ ದೇಸಾಯಿ, ಅತಿತ್ ಶೇಠ್, ಪೃಥ್ವಿ ಶಾ, ಶಿವಾಲಿಕ್ ಶರ್ಮಾ, ಮುಖೇಶ್ ಚೌಧರಿ.

Source link

Kalasha Sthapana: ಯಾವುದೇ ಶುಭ ಕಾರ್ಯಗಳಲ್ಲಿ ಕಲಶ ಸ್ಥಾಪನೆ ಯಾಕೆ ಮುಖ್ಯ ಗೊತ್ತಾ? ಆಧ್ಯಾತ್ಮಿಕ ಮಹತ್ವ ಇಲ್ಲಿದೆ – Kannada News | Kalasha Sthapana: Significance and Rituals in Sanatana Dharma for Auspicious Events

ಸನಾತನ ಧರ್ಮದಲ್ಲಿ ಯಾವುದೇ ಪೂಜೆ, ಗೃಹಪ್ರವೇಶ, ಮದುವೆ, ಸತ್ಯನಾರಾಯಣ ವ್ರತ ಅಥವಾ ನವರಾತ್ರಿಯಂತಹ ಶುಭ ಕಾರ್ಯಕ್ರಮಗಳನ್ನು ಕೈಗೊಳ್ಳುವಾಗ ಕಲಶ ಸ್ಥಾಪನೆ ಮಾಡುವುದು ಅತ್ಯಂತ ಮುಖ್ಯವಾದ ಪದ್ಧತಿಯಾಗಿದೆ. ಕಲಶವಿಲ್ಲದೆ ಯಾವುದೇ ದೈವಿಕ ಕಾರ್ಯಗಳು ಪೂರ್ಣಗೊಳ್ಳುವುದಿಲ್ಲ ಎಂಬ ನಂಬಿಕೆಯಿದೆ. ಕಲಶವನ್ನು ಶುದ್ಧತೆ, ಮಂಗಳಕರತೆ, ಸಮೃದ್ಧಿ, ಸೃಷ್ಟಿ ಮತ್ತು ದೈವಿಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕಾಗಿ ಯಾವುದೇ ಪೂಜಾ ಸಮಾರಂಭಗಳಲ್ಲಿ ಪ್ರಥಮ ಆದ್ಯತೆಯನ್ನು ಕಲಶಕ್ಕೆ ನೀಡಲಾಗುತ್ತದೆ.

ಹಿಂದೂ ಧರ್ಮದ ಪುರಾಣಗಳಲ್ಲಿ ಕಲಶಗಳ ಮಹತ್ವ:

ಹಿಂದೂ ಧರ್ಮದ ಪುರಾಣಗಳ ಪ್ರಕಾರ, ಕಲಶವನ್ನು ತ್ರಿಮೂರ್ತಿಗಳ ಸಾಕಾರ ರೂಪ ಹಾಗೂ ಅವರ ವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ. ಕಲಶದ ಮುಂಭಾಗ ಅಥವಾ ಮುಖದ ಭಾಗದಲ್ಲಿ ಶ್ರೀಮನ್ನಾರಾಯಣ (ವಿಷ್ಣು), ಮಧ್ಯ ಭಾಗದಲ್ಲಿ ಪರಮಶಿವ ಹಾಗೂ ಕೆಳಭಾಗದಲ್ಲಿ ಬ್ರಹ್ಮದೇವ ನೆಲೆಸಿದ್ದಾರೆ ಎಂಬ ಭಾವನೆಯಿದೆ. ಹೀಗಾಗಿ, ಕಲಶವು ಸೃಷ್ಟಿ, ಸ್ಥಿತಿ ಮತ್ತು ಲಯಗಳ ಸಾರ್ವತ್ರಿಕ ಚಕ್ರವನ್ನು ಪ್ರತಿನಿಧಿಸುತ್ತದೆ. ಅಲ್ಲದೆ, ಕಲಶದಲ್ಲಿ ತುಂಬುವ ನೀರನ್ನು ಗಂಗಾ, ಯಮುನಾ, ಗೋದಾವರಿ, ಕೃಷ್ಣ ಹಾಗೂ ಕಾವೇರಿಯಂತಹ ಪವಿತ್ರ ನದಿಗಳ ಸಾಕಾರ ರೂಪವೆಂದು ಭಾವಿಸಿ ಪೂಜಿಸಲಾಗುತ್ತದೆ.

ಶಾಸ್ತ್ರಗಳು ಹೇಳುವುದೇನು ಗೊತ್ತಾ?

ಶಾಸ್ತ್ರಗಳ ಪ್ರಕಾರ, ಪೂಜಾ ಸ್ಥಳದಲ್ಲಿ ಕಲಶವನ್ನು ಸ್ಥಾಪಿಸುವುದರಿಂದ ಆ ಪರಿಸರವು ಸಂಪೂರ್ಣವಾಗಿ ಶುದ್ಧಗೊಂಡು ಧನಾತ್ಮಕ ಶಕ್ತಿಯು ಹರಡುತ್ತದೆ. ಕಲಶ ಪ್ರತಿಷ್ಠಾಪನೆಯ ನಂತರವೇ ಆಯಾ ದೇವತೆಗಳನ್ನು ಆಹ್ವಾನಿಸಿ ಮೂಲ ಪೂಜೆಯನ್ನು ಪ್ರಾರಂಭಿಸುವುದು ಸಂಪ್ರದಾಯ. ಈ ಪದ್ಧತಿಯು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ಹೊರಹಾಕಿ, ದೈವಿಕ ಕೃಪೆಯನ್ನು ಆಕರ್ಷಿಸುತ್ತದೆ. ಆದ್ದರಿಂದ ಗೃಹಪ್ರವೇಶ, ಯಜ್ಞ-ಹೋಮಗಳು ಮತ್ತು ವ್ರತಗಳಂತಹ ಪ್ರತಿಯೊಂದು ಶುಭ ಕಾರ್ಯದಲ್ಲೂ ಕಲಶ ಸ್ಥಾಪನೆಯೇ ಮೊದಲ ಹೆಜ್ಜೆಯಾಗಿದೆ.

ಕಲಶವು ಕೇವಲ ಒಂದು ಪಾತ್ರೆಯಲ್ಲ, ಬದಲಿಗೆ ಅದರಲ್ಲಿ ಬಳಸುವ ಪ್ರತಿಯೊಂದು ವಸ್ತುವಿಗೂ ವಿಶೇಷ ಆಧ್ಯಾತ್ಮಿಕ ಅರ್ಥವಿದೆ. ಕಲಶದ ದುಂಡಗಿನ ಆಕಾರವು ಬ್ರಹ್ಮಾಂಡ, ಭೂಮಿ ಮತ್ತು ಪರಿಪೂರ್ಣತೆಯನ್ನು ಸಂಕೇತಿಸುತ್ತದೆ. ಅದರಲ್ಲಿರುವ ನೀರು ಜೀವ, ಸೃಷ್ಟಿ ಮತ್ತು ಶುದ್ಧತೆಯನ್ನು ಪ್ರತಿನಿಧಿಸಿದರೆ, ಮಾವಿನ ಎಲೆಗಳು ಪ್ರಗತಿ, ನೈಸರ್ಗಿಕ ಆರೋಗ್ಯ ಮತ್ತು ಫಲವತ್ತತೆಯ ಸಂಕೇತವಾಗಿವೆ. ಕೊನೆಯಲ್ಲಿ ಇಡುವ ತೆಂಗಿನಕಾಯಿಯನ್ನು ಸಂಪತ್ತಿನ ಅಧಿದೇವತೆಯಾದ ಮಹಾಲಕ್ಷ್ಮಿಯ ಕೃಪೆ ಮತ್ತು ಯಶಸ್ಸಿನ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಕಲಶ ಪ್ರತಿಷ್ಠಾಪಿಸುವ ಪ್ರಮುಖ ವಿಧಿವಿಧಾನ:

ಕಲಶವನ್ನು ಪ್ರತಿಷ್ಠಾಪಿಸುವಾಗ ಕೆಲವು ಪ್ರಮುಖ ವಿಧಿವಿಧಾನಗಳನ್ನು ಪಾಲಿಸಬೇಕಾಗುತ್ತದೆ. ಮೊದಲಿಗೆ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ ಪವಿತ್ರಗೊಳಿಸಬೇಕು. ನಂತರ ಕಲಶದ ಪಾತ್ರೆಗೆ ಶುದ್ಧ ನೀರನ್ನು ತುಂಬಿ, ಸಾಧ್ಯವಿದ್ದಲ್ಲಿ ಗಂಗಾಜಲವನ್ನು ಸೇರಿಸಬೇಕು. ಅದರ ಮೇಲೆ ಐದು ಅಥವಾ ಅದಕ್ಕಿಂತ ಹೆಚ್ಚು ಮಾವಿನ ಎಲೆಗಳನ್ನು ಜೋಡಿಸಿ, ಶುದ್ಧವಾದ ತೆಂಗಿನಕಾಯಿಯನ್ನು ಇಡಬೇಕು. ತದನಂತರ ಸೂಕ್ತ ಮಂತ್ರಗಳ ಪಠಣೆಯೊಂದಿಗೆ ದೇವತೆಗಳನ್ನು ಆವಾಹನೆ ಮಾಡಿ ಪೂಜೆಯನ್ನು ನೆರವೇರಿಸಬೇಕು.

ಧಾರ್ಮಿಕ ನಂಬಿಕೆಗಳ ಪ್ರಕಾರ, ಕಲಶವನ್ನು ಶಾಸ್ತ್ರೋಕ್ತವಾಗಿ ಸ್ಥಾಪಿಸುವುದರಿಂದ ಮನೆಗೆ ಶಾಂತಿ, ಸಂತೋಷ ಮತ್ತು ಕಾರ್ಯಸಿದ್ದಿ ಲಭಿಸುತ್ತದೆ. ಕುಟುಂಬ ಸದಸ್ಯರಲ್ಲಿ ಪ್ರೀತಿ ಹಾಗೂ ಐಕ್ಯತೆ ಹೆಚ್ಚಾಗುತ್ತದೆ ಮತ್ತು ಕಾರ್ಯಗಳಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಒಟ್ಟಾರೆಯಾಗಿ, ಕಲಶ ಸ್ಥಾಪನೆಯೊಂದಿಗೆ ಪ್ರಾರಂಭವಾಗುವ ಪ್ರತಿಯೊಂದು ಶುಭ ಕಾರ್ಯವೂ ಯಶಸ್ವಿಯಾಗಿ ಪೂರ್ಣಗೊಂಡು ದೈವಿಕ ಆಶೀರ್ವಾದ ದೊರೆಯುತ್ತದೆ ಎಂಬುದು ಯುಗಯುಗಗಳಿಂದ ಮುಂದುವರಿದುಕೊಂಡು ಬಂದಿರುವ ಪವಿತ್ರ ನಂಬಿಕೆಯಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀಟ್ ಪರೀಕ್ಷಾ ಅಕ್ರಮದ ತೀವ್ರ ಪ್ರತಿಭಟನೆ ನಡುವೆ ವೈರಲ್ ಆಯ್ತು ಅರವಿಂದ್ ಅವರ ಎರಡು ವರ್ಷಗಳ ಹಳೆಯ ಭವಿಷ್ಯವಾಣಿ – Kannada News | NEET Protests: Aravind’s Viral Prediction for Modi 3.0 Scams Comes True

ನವದೆಹಲಿ, ಜುಲೈ 22: ದೇಶಾದ್ಯಂತ ಈಗ ನೀಟ್ ಪರೀಕ್ಷೆ(NEET Exam) ಸೋರಿಕೆ, ವಿದ್ಯಾರ್ಥಿಗಳ ಆಕ್ರೋಶ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಬರೋಬ್ಬರಿ ಎರಡು ವರ್ಷಗಳ ಹಿಂದೆ ಮಾಡಲಾಗಿದ್ದ ಪೋಸ್ಟ್​ ಈಗ ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

2024ರ ಜೂನ್ 8ರಂದು, ಅಂದರೆ ನರೇಂದ್ರ ಮೋದಿ ಅವರ 3.0 ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಅರವಿಂದ್ ಎಂಬ ಎಕ್ಸ್​ ಬಳಕೆದಾರರು ಮೋದಿ ಆಡಳಿತಾವಧಿಯಲ್ಲಿ ದೇಶಾದ್ಯಂತ ನಡೆಯಬಹುದಾದ ಸರಣಿ ಪ್ರತಿಭಟನೆಗಳ ಬಗ್ಗೆ ಮುನ್ಸೂಚನೆ ನೀಡಿ ಪೋಸ್ಟ್​ ಒಂದನ್ನು ಮಾಡಿದ್ದರು.

ಅರವಿಂದ್ ಮಾಡಿದ್ದ ಎರಡು ವರ್ಷಗಳ ಹಳೆಯ ಪೋಸ್ಟ್​ನಲ್ಲೇನಿತ್ತು?

ಮೋದಿ 3.0 ಸರ್ಕಾರದ ಅವಧಿಯಲ್ಲಿ ನಡೆಯಲಿವೆ ಸಾಲು ಸಾಲು ಪ್ರತಿಭಟನೆಗಳು

ನೀಟ್ (NEET) ಪರೀಕ್ಷೆಗೆ ಸಂಬಂಧಿಸಿದ ಪ್ರತಿಭಟನೆಗಳು

ಐಎಂಎ (IMA) ವೈದ್ಯರ ಪ್ರತಿಭಟನೆಗಳು

ರೈತರ ಭಾರಿ ಆಂದೋಲನ

ಮುಸ್ಲಿಂ ಸಮುದಾಯದ ನೇತೃತ್ವದ ಪ್ರತಿಭಟನೆಗಳು

ವಿದೇಶಗಳಲ್ಲಿ ಖಾಲಿಸ್ತಾನಿ ಬೆಂಬಲಿಗರ ಪ್ರತಿಭಟನೆಗಳು

ಮತ್ತಷ್ಟು ಓದಿ:

ಸೋನಮ್ ವಾಂಗ್ಚುಕ್ 3 ವಾರಗಳ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಷರತ್ತು ವಿಧಿಸಿದ ಪತ್ನಿ

ಪೋಸ್ಟ್ ವೈರಲ್ ಆಗಲು ಪ್ರಸ್ತುತ ಕಾರಣವೇನು?

ಮೇ 3 ರಂದು ನಡೆದಿದ್ದ 2026 ರ ನೀಟ್ (NEET-UG) ಪರೀಕ್ಷೆಗೆ ಸುಮಾರು 22.7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಆದರೆ, ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅದಕ್ಕೆ ಹುಸಿ ಪ್ರಶ್ನೆಪತ್ರಿಕೆಗಳ ದಂಧೆ ಸಾಕ್ಷಿಯಾದ ಹಿನ್ನೆಲೆಯಲ್ಲಿ ಇಡೀ ಪರೀಕ್ಷೆಯನ್ನು ರದ್ದುಗೊಳಿಸಲಾಯಿತು. ಪ್ರಸ್ತುತ ಸಿಬಿಐ ತನಿಖೆ ನಡೆಯುತ್ತಿದ್ದು, ವಿದ್ಯಾರ್ಥಿಗಳು ಮತ್ತು ಯುವಜನರು ಬೀದಿಗಿಳಿದು ನಡೆಸುತ್ತಿರುವ ಪ್ರತಿಭಟನೆಗಳು ಪೋಲಿಸ್ ಘರ್ಷಣೆಗೂ ಕಾರಣವಾಗಿವೆ.

ಪೋಸ್ಟ್​

ಅರವಿಂದ್ ಅವರು 2024 ರಲ್ಲೇ ಉಲ್ಲೇಖಿಸಿದಂತೆ ನೀಟ್ ವಿವಾದ, ರೈತರ ಭಾರಿ ‘ದೆಹಲಿ ಚಲೋ’ ಆಂದೋಲನ ಹಾಗೂ ವೈದ್ಯರ ಪ್ರತಿಭಟನೆಗಳು ಒಂದೊಂದಾಗಿ ನಿಜವಾಗುತ್ತಿರುವುದನ್ನು ಕಂಡು ಅನೇಕ ನೆಟ್ಟಿಗರು ಇವರ ಮುನ್ಸೂಚನೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರ ಇಬ್ಬಗೆಯ ಪ್ರತಿಕ್ರಿಯೆ

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ: ಪ್ರಸ್ತುತ ದೇಶದಲ್ಲಿ ಯುವಜನರ ಆಕ್ರೋಶ, ಪರೀಕ್ಷಾ ಪಾರದರ್ಶಕತೆ ಕೊರತೆ ಮತ್ತು ವೈದ್ಯರ ಮೇಲಿನ ಹಿಂಸಾಚಾರದ ವಿರುದ್ಧ ಧ್ವನಿ ಎತ್ತುತ್ತಿರುವ ಜನರು, ಈ ಭವಿಷ್ಯವಾಣಿಯು ರಾಜಕೀಯ ಹಾಗೂ ಸಾಂಸ್ಥಿಕ ವೈಫಲ್ಯಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದೆ ಎಂದು ಶ್ಲಾಘಿಸುತ್ತಿದ್ದಾರೆ.

ವಿಮರ್ಶಕರ ವಾದ: ಮತ್ತೊಂದೆಡೆ, ಈ ಭವಿಷ್ಯವಾಣಿಯನ್ನು ಸಾಮಾನ್ಯ ಪ್ರವೃತ್ತಿ ಎಂದಿರುವ ವಿಮರ್ಶಕರು, 2024 ರ ಕಾಲಘಟ್ಟದಲ್ಲೂ ನೀಟ್ ಅಕ್ರಮಗಳು, ರೈತರ ಸಮಸ್ಯೆಗಳು ಹಾಗೂ ವೈದ್ಯರ ಪ್ರತಿಭಟನೆಗಳು ಸಾಮಾನ್ಯವಾಗಿದ್ದವು. ಹೀಗಾಗಿ ಇದು ಯಾವುದೇ ದೈವಿಕ ಭವಿಷ್ಯವಲ್ಲ, ಬದಲಿಗೆ ಸನ್ನಿವೇಶದ ಸಹಜ ಊಹೆ ಅಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪೂರನ್-ಕರನ್ ಸಿಡಿಲಬ್ಬರ: MI ಲಂಡನ್ ಶುಭಾರಂಭ – Kannada News | MI London vs Sunrisers Leeds, 1st Match Highlights

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್ ಕ್ರಿಕೆಟ್ ಟೂರ್ನಿ ಶುರುವಾಗಿದೆ. ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಎಂಐ ಲಂಡನ್ ತಂಡವು ಭರ್ಜರಿ ಜಯದೊಂದಿಗೆ ಶುಭಾರಂಭ ಮಾಡಿದೆ. ಸನ್​ರೈಸರ್ಸ್ ಲೀಡ್ಸ್​ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ ಲಂಡನ್ ತಂಡದ ನಾಯಕ ಸ್ಯಾಮ್ ಕರನ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಲೀಡ್ಸ್ ತಂಡಕ್ಕೆ ಆರಂಭಿಕ ದಾಂಡಿಗ ಮಿಚೆಲ್ ಮಾರ್ಷ್ (41 ರನ್, 27 ಎಸೆತ) ಉತ್ತಮ ಆರಂಭ ಒದಗಿಸಿದ್ದರು. ಇನ್ನು ರಯಾನ್ ರಿಕೆಲ್ಟನ್ 25 ರನ್​ಗಳ ಕೊಡುಗೆ ನೀಡಿದರು. ಆದರೆ ಬಳಿಕ ಬಂದ ಸನ್​ರೈಸರ್ಸ್ ಲೀಡ್ಸ್ ತಂಡದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಲೀಡ್ಸ್ ತಂಡವು 99 ಎಸೆತಗಳಲ್ಲಿ 143 ರನ್​ಗಳಿಸಿ ಆಲೌಟ್ ಆಯಿತು.

ಎಂಐ ಲಂಡನ್ ಪರ ಅತ್ಯುತ್ತಮ ದಾಳಿ ಸಂಘಟಿಸಿದ ರಿಚರ್ಡ್ ಗ್ಲೀಸನ್ 19 ಎಸೆತಗಳಲ್ಲಿ ಕೇವಲ 25 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಇನ್ನು ಸ್ಯಾಮ್ ಕರನ್ 15 ಎಸೆತಗಳಲ್ಲಿ 27 ರನ್ ನೀಡಿ 2 ವಿಕೆಟ್ ಕಬಳಿಸಿದರು.

144 ರನ್​ಗಳ ಗುರಿ:

100 ಎಸೆತಗಳಲ್ಲಿ 144 ರನ್​ಗಳ ಗುರಿ ಪಡೆದ ಎಂಐ ಲಂಡನ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ವಿಲ್ ಜ್ಯಾಕ್ಸ್​ ಕೇವಲ 2 ರನ್​ಗಳಿಸಿ ಔಟಾದರೆ, ಜೇಮ್ಸ್ ವಿನ್ಸ್ 17 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಜೇಸನ್ ರಾಯ್ (0) ಸೊನ್ನೆ ಸುತ್ತಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.

ಈ ಹಂತದಲ್ಲಿ ಕಣಕ್ಕಿಳಿದ ಸ್ಯಾಮ್ ಕರನ್ ಹಾಗೂ ನಿಕೋಲಸ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆಕ್ರಮಣಕಾರಿ ಬ್ಯಾಟಿಂಗ್​ಗೆ ಒತ್ತು ನೀಡಿದ ಈ ಜೋಡಿಯು ಸನ್​ರೈಸರ್ಸ್ ಲೀಡ್ಸ್ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು.

ಪರಿಣಾಮ ಸ್ಯಾಮ್ ಕರನ್ ಬ್ಯಾಟ್​ನಿಂದ 39 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 60 ರನ್ ಮೂಡಿಬಂತು. ಮತ್ತೊಂದೆಡೆ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ನಿಕೋಲಸ್ ಪೂರನ್ 22 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 58 ರನ್ ಚಚ್ಚಿದರು. ಈ ಮೂಲಕ ಎಂಐ ಲಂಡನ್ ತಂಡವು 84 ಎಸೆತಗಳಲ್ಲಿ 144 ರನ್​ ಬಾರಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಎಂಐ ಲಂಡನ್ ಪ್ಲೇಯಿಂಗ್ 11: ಜೇಮ್ಸ್ ವಿನ್ಸ್ , ವಿಲ್ ಜ್ಯಾಕ್ಸ್ , ಜೇಸನ್ ರಾಯ್ , ಸ್ಯಾಮ್ ಕರನ್ (ನಾಯಕ) , ನಿಕೋಲಸ್ ಪೂರನ್ (ವಿಕೆಟ್ ಕೀಪರ್) ಜೋಶ್ ಫಿಲಿಪ್ , ಟಾಮ್ ಕರನ್ , ರಶೀದ್ ಖಾನ್ , ಟ್ರೆಂಟ್ ಬೌಲ್ಟ್ , ರಿಚರ್ಡ್ ಗ್ಲೀಸನ್ , ನಾಥನ್ ಸೌಟರ್.

ಇದನ್ನೂ ಓದಿ: ನೋ ಬಾಲ್ ಎಸೆದರೆ ಬೌಲರ್ ಬೌಲ್ಡ್​: 10 ಹೊಸ ನಿಯಮ ಪರಿಚಯಿಸಿದ ಬಿಸಿಸಿಐ

ಸನ್​ರೈಸರ್ಸ್​ ಲೀಡ್ಸ್​ ಪ್ಲೇಯಿಂಗ್ 11: ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್ , ಝಾಕ್ ಕ್ರಾಲಿ (ನಾಯಕ) ,
ಹ್ಯಾರಿ ಬ್ರೂಕ್ , ಡಾನ್ ಲಾರೆನ್ಸ್ , ಟಾಮ್ ಅಲ್ಸೋಪ್ , ಬೆನ್ನಿ ಹೋವೆಲ್ , ಬ್ರೈಡನ್ ಕಾರ್ಸ್ , ಮ್ಯಾಥ್ಯೂ ಪಾಟ್ಸ್ , ನಾಥನ್ ಎಲ್ಲಿಸ್ , ಅಬ್ರಾರ್ ಅಹ್ಮದ್.

Source link

145 ವರ್ಷ ಹಳೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿಕೆಗೆ ನೆರವಾಗ್ತಿದೆ ಶಿಕ್ಷಕರೇ ಅಭಿವೃದ್ಧಿಪಡಿಸಿದ ಎಐ ವೆಬ್​ಸೈಟ್! – Kannada News | Karnataka’s 145 Year Old Government School Uses AI Website for Smart Learning, Teachers Develop Digital Education Platform

ಶಿಕ್ಷಕರೇ ರೂಪಿಸಿರುವ ಎಐ ವೆಬ್​ಸೈಟ್​ನ ಮುಖಪುಟ

ಬೆಂಗಳೂರು, ಜುಲೈ 22: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರ ತಾಲೂಕಿನ ಚೆಂಡಿಯದಲ್ಲಿರುವ 145 ವರ್ಷಗಳ ಇತಿಹಾಸ ಹೊಂದಿರುವ ಸರ್ಕಾರಿ ಪ್ರಾಥಮಿಕ ಶಾಲೆಯೊಂದು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿದೆ. ಕೇವಲ 30ಕ್ಕೂ ಕಡಿಮೆ ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ಬೋಧನೆ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳ ಕಲಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಶಿಕ್ಷಕರೇ ಎಐ ಆಧಾರಿತ ಶಿಕ್ಷಣ ವೆಬ್‌ಸೈಟ್ ಅಭಿವೃದ್ಧಿಪಡಿಸಿದ್ದಾರೆ. ಕರ್ನಾಟಕದ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಈ ರೀತಿಯ ಎಐ ಆಧಾರಿತ ಕಲಿಕಾ ವೇದಿಕೆ ರೂಪುಗೊಂಡಿರುವುದು ಇದೇ ಮೊದಲು ಎನ್ನಲಾಗಿದೆ.

ಶಾಲೆಯ ಶಿಕ್ಷಕರಾದ ಚಂದ್ರಕಾಂತ್ ಗೌಡ ಹಾಗೂ ಜೋಸೆಫಿನ್ ಜಿ. ಲಿಮಾ ಅವರು ಸುಮಾರು ಒಂದೂವರೆ ವರ್ಷದ ಪರಿಶ್ರಮದಿಂದ ಈ ವೆಬ್‌ಸೈಟ್ ರೂಪಿಸಿದ್ದಾರೆ. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳಿಗೂ ಉಪಯುಕ್ತವಾಗುವಂತೆ ಈ ವೇದಿಕೆಯಲ್ಲಿ ಪಠ್ಯಾಧಾರಿತ ವಿಡಿಯೊಗಳು, ಧ್ವನಿ-ದೃಶ್ಯ (ಆಡಿಯೋ-ವಿಜುವಲ್) ವಿಷಯಗಳು ಹಾಗೂ ಸಂವಾದಾತ್ಮಕ ಕಲಿಕಾ ಸಂಪನ್ಮೂಲಗಳನ್ನು ಅಳವಡಿಸಲಾಗಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ

ಪೋಷಕರಿಗೂ ನೆರವಾಗುತ್ತಿದೆ ಎಐ ವೆಬ್​ಸೈಟ್

ಈ ವೆಬ್‌ಸೈಟ್ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಪೋಷಕರಿಗೂ ಸಹಾಯಕವಾಗಿದೆ. ಮಕ್ಕಳು ಏನು ಕಲಿಯುತ್ತಿದ್ದಾರೆ ಎಂಬುದನ್ನು ಪೋಷಕರು ತಿಳಿದುಕೊಳ್ಳುವುದರ ಜೊತೆಗೆ ಅವರ ಕಲಿಕೆಯ ಮಟ್ಟವನ್ನು ಪರೀಕ್ಷಿಸುವ ಅವಕಾಶವೂ ಇದರಿಂದ ಸಿಗುತ್ತದೆ ಎಂದು ಶಾಲೆಯ ಮುಖ್ಯಶಿಕ್ಷಕಿ ಜ್ಯೋತಿ ಬಿ. ಗುಣಗಿ ಹೇಳಿರುವುದಾಗಿಯೂ ವರದಿ ಉಲ್ಲೇಖಿಸಿದೆ. ಈ ಲಿಂಕ್​​ನಲ್ಲಿ (https://chandugokarna-bit.github.io/gpt-teachers-resources/) ನೀವೂ ವೆಬ್​ಸೈಟ್ ನೋಡಬಹುದು.

120ಕ್ಕೂ ಹೆಚ್ಚು ಶೈಕ್ಷಣಿಕ ವಿಡಿಯೋ ಲಭ್ಯ

ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ನಾಯಕ್ ಈ ವೆಬ್‌ಸೈಟ್‌ಗೆ ಚಾಲನೆ ನೀಡಿದ್ದು, ಇದರಲ್ಲಿ 6ರಿಂದ 8ನೇ ತರಗತಿ ಪಠ್ಯಕ್ರಮಕ್ಕೆ ಸಂಬಂಧಿಸಿದ 120ಕ್ಕೂ ಹೆಚ್ಚು ಶೈಕ್ಷಣಿಕ ವಿಡಿಯೊಗಳು ಲಭ್ಯವಿವೆ.

ಪುರಾತತ್ವ ತಾಣಗಳ ವರ್ಚುವಲ್ ಪ್ರವಾಸವೂ ಇದೆ!

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (DIET) ವತಿಯಿಂದ ಇ-ಸಂಪನ್ಮೂಲ ತರಬೇತಿ ಪಡೆದಿದ್ದ ಶಿಕ್ಷಕರು, ಸಮಾಜ ವಿಜ್ಞಾನ, ಗಣಿತ, ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಸಂವಾದಾತ್ಮಕ ಚಟುವಟಿಕೆಗಳು ಹಾಗೂ ವಿಜ್ಞಾನ ವಿಷಯಗಳನ್ನು ಈ ವೆಬ್‌ಸೈಟ್‌ನಲ್ಲಿ ಸೇರಿಸಿದ್ದಾರೆ. ವಿಜಯನಗರ ಹಾಗೂ ಕದಂಬರಂತಹ ಐತಿಹಾಸಿಕ ಸಾಮ್ರಾಜ್ಯಗಳ ಕುರಿತ ವಿವರಣೆಗಳು, ಹಂಪಿ, ಹಳೇಬೀಡು ಸೇರಿದಂತೆ ಪುರಾತತ್ವ ತಾಣಗಳ ವರ್ಚುವಲ್ ಪ್ರವಾಸವೂ ಇದರ ವಿಶೇಷತೆಯಾಗಿದೆ.

ಐತಿಹಾಸಿಕ ವ್ಯಕ್ತಿಗಳೇ ತಮ್ಮ ಬಗ್ಗೆ ಪರಿಚಯಿಸಿಕೊಳ್ಳುತ್ತಾರೆ!

ಎಐ ತಂತ್ರಜ್ಞಾನದ ನೆರವಿನಿಂದ ಐತಿಹಾಸಿಕ ವ್ಯಕ್ತಿಗಳೇ ತಮ್ಮ ಬಗ್ಗೆ ಪರಿಚಯಿಸಿಕೊಳ್ಳುವ ಮಾದರಿಯ ವಿಡಿಯೊಗಳನ್ನು ಸಿದ್ಧಪಡಿಸಲಾಗಿದೆ. ಭಾರತದ ಪ್ರಧಾನಿಗಳ 3D ಮಾಹಿತಿ, ಭಾರತೀಯ ಹಬ್ಬಗಳು, ಗ್ರಾಮೀಣ ಜೀವನ, ‘ಸಂಭ್ರಮ ಶನಿವಾರ’, ‘ನೋ ಬ್ಯಾಗ್ ಡೇ’ ಚಟುವಟಿಕೆಗಳು ಹಾಗೂ ಮಕ್ಕಳಿಗಾಗಿ ‘ಪುಟ್ಟಜ್ಜಿ-ಪುಟ್ಟಜ್ಜಿ ಕಥೆ’ಗಳಂತಹ ವಿಶೇಷ ಅಂಶಗಳನ್ನೂ ವೆಬ್‌ಸೈಟ್ ಒಳಗೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದಿ ಒಡೆಸ್ಸಿ’ ಅಬ್ಬರ; ಈ ಐಕಾನಿಕ್ ಥಿಯೇಟರ್‌ನಲ್ಲಿ ಎರಡು ತಿಂಗಳ ಶೋಗಳು ಹೌಸ್​​ಫುಲ್ – Kannada News | Christopher Nolan The Odyssey Sparks Global Frenzy: BFI IMAX Sold Out Until September

ಹಾಲಿವುಡ್‌ನ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಸಿನಿಮಾಗಳು ವಿಶ್ವಾದ್ಯಂತ ಗಮನ ಸೆಳೆಯುತ್ತವೆ. ಅವರ ಸಿನಿಮಾಗೆ ಕಾಯುವಿಕೆ ದೊಡ್ಡದಾಗಿಯೇ ಇರುತ್ತದೆ. ಈಗ ಅವರ ನಿರ್ದೇಶನದ ‘ದಿ ಒಡೆಸ್ಸಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಬೇಟೆ ಮುಂದುವರಿಸಿದೆ. ಈ ಸಿನಿಮಾ ಭಾರತದಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈಗ ಸಿನಿಮಾ ಒಂದು ಅಚ್ಚರಿಯ ಘಟನೆಗೆ ಸಾಕ್ಷಿಯಾಗಿದೆ.

ಲಂಡನ್ ಥಿಯೇಟರ್

ಲಂಡನ್‌ನ ಪ್ರತಿಷ್ಠಿತ ಬಿಎಫ್‌ಐ ಐಮ್ಯಾಕ್ಸ್ (BFI IMAX – 70mm) ಚಿತ್ರಮಂದಿರದಲ್ಲಿ ‘ದಿ ಒಡೆಸ್ಸಿ’ ಸಿನಿಮಾದ ಕ್ರೇಜ್ ಹೊಸ ಇತಿಹಾಸ ಸೃಷ್ಟಿಸಿದೆ. ಈ ಐಕಾನಿಕ್ ಥಿಯೇಟರ್‌ನಲ್ಲಿ ಮುಂಬರುವ ಸೆಪ್ಟೆಂಬರ್ 10ರವರೆಗಿನ ಎಲ್ಲಾ ಶೋಗಳ ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾಗಿವೆ. ಅಂದರೆ ಮುಂದಿನ ಸುಮಾರು ಎರಡು ತಿಂಗಳ ಕಾಲ ಈ ಚಿತ್ರಮಂದಿರದಲ್ಲಿ ಒಂದು ಸೀಟು ಕೂಡ ಖಾಲಿ ಇಲ್ಲದಂತೆ ಪ್ರೇಕ್ಷಕರು ಮುಂಗಡವಾಗಿ ಟಿಕೆಟ್ ಬುಕ್ ಮಾಡಿದ್ದಾರೆ. ಇದು ನೋಲನ್ ಅವರ ಸಿನಿಮಾಗೆ ಇರುವ ಜಾಗತಿಕ ಮಟ್ಟದ ಅಭೂತಪೂರ್ವ ಕ್ರೇಜ್‌ಗೆ ಸಾಕ್ಷಿಯಾಗಿದೆ.

ಕ್ರಿಸ್ಟೋಫರ್ ನೋಲನ್ ಅವರು ಯಾವ ರೀತಿ ಪ್ರೇಕ್ಷಕರಿಗೆ ಸಿನಿಮಾ ತೋರಿಸಬೇಕು ಎಂದು ಬಯಸಿದ್ದರೋ, ಅದೇ ಗುಣಮಟ್ಟದಲ್ಲಿ ಪ್ರದರ್ಶಿಸುವ ವಿಶ್ವದ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಈ ಬಿಎಫ್‌ಐ ಐಮ್ಯಾಕ್ಸ್ ಕೂಡ ಒಂದು. ಹೀಗಾಗಿಯೇ ಬೇರೆ ಬೇರೆ ದೇಶಗಳಿಂದಲೂ ಪ್ರೇಕ್ಷಕರು ಲಂಡನ್‌ಗೆ ಬಂದು ಈ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ಇಷ್ಟೇ ಅಲ್ಲದೆ, ಈ ಥಿಯೇಟರ್ ಇತಿಹಾಸದಲ್ಲೇ ಅತಿ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಎಂಬ ಹೆಗ್ಗಳಿಕೆಯನ್ನೂ ‘ದಿ ಒಡೆಸ್ಸಿ’ ಪಡೆದುಕೊಂಡಿದ್ದು, ಈ ಹಿಂದೆ ಇದ್ದ ‘ಸ್ಟಾರ್ ವಾರ್ಸ್: ದಿ ಲಾಸ್ಟ್ ಜೆಡಿ’ ಚಿತ್ರದ ದಾಖಲೆಯನ್ನು ಮುರಿದಿದೆ.

‘ದಿ ಒಡೆಸ್ಸಿ’ ಸಿನಿಮಾ ನೋಲನ್ ವೃತ್ತಿಜೀವನದಲ್ಲೇ ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ಓಪನಿಂಗ್ ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೊದಲ ವಾರಾಂತ್ಯದಲ್ಲೇ ಬರೋಬ್ಬರಿ 264 ಮಿಲಿಯನ್ ಡಾಲರ್ ಗಳಿಕೆ ಮಾಡುವ ಮೂಲಕ ಈ ಸಿನಿಮಾ ನೋಲನ್ ಅವರದ್ದೇ ಆದ ‘ದಿ ಡಾರ್ಕ್ ನೈಟ್ ರೈಸಸ್’ ಚಿತ್ರದ ದಾಖಲೆಯನ್ನು ಬದಿಗೆ ತಳ್ಳಿದೆ.

ಇದನ್ನೂ ಓದಿ: ‘ದಿ ಒಡೆಸ್ಸಿ’ ಪ್ರೀಮಿಯರ್ ಶೋಗಾಗಿ ಭಾರತಕ್ಕೆ ಬರ್ತಾರೆ ಕ್ರಿಸ್ಟೋಫರ್ ನೋಲನ್

ಭಾರತದಲ್ಲಿ ‘ದಿ ಒಡೆಸ್ಸಿ’ ಕಲೆಕ್ಷನ್ ವಿವರ

ಭಾರತದಲ್ಲೂ ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ಒಟ್ಟು 597 ಶೋಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ 5ನೇ ದಿನವಾದ (ಮೊದಲ ಮಂಗಳವಾರ) ₹8.35 ಕೋಟಿ ಗಳಿಕೆ ಮಾಡಿದ್ದು, ಚಿತ್ರಮಂದಿರಗಳಲ್ಲಿ ಶೇಕಡಾ 40.8 ರಷ್ಟು ಆಕ್ಯುಪೆನ್ಸಿ ಇತ್ತು. ಈ ಮೂಲಕ 5 ದಿನಗಳ ಅಂತ್ಯಕ್ಕೆ ಭಾರತದಲ್ಲಿ ಒಟ್ಟು 93.02 ಕೋಟಿ ಗ್ರಾಸ್ ಕಲೆಕ್ಷನ್ ಹಾಗೂ 77.98 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಭಾರತದ ಅಂತಿಮ ಕಲೆಕ್ಷನ್ ವರದಿ ಇನ್ನಷ್ಟೇ ಬರಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Tirupati Darshan Alert: ತಿರುಮಲ ಶ್ರೀವಾರಿ ಭಕ್ತರಿಗೆ ಪ್ರಮುಖ ಸೂಚನೆ; SSD ದರ್ಶನ ಟೋಕನ್ ವಿತರಣೆಯಲ್ಲಿ ವ್ಯತ್ಯಯ! – Kannada News | Tirupati Darshan Alert: TTD Halts SSD Tokens Amidst Massive Devotee Rush

ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿImage Credit source: gemini ai

ನೀವೇನಾದರೂ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ತೆರಳಲು ಯೋಜಿಸುತ್ತಿದ್ದರೆ, ಈ ಮಾಹಿತಿ ನಿಮಗಾಗಿ. ತಿರುಮಲದಲ್ಲಿ ಅತಿಯಾದ ಭಕ್ತರ ದಟ್ಟಣೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ತಿರುಮಲ ತಿರುಪತಿ ದೇವಸ್ಥಾನಂ (TTD) ಸರ್ವ ದರ್ಶನ ಟೋಕನ್ (SSD) ವಿತರಣೆಯಲ್ಲಿ ಪ್ರಮುಖ ಬದಲಾವಣೆ ಮಾಡಿದೆ.

ಪ್ರಸ್ತುತ ದರ್ಶನ ವ್ಯವಸ್ಥೆಯ ಪ್ರಮುಖ ಮುಖ್ಯಾಂಶಗಳು:

ಹೆಚ್ಚುತ್ತಿರುವ ಜನಸಂದಣಿಯನ್ನು ನಿಯಂತ್ರಿಸಲು TTD ಬುಧವಾರ ನೀಡಲಾಗುತ್ತಿದ್ದ ‘ಸ್ಲಾಟೆಡ್ ಸರ್ವ ದರ್ಶನ’ (SSD) ಟೋಕನ್‌ಗಳ ವಿತರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಸಾಮಾನ್ಯವಾಗಿ ಮರುದಿನದ ದರ್ಶನಕ್ಕಾಗಿ ಹಿಂದಿನ ದಿನವೇ ಟೋಕನ್‌ಗಳನ್ನು ಶ್ರೀನಿವಾಸಂ, ವಿಷ್ಣು ನಿವಾಸಂ ಮತ್ತು ಭೂದೇವಿ ಸಂಕೀರ್ಣಗಳಲ್ಲಿ ನೀಡಲಾಗುತ್ತದೆ. ಆದರೆ ಪ್ರಸ್ತುತ ಪರಿಸ್ಥಿತಿಯಿಂದಾಗಿ ಗುರುವಾರ ದರ್ಶನಕ್ಕೆ ನೀಡಬೇಕಿದ್ದ ಬುಧವಾರದ ಟೋಕನ್‌ಗಳನ್ನು ನೀಡಿಲ್ಲ. ಶುಕ್ರವಾರ ಸ್ವಾಮಿಯ ದರ್ಶನ ಪಡೆಯಲು ಬಯಸುವ ಭಕ್ತರಿಗೆ ಗುರುವಾರ ಮಧ್ಯಾಹ್ನದಿಂದ ಮತ್ತೆ ಎಂದಿನಂತೆ ಟೋಕನ್‌ಗಳನ್ನು ನೀಡಲಾಗುವುದು ಎಂದು TTD ಸ್ಪಷ್ಟಪಡಿಸಿದೆ.

ತಿರುಮಲದಲ್ಲಿ ಹೆಚ್ಚಿದ ಭಕ್ತರ ದಂಡು:

ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಮಳೆ ಹಾಗೂ ಶಾಲಾ-ಕಾಲೇಜುಗಳು ಪ್ರಾರಂಭವಾಗುವುದರಿಂದ ತಿರುಮಲದಲ್ಲಿ ಜನಸಂದಣಿ ಕಡಿಮೆಯಿರುತ್ತದೆ. ಆದರೆ, ಕಳೆದ ಎರಡು ವಾರಗಳಿಂದ ನಿರೀಕ್ಷೆಗೂ ಮೀರಿ ಭಕ್ತರ ಸಂಖ್ಯೆ ಹೆಚ್ಚಾಗಿದೆ.

ದರ್ಶನಕ್ಕೆ ಎಷ್ಟು ಸಮಯ ಬೇಕಾಗಬಹುದು?

ಪ್ರಸ್ತುತ ಸಾಮಾನ್ಯ ದರ್ಶನಕ್ಕೆ 12 ರಿಂದ 24 ಗಂಟೆಗಳ ಕಾಲ ಸಮಯ ತಗಲುತ್ತಿದೆ. ವೈಕುಂಠಂ ಕ್ಯೂ ಕಾಂಪ್ಲೆಕ್ಸ್-2 ರ 31 ಕಂಪಾರ್ಟ್‌ಮೆಂಟ್‌ಗಳು ಹಾಗೂ ನಾರಾಯಣಗಿರಿಯ 9 ಕಂಪಾರ್ಟ್‌ಮೆಂಟ್‌ಗಳು ಭಕ್ತರಿಂದ ಸಂಪೂರ್ಣವಾಗಿ ತುಂಬಿ ತುಳುಕುತ್ತಿವೆ. ಸತತ ನಾಲ್ಕನೇ ವಾರವೂ ಈ ರೀತಿ SSD ಟೋಕನ್ ವಿತರಣೆಯನ್ನು ಮಧ್ಯದಲ್ಲಿಯೇ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಮಂಗಳವಾರ ಬೆಳಿಗ್ಗೆ 5 ಗಂಟೆಗೆ ವಿತರಣೆ ಆರಂಭವಾದ ಕೇವಲ ಒಂದು ಗಂಟೆಯಲ್ಲೇ ಎಲ್ಲಾ ಟೋಕನ್‌ಗಳು ಖಾಲಿಯಾಗಿದ್ದರಿಂದ, ದೂರದೂರುಗಳಿಂದ ಬಂದ ಭಕ್ತರು ತೊಂದರೆ ಅನುಭವಿಸುವಂತಾಯಿತು.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಶ್ರೀ ಗೋವಿಂದರಾಜಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ:

ತಿರುಪತಿಯ ಪ್ರಸಿದ್ಧ ಶ್ರೀ ಗೋವಿಂದರಾಜಸ್ವಾಮಿ ದೇವಸ್ಥಾನದಲ್ಲಿ ಜುಲೈ 24 ರಿಂದ 26 ರವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಶ್ರೀದೇವಿ ಮತ್ತು ಭೂದೇವಿ ಸಮೇತ ಶ್ರೀ ಗೋವಿಂದರಾಜಸ್ವಾಮಿಯ ವಿಗ್ರಹಗಳಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ‘ವಿಧ್ಯುಕ್ತ ಅಭಿಷೇಕ’ ನಡೆಯಲಿದೆ.

ಭಕ್ತರಲ್ಲಿ TTD ಮನವಿ:

ತಿರುಮಲಕ್ಕೆ ಆಗಮಿಸುವ ಭಕ್ತರು ಪ್ರಸ್ತುತ ಪರಿಸ್ಥಿತಿ ಮತ್ತು TTD ಅಧಿಕೃತವಾಗಿ ನೀಡುವ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಬೇಕು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉತ್ತರ ಕನ್ನಡ: ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ! ಮುಚ್ಚುವ ಭೀತಿಯಲ್ಲಿ ಕನ್ನಡ ಮಾಧ್ಯಮ ಶಾಲೆಗಳು – Kannada News | Uttara Kannada Govt Schools Facing Closure After 35 Record Zero Admissions

ಉತ್ತರ ಕನ್ನಡ, ಜುಲೈ 22: ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ದಿನದಿಂದ ದಿನಕ್ಕೆ ಚಿಂತಾಜನಕವಾಗುತ್ತಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ (2024-25) ಉತ್ತರ ಕನ್ನಡ ಜಿಲ್ಲೆಯ ಸುಮಾರು 35 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಒಂದೇ ಒಂದು ಹೊಸ ವಿದ್ಯಾರ್ಥಿಯೂ ಸೇರ್ಪಡೆಯಾಗದೆ ‘ಶೂನ್ಯ ದಾಖಲಾತಿ’ (Zero Admissions) ದಾಖಲಾಗಿದೆ. ಈ ಘಟನೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕನ್ನಡ ಪ್ರೇಮಿಗಳಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.

ಆತಂಕಕಾರಿ ಮಟ್ಟಕ್ಕೆ ಕುಸಿದ ವಿದ್ಯಾರ್ಥಿಗಳ ಸಂಖ್ಯೆ

ಶಿಕ್ಷಣ ಇಲಾಖೆ ತಿಳಿಸುವಂತೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಶಿರಸಿ, ಕುಮಟಾ, ಅಂಕೋಲಾ ಸೇರಿದಂತೆ ವಿವಿಧ ತಾಲೂಕುಗಳ ಗ್ರಾಮೀಣ ಭಾಗಗಳಲ್ಲಿರುವ ಈ ಸರ್ಕಾರಿ ಶಾಲೆಗಳು ಇದೀಗ ಮುಚ್ಚುವ ಭೀತಿಯನ್ನು ಎದುರಿಸುತ್ತಿವೆ. ಸೂಕ್ತ ಸಂಖ್ಯೆಯ ವಿದ್ಯಾರ್ಥಿಗಳು ಇಲ್ಲದಿರುವುದರಿಂದ ಇಂತಹ ಶಾಲೆಗಳನ್ನು ಸಮೀಪದ ಇತರ ಸರ್ಕಾರಿ ಶಾಲೆಗಳೊಂದಿಗೆ ವಿಲೀನಗೊಳಿಸಲು (Merge) ಅಥವಾ ತಾತ್ಕಾಲಿಕವಾಗಿ ಮುಚ್ಚಲು ಇಲಾಖೆ ಚಿಂತನೆ ನಡೆಸಿದೆ.

ಶೂನ್ಯ ದಾಖಲಾತಿಗೆ ಕಾರಣಗಳೇನು?

  • ಆಂಗ್ಲ ಮಾಧ್ಯಮದ ಕಡೆಗೆ ಒಲವು: ಪೋಷಕರು ತಮ್ಮ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿಸಲು ಆಸಕ್ತಿ ತೋರಿಸುತ್ತಿರುವುದು ಕನ್ನಡ ಮಾಧ್ಯಮ ಶಾಲೆಗಳಿಗೆ ಶಾಪವಾಗಿ ಪರಿಣಮಿಸಿದೆ.
  • ಗ್ರಾಮೀಣ ಭಾಗದಿಂದ ವಲಸೆ: ಉತ್ತಮ ಉದ್ಯೋಗ ಮತ್ತು ಜೀವನ ಶೈಲಿಯನ್ನು ಅರಸಿ ಗ್ರಾಮೀಣ ಪ್ರದೇಶದ ಕುಟುಂಬಗಳು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದರಿಂದ ಹಳ್ಳಿಗಳಲ್ಲಿ ಮೌಲಿಕವಾಗಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ.
  • ಖಾಸಗಿ ಶಾಲೆಗಳ ಪೈಪೋಟಿ: ಗ್ರಾಮೀಣ ಭಾಗಗಳಲ್ಲೂ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಜಾಲ ವಿಸ್ತರಿಸಿದ್ದು, ಪ್ರೈವೇಟ್ ಶಾಲೆಗಳಲ್ಲಿ ಸಾರಿಗೆ ವ್ಯವಸ್ಥೆಯೂ ಲಭ್ಯವಿರುವುದರಿಂದ ಪೋಷಕರು ಖಾಸಗಿ ಸಂಸ್ಥೆಗಳತ್ತ ಮುಖ ಮಾಡುತ್ತಿದ್ದಾರೆ.
  • ಶಿಕ್ಷಕರ ಕೊರತೆ ಹಾಗೂ ಮೂಲಸೌಕರ್ಯ: ಕೆಲವು ಶಾಲೆಗಳಲ್ಲಿ ನಿಕೃಷ್ಟ ಮೂಲಸೌಕರ್ಯ ಮತ್ತು ಕಾಯಂ ಶಿಕ್ಷಕರ ಅಭಾವವಿರುವುದು ವಿದ್ಯಾರ್ಥಿಗಳ ಸಂಖ್ಯೆ ಕುಸಿಯಲು ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ ದಾಂಡೇಲಿಯ ರೆಸಾರ್ಟ್​​ನಲ್ಲಿ ಜಿಪ್‌ಲೈನ್ ದುರಂತ: 40 ಅಡಿ ಎತ್ತರದಿಂದ ಬಿದ್ದು ಪ್ರವಾಸಿಗನಿಗೆ ಗಂಭೀರ ಗಾಯ

ಇಲಾಖೆಯ ಮುಂದಿರುವ ಸವಾಲುಗಳು

ಯಾವುದೇ ಶಾಲೆಯಲ್ಲಿ ಕನಿಷ್ಠ 10 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದರೆ ಅಂತಹ ಶಾಲೆಗಳನ್ನು ನಡೆಸುವುದು ಇಲಾಖೆಗೆ ನಿರ್ವಹಣಾ ದೃಷ್ಟಿಯಿಂದ ಸವಾಲಾಗಿ ಪರಿಣಮಿಸುತ್ತದೆ. ಆದರೆ, ಶಾಲೆಗಳನ್ನು ಮುಚ್ಚುವುದರಿಂದ ಸ್ಥಳೀಯವಾಗಿ ಬಡ ಮತ್ತು ಹಿಂದುಳಿದ ವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಅಪಾಯವಿದೆ. ಹೀಗಾಗಿ, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಬಲಪಡಿಸುವ ಹಾಗೂ ಮೂಲಸೌಕರ್ಯ ಸುಧಾರಿಸುವ ಮೂಲಕ ವಿದ್ಯಾರ್ಥಿಗಳನ್ನು ಮತ್ತೆ ಆಕರ್ಷಿಸಬೇಕೆಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 Kannada News Live: ವಾರಾಂತ್ಯಕ್ಕೆ ಪ್ರಕಟವಾಗಲಿದೆ ಸಚಿವ ಸಂಪುಟ ವಿಸ್ತರಣೆ ಅಂತಿಮ ಪಟ್ಟಿ; ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada Live Breaking News 22 July 2026 Monsoon Session, Cabinet expansion, CM DK Shivakumar, IMD Weather, Rain Latest Updates in Kannada

Breaking News Today Live Updates in Kannada: ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆಯಾಗಿದೆ. ಹೈಕಮಾಂಡ್ ನಾಯಕರ ಲಭ್ಯತೆ ಇಲ್ಲದ ಕಾರಣ ಪ್ರಕ್ರಿಯೆ ವಿಳಂಬವಾಗಿದ್ದು, ವಾರಾಂತ್ಯದಲ್ಲಿ ಅಂತಿಮ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಮತ್ತೊಂದೆಡೆ, ರಾಜ್ಯದ ಕರಾವಳಿ ಹಾಗೂ ವಿವಿಧೆಡೆ ಇಂದಿನಿಂದ (ಜುಲೈ 22) ಇನ್ನೆರಡು ದಿನ ಸಾಧಾರಣ ಮಳೆಯಾಗಲಿದ್ದು, ಉತ್ತರ ಒಳನಾಡಿನಲ್ಲಿ 40-50 ಕಿ.ಮೀ ವೇಗದ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು, ನೀಟ್ ಪರೀಕ್ಷೆ ಸೋರಿಕೆ ಖಂಡಿಸಿ 32ನೇ ದಿನವೂ ಪ್ರತಿಭಟನೆ ಕಾಯ್ದುಕೊಂಡಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ದೆಹಲಿ ಹೈಕೋರ್ಟ್ ಆದೇಶದಂತೆ ಮೆದಾಂತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

ನೋ ಬಾಲ್ ಎಸೆದರೆ ಬೌಲರ್ ಬೌಲ್ಡ್​: 10 ಹೊಸ ನಿಯಮ ಪರಿಚಯಿಸಿದ ಬಿಸಿಸಿಐ – Kannada News | BCCI Introduces Strict 10 New Rules in Domestic Cricket

ಭಾರತೀಯ ದೇಶಿ ಕ್ರಿಕೆಟ್‌ನಲ್ಲಿ ಇನ್ಮುಂದೆ ಬೌಲರ್‌ಗಳು ತಪ್ಪು ಮಾಡಿದರೆ ಭಾರಿ ಬೆಲೆ ತೆರಬೇಕಾಗುತ್ತದೆ. ಮುಂಬರುವ 2026–27ರ ದೇಶಿಯ ಕ್ರಿಕೆಟ್ ಸೀಸನ್‌ನಿಂದ ಜಾರಿಗೆ ಬರುವಂತೆ, ಬಿಸಿಸಿಐ ಅತ್ಯಂತ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಯಾವುದೇ ಬೌಲರ್ ಉದ್ದೇಶಪೂರ್ವಕವಾಗಿ ಫ್ರಂಟ್-ಫುಟ್ ನೋ-ಬಾಲ್ ಅಥವಾ ಬೀಮರ್ ಎಸೆದರೆ, ಅವರನ್ನು ಇಡೀ ಪಂದ್ಯದಿಂದಲೇ ಬೌಲಿಂಗ್ ಮಾಡದಂತೆ ಅಮಾನತುಗೊಳಿಸಲಾಗುತ್ತದೆ.

ಹಳೆಯ ನಿಯಮದ ಪ್ರಕಾರ, ಇಂತಹ ತಪ್ಪು ಮಾಡಿದ ಬೌಲರ್‌ಗೆ ಕೇವಲ ಆ ನಿರ್ದಿಷ್ಟ ಇನ್ನಿಂಗ್ಸ್‌ನಲ್ಲಿ ಮಾತ್ರ ಬೌಲಿಂಗ್ ಮಾಡದಂತೆ ನಿಷೇಧ ಹೇರಲಾಗುತ್ತಿತ್ತು. ಆದರೆ ಪಂದ್ಯದ ಪಾವಿತ್ರ್ಯತೆ ಕಾಪಾಡಲು ಬಿಸಿಸಿಐ ಈಗ ನಿಯಮವನ್ನು ಮತ್ತಷ್ಟು ಬಿಗಿಗೊಳಿಸಿದೆ. ಇದರ ಜೊತೆಗೆ ಬಿಸಿಸಿಐ ಮತ್ತಷ್ಟು ಹೊಸ ನಿಯಮಗಳನ್ನು ಕೂಡ ಪರಿಚಯಿಸಿದ್ದಾರೆ.

ದೇಶಿ ಕ್ರಿಕೆಟ್‌ನ ಹೊಸ ನಿಯಮಗಳು:

ಮೆರಿಲಿಬೋನ್ ಕ್ರಿಕೆಟ್ ಕ್ಲಬ್ (MCC) ಶಿಫಾರಸುಗಳ ಆಧಾರದ ಮೇಲೆ ಬಿಸಿಸಿಐ ಈ ಕೆಳಗಿನ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಮುಂಬರುವ ದುಲೀಪ್ ಟ್ರೋಫಿ ಟೂರ್ನಿಯಿಂದಲೇ ಈ ನಿಯಮಗಳು ಜಾರಿಗೆ ಬರಲಿವೆ.

  1. ನೋ-ಬಾಲ್ ನಿಯಮ: ಬೌಲರ್ ಎಸೆದ ಫ್ರಂಟ್-ಫುಟ್ ನೋ-ಬಾಲ್ ಅಥವಾ ಬೀಮರ್ (ಡೇಂಜರಸ್ ಫುಲ್ ಟಾಸ್) ಬೇಕಂತಲೇ ಎಸೆಯಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಸಂಪೂರ್ಣ ಹಕ್ಕು ಆನ್-ಫೀಲ್ಡ್ ಅಂಪೈರ್‌ಗಳಿಗೆ ಇರುತ್ತದೆ. ಅಂಪೈರ್ ಅದನ್ನು ‘ಉದ್ದೇಶಪೂರ್ವಕ’ ಎಂದು ಘೋಷಿಸಿದರೆ ಆ ಬೌಲರ್ ಆ ಪಂದ್ಯದಲ್ಲಿ ಮತ್ತೆ ಬೌಲಿಂಗ್ ಮಾಡುವಂತಿಲ್ಲ.
  2. ಓವರ್ ಪೂರ್ಣಗೊಳಿಸುವುದು ಕಡ್ಡಾಯ: ಬಹುದಿನಗಳ ಪಂದ್ಯಗಳಲ್ಲಿ (ಉದಾಹರಣೆಗೆ ರಣಜಿ, ದುಲೀಪ್ ಟ್ರೋಫಿ), ದಿನದ ಕೊನೆಯ ಓವರ್ ನಡೆಯುತ್ತಿರುವಾಗ ವಿಕೆಟ್ ಬಿದ್ದರೂ ಸಹ ಆ ಓವರ್ ಅನ್ನು ಪೂರ್ತಿಯಾಗಿ ಮುಗಿಸಬೇಕು. ತಡವಾದ ಸಂಜೆ ಹೊಸ ಬ್ಯಾಟರ್ ಕ್ರೀಸ್‌ಗೆ ಬರುವುದನ್ನು ತಪ್ಪಿಸಲು ಸ್ಟಂಪ್ಸ್ ಘೋಷಿಸುವ ಹಳೇ ಪದ್ಧತಿಯನ್ನು ಕೈ ಬಿಡಲಾಗಿದೆ.
  3. ಕೃತಕ ಫಲಿತಾಂಶಗಳಿಗೆ ತಡೆ: ಪಂದ್ಯದಲ್ಲಿ ಕೃತಕ ಅಥವಾ ಮೊದಲೇ ನಿರ್ಧರಿಸಿದ ಫಲಿತಾಂಶವನ್ನು ತರಲು ಯಾವುದೇ ತಂಡ ಕೊನೆಯ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡುವಂತಿಲ್ಲ ಅಥವಾ ಬಿಟ್ಟುಕೊಡುವಂತಿಲ್ಲ. ಈ ಹಿಂದೆ ಡ್ರಾ ಆಗುವಂತಹ ಪಂದ್ಯಗಳಲ್ಲಿ ಫಲಿತಾಂಶ ನಿರ್ಧರಿಸಲು ಬೇಕೆಂದೇ ಡಿಕ್ಲೇರ್ ಘೋಷಿಸಿ ಕೊನೆಯ 10 ಓವರ್​ಗಳಲ್ಲಿ ಇಂತಿಷ್ಟು ರನ್​ಗಳ ಗುರಿ ನೀಡಲಾಗುತ್ತಿತ್ತು. ಇಂತಹ ನಿರ್ಧಾರಗಳನ್ನು ಎರಡು ತಂಡಗಳ ಕೋಚ್ ಅಥವಾ ನಾಯಕರುಗಳು ಚರ್ಚಿಸಿ ತೆಗೆದುಕೊಳ್ಳುತ್ತಿದ್ದರು. ಇದೀಗ ಈ ರೀತಿಯ ಅನುಕೂಲಕರ ಕೃತಕ ಫಲಿತಾಂಶ ರೂಪಿಸುವುದಕ್ಕೂ ಬಿಸಿಸಿಐ ತಡೆ ನೀಡಿದೆ.
  4. ವಿಕೆಟ್ ಕೀಪರ್ ನಿಯಮ: ಬೌಲರ್ ಓಡಿ ಬರುವಾಗ ವಿಕೆಟ್ ಕೀಪರ್ ಹೇಗೆ ಬೇಕಾದರೂ ಕದಲಬಹುದು ಅಥವಾ ಅವರ ಗ್ಲೌಸ್ ಸ್ಟಂಪ್‌ಗಿಂತ ಸ್ವಲ್ಪ ಮುಂದೆ ಬಂದರೂ ಸಹ ಅದನ್ನು ತಪ್ಪು ಎಂದು ಪರಿಗಣಿಸಲಾಗುವುದಿಲ್ಲ. ಈ ಹಿಂದೆ ಬೌಲರ್ ತನ್ನ ರನ್-ಅಪ್ ಆರಂಭಿಸಿದ ಕ್ಷಣದಿಂದ ಹಿಡಿದು ಚೆಂಡನ್ನು ಎಸೆಯುವವರೆಗೆ, ವಿಕೆಟ್ ಕೀಪರ್‌ನ ಗ್ಲೌಸ್‌ಗಳು (ಕೈಗಳು) ಅಥವಾ ದೇಹದ ಯಾವುದೇ ಭಾಗವು ಸ್ಟಂಪ್‌ಗಿಂತ ಮುಂದೆ ಬರುವಂತಿರಲಿಲ್ಲ. ಅಲ್ಲದೆ ಈ ತಪ್ಪಿಗೆ ಪೆನಾಲ್ಟಿ ರನ್​ ನೀಡಲಾಗುತ್ತಿತ್ತು. ಆದರೆ ಇನ್ಮುಂದೆ ಬೌಲರ್ ರನ್ ಅಪ್ ವೇಳೆ ವಿಕೆಟ್ ಕೀಪರ್ ಹೇಗೆ ಬೇಕಾದರೂ ಇರಬಹುದು ಎಂದು ತಿಳಿಸಲಾಗಿದೆ. ಅಲ್ಲದೆ ಚೆಂಡು ಹಿಡಿಯುವಾಗ ಮಾತ್ರ ವಿಕೆಟ್ ಕೀಪರ್ ಗ್ಲೌಸ್ ವಿಕೆಟ್​ನ ಹಿಂದೆ ಇರಬೇಕು ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ.
  5. ಕೋಚ್‌ಗಳಿಗೆ ಮೈದಾನ ಪ್ರವೇಶ: ದೇಶಿಯ ಏಕದಿನ ಪಂದ್ಯಗಳಲ್ಲಿ ಸ್ಟ್ರಾಟಜಿಕ್ ಡ್ರಿಂಕ್ಸ್ ಬ್ರೇಕ್ ಸಮಯದಲ್ಲಿ ಹೆಡ್ ಕೋಚ್‌ಗಳು ಮೈದಾನದೊಳಗೆ ಬಂದು ಆಟಗಾರರೊಂದಿಗೆ ಚರ್ಚಿಸಲು ಅವಕಾಶ ನೀಡಲಾಗಿದೆ.
  6. ಲೆಗ್-ಸೈಡ್ ವೈಡ್ ಲೈನ್: ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ವೈಡ್ ಬಾಲ್ ನಿರ್ಧಾರಗಳನ್ನು ನಿಖರವಾಗಿ ತೆಗೆದುಕೊಳ್ಳಲು ಅಂಪೈರ್‌ಗಳ ಸಹಾಯಕ್ಕಾಗಿ ಲೆಗ್ ಸೈಡ್‌ನಲ್ಲಿ ಪ್ರತ್ಯೇಕವಾದ ಗೆರೆಯನ್ನು ಪೇಂಟ್ ಮಾಡಲಾಗುತ್ತದೆ.
  7. ಓವರ್​ ಥ್ರೋ ನಿಯಮ: ಹಿಂದೆ ಫೀಲ್ಡರ್ ಎಸೆದ ಚೆಂಡು ವಿಕೆಟ್‌ಗೆ ತಾಗದೆ ಅಥವಾ ಯಾರ ಕೈಗೂ ಸಿಗದೆ ದೂರ ಹೋದಾಗ, ಅದನ್ನು ಸಾಮಾನ್ಯವಾಗಿ ‘ಓವರ್‌ ಥ್ರೋ’ ಎಂದೇ ಪರಿಗಣಿಸಲಾಗುತ್ತಿತ್ತು. ಇದರಿಂದಾಗಿ ಫೀಲ್ಡರ್‌ನ ಉದ್ದೇಶ ಏನೇ ಇದ್ದರೂ ರನ್‌ಗಳ ಲೆಕ್ಕಾಚಾರದಲ್ಲಿ ಕೆಲವೊಮ್ಮೆ ಗೊಂದಲ ಉಂಟಾಗುತ್ತಿತ್ತು. ಹೊಸ ತಿದ್ದುಪಡಿಯ ಪ್ರಕಾರ, ಕೇವಲ ಚೆಂಡು ಕೈತಪ್ಪಿ ಹೋದರೆ ಅದು ಓವರ್‌ ಥ್ರೋ ಆಗುವುದಿಲ್ಲ. ಅಂಪೈರ್‌ಗಳು ಓವರ್‌ ಥ್ರೋ ಎಂದು ಘೋಷಿಸಬೇಕಾದರೆ, ಅದು ರನೌಟ್ ಮಾಡಲು ಎಸೆದ ಥ್ರೋ ಆಗಿರಬೇಕು ಅಥವಾ ರನ್ ಓಡುವುದನ್ನು ತಡೆಯಲು ಎಸೆದ ಥ್ರೋ ಆಗಿರಬೇಕು ತಿಳಿಸಲಾಗಿದೆ.
  8. ಡೆಡ್ ಬಾಲ್ ನಿಯಮ: ಚೆಂಡು ಸಂಪೂರ್ಣವಾಗಿ ಯಾರಾದರೂ ಒಬ್ಬ ಫೀಲ್ಡರ್ ಕೈ ಸೇರಿದರೆ ಅಥವಾ ಮೈದಾನದಲ್ಲಿ ಒಂದೆಡೆ ಚಲನೆ ಇಲ್ಲದೆ ನಿಂತರೆ, ಅಂಪೈರ್ ಅದನ್ನು ‘ಡೆಡ್ ಬಾಲ್’ ಎಂದು ಘೋಷಿಸಬಹುದು. ಚೆಂಡು ಕಡ್ಡಾಯವಾಗಿ ವಿಕೆಟ್ ಕೀಪರ್ ಅಥವಾ ಬೌಲರ್ ಕೈಗೇ ಬರಬೇಕು ಎಂಬ ಹಳೇ ನಿಯಮವನ್ನು ಇಲ್ಲಿ ಸಡಿಲಗೊಳಿಸಲಾಗಿದೆ.
  9. ಫೀಲ್ಡಿಂಗ್ ನಿಯಮ: ಬೌಲರ್ ಚೆಂಡನ್ನು ಎಸೆಯುವ ನಿಖರ ಕ್ಷಣದಲ್ಲಿ ಮೈದಾನದಲ್ಲಿರುವ ಎಲ್ಲಾ ಫೀಲ್ಡರ್‌ಗಳು ಕಡ್ಡಾಯವಾಗಿ ಬೌಂಡರಿ ಗೆರೆಯ ಒಳಗೇ ಇರಬೇಕು. ಬೌಂಡರಿ ಗೆರೆಯ ಹೊರಗೆ ನಿಂತು ಅಥವಾ ಗೆರೆಯನ್ನು ದಾಟಿ ಓಡಿ ಬಂದು ಫೀಲ್ಡಿಂಗ್ ಮಾಡುವಂತಿಲ್ಲ. ಕ್ರಿಕೆಟ್ ಆಟವು ಸಂಪೂರ್ಣವಾಗಿ ಬೌಂಡರಿ ಗೆರೆಯ ಒಳಗಡೆಯೇ ನಡೆಯಬೇಕು ಎಂಬ ಉದ್ದೇಶದಿಂದ ಲೋಪದೋಷವನ್ನು ಸರಿಪಡಿಸಲಾಗಿದೆ.
  10. ಸ್ಟ್ರೈಕರ್ ಚೇಂಜ್ ನಿಯಮ: ಬ್ಯಾಟರ್ ಯಾರಾದರೂ ಫೀಲ್ಡರ್ ಕ್ಯಾಚ್ ಹಿಡಿಯುವುದಕ್ಕೆ ಅಡ್ಡ ಬಂದು ಔಟ್ ಆದಾಗ, ಕ್ರೀಸ್‌ನಲ್ಲಿ ಉಳಿಯುವ ಇನ್ನೊಬ್ಬ ಬ್ಯಾಟರ್ ಮುಂದಿನ ಎಸೆತವನ್ನು ಎದುರಿಸಬೇಕೇ (ಸ್ಟ್ರೈಕ್ ತಗೋಬೇಕೇ) ಅಥವಾ ನಾನ್-ಸ್ಟ್ರೈಕರ್ ಎಂಡ್‌ನಲ್ಲಿ ಇರಬೇಕೇ ಎಂಬುದನ್ನು ಫೀಲ್ಡಿಂಗ್ ತಂಡದ ನಾಯಕನೇ ನಿರ್ಧರಿಸಬಹುದು.

ಇದನ್ನೂ ಓದಿ: 3 ಖಂಡಗಳ 6 ದೇಶಗಳಲ್ಲಿ ಮುಂದಿನ ಫಿಫಾ ವಿಶ್ವಕಪ್​!

2026-27ರ ದೇಶೀಯ ಕ್ರಿಕೆಟ್​ ಸೀಸನ್‌ನಿಂದ ಜಾರಿಗೆ ಬರಲಿರುವ ಈ ಕಠಿಣ ನಿಯಮಗಳು ಮೈದಾನದಲ್ಲಿ ಶಿಸ್ತನ್ನು ಹೆಚ್ಚಿಸುವುದರ ಜೊತೆಗೆ, ಕ್ರಿಕೆಟ್ ಆಟವನ್ನು ಇನ್ನು ಹೆಚ್ಚಿನ ತಾಂತ್ರಿಕ ನಿಖರತೆ ಹಾಗೂ ಪಾರದರ್ಶಕತೆಯತ್ತ ಕೊಂಡೊಯ್ಯಲಿವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

Source link

Exit mobile version