ಸಲ್ಮಾನ್ ತಡವಾಗಿ ಬರ್ತಿದ್ರು, ಹಾಗಾಗಿ ಸೆಟ್‌ನಲ್ಲೇ ಜಿಮ್ ಮಾಡ್ತಿದ್ದೆ: ಕಾಜಲ್ ಅಗರ್ವಾಲ್ – Kannada News | Kajal Aggarwal Critiques Bollywood Lack of Punctuality Shares Insights on Salman Khan Habits
ಬಾಲಿವುಡ್ (Bollywood) ಮತ್ತು ದಕ್ಷಿಣ ಭಾರತದ ಚಿತ್ರರಂಗದ ನಡುವೆ ಹೋಲಿಕೆ ಇಂದಿನದೇನಲ್ಲ. ಸೌತ್ ಸಿನಿಮಾಗಳ ಮೇಕಿಂಗ್, ಕಥೆ ಮತ್ತು ನಿರ್ದೇಶನದ ಶಿಸ್ತನ್ನು ನೋಡಿ ಬಾಲಿವುಡ್‌ನವರು ಕಲಿಯಬೇಕಾದದ್ದು ತುಂಬಾನೇ ಇದೆ ಎಂದು ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿರುತ್ತಾರೆ. ಇದೀಗ ಇದೇ ವಿಷಯವಾಗಿ ಸೌತ್ ಹಾಗೂ ನಾರ್ತ್ ಎರಡೂ ಕಡೆ ನಟಿಸಿ ಸೈ ಎನಿಸಿಕೊಂಡಿರುವ ಸ್ಟಾರ್ ನಟಿ ಕಾಜಲ್ ಅಗರ್ವಾಲ್ ಮುಕ್ತವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ, ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಅವರ ಕೆಟ್ಟ ಅಭ್ಯಾಸವೊಂದನ್ನು ರಿವೀಲ್ ಮಾಡಿದ್ದಾರೆ. ಬಾಲಿವುಡ್‌ಗಿಂತ ಸೌತ್ ಇಂಡಸ್ಟ್ರಿನೇ…