ನೋ ಬಾಲ್ ಎಸೆದರೆ ಬೌಲರ್ ಬೌಲ್ಡ್: 10 ಹೊಸ ನಿಯಮ ಪರಿಚಯಿಸಿದ ಬಿಸಿಸಿಐ – Kannada News | BCCI Introduces Strict 10 New Rules in Domestic Cricket
ಭಾರತೀಯ ದೇಶಿ ಕ್ರಿಕೆಟ್‌ನಲ್ಲಿ ಇನ್ಮುಂದೆ ಬೌಲರ್‌ಗಳು ತಪ್ಪು ಮಾಡಿದರೆ ಭಾರಿ ಬೆಲೆ ತೆರಬೇಕಾಗುತ್ತದೆ. ಮುಂಬರುವ 2026–27ರ ದೇಶಿಯ ಕ್ರಿಕೆಟ್ ಸೀಸನ್‌ನಿಂದ ಜಾರಿಗೆ ಬರುವಂತೆ, ಬಿಸಿಸಿಐ ಅತ್ಯಂತ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಯಾವುದೇ ಬೌಲರ್ ಉದ್ದೇಶಪೂರ್ವಕವಾಗಿ ಫ್ರಂಟ್-ಫುಟ್ ನೋ-ಬಾಲ್ ಅಥವಾ ಬೀಮರ್ ಎಸೆದರೆ, ಅವರನ್ನು ಇಡೀ ಪಂದ್ಯದಿಂದಲೇ ಬೌಲಿಂಗ್ ಮಾಡದಂತೆ ಅಮಾನತುಗೊಳಿಸಲಾಗುತ್ತದೆ. ಹಳೆಯ ನಿಯಮದ ಪ್ರಕಾರ, ಇಂತಹ ತಪ್ಪು ಮಾಡಿದ ಬೌಲರ್‌ಗೆ ಕೇವಲ ಆ ನಿರ್ದಿಷ್ಟ ಇನ್ನಿಂಗ್ಸ್‌ನಲ್ಲಿ ಮಾತ್ರ ಬೌಲಿಂಗ್ ಮಾಡದಂತೆ ನಿಷೇಧ ಹೇರಲಾಗುತ್ತಿತ್ತು….