Sikkim Tunnel Collapse: ಸಿಕ್ಕಿಂ ಸುರಂಗ ದುರಂತ: ಮೀಥೇನ್ ಅನಿಲ ಸ್ಫೋಟಕ್ಕೆ ಬಲಿಯಾದ ಕಾರ್ಮಿಕರ ಸಂಖ್ಯೆ 20ಕ್ಕೆ ಏರಿಕೆ, ಕುಟುಂಬಕ್ಕೆ ಪ್ರಧಾನಿ ಪರಿಹಾರ – Kannada News | Sikkim Tunnel Tragedy: Methane Gas Explosion Kills 20 Workers, PM Announces Aid
ಗ್ಯಾಂಗ್‌ಟಾಕ್, ಜುಲೈ 22: ಸಿಕ್ಕಿಂನ ನಾಮ್ಚಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಮೀಥೇನ್ ಅನಿಲ ಸ್ಫೋಟಗೊಂಡು ಸಂಭವಿಸಿದ ಭೂಕುಸಿತ(Landslide)ದಿಂದಾಗಿ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಜುಲೈ20ರಂದು ಮಧ್ಯಾಹ್ನ ಸಮರ್ದುಂಗ್ನಲ್ಲಿರುವ ಎನ್‌ಎಚ್‌ಪಿಸಿ ತೀಸ್ತಾ ಹಂತ VI ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದ ಪರಿಣಾಮ 25 ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದರು. ಒಳಗೆ ಸಿಲುಕಿದ್ದ 25 ಮಂದಿ ಪೈಕಿ 20 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಸ್ಫೋಟಕ್ಕೆ ಕಾರಣವೇನು? ಎನ್‌ಎಚ್‌ಪಿಸಿ ನೀಡಿರುವ ಮಾಹಿತಿಯ ಪ್ರಕಾರ, ಸುರಂಗದ ಒಳಗಿದ್ದ…