ಸಿಲಿಕಾನ್ ಸಿಟಿಯಲ್ಲಿ ದಿಢೀರ್ ಮಳೆರಾಯನ ಆರ್ಭಟ!: ಮಲ್ಲೇಶ್ವರಂ, ವಿಜಯನಗರದಲ್ಲಿ ಧಾರಾಕಾರ ಮಳೆ: ಜೂನ್ 11ರವರೆಗೆ ಈ ಭಾಗದಲ್ಲೂ ಭಾರಿ ಮಳೆ – Kannada News

ಬೆಂಗಳೂರು, ಜೂ.6: ರಾಜಧಾನಿ ಬೆಂಗಳೂರಿನ ಸಾರ್ವಜನಿಕರಿಗೆ ಮಳೆರಾಯ ಶನಿವಾರ ಮಧ್ಯಾಹ್ನ ಬಿಗ್ ಶಾಕ್ ನೀಡಿದ್ದಾನೆ. ನಗರದ ಕೇಂದ್ರ ಭಾಗ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿ ಹಠಾತ್ ಧಾರಾಕಾರ ಮಳೆ ಸುರಿದಿದ್ದು, ವಾರಾಂತ್ಯದ ಮೂಡ್‌ನಲ್ಲಿದ್ದ ಐಟಿ ಸಿಟಿ ಜನರಿಗೆ ಬಿಗ್​ ಶಾಕ್ ನೀಡಿದೆ. ಮುಂಗಾರು ಮಾರುತಗಳ ಆರ್ಭಟದ ಹಿನ್ನೆಲೆಯಲ್ಲಿ ನಗರದಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದೆ. ನಗರದ ಹೃದಯಭಾಗವಾದ ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ವಿಜಯನಗರ, ವಸಂತನಗರ, ಪ್ಯಾಲೇಸ್ ಗುಟ್ಟಹಳ್ಳಿ, ಕಾಟನ್​ಪೇಟೆ, ಕಾರ್ಪೋರೇಷನ್, ಚಿಕ್ಕಪೇಟೆ ಮತ್ತು ಗಾಂಧಿನಗರ ಸೇರಿದಂತೆ ಸುತ್ತಮುತ್ತಲಿನ ಬಹುತೇಕ ರಸ್ತೆಗಳಲ್ಲಿ ಮಳೆ ಸುರಿದಿದೆ. ದಿಢೀರ್ ಆಗಿ ಬಂದ ಮಳೆಯಿಂದಾಗಿ ರಸ್ತೆಗಳೆಲ್ಲಾ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.

ದಿಢೀರ್ ಆಗಿ ಮಳೆ ಸುರಿದಿದ್ದರಿಂದ ರಸ್ತೆಯಲ್ಲಿದ್ದ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಆಶ್ರಯ ಪಡೆಯಲು ಜಾಗವಿಲ್ಲದೆ ತೀವ್ರ ತೊಂದರೆ ಅನುಭವಿಸಿದರು. ಮೇಲ್ಸೇತುವೆಗಳು, ನಮ್ಮ ಮೆಟ್ರೋ ನಿಲ್ದಾಣಗಳು ಮತ್ತು ಬಸ್ ತಂಗುದಾಣಗಳ ಅಡಿಯಲ್ಲಿ ಸವಾರರು ಬೈಕ್ ನಿಲ್ಲಿಸಿದ್ದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ವ್ಯಾಪಾರ ವಹಿವಾಟಿಗೆ ಹೆಸರಾದ ಚಿಕ್ಕಪೇಟೆ, ಮೆಜೆಸ್ಟಿಕ್ ಮಾರುಕಟ್ಟೆ ಭಾಗದಲ್ಲಿ ರಸ್ತೆ ಬದಿಯ ವ್ಯಾಪಾರಿಗಳು ಮಳೆಯಿಂದ ತಮ್ಮ ಸಾಮಗ್ರಿಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡಬೇಕಾಯಿತು.

ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಜೂನ್ 11ರವರೆಗೆ ಭಾರಿ ಮಳೆ:

ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಮಾರುತಗಳು ಮತ್ತಷ್ಟು ತೀವ್ರಗೊಂಡಿದ್ದು, ಇಡೀ ರಾಜ್ಯವನ್ನು ಆವರಿಸಿಕೊಳ್ಳುತ್ತಿವೆ. ಜೂನ್ 5 ರಂದೇ ಮುಂಗಾರು ಮಾರುತಗಳು ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಿಗೆ ಯಶಸ್ವಿಯಾಗಿ ಪ್ರವೇಶಿಸಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮತ್ತು ಹವಾಮಾನ ಇಲಾಖೆ ಜಂಟಿ ಪ್ರಕಟಣೆಯಲ್ಲಿ ತಿಳಿಸಿವೆ. ಮುಂದಿನ 2 ರಿಂದ 3 ದಿನಗಳಲ್ಲಿ ರಾಜ್ಯದ ಇನ್ನುಳಿದ ಭಾಗಗಳಿಗೂ ಮುಂಗಾರು ವ್ಯಾಪಿಸಲು ವಾತಾವರಣ ಪೂರಕವಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜೂನ್ 6 ರಿಂದ ಜೂನ್ 11 ರವರೆಗೆ ರಾಜ್ಯದ ವಿವಿಧ ವಲಯಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಲಿದೆ.

ಇದನ್ನೂ ಓದಿ: ಮಳೆಗಾಲ ಆರಂಭವಾದರೂ ಜೋಗಿಮಟ್ಟಿ ವೀಕ್ಷಣೆಗೆ ಇನ್ನೂ ನಿರ್ಬಂಧ: ಪ್ರವಾಸಿಗರಿಂದ ಅರಣ್ಯ ಇಲಾಖೆಗೆ ಹಿಡಿಶಾಪ

ಕರಾವಳಿ ಕರ್ನಾಟಕ :

ಜೂನ್ 6 ರಿಂದ 11 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾದ ಸಾಧಾರಣ ಮಳೆಯಾಗಲಿದ್ದು, ಕೆಲವು ಕಡೆಗಳಲ್ಲಿ ಭಾರಿ (64.5mm – 115.4mm) ಹಾಗೂ ಅತಿ ಭಾರಿ (115.5mm – 204.4mm) ಮಳೆಯಾಗುವ ಸಾಧ್ಯತೆಯಿದೆ. ಧಾರಾಕಾರ ಮಳೆಯಿಂದಾಗಿ ಕರಾವಳಿಯ ತಗ್ಗು ಪ್ರದೇಶಗಳಲ್ಲಿ ಹಠಾತ್ ಪ್ರವಾಹ (Flash Floods) ಹಾಗೂ ನಗರ ಪ್ರದೇಶಗಳಲ್ಲಿ ರಸ್ತೆ ಜಲಾವೃತಗೊಳ್ಳುವ (Urban Water Logging) ಭೀತಿ ಎದುರಾಗಿದೆ. ಮುನ್ನೆಚ್ಚರಿಕೆಯಾಗಿ ಈಗಾಗಲೇ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.

ಮಲೆನಾಡು ಭಾಗ :

ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನ ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಜೂನ್ 11 ರವರೆಗೆ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ವಿಶೇಷವಾಗಿ ಜೂನ್ 6 ರಿಂದ ಜೂನ್ 10 ರವರೆಗೆ ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ.

ಉತ್ತರ ಒಳನಾಡು

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಜೂನ್ 6 ರಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗಲಿದ್ದು, ಜೂನ್ 9 ರವರೆಗೆ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡು

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ 6 ದಿನಗಳ ಕಾಲ ಅಲ್ಲಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಮುಂದಿನ ದಿನಗಳಲ್ಲಿ ಮಳೆಯ ಮುನ್ಸೂಚನೆಯ ನಿಖರತೆ ಬದಲಾಗಬಹುದಾಗಿದ್ದರಿಂದ, ಸಾರ್ವಜನಿಕರು ಹಾಗೂ ರೈತರು ಹವಾಮಾನ ಇಲಾಖೆಯ ಅಧಿಕೃತ ಸೂಚನೆಗಳನ್ನು ಗಮನಿಸಿ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ಅಫ್ಘನ್ ವಿರುದ್ಧ 12ನೇ ಟೆಸ್ಟ್ ಶತಕ ಬಾರಿಸಿದ ಕನ್ನಡಿಗ ಕೆಎಲ್ ರಾಹುಲ್‌ – Kannada News

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯ ಜೂನ್ 6 ರ ಶನಿವಾರದಿಂದ ನ್ಯೂ ಚಂಡೀಗಢದ ಮಹಾರಾಜ ಯಾದವೇಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ರಾರಂಭವಾಗಿದೆ. ಎಂಟು ವರ್ಷಗಳ ನಂತರ ಎರಡೂ ದೇಶಗಳ ನಡುವೆ ಈ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್‌ ಆಯ್ದುಕೊಂಡಿತು. ಅದರಂತೆ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಕನ್ನಡಿಗ ಕೆಎಲ್ ರಾಹುಲ್ ಟೆಸ್ಟ್ ಪಂದ್ಯದ ಮೊದಲ ದಿನವೇ ಭರ್ಜರಿ ಶತಕ ಬಾರಿಸಿದ್ದಾರೆ. ತಮ್ಮ ಟೆಸ್ಟ್ ವೃತ್ತಿಜೀವನದ 68 ನೇ ಪಂದ್ಯವನ್ನಾಡುತ್ತಿರುವ ರಾಹುಲ್ 12ನೇ ಟೆಸ್ಟ್ ಶತಕವನ್ನು ಬಾರಿಸಿದ್ದಾರೆ. ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 164 ಎಸೆತಗಳನ್ನು ಎದುರಿಸಿದ ರಾಹುಲ್ 11 ಬೌಂಡರಿಗಳ ಸಹಿತ ಶತಕದ ಗಡಿ ದಾಟಿದರು.

Published On – 3:22 pm, Sat, 6 June 26

Source link

ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟ ಅತಿ ಕಿರಿಯ; ಸಚಿನ್ ದಾಖಲೆ ಮುರಿದ ವೈಭವ್

Source link

ಮಳೆಗಾಲ ಆರಂಭವಾದರೂ ಜೋಗಿಮಟ್ಟಿ ವೀಕ್ಷಣೆಗೆ ಇನ್ನೂ ನಿರ್ಬಂಧ: ಪ್ರವಾಸಿಗರಿಂದ ಅರಣ್ಯ ಇಲಾಖೆಗೆ ಹಿಡಿಶಾಪ – Kannada News

ಚಿತ್ರದುರ್ಗ, ಜೂನ್​​ 06: ಬಯಲುಸೀಮೆಯ ಊಟಿ ಎಂದೇ ಖ್ಯಾತಿ ಪಡೆದಿರುವ ಜೋಗಿಮಟ್ಟಿ (Jogi Matti)  ವನ್ಯಜೀವಿಧಾಮ ವೀಕ್ಷಣೆಗೆ ನಿತ್ಯ ನೂರಾರು ಜನರು ಆಗಮಿಸುತ್ತಾರೆ. ಬೇಸಿಗೆ ಕಾಲದಲ್ಲಿ ಜೋಗಿಮಟ್ಟಿ ಪ್ರವೇಶಕ್ಕೆ ಅರಣ್ಯ ಇಲಾಖೆ ಇತ್ತೀಚೆಗೆ ನಿರ್ಬಂಧ ವಿಧಿಸಿತ್ತು. ಆದರೆ ಮಳೆಗಾಲ (Monsoon) ಆರಂಭವಾದರೂ ನಿರ್ಬಂಧ ತೆರವುಗೊಳಿಸದಿರುವುದು ಪರಿಸರ ಪ್ರಿಯರ ಹಿಡಿಶಾಪಕ್ಕೆ ಗುರಿ ಆಗಿದೆ.

ಮುಖ್ಯಾಂಶಗಳು

  • ಬೇಸಿಗೆ ಕಾಲದಲ್ಲಿ ಬೆಂಕಿ ಅವಘಡ ತಪ್ಪಿಸಲು ಅರಣ್ಯ ಪ್ರವೇಶಕ್ಕೆ ನಿರ್ಬಂಧ.
  • ಮಳೆಗಾಲ ಶುರುವಾದರೂ ನಿರ್ಬಂಧ ತೆರವುಗೊಳಿಸದ ಅಧಿಕಾರಿಗಳು.
  • ಜೋಗಿಮಟ್ಟಿ ಸೊಬಗು ಸವಿಯಲು ಬಂದವರಿಗೆ ನಿರಾಸೆ.

ಪರಿಸರ ಪ್ರಿಯರು, ಪ್ರವಾಸಿಗರು ಬೇಸರ

ಕೋಟೆನಾಡು ಚಿತ್ರದುರ್ಗದ ಬಳಿರುವ ಜೋಗಿಮಟ್ಟಿ ವನ್ಯಧಾಮ ಕುರುಚಲು ಕಾಡಾಗಿದ್ದು, ಬೇಸಿಗೆಯಲ್ಲಿ ಗಿಡಮರಗಳು ಒಣಗಿ ನಿಂತಿರುತ್ತವೆ. ಸಣ್ಣ ಎಡವಟ್ಟನಿಂದ ಅರಣ್ಯವೇ ಹೊತ್ತಿ ಉರಿಯುವ ಸಾಧ್ಯತೆ ಇದೆ. ಬೆಂಕಿ ಹೊತ್ತಿದರೆ ಅರಣ್ಯದ ಜೊತೆಗೆ ಪ್ರಾಣಿ, ಪಕ್ಷಿಗಳಿಗೂ ತೊಂದರೆ ಆಗಲಿದೆ. ಹೀಗಾಗಿ ಬೇಸಿಗೆಯಲ್ಲಿ ಜೋಗಿಮಟ್ಟಿ ಪ್ರವೇಶಕ್ಕೆ ನಿರ್ಬಂಧಿಸಲಾಗುತ್ತದೆ. ಆದರೆ ಮಳೆಗಾಲ ಆರಂಭವಾದರೂ ನಿರ್ಬಂಧ ತೆರವುಗೊಳಿಸದೇ ಇರುವುದು ಪರಿಸರ ಪ್ರಿಯರಿಗೆ ಬೇಸರ ಮೂಡಿಸಿದೆ.

ಇದನ್ನೂ ಓದಿ: ಜೂ.1ರಿಂದ ಆ. 31ರವರೆಗೆ ದಾಂಡೇಲಿಗೆ ನೋ ಎಂಟ್ರಿ; ಸ್ಕೂಬಾ ಡೈವಿಂಗ್, ರ್ಯಾಫ್ಟಿಂಗ್‌ಗೆ ಬ್ರೇಕ್ ಹಾಕಿದ ಉತ್ತರ ಕನ್ನಡ ಡಿಸಿ

ಹಸಿರಿನಿಂದ ಕಂಗೊಳಿಸುತ್ತಿರುವ ಜೋಗಿಮಟ್ಟಿ ವೀಕ್ಷಣೆಗೆ ಬರುವ ಅನೇಕರು ನಿರಾಸೆಯಿಂದ ವಾಪಸ್ ಹೋಗುವಂತಾಗಿದ್ದು, ಅರಣ್ಯ ಇಲಾಖೆಗೆ ಇನ್ನೂ ಮಳೆಗಾಲವೇ ಶುರುವಾಗಿಲ್ವಾ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು ಅರಣ್ಯ ಇಲಾಖೆಗೆ ಬರುವ ಆದಾಯಕ್ಕೂ ಕತ್ತರಿ ಬಿದ್ದಂತಾಗಿದೆ.

ಇನ್ನೊಂದು ಮಳೆ ಬಂದ ಮರುದಿನವೇ ನಿರ್ಬಂಧ ತೆರವು: ಗೋಪ್ಯಾ ನಾಯ್ಕ್

ಇನ್ನು ಪ್ರತಿನಿತ್ಯ ಜೋಗಿಮಟ್ಟಿ ಗೇಟ್ ಬಳಿಗೆ ಬರುವ ಅನೇಕ ಪ್ರವಾಸಿಗರು, ಪರಿಸರ ಪ್ರೇಮಿಗಳು ನಿರಾಸೆಯಿಂದ ವಾಪಸ್ ತೆರಳುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾ ನಾಯ್ಕ್ ಅವರನ್ನು ಕೇಳಿದರೆ, ಇನ್ನು ಕೆಲವೆಡೆ ಗಿಡಮರಗಳು ಒಣಗಿರುವ ಮಾಹಿತಿ ಇದೆ. ಇನ್ನೊಂದು ಮಳೆ ಬರಲಿ ಎಂದು ಕಾದಿದ್ದೇವೆ. ಮಳೆ ಬಂದ ಮರುದಿನವೇ ಜೋಗಿಮಟ್ಟಿ ಪ್ರವೇಶ ನಿರ್ಬಂಧ ತೆರವುಗೊಳಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ಮಾಜಿ ಜಿಪಂ ಸದಸ್ಯನಿಂದಲೇ ಖಾದಿ ಸಹಕಾರ ಸಂಘದ ಕೋಟ್ಯಂತರ ಆಸ್ತಿ ಕಬಳಿಕೆ

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಜೋಗಿಮಟ್ಟಿ ವನ್ಯಧಾಮ ವೀಕ್ಷಣೆಗೆ ವಿಧಿಸಿದ್ದ ನಿರ್ಬಂಧ ಇನ್ನೂ ತೆರವುಗೊಳಿಸದಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಅರಣ್ಯ ಇಲಾಖೆ ಈ ಬಗ್ಗೆ ಗಮನಹರಿಸಬೇಕಿದೆ. ಪರಿಸರ ಪ್ರಿಯರಿಗೆ, ಪ್ರವಾಸಿಗರಿಗೆ ಜೋಗಿಮಟ್ಟಿ ಅರಣ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಶಿವಣ್ಣನಿಗೂ ಹೀಗೆ ಕೇಳ್ತೀರಾ’; ಸಂಚಿತ್ ಎಂಟ್ರಿ ನೆಪೋಟಿಸಂ ಎಂದವರಿಗೆ ಸುದೀಪ್ ಖಡಕ್ ಉತ್ತರ – Kannada News

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ‘ಮ್ಯಾಂಗೋ ಪಚ್ಚ’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾ ಎಲ್ಲೆಡೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸುದೀಪ್ ಅವರಿಗೆ ಮಾಧ್ಯಮಗಳಿಂದ ‘ನೆಪೋಟಿಸಂ’ ಕುರಿತು ನೇರ ಪ್ರಶ್ನೆ ಎದುರಾಗಿದೆ. ಈ ವೇಳೆ ಸುದೀಪ್ ಹಾಗೂ ಸಂಚಿತ್ ಇಬ್ಬರೂ ಖಡಕ್ ಉತ್ತರ ನೀಡಿದ್ದಾರೆ.

ಖುಷಿ ಎಲ್ಲರಿಗೂ ಕಾಣುತ್ತಿದೆ ಎಂದ ಸಂಚಿತ್:

ಮೊದಲ ಸಿನಿಮಾದಲ್ಲೇ ತಮ್ಮ ನಟನೆಯ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿರುವ ಸಂಚಿತ್ ಸಂಜೀವ್ ನೆಪೋಟಿಸಂ ಕುರಿತು ಮಾತನಾಡಿ, ‘ನಾನು ಸಿನಿಮಾದಲ್ಲಿ ಒಳ್ಳೆಯ ಕೆಲಸ ಮಾಡಿದ್ದೇನೆ ಎಂಬುದು ನನ್ನ ನಂಬಿಕೆ. ಆ ಖುಷಿ ಈಗ ಎಲ್ಲರಿಗೂ ಕಾಣಿಸುತ್ತಿದೆ’ ಎಂದು ಸರಳವಾಗಿ ಉತ್ತರಿಸಿದರು.

ಬಾಲಿವುಡ್ ಪ್ರಶ್ನೆ ಇಲ್ಲಿ ಕೇಳಬೇಡಿ ಎಂದ ಕಿಚ್ಚ:

ನೆಪೋಟಿಸಂ ಬಗ್ಗೆ ಕೇಳಿದ ಪ್ರಶ್ನೆಗೆ ಸಖತ್ ಗರಂ ಆದ ಕಿಚ್ಚ ಸುದೀಪ್ ನೇರವಾಗಿಯೇ ಕೌಂಟರ್ ಕೊಟ್ಟರು. ‘ಈ ಪ್ರಶ್ನೆಯನ್ನು ನೀವು ಎಲ್ಲರಿಗೂ ಕೇಳ್ತೀರಾ? ದೊಡ್ಮನೆಯಿಂದ ಇದು ಆರಂಭ ಆಯ್ತಲ್ಲ. ಶಿವಣ್ಣನಿಗೆ ಎಂದಾದರೂ ಈ ಪ್ರಶ್ನೆ ಕೇಳಿದ್ರಾ? ಅವರಿಗೆ ಯಾಕೆ ಕೇಳಿಲ್ಲ? ಕೇಳುವುದಾದರೆ ಪ್ರತಿಯೊಬ್ಬರಿಗೂ ಕೇಳಬೇಕು. ಅಂಬಾನಿ ಮಗನಿಗೆ ಯಾಕೆ ನೆಪೋಟಿಸಂ ಬಗ್ಗೆ ಕೇಳೋದಿಲ್ಲ’ ಎಂದು ಪ್ರಶ್ನಿಸಿದರು.

‘ವರನಟ ಡಾ. ರಾಜ್​​ಕುಮಾರ್ ಅವರ ಸಮಯದಿಂದಲೂ ಕುಟುಂಬದವರಿಗೆ ಆ ಯೋಗ್ಯತೆ ಮತ್ತು ಅರ್ಹತೆ ಇದ್ದು, ಕನ್ನಡ ಜನತೆ ಇಷ್ಟಪಟ್ಟರೆ ಮಾತ್ರ ಉಳಿದುಕೊಳ್ಳುತ್ತಾರೆ. ಇದು ಯಾರಪ್ಪನ ಜಾಗವೂ ಅಲ್ಲ. ದೊಡ್ಮನೆಯಿಂದ ಬಂದ ಶಿವಣ್ಣ ಹಾಗೂ ಅಪ್ಪು ಅವರಿಂದ ಎಷ್ಟೋ ಜನಕ್ಕೆ ಒಳ್ಳೇದಾಗಿದೆ. ಅದಕ್ಕೆ ಅವರಲ್ಲಿರುವ ಪ್ರತಿಭೆ ಕಾರಣವೇ ಹೊರತು ನೆಪೋಟೀಸಮ್ ಅಲ್ಲ’ ಎಂದರು.

ಕಲೆ ಇದ್ದರೆ ಮಾತ್ರ ಬೆಳಿತಾರೆ:

ತಮ್ಮ ಕುಟುಂಬದ ಉದಾಹರಣೆ ನೀಡಿದ ಸುದೀಪ್, ‘ನಂಗೆ ನನ್ನ ಅಪ್ಪ ಇದ್ದಾರೆ, ಅವನಿಗೆ ಮಾವನಾಗಿ ನಾನು ಇದ್ದೀನಿ. ನನ್ನ ಮಗಳಿಗೆ ಸಿಂಗಿಂಗ್ ಅಲ್ಲಿ ಇಂಟ್ರೆಸ್ಟ್ ಇತ್ತು ಅದಕ್ಕೆ ಬಂದಿದ್ದಾಳೆ. ಇವನಿಗೆ (ಸಂಚಿತ್) ಆಕ್ಟಿಂಗ್ ಇಷ್ಟ ಇತ್ತು ಬಂದಿದ್ದಾನೆ. ನಮ್ಮ ಮನೆಯಲ್ಲಿ ಇನ್ನು ತುಂಬಾ ಜನ ಅಕ್ಕನ ಮಕ್ಕಳೆಲ್ಲ ಇದ್ದಾರೆ, ಅವರು ಯಾರೂ ಸಿನಿಮಾ ರಂಗಕ್ಕೆ ಬಂದಿಲ್ಲ’ ಎಂದರು.

ಇದನ್ನೂ ಓದಿ: ‘ಮ್ಯಾಂಗೋ ಪಚ್ಚ’ ರಿಲೀಸ್ ಬೆನ್ನಲ್ಲೇ ಕಿಚ್ಚ ಸುದೀಪ್ ಸುದ್ದಿಗೋಷ್ಠಿ

‘ಕನ್ನಡ ಚಿತ್ರರಂಗದಲ್ಲಿ ನೆಪೋಟೀಸಂ ಅನ್ನೋ ಪ್ರಶ್ನೆಯೇ ಬರೋದಿಲ್ಲ. ಆ ಬಾಲಿವುಡ್ ಪ್ರಶ್ನೆಯನ್ನು ತಂದು ಇಲ್ಲಿ ಕೇಳಬೇಡಿ. ಇಲ್ಲಿ ಕಲೆ ಇದ್ರೆ ಮಾತ್ರ ಬೆಳೆಯಲು ಸಾಧ್ಯ’ ಎಂದು ಖಡಾಖಂಡಿತವಾಗಿ ಹೇಳುವ ಮೂಲಕ ನೆಪೋಟಿಸಂ ಚರ್ಚೆಗೆ ಮುಕ್ತಾಯ ಹಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಲಕ್ಷಾಂತರ ರೂ. ಅನುದಾನ ಕೊಟ್ಟರೂ ಜಿಲ್ಲೆಯಲ್ಲಿ ಗಾಂಜಾ, ಬೆಟ್ಟಿಂಗ್ ನಿಂತಿಲ್ಲ ಯಾಕೆ’?: ಕೋಲಾರ ಎಸ್ಪಿಗೆ ಶಾಸಕ ಸಮೃದ್ಧಿ ಮಂಜುನಾಥ್ ತರಾಟೆ – Kannada News

ಶಾಸಕ ಸಮೃದ್ಧಿ ಮಂಜುನಾಥ್ , ಎಸ್ಪಿ ಕನ್ನಿಕಾ ಸಿಕ್ರಿವಾಲ್

ಕೋಲಾರ, ಜೂ.6: ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ (ದಿಶಾ) ಸಭೆಯಲ್ಲಿ ಕೋಲಾರ ಜಿಲ್ಲೆಯ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ವಿಚಾರವಾಗಿ ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕನ್ನಿಕಾ ಸಿಕ್ರಿವಾಲ್ ಅವರನ್ನು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳು ಮಿತಿಮೀರಿದ್ದರೂ ಪೊಲೀಸ್ ಇಲಾಖೆ ಮೌನವಾಗಿದೆ ಎಂದು ಅವರು ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕೋಲಾರದಲ್ಲಿ ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳು, ರೌಡಿಸಂ, ಡ್ರಗ್ಸ್ ಹಾಗೂ ಗಾಂಜಾ ಮಾರಾಟ ಜಾಲ ವ್ಯಾಪಕವಾಗಿ ಹೆಚ್ಚಾಗಿದೆ ಎಂದು ಶಾಸಕರು ಗಂಭೀರ ಆರೋಪ ಮಾಡಿದರು. “ಜಿಲ್ಲೆಯೊಂದರಲ್ಲೇ ಬರೋಬ್ಬರಿ 7 ಜನ ಪ್ರಮುಖ ಕ್ರಿಕೆಟ್ ಬೆಟ್ಟಿಂಗ್ ಕಿಂಗ್‌ಪಿನ್‌ಗಳಿದ್ದಾರೆ. ಇವರ ವಿರುದ್ಧ ಇಲಾಖೆ ಕೈಗೊಂಡಿರುವ ಕ್ರಮಗಳೇನು? ಎಷ್ಟು ಜನರ ವಿರುದ್ಧ ಕಟ್ಟುನಿಟ್ಟಿನ ಕೇಸ್ ದಾಖಲಿಸಿದ್ದೀರಿ?” ಎಂದು ಎಸ್ಪಿಯವರನ್ನು ನೇರವಾಗಿ ಪ್ರಶ್ನಿಸಿದರು.

ಇದನ್ನೂ ಓದಿ: ಮಂಗಳೂರು ಬಳಿ ಡ್ರಗ್ಸ್ ಸಾಗಿಸುತ್ತಿದ್ದ ಮೂವರು ಪೊಲೀಸ್ ಬಲೆಗೆ: ಕಲಬುರಗಿಯಲ್ಲಿ ವಂಚಿಸುತ್ತಿದ್ದ ಬಿಹಾರಿಗಳ ಬಂಧನ

ಇಲ್ಲಿದೆ ನೋಡಿ ವಿಡಿಯೋ:

ಕೋಲಾರವು ಗಡಿ ಜಿಲ್ಲೆಯಾಗಿರುವುದರಿಂದ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಸರಣಿಯಾಗಿ ನಡೆಯುತ್ತಿವೆ. ಆದರೆ, ಸಾರ್ವಜನಿಕರಲ್ಲಿ ಕಾನೂನು ಮತ್ತು ಸುರಕ್ಷತೆಯ ಕುರಿತು ಅರಿವು ಮೂಡಿಸುವ ಯಾವುದೇ ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಳ್ಳುತ್ತಿಲ್ಲ ಎಂದು ಮಂಜುನಾಥ್ ಅಸಮಾಧಾನ ಹೊರಹಾಕಿದರು. “ಪೊಲೀಸ್ ಇಲಾಖೆಯ ಸುಧಾರಣೆಗಾಗಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ ಅಡಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಟ್ರಾಫಿಕ್ ಸಿಗ್ನಲ್ ಲೈಟ್‌ಗಳು ಹಾಗೂ ಇಲಾಖೆಯ ಬಳಕೆಗೆ 2 ಕಾರುಗಳನ್ನು ಕೊಡಿಸಲಾಗಿದೆ. ಇಷ್ಟೆಲ್ಲಾ ಸೌಲಭ್ಯ ನೀಡಿದರೂ ಜಿಲ್ಲೆಯಲ್ಲಿ ಅಪರಾಧಗಳು ನಿಯಂತ್ರಣಕ್ಕೆ ಬರುತ್ತಿಲ್ಲ ಏಕೆ?” ಎಂದು ತರಾಟೆಗೆ ತೆಗೆದುಕೊಂಡರು. ಶಾಸಕರ ಈ ಖಡಕ್ ಪ್ರಶ್ನೆಗಳಿಗೆ ಉತ್ತರಿಸಲು ಅಧಿಕಾರಿಗಳು ತಡಕಾಡಿದ ಪ್ರಸಂಗ ಸಭೆಯಲ್ಲಿ ನಡೆಯಿತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇನ್ನು ಮುಂದೆ ಅಪ್ಪ- ಅಮ್ಮ ಪದ ಬಳಸುವ ಹಾಗಿಲ್ಲ! ನ್ಯೂಯಾರ್ಕ್​ ಅಲ್ಲಿ ಈ ಹೊಸ ರೂಲ್ ಯಾಕೆ ಗೊತ್ತಾ? – Kannada News

ನ್ಯೂಯಾರ್ಕ್​, ಜೂನ್ 06: ಅಮೆರಿಕದ ಪ್ರಸಿದ್ಧ ನ್ಯೂಯಾರ್ಕ್ ರಾಜ್ಯದಲ್ಲಿ ಆಡಳಿತಾರೂಢ ಡೆಮೋಕ್ರಾಟ್ ಪಕ್ಷದ ನಾಯಕರು ಜಾರಿಗೆ ತರಲು ಹೊರಟಿರುವ ಹೊಸ ಮಸೂದೆಯೊಂದು ಈಗ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ. ರಾಜ್ಯದ ಮಕ್ಕಳ ಪಾಲನೆ ಮತ್ತು ಕೌಟುಂಬಿಕ ಕಾನೂನುಗಳಿಂದ ‘ತಾಯಿ’ (Mother) ಮತ್ತು ‘ತಂದೆ’ (Father) ಎಂಬ ಸಾಂಪ್ರದಾಯಿಕ ಹಾಗೂ ಭಾವನಾತ್ಮಕ ಪದಗಳನ್ನು ತೆಗೆದುಹಾಕಲು ಆಡಳಿತ ಪಕ್ಷ ಮುಂದಾಗಿದೆ. ತಾಯಿ-ತಂದೆ ಪದಗಳ ಬದಲಿಗೆ ಲಿಂಗ-ತಟಸ್ಥ (Gender-Neutral) ಪದಗಳನ್ನು ಬಳಸುವ ಈ ವಿಧೇಯಕವು ಸಂಸತ್ತಿನಲ್ಲಿ ಅಂಗೀಕಾರಗೊಂಡಿದ್ದು, ಈಗ ಗವರ್ನರ್ ಅವರ ಅಂಕಿತಕ್ಕಾಗಿ ಕಾಯುತ್ತಿದೆ.

ಮುಖ್ಯಾಂಶಗಳು

  • ನ್ಯೂಯಾರ್ಕ್ ಕೌಟುಂಬಿಕ ಕಾನೂನಿನಿಂದ ‘ತಾಯಿ’ ಮತ್ತು ‘ತಂದೆ’ ಪದಗಳ ಮುಕ್ತಾಯಕ್ಕೆ ತಿದ್ದುಪಡಿ.
  • ‘ತಾಯಿ’ ಪದದ ಬದಲು ‘ಗರ್ಭ ಧರಿಸಿದ ಪೋಷಕರು’ ಎಂದು ಬಳಸಲು ಡೆಮೋಕ್ರಾಟ್‌ಗಳ ವಿಧೇಯಕ.
  • ರಿಪಬ್ಲಿಕನ್ ನಾಯಕರಿಂದ ತೀವ್ರ ವಿರೋಧ; ‘ಇದು ವೋಕ್ ಸಂಸ್ಕೃತಿಯ ಹುಚ್ಚುತನ’ ಎಂದು ಆಕ್ರೋಶ.

ಹೊಸ ಕಾನೂನಿನ ಬದಲಾವಣೆಗಳೇನು?

ನ್ಯೂಯಾರ್ಕ್‌ನ ಡೆಮೋಕ್ರಾಟ್ ಶಾಸಕರು ಮಂಡಿಸಿರುವ ಈ ಹೊಸ ಕಾನೂನಿನ ಪ್ರಕಾರ, ಇನ್ಮುಂದೆ ಫ್ಯಾಮಿಲಿ ಕೋರ್ಟ್, ಶಿಕ್ಷಣ ಇಲಾಖೆ ಹಾಗೂ ಕೌಟುಂಬಿಕ ದಾಖಲೆಗಳಲ್ಲಿ ತಾಯಿ (Mother) ಎಂಬ ಪದದ ಜಾಗದಲ್ಲಿ ಗರ್ಭ ಧರಿಸಿದ ಪೋಷಕರು (Gestating Parent) ಎಂದು ಬಳಸಲಾಗುತ್ತದೆ. ತಂದೆ (Father) ಎಂಬ ಪದದ ಬದಲಿಗೆ ಗರ್ಭ ಧರಿಸದ ಪೋಷಕರು (Non-gestating Parent) ಅಥವಾ ಕೇವಲ ‘ಪೋಷಕರು’ ಎಂದು ಉಲ್ಲೇಖಿಸಲಾಗುತ್ತದೆ. ಮಗುವಿನ ಜೈವಿಕ ತಂದೆಯನ್ನು ಗುರುತಿಸುವ ಪ್ರಕ್ರಿಯೆಯಾದ ‘ಪಿತ್ರಾರ್ಜಿತ’ (Paternity) ವಿಚಾರಣೆಗಳನ್ನು ಇನ್ಮುಂದೆ ‘ಪೇರೆಂಟೇಜ್’ (Parentage – ಪೋಷಕತ್ವ) ಎಂದು ಕರೆಯಲಾಗುತ್ತದೆ.

ವಿರೋಧ ಪಕ್ಷಗಳ ತೀವ್ರ ಆಕ್ರೋಶ

ಡೆಮೋಕ್ರಾಟ್‌ಗಳ ಈ ‘ವೋಕ್ ಕಲ್ಚರ್’ ನಿರ್ಧಾರದ ವಿರುದ್ಧ ರಿಪಬ್ಲಿಕನ್ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದು ಅತಿರೇಕದ ವರ್ತನೆ. ನ್ಯೂಯಾರ್ಕ್‌ನ ಸಾಮಾನ್ಯ ಜನರು ಅಗತ್ಯ ವಸ್ತುಗಳ ಬೆಲೆ ಏರಿಕೆ, ವಿದ್ಯುತ್ ಬಿಲ್ ಹಾಗೂ ಸುರಕ್ಷತೆಯ ಸಮಸ್ಯೆಗಳಿಂದ ತತ್ತರಿಸುತ್ತಿದ್ದರೆ, ಆಡಳಿತ ಪಕ್ಷವು ಅಮ್ಮ-ಅಪ್ಪ ಎಂಬ ಪವಿತ್ರ ಪದಗಳನ್ನು ಬದಲಾಯಿಸುವ ಅಪ್ರಸ್ತುತ ವಿಷಯಗಳಿಗೆ ಸಮಯ ವ್ಯಯಿಸುತ್ತಿದೆ ಎಂದು ರಿಪಬ್ಲಿಕನ್ ಸೆನೆಟರ್ ಪ್ಯಾಟ್ರಿಸಿಯಾ ತರಾಟೆಗೆ ತೆಗೆದುಕೊಂಡಿದ್ದಾರೆ.

ನಾಯಕ ಬ್ರೂಸ್ ಬ್ಲೇಕ್‌ಮನ್ ಮಾತನಾಡಿ, ಡೆಮೋಕ್ರಾಟ್‌ಗಳು ನ್ಯೂಯಾರ್ಕ್‌ನ ಕುಟುಂಬಗಳ ಸೌಹಾರ್ದತೆಯ ವಿರುದ್ಧ ಯುದ್ಧ ಸಾರಿದ್ದಾರೆ. ನಾನು ಗವರ್ನರ್ ಆದ ತಕ್ಷಣ ಈ ಹುಚ್ಚುತನಕ್ಕೆ ಬ್ರೇಕ್ ಹಾಕುತ್ತೇನೆ ಎಂದಿದ್ದಾರೆ.

ಕಾನೂನು ತಿದ್ದುಪಡಿಗೆ ಡೆಮೋಕ್ರಾಟ್‌ಗಳ ಸಮರ್ಥನೆ ಏನು?

ಈ ವಿಧೇಯಕವನ್ನು ಬೆಂಬಲಿಸಿರುವ ಸೆನೆಟರ್ ಲೂಯಿಸ್ ಸೆಪುಲ್ವೆಡಾ, ಪ್ರಸ್ತುತ ಸಮಾಜದಲ್ಲಿ ಸಲಿಂಗಕಾಮಿ ದಂಪತಿಗಳು (Same-sex parents) ಹಾಗೂ ಸರೋಗಸಿ (Surrogacy) ಪ್ರಕರಣಗಳು ಹೆಚ್ಚುತ್ತಿವೆ. ಇಬ್ಬರು ತಾಯಂದಿರು ಅಥವಾ ಇಬ್ಬರು ತಂದೆಯಂದಿರು ಇರುವ ಕುಟುಂಬಗಳ ಕಾನೂನು ಪ್ರಕ್ರಿಯೆಗಳನ್ನು ಸರಳಗೊಳಿಸಲು ಮತ್ತು ಸದ್ಯದ ನ್ಯಾಯಾಲಯದ ವ್ಯವಸ್ಥೆಗೆ ಪೂರಕವಾಗಿರಲು ಈ ಲಿಂಗ-ತಟಸ್ಥ ಪದಬಳಕೆ ಅನಿವಾರ್ಯವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಅವರ ಸಹಿ ಬಿದ್ದ ತಕ್ಷಣ ಈ ವಿಧೇಯಕವು ಅಧಿಕೃತ ಕಾನೂನಾಗಿ ಜಾರಿಗೆ ಬರಲಿದ್ದು, ಮುಂಬರುವ ದಿನಗಳಲ್ಲಿ ಅಮೆರಿಕದ ಇತರ ರಾಜ್ಯಗಳ ಮೇಲೂ ಇದು ಪ್ರಭಾವ ಬೀರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಾಗತಿಕ ಬಿಕ್ಕಟ್ಟಿನ ಮಧ್ಯೆ ಭಾರತದ ಆರ್ಥಿಕತೆಗೆ ಉತ್ತೇಜನ ನೀಡಲು ಪ್ರಧಾನಿ ಮೋದಿ ಕ್ರಮ: ಆರ್ಥಿಕ ಸಲಹಾ ಮಂಡಳಿ ಜೊತೆ ಮಹತ್ವದ ಸಭೆ – Kannada News

ಪ್ರಧಾನಮಂತ್ರಿ ನರೇಂದ್ರ ಮೋದಿImage Credit source: PMO India

ನವದೆಹಲಿ, ಜೂನ್ 6: ಜಾಗತಿಕ ಮಟ್ಟದ ತಲ್ಲಣಗಳು ಮತ್ತು ಪ್ರಾದೇಶಿಕ ರಾಜಕೀಯ ಸವಾಲುಗಳ ಮಧ್ಯೆಯೂ ಭಾರತದ ಆರ್ಥಿಕ ಪ್ರಗತಿಯ ವೇಗವನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಭರ್ಜರಿ ಮಾಸ್ಟರ್ ಪ್ಲಾನ್ ರೂಪಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಶನಿವಾರ ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ (EAC) ಸದಸ್ಯರೊಂದಿಗೆ ದೆಹಲಿಯಲ್ಲಿ ಶನಿವಾರ ಉನ್ನತ ಮಟ್ಟದ ಸಭೆ ನಡೆಸಿದರು. ಅಸ್ಥಿರ ಜಾಗತಿಕ ವಾತಾವರಣದಲ್ಲಿ ಭಾರತದ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ದೇಶದ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವ ಕಾರ್ಯತಂತ್ರಗಳ ಕುರಿತು ಈ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ.

ಮುಖ್ಯಾಂಶಗಳು

  • ಆರ್ಥಿಕ ಪ್ರಗತಿ ಹೆಚ್ಚಿಸಲು ಪ್ರಧಾನಿ ಮೋದಿ ಸಭೆ.
  • ಸುಗಮ ಜೀವನ ಮತ್ತು ಉದ್ಯಮ ಸುಧಾರಣೆಗೆ ಚರ್ಚೆ.
  • ಮಧ್ಯಪ್ರಾಚ್ಯ ಸಂಘರ್ಷದ ಪ್ರಭಾವದ ಪರಾಮರ್ಶೆ.

ಉದ್ಯಮಸ್ನೇಹಿ ಮತ್ತು ನಾಗರಿಕರ ಸುಲಭ ಜೀವನಕ್ಕೆ ಕ್ರಮ

ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ ಭಾರತದ ಆರ್ಥಿಕ ಪ್ರಗತಿಯ ವೇಗವನ್ನು ಹೇಗೆ ಸ್ಥಿರವಾಗಿ ಇರುವಂತೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಹತ್ತಾರು ವಿನೂತನ ಐಡಿಯಾಗಳು ಹಾಗೂ ನೀತಿ ಕ್ರಮಗಳ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಯಿತು. ದೇಶದ ಮ್ಯಾಕ್ರೋ-ಎಕನಾಮಿಕ್ (ಸ್ಥೂಲ ಆರ್ಥಿಕ) ಸ್ಥಿರತೆಯನ್ನು ಕಾಪಾಡುವ ಜೊತೆಗೆ ವಿವಿಧ ವಲಯಗಳಲ್ಲಿ ಹೂಡಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಸುಧಾರಣೆಗಳತ್ತ ಗಮನ ಹರಿಸಲಾಯಿತು. ಮುಖ್ಯವಾಗಿ ದೇಶದ ನಾಗರಿಕರ ಸುಗಮ ಜೀವನ ನಿರ್ವಹಣೆ (Ease of Living) ಮತ್ತು ಉದ್ಯಮ ರಂಗದಲ್ಲಿ ವ್ಯವಹಾರ ಸುಲಭಗೊಳಿಸುವಿಕೆ (Ease of Doing Business) ಪ್ರಕ್ರಿಯೆಗಳನ್ನು ಇನ್ನಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ವಿವಿಧ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲಾಯಿತು.

ಭಾರತದ ಆರ್ಥಿಕತೆ ಮೇಲೆ ಮಧ್ಯಪ್ರಾಚ್ಯ ಸಂಘರ್ಷದ ಪ್ರಭಾವ

ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿ ಜತೆ ಮೋದಿ ಸಭೆ

ಪ್ರಸ್ತುತ ಜಾಗತಿಕವಾಗಿ ತಲ್ಲಣ ಸೃಷ್ಟಿಸಿರುವ ಮಧ್ಯಪ್ರಾಚ್ಯ (Middle East) ಸಂಘರ್ಷದ ಕುರಿತು ಸಭೆಯಲ್ಲಿ ತೀವ್ರ ಆತಂಕ ವ್ಯಕ್ತವಾಯಿತು. ಈ ಸಂಘರ್ಷದಿಂದ ಭಾರತ ಮತ್ತು ಜಾಗತಿಕ ಆರ್ಥಿಕತೆಯ ಮೇಲಾಗಬಹುದಾದ ಸಂಭಾವ್ಯ ಪರಿಣಾಮಗಳ ಕುರಿತು ಆರ್ಥಿಕ ಸಲಹಾ ಮಂಡಳಿಯ ಸದಸ್ಯರು ನಿಖರ ವಿಶ್ಲೇಷಣಾ ವರದಿಯನ್ನು ಪ್ರಧಾನಿ ಜತೆ ಹಂಚಿಕೊಂಡರು. ಪ್ರಮುಖವಾಗಿ ಈ ಯುದ್ಧದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆ (ತೈಲ ಬೆಲೆ), ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಒಟ್ಟಾರೆ ಆರ್ಥಿಕ ಸ್ಥಿರತೆಯ ಮೇಲಾಗುವ ಪರಿಣಾಮಗಳನ್ನು ಎದುರಿಸಲು ಭಾರತವು ಮುನ್ನೆಚ್ಚರಿಕೆಯಾಗಿ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.

ಇದನ್ನೂ ಓದಿ: ಇಂಧನ ಬಿಕ್ಕಟ್ಟಿನ ಮಧ್ಯೆ ಭಾರತಕ್ಕೆ ಗುಡ್ ನ್ಯೂಸ್: ಅಂಡಮಾನ್ ಸಮುದ್ರದಲ್ಲಿ ಬೃಹತ್ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ

ಜಾಗತಿಕ ಸನ್ನಿವೇಶದಲ್ಲಿ ಎಷ್ಟೇ ಏರಿಳಿತಗಳಿದ್ದರೂ ಪ್ರಮುಖ ಯೋಜನೆಗಳು ಮತ್ತು ದೀರ್ಘಕಾಲೀನ ಆರ್ಥಿಕ ಸುಧಾರಣೆಗಳ ಮೂಲಕ ಭಾರತದ ಸದೃಢ ಪ್ರಗತಿಯನ್ನು ಮುಂದುವರಿಸುವ ಬಗ್ಗೆ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

29 ಕಡೆ ಕಣಕ್ಕಿಳಿದು ಅಪರೂಪದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

Source link

ವೈಭವ್ ಸೂರ್ಯವಂಶಿ ಎಂಟ್ರಿ: ಟೀಮ್ ಇಂಡಿಯಾದ 3 ತಂಡಗಳು ಪ್ರಕಟ – Kannada News

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂಬರುವ ಐರ್ಲೆಂಡ್, ಇಂಗ್ಲೆಂಡ್ ಪ್ರವಾಸದ ಟಿ20 ಸರಣಿ ಹಾಗೂ 2026ರ ಏಷ್ಯನ್ ಗೇಮ್ಸ್ ಪಂದ್ಯಾವಳಿಗಳಿಗಾಗಿ ಬಲಿಷ್ಠ ಟೀಮ್ ಇಂಡಿಯಾವನ್ನು ಪ್ರಕಟಿಸಿದೆ. ಈ ಆಯ್ಕೆಯಲ್ಲಿ ಬಿಸಿಸಿಐ ಹಲವು ಪ್ರಮುಖ ಮತ್ತು ಅಚ್ಚರಿಯ ಬದಲಾವಣೆಗಳನ್ನು ಮಾಡಿದ್ದು, ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಯುಗಕ್ಕೆ ಮುನ್ನುಡಿ ಬರೆದಿದೆ.

ಈ ಬದಲಾವಣೆಯೊಂದಿಗೆ ಸೂರ್ಯಕುಮಾರ್ ಯಾದವ್ ಅವರ ಬದಲಿಗೆ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ಭಾರತ ಟಿ20 ತಂಡದ ನೂತನ ನಾಯಕನನ್ನಾಗಿ ಅಧಿಕೃತವಾಗಿ ನೇಮಕ ಮಾಡಲಾಗಿದೆ. ಇನ್ನು ಯುವ ಆಟಗಾರ ತಿಲಕ್ ವರ್ಮಾ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ.

ಹಾಗೆಯೇ ಐಪಿಎಲ್ 2026 ರಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ನೊಂದಿಗೆ ಅಬ್ಬರಿಸಿದ 15 ವರ್ಷದ ಯುವ ದಾಂಡಿಗ ವೈಭವ್ ಸೂರ್ಯವಂಶಿ ಅವರನ್ನು ಭಾರತ ಹಿರಿಯರ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅದರಂತೆ ಮುಂಬರುವ ಟಿ20 ಸರಣಿ ಹಾಗೂ ಟೂರ್ನಿಗೆ ಟೀಮ್ ಇಂಡಿಯಾ ಈ ಕೆಳಗಿನಂತಿದೆ…

ಐರ್ಲೆಂಡ್ ಟಿ20 ಸರಣಿಗೆ ಭಾರತ ತಂಡ:  ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್. ಸಿರಾಜ್, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ.

ಇಂಗ್ಲೆಂಡ್ ಟಿ20 ಸರಣಿಗೆ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್. ಸಿರಾಜ್, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ.

ಇದನ್ನೂ ಓದಿ: ಕ್ಲಿಯರ್ ಔಟ್ ಆಗಿದ್ದರೂ… ನಾಟಕವಾಡಿ ಬಚಾವಾದ ಕೆಎಲ್ ರಾಹುಲ್!

ಏಷ್ಯಾಕಪ್​ಗೆ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪಾನಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಜಸ್​ಪ್ರೀತ್ ಬುಮ್ರಾ  ಬುಮ್ರಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ವೈಭವ್ ಸೂರ್ಯವಂಶಿ.

Source link

Exit mobile version