ಹೆಲ್ತ್ ಇನ್ಷೂರೆನ್ಸ್ ಖರೀದಿಸುವ ಮುನ್ನ, ಈ 5 ಅಂಶಗಳು ಗಮನದಲ್ಲಿರಲಿ… – Kannada News | Health Insurance, important things to observe before buying policy

ಆರೋಗ್ಯ ವಿಮೆ (Health Insurance) ಇವತ್ತು ಬಹಳ ಮುಖ್ಯ. ವೈದ್ಯಕೀಯ ವೆಚ್ಚಗಳು ಗಣನೀಯವಾಗಿ ಹೆಚ್ಚುತ್ತಿವೆ. ವೈದ್ಯಕೀಯ ಸೇವೆಗಳ ಹಣದುಬ್ಬರ ಶೇ. 10ಕ್ಕಿಂತ ಹೆಚ್ಚಿನ ದರದಲ್ಲಿ ಏರುತ್ತಿದೆ. ನಾವು ಕಷ್ಟಪಟ್ಟು ಉಳಿಸಿದ ಹಣವೆಲ್ಲವೂ ಒಂದೇ ಬಾರಿ ಆಸ್ಪತ್ರೆಗೆ ವ್ಯಯವಾಗಿ ಹೋಗಬಹುದು. ಹೀಗಾಗಿ, ಆರೋಗ್ಯ ವಿಮೆ ತುಂಬಾ ಮುಖ್ಯ. ಹಾಗೆಯೇ, ಸರಿಯಾದ ವಿಮೆ ಆಯ್ಕೆ ಮಾಡಿಕೊಳ್ಳುವುದೂ ಕೂಡ ಮುಖ್ಯ. ಇಲ್ಲದಿದ್ದರೆ ಅಧಿಕ ಪ್ರೀಮಿಯಮ್​ನಲ್ಲಿ ಖರೀದಿಸಿದ ವಿಮೆಯು ಅಗತ್ಯ ಸಂದರ್ಭದಲ್ಲಿ ನಿರುಪಯುಕ್ತ ಎನಿಸಬಹುದು, ಅಥವಾ ಹೆಚ್ಚಿನ ಭಾಗದ ವೆಚ್ಚವನ್ನು ಭರಿಸದೇ ಹೋಗಬಹುದು. ಹೀಗಾಗಿ, ವಿಮೆ ಖರೀದಿಸುವ ಮುನ್ನ ಗಮನಿಸಬೇಕಾದ ಈ 5 ಪ್ರಮುಖ ಅಂಶಗಳು ತಿಳಿದಿರಲಿ.

1. ಅಸ್ತಿತ್ವದಲ್ಲಿರುವ ಕಾಯಿಲೆಗಳ ಸಂಗತಿ

ವಿಮೆ ಖರೀದಿಸುವಾಗ ನಿಮಗೆ ಈಗಾಗಲೇ ಇರುವ ಆರೋಗ್ಯ ಸಮಸ್ಯೆಗಳನ್ನು (PED – Pre-Existing Diseases – ಮಧುಮೇಹ, ರಕ್ತದೊತ್ತಡ ಇತ್ಯಾದಿ) ಕಡ್ಡಾಯವಾಗಿ ಮತ್ತು ಪ್ರಾಮಾಣಿಕವಾಗಿ ಬಹಿರಂಗಪಡಿಸಬೇಕು.

ಮಾಹಿತಿಯನ್ನು ಮರೆಮಾಚಿ ವಿಮೆ ಪಡೆದರೆ, ಮುಂದೆ ಕ್ಲೈಮ್ ಸಲ್ಲಿಸಿದಾಗ ವಿಮಾ ಸಂಸ್ಥೆಯು ಅದನ್ನು ತಿರಸ್ಕರಿಸುವ ಸಂಪೂರ್ಣ ಹಕ್ಕನ್ನು ಹೊಂದಿರುತ್ತದೆ. ಪ್ರೀ ಎಕ್ಸಿಸ್ಟಿಂಗ್ ಕಾಯಿಲೆ ಇದ್ದಾಗ ಅದಕ್ಕೆ ಸಾಮಾನ್ಯವಾಗಿ 1 ರಿಂದ 3 ವರ್ಷಗಳ ವೇಟಿಂಗ್ ಪೀರಿಯಡ್ (Waiting Period) ಇರುತ್ತದೆ. ಅಂದರೆ, ಈ ಅವಧಿಯಲ್ಲಿ ಆ ಕಾಯಿಲೆ ಸಂಬಂಧ ಆಸ್ಪತ್ರೆಗೆ ದಾಖಲಾದರೆ ಇನ್ಷೂರೆನ್ಸ್ ಕವರ್ ಆಗುವುದಿಲ್ಲ.

2. ಕೋ-ಪೇಮೆಂಟ್ ಮತ್ತು ಸಬ್-ಲಿಮಿಟ್‌ಗಳು

  • ಕೋ-ಪೇಮೆಂಟ್ (Co-payment): ಒಟ್ಟು ಆಸ್ಪತ್ರೆ ವೆಚ್ಚದ ನಿರ್ದಿಷ್ಟ ಶೇಕಡಾವಾರು ಹಣವನ್ನು (ಉದಾಹರಣೆಗೆ 10% – 20%) ನೀವೇ ಜೇಬಿನಿಂದ ಪಾವತಿಸಬೇಕಾಗುತ್ತದೆ.
  • ಸಬ್-ಲಿಮಿಟ್ (Sub-limits): ಕೊಠಡಿ ಭತ್ಯೆ (Room Rent), ಆಂಜಿಯೋಪ್ಲಾಸ್ಟಿ ಅಥವಾ ಕ್ಯಾಟರಾಕ್ಟ್‌ನಂತಹ ನಿರ್ದಿಷ್ಟ ಚಿಕಿತ್ಸೆಗಳಿಗೆ ವಿಮಾ ಸಂಸ್ಥೆಯು ಗರಿಷ್ಠ ಮಿತಿಯನ್ನು ನಿಗದಿಪಡಿಸಿರುತ್ತದೆ.

ಕನಿಷ್ಠ ಅಥವಾ ಶೂನ್ಯ ಕೋ-ಪೇಮೆಂಟ್ ಮತ್ತು ಯಾವುದೇ ಸಬ್-ಲಿಮಿಟ್ ಇಲ್ಲದ ಪಾಲಿಸಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ.

ಇದನ್ನೂ ಓದಿ: ಆದಾಯ ತೆರಿಗೆ ನೋಟೀಸ್ ಬಂತಾ? ಅದು ವಂಚಕರ ಜಾಲವಾ? ಆನ್​ಲೈನ್​ನಲ್ಲೇ ಪರಿಶೀಲಿಸಿ

3. ಆಸ್ಪತ್ರೆಯ ಕೊಠಡಿ ಬಾಡಿಗೆ ಮಿತಿ

ಪಾಲಿಸಿಯಲ್ಲಿ ಕೊಠಡಿ ಬಾಡಿಗೆಗೆ ಮಿತಿ ಇದೆಯೇ ಎಂಬುದನ್ನು ಪರಿಶೀಲಿಸಿ. ಕೊಠಡಿ ಭತ್ಯೆಯ ಮೇಲೆ ಮಿತಿಯಿದ್ದರೆ (Room Rent Capping), ಅದು ಆಸ್ಪತ್ರೆಯ ಇತರ ಸೇವಾ ವೆಚ್ಚಗಳ ಮೇಲೆಯೂ (Doctor Fee, Nursing Charges) ಪರಿಣಾಮ ಬೀರುತ್ತದೆ (Proportional Deduction).
ಉದಾಹರಣೆಗೆ, ನೀವು ನಿಗದಿತ ಮಿತಿಗಿಂತ ಹೆಚ್ಚಿನ ದರದ ಕೊಠಡಿ ಆಯ್ಕೆ ಮಾಡಿದರೆ, ಹೆಚ್ಚುವರಿ ವೆಚ್ಚವನ್ನು ನೀವೇ ಭರಿಸಬೇಕಾಗುತ್ತದೆ.

4. ಕಾಯುವಿಕೆ ಅವಧಿ ಮತ್ತು ಎಕ್ಸ್​ಕ್ಲೂಶನ್ಸ್​ಗಳು

ಪಾಲಿಸಿ ಡಾಕ್ಯುಮೆಂಟ್​ನಲ್ಲಿ ಕಾಯುವಿಕೆ ಅವಧಿಯ ನಿಯಮಗಳೇನು, ಎಕ್ಸ್​ಕ್ಲೂಶನ್​ಗಳೇನಿವೆ ಎಂಬುದನ್ನು ಗಮನಿಸಿ. ಸಾಮಾನ್ಯವಾಗಿ, ಪಾಲಿಸಿ ಆರಂಭವಾದ ಮೊದಲ 30 ದಿನಗಳಲ್ಲಿ ತುರ್ತು ಅಪಘಾತಗಳನ್ನು ಹೊರತುಪಡಿಸಿ ಇತರ ಕಾಯಿಲೆಗಳಿಗೆ ಕ್ಲೈಮ್ ಮಾಡುವಂತಿಲ್ಲ. ಪ್ರೀ ಎಕ್ಸಿಸ್ಟಿಂಗ್ ಕಾಯಿಲೆಗಳಿಗೆ 1-3 ವರ್ಷ ವೇಟಿಂಗ್ ಪೀರಿಯಡ್ ಇದ್ದು, ಆಗಲೂ ಕ್ಲೇಮ್ ಆಗುವುದಿಲ್ಲ.

ಪ್ರೀ ಎಕ್ಸಿಸ್ಟಿಂಗ್ ಅಲ್ಲದಿದ್ದರೂ ಹರ್ನಿಯಾ (Hernia), ಕಣ್ಣಿನ ಪೊರೆ (Cataract), ಕಿಡ್ನಿ ಸ್ಟೋನ್ ಸಮಸ್ಯೆ ಮುಂತಾದವುಗಳಿಗೆ 1 ರಿಂದ 2 ವರ್ಷಗಳ ಕಾಯುವಿಕೆ ಅವಧಿ ಇರುತ್ತದೆ.

ಶಾಶ್ವತ ವಿನಾಯಿತಿಗಳು (Exclusions): ಕಾಸ್ಮೆಟಿಕ್ ಸರ್ಜರಿ, ಹಾರ್ಮೋನ್ ಚಿಕಿತ್ಸೆ ಮುಂತಾದ ಕೆಲವು ವೆಚ್ಚಗಳು ವಿಮೆಯ ವ್ಯಾಪ್ತಿಗೆ ಬರುವುದಿಲ್ಲ. ಈ ಎಕ್ಸ್​ಕ್ಲೂಶನ್​ಗಳ ಪಟ್ಟಿಯಲ್ಲಿ ಯಾವ್ಯಾವು ಇವೆ ಎಂಬುದನ್ನು ಗಮನಿಸಿ ನೋಡಿ.

ಇದನ್ನೂ ಓದಿ: ಜಾತಿ ಪ್ರಮಾಣ ಪತ್ರದಲ್ಲಿನ ವಿಳಾಸ ಬದಲಾಯಿಸಬೇಕೇ? ಹಾಗಾದ್ರೆ ಹೀಗೆ ಮಾಡಿ

5. ನೆಟ್‌ವರ್ಕ್ ಆಸ್ಪತ್ರೆಗಳು ಮತ್ತು ಕ್ಯಾಶ್‌ಲೆಸ್ ಸೌಲಭ್ಯ

ನಿಮ್ಮ ನಗರದಲ್ಲಿ ಅಥವಾ ನಿಮ್ಮ ಮನೆಗೆ ಹತ್ತಿರವಿರುವ ಪ್ರಮುಖ ಆಸ್ಪತ್ರೆಗಳು ಆ ವಿಮಾ ಸಂಸ್ಥೆಯ ನೆಟ್‌ವರ್ಕ್ ಆಸ್ಪತ್ರೆಗಳ ಪಟ್ಟಿಯಲ್ಲಿವೆಯೇ ಎಂದು ಪರಿಶೀಲಿಸಿ. ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭದಲ್ಲಿ ಜೇಬಿನಿಂದ ಹಣ ನೀಡದೆ ‘ಕ್ಯಾಶ್‌ಲೆಸ್’ (Cashless Claim) ಚಿಕಿತ್ಸೆ ಪಡೆಯಲು ಸುಲಭವಾಗುತ್ತದೆ. ಇಲ್ಲದಿದ್ದರೆ ಡಿಸ್ಚಾರ್ಜ್ ಆದ ಬಳಿಕ ದಾಖಲೆಗಳನ್ನು ಸಲ್ಲಿಸಿ ರೀಇಂಬುರ್ಸ್ಮೆಂಟ್ ಪಡೆಯಬೇಕಾಗುತ್ತದೆ.

ನೆನಪಿರಲಿ: ಪಾಲಿಸಿ ದಾಖಲೆಯನ್ನು (Policy Document) ಪೂರ್ಣವಾಗಿ ಓದಿ, ನಿಯಮಗಳು ಮತ್ತು ನಿಬಂಧನೆಗಳನ್ನು (Terms & Conditions) ಸರಿಯಾಗಿ ಅರ್ಥೈಸಿಕೊಂಡ ನಂತರವೇ ವಿಮೆ ಖರೀದಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:40 pm, Tue, 21 July 26

Source link

Karnataka Weather Update: ರಾಜ್ಯದ ಬಹುತೇಕ ಭಾಗಗಳಿಗೆ ನಾಳೆ ಯೆಲ್ಲೋ ಅಲರ್ಟ್; ಹೊನ್ನಾವರದಲ್ಲಿ ದಾಖಲೆಯ ಮಳೆ – Kannada News | Karnataka Weather Update: Yellow Alert for Most Parts of the State Tomorrow; Honnavar Records Heavy Rainfall

ಬೆಂಗಳೂರು, ಜುಲೈ 21: ಕರ್ನಾಟಕದಲ್ಲಿ ನೈರುತ್ಯ ಮುಂಗಾರು ಮತ್ತೆ ಚುರುಕುಗೊಂಡಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ವರ್ಷಧಾರೆಯ ನಡುವೆ, ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಆರ್ಭಟ ಹಿನ್ನೆಲೆ ಉತ್ತರ ಕರ್ನಾಟಕದ ಬುತೇಕ ಭಾಗಗಳಲ್ಲಿಯೂ ನೆರೆ ಸ್ಥಿತಿ ಉಂಟಾಗಿದೆ.  ರಾಜ್ಯದ ಬಹುತೇಕ ಭಾಗಗಳಿಗೆ ನಾಳೆ ಯೆಲ್ಲೋ ಅಲರ್ಟ್​​ ಘೋಷಿಸಲಾಗಿದ್ದು, ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಎಲ್ಲೆಲ್ಲಿ ಮಳೆಯ ಮುನ್ಸೂಚನೆ

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಂದು ಅಥವಾ ಎರಡು ಪ್ರದೇಶಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇದೆ. ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆ ನಿರೀಕ್ಷಿಸಲಾಗಿದೆ. ಹಾಗೆಯೇ ಮಲೆನಾಡು ಭಾಗದ ಶಿವಮೊಗ್ಗದಲ್ಲಿ ಗಂಟೆಗೆ 40-50 ಕಿ.ಮೀ. ವೇಗದ ಜೊತೆಗೆ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದ್ದು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಮಳೆಯ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಕರ್ನಾಟಕ ಕರಾವಳಿ, ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ, ಗಾಳಿಯ ಮುನ್ಸೂಚನೆ

ಹೊನ್ನಾವರದ ನಗರಬಸ್ತಿಕೇರಿಯಲ್ಲಿ ದಾಖಲೆಯ ಮಳೆ

ಕಳೆದ 24 ಗಂಟೆಯ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ನಗರಬಸ್ತಿಕೇರಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು 121 ಮಿ.ಮೀ. ಮಳೆಯಾಗಿದೆ. ಉಡುಪಿಯ ಕಾರ್ಕಳದ ನೀರೆಯಲ್ಲಿ 109.5, ತೀರ್ಥಹಳ್ಳಿಯ ಆಗುಂಬೆಯಲ್ಲಿ 91, ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಪಂಜಿಕಲ್ಲುವಿನಲ್ಲಿ 78.5, ಬೀದರ್​​ ದಕ್ಷಿಣದಲ್ಲಿ 62.2, ಶೃಂಗೇರಿಯ ಬೇಗಾರು ಮತ್ತು ಯಾದಗಿರಿಯ ಜೈಗ್ರಾಮ್​​ನಲ್ಲಿ ತಲಾ 57 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:42 pm, Tue, 21 July 26

Source link

ವೈಯುಕ್ತಿಕ ಸಾಲ ಪಡೆಯುವ ಪ್ಲ್ಯಾನ್ ನಲ್ಲಿದ್ದೀರಾ? ಹಾಗಾದ್ರೆ ನಿಮ್ಗೆ ಈ ವಿಚಾರ ತಿಳಿದಿರಲಿ – Kannada News | Personal Loan: If you are planning to take a personal loan, keep this in mind

ಹಣಕಾಸಿನ ಸಮಸ್ಯೆ (financial problem) ಎದುರಾದಾಗ ಸಾಲ ತೆಗೆದುಕೊಳ್ಳುವತ್ತ ಅಲೋಚಿಸುತ್ತಾರೆ. ಹೌದು, ಹೆಚ್ಚಿನವರು ಬ್ಯಾಂಕುಗಳಲ್ಲಿ ವೈಯುಕ್ತಿಕ ಸಾಲ ಪಡೆಯುತ್ತಾರೆ. ಆದರೆ ವೈಯುಕ್ತಿಕ ಸಾಲ (personal loan) ಪಡೆಯಲು ಮುನ್ನ ಇಎಂಐ, ಬಡ್ಡಿದರ, ಮರುಪಾವತಿ ಎಷ್ಟು ವರ್ಷ ಹೀಗೆ ಎಲ್ಲಾ ವಿಚಾರಗಳತ್ತ ಗಮನ ಹರಿಸುವುದು ಸೂಕ್ತ. ಇಲ್ಲದಿದ್ದರೆ ತೊಂದರೆ ಅನುಭವಿಸಬಹುದು ಹೆಚ್ಚಿನ ಬಡ್ಡಿಯಿಂದಾಗಿ ಸಂಕಷ್ಟಕ್ಕೆ ಈಡಾಗುವಿರಿ.

ವೈಯುಕ್ತಿಕ ಸಾಲ ಪಡೆಯುವ ಈ ವಿಷ್ಯಗಳು ತಿಳಿದಿರಲಿ

ತಿಂಗಳ ಇಎಂಐ ಮೊತ್ತ: ನೀವು ಪ್ರತಿ ತಿಂಗಳು ಕಟ್ಟುವ ಇಎಂಐ ಮೊತ್ತ ಎಷ್ಟಿದೆ ಎಂದು ತಿಳಿದುಕೊಳ್ಳುವುದು ಸೂಕ್ತ. ಇದು ನಿಮ್ಮ ಒಟ್ಟು ಮಾಸಿಕ ಆದಾಯದ ಶೇ. 40% ರಷ್ಟು ಮೀರದಂತೆ ಇರಲಿ. ಇಲ್ಲದಿದ್ದರೆ ವೈಯುಕ್ತಿಕ ಸಾಲ ಆರ್ಥಿಕ ಹೊರೆಯಾಗಬಹುದು.

ಸಾಲದ ಅವಧಿ: ಸಾಲದ ಅವಧಿ ಎಷ್ಟಿದೆ ಎಂದು ನೋಡಿ. ಅವಧಿ ಹೆಚ್ಚಾದಂತೆ ಇಎಂಐ ಕಡಿಮೆಯಾಗುತ್ತದೆ. ಆದರೆ ಬಡ್ಡಿ ಹೆಚ್ಚಾಗುತ್ತದೆ. ಹೀಗಾಗಿ ಸಾಲದ ಅವಧಿ ಕಡಿಮೆ ತೆಗೆದುಕೊಂಡು ಇಎಂಐ ಮೊತ್ತ ಹೆಚ್ಚು ಪಾವತಿಸುವುದು ಸೂಕ್ತ.

ಬಡ್ಡಿದರ: ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚು. ಸಾಮಾನ್ಯವಾಗಿ ಈ ಸಾಲಗಳಲ್ಲಿ ಬಡ್ಡಿದರ 11% ರಿಂದ 23% ವರೆಗೆ ಇರುತ್ತದೆ. ಹೀಗಾಗಿ ನೀವು ವೈಯುಕ್ತಿಕ ಸಾಲ ಪಡೆಯುವಾಗ ಬಡ್ಡಿದರ ಎಷ್ಟಿದೆ ಎಂದು ವಿಚಾರಿಸಿಕೊಂಡೆ ಮುಂದಿನ ನಿರ್ಧಾರ ಕೈಗೊಳ್ಳಿ.

ಪ್ರೊಸೆಸಿಂಗ್ ಶುಲ್ಕ ಹಾಗೂ ಇತರ ಶುಲ್ಕಗಳು: ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಸುಲಭವಾಗಿ ಸಾಲ ನೀಡುತ್ತವೆ. ಆದರೆ ಪ್ರೊಸೆಸಿಂಗ್ ಶುಲ್ಕ ಹಾಗೂ ಇತರ ಶುಲ್ಕಗಳನ್ನು ವಿಧಿಸುತ್ತವೆ. ಸಾಲ ತೆಗೆದುಕೊಳ್ಳುವ ಮೊದಲು, ಪ್ರೊಸೆಸಿಂಗ್ ಶುಲ್ಕ, ಜಿಎಸ್‌ಟಿ ಹಾಗೂ ಇತರ ಶುಲ್ಕಗಳ ಬಗ್ಗೆ ತಿಳಿದುಕೊಳ್ಳಿ. ಕಡಿಮೆ ಶುಲ್ಕ ವಿರುವ ಬ್ಯಾಂಕ್ ಗಳನ್ನೇ ಆಯ್ಕೆ ಮಾಡಿ.

ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ : ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಿ. ಸಿಬಿಲ್ ಸ್ಕೂಲ್ 750 ಕ್ಕಿಂತ ಹೆಚ್ಚಿದ್ದರೆ ಕಡಿಮೆ ಬಡ್ಡಿದರದಲ್ಲಿ ಬಹುಬೇಗನೆ ಸಾಲ ದೊರೆಯುತ್ತದೆ. ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೆ ವೈಯುಕ್ತಿಕ ಸಾಲ ತೆಗೆದುಕೊಳ್ಳುವುದನ್ನು ಆದಷ್ಟು ತಪ್ಪಿಸಿ. ಏಕೆಂದರೆ ಬಡ್ಡಿ ದರ ಹೆಚ್ಚಿದ್ದು, ಸಾಲದ ಹೊರೆ ಹೆಚ್ಚಾಗಬಹುದು.

ಇದನ್ನೂ ಓದಿ: Income Tax Notice: ಆದಾಯ ತೆರಿಗೆ ನೋಟೀಸ್ ಬಂತಾ? ಅದು ವಂಚಕರ ಜಾಲವಾ? ಆನ್​ಲೈನ್​ನಲ್ಲೇ ಪರಿಶೀಲಿಸಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ವೈಯುಕ್ತಿಕ ಸಾಲ ಪಡೆಯುವ ಮುನ್ನ ಏನೆಲ್ಲಾ ತಿಳಿದಿರಬೇಕು?

ಉತ್ತರ: ವೈಯುಕ್ತಿಕ ಸಾಲ ಪಡೆಯಲು ಮುನ್ನ ಬಡ್ಡಿದರ, ಕ್ರೆಡಿಟ್ ಸ್ಕೋರ್, ಸಾಲದ ಅವಧಿ, ಇತರ ಶುಲ್ಕಗಳ ಮಾಹಿತಿ ಪಡೆಯಿರಿ.

ಪ್ರಶ್ನೆ: ವೈಯುಕ್ತಿಕ ಸಾಲದಲ್ಲಿ ಎಷ್ಟು ಬಡ್ಡಿದರ ವಿಧಿಸಲಾಗುತ್ತದೆ?

ಉತ್ತರ: ವೈಯುಕ್ತಿಕ ಸಾಲಗಳಲ್ಲಿ ಬಡ್ಡಿದರ 11% ರಿಂದ 23% ವರೆಗೆ ಇರುತ್ತದೆ.

ಪ್ರಶ್ನೆ: ಸಿಬಿಲ್ ಸ್ಕೋರ್ ಎಷ್ಟಿದರೆ ಸಾಲದ ಮೇಲಿನ ಬಡ್ಡಿದರ ಕಡಿಮೆ?

ಉತ್ತರ: ಸಿಬಿಲ್ ಸ್ಕೂಲ್ 750 ಕ್ಕಿಂತ ಹೆಚ್ಚಿದ್ದರೆ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:44 pm, Tue, 21 July 26

Source link

ಕುವೈತ್, ಬಹ್ರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ; ಟ್ರಂಪ್​ಗೆ ಎಚ್ಚರಿಕೆ! – Kannada News | Iran Attacks United States military Bases In Kuwait and Bahrain

ಕುವೈತ್, ಜುಲೈ 21: ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕ ಮಿಲಿಟರಿ ತಾಣಗಳು ಹಾಗೂ ವಾಯು ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ಮಂಗಳವಾರ ಭೀಕರ ದಾಳಿ ನಡೆಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ಸ್ (IRGC) ಪ್ರಕಟಿಸಿದೆ. ಅಮೆರಿಕದ ಸೇನಾ ಪಡೆಗಳು ಇರಾನ್ ಮೇಲಿನ ಸರಣಿ ದಾಳಿಗಳನ್ನು ಮುಂದುವರಿಸಿರುವ ಬೆನ್ನಲ್ಲೇ, ಇರಾನ್ (Iran Attack) ಈ ಪ್ರತಿದಾಳಿ ನಡೆಸಿದ್ದು ಮುಂಬರುವ ದಿನಗಳಲ್ಲಿ ಮತ್ತಷ್ಟು ಭೀಕರ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಎದುರಿಸಲು ಸಿದ್ಧರಾಗಿ ಎಂದು ಇರಾನ್ ಎಚ್ಚರಿಕೆ ನೀಡಿದೆ.

ಕುವೈತ್‌: ಅಲಿ ಅಲ್-ಸೇಲಂ ವಾಯು ನೆಲೆ ಮತ್ತು ‘ಕ್ಯಾಂಪ್ ಆರಿಫ್‌ಜಾನ್’ನಂತಹ ಅಮೆರಿಕ ಪಡೆಗಳ ಪ್ರಮುಖ ವಾಯುನೆಲೆಗಳ ಮೇಲೆ ದಾಳಿ ನಡೆದಿದೆ.

ಬಹ್ರೇನ್‌: ಅಮೆರಿಕದ ನೌಕಾಪಡೆಯ ಅತ್ಯಂತ ಪ್ರಮುಖ ಯುದ್ಧ ಕೇಂದ್ರವಾದ ಯುಎಸ್ ನೇವಿ 5ನೇ ಫ್ಲೀಟ್ ಕೇಂದ್ರ ಕಚೇರಿ ಇರುವ ಜುಫೈರ್ ಪ್ರದೇಶವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.

ಇದನ್ನೂ ಓದಿ: ಮೊಜ್ತಬಾ ಖಮೇನಿ ಇರಾನ್‌ನಲ್ಲಿಯೇ ಇಲ್ಲವಂತೆ; ಇಸ್ರೇಲ್ ಹೇಳಿದ್ದೇನು?

ಈ ದಾಳಿ ನಡೆಸಿದ ಬೆನ್ನಲ್ಲೇ ಇರಾನ್‌ನ ಮಿಲಿಟರಿ ಕಾರ್ಯಾಚರಣೆ ಆಡಳಿತ ಮಂಡಳಿಯು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಅಮೆರಿಕಕ್ಕೆ ಖಡಕ್ ಎಚ್ಚರಿಕೆ ನೀಡಿದೆ. “ಅಮೆರಿಕವು ನಮ್ಮ ಭೂಪ್ರದೇಶ, ನಮ್ಮ ಹಿತಾಸಕ್ತಿಗಳು ಅಥವಾ ನಮ್ಮ ಸಾರ್ವಭೌಮತ್ವದ ಮೇಲೆ ದಾಳಿ ಮಾಡಲು ಯತ್ನಿಸಿದರೆ ಅಥವಾ ಈ ಪ್ರದೇಶದಲ್ಲಿರುವ ತನ್ನ ನೆಲೆಗಳನ್ನು ನಮ್ಮ ವಿರುದ್ಧ ಬಳಸಿದರೆ, ನಾವು ಅಮೆರಿಕದ ಪ್ರತಿಯೊಂದು ನೆಲೆಯನ್ನು ಧೂಳಿಪಟ ಮಾಡುತ್ತೇವೆ. ಅಷ್ಟೇ ಅಲ್ಲದೆ, ಅಮೆರಿಕಕ್ಕೆ ಸಹಕರಿಸುವ ಅಥವಾ ತನ್ನ ಭೂಪ್ರದೇಶವನ್ನು ಅಮೆರಿಕದ ಮಿಲಿಟರಿಗೆ ಬಿಟ್ಟುಕೊಡುವ ಎಲ್ಲ ನೆರೆಹೊರೆಯ ರಾಷ್ಟ್ರವನ್ನೂ ನಾವು ಇರಾನ್‌ನ ಶತ್ರು ಎಂದು ಪರಿಗಣಿಸಿ, ಅವರ ಮೇಲೆಯೂ ಭೀಕರ ದಾಳಿ ನಡೆಸುತ್ತೇವೆ” ಎಂದು ಇರಾನ್ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಕುವೈತ್‌ನ ಪ್ರಮುಖ ವಿದ್ಯುತ್ ಸ್ಥಾವರದ ಮೇಲೆ ಇರಾನ್ ದಾಳಿ: ದಟ್ಟ ಹೊಗೆ, ಭಾರಿ ಬೆಂಕಿ 

ಇರಾನ್​ನ ದಾಳಿ ತೀವ್ರಗೊಳ್ಳುತ್ತಿದ್ದಂತೆ ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ಪ್ರದೇಶದಾದ್ಯಂತ ನಾಗರಿಕ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ ಮತ್ತು ವಾಯುಪ್ರದೇಶವನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ಈ ದಾಳಿಯ ನಂತರ ಅಮೆರಿಕದ ಮೈಕ್ರೋ-ಡಿಫೆನ್ಸ್ ಏರ್ ಸಿಸ್ಟಮ್‌ಗಳು ಕ್ಷಿಪಣಿಗಳನ್ನು ತಡೆಯಲು ಯತ್ನಿಸಿವೆ. ಅಮೆರಿಕ ತಕ್ಷಣವೇ ಪ್ರತಿದಾಳಿ ನಡೆಸುವ ಮುನ್ಸೂಚನೆ ನೀಡಿದೆ. ಈ ಸರಣಿ ದಾಳಿಗಳಿಂದಾಗಿ ಇಡೀ ಗಲ್ಫ್ ಪ್ರದೇಶವು ಸಂಪೂರ್ಣ ಯುದ್ಧಭೂಮಿಯಾಗಿ ಮಾರ್ಪಡುವ ಭೀತಿ ಎದುರಾಗಿದ್ದು, ಜಾಗತಿಕ ತೈಲ ಪೂರೈಕೆ ಮತ್ತು ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆಗಳ ಮೇಲೆಯೂ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ.

ಟ್ರಂಪ್‌ ಬೆದರಿಕೆ:

ಕುವೈತ್, ಜೋರ್ಡಾನ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲಿನ ಇರಾನ್ ದಾಳಿಯಲ್ಲಿ ಮತ್ತೊಬ್ಬ ಅಮೆರಿಕನ್ ಸೈನಿಕ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಇದಕ್ಕೆ ತಮ್ಮ ಟ್ರುತ್ ಸೋಶಿಯಲ್ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಇರಾನ್ ಪ್ರತಿ ಬಾರಿ ಒಬ್ಬ ಅಮೆರಿಕನ್ ಸೈನಿಕನನ್ನು ಕೊಂದಾಗಲೂ, ಅದಕ್ಕೆ ಹಲವು ಪಟ್ಟು ಹೆಚ್ಚಿನ ಬೆಲೆಯನ್ನು ತೆರಬೇಕಾಗುತ್ತದೆ!” ಎಂದು ಬೆದರಿಕೆ ಹಾಕಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 5:33 pm, Tue, 21 July 26

Source link

Gardening Tips: ಮಳೆಗಾಲದಲ್ಲಿ ಗಿಡಗಳನ್ನು ಕಂಬಳಿ ಹುಳಗಳಿಂದ ರಕ್ಷಿಸಲು ಈ ಮನೆಮದ್ದುಗಳೇ ಸಾಕು – Kannada News | Here are some tips to protect plants from caterpillars

ಮಳೆಗಾಲದ ಆರಂಭದೊಂದಿಗೆ ಕೀಟ, ಸೊಳ್ಳೆಗಳು, ಹಾವುಗಳ ಹಾವಳಿಯೂ ತೀರಾ ಹೆಚ್ಚಾಗಿರುತ್ತವೆ. ಕಂಬಳಿ ಹುಳಗಳ (caterpillars) ಕಾಟವೂ ಇದಕ್ಕೆ ಹೊರತಾಗಿಲ್ಲ. ಹೌದು ಮಳೆಗಾಲದಲ್ಲಿ ಮನೆ ಅಂಗಳದಲ್ಲಿರುವ ಗಿಡಗಳ ತುಂಬೆಲ್ಲಾ ಕಂಬಳಿ ಹುಳಗಳದ್ದೇ ಹಾವಳಿ. ಇವು ಗಿಡಗಳಿಗೆ ಗಮನಾರ್ಹವಾಗಿ ಹಾನಿಯುಂಟು ಮಾಡಿ, ಸಸ್ಯಗಳ ಬೆಳವಣಿಗೆಗೆ ಅಡ್ಡಿಯುಂಟುಮಾಡುತ್ತದೆ. ಇದಲ್ಲದೆ ಈ ಕಂಬಳಿ ಹುಳಗಳು ಸ್ವಲ್ಪ ತಾಗಿದರೂ ಮೈಯೆಲ್ಲಾ ತುರಿಕೆ ಉಂಟಾಗುತ್ತದೆ. ಹೀಗಾಗಿ ಹೆಚ್ಚಿನವರು ರಾಸಾಯನಿಕಯುಕ್ತ ಕೀಟನಾಶಕಗಳನ್ನು ಬಳಸುತ್ತಾರೆ. ಆದರೆ ಇವು ಸಸ್ಯಗಳಿಗೆ ಹಾನಿ ಮಾಡಬಹುದು. ಹೀಗಿರುವಾಗ ಕೀಟಗಳು ಮತ್ತು ಕಂಬಳಿ ಹುಳಗಳಿಂದ ನಿಮ್ಮ  ಮನೆಯ ಗಿಡಗಳನ್ನು ರಕ್ಷಿಸಲು ಈ ಕೆಲವೊಂದು ಮನೆಮದ್ದುಗಳನ್ನು ಪ್ರಯತ್ನಿಸಿ.

ಕಂಬಳಿ ಹುಳಗಳಿಂದ ಗಿಡಗಳನ್ನು ರಕ್ಷಿಸಲು ಈ ಮನೆಮದ್ದುಗಳನ್ನು ಪ್ರಯತ್ನಿಸಿ:

ಬೇವಿನ ಎಣ್ಣೆ: ಮನೆಯಲ್ಲಿರುವ ಸುಂದರ ಗಿಡಗಳನ್ನು ಕಂಬಳಿ ಹುಳಗಳಿಂದ ರಕ್ಷಿಸಲು ರಾಸಾಯನಿಕಯುಕ್ತ ಕೀಟನಾಶಗಳ ಬದಲು ಬೇವಿನ ಎಣ್ಣೆಯನ್ನು ಬಳಸಬಹುದು. ಇದಕ್ಕಾಗಿ ಒಂದು ಸ್ಪ್ರೇ ಬಾಟಲಿಯಲ್ಲಿ ಬೇವಿನ ಎಣ್ಣೆಯನ್ನು ತುಂಬಿಸಿ ಅದನ್ನು ಗಿಡಗಳು, ಎಲೆಗಳ ಮೇಲೆ ಸಿಂಪಡಿಸಿ. ಇದು ಕೀಟಗಳು ಮತ್ತು ಕಂಬಳಿ ಹುಳಗಳನ್ನು ಪರಿಣಾಮಕಾರಿಯಾಗಿ ತೊಡೆದುಹಾಕುತ್ತದೆ.

ಬೆಳ್ಳುಳ್ಳಿ: ಸಸ್ಯಗಳಲ್ಲಿ ಅಂಟಿರುವ ಕಂಬಳಿ ಹುಳಗಳನ್ನು ತೊಡೆದು ಹಾಕಲು ಬೆಳ್ಳುಳ್ಳಿ ಕೂಡ ತುಂಬಾನೇ ಸಹಕಾರಿ. ಇದಕ್ಕಾಗಿ  6 ರಿಂದ 7 ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಅವುಗಳನ್ನು ಪೇಸ್ಟ್ ಮಾಡಿ. ನಂತರ, ಸ್ವಲ್ಪ ನೀರಿಗೆ ಡಿಶ್‌ವಾಶ್‌ ಲಿಕ್ವಿಡ್‌ ಸೇರಿಸಿ, ಅದಕ್ಕೆ ಈ ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಸ್ಪ್ರೇ ಬಾಟಲಿಗೆ ಹಾಕಿ  ಅದನ್ನು ಸಸ್ಯಗಳ ಮೇಲೆ ಸಿಂಪಡಿಸಿ. ಈ ಮನೆಮದ್ದು ಕಂಬಳಿ ಹುಳಗಳನ್ನು ತೊಡೆದುಹಾಕಲು ಪರಿಣಾಮಕಾರಿ.

ಇದನ್ನೂ ಓದಿ: ಫ್ರಿಜ್‌ನಲ್ಲಿಟ್ಟರೂ ಹಸಿ ಮೆಣಸಿನಕಾಯಿ ಬೇಗ ಹಾಳಾಗುತ್ತಿದೆಯೇ? ಸುಲಭ ಟ್ರಿಕ್ ಅನುಸರಿಸಿ

ಕೆಂಪು ಮೆಣಸಿನ ಪುಡಿ: ನೀರಿಗೆ ಸ್ವಲ್ಪ ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದನ್ನು ಸಸ್ಯಗಳ ಮೇಲೆ ಸಿಂಪಡಿಸಿ.  ಈ ಕೆಂಪು ಮೆಣಸಿನ ಪುಡಿಯನ್ನು ವಾರಕ್ಕೆ 4 ಬಾರಿ ಸಿಂಪಡಿಸುವುದರಿಂದ  ಸಸ್ಯಗಳಿಗೆ ಹಾನಿ ಮಾಡುವ ಕಂಬಳಿ ಹುಳಗಳು ನಿವಾರಣೆಯಾಗುತ್ತವೆ. ಇದಲ್ಲದೆ ಮಾರುಕಟ್ಟೆಯಲ್ಲಿ ಪೆಪ್ಪರ್ ಸ್ಪ್ರೇ ಲಭ್ಯವಿದೆ, ಅದನ್ನು ನೀವು ಬಳಸಬಹುದು.

ವಿನೆಗರ್: ಬೆಚ್ಚಗಿನ ನೀರಿನೊಂದಿಗೆ ವಿನೆಗರ್ ಮಿಶ್ರಣ ಮಾಡಿ, ಸ್ವಲ್ಪ ಪಾತ್ರೆ ತೊಳೆಯುವ ದ್ರವ ಅಥವಾ ಪಾತ್ರೆ ತೊಳೆಯುವ ಸೋಪ್‌ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ದಿನಕ್ಕೆ ಎರಡು ಬಾರಿ ಅಂದರೆ ಬೆಳಿಗ್ಗೆ ಮತ್ತು ಸಂಜೆ ಗಿಡಗಳಿಗೆ  ಸಿಂಪಡಿಸಿ. ಇದು ಹುಳಗಳನ್ನು ಮತ್ತು ಕೀಟಗಳನ್ನು ತಕ್ಷಣವೇ ಕೊಲ್ಲುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:17 pm, Tue, 21 July 26

Source link

ಸಂಶೋಧಕರ ಹೆಜ್ಜೆಸದ್ದು ಕೇಳ್ಬೇಕಿದ್ದ ಜಾಗದಲ್ಲಿ ಅನೈತಿಕ ಚಟುವಟಿಕೆ: ಬೆಳಪು ಗ್ರಾಮೀಣ ವಿದ್ಯಾರ್ಥಿಗಳ ಕನಸು ಭಗ್ನ – Kannada News | Kaup Belapu Project: 10 Years, Crores Wasted on Unfinished Research Centre

ಕಾಪು, ಜು.21: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಹೊಸ ದಾರಿ ತೋರಿಸಬೇಕಿದ್ದ ಮತ್ತು ವಿಶ್ವಮಟ್ಟದ ವಿಜ್ಞಾನ ಸಂಶೋಧನೆ ನಡೆಸುವ ಉದ್ದೇಶದಿಂದ ಆರಂಭಗೊಂಡ ಮಹತ್ವಾಕಾಂಕ್ಷಿ ಯೋಜನೆಯೊಂದು ಇಂದು ಆಡಳಿತಗಾರರ ನಿರ್ಲಕ್ಷ್ಯಕ್ಕೆ ಸಿಲುಕಿ ಅನಾಥವಾಗಿ ನಿಂತಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಹಾಗೂ ವಿಜ್ಞಾನ ಸಂಶೋಧನಾ ಕೇಂದ್ರದ ಕಾಮಗಾರಿ ಆರಂಭವಾಗಿ 10 ವರ್ಷಗಳು ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ.

ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ತಲೆಎತ್ತಿರುವ ಬೃಹತ್ ಕಟ್ಟಡಗಳು ಇಂದು ನಿರ್ವಹಣೆಯಿಲ್ಲದೆ ಪಾಳುಬೀಳುತ್ತಿದ್ದು, ಸಾರ್ವಜನಿಕರ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಗ್ರಾಮೀಣ ಭಾಗದ ಯುವಜನತೆಗೆ ಅತ್ಯಾಧುನಿಕ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ 2015ರ ಮೇ 4ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಒಟ್ಟು ಈ ಜಾಗ 24.26 ಎಕರೆ ಸರ್ಕಾರಿ ಜಮೀನಲ್ಲಿದೆ. ಈ ಯೋಜನೆ 141.08 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮೊದಲ ಹಂತದಲ್ಲಿ ರೂಸಾ ಯೋಜನೆಯಡಿ 44.92 ಕೋಟಿ ರೂ. ವೆಚ್ಚದಲ್ಲಿ 9 ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.

ಕೆಲಸ ಶೇ.85ರಷ್ಟು ಮುಗಿದಿದ್ದರೂ ಬಳಕೆಗೆ ಬಾರದ ಕ್ಯಾಂಪಸ್:

ಕ್ಯಾಂಪಸ್‌ನಲ್ಲಿ ಆಡಳಿತ ಸೌಧ, ವಿಜ್ಞಾನ ಬ್ಲಾಕ್, ಸಂಶೋಧನಾ ಕೇಂದ್ರ, ಅತಿಥಿಗೃಹ, ವಸತಿ ಗೃಹಗಳು, ರಸ್ತೆ, ಚರಂಡಿ ಹಾಗೂ ಬೃಹತ್ ನೀರಿನ ಟ್ಯಾಂಕ್‌ಗಳ ನಿರ್ಮಾಣ ಕಾಮಗಾರಿ ಶೇ. 80 ರಿಂದ 85ರಷ್ಟು ಪೂರ್ಣಗೊಂಡಿದೆ. ಆದರೆ, ವೈರಿಂಗ್, ಪ್ಲಂಬಿಂಗ್, ಪೇಂಟಿಂಗ್, ವಿದ್ಯುತ್ ಸಂಪರ್ಕ ಹಾಗೂ ಕಾಂಪೌಂಡ್ ನಿರ್ಮಾಣದಂತಹ ಅಂತಿಮ ಹಂತದ ಕೆಲಸಗಳು ಆಮೆ ವೇಗದಲ್ಲಿ ಸಾಗುತ್ತಿರುವುದರಿಂದ ಕಟ್ಟಡಗಳನ್ನು ಸಾರ್ವಜನಿಕ ಸೇವೆಗೆ ಹಸ್ತಾಂತರಿಸಲು ಸಾಧ್ಯವಾಗಿಲ್ಲ.

ಕಿಡಿಗೇಡಿಗಳ ಅಡ್ಡ, ಬೀದಿ ನಾಯಿಗಳ ಆಶ್ರಯ ತಾಣ:

ಸಂಶೋಧಕರು ಹಾಗೂ ಸಾವಿರಾರು ವಿದ್ಯಾರ್ಥಿಗಳ ಹೆಜ್ಜೆಸದ್ದಿನಿಂದ ಕಂಗೊಳಿಸಬೇಕಿದ್ದ ಈ ಬೃಹತ್ ಕ್ಯಾಂಪಸ್ ಇಂದು ಸಂಪೂರ್ಣ ನಿರ್ಜನವಾಗಿದೆ. ಸರಿಯಾದ ಭದ್ರತಾ ಸಿಬ್ಬಂದಿ ಇಲ್ಲದ ಕಾರಣ ದುಷ್ಕರ್ಮಿಗಳು ಕಟ್ಟಡದ ಕಿಟಕಿ ಗಾಜುಗಳನ್ನು ಕಲ್ಲಿನಿಂದ ಹೊಡೆದು ಪುಡಿಪುಡಿ ಮಾಡಿದ್ದಾರೆ. ಕಟ್ಟಡದ ಜಗಲಿ ಹಾಗೂ ಆವರಣಗಳು ಬೀದಿ ನಾಯಿಗಳ ವಾಸಸ್ಥಾನವಾಗಿ ಬದಲಾಗಿವೆ. ರಾತ್ರಿ ವೇಳೆಯಲ್ಲಿ ಕೆಲ ಕಿಡಿಗೇಡಿಗಳು ಈ ಅರೆಬರೆ ಕಟ್ಟಡಗಳನ್ನು ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳಿಗೆ ಅಡ್ಡೆಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕಾರವಾರ: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಆರೋಗ್ಯ ಇಲಾಖೆ ವಸತಿಗೃಹಗಳು; ಮಜಾ ಮಾಡಲು ಹುಡುಗ-ಹುಡುಗಿಯರು ಬರ್ತಾರೆ

ಅನುದಾನ ದುರ್ಬಳಕೆ ಆರೋಪ?

ಸರಕಾರದಿಂದ ಮಂಜೂರಾಗಿದ್ದ 38.30 ಕೋಟಿ ರೂ. ಹಣದ ಪೈಕಿ 30.50 ಕೋಟಿ ರೂ. ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲಾಗಿದೆ ಎನ್ನಲಾಗಿದೆ. ಆದರೆ, ಉಳಿದ ಸುಮಾರು 8 ಕೋಟಿ ರೂ. ಅನುದಾನವನ್ನು ವಿಶ್ವವಿದ್ಯಾನಿಲಯವು ಇತರ ಯೋಜನೆಗಳಿಗೆ ಬೇರೆಡೆಗೆ ವರ್ಗಾಯಿಸಿ ಬಳಸಿಕೊಂಡಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ಕುರಿತು ವಿಶ್ವವಿದ್ಯಾಲಯ ಸ್ಪಷ್ಟನೆ ನೀಡಬೇಕು ಎಂದು ಸ್ಥಳೀಯರು ಪಟ್ಟುಹಿಡಿದಿದ್ದಾರೆ.

“ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕಾಗಿ ರೂಪಿತಗೊಂಡಿದ್ದ ಈ ಕನಸಿನ ಯೋಜನೆ ಹೀಗೆ ಅನಾಥವಾಗಿ ಪಾಳುಬೀಳುತ್ತಿರುವುದು ತೀವ್ರ ನೋವಿನ ಸಂಗತಿ. ವಿಧಾನಸೌಧದಲ್ಲೂ ಹಲವು ಬಾರಿ ಭರವಸೆ ಸಿಕ್ಕರೂ ಫಲಿತಾಂಶ ಶೂನ್ಯ. ಈಗಿನ ಹೊಸ ಸರ್ಕಾರವು ಈ ಯೋಜನೆಗೆ ಆದ್ಯತೆ ನೀಡಿ, ಬಾಕಿ ಉಳಿದ ಸಣ್ಣಪುಟ್ಟ ಕೆಲಸಗಳನ್ನು ತಕ್ಷಣ ಪೂರ್ಣಗೊಳಿಸಿ ಮುಂಬರುವ ಶೈಕ್ಷಣಿಕ ವರ್ಷದಿಂದಲೇ ತರಗತಿಗಳನ್ನು ಆರಂಭಿಸಬೇಕು.” ಎಂದು ಬೆಳಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

48 ಗಂಟೆಗಳಲ್ಲಿ 15 ಕೋಟಿ ರೂ. ಮುಂಗಡ ಕಲೆಕ್ಷನ್ ಮಾಡಿದ ವಿಜಯ್ ಸಿನಿಮಾ ‘ಜನ ನಾಯಗನ್’ – Kannada News | Jana Nayagan Advance Booking Crosses 15 Crore Vijay Movie

ನಟನೆಯಿಂದ ರಾಜಕೀಯದತ್ತ ಮುಖ ಮಾಡಿರುವ ತಮಿಳುನಾಡು ಮುಖ್ಯಮಂತ್ರಿ ವಿಜಯ್ (CM Vijay) ಅಭಿನಯದ ಕೊನೆಯ ಚಿತ್ರ ‘ಜನ ನಾಯಗನ್’ ಸುಮಾರು ಏಳು ತಿಂಗಳ ಸುದೀರ್ಘ ವಿಳಂಬದ ನಂತರ ಈ ವಾರ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಬಿಡುಗಡೆಗೆ ನಾಲ್ಕು ದಿನಗಳಿರುವಂತೆಯೇ ಭಾನುವಾರದಿಂದ ಆರಂಭವಾದ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಗೆ (Advance Bookings) ಪ್ರೇಕ್ಷಕರಿಂದ ಅಭೂತಪೂರ್ವ ಮತ್ತು ದಾಖಲೆ ಮಟ್ಟದ ಸ್ಪಂದನೆ ವ್ಯಕ್ತವಾಗಿದೆ.

ಮಂಗಳವಾರದ (ಜುಲೈ 21) ಹೊತ್ತಿಗೆ, ಭಾರತದಾದ್ಯಂತ ಮೊದಲ ದಿನದ ಪ್ರದರ್ಶನಕ್ಕೆ 6 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿದ್ದು, ಈ ವರ್ಷದ ಅತಿ ದೊಡ್ಡ ಓಪನಿಂಗ್ ಪಡೆಯುವ ಭಾರತೀಯ ಸಿನಿಮಾಗಳ ಸಾಲಿನಲ್ಲಿ ‘ಜನ ನಾಯಗನ್’ ಸೇರಲು ಸಜ್ಜಾಗಿದೆ. ದೇಶಾದ್ಯಂತ ಸುಮಾರು 8000 ಶೋಗಳನ್ನು ಆಯೋಜಿಸಲಾಗಿದ್ದು, ಕೇವಲ ತಮಿಳುನಾಡಿನಲ್ಲೇ 3500ಕ್ಕೂ ಹೆಚ್ಚು ಶೋಗಳು ಪ್ರದರ್ಶನಗೊಳ್ಳಲಿವೆ. ಜುಲೈ 23ರ ಬಿಡುಗಡೆಯ ದಿನದ ವೇಳೆಗೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಈಗಾಗಲೇ 27 ಕೋಟಿ ರೂಪಾಯಿ ಬಿಸ್ನೆಸ್:

ಪ್ರಮುಖ ಬಾಕ್ಸ್ ಆಫೀಸ್ ಟ್ರ್ಯಾಕರ್ ‘ಸ್ಯಾಕ್ನಿಲ್ಕ್’ ಮಾಹಿತಿಯ ಪ್ರಕಾರ, ಸೋಮವಾರ (ಜುಲೈ 20) ರಾತ್ರಿ 9 ಗಂಟೆಯ ವೇಳೆಗೆ ಮೊದಲ ದಿನದ ಅಡ್ವಾನ್ಸ್ ಬುಕಿಂಗ್‌ನಿಂದ 13 ಕೋಟಿ ರೂಪಾಯಿ ಗ್ರೋಸ್ ಕಲೆಕ್ಷನ್ ಆಗಿತ್ತು. ಮಂಗಳವಾರ ಬೆಳಿಗ್ಗೆ ವೇಳೆಗೆ ಈ ಮೊತ್ತ 15 ಕೋಟಿ ರೂಪಾಯಿ ಗಡಿ ದಾಟಿದೆ ಎಂದು ಚಿತ್ರರಂಗದ ತಜ್ಞರು ಅಂದಾಜಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಮೊದಲ ವಾರಾಂತ್ಯದ ಮುಂಗಡ ಬುಕಿಂಗ್ ಬಿಸ್ನೆಸ್ ಈಗಾಗಲೇ 27 ಕೋಟಿ ರೂಪಾಯಿ ದಾಟಿದೆ. ಯಾವುದೇ ದೊಡ್ಡ ಪ್ಯಾನ್-ಇಂಡಿಯಾ ಪ್ರಚಾರವಿಲ್ಲದೆ, ಪ್ರಮುಖವಾಗಿ ತಮಿಳು ಮಾರುಕಟ್ಟೆಯನ್ನೇ ನೆಚ್ಚಿಕೊಂಡ ಚಿತ್ರವೊಂದಕ್ಕೆ ಇದು ಸಾರ್ವಕಾಲಿಕ ದಾಖಲೆಯಾಗಿದೆ.

ಹೌಸ್‌ಫುಲ್ ಪ್ರದರ್ಶನಗಳು ಮತ್ತು ಹೆಚ್ಚಿದ ಒತ್ತಡ:

ತಮಿಳುನಾಡಿನಲ್ಲಿ ಜುಲೈ 19ರಿಂದ ಮುಂಗಡ ಬುಕಿಂಗ್ ಆರಂಭವಾಗಿದ್ದು, ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಎರಡರಲ್ಲೂ ಕೆಲವೇ ಗಂಟೆಗಳಲ್ಲಿ 90,000ಕ್ಕೂ ಹೆಚ್ಚು ಟಿಕೆಟ್‌ಗಳು ಭರಪೂರ ಮಾರಾಟವಾಗಿವೆ. ರಾಜ್ಯಾದ್ಯಂತ ಟಿಕೆಟ್ ಬುಕಿಂಗ್‌ಗೆ ಭಾರಿ ಒತ್ತಡವಿದೆ. ಚೆನ್ನೈನ ಕಮಲಾ ಸಿನಿಮಾಸ್‌ನಲ್ಲಿ ಆನ್‌ಲೈನ್ ಪೋರ್ಟಲ್ ತೆರೆದ ಕೆಲವೇ ನಿಮಿಷಗಳಲ್ಲಿ 10,000ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾದರೆ, ಮಾಯಾಜಾಲ್ ಮಲ್ಟಿಪ್ಲೆಕ್ಸ್‌ನಲ್ಲಿ 48 ಶೋಗಳು ಒಂದೇ ಗಂಟೆಯಲ್ಲಿ ಹೌಸ್‌ಫುಲ್ ಆಗಿವೆ.

ಇದನ್ನೂ ಓದಿ: ‘ಜನ ನಾಯಗನ್’ ಹೊಸ ಟೀಸರ್ ನೋಡಿ ವಾವ್ ಎಂದ ವಿಜಯ್ ಅಭಿಮಾನಿಗಳು

ಸದ್ಯ ಚೆನ್ನೈನಲ್ಲಿ ರಾಜ್ಯ ಸರ್ಕಾರವು ಗರಿಷ್ಠ ಟಿಕೆಟ್ ದರವನ್ನು 190 ರೂಪಾಯಿ ಎಂದು ನಿಗದಿಪಡಿಸಿದೆ. ಎಚ್. ವಿನೋದ್ ನಿರ್ದೇಶನದ ಈ ಚಿತ್ರವು ನಟ ವಿಜಯ್ ಪೂರ್ಣ ಪ್ರಮಾಣದ ರಾಜಕೀಯಕ್ಕೆ ಧುಮುಕುವ ಮುನ್ನ ನಟಿಸಿರುವ ಕೊನೆಯ ಚಿತ್ರವಾಗಿದೆ. ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ಪಡೆಯುವಲ್ಲಿ ಎದುರಾದ ವಿಳಂಬದಿಂದಾಗಿ ಜನವರಿಯಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರ ಜುಲೈಗೆ ಮುಂದೂಡಲ್ಪಟ್ಟಿತ್ತು. ಈ ಮಧ್ಯೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಜಯಗಳಿಸಿ, ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡೆಂಗ್ಯೂ ಲಸಿಕೆಗೆ ಸಿಕ್ಕಿದೆ ಗ್ರೀನ್ ಸಿಗ್ನಲ್; ಭಾರತದ ಮೊದಲ ‘ಕ್ಯೂಡೆಂಗಾ’ ಲಸಿಕೆಯನ್ನು ಯಾರ್ಯಾರು ಪಡೆಯಬಹುದು – Kannada News | Who Needs India’s First Dengue Vaccine? Doctor Answers Common Questions

ಭಾರತದ ಮೊದಲ ಡೆಂಗ್ಯೂ ಲಸಿಕೆ ‘ಕ್ಯೂಡೆಂಗಾ’Image Credit source: Getty Images

ಮಳೆಗಾಲ ಆರಂಭವಾದರೆ ಸಾಕು, ದೇಶದ ಹಲವು ರಾಜ್ಯಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತವೆ. ಪ್ರತಿ ವರ್ಷ ಸಾವಿರಾರು ಮಂದಿ ಡೆಂಗ್ಯೂ ಸೋಂಕಿಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಡೆಂಗ್ಯೂ ತಡೆಗಟ್ಟಲು ಕ್ಯೂಡೆಂಗಾ (QDENGA) ಎಂಬ ಮೊದಲ ಲಸಿಕೆಯನ್ನು ಬಿಡುಗಡೆ ಮಾಡಿದೆ. ಇದನ್ನು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಜಪಾನ್‌ನ ಔಷಧ ಕಂಪನಿ ಟಕೆಡಾ (Takeda) ಅಭಿವೃದ್ಧಿಪಡಿಸಿದ್ದು ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಆದರೆ, ಈ ಲಸಿಕೆ ತೆಗೆದುಕೊಳ್ಳುವ ಮುನ್ನ ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಹಾಗಾದರೆ ಇದು ಡೆಂಗ್ಯೂ ವಿರುದ್ಧ ಸಂಪೂರ್ಣ ರಕ್ಷಣೆ ನೀಡುತ್ತದೆಯೇ, ಎಲ್ಲರೂ ಇದನ್ನು ತೆಗೆದುಕೊಳ್ಳಬೇಕೇ, ಯಾರಿಗೆ ಈ ಲಸಿಕೆ ಸೂಕ್ತವಲ್ಲ ಎಂಬ ಪ್ರಶ್ನೆಗಳಿಗೆ ಪಿಎಸ್ಆರ್ಐ ಆಸ್ಪತ್ರೆಯ ಪಲ್ಮನರಿ, ಕ್ರಿಟಿಕಲ್ ಕೇರ್ ಮತ್ತು ಸ್ಲೀಪ್ ಮೆಡಿಸಿನ್ ವಿಭಾಗದ ಹಿರಿಯ ತಜ್ಞೆ ಡಾ. ನೀತು ಜೈನ್ ಉತ್ತರ ನೀಡಿದ್ದಾರೆ.

ಕ್ಯೂಡೆಂಗಾ (QDENGA) ಲಸಿಕೆ ಎಂದರೇನು?

QDENGA ಎಂಬುದು ಡೆಂಗ್ಯೂ ವೈರಸ್‌ನ ಎಲ್ಲಾ ನಾಲ್ಕು ಸೆರೋಟೈಪ್‌ಗಳ (DENV-1, DENV-2, DENV-3 ಮತ್ತು DENV-4) ವಿರುದ್ಧ ರೋಗನಿರೋಧಕ ಶಕ್ತಿಯನ್ನು ಬೆಳೆಸಲು ವಿನ್ಯಾಸಗೊಳಿಸಲಾದ ಲಸಿಕೆಯಾಗಿದೆ. ಒಮ್ಮೆ ಒಂದು ವಿಧದ ಡೆಂಗ್ಯೂ ಸೋಂಕು ಬಂದರೆ ಉಳಿದ ಮೂರು ವಿಧಗಳ ವಿರುದ್ಧ ಸಂಪೂರ್ಣ ರಕ್ಷಣೆ ದೊರೆಯುವುದಿಲ್ಲ. ಆದ್ದರಿಂದ ವ್ಯಕ್ತಿಗೆ ಜೀವನದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಡೆಂಗ್ಯೂ ಬರುವ ಸಾಧ್ಯತೆ ಇರುತ್ತದೆ. ಈ ಅಪಾಯವನ್ನು ಕಡಿಮೆ ಮಾಡಲು ಈ ಲಸಿಕೆ ಸಹಾಯಕವಾಗಬಹುದು.

ಲಸಿಕೆಯನ್ನು ಹೇಗೆ ನೀಡಲಾಗುತ್ತದೆ?

ಕ್ಯೂಡೆಂಗಾ ಲಸಿಕೆಯನ್ನು ಎರಡು ಡೋಸ್‌ಗಳಲ್ಲಿ ನೀಡಲಾಗುತ್ತದೆ. ಸಾಮಾನ್ಯವಾಗಿ ಮೊದಲ ಡೋಸ್‌ನ ನಂತರ ಮೂರು ತಿಂಗಳ ಅಂತರದಲ್ಲಿ ಎರಡನೇ ಡೋಸ್ ನೀಡಲಾಗುತ್ತದೆ. ತಜ್ಞರ ಪ್ರಕಾರ, ಉತ್ತಮ ರಕ್ಷಣೆಯನ್ನು ಪಡೆಯಲು ಎರಡೂ ಡೋಸ್‌ಗಳನ್ನು ಪೂರ್ಣಗೊಳಿಸುವುದು ಅಗತ್ಯ.

ಈ ಲಸಿಕೆ 100% ರಕ್ಷಣೆ ನೀಡುತ್ತದೆಯೇ?

ಇಲ್ಲ. ತಜ್ಞರ ಪ್ರಕಾರ, ಈ ಲಸಿಕೆ 100 ಪ್ರತಿಶತ ಡೆಂಗ್ಯೂ ಸೋಂಕನ್ನು ತಡೆಯುವುದಿಲ್ಲ. ಲಸಿಕೆ ಪಡೆದವರಿಗೂ ಡೆಂಗ್ಯೂ ಬರಬಹುದು. ಆದರೆ, ತೀವ್ರ ಸ್ವರೂಪದ ಡೆಂಗ್ಯೂ, ಆಸ್ಪತ್ರೆ ದಾಖಲಾತಿ ಹಾಗೂ ಗಂಭೀರ ತೊಂದರೆಗಳ ಅಪಾಯವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಅದಕ್ಕಾಗಿ ಲಸಿಕೆ ಪಡೆದ ನಂತರವೂ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು. ಅಂದರೆ ಮನೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕೂಲರ್, ಹೂವಿನ ಕುಂಡ, ಟೈರ್, ಬಕೆಟ್‌ಗಳಲ್ಲಿ ನೀರು ಸಂಗ್ರಹವಾಗದಂತೆ ಸ್ವಚ್ಛಗೊಳಿಸಬೇಕು. ಸೊಳ್ಳೆ ನಿವಾರಕ ಕ್ರೀಮ್ ಅಥವಾ ಸ್ಪ್ರೇ ಬಳಸಿ. ಮೈ ಸರಿಯಾಗಿ ಮುಚ್ಚುವಂತಹ ಬಟ್ಟೆ ಧರಿಸಿ, ಸಾಧ್ಯವಾದಲ್ಲಿ ಕಿಟಕಿ ಮತ್ತು ಬಾಗಿಲುಗಳಿಗೆ ಸೊಳ್ಳೆ ಜಾಲರಿ ಅಳವಡಿಸಿ.

ಇದನ್ನೂ ಓದಿ: ಮೊದಲ ಡೆಂಗ್ಯೂ ಲಸಿಕೆಗೆ ಭಾರತ ಅನುಮೋದನೆ: ವ್ಯಾಕ್ಸಿನ್ ಪರಿಣಾಮಕಾರಿತ್ವ, ಬೆಲೆ ಬಗ್ಗೆ ಇಲ್ಲಿದೆ ಮಾಹಿತಿ

ಡೆಂಗ್ಯೂ ಬಂದ ನಂತರ ಈ ಲಸಿಕೆ ಇಲಾಜು ನೀಡುತ್ತದೆಯೇ?

ಇಲ್ಲ. QDENGA ಡೆಂಗ್ಯೂ ತಡೆಗಟ್ಟುವ ಲಸಿಕೆ ಮಾತ್ರ. ಈಗಾಗಲೇ ಡೆಂಗ್ಯೂ ಸೋಂಕು ಬಂದಿರುವವರಿಗೆ ಇದು ಔಷಧೋಪಚಾರವಾಗಿ ಕೆಲಸ ಮಾಡುವುದಿಲ್ಲ. ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು:

  • ಹೆಚ್ಚಿನ ಜ್ವರ
  • ತೀವ್ರ ತಲೆನೋವು
  • ಕಣ್ಣುಗಳ ಹಿಂದೆ ನೋವು
  • ಸ್ನಾಯು ಹಾಗೂ ಕೀಲು ನೋವು
  • ವಾಂತಿ
  • ಹೊಟ್ಟೆ ನೋವು
  • ರಕ್ತಸ್ರಾವ
  • ತೀವ್ರ ಆಯಾಸ
  • ಉಸಿರಾಟದ ತೊಂದರೆ
  • ಅತಿಯಾದ ನಿದ್ರಾವಸ್ಥೆ
    ಲಸಿಕೆ ಪಡೆದಿದ್ದೇವೆ ಎಂಬ ಕಾರಣಕ್ಕೆ ಈ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಎಲ್ಲರೂ ತಕ್ಷಣ ಲಸಿಕೆ ಪಡೆಯಬೇಕೇ?

ಅಗತ್ಯವಿಲ್ಲ. ಯಾವ ವಯೋಮಾನದವರು ಮತ್ತು ಯಾವ ಪ್ರದೇಶದ ಜನರಿಗೆ ಮೊದಲ ಆದ್ಯತೆ ನೀಡಬೇಕು ಎಂಬುದನ್ನು ಸರ್ಕಾರ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆ ಸ್ಥಳೀಯ ಡೆಂಗ್ಯೂ ಸೋಂಕಿನ ಪ್ರಮಾಣ, ಲಸಿಕೆಯ ಲಭ್ಯತೆ ಹಾಗೂ ಸುರಕ್ಷತೆಯ ಆಧಾರದ ಮೇಲೆ ನಿರ್ಧರಿಸಲಿದೆ. ವೈದ್ಯರ ಸಲಹೆ ಪಡೆಯದೇ ಸ್ವಯಂ ನಿರ್ಧಾರದಿಂದ ಲಸಿಕೆ ಪಡೆಯಬಾರದು.

ಯಾರಿಗೆ ಕ್ಯೂಡೆಂಗಾ ಲಸಿಕೆ ಸೂಕ್ತವಲ್ಲ?

  • ಗರ್ಭಿಣಿಯರು
  • ಹಾಲುಣಿಸುವ ತಾಯಂದಿರು
  • ರೋಗನಿರೋಧಕ ಶಕ್ತಿ ಕಡಿಮೆ ಇರುವವರು
  • ಇಮ್ಯುನೋಸಪ್ರೆಸ್ಸಿವ್ ಔಷಧಿಗಳನ್ನು ಸೇವಿಸುತ್ತಿರುವವರು
  • ಹಿಂದೆಯೇ ಲಸಿಕೆಗೆ ತೀವ್ರ ಅಲರ್ಜಿ ಉಂಟಾಗಿರುವವರು

ತಜ್ಞರ ಅಭಿಪ್ರಾಯದಂತೆ, QDENGA ಲಸಿಕೆ ಡೆಂಗ್ಯೂ ನಿಯಂತ್ರಣದಲ್ಲಿ ಮಹತ್ವದ ಸಾಧನೆಯಾಗಿದ್ದರೂ, ಇದು ಒಂದೇ ಪರಿಹಾರವಲ್ಲ. ಲಸಿಕೆ, ಸೊಳ್ಳೆ ನಿಯಂತ್ರಣ, ಆರಂಭಿಕ ರೋಗ ಪತ್ತೆ, ಸಮಯಕ್ಕೆ ಸರಿಯಾದ ಪರಿಹಾರ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಹೀಗೆ ಎಲ್ಲ ಕ್ರಮಗಳನ್ನು ಒಟ್ಟಾಗಿ ಅನುಸರಿಸಿದಾಗ ಮಾತ್ರ ಡೆಂಗ್ಯೂನಿಂದ ಉಂಟಾಗುವ ಗಂಭೀರ ಪರಿಣಾಮಗಳನ್ನು ಕಡಿಮೆ ಮಾಡಬಹುದು.

ಸೂಚನೆ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ಡೆಂಗ್ಯೂ ಲಸಿಕೆ ಪಡೆಯುವ ಮೊದಲು ಅಥವಾ ಯಾವುದೇ ಆರೋಗ್ಯ ಸಂಬಂಧಿತ ನಿರ್ಧಾರ ಕೈಗೊಳ್ಳುವ ಮೊದಲು ಅರ್ಹ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅಂತಹ ಮಟ್ಟಕ್ಕೆ ನಾನು ಹೋಗೋದಿಲ್ಲ’: ತಾಯಿ ಅಂತ್ಯಕ್ರಿಯೆ ವೇಳೆ ಡಿಕೆಶಿ ಹೆಸರೇಳದ ಬಗ್ಗೆ ಕುಮಾರಸ್ವಾಮಿ ಸ್ಪಷ್ಟನೆ! – Kannada News | HD kumaraswamy clarify about CM dk shivakumar name Not mentioned During Chennamma funeral

ಹಾಸನ (ಜುಲೈ.21): ತಮ್ಮ ತಾಯಿ ಚೆನ್ನಮ್ಮರ (Chennamma Devebgowda) ಅಂತ್ಯಕ್ರಿಯೆ ವೇಳೆ ಸರ್ಕಾರಿ ಗೌರವ ಸಲ್ಲಿಸಿದ್ದಕ್ಕೆ ನಿನ್ನೆಯೇ (ಜುಲೈ 20) ಕೇಂದ್ರ ಸಚಿವ ಹೆಚ್​​​ಡಿ ಕುಮಾರಸ್ವಾಮಿ (HD Kumaraswamy) ಧನ್ಯವಾದ ಹೇಳಿದ್ದಾರೆ. ಆದ್ರೆ, ಮಾತನಾಡುವಾಗ ಕೇಂದ್ರ ಸಚಿವರ ಹೆಸರುಗಳನ್ನು ಉಲ್ಲೇಖಿಸಿದ್ದು, ಸಿಎಂ ಡಿಕೆ ಶಿವಕುಮಾರ್ ಹೆಸರು ಮಾತ್ರ ಹೇಳದಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಬೇರೆ ಬೇರೆ ರೀತಿಯ ಆರೋಪ ಪ್ರತ್ಯಾರೋಪಗಳು ಶುರುವಾಗಿದೆ. ಇದರ ಬೆನ್ನಲ್ಲೇ ಇದೀಗ ಸ್ವತಃ ಕುಮಾರಸ್ವಾಮಿಯೇ ತಾಯಿ ಸಮಾಧಿ ಬಳಿ ಸ್ಪಷ್ಟನೆ ನೀಡಿದ್ದಾರೆ. ಮುಖ್ಯಮಂತ್ರಿ ಎಂದು ಹೇಳಿದ್ದು ಡಿಕೆ ಶಿವಕುಮಾರ್ ಅವರ ಕುರಿತೇ ಹೇಳಿದ್ದು ಎಂದಿದ್ದಾರೆ. ಈ ಮೂಲಕ ಅಂತೆ ಕಂತೆಗಳಿಗೆ ತೆರೆ ಎಳೆದಿದ್ದಾರೆ.

ಅಂತಿಮ ದರ್ಶನದ ವೇಳೆ ನಾನು ಮೈಕ್ ಹಿಡಿದು ಮಾತನಾಡಿದೆ. ನಾನು ಮಾತಾಡ್ಬೇಕು ಅನ್ನೊ ಉದ್ದೇಶ ಇರಲಿಲ್ಲ. ಮೈಕ್ ಹಿಡಿದ ವೇಳೆ ನನ್ನ ತಾಯಿಯೇ ನನ್ನನ್ನು ಮಾತನಾಡಿಸಿದಂತಾಗಿದೆ. ಆ ವೇಳೆ ನಾನು ಕೇಂದ್ರ ಸರ್ಕಾರದ ಮಂತ್ರಿಯ ಹೆಸರನ್ನ ಹೇಳಿದೆ. ಆದ್ರೆ ರಾಜ್ಯದ ಮುಖ್ಯಮಂತ್ರಿ ಹೆಸರನ್ನ ಹೇಳಲಿಲ್ಲ ಅನ್ನೋ‌ ಮಾತು ಕೇಳಿ ಬಂದಿದೆ. ಡಿಕೆಶಿ ಹೆಸರು ಹೇಳದೆ ಇರೋದು ಉದ್ದೇಶಪೂರ್ವಕವಾಗಿ ಅಲ್ಲ. ಮುಖ್ಯಮಂತ್ರಿ ಎಂದು ಹೇಳಿದ್ದು ಡಿಕೆ ಶಿವಕುಮಾರ್ ಅವರ ಕುರಿತೇ ಹೇಳಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ನೋಡಿ: ತಾಯಿ ಚೆನ್ನಮ್ಮ ಅಂತಿಮ ಸಂಸ್ಕಾರದ ಬಳಿಕ ಕೇಂದ್ರ ಸಚಿವ ಕುಮಾರಸ್ವಾಮಿ ಭಾವುಕ ಮಾತು

‘ಅಂತಹ ಮಟ್ಟಕ್ಕೆ ನಾನು ಹೋಗೋದಿಲ್ಲ’

ಸಿಎಂ ಡಿಕೆ ಶಿವಕುಮಾರ್ ಹೆಸರು ಹೇಳಲಿಲ್ಲ ಎಂದು ಒಂದೆರಡು ಜನ ಹೇಳಿದ್ರು. ಆದರೆ ನಾನು ನನ್ನ ಇಚ್ಛೆಯಂತೆ ಬಂದ ಪದ ಅಲ್ಲ. ನಾನು ಸಣ್ಣತನ ತೋರಿದೆ ಎಂದು ಯಾರೂ ಕೂಡ ಭಾವಿಸಬೇಡಿ. ಡಿಕೆ ಶಿವಕುಮಾರ್ ಹೆಸರು ಹೇಳದೆ ಇರೋದು ಉದ್ದೇಶಪೂರ್ವಕವಾಗಿ ಅಲ್ಲ. ಮುಖ್ಯಮಂತ್ರಿ ಎಂದು ಹೇಳಿದ್ದು ಡಿಕೆಶಿ ಅವರ ಕುರಿತೇ ಹೇಳಿದ್ದು. ಅಂತಹ ಮಟ್ಟಕ್ಕೆ ನಾನು ಹೋಗೋದೂ ಇಲ್ಲ. ನಮ್ಮ ಕುಟುಂಬದಲ್ಲೂ ಕೂಡ ಭಿನ್ನಾಭಿಪ್ರಾಯ ಬರುತ್ತವೆ. ಆದರೆ ಎಲ್ಲವನ್ನೂ ಮರೆತು ಒಂದು ಧ್ವನಿಯಾಗಿ ಬದುಕುತ್ತಿದ್ದೇವೆ. ಜೇನಿನಗೂಡು ನಾವೆಲ್ಲ ಎನ್ನುವಂತೆ ನಾವು ಬದುಕುತ್ತಿದ್ದೇವೆ. ಪ್ರತಿ ಕುಟುಂಬವೂ ಹೀಗೆ ಬದುಕಲಿ ಅನ್ನೋದು ನನ್ನ ಸಂದೇಶ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೇವಲ 6 ಲಕ್ಷಕ್ಕೆ ಮನೆ; ನಿವೇಶನ ಉಚಿತ, ಸರ್ಕಾರದಿಂದ ಸಬ್ಸಿಡಿ; ಇದು ತೆಲಂಗಾಣ ಸರ್ಕಾರದ ಹೊಸ ಇಂದಿರಮ್ಮ ಹೌಸಿಂಗ್ ಸ್ಕೀಮ್ ಆಫರ್ – Kannada News | Indiramma Housing Scheme, Telangana Govt gives heavily subsidized houses for lower income family

ತೆಲಂಗಾಣ ಸಿಎಂ ರೇವಂತ್ ರೆಡ್ಡಿImage Credit source: TV9 Network

ಹೈದರಾಬಾದ್, ಜುಲೈ 21: ತೆಲಂಗಾಣ ಸರ್ಕಾರವು ಬಡವರಿಗಾಗಿ ಮಹತ್ವಾಕಾಂಕ್ಷೆಯ ‘ಇಂದಿರಮ್ಮ ಹೌಸಿಂಗ್ ಸ್ಕೀಮ್’ (Indiramma Housing Scheme) ಅಡಿಯಲ್ಲಿ ಅರ್ಹರಿಗೆ ಕಡಿಮೆ ವೆಚ್ಚದಲ್ಲಿ ಮನೆಗಳನ್ನು ಒದಗಿಸಲು ಹೊಸ ಯೋಜನೆಗೆ ಚಾಲನೆ ನೀಡಿದೆ. ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳ ಸ್ವಂತ ಮನೆಯ ಕನಸು ನನಸು ಮಾಡಲು ಸರ್ಕಾರ ಇಂದಿರಮ್ಮ ಯೋಜನೆ ಹಮ್ಮಿಕೊಂಡಿದೆ. ನಗರ ಪ್ರದೇಶಗಳ ಬಡವರಿಗಾಗಿ (CURE area- Core Urban Region Economy) ನಿರ್ಮಿಸುತ್ತಿರುವ ಪ್ರತಿಯೊಂದು ಫ್ಲಾಟ್‌ನ ಅಂದಾಜು ವೆಚ್ಚ ₹11 ಲಕ್ಷವಾಗಿದೆ. ಇದರಲ್ಲಿ ಸರ್ಕಾರವು ₹5 ಲಕ್ಷ ಸಬ್ಸಿಡಿ (ಸಹಾಯಧನ) ನೀಡುತ್ತದೆ. ಫಲಾನುಭವಿಗಳು (beneficiaries) ಮಿಕ್ಕ ₹6 ಲಕ್ಷ ಮಾತ್ರವೇ ಭರಿಸಬೇಕಾಗುತ್ತದೆ.

ಫಲಾನುಭವಿಗಳು ತಮ್ಮ ಪಾಲಿನ ₹6 ಲಕ್ಷವನ್ನು ಕಂತುಗಳ ರೂಪದಲ್ಲಿ ಹಂತ ಹಂತವಾಗಿ ಪಾವತಿಸಬಹುದು. ಉದಾಹರಣೆಗೆ, RCC ಪೂರ್ಣಗೊಂಡ ನಂತರ ₹1 ಲಕ್ಷ, ಫಿನಿಶಿಂಗ್ ಹಂತದಲ್ಲಿ ₹2 ಲಕ್ಷ ಹೀಗೆ ಕಂತುಗಳಲ್ಲಿ ಪಾವತಿಸಲು ಅವಕಾಶ ಇರುತ್ತದೆ. ಇಂದಿರಮ್ಮ ಹೌಸಿಂಗ್ ಸ್ಕೀಮ್​ನಲ್ಲಿ ಈ ಪ್ರತಿ ಫ್ಲಾಟ್ ಸುಮಾರು 528 ಚದರ ಅಡಿ ವಿಸ್ತೀರ್ಣವನ್ನು ಹೊಂದಿರಲಿದೆ. ಸುಮಾರು 20×25 ವಿಸ್ತೀರ್ಣದ ಮನೆಯಾಗಿರುತ್ತದೆ.

ಇದನ್ನೂ ಓದಿ: ಟ್ಯಾಪ್ ಟು ಪೇ, ಹೊಸ ಯುಪಿಐ ಫೀಚರ್; ಇಂಟರ್ನೆಟ್ ಇಲ್ಲದ ಫ್ಲೈಟ್, ಅಂಡರ್​ಗ್ರೌಂಡ್ ಮೆಟ್ರೋಗೂ ಹಣ ಪಾವತಿಸಿ

ಇಂದಿರಮ್ಮ ಹೌಸಿಂಗ್ ಸ್ಕೀಮ್ ಪಡೆಯುವವರಿಗೆ ಏನು ಅರ್ಹತೆ?

  • ವಾಸಸ್ಥಳ: ಆಯಾ ವಿಧಾನಸಭಾ ಕ್ಷೇತ್ರದ ಖಾಯಂ ನಿವಾಸಿಗಳಾಗಿರಬೇಕು ಮತ್ತು ಕನಿಷ್ಠ 10 ವರ್ಷಗಳಿಂದ ನಗರದಲ್ಲಿ ವಾಸಿಸುತ್ತಿರಬೇಕು.
  • ಆಸ್ತಿ ಹೊಂದಿರಬಾರದು: ಅರ್ಜಿದಾರರು ಅಥವಾ ಅವರ ಕುಟುಂಬದ ಹೆಸರಿನಲ್ಲಿ ಯಾವುದೇ ಸ್ವಂತ ಮನೆ, ಫ್ಲಾಟ್ ಅಥವಾ ನಿವೇಶನ ಇರಬಾರದು.
  • ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯವು ₹6 ಲಕ್ಷಕ್ಕಿಂತ ಕಡಿಮೆ ಇರಬೇಕು.

ಷರತ್ತು: ಈ ಯೋಜನೆಯಡಿ ಪಡೆದ ಫ್ಲಾಟ್‌ಗಳನ್ನು ಮುಂದಿನ 10 ವರ್ಷಗಳವರೆಗೆ ಮಾರಾಟ ಮಾಡುವಂತಿಲ್ಲ ಅಥವಾ ಬಾಡಿಗೆಗೆ ನೀಡುವಂತಿಲ್ಲ (ಆದರೆ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಅಡಮಾನ ಇಡಬಹುದು).

ಇದನ್ನೂ ಓದಿ: ಆದಾಯ ತೆರಿಗೆ ನೋಟೀಸ್ ಬಂತಾ? ಅದು ವಂಚಕರ ಜಾಲವಾ? ಆನ್​ಲೈನ್​ನಲ್ಲೇ ಪರಿಶೀಲಿಸಿ

ಇಂದಿರಮ್ಮ ವಸತಿ ಯೋಜನೆಯಲ್ಲಿ ಮನೆಗಾಗಿ ಅರ್ಜಿ ಸಲ್ಲಿಸುವುದು ಹೇಗೆ?

₹100 ಹಾಗೂ ಟೋಕನ್ ಅಡ್ವಾನ್ಸ್ (Token Advance) ₹10,000 ಪಾವತಿಸಬೇಕಾಗುತ್ತದೆ. ಅರ್ಹತೆ ಅರ್ಜಿ ತಿರಸ್ಕೃತವಾದರೆ ಈ ಟೋಕನ್ ಅಡ್ವಾನ್ಸ್ ಅನ್ನು ರೀಫಂಡ್ ಮಾಡಲಾಗುತ್ತದೆ.

ಆಸಕ್ತರು ಮೀ ಸೇವಾ ಕೇಂದ್ರಗಳು (MeeSeva centres), ಮೀ ಸೇವಾ ಪೋರ್ಟಲ್ ಅಥವಾ ಮೀ ಸೇವಾ ವಾಟ್ಸಾಪ್ ಸೇವೆ ಮೂಲಕ ಅರ್ಜಿ ಸಲ್ಲಿಸಬಹುದು. ಫಲಾನುಭವಿಗಳನ್ನು ಲಾಟರಿ (Draw of lots) ಅಥವಾ ಪರಿಶೀಲನೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 4:35 pm, Tue, 21 July 26

Source link

Exit mobile version