ದೆಹಲಿಯಲ್ಲಿ ಮುಂದುವರೆದ ಕಾಕ್ರೋಚ್ ಜನತಾ ಪಾರ್ಟಿ ಭಾರಿ ಪ್ರತಿಭಟನೆ – Kannada News | Delhi CJP Protest Continues: Demands NEET Justice and Sonam Wangchuk Release

ನವದೆಹಲಿ, ಜುಲೈ 21: ಕಾಕ್ರೋಚ್ ಜನತಾ ಪಾರ್ಟಿ(Cockroach Janta Party)ಯ ಪ್ರತಿಭಟನೆ ಮಂಗಳವಾರ ಕೂಡಾ ಮುಂದುವರೆದಿದೆ. ಜುಲೈ 20ರಂದು ನಡೆದ ಭಾರಿ ನೂಕಾಟ, ತಳ್ಳಾಟ, ಲಾರ್ಟಿಚಾರ್ಜ್​ ಬಳಿಕವೂ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಪೊಲೀಸರು ನಿನ್ನೆ ಜಂತರ್ ಮಂತರ್‌ನಲ್ಲಿದ್ದ ಟೆಂಟ್ ಹಾಗೂ ವೇದಿಕೆಗಳನ್ನು ತೆರವುಗೊಳಿಸಿದ್ದರಾದರೂ, ಪ್ರತಿಭಟನಾಕಾರರು ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ಮರಳಿ ತಮ್ಮ ಪ್ರತಿಭಟನೆಯನ್ನು ಮುಂದುವರರೆಸಿದ್ದಾರೆ.

ಸಾಧ್ಯವಿರುವ ಎಲ್ಲೆಡೆ ಪೊಲೀಸರು ಮತ್ತು ಕ್ಷಿಪ್ರ ಕಾರ್ಯಪಡೆ (RAF) ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸ್ ಪಡೆ ತೀವ್ರ ಕಟ್ಟೆಚ್ಚರ ವಹಿಸಿದೆ. ಸಂಸತ್ತಿನ ಸಮೀಪಕ್ಕೆ ಬಂದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಪ್ರಹಾರ ಹಾಗೂ ಅಶ್ರುವಾಯು ಪ್ರಯೋಗಿಸಿದರು. ಈ ಘರ್ಷಣೆಯಲ್ಲಿ 100 ಕ್ಕೂ ಹೆಚ್ಚು ಪೊಲೀಸರು ಹಾಗೂ 60 ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ.

ಪೊಲೀಸರ ಮೇಲೆ ದಾಳಿ ಮತ್ತು ಆಸ್ತಿ ಪಾಸ್ತಿ ಹಾನಿ ಆರೋಪದ ಮೇಲೆ ದೆಹಲಿ ಪೊಲೀಸರು 70 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದ್ದು, ಅಪರಿಚಿತರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಉದ್ವಿಗ್ನತೆ ಹೆಚ್ಚುತ್ತಿದ್ದಂತೆ ಕೇಂದ್ರ ಸರ್ಕಾರ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲು ಮುಂದಾಗಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಸಿಜೆಪಿ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ತಮ್ಮ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿದ್ದಾರೆ.

ಮತ್ತಷ್ಟು ಓದಿ: ಕೇಂದ್ರ ಸಚಿವ ಜೆ.ಪಿ. ನಡ್ಡಾಗೆ 3 ಬೇಡಿಕೆ ಸಲ್ಲಿಸಿದ ಸಿಜೆಪಿ ನಾಯಕರು; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು

ಬೇಡಿಕೆಗಳೇನು?

-ಸೋನಮ್ ವಾಗ್ಚುಕ್ ಅವರನ್ನು ಯಾವುದೇ ನಿರ್ಬಂಧವಿಲ್ಲದೆ ತಕ್ಷಣ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು.

-ನೀಟ್ ಪೇಪರ್ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು.

-ನೀಟ್ (NEET) ಪೇಪರ್ ಸೋರಿಕೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಅಭ್ಯರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು.

ಸಭೆಯ ನಂತರ ಮಾತನಾಡಿದ ಸಿಜೆಪಿ ವಕ್ತಾರರು, ಸಚಿವರು ಬೇಡಿಕೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಆದರೆ ಲಿಖಿತ ಭರವಸೆ ಸಿಗುವವರೆಗೆ ನಮ್ಮ ಶಾಂತಿಯುತ ಪ್ರತಿಭಟನೆ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಮುಂದುವರಿಕೆ
ಇನ್ನೊಂದೆಡೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ಅವರ ಪತ್ನಿ ಗೀತಾಂಜಲಿ ಆಂಗ್ಮೋ ಸೋನಮ್ ಅವರ ಕೈಬರಹದ ಸಂದೇಶವನ್ನು ಹಂಚಿಕೊಂಡಿದ್ದು, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಯುವಕರ ಮೇಲಿನ ಪೋಲಿಸ್ ಕ್ರೌರ್ಯವನ್ನು ನೋಡಿ ಮನನೊಂದಿದ್ದೇನೆ. ಯುವ ನಾಯಕರಿಗೆ ಸಂಸದರನ್ನು ಸಂಸತ್ತಿನಲ್ಲಿ ಅಥವಾ ಆಸ್ಪತ್ರೆಯಲ್ಲಿ ಭೇಟಿಯಾಗಲು ಅವಕಾಶ ನೀಡುವವರೆಗೆ ನನ್ನ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸುತ್ತೇನೆ ಎಂದು ವಾಂಗ್ಚುಕ್ ಹೇಳಿರುವುದಾಗಿ ಆ ಸಂದೇಶದಲ್ಲಿ ಬರೆಯಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಮೆ ಆಸೆಗೆ ತನ್ನದೇ ಅಂಗಡಿಯಲ್ಲಿ ಕಳ್ಳತನ ಮಾಡಿದ ಚಿನ್ನದಂಗಡಿ ಮಾಲೀಕ! ಕೊನೆಗೂ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ? – Kannada News | Belagavi Gold Shop Owner Arrested for Staging Theft to Claim Insurance, CCTV Exposes Plot

ವೇರ್ಣೇಕರ ಆಂಡ್ ಸನ್ಸ್ ಚಿನ್ನದಂಗಡಿImage Credit source: tv9

ಬೆಳಗಾವಿ, ಜುಲೈ 21: ಬೆಳಗಾವಿ (Belagavi) ನಗರದ ರಾಮದೇವ ಗಲ್ಲಿಯಲ್ಲಿರುವ ವಿಪಿ ವೇರ್ಣೇಕರ ಆಂಡ್ ಸನ್ಸ್ ಚಿನ್ನದಂಗಡಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದೆ. ಅಂಗಡಿಯ ಮಾಲೀಕ ಕೃಷ್ಣಾನಂದ ವೇರ್ಣೇಕರ ಅವರೇ ವಿಮೆ ಹಣ ಪಡೆಯುವ ಉದ್ದೇಶದಿಂದ ಹಾಗೂ ಅಡವಿಟ್ಟಿದ್ದ ಚಿನ್ನವನ್ನು ಅಕ್ರಮವಾಗಿ ತಮ್ಮ ವಶಕ್ಕೆ ಪಡೆಯಲು ಕಳ್ಳತನದ ನಾಟಕ ರೂಪಿಸಿದ್ದಾಗಿ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ತನ್ನದೇ ಅಂಗಡಿಯಿಂದ 65.95 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

ಆರೋಪಿ ಕೃಷ್ಣಾನಂದ ವೇರ್ಣೇಕರ ತನ್ನ ಅಂಗಡಿಯಿಂದ ಸುಮಾರು 65.95 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಕಳುವಾಗಿದೆ ಎಂದು ಖಡೇಬಜಾರ್ ಠಾಣೆಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶ್ವಾನದಳದೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.

ಕಳ್ಳತನಕ್ಕೂ ಮುನ್ನ ಸಿಸಿಟಿವಿ ಸ್ಥಗಿತಗೊಳಿಸಲು ಯತ್ನಿಸಿದ್ದ ಆರೋಪಿ

ಕಳ್ಳತನಕ್ಕೂ ಮುನ್ನ ಸಿಸಿಟಿವಿ ಸ್ಥಗಿತಗೊಳಿಸಲು ಆರೋಪಿ ಯತ್ನಿಸಿದ್ದ. ಆದರೆ ಡಿಸ್‌ಪ್ಲೇ ಮಾತ್ರ ಆಫ್ ಆಗಿ, ಕ್ಯಾಮೆರಾ ರೆಕಾರ್ಡಿಂಗ್ ಮುಂದುವರಿದ ಕಾರಣ, ಚಿನ್ನಾಭರಣ ಮತ್ತು ನಗದನ್ನು ತೆಗೆದು ತನ್ನ ಸ್ಕೂಟಿಯ ಡಿಕ್ಕಿಯಲ್ಲಿ ಇಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ಈ ಸಾಕ್ಷ್ಯದ ಆಧಾರದ ಮೇಲೆ ವಿಚಾರಣೆ ನಡೆಸಿದಾಗ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಮೊಬೈಲ್ ವಾಪಸ್ ನೀಡಿಲ್ಲವೆಂದು ದೇವಸ್ಥಾನದಲ್ಲೇ ಗೆಳೆಯನ ಕೊಲೆ! ಆರೋಪಿ ಅರೆಸ್ಟ್

ಆರೋಪಿಯಿಂದ 519.8 ಗ್ರಾಂ ಚಿನ್ನಾಭರಣ (₹62.60 ಲಕ್ಷ), 31 ಗ್ರಾಂ ಬೆಳ್ಳಿ ಆಭರಣ (₹60 ಸಾವಿರ), ₹2.83 ಲಕ್ಷ ನಗದು ಹಾಗೂ ₹45 ಸಾವಿರ ಮೌಲ್ಯದ ಬೈಕ್ ಸೇರಿದಂತೆ ಒಟ್ಟು ಸುಮಾರು ₹65.95 ಲಕ್ಷ ಮೌಲ್ಯದ ಸ್ವತ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಡೇಬಜಾರ್ ಠಾಣೆ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

23 ವರ್ಷಗಳ ಬಳಿಕ ಸರಣಿ: ಆಸ್ಟ್ರೇಲಿಯಾ ಟೆಸ್ಟ್ ತಂಡ ಪ್ರಕಟ – Kannada News | Australia Test Squad For Bangladesh Test Series

ಬಾಂಗ್ಲಾದೇಶ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ತವರಿನಲ್ಲಿ ನಡೆಯಲಿರುವ ಈ ಸರಣಿಗಾಗಿ 13 ಸದಸ್ಯರುಗಳ ತಂಡವನ್ನು ಘೋಷಿಸಲಾಗಿದ್ದು, ತಂಡದ ನಾಯಕನಾಗಿ ಪ್ಯಾಟ್ ಕಮಿನ್ಸ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಗಾಯದ ಕಾರಣ ಕಳೆದ ಕೆಲ ಸರಣಿಗಳಿಂದ ಹೊರಗುಳಿದಿದ್ದ ಪ್ರಮುಖ ಆಟಗಾರರು ಈ ಸರಣಿ ಮೂಲಕ ಕಂಬ್ಯಾಕ್ ಮಾಡಲಿದ್ದಾರೆ.

 ಸ್ಟಾರ್ ಆಟಗಾರರ ಕಂಬ್ಯಾಕ್:

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿರುವ ಈ ಸರಣಿಯ ಮೂಲಕ ಅನುಭವಿ ವೇಗಿ ಜೋಶ್ ಹೇಝಲ್​ವುಡ್ ಮತ್ತು ಹಿರಿಯ ಸ್ಪಿನ್ನರ್ ನಾಥನ್ ಲಿಯಾನ್ ಕಂಬ್ಯಾಕ್ ಮಾಡಲಿದ್ದಾರೆ. ಈ ಇಬ್ಬರು ಗಾಯದ ಕಾರಣ ಕೆಲ ಸರಣಿಗಳಿಂದ ಹೊರಗುಳಿದಿದ್ದರು. ಇದೀಗ ಅನುಭವಿ ಬೌಲರ್​ಗಳ ಆಗಮನದೊಂದಿಗೆ ಆಸೀಸ್ ಪಡೆ ಮತ್ತಷ್ಟು ಬಲಿಷ್ಠವಾಗಿದೆ.

ಉಸ್ಮಾನ್ ಖ್ವಾಜಾ ನಿವೃತ್ತಿ:

ಆಸ್ಟ್ರೇಲಿಯಾ ತಂಡದ  ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಅವರ ನಿವೃತ್ತಿಯ ನಂತರ ಆಸ್ಟ್ರೇಲಿಯಾ ಆಡುತ್ತಿರುವ ಮೊದಲ ಟೆಸ್ಟ್ ಸರಣಿ ಇದಾಗಿದೆ. ಅವರ ಸ್ಥಾನಕ್ಕೆ ದೇಶೀಯ ಅಂಗಳದ ಅನುಭವಿ ದಾಂಡಿಗ ಜೇಕ್ ವೆದರಾಲ್ಡ್ ಅವರನ್ನು ಆಯ್ಕೆ ಮಾಡಲಾಗಿದೆ.

ಇನ್ನು ತಂಡದಲ್ಲಿ ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಕ್ಯಾಮರೋನ್ ಗ್ರೀನ್, ಮಿಚೆಲ್ ಸ್ಟಾರ್ಕ್​ನಂತಹ ಸ್ಟಾರ್ ಆಟಗಾರರ ದಂಡೇ ಇದೆ. ಅದರಂತೆ ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡ ಈ ಕೆಳಗಿನಂತಿದೆ…

ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಟ್ರಾವಿಸ್ ಹೆಡ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಜೋಶ್ ಇಂಗ್ಲಿಸ್, ಮಿಚೆಲ್ ಸ್ಟಾರ್ಕ್​, ಜೋಶ್ ಹೇಝಲ್​ವುಡ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್, ಜೇಕ್ ವೆದರಾಲ್ಡ್, ಬ್ಯೂ ವೆಬ್​​ಸ್ಟರ್.

  • ಆಸ್ಟ್ರೇಲಿಯಾದಲ್ಲಿ ಬಾಂಗ್ಲಾದೇಶ್ ಕೊನೆಯ ಟೆಸ್ಟ್ ಸರಣಿ ಆಡಿದ್ದು 2003 ರಲ್ಲಿ.
  • 23 ವರ್ಷಗಳ ಬಳಿಕ ಕಾಂಗರೂನಾಡಿನಲ್ಲಿ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ್ ಮುಖಾಮುಖಿ.

ಆಸ್ಟ್ರೇಲಿಯಾ-ಬಾಂಗ್ಲಾದೇಶ್ ಟೆಸ್ಟ್ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ ಮೈದಾನ
ಮೊದಲ ಟೆಸ್ಟ್ ಆಗಸ್ಟ್ 13–17, 2026 ಮರಾರಾ ಕ್ರಿಕೆಟ್ ಮೈದಾನ, ಡಾರ್ವಿನ್
ಎರಡನೇ ಟೆಸ್ಟ್ ಆಗಸ್ಟ್ 22–26, 2026 ಗ್ರೇಟ್ ಬ್ಯಾರಿಯರ್ ರೀಫ್ ಅರೆನಾ, ಮಕಾಯ್

ಇದನ್ನೂ ಓದಿ: ಒಂದೇ ಒಂದು ಗೋಲು… ಎಲ್ಲಾ ತಂಡಗಳಿಗೆ ಪೇನ್ ನೀಡಿದ ಸ್ಪೇನ್!

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ರೇಸ್‌ನಲ್ಲಿ ಮುನ್ನಡೆಯಲು ಆಸ್ಟ್ರೇಲಿಯಾ ತಂಡಕ್ಕೆ ಈ ತವರಿನ ಸರಣಿ ಅತ್ಯಂತ ನಿರ್ಣಾಯಕವಾಗಿದೆ. ಏಕೆಂದರೆ ಈ ಸರಣಿಯಲ್ಲಿ 2 ಪಂದ್ಯಗಳನ್ನು ಗೆದ್ದರೆ ಆಸ್ಟ್ರೇಲಿಯಾ ತಂಡವು ಮುಂದಿನ 12 ಪಂದ್ಯಗಳಲ್ಲಿ 4 ಮ್ಯಾಚ್​ ಗೆದ್ದರೆ ಫೈನಲ್​ ಆಡುವುದು ಬಹುತೇಕ ಖಚಿತವಾಗಲಿದೆ.

ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ನಡುವೆ ಟೆಸ್ಟ್ ಸರಣಿ ನಡೆಯುತ್ತಿರುವುದು ಬರೋಬ್ಬರಿ 9 ವರ್ಷಗಳ (nearly a decade) ಬಳಿಕವಾಗಿದೆ.

Published On – 10:01 am, Tue, 21 July 26

Source link

‘ಡ್ರ್ಯಾಗನ್’ಗೂ ಮುನ್ನ ಪ್ರಶಾಂತ್ ನೀಲ್ ಹೊಸ ಸಾಹಸ; ಹಾರರ್ ಸಿನಿಮಾ ಪ್ರೆಸೆಂಟರ್ ಆದ ನಿರ್ದೇಶಕ – Kannada News | Prashanth Neel Presents 418 Horror Film Amidst Jr NTR Dragon Production

ಕೆಜಿಎಫ್ ಮತ್ತು ಸಲಾರ್ ಚಿತ್ರಗಳ ಮೂಲಕ ಪ್ರಶಾಂತ್ ನೀಲ್ ಭಾರತೀಯ ಚಿತ್ರರಂಗದ ಬಿಗ್ ಡೈರೆಕ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಅವರು ಜೂನಿಯರ್ ಎನ್‌ಟಿಆರ್ ನಟನೆಯ ‘ಡ್ರಾಗನ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಪ್ರಶಾಂತ್ ನೀಲ್ ಈಗ ಹೊಸದೊಂದು ಸಣ್ಣ ಸಿನಿಮಾಗೆ ಪ್ರೆಸೆಂಟರ್ ಆಗಿ ಸಾಥ್ ನೀಡಿದ್ದಾರೆ. ಆ ಚಿತ್ರದ ಹೆಸರು ‘418’. ಪ್ರಶಾಂತ್ ನೀಲ್ ಈ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂದರೆ ಅದರಲ್ಲಿ ಏನೋ ವಿಶೇಷತೆ ಇರಲೇಬೇಕು ಎಂಬುದು ಅನೇಕರ ಕುತೂಹಲ.

‘ಪುಷ್ಪ’ ಸಿನಿಮಾ ಖ್ಯಾತಿಯ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಜೊತೆ ಸೇರಿ ಪ್ರಶಾಂತ್ ನೀಲ್ ಈ ಹಾರರ್ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ಜುಲೈ 19ರ ಭಾನುವಾರ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ. ಜುಲೈ 31ರಂದು ಈ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ರೂಮ್ ಒಳಗಡೆ ಹುಡುಗಿ ದೆವ್ವದ ಅವಾತರದಲ್ಲಿ ಕುಳಿತಿರುವ ಫಸ್ಟ್ ಲುಕ್ ಪೋಸ್ಟರ್ ಹಾರರ್ ವೈಬ್ಸ್ ನೀಡುತ್ತಿದೆ.

ಈ ಚಿತ್ರವನ್ನು ಕೀರ್ತನ್ ನಾಡಗೌಡ ನಿರ್ದೇಶನ ಮಾಡಿದ್ದಾರೆ. ಇವರು ಈ ಹಿಂದೆ ಪ್ರಶಾಂತ್ ನೀಲ್ ಅವರ ಬಳಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ಇದು ಇವರ ಮೊದಲ ನಿರ್ದೇಶನದ ಸಿನಿಮಾವಾಗಿದೆ. ಚಿತ್ರದಲ್ಲಿ ಸೂರ್ಯ ರಾಜ್, ಚರಣ್ ಲಕ್ಕರಾಜು ಮತ್ತು ಪ್ರೀತಿ ಪಗಡಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವೆಂಕಿ ಜಿಜಿ ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸಿನಿಮಾ ರಿಲೀಸ್ ಹತ್ತಿರ ಇರುವುದರಿಂದ ಮುಂದಿನ ಒಂದೆರಡು ದಿನಗಳಲ್ಲಿ ಟ್ರೈಲರ್ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಸದ್ಯಕ್ಕಂತೂ ಸೆಟ್ಟೇರಲ್ಲ ಮಹೇಶ್​ ಬಾಬು-ಪ್ರಶಾಂತ್ ನೀಲ್ ಸಿನಿಮಾ; ಇಲ್ಲಿದೆ ಕಾರಣಗಳ ಪಟ್ಟಿ

ಭಾರೀ ಕುತೂಹಲ ಮೂಡಿಸಿರುವ ‘ಡ್ರ್ಯಾಗನ್’ ಸಿನಿಮಾ

ಇನ್ನು ಪ್ರಶಾಂತ್ ನೀಲ್ ಡೈರೆಕ್ಟ್ ಮಾಡುತ್ತಿರುವ ಬಿಗ್ ಬಜೆಟ್ ಆ್ಯಕ್ಷನ್ ಸಿನಿಮಾ ‘ಡ್ರ್ಯಾಗನ್’ ಮೇಲೆ ಸಿನಿಪ್ರೀಕ್ಷಕರು ಕಣ್ಣಿಟ್ಟಿದ್ದಾರೆ. ಈ ಚಿತ್ರದಲ್ಲಿ ಮ್ಯಾನ್ ಆಫ್ ಮಾಸಸ್ ಜೂನಿಯರ್ ಎನ್‌ಟಿಆರ್ ನಾಯಕರಾಗಿ ಅಬ್ಬರಿಸಲಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್, ಸ್ಯಾಂಡಲ್‌ವುಡ್ ಬ್ಯೂಟಿ ರುಕ್ಮಿಣಿ ವಸಂತ್, ಬಿಜು ಮೆನನ್ ಹಾಗೂ ಅಶುತೋಷ್ ರಾಣಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಬಿರುಸಿನ ಶೂಟಿಂಗ್ ಹಂತದಲ್ಲಿರುವ ಈ ಹೈ-ವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ 2027ರ ಜೂನ್ 11ರಂದು ವಿಶ್ವಾದ್ಯಂತ ಭರ್ಜರಿಯಾಗಿ ತೆರೆಗೆ ಬರಲು ಸಜ್ಜಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಿಶ್ಚಿತಾರ್ಥ ಮುಗಿದು ವಾರವಷ್ಟೇ ಕಳೆದಿತ್ತು, ರಷ್ಯಾದ ಕ್ಷಿಪಣಿ ದಾಳಿಗೆ ಉಕ್ರೇನ್ ಕರಾವಳಿಯಲ್ಲಿ ಕೇರಳದ ನಾವಿಕ ಬಲಿ – Kannada News | Kerala Sailor Killed by Russian Missile in Ukraine: Akhil Joyan’s Tragic End After Engagement

ಟೆಹ್ರಾನ್, ಜುಲೈ 21: ನಿಶ್ಚಿತಾರ್ಥ ಮುಗಿದು ಕೇವಲ ಒಂದು ವಾರವಷ್ಟೇ ಆಗಿತ್ತು, ಕೆಲವೇ ತಿಂಗಳುಗಳಲ್ಲಿ ಮದುವೆಯಾಗುವುದು ಕೂಡ ನಿಶ್ಚಯವಾಗಿತ್ತು. ಹೊಸ ಕನಸುಗಳು, ಹೊಸ ಕನಸುಗಳು, ಹೊಸ ಮನೆ ಮತ್ತು ಕುಟುಂಬಕ್ಕೆ ಉತ್ತಮ ಭವಿಷ್ಯ ಕಟ್ಟಿಕೊಡುವ ಹಂಬಲ. ಆದರೆ ವಿಧಿ ಆಟವೇ ಬೇರೆಯಾಗಿತ್ತು. ಸಾವಿರಾರು ಮೈಲಿಗಳ ದೂರದಲ್ಲಿ ನಡೆಯುತ್ತಿರುವ ರಷ್ಯಾ-ಉಕ್ರೇನ್(Ukraine) ಯುದ್ಧದ ಜ್ವಾಲೆಗೆ ಕೇರಳದ 26 ವರ್ಷದ ಅಮಾಯಕರೊಬ್ಬರು ಬಲಿಯಾಗಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯ ವೆಲ್ಲರಿಕ್ಕುಂಡು ನಿವಾಸಿ, ನಾವಿಕ ಅಖಿಲ್ ಜೋಯನ್ ಉಕ್ರೇನ್‌ನ ಒಡೆಸಾ ಬಂದರು ಕರಾವಳಿಯಲ್ಲಿ ರಷ್ಯಾದ ಕ್ಷಿಪಣಿ ದಾಳಿಗೆ ಬಲಿಯಾದ ನಾಲ್ವರು ಭಾರತೀಯರಲ್ಲಿ ಒಬ್ಬರು.

ನಿಶ್ಚಿತಾರ್ಥವಾಗಿ ತಿಂಗಳು ಕಳೆಯುವಷ್ಟರಲ್ಲೇ ವಾಪಸ್ ಹೊರಟಿದ್ದ ಅಖಿಲ್
ಅಖಿಲ್ ಜೋಯನ್ ಕೇವಲ 19 ನೇ ವಯಸ್ಸಿನಲ್ಲಿಯೇ ಮರ್ಚೆಂಟ್ ನೇವಿಗೆ ಸೇರಿದ್ದರು. ಕಳೆದ 6 ವರ್ಷಗಳಿಂದ ಹಡಗಿನಲ್ಲಿ ನಾವಿಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಖಿಲ್, ತಮ್ಮ ಶ್ರಮದಿಂದಲೇ ಇತ್ತೀಚೆಗಷ್ಟೇ ಸುಂದರವಾದ ಹೊಸ ಮನೆಯೊಂದನ್ನು ಕಟ್ಟಿದ್ದರು. ಎಲೆಕ್ಟ್ರಿಕಲ್ ಅಂಗಡಿ ನಡೆಸುವ ತಂದೆ ಜೋಯನ್ ಮತ್ತು ವಿಮಾ ಏಜೆಂಟ್ ತಾಯಿ ಸ್ಯಾಲಿ ದಂಪತಿಗೆ ಅಖಿಲ್ ಏಕೈಕ ಪುತ್ರ.

ಕೆಲವೇ ದಿನಗಳ ಹಿಂದೆಯಷ್ಟೇ ಆಲಪ್ಪುಳ ಮೂಲದ ಯುವತಿಯೊಂದಿಗೆ ಅಖಿಲ್ ಅವರ ನಿಶ್ಚಿತಾರ್ಥ ವೈಭವದಿಂದ ನೆರವೇರಿತ್ತು. ಇನ್ನೆರಡು ತಿಂಗಳಲ್ಲಿ ಮದುವೆ ನಿಗದಿಯಾಗಿತ್ತು. ಮದುವೆಯ ನಂತರ ಈ ಅಪಾಯಕಾರಿ ಹಡಗಿನ ಕೆಲಸ ತೊರೆದು ಬೇರೆಡೆ ಹೊಸ ಕೆಲಸಕ್ಕೆ ಸೇರಬೇಕೆಂಬುದು ಅವರ ಕನಸಾಗಿತ್ತು. ಆದರೆ, ನಿಶ್ಚಿತಾರ್ಥ ಮುಗಿಸಿ ಕೆಲಸಕ್ಕೆ ಮರಳಿದ ಕೇವಲ ಒಂದು ತಿಂಗಳಿನಲ್ಲೇ ಈ ಭೀಕರ ದುರಂತ ಸಂಭವಿಸಿದೆ.

ಮತ್ತಷ್ಟು ಓದಿ: ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್

ಕತ್ತಲೆಯಲ್ಲಿ ಮುಳುಗಿದ ಹುಟ್ಟೂರು: ಇ-ಮೇಲ್ ಮೂಲಕ ಬಂದ ಆಘಾತಕಾರಿ ಸುದ್ದಿ
ಸೋಮವಾರ ಸಂಜೆ ಅಖಿಲ್ ಕೆಲಸ ಮಾಡುತ್ತಿದ್ದ ಶಿಪ್ಪಿಂಗ್ ಕಂಪನಿಯಿಂದ ಕುಟುಂಬಕ್ಕೆ ಬಂದ ಒಂದೇ ಒಂದು ಇಮೇಲ್ ಇಡೀ ಕುಟುಂಬದ ಕನಸುಗಳನ್ನು ನುಚ್ಚುನೂರು ಮಾಡಿತು. ಅಖಿಲ್ ತಮ್ಮ ಹುಟ್ಟೂರಿನಲ್ಲಿ ಅತ್ಯಂತ ಜನಪ್ರಿಯ ಮತ್ತು ಶಿಸ್ತಿನ ಯುವಕನಾಗಿದ್ದರು.

ಉಕ್ರೇನ್‌ನ ‘ಒಡೆಸಾ’ ಕರಾವಳಿಯಲ್ಲಿ ನಡೆದಿದ್ದೇನು?
ವಿದೇಶಿ ಮಾಧ್ಯಮಗಳ ಪ್ರಕಾರ, ಪಶ್ಚಿಮ ಆಫ್ರಿಕಾದ ಧ್ವಜವನ್ನು ಹೊಂದಿದ್ದ ‘ಎಂವಿ ಗೋಲ್ಡನ್ ಲಿಯೋ’ ಎಂಬ ಸರಕು ಸಾಗಣೆ ಹಡಗು ಉಕ್ರೇನಿಯನ್ ಜೋಳವನ್ನು ಹೊತ್ತು ಒಡೆಸಾ ಬಂದರಿನಿಂದ ಹೊರಟಿತ್ತು. ಈ ವೇಳೆ ರಷ್ಯಾದ ಪಡೆಗಳು ನಡೆಸಿದ ಭಾರಿ ದಾಳಿಗೆ ಹಡಗು ಸಿಲುಕಿ, ಭಾರತದ ನಾಲ್ವರು ಹಾಗೂ ಸಿರಿಯಾದ ಐವರು ನಾವಿಕರು ಸೇರಿದಂತೆ ಒಟ್ಟು 10 ಸಿಬ್ಬಂದಿ ದುರಂತ ಅಂತ್ಯ ಕಂಡಿದ್ದಾರೆ.

ಸದ್ಯ ಅಖಿಲ್ ಅವರ ಭೌತಿಕ ಶರೀರವನ್ನು ಸ್ವದೇಶಕ್ಕೆ ತರಲು ಕೇರಳ ಮುಖ್ಯಮಂತ್ರಿ ಕಚೇರಿ ಹಾಗೂ ನೋರ್ಕಾ ಇಲಾಖೆಯು ರಷ್ಯಾದ ಕಾನ್ಸುಲೇಟ್ ಮತ್ತು ಭಾರತದ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:36 am, Tue, 21 July 26

Source link

ಒಂದೇ ಒಂದು ಗೋಲು… ಎಲ್ಲಾ ತಂಡಗಳಿಗೆ ಪೇನ್ ನೀಡಿದ ಸ್ಪೇನ್! – Kannada News | Just One Goal: Spain Inflicts Maximum Pain

ಒಂದೇ ಒಂದು ಗೋಲು… ಫಿಫಾ ವಿಶ್ವಕಪ್​ ಅನ್ನು ಹೀಗೂ ಗೆಲ್ಲಬಹುದಾ? ಅದು ಕೂಡ ಒಂದು ಗೋಲು ಬಾರಿಸಿ, ಒಂದು ಗೋಲು ಹೊಡೆಸಿಕೊಂಡು… ಅಚ್ಚರಿ ಎನಿಸಿದರೂ ಇದುವೇ ಸತ್ಯ. ಫುಟ್‌ಬಾಲ್ ಇತಿಹಾಸದ ಸಕಲ ದಾಖಲೆಗಳನ್ನು ಧೂಳೀಪಟ ಮಾಡಿ ಸ್ಪೇನ್ ಪಡೆ ವಿಶ್ವ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದೆ. ಅದು ಸಹ ಎದುರಾಳಿಗಳ ಆಕ್ರಮಣಕ್ಕೆ ಬಂಡೆಯಂತೆ ಎದುರಾಗಿ ನಿಂತು ಎಂಬುದು ವಿಶೇಷ.

ಏಕೆಂದರೆ ಈ ಬಾರಿಯ ಟೂರ್ನಿಯಲ್ಲಿ ಸ್ಪೇನ್ ನೆಟ್ ಒಳಗೆ ನುಗ್ಗಿದ್ದು ಕೇವಲ ಒಂದೇ ಒಂದು ಗೋಲು ಎಂದರೆ ನೀವು ನಂಬಲೇಬೇಕು. ಅಂದರೆ, ಮೈದಾನದಲ್ಲಿ ಟಿಕಿ-ಟಾಕಾ ಜಾದೂ ಪ್ರದರ್ಶಿಸಿದ ‘ಲಾ ರೋಜಾ’ ಪಡೆ, ರಕ್ಷಣಾ ವಿಭಾಗದಲ್ಲಿಇಡೀ ಜಗತ್ತೇ ಬೆರಗಾಗುವಂತಹ ಪಾರುಪತ್ಯ ಮೆರೆಯಿತು. ಈ ಮೂಲಕ ವಿಶ್ವಕಪ್ ಫುಟ್‌ಬಾಲ್ ಇತಿಹಾಸದಲ್ಲೇ ಅಪ್ರತಿಮ ರಕ್ಷಣಾತ್ಮಕ ಶೈಲಿಯಲ್ಲಿ ವಿಶ್ವ ಕಿರಿಟ ಮುಡಿಗೇರಿಸಿಕೊಂಡ ತಂಡವೆಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿತು.

ಟಿಕಿ-ಟಾಕಾ ಫೈನಲ್:

ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾವನ್ನು ಹೆಚ್ಚುವರಿ ಸಮಯದಲ್ಲಿ 1-0 ಗೋಲಿನಿಂದ ಮಣಿಸಿದ ಸ್ಪೇನ್, 2026ರ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೋಚ್ ಲೂಯಿಸ್ ಡಿ ಲಾ ಫ್ಯುಯೆಂಟೆ ನೇತೃತ್ವದ ‘ಲಾ ರೋಜಾ’ (ಸ್ಪೇನ್), ಆಧುನಿಕ ಟ್ಯಾಕ್ಟಿಕಲ್ ಶೈಲಿ ಮತ್ತು ಅಪ್ರತಿಮ ಪಾಸಿಂಗ್ ಆಟದ ಮೂಲಕ ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು ಸಂಪೂರ್ಣವಾಗಿ ಕಟ್ಟಿಹಾಕಿತು. ಈ ಮೂಲಕ ಲಿಯೋನೆಲ್ ಮೆಸ್ಸಿಯವರ ವಿಶ್ವಕಪ್ ವಿದಾಯದ ಪಂದ್ಯಕ್ಕೆ ಸ್ಪೇನ್ ಶಾಕ್ ನೀಡಿತು.

ಸ್ಪೇನ್ ತಂಡದ ಈ ಗೆಲುವು ಕೇವಲ ಅದೃಷ್ಟದ್ದಲ್ಲ, ಅದು ಅವರ ಅತ್ಯುತ್ತಮ ಆಟದ ತಂತ್ರಕ್ಕೆ ಸಿಕ್ಕ ಪ್ರತಿಫಲವಾಗಿತ್ತು. ಏಕೆಂದರೆ  ಫೈನಲ್​ ಪಂದ್ಯದಲ್ಲಿ ಸ್ಪೇನ್ ಬರೋಬ್ಬರಿ 853 ಪಾಸ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಅರ್ಜೆಂಟೀನಾ ಆಟಗಾರರಿಗಿಂತ 400ಕ್ಕೂ ಹೆಚ್ಚು ಬಾರಿ ಸ್ಪೇನ್ ಚೆಂಡನ್ನು ತನ್ನ ಬಳಿಯೇ ಇಟ್ಟುಕೊಳ್ಳುವ ಮೂಲಕ ಎದುರಾಳಿಗಳಿಗೆ ಆಕ್ರಮಣ ಮಾಡಲು ಅವಕಾಶವನ್ನೇ ನೀಡಲಿಲ್ಲ.

ಬಲಿಷ್ಠ ರಕ್ಷಣಾ ಕೋಟೆ:

2026ರ ಫಿಫಾ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಸ್ಪೇನ್ ಎದುರಾಳಿಗಳಿಗೆ ಬಿಟ್ಟುಕೊಟ್ಟಿದ್ದು ಕೇವಲ ಒಂದೇ ಒಂದು ಗೋಲು. ಈ ಮೂಲಕ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಬಲಿಷ್ಠ ರಕ್ಷಣಾತ್ಮಕ ಆಟ ಆಡಿದ ಐತಿಹಾಸಿಕ ದಾಖಲೆಯನ್ನು ಸ್ಪೇನ್ ತನ್ನದಾಗಿಸಿಕೊಂಡಿದೆ.

ಇಡೀ ಟೂರ್ನಿಯಲ್ಲಿ ಸ್ಪೇನ್ ವಿರುದ್ಧ ಗೋಲು ಬಾರಿಸಲು ಸಾಧ್ಯವಾಗಿದ್ದು ಬೆಲ್ಜಿಯಂ ತಂಡಕ್ಕೆ ಮಾತ್ರ (ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ). ಅದನ್ನು ಬಿಟ್ಟರೆ ಉಳಿದ ಯಾವುದೇ ತಂಡಕ್ಕೂ ಸ್ಪೇನ್ ವಿರುದ್ಧ ಗೋಲು ಹೊಡೆಯಲು ಸಾಧ್ಯವಾಗಲಿಲ್ಲಎಂಬುದೇ ಅಚ್ಚರಿ.

ಉನೈ ಸಿಮನ್ ವಿಶ್ವ ದಾಖಲೆ:

ಸ್ಪೇನ್ ತಂಡದ ಗೋಲ್‌ಕೀಪರ್ ಉನೈ ಸಿಮನ್ ಸತತ 650 ನಿಮಿಷಗಳ ಕಾಲ ಎದುರಾಳಿಗಳಿಗೆ ಒಂದೂ ಗೋಲು ಬಿಟ್ಟುಕೊಡದೆ ವಿಶ್ವಕಪ್ ಇತಿಹಾಸದಲ್ಲೇ ಸುದೀರ್ಘ ಸಮಯ ಕ್ಲೀನ್ ಶೀಟ್ ಸಾಧಿಸಿದ ಹೊಸ ದಾಖಲೆ ಬರೆದಿದ್ದಾರೆ. ಅಂದರೆ ವಿಶ್ವಕಪ್ ಇತಿಹಾಸದಲ್ಲೇ ಯಾವುದೇ ಗೋಲ್ ಕೀಪರ್ ಇಷ್ಟೊತ್ತು ನಿಂತು ಕೇವಲ ಒಂದು ಗೋಲು ಬಿಟ್ಟು ಕೊಟ್ಟಿರುವುದು ಇದೇ ಮೊದಲು.

ಸ್ಪೇನ್ ಆಡಿದ ಒಟ್ಟು 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಎದುರಾಳಿಗಳಿಗೆ ಒಂದು ಗೋಲನ್ನೂ ಬಿಟ್ಟುಕೊಡದೆ ಟೂರ್ನಿ ಮುಗಿಸಿದೆ. ಅದರಲ್ಲೂ ಸೆಮಿಫೈನಲ್‌ನಲ್ಲಿ ಬಲಿಷ್ಠ ಫ್ರಾನ್ಸ್ ಮತ್ತು ಫೈನಲ್‌ನಲ್ಲಿ ಅರ್ಜೆಂಟೀನಾದಂತಹ ತಂಡಗಳನ್ನೂ ಸ್ಪೇನ್ ಶೂನ್ಯಕ್ಕೆ ಕಟ್ಟಿಹಾಕಿ ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದೆ.

ಐತಿಹಾಸಿಕ ಸಾಧನೆ:

ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಗೋಲು ಹೊಡೆಸಿಕೊಂಡ ಚಾಂಪಿಯನ್ ಪಟ್ಟ ಅಲಂಕರಿಸಿದ ವಿಶ್ವ ದಾಖಲೆ ಸ್ಪೇನ್ ತಂಡದ ಹೆಸರಿನಲ್ಲಿತ್ತು. ಇದೀಗ ತನ್ನದೇ ದಾಖಲೆಯನ್ನು ಮುರಿದು ‘ಲಾ ರೋಜಾ’ ಪಡೆ ಹೊಸ ಇತಿಹಾಸ ನಿರ್ಮಿಸಿದೆ.

  • 2010ರ ವಿಶ್ವಕಪ್​ನಲ್ಲಿ ಸ್ಪೇನ್ ತಂಡವು ಕೇವಲ 2 ಗೋಲು ಹೊಡೆಸಿಕೊಂಡು ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.
  • 2026 ರಲ್ಲಿ ಕೇವಲ ಒಂದು ಗೋಲು ಮಾತ್ರ ಹೊಡೆಸಿಕೊಂಡು ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಸ್ಪೇನ್ ಪಡೆ ತನ್ನದೇ ವಿಶ್ವ ದಾಖಲೆಯನ್ನು ಮುರಿದಿದೆ.

ಅತೀ ಕಡಿಮೆ ಹೊಡೆಸಿಕೊಂಡು ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡ:

  • ಸ್ಪೇನ್ (2026): 1 ಗೋಲು
  • ಸ್ಪೇನ್ (2010): 2 ಗೋಲುಗಳು
  • ಇಟಲಿ (2006): 2 ಗೋಲುಗಳು
  • ಫ್ರಾನ್ಸ್ (1998): 2 ಗೋಲುಗಳು

ಒಟ್ಟಾರೆಯಾಗಿ ಹೇಳುವುದಾದರೆ, 2026ರ ಫಿಫಾ ವಿಶ್ವಕಪ್ ಸ್ಪೇನ್ ತಂಡದ ಅದ್ಭುತ ರಕ್ಷಣಾತ್ಮಕ ಶಿಸ್ತು ಮತ್ತು ಟ್ಯಾಕ್ಟಿಕಲ್ ಪ್ರಾಬಲ್ಯಕ್ಕೆ ಸಿಕ್ಕ ಐತಿಹಾಸಿಕ ಜಯ ಎನ್ನಬಹುದು. ಏಕೆಂದರೆ ತಂಡಗಳ ಸಂಖ್ಯೆ ಹೆಚ್ಚಾದಾಗ, ಪಂದ್ಯಗಳ ಸಂಖ್ಯೆ ಬೆಳೆದಾಗ ಆಟಗಾರರ ದಣಿವು ಮತ್ತು ರಕ್ಷಣಾ ವಿಭಾಗದ ತಪ್ಪುಗಳು ಹೆಚ್ಚಾಗುವುದು ಸಹಜ. ಆದರೆ ಸ್ಪೇನ್ ಪಡೆ ಮಾತ್ರ ರಣರಂಗದಲ್ಲಿ ಶಿಸ್ತಿನ ಸಿಪಾಯಿಗಳಂತೆ ಹೋರಾಡಿತು.

ಇದನ್ನೂ ಓದಿ: ಓವರ್ ಇಲ್ಲ, ಸೂಪರ್ ಫೈವ್, ಬೋನಸ್ ರನ್: ದಿ ಹಂಡ್ರೆಡ್ ಲೀಗ್ ಹೊಸ ನಿಯಮ

48 ತಂಡಗಳ ಈ ಸುದೀರ್ಘ ಹಾಗೂ ಕಠಿಣ ವಿಶ್ವಕಪ್ ಮಹಾಸಮರದಲ್ಲಿ, ಎದುರಾಳಿಗಳು ಎಷ್ಟೇ ತಂತ್ರ ಹೂಡಿದರೂ ಸ್ಪೇನ್‌ನ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲೇ ಇಲ್ಲ. ಕೇವಲ ಒಂದು ಗೋಲು ಒಪ್ಪಿಕೊಂಡು ವಿಶ್ವಕಿರಿಟ ಧರಿಸಿದ ಈ ‘ಲಾ ರೋಜಾ’ ಪಡೆಯ ಅಪರೂಪದ ದಾಖಲೆ, ಮುಂಬರುವ ತಲೆಮಾರುಗಳ ಫುಟ್‌ಬಾಲ್ ಪ್ರೇಮಿಗಳು ಸದಾ ಕಾಲ ನೆನಪಿಸಿಕೊಳ್ಳುವಂತಹ ಅದ್ಭುತ ಮೈಲಿಗಲ್ಲಾಗಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿಯಲಿದೆ.

Source link

TV9 Kannada News Live: ಮೈಸೂರಿನಲ್ಲಿ SIR ಸಿಬ್ಬಂದಿಗೆ ಬೆದರಿಕೆ, ರಾಯಚೂರಿನಲ್ಲಿ ಬೀದಿನಾಯಿ ದಾಳಿ; ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | TV9 Kannada Live News 21 July 2026 | Karnataka Politics, Parliament Monsoon Session, Weather and Rain Updates

Breaking News Today Live Updates in Kannada:

ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದ್ದು, ಇದೇ ಹೊತ್ತಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಕಾರ್ಯಕರ್ತರು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ಕಸರತ್ತು ಜೋರಾಗಿದೆ. ಈ ವಿಚಾರವಾಗಿ ಹೈಕಮಾಂಡ್ ನಾಯಕರ ಜೊತೆ ಚರ್ಚಿಸುವ ಸಲುವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇಂದು ದೆಹಲಿಗೆ ತೆರಳಿದ್ದಾರೆ. ಮತ್ತೊಂದೆಡೆ, ಸಚಿವಾಕಾಂಕ್ಷಿ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು ಲಾಬಿ ನಡೆಸುತ್ತಿದ್ದಾರೆ. ಇವುಗಳು ಸೇರಿದಂತೆ ಇಂದಿನ ಪ್ರಮುಖ ರಾಷ್ಟ್ರೀಯ, ಅಂತರಾಷ್ಟ್ರೀಯ, ರಾಜ್ಯ, ಕ್ರೀಡೆ ಹಾಗೂ ಮನರಂಜನೆಗೆ ಸಂಬಂಧಿಸಿದ ಬೆಳವಣಿಗೆಗಳ ತಾಜಾ ಮಾಹಿತಿ ಪಡೆಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Source link

Graha Maitri: ದಾಂಪತ್ಯ ಜೀವನದಲ್ಲಿ ‘ಗ್ರಹ ಮೈತ್ರಿ’ಯ ಪ್ರಾಮುಖ್ಯತೆ; ಜಾತಕ ಹೊಂದಾಣಿಕೆ ಏಕೆ ಮುಖ್ಯ? – Kannada News | Graha Maitri for Marriage: Astrological Importance and Impact on Relationships

ದಾಂಪತ್ಯ ಜೀವನದಲ್ಲಿ ‘ಗ್ರಹ ಮೈತ್ರಿ’ಯ ಪ್ರಾಮುಖ್ಯತೆ

ಮದುವೆ ಎನ್ನುವುದು ಜೀವನಪರ್ಯಂತದ ಪವಿತ್ರ ಬಂಧ. ಹೀಗಾಗಿ, ವಿವಾಹದ ಸಿದ್ಧತೆಯಲ್ಲಿ ಎರಡು ಕುಟುಂಬಗಳ ಒಕ್ಕೂಟ ಮತ್ತು ಪರಸ್ಪರ ಸಾಮರಸ್ಯ ಎಷ್ಟಿದೆಯೋ, ಅಷ್ಟೇ ಪ್ರಾಮುಖ್ಯತೆಯನ್ನು ಜಾತಕ ಹೊಂದಾಣಿಕೆಗೂ ನೀಡಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸುಖಿ ದಾಂಪತ್ಯಕ್ಕೆ ಜಾತಕ ಹೊಂದಾಣಿಕೆ (ಅಷ್ಟ ಕೂಟ ಮಿಲನ) ಅತ್ಯಂತ ಮುಖ್ಯ. ಆದರೆ, ಇದರಲ್ಲಿ ‘ಗ್ರಹ ಮೈತ್ರಿ’ ವಹಿಸುವ ಪಾತ್ರವೇನು? ಇದು ದಾಂಪತ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

36 ಗುಣಗಳು ಮತ್ತು ಗ್ರಹ ಮೈತ್ರಿಯ ಮಹತ್ವ:

ಜಾತಕ ಹೊಂದಾಣಿಕೆಯಲ್ಲಿ ಒಟ್ಟು 36 ಗುಣಗಳನ್ನು ಪರಿಶೀಲಿಸಲಾಗುತ್ತದೆ. ಅದರಲ್ಲಿ ನಾಡಿ, ಭಕೂಟ ಮತ್ತು ಗ್ರಹ ಮೈತ್ರಿ ಮುಂತಾದ ಹಲವು ಪ್ರಮುಖ ಅಂಶಗಳಿವೆ. ಇವುಗಳಲ್ಲಿ ಗ್ರಹ ಮೈತ್ರಿಗೆ 5 ಅಂಕಗಳನ್ನು ನೀಡಲಾಗುತ್ತದೆ.

ಗ್ರಹ ಮೈತ್ರಿ ಎಂದರೆ ಏನು?

ಗ್ರಹ ಮೈತ್ರಿ ಎಂದರೆ ವಧು-ವರರ ಚಂದ್ರ ರಾಶಿಯ ಅಧಿಪತಿಗಳ (ಆಳುವ ಗ್ರಹಗಳ) ನಡುವಿನ ಸ್ನೇಹ. ಚಂದ್ರನು ಮನುಷ್ಯನ ಮನಸ್ಸು ಮತ್ತು ಭಾವನೆಗಳನ್ನು ಪ್ರತಿನಿಧಿಸುವುದರಿಂದ, ಈ ಗ್ರಹಗಳ ನಡುವಿನ ಹೊಂದಾಣಿಕೆಯು ದಂಪತಿಗಳ ಮಾನಸಿಕ ಸಂಪರ್ಕವನ್ನು ಬಹಿರಂಗಪಡಿಸುತ್ತದೆ.

ಗ್ರಹ ಮೈತ್ರಿ ವೈವಾಹಿಕ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ?

ಗ್ರಹಗಳು ಪರಸ್ಪರ ಮಿತ್ರರಾಗಿದ್ದಾರೆಯೇ ಅಥವಾ ಶತ್ರುಗಳಾಗಿದ್ದಾರೆಯೇ ಎಂಬುದರ ಮೇಲೆ ಸಂಬಂಧದ ಸ್ವರೂಪ ನಿರ್ಧಾರವಾಗುತ್ತದೆ. ಉತ್ತಮ ಗ್ರಹ ಮೈತ್ರಿ ಇದ್ದರೆ ದಂಪತಿಗಳ ನಡುವೆ ಸ್ವಾಭಾವಿಕ ತಿಳುವಳಿಕೆ, ಉತ್ತಮ ಸಂವಹನ ಮತ್ತು ಆಲೋಚನೆಗಳಲ್ಲಿ ಸಾಮರಸ್ಯವಿರುತ್ತದೆ. ಗ್ರಹ ಮೈತ್ರಿ ದುರ್ಬಲವಾಗಿದ್ದರೆ ಸಣ್ಣಪುಟ್ಟ ವಿಷಯಗಳಿಗೂ ಆಲೋಚನಾ ಶೈಲಿಯಲ್ಲಿ ಭಿನ್ನಾಭಿಪ್ರಾಯಗಳು ಮೂಡಬಹುದು. ಸಂಬಂಧದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಲು ಹೆಚ್ಚಿನ ಶ್ರಮ ಮತ್ತು ತಾಳ್ಮೆ ಅಗತ್ಯವಾಗುತ್ತದೆ.

ಗ್ರಹ ಮೈತ್ರಿ ದೋಷ ಎಂದರೆ ಏನು?

ಚಂದ್ರ ರಾಶಿಯ ಅಧಿಪತಿಗಳು ಪರಸ್ಪರ ಶತ್ರು ಗ್ರಹಗಳಾಗಿದ್ದಾಗ ಜಾತಕದಲ್ಲಿ ‘ಗ್ರಹ ಮೈತ್ರಿ ದೋಷ’ ಉಂಟಾಗುತ್ತದೆ. ಜ್ಯೋತಿಷ್ಯವು ಕೇವಲ ಜೀವನದ ಪ್ರಮುಖ ಘಟನೆಗಳನ್ನು ಮಾತ್ರವಲ್ಲ, ದಿನನಿತ್ಯದ ಅನುಭವಗಳ ಮೇಲೆಯೂ ಪ್ರಭಾವ ಬೀರುತ್ತದೆ. ಹಾಗಾಗಿ, ಗ್ರಹ ಮೈತ್ರಿ ದೋಷವಿದ್ದಾಗ ದೈನಂದಿನ ಜೀವನದಲ್ಲಿ ಸಣ್ಣಪುಟ್ಟ ಘರ್ಷಣೆಗಳು ಅಥವಾ ಆಲೋಚನೆಗಳಲ್ಲಿ ವೈರುಧ್ಯಗಳು ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಗ್ರಹ ಮೈತ್ರಿ ದೋಷವಿದ್ದರೆ ಮದುವೆ ಯಶಸ್ವಿಯಾಗುವುದಿಲ್ಲವೇ?

ಖಂಡಿತವಾಗಿಯೂ ಇಲ್ಲ. ಗ್ರಹ ಮೈತ್ರಿ ದೋಷವಿದ್ದ ತಕ್ಷಣ ಮದುವೆ ವಿಫಲವಾಗುತ್ತದೆ ಎಂದರ್ಥವಲ್ಲ. ಜ್ಯೋತಿಷ್ಯವು ಒಂದು ಮಾರ್ಗದರ್ಶಕ ಅಷ್ಟೇ. ದಾಂಪತ್ಯದ ಅಡಿಪಾಯ ನಿಂತಿರುವುದು ಇಬ್ಬರ ಭಾವನಾತ್ಮಕ ಬೆಂಬಲದ ಮೇಲೆ. ಜಾತಕದಲ್ಲಿ ಗ್ರಹ ಮೈತ್ರಿ ಕಡಿಮೆಯಿದ್ದರೂ ಸಹ, ಈ ಕೆಳಗಿನ ಗುಣಗಳು ಸಂಬಂಧವನ್ನು ಗಟ್ಟಿಗೊಳಿಸುತ್ತವೆ:

  • ಪರಸ್ಪರ ಪ್ರೀತಿ ಮತ್ತು ಗೌರವ
  • ಮುಕ್ತ ಸಂವಹನ ಹಾಗೂ ತಿಳುವಳಿಕೆ
  • ಪರಸ್ಪರ ಭಾವನೆಗಳಿಗೆ ನೀಡುವ ಬೆಲೆ

ನೀವು ಜಾತಕ ಹೊಂದಾಣಿಕೆಯಲ್ಲಿ ನಂಬಿಕೆ ಇಡುವವರಾಗಿದ್ದರೆ, ಗ್ರಹ ಮೈತ್ರಿಯ ಮಹತ್ವವನ್ನು ನಿರ್ಲಕ್ಷಿಸಬೇಡಿ. ಆದರೆ ನೆನಪಿಡಿ—ಗ್ರಹಗಳ ಅನುಕೂಲತೆಗಿಂತ ದಂಪತಿಗಳು ಪರಸ್ಪರ ನೀಡುವ ಗೌರವ ಮತ್ತು ಪ್ರೀತಿಯೇ ಯಾವುದೇ ದೋಷವನ್ನು ಮೆಟ್ಟಿ ನಿಲ್ಲುವ ನಿಜವಾದ ಶಕ್ತಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ವಿದ್ಯುತ್ ತಾಂತ್ರಿಕ ದೋಷ: ಯಶವಂತಪುರ – ಮಾದಾವರ ನಡುವೆ ರೈಲು ಸಂಚಾರ ವ್ಯತ್ಯಯ! – Kannada News | Namma Metro Green Line Disrupted: Trains Suspended Between Yeshwanthpur and Madavara

ಬೆಂಗಳೂರು, ಜುಲೈ 21: ಬೆಂಗಳೂರಿನ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ (Green Line) ಇಂದು ಬೆಳಿಗ್ಗೆ ವಿದ್ಯುತ್ ಪೂರೈಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಎದುರಾದ ಈ ವಿದ್ಯುತ್ ಸಮಸ್ಯೆಯಿಂದಾಗಿ ಪ್ರಯಾಣಿಕರು ತೀವ್ರ ಪರದಾಟ ನಡೆಸುವಂತಾಗಿತ್ತು. ಇದೀಗ 8.45ಕ್ಕೆ ಸಂಚಾರ ಆರಂಭವಾಗಿದೆ.

ಶಾರ್ಟ್-ಲೂಪ್‌ನಲ್ಲಿ ಮಾತ್ರವೇ ರೈಲು ಸಂಚಾರ

ವಿದ್ಯುತ್‌ ಸಮಸ್ಯೆಯ ಕಾರಣದಿಂದಾಗಿ ಹಸಿರು ಮಾರ್ಗದ ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ಯಶವಂತಪುರ ನಿಲ್ದಾಣಗಳ ನಡುವೆ ಮಾತ್ರ ಮೆಟ್ರೋ ರೈಲುಗಳು ಶಾರ್ಟ್-ಲೂಪ್ (Short-loop) ಸೇವೆಯಲ್ಲಿ ಸಂಚರಿಸುತ್ತಿವೆ. ಆದರೆ, ಯಶವಂತಪುರ ಮತ್ತು ಮಾದಾವರ (ನಾಗಸಂದ್ರ ವಿಸ್ತರಿತ ಮಾರ್ಗ) ನಡುವಿನ ಒಟ್ಟು 10 ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಂಚಾರವನ್ನು ಸಂಪೂರ್ಣವಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಬಿಎಂಆರ್‌ಸಿಎಲ್ ವಿಷಾದ

ಸಂಚಾರ ವ್ಯತ್ಯಯದ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL), ತಾಂತ್ರಿಕ ದೋಷವನ್ನು ಸರಿಪಡಿಸಿ ಸಾಮಾನ್ಯ ಮೆಟ್ರೋ ಸೇವೆಯನ್ನು ಶೀಘ್ರದಲ್ಲೇ ಪುನಃ ಆರಂಭಿಸಲು ನಮ್ಮ ತಾಂತ್ರಿಕ ತಂಡಗಳು ತುರ್ತು ಗತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಸೇವೆಯಲ್ಲಿ ಉಂಟಾದ ಹಠಾತ್ ಅನಾನುಕೂಲತೆಗೆ ಪ್ರಯಾಣಿಕರಲ್ಲಿ ವಿಷಾದಿಸುತ್ತೇವೆ. ಸಮಸ್ಯೆ ಬಗೆಹರಿದು ಸೇವೆ ಪುನರಾರಂಭಗೊಂಡ ತಕ್ಷಣವೇ ಮುಂದಿನ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿತ್ತು.

ಪ್ರಯಾಣಿಕರ ಪರದಾಟ

ಒಟ್ಟು 33.46 ಕಿ.ಮೀ. ಉದ್ದ ಹಾಗೂ 32 ನಿಲ್ದಾಣಗಳನ್ನು ಹೊಂದಿರುವ ಹಸಿರು ಮಾರ್ಗವು ನಗರದ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ಬೆಳಗಿನ ಪೀಕ್ ಅವರ್‌ನಲ್ಲೇ (Peak Hours) ಈ ತಾಂತ್ರಿಕ ದೋಷ ಎದುರಾಗಿದ್ದರಿಂದ ಕಚೇರಿಗಳು, ಕಾಲೇಜುಗಳು ಹಾಗೂ ಆಸ್ಪತ್ರೆಗಳಿಗೆ ತೆರಳುತ್ತಿದ್ದ ಸಾವಿರಾರು ಪ್ರಯಾಣಿಕರು ಯಶವಂತಪುರ ಹಾಗೂ ಇತರ ನಿಲ್ದಾಣಗಳಲ್ಲಿ ಸಿಲುಕಿಕೊಂಡು ಪರದಾಡುವಂತಾಗಿತ್ತು. ಇದೀಗ ಮೆಟ್ರೋ ಸಂಚಾರ ಸಹಜ ಸ್ಥಿತಿಗೆ ಮರಳಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉತ್ತರ ಪ್ರದೇಶ: ರಾಹುಲ್, ಪ್ರಿಯಾಂಕಾ, ಅಖಿಲೇಶ್ ಸಭೆ, ಮುಂಬರುವ ಅಸೆಂಬ್ಲಿ ಚುನಾವಣೆಯ ಸೀಟು ಹಂಚಿಕೆ ಲೆಕ್ಕಾಚಾರ ಶುರು – Kannada News | UP Assembly Elections: Rahul Akhilesh Meet for Alliance Seat Sharing Strategy

ನವದೆಹಲಿ, ಜುಲೈ 21: ಸಂಸತ್ ಮುಂಗಾರು ಅಧಿವೇಶನದ ಮೊದಲ ದಿನವೇ ಪ್ರತಿಪಕ್ಷಗಳ ಅಂಗಳದಲ್ಲಿ ಭಾರಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಲೋಕಸಭೆ(Lok Sabha)ಯ ವಿರೋಧ ಪಕ್ಷದ ನಾಯಕಿಯ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಸಮಾಜವಾದಿ ಪಕ್ಷದ (SP) ಅಧ್ಯಕ್ಷ ಅಖಿಲೇಶ್ ಯಾದವ್ ಸುಮಾರು ಒಂದು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದು, ಉತ್ತರ ಪ್ರದೇಶದ (UP) ಮುಂಬರುವ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆಯ ಝಲಕ್ ಕಾಣಿಸಿಕೊಂಡಿದೆ.

ಅಧಿವೇಶನದಲ್ಲಿ ‘ನೀಟ್ ಪೇಪರ್ ಸೋರಿಕೆ’ ಮತ್ತು ‘ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ’ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಗದ್ದಲದಿಂದಾಗಿ ಕಲಾಪ ಮುಂದೂಡಲ್ಪಟ್ಟ ತಕ್ಷಣ ಈ ಉನ್ನತ ಮಟ್ಟದ ಭೇಟಿ ನಡೆಯಿತು. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್ ಯಾದವ್, ಸದನ ಮುಂದೂಡಲ್ಪಟ್ಟಾಗ ನಾಯಕರು ಪರಸ್ಪರ ಭೇಟಿಯಾಗುವುದು ಸ್ವಾಭಾವಿಕ ಎಂದು ಸರಳವಾಗಿ ಹೇಳಿದರೂ, ಯುಪಿ ವಿಧಾನಸಭಾ ಚುನಾವಣೆಗೆ ಬಲವಾದ ‘ಇಂಡಿ’ (INDIA) ಒಕ್ಕೂಟದ ತಂತ್ರ ರೂಪಿಸುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿತ್ತು.

ಸೀಟು ಹಂಚಿಕೆಯ ‘ಲೆಕ್ಕಾಚಾರ’, ಕಾಂಗ್ರೆಸ್ ಬೇಡಿಕೆ ಹಾಗೂ ಎಸ್‌ಪಿ ನಿಲುವು
ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಮಾಡುವುದು ಎರಡೂ ಪಕ್ಷಗಳಿಗೆ ದೊಡ್ಡ ಸವಾಲಾಗಿದೆ. ಯುಪಿ ಕಾಂಗ್ರೆಸ್ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ಅವರು ಸಮಾಜವಾದಿ ಪಕ್ಷದೊಂದಿಗೆ ಸಮಾನವಾಗಿ ಸೀಟು ಹಂಚಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ, ಪ್ರಾಯೋಗಿಕವಾಗಿ ಕಾಂಗ್ರೆಸ್ ಸುಮಾರು 100 ಸ್ಥಾನಗಳ ಮೇಲೆ ಕಣ್ಣಿಟ್ಟಿದೆ.

2017 ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 105 ಸ್ಥಾನಗಳನ್ನು ನೀಡಲಾಗಿತ್ತು. ಆದರೆ ಪ್ರಸ್ತುತ ಸ್ಥಿತಿಯಲ್ಲಿ ಕಾಂಗ್ರೆಸ್‌ಗೆ 80 ಕ್ಕಿಂತ ಹೆಚ್ಚು ಸ್ಥಾನಗಳನ್ನು ಬಿಟ್ಟುಕೊಡಲು ಎಸ್‌ಪಿ ಸಿದ್ಧವಿಲ್ಲ. ಬರೀ ಸ್ಥಾನಗಳ ಸಂಖ್ಯೆ ಮುಖ್ಯವಲ್ಲ, ಬೂತ್ ಮಟ್ಟದಲ್ಲಿ ಹೋರಾಡಿ ಗೆಲ್ಲುವ ಸಾಮರ್ಥ್ಯವಿರುವ ಬಲವಾದ ಅಭ್ಯರ್ಥಿಗಳು ಮತ್ತು ತಳಮಟ್ಟದ ಕಾರ್ಯಕರ್ತರು ಇದ್ದರೆ ಮಾತ್ರ ಸೀಟು ಬಿಟ್ಟುಕೊಡಲಾಗುವುದು ಎಂಬುದು ಅಖಿಲೇಶ್ ಯಾದವ್ ಅವರ ದೃಢ ನಿಲುವಾಗಿದೆ.

ಮತ್ತಷ್ಟು ಓದಿ: ಸಂಸತ್ ಮುಂಗಾರು ಅಧಿವೇಶನ: ನೀಟ್, ರಾಮಮಂದಿರ ಹಗರಣಗಳ ಬಗ್ಗೆ ಚರ್ಚೆಗೆ ವಿಪಕ್ಷಗಳ ಪಟ್ಟು, ಉಭಯ ಸದನಗಳಲ್ಲಿ ತೀವ್ರ ಗದ್ದಲ

ದಲಿತ-ಮುಸ್ಲಿಂ ಮತಗಳ ಧ್ರುವೀಕರಣ
ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ ಎಸ್‌ಪಿ-ಕಾಂಗ್ರೆಸ್ ಮೈತ್ರಿಕೂಟ 43 ಸ್ಥಾನಗಳನ್ನು ಗೆದ್ದುಕೊಂಡು ಭಾರಿ ಯಶಸ್ಸು ಗಳಿಸಿತ್ತು. ಈ ಯಶಸ್ಸಿನಲ್ಲಿ ದಲಿತ ಮತದಾರರು ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಕಾಂಗ್ರೆಸ್ ದಲಿತ ನಾಯಕ ರಾಜೇಂದ್ರ ಪಾಲ್ ಗೌತಮ್ ಅವರನ್ನು ಯುಪಿ ಉಸ್ತುವಾರಿಯನ್ನಾಗಿ ಮಾಡಿ ಎಸ್‌ಪಿ ಮೇಲಿನ ಸೀಟುಗಳ ಒತ್ತಡವನ್ನು ಹೆಚ್ಚಿಸುತ್ತಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹ್ಯಾಟ್ರಿಕ್ ಗೆಲುವಿನ ಓಟಕ್ಕೆ ತಡೆ ಒಡ್ಡಬೇಕಾದರೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪರಸ್ಪರ ಹೊಂದಾಣಿಕೆಯಿಂದ ಸಾಗುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಾಯಕರ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version