ಭೀಕರ ಬರದ ಛಾಯೆಗೆ ಸಾಕ್ಷಿಯಾದ ಬಾಗಲಕೋಟೆಯ ಅದೊಂದು ಗ್ರಾಮ: ತುತ್ತಿನ ಚೀಲ ತುಂಬಿಸಿಕೊಳ್ಳಲು ಗುಳೆ ಹೋದ ಜನ – Kannada News | Bagalkote’s Lingapura Faces Severe Drought: 80% of Homes Locked as Farmers Migrate

ಗುಳೆ ಹೋದ ಗ್ರಾಮಸ್ಥರುImage Credit source: tv9 kannada

ಬಾಗಲಕೋಟೆ, ಜುಲೈ 20: ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಲಿಂಗಾಪುರ ಗ್ರಾಮಕ್ಕೆ ಕಾಲಿಟ್ಟರೆ ತೆರೆದ ಬಾಗಿಲಿನ ಮನೆಗಳನ್ನು ನೋಡುವುದೇ ಅಪರೂಪ. ಗ್ರಾಮದಲ್ಲಿ ಬರೀ ಬೀಗ ಹಾಕಿದ ಮನೆಗಳೇ ಸ್ವಾಗತಿಸುತ್ತವೆ. ಅಲ್ಲಲ್ಲಿ ಅಜ್ಜಿಯರು, ಹಿರಿಯರು ಕಟ್ಟೆ ಮೇಲೆ ಬಾಡಿದ ಮುಖದಲ್ಲಿ ಕೂತಿರುವ ದೃಶ್ಯ ಸಾಮಾನ್ಯ. ಇಡೀ ಊರಿಗೆ ಊರೇ ಬಿಕೋ ಎನ್ನುತ್ತಿದ್ದು, ಬರದ (drought) ಭೀಕರ ಛಾಯೆಗೆ ಸಾಕ್ಷಿಯಾಗಿದೆ. ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬಾಗಲಕೋಟೆ (bagalkot) ಜಿಲ್ಲೆಯಲ್ಲಿ ಬರದ ನರಕ ದರ್ಶನವಾಗುತ್ತಿದ್ದು, ರೈತರು ಬದುಕು ಸಾಗಿಸಲು ಊರನ್ನೇ ತೊರೆದು ವಲಸೆ ಹೋಗುತ್ತಿದ್ದಾರೆ.

ಗ್ರಾಮದಲ್ಲಿ ನೀರವಮೌನ

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಸದ್ಯ ನೀರವಮೌನ ಆವರಿಸಿದೆ. ಈ ಗ್ರಾಮಕ್ಕೆ ಕಾಲಿಟ್ಟರೆ ಸಾಕು ಬರದ ನರಕದರ್ಶನವಾಗುತ್ತದೆ. ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳುವುದಕ್ಕೆ ಮನೆ, ಆಸ್ತಿ-ಪಾಸ್ತಿ ಬಿಟ್ಟು ಜನರು ಗುಳೆ ಹೋಗಿದ್ದಾರೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬಿತ್ತನೆ ಇಲ್ಲ. ಕೆಲ‌ಕಡೆ ಬಿತ್ತಿದರೂ ಬೆಳೆ ಹಾಳಾಗಿದೆ. ಹೀಗಿರುವಾಗಿ ಕೃಷಿ ಕೆಲಸ ಕೂಡ ಇಲ್ಲ.

ಇದನ್ನೂ ಓದಿ: Karnataka Dam Water Level: ಇನ್ನೂ 100 ಅಡಿ ತಲುಪಿಲ್ಲ ಕೆಆರ್​ಎಸ್, ಕರ್ನಾಟಕದ ಡ್ಯಾಂಗಳ ಇಂದಿನ ನೀರಿನ ಮಟ್ಟದ ವಿವರ

ಕೃಷಿ ಚಟುವಟಿಕೆಗಳು ಇಲ್ಲದಿರುವುದು ಹಾಗೂ ಉದ್ಯೋಗ ಖಾತರಿ (ಜಿ ರಾಮ್ ಜಿ) ಕೆಲಸಗಳು ಸರಿಯಾಗಿ ಸಿಗದ ಕಾರಣ ಜೀವನ ನಡೆಸುವುದು ದುಸ್ತರವಾಗಿದೆ. ಇದರಿಂದ ಅನಿವಾರ್ಯವಾಗಿ ಗ್ರಾಮದ ರೈತರು, ಯುವ ರೈತರು ಎಲ್ಲರೂ‌ ಮನೆಗೆ ಬೀಗ ಹಾಕಿಕೊಂಡು ಮಂಗಳೂರು, ಉಡುಪಿ, ಗೋವಾ ರಾಜ್ಯಕ್ಕೆ ದುಡಿಯುವುದಕ್ಕೆ ಗುಳೆ ಹೋಗಿದ್ದಾರೆ. ‘ಮಳೆಯಿಲ್ಲ, ಬೆಳೆಯಿಲ್ಲದೆ ಬರ ಬಿದ್ದಿದೆ. ಆದ್ದರಿಂದ‌ ನಮ್ಮಂತಹ ಮುದುಕರನ್ನು ಬಿಟ್ಟು ಎಲ್ಲರೂ ಗುಳೆ ಹೋಗಿದ್ದಾರೆ ಏನು ಮಾಡುವುದು ಅಂತ ಹಿರಿಜೀವ ಲಕ್ಷ್ಮಣ ಕೋಟಿ ಅಳಲು ತೋಡಿಕೊಂಡಿದ್ದಾರೆ.

80% ಮನೆಗಳಿಗೆ ಬೀಗ

ಲಿಂಗಾಪುರ ಗ್ರಾಮದಲ್ಲಿ 300ಕ್ಕೂ ಅಧಿಕ‌ ಮನೆಗಳಿವೆ. ಇನ್ನು ಗ್ರಾಮದಲ್ಲಿ 1500 ರಿಂದ 2 ಸಾವಿರ ಜನ ಸಂಖ್ಯೆಯಿದೆ. ಬಹುತೇಕ ಗ್ರಾಮದ ‌ಜನರು ರೈತರು ಕೃಷಿ ಕಾರ್ಮಿಕರಾಗಿದ್ದಾರೆ. ಆದರೆ ಇದೀಗ ಊರಿನಲ್ಲಿ ಪ್ರತಿಶತ 80 ರಷ್ಟು ಜನರು ಊರನ್ನು ಬಿಟ್ಟು ಗುಳೆ ಹೋಗಿದ್ದಾರೆ. ಇದರಿಂದ ಗ್ರಾಮದಲ್ಲಿ ‌ಸಾಲು‌ ಸಾಲು‌ ಬೀಗ ಹಾಕಿರುವ‌ ಮನೆಗಳೇ ಕಾಣುತ್ತವೆ. ಮನೆಗೆ ಬೀಗ ಹಾಕಿ ಪತ್ನಿ, ಮಕ್ಕಳ ಸಮೇತ ರೈತರು ಊರನ್ನು ತೊರೆದಿದ್ದಾರೆ. ಇನ್ನು ಕೆಲವರು ವೃದ್ದರನ್ನು ಮನೆ ನೋಡಿಕೊಳ್ಳಲಿ ಅಂತ‌ ಬಿಟ್ಟು ಹೋಗಿದ್ದಾರೆ. ಇದರಿಂದ ಗ್ರಾಮದಲ್ಲಿ ಯುವಕರು ಕಾಣುವುದು ಅಪರೂಪವೆಂಬಂತಾಗಿದೆ.

ಕೈಗಾರಿಕೆಗಳಿಗೆ ಆದ್ಯತೆ ನೀಡುವಂತೆ ಒತ್ತಾಯ

ಈ ಊರು ಅಷ್ಟೇ ಅಲ್ಲದೇ ಗುಳೇದಗುಡ್ಡ ತಾಲೂಕಿನ ತೆಗ್ಗಿ, ಕೆಲವಡಿ, ಕರಡಿಗುಡ್ಡ, ಹಂಸನೂರು, ಬಾದಾಮಿ ತಾಲೂಕಿನ ಮುತ್ತಲಗೇರಿ, ಮುಷ್ಟಿಗೇರಿ, ಆಡಗಲ್ ಸೇರಿದಂತೆ 15ಕ್ಕೂ ಅಧಿಕ ಗ್ರಾಮಸ್ಥರು ಗುಳೆ ಹೋಗಿದ್ದಾರೆ. ಗ್ರಾಮದಲ್ಲಿ ಕೃಷಿ ಜೊತೆಗೆ ಇತರೆ ಕೆಲಸ ಮಾಡಿಕೊಂಡಿರುವ ಕೆಲ ಜನರಿದ್ದು, ಊರಿಗೆ ಜನಪ್ರನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಅರಿತು ರೈತರಿಗೆ ಪರಿಹಾರ ನೀಡಬೇಕು. ಜೊತೆಗೆ ಈ ಭಾಗದಲ್ಲಿ ಕೈಗಾರಿಕೆಗಳು ಬರಬೇಕು. ಜಿಲ್ಲೆಯಲ್ಲಿ ಪ್ಯಾಕ್ಟರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ ಇಂತಹ ಸಂದರ್ಭದಲ್ಲಿ ಜನರಿಗೆ ಆಸರೆಯಾಗುತ್ತದೆ. ಸರಕಾರ ಹಾಗೂ ಜನಪ್ರತಿನಿಧಿಗಳು ಕೈಗಾರಿಕೆಗಳಿಗೆ ಹೆಚ್ಚು ಆದ್ಯತೆ ನೀಡಿ ಕೈಗಾರಿಕೆ ತಂದರೆ ಮಾತ್ರ ಗುಳೆ ಹೋಗುವುದು ತಪ್ಪುತ್ತದೆ. ಆ ನಿಟ್ಟಿನಲ್ಲಿ ಸರಕಾರ ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಭೀಕರ ಬರಗಾಲದ ಛಾಯೆ: ಕೆರೆಗಳು ಬರಡು, ಬೆಳೆ ಒಣಗಿ ಅನ್ನದಾತ ಕಂಗಾಲು!

ಒಟ್ಟಿನಲ್ಲಿ ಕೈಕೊಟ್ಟ ಮಳೆ ಬರದ ಸ್ಥಿತಿ ತಂದೊಡ್ಡಿದ್ದು, ಗ್ರಾಮೀಣ ಭಾಗದ ಜನರು ಅದರಲ್ಲೂ ರೈತರು ಬಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ಇವರಿಗೆ ಆಸರೆಯಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಶಾಸ್ತ್ರದ ಪ್ರಕಾರ ಪತ್ನಿ ಚೆನ್ನಮ್ಮನನ್ನು ಕಳಿಸಿಕೊಟ್ಟ ದೇವೇಗೌಡ್ರು, ಕೊನೆ ಕ್ಷಣ ಹೇಗಿತ್ತು ನೋಡಿ – Kannada News | HD Devegowda Done wife Chennamma’s last rites in Hassan

ಹಾಸನ, (ಜುಲೈ 20): ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಮಣ್ಣಲ್ಲಿ ಮಣ್ಣಾಗಿದ್ದಾರೆ. ಗೌಡರ ಹುಟ್ಟೂರು ಹರದನಹಳ್ಳಿ ಮಾವಿನಕೆರೆಯ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಇಂದು (ಜುಲೈ 20) ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಹಿರಿಯ ಪುತ್ರ ಹೆಚ್​​​​ಡಿ ರಮೇಶ್ ಅವರು ಅಂತಿಮ ವಿಧಿವಿಧಾನ ಪೂರೈಸಿದ್ದು, ಇನ್ನು ದೇವೇಗೌಡ್ರು ಪತ್ನಿಯ ಕೊನೆ ಮುಖ ನೋಡಿ ಮಣ್ಣು ಹಾಕಿ ವಿದಾಯ ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತಾಯಿ ಚೆನ್ನಮ್ಮ ಅಂತಿಮ ಸಂಸ್ಕಾರದ ಬಳಿಕ ಕೇಂದ್ರ ಸಚಿವ ಕುಮಾರಸ್ವಾಮಿ ಭಾವುಕ ಮಾತು – Kannada News | H.D. Kumaraswamys Emotional Farewell to Mother Chennamma

ಹಾಸನ, ಜುಲೈ 20: ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಕಿರಿಯ ಮಗ ಹೆಚ್.ಡಿ.ರಮೇಶ್ ಅವರು ಅಂತಿಮ ವಿಧಿವಿಧಾನಗಳನ್ನು ಪೂರೈಸಿದರು. ತಾಯಿಯ ಅಂತಿಮ ಸಂಸ್ಕಾರದ ಬಳಿಕ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಭಾವುಕರಾಗಿ ಮಾತನಾಡಿದ್ದು, ತಮ್ಮ ತಾಯಿ ಶಾಶ್ವತವಾಗಿ ತಮ್ಮ ಹೃದಯದಲ್ಲಿ ನೆಲೆಸಿದ್ದಾರೆ. ಅವರ ಬದುಕು, ಅವರ ಆದರ್ಶಗಳು ಮತ್ತು ಅವರು ಜೀವನವನ್ನು ನಡೆಸಿದ ರೀತಿ ತಮ್ಮ ಕುಟುಂಬಕ್ಕೆ ಸದಾ ಸ್ಫೂರ್ತಿಯಾಗಿದ್ದು, ಅವರ ಭಾವನೆಗಳನ್ನು ಮುಂದುವರಿಸಿಕೊಂಡು ಹೋಗುವುದು ತಮ್ಮ ಕರ್ತವ್ಯ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪುರಿ ಜಗನ್ನಾಥ ರಥಯಾತ್ರೆಯ ಮಹಾಪ್ರಸಾದವನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದೇ? ಇಲ್ಲಿದೆ ಉತ್ತರ – Kannada News | Puri Jagannath Temple Prasad Booking Can we book Mahaprasad online during Rath Yatra 2026?

ನವದೆಹಲಿ, ಜುಲೈ 20: ರಥಯಾತ್ರೆ (Puri Rath Yatra) ಪ್ರಯುಕ್ತ ಒಡಿಶಾದ ಪುರಿ ಜಗನ್ನಾಥ ದೇವಸ್ಥಾನಕ್ಕೆ (Puri Jagannath Temple) ಲಕ್ಷಾಂತರ ಭಕ್ತರು ಹರಿದುಬರುತ್ತಿದ್ದು, ವಿಶ್ವದಾದ್ಯಂತ ಕೋಟ್ಯಂತರ ಜನರು ಈ ಭವ್ಯ ಆಚರಣೆಯನ್ನು ವೀಕ್ಷಿಸುತ್ತಿದ್ದಾರೆ. ಈ ನಡುವೆ, ಸರ್ಚ್ ಇಂಜಿನ್‌ಗಳಲ್ಲಿ ಅತ್ಯಂತ ಹೆಚ್ಚು ಹುಡುಕಲಾಗುತ್ತಿರುವ ಪ್ರಶ್ನೆಯೆಂದರೆ, “ಪುರಿ ಜಗನ್ನಾಥ ದೇವಾಲಯದ ಮಹಾಪ್ರಸಾದವನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ?” ಎಂಬುದಾಗಿದೆ. ಪ್ರತಿ ವರ್ಷ ಒಡಿಶಾಗೆ ಪ್ರಯಾಣಿಸದೆಯೇ ಈ ಪವಿತ್ರ ಪ್ರಸಾದವನ್ನು ಪಡೆಯಬೇಕೆಂದು ಹಂಬಲಿಸುವ ಸಾವಿರಾರು ಭಕ್ತರು ಆನ್‌ಲೈನ್ ಬುಕಿಂಗ್ ಮತ್ತು ಹೋಮ್ ಡೆಲಿವರಿ ಆಯ್ಕೆಗಳಿಗಾಗಿ ಹುಡುಕಾಡುತ್ತಿದ್ದಾರೆ.

ಆದರೆ, ಹಲವರಿಗೆ ತಿಳಿಯದ ಅಸಲಿ ಸತ್ಯ ಇಲ್ಲಿದೆ. ಜಗನ್ನಾಥ ದೇವಾಲಯದ ಮಹಾಪ್ರಸಾದಕ್ಕೆ ಯಾವುದೇ ಅಧಿಕೃತ ಆನ್‌ಲೈನ್ ಬುಕಿಂಗ್ ಅಥವಾ ಹೋಮ್ ಡೆಲಿವರಿ ಸೇವೆ ಲಭ್ಯವಿಲ್ಲ. ಇಲ್ಲಿನ ಶ್ರೀ ಜಗನ್ನಾಥ ಟೆಂಪಲ್ ಅಡ್ಮಿನಿಸ್ಟ್ರೇಷನ್ (SJTA) ಇಂತಹ ಪ್ರಯತ್ನಗಳನ್ನು ಸತತವಾಗಿ ವಿರೋಧಿಸುತ್ತಾ ಬಂದಿದ್ದು, ಪವಿತ್ರ ಪ್ರಸಾದವನ್ನು ದೇವಾಲಯದ ಸಾಂಪ್ರದಾಯಿಕ ವ್ಯವಸ್ಥೆಯ ಮೂಲಕವೇ ಪಡೆಯಬೇಕು ಎಂದು ಸ್ಪಷ್ಟಪಡಿಸಿದೆ. ಹಾಗಾಗಿ, ರಥಯಾತ್ರೆ ಸಮಯದಲ್ಲಿ ನೀವು ಯಾವುದೇ “ಮಹಾಪ್ರಸಾದ ಬುಕಿಂಗ್” ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವ ಮುನ್ನ ತಿಳಿಯಬೇಕಾದ ಮುಖ್ಯವಾದ ವಿವರಗಳು ಇಲ್ಲಿವೆ.

ಪುರಿಯ ಜಗನ್ನಾಥ ದೇವಾಲಯದಿಂದ ಆನ್‌ಲೈನ್‌ನಲ್ಲಿ ಮಹಾಪ್ರಸಾದವನ್ನು ಬುಕ್ ಮಾಡಲು ಅಥವಾ ಪಡೆಯಲು ಪ್ರಸ್ತುತ ಯಾವುದೇ ಅಧಿಕೃತ ಸೌಲಭ್ಯವಿಲ್ಲ. ಒಡಿಶಾ ಸರ್ಕಾರ ಮತ್ತು ಶ್ರೀ ಜಗನ್ನಾಥ ಟೆಂಪಲ್ ಅಡ್ಮಿನಿಸ್ಟ್ರೇಷನ್ (SJTA) ಯಾವುದೇ ಅಧಿಕೃತ ಆನ್‌ಲೈನ್ ಪ್ಲಾಟ್‌ಫಾರ್ಮ್ ಅಥವಾ ಹೋಮ್ ಡೆಲಿವರಿ ಸೇವೆಗಳ ಮೂಲಕ ಮಹಾಪ್ರಸಾದವನ್ನು ಮಾರಾಟ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ. ಭಾರತ ಮತ್ತು ವಿದೇಶಗಳ ಭಕ್ತರಿಂದ ಭಾರಿ ಬೇಡಿಕೆಯಿದ್ದರೂ, ಈ ಪವಿತ್ರ ಪ್ರಸಾದದ ಧಾರ್ಮಿಕ ಪವಿತ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಆನ್‌ಲೈನ್ ಮಾರಾಟದ ಪ್ರಸ್ತಾಪಗಳನ್ನು ತಿರಸ್ಕರಿಸಲಾಗಿದೆ.

ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ; ಉಸಿರುಗಟ್ಟಿ ಓರ್ವ ಭಕ್ತ ಸಾವು, ಹಲವರಿಗೆ ಗಾಯ

ಇದರರ್ಥ, “ಅಧಿಕೃತ ಜಗನ್ನಾಥ ಮಹಾಪ್ರಸಾದ ಬುಕಿಂಗ್” ಅಥವಾ “ಪುರಿ ಮಹಾಪ್ರಸಾದ ಹೋಮ್ ಡೆಲಿವರಿ” ಎಂದು ಹೇಳಿಕೊಳ್ಳುವ ಯಾವುದೇ ವೆಬ್‌ಸೈಟ್‌ಗಳು ಅಥವಾ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಕಂಡುಬಂದಲ್ಲಿ, ಅವುಗಳಿಗೆ ದೇವಸ್ಥಾನದ ಆಡಳಿತ ಮಂಡಳಿಯ ಯಾವುದೇ ಅನುಮತಿ ಇರುವುದಿಲ್ಲ.

ಆನ್‌ಲೈನ್ ಡೆಲಿವರಿ ಯಾಕಿಲ್ಲ?:

ಸಾಮಾನ್ಯ ದೇವಸ್ಥಾನಗಳ ಪ್ರಸಾದಕ್ಕೆ ಹೋಲಿಸಿದರೆ ಜಗನ್ನಾಥ ದೇವಸ್ಥಾನದ  ಮಹಾಪ್ರಸಾದಕ್ಕೆ ಅತ್ಯುನ್ನತ ಹಾಗೂ ವಿಶಿಷ್ಟ ಸ್ಥಾನವಿದೆ. ಈ ದೇವಸ್ಥಾನದ ಅಡುಗೆಮನೆಯಲ್ಲಿ ಎಲ್​ಪಿಜಿ ಅಥವಾ ಇತರೆ ಇಂಧನ ಬಳಸದೆ ಕಟ್ಟಿಗೆ ಒಲೆಯಲ್ಲಿ ಮಣ್ಣಿ ಪಾತ್ರೆಗಳಲ್ಲಿ ಸಿದ್ಧಪಡಿಸಿದ ಆಹಾರವನ್ನು ಮೊದಲು ಭಗವಾನ್ ಜಗನ್ನಾಥ, ಬಲಭದ್ರ ಮತ್ತು ದೇವಿ ಸುಭದ್ರೆಗೆ ನೈವೇದ್ಯ ಮಾಡಿ, ನಂತರ ವಿಮಲಾ ದೇವಿಗೆ ಸಮರ್ಪಿಸಲಾಗುತ್ತದೆ. ಈ ಎಲ್ಲಾ ಆಚರಣೆಗಳ ನಂತರ ಅದನ್ನು ‘ಮಹಾಪ್ರಸಾದ’ ಎಂದು ಕರೆಯಲಾಗುತ್ತದೆ. ಈ ಕಾರಣದಿಂದಲೇ ಈ  ಮಹಾಪ್ರಸಾದದ ರುಚಿ ಬೇರೆಲ್ಲೂ ಸಿಗಲಾರದು. ಇದನ್ನು ಯಾವುದೇ ಕೃತಕ ಸಂರಕ್ಷಕಗಳಿಲ್ಲದೆ (Preservatives) ತಯಾರಿಸುವುದರಿಂದ, ಇದು ಬಹಳ ಬೇಗನೆ ಹಾಳಾಗುತ್ತದೆ. ಹಾಗಾಗಿ ದೂರದ ಊರುಗಳಿಗೆ ಕೊರಿಯರ್ ಅಥವಾ ಡೆಲಿವರಿ ಮಾಡುವುದು ಅಸಾಧ್ಯ. ಅಲ್ಲದೆ, ಈ ಪ್ರಸಾದ ಪಾವಿತ್ರ್ಯತೆಯ ಸಂಕೇತವೂ ಹೌದು.

ಅಧಿಕಾರಿಗಳ ಪ್ರಕಾರ, ಮಹಾಪ್ರಸಾದವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದರಿಂದ ಅಥವಾ ಸಾಗಿಸುವುದರಿಂದ ಅದರ ಪವಿತ್ರತೆಗೆ ಧಕ್ಕೆಯಾಗಬಹುದು. ಪ್ರಸಾದವು ದೇವಸ್ಥಾನದ ಆವರಣದಿಂದ ಹೊರಹೋದ ನಂತರ, ಅದನ್ನು ವಿತರಿಸುವಾಗ ಧಾರ್ಮಿಕ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಖಾಸಗಿ ಕಂಪನಿಗಳು ಮತ್ತು ಫುಡ್ ಡೆಲಿವರಿ ಆಪ್‌ಗಳು ಸಲ್ಲಿಸಿದ್ದ ಪ್ರಸ್ತಾಪಗಳನ್ನು ಮಂಡಳಿಯು ತಿರಸ್ಕರಿಸಿದೆ.

ಇದನ್ನೂ ಓದಿ: Puri Jagannath Temple: ಪುರಿ ಜಗನ್ನಾಥ ದೇವಾಲಯಕ್ಕೆ ಅವಿವಾಹಿತ ಜೋಡಿ ಒಟ್ಟಿಗೆ ಭೇಟಿ ನೀಡಬಾರದು ಯಾಕೆ? ಇಲ್ಲಿದೆ ನಿಗೂಢ ರಹಸ್ಯ!

ಹಾಗಾದರೆ ಭಕ್ತರಿಗೆ ಮಹಾಪ್ರಸಾದ ಎಲ್ಲಿ ಲಭ್ಯ?:

ಈ ದೇವಸ್ಥಾನದ ಅಧಿಕೃತ ಮಹಾಪ್ರಸಾದವು ಪುರಿಯ ಜಗನ್ನಾಥ ದೇವಾಲಯದ ಸಂಕೀರ್ಣದ ಒಳಗಿರುವ ನಿಗದಿತ ವಿತರಣಾ ಪ್ರದೇಶವಾದ ‘ಆನಂದ ಬಜಾರ್’ನಲ್ಲಿ ಮಾತ್ರ ಲಭ್ಯವಿರುತ್ತದೆ. ರಥಯಾತ್ರೆಯ ಸಮಯದಲ್ಲಿ ಮತ್ತು ಸಾಮಾನ್ಯ ದಿನಗಳಲ್ಲಿ ಜಗನ್ನಾಥನ ಪವಿತ್ರ ‘ಮಹಾಪ್ರಸಾದ’ವನ್ನು ಪಡೆಯಲು ಭಕ್ತರು ಪುರಿಯ ದೇವಸ್ಥಾನದ ಒಳಗೆ ಇರುವ ವಿಶ್ವದ ಅತಿ ದೊಡ್ಡ ಅಡುಗೆಮನೆ ಎನಿಸಿಕೊಂಡಿರುವ ‘ಆನಂದ ಬಜಾರ್’ಗೆ ಖುದ್ದಾಗಿ ಭೇಟಿ ನೀಡಿ ಖರೀದಿಸಬೇಕಾಗುತ್ತದೆ. ದೇವಸ್ಥಾನದ ಎಲ್ಲಾ ಆಚರಣೆಗಳು ಮುಗಿದ ನಂತರ ಪ್ರತಿದಿನ ಭಕ್ತರು ಇಲ್ಲಿ ಹೊಸದಾಗಿ ಸಿದ್ಧಪಡಿಸಿದ ಮಹಾಪ್ರಸಾದವನ್ನು ಖರೀದಿಸುತ್ತಾರೆ. ರಥಯಾತ್ರೆಯ ದಿನಗಳಲ್ಲಿ ಲಕ್ಷಾಂತರ ಯಾತ್ರಿಕರು ಆಗಮಿಸುವುದರಿಂದ ಈ ಪ್ರಸಾದಕ್ಕೆ ಬೇಡಿಕೆ ಭಾರೀ ಹೆಚ್ಚಾಗುತ್ತದೆ.

ನಕಲಿ ಮಹಾಪ್ರಸಾದ ಬುಕಿಂಗ್ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರ:

ರಥಯಾತ್ರೆಯ ಸಮಯದಲ್ಲಿ ಆನ್‌ಲೈನ್ ಸರ್ಚ್‌ಗಳು ಹೆಚ್ಚಾಗುವುದರಿಂದ, ಭಕ್ತರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚನೆಗಳು ನಡೆಯುವ ಆತಂಕ ಹೆಚ್ಚಾಗಿದೆ. ಭಗವಾನ್ ಜಗನ್ನಾಥನ ಹೆಸರು ಬಳಸಿ ಅನಧಿಕೃತವಾಗಿ ಆನ್‌ಲೈನ್‌ನಲ್ಲಿ ಪ್ರಸಾದ ಮಾರಾಟ ಮಾಡುವ ಸಂಸ್ಥೆಗಳ ವಿರುದ್ಧ ಎಸ್‌ಜೆಟಿಎ (SJTA) ಹಲವು ಬಾರಿ ಕಾನೂನು ಆಕ್ಷೇಪಣೆಗಳನ್ನು ಎತ್ತಿದೆ.

ಜನರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು:

ಪ್ರಶ್ನೆ: ಜಗನ್ನಾಥ ದೇವಾಲಯದ ಮಹಾಪ್ರಸಾದವನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದೇ?

ಉತ್ತರ: ಖಂಡಿತವಾಗಿಯೂ ಇಲ್ಲ.

ಪ್ರಶ್ನೆ: ರಥಯಾತ್ರೆಯ ಪ್ರಸಾದ ಪಡೆಯುವುದು ಹೇಗೆ?

ಉತ್ತರ: ಜಗನ್ನಾಥ ದೇವಸ್ಥಾನದ ಒಳಗಿರುವ ಆನಂದ ಬಜಾರ್​​ನಲ್ಲಿ ಮಾತ್ರ ಪ್ರಸಾದ ಲಭ್ಯ.

ಪ್ರಶ್ನೆ: ಆನ್‌ಲೈನ್ ಮಾರಾಟಕ್ಕೆ ದೇವಸ್ಥಾನ ಮಂಡಳಿ ಅನುಮತಿ ನೀಡದಿರಲು ಕಾರಣವೇನು?

ಉತ್ತರ: ಈ ಪ್ರಸಾದವನ್ನು ಆಯಾ ದಿನಕ್ಕೆ ಬೇಕಾದಷ್ಟೇ ಮಾಡಲಾಗುತ್ತದೆ. ಇದಕ್ಕೆ ಪ್ರಿಸರ್ವೇಟಿವ್ ಹಾಕದ ಕಾರಣದಿಂದ ಕೊರಿಯರ್ ಮಾಡಿದರೆ ಅದು ತಲುವುವಷ್ಟರಲ್ಲಿ ಹಾಳಾಗುತ್ತದೆ.

ಪ್ರಶ್ನೆ: ಮಹಾಪ್ರಸಾದ ಮಾರಾಟ ಮಾಡುವ ವೆಬ್​ಸೈಟ್​ಗಳು ನಕಲಿಯೇ?

ಉತ್ತರ: ಹೌದು. ರಥಯಾತ್ರೆ ಪ್ರಯುಕ್ತ ನಕಲಿ ವೆಬ್​ಸೈಟ್​ಗಳು ಈ ಬಗ್ಗೆ ಭಕ್ತರನ್ನು ವಂಚಿಸುತ್ತಿವೆ.

ಪ್ರಶ್ನೆ: ಜಗನ್ನಾಥನ ಮಹಾಪ್ರಸಾದದ ವಿಶೇಷತೆಯೇನು?

ಉತ್ತರ: ಗ್ಯಾಸ್ ಬಳಸದೆ ಕಟ್ಟಿಗೆ ಒಲೆಯಲ್ಲಿ, ಮಣ್ಣಿನ ಮಡಕೆಗಳಲ್ಲಿ ಈ ಪ್ರಸಾದವನ್ನು ತಯಾರಿಸಲಾಗುತ್ತದೆ.

Published On – 7:16 pm, Mon, 20 July 26

Source link

‘ಅದು ನನಗೆ ಮುಖ್ಯವಲ್ಲ’; ನಿವೃತ್ತಿ ವದಂತಿ ಬಗ್ಗೆ ಮೌನ ಮುರಿದ ರೋಹಿತ್ – Kannada News | “I Will Continue”: Rohit Sharma’s Fiery Reply to Retirement Rumors After Lord’s ODI Ton

ಇಂಗ್ಲೆಂಡ್‌ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಐತಿಹಾಸಿಕ ಶತಕ ಬಾರಿಸುವ ಮೂಲಕ ರೋಹಿತ್ ಶರ್ಮಾ (Rohit Sharma) ತಮ್ಮ ನಿವೃತ್ತಿ ಕೇಳುತ್ತಿದ್ದವರಿಗೆ ಬ್ಯಾಟ್​ನಿಂದಲೇ ಉತ್ತರ ನೀಡಿದ್ದಾರೆ. ಆದಾಗ್ಯೂ ಏಕದಿನ ತಂಡದಲ್ಲಿ ರೋಹಿತ್ ಅವರ ಸ್ಥಾನ ಇನ್ನು ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಪ್ರತಿ ಸರಣಿಯ ಕೊನೆಯ ಪಂದ್ಯದಲ್ಲಿ ಮಿಂಚುವ ರೋಹಿತ್ ಉಳಿದ ಪಂದ್ಯಗಳಲ್ಲಿ ಸಪ್ಪೆ ಪ್ರದರ್ಶನ ನೀಡುತ್ತಾರೆ. ಹೀಗಾಗಿ ಕೊನೆಯ ಪಂದ್ಯದಲ್ಲಿ ಒಂದೊಳ್ಳೆ ಇನ್ನಿಂಗ್ಸ್ ಆಡಿ ಮುಂದಿನ ಸರಣಿಗೆ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಾರೆ ಎಂಬ ಆರೋಪವೂ ರೋಹಿತ್ ಮೇಲೆ ಇದೆ. ಇದೆಲ್ಲದರ ನಡುವೆ ಲಾರ್ಡ್ಸ್‌ನಲ್ಲಿ (Lord’s) ಕೊನೆಯ ಏಕದಿನ ಪಂದ್ಯ ಮುಗಿದ ಬಳಿಕ ತಮ್ಮ ನಿವೃತ್ತಿ ವದಂತಿಯ ಬಗ್ಗೆ ಮಾತನಾಡಿದ ರೋಹಿತ್ ತಮ್ಮನ್ನು ಟೀಕಿಸುವವರಿಗೆ ಸರಿಯಾಗಿಯೇ ಉತ್ತರ ನೀಡಿದ್ದಾರೆ.

ಟೀಕೆಗಳು ಕೇಳಿಬರುತ್ತಲೇ ಇವೆ

ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 138 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ರೋಹಿತ್ ಶರ್ಮಾ, ಪಂದ್ಯದ ನಂತರ ಬಿಸಿಸಿಐ ಟಿವಿಯೊಂದಿಗಿನ ಸಂಭಾಷಣೆಯಲ್ಲಿ, ಹೊರಗಿನ ಚರ್ಚೆಗಳು ತಮ್ಮ ಆಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ. ‘ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದಲೂ ಈ ರೀತಿಯ ಟೀಕೆಗಳು ಕೇಳಿಬರುತ್ತಲೇ ಇವೆ. ನಾನು ಆಡುವುದನ್ನು ನಿಲ್ಲಿಸುವವರೆಗೂ ಈ ರೀತಿಯ ಟೀಕೆಗಳು ಹರಿದುಬರುವುದು ಮುಂದುವರಿಯುತ್ತದೆ. ಹೀಗಾಗಿ ನನಗೆ ಈ ರೀತಿಯ ಟೀಕೆಗಳು ಮತ್ತು ವದಂತಿಗಳು ಮುಖ್ಯವಲ್ಲ. ನನಗೆ, ಅತ್ಯಂತ ಮುಖ್ಯವಾದ ವಿಷಯವೆಂದರೆ ನಾನು ಮೈದಾನದಲ್ಲಿ ಏನು ಮಾಡುತ್ತೇನೆ ಮತ್ತು ತಂಡದ ಯಶಸ್ಸಿಗೆ ನಾನು ಎಷ್ಟು ಕೊಡುಗೆ ನೀಡುತ್ತೇನೆ ಎಂಬುದು.

ನನ್ನ ಕೆಲಸ ಬ್ಯಾಟಿಂಗ್‌ನಲ್ಲಿ ಪ್ರದರ್ಶನ ನೀಡುವುದು

ಅಷ್ಟಕ್ಕೂ ಈ ರೀತಿಯ ವದಂತಿಗಳು ಇಲ್ಲದಿದ್ದರೆ ಯಾವುದೇ ಮೋಜು ಇರುವುದಿಲ್ಲ. ದೇಶಕ್ಕಾಗಿ ಆಡುವುದು ಮತ್ತು ರನ್ ಗಳಿಸುವುದು ಯಾವಾಗಲೂ ನನ್ನ ಗುರಿಯಾಗಿದೆ. ನನ್ನ ಕೆಲಸ ಬ್ಯಾಟಿಂಗ್‌ನಲ್ಲಿ ಪ್ರದರ್ಶನ ನೀಡುವುದು ಮತ್ತು ದೇಶವನ್ನು ಪ್ರತಿನಿಧಿಸುವುದು. ನನ್ನ ಚೊಚ್ಚಲ ಪಂದ್ಯದಿಂದಲೂ ನಾನು ಹೊಂದಿರುವ ಜವಾಬ್ದಾರಿ ಅದು, ಮತ್ತು ನಾನು ಅದನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.

IND vs ENG: ಬಾಲ್ಯದ ಗೆಳೆಯ ನೀಡಿದ ಬ್ಯಾಟ್​ನಿಂದ ಲಾರ್ಡ್ಸ್‌ನಲ್ಲಿ ಶತಕ ಬಾರಿಸಿದ ರೋಹಿತ್

ಇಡೀ ತಂಡಕ್ಕೆ ಬೇಸರವಾಗಿದೆ

ಇನ್ನು ತಂಡದ ಸರಣಿ ಸೋಲಿನ ಬಗ್ಗೆ ಮಾತನಾಡಿದ ರೋಹಿತ್, ‘ಈ ಸೋಲಿನಿಂದಾಗಿ ಇಡೀ ತಂಡಕ್ಕೆ ಬೇಸರವಾಗಿದೆ. ನಾವು ಬರ್ಮಿಂಗ್ಹ್ಯಾಮ್‌ನಲ್ಲಿ ಉತ್ತಮವಾಗಿ ಪ್ರಾರಂಭಿಸಿದೆವು ಮತ್ತು ಉತ್ತಮ ಕ್ರಿಕೆಟ್ ಆಡಿದೆವು. ಆದರೆ ಕಾರ್ಡಿಫ್‌ನಲ್ಲಿ, ನಾವು ಬ್ಯಾಟಿಂಗ್‌ನಲ್ಲಿ ಸಾಕಷ್ಟು ರನ್ ಗಳಿಸಲು ಸಾಧ್ಯವಾಗಲಿಲ್ಲ. ಇತ್ತ ಲಾರ್ಡ್ಸ್‌ನಲ್ಲಿ ಗುರಿ ಸಾಕಷ್ಟು ದೊಡ್ಡದಾಗಿತ್ತು. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು ಆದರೆ 20-25 ರನ್‌ಗಳ ಅಂತರದಲ್ಲಿ ಸೋತಿದ್ದೇವೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:20 pm, Mon, 20 July 26

Source link

ಅಡುಗೆ ಇಂಧನವಾಗಿ ಎಥನಾಲ್; ಎಲ್​ಪಿಜಿಗೆ ಮತ್ತೊಂದು ಪರ್ಯಾಯಕ್ಕೆ ಸರ್ಕಾರ ಯತ್ನ; ಸಕ್ಕರೆ ಬಗ್ಗೆ ಆವತ್ತು ಮೋದಿ ಹೇಳಿದ್ದರ ಅರ್ಥ ಇದಾ? – Kannada News | Govt thinks of using ethanol as cooking gas as surplus biofuel being produced in the country

ಕೆಲ ತಿಂಗಳ ಹಿಂದೆ ಅಸ್ಸಾಮ್​ನಲ್ಲಿ ಎಥನಾಲ್ ಫ್ಯಾಕ್ಟರಿ ಉದ್ಘಾಟನೆ ವೇಳೆ ನರೇಂದ್ರ ಮೋದಿImage Credit source: PTI

ಬೆಂಗಳೂರು, ಜುಲೈ 20: ಜೈವಿಕ ಇಂಧನವೆನಿಸಿರುವ (Bio-fuel) ಎಥನಾಲ್ ಅನ್ನು ಅಡುಗೆ ಇಂಧನವಾಗಿ ಬಳಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಎಥನಾಲ್ ಮಿಶ್ರಿತ ಪೆಟ್ರೋಲ್ (EBP- Ethanol blended Petrol) ಬಗ್ಗೆ ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ ಈಗ ಈ ಬೆಳವಣಿಗೆ ನಡೆದಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿ ಪ್ರಕಾರ, ಎಥನಾಲ್ ಅನ್ನು ಅಡುಗೆ ಅನಿಲವಾಗಿ ಬಳಸಲು ಸಾಧ್ಯವಾಗುವಂತೆ ಪಾಲಿಸಿ ಫ್ರೇಮ್​ವರ್ಕ್​ವೊಂದನ್ನು ಸರ್ಕಾರ ಸಿದ್ಧಪಡಿಸುತ್ತಿದೆ ಎನ್ನಲಾಗಿದೆ.

ಸರ್ಕಾರ ಎಥನಾಲ್ ಅನ್ನು ಅಡುಗೆ ಇಂಧನವಾಗಿ ಬಳಸಲು ಯೋಚಿಸಲು ಹಲವು ಕಾರಣಗಳಿವೆ. ಭಾರತದಲ್ಲಿ ಎಥನಾಲ್ ಬಹಳ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿರುವುದು ಒಂದು ಕಾರಣ. ಎಥನಾಲ್ ಶುದ್ಧ ಇಂಧನ ಎನ್ನುವುದು ಎರಡನೇ ಕಾರಣ. ಹಾಗೆಯೇ, ಎಥನಾಲ್ ಬಳಕೆಯಿಂದ ತೈಲ ಆಮದು ತಗ್ಗಿಸಬಹುದು. ಮತ್ತು ರೈತರು ಮತ್ತು ಸಕ್ಕರೆ ಕಾರ್ಖಾನೆಗಳಿಗೂ ಲಾಭ ಆಗುತ್ತದೆ. ಹೀಗಾಗಿ, ಹೆಚ್ಚುವರಿ ಎಥನಾಲ್ ಅನ್ನು ಸಮರ್ಪಕವಾಗಿ ವಿನಿಯೋಗಿಸಲು ಸರ್ಕಾರ ವಾಹನಗಳಾಚೆ ಅಡುಗೆ ಮನೆಗಳತ್ತ ಚಿತ್ತ ಇಟ್ಟಿದೆ.

ಇದನ್ನೂ ಓದಿ: ಗುರಿಗಿಂತ 5 ವರ್ಷ ಮುಂಚೆಯೇ ಇ20 ಅಳವಡಿಕೆ: ಸಚಿವ ಸುರೇಶ್ ಗೋಪಿ

ಸಕ್ಕರೆ ಬಳಕೆ ಮಾಡಿ ಎಂದು ಮೋದಿ ಕರೆ ಕೊಟ್ಟಿದ್ದು ನೆನಪಿದೆಯಾ?

ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ಇತ್ಯಾದಿ ಪ್ರಮುಖ ಕಾರ್ಯಕ್ರಮಗಳಲ್ಲಿ ಆಡುವ ಕೆಲ ನುಡಿಗಳು ಯಾವುದನ್ನೋ ಸೂಚಿಸುತ್ತದೆ ಎಂದು ಹೇಳುವವರಿದ್ದಾರೆ. ಕೆಲ ತಿಂಗಳ ಹಿಂದೆ ಮೋದಿ ಅವರು ರೇಡಿಯೋ ಭಾಷಣದಲ್ಲಿ ಮಾತನಾಡುತ್ತಾ, ಜನರು ತಮ್ಮ ಸಕ್ಕರೆ ಮತ್ತು ಎಣ್ಣೆ ಸೇವನೆ ಕಡಿಮೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದ್ದರು. ಅದಕ್ಕೆ ಓಗೊಟ್ಟು ಜನರು ಸಕ್ಕರೆ ಸೇವನೆ ಕಡಿಮೆ ಮಾಡಿದರೆ, ಅವರ ಆರೋಗ್ಯ ಸುಧಾರಿಸುವುದು ಹೌದು. ಹಾಗೆಯೇ, ಸಕ್ಕರೆಗೆ ಬೇಡಿಕೆ ತಗ್ಗುತ್ತದೆ. ಆಗ ಸಕ್ಕರೆ ಕಾರ್ಖಾನೆಗಳು ಎಥನಾಲ್ ಅನ್ನು ಹೆಚ್ಚೆಚ್ಚು ಉತ್ಪತ್ತಿ ಮಾಡಲು ಅವಕಾಶ ಇರುತ್ತದೆ. ಅಂದರೆ, ಜನರು ಸಕ್ಕರೆ ಸೇವನೆ ಕಡಿಮೆ ಮಾಡಿದರೆ ಎಥನಾಲ್ ಉತ್ಪಾದನೆ ಹೆಚ್ಚುತ್ತದೆ. ಇದು ನರೇಂದ್ರ ಮೋದಿ ಅವರ ಸಂದೇಶದ ಹಿಂದಿನ ಆಶಯವಾಗಿತ್ತಾ?

ಎಥನಾಲ್ ಅನ್ನು ಅಡುಗೆ ಇಂಧನವಾಗಿ ಬಳಸಲು ಸಾಧ್ಯವಾ?

ಹೌದು, ಎಥನಾಲ್ ಅನ್ನು ಅಡುಗೆ ಇಂಧನವಾಗಿ ಬಳಸಬಹುದು. ಈಗಾಗಲೇ ಹಲವು ಸಂಶೋಧನೆಗಳು ಇದನ್ನು ಖಚಿತಪಡಿಸಿವೆ. ಆದರೆ, ಎಲ್​ಪಿಜಿಗೆ ಅದರದ್ದೇ ಸ್ಟೋವ್ ಬೇಕಿರುವಂತೆ, ಎಥನಾಲ್ ಇಂಧನಕ್ಕೂ ಅದರದ್ದೇ ಸ್ಟೌವ್ ಬೇಕಾಗುತ್ತದೆ. ಎಲ್​ಪಿಜಿ ಸ್ಟೌವ್ ಅನ್ನು ಎಥನಾಲ್ ಇಂಧನಕ್ಕೆ ಬಳಸಲು ಆಗುವುದಿಲ್ಲ.

ಇದನ್ನೂ ಓದಿ: ಜಾತಿ ಪ್ರಮಾಣ ಪತ್ರದಲ್ಲಿನ ವಿಳಾಸ ಬದಲಾಯಿಸಬೇಕೇ? ಹಾಗಾದ್ರೆ ಹೀಗೆ ಮಾಡಿ

ಈ ಹಿನ್ನೆಲೆಯಲ್ಲಿ ಸರ್ಕಾರವು ಎಥನಾಲ್ ಬಳಕೆಯನ್ನು ಉತ್ತೇಜಿಸಲು ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದು ಗಮನಾರ್ಹ. ಇದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದನ್ನು ಹಂತ ಹಂತವಾಗಿ ಜಾರಿ ಮಾಡಲು ಮುಂದಾಗಬಹುದು. ಎಥನಾಲ್ ಅನ್ನು ವಿವಿಧ ಮೂಲಗಳಿದ ಉತ್ಪಾದಿಸುವತ್ತಲೂ ಸರ್ಕಾರ ಗಮನ ಹರಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಜಾತಿ ಪ್ರಮಾಣ ಪತ್ರದಲ್ಲಿನ ವಿಳಾಸ ಬದಲಾಯಿಸಬೇಕೇ? ಹಾಗಾದ್ರೆ ಹೀಗೆ ಮಾಡಿ – Kannada News | Caste Certificate: If you have these documents, changing the address on your caste certificate is easy.

ನೀವು ನಿರ್ದಿಷ್ಟ ಜಾತಿ ಅಥವಾ ವರ್ಗಕ್ಕೆ ಸೇರಿದ್ದೀರಿ ಎಂಬುದನ್ನು ದೃಢೀಕರಿಸುವ ಅಧಿಕೃತ ಸರ್ಕಾರಿ ದಾಖಲೆಯೇ ಈ ಜಾತಿ ಪ್ರಮಾಣ ಪತ್ರ (Caste certificate). ಹೌದು, ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು, ಮೀಸಲಾತಿ ಸೌಲಭ್ಯಗಳಿಗೆ ಸೇರಿದಂತೆ ಇನ್ನಿತ್ತರ ಕೆಲಸ ಕಾರ್ಯಗಳಿಗೆ ಈ ದಾಖಲೆ ನಿಮ್ಮ ಬಳಿ ಇರಲೇಬೇಕು. ಆದರೆ, ಈ ದಾಖಲೆಯಲ್ಲಿ ನೇರ ತಿದ್ದುಪಡಿ ಅವಕಾಶವಿಲ್ಲ, ಹೀಗಾಗಿ ಹೊಸ ವಿಳಾಸಕ್ಕೆ ಅನುಗುಣವಾಗಿ ನೀವು ಹೊಸ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇಲ್ಲವಾದರೆ, ಹಳೆಯ ಪ್ರಮಾಣಪತ್ರದ ಜತೆಗೆ ವಿಳಾಸ ಬದಲಾವಣೆಯನ್ನು ದೃಢೀಕರಿಸುವ ಕಾನೂನು ಅಫಿಡವಿಟ್ ಮಾಡಿಸಬೇಕು.

ಜಾತಿ ಪ್ರಮಾಣಪತ್ರ ವಿಳಾಸ ಬದಲಾಯಿಸುವುದು ಹೇಗೆ?

ಹಂತ 1: ನಿಮ್ಮ ಹತ್ತಿರದ ನಾಡಕಚೇರಿ, ಗ್ರಾಮ ಒನ್, ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ಹೊಸ ವಿಳಾಸಕ್ಕೆ ಅನುಗುಣವಾಗಿ ಹೊಸ ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿ.

ಹಂತ 2: ಜಾತಿ ಪ್ರಮಾಣಪತ್ರ ವಿಳಾಸ ಬದಲಾಯಿಸುವಾಗ ಹಳೆಯ ಜಾತಿ ಪ್ರಮಾಣಪತ್ರದ ಮೂಲ ಪ್ರತಿ, ಹೊಸ ವಿಳಾಸವನ್ನು ಹೊಂದಿರುವ ಆಧಾರ್ ಕಾರ್ಡ್ ಅಥವಾ ಇತರೆ ವಿಳಾಸದ ಪುರಾವೆ ಹಾಗೂ ಸ್ಥಳ ಬದಲಾವಣೆಯ ಕಾರಣವನ್ನು ತಿಳಿಸುವ ಸ್ವಯಂ ಘೋಷಣಾ ಪತ್ರ ನಿಮ್ಮ ಬಳಿಯಿರಲಿ.

ಹಂತ 3: ನೀವು ಸ್ಥಳಾಂತರಗೊಂಡಿದ್ದೀರಿ ಎಂಬುದನ್ನು ದೃಢೀಕರಿಸಲು, ನೋಟರಿ ಪಬ್ಲಿಕ್ ಮೂಲಕ ಮ್ಯಾಜಿಸ್ಟ್ರೇಟ್ ಅವರಿಂದ ಅಫಿಡವಿಟ್ ಮಾಡಿಸಿ.

ಹಂತ 4: ನಿಮ್ಮ ಬಳಿಯಿರುವ ಹಳೆಯ ಜಾತಿ ಪ್ರಮಾಣಪತ್ರಕ್ಕೆ ಈ ಅಫಿಡವಿಟ್ ಲಗತ್ತಿಸಿ ಅಧಿಕಾರಿಗಳಿಗೆ ಸಲ್ಲಿಸಿ.

ಇದನ್ನೂ ಓದಿ: ಈ ದಾಖಲೆಗಳು ನಿಮ್ಮ ಹತ್ರ ಇದ್ರೆ ಹೊಸ ಮನೆಗೆ ಡೋರ್ ನಂಬರ್ ಪಡೆಯೋದು ಸುಲಭ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಜಾತಿ ಪ್ರಮಾಣ ಪತ್ರದ ವಿಳಾಸ ಬದಲಾವಣೆಗೆ ಅವಕಾಶವಿದೆಯೇ?

ಉತ್ತರ: ಈ ಜಾತಿ ಪ್ರಮಾಣ ಪತ್ರದ ದಾಖಲೆಯಲ್ಲಿನ ವಿಳಾಸ ಬದಲಾವಣೆಗೆ ನೇರ ತಿದ್ದುಪಡಿ ಅವಕಾಶವಿಲ್ಲ.

ಪ್ರಶ್ನೆ: ಜಾತಿ ಪ್ರಮಾಣ ಪತ್ರದ ವಿಳಾಸ ಬದಲಾಯಿಸುವುದು ಹೇಗೆ?

ಉತ್ತರ: ನಿಮ್ಮ ಹತ್ತಿರದ ನಾಡಕಚೇರಿ, ಗ್ರಾಮ ಒನ್, ಅಥವಾ ಸೇವಾ ಸಿಂಧು ಪೋರ್ಟಲ್ ನಲ್ಲಿ ಜಾತಿ ಪ್ರಮಾಣ ಪತ್ರದ ವಿಳಾಸ ಬದಲಾಯಿಸಬಹುದು.

ಪ್ರಶ್ನೆ: ಜಾತಿ ಪ್ರಮಾಣ ಪತ್ರದ ವಿಳಾಸ ಬದಲಾವಣೆಗೆ ಯಾವೆಲ್ಲಾ ದಾಖಲೆಗಳು ಬೇಕು?

ಉತ್ತರ: ಹಳೆಯ ಜಾತಿ ಪ್ರಮಾಣಪತ್ರದ ಮೂಲ ಪ್ರತಿ, ಆಧಾರ್ ಕಾರ್ಡ್ ಅಥವಾ ಇತರೆ ವಿಳಾಸದ ಪುರಾವೆ ಹಾಗೂ ಸ್ಥಳ ಬದಲಾವಣೆಯ ಕಾರಣವನ್ನು ತಿಳಿಸುವ ಸ್ವಯಂ ಘೋಷಣಾ ಪತ್ರ ಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸೆಪ್ಟೆಂಬರ್‌ನಿಂದ ಏಕಕಾಲದಲ್ಲಿ ಶುರುವಾಗಲಿದೆ 6 ಭಾಷೆಗಳ ‘ಬಿಗ್ ಬಾಸ್’ ಹೊಸ ಶೋ – Kannada News | Bigg Boss six Languages simultaneous launch in September 2026 Kichcha Sudeep Jiostar

ಭಾರತದ ಕಿರುತೆರೆಯ ಅತ್ಯಂತ ಜನಪ್ರಿಯ ಮತ್ತು ಬೃಹತ್ ರಿಯಾಲಿಟಿ ಶೋ ‘ಬಿಗ್ ಬಾಸ್’ (Bigg Boss) ಈ ಬಾರಿ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಮುಂಬರುವ ಹಬ್ಬದ ಸೀಸನ್ ಅನ್ನು ಮತ್ತಷ್ಟು ರಂಗಾಗಿಸಲು ಜಿಯೋಸ್ಟಾರ್ (JioStar) ಸಂಸ್ಥೆಯು ದೊಡ್ಡ ಯೋಜನೆಯೊಂದನ್ನು ಪ್ರಕಟಿಸಿದೆ. ಇದೇ ಮೊದಲ ಬಾರಿಗೆ ಕನ್ನಡ ಸೇರಿದಂತೆ ಒಟ್ಟು ಆರು ಭಾಷೆಗಳ ಬಿಗ್ ಬಾಸ್ ಆವೃತ್ತಿಗಳು 2026ರ ಸೆಪ್ಟೆಂಬರ್‌ನಿಂದ ಏಕಕಾಲದಲ್ಲಿ ಪ್ರಸಾರವಾಗಲಿವೆ. ಇನ್ಮುಂದೆ ಭಾಷಾವಾರು ಬಿಗ್ ಬಾಸ್ ವೀಕ್ಷಿಸಲು ತಿಂಗಳುಗಟ್ಟಲೆ ಕಾಯಬೇಕಾಗಿಲ್ಲ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಬಾಂಗ್ಲಾ ಆವೃತ್ತಿಗಳು ಸೆಪ್ಟೆಂಬರ್‌ನಿಂದ ಜಿಯೋಸ್ಟಾರ್ ಟೆಲಿವಿಷನ್ ನೆಟ್‌ವರ್ಕ್ ಹಾಗೂ ‘ಜಿಯೋಹಾಟ್‌ಸ್ಟಾರ್’ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಏಕಕಾಲದಲ್ಲಿ ಲೈವ್ ಬರಲಿವೆ.

ಕನ್ನಡದಲ್ಲಿ ಕಿಚ್ಚ ಸುದೀಪ್ ಸಾರಥ್ಯ:

ಕನ್ನಡ ಬಿಗ್ ಬಾಸ್ ಅಂದ ತಕ್ಷಣ ಕಣ್ಣಮುಂದೆ ಬರೋದೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಈ ಬಾರಿಯೂ ಕಿಚ್ಚ ಸುದೀಪ್ ಅವರೇ ಕನ್ನಡ ಆವೃತ್ತಿಯನ್ನು ಮುನ್ನಡೆಸಲಿದ್ದಾರೆ. ಉಳಿದಂತೆ ಹಿಂದಿಯಲ್ಲಿ ಸಲ್ಮಾನ್ ಖಾನ್, ತಮಿಳಿನಲ್ಲಿ ವಿಜಯ್ ಸೇತುಪತಿ, ತೆಲುಗಿನಲ್ಲಿ ನಾಗಾರ್ಜುನ ಮತ್ತು ಮಲಯಾಳಂನಲ್ಲಿ ಮೋಹನ್ ಲಾಲ್ ಅವರು ಎಂದಿನಂತೆ ನಿರೂಪಕರಾಗಿ ಮುಂದುವರಿಯಲಿದ್ದಾರೆ. ಇನ್ನು ಬಾಂಗ್ಲಾ ಆವೃತ್ತಿಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೊಸ ನಿರೂಪಕರಾಗಿ ಎಂಟ್ರಿ ಕೊಡುತ್ತಿರುವುದು ಈ ಬಾರಿಯ ವಿಶೇಷ.

ದಾಖಲೆ ಬರೆದ ಬಿಗ್ ಬಾಸ್ ಅಂಕಿ-ಅಂಶಗಳು:

ಈ ಮೆಗಾ ಲಾಂಚ್ ನೆಪದಲ್ಲಿ ಜಿಯೋಸ್ಟಾರ್ ಸಂಸ್ಥೆಯು ‘ಇಂಡಿಯಾಸ್ ಬಿಗ್ ರಿಯಾಲಿಟಿ’ ಎಂಬ ವಿಶೇಷ ಕಾಫಿ ಟೇಬಲ್ ಬುಕ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬಿಗ್ ಬಾಸ್‌ನ 20 ವರ್ಷಗಳ ಯಶಸ್ವಿ ಪ್ರಯಾಣ ಮತ್ತು ಭಾರತೀಯ ಸಂಸ್ಕೃತಿಯ ಮೇಲೆ ಅದು ಬೀರಿದ ಪ್ರಭಾವವನ್ನು ವಿವರಿಸಲಾಗಿದೆ. ಸಂಸ್ಥೆ ಹಂಚಿಕೊಂಡಿರುವ ಕೆಲವು ಬೆರಗುಗೊಳಿಸುವ ಅಂಕಿ-ಅಂಶಗಳು ಇಲ್ಲಿವೆ.

500 ಮಿಲಿಯನ್ ವೀಕ್ಷಕರು:

2025ರಲ್ಲಿ ಆರು ಭಾಷೆಗಳ ಬಿಗ್ ಬಾಸ್ ಒಟ್ಟಾರೆ 50 ಕೋಟಿಗೂ ಹೆಚ್ಚು ವೀಕ್ಷಕರನ್ನು ತಲುಪಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲೇ 30 ಕೋಟಿಗೂ ಹೆಚ್ಚು ಜನ ಬಿಗ್ ಬಾಸ್ ವೀಕ್ಷಿಸುತ್ತಾರೆ. ಇಲ್ಲಿನ ಟಿವಿ ವೀಕ್ಷಕರಲ್ಲಿ ಪ್ರತಿ 10ರಲ್ಲಿ 8 ಜನ ಬಿಗ್ ಬಾಸ್ ನೋಡುತ್ತಾರೆ! ಇದು ದಕ್ಷಿಣದ ಇತರ ಎಲ್ಲಾ ರಿಯಾಲಿಟಿ ಶೋಗಳ ಒಟ್ಟು ವೀಕ್ಷಣೆಗಿಂತ 3.5 ಪಟ್ಟು ಹೆಚ್ಚಾಗಿದೆ.

24×7 ಲೈವ್ ಫೀಡ್ ಕ್ರೇಜ್:

ಜಿಯೋಹಾಟ್‌ಸ್ಟಾರ್‌ನಲ್ಲಿ ಪ್ರತಿ 10 ವೀಕ್ಷಕರಲ್ಲಿ 6 ಜನರು 24 ಗಂಟೆಗಳ ಲೈವ್ ಫೀಡ್ ವೀಕ್ಷಿಸುತ್ತಿದ್ದಾರೆ. 2025ರ ಸೀಸನ್‌ನಲ್ಲಿ ಬರೋಬ್ಬರಿ 1.7 ಬಿಲಿಯನ್ ಸೋಶಿಯಲ್ ಮೀಡಿಯಾ ಎಂಗೇಜ್‌ಮೆಂಟ್ ಹಾಗೂ 3 ಕೋಟಿಗೂ ಹೆಚ್ಚು ಯೂಸರ್ ಜನರೇಟೆಡ್ ಮೀಮ್ಸ್‌ ಹರಿದಾಡಿವೆ ಎಂದು ಜಿಯೋಸ್ಟಾರ್ ಸಂಸ್ಥೆಯು ಮಾಹಿತಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್ ಕನ್ನಡ

ಬಿಗ್ ಬಾಸ್ ಜನಪ್ರಿಯತೆ ಹೆಚ್ಚಾದಂತೆ ಜಾಹೀರಾತುದಾರರ ಸಂಖ್ಯೆಯೂ ಹೆಚ್ಚಿದೆ. 2025ರಲ್ಲಿ 46 ವಿಭಾಗಗಳ 625ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು ಶೋ ಜೊತೆ ಕೈಜೋಡಿಸಿದ್ದವು. ಇದರಲ್ಲಿ 49 ಹೊಸ ಬ್ರ್ಯಾಂಡ್‌ಗಳೂ ಸೇರಿದ್ದವು. ಶೋನಲ್ಲಿ ಭಾಗವಹಿಸಿದ ಬ್ರ್ಯಾಂಡ್‌ಗಳ ಜಾಗೃತಿ ಮತ್ತು ಮಾರಾಟದ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ಜಿಯೋಸ್ಟಾರ್ ತಿಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಣ್ಣಲ್ಲಿ ಮಣ್ಣಾದ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ – Kannada News | Chennamma’s Funeral: Final Rites Performed at Mavinkere with Traditional Rituals

ಹಾಸನ, ಜುಲೈ 20: ಶನಿವಾರ ಸಂಜೆ ವಿಧಿವಶರಾಗಿದ್ದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ಇಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಗ್ರಾಮದ ತೋಟದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿದೆ. ದೇವೇಗೌಡರೊಂದಿಗಿನ 72 ವರ್ಷಗಳ ಸುದೀರ್ಘ ದಾಂಪತ್ಯ ಯಾನವನ್ನು ಚೆನ್ನಮ್ಮ ಮುಗಿಸಿದ್ದಾರೆ. ಅಂತಿಮ ವಿಧಿವಿಧಾನದಲ್ಲಿ ಭಾಗಿಯಾಗಿದ್ದ ಪುತ್ರರಾದ ಹೆಚ್.ಡಿ ರಮೇಶ್‌, ಹೆಚ್‌ಡಿ ರೇವಣ್ಣ, ಮೊಮ್ಮಗ ಸೂರಜ್, ಚೆನ್ನಮ್ಮನವರ ಪಲ್ಲಕ್ಕಿಗೆ ಹೆಗಲು ಕೊಟ್ಟರು. ಸಮಾಧಿ ಗುಂಡಿಗೆ ಪಾರ್ಥಿವ ಶರೀರ ಇಳಿಸಿ ಅಂತಿಮ ಪೂಜೆ ಸಲ್ಲಿಸಲಾಗಿದ್ದು, ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಚೆನ್ನಮ್ಮನಿಗೆ ಹೂವು, ತುಳಸಿ, ಪತ್ರೆ ಸಮರ್ಪಿಸಿದರು. ಹೀಗೆ ಎಲ್ಲಾ ಪೂಜೆಗಳ ಬಳಿಕ ಸಕಲ ಸರ್ಕಾರಿ ಗೌರವದೊಂದಿಗೆ ಚೆನ್ನಮ್ಮನವರ ಅಂತ್ಯಕ್ರಿಯೆ ನೆರವೇರಿತು. 8 ದಶಕ ಸಾರ್ಥಕ ಜೀವನ ನಡೆಸಿದ್ದ ಚೆನ್ನಮ್ಮ, ರಂಗನಾಥನ ಬೆಟ್ಟದ ತಪ್ಪಲಿನಲ್ಲೇ ಮಣ್ಣಲ್ಲಿ ಮಣ್ಣಾದರು. ಸಿಎಂ ಡಿಕೆ ಶಿವಕುಮಾರ್​, ಕೇಂದ್ರ ಸಚಿವರಾದ ಶಿವರಾಜ್ ಸಿಂಗ್‌ ಚೌಹಾಣ್‌, ಪ್ರಲ್ಹಾದ ಜೋಶಿ, ವಿ ಸೋಮಣ್ಣ ಸೇರಿದಂತೆ ಹಲವು ರಾಜಕೀಯ ನಾಯಕರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಎಥನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯನ್ನು ವೈಜ್ಞಾನಿಕವಾಗಿ, ಹಂತ ಹಂತವಾಗಿ ಜಾರಿಗೊಳಿಸಲಾಗಿದೆ: ಸಚಿವ ಸುರೇಶ್ ಗೋಪಿ – Kannada News | Ethanol Blended Petrol EBP Programme implemented scientifically, E20 target reached 5 years ahead, tells govt

ನವದೆಹಲಿ, ಜುಲೈ 20: ಎಥನಾಲ್ ಮಿಶ್ರಿತ ಪೆಟ್ರೋಲ್ ಇಂಧನದ ಯೋಜನೆಯನ್ನು (ಇಬಿಪಿ) ವೈಜ್ಞಾನಿಕವಾಗಿ ಮತ್ತು ಹಂತ ಹಂತವಾಗಿ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ (Suresh Gopi) ತಿಳಿಸಿದ್ದಾರೆ. ರಾಜ್ಯಸಭೆಗೆ ಇಂದು ಸೋಮವಾರ ನೀಡಿದ ಲಿಖಿತ ಉತ್ತರದಲ್ಲಿ ಅವರು, ಇ20 ಗುರಿಯನ್ನು ಸರ್ಕಾರ ಐದು ವರ್ಷ ಮುಂಚೆಯೇ ಮುಟ್ಟಿರುವುದನ್ನು ಎತ್ತಿ ತೋರಿಸಿದ್ದಾರೆ. ಹಾಗೆಯೇ, ಶೇ. 20ಕ್ಕಿಂತ ಹೆಚ್ಚು ಎಥನಾಲ್ ಅನ್ನು ಮಿಶ್ರಣ ಮಾಡುವ ಇರಾದೆ ಸರ್ಕಾರಕ್ಕಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

‘ಭಾರತವು ನಿಗದಿತ ಅವಧಿಗಿಂತ ಐದು ವರ್ಷ ಮುಂಚಿತವಾಗಿಯೇ ಶೇ. 20 ರಷ್ಟು ಎಥನಾಲ್ ಮಿಶ್ರಣದ ಗುರಿಯನ್ನು ಯಶಸ್ವಿಯಾಗಿ ತಲುಪಿದೆ. ಸದ್ಯಕ್ಕೆ ಈ ಪ್ರಮಾಣವನ್ನು ಶೇ. 20 ಕ್ಕಿಂತ ಹೆಚ್ಚಿಸುವ ಯಾವುದೇ ಆಲೋಚನೆ ಸರ್ಕಾರದ ಮುಂದಿಲ್ಲ. ಮುಂದಿನ ದಿನಗಳಲ್ಲಿ ತಜ್ಞರ ಸಮಿತಿಯ ವರದಿ ಹಾಗೂ ಆಟೋಮೊಬೈಲ್ ಉದ್ಯಮದ ಸಹಮತಿಯ ಆಧಾರದ ಮೇಲಷ್ಟೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸಚಿವರು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಂಸತ್​ನಲ್ಲಿ ತಮ್ಮನ್ನು ಹೊಗಳಿದ ಪ್ರಧಾನಿಗೆ ಸ್ಕೈರೂಟ್ ಏರೋಸ್ಪೇಸ್ ಧನ್ಯವಾದ

ಎಥನಾಲ್​ನಿಂದ ವಾಹನಗಳಿಗೆ ತೊಂದರೆ ಆಗಿದ್ದು ಕಂಡುಬಂದಿಲ್ಲ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಎಥನಾಲ್ ಮಿಶ್ರಿತ ಪೆಟ್ರೋಲ್’ (EBP) ಯೋಜನೆಯಡಿ ಶೇಕಡಾ 20 ರಷ್ಟು ಎಥನಾಲ್ ಮಿಶ್ರಣವಿರುವ ಪೆಟ್ರೋಲ್ (E20) ಬಳಕೆಯಿಂದ ವಾಹನಗಳ ಎಂಜಿನ್ ಜಖಂಗೊಳ್ಳುತ್ತಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ರಾಜ್ಯ ಸಚಿವರು ಹೇಳಿದ್ದಾರೆ.

ಇ-20 ಇಂಧನ ಬಳಕೆಯಿಂದಾಗಿ ದೇಶದಲ್ಲಿ ಯಾವುದೇ ರೀತಿಯ ವ್ಯಾಪಕ ಎಂಜಿನ್ ವೈಫಲ್ಯಗಳು ವರದಿಯಾಗಿಲ್ಲ. ಇ-20 ಪೆಟ್ರೋಲ್ ಬಳಕೆಯಿಂದಾಗಿ ವಾಹನಗಳಲ್ಲಿ ಇಂಧನ ಪಂಪ್ ತುಕ್ಕು ಹಿಡಿಯುವುದು ಅಥವಾ ಎಂಜಿನ್ ಬ್ರೇಕ್‌ಡೌನ್ ಆಗುತ್ತಿರುವ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಇ-10 ಇಂಧನಕ್ಕೆ ತಕ್ಕಂತೆ ತಯಾರಾದ ಹಳೆಯ ವಾಹನಗಳಲ್ಲಿ ಇ-20 ಬಳಸಿದಾಗ ಮೈಲೇಜ್‌ನಲ್ಲಿ ಕೇವಲ ಶೇ. 3 ರಿಂದ ಶೇ. 5 ರಷ್ಟು ಮಾತ್ರ ಅತ್ಯಲ್ಪ ಕುಸಿತ ಕಂಡುಬರಬಹುದು ಎಂದಿದ್ದಾರೆ.

ಎಎನ್​ಐ ಸುದ್ದಿ ಸಂಸ್ಥೆಯ ಟ್ವೀಟ್

ಎಥನಾಲ್ ಮಿಶ್ರಣ ಪ್ರಮಾಣವನ್ನು ಶೇ. 20ಕ್ಕಿಂತ ಹೆಚ್ಚು ಮಟ್ಟಕ್ಕೆ ಏರಿಸುವ ಆಲೋಚನೆ ಸರ್ಕಾರಕ್ಕೆ ಇಲ್ಲ. ಮುಂದಿನ ದಿನಗಳಲ್ಲಿ ತಜ್ಞರ ಸಮಿತಿಯ ವರದಿ ಹಾಗೂ ಆಟೋಮೊಬೈಲ್ ಉದ್ಯಮದ ಸಹಮತಿಯ ಆಧಾರದ ಮೇಲಷ್ಟೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುರೇಶ್ ಗೋಪಿ ತಿಳಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಬಳಿ 20 ಲಕ್ಷ ರೂ ಇದ್ದರೆ ಎಲ್ಲಿ ಹೂಡಿಕೆ ಮಾಡಬೇಕು? ಇಲ್ಲಿದೆ ಮೂರು ಮಾದರಿಗಳು

ಇಬಿಪಿ ಯೋಜನೆಯಿಂದ ದೇಶಕ್ಕೆ ಬೃಹತ್ ಆರ್ಥಿಕ ಉಳಿತಾಯ

2014 ರಿಂದ ಈ ಯೋಜನೆಯಿಂದಾಗಿ ದೇಶಕ್ಕೆ ₹1.97 ಲಕ್ಷ ಕೋಟಿಗೂ ಅಧಿಕ ವಿದೇಶಿ ವಿನಿಮಯ ಉಳಿತಾಯವಾಗಿದೆ. ಜೊತೆಗೆ 3.16 ಕೋಟಿ ಮೆಟ್ರಿಕ್ ಟನ್ ಕಚ್ಚಾ ತೈಲ ಆಮದು ಕಡಿಮೆಯಾಗಿದೆ ಎಂಬ ಸಂಗತಿಯನ್ನು ಈ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ಪರಿಸರ ಮತ್ತು ರೈತರಿಗೆ ಲಾಭ

ಈ ಇಬಿಪಿ ಯೋಜನೆಯಿಂದಾಗಿ 9.52 ಕೋಟಿ ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ (CO₂) ಹೊರಸೂಸುವಿಕೆ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ, ದೇಶದ ರೈತರಿಗೆ ಎಥನಾಲ್ ಪೂರೈಕೆಯಿಂದಾಗಿ ₹1.66 lakh ಕೋಟಿಗೂ ಅಧಿಕ ಹೆಚ್ಚುವರಿ ಆದಾಯ ಲಭಿಸಿದೆ. ರೈತರ ಹಿತದೃಷ್ಟಿಯಿಂದ ಕಬ್ಬಿನ ಜೊತೆಗೆ ಜೋಳ, ನವಣೆ ಹಾಗೂ ಹೆಚ್ಚುವರಿ ಧಾನ್ಯಗಳಿಂದಲೂ ಎಥನಾಲ್ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version