Headlines

ಟಿ20 ಇತಿಹಾಸದಲ್ಲೇ ಅತ್ಯಂತ ಹೀನಾಯವಾಗಿ ಸೋತ ಆಸ್ಟ್ರೇಲಿಯಾ – Kannada News | Australia’s biggest loss in T20 international cricket

ಟಿ20 ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾ ತಂಡವು 222 ಪಂದ್ಯಗಳನ್ನಾಡಿದೆ. ಈ ಇನ್ನೂರ ಇಪ್ಪೆರಡು ಮ್ಯಾಚ್​ಗಳಲ್ಲಿ ಆಸೀಸ್ ಪಡೆ 122 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಸೋತಿರುವುದು ಕೇವಲ 90 ಪಂದ್ಯಗಳಲ್ಲಿ ಮಾತ್ರ. ಈ ತೊಂಬತ್ತು ಪಂದ್ಯಗಳಲ್ಲಿ ಅತ್ಯಂತ ಹೀನಾಯವಾಗಿ ಸೋತಿರುವುದು ಪಾಕಿಸ್ತಾನ್ ವಿರುದ್ಧ. Source link

Read More

Daily Devotional: ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು! – Kannada News | Daily Devotional: Why Taking Selfies or Photos in Temple Sanctuaries is Discouraged: A Spiritual Perspective

ಬೆಂಗಳೂರು, ಫೆಬ್ರುವರಿ​ 02: ಸಾಮಾನ್ಯವಾಗಿ ನಾವು ಹಿರಿಯರೊಂದಿಗೆ, ಕಾರ್ಯಕ್ರಮಗಳಲ್ಲಿ ಅಥವಾ ಸುಂದರ ಪ್ರಕೃತಿಯ ನಡುವೆ ಫೋಟೋಗಳನ್ನು ತೆಗೆದುಕೊಳ್ಳಲು ಬಯಸುತ್ತೇವೆ. ಆದರೆ ದೇವಾಲಯಗಳ ವಿಷಯದಲ್ಲಿ, ವಿಶೇಷವಾಗಿ ಮೂಲ ವಿಗ್ರಹ ಅಥವಾ ಗರ್ಭಗುಡಿಯೊಳಗೆ ಫೋಟೋಗಳನ್ನು, ಸೆಲ್ಫಿಗಳನ್ನು ತೆಗೆದುಕೊಳ್ಳುವುದು ಅಷ್ಟು ಶುಭವಲ್ಲ ಎಂದು ಹೇಳಲಾಗಿದೆ. ಮೂಲ ವಿಗ್ರಹಗಳನ್ನು ವಾಸ್ತುಶಾಸ್ತ್ರದ ಪ್ರಕಾರ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಗಿರುತ್ತದೆ. ಅವು ಸತತವಾಗಿ ಅಭಿಷೇಕ, ಪೂಜೆಗಳಿಂದ ದೈವಿಕ ಶಕ್ತಿಯನ್ನು ಹೊಂದಿರುತ್ತವೆ. ಈ ವಿಗ್ರಹಗಳು ಪಂಚಭೂತಗಳ ನಿಯಂತ್ರಣದಲ್ಲಿರುತ್ತವೆ ಮತ್ತು ಪ್ರಬಲ ಆಧ್ಯಾತ್ಮಿಕ ಶಕ್ತಿಯನ್ನು ಹೊರಸೂಸುತ್ತವೆ. ಭಕ್ತರು ಭಕ್ತಿ ಅಥವಾ ಪ್ರೀತಿಯಿಂದ…

Read More

ಲಕ್ನೋ ಶಾಲೆಯಲ್ಲಿ ಸಹಪಾಠಿಗಳಿಂದ ಹಲ್ಲೆ, ದೃಷ್ಟಿ ಕಳೆದುಕೊಂಡ ವಿದ್ಯಾರ್ಥಿ – Kannada News | Lucknow School Incident Leaves Minor Student With Severe Eye Injury

ಲಕ್ನೋ, ಫೆಬ್ರವರಿ 02: ಐದನೇ ತರಗತಿ ವಿದ್ಯಾರ್ಥಿ(Student)ಯೊಬ್ಬನ ಮೇಲೆ ಸಹಪಾಠಿಗಳು ಹಲ್ಲೆ ನಡೆಸಿರುವ ಪರಿಣಾಮ ಆತ ದೃಷ್ಟಿಯನ್ನೇ ಕಳೆದುಕೊಂಡಿರುವ ಘಟನೆ ಲಕ್ನೋದ ಶಾಲೆಯೊಂದರಲ್ಲಿ ನಡೆದಿದೆ. ಲಕ್ನೋದ ಆರ್ಮಿ ಪಬ್ಲಿಕ್ ಶಾಲೆಯ 5 ನೇ ತರಗತಿಯ ವಿದ್ಯಾರ್ಥಿಯ ಮೇಲೆ ಶಾಲಾ ಆವರಣದಲ್ಲಿ ಇಬ್ಬರು ಸಹ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದು, ಕಣ್ಣಿಗೆ ಗಾಯಗಳಾಗಿವೆ. ಜನವರಿ 21ರಂದು ಮಧ್ಯಾಹ್ನ 12.30ರ ಸುಮಾರಿಗೆ ಶಾಲಾ ಮೈದಾನದಲ್ಲಿ ಈ ಘಟನೆ ನಡೆದಿದ್ದು, ಬಾಲಕನ ತಾಯಿ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಪ್ರಕಾರ, ತನ್ನ…

Read More

ಗಿಲ್ಲಿ ವಿರುದ್ಧ ಗಂಭೀರ ಆರೋಪ ಮಾಡಿದ ಹಚ್ಚೆ ಹಾಕಿಸಿಕೊಂಡ ಅಭಿಮಾನಿ – Kannada News | Gilli vs Tattoo Fan: BBK12 Winner Faces Serious Allegations of Disrespect

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಗಿಲ್ಲಿ ನಟ (Gilli Nata) ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಾಗಿ ಬೆಳೆದಿದೆ. ಅವರ ಫೋಟೋನ ಕೈ ಮೇಲೆ ಹಚ್ಚೆ ಹಾಕಿಸಿಕೊಂಡವರೂ ಇದ್ದಾರೆ. ಈಗ ಅದೇ ವ್ಯಕ್ತಿ ಗಿಲ್ಲಿ ನಟನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಇದು ಚರ್ಚೆಗೆ ಕಾರಣ ಆಗಿದೆ. ಹಲವು ಮಾಧ್ಯಮಗಳಿಗೆ ಅವರು ಸಂದರ್ಶನ ನೀಡುತ್ತಿದ್ದು, ವಾಗ್ದಾಳಿ ಮುಂದುವರಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿರೋವಾಗ ಗಿಲ್ಲಿ ಸಾಕಷ್ಟು ಹಾಸ್ಯ ಮಾಡಿದರು. ಅಗತ್ಯ ಇದ್ದಾಗ ತಿರುಗೇಟು ನೀಡಿದರು. ಇದರಿಂದ…

Read More

ಬೆಂಗಳೂರಿನಲ್ಲಿ ಮತ್ತೆ ಶುರುವಾಗಲಿದೆ ಟೋಯಿಂಗ್: ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡೋ ಮುನ್ನ ಎಚ್ಚರ – Kannada News | Parking Alert: Towing Drive to Resume in Bengaluru to Ease Traffic Chaos

ಬೆಂಗಳೂರು, ಫೆಬ್ರವರಿ 2: ಬೆಂಗಳೂರಿನಲ್ಲಿ (Bangalore) ಜನಸಂಖ್ಯೆಗಿಂತಲೂ ವಾಹನ ಸಂಖ್ಯೆ ಅತಿಯಾಗಿದ್ದು, ಟ್ರಾಫಿಕ್ ಜಾಮ್ (Traffic Jam) ತಲ್ಲಣ ಹುಟ್ಟಿಸುತ್ತಿದೆ. ಇನ್ನು ನಗರದಲ್ಲಿ ಅನೇಕ ಜಾಗಗಳಲ್ಲಿ ಬೇಕಾಬಿಟ್ಟಿ ಅನಧಿಕೃತ ಪಾರ್ಕಿಂಗ್ ಕೂಡ ಹೆಚ್ಚಾಗಿದ್ದು, ಸುಗಮ ಸಂಚಾರಕ್ಕೆ ಹೊಡೆತ ಬಿದ್ದಿದೆ. ಹೀಗಾಗಿ ನಗರದಲ್ಲಿ ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿ ಮಾಡಲು ಜಿಬಿಎ ಹಾಗೂ ಸಂಚಾರ ಪೊಲೀಸ್ ನಿರ್ಧರಿಸಿದೆ. ಬೆಂಗಳೂರಿನ ಅನಧಿಕೃತ ಪಾರ್ಕಿಂಗ್ ಜಾಲದ ಬಗ್ಗೆ ‘ಟಿವಿ9’ ಕನ್ನಡ ರಿಯಾಲಿಟಿ ಚೆಕ್ ನಡೆಸಿದೆ. ನಗರದ ರಾಜಾಜಿನಗರ ವೆಸ್ಟ್ ಆಫ್ ಕಾರ್ಡ್…

Read More

Horoscope Today February: ಇಂದು ಈ ರಾಶಿಯವರಿಂದ ಸ್ವಯಂಕೃತ ಅಪರಾಧ, ಪಶ್ಚಾತ್ತಾಪ

ಮೇಷ ರಾಶಿ: ಮಕ್ಕಳ ವಿವಾಹದ ಬಗ್ಗೆ ಒಂದೊಂದೇ ಚಿಂತೆ ಆರಂಭವಾಗುವುದು. ಇಂದಿನ ನಿಮ್ಮ ಅಜಾಗರೂಕತೆಯಿಂದ ಹಣವನ್ನು ಕಳೆದುಕೊಳ್ಳುವಿರಿ. ಅನಿವಾರ್ಯ ಕಾರಣದಿಂದ ನೀವು ಅಧಿಕಾರವನ್ನು ವಹಿಸಿಕೊಳ್ಳಬೇಕಾಗಬಹುದು. ದುಃಸ್ವಪ್ನದಿಂದ ಭಯಗೊಳ್ಳುವಿರಿ. ಆಪತ್ತಿನಲ್ಲಿ ಇರುವ ನಿಮಗೆ ಸ್ನೇಹಿತರ ಸಣ್ಣ ಸಹಾಯವೂ ನಿಮಗೆ ಧೈರ್ಯ ತಂದುಕೊಡುವುದು. ಪ್ರೀತಿಯಲ್ಲಿ ನಿಮಗೆ ಸೋಲಾಗಬಹುದು. ಮನೋರಂಜನೆಯಿಂದ ಒತ್ತಡ ಕಡಿಮೆಯಗುವುದು. ವೃಷಭ ರಾಶಿ: ಬಹಳ ಶ್ರಮದಿಂದ ನಿಮ್ಮ ಭೂಮಿಯ ಮಾರಟವನ್ನು ಮಾಡುವಿರಿ. ವೃತ್ತಿಯಿಂದ ನೀವು ವಿದೇಶ ಪ್ರಯಾಣವನ್ನು ಮಾಡಬೇಕಾಗಬಹುದು. ಬಂಧುಗಳು ನಿಮ್ಮ ಬಳಿ ಬಂದು ನೋವನ್ನು ಹೇಳಿಕೊಳ್ಳುವರು. ಸ್ನೇಹಿತರ…

Read More

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 2ರ ದಿನಭವಿಷ್ಯ

ಈ ದಿನ ಮನೆಯಿಂದ ಹೊರಡುವ ಮುನ್ನ ಶಿವಾಷ್ಟಕವನ್ನು ಕೇಳಿಸಿಕೊಳ್ಳಿ. ಅದಕ್ಕೆ ಮುಂಚೆ ಈಶ್ವರನ ಪಟದ ಮುಂದೆ ದೀಪವನ್ನು ಹಚ್ಚಿಟ್ಟು, ಇದನ್ನು ಕೇಳಿಸಿಕೊಳ್ಳಿ. ಇನ್ನು ಮನೆಯಿಂದ ಹೊರಡುವ ವೇಳೆಗೆ ಹಸಿ ಹಾಲಿಗೆ (ಬಿಸಿ ಮಾಡಿರಬಾರದು) ಸ್ವಲ್ಪ ಸಕ್ಕರೆ ಮತ್ತು ಅರಿಶಿನ ಹಾಕಿಕೊಂಡು, ಕುಡಿದು ಆ ನಂತರ ಹೊರಡಿ. ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4): ಹಲವು ಶುಭ ಫಲಗಳು ಅನುಭವ ಬರಲಿವೆ. ದೈವಿಕವಾದ ಅನುಗ್ರಹ ನಿಮ್ಮ ಮೇಲಿದೆ ಎಂಬ…

Read More

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 2ರ ದಿನಭವಿಷ್ಯ

ಲಕ್ಷ್ಮಿದೇವಿಯ ಪಟದ ಮುಂದೆ ಸಕ್ಕರೆ, ಒಣದ್ರಾಕ್ಷಿ ಹಾಗೂ ಖರ್ಜೂರವನ್ನು ಎರಡೆರಡು ಇಟ್ಟು ನೈವೇದ್ಯ ಮಾಡಿ. ಇದನ್ನು ಬೆಳಗ್ಗೆ ಅಥವಾ ಸಂಜೆ ಮಾಡಬಹುದು. ದೀರ್ಘಾವಧಿಗೆ ಮಾಡಿದ್ದ ಹೂಡಿಕೆ ಹಿಂತೆಗೆದುಕೊಳ್ಳಬೇಕಾ ಬೇಡವಾ ಎಂಬ ಗೊಂದಲ ಇದ್ದಲ್ಲಿ ಅದು ನಿವಾರಣೆ ಆಗಲಿದೆ. ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7): ನಿಮಗೆ ಗೊತ್ತಿರುವ ಕೌಶಲ, ವಿದ್ಯೆ ಹಾಗೂ ನಿಮಗೆ ಇರುವಂಥ ಈಗಿನ ಅನುಭವಕ್ಕೆ ಬೇಡಿಕೆ ಹೆಚ್ಚಲಿದೆ. ನಿಮ್ಮಲ್ಲಿ ಕೆಲವರಿಗೆ ಏಕಕಾಲಕ್ಕೆ ನಾಲ್ಕಾರು ಕಡೆಯಿಂದ ಉದ್ಯೋಗದ…

Read More

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 2ರ ದಿನಭವಿಷ್ಯ

ಪೈರೈಟ್ ನಿಂದ ಸಿದ್ಧಪಡಿಸಿದ ಫ್ರೇಮ್ ಒಳಗೆ ಏಳು ಕುದುರೆಗಳು ಓಡುತ್ತಿರುವಂತೆ ಇರುವ ಚಿತ್ರವನ್ನು ಹಾಕಿರಲಾಗುತ್ತದೆ. ಅಂಥದ್ದನ್ನು ನಿಮ್ಮ ಮನೆಯ ಈಶಾನ್ಯದ ಗೋಡೆಯಲ್ಲಿ ಹಾಕಿ. ಅದರಲ್ಲೂ ಆರು ಅಡಿಗಿಂತ ಎತ್ತರದ ಜಾಗದಲ್ಲಿ ಅದು ಇರಬೇಕು. ಹೀಗೆ ಮಾಡುವುದರಿಂದ ಹಲವು ರೀತಿಯ ಪಾಸಿಟಿವ್ ಬೆಳವಣಿಗೆ ನಿರೀಕ್ಷೆ ಮಾಡಬಹುದು. ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1): ನಿಮ್ಮಲ್ಲಿ ಕೆಲವರು ಹೊಸ ಭಾಷೆ ಕಲಿಯುವುದಕ್ಕೆ ಕೋರ್ಸ್ ಗೆ ಸೇರಿಕೊಳ್ಳುವುದರ ಬಗ್ಗೆ ಆಲೋಚನೆ ಮಾಡುತ್ತೀರಿ….

Read More

ಕೊಪ್ಪಳದಲ್ಲಿ ಕಾರ್ಖಾನೆಗಳ ವಿರುದ್ಧ ಧರಣಿ: ದಾಖಲೆ ಬರೆದ ಗವಿ ಸಿದ್ದೇಶ್ವರ ಶ್ರೀ ಭಾಗಿಯಾಗಿದ್ದ ಹೋರಾಟ – Kannada News | Koppal: Protest against factories; Gavi Siddeshwara Sri participated Protest make Record

ಬಲ್ಡೋಟಾ, ಪ್ರತಿಭಟನೆImage Credit source: tv9 kannada ಕೊಪ್ಪಳ, ಫೆಬ್ರವರಿ 01: ಅದು ಸುಮಾರು 54 ಸಾವಿರ ಕೋಟಿ ರೂ ವೆಚ್ಚದಲ್ಲಿ ವಿಸ್ತರಣೆಯಾಗುತ್ತಿರುವ ಕಾರ್ಖಾನೆ (Baldota Factory). ಆ ಕಾರ್ಖಾನೆ ವಿರೋಧಿಸಿ ಅಲ್ಲಿ ದೊಡ್ಡ ಹೋರಾಟ ನಡೆದಿತ್ತು. ಖುದ್ದು ಗವಿ ಸಿದ್ದೇಶ್ವರ ಶ್ರೀಗಳು ಹೋರಾಟದಲ್ಲಿ (Protest) ಭಾಗಿಯಾಗಿದ್ದರು. ಕಾರ್ಖಾನೆ ವಿಸ್ತರಿಸಿದ ಹಿನ್ನೆಲೆ ಕೊಪ್ಪಳ ಬಂದ್ ಕರೆ ನೀಡಲಾಗಿತ್ತು. ಗವಿ ಶ್ರೀಗಳು ಹೋರಾಟಕ್ಕೆ ಧುಮುಕಿದಾಗ ಸರ್ಕಾರ ತಾತ್ಕಾಲಿಕವಾಗಿ ಆ ಕಾರ್ಖಾನೆ ಕೆಲಸ ನಿಲ್ಲಿಸಿತ್ತು. ಆದರೆ ಇದೀಗ ಆ ಕಾರ್ಖಾನೆ…

Read More