ವಾಟ್ಸಾಪ್ಗೆ ಎಪಿಕೆ ಫೈಲ್ನಲ್ಲಿ ಬಂತು ಮದುವೆ ಆಮಂತ್ರಣ: ಕ್ಲಿಕ್ ಮಾಡಿದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ 9.96 ಲಕ್ಷ ರೂ. ಮಾಯ! – Kannada News | WhatsApp APK Wedding Invitation Scam: Bengaluru Forest Employee Loses Rs 9.96 Lakh After Opening Fake Invite
ಬೆಂಗಳೂರು, ಜುಲೈ 21: ವಾಟ್ಸಾಪ್‌ನಲ್ಲಿ ಎಪಿಕೆ ಫೈಲ್ (APK File)ರೂಪದಲ್ಲಿ ಬಂದಿದ್ದ ನಕಲಿ ಮದುವೆ ಆಮಂತ್ರಣವನ್ನು (Wedding Card) ಕ್ಲಿಕ್ ಮಾಡಿದ ಪರಿಣಾಮ ಅರಣ್ಯ ಇಲಾಖೆಯ ನೌಕರರೊಬ್ಬರು ಸುಮಾರು 9.96 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ವರದಿಯಾಗಿದೆ. ಈ ಸಂಬಂಧ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ಸೈಬರ್ ವಂಚಕರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದರೊಂದಿಗೆ ಸೈಬರ್ ವಂಚಕರು ಹೊಸ ಹೊಸ ವಿಧಾನದ ಮೂಲಕ ಜನರನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಂತಾಗಿದೆ….