ಅಭಿಮಾನಿಗಳಿಗೆ 5 ಲಕ್ಷ, ಮಹತ್ಕಾರ್ಯಕ್ಕೆ ಮುಂದಾದ ಚಿರಂಜೀವಿ – Kannada News | Megastar Chiranjeevi giving 5 lakh rs worth policy to his fans
ಸ್ಟಾರ್ ನಟರುಗಳಿಗೆ ಅಭಿಮಾನಿಗಳು ಇರುವುದು ಸಾಮಾನ್ಯ, ಈ ಅಭಿಮಾನಿಗಳು ಮೆಚ್ಚಿನ ನಟನ ಸಿನಿಮಾ ಬಿಡುಗಡೆ ಆದಾಗ ಕಟೌಟ್ ಕಟ್ಟಿ, ಚಿತ್ರಮಂದಿರಗಳನ್ನು ಸಿಂಗರಿಸಿ ಸಿನಿಮಾ ವೀಕ್ಷಿಸುತ್ತಾರೆ. ಮೆಚ್ಚಿನ ನಟನ ಸಿನಿಮಾ ಸೋಲಲು ಬಿಡುವುದಿಲ್ಲ. ನಟನ ಹುಟ್ಟುಹಬ್ಬದ ಸಂದರ್ಭದಲ್ಲಿ ಹಲವು ಸೇವಾಕಾರ್ಯಗಳನ್ನು ಮಾಡುತ್ತಾರೆ. ಆದರೆ ಸ್ಟಾರ್ ನಟ ತಮ್ಮ ಅಭಿಮಾನಿಗಳಿಗಾಗಿ ಏನನ್ನೂ ಮಾಡುವುದಿಲ್ಲ. ಆದರೆ ಇದೀಗ ಮೆಗಾಸ್ಟಾರ್ ಚಿರಂಜೀವಿ, ಅಭಿಮಾನಿಗಳಿಗಾಗಿ ಮಹತ್ ಕಾರ್ಯವೊಂದನ್ನು ಮಾಡುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ದೇಶದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟರಲ್ಲಿ ಒಬ್ಬರು. ಒಂದು…