Headlines

ಮದ್ಯದಂಗಡಿಗೆ ನುಗ್ಗಿದ ಚಿರತೆ, ಮೂವರ ಮೇಲೆ ಭೀಕರ ದಾಳಿ, 5 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ – Kannada News | Leopard attacks 3, enters liquor shop, 5 hour rescue ends terrifying ordeal

ಟೋಂಕ್, ಜುಲೈ 21: ಜನನಿಬಿಡ ಮಾರುಕಟ್ಟೆ ಪ್ರದೇಶಕ್ಕೆ ನುಗ್ಗಿದ ಚಿರತೆ(Leopard)ಯೊಂದು ಮೂವರ ಮೇಲೆ ದಾಳಿ ನಡೆಸಿ, ಮದ್ಯದಂಗಡಿಯೊಂದರ ಒಳಗಡೆ ಆಶ್ರಯ ಪಡೆದ ಆತಂಕಕಾರಿ ಘಟನೆ ರಾಜಸ್ಥಾನದ ಟೋಂಕ್ ಜಿಲ್ಲೆಯ ತೋಡರೈಸಿಂಗ್ ಪಟ್ಟಣದಲ್ಲಿ ನಡೆದಿದೆ. ಸುಮಾರು 5 ಗಂಟೆಗಳ ಕಾಲ ನಡೆದ ಸುದೀರ್ಘ ಕಾರ್ಯಾಚರಣೆಯ ನಂತರ ಅರಣ್ಯಾಧಿಕಾರಿಗಳು ಚಿರತೆಯನ್ನು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ. ಸೋಮವಾರ ಬೆಳಗ್ಗೆ 8.45 ರ ಸುಮಾರಿಗೆ ತೋಡರೈಸಿಂಗ್ ಪಟ್ಟಣದ ಸಮೀಪದ ಪೊದೆಗಳಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ವಿಷಯ ತಿಳಿದು ಸ್ಥಳವನ್ನು ಪರಿಶೀಲಿಸಲು ಬಂದ ಅರಣ್ಯ ಇಲಾಖೆಯ ಸ್ವಯಂಸೇವಕ…

Read More

ಚೆನ್ನಮ್ಮ ಸಮಾಧಿ ಬಳಿ ವಿಷ್ಣು ಸಹಸ್ರನಾಮ ಪಠಿಸುತ್ತಿದ್ದಂತೆಯೇ ಪ್ರತ್ಯಕ್ಷವಾದ ಗರುಡ! – Kannada News | Garuda Circles Chennamma’s Memorial During Vishnu Sahasranama Chanting, Devotees Call It a Divine Sign

ಹಾಸನ, ಜುಲೈ 21: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅಂತ್ಯಸಂಸ್ಕಾರ ಹಾಸನದ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನ ಜಮೀನಿನಲ್ಲಿ ಸೋಮವಾರ ನಡೆದಿದೆ. ಅದಾದ ನಂತರ ಸಮಾಧಿ ಇರುವ ಜಾಗದಲ್ಲಿ ರುದ್ರ, ಚಮಕ, ಗಾಯಿತ್ರಿ ಮಂತ್ರ ಹಾಗೂ ವಿಷ್ಣು ಸಹಸ್ರನಾಮ ಪಠಣ ಮಾಡಲಾಗಿದೆ. ವಿಷ್ಣು ಸಹಸ್ರನಾಮ ಪಠಿಸುತ್ತಿರುವಾಗ ಗರುಡ ಕಾಣಿಸಿದ್ದು, ಸಮಾಧಿ ಮೇಲೆ ಪ್ರದಕ್ಷಿಣೆ ಹಾಕಿ ಹೋಗಿರುವುದು ಅಚ್ಚರಿ ಮೂಡಿಸಿದೆ. ಚೆನ್ನಮ್ಮ ಅಪಾರ ದೈವ ಭಕ್ತೆಯಾಗಿದ್ದರು. ಪ್ರತಿನಿತ್ಯ ದೇವರ ಪೂಜೆ ವೇಳೇ ಶ್ಲೋಕಗಳನ್ನು ಪಠಿಸುತ್ತಿದ್ದರು….

Read More

TTD News: ತಿರುಪತಿಯಲ್ಲಿ ಭಕ್ತರಿಗೆ ಹೈಟೆಕ್ ‘ಕನ್ವೇಯರ್’ ಪ್ರಸಾದ ವಿತರಣೆ; TTDಯಿಂದ ಹೊಸ ಪ್ರಯೋಗ! – Kannada News | TTD’s New Tirumala Food Conveyor System: Faster Prasadam for Devotees

ಹೈಟೆಕ್ ‘ಕನ್ವೇಯರ್’ ಪ್ರಸಾದ ವಿತರಣೆ ತಿರುಮಲ: ತಿರುಮಲಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ಶೀಘ್ರ ಹಾಗೂ ಸುಲಭವಾಗಿ ಆಹಾರ-ಪಾನೀಯ ತಲುಪಿಸಲು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (TTD) ಒಂದು ಹೊಸ ತಂತ್ರಜ್ಞಾನಾಧಾರಿತ ಹೆಜ್ಜೆಯನ್ನಿಟ್ಟಿದೆ. ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಭಕ್ತರಿಗೆ ‘ಆಹಾರ ಪೂರೈಸುವ ಕನ್ವೇಯರ್ ವ್ಯವಸ್ಥೆ’ಯನ್ನು (Food Serving Conveyor System) ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಸಾಮಾನ್ಯ ದಿನಗಳಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಪ್ರತಿದಿನ ಲಕ್ಷಕ್ಕೂ ಹೆಚ್ಚು ಭಕ್ತರು ಕಿಲೋಮೀಟರ್‌ಗಟ್ಟಲೆ ಸಾಲಿನಲ್ಲಿ ನಿಲ್ಲುತ್ತಾರೆ….

Read More

ಟೀಮ್ ಇಂಡಿಯಾಗೆ ವಿವಿಎಸ್​ ಲಕ್ಷ್ಮಣ್ ಹೆಡ್ ಕೋಚ್! – Kannada News | VVS Laxman to coach India on Zimbabwe

ಭಾರತ ಹಾಗೂ ಝಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಜುಲೈ 23, 2026 ರಿಂದ ಹರಾರೆಯಲ್ಲಿ ಆರಂಭವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಕೋಚ್ ಆಗಿ ಕಾಣಿಸಿಕೊಳ್ಳುತ್ತಿರುವುದು ವಿವಿಎಸ್​ ಲಕ್ಷ್ಮಣ್. ಇಂಗ್ಲೆಂಡ್ ಪ್ರವಾಸದ ಸರಣಿ ಮುಗಿದ ಬೆನ್ನಲ್ಲೇ ಈ ಸರಣಿ ಆರಂಭವಾಗುತ್ತಿರುವುದರಿಂದ, ಬಿಸಿಸಿಐ ವಿಭಜಿತ-ಕೋಚಿಂಗ್ ಮಾದರಿಯನ್ನು ಅಳವಡಿಸಿಕೊಂಡಿದೆ. ಇದರ ಅಡಿಯಲ್ಲಿ ನಿಯಮಿತ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥರಾದ ವಿವಿಎಸ್ ಲಕ್ಷ್ಮಣ್ ಅವರು ಮತ್ತೊಮ್ಮೆ ಟೀಮ್…

Read More

KIMS Recruitment 2026: ಕಿಮ್ಸ್ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ನಾಳೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನ – Kannada News | KIMS Bengaluru Recruitment 2026: 27 Technical and Clerk Jobs – Apply Now!

ಕಿಮ್ಸ್ ಆಸ್ಪತ್ರೆಯಲ್ಲಿ ಉದ್ಯೋಗವಕಾಶ ಬೆಂಗಳೂರು: ರಾಜಧಾನಿ ಬೆಂಗಳೂರಿನ ವಿ.ವಿ.ಪುರಂನಲ್ಲಿರುವ ‘ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’ (KIMSH) ಅರ್ಹ ಅಭ್ಯರ್ಥಿಗಳಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ರಾಜ್ಯ ಒಕ್ಕಲಿಗರ ಸಂಘದ ಆಡಳಿತಕ್ಕೊಳಪಟ್ಟ ಈ ಆಸ್ಪತ್ರೆಯಲ್ಲಿ ಖಾಲಿ ಇರುವ ಒಟ್ಟು 27 ತಾಂತ್ರಿಕ ಹಾಗೂ ಕ್ಲರ್ಕ್ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳು, ಅಗತ್ಯ ಶೈಕ್ಷಣಿಕ ಅರ್ಹತೆ ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರ ಇಲ್ಲಿದೆ….

Read More

Karnataka Dam Water Level: ಆಲಮಟ್ಟಿಗೆ ಹರಿದುಬಂತು ಭಾರಿ ನೀರು, ಕಾವೇರಿ-ಕೃಷ್ಣಾ ಕೊಳ್ಳದ ಪ್ರಮುಖ ಡ್ಯಾಂಗಳಲ್ಲಿನ ಸ್ಥಿತಿಗತಿ ಇಲ್ಲಿದೆ! – Kannada News | Karnataka dam water level today almatti inflow surges to 46000 cusecs krs kabini tb hemavathi status

ಬೆಂಗಳೂರು, ಜುಲೈ 21: ರಾಜ್ಯದಾದ್ಯಂತ ಮಳೆಯ ವಾತಾವರಣ ಮುಂದುವರಿದಿದ್ದು, ಪ್ರಮುಖ ಜಲಾಶಯಗಳಿಗೆ ನೀರಿನ ಹರಿವು ಏರಿಕೆಯಾಗುತ್ತಿದೆ. ಕೃಷ್ಣಾ ನದಿ ಕೊಳ್ಳದ ಆಲಮಟ್ಟಿ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದ್ದರೆ, ಕಾವೇರಿ ಹಾಗೂ ತುಂಗಭದ್ರಾ ಕೊಳ್ಳದ ಜಲಾಶಯಗಳಲ್ಲಿ ನೀರಿನ ಮಟ್ಟ ಕ್ರಮೇಣ ಸ್ಥಿರಗೊಳ್ಳುತ್ತಿದೆ. ಜುಲೈ 21ರ ಬೆಳಗಿನ ಅಂಕಿ-ಅಂಶಗಳ ಪ್ರಕಾರ ರಾಜ್ಯದ ಪ್ರಮುಖ 5 ಜಲಾಶಯಗಳ ನೀರಿನ ಮಟ್ಟ ಮತ್ತು ಸಂಗ್ರಹ ವಿವರ ಹೀಗಿದೆ. 1. ಆಲಮಟ್ಟಿ ಜಲಾಶಯ (ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ) ವಿಜಯಪುರ ಜಿಲ್ಲೆಯ ನಿಡಗುಂದಿ…

Read More

ಒಂದು ರೈಲಿನಿಂದ ಇಳಿದು ಹಳಿ ದಾಟಲು ಹೋದಾಗ ಎದುರಿನಿಂದ ಬಂದೇ ಬಿಡ್ತು ಮತ್ತೊಂದು ರೈಲು – Kannada News | Vasai Road: Man Trapped Between Two Trains Miraculously Survives Viral Mumbai Incident

ಮುಂಬೈ, ಜುಲೈ 21: ಜೀವವನ್ನು ಪಣಕ್ಕಿಟ್ಟು ತೆಗೆದುಕೊಳ್ಳುವ ಒಂದು ನಿರ್ಧಾರವು ಎಷ್ಟು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಮಹಾರಾಷ್ಟ್ರದ ವಸಾಯಿ ರೋಡ್ ರೈಲು ನಿಲ್ದಾಣದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ನಿಂತಿದ್ದ ರೈಲಿನಿಂದ ಆಚೆ ಬಂದ ವ್ಯಕ್ತಿ ಲೋಹದ ಗ್ರಿಲ್ ದಾಟಿ ಮತ್ತೊಂದು ಕಡೆ ಇರುವ ಪ್ಲಾಟ್​ಫಾರ್ಮ್​ಗೆ ಹೋಗಲು ಯತ್ನಿಸಿದ್ದಾರೆ. ಆದರೆ ಗ್ರಿಲ್ ಮೇಲೆ ಹತ್ತುತ್ತಿದ್ದಂತೆಯೇ ಮತ್ತೊಂದು ಹಳಿಯಲ್ಲಿ ರೈಲು(Train) ಬಂದಿತ್ತು. ಆಗ ಎಲ್ಲೂ ಹೋಗಲಾಗದೆ ಸಂಕಟದಲ್ಲಿ ಸಿಲುಕಿದ್ದಾರೆ. ಅಷ್ಟೇ ಅಲ್ಲದೆ ಹಳಿಯಲ್ಲಿ ಚಲಿಸುತ್ತಿದ್ದಂತೆ ಗ್ರಿಲ್ ಮೇಲೆ…

Read More

‘ಮನಮೋಹಕ’ ಮೂಲಕ ಕಮಾಲ್ ಮಾಡಿದ ಪ್ರಮೋದ್ ಮರವಂತೆ; ಸ್ಯಾಂಡಲ್‌ವುಡ್ ಸ್ಟಾರ್ ಲಿರಿಸಿಸ್ಟ್ ಜರ್ನಿ – Kannada News | Meet Pramod Maravante: The Genius Behind Manamohaka and Sandalwood Top Songs

ಒಂದು ಹಿಟ್ ಹಾಡು ಬಂತು ಎಂದರೆ, ಅದಕ್ಕೆ ಚಿತ್ರಸಾಹಿತಿಯ ಶ್ರಮ ಸಾಕಷ್ಟಿರುತ್ತದೆ. ಮೆಲೋಡಿ ಹಾಡು ಕೇಳುಗನಿಗೆ ಇಂಪೆನಿಸಬೇಕು. ಪೊಣಿಸುವ ಶಬ್ದಗಳು ಕೇಳುಗನ ಮನಮುಟ್ಟಬೇಕು. ಅದರಲ್ಲೂ ರೊಮ್ಯಾಂಟಿಕ್ ಹಾಡುಗಳಾದರೆ ಶೃಂಗಾರಭರಿತವಾಗಿರಬೇಕು. ಈ ಪ್ರಯತ್ನದಲ್ಲಿ ಗೀತಸಾಹಿತಿ ಪ್ರಮೋದ್ ಮರವಂತೆ ಪ್ರತಿ ಬಾರಿಯೂ ವಿಜಯ ಸಾಧಿಸುತ್ತಾರೆ. ಹೊಸ ಹೊಸ ರೀತಿಯ ಗೀತೆ ನೀಡಿ ಮನಗೆಲ್ಲುತ್ತಾರೆ. ಈಗ ‘ಟಾಕ್ಸಿಕ್’ ಚಿತ್ರದ ‘ಮನಮೋಹಕ’ ಹಾಡಿನ (Manamohaka Song) ಮೂಲಕ ಅವರು ಪ್ರೇಕ್ಷಕರ ಮನಗೆದ್ದಿದ್ದಾರೆ. ‘ಟಾಕ್ಸಿಕ್’ ಸಿನಿಮಾದ ಎರಡನೇ ಹಾಡು ‘ಮನಮೋಹಕ’ ಸದ್ಯ ಐದು ಭಾಷೆಗಳಲ್ಲಿ…

Read More

Income Tax Notice: ಆದಾಯ ತೆರಿಗೆ ನೋಟೀಸ್ ಬಂತಾ? ಅದು ವಂಚಕರ ಜಾಲವಾ? ಆನ್​ಲೈನ್​ನಲ್ಲೇ ಪರಿಶೀಲಿಸಿ – Kannada News | Income Tax Notice, steps to check the authenticity of the notice online

ನವದೆಹಲಿ, ಜುಲೈ 21: ಆದಾಯ ತೆರಿಗೆ ರಿಟರ್ನ್ಸ್ (ITR- Income Tax Returns) ಸಲ್ಲಿಸುವ ಸೀಸನ್ ಇದು. ಐಟಿಆರ್ ಸಲ್ಲಿಕೆ, ಅಧಿಕಾರಿಗಳಿಂದ ಪರಿಶೀಲನೆ, ರೀಫಂಡ್ ಇತ್ಯಾದಿ ಪ್ರಕ್ರಿಯೆಗಳು ಚಾಲೂ ಇವೆ. ಐಟಿ ರಿಟರ್ನ್ಸ್ (ITR) ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕವಾಗಿದೆ. ಈ ಸಮಯದಲ್ಲಿ ತೆರಿಗೆದಾರರಿಗೆ ಆದಾಯ ತೆರಿಗೆ ನೋಟೀಸ್ ಬಂದರೆ ಆತಂಕಪಡುವುದು ಸಹಜ. ಇದನ್ನು ಬಂಡವಾಳ ಮಾಡಿಕೊಳ್ಳುವ ಸೈಬರ್ ವಂಚಕರು, ನಕಲಿ ನೋಟೀಸ್‌ಗಳನ್ನು ಕಳುಹಿಸಿ ಹಣ ಅಥವಾ ಓಟಿಪಿ (OTP), ಬ್ಯಾಂಕ್ ವಿವರಗಳನ್ನು ಕದಿಯಲು ಯತ್ನಿಸುತ್ತಾರೆ….

Read More

ಅಭಿಮಾನಿಗಳಿಗೆ 5 ಲಕ್ಷ, ಮಹತ್​​ಕಾರ್ಯಕ್ಕೆ ಮುಂದಾದ ಚಿರಂಜೀವಿ – Kannada News | Megastar Chiranjeevi giving 5 lakh rs worth policy to his fans

ಸ್ಟಾರ್ ನಟರುಗಳಿಗೆ ಅಭಿಮಾನಿಗಳು ಇರುವುದು ಸಾಮಾನ್ಯ, ಈ ಅಭಿಮಾನಿಗಳು ಮೆಚ್ಚಿನ ನಟನ ಸಿನಿಮಾ ಬಿಡುಗಡೆ ಆದಾಗ ಕಟೌಟ್ ಕಟ್ಟಿ, ಚಿತ್ರಮಂದಿರಗಳನ್ನು ಸಿಂಗರಿಸಿ ಸಿನಿಮಾ ವೀಕ್ಷಿಸುತ್ತಾರೆ. ಮೆಚ್ಚಿನ ನಟನ ಸಿನಿಮಾ ಸೋಲಲು ಬಿಡುವುದಿಲ್ಲ. ನಟನ ಹುಟ್ಟುಹಬ್ಬದ ಸಂದರ್ಭದಲ್ಲಿ ಹಲವು ಸೇವಾಕಾರ್ಯಗಳನ್ನು ಮಾಡುತ್ತಾರೆ. ಆದರೆ ಸ್ಟಾರ್ ನಟ ತಮ್ಮ ಅಭಿಮಾನಿಗಳಿಗಾಗಿ ಏನನ್ನೂ ಮಾಡುವುದಿಲ್ಲ. ಆದರೆ ಇದೀಗ ಮೆಗಾಸ್ಟಾರ್ ಚಿರಂಜೀವಿ, ಅಭಿಮಾನಿಗಳಿಗಾಗಿ ಮಹತ್​ ಕಾರ್ಯವೊಂದನ್ನು ಮಾಡುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ದೇಶದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟರಲ್ಲಿ ಒಬ್ಬರು. ಒಂದು…

Read More