ಗಲಭೆ, ಗೊಂದಲ, ಭ್ರಷ್ಟಾಚಾರ: ತೆಲುಗು ಸಿನಿಮಾ ಡ್ಯಾನ್ಸರ್​​ಗಳ ಪ್ರತಿಭಟನೆ – Kannada News | Tollywood dance association members protest against Jani Master

ತೆಲುಗು ಸಿನಿಮಾಗಳಲ್ಲಿ (Tollywood) ಡ್ಯಾನ್ಸ್​​ಗೆ ಬಹಳ ಪ್ರಧಾನ್ಯತೆ, ಇತರೆ ಸಿನಿಮಾ ರಂಗಗಳಿಗೆ ಹೋಲಿಸಿದರೆ ತೆಲುಗು ಸಿನಿಮಾಗಳಲ್ಲಿ ಡ್ಯಾನ್ಸ್ ಹೆಚ್ಚು ಗುಣಮಟ್ಟದಿಂದಲೂ ಕೂಡಿರುತ್ತದೆ. ‘ಆರ್​​ಆರ್​​ಆರ್’ ಸಿನಿಮಾದ ಡ್ಯಾನ್ಸು ಆಸ್ಕರ್ ವೇದಿಕೆಯಲ್ಲೂ ಮಿಂಚಿದ್ದು ನೆನಪಿರಬಹುದು. ಆದರೆ ಇದೀಗ ತೆಲುಗು ಚಿತ್ರರಂಗದ ಡ್ಯಾನ್ಸರ್​​ಗಳು ಸಮಸ್ಯೆಗೆ ಸಿಲುಕಿದ್ದಾರೆ. ಇದಾಗಲೇ ಡ್ಯಾನ್ಸ್ ಅಸೋಷಿಯೇಷನ್ ಒಡೆದು ಎರಡು ಭಾಗವಾಗಿದ್ದು, ಇತ್ತೀಚೆಗಷ್ಟೆ ತೆಲುಗು ಸಿನಿಮಾ ಮತ್ತು ಟಿವಿ ಡ್ಯಾನ್ಸರ್ ಅಸೋಸಿಯೇಷನ್ ಸದಸ್ಯರು ಜಾನಿ ಮಾಸ್ಟರ್ ಮತ್ತು ಅವರ ಪತ್ನಿ ಹಾಗೂ ಅಸೋಷಿಯೇಷನ್ ಅಧ್ಯಕ್ಷೆ ಸುಮಲತಾ ವಿರುದ್ಧ ಪ್ರತಿಭಟನೆ ಸಹ ಮಾಡಿದ್ದಾರೆ.

ಈಗಾಗಲೇ ತೆಲುಗು ಡ್ಯಾನ್ಸರ್​​ಗಳಲ್ಲಿಯೇ ಎರಡು ಬಣವಾಗಿದ್ದು ಜಾನಿ ಮಾಸ್ಟರ್ ಅವರದ್ದು ಒಂದು ಬಣವಾದರೆ ಶೇಖರ್ ಮಾಸ್ಟರ್ ಅವರದ್ದು ಇನ್ನೊಂದು ಬಣವಾಗಿದೆ. ಇತ್ತೀಚೆಗಷ್ಟೆ ಅಸೋಸಿಯೇಷನ್​ ಸದಸ್ಯರು, ಜಾನಿ ಮಾಸ್ಟರ್ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಅಸೋಸಿಯೇಷನ್ ನಿಯಮಗಳನ್ನು ಗಾಳಿಗೆ ತೂರಿ, ತೆಲುಗು ಡ್ಯಾನ್ಸರ್​​ಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸ್ಥಳೀಯ ಡ್ಯಾನ್ಸರ್ಸ್​​ಗಳಿಗೆ ಅವಕಾಶ ನೀಡದೆ ಮುಂಬೈನಿಂದ ಡ್ಯಾನ್ಸರ್​​ಗಳನ್ನು ಕರೆದುಕೊಂಡು ಬರುತ್ತಿರುವ ಬಗ್ಗೆ ಡ್ಯಾನ್ಸರ್​​ಗಳು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ಡ್ಯಾನ್ಸರ್​​ಗಳಿಗೆ ಸೂಕ್ತವಾಗಿ ಹಣ ನೀಡುತ್ತಿಲ್ಲ. ಡ್ಯಾನ್ಸರ್​​ಗಳಿಗೆ ತಲುಪಬೇಕಿರುವ ಮೊತ್ತವನ್ನು ದಲ್ಲಾಳಿಗಳು ತೆಗೆದುಕೊಳ್ಳುತ್ತಿರುವ ಬಗ್ಗೆ ಹಾಗೂ ಅಸೋಸಿಯೇಷನ್​​ನಲ್ಲಿ ನಡೆಯುತ್ತಿರುವ ಕಮಿಷನ್ ದಂಧೆಯ ವಿರುದ್ಧ ಹೀಗೆ ಹಲವು ವಿಷಯಗಳನ್ನು ಇರಿಸಿಕೊಂಡು ಡ್ಯಾನ್ಸರ್​​ಗಳು ಪ್ರತಿಭಟನೆ ನಡೆಸಿದ್ದರು. ವಿಶೇಷವಾಗಿ ಜಾನಿ ಮಾಸ್ಟರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ:‘ಡ್ರ್ಯಾಗನ್’ಗೂ ಮುನ್ನ ಪ್ರಶಾಂತ್ ನೀಲ್ ಹೊಸ ಸಾಹಸ; ಹಾರರ್ ಸಿನಿಮಾ ಪ್ರೆಸೆಂಟರ್ ಆದ ನಿರ್ದೇಶಕ

ಆಂಧ್ರ ಫಿಲಂ ಎಂಪ್ಲಾಯೀಸ್ ಅಸೋಸಿಯೇಷನ್ ಮಧ್ಯ ಪ್ರವೇಶಿಸಿ, ಡ್ಯಾನ್ಸ್ ಅಸೋಸಿಯೇಷನ್ ಸದಸ್ಯರೊಡನೆ ಮಾತುಕತೆ ನಡೆಸಿದೆ. ಸಮಸ್ಯೆಗಳನ್ನು ಬಗೆಹರಿಸುವುದಾಗಿಯೂ ಹೇಳಿದೆ. ಮಾತ್ರವಲ್ಲದೆ, ಫಿಲಂ ಎಂಪ್ಲಾಯೀಶ್ ಅಸೋಸಿಯೇಷನ್, ಜಾನಿ ಮಾಸ್ಟರ್​ ವಿರುದ್ಧ ಅಸಹಕಾರ ಘೋಷಣೆ ಮಾಡಿದ್ದು, ಪರೋಕ್ಷವಾಗಿ ನಿಷೇಧವನ್ನು ಹೇರಿದೆ.

ಆದರೆ ತಮ್ಮ ಮೇಲೆ ಬಂದಿರುವ ಆರೋಪಗಳನ್ನು ಜಾನಿ ಮಾಸ್ಟರ್ ಅಲ್ಲಗಳೆದದ್ದು, ತಮ್ಮ ವಿರುದ್ಧ ವೈಯಕ್ತಿಕ ದ್ವೇಷದಿಂದಾಗಿ ಅಸಹಕಾರ ಘೋಷಕ್ಷಣೆ ಮಾಡಲಾಗಿದೆ ಎಂದಿದ್ದಾರೆ. ಅಲ್ಲದೆ, ತಾವು ನಿರ್ಮಾಪಕರ ಒತ್ತಡದಿಂದಲೇ ಬೇರೆ ಕಡೆಯಿಂದ ಡ್ಯಾನ್ಸರ್​​ಗಳನ್ನು ಕರೆದುಕೊಂಡು ಬರುತ್ತಿದ್ದುದಾಗಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ 26.6 ಕೋಟಿ ಡ್ರಗ್ಸ್, ನಕಲಿ ನೋಟು ಪ್ರಿಂಟಿಂಗ್ ಜಾಲ ಭೇದಿಸಿದ ಪೊಲೀಸರು – Kannada News | CCB Cracks Down on Bengaluru Drug Mafia: 27 Cr MDMA, Cocaine, Heroin and Fake Notes

ಬೆಂಗಳೂರು, ಜು.21: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಚಟುವಟಿಕೆಗಳು ಹಾಗೂ ಮಾದಕ ವಸ್ತು ಜಾಲದ ವಿರುದ್ಧ ಪೊಲೀಸರು ಸಮರ ಸಾರಿದ್ದು, ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ, ಕೋರಮಂಗಲ ಹಾಗೂ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಹಾಗೂ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ದೆಹಲಿಯಿಂದ ಬೆಂಗಳೂರಿಗೆ ಚೂಡಿದಾರ್‌ಗಳ ಒಳಗೆ ಹಾಕಿಕೊಂಡು ಅತ್ಯಂತ ಚಾಣಾಕ್ಷತನದಿಂದ ಎಂಡಿಎಂಎ ಮಾದಕ ವಸ್ತುವನ್ನು ಸಾಗಿಸುತ್ತಿದ್ದ ಬೃಹತ್ ಜಾಲವನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಭೇದಿಸಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹೀಲ್ ಕುಮಾರ್, ಸತ್ಯಂ, ಕಲೀಮ್ ಹಾಗೂ ಕನ್ನಯ್ಯ ಎಂಬ ವ್ಯಕ್ತಿಗಳನ್ನು ಬಂಧನ ಮಾಡಲಾಗಿದೆ.

ದೆಹಲಿಯಲ್ಲಿದ್ದ ನೈಜೀರಿಯಾ ಮೂಲದ ವ್ಯಕ್ತಿಯಿಂದ ಮಾದಕ ವಸ್ತು ಪಡೆದು ಬೆಂಗಳೂರಿನಲ್ಲಿದ್ದ ಮುಖ್ಯ ಆರೋಪಿ ಸಾಹೀಲ್ ಕುಮಾರ್‌ಗೆ ತಲುಪಿಸಲು ಸತ್ಯಂ, ಕಲೀಮ್ ಮತ್ತು ಕನ್ನಯ್ಯ ಯತ್ನಿಸುತ್ತಿದ್ದರು. ಈ ಹಿಂದೆ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ವಿಕ್ಟರ್ ಹಾಗೂ ಮೋಸಸ್ ನೀಡಿದ ಮಹತ್ವದ ಸುಳಿವು ಆಧರಿಸಿ ಸಿಸಿಬಿ ಪೊಲೀಸರು ಈ ಯಶಸ್ವಿ ದಾಳಿ ನಡೆಸಿದ್ದಾರೆ. ಆರೋಪಿಗಳಿಂದ ಬರೋಬ್ಬರಿ 26.6 ಕೋಟಿ ರೂಪಾಯಿ ಮೌಲ್ಯದ 12 ಕೆಜಿ 925 ಗ್ರಾಂ ಎಂಡಿಎಂಎ ಹಾಗೂ 60 ಗ್ರಾಂ ಕೊಕೇನ್ ಜಪ್ತಿ ಮಾಡಲಾಗಿದೆ.

ಕೋರಮಂಗಲದಲ್ಲಿ ಅಸ್ಸಾಂ ಮೂಲದ ಪೆಡ್ಲರ್ ಅರೆಸ್ಟ್: 34 ಲಕ್ಷದ ಹೆರಾಯಿನ್ ಜಪ್ತಿ

ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಡ್ರಗ್ಸ್ ಕಾರ್ಯಾಚರಣೆ ನಡೆದಿದ್ದು, ಅಸ್ಸಾಂನಿಂದ ಬೆಂಗಳೂರಿಗೆ ಮಾದಕ ವಸ್ತು ತಂದು ಮಾರಾಟ ಮಾಡುತ್ತಿದ್ದ ಪೆಡ್ಲರ್‌ನನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಹೀದ್ ಹುಸ್ಸೇನ್ (ಅಸ್ಸಾಂ ಮೂಲದವನು) ಎಂಬುವವರನ್ನು ಬಂಧಿಸಿದ್ದಾರೆ.

ಅಸ್ಸಾಂನಿಂದ ನಗರಕ್ಕೆ ಹೆರಾಯಿನ್ ಸಾಗಿಸಿ ಅಕ್ರಮವಾಗಿ ಪೆಡ್ಲಿಂಗ್ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ. ಆರೋಪಿಯಿಂದ 34 ಲಕ್ಷ ರೂಪಾಯಿ ಮೌಲ್ಯದ 157 ಗ್ರಾಂ ಹೆರಾಯಿನ್ ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ: ಬೃಹತ್​​ ಪ್ರತಿಭಟನೆ

ಕುಂಬಳಗೋಡಿನಲ್ಲಿ ನಕಲಿ ನೋಟು ಪ್ರಿಂಟ್ ಮಾಡ್ತಿದ್ದ ಜಾಲ ಅಂದರ್:

ಕುಂಬಳಗೋಡು ಠಾಣಾ ವ್ಯಾಪ್ತಿಯ ಕಣಮಿಣಿಕೆಯಲ್ಲಿ ಮನೆ ಬಾಡಿಗೆಗೆ ಪಡೆದು ನಕಲಿ ನೋಟು (ಖೋಟಾನೋಟು) ಪ್ರಿಂಟ್ ಮಾಡುತ್ತಿದ್ದ ಅಂತರರಾಜ್ಯ ಗ್ಯಾಂಗ್ ಮೇಲೆ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಮೈಸೂರು ಮೂಲದ ಅರವಿಂದ್ ಹಾಗೂ ಚೆನ್ನೈ ಮೂಲದ ವೆಂಕಟ ಸುಬ್ರಹ್ಮಣಿ ಎಂಬುವವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಕಣಮಿಣಿಕೆ ವ್ಯಾಪ್ತಿಯಲ್ಲಿದ್ದ ಬಾಡಿಗೆ ಮನೆಯ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

1,69,000 ರೂ. ಮೌಲ್ಯದ ನಕಲಿ ಖೋಟಾನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ನೋಟು ಪ್ರಿಂಟ್ ಮಾಡಲು ಬಳಸುತ್ತಿದ್ದ ಲ್ಯಾಪ್‌ಟಾಪ್​​ಗಳನ್ನು ಕೂಡ ವಶ ಪಡೆಯಲಾಗಿದೆ. ಇನ್ನು ಸಾಗಾಟಕ್ಕೆ ಬಳಸುತ್ತಿದ್ದ 1.60 ಲಕ್ಷ ರೂ. ಮೌಲ್ಯದ ಒಂದು ಕಾರು ವಶಕ್ಕೆ ಪಡೆಯಲಾಗಿದೆ. ನಗರದಲ್ಲಿ ಡ್ರಗ್ಸ್ ಸಾಗಾಟ ಅಥವಾ ಖೋಟಾನೋಟು ಅಕ್ರಮಗಳ ಕುರಿತು ಯಾವುದೇ ಅನುಮಾನಾಸ್ಪದ ಮಾಹಿತಿ ಸಿಕ್ಕಲ್ಲಿ ಸಾರ್ವಜನಿಕರು ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ‘112’ ತುರ್ತು ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Dengue Vaccine Approved in India: ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!

ಬೆಂಗಳೂರು, ಜುಲೈ 21: ಭಾರತದಲ್ಲಿ ಮಾರಕ ಡೆಂಗೀ ಜ್ವರಕ್ಕೆ ಮೊದಲ ಅಧಿಕೃತ ನಿರ್ದಿಷ್ಟ ಲಸಿಕೆ ಕ್ಯುಡೆಂಗಾ ಮಾರಾಟಕ್ಕೆ ಅನುಮೋದನೆ ದೊರೆತಿದೆ. ಜಪಾನ್‌ನ ಟಕೇಡಾ ಬಯೋ ಫಾರ್ಮಾಟಿಕಲ್ಸ್ ಅಭಿವೃದ್ಧಿಪಡಿಸಿರುವ ಈ ಲಸಿಕೆಗೆ ಡಿಸಿಜಿಐ (ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್) ಸಮ್ಮತಿ ಸೂಚಿಸಿದೆ. 4 ರಿಂದ 60 ವರ್ಷ ವಯೋಮಾನದವರಿಗೆ ಈ ಲಸಿಕೆ ನೀಡಬಹುದಾಗಿದೆ.

ಕ್ಯುಡೆಂಗಾ ಲಸಿಕೆಯು ಡೆಂಗಿಯ ನಾಲ್ಕೂ ವಿಧದ ವೈರಸ್‌ಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಎರಡು ಡೋಸ್‌ಗಳಲ್ಲಿ ಈ ಲಸಿಕೆಯನ್ನು ನೀಡಲಾಗುತ್ತದೆ. ಮೊದಲ ಡೋಸ್ ಪಡೆದ ಮೂರು ತಿಂಗಳ ನಂತರ ಎರಡನೇ ಡೋಸ್ ನೀಡಲಾಗುತ್ತದೆ. ಇದು ಸೋಂಕು ಪೀಡಿತರು ಅಥವಾ ಸೋಂಕು ರಹಿತರಾದರೂ ಪಡೆಯಬಹುದು. ಈ ಲಸಿಕೆ ಸುಮಾರು ನಾಲ್ಕರಿಂದ ಐದು ವರ್ಷಗಳ ಕಾಲ ರಕ್ಷಣೆ ಮತ್ತು ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ ಎಂದು ಕ್ಲಿನಿಕಲ್ ಪ್ರಯೋಗಗಳು ತೋರಿಸಿವೆ.

ಈ ಕ್ಯುಡೆಂಗಾ ಲಸಿಕೆಯ ಉತ್ಪಾದನೆಗಾಗಿ ಹೈದರಾಬಾದ್ ಮೂಲದ ಬಯೋಲಾಜಿಕಲ್ ಇ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರಸ್ತುತ 43 ದೇಶಗಳಲ್ಲಿ ಅನುಮೋದನೆ ಪಡೆದಿರುವ ಈ ಲಸಿಕೆ, ಸೊಳ್ಳೆ ಕಾಟ ಹೆಚ್ಚಿರುವ ಮಳೆಗಾಲದ ಸಂದರ್ಭದಲ್ಲಿ ಭಾರತಕ್ಕೆ ದೊರೆತಿರುವುದು ನೆಮ್ಮದಿಯ ಸಂಗತಿಯಾಗಿದೆ. ಬೂಸ್ಟರ್ ಡೋಸ್‌ಗಳ ಬಗ್ಗೆ ಸಂಶೋಧನೆಗಳು ಪ್ರಗತಿಯಲ್ಲಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಅವಳ ನಗುವೇ ತಂದೆಯ ಶಕ್ತಿ; ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಸೈಕಲ್ ತುಳಿಯುತ್ತಾ ಸ್ಕೂಲ್‌ನತ್ತ ತಂದೆ – Kannada News | A father set off towards the school, cycling with his daughter seated on his shoulders.

ಸೋಶಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ನೂರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅಪ್ಪ ಮಗಳ (father – daughter) ಬಾಂಧವ್ಯ ಸಾರುವ ದೃಶ್ಯಗಳು ನೆಟ್ಟಿಗರ ಗಮನ ಸೆಳೆಯುತ್ತದೆ. ಇದೀಗ ಇಂತಹದ್ದೇ ದೃಶ್ಯ ವೈರಲ್ ಆಗಿದ್ದು, ಅಪ್ಪನೊಬ್ಬ ಮಗಳನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡಿದ್ದಾನೆ. ತಾನು ಸೈಕಲ್ ತುಳಿಯುತ್ತಾ ಶಾಲೆಗೆ ಕಳುಹಿಸಲು ಹೋಗುತ್ತಿದ್ದಾನೆ. ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಮೀನಾಕ್ಷಿ (Meenakshi) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಂದೆ ಮಗಳ ಬಾಂಧವ್ಯದ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್‌ನಲ್ಲಿ ತಂದೆಯೊಬ್ಬ ತನ್ನ ಅಂಬಾರಿ ಮೇಲೆ ಕೂರಿಸಿಕೊಂಡು ಶಾಲೆಗೆ ಕಳುಹಿಸಲು ಹೊರಟಿರುವ ದೃಶ್ಯ ಕಾಣಬಹುದು. ಇಲ್ಲಿ ತಂದೆಯ ಹೆಗಲ ಮೇಲೆ ಕುಳಿತ ಪುಟ್ಟ ಹುಡುಗಿಯು ಖುಷಿಯಿಂದಲೇ ಡ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ಮಗಳ ಖುಷಿಯಲ್ಲಿ ತನ್ನ ಖುಷಿ ಕಾಣುವ ತಂದೆಯು ಸೈಕಲ್ ತುಳಿಯುತ್ತ ಸ್ಕೂಲ್ ನತ್ತ ಹೋಗುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮಗಳ ಮಾರ್ಗದರ್ಶನದಲ್ಲಿ ಅಮೆಜಾನ್‌ನಲ್ಲಿ ಆರ್ಡರ್ ಮಾಡುವುದನ್ನು ಕಲಿತ ತಾಯಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ತಂದೆ ಕನಸು ಆತನ ಹೆಗಲ ಮೇಲಿದೆ ಎಂದಿದ್ದಾರೆ. ಇನ್ನೊಬ್ಬರು ಅಪ್ಪನಿಗೆ ಮಗಳೇ ಪ್ರಪಂಚ ಎಂದು ಹೇಳಿದ್ದಾರೆ. ಮತ್ತೊಬ್ಬರು, ಮತ್ತೆ ಮತ್ತೆ ನೋಡಬೇಕಿಸುವ ದೃಶ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

UPI without Internet: ಟ್ಯಾಪ್ ಟು ಪೇ, ಹೊಸ ಯುಪಿಐ ಫೀಚರ್; ಇಂಟರ್ನೆಟ್ ಇಲ್ಲದ ಫ್ಲೈಟ್, ಅಂಡರ್​ಗ್ರೌಂಡ್ ಮೆಟ್ರೋಗೂ ಹಣ ಪಾವತಿಸಿ – Kannada News | Tap to pay for flights, underground trains without internet connection, NPCI new UPI feature

ನವದೆಹಲಿ, ಜುಲೈ 21: ಇಂಟರ್ನೆಟ್ ಸಂಪರ್ಕವಿಲ್ಲದೆಯೂ ಯುಪಿಐ (UPI) ಮೂಲಕ ಹಣ ಪಾವತಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (NPCI) ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಯಲ್ಲಿ ವರದಿಯಾಗಿದೆ. ವಿಮಾನ ಪ್ರಯಾಣದ ವೇಳೆ (In-flight), ಅಂಡರ್​ಗ್ರೌಂಡ್ ಮೆಟ್ರೋ ರೈಲುಗಳಲ್ಲಿ ಮತ್ತು ಇಂಟರ್ನೆಟ್ ಸಿಗ್ನಲ್ ಇಲ್ಲದ ಪ್ರದೇಶಗಳಲ್ಲಿಯೂ ಸುಲಭವಾಗಿ ಪಾವತಿ ಮಾಡಲು ಈ ಸೌಲಭ್ಯ ನೆರವಾಗಲಿದೆ.

ಟ್ಯಾಪ್ ಟು ಪೇ: ಇಂಟರ್ನೆಟ್ ಇಲ್ಲದೆ ₹2,000 ವರೆಗಿನ ವಹಿವಾಟುಗಳನ್ನು ನಡೆಸಲು ಅವಕಾಶ ನೀಡುವಂತೆ ಯೋಜಿಸಲಾಗಿದೆ. ಎನ್​ಎಫ್​ಸಿ ಅಥವಾ ನಿಯರ್ ಫೀಲ್ಡ್ ಕಮ್ಯುನಿಕೇಶನ್ (NFC) ತಂತ್ರಜ್ಞಾನದ ಮೂಲಕ ಈ ಸೇವೆ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್‌ಫೋನ್ ಅನ್ನು ಪಾಯಿಂಟ್ ಆಫ್ ಸೇಲ್ (PoS) ಯಂತ್ರಕ್ಕೆ ಸ್ಪರ್ಶಿಸುವ (Tap) ಮೂಲಕ ಪಾವತಿಸಬಹುದು. ಇದು ‘UPI Lite’ ವಾಲೆಟ್ ಆಧಾರಿತ ವ್ಯವಸ್ಥೆಯಾಗುವುದರಿಂದ, ವಹಿವಾಟಿಗೆ ಯುಪಿಐ ಪಿನ್ (UPI PIN) ನಮೂದಿಸುವ ಅಗತ್ಯವಿರುವುದಿಲ್ಲ.

ಇದನ್ನೂ ಓದಿ: ಆದಾಯ ತೆರಿಗೆ ನೋಟೀಸ್ ಬಂತಾ? ಅದು ವಂಚಕರ ಜಾಲವಾ? ಆನ್​ಲೈನ್​ನಲ್ಲೇ ಪರಿಶೀಲಿಸಿ

ಇಂಟರ್ನೆಟ್ ಇಲ್ಲದೆ ಯುಪಿಐ ಹೇಗೆ ಕೆಲಸ ಮಾಡುತ್ತದೆ?

ಇಂಟರ್ನೆಟ್ ಇರುವಾಗ ಬಳಕೆದಾರರು ತಮ್ಮ UPI Lite ವಾಲೆಟ್‌ಗೆ ಹಣವನ್ನು ತುಂಬಿಕೊಳ್ಳಬೇಕು. ಇಂಟರ್ನೆಟ್ ಇಲ್ಲದಿದ್ದಾಗ, NFC ಬೆಂಬಲಿಸುವ ಸ್ಮಾರ್ಟ್‌ಫೋನ್ ಅನ್ನು ವ್ಯಾಪಾರಿಯ PoS ಯಂತ್ರಕ್ಕೆ ಟ್ಯಾಪ್ ಮಾಡಿದರೆ ವಹಿವಾಟು ಪೂರ್ಣಗೊಳ್ಳುತ್ತದೆ.

PoS ಯಂತ್ರವು ಈ ಪಾವತಿಯ ವಿವರವನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ ಮತ್ತು ಇಂಟರ್ನೆಟ್ ಸಂಪರ್ಕ ಸಿಕ್ಕ ತಕ್ಷಣ ನೆಟ್‌ವರ್ಕ್‌ನೊಂದಿಗೆ ಸಿಂಕ್ ಮಾಡಿಕೊಳ್ಳುತ್ತದೆ.

ಇದನ್ನೂ ಓದಿ: ನಿಮ್ಮ ಬಳಿ 20 ಲಕ್ಷ ರೂ ಇದ್ದರೆ ಎಲ್ಲಿ ಹೂಡಿಕೆ ಮಾಡಬೇಕು? ಇಲ್ಲಿದೆ ಮೂರು ಮಾದರಿಗಳು

ಎರಡ್ಮೂರು ವರ್ಷಗಳ ಹಿಂದೆ ಎನ್​ಪಿಸಿಐನಿಂದ ಯುಪಿಐ ಲೈಟ್ ಎಕ್ಸ್ ಫೀಚರ್ ಬಿಡುಗಡೆಯಾಗಿತ್ತು. ಇದು ಮೊಬೈಲ್ ಕನೆಕ್ಟಿವಿಟಿ ಇಲ್ಲದೆಯೇ ಆಫ್​ಲೈನ್​ನಲ್ಲಿ ಯುಪಿಐ ಲೈಟ್ ಮೂಲಕ ಪಾವತಿಸಬಹುದು. ಇಲ್ಲಿ ಪಾವತಿಸುವವರು ಮತ್ತು ಸ್ವೀಕರಿಸುವವರು, ಎರಡೂ ಕಡೆಯಲ್ಲೂ ಎನ್​ಎಫ್​ಸಿ ಎನೇಬಲ್ ಆಗಿರಬೇಕು.

ಈಗ ಎನ್​ಪಿಸಿಐನವರು ಇದೇ ಫೀಚರ್ ಅನ್ನು ಪಿಒಎಸ್​ಗಳಿಗೂ ವಿಸ್ತರಿಸುತ್ತಿದ್ದಾರೆ. ಅಂದರೆ, ಎನ್​ಎಫ್​ಸಿ ಎನೇಬಲ್ ಆಗಿರುವ ಪಿಒಎಸ್​ಗಳಲ್ಲಿ ಇಂಟರ್ನೆಟ್ ಇಲ್ಲದೆಯೇ ಯುಪಿಐ ಲೈಟ್ ಮೂಲಕ ಹಣ ಪಾವತಿಸಬಹುದು. ಇಲ್ಲಿ ಪಿಒಎಸ್ ಮತ್ತು ಮೊಬೈಲ್ ಎರಡೂ ಕಡೆ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದ್ದರೂ ಕೂಡ ಎನ್​ಎಫ್​ಸಿ ಸಹಾಯದಿಂದ ಪಾವತಿ ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ: ಬೃಹತ್​​ ಪ್ರತಿಭಟನೆ – Kannada News | Koppala Farmers Intensify Protest Against Baldota Factory Amidst Environmental Concerns

ಕೊಪ್ಪಳ, ಜುಲೈ 21: ಬಲ್ಡೋಟಾ ಕಾರ್ಖಾನೆಯ ವಿರುದ್ಧ ರೈತರು, ಪರಿಸರ ಹೋರಾಟಗಾರರು ಮತ್ತು ವಿವಿಧ ರಾಜಕೀಯ ಹಾಗೂ ಸಾಮಾಜಿಕ ಸಂಘಟನೆಗಳು ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸಿವೆ. ಬಲ್ಡೋಟಾ ಕಾರ್ಖಾನೆ ಎದುರು ಪ್ರತಿಭಟನಾ ಸಮಾವೇಶ ನಡೆಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿ 63ರಲ್ಲಿಯೇ ರೈತರು ಕುರ್ಚಿಗಳನ್ನು ಹಾಕಿದ ಪರಿಣಾಮ, ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಹೆದ್ದಾರಿಯಲ್ಲಿ ಚೇರ್​​ಗಳನ್ನು ಹಾಕದಂತೆ ಪ್ರತಿಭಟನಾಕಾರರಿಗೆ ಪೊಲೀಸರು ಮನವಿ ಮಾಡಿದರೂ ಹೋರಾಟಗಾರರು ಮಾತ್ರ ಡೋಂಟ್​​ಕೇರ್​​ ಎಂದಿದ್ದಾರೆ. ಹೀಗಾಗಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರೈತರ ‘ಕಿಸಾನ್ ಘಾಟ್’ ಚಲೋ: ಶಂಭು, ಸಿಂಘು ಗಡಿಗಳು ಬಂದ್, ನೂರಾರು ರೈತರು ಪೊಲೀಸ್ ವಶಕ್ಕೆ – Kannada News | Farmers Delhi March: India US Trade Deal Protest Shuts Shambhu, Singhu Borders

ಚಂಡೀಗಢ, ಜುಲೈ 21: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಪಂಜಾಬ್, ಹರಿಯಾಣ ಮತ್ತು ಇತರ ರಾಜ್ಯಗಳ ರೈತರು(Farmers) ದೆಹಲಿಯ ಕಿಸಾನ್ ಘಾಟ್‌ನತ್ತ ಬೃಹತ್ ಮೆರವಣಿಗೆ ಆರಂಭಿಸಿದ್ದಾರೆ. ರೈತರ ಸಂಚಾರವನ್ನು ತಡೆಯಲು ಹರಿಯಾಣ ಮತ್ತು ದೆಹಲಿ ಪೊಲೀಸರು ಗಡಿ ಪ್ರದೇಶಗಳಲ್ಲಿ ಭಾರಿ ಬ್ಯಾರಿಕೇಡ್‌ಗಳನ್ನು ಹಾಕಿ ಕಟ್ಟೆಚ್ಚರ ವಹಿಸಿದ್ದಾರೆ.

ರೈತರು ಬೆಳಗಿನ ಜಾವವೇ ದೆಹಲಿಯತ್ತ ಹೊರಟ ಹಿನ್ನೆಲೆಯಲ್ಲಿ, ಅಂಬಾಲಾದ ಶಂಭು ಗಡಿ ಹಾಗೂ ಸೋನಿಪತ್‌ನ ಸಿಂಘು ಗಡಿಗಳನ್ನು ಪೊಲೀಸರು ಸಂಪೂರ್ಣವಾಗಿ ಮುಚ್ಚಿದ್ದಾರೆ. ಶಂಭು ಗಡಿಯಲ್ಲಿ ರಾತ್ರೋರಾತ್ರಿ ದೊಡ್ಡ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರಿಂದ ದೆಹಲಿ-ಅಮೃತಸರ-ಚಂಡೀಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಸಾರ್ವಜನಿಕರು ತೀವ್ರ ಪರದಾಡುವಂತಾಗಿದೆ.

ಕುರುಕ್ಷೇತ್ರದ ಶಹಾಬಾದ್ ಮತ್ತು ಜ್ಯೋತಿಸರ್ ಚೆಕ್‌ಪೋಸ್ಟ್‌ಗಳಲ್ಲಿ ದೆಹಲಿಯತ್ತ ಸಾಗುತ್ತಿದ್ದ ರೈತರ ಬಸ್‌ಗಳನ್ನು ತಡೆದು, ನೂರಾರು ರೈತರನ್ನು ಪೊಲೀಸರು ವಶಕ್ಕೆ ಪಡೆದು ಪೊಲೀಸ್ ಲೈನ್‌ಗಳಿಗೆ ಕರೆದೊಯ್ದಿದ್ದಾರೆ. ಬಿಕೆಯು (BKU) ಪೆಹೋವಾ ವಕ್ತಾರ ಪ್ರಿನ್ಸ್ ವಾರೈಚ್ ಮಾತನಾಡಿ, “ಜೂನ್ 30 ರಂದು ‘ದೇಶ್ ಬಚಾವೋ ಮೋರ್ಚಾ’ ರಚಿಸಲಾಗಿದ್ದು, ಭಾರತ-ಯುಎಸ್ ವ್ಯಾಪಾರ ಒಪ್ಪಂದದ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಲು ರೈತರು ದೆಹಲಿಗೆ ತೆರಳುತ್ತಿದ್ದರು. ಆದರೆ ಸರ್ಕಾರ ಚಳವಳಿಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ” ಎಂದು ಆರೋಪಿಸಿದ್ದಾರೆ.

ಮತ್ತಷ್ಟು ಓದಿ: ಕರ್ನಾಟಕದ ರೈತರು ಹಾಗೂ ಉದ್ಯಮಿಗಳಿಗೆ ಯುಕೆ ಗಿಫ್ಟ್: ಬ್ರಿಟನ್ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ, ಕಾಫಿಗೆ ಸಿಗಲಿದೆ ಭಾರಿ ಡಿಮ್ಯಾಂಡ್

ಈಗಾಗಲೇ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಗುರ್ನಾಮ್ ಸಿಂಗ್ ಚದುನಿ ಹಾಗೂ ವಕ್ತಾರ ರಾಕೇಶ್ ಬೈನ್ಸ್ ಸೇರಿದಂತೆ ಹಲವಾರು ಪ್ರಮುಖ ರೈತ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.

ವಿಡಿಯೋ

ಶಾಂತಿ ಕಾಪಾಡಲು ಪೊಲೀಸ್ ಮನವಿ
ಕರ್ನಾಲ್ ಡಿಎಸ್‌ಪಿ ಮನೋಜ್ ಕುಮಾರ್ ಮಾತನಾಡಿ, ಭದ್ರತಾ ಕಾರಣಗಳಿಗಾಗಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಗಡಿಗಳಲ್ಲಿ ಕಟ್ಟುನಿಟ್ಟಿನ ಭದ್ರತೆ ಒದಗಿಸಲಾಗಿದೆ. ಸಾರ್ವಜನಿಕರು ಹಾಗೂ ರೈತರು ಶಾಂತಿ ಕಾಪಾಡಬೇಕು ಮತ್ತು ಪೊಲೀಸರೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:51 am, Tue, 21 July 26

Source link

ಮತ್ತೆ ಹಾಡಲಿರುವ ಅರಿಜಿತ್ ಸಿಂಗ್, ನಿವೃತ್ತಿ ನಿರ್ಧಾರ ಮುರಿದಿದ್ದೇಕೆ? – Kannada News | Arijit Singh breaks his retirement for Awarapan 2 movie song

ಅರಿಜಿತ್ ಸಿಂಗ್ (Arijit Singh) ಭಾರತದ ಸೂಪರ್ ಸ್ಟಾರ್ ಗಾಯಕ. ಅವರಷ್ಟು ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಗಾಯಕ ಪ್ರಸ್ತುತ ಭಾರತದಲ್ಲಿಲ್ಲ. ಹಲವಾರು ಅದ್ಭುತ ಹಾಡುಗಳಿಗೆ ಧ್ವನಿ ನೀಡಿರುವ ಅರಿಜಿತ್, ಸಾವಿರಾರು ಹಿಟ್​​ ಹಾಡುಗಳನ್ನು ಹಾಡಿದ್ದಾರೆ. ಆದರೆ ಕೆಲ ತಿಂಗಳ ಹಿಂದೆ ಅರಿಜಿತ್ ಸಿಂಗ್ ಅವರು ಅಚಾನಕ್ಕಾಗಿ ಗಾಯನಕ್ಕೆ ನಿವೃತ್ತಿ ಘೋಷಣೆ ಮಾಡಿದರು. ತಾವು ಇನ್ನು ಮುಂದೆ ಸಿನಿಮಾಗಳಲ್ಲಿ ಹಾಡುವುದಿಲ್ಲ ಎಂದಿದ್ದರು. ಸ್ಟಾರ್ ನಟ ಆಮಿರ್ ಖಾನ್ ಸೇರಿ ಇನ್ನೂ ಹಲವರು ಅವರ ಮನವೊಲಿಸಲು ಯತ್ನಿಸಿದರಾದರೂ ಸಫಲರಾಗಿರಲಿಲ್ಲ. ಆದರೆ ಇದೀಗ ಅರಿಜಿತ್ ಸಿಂಗ್ ತಮ್ಮ ನಿವೃತ್ತಿಯ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.

‘ಆವಾರಾಪನ್ 2’ ಸಿನಿಮಾಕ್ಕಾಗಿ ಅರಿಜಿತ್ ಸಿಂಗ್ ತಮ್ಮ ನಿವೃತ್ತಿ ಮುರಿದಿದ್ದಾರೆ ಎನ್ನಲಾಗುತ್ತಿದೆ. 2007 ರಲ್ಲಿ ಬಿಡುಗಡೆ ಆಗಿದ್ದ ಇಮ್ರಾನ್ ಹಶ್ಮಿ ನಟನೆಯ ‘ಆವಾರಾಪನ್’ ಸಿನಿಮಾದ ಎರಡನೇ ಭಾಗ ಇದೀಗ ನಿರ್ಮಾಣವಾಗಿದೆ. 2007ರ ‘ಆವಾರಾಪನ್’ ಸಿನಿಮಾದ ಹಾಡುಗಳು ದೊಡ್ಡ ಹಿಟ್ ಆಗಿದ್ದವು. ಇದೀಗ ‘ಆವಾರಾಪನ್ 2’ ಸಿನಿಮಾದ ಹಾಡುಗಳ ಮೇಲೆ ವಿಶೇಷ ಕಾಳಜಿಯನ್ನು ವಹಿಸಲಾಗಿದ್ದು, ಇದೇ ಕಾರಣಕ್ಕೆ ಅರಿಜಿತ್ ಸಿಂಗ್ ಅವರಿಂದಲೇ ಹಾಡು ಹಾಡಿಸಲಾಗಿದೆ.

ಇದನ್ನೂ ಓದಿ:ಅರಿಜಿತ್ ಸಿಂಗ್ ನಿವೃತ್ತಿ ಬೆನ್ನಲ್ಲೇ ಶಾಕಿಂಗ್ ಹೇಳಿಕೆ ನೀಡಿದ ಶ್ರೇಯಾ ಘೋಷಾಲ್

ಅರಿಜಿತ್ ಸಿಂಗ್ ಹಾಡಿರುವ ‘ಆವಾರಾಪನ್ 2’ ಸಿನಿಮಾದ ಹಾಡು ಇಂದು ಬಿಡುಗಡೆ ಆಗಲಿದೆ. ಆದರೆ ಬಿಡುಗಡೆಗೆ ಮುಂಚೆಯೇ ಹಾಡು ಸೂಪರ್ ಹಿಟ್ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸಿನಿಮಾಕ್ಕೆ ಅಮಾಲ್ ಮಲ್ಲಿಕ್ ಸಂಗೀತ ನೀಡಿದ್ದು, ಕೆಲವು ಮಧುರವಾದ ಹಾಡುಗಳನ್ನು ಸಿನಿಮಾಕ್ಕಾಗಿ ಮಾಡಿದ್ದಾರೆ. ಅದರಲ್ಲಿ ಒಂದು ಹಾಡನ್ನು ಅರಿಜಿತ್ ಸಿಂಗ್ ಹಾಡಿದ್ದಾರೆ.

‘ಆವಾರಾಪನ್ 2’ ಸಿನಿಮಾನಲ್ಲಿ ಇಮ್ರಾನ್ ಹಶ್ಮಿ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2007 ರ ‘ಆವಾರಾಪನ್’ ಸಿನಿಮಾದ ಮ್ಯಾಜಿಕ್ ಅನ್ನೇ ಪುನರ್ಸೃಷ್ಟಿಸಲು ಚಿತ್ರತಂಡ ಯತ್ನಿಸುತ್ತಿದೆ. ‘ಆವಾರಾಪನ್’ ಸಿನಿಮಾದ ಹಾಡುಗಳಿಗೆ ದೊಡ್ಡ ಅಭಿಮಾನಿ ವರ್ಗವೇ ಇದೆ. ಇದೀಗ ಅದೇ ಮ್ಯಾಜಿಕ್ ಅನ್ನು ‘ಆವಾರಾಪನ್ 2’ ಸಿನಿಮಾ ಮಾಡುತ್ತದೆಯೋ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಡಿ.ಕೆ.ಶಿವಕುಮಾರ್‌ ಬೆಳಗಾವಿ ಪ್ರವಾಸದ ವೇಳೆ ಕರ್ತವ್ಯಲೋಪ: ಡಿಹೆಚ್‌ಒಗೆ ಶೋಕಾಸ್​​ ನೋಟಿಸ್​​ – Kannada News | Belagavi DHO Issued Show Cause Notice for Failing to Arrange Advanced Life Support Ambulance During CM’s Visit

ಬೆಳಗಾವಿ ಡಿಹೆಚ್‌ಒಗೆ ಶೋಕಾಸ್​​ ನೋಟಿಸ್​​Image Credit source: Tv9 Kannada

ಬೆಂಗಳೂರು, ಜುಲೈ 21: ಸಿಎಂ ಡಿ.ಕೆ. ಶಿವಕುಮಾರ್‌ ಬೆಳಗಾವಿ ಪ್ರವಾಸದ ವೇಳೆ ಡಿಹೆಚ್‌ಒ ಯಡವಟ್ಟು ಮಾಡಿದ್ದು, ಅಡ್ವಾನ್ಸ್ ಲೈಫ್‌ ಸಪೋರ್ಟ್ ಆ್ಯಂಬುಲೆನ್ಸ್ ಮತ್ತು ತಜ್ಞ ವೈದ್ಯರ ನೇಮಿಸದೇ ಬೇಜವಾಬ್ದಾರಿ ತೋರಿರುವ ಆರೋಪ ಕೇಳಿಬಂದಿದೆ. ಸರ್ಕಾರ ನಿರ್ದೇಶನವಿದ್ದರೂ ಲೈಫ್‌ ಸಪೋರ್ಟ್ ಆ್ಯಂಬುಲೆನ್ಸ್ ನೀಡದೆ ಸಾಮಾನ್ಯ ಆ್ಯಂಬುಲೆನ್ಸ್ ನಿಯೋಜಿಸದ ಜೊತೆಗೆ ವೈದ್ಯಕೀಯ ತಂಡದೊಂದಿಗೆ ನಿರಂತರ ಸಂಪರ್ಕ ಸಾಧಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೆ, ಸಿಎಂ ವಾಸ್ತವ್ಯ ಸ್ಥಳದಲ್ಲಿ ತಜ್ಞ ವೈದ್ಯರ ಬದಲು ಪಿಜಿ ವೈದ್ಯರ ನಿಯೋಜನೆ ಮಾಡುವ ಮೂಲಕ ಕರ್ತವ್ಯಲೋಪ ಎಸಗಿರುವ ಹಿನ್ನೆಲೆ ಶಿಷ್ಟಾಚಾರ ಉಲ್ಲಂಘಿಸಿದ ಡಿಹೆಚ್‌ಒ ಈಶ್ವರ ಗಡಾದಗೆ ಶೋಕಾಸ್ ನೋಟಿಸ್ ನೀಡಲಾಗಿದೆ.

ಶೋಕಾಸ್​​ ನೋಟಿಸ್​​​ನಲ್ಲಿ ಏನಿದೆ?

ಮುಖ್ಯಮಂತ್ರಿಗಳ ಪ್ರವಾಸದ ವೇಳೆ ಅವರ ಭದ್ರತೆಗೆ ಅಗತ್ಯವಾಗಿದ್ದ ಅಡ್ವಾನ್ಸ್ ಲೈಫ್‌ ಸಪೋರ್ಟ್ ಆ್ಯಂಬುಲೆನ್ಸ್ ಮತ್ತು ತಜ್ಞ ವೈದ್ಯರ ನೇಮಿಸದೇ ಇರುವುದು ಪರಿಶೀಲನೆ ವೇಳೆ ದೃಢಪಟ್ಟಿದೆ. ಅಲ್ಲದೆ ಆ ವೇಳೆ ತಾವು ಕೂಡ ಹಾಜರಿಲ್ಲದೆ ಇರುವುದು ಗಮನಕ್ಕೆ ಬಂದಿದ್ದು, ಕನಿಷ್ಠ ಸೌಲಭ್ಯಗಳಾದ ಗ್ಲುಕೋಮೀಟರ್ ಮತ್ತು ಬಿಪಿ ಅಪಾರ್ಚರ್ಸ್ ಸಹ ಇಲ್ಲದಿರೋದು ಗೊತ್ತಾಗಿದೆ. ವಿಐಪಿ/ವಿವಿಐಪಿ ಪ್ರೋಟೋಕಾಲ್​​ಗೆ ಅನುಗುಣವಾಗಿ ಸುಸಜ್ಜಿತ ಜೀವ ರಕ್ಷಕ ವಾಹನ ಹಾಗೂ ಅಗತ್ಯ ಉಪಕರಣಗಳನ್ನು ಒದಗಿಸದೆ ಕರ್ತವ್ಯಲೋಪ ಎಸಗಲಾಗಿದೆ ಎಂದು ಶೋಕಾಸ್​​ ನೋಟಿಸ್​​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ವಿಮೆ ಆಸೆಗೆ ತನ್ನದೇ ಅಂಗಡಿಯಲ್ಲಿ ಕಳ್ಳತನ ಮಾಡಿದ ಚಿನ್ನದಂಗಡಿ ಮಾಲೀಕ! ಕೊನೆಗೂ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?

ನಿಮ್ಮ ವಿರುದ್ಧ ಯಾಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂಬುದರ ಕುರಿತು ಈ ನೋಟಿಸ್​​ ಸ್ವೀಕರಿಸಿದ ದಿನಾಂಕದಿಂದ ಏಳು ದಿನಗಳ ಒಳಗಾಗಿ ಲಿಖಿತ ಸಮಜಾಯಿಷಿಯನ್ನು ಸಲ್ಲಿಸುವಂತೆಯೂ ಸೂಚಿಸಲಾಗಿದೆ. ಕಾಲಮಿತಿಯೊಳಗೆ ಸಮರ್ಪಕ ಉತ್ತರ ಸಲ್ಲಿಸದಿದ್ದಲ್ಲಿ ಅಥವಾ ಉತ್ತರ ತೃಪ್ತಿಕರವಾಗಿರದಿದ್ದಲ್ಲಿ ಅನ್ವಯಿಸುವ ನಿಯಮಗಳಡಿ ನಿಮ್ಮ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಸೂಚಿಸೋದಾಗಿ ಬೆಳಗಾವಿ ಜಿಲ್ಲಾ ಪಂಚಾಯತ್​​​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೋಟಿಸ್​​​ನಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶಿವಾಜಿನಗರದಲ್ಲಿ ಫುಟ್​ಪಾತ್ ತೆರವು ಕಾರ್ಯಾಚರಣೆ ವೇಳೆ ಜಿಬಿಎ ಸಿಬ್ಬಂದಿ ಮೇಲೆ ಪೆಪ್ಪರ್ ಸ್ಪ್ರೇ, ಹಲ್ಲೆ ಆರೋಪ – Kannada News | Shivajinagar Footpath Clearance Turns Tense: BBMP Staff Allege Pepper Spray Attack During Anti Encroachment Drive

ಬೆಂಗಳೂರು, ಜುಲೈ 21: ಬೆಂಗಳೂರಿನ ಶಿವಾಜಿನಗರದಲ್ಲಿ ಜಿಬಿಎ ವತಿಯಿಂದ ನಡೆದ ಫುಟ್​ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಮಂಗಳವಾರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸ್ಥಳೀಯ ಸಂಘಟನೆಗಳ ಸದಸ್ಯರು ಪಾಲಿಕೆ ಸಿಬ್ಬಂದಿ ಮತ್ತು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಜೆಸಿಬಿ ಬಳಸಿ ಫುಟ್​ಪಾತ್ ಅತಿಕ್ರಮಣಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಸಿಬ್ಬಂದಿ ಮುಂದಾದಾಗ, ಸ್ಥಳೀಯ ಸಂಘಟನೆಗಳ ಕಾರ್ಯಕರ್ತರು ಅಡ್ಡಿಪಡಿಸಿದರು. ಈ ವೇಳೆ, ಪಾಲಿಕೆಯ ಇಂಜಿನಿಯರ್‌ಗಳು ಮತ್ತು ಜೆಸಿಬಿ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಗಳು ಕೇಳಿಬಂದಿವೆ. ಒಬ್ಬ ಪಾಲಿಕೆ ಸಿಬ್ಬಂದಿಯ ಮೇಲೆ ಹೆಲ್ಮೆಟ್‌ನಿಂದ ಹಲ್ಲೆ ಮಾಡಲು ಪ್ರಯತ್ನಿಸಲಾಯಿತು ಎಂದು ಪಾಲಿಕೆ ಸಿಬ್ಬಂದಿ ತಿಳಿಸಿದ್ದಾರೆ. ಅಲ್ಲದೆ, ಜೆಸಿಬಿ ಚಾಲಕನ ಮೇಲೆ ಪೆಪ್ಪರ್ ಸ್ಪ್ರೇ ಮಾಡಲಾಯಿತು ಎಂದೂ ಅವರು ಆರೋಪಿಸಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿದರು. ಹಲ್ಲೆ ಯತ್ನದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಉದ್ವಿಗ್ನ ಪರಿಸ್ಥಿತಿಯಿಂದಾಗಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಪಾಲಿಕೆ ಸಿಬ್ಬಂದಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version