ಬೆಂಗಳೂರಿನ 8 ಕಡೆ ಇಡಿ ಅಧಿಕಾರಿಗಳ ದಿಢೀರ್ ದಾಳಿ: ಐಸಿಸ್ ನೆರವು ಹಾಗೂ ಅಕ್ರಮ ಹಣ ವರ್ಗಾವಣೆ ಜಾಲ ಬಯಲು! – Kannada News | ED Raids 8 Locations in Bengaluru Over ISIS Funding and Terror Recruitment

ಬೆಂಗಳೂರಿನ 8 ಕಡೆ ಇಡಿ ಅಧಿಕಾರಿಗಳ ದಿಢೀರ್ ದಾಳಿ

ಬೆಂಗಳೂರು, ಜುಲೈ 21: ಬಂಧಿತ ಉಗ್ರ ಸಂಘಟನೆ ಐಸಿಸ್‌ಗೆ (ISIS) ಹಣಕಾಸಿನ ನೆರವು ನೀಡಿದ ಹಾಗೂ ಯುವಕರನ್ನು ಕಾನೂನುಬಾಹಿರವಾಗಿ ವಿದೇಶಕ್ಕೆ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಬೆಂಗಳೂರಿನ 8 ಪ್ರಮುಖ ಸ್ಥಳಗಳಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಖಲಿಸಿದ್ದ ಎಫ್‌ಐಆರ್ ಹಾಗೂ ಚಾರ್ಜ್‌ಶೀಟ್ ಆಧರಿಸಿ ಜಾರಿ ನಿರ್ದೇಶನಾಲಯವು ಪ್ರಕರಣವನ್ನು ಕೈಗೆತ್ತಿಕೊಂಡು ಈ ಕಾರ್ಯಾಚರಣೆ ನಡೆಸಿದೆ.

ಪ್ರಕರಣದ ಹಿನ್ನೆಲೆ

ಆರೋಪಿಗಳು ಬೆಂಗಳೂರಿನ ಮುಸ್ಲಿಂ ಯುವಕರನ್ನು ಐಸಿಸ್ ಸಿದ್ಧಾಂತದತ್ತ ಆಕರ್ಷಿಸಲು ‘ಇಕ್ರಾ ಕ್ಯಾಂಪ್’ ಎಂಬ ವ್ಯಕ್ತಿತ್ವ ವಿಕಾಸ ಕಾರ್ಯಾಗಾರವನ್ನು ಆಯೋಜಿಸುತ್ತಿದ್ದರು. ಇದರ ಮೂಲಕ ಬೆಳೆದ ‘ಕುರ್‌ಆನ್ ಸರ್ಕಲ್’ ಎಂಬ ವಾರಾಂತ್ಯದ ಅಧ್ಯಯನ ಕೂಟಗಳ ಮೂಲಕ ಯುವಕರನ್ನು ಗುರುತಿಸಿ ಬ್ರೇನ್‌ವಾಶ್ ಮಾಡಲಾಗುತ್ತಿತ್ತು. ತಮ್ಮ ಸ್ವಂತ ಉಳಿತಾಯ, ಖಾಸಗಿ ವ್ಯಕ್ತಿಗಳು ಹಾಗೂ ‘ಇಕ್ರಾ ವೆಲ್ಫೇರ್ ಟ್ರಸ್ಟ್’ ಮತ್ತು ‘GFM ಟ್ರಸ್ಟ್’ ಗಳ ಮೂಲಕ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದರು. ಈ ಹಣವನ್ನು ಯುವಕರ ನೇಮಕಾತಿ ಮತ್ತು ಪ್ರಯಾಣದ ವೆಚ್ಚಕ್ಕೆ ಬಳಸಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.

ಟರ್ಕಿ ಮಾರ್ಗವಾಗಿ ಸಿರಿಯಾಗೆ ರವಾನೆ

ಬ್ರೇನ್‌ವಾಶ್‌ಗೊಳಗಾದ ಯುವಕರನ್ನು ಟರ್ಕಿಯ ಮಾರ್ಗವಾಗಿ ಸಿರಿಯಾಗೆ ಅಕ್ರಮವಾಗಿ ಕಳುಹಿಸಿ, ಭಾರತ ಸರ್ಕಾರದೊಂದಿಗೆ ಮೈತ್ರಿ ಹೊಂದಿರುವ ಸಿರಿಯಾ ಸರ್ಕಾರದ ವಿರುದ್ಧ ಐಸಿಸ್ ಪರವಾಗಿ ಯುದ್ಧ ಮಾಡಲು ನೆರವು ನೀಡಲಾಗುತ್ತಿತ್ತು ಎಂದು ಎನ್‌ಐಎ ತನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ ವಾಟ್ಸಾಪ್​ಗೆ ಎಪಿಕೆ ಫೈಲ್​ನಲ್ಲಿ ಬಂತು ಮದುವೆ ಆಮಂತ್ರಣ: ಕ್ಲಿಕ್ ಮಾಡಿದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ 9.96 ಲಕ್ಷ ರೂ. ಮಾಯ!

ಸಿಎಎ (CAA) ಮತ್ತು ಎನ್ಆರ್ಸಿ (NRC) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಯುವಕರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಮುಸ್ಲಿಮೇತರರ ವಿರುದ್ಧ ಪ್ರಚೋದನೆ ನೀಡಲಾಗಿತ್ತು. ಜೊತೆಗೆ ಸುರಕ್ಷಿತ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಐಸಿಸ್‌ ಸಿದ್ಧಾಂತವನ್ನು ಪಸರಿಸಲು ಸಂಚು ರೂಪಿಸಲಾಗಿತ್ತು. ಪ್ರಸ್ತುತ ಇಡಿ ಅಧಿಕಾರಿಗಳು ವಿವಿಧ ಟ್ರಸ್ಟ್‌ಗಳು ಹಾಗೂ ಶಂಕಿತರ ನಿವಾಸಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫುಟ್ಪಾತ್​​, ಬಿಡಾಡಿ ವಾಹನಗಳ ತೆರವಿನ ಬಳಿಕ ರಾಜಕಾಲುವೆ ಒತ್ತುವರಿದಾರರಿಗೂ ಶಾಕ್​​ ಕೊಡಲು ಮುಂದಾದ ಜಿಬಿಎ – Kannada News | After Footpaths, GBA Targets Encroachers: 260 km Rajakaluve Development with World Bank Aid to Begin Soon

ಬೆಂಗಳೂರು, ಜುಲೈ 21: ಫುಟ್ಪಾತ್​​, ಬಿಡಾಡಿ ವಾಹನಗಳ ತೆರವಿನ ಬಳಿಕ ರಾಜಕಾಲುವೆ ಒತ್ತುವರಿದಾರರಿಗೂ ಶಾಕ್​​ ಕೊಡಲು ಗ್ರೇಟರ್​​ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಈ ಬಗ್ಗೆ ಬೆಂಗಳೂರು ನಗರಾಭಿವೃದ್ದಿ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದ್ದು, ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಕೂಡ ಮಾಡುತ್ತೇವೆ. ಬೆಂಗಳೂರಿನಲ್ಲಿ 860 ಕಿ.ಮೀ. ರಾಜಕಾಲುವೆ ವ್ಯಾಪ್ತಿ ಇದ್ದು, ಈಗಾಗಲೇ ಅಂದಾಜು 600 ಕಿ.ಮೀ. ವ್ಯಾಪ್ತಿ ಅಭಿವೃದ್ಧಿ ಮಾಡಿದ್ದೇವೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆ 400 ಕಿ.ಮೀ. ಮತ್ತು ಬಿಜೆಪಿ ಅವರ ಅಧಿಕಾರಾವಧಿಯಲ್ಲಿ 150 ಕಿ.ಮೀ. ಅಭಿವೃದ್ಧಿಯಾಗಿದೆ. ಹೀಗಾಗಿ ಉಳಿದಿರುವ 260 ಕಿ.ಮೀ. ರಾಜಕಾಲುವೆ ಅಭಿವೃದ್ಧಿ ಆಗಬೇಕಿದೆ. ವಿಶ್ವ ಬ್ಯಾಂಕ್ ಸಹಾಯದೊಂದಿಗೆ ಈ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುತ್ತೇವೆ. ಈ ವೇಳೆ ಒತ್ತುವರಿ ತೆರವು ಕೂಡ ಮಾಡಿಯೇ ಮಾಡುತ್ತೇವೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಈ ಎರಡು ರಾಶಿಯವರಿಗೆ ಬರುವ ತಾಪತ್ರಯಕ್ಕೆ ಪರಿಹಾರ ಅವರ ಕೈಯಲ್ಲಿದೆ – Kannada News | Leo and Virgo Astrology: Monthly Challenges, Planetary Effects and Remedies

ತಾಪತ್ರಯಕ್ಕೆ ಪರಿಹಾರImage Credit source: Getty Images

ಈ ತಿಂಗಳಲ್ಲಿ ಎದುರಾದ ಎದುರಾಗಲಿರುವ ತೊಂದರೆಗಳು ಯಾವುವು ಎಂದು ಸಿಂಹ ಮತ್ತು ಕನ್ಯಾ ರಾಶಿಯವರಿಗೆ ನೋಡೋಣ. ರವಿ ಹಾಗೂ ಬುಧನ ಆಧಿಪತ್ಯದ ಈ ಎರಡೂ ರಾಶಿಗಳಿಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏನೆಲ್ಲ ಆಗಲಿದೆ, ಅದಕ್ಕೆ ಪರಿಹಾತವನ್ನು ವೈಯಕ್ತಿಯಕವಾಗಿಯೂ ಮಾಡಿಕೊಳ್ಳಬಹುದು.

​ಸಿಂಹ ರಾಶಿ :

​ಸಿಂಹ ರಾಶಿಯವರಿಗೆ ಪ್ರಸ್ತುತ ಗೋಚಾರದಲ್ಲಿ ಪ್ರಮುಖ ಗ್ರಹಗಳ ಸ್ಥಾನವು ಸವಾಲಿನ ಪರಿಸ್ಥಿತಿಯನ್ನು ತಿಳಿಸುತ್ತದೆ.

​ಅಷ್ಟಮ ಶನಿಯ ಪ್ರಭಾವ :

ಮೀನ ರಾಶಿಯಲ್ಲಿ ವಕ್ರಿಯಾಗಿರುವ ಶನಿಯು ಸಿಂಹ ರಾಶಿಗೆ ೮ನೇ ಮನೆಯಲ್ಲಿದ್ದಾನೆ. ಇದು ಮಾನಸಿಕ ಒತ್ತಡ, ಕಾರ್ಯಗಳಲ್ಲಿ ಅನಿರೀಕ್ಷಿತ ಅಡೆತಡೆಗಳು, ಧನ ನಷ್ಟ ಮತ್ತು ಆರೋಗ್ಯದಲ್ಲಿ ಏರಿಳಿತಗಳನ್ನು ಉಂಟುಮಾಡಬಹುದು.

​ಕೇತು ಮತ್ತು ಶುಕ್ರ :

ರಾಶಿಯಲ್ಲೇ ಕೇತು ಮತ್ತು ಶುಕ್ರ ಇರುವುದರಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲ, ಶರೀರದಲ್ಲಿ ಶಕ್ತಿ ಕುಂದುವುದು ಹಾಗೂ ಅನಗತ್ಯ ಮಾನಸಿಕ ವಿರಕ್ತಿ ಭಾವನೆ ಕಾಡಬಹುದು.

​ಸಪ್ತಮ ಭಾವದಲ್ಲಿ ರಾಹು ಮತ್ತು ಚಂದ್ರ:

ಕುಂಭ ರಾಶಿಯಲ್ಲಿ ರಾಹು ಮತ್ತು ಚಂದ್ರರ ಸಂಯೋಜನೆಯಿಂದ ‘ಗ್ರಹಣ ದೋಷ’ ಉಂಟಾಗುತ್ತದೆ. ಇದು ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಭಿನ್ನಾಭಿಪ್ರಾಯ, ಸಂಗಾತಿಯೊಂದಿಗೆ ಅಸಮಾಧಾನ, ಹಾಗೂ ವ್ಯಾಪಾರ-ಪಾಲುದಾರಿಕೆಯಲ್ಲಿ ತಪ್ಪು ಗ್ರಹಿಕೆಗಳಿಗೆ ಕಾರಣವಾಗಬಹುದು.

​ದ್ವಾದಶ ಭಾವದಲ್ಲಿ ಸೂರ್ಯ ಮತ್ತು ಗುರು:

ರಾಶ್ಯಾಧಿಪತಿ ಸೂರ್ಯ ಹಾಗೂ ಅಸ್ತಂಗತನಾದ ಗುರು ೧೨ನೇ ಮನೆಯಲ್ಲಿ ಕರ್ಕಾಟಕ ರಾಶಿಯಲ್ಲಿದ್ದಾರೆ. ಇದರಿಂದ ಅನಗತ್ಯ ಹಾಗೂ ಅನಿರೀಕ್ಷಿತ ವೆಚ್ಚಗಳು ಹೆಚ್ಚಾಗುವುದು, ನಿದ್ರಾಹೀನತೆ ಮತ್ತು ಪ್ರಯಾಣದಲ್ಲಿ ಕ್ಲೇಶಗಳು ಎದುರಾಗಬಹುದು.

ಕನ್ಯಾ ರಾಶಿ:

​ಕನ್ಯಾ ರಾಶಿಯವರಿಗೆ ಗ್ರಹಗಳ ಸ್ಥಾನಮಾನದಂತೆ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಎಚ್ಚರಿಕೆ ಅಗತ್ಯ.

​ಸಪ್ತಮ ಭಾವದಲ್ಲಿ ವಕ್ರ ಶನಿ:

ಮೀನ ರಾಶಿಯ ಶನಿಯು ಕನ್ಯಾ ರಾಶಿಗೆ ನೇರವಾಗಿ ೭ನೇ ಮನೆಯಲ್ಲಿದ್ದು ಲಗ್ನವನ್ನು ವೀಕ್ಷಿಸುತ್ತಾನೆ. ಇದರಿಂದ ದಾಂಪತ್ಯ ಜೀವನದಲ್ಲಿ ಕಷ್ಟ-ಮನಸ್ತಾಪಗಳು, ಸಂಗಾತಿಯ ಆರೋಗ್ಯದಲ್ಲಿ ಏರಿಳಿತ ಮತ್ತು ಹೊಸ ವ್ಯವಹಾರಿಕ ಒಪ್ಪಂದಗಳಲ್ಲಿ ವಿಳಂಬ ಉಂಟಾಗಬಹುದು.

​ದ್ವಾದಶ ಭಾವದಲ್ಲಿ ಕೇತು ಮತ್ತು ಶುಕ್ರ:

೧೨ನೇ ಮನೆಯಲ್ಲಿ ಕೇತು ಮತ್ತು ಶುಕ್ರ ಇರುವುದರಿಂದ ಹಣಕಾಸಿನ ಆಸೋರಿಕೆ, ಹಿಡಿತವಿಲ್ಲದ ಖರ್ಚು, ಕಣ್ಣಿನ ತೊಂದರೆಗಳು ಹಾಗೂ ವೈಯಕ್ತಿಕ ಸುಖ-ಸಂತೋಷಗಳಲ್ಲಿ ಕೊರತೆ ಕಾಣಿಸಬಹುದು.

ಇದನ್ನೂ ಓದಿ: ವಾರದ ಪ್ರೇಮ – ಪ್ರೀತಿ ಭವಿಷ್ಯ: ಜುಲೈ 19 ರಿಂದ 25 ರವರೆಗೆ ಪ್ರಮುಖ ಗ್ರಹಗಳ ಸಂಚಾರ; ನಿಮ್ಮ ಪ್ರೇಮ ಜೀವನದ ಮೇಲಾಗುವ ಪ್ರಭಾವ ಇಲ್ಲಿದೆ

​ಷಷ್ಠ ಭಾವದಲ್ಲಿ ರಾಹು ಮತ್ತು ಚಂದ್ರ:

೬ನೇ ಮನೆಯಲ್ಲಿ ರಾಹು-ಚಂದ್ರರ ಸಂಯೋಜನೆಯಿಂದ ರಹಸ್ಯ ಚಿಂತೆಗಳು, ಜೀರ್ಣಕ್ರಿಯೆ ಅಥವಾ ಮಾನಸಿಕ ಆತಂಕದಂತಹ ಸಮಸ್ಯೆಗಳು ಕಾಡಬಹುದು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಸಣ್ಣಪುಟ್ಟ ಕಿರಿಕಿರಿ ಅಥವಾ ಸಾಲದ ಸುಳಿಗೆ ಸಿಲುಕುವ ಎಚ್ಚರಿಕೆ ಅಗತ್ಯ.

​ಗುರು ಅಸ್ತ:

ಲಾಭ ಸ್ಥಾನದಲ್ಲಿ ಉಚ್ಚ ಗುರುವಿದ್ದರೂ, ಆತ ಸೂರ್ಯನಿಂದ ಅಸ್ತಂಗತನಾಗಿರುವುದರಿಂದ ನಿರೀಕ್ಷಿತ ಆರ್ಥಿಕ ಲಾಭಗಳು ತಕ್ಷಣಕ್ಕೆ ಸಿಗದೆ ವಿಳಂಬವಾಗಬಹುದು.

ಪರಿಹಾರಗಳು:

​ಸಿಂಹ ರಾಶಿಯವರು ಶಿವನ ಆರಾಧನೆ, ಹನುಮಾನ್ ಚಾಲೀಸಾ ಪಾರಾಯಣ ಮಾಡುವುದು ಹಾಗೂ ಶನಿವಾರ ಶನಿ ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚುವುದು ಶ್ರೇಯಸ್ಸು ಪಡೆಯುವರು.

​ಕನ್ಯಾ ರಾಶಿಯವರು ವಿಷ್ಣು ಸಹಸ್ರನಾಮ ಪಠಣ, ಸುಬ್ರಹ್ಮಣ್ಯ ಸ್ವಾಮಿ ಪೂಜೆಯಿಂದ ಶುಭ ಫಲ ಪಡೆಯಬಹುದು.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈಗಿರುವ ರೂಪದಲ್ಲಿ ಒಪ್ಪಂದ ಸಾಧ್ಯವೇ ಇಲ್ಲ, ಪಾಕಿಸ್ತಾನಕ್ಕೆ ಭಾರತದ ಖಡಕ್ ಎಚ್ಚರಿಕೆ, ಸಿಂಧೂ ಜಲ ಒಪ್ಪಂದದ ಬಗ್ಗೆ ಮತ್ತೆ ಕಠಿಣ ನಿಲುವು – Kannada News | India’s Firm Warning: Indus Water Treaty Impossible in Current Form with Pakistan

ನವದೆಹಲಿ, ಜುಲೈ 21: ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ(Pakistan) ನೀಡುತ್ತಿರುವ ಬೆಂಬಲವನ್ನು ನಿಲ್ಲಿಸದೇ ಇರುವ ಹಿನ್ನೆಲೆಯಲ್ಲಿ, ಸಿಂಧೂ ಜಲ ಒಪ್ಪಂದದ (IWT) ಕುರಿತು ಭಾರತ ಸರ್ಕಾರ ತನ್ನ ನಿಲುವನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಿದೆ. 1960 ರಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ನಡೆದ ಈ ಒಪ್ಪಂದವು ಇನ್ಮುಂದೆ “ಈಗಿರುವ ಪ್ರಸ್ತುತ ರೂಪದಲ್ಲಿ ಮುಂದುವರೆಯಲು ಸಾಧ್ಯವೇ ಇಲ್ಲ” ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಕಳೆದ ವರ್ಷ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಈಗಾಗಲೇ ಈ ಒಪ್ಪಂದವನ್ನು ಅಮಾನತಿನಲ್ಲಿಟ್ಟಿತ್ತು.

ಭಾರತದ ಪ್ರಮುಖ ಆಕ್ಷೇಪಣೆಗಳು ಮತ್ತು ಕಠಿಣ ನಿಲುವು
1960 ರ ಒಪ್ಪಂದವನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಸಕ್ರಿಯ ನಿರ್ಧಾರವನ್ನು ಭಾರತ ತಕ್ಷಣವೇ ತೆಗೆದುಕೊಳ್ಳದಿದ್ದರೂ, ಅಂತಹ ಗರಿಷ್ಠ ಆಯ್ಕೆ ಭಾರತದ ಮೇಜಿನ ಮೇಲೆಯೇ ಇದೆ. ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಒಪ್ಪಂದದಲ್ಲೂ ದೇಶ ಮುಂದುವರಿಯುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಉಗ್ರ ಸಂಘಟನೆಗಳಿಗೆ ನೀಡುತ್ತಿರುವ ಬೆಂಬಲವನ್ನು ಸಂಪೂರ್ಣವಾಗಿ ಹಾಗೂ ಶಾಶ್ವತವಾಗಿ ನಿಲ್ಲಿಸುವವರೆಗೆ ಒಪ್ಪಂದವನ್ನು ಪುನರಾರಂಭಿಸುವ ಪ್ರಶ್ನೆಯೇ ಇಲ್ಲ ಎಂದು ಭಾರತೀಯ ಅಧಿಕಾರಿಗಳು ಖಡಕ್ ಆಗಿ ಹೇಳಿದ್ದಾರೆ.

ಜನಸಂಖ್ಯೆಯ ಹೆಚ್ಚಳ, ಶುದ್ಧ ಇಂಧನ ಆಶಯಗಳು ಮತ್ತು ಬದಲಾದ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಒಪ್ಪಂದದ ನಿಬಂಧನೆಗಳನ್ನು ಸಂಪೂರ್ಣ ಪರಿಶೀಲಿಸಿ ಮಾರ್ಪಡಿಸಬೇಕು ಎಂಬುದು ಭಾರತದ ಆಗ್ರಹವಾಗಿದೆ.

ಮತ್ತಷ್ಟು ಓದಿ: ಸಿಂಧೂ ನದಿ ಒಪ್ಪಂದದ ಬಿಕ್ಕಟ್ಟು: ಪಾಕಿಸ್ತಾನದ ಕರಾಚಿಯಲ್ಲಿ ತೀವ್ರ ಜಲಕ್ಷಾಮ, ರಾಜಕೀಯ ಕೆಸರೆರಚಾಟ

ಅಂತಾರಾಷ್ಟ್ರೀಯ ಕಾನೂನು ಮತ್ತು ಭಾರತದ ವಾದ
ಒಪ್ಪಂದದಿಂದ ನಿರ್ಗಮಿಸುವ ನಿರ್ದಿಷ್ಟ ಷರತ್ತು ಇಲ್ಲದಿದ್ದರೂ, ಅಂತಾರಾಷ್ಟ್ರೀಯ ನಿಯಮಗಳ ಪ್ರಕಾರ ಒಂದು ದೇಶವು ಗಂಭೀರ ಉಲ್ಲಂಘನೆ (ಭಯೋತ್ಪಾದನೆ) ಮಾಡಿದಾಗ, ಮತ್ತೊಂದು ದೇಶಕ್ಕೆ ಒಪ್ಪಂದವನ್ನು ಅಮಾನತಿನಲ್ಲಿಡುವ ಸಂಪೂರ್ಣ ಹಕ್ಕಿರುತ್ತದೆ.

ಇನ್ನೊಂದೆಡೆ, ಭಾರತದ ಈ ನಿರ್ಧಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸಿ ‘ಬಲಿಪಶು’ ಎಂಬಂತೆ ಬಿಂಬಿಸಲು ಪಾಕಿಸ್ತಾನ ಯತ್ನಿಸುತ್ತಿದೆ. ಆದರೆ, ಪಾಕಿಸ್ತಾನದ ನಿಜವಾದ ತೊಂದರೆ ‘ನೀರಿನ ಅಭಾವವಲ್ಲ, ಬದಲಾಗಿ ಸರಿಯಾದ ನೀರು ನಿರ್ವಹಣೆಯ ಅಭಾವ’ ಎಂದು ಭಾರತ ಪ್ರತ್ಯುತ್ತರ ನೀಡಿದೆ.

ಪಾಕಿಸ್ತಾನದ ನಿರ್ಲಕ್ಷ್ಯ ಮತ್ತು ಭಾರತದ ಮುಂದಿನ ಹೆಜ್ಜೆ
ಸಿಂಧೂ ನದಿ ವ್ಯವಸ್ಥೆಯ ಶೇ. 80 ರಷ್ಟು ನೀರನ್ನು ಪಡೆಯುತ್ತಿದ್ದರೂ, ಪಾಕಿಸ್ತಾನವು 1976 ರಿಂದ ಈವರೆಗೆ ಒಂದೇ ಒಂದು ಬೃಹತ್ ನೀರು ಸಂಗ್ರಹಣಾ ಯೋಜನೆಯನ್ನು ನಿರ್ಮಿಸಿಲ್ಲ. ಒಪ್ಪಂದವನ್ನು ಅಮಾನತಿನಲ್ಲಿಟ್ಟಿದ್ದರೂ, ಜೀವ ಮತ್ತು ಆಸ್ತಿಯ ರಕ್ಷಣೆಯ ಮಾನವೀಯತೆಯ ದೃಷ್ಟಿಯಿಂದ ಭಾರತವು ಪಾಕಿಸ್ತಾನಕ್ಕೆ ಪ್ರವಾಹದ ಮುನ್ನೆಚ್ಚರಿಕೆ ಮಾಹಿತಿಯನ್ನು ನೀಡುವುದನ್ನು ಮುಂದುವರೆಸಿದೆ.

ಮುಂದಿನ ದಿನಗಳಲ್ಲಿ ಭಾರತವು ಆಧುನಿಕ ಎಂಜಿನಿಯರಿಂಗ್, ಜಲಸಂಪನ್ಮೂಲಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ವೈಜ್ಞಾನಿಕ ನಿರ್ವಹಣೆಯ ಮೂಲಕ ತನಗೆ ಸಿಗಬೇಕಾದ ಜಲಸಂಪತ್ತಿನ ಗರಿಷ್ಠ ಬಳಕೆಗೆ ನಿರ್ಧರಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Toxic Song: ‘ಮನಮೋಹಕ’ ಹಾಡಿನ ಮಾದಕತೆ ಏರಿಸಿದ ತಾರಾ ಸುತಾರಿಯಾ

Source link

‘ಟಾಕ್ಸಿಕ್’: ‘ಮನಮೋಹಕ’ ಹಾಡಿನಲ್ಲಿ ‘ಕಿರಾತಕ’ನ ಹುಡುಕಿದ ಅಭಿಮಾನಿಗಳು – Kannada News | Toxic movie Manamohaka song released: Fans remembered Kirathaka movie

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಮತ್ತೊಂದು ಹಾಡು ಇಂದು (ಜುಲೈ 21) ಬಿಡುಗಡೆ ಆಗಿದೆ. ಕೆಲ ದಿನಗಳ ಹಿಂದಷ್ಟೆ ‘ತಬಾಹಿ’ ಹಾಡು ಬಿಡುಗಡೆ ಆಗಿ ಸಖತ್ ಹವಾ ಸೃಷ್ಟಿಸಿತ್ತು. ಯಶ್ ಹಾಗೂ ಕಿಯಾರಾ ಅವರುಗಳ ಕೆಮಿಸ್ಟ್ರಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಇದೀಗ ‘ಟಾಕ್ಸಿಕ್’ ಸಿನಿಮಾದ ‘ಮನಮೋಹಕ’ ಎಂಬ ಹಾಡು ಬಿಡುಗಡೆ ಆಗಿದೆ. ಹಾಡಿನಲ್ಲಿ ಈ ಬಾರಿ ಯಶ್, ತಾರಾ ಸುತಾರಿಯಾ ಜೊತೆಗೆ ರೊಮ್ಯಾನ್ಸ್ ಮಾಡಿದ್ದಾರೆ. ಆದರೆ ಹಾಡು ನೋಡಿದ ಕೆಲವರು ‘ಕಿರಾತಕ’ ಸಿನಿಮಾ ಅನ್ನು ನೆನಪು ಮಾಡಿಕೊಂಡಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಹಾಡಿಗೆ ಹಲವಾರು ರೀತಿಯ ಕಮೆಂಟುಗಳು ಬಂದಿವೆ. ಹಾಡು ವೀಕ್ಷಿಸಿದ ಬಹುತೇಕರು ಹಾಡನ್ನು ಇಷ್ಟಪಟ್ಟಿದ್ದಾರೆ. ಯಶ್ ಅವರ ಲುಕ್​​ ಅನ್ನು ಕೊಂಡಾಡಿದ್ದಾರೆ. ಜೊತೆಗೆ ಮೇಕಿಂಗ್ ಅನ್ನು ಸಹ ಕೊಂಡಾಡಿದ್ದಾರೆ. ‘ತಬಾಹಿ’ ರೀತಿಯೇ ಈ ಹಾಡನ್ನು ಸಹ ಬಲು ರಿಚ್ ಆಗಿ ಚಿತ್ರೀಕರಿಸಲಾಗಿದೆ. ‘ತಬಾಹಿ’ ಯಂತೆ ಈ ಹಾಡಿನಲ್ಲೂ ರೊಮ್ಯಾಂಟಿಕ್ ದೃಶ್ಯಗಳಿವೆ. ಇದೇ ಕಾರಣಕ್ಕೆ ಕೆಲವರು ‘ತಬಾಹಿ’ ಅಷ್ಟು ನೋಡಲು ಮುದವಿಲ್ಲ’ ಎಂದು ತಮಾಷೆ ಮಾಡಿದ್ದಾರೆ.

ಹಲವಾರು ಯಶ್ ಅಭಿಮಾನಿಗಳು ಸಿನಿಮಾ ನೋಡಲು ಕಾತರರಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. ಕರ್ನಾಟಕ ಮಾತ್ರವೇ ಅಲ್ಲದೆ, ದೇಶದ ಹಲವು ರಾಜ್ಯಗಳ ಅಭಿಮಾನಿಗಳು ಯಶ್ ಅವರ ಹಾಡಿಗೆ ಧನಾತ್ಮಕವಾಗಿ ಕಮೆಂಟ್ ಮಾಡಿದ್ದಾರೆ. ಆದರೆ ಕೆಲವರು ಹಾಡು ನೋಡಿ ಯಶ್ ಅವರ ‘ಕಿರಾತಕ’ ಸಿನಿಮಾ ಅನ್ನು ನೆನಪು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Toxic Song: ‘ಟಾಕ್ಸಿಕ್’ ಚಿತ್ರದ ‘ಮನಮೋಹಕ..’ ಸಾಂಗ್; ಯಶ್-ತಾರಾ ಸುತಾರಿಯಾ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ

‘ಮನಮೋಹಕ’ ಹಾಡಿನ ಅಂತ್ಯದಲ್ಲಿ ದೃಶ್ಯವೊಂದಿದೆ. ಯಶ್, ಕಾರಿನ ಮೇಲೆ ಕೂತಿರುತ್ತಾರೆ. ಅವರ ಗುಂಪಿನ ಸದಸ್ಯರು ಅವರ ಸುತ್ತ ನೆರೆದಿರುತ್ತಾರೆ. ಆಗ ನಟಿ ತಾರಾ ಸುತಾರಿಯಾ ಅಲ್ಲಿಗೆ ಬರುತ್ತಾರೆ. ಯಶ್, ಬಂದೂಕು ತೆಗೆದು ನೆಲಕ್ಕೆ ಶೂಟ್ ಮಾಡಿ ಸುತ್ತ ಇದ್ದವರನ್ನು ದೂರ ಅಟ್ಟುತ್ತಾರೆ. ಬಳಿಕ ನಾಯಕಿಯನ್ನು ಬರಸೆಳೆದು ತಬ್ಬಿಕೊಳ್ಳುತ್ತಾರೆ. ಈ ದೃಶ್ಯ ನೋಡಿ ಹಲವರು ‘ಕಿರಾತಕ’ ಸಿನಿಮಾ ನೆನಪು ಮಾಡಿಕೊಂಡಿದ್ದಾರೆ.

‘ಕಿರಾತಕ’ ಸಿನಿಮಾನಲ್ಲಿಯೂ ಇಂಥಹುದೇ ಒಂದು ದೃಶ್ಯವಿದೆ. ನಾಯಕಿಗಾಗಿ, ಯಶ್ ತನ್ನ ಗೆಳೆಯರನ್ನು ಓಡಿಸುತ್ತಾರೆ. ‘ಕಿರಾತಕ’ ಸಿನಿಮಾನಲ್ಲಿ ಯಶ್ ಪಾತ್ರ ನಾಯಕಿಯ ಊರಿಗೆ ಡ್ಯಾನ್ಸ್ ಪ್ರೋಗ್ರಾಂ ನೋಡಲು ಹೋದಾಗ ಈ ದೃಶ್ಯವಿದೆ. ಆ ದೃಶ್ಯದಲ್ಲಿ ಯಶ್, ನಾಯಕಿಯೊಟ್ಟಿಗೆ ಮಾತನಾಡಲು, ತನ್ನ ಗೆಳೆಯರನ್ನು ಅಲ್ಲಿಂದ ದೂರ ಕಳಿಸುತ್ತಾರೆ. ಈಗ ‘ಮನಮೋಹಕ’ ಹಾಡಿನ ದೃಶ್ಯ ನೋಡಿ ಅಭಿಮಾನಿಗಳು ‘ಕಿರಾತಕ’ ಸೀನ್ ನೆನಪು ಮಾಡಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:15 pm, Tue, 21 July 26

Source link

ಗಂಭೀರ ಅಪರಾಧಗಳ ತನಿಖೆಗಿಂತ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೇಲಿನ ಕ್ರಮಕ್ಕೆ ಏಕೆ ಹೆಚ್ಚಿನ ಆದ್ಯತೆ?: ಪೊಲೀಸರ ನಡೆಗೆ ಹೈಕೋರ್ಟ್​​ ಗರಂ – Kannada News | Why Priority to Social Media Posts Over Serious Crimes?: Karnataka HC Slams Police, Stays Investigation Against Law Student

ಕರ್ನಾಟಕ ಹೈಕೋರ್ಟ್​​Image Credit source: Getty Images

ಬೆಂಗಳೂರು, ಜುಲೈ 21: ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳ ವಿಚಾರದಲ್ಲಿ ಪೊಲೀಸರು ತ್ವರಿತವಾಗಿ ಎಫ್‌ಐಆರ್ ದಾಖಲಿಸುತ್ತಿರುವುದನ್ನು ಪ್ರಶ್ನಿಸಿದ ಕರ್ನಾಟಕ ಹೈಕೋರ್ಟ್, ಗಂಭೀರ ಅಪರಾಧಗಳ ವಿರುದ್ಧ ಅದೇ ಮಟ್ಟದ ಕಠಿಣ ಕ್ರಮ ಕಾಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ನಡೆ ಕಾನೂನು ಜಾರಿ ವ್ಯವಸ್ಥೆಯಲ್ಲಿ ಅನಾರೋಗ್ಯಕರ ವಾತಾವರಣವನ್ನು ಸೃಷ್ಟಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಬಂಟ್ವಾಳ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಕಾನೂನು ವಿದ್ಯಾರ್ಥಿ ಕಿರಣ್ ಆರಾಧ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಈ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ವಯಸ್ಕ ಮಗಳ ಉನ್ನತ ಶಿಕ್ಷಣದ ವೆಚ್ಚ ಭರಿಸುವುದು ತಂದೆಯ ಕರ್ತವ್ಯ; ಹೈಕೋರ್ಟ್ ಮಹತ್ವದ ತೀರ್ಪು!

ಹೇಗಿತ್ತು ವಾದ-ಪ್ರತಿವಾದ?

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಯಾವುದೇ ಧರ್ಮ, ಜಾತಿ, ಸಮುದಾಯ ಅಥವಾ ನಿರ್ದಿಷ್ಟ ಗುಂಪಿನ ಉಲ್ಲೇಖವಿಲ್ಲ ಎಂದು ನ್ಯಾಯಾಲಯದ ಗಮನಲಕ್ಕೆ ತಂದರು. ಎಫ್‌ಐಆರ್ ಕೇವಲ ಊಹೆ ಮತ್ತು ವೈಯಕ್ತಿಕ ವ್ಯಾಖ್ಯಾನಗಳ ಆಧಾರದ ಮೇಲೆ ದಾಖಲಾಗಿದ್ದು, ಕಾನೂನು ಆಧಾರವಿಲ್ಲದೆ ಪೋಸ್ಟ್‌ಗೆ ಸಾಮುದಾಯಿಕ ಬಣ್ಣ ನೀಡುವ ಪ್ರಯತ್ನ ನಡೆದಿದೆ ಎಂದು ಅವರು ವಾದಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ರಾಜ್ಯ ಸರ್ಕಾರದ ಪರ ವಕೀಲ ಬಿ.ಎನ್​​. ಜಗದೀಶ್​​, ಎಫ್‌ಐಆರ್ ದಾಖಲಾಗಿದ್ದು ಕೇವಲ ಎರಡು ದಿನಗಳಷ್ಟೇ ಆಗಿದ್ದು, ಅರ್ಜಿದಾರರಿಗೆ ಪೊಲೀಸರು ಯಾವುದೇ ನೋಟಿಸ್ ಸಹ ನೀಡಿಲ್ಲ. ಅರ್ಜಿದಾರರು ತನಿಖೆ ಆರಂಭವಾಗುವ ಮುನ್ನವೇ ಹೈಕೋರ್ಟ್‌ಗೆ ಬಂದಿದ್ದಾರೆ. ಈ ಹಂತದಲ್ಲಿ ತನಿಖೆಗೆ ಅಡ್ಡಿಯಾಗುವಂತಹ ಯಾವುದೇ ರಕ್ಷಣೆ ನೀಡಬಾರದು ಎಂದು ,ಮವಿ ಮಾಡಿದ್ದರು.

ಪೊಲೀಸರ ಕ್ರಮಕ್ಕೆ ನ್ಯಾಯಾಲಯ ಅಸಮಾಧಾನ

ಆದರೆ ಪೊಲೀಸರ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ಗಂಭೀರ ಅಪರಾಧಗಳ ತನಿಖೆಗಿಂತ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಮೇಲಿನ ಕ್ರಮಕ್ಕೆ ಏಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಪ್ರಶ್ನಿಸಿತು. ಜೊತೆಗೆ, ಪ್ರಕರಣದ ಸವಿಸ್ತಾರ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಅರ್ಜಿದಾರರ ವಿರುದ್ಧದ ಮುಂದಿನ ತನಿಖೆಗೆ ತಾತ್ಕಾಲಿಕ ತಡೆ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಯಸ್ಕ ಮಗಳ ಉನ್ನತ ಶಿಕ್ಷಣದ ವೆಚ್ಚ ಭರಿಸುವುದು ತಂದೆಯ ಕರ್ತವ್ಯ: ಹೈಕೋರ್ಟ್ ಮಹತ್ವದ ತೀರ್ಪು! – Kannada News | Father Bound to Fund Adult Daughter’s Education, Rules Karnataka High Court

ಬೆಂಗಳೂರು, ಜುಲೈ 21: ಮಗಳು ಪ್ರಾಪ್ತವಯಸ್ಕಳಾದ (Major) ನಂತರ ತಂದೆಯಿಂದ ದೂರವಾದ ತಕ್ಷಣಕ್ಕೆ, ಆಕೆಯ ಶಿಕ್ಷಣದ ವೆಚ್ಚವನ್ನು ಭರಿಸುವ ಹೊಣೆಗಾರಿಕೆಯಿಂದ ತಂದೆ ನುಣುಚಿಕೊಳ್ಳಲು ಸಾಧ್ಯವಿಲ್ಲ. ಮಗಳ ಉನ್ನತ ಶಿಕ್ಷಣದ ವೆಚ್ಚವನ್ನು ಭರಿಸುವುದು ತಂದೆಯ ಕರ್ತವ್ಯವಾಗಿದೆ ಎಂದು ಕರ್ನಾಟಕ ಹೈ ಕೋರ್ಟ್ (High Court) ಅತ್ಯಂತ ಮಹತ್ವದ ಆದೇಶ ನೀಡಿದೆ. ಮಂಗಳೂರಿನ ಯುತವತಿಯೊರ್ವಳ ಎಂಡಿ (MD) ಶಿಕ್ಷಣಕ್ಕಾಗಿ 16 ಲಕ್ಷ ರೂಪಾಯಿ ಶುಲ್ಕ ಪಾವತಿಸುವಂತೆ ಉದ್ಯಮಿಯೂ ಆದಂತ್ ಆಕೆಯ ತಂದೆಗೆ ಸೆಷನ್ಸ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಪ್ರಕರಣವೇನು?

ಮಂಗಳೂರು ಮೂಲದ ದಂಪತಿಯಿಬ್ಬರ ಮಗಳಿಗೆ ಎಂ.ಬಿ.ಬಿ.ಎಸ್ (MBBS) ಕೋರ್ಸ್‌ಗೆ ಪ್ರವೇಶ ಕೊಡಿಸಲಾಗಿತ್ತು. ಇದಕ್ಕೆ ತಂದೆಯ ಸಮ್ಮತಿಯೂ ಇತ್ತು. ಆದರೆ, ಮಗಳು ಪದವಿ ವ್ಯಾಸಂಗ ಮಾಡುತ್ತಿದ್ದ ವೇಳೆಯಲ್ಲಿ ದಂಪತಿ ನಡುವೆ ವೈವಾಹಿಕ ಭಿನ್ನಾಭಿಪ್ರಾಯಗಳು ಮೂಡಿದ್ದರಿಂದ ಇಬ್ಬರೂ ದೂರವಾಗಿದ್ದರು.

ಮಗಳು ನೀಟ್ (NEET) ಪರೀಕ್ಷೆಯ ಮೂಲಕ ಮಂಗಳೂರಿನ ಕಾಲೇಜೊಂದರಲ್ಲಿ ಎಂಡಿ (ಡರ್ಮಟಾಲಜಿ) ಸ್ನಾತಕೋತ್ತರ ಪದವಿಗೆ ಸೀಟು ಪಡೆದುಕೊಂಡ ನಂತರ, ಕಾಲೇಜು ಶುಲ್ಕವಾದ 16 ಲಕ್ಷ ರೂಪಾಯಿಯನ್ನು ಪಾವತಿಸಲು ತಂದೆಗೆ ನಿರ್ದೇಶನ ನೀಡುವಂತೆ ಕೋರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿದ್ದಳು.

ನ್ಯಾಯಾಲಯದ ವಿಚಾರಣೆ ಮತ್ತು ತೀರ್ಪು

ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಗೃಹಬಂಧನದಿಂದ ಮಹಿಳೆಯರ ರಕ್ಷಣೆ ಕಾಯ್ದೆ, 2005ರ (Protection of Women from Domestic Violence Act) ಸೆಕ್ಷನ್ 20(d) ಅಡಿಯಲ್ಲಿ ತಂದೆಯ ಆರ್ಥಿಕ ಸಾಮರ್ಥ್ಯವನ್ನು ಪರಿಗಣಿಸಿ, 16 ಲಕ್ಷ ರೂ. ಪಾವತಿಸುವಂತೆ ಆದೇಶಿಸಿತ್ತು. ಇದನ್ನು ತಂದೆಯು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರೂ, ಅಲ್ಲಿಯೂ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಕೊನೆಗೆ ಹೈಕೋರ್ಟ್‌ಗೆ ರಿವಿಷನ್ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರಿದ್ದ ಪೀಠವು ತಂದೆಯ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಅರ್ಜಿದಾರ ತಂದೆಯು ಕೋಟಿಗೂ ಅಧಿಕ ಮೊತ್ತದ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಮಗಳ ವೈದ್ಯಕೀಯ ಶಿಕ್ಷಣದ ಆರಂಭದಿಂದಲೂ ತಂದೆಯ ಭಾಗವಹಿಸುವಿಕೆ ಇದೆ. ಹೀಗಿರುವಾಗ ಸ್ನಾತಕೋತ್ತರ ಶಿಕ್ಷಣದ ವೆಚ್ಚ ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗುವುದಿಲ್ಲ. ಅಗತ್ಯಬಿದ್ದರೆ ಬ್ಯಾಂಕ್ ಸಾಲ ಪಡೆದಾದರೂ ಈ ಶುಲ್ಕವನ್ನು ಚುಕ್ತಾ ಮಾಡುವುದು ತಂದೆಯ ಜವಾಬ್ದಾರಿಯಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ ಮೈಸೂರಿನಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿಯ ಮೇಲೆ ಗ್ಯಾಂಗ್ ರೇಪ್: ಮೂವರು ಅರೆಸ್ಟ್

ಪ್ರಾಪ್ತವಯಸ್ಕಳಾದ ಮಗಳಿಗೆ ಕಾಯ್ದೆಯ ಸೆಕ್ಷನ್ 20ರ ಅಡಿಯಲ್ಲಿ ಆರ್ಥಿಕ ಪರಿಹಾರ ಪಡೆಯುವ ಹಕ್ಕಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಹೈಕೋರ್ಟ್, ಪದವಿ ಅಥವಾ ಸ್ನಾತಕೋತ್ತರ ಶಿಕ್ಷಣವಾಗಲಿ, ಮಗಳ ಶಿಕ್ಷಣದ ವೆಚ್ಚವನ್ನು ತಂದೆಯೇ ಭರಿಸಬೇಕು ಎಂಬುದು ಕಾನೂನಿನಲ್ಲಿ ಸ್ಪಷ್ಟವಾಗಿದೆ ಎಂದು ಸ್ಪಷ್ಟಪಡಿಸಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿ ಹಂಡ್ರೆಡ್ ಲೀಗ್​ನಲ್ಲಿ ಕಣಕ್ಕಿಳಿಯುವ 8 ತಂಡಗಳು ಹೀಗಿವೆ – Kannada News | The hundred league 2026 All Squads

ಟ್ರೆಂಟ್ ರಾಕೆಟ್ಸ್: ಸ್ಯಾಮ್ ಬಿಲ್ಲಿಂಗ್ಸ್ (ನಾಯಕ), ಟಿಮ್ ಡೇವಿಡ್, ಬೆನ್ ಡಕೆಟ್, ಮಿಚೆಲ್ ಸ್ಯಾಂಟ್ನರ್, ಟಾಮ್ ಬ್ಯಾಂಟನ್, ಫಿನ್ ಅಲೆನ್, ಲೂಯಿಸ್ ಗ್ರೆಗೊರಿ, ಕ್ರೇಗ್ ಓವರ್ಟನ್, ಡೇವಿಡ್ ಪೇನ್, ಡ್ಯಾನ್ ಮೌಸ್ಲಿ, ಮ್ಯಾಟ್ ಹೆನ್ರಿ,  ಅನ್ಯೂರಿನ್ ಡೊನಾಲ್ಡ್, ಬೆನ್ ಮೇಯ್ಸ್, ಡ್ಯಾನಿ ಬ್ರಿಗ್ಸ್, ಲೂಯಿಸ್ ಕಿಂಬರ್, ಬ್ರಾಡ್ ಕ್ಯೂರಿ. (PC: The Hundred)

Source link

ವಾಟ್ಸಾಪ್​ಗೆ ಎಪಿಕೆ ಫೈಲ್​ನಲ್ಲಿ ಬಂತು ಮದುವೆ ಆಮಂತ್ರಣ: ಕ್ಲಿಕ್ ಮಾಡಿದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ 9.96 ಲಕ್ಷ ರೂ. ಮಾಯ! – Kannada News | WhatsApp APK Wedding Invitation Scam: Bengaluru Forest Employee Loses Rs 9.96 Lakh After Opening Fake Invite

ಬೆಂಗಳೂರು, ಜುಲೈ 21: ವಾಟ್ಸಾಪ್‌ನಲ್ಲಿ ಎಪಿಕೆ ಫೈಲ್ (APK File)ರೂಪದಲ್ಲಿ ಬಂದಿದ್ದ ನಕಲಿ ಮದುವೆ ಆಮಂತ್ರಣವನ್ನು (Wedding Card) ಕ್ಲಿಕ್ ಮಾಡಿದ ಪರಿಣಾಮ ಅರಣ್ಯ ಇಲಾಖೆಯ ನೌಕರರೊಬ್ಬರು ಸುಮಾರು 9.96 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ವರದಿಯಾಗಿದೆ. ಈ ಸಂಬಂಧ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ಸೈಬರ್ ವಂಚಕರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದರೊಂದಿಗೆ ಸೈಬರ್ ವಂಚಕರು ಹೊಸ ಹೊಸ ವಿಧಾನದ ಮೂಲಕ ಜನರನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಂತಾಗಿದೆ.

ಅಪರಿಚಿತ ಮೊಬೈಲ್​ ಸಂಖ್ಯೆಯಿಂದ ಬಂತು ಮದುವೆ ಆಮಂತ್ರಣ

ದೂರುದಾರ ರಮೇಶ್ ಅವರಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್‌ನಲ್ಲಿ ಮದುವೆ ಆಮಂತ್ರಣದ ಹೆಸರಿನಲ್ಲಿ ಎಪಿಕೆ ಫೈಲ್ ಕಳುಹಿಸಲಾಗಿತ್ತು. ಅದು ಸಾಮಾನ್ಯ ಆಹ್ವಾನ ಪತ್ರಿಕೆ ಎಂದು ಭಾವಿಸಿ ಅವರು ಕ್ಲಿಕ್ ಮಾಡಿದ್ದರು. ತಕ್ಷಣವೇ ಎಪಿಕೆ ಫೈಲ್ ಡ್ಔನ್​ಲೋಡ್ ಆಗಿದ್ದು, ಅವರ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ ಹಣ ಡೆಬಿಟ್ ಆಗಿರುವ ಸಂದೇಶಗಳು ಬಂದಿವೆ.

ಲಕ್ಷಾಂತ ರೂ. ಕಳಕೊಂಡ ಬಳಿಕ ತಿಳಿದ ಸತ್ಯ

ಒಟ್ಟಾರೆ 9 ಲಕ್ಷ 96 ಸಾವಿರ ರೂಪಾಯಿ ಖಾತೆಯಿಂದ ವರ್ಗಾವಣೆಯಾದ ಬಳಿಕ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ರಮೇಶ್ ಅವರಿಗೆ ಗೊತ್ತಾಗಿದೆ. ಬಳಿಕ ಅವರು ಬೆಂಗಳೂರಿನ ಉತ್ತರ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪರಿಚಿತರಿಂದ ಬಂದ ಫೈಲ್​ಗಳನ್ನು ಕ್ಲಿಕ್ ಮಾಡಬೇಡಿ

ಅಪರಿಚಿತ ವ್ಯಕ್ತಿಗಳಿಂದ ಬರುವ APK ಫೈಲ್‌ಗಳು, ಲಿಂಕ್‌ಗಳು ಅಥವಾ ಮದುವೆ ಆಮಂತ್ರಣಗಳ ಹೆಸರಿನಲ್ಲಿರುವ ಅಪ್ಲಿಕೇಶನ್‌ಗಳನ್ನು ಯಾವುದೇ ಕಾರಣಕ್ಕೂ ಡೌನ್‌ಲೋಡ್ ಅಥವಾ ಓಪನ್ ಮಾಡಬಾರದು ಎಂದು ಸಾರ್ವಜನಿಕರಿಗೆ ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ವಾಟ್ಸ್ಆ್ಯಪ್​ನಲ್ಲಿ ಹರಿದಾಡುತ್ತಿದೆ ಆರ್​ಟಿಒ ಚಲನ್ ಸ್ಕ್ಯಾಮ್: ಈರೀತಿ ಮೆಸೇಜ್ ಬಂದರೆ ಎಚ್ಚರ

ಈ ಹಿಂದೆ, ಬ್ಯಾಂಕ್​ಗಳ ಹೆಸರಿನಲ್ಲಿ ಎಪಿಕೆ ಫೈಲ್ ಕಳುಹಿಸಿ ವಂಚಿಸುತ್ತಿದ್ದ ಅನೇಕ ಪ್ರಕರಣಗಳು ವರದಿಯಾಗಿದ್ದವು. ಆ ನಂತರ, ಟ್ರಾಫಿಕ್ ಚಲನ್ ಹೆಸರಿನಲ್ಲಿ ಎಪಿಕೆ ಫೈಲ್​ಗಳನ್ನು ವಾಟ್ಸಾಪ್​ನಲ್ಲಿ ಕಳುಹಿಸಿ ವಂಚಿಸಿದ ಅನೇಕ ಪ್ರಕರಣಗಳು ವರದಿಯಾಗಿದ್ದವು. ಇದೀಗ ಮದುವೆ ಆಮಂತ್ರಣದ ಎಪಿಕೆ ಫೈಲ್ ಕಳುಹಿಸಿ ವಂಚಿಸಲಾಗುತ್ತಿದೆ. ಮದುವೆ ಆಮಂತ್ರಣ, ನೋಡೋಣ ಎಂದು ಕ್ಲಿಕ್ ಮಾಡಿದರೆ ಎಪಿಕೆ ಫೈಲ್ ಮೊಬೈಲ್​ನಲ್ಲಿ ಡೌನ್​ಲೋಡ್ ಆಗಿ ಮೊಬೈಲ್ ಹ್ಯಾಕ್ ಆಗುತ್ತದೆ. ಇದರಿಂದ ಮೊಬೈಲ್​​ನಲ್ಲಿರುವ ದತ್ತಾಂಶಗಳು ಸೈಬರ್ ವಂಚಕರ ಪಾಲಾಗಿ ಅವರು ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕದಿಯಬಹುದು. ಹೀಗಾಗಿ ಎಚ್ಚರ ವಹಿಸಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version