Toxic Song: ‘ಟಾಕ್ಸಿಕ್’ ಚಿತ್ರದ ‘ಮನಮೋಹಕ..’ ಸಾಂಗ್ ರಿವೀಲ್; ಯಶ್-ತಾರಾ ಸುತಾರಿಯಾ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ – Kannada News | Toxic Second Single Out: Yash and Tara Sutaria’s Striking Chemistry Wins Hearts in Manamohaka
ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಕಡೆಯಿಂದ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಈಗಾಗಲೇ ಬಿಡುಗಡೆಯಾಗಿ ಕೋಟ್ಯಂತರ ವೀಕ್ಷಣೆಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದ ಬೋಲ್ಡ್ ಅಂಡ್ ರೊಮ್ಯಾಂಟಿಕ್ ‘ತಬಾಹಿ’ ಹಾಡಿನ ಬೆನ್ನಲ್ಲೇ, ಚಿತ್ರತಂಡ ಎರಡನೇ ಹಾಡನ್ನು ಬಿಡುಗಡೆ ಮಾಡಿದೆ. ಇಂದು (ಜುಲೈ 21) ಬೆಳಿಗ್ಗೆ 11.33ಕ್ಕೆ ರಿಲೀಸ್ ಆಗಿರುವ ‘ಮನಮೋಹಕ..’ ಸಾಂಗ್ ಇಂಟರ್ನೆಟ್‌ನಲ್ಲಿ ಸಖತ್ ಟ್ರೆಂಡ್ ಸೃಷ್ಟಿಸುತ್ತಿದೆ. ಮೆಲೋಡಿ ಪ್ರಿಯರ ಮನಗೆದ್ದ ‘ಮನಮೋಹಕ’ ಮೊದಲ ಹಾಡು ‘ತಬಾಹಿ’ಯಲ್ಲಿ ಯಶ್ ಹಾಗೂ…