ಸಂಸಾರ ಹಾಳು ಮಾಡಿದವನ ಸಂಹಾರ: ಕೊಲೆ ಮಾಡಿ ಫೇಸ್ಬುಕ್ನಲ್ಲಿ ತಪ್ಪೊಪ್ಪಿಕೊಂಡ ಖದೀಮರು – Kannada News | Kolar Murder: a man Killed in Revenge, Accused Confesses on Facebook, 3 Arrests
ಕೋಲಾರ, ಫೆಬ್ರವರಿ 01: ವ್ಯಕ್ತಿಯೋರ್ವನನ್ನು ಕೊಲೆ (murder) ಮಾಡಿ ಬಳಿಕ ಫೇಸ್ಬುಕ್ನಲ್ಲಿ ಆರೋಪಿ ತಪ್ಪೊಪ್ಪಿಕೊಂಡ ವಿಚಿತ್ರ ಘಟನೆಯೊಂದು ಕೋಲಾರದಲ್ಲಿ (Kolar) ನಡೆದಿದೆ. ಜನವರಿ 27ರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯಲ್ಲೇಶ್ ಕೊಲೆಯಾದ ವ್ಯಕ್ತಿ. ಬಿಂದುಕುಮಾರ್ (20) ಕಿರಣ್ (19) ಮತ್ತು ಅಕ್ಷಯ್ (20) ಬಂಧಿತರು. ಹಳೆ ಸೇಡು ತೀರಿಸಿಕೊಳ್ಳಲು ಕೊಲೆ ಮಾಡಲಾಗಿದೆ. ಹತ್ಯೆ ಬಳಿಕ ಆರೋಪಿಗಳು ಫೇಸ್ಬುಕ್ನಲ್ಲಿ ವಿಡಿಯೋ ಮಾಡಿದ್ದರು. ಸದ್ಯ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಡೆದದ್ದೇನು? ಕೋಲಾರ ತಾಲೂಕಿನ…