ಜಾತಿ ಪ್ರಮಾಣ ಪತ್ರದಲ್ಲಿನ ವಿಳಾಸ ಬದಲಾಯಿಸಬೇಕೇ? ಹಾಗಾದ್ರೆ ಹೀಗೆ ಮಾಡಿ – Kannada News | Caste Certificate: If you have these documents, changing the address on your caste certificate is easy.

ನೀವು ನಿರ್ದಿಷ್ಟ ಜಾತಿ ಅಥವಾ ವರ್ಗಕ್ಕೆ ಸೇರಿದ್ದೀರಿ ಎಂಬುದನ್ನು ದೃಢೀಕರಿಸುವ ಅಧಿಕೃತ ಸರ್ಕಾರಿ ದಾಖಲೆಯೇ ಈ ಜಾತಿ ಪ್ರಮಾಣ ಪತ್ರ (Caste certificate). ಹೌದು, ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು, ಮೀಸಲಾತಿ ಸೌಲಭ್ಯಗಳಿಗೆ ಸೇರಿದಂತೆ ಇನ್ನಿತ್ತರ ಕೆಲಸ ಕಾರ್ಯಗಳಿಗೆ ಈ ದಾಖಲೆ ನಿಮ್ಮ ಬಳಿ ಇರಲೇಬೇಕು. ಆದರೆ, ಈ ದಾಖಲೆಯಲ್ಲಿ ನೇರ ತಿದ್ದುಪಡಿ ಅವಕಾಶವಿಲ್ಲ, ಹೀಗಾಗಿ ಹೊಸ ವಿಳಾಸಕ್ಕೆ ಅನುಗುಣವಾಗಿ ನೀವು ಹೊಸ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇಲ್ಲವಾದರೆ, ಹಳೆಯ ಪ್ರಮಾಣಪತ್ರದ ಜತೆಗೆ ವಿಳಾಸ ಬದಲಾವಣೆಯನ್ನು ದೃಢೀಕರಿಸುವ ಕಾನೂನು ಅಫಿಡವಿಟ್ ಮಾಡಿಸಬೇಕು.

ಜಾತಿ ಪ್ರಮಾಣಪತ್ರ ವಿಳಾಸ ಬದಲಾಯಿಸುವುದು ಹೇಗೆ?

ಹಂತ 1: ನಿಮ್ಮ ಹತ್ತಿರದ ನಾಡಕಚೇರಿ, ಗ್ರಾಮ ಒನ್, ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ಹೊಸ ವಿಳಾಸಕ್ಕೆ ಅನುಗುಣವಾಗಿ ಹೊಸ ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿ.

ಹಂತ 2: ಜಾತಿ ಪ್ರಮಾಣಪತ್ರ ವಿಳಾಸ ಬದಲಾಯಿಸುವಾಗ ಹಳೆಯ ಜಾತಿ ಪ್ರಮಾಣಪತ್ರದ ಮೂಲ ಪ್ರತಿ, ಹೊಸ ವಿಳಾಸವನ್ನು ಹೊಂದಿರುವ ಆಧಾರ್ ಕಾರ್ಡ್ ಅಥವಾ ಇತರೆ ವಿಳಾಸದ ಪುರಾವೆ ಹಾಗೂ ಸ್ಥಳ ಬದಲಾವಣೆಯ ಕಾರಣವನ್ನು ತಿಳಿಸುವ ಸ್ವಯಂ ಘೋಷಣಾ ಪತ್ರ ನಿಮ್ಮ ಬಳಿಯಿರಲಿ.

ಹಂತ 3: ನೀವು ಸ್ಥಳಾಂತರಗೊಂಡಿದ್ದೀರಿ ಎಂಬುದನ್ನು ದೃಢೀಕರಿಸಲು, ನೋಟರಿ ಪಬ್ಲಿಕ್ ಮೂಲಕ ಮ್ಯಾಜಿಸ್ಟ್ರೇಟ್ ಅವರಿಂದ ಅಫಿಡವಿಟ್ ಮಾಡಿಸಿ.

ಹಂತ 4: ನಿಮ್ಮ ಬಳಿಯಿರುವ ಹಳೆಯ ಜಾತಿ ಪ್ರಮಾಣಪತ್ರಕ್ಕೆ ಈ ಅಫಿಡವಿಟ್ ಲಗತ್ತಿಸಿ ಅಧಿಕಾರಿಗಳಿಗೆ ಸಲ್ಲಿಸಿ.

ಇದನ್ನೂ ಓದಿ: ಈ ದಾಖಲೆಗಳು ನಿಮ್ಮ ಹತ್ರ ಇದ್ರೆ ಹೊಸ ಮನೆಗೆ ಡೋರ್ ನಂಬರ್ ಪಡೆಯೋದು ಸುಲಭ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಜಾತಿ ಪ್ರಮಾಣ ಪತ್ರದ ವಿಳಾಸ ಬದಲಾವಣೆಗೆ ಅವಕಾಶವಿದೆಯೇ?

ಉತ್ತರ: ಈ ಜಾತಿ ಪ್ರಮಾಣ ಪತ್ರದ ದಾಖಲೆಯಲ್ಲಿನ ವಿಳಾಸ ಬದಲಾವಣೆಗೆ ನೇರ ತಿದ್ದುಪಡಿ ಅವಕಾಶವಿಲ್ಲ.

ಪ್ರಶ್ನೆ: ಜಾತಿ ಪ್ರಮಾಣ ಪತ್ರದ ವಿಳಾಸ ಬದಲಾಯಿಸುವುದು ಹೇಗೆ?

ಉತ್ತರ: ನಿಮ್ಮ ಹತ್ತಿರದ ನಾಡಕಚೇರಿ, ಗ್ರಾಮ ಒನ್, ಅಥವಾ ಸೇವಾ ಸಿಂಧು ಪೋರ್ಟಲ್ ನಲ್ಲಿ ಜಾತಿ ಪ್ರಮಾಣ ಪತ್ರದ ವಿಳಾಸ ಬದಲಾಯಿಸಬಹುದು.

ಪ್ರಶ್ನೆ: ಜಾತಿ ಪ್ರಮಾಣ ಪತ್ರದ ವಿಳಾಸ ಬದಲಾವಣೆಗೆ ಯಾವೆಲ್ಲಾ ದಾಖಲೆಗಳು ಬೇಕು?

ಉತ್ತರ: ಹಳೆಯ ಜಾತಿ ಪ್ರಮಾಣಪತ್ರದ ಮೂಲ ಪ್ರತಿ, ಆಧಾರ್ ಕಾರ್ಡ್ ಅಥವಾ ಇತರೆ ವಿಳಾಸದ ಪುರಾವೆ ಹಾಗೂ ಸ್ಥಳ ಬದಲಾವಣೆಯ ಕಾರಣವನ್ನು ತಿಳಿಸುವ ಸ್ವಯಂ ಘೋಷಣಾ ಪತ್ರ ಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸೆಪ್ಟೆಂಬರ್‌ನಿಂದ ಏಕಕಾಲದಲ್ಲಿ ಶುರುವಾಗಲಿದೆ 6 ಭಾಷೆಗಳ ‘ಬಿಗ್ ಬಾಸ್’ ಹೊಸ ಶೋ – Kannada News | Bigg Boss six Languages simultaneous launch in September 2026 Kichcha Sudeep Jiostar

ಭಾರತದ ಕಿರುತೆರೆಯ ಅತ್ಯಂತ ಜನಪ್ರಿಯ ಮತ್ತು ಬೃಹತ್ ರಿಯಾಲಿಟಿ ಶೋ ‘ಬಿಗ್ ಬಾಸ್’ (Bigg Boss) ಈ ಬಾರಿ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಮುಂಬರುವ ಹಬ್ಬದ ಸೀಸನ್ ಅನ್ನು ಮತ್ತಷ್ಟು ರಂಗಾಗಿಸಲು ಜಿಯೋಸ್ಟಾರ್ (JioStar) ಸಂಸ್ಥೆಯು ದೊಡ್ಡ ಯೋಜನೆಯೊಂದನ್ನು ಪ್ರಕಟಿಸಿದೆ. ಇದೇ ಮೊದಲ ಬಾರಿಗೆ ಕನ್ನಡ ಸೇರಿದಂತೆ ಒಟ್ಟು ಆರು ಭಾಷೆಗಳ ಬಿಗ್ ಬಾಸ್ ಆವೃತ್ತಿಗಳು 2026ರ ಸೆಪ್ಟೆಂಬರ್‌ನಿಂದ ಏಕಕಾಲದಲ್ಲಿ ಪ್ರಸಾರವಾಗಲಿವೆ. ಇನ್ಮುಂದೆ ಭಾಷಾವಾರು ಬಿಗ್ ಬಾಸ್ ವೀಕ್ಷಿಸಲು ತಿಂಗಳುಗಟ್ಟಲೆ ಕಾಯಬೇಕಾಗಿಲ್ಲ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಬಾಂಗ್ಲಾ ಆವೃತ್ತಿಗಳು ಸೆಪ್ಟೆಂಬರ್‌ನಿಂದ ಜಿಯೋಸ್ಟಾರ್ ಟೆಲಿವಿಷನ್ ನೆಟ್‌ವರ್ಕ್ ಹಾಗೂ ‘ಜಿಯೋಹಾಟ್‌ಸ್ಟಾರ್’ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಏಕಕಾಲದಲ್ಲಿ ಲೈವ್ ಬರಲಿವೆ.

ಕನ್ನಡದಲ್ಲಿ ಕಿಚ್ಚ ಸುದೀಪ್ ಸಾರಥ್ಯ:

ಕನ್ನಡ ಬಿಗ್ ಬಾಸ್ ಅಂದ ತಕ್ಷಣ ಕಣ್ಣಮುಂದೆ ಬರೋದೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಈ ಬಾರಿಯೂ ಕಿಚ್ಚ ಸುದೀಪ್ ಅವರೇ ಕನ್ನಡ ಆವೃತ್ತಿಯನ್ನು ಮುನ್ನಡೆಸಲಿದ್ದಾರೆ. ಉಳಿದಂತೆ ಹಿಂದಿಯಲ್ಲಿ ಸಲ್ಮಾನ್ ಖಾನ್, ತಮಿಳಿನಲ್ಲಿ ವಿಜಯ್ ಸೇತುಪತಿ, ತೆಲುಗಿನಲ್ಲಿ ನಾಗಾರ್ಜುನ ಮತ್ತು ಮಲಯಾಳಂನಲ್ಲಿ ಮೋಹನ್ ಲಾಲ್ ಅವರು ಎಂದಿನಂತೆ ನಿರೂಪಕರಾಗಿ ಮುಂದುವರಿಯಲಿದ್ದಾರೆ. ಇನ್ನು ಬಾಂಗ್ಲಾ ಆವೃತ್ತಿಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೊಸ ನಿರೂಪಕರಾಗಿ ಎಂಟ್ರಿ ಕೊಡುತ್ತಿರುವುದು ಈ ಬಾರಿಯ ವಿಶೇಷ.

ದಾಖಲೆ ಬರೆದ ಬಿಗ್ ಬಾಸ್ ಅಂಕಿ-ಅಂಶಗಳು:

ಈ ಮೆಗಾ ಲಾಂಚ್ ನೆಪದಲ್ಲಿ ಜಿಯೋಸ್ಟಾರ್ ಸಂಸ್ಥೆಯು ‘ಇಂಡಿಯಾಸ್ ಬಿಗ್ ರಿಯಾಲಿಟಿ’ ಎಂಬ ವಿಶೇಷ ಕಾಫಿ ಟೇಬಲ್ ಬುಕ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬಿಗ್ ಬಾಸ್‌ನ 20 ವರ್ಷಗಳ ಯಶಸ್ವಿ ಪ್ರಯಾಣ ಮತ್ತು ಭಾರತೀಯ ಸಂಸ್ಕೃತಿಯ ಮೇಲೆ ಅದು ಬೀರಿದ ಪ್ರಭಾವವನ್ನು ವಿವರಿಸಲಾಗಿದೆ. ಸಂಸ್ಥೆ ಹಂಚಿಕೊಂಡಿರುವ ಕೆಲವು ಬೆರಗುಗೊಳಿಸುವ ಅಂಕಿ-ಅಂಶಗಳು ಇಲ್ಲಿವೆ.

500 ಮಿಲಿಯನ್ ವೀಕ್ಷಕರು:

2025ರಲ್ಲಿ ಆರು ಭಾಷೆಗಳ ಬಿಗ್ ಬಾಸ್ ಒಟ್ಟಾರೆ 50 ಕೋಟಿಗೂ ಹೆಚ್ಚು ವೀಕ್ಷಕರನ್ನು ತಲುಪಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲೇ 30 ಕೋಟಿಗೂ ಹೆಚ್ಚು ಜನ ಬಿಗ್ ಬಾಸ್ ವೀಕ್ಷಿಸುತ್ತಾರೆ. ಇಲ್ಲಿನ ಟಿವಿ ವೀಕ್ಷಕರಲ್ಲಿ ಪ್ರತಿ 10ರಲ್ಲಿ 8 ಜನ ಬಿಗ್ ಬಾಸ್ ನೋಡುತ್ತಾರೆ! ಇದು ದಕ್ಷಿಣದ ಇತರ ಎಲ್ಲಾ ರಿಯಾಲಿಟಿ ಶೋಗಳ ಒಟ್ಟು ವೀಕ್ಷಣೆಗಿಂತ 3.5 ಪಟ್ಟು ಹೆಚ್ಚಾಗಿದೆ.

24×7 ಲೈವ್ ಫೀಡ್ ಕ್ರೇಜ್:

ಜಿಯೋಹಾಟ್‌ಸ್ಟಾರ್‌ನಲ್ಲಿ ಪ್ರತಿ 10 ವೀಕ್ಷಕರಲ್ಲಿ 6 ಜನರು 24 ಗಂಟೆಗಳ ಲೈವ್ ಫೀಡ್ ವೀಕ್ಷಿಸುತ್ತಿದ್ದಾರೆ. 2025ರ ಸೀಸನ್‌ನಲ್ಲಿ ಬರೋಬ್ಬರಿ 1.7 ಬಿಲಿಯನ್ ಸೋಶಿಯಲ್ ಮೀಡಿಯಾ ಎಂಗೇಜ್‌ಮೆಂಟ್ ಹಾಗೂ 3 ಕೋಟಿಗೂ ಹೆಚ್ಚು ಯೂಸರ್ ಜನರೇಟೆಡ್ ಮೀಮ್ಸ್‌ ಹರಿದಾಡಿವೆ ಎಂದು ಜಿಯೋಸ್ಟಾರ್ ಸಂಸ್ಥೆಯು ಮಾಹಿತಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್ ಕನ್ನಡ

ಬಿಗ್ ಬಾಸ್ ಜನಪ್ರಿಯತೆ ಹೆಚ್ಚಾದಂತೆ ಜಾಹೀರಾತುದಾರರ ಸಂಖ್ಯೆಯೂ ಹೆಚ್ಚಿದೆ. 2025ರಲ್ಲಿ 46 ವಿಭಾಗಗಳ 625ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು ಶೋ ಜೊತೆ ಕೈಜೋಡಿಸಿದ್ದವು. ಇದರಲ್ಲಿ 49 ಹೊಸ ಬ್ರ್ಯಾಂಡ್‌ಗಳೂ ಸೇರಿದ್ದವು. ಶೋನಲ್ಲಿ ಭಾಗವಹಿಸಿದ ಬ್ರ್ಯಾಂಡ್‌ಗಳ ಜಾಗೃತಿ ಮತ್ತು ಮಾರಾಟದ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ಜಿಯೋಸ್ಟಾರ್ ತಿಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಣ್ಣಲ್ಲಿ ಮಣ್ಣಾದ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ – Kannada News | Chennamma’s Funeral: Final Rites Performed at Mavinkere with Traditional Rituals

ಹಾಸನ, ಜುಲೈ 20: ಶನಿವಾರ ಸಂಜೆ ವಿಧಿವಶರಾಗಿದ್ದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ಇಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಗ್ರಾಮದ ತೋಟದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿದೆ. ದೇವೇಗೌಡರೊಂದಿಗಿನ 72 ವರ್ಷಗಳ ಸುದೀರ್ಘ ದಾಂಪತ್ಯ ಯಾನವನ್ನು ಚೆನ್ನಮ್ಮ ಮುಗಿಸಿದ್ದಾರೆ. ಅಂತಿಮ ವಿಧಿವಿಧಾನದಲ್ಲಿ ಭಾಗಿಯಾಗಿದ್ದ ಪುತ್ರರಾದ ಹೆಚ್.ಡಿ ರಮೇಶ್‌, ಹೆಚ್‌ಡಿ ರೇವಣ್ಣ, ಮೊಮ್ಮಗ ಸೂರಜ್, ಚೆನ್ನಮ್ಮನವರ ಪಲ್ಲಕ್ಕಿಗೆ ಹೆಗಲು ಕೊಟ್ಟರು. ಸಮಾಧಿ ಗುಂಡಿಗೆ ಪಾರ್ಥಿವ ಶರೀರ ಇಳಿಸಿ ಅಂತಿಮ ಪೂಜೆ ಸಲ್ಲಿಸಲಾಗಿದ್ದು, ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಚೆನ್ನಮ್ಮನಿಗೆ ಹೂವು, ತುಳಸಿ, ಪತ್ರೆ ಸಮರ್ಪಿಸಿದರು. ಹೀಗೆ ಎಲ್ಲಾ ಪೂಜೆಗಳ ಬಳಿಕ ಸಕಲ ಸರ್ಕಾರಿ ಗೌರವದೊಂದಿಗೆ ಚೆನ್ನಮ್ಮನವರ ಅಂತ್ಯಕ್ರಿಯೆ ನೆರವೇರಿತು. 8 ದಶಕ ಸಾರ್ಥಕ ಜೀವನ ನಡೆಸಿದ್ದ ಚೆನ್ನಮ್ಮ, ರಂಗನಾಥನ ಬೆಟ್ಟದ ತಪ್ಪಲಿನಲ್ಲೇ ಮಣ್ಣಲ್ಲಿ ಮಣ್ಣಾದರು. ಸಿಎಂ ಡಿಕೆ ಶಿವಕುಮಾರ್​, ಕೇಂದ್ರ ಸಚಿವರಾದ ಶಿವರಾಜ್ ಸಿಂಗ್‌ ಚೌಹಾಣ್‌, ಪ್ರಲ್ಹಾದ ಜೋಶಿ, ವಿ ಸೋಮಣ್ಣ ಸೇರಿದಂತೆ ಹಲವು ರಾಜಕೀಯ ನಾಯಕರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಎಥನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯನ್ನು ವೈಜ್ಞಾನಿಕವಾಗಿ, ಹಂತ ಹಂತವಾಗಿ ಜಾರಿಗೊಳಿಸಲಾಗಿದೆ: ಸಚಿವ ಸುರೇಶ್ ಗೋಪಿ – Kannada News | Ethanol Blended Petrol EBP Programme implemented scientifically, E20 target reached 5 years ahead, tells govt

ನವದೆಹಲಿ, ಜುಲೈ 20: ಎಥನಾಲ್ ಮಿಶ್ರಿತ ಪೆಟ್ರೋಲ್ ಇಂಧನದ ಯೋಜನೆಯನ್ನು (ಇಬಿಪಿ) ವೈಜ್ಞಾನಿಕವಾಗಿ ಮತ್ತು ಹಂತ ಹಂತವಾಗಿ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ (Suresh Gopi) ತಿಳಿಸಿದ್ದಾರೆ. ರಾಜ್ಯಸಭೆಗೆ ಇಂದು ಸೋಮವಾರ ನೀಡಿದ ಲಿಖಿತ ಉತ್ತರದಲ್ಲಿ ಅವರು, ಇ20 ಗುರಿಯನ್ನು ಸರ್ಕಾರ ಐದು ವರ್ಷ ಮುಂಚೆಯೇ ಮುಟ್ಟಿರುವುದನ್ನು ಎತ್ತಿ ತೋರಿಸಿದ್ದಾರೆ. ಹಾಗೆಯೇ, ಶೇ. 20ಕ್ಕಿಂತ ಹೆಚ್ಚು ಎಥನಾಲ್ ಅನ್ನು ಮಿಶ್ರಣ ಮಾಡುವ ಇರಾದೆ ಸರ್ಕಾರಕ್ಕಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

‘ಭಾರತವು ನಿಗದಿತ ಅವಧಿಗಿಂತ ಐದು ವರ್ಷ ಮುಂಚಿತವಾಗಿಯೇ ಶೇ. 20 ರಷ್ಟು ಎಥನಾಲ್ ಮಿಶ್ರಣದ ಗುರಿಯನ್ನು ಯಶಸ್ವಿಯಾಗಿ ತಲುಪಿದೆ. ಸದ್ಯಕ್ಕೆ ಈ ಪ್ರಮಾಣವನ್ನು ಶೇ. 20 ಕ್ಕಿಂತ ಹೆಚ್ಚಿಸುವ ಯಾವುದೇ ಆಲೋಚನೆ ಸರ್ಕಾರದ ಮುಂದಿಲ್ಲ. ಮುಂದಿನ ದಿನಗಳಲ್ಲಿ ತಜ್ಞರ ಸಮಿತಿಯ ವರದಿ ಹಾಗೂ ಆಟೋಮೊಬೈಲ್ ಉದ್ಯಮದ ಸಹಮತಿಯ ಆಧಾರದ ಮೇಲಷ್ಟೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸಚಿವರು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಂಸತ್​ನಲ್ಲಿ ತಮ್ಮನ್ನು ಹೊಗಳಿದ ಪ್ರಧಾನಿಗೆ ಸ್ಕೈರೂಟ್ ಏರೋಸ್ಪೇಸ್ ಧನ್ಯವಾದ

ಎಥನಾಲ್​ನಿಂದ ವಾಹನಗಳಿಗೆ ತೊಂದರೆ ಆಗಿದ್ದು ಕಂಡುಬಂದಿಲ್ಲ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಎಥನಾಲ್ ಮಿಶ್ರಿತ ಪೆಟ್ರೋಲ್’ (EBP) ಯೋಜನೆಯಡಿ ಶೇಕಡಾ 20 ರಷ್ಟು ಎಥನಾಲ್ ಮಿಶ್ರಣವಿರುವ ಪೆಟ್ರೋಲ್ (E20) ಬಳಕೆಯಿಂದ ವಾಹನಗಳ ಎಂಜಿನ್ ಜಖಂಗೊಳ್ಳುತ್ತಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ರಾಜ್ಯ ಸಚಿವರು ಹೇಳಿದ್ದಾರೆ.

ಇ-20 ಇಂಧನ ಬಳಕೆಯಿಂದಾಗಿ ದೇಶದಲ್ಲಿ ಯಾವುದೇ ರೀತಿಯ ವ್ಯಾಪಕ ಎಂಜಿನ್ ವೈಫಲ್ಯಗಳು ವರದಿಯಾಗಿಲ್ಲ. ಇ-20 ಪೆಟ್ರೋಲ್ ಬಳಕೆಯಿಂದಾಗಿ ವಾಹನಗಳಲ್ಲಿ ಇಂಧನ ಪಂಪ್ ತುಕ್ಕು ಹಿಡಿಯುವುದು ಅಥವಾ ಎಂಜಿನ್ ಬ್ರೇಕ್‌ಡೌನ್ ಆಗುತ್ತಿರುವ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಇ-10 ಇಂಧನಕ್ಕೆ ತಕ್ಕಂತೆ ತಯಾರಾದ ಹಳೆಯ ವಾಹನಗಳಲ್ಲಿ ಇ-20 ಬಳಸಿದಾಗ ಮೈಲೇಜ್‌ನಲ್ಲಿ ಕೇವಲ ಶೇ. 3 ರಿಂದ ಶೇ. 5 ರಷ್ಟು ಮಾತ್ರ ಅತ್ಯಲ್ಪ ಕುಸಿತ ಕಂಡುಬರಬಹುದು ಎಂದಿದ್ದಾರೆ.

ಎಎನ್​ಐ ಸುದ್ದಿ ಸಂಸ್ಥೆಯ ಟ್ವೀಟ್

ಎಥನಾಲ್ ಮಿಶ್ರಣ ಪ್ರಮಾಣವನ್ನು ಶೇ. 20ಕ್ಕಿಂತ ಹೆಚ್ಚು ಮಟ್ಟಕ್ಕೆ ಏರಿಸುವ ಆಲೋಚನೆ ಸರ್ಕಾರಕ್ಕೆ ಇಲ್ಲ. ಮುಂದಿನ ದಿನಗಳಲ್ಲಿ ತಜ್ಞರ ಸಮಿತಿಯ ವರದಿ ಹಾಗೂ ಆಟೋಮೊಬೈಲ್ ಉದ್ಯಮದ ಸಹಮತಿಯ ಆಧಾರದ ಮೇಲಷ್ಟೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುರೇಶ್ ಗೋಪಿ ತಿಳಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಬಳಿ 20 ಲಕ್ಷ ರೂ ಇದ್ದರೆ ಎಲ್ಲಿ ಹೂಡಿಕೆ ಮಾಡಬೇಕು? ಇಲ್ಲಿದೆ ಮೂರು ಮಾದರಿಗಳು

ಇಬಿಪಿ ಯೋಜನೆಯಿಂದ ದೇಶಕ್ಕೆ ಬೃಹತ್ ಆರ್ಥಿಕ ಉಳಿತಾಯ

2014 ರಿಂದ ಈ ಯೋಜನೆಯಿಂದಾಗಿ ದೇಶಕ್ಕೆ ₹1.97 ಲಕ್ಷ ಕೋಟಿಗೂ ಅಧಿಕ ವಿದೇಶಿ ವಿನಿಮಯ ಉಳಿತಾಯವಾಗಿದೆ. ಜೊತೆಗೆ 3.16 ಕೋಟಿ ಮೆಟ್ರಿಕ್ ಟನ್ ಕಚ್ಚಾ ತೈಲ ಆಮದು ಕಡಿಮೆಯಾಗಿದೆ ಎಂಬ ಸಂಗತಿಯನ್ನು ಈ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ಪರಿಸರ ಮತ್ತು ರೈತರಿಗೆ ಲಾಭ

ಈ ಇಬಿಪಿ ಯೋಜನೆಯಿಂದಾಗಿ 9.52 ಕೋಟಿ ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ (CO₂) ಹೊರಸೂಸುವಿಕೆ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ, ದೇಶದ ರೈತರಿಗೆ ಎಥನಾಲ್ ಪೂರೈಕೆಯಿಂದಾಗಿ ₹1.66 lakh ಕೋಟಿಗೂ ಅಧಿಕ ಹೆಚ್ಚುವರಿ ಆದಾಯ ಲಭಿಸಿದೆ. ರೈತರ ಹಿತದೃಷ್ಟಿಯಿಂದ ಕಬ್ಬಿನ ಜೊತೆಗೆ ಜೋಳ, ನವಣೆ ಹಾಗೂ ಹೆಚ್ಚುವರಿ ಧಾನ್ಯಗಳಿಂದಲೂ ಎಥನಾಲ್ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಚಲೋ ಸಂಸದ್ ಪ್ರತಿಭಟನೆ ವೇಳೆ ಪೊಲೀಸರು- ಪ್ರತಿಭಟನಾಕಾರರ ನಡುವೆ ಕಲ್ಲು ತೂರಾಟ! – Kannada News | Chalo sansad Protesters pelted stones at Delhi police

ನವದೆಹಲಿ, ಜುಲೈ 20: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರಥಮ ಮಾಹಿತಿ ವರದಿ (FIR) ದಾಖಲಿಸಲು ನಿರ್ಧರಿಸಿದ್ದಾರೆ. ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರತ್ತ ಪ್ರತಿಭಟನಾಕಾರರು ಕಲ್ಲು ಎಸೆದಿದ್ದಾರೆ. ಇದರಿಂದ ಹಲವು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ಇದಕ್ಕೆ ಪ್ರತಿಯಾಗಿ ಕೆಲವು ಪೊಲೀಸರು ಕೂಡ ಪ್ರತಿಭಟನಾಕಾರರತ್ತ ಕಲ್ಲು ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ಚಲೋ ಸಂಸದ್’ ಮೆರವಣಿಗೆಗಾಗಿ ಸಾವಿರಾರು ಪ್ರತಿಭಟನಾಕಾರರು ಒಟ್ಟಾಗಿ ಸೇರಿದ ಹಿನ್ನೆಲೆಯಲ್ಲಿ ಇಡೀ ಮಧ್ಯ ದೆಹಲಿಯಾದ್ಯಂತ ಭದ್ರತೆಯನ್ನು ತೀವ್ರಗೊಳಿಸಲಾಗಿತ್ತು. ಜನಸಮೂಹವನ್ನು ನಿಯಂತ್ರಿಸಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಭಾರಿ ಪ್ರಮಾಣದಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು. ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟದಿಂದಾಗಿ ಸದ್ಯ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಣೇಶ ಹಬ್ಬಕ್ಕೂ ಮುನ್ನವೇ ಸುರೇಶ್ ಕುಮಾರ್ ಅಲರ್ಟ್​​: ಪಿಓಪಿ ಮೂರ್ತಿಗಳ ಬಳಕೆ ತಡೆಗಟ್ಟುವಂತೆ ಕೃಷ್ಣಬೈರೇಗೌಡಗೆ ಪತ್ರ – Kannada News | Suresh Kumar Urges Minister Krishna Byre Gowda to Ban POP Ganesha Idols

ಕೃಷ್ಣಬೈರೇಗೌಡ, ಸುರೇಶ್ ಕುಮಾರ್Image Credit source: tv9 kannada

ಬೆಂಗಳೂರು, ಜುಲೈ 20: ಶೀಘ್ರದಲ್ಲಿ ಗಣೇಶ ಹಬ್ಬವು ಸಮೀಪಿಸುತ್ತಿದೆ. ಹೀಗಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಗಣೇಶ ಮೂರ್ತಿಗಳ ಹಾವಳಿಯನ್ನು ತಡೆಗಟ್ಟಲು ತುರ್ತು ಕ್ರಮಕೈಗೊಳ್ಳುವಂತೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸಚಿವ ಕೃಷ್ಣಬೈರೇಗೌಡಗೆ (Krishna Byre Gowda) ರಾಜಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಕುಮಾರ್​​ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.

ಪತ್ರದಲ್ಲಿ ಏನಿದೆ? 

‘ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಪ್ರತಿ ವರ್ಷದಂತ ಈ ವರ್ಷವೂ ಮಾರುಕಟ್ಟೆಯಲ್ಲಿ ಪಿಓಪಿ ಗಣೇಶ ಮೂರ್ತಿಗಳ ಹಾವಳಿ ವಿಪರೀತವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ನಮ್ಮ ಜಲಮೂಲಗಳು ಮತ್ತು ಪರಿಸರ ತೀವ್ರವಾಗಿ ಹಾಳಾಗುವುದಲ್ಲದೆ, ಗಣೇಶನ ಮೇಲಿನ ಸಾಂಪ್ರದಾಯಿಕ ಶ್ರದ್ಧೆ ಹಾಗೂ ಪಾವಿತ್ರ್ಯತೆಗೂ ಧಕ್ಕೆಯಾಗುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ: 2700 ಅನಾಥ ವಾಹನಗಳನ್ನು ಪಟ್ಟಿ ಮಾಡಿದ್ದೇವೆ, ಟೋಯಿಂಗ್ ಬಳಿಕವೂ ಬರದಿದ್ರೆ ಹರಾಜು ಹಾಕ್ತೇವೆ: ಸಚಿವ ಕೃಷ್ಣಭೈರೇಗೌಡ

‘ಜೂನ್​​​ 28ರಂದು ಪ್ರಧಾನಿ ನರೇಂದ್ರ ಮೋದಿ ಸಹ ತಮ್ಮ “ಮನ್ ಕೀ ಬಾತ್” ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸುವಂತೆ ಹಾಗೂ ಪಿಓಪಿ ಮೂರ್ತಿಗಳನ್ನು ತ್ಯಜಿಸುವಂತೆ ದೇಶದ ಜನತೆಗೆ ಗಣೇಶನ ಹಬ್ಬಕ್ಕೂ ಸುಮಾರು 75 ದಿನಗಳ ಮುಂಚೆಯೇ ಕರೆ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸುರೇಶ್ ಕುಮಾರ್ ಅಸಮಾಧಾನ

‘ಈ ಗಂಭೀರ ವಿಚಾರದ ಕುರಿತು ಈ ಹಿಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಖ್ಯ ಆಯುಕ್ತ ಮಹೇಶ್ವರ್ ರಾವ್​​ಗೆ ಜೂನ್​​ 29ರಂದು ಪತ್ರದ ಮೂಲಕ ಗಮನಕ್ಕೆ ತರಲಾಗಿತ್ತು. ಅದಾದ ಮೇಲೆ, ಜುಲೈ 12 ರಂದು ಮತ್ತೊಂದು ಪತ್ರ ಸಹ ಕಳುಹಿಸಲಾಗಿತ್ತು. ಅವರು ಜುಲೈ 13ರಂದು ಈ ಬಗ್ಗೆ ನನಗೆ ಉತ್ತರ ನೀಡುವುದಾಗಿ ತಿಳಿಸಿದ್ದರು. ಆದರೆ, GBA ಯಿಂದ ಇದುವರೆಗೂ ನನಗೆ ಸಂಬಂಧಪಟ್ಟವರಿಂದ ಯಾವುದೇ ರೀತಿಯ ಉತ್ತರವಾಗಲೀ ಅಥವಾ ಪ್ರತಿಕ್ರಿಯೆಯಾಗಲೇ ಬಂದಿಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೀದಿಬದಿ ವ್ಯಾಪಾರಿಗಳು ಬಡವರು, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ

‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಜವಾಬ್ದಾರಿಯಾಗಿದೆ. ಆದ್ಧರಿಂದ ಈ ವಿಷಯವನ್ನು ನೀವು ಗಂಭೀರವಾಗಿ ಪರಿಗಣಿಸಿ, ಕೂಡಲೇ ಮಧ್ಯಪ್ರವೇಶಿಸಬೇಕು. ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶವನ್ನು ನೀಡಿ ತುರ್ತು ಕ್ರಮಕೈಗೊಳ್ಳುವಂತೆ’ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತುಮಕೂರಿನ ಹುಲಿಯೂರುದುರ್ಗದಲ್ಲಿ ಭಾರಿ ದುರಂತ: ಕ್ವಾರಿ ಗುಂಡಿಗೆ ಲಾರಿ ಬಿದ್ದು ಚಾಲಕ, ಕ್ಲೀನರ್ ದುರ್ಮರಣ – Kannada News | Tumakuru: Two Dead After Lorry Plunges into 50 Metre Quarry Pit

ಕ್ವಾರಿಯ ಗುಂಡಿಗೆ ಬಿದ್ದ ಲಾರಿImage Credit source: Tv9 Kannada

ತುಮಕೂರು, ಜುಲೈ 20: ಗಣಿಗಾರಿಕೆ ಪ್ರದೇಶದಲ್ಲಿ ರಸ್ತೆ ಕುಸಿದ ಪರಿಣಾಮ ಲಾರಿ ಕ್ವಾರಿಯ ಗುಂಡಿಗೆ ಬಿದ್ದು ಚಾಲಕ ಮತ್ತು ಕ್ಲೀನರ್​​ ದುರ್ಮರಣ ಹೊಂದಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಖಾಲಿ ಲಾರಿಯನ್ನು ಯೂಟರ್ನ್​​ ತೆಗೆದುಕೊಳ್ಳುವ ವೇಳೆ ಅವಘಡ ನಡೆದಿದೆ ಎನ್ನಲಾಗಿದ್ದು, ಸುಮಾರು 50 ಮೀಟರ್​​ ಆಳಕ್ಕೆ ವಾಹನ ಉರುಳಿ ಬಿದ್ದಿದೆ. ಪರಿಣಾಮ ಗಂಭೀರ ಗಾಯಗೊಂಡು ಲಾರಿಯಲ್ಲಿದ್ದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ತೀವ್ರತೆಗೆ ಲಾರಿ ಪೀಸ್​​ ಪೀಸ್

ಅಪಘಾತದಲ್ಲಿ ಮೃತಪಟ್ಟವರನ್ನು ಜಾರ್ಖಂಡ್​​ ಮೂಲದ ಅಕ್ಷಯ್​​ (30) ಮತ್ತು ಧ್ಯಪ್ರದೇಶ ಸಹದೇವ್ (25) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಹುಲಿಯೂರುದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಬಿಜಿಎಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪಘಾತದ ತೀವ್ರತೆಗೆ ಲಾರಿ ಪೀಸ್​​ ಪೀಸ್​​ ಆಗಿದ್ದು, ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರೋದು ಕಂಡುಬಂದಿದೆ.

ಇದನ್ನೂ ಓದಿ:  ಪ್ರತ್ಯೇಕ ರಸ್ತೆ ಅಪಘಾತ; ನವ ವಿವಾಹಿತೆ ಸೇರಿ ಮೂವರು ದಾರುಣ ಸಾವು

ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ

ಸರಣಿ ಅಪಘಾತ

ಟಿಪ್ಪರ್, ಬಸ್​ ಮತ್ತು ಟಿಟಿ‌ ವಾಹನದ ನಡುವೆ ಸರಣಿ ಅಪಘಾತ ನಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ‌‌ ಗ್ರಾಮದ ಬಳಿ ನಡೆದಿದೆ. ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದ್ದು, ಅಪಘಾತದಲ್ಲಿ ಟಿಟಿ ವಾಹನದಲ್ಲಿದ್ದ ಮೂವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ಟಿಟಿ ವಾಹನದ ಒಂದು ಬದಿ ಸಂಪೂರ್ಣ ಜಖಂ ಆಗಿದ್ದರೆ ಟಿಪ್ಪರ್​​ ಮತ್ತು ಬಸ್​​ಗೆ ಸಣ್ಣಪುಟ್ಟ ಹಾನಿಯಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

IND vs ZIM: ಲಕ್ಷ್ಮಣ್ ಸಾರಥ್ಯದಲ್ಲಿ ಜಿಂಬಾಬ್ವೆ ತಲುಪಿದ ಟೀಂ ಇಂಡಿಯಾ – Kannada News | Shreyas Iyer’s Winless Streak: Can India Turn Fortunes in Zimbabwe T20 Series?

ಶ್ರೇಯಸ್ ಅಯ್ಯರ್ (Shreyas Iyer) ಭಾರತ ಟಿ20 ತಂಡದ ನಾಯಕನಾದ ಬಳಿಕ ತಂಡ 7 ಪಂದ್ಯಗಳನ್ನಾಡಿದೆ. ಆದರೆ ಈ 7 ಪಂದ್ಯಗಳಲ್ಲೂ ತಂಡಕ್ಕೆ ಒಂದೇ ಒಂದು ಗೆಲುವು ಸಿಕ್ಕಿಲ್ಲ. ಶ್ರೇಯಸ್ ನಾಯಕನಿಗೆ ಮೊದಲಿಗೆ ಐರ್ಲೆಂಡ್ ವಿರುದ್ಧ ಕಣಕ್ಕಿಳಿದಿದ್ದರು. ಐರ್ಲೆಂಡ್ ವಿರುದ್ಧವೇ ಶ್ರೇಯಸ್ ಅವರ ಗೆಲುವಿನ ಓಟ ಆರಂಭವಾಗಬೇಕಿತ್ತು. ಆದರೆ ಐರ್ಲೆಂಡ್ ಟೀಂ ಇಂಡಿಯಾಕ್ಕೆ ಮರ್ಮಾಘಾತ ನೀಡಿ ಸರಣಿಯ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿತು. ಈ ಆಘಾತದ ಜೊತೆಗೆ ಇಂಗ್ಲೆಂಡ್‌ ಪ್ರವಾಸ ಮಾಡಿದ ಟೀಂ ಇಂಡಿಯಾಕ್ಕೆ ಆಂಗ್ಲರು ಮತ್ತೊಂದು ಹೊಡೆತ ನೀಡಿದರು. ಸರಣಿಯ ಒಂದು ಪಂದ್ಯ ಮಳೆಯಿಂದ ರದ್ದಾದರೆ ಉಳಿದ 4 ಪಂದ್ಯಗಳನ್ನು ಇಂಗ್ಲೆಂಡ್‌ ಗೆದ್ದುಕೊಂಡಿತು. ಹೀಗಾಗಿ ಇಂಗ್ಲೆಂಡ್‌ ಪ್ರವಾಸದಲ್ಲೂ ಶ್ರೇಯಸ್​ಗೆ ಯಶಸ್ಸು ಸಿಗಲಿಲ್ಲ. ಹೀಗಾಗಿ ಶ್ರೇಯಸ್ ಇದೀಗ ಯಶಸ್ಸಿನ ಹುಡುಕಾಟದೊಂದಿಗೆ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದಾರೆ.

ತಂಡಕ್ಕೆ ಲಕ್ಷ್ಮಣ್ ಸಾರಥ್ಯ

ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ಟಿ20 ತಂಡ ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಗಾಗಿ ಟೀಂ ಇಂಡಿಯಾ ಈಗಾಗಲೇ ಜಿಂಬಾಬ್ವೆ ತಲುಪಿದ್ದು, ಅಲ್ಲಿ ವಿವಿಎಸ್ ಲಕ್ಷ್ಮಣ್ ಅವರ ತರಬೇತಿಯಲ್ಲಿ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ. ವಾಸ್ತವವಾಗಿ ಈ ಪ್ರವಾಸಕ್ಕೆ ಲಕ್ಷ್ಮಣ್ ಅವರನ್ನು ತಂಡದ ಕೋಚ್ ಆಗಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಖಾಯಂ ಕೋಚ್ ಗೌತಮ್ ಗಂಭೀರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಗಂಭೀರ್ ತರಬೇತಿಯಲ್ಲಿ ಟೀಂ ಇಂಡಿಯಾಕ್ಕೆ ಕಳೆದ 7 ಪಂದ್ಯಗಳಲ್ಲಿ ಒಂದೇ ಒಂದು ಗೆಲುವು ಧಕ್ಕಿಲ್ಲ. ಇದೀಗ ಲಕ್ಷ್ಮಣ್ ಸಾರಥ್ಯದಲ್ಲಿ ತಂಡದ ಅದೃಷ್ಟ ಬದಲಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

ವೈಭವ್, ರಿಂಕುಗೆ ಅಗ್ನಿಪರೀಕ್ಷೆ

ಇನ್ನು ಈ ಸರಣಿಯಲ್ಲಿಯೂ ಎಲ್ಲರ ಕಣ್ಣುಗಳು ಮತ್ತೊಮ್ಮೆ ವೈಭವ್ ಸೂರ್ಯವಂಶಿ ಮೇಲೆ ಇರುತ್ತವೆ. ಏಕೆಂದರೆ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ವೈಭವ್​ಗೆ ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿತು. ಆದರೆ ವೈಭವ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಈಗ, ವೈಭವ್​ಗೆ ಈ ಸರಣಿಯಲ್ಲಿ ತಮ್ಮನ್ನು ತಾವು ಸಾಬೀತುಪಡಿಸಲು ಉತ್ತಮ ಅವಕಾಶವಿದೆ. ವೈಭವ್ ಜೊತೆಗೆ ರಿಂಕು ಸಿಂಗ್ ಕೂಡ ಟಿ20 ತಂಡಕ್ಕೆ ಆಯ್ಕೆಯಾಗಿದ್ದು, ಅವರಿಗೂ ಕೂಡ ಈ ಸರಣಿ ನಿರ್ಣಾಯಕವಾಗಿದೆ.

IND vs ENG: ‘ನಾನು ಸಂತೋಷವಾಗಿದ್ದೇನೆ’; ಹೀನಾಯ ಸೋಲಿನ ನಂತರ ಶ್ರೇಯಸ್ ಹೇಳಿದ್ದಿದು

3 ಪಂದ್ಯಗಳ ಟಿ20 ಸರಣಿ ವೇಳಾಪಟ್ಟಿ

  • ಭಾರತ vs ಜಿಂಬಾಬ್ವೆ: ಮೊದಲನೇ ಪಂದ್ಯ – ಜುಲೈ 23, ಹರಾರೆ ಸ್ಪೋರ್ಟ್ಸ್ ಕ್ಲಬ್, ಸಂಜೆ 4:30
  • ಭಾರತ vs ಜಿಂಬಾಬ್ವೆ: ಎರಡನೇ ಪಂದ್ಯ – ಜುಲೈ 25, ಹರಾರೆ ಸ್ಪೋರ್ಟ್ಸ್ ಕ್ಲಬ್, ಸಂಜೆ 4:30
  • ಭಾರತ vs ಜಿಂಬಾಬ್ವೆ: ಮೂರನೇ ಪಂದ್ಯ – ಜುಲೈ 26, ಹರಾರೆ ಸ್ಪೋರ್ಟ್ಸ್ ಕ್ಲಬ್, ಸಂಜೆ 4:30

ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಪ್ರಭ್ಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಾಯಾಂಕ್ ಯಾದವ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಾಯಿ ಚೆನ್ನಮ್ಮ ಹಣೆಗೆ ಮುತ್ತಿಟ್ಟು ಕಣ್ಣೀರು ಹಾಕಿದ ಹೆಚ್​​​​.ಡಿ ಕುಮಾರಸ್ವಾಮಿ – Kannada News | Thousands Gather in Hassan for Chennammas Final Rites; Leaders Pay Respects

ಹಾಸನ, ಜು.20: ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ, ಹೆಚ್.ಡಿ. ಚೆನ್ನಮ್ಮನವರ ಅಂತಿಮ ಸಂಸ್ಕಾರ ಹಾಸನದಲ್ಲಿ ಅಶ್ರುಪೂರಿತ ವಾತಾವರಣದಲ್ಲಿ ನೆರವೇರಿತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನಸಾಗರದ ಮಧ್ಯೆ, ಪುತ್ರ ಹೆಚ್.ಡಿ. ಕುಮಾರಸ್ವಾಮಿ ಅವರು ತಾಯಿಯ ಮುಖವನ್ನು ನೋಡಿ ಭಾವುಕರಾಗಿ ಮುತ್ತಿಟ್ಟು ಅಂತಿಮ ವಿದಾಯ ಹೇಳಿದರು. ಈ ದೃಶ್ಯ ನೆರೆದಿದ್ದವರ ಕಣ್ಣಂಚಲ್ಲಿ ನೀರು ತರಿಸಿತು. ಚೆನ್ನಮ್ಮನವರ ಅಂತಿಮ ದರ್ಶನಕ್ಕಾಗಿ ಹಾಸನದ ಅಂತ್ಯಕ್ರಿಯೆ ಸ್ಥಳಕ್ಕೆ ಸಾರ್ವಜನಿಕರು ದಂಡು ದಂಡಾಗಿ ಆಗಮಿಸಿದ್ದರು. ರಾಷ್ಟ್ರೀಯ ಹೆದ್ದಾರಿ 373ರ ಮಾರ್ಗದಲ್ಲಿ ಸಾರ್ವಜನಿಕರು ಸುಗಮವಾಗಿ ಬರಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿತ್ತು ಮತ್ತು ದರ್ಶನಕ್ಕಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಅಂತ್ಯಕ್ರಿಯೆ ಸ್ಥಳದಲ್ಲೇ ಸಾರ್ವಜನಿಕ ದರ್ಶನಕ್ಕೂ ಅವಕಾಶ ಕಲ್ಪಿಸಲಾಗಿತ್ತು.

ಅಂತಿಮ ಸಂಸ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗವಹಿಸಿದ್ದರು. ಇದೇ ವೇಳೆ, ನಿರ್ಮಲಾನಂದನಾಥ ಶ್ರೀಗಳು ಮತ್ತು ಶಂಭುನಾಥ ಸ್ವಾಮೀಜಿ ಸೇರಿದಂತೆ ಧಾರ್ಮಿಕ ಮುಖಂಡರು ಸಹ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಗಣ್ಯರಿಗಾಗಿ ಮೀಸಲಾದ ಆಸನಗಳಲ್ಲಿ ಕುಳಿತಿದ್ದ ಹಲವು ನಾಯಕರು, ಚೆನ್ನಮ್ಮನವರ ಅಗಲಿಕೆಗೆ ಸಂತಾಪ ಸೂಚಿಸಿದರು. ಈ ಸಂದರ್ಭದಲ್ಲಿ ಜನರ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು, ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡುತ್ತಿದ್ದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಬಳಿ 20 ಲಕ್ಷ ರೂ ಇದ್ದರೆ ಎಲ್ಲಿ ಹೂಡಿಕೆ ಮಾಡಬೇಕು? ಇಲ್ಲಿದೆ ಮೂರು ಮಾದರಿಗಳು – Kannada News | Where to invest, if you have Rs 20 lakh lumpsum, here are 3 ways

ನಿಮ್ಮ ಬಳಿ ₹20 ಲಕ್ಷದಷ್ಟು ದೊಡ್ಡ ಮೊತ್ತವಿದ್ದು, ಅದನ್ನು ಸುರಕ್ಷಿತವಾಗಿ ಹಾಗೂ ಉತ್ತಮ ಆದಾಯ (Returns) ತರುವಂತೆ ಎಲ್ಲಿ ಹೂಡಿಕೆ (Investment) ಮಾಡಬೇಕು ಎಂದು ಯೋಚಿಸುತ್ತಾ ಗೊಂದಲಕ್ಕೊಳಗಾಗಿದ್ದೀರಾ? ನೀವು ದೀರ್ಘಾವಧಿಗೆ ಹೂಡಿಕೆ ಮಾಡುತ್ತಿದ್ದರೆ ವಿವಿಧ ಆಯ್ಕೆಗಳಿವೆ. ಒಂದು ವರ್ಷ ಅಥವಾ ಎರಡು ವರ್ಷ, ಅಥವಾ ಮೂರ್ನಾಲ್ಕು ವರ್ಷದವರೆಗೆ ಮಾತ್ರ ಹೂಡಿಕೆ ಮಾಡುತ್ತೇನೆ ಎನ್ನುವುದಿದ್ದರೆ ಕಡಿಮೆ ರಿಸ್ಕ್ ಇರುವ ನಿಶ್ಚಿತ ಠೇವಣಿ, ಬಾಂಡ್ ಇತ್ಯಾದಿಗಳಲ್ಲಿ ಹಣ ಇಡಬಹುದು. ಐದು ವರ್ಷ ಮೇಲ್ಪಟ್ಟು ಹೂಡಿಕೆ ಮಾಡುವವರಿದ್ದರೆ ಈ ಕೆಳಗಿನ ಮಾಹಿತಿ ಒಮ್ಮೆ ತಿಳಿದಿರಿ.

ನೀವು ಒಂದೇ ಕಡೆ ಸಂಪೂರ್ಣ ಹಣವನ್ನು ತೊಡಗಿಸುವ ಬದಲು, ನಿಮ್ಮ ಹೂಡಿಕೆಯ ಅವಧಿ (Time Horizon) ಮತ್ತು ಅಪಾಯ ಎದುರಿಸುವ ಸಾಮರ್ಥ್ಯಕ್ಕೆ (Risk Appetite) ಅನುಗುಣವಾಗಿ ವಿಂಗಡಿಸಿ (Diversification) ಹೂಡಿಕೆ ಮಾಡುವುದು ಜಾಣತನ. ಮಾರುಕಟ್ಟೆ ತಜ್ಞರ ಪ್ರಕಾರ ನಿಮ್ಮ ₹20 ಲಕ್ಷವನ್ನು ವಿಂಗಡಿಸಿ ಹೂಡಿಕೆ ಮಾಡಲು ಮೂರು ಅತ್ಯುತ್ತಮ ಮಾದರಿಗಳು (Portfolios) ಇಲ್ಲಿವೆ:

1. ಸಮತೋಲಿತ ಹಾಗೂ ಸುರಕ್ಷಿತ ಮಾದರಿ

ನೀವು ಮಧ್ಯಮ ರಿಸ್ಕ್ ಸಾಮರ್ಥ್ಯ (Moderate Risk) ಹೊಂದಿದ್ದು, ಸಾಧಾರಣ ಅಪಾಯದೊಂದಿಗೆ ಸ್ಥಿರ ಹಾಗೂ ಉತ್ತಮ ಬೆಳವಣಿಗೆ ಬೇಕಿದ್ದರೆ ಈ ರೀತಿ ಹಣ ವಿಂಗಡಿಸಬಹುದು:

ಇದನ್ನೂ ಓದಿ: ಪ್ಲಾಸ್ಟಿಕ್ ನೋಟುಗಳನ್ನು ಮುದ್ರಿಸಲಿರುವ ಆರ್​ಬಿಐ; ನಕಲಿ ಮಾಡಲು ಆಗದ ಈ ನೋಟುಗಳ ವಿಶೇಷತೆಯೇನು?

2. ಹೈ ರಿಸ್ಕ್, ಹೈ ರಿಟರ್ನ್ಸ್ ಮಾದರಿ

ನೀವು ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಮನಸ್ಸು ಮತ್ತು ಶಕ್ತಿ ಇದ್ದರೆ ಈ ಮಾರ್ಗ (High Risk / Long Term) ಉತ್ತಮ ಆಯ್ಕೆ. ನಿಮ್ಮ ಹೂಡಿಕೆಯ ಅವಧಿ 7 ರಿಂದ 10 ವರ್ಷಗಳಿಗಿಂತ ಹೆಚ್ಚಿದ್ದು, ಹೆಚ್ಚಿನ ಲಾಭ ಗಳಿಸುವ ಗುರಿ ಇದ್ದರೆ ಹೀಗೆ ಮಾಡಿ:

  • ಮ್ಯೂಚುಯಲ್ ಫಂಡ್ಸ್ (Large, Mid & Small Cap): ₹12 ಲಕ್ಷ (60%)
  • ಆಯ್ದ ಕಂಪನಿಗಳ ಶೇರುಗಳು (Direct Stocks): ₹4 ಲಕ್ಷ (20%)
  • ಚಿನ್ನ (Digital Gold / Gold Mutual Funds): ₹2 ಲಕ್ಷ (10%)
  • ಲಿಕ್ವಿಡ್ ಫಂಡ್ಸ್ / ತುರ್ತು ನಿಧಿ (Emergency Fund): ₹2 ಲಕ್ಷ (10%)

ಮ್ಯೂಚುಯಲ್ ಫಂಡ್‌ನಲ್ಲಿ ₹12 ಲಕ್ಷ ಒಮ್ಮೆಗೆ ತೊಡಗಿಸುವ ಬದಲು, ಮೊದಲು ಅದನ್ನು LST/Liquid Fund ನಲ್ಲಿಟ್ಟು, ನಂತರ STP (Systematic Transfer Plan) ಮೂಲಕ ಪ್ರತಿ ತಿಂಗಳು ಫಂಡ್​ಗೆ ವರ್ಗಾಯಿಸುವುದು ಅಪಾಯವನ್ನು ತಗ್ಗಿಸುತ್ತದೆ.

3. ಕನಿಷ್ಠ ಅಪಾಯದ ಸುರಕ್ಷಿತ ಮಾದರಿ

ಹಣದ ಭದ್ರತೆ ಮುಖ್ಯವಾಗಿದ್ದು, ಮಾರುಕಟ್ಟೆಯ ಏರಿಳಿತ ಬೇಡ ಎನ್ನುವವರಿಗೆ (Low Risk / Capital Protection):

  • ಬ್ಯಾಂಕ್ ಫಿಕ್ಸ್ಡ್ ಡಿಪಾಸಿಟ್ (Senior Citizen / Multi-Bank FDs): ₹10 ಲಕ್ಷ (50%)
  • ಸಾರ್ವಜನಿಕ ಭವಿಷ್ಯ ನಿಧಿ (PPF) / NPS / SCSS: ₹5 ಲಕ್ಷ (25%)
  • ಸಾವರನ್ ಗೋಲ್ಡ್ ಬಾಂಡ್ (SGB) ಅಥವಾ ಗೋಲ್ಡ್ ಇಟಿಎಫ್: ₹3 ಲಕ್ಷ (15%)
  • ಆರ್ಬಿಐ ಬಾಂಡ್‌ಗಳು (Arbitrage/Debt Funds): ₹2 ಲಕ್ಷ (10%)

ಇದನ್ನೂ ಓದಿ: ಕಷ್ಟಕಾಲಕ್ಕೆ ಚಿನ್ನ ಎನ್ನುತ್ತಾರೆ; ಬಿಕ್ಕಟ್ಟಿನಲ್ಲಿ ಬಂಗಾರದ ದರ ಏರುವ ಬದಲು ಇಳಿಯುತ್ತಿರುವುದು ಯಾಕೆ? ಇಲ್ಲಿದೆ ಸಂಭಾವ್ಯ ಕಾರಣಗಳು

ಇವುಗಳನ್ನೂ ಗಮನದಲ್ಲಿರಿಸಿಕೊಂಡು ಹೂಡಿಕೆ ಮಾಡಿ

  • ತುರ್ತು ನಿಧಿ (Emergency Fund): ಹೂಡಿಕೆ ಮಾಡುವ ಮುನ್ನ ಕನಿಷ್ಠ 3 ರಿಂದ 6 ತಿಂಗಳ ಖರ್ಚಿಗೆ ಬೇಕಾಗುವಷ್ಟು ಹಣವನ್ನು ಸೇವಿಂಗ್ಸ್ ಖಾತೆ ಅಥವಾ ಲಿಕ್ವಿಡ್ ಫಂಡ್‌ನಲ್ಲಿ ಇರಿಸಿ.
  • ತೆರಿಗೆ (Taxation): ಇಕ್ವಿಟಿ ಮ್ಯೂಚುಯಲ್ ಫಂಡ್‌ಗಳ ಮೇಲಿನ ಲಾಭಾಂಶಕ್ಕೆ (LTCG/STCG) ಮತ್ತು ಫಿಕ್ಸ್ಡ್ ಡಿಪಾಸಿಟ್ ಬಡ್ಡಿಗೆ ಅನುಗುಣವಾಗಿ ತೆರಿಗೆ ಅನ್ವಯಿಸುತ್ತದೆ.

ಶೇರು ಮಾರುಕಟ್ಟೆ ಮತ್ತು ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆಯ ರಿಸ್ಕ್‌ಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮುನ್ನ ನಿಮ್ಮ ಹಣಕಾಸು ಸಲಹೆಗಾರರನ್ನು (Financial Advisor) ಸಂಪರ್ಕಿಸುವುದು ಸೂಕ್ತ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version