ಚಿಕ್ಕಬಳ್ಳಾಪುರ: ಮಹಾಶಿವರಾತ್ರಿ ಸಂಭ್ರಮದ ಮಧ್ಯೆ ಈಶಾ ಫೌಂಡೇಷನ್ ಬಳಿ ಬೆಂಕಿ – Kannada News | Chikkaballapur: Fire broke out near Isha Foundation amid Mahashivratri celebrations
ಈಶಾ ಫೌಂಡೇಷನ್, ಬೆಟ್ಟದಲ್ಲಿ ಬೆಂಕಿImage Credit source: tv9 kannada ಚಿಕ್ಕಬಳ್ಳಾಪುರ, ಫೆಬ್ರವರಿ 15: ಕರ್ನಾಟದಲ್ಲಿ ಮಹಾಶಿವರಾತ್ರಿಯ (Maha Shivratri) ಸಡಗರ ಸಂಭ್ರಮ ಮನೆ ಮಾಡಿದೆ. ದೇವಸ್ಥಾನಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ. ಇತ್ತ ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ ಇರುವ ಇಶಾ ಫೌಂಡೇಷನ್ನಲ್ಲೂ ಸಡಗರ ಜೋರಾಗಿದೆ. ಲಕ್ಷಾಂತರ ಭಕ್ತರು 112 ಅಡಿಯ ಆದಿಯೋಗಿ ದರ್ಶನಕ್ಕೆ ಮುಗಿಬಿದ್ದರು. ಇದೇ ವೇಳೆ ನಾಗಮಂಟಪದ ಎದುರುಗಡೆ ಇರುವ ಅರಣ್ಯ ಪ್ರದೇಶದಲ್ಲಿ ಬೆಂಕಿ (Fire) ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿಸಿದೆ. ಮಹಾಶಿವರಾತ್ರಿ ಸಂಭ್ರಮ…