ಊಹಾಪೋಹಗಳಿಗೆ ತೆರೆ, ಶುರುವಾಯ್ತು ‘ಸಲಾರ್ 2’, ಟ್ಯಾಗ್ ಲೈನ್ ನೆನಪಿದೆಯೇ?

ಪ್ರಭಾಸ್ ನಟಿಸಿ, ಪ್ರಶಾಂತ್ ನೀಲ್ (Prashanth Neel) ನಿರ್ದೇಶನ ಮಾಡಿದ್ದ ‘ಸಲಾರ್’ ಸಿನಿಮಾ 2023 ರಲ್ಲಿ ಬಿಡುಗಡೆ ಆಗಿತ್ತು. ಕನ್ನಡದ ‘ಉಗ್ರಂ’ ಸಿನಿಮಾದ ರೀಮೇಕ್ ಆಗಿದ್ದ ಈ ಸಿನಿಮಾ ‘ಉಗ್ರಂ’ ಸಿನಿಮಾದ ಅಪ್​​ಡೇಟೆಡ್ ವರ್ಷನ್ ರೀತಿ ಇತ್ತು. ‘ಉಗ್ರಂ’ ಸಿನಿಮಾದ ಕತೆಯನ್ನೇ ತುಸು ತಿರುಚಿ ಭಾರಿ ಅದ್ಧೂರಿಯಾಗಿ ‘ಸಲಾರ್’ ಸಿನಿಮಾ ಮಾಡಿದ್ದರು ಪ್ರಶಾಂತ್ ನೀಲ್, ಜೊತೆಗೆ ಕತೆಗೆ ಸಣ್ಣ ಟ್ವಿಸ್ಟ್ ಸಹ ನೀಡಿದ್ದರು. ಸಿನಿಮಾ ಬಿಡುಗಡೆ ಆದ ಬಳಿಕ, ‘ಸಲಾರ್ 2’ ಸಿನಿಮಾ ನಿಂತು ಹೋಯ್ತು, ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿಗಳೆಲ್ಲ ಹರಿದಾಡಿದ್ದವು. ‘ಸಲಾರ್ 2’ ಸಿನಿಮಾ ಪ್ರಾರಂಭವೇ ಆಗುವುದಿಲ್ಲ ಎಂದೆಲ್ಲ ಎನ್ನಲಾಗಿತ್ತು. ಆದರೆ ಈಗ ಕೊನೆಗೂ ಸಿನಿಮಾ ಶುರುವಾಗುತ್ತಿದೆ.

‘ಸಲಾರ್’ ಸಿನಿಮಾ ಬಿಡುಗಡೆ ಆಗಿ ಮೂರು ವರ್ಷಗಳ ಬಳಿಕ ‘ಸಲಾರ್ 2’ ಸಿನಿಮಾ ಶುರುವಾಗುತ್ತಿದೆ. ಪ್ರಶಾಂತ್ ನೀಲ್ ಕೊನೆಗೂ ‘ಸಲಾರ್ 2’ ಸಿನಿಮಾದತ್ತ ಗಮನ ಹರಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಜೊತೆಗೆ ಜೂ ಎನ್​​ಟಿಆರ್ ಅವರಿಗೆ ಇತ್ತೀಚೆಗಷ್ಟೆ ಭುಜದ ಆಪರೇಷನ್ ಸಹ ಆಗಿರುವ ಕಾರಣ ಪ್ರಶಾಂತ್ ಅವರಿಗೆ ತುಸು ವಿಶ್ರಾಂತಿ ದೊರೆತಿದೆ. ಈ ವಿರಾಮದಲ್ಲಿ ಅವರು ‘ಸಲಾರ್ 2’ ಸಿನಿಮಾದ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ.

ಮೂಲಗಳ ಪ್ರಕಾರ, ಪ್ರಶಾಂತ್ ನೀಲ್, ‘ಸಲಾರ್ 2’ ಸಿನಿಮಾದ ಪ್ರೀ ಪ್ರೊಡಕ್ಷನ್ ಆರಂಭ ಮಾಡಿದ್ದಾರೆ. ಲೊಕೇಶನ್, ಸೆಟ್ ಡಿಸೈನ್​​, ಚಿತ್ರಕತೆಯ ಫೈನ್ ಟ್ಯೂನಿಂಗ್, ಕಲಾವಿದರ ಡೇಟ್ಸ್, ಚಿತ್ರೀಕರಣಕ್ಕೆ ಬೇಕಾದ ಹಲವು ಕೆಲಸಗಳನ್ನು ಪ್ರಶಾಂತ್ ನೀಲ್ ಅವರ ತಂಡ ಪ್ರಾರಂಭಿಸಿದೆ. ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣ ಮುಗಿದು ಸಿನಿಮಾ ಬಿಡುಗಡೆ ಆಗುತ್ತಲೇ ‘ಸಲಾರ್ 2’ ಸಿನಿಮಾ ಪ್ರಾರಂಭಿಸುವ ಉದ್ದೇಶ ಪ್ರಾಶಾಂತ್ ನೀಲ್ ಅವರಿಗೆ ಇದೆ.

ಇದನ್ನೂ ಓದಿ:ಶ್ರೀಲಂಕಾಕ್ಕೆ ಹೊರಟ ಪ್ರಶಾಂತ್ ನೀಲ್ ಮತ್ತು ಜೂ ಎನ್​​ಟಿಆರ್

ಪ್ರಭಾಸ್ ಸಹ ಪ್ರಸ್ತುತ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅವರು ‘ಫೌಜಿ’ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ‘ಕಲ್ಕಿ 2898 ಎಡಿ’ ಸಿನಿಮಾದ ಚಿತ್ರೀಕರಣದಲ್ಲಿಯೂ ಪಾಲ್ಗೊಳ್ಳಲಿದ್ದಾರೆ. ಇವುಗಳು ಮುಗಿದ ಬಳಿಕವಷ್ಟೆ ಅವರು ‘ಸಲಾರ್ 2’ ಸಿನಿಮಾದಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ: ಭರ್ತಿಯತ್ತ ಆಲಮಟ್ಟಿ, ಬಸವಸಾಗರ; ಕಬಿನಿಯಿಂದ ನದಿಗೆ 10 ಸಾವಿರ ಕ್ಯೂಸೆಕ್ ನೀರು – Kannada News | Karnataka Dam Water Levels Aug 14: Almatti, Basavasagara Near Full Status

ಕರ್ನಾಟಕ, ಆ.14: ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಮುಂದುವರಿದಿದ್ದು, ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವು ಸ್ಥಿರವಾಗಿದೆ. ವಿಜಯಪುರದ ಆಲಮಟ್ಟಿ ಹಾಗೂ ಯಾದಗಿರಿಯ ಬಸವಸಾಗರ (ನಾರಾಯಣಪುರ) ಜಲಾಶಯಗಳು ಬಹುತೇಕ ಭರ್ತಿ ಹಂತವನ್ನು ತಲುಪಿವೆ. ಕರ್ನಾಟಕದ ಪ್ರಮುಖ ಜಲಾಶಯಗಳಾದ ಕಬಿನಿ, ಬಸವಸಾಗರ, ಕೆಆರ್‌ಎಸ್, ಆಲಮಟ್ಟಿ ಹಾಗೂ ಹೇಮಾವತಿ ಜಲಾಶಯಗಳ ಇಂದಿನ (ಆಗಸ್ಟ್ 14) ನೀರಿನ ಮಟ್ಟ, ಒಳಹರಿವು ಹಾಗೂ ಹೊರಹರಿವಿನ ಸಂಪೂರ್ಣ ವಿವರ ಇಲ್ಲಿದೆ.

ಆಲಮಟ್ಟಿ ಜಲಾಶಯ (ವಿಜಯಪುರ):

ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ (ಆಲಮಟ್ಟಿ) ಜಲಾಶಯವು ಗರಿಷ್ಠ ಮಟ್ಟವಾದ 519.60 ಮೀಟರ್‌ಗೆ ತಲುಪಲು ಇನ್ನು ಕೆಲವೇ ಇಂಚುಗಳು ಬಾಕಿಯಿದ್ದು, ಪ್ರಸ್ತುತ 519.45 ಮೀಟರ್ ತಲುಪಿದೆ. ಜಲಾಶಯಕ್ಕೆ 25,023 ಕ್ಯೂಸೆಕ್ ಒಳಹರಿವಿದ್ದು, ನದಿಗೆ 19,155 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಬಸವಸಾಗರ ಜಲಾಶಯ (ಯಾದಗಿರಿ – ನಾರಾಯಣಪುರ):

ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗುವ ಹಂತದಲ್ಲಿದೆ. ಗರಿಷ್ಠ 492.25 ಮೀಟರ್ ಮಟ್ಟದ ಜಲಾಶಯದಲ್ಲಿ ಪ್ರಸ್ತುತ 492.23 ಮೀಟರ್ ನೀರಿದ್ದು, 18,000 ಕ್ಯೂಸೆಕ್ ಒಳಹರಿವು ಹಾಗೂ 6,000 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.

ಕಬಿನಿ ಜಲಾಶಯ (ಮೈಸೂರು):

ಹೆಚ್.ಡಿ. ಕೋಟೆಯ ಕಬಿನಿ ಜಲಾಶಯ ಪ್ರದೇಶದಲ್ಲಿ 32 ಮಿ.ಮೀ ಮಳೆಯಾಗಿದ್ದು, ಜಲಾಶಯದಲ್ಲಿ 18.30 ಟಿಎಂಸಿ ನೀರು ಸಂಗ್ರಹವಾಗಿದೆ (ಲೈವ್ ಸ್ಟೋರೇಜ್: 8.49 TMC). 8,230 ಕ್ಯೂಸೆಕ್ ಒಳಹರಿವಿದ್ದರೆ, ನದಿಗೆ 10,000 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.

ಹೇಮಾವತಿ ಜಲಾಶಯ (ಹಾಸನ – ಗೊರೂರು):

ಹಾಸನ ತಾಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲಿ ಪ್ರಸ್ತುತ 31.884 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 36.803 ಟಿಎಂಸಿ ನೀರಿತ್ತು. ಪ್ರಸ್ತುತ 4,264 ಕ್ಯೂಸೆಕ್ ಒಳಹರಿವಿದ್ದು, ನದಿಗೆ 500 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಇದನ್ನೂ ಓದಿ: ಧ್ವಜಾರೋಹಣಕ್ಕೆ ವಿನಾಯಿತಿ ಕೋರಿ ಸಿಎಂಗೆ ಸಚಿವ ಜಮೀರ್ ಪತ್ರ; ಮನವಿಯಂತೆ ಜಮೀರ್​ ಹೆಸರನ್ನ ಕೈಬಿಟ್ಟ ಸಿಎಂ ಡಿ.ಕೆ.ಶಿವಕುಮಾರ್

ಕೆಆರ್‌ಎಸ್ ಜಲಾಶಯ (ಮಂಡ್ಯ):

ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಕೆಆರ್‌ಎಸ್ ಜಲಾಶಯದಲ್ಲಿ ಪ್ರಸ್ತುತ 109.80 ಅಡಿ ನೀರಿದ್ದು, ಒಟ್ಟು 31.521 ಟಿಎಂಸಿ ನೀರು ಸಂಗ್ರಹವಾಗಿದೆ. ಡ್ಯಾಂಗೆ 3,150 ಕ್ಯೂಸೆಕ್ ಒಳಹರಿವಿದ್ದು, 2,310 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಲಿಂಗನಮಕ್ಕಿ ಜಲಾಶಯ (ಶಿವಮೊಗ್ಗ)

ಲಿಂಗನಮಕ್ಕಿ ಡೆಮ್​​ಗೆ ಇಂದು (ಆಗಸ್ಟ್ 14, 2026) ಬೆಳಿಗ್ಗೆ 8:00 ಗಂಟೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 1793.60 ಅಡಿಗಳಿಗೆ ತಲುಪಿದೆ. ಗರಿಷ್ಠ ನೀರಿನ ಮಟ್ಟ 1819.00 ಅಡಿ, ಇಂದಿನ ನೀರಿನ ಮಟ್ಟ 1793.60 ಅಡಿ, ಇಂದಿನ ಒಳಹರಿವು 13,079 ಕ್ಯೂಸೆಕ್.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ತಾಯ್ನಾಡಿಗೆ ಹೊರಟ ಭಾರತೀಯ ಕುಟುಂಬ ಕಂಡು ಕಣ್ಣೀರಿಟ್ಟ ಅಮೆರಿಕನ್ ಅಜ್ಜಿ – Kannada News | An elderly foreign woman shed tears upon seeing an Indian family leaving for their homeland.

ಊರು, ದೇಶ ಯಾವುದಾದರೇನು, ನಮ್ಮವರು ಎನ್ನುವ ಭಾವನೆ ಮೂಡಿದ ಮೇಲೆ ಭಾಷೆ, ಜಾತಿ, ಧರ್ಮವನ್ನು ಮೀರಿದ ಬಂಧವೊಂದು ಹುಟ್ಟಿಕೊಳ್ಳುತ್ತದೆ. ಇದೀಗ ಇಂತಹದ್ದೇ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಅಮೆರಿಕದಲ್ಲಿ (American) ನೆಲೆಸಿದ್ದ ತೆಲುಗು ಕುಟುಂಬವೊಂದು ಭಾರತಕ್ಕೆ ಮರಳಲು ಸಜ್ಜಾಗಿದೆ. ಆತ್ಮೀಯರಾಗಿದ್ದ ಅಮೆರಿಕನ್ ಅಜ್ಜಿಯೊಬ್ಬರು ಈ ನೋವನ್ನು ಸಹಿಸಿಕೊಳ್ಳಲು ಆಗದೇ ಕಣ್ಣೀರಿಟ್ಟಿದ್ದಾರೆ. ಈ ಭಾವುಕ ಕ್ಷಣದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ದಿ ಭಾರತ್‌ ಪೋಸ್ಟ್‌ (thebharatpost) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ತೆಲುಗು ಕುಟುಂಬವೊಂದನ್ನು ಅಮೆರಿಕನ್ ವೃದ್ಧೆ ಕಣ್ಣೀರು ಇಡುತ್ತಾ ಭಾರತಕ್ಕೆ ಕಳುಹಿಸಿಕೊಟ್ಟ ದೃಶ್ಯ ಇದಾಗಿದೆ. ಈ ಕ್ಲಿಪಿಂಗ್ ಭಾರತೀಯ ದಂಪತಿ ತಮ್ಮ ಹುಟ್ಟೂರಿಗೆ ಹೊರಟು ನಿಂತಿದ್ದು, ಅಮೆರಿಕನ್ ಅಜ್ಜಿ ಕಣ್ಣೀರಿಡುತ್ತಾ ಅಪ್ಪಿಕೊಂಡಿದ್ದಾರೆ. ದೇಶ, ಭಾಷೆ ಬೇರೆಯಾಗಿದ್ದರೂ ಭಾರತೀಯ ಕುಟುಂಬದೊಂದಿಗೆ ಅಮೆರಿಕನ್ ಅಜ್ಜಿಗೆ ಆತ್ಮೀಯ ಸ್ನೇಹ ಸಂಬಂಧ ಬೆಸೆದಿದ್ದು, ಈ ಭಾವನಾತ್ಮಕ ವಿದಾಯದ ದೃಶ್ಯವನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ವಿದೇಶಿ ಮಹಿಳೆಗೆ ಕಿವಿಯೋಲೆಯನ್ನು ಉಡುಗೊರೆಯಾಗಿ ನೀಡಿದ ಭಾರತೀಯ ಬೀದಿ ಬದಿ ವ್ಯಾಪಾರಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತುಂಬಾನೇ ಮುದ್ದಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದುವೇ ನಿಜವಾದ ಪ್ರೀತಿ ಎಂದಿದ್ದಾರೆ. ಇನ್ನೊಬ್ಬರು, ಈ ಪ್ರಪಂಚದಲ್ಲಿ ಒಳ್ಳೆಯ ಜನರು ಇದ್ದಾರೆ ಎನ್ನುವುದಕ್ಕೆ ಈ ದೃಶ್ಯವೇ ಸಾಕ್ಷಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಹೊಸ ಪಾರ್ಕಿಂಗ್ ಪಾಲಿಸಿಗೆ ಆರ್. ಅಶೋಕ್ ಕೆಂಡಾಮಂಡಲ – Kannada News | R Ashoka Criticizes Karnataka Govt Over New Taxes and City Corporation Funds

ಬೆಂಗಳೂರು, ಆಗಸ್ಟ್ 14: ರಾಜ್ಯದಲ್ಲಿ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಒತ್ತಾಯ ಹಾಗೂ ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶ ನೀಡದಿರುವುದನ್ನು ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ, ವಿಪಕ್ಷ ನಾಯಕ ಆರ್. ಅಶೋಕ್ ಅವರು ಕರ್ನಾಟಕ ಸರ್ಕಾರದ ಆರ್ಥಿಕ ಸ್ಥಿತಿಯ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ರಾಜ್ಯ ಸರ್ಕಾರ ಪಾಪರ್ ಆಗಿದೆ, ಅಂದರೆ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಹೇಳಿದ ಅವರು, ಸರ್ಕಾರವು ತನ್ನನ್ನು ತಾನೇ ಪಾಪರ್ ಸರ್ಕಾರ ಎಂದು ಘೋಷಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರಿನ ಏಳು ಕಾರ್ಪೊರೇಷನ್‌ಗಳಲ್ಲಿ ಐದು ಕಾರ್ಪೊರೇಷನ್‌ಗಳು ಈಗಾಗಲೇ ಪಾಪರ್ ಆಗಿ, ಬೋರ್ಡ್ ಹಾಕಿಕೊಂಡಿವೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ. ಸರ್ಕಾರದಲ್ಲಿ ಹಣವಿಲ್ಲದ ಕಾರಣ, ತೆರಿಗೆಗಳ ಮೇಲೆ ತೆರಿಗೆಗಳನ್ನು ಹೇರುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಈ ಹಿಂದೆ ಕಸದ ಮೇಲೆ, ಎಲೆಕ್ಟ್ರಿಕ್ ಚಾರ್ಜ್ ಮೇಲೆ, ಹಾಲಿನ ಮೇಲೆ ಮತ್ತು ಮನೆಗಳ ಮೇಲೆ ತೆರಿಗೆಗಳನ್ನು ಹಾಕಲಾಗಿದ್ದು, ಈಗ ಮನೆ ಮುಂದೆ ನಿಲ್ಲಿಸುವ ಕಾರುಗಳ ಮೇಲೂ ತೆರಿಗೆ ವಿಧಿಸಲು ಸರ್ಕಾರ ಮುಂದಾಗಿದೆ ಎಂದು ಅಶೋಕ್ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶ್ರೀದೇವಿ ಜನ್ಮದಿನಕ್ಕೆ ಪ್ರಿಯಾಂಕಾ ಚೋಪ್ರಾ ವಿಶೇಷ ನಮನ; ಬಯೋಗ್ರಫಿ ‘ಎಂಪ್ರೆಸ್’ ಮೊದಲ ಲುಕ್ ರಿಲೀಸ್ – Kannada News | Priyanka Chopra Remembers Sridevi On Birth Anniversary, Unveils Biography Empress First Look

ಭಾರತೀಯ ಚಿತ್ರರಂಗದ ದಿವಂಗತ ನಟಿ ಶ್ರೀದೇವಿ ಅವರ (Sridevi) ಜನ್ಮದಿನದಂದು ಜಾಗತಿಕ ನಟಿ ಪ್ರಿಯಾಂಕಾ ಚೋಪ್ರಾ ವಿಶೇಷ ಗೌರವ ಸಲ್ಲಿಸಿದ್ದಾರೆ. ಶ್ರೀದೇವಿ ಅವರ ಜೀವನ ಆಧಾರಿತ ಮುಂಬರುವ ಬಯೋಪಿಕ್ ಪುಸ್ತಕದ ಮೊದಲ ಲುಕ್​ ಅನ್ನು ಪ್ರಿಯಾಂಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪುಸ್ತಕಕ್ಕೆ ‘ಎಂಪ್ರೆಸ್: ದಿ ಡೆಫಿನಿಟಿವ್ ಬಯಾಗ್ರಫಿ ಆಫ್ ಶ್ರೀದೇವಿ’ ಎಂದು ಹೆಸರಿಡಲಾಗಿದೆ. ಪ್ರಿಯಾಂಕಾ ಅವರ ಈ ಭಾವಪೂರ್ಣ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದೆ.

ಈ ಕೃತಿಯನ್ನು ಧೀರಜ್ ಯು ಕುಮಾರ್ ಬರೆದಿದ್ದಾರೆ. ವೆಸ್ಟ್‌ಲ್ಯಾಂಡ್ ಬುಕ್ಸ್ ಸಂಸ್ಥೆಯು ಇದನ್ನು ಪ್ರಕಟಿಸುತ್ತಿದೆ. ಈ ಪುಸ್ತಕದಲ್ಲಿ ಶ್ರೀದೇವಿ ಅವರ ಬಾಲನಟಿಯ ದಿನಗಳಿಂದ ಹಿಡಿದು ಸೂಪರ್‌ಸ್ಟಾರ್ ಆಗಿ ಬೆಳೆದ ಸುಂದರ ಪಯಣವನ್ನು ವಿವರಿಸಲಾಗಿದೆ. ಅವರ ಸಿನಿಮಾ ಜೀವನದ ಸಾಧನೆಗಳು ಮತ್ತು ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಪುಸ್ತಕದ ಮುಖಪುಟದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ವಿಶೇಷ ಸಾಲುಗಳಿವೆ. ಅವರು ಶ್ರೀದೇವಿ ಅವರನ್ನು ಸಾಟಿಯಿಲ್ಲದ ಅದ್ಭುತ ಪ್ರತಿಭೆ ಎಂದು ಬಣ್ಣಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಎಕ್ಸ್ ಖಾತೆಯಲ್ಲಿ ಈ ಫೋಟೋ ಶೇರ್ ಮಾಡಿದ್ದಾರೆ. ‘ನೀವು ಎಂದೆಂದಿಗೂ ಏಕೈಕ ನಟಿ. ನಿಮ್ಮ ನೆನಪು ಸದಾ ಇರುತ್ತದೆ. ಹ್ಯಾಪಿ ಹೆವೆನ್ಲಿ ಬರ್ತ್‌ಡೇ ಶ್ರೀದೇವಿ’ ಎಂದು ಬರೆದುಕೊಂಡಿದ್ದಾರೆ. ಈ ಪುಸ್ತಕ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ.

ಇದನ್ನೂ ಓದಿ: ಶ್ರೀದೇವಿ ಹಾದಿಯಲ್ಲಿ ಸಾಗಿದ ಜಾನ್ವಿ ಕಪೂರ್; ಆ ಒಂದು ಕೆಲಸಕ್ಕೆ ಭಾರೀ ಮೆಚ್ಚುಗೆ

ಶ್ರೀದೇವಿ ಅವರು ತಮ್ಮ ನಾಲ್ಕನೇ ವಯಸ್ಸಿನಲ್ಲೇ ಅಭಿನಯ ಆರಂಭಿಸಿದ್ದರು. 1967ರ ತಮಿಳು ಚಿತ್ರ ‘ಕಂದನ್ ಕರುಣೈ’ ಮೂಲಕ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. 1972ರ ‘ರಾಣಿ ಮೇರಾ ನಾಮ್’ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಭಾರತದ ಮೊದಲ ಮಹಿಳಾ ಸೂಪರ್‌ಸ್ಟಾರ್ ಎನಿಸಿಕೊಂಡರು. 1996ರಲ್ಲಿ ನಿರ್ಮಾಪಕ ಬೋನಿ ಕಪೂರ್ ಅವರನ್ನು ಮದುವೆಯಾದರು. ಇವರಿಗೆ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಎಂಬ ಇಬ್ಬರು ಪುತ್ರಿಯರಿದ್ದಾರೆ. 2018ರಲ್ಲಿ ಶ್ರೀದೇವಿ ದುಬೈನಲ್ಲಿ ನಿಧನರಾದರು. ಅವರ ಕಲಾ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ 2013ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Assembly Session 2026 Live: ಕರ್ನಾಟಕ ವಿಧಾನಸಭೆ ಅಧಿವೇಶನ ನೇರಪ್ರಸಾರ; ವಿಧಾನಸಭೆ ಸ್ಪೀಕರ್​ ಆಗಿ ಜಿ.ಎಸ್.ಪಾಟೀಲ್​ ಆಯ್ಕೆ – Kannada News | Karnataka Assembly Session 2026 Live streaming Online TV9 Kannada

ಬೆಂಗಳೂರು, ಆ.14: ಕರ್ನಾಟಕ ವಿಧಾನಸಭೆಯ ಕಲಾಪ ಶುಕ್ರವಾರ ಬೆಳಿಗ್ಗೆ ಆರಂಭಗೊಂಡಿದ್ದು, ನೂತನ ಸ್ಪೀಕರ್ ಆಯ್ಕೆ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ಸ್ಪೀಕರ್ ಚುನಾವಣಾ ಪ್ರಕ್ರಿಯೆ ಹಿನ್ನೆಲೆಯಲ್ಲಿ ಪ್ರತಿಪಕ್ಷವಾದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕಲಾಪದಿಂದ ಹೊರಗುಳಿದು, ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸಿದೆ. ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಅವರ ಹೆಸರನ್ನು ಮುಖ್ಯಮಂತ್ರಿ ಅವರು ಅಧಿಕೃತವಾಗಿ ಸೂಚಿಸಿದರು. ಮುಖ್ಯಮಂತ್ರಿಗಳ ಈ ಪ್ರಸ್ತಾಪಕ್ಕೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಅನುಮೋದನೆ ನೀಡಿದ್ದಾರೆ. ಸ್ಪೀಕರ್ ಚುನಾವಣೆಯ ಕಲಾಪ ನಡೆಯುತ್ತಿರುವ ಸಂದರ್ಭದಲ್ಲೇ ವಿಪಕ್ಷ ಬಿಜೆಪಿ ನಾಯಕರು ಕಲಾಪವನ್ನು ಬಹಿಷ್ಕರಿಸಿ ಹೊರನಡೆದಿರುವುದು ಸದನದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಶ್ ‘ಟಾಕ್ಸಿಕ್’ ಚಿತ್ರದ ಅವಧಿ ಇಷ್ಟೊಂದು ದೀರ್ಘವೇ? ಫ್ಯಾನ್ಸ್​​ಗೆ ಹಬ್ಬ – Kannada News | Rocking Star Yash Toxic Movie Runtime Locked: Gets A Certificate, Releasing On August 26

ಕನ್ನಡ ಚಿತ್ರರಂಗದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ (Toxic Movie) ಬಿಡುಗಡೆಗೆ ಸಜ್ಜಾಗಿದೆ. ಈ ಬಿಗ್ ಬಜೆಟ್ ಸಿನಿಮಾ ಆಗಸ್ಟ್ 26ರಂದು ಜಾಗತಿಕ ಮಟ್ಟದಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಹಲವು ದಿನಗಳ ಕಾಯುವಿಕೆಯ ನಂತರ ಸಿನಿಮಾ ಆಗಮಿಸುತ್ತಿದೆ. ಪ್ರೇಕ್ಷಕರಲ್ಲಿ ಮತ್ತು ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆಗಳು ಗಗನಕ್ಕೇರಿವೆ. ಈಗ ಸಿನಿಮಾದ ಸೆನ್ಸಾರ್ ಬಗ್ಗೆ ಚರ್ಚೆ ಶುರುವಾಗಿದೆ.

ಇತ್ತೀಚೆಗೆ ‘ಟಾಕ್ಸಿಕ್’ ಸಿನಿಮಾ ಸೆನ್ಸಾರ್ ಮಂಡಳಿಯಿಂದ ‘ಎ’ ಸರ್ಟಿಫಿಕೇಟ್ ಪಡೆದುಕೊಂಡಿದೆ ಎಂದು ವರದಿ ಆಗಿದೆ. ಈ ಗ್ಯಾಂಗ್‌ಸ್ಟರ್ ಆಕ್ಷನ್ ಡ್ರಾಮಾ ಸಿನಿಮಾಗೆ ಸುದೀರ್ಘವಾದ ಅವಧಿ ಇದೆ ಎನ್ನಲಾಗಿದೆ. ಚಿತ್ರದ ಒಟ್ಟು ರನ್‌ಟೈಮ್ 194 ನಿಮಿಷಗಳು. ಅಂದರೆ ಬರೋಬ್ಬರಿ 3 ಗಂಟೆ 14 ನಿಮಿಷಗಳ ಕಾಲ ಸಿನಿಮಾ ಪ್ರಸಾರವಾಗಲಿದೆ. ಇಷ್ಟೊಂದು ದೊಡ್ಡ ಅವಧಿಯ ಚಿತ್ರಕಥೆ ಪ್ರೇಕ್ಷಕರನ್ನು ಕೊನೆವರೆಗೂ ಕುತೂಹಲದಿಂದ ಹಿಡಿದಿಟ್ಟುಕೊಳ್ಳಬೇಕು. ಇದು ತಂಡಕ್ಕೆ ಇರೋ ದೊಡ್ಡ ಚಾಲೆಂಜ್.

ಈ ಚಿತ್ರಕ್ಕೆ ಗೀತು ಮೋಹನ್‌ದಾಸ್ ಅವರು ನಿರ್ದೇಶನ ಮಾಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ವೆಂಕಟ್ ನಾರಾಯಣ ಅವರು ಬಂಡವಾಳ ಹೂಡಿದ್ದಾರೆ. ಯಶ್ ಅವರು ಕಥಾಬರಹದಲ್ಲಿ ಸಾಥ್ ನೀಡಿದ್ದಾರೆ. ಈ ಸಿನಿಮಾ ಒಂದೇ ಬಾರಿಗೆ ಹಲವು ಭಾಷೆಗಳಲ್ಲಿ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಸಿನಿಮಾ ಮೂರು ಕಾಲು ಗಂಟೆ ಇದೆ ಎಂಬ ವಿಷಯ ಅಭಿಮಾನಿಗಳಿಗೆ ಖುಷಿ ತಂದಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದಲ್ಲಿ ಒಂದಲ್ಲ, ಎರಡಲ್ಲ ಹತ್ತು ಹಾಡುಗಳು; ಅಚ್ಚರಿಯ ವಿಷಯ ರಿವೀಲ್

‘ಟಾಕ್ಸಿಕ್’ ಪಾತ್ರವರ್ಗ ಹಾಗೂ ರಿಲೀಸ್ ದಿನಾಂಕ:

‘ಕೆಜಿಎಫ್ 2’ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ ಯಶ್ ಅವರ 19ನೇ ಸಿನಿಮಾವಾಗಿ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಮೂಡಿಬರುತ್ತಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಜೊತೆಗೆ ನಯನತಾರಾ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಷಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಅದ್ದೂರಿ ಪ್ಯಾನ್-ಇಂಡಿಯಾ ಸಿನಿಮಾವು ಬರುವ ಆಗಸ್ಟ್ 26ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Shravana Masa 2026: ಪವಿತ್ರ ಶ್ರಾವಣ ಮಾಸದ ಮಹತ್ವ, ಆಚರಣೆಗಳು ಮತ್ತು ವೈಜ್ಞಾನಿಕ ಹಿನ್ನೆಲೆ ಇಲ್ಲಿ ತಿಳಿಯಿರಿ – Kannada News | Shravana Masa 2026: Significance, Rituals and Festivals for Divine Blessings

ಶ್ರಾವಣ ಮಾಸ ಆರಂಭವಾಗಿದೆ. ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ಅತ್ಯಂತ ಪವಿತ್ರವಾದ ಮತ್ತು ವಿಶೇಷವಾದ ಸ್ಥಾನವಿದೆ. ಹಿಂದೂ ಪಂಚಾಂಗದ ಐದನೇ ತಿಂಗಳಾದ ಶ್ರಾವಣವನ್ನು ದೇವ ದೇವ ಮಹಾದೇವನಾದ ಶಿವನಿಗೆ ಹಾಗೂ ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದ ಮಾಸವೆಂದು ಪರಿಗಣಿಸಲಾಗುತ್ತದೆ. ಮಳೆಗಾಲದ ಆಗಮನದೊಂದಿಗೆ ಪ್ರಕೃತಿಯು ಹಸಿರಿನಿಂದ ಕಂಗೊಳಿಸುವ ಈ ಸಮಯದಲ್ಲಿ, ದೇಶಾದ್ಯಂತ ಭಕ್ತಿ, ಉಪವಾಸ ಮತ್ತು ಹಬ್ಬಗಳ ವಾತಾವರಣ ಮನೆಮಾಡಿರುತ್ತದೆ.

ಶ್ರಾವಣ ಮಾಸ ಮತ್ತು ಶಿವನ ಪೂಜೆಯ ಪೌರಾಣಿಕ ಹಿನ್ನೆಲೆ:

ಪೌರಾಣಿಕ ಕಥೆಗಳ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ಹೊರಬಂದ ಕಲಾಕೂಟ ವಿಷವನ್ನು ಪ್ರಪಂಚವನ್ನು ರಕ್ಷಿಸಲು ಪರಮಶಿವನು ಸ್ವೀಕರಿಸಿದನು. ವಿಷದ ತೀವ್ರತೆಯಿಂದ ಉಂಟಾದ ಉರಿಯನ್ನು ತಣಿಸಲು ದೇವತೆಗಳು ಶಿವನಿಗೆ ಗಂಗಾಜಲವನ್ನು ಅರ್ಪಿಸಿದರು. ಈ ಪವಿತ್ರ ಘಟನೆ ನಡೆದದ್ದು ಶ್ರಾವಣ ಮಾಸದಲ್ಲಿ ಎಂಬ ಆಳವಾದ ನಂಬಿಕೆಯಿದೆ. ಆದ್ದರಿಂದ, ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ನೀರು, ಹಾಲು ಮತ್ತು ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಶಿವನು ಶೀಘ್ರವಾಗಿ ಒಲಿಯುತ್ತಾನೆ. ಭಕ್ತರ ಕಷ್ಟಗಳನ್ನು ನಿವಾರಿಸಿ, ಕುಟುಂಬದಲ್ಲಿ ಸುಖ-ಶಾಂತಿಯನ್ನು ಕರುಣಿಸುತ್ತಾನೆ ಎಂಬುದು ನಂಬಿಕೆ.

ಶ್ರಾವಣ ಸೋಮವಾರಗಳ ವಿಶೇಷತೆ ಮತ್ತು ವ್ರತಾಚರಣೆ:

ಶ್ರಾವಣ ಮಾಸದಲ್ಲಿ ಬರುವ ಪ್ರತಿ ಸೋಮವಾರವೂ ಅತ್ಯಂತ ಪವಿತ್ರವಾದುದು. ಇದನ್ನು ‘ಶ್ರಾವಣ ಸೋಮವಾರ’ ಎಂದು ಕರೆಯಲಾಗುತ್ತದೆ. ಈ ದಿನಗಳಲ್ಲಿ ಭಕ್ತರು ಉಪವಾಸ ವ್ರತವನ್ನು ಆಚರಿಸಿ, ಶಿವ ದೇವಾಲಯಗಳಿಗೆ ತೆರಳಿ ವಿಶೇಷ ಅಭಿಷೇಕ ಹಾಗೂ ಪೂಜೆಗಳನ್ನು ಸಲ್ಲಿಸುತ್ತಾರೆ. ವಿಶೇಷವಾಗಿ, ಅವಿವಾಹಿತ ಯುವತಿಯರು ಉತ್ತಮ ಬಾಳ ಸಂಗಾತಿಗಾಗಿ ಶ್ರಾವಣ ಸೋಮವಾರದ ವ್ರತವನ್ನು ಆಚರಿಸುತ್ತಾರೆ. ಇನ್ನು ವಿವಾಹಿತ ನಾರಿಯರು ತಮ್ಮ ಗಂಡನ ದೀರ್ಘಾಯುಷ್ಯ, ಆರೋಗ್ಯ ಮತ್ತು ಕುಟುಂಬದ ಶ್ರೇಯಸ್ಸಿಗಾಗಿ ಈ ದಿನಗಳಲ್ಲಿ ಶಿವನ ಆರಾಧನೆ ಮಾಡುತ್ತಾರೆ.

ಹಬ್ಬಗಳ ಸುಗ್ಗಿ ಮತ್ತು ಪವಿತ್ರ ದಿನಗಳು:

ಶ್ರಾವಣ ಮಾಸ ಬಂದೊಡನೆ ಸಾಲು ಸಾಲು ಹಬ್ಬಗಳ ಸಂಭ್ರಮ ಆರಂಭವಾಗುತ್ತದೆ. ಈ ತಿಂಗಳಲ್ಲಿ ಧಾರ್ಮಿಕವಾಗಿ ಪ್ರಮುಖವಾದ ಅನೇಕ ವ್ರತಗಳು ಮತ್ತು ಆಚರಣೆಗಳು ಬರುತ್ತವೆ:

  • ಮಂಗಳ ಗೌರಿ ವ್ರತ: ಶ್ರಾವಣ ಮಾಸದ ಪ್ರತಿ ಮಂಗಳವಾರ ನವವಧುಗಳು ಮತ್ತು ಸುಮಂಗಲಿಯರು ಮಂಗಳ ಗೌರಿ ವ್ರತವನ್ನು ಆಚರಿಸುತ್ತಾರೆ.
  • ನಾಗರ ಪಂಚಮಿ: ಶ್ರಾವಣ ಶುಕ್ಲ ಪಂಚಮಿಯಂದು ನಾಗದೇವರನ್ನು ಪೂಜಿಸಿ, ಹಾಲೆರೆಯುವ ಸಂಪ್ರದಾಯವಿದೆ.
  • ವರಮಹಾಲಕ್ಷ್ಮಿ ವ್ರತ: ಶ್ರಾವಣ ಮಾಸದ ಪೌರ್ಣಮಿಯ ಮುಂಚೆ ಬರುವ ಶುಕ್ರವಾರದಂದು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯನ್ನು ಕಳಶವಿಟ್ಟು ಶ್ರದ್ಧಾಭಕ್ತಿಯಿಂದ ಪೂಜಿಸಲಾಗುತ್ತದೆ.
  • ರಕ್ಷಾ ಬಂಧನ: ಶ್ರಾವಣ ಪೌರ್ಣಮಿಯಂದು ಸಹೋದರ-ಸಹೋದರಿಯರ ಪ್ರೀತಿ ಮತ್ತು ರಕ್ಷಣೆಯ ಸಂಕೇತವಾದ ರಾಖಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
  • ಶ್ರಾವಣ ಶನಿವಾರ: ಶನಿಗ್ರಹದ ದೋಷ ಪರಿಹಾರಕ್ಕಾಗಿ ಮತ್ತು ತಿರುಪತಿ ವೆಂಕಟರಮಣ ಸ್ವಾಮಿಯ ಕೃಪೆಗಾಗಿ ಶ್ರಾವಣ ಶನಿವಾರದಂದು ವಿಶೇಷ ದೀಪಾರಾಧನೆ ಮಾಡಲಾಗುತ್ತದೆ.

ಇದನ್ನೂ ಓದಿ: ತಿರುಮಲ ಶ್ರೀವಾರಿ ಪವಿತ್ರೋತ್ಸವ: ಆಗಸ್ಟ್ 23ರಿಂದ 25ರವರೆಗೆ ವಿಶೇಷ ಪೂಜೆ; ಹಲವು ಸೇವೆಗಳು ರದ್ದು

ವೈಜ್ಞಾನಿಕ ಹಿನ್ನೆಲೆ ಮತ್ತು ಸಾತ್ವಿಕ ಆಹಾರದ ಮಹತ್ವ:

ಧಾರ್ಮಿಕ ಕಾರಣಗಳ ಹೊರತಾಗಿ, ಶ್ರಾವಣ ಮಾಸಕ್ಕೆ ಆಯುರ್ವೇದ ಮತ್ತು ವೈಜ್ಞಾನಿಕ ಮಹತ್ವವೂ ಇದೆ. ಮಳೆಗಾಲದ ಈ ಸಮಯದಲ್ಲಿ ವಾತಾವರಣದ ಬದಲಾವಣೆಯಿಂದಾಗಿ ನಮ ಜೀರ್ಣಕ್ರಿಯೆಯ ಶಕ್ತಿ (ಜಠರಾಗ್ನಿ) ಕಡಿಮೆಯಿರುತ್ತದೆ. ಆದ್ದರಿಂದ, ಈ ತಿಂಗಳಲ್ಲಿ ಉಪವಾಸ ಮಾಡುವುದು, ಸುಲಭವಾಗಿ ಜೀರ್ಣವಾಗುವ ಸಾತ್ವಿಕ (ಸಸ್ಯಾಹಾರ) ಆಹಾರವನ್ನು ಸೇವಿಸುವುದು ಮತ್ತು ಮಾಂಸಾಹಾರ ಹಾಗೂ ಮದ್ಯಪಾನವನ್ನು ತ್ಯಜಿಸುವುದು ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯಂತ ಒಳಿತೆಂದು ಆಯುರ್ವೇದ ಶಾಸ್ತ್ರ ತಿಳಿಸುತ್ತದೆ.

ಶ್ರಾವಣ ಮಾಸದಲ್ಲಿ ಅನುಸರಿಸಬೇಕಾದ ದೈನಂದಿನ ನಿಯಮಗಳು:

ಶ್ರಾವಣ ಮಾಸದ ಪೂರ್ಣ ಶುಭ ಫಲಗಳನ್ನು ಪಡೆಯಲು ಕೆಲವು ಸರಳ ನಿಯಮಗಳನ್ನು ಪಾಲಿಸುವುದು ಸೂಕ್ತ. ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ಶಿವನಿಗೆ ಜಲಾಭಿಷೇಕ ಮಾಡುವುದು ಶ್ರೇಷ್ಠ. ಪೂಜೆಯ ಸಮಯದಲ್ಲಿ ‘ಓಂ ನಮಃ ಶಿವಾಯ’ ಅಥವಾ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಇದರೊಂದಿಗೆ, ಮನೆಯನ್ನು ಸ್ವಚ್ಛವಾಗಿಟ್ಟುಕೊಂಡು, ಕೋಪ, ಅಹಂಕಾರ ಮತ್ತು ಯಾರ ಬಗ್ಗೆಯೂ ಕೆಟ್ಟ ಆಲೋಚನೆಗಳನ್ನು ಮಾಡದೆ ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳುವುದು ಈ ಮಾಸದ ನಿಜವಾದ ಸಾರವಾಗಿದೆ.

ಶ್ರಾವಣ ಮಾಸವು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲ, ಅದು ಮನಸ್ಸು, ದೇಹ ಮತ್ತು ಆತ್ಮವನ್ನು ಶುದ್ಧೀಕರಿಸುವ ಪವಿತ್ರ ಸಮಯ. ಧನಾತ್ಮಕ ಶಕ್ತಿಯನ್ನು ಮೈಗೂಡಿಸಿಕೊಂಡು ಭಕ್ತಿಯಲ್ಲಿ ಲೀನವಾಗಲು ಈ ಮಾಸ ಅತ್ಯುತ್ತಮ ಅವಕಾಶವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ ಪ್ರಕರಣ: ಆಂಧ್ರ ಮೂಲದ ಸಿಮ್, ಒಂದೇ ಕಂಪನಿಯ ಫೋನ್‌ಗಳ ಪೂರೈಕೆಯ ಜಾಲ ಬೆಳಕಿಗೆ! – Kannada News | Prajwal Revanna Jail Case: Andhra Pradesh SIM Network Uncovered at Parappana Agrahara

ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ ಪ್ರಕರಣ

ಬೆಂಗಳೂರು, ಆಗಸ್ಟ್ 14: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಅಕ್ರಮವಾಗಿ ಮೊಬೈಲ್ ಹಾಗೂ ಸಿಮ್ ಕಾರ್ಡ್‌ಗಳನ್ನು ಪೂರೈಸುವ ಬೃಹತ್ ಮತ್ತು ವ್ಯವಸ್ಥಿತ ಜಾಲವೊಂದು ಸಕ್ರಿಯವಾಗಿರುವುದು ಮತ್ತೊಮ್ಮೆ ಬೆಳಕಿಗೆ ಬಂದಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇರುವ ಜೈಲಿನ ಬ್ಯಾರಕ್ ಮೇಲೆ ಇತ್ತೀಚೆಗೆ ಸಿಸಿಬಿ ಮತ್ತು ಜೈಲಾಧಿಕಾರಿಗಳು ಜಂಟಿ ದಾಳಿ ನಡೆಸಿದಾಗ ಮೊಬೈಲ್‌ಗಳು ಪತ್ತೆಯಾಗಿದ್ದ ಪ್ರಕರಣದ ತನಿಖೆ ವೇಳೆ ಈಗ ಆಘಾತಕಾರಿ ಮುಖ್ಯಾಂಶಗಳು ಲಭ್ಯವಾಗಿವೆ.

ಆಂಧ್ರಪ್ರದೇಶ ಮೂಲದ ಸಿಮ್ ಕಾರ್ಡ್‌ ಲಿಂಕ್

ಜೈಲಾಧಿಕಾರಿಗಳ ಜಂಟಿ ಕಾರ್ಯಾಚರಣೆ ವೇಳೆ ಪ್ರಜ್ವಲ್ ರೇವಣ್ಣ ಅವರ ಬಳಿ ಪತ್ತೆಯಾಗಿದ್ದ ಸಿಮ್ ಕಾರ್ಡ್ ನೆರೆರಾಜ್ಯ ಆಂಧ್ರಪ್ರದೇಶ ಮೂಲದ್ದು ಎನ್ನುವುದು ತನಿಖೆಯಲ್ಲಿ ದೃಢಪಟ್ಟಿದೆ. ಕೇವಲ ಪ್ರಜ್ವಲ್ ರೇವಣ್ಣ ಮಾತ್ರವಲ್ಲದೆ, ಈ ಹಿಂದೆ ಜೈಲಿನೊಳಗೆ ಸಿಕ್ಕಿಬಿದ್ದಿದ್ದ ಬಹುತೇಕ ಮೊಬೈಲ್‌ಗಳಲ್ಲಿದ್ದ ಸಿಮ್ ಕಾರ್ಡ್‌ಗಳು ಕೂಡ ಆಂಧ್ರಪ್ರದೇಶ ಮೂಲದ್ದೇ ಆಗಿದ್ದವು. ಹೀಗಾಗಿ ಜೈಲಿನೊಳಗೆ ಈ ನಿಷೇಧಿತ ವಸ್ತುಗಳನ್ನು ಸಾಗಿಸಲು ಆಂಧ್ರಪ್ರದೇಶದ ಲಿಂಕ್ ಇರುವ ನಿರ್ದಿಷ್ಟ ಜಾಲವೊಂದು ಕೆಲಸ ಮಾಡುತ್ತಿದ್ದು, ಪೊಲೀಸರು ಮತ್ತು ಜೈಲಾಧಿಕಾರಿಗಳು ಈಗ ಆ ಜಾಲದ ಬೆನ್ನುಬಿದ್ದಿದ್ದಾರೆ.

ದಾಳಿಯಲ್ಲಿ ಸಿಕ್ಕಿದ್ದೆಲ್ಲಾ ಒಂದೇ ಕಂಪನಿಯ ಮೊಬೈಲ್‌ಗಳು!

ಸಿಸಿಬಿ ಪೊಲೀಸರು ಮತ್ತು ಕಾರಾಗೃಹದ ಸಿಬ್ಬಂದಿ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಒಟ್ಟು 3 ಮೊಬೈಲ್‌ಗಳು ಜಪ್ತಿಯಾಗಿದ್ದವು. ವಿಚಿತ್ರವೆಂದರೆ, ಸೀಜ್ ಮಾಡಲಾದ ಮೂರೂ ಮೊಬೈಲ್‌ಗಳು ಒಂದೇ ಕಂಪನಿಗೆ ಸೇರಿವೆ. ಜೈಲಿನೊಳಗೆ ಬೇರೆ ಬೇರೆ ಮೂಲಗಳಿಂದ ಮೊಬೈಲ್ ಫೋನ್‌ಗಳು ಬಂದಿದ್ದರೆ ಅವು ಬೇರೆ ಬೇರೆ ಬ್ರ್ಯಾಂಡ್‌ಗಳದ್ದಾಗಿರುತ್ತಿದ್ದವು. ಆದರೆ ಎಲ್ಲವೂ ಒಂದೇ ಕಂಪನಿಯದ್ದಾಗಿರುವುದರಿಂದ, ಇವೆಲ್ಲವನ್ನೂ ಒಬ್ಬನೇ ವ್ಯಕ್ತಿ ಅಥವಾ ಒಂದೇ ಗ್ಯಾಂಗ್ ಜೈಲಿನೊಳಗೆ ವ್ಯವಸ್ಥಿತವಾಗಿ ರವಾನಿಸಿದೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.

ಹಳೇ ಪ್ರಕರಣಗಳಿಗೂ ಇದೆ ಒಂದೇ ಕಂಪನಿಯ ಕನೆಕ್ಷನ್

ಜೈಲಿನಲ್ಲಿ ಒಂದೇ ಕಂಪನಿಯ ಮೊಬೈಲ್‌ಗಳು ಸಿಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಮಾರ್ಚ್ ತಿಂಗಳಿನಲ್ಲೂ ಜೈಲಾಧಿಕಾರಿಗಳು ತಪಾಸಣೆ ನಡೆಸಿದಾಗ ಒಟ್ಟು 9 ಮೊಬೈಲ್‌ಗಳು ಪತ್ತೆಯಾಗಿದ್ದವು. ಅದರಲ್ಲಿ 7 ಮೊಬೈಲ್‌ಗಳು ಒಂದೇ ನಿರ್ದಿಷ್ಟ ಕಂಪನಿಯದ್ದಾಗಿದ್ದವು. ಇದೇ ಜಾಲವನ್ನು ಬಳಸಿ ಈ ಹಿಂದೆ ಜೈಲಿನ ಒಳಗಿದ್ದ ಕೆಲವು ದುಷ್ಕರ್ಮಿಗಳು ಡಿಜಿಪಿ ಅಲೋಕ್ ಕುಮಾರ್ ವಿರುದ್ಧ ವಿಡಿಯೋ ಮಾಡಿ ಜೈಲಿನಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಸದ್ಯ ಹಳೇ ಪ್ರಕರಣ ಹಾಗೂ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾದ ಪ್ರಕರಣ ಎರಡಕ್ಕೂ ಸಾಮ್ಯತೆ ಇರುವುದರಿಂದ ಪರಪ್ಪನ ಅಗ್ರಹಾರ ಪೊಲೀಸರು ಹಾಗೂ ಜೈಲಾಧಿಕಾರಿಗಳು ಜಂಟಿಯಾಗಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rates 14 Aug: ಚಿನ್ನದ ಬೆಲೆ ಭರ್ಜರಿ ಇಳಿಕೆ; ಹತ್ತು ಗ್ರಾಮ್​ಗೆ 2,050 ರೂ ಕುಸಿತ – Kannada News | Gold Price Today on 14th August 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಆಗಸ್ಟ್ 14: ಚಿನ್ನದ ಬೆಲೆ ಇವತ್ತು ಶುಕ್ರವಾರ ಭರ್ಜರಿ ಇಳಿಕೆಯಾಗಿದೆ. ಈ ಹಳದಿ ಲೋಹದ (Gold Price) ಬೆಲೆ ಗ್ರಾಮ್​ಗೆ 205 ರೂಗಳಷ್ಟು ತಗ್ಗಿದೆ. ವಿದೇಶಗಳಲ್ಲೂ ಬಹಳ ಕಡೆ ಇದರ ಬೆಲೆಯಲ್ಲಿ ಇಳಿಮುಖವಾಗಿದೆ. ಸ್ಪಾಟ್ ಚಿನ್ನದ ಬೆಲೆ ಗ್ರಾಮ್​ಗೆ 139 ಡಾಲರ್ (ಸುಮಾರು 13,267 ರೂ) ಇದೆ. ಸ್ಪಾಟ್ ಸಿಲ್ವರ್ ದರ 196 ರೂಗಳಷ್ಟು ಇದೆ. ಭಾರತದಲ್ಲಿ ವಿವಿಧ ತೆರಿಗೆಗಳ ಕಾರಣದಿಂದ ಹೆಚ್ಚಿನ ದೇಶಗಳಿಗಿಂತ ದುಬಾರಿ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,40,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,52,890 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,40,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 26,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಆಗಸ್ಟ್ 14ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,289 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,015 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,467 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,015 ರೂ
  • ಚೆನ್ನೈ: 14,015 ರೂ
  • ಮುಂಬೈ: 14,015 ರೂ
  • ದೆಹಲಿ: 14,030 ರೂ
  • ಕೋಲ್ಕತಾ: 14,015 ರೂ
  • ಕೇರಳ: 14,015 ರೂ
  • ಅಹ್ಮದಾಬಾದ್: 14,020 ರೂ
  • ಜೈಪುರ್: 14,030 ರೂ
  • ಲಕ್ನೋ: 14,030 ರೂ
  • ಭುವನೇಶ್ವರ್: 14,015 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 139.05 ಡಾಲರ್ (13,267 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 2.056 ಡಾಲರ್ (196 ರುಪಾಯಿ)

ಇದನ್ನೂ ಓದಿ: ಏರ್​ಟೆಲ್​ನ ಜನಪ್ರಿಯ 299 ರೂ ಪ್ಲಾನ್ ರದ್ದು; ಕನಿಷ್ಠ ಅನ್​ಲಿಮಿಟೆಡ್ ಡೇಟಾ ಪ್ಲಾನ್ ಈಗ 349 ರೂ

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 15,289 ರುಪಾಯಿ
  • ಮಲೇಷ್ಯಾ: 581 ರಿಂಗಿಟ್ (13,571 ರುಪಾಯಿ)
  • ದುಬೈ: 527 ಡಿರಾಮ್ (13,692 ರುಪಾಯಿ)
  • ಅಮೆರಿಕ: 143.50 ಡಾಲರ್ (13,692 ರುಪಾಯಿ)
  • ಸಿಂಗಾಪುರ: 189 ಸಿಂಗಾಪುರ್ ಡಾಲರ್ (14,089 ರುಪಾಯಿ)
  • ಕತಾರ್: 528.50 ಕತಾರಿ ರಿಯಾಲ್ (13,833 ರೂ)
  • ಸೌದಿ ಅರೇಬಿಯಾ: 543 ಸೌದಿ ರಿಯಾಲ್ (13,800 ರುಪಾಯಿ)
  • ಓಮನ್: 55.80 ಒಮಾನಿ ರಿಯಾಲ್ (13,830 ರುಪಾಯಿ)
  • ಕುವೇತ್: 43.73 ಕುವೇತಿ ದಿನಾರ್ (13,581 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 255 ರೂ
  • ಚೆನ್ನೈ: 260 ರೂ
  • ಮುಂಬೈ: 255 ರೂ
  • ದೆಹಲಿ: 255 ರೂ
  • ಕೋಲ್ಕತಾ: 255 ರೂ
  • ಕೇರಳ: 260 ರೂ
  • ಅಹ್ಮದಾಬಾದ್: 255 ರೂ
  • ಜೈಪುರ್: 255 ರೂ
  • ಲಕ್ನೋ: 255 ರೂ
  • ಭುವನೇಶ್ವರ್: 260 ರೂ
  • ಪುಣೆ: 255

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version