Puja Rituals: ಪೂಜೆ ಮುಗಿದ ನಂತರ ಕ್ಷಮೆಯಾಚಿಸುವುದು ಏಕೆ ಕಡ್ಡಾಯ ಗೊತ್ತೇ? ಇಲ್ಲಿದೆ ಮಾಹಿತಿ – Kannada News | Sanatana Puja Forgiveness: Importance of Seeking Pardon After Worship for Full Blessings

ಸನಾತನ ಸಂಪ್ರದಾಯದಲ್ಲಿ, ಪೂಜೆ ಎಂದರೆ ಕೇವಲ ದೀಪ ಹಚ್ಚುವುದು, ಹೂವುಗಳನ್ನು ಅರ್ಪಿಸುವುದು ಅಥವಾ ಆರತಿ ಮಾಡುವುದು ಮಾತ್ರವಲ್ಲ. ಮಂತ್ರಗಳನ್ನು ಪಠಿಸುವುದು, ಧ್ಯಾನ ಮಾಡುವುದು, ಸಂಕಲ್ಪ ಮಾಡುವುದು ಮತ್ತು ನಿಜವಾದ ಭಕ್ತಿಯಿಂದ ದೇವರಿಗೆ ಶರಣಾಗುವುದರಲ್ಲಿಯೂ ಪೂಜೆಯು ಆಳವಾದ ಮಹತ್ವವನ್ನು ಹೊಂದಿದೆ. ಸಾಮಾನ್ಯವಾಗಿ ನಾವು ಪೂಜೆ ಪೂರ್ಣಗೊಂಡ ತಕ್ಷಣ ಎದ್ದು ಹೊರಡುತ್ತೇವೆ. ಆದರೆ ನಮ್ಮ ಧಾರ್ಮಿಕ ಸಂಪ್ರದಾಯಗಳ ಪ್ರಕಾರ, ಪೂಜೆಯ ಕೊನೆಯಲ್ಲಿ ದೇವರಲ್ಲಿ ಕ್ಷಮೆ ಯಾಚಿಸುವ ಅಭ್ಯಾಸ ಅತ್ಯಂತ ಮುಖ್ಯವಾದುದು. ಶಾಸ್ತ್ರಗಳ ಪ್ರಕಾರ, ಕೊನೆಯಲ್ಲಿ ಕ್ಷಮೆಗಾಗಿ ಪ್ರಾರ್ಥಿಸದಿದ್ದರೆ ನಮ್ಮ ಪ್ರಾರ್ಥನೆಗಳು ಅಪೂರ್ಣವಾಗಿಯೇ ಉಳಿಯುತ್ತವೆ.

ಪೂಜೆಯಲ್ಲಿ ಕ್ಷಮೆಯಾಚನೆಯ ಮಹತ್ವ:

ಪೂಜೆಯ ಸಮಯದಲ್ಲಿ ನಾವು ತಿಳಿದೋ ಅಥವಾ ತಿಳಿಯದೆಯೋ ಮಾಡಿದ ಯಾವುದೇ ತಪ್ಪುಗಳು, ಲೋಪಗಳು ಅಥವಾ ಮಂತ್ರೋಚ್ಚಾರಣೆಯ ದೋಷಗಳಿಗಾಗಿ ದೇವರಲ್ಲಿ ವಿನಮ್ರವಾಗಿ ಕೈಮುಗಿದು ಕ್ಷಮೆಯಾಚಿಸಬೇಕು. ನಾವು ಎಷ್ಟೇ ಶ್ರದ್ಧೆಯಿಂದ ಪೂಜೆ ಮಾಡಿದರೂ, ಮನುಷ್ಯ ಸಹಜವಾಗಿ ತಪ್ಪುಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಈ ಕೊರತೆಗಳನ್ನು ನೀಗಿಸಿ ಪೂಜೆಯ ಪೂರ್ಣ ಫಲವನ್ನು ಪಡೆಯಲು ಕ್ಷಮಾಪಣೆ ಕೇಳುವುದು ಅತ್ಯಗತ್ಯ.

ಇದನ್ನೂ ಓದಿ: ತಿರುಮಲ ಶ್ರೀವಾರಿ ಪವಿತ್ರೋತ್ಸವ: ಆಗಸ್ಟ್ 23ರಿಂದ 25ರವರೆಗೆ ವಿಶೇಷ ಪೂಜೆ; ಹಲವು ಸೇವೆಗಳು ರದ್ದು

ಪೂಜೆಯ ಕೊನೆಯಲ್ಲಿ ಕ್ಷಮೆ ಕೇಳುವ ಸರಿಯಾದ ವಿಧಾನ:

ನಿಮ್ಮ ಮನೆಯಲ್ಲಿ ಆರತಿ ಅಥವಾ ಮುಖ್ಯ ಪೂಜೆ ಪೂರ್ಣಗೊಂಡಾಗ, ಕಣ್ಣುಗಳನ್ನು ಮುಚ್ಚಿ ಶಾಂತ ಮನಸ್ಸಿನಿಂದ ಭಗವಂತನನ್ನು ಧ್ಯಾನಿಸಿ. ನಂತರ ನಿಮ್ಮ ಕೈಯಲ್ಲಿ ಸ್ವಲ್ಪ ಅಕ್ಷತೆ (ಅಕ್ಕಿ ಕಾಳುಗಳು) ಮತ್ತು ಹೂವುಗಳನ್ನು ಇಟ್ಟುಕೊಳ್ಳಿ. ನಿಮ್ಮ ನ್ಯೂನತೆಗಳು ಮತ್ತು ತಪ್ಪುಗಳನ್ನು ಒಪ್ಪಿಕೊಳ್ಳುತ್ತಾ ಕ್ಷಮಾಪಣ ಮಂತ್ರವನ್ನು ಮನಸ್ಸಿನಲ್ಲಿ ಪಠಿಸಿ. ಮಂತ್ರ ಪಠಣದ ನಂತರ, ಕೈಯಲ್ಲಿರುವ ಹೂವುಗಳು ಮತ್ತು ಅಕ್ಷತೆಯನ್ನು ಭಗವಂತನ ಪಾದಗಳಿಗೆ ಅರ್ಪಿಸಿ, ಶಿರಬಾಗಿಸಿ ನಮಸ್ಕರಿಸಿ.

ವಿನಮ್ರತೆಯೇ ಪೂಜೆಯ ನಿಜವಾದ ಸಾರ:

ದೇವರು ನಾವು ನೀಡುವ ದುಬಾರಿ ಕಾಣಿಕೆಗಳು ಅಥವಾ ಸಂಕೀರ್ಣವಾದ ಮಂತ್ರಗಳಿಗಿಂತ ನಮ್ಮ ಭಕ್ತಿ ಮತ್ತು ವಿನಮ್ರತೆಯನ್ನು ಹೆಚ್ಚು ಮೆಚ್ಚುತ್ತಾನೆ ಎಂದು ಧರ್ಮಗ್ರಂಥಗಳು ಸ್ಪಷ್ಟವಾಗಿ ಹೇಳುತ್ತವೆ. ಪೂಜೆಯ ಕೊನೆಯಲ್ಲಿ ಕ್ಷಮೆ ಕೇಳುವ ಈ ಸಣ್ಣ ಕ್ರಿಯೆಯು ನಮ್ಮ ಅಹಂಕಾರವನ್ನು ಬಿಡಲು ಮತ್ತು ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ನಮಗೆ ಕಲಿಸುತ್ತದೆ. ಆದ್ದರಿಂದ, ಮುಂದಿನ ಬಾರಿ ನೀವು ಮನೆಯಲ್ಲಿ ಪೂಜೆ ಮಾಡುವಾಗ, ಕೊನೆಯಲ್ಲಿ ಎರಡು ನಿಮಿಷಗಳನ್ನು ಮೀಸಲಿಟ್ಟು ಭಗವಂತನಲ್ಲಿ ಪ್ರೀತಿಯಿಂದ ಕ್ಷಮೆಗಾಗಿ ಪ್ರಾರ್ಥಿಸಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Independence Day 2026: ಧ್ವಜಾರೋಹಣಕ್ಕೆ ವಿನಾಯಿತಿ ಕೋರಿ ಸಿಎಂಗೆ ಸಚಿವ ಜಮೀರ್ ಪತ್ರ; ಮನವಿಯಂತೆ ಜಮೀರ್​ ಹೆಸರನ್ನ ಕೈಬಿಟ್ಟ ಸಿಎಂ ಡಿ.ಕೆ.ಶಿವಕುಮಾರ್ – Kannada News | Independence Day 2026: Minister Zameer Ahmed Skips Flag Hoisting

ಧ್ವಜಾರೋಹಣಕ್ಕೆ ವಿನಾಯಿತಿ ಕೋರಿ ಸಿಎಂಗೆ ಸಚಿವ ಜಮೀರ್ ಪತ್ರ

ಬೆಂಗಳೂರು, ಆಗಸ್ಟ್ 14: ಸ್ವಾತಂತ್ರ್ಯ ದಿನಾಚರಣೆಯ (Independence Day) ಹಿನ್ನೆಲೆ ವಿಜಯನಗರ ಜಿಲ್ಲೆಯಲ್ಲಿ ಧ್ವಜಾರೋಹಣ ನೆರವೇರಿಸಲು ನಿಯೋಜನೆಗೊಂಡಿದ್ದ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಮಗೆ ಈ ಜವಾಬ್ದಾರಿಯಿಂದ ವಿನಾಯಿತಿ ನೀಡುವಂತೆ ಕೋರಿ ಮುಖ್ಯಮಂತ್ರಿಯವರಿಗೆ ಅಧಿಕೃತ ಪತ್ರ ಬರೆದಿದ್ದಾರೆ. ಜಮೀರ್ ಅವರ ಮನವಿಯನ್ನು ಪುರಸ್ಕರಿಸಿರುವ ಮುಖ್ಯಮಂತ್ರಿಗಳು, ಅವರ ಬದಲಿಗೆ ಸಚಿವ ರಿಜ್ವಾನ್ ಅರ್ಷದ್ ಹಾಗೂ ಸಚಿವ ಬಸವಂತಪ್ಪ ಅವರಿಗೆ ಜವಾಬ್ದಾರಿ ನೀಡಿ ಆದೇಶ ಹೊರಡಿಸಿದ್ದಾರೆ.

ಸಚಿವ ಜಮೀರ್ ಅಹ್ಮದ್ ಖಾನ್ ಬರೆದ ಪತ್ರದಲ್ಲೇನಿದೆ?

“‘ದಿನಾಂಕ 11.08.2026 ರ ಆದೇಶದನ್ವಯ ನನ್ನನ್ನು ವಿಜಯನಗರ ಜಿಲ್ಲೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದ ಹೊಣೆಗಾರಿಕೆಯನ್ನು ನೀಡಿರುವುದು ಸರಿಯಷ್ಟೇ. ಆದರೆ, ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಬಿಎಂಪಿ ಸೇರಿದಂತೆ ಅನೇಕ ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನಸಭೆ ಉಪಚುನಾವಣೆ ಹಾಗೂ ಪಕ್ಷ ಸಂಘಟನೆಯ ದೃಷ್ಟಿಯಿಂದ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಯನ್ನು ನಿಭಾಯಿಸಲು ಸಮಯದ ಅಭಾವ ಇರುತ್ತದೆ. ಆದುದರಿಂದ ನನಗೆ ರಾಜ್ಯದ ಯಾವುದೇ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಯನ್ನು ನೀಡದಂತೆ ತಮ್ಮಲ್ಲಿ ಕೋರುತ್ತೇನೆ.

ಮುಂದುವರೆದಂತೆ ದಿನಾಂಕ: 15.08.2026 ರಂದು ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಹೊಣೆಗಾರಿಕೆ ನೀಡಿದ್ದು, ನಾನು ಹಾಜರಾಗಲು ಸಾಧ್ಯವಾಗದ ಕಾರಣ ಅದರಿಂದ ವಿನಾಯಿತಿ ನೀಡಲು ತಮ್ಮಲ್ಲಿ ಕೋರಲಾಗಿದೆ. ಇನ್ನು ಸದರಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ವರದಿ ಸಲ್ಲಿಸುವ ಹೊಣೆಗಾರಿಕೆಯನ್ನು ನೀಡಲಾಗಿದ್ದು, ಈಗಾಗಲೇ ಈ ಸಂಬಂಧ ವರದಿಯನ್ನು ಸಲ್ಲಿಸಲಾಗಿರುತ್ತದೆ” ಎಂದು ಜಮೀರ್ ಅವರು ತಮ್ಮ ಪತ್ರದಲ್ಲಿ ಸವಿಸ್ತಾರವಾಗಿ ಉಲ್ಲೇಖಿಸಿದ್ದಾರೆ.

ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಮತ್ತು ಹೊಸ ಆದೇಶ

ಸಚಿವ ಜಮೀರ್ ಅಹ್ಮದ್ ಖಾನ್ ಅವರ ಲಿಖಿತ ಮನವಿಗೆ ತಕ್ಷಣವೇ ಸ್ಪಂದಿಸಿರುವ ಮುಖ್ಯಮಂತ್ರಿಯವರು, ಅವರ ಕೋರಿಕೆಯಂತೆ ಧ್ವಜಾರೋಹಣ ನೆರವೇರಿಸುವ ಸಚಿವರ ಪಟ್ಟಿಯಿಂದ ಜಮೀರ್ ಹೆಸರನ್ನು ಕೈಬಿಟ್ಟಿದ್ದಾರೆ. ಅಲ್ಲದೆ ಸ್ವಾತಂತ್ರ್ಯ ದಿನಾಚರಣೆಯಂತಹ ಪ್ರಮುಖ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿಯಾಗದಂತೆ ಪರ್ಯಾಯ ಆದೇಶ ಹೊರಡಿಸಿದ್ದಾರೆ.

ಹೊಸ ಆದೇಶದ ಪ್ರಕಾರ, ಈ ಹಿಂದೆ ಉಡುಪಿ ಜಿಲ್ಲೆಯ ಧ್ವಜಾರೋಹಣಕ್ಕೆ ನಿಯೋಜನೆಗೊಂಡಿದ್ದ ಸಚಿವ ಬಸವಂತಪ್ಪ ಅವರನ್ನು ವಿಜಯನಗರ ಜಿಲ್ಲೆಗೆ ಬದಲಾಯಿಸಲಾಗಿದೆ. ಇನ್ನು ಬಸವಂತಪ್ಪ ಅವರ ಬದಲಾವಣೆಯಿಂದ ತೆರವಾದ ಉಡುಪಿ ಜಿಲ್ಲೆಯ ಧ್ವಜಾರೋಹಣದ ಜವಾಬ್ದಾರಿಯನ್ನು ಸಚಿವ ರಿಜ್ವಾನ್ ಅರ್ಷದ್ ಅವರಿಗೆ ನೀಡಿ ಮುಖ್ಯಮಂತ್ರಿಯವರು ಆದೇಶ ಹೊರಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:14 am, Fri, 14 August 26

Source link

ಮಂಡ್ಯದ ಆರತಿ ಉಕ್ಕಡದಲ್ಲಿ ಶಾಸಕ ಸುರೇಶ್‌ಗೌಡ ಪುತ್ರಿ ದರ್ಪ: ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ – Kannada News | Srirangapatna Temple Assault: MLA B. Sureshgouda’s Daughter Booked for Attacking PSI

ಮಂಡ್ಯ, ಆ.14: ಶಾಸಕ ಪುತ್ರಿ ದೇವಸ್ಥಾನದಲ್ಲಿ ಕರ್ತವ್ಯನಿರತ ಮಹಿಳಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (PSI) ಮೇಲೆ ಹಲ್ಲೆ ನಡೆಸಿ, ಕಪಾಳಮೋಕ್ಷ ಮಾಡಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಗ್ರಾಮದಲ್ಲಿ ನಡೆದಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ ವಿರುದ್ಧ ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

ಬುಧವಾರ (ಆ.12) ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಆರತಿ ಉಕ್ಕಡದ ಪ್ರಸಿದ್ಧ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ ಕೂಡ ದೇವಸ್ಥಾನಕ್ಕೆ ಬಂದಿದ್ದರು. ಪ್ರಭಾವ ಬಳಸಿ ವಿಐಪಿ ಸಾಲಿನಲ್ಲಿ ಪ್ರವೇಶ ಪಡೆದ ಐಶ್ವರ್ಯ, ಬಳಿಕ ನೇರವಾಗಿ ದೇವರ ಗರ್ಭಗುಡಿಯೊಳಗೆ ಪ್ರವೇಶಿಸಲು ಯತ್ನಿಸಿದ್ದಾರೆ.

ಈ ವೇಳೆ ಸ್ಥಳದಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಕ್ಯಾತನಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಸವಿತಾ, “ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ, ಈಗ ಗರ್ಭಗುಡಿಯೊಳಗೆ ಹೋಗಲು ಸಾಧ್ಯವಿಲ್ಲ” ಎಂದು ತಡೆದಿದ್ದಾರೆ. ಅದೇ ಸಮಯದಲ್ಲಿ ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಲ್ ಇನ್ಸ್‌ಪೆಕ್ಟರ್ (CI) ಲಕ್ಷ್ಮಿ ಅವರು ಗರ್ಭಗುಡಿಯ ಕಡೆಗೆ ತೆರಳಿದ್ದಾರೆ. ಇದನ್ನು ಗಮನಿಸಿದ ಐಶ್ವರ್ಯ, “ಅವರನ್ನು ಹೇಗೆ ಬಿಟ್ಟಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಪಿಎಸ್‌ಐ ಸವಿತಾ, “ಅವರು ನಮ್ಮ ಸರ್ಕಲ್ ಇನ್ಸ್‌ಪೆಕ್ಟರ್, ಡ್ಯೂಟಿಯಲ್ಲಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿಯಲ್ಲಿ ದೇಶವಿರೋಧಿ ಕೃತ್ಯ ಎಸಗುತ್ತಿದ್ದ ಮಹಮ್ಮದ್ ಸಮೀರ್ ಬಂಧನ: ತನಿಖೆ ವೇಳೆ ಬೆಚ್ಚಿಬಿದ್ದ ಪೊಲೀಸ್ ಅಧಿಕಾರಿಗಳು

ಆಗ “ನನಗೂ ಒಳಗಡೆ ಹೋಗಲು ಬಿಡು, ನಾನು ಹೋಗಲೇಬೇಕು” ಎಂದು ಪಟ್ಟು ಹಿಡಿದ ಐಶ್ವರ್ಯ ಹಾಗೂ ಪಿಎಸ್‌ಐ ನಡುವೆ ತೀವ್ರ ವಾಗ್ವಾದ ನಡೆದಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಐಶ್ವರ್ಯ ಅವರು ಕರ್ತವ್ಯನಿರತ ಪಿಎಸ್‌ಐ ಸವಿತಾ ಅವರ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಶಾಸಕ ಸುರೇಶ್‌ಗೌಡ ಪುತ್ರಿ ಐಶ್ವರ್ಯ ವಿರುದ್ಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನುನ ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುದ್ದಾಡಿದ ಮೇಕೆಯೇ ಮಧ್ಯಾಹ್ನ ಬಿರಿಯಾನಿ; ಸತ್ಯ ತಿಳಿದು ವಾಂತಿ ಮಾಡಿಕೊಂಡ ನಟಿ ಅನುಪಮಾ – Kannada News | Dhruv Vikram Reveals Shocking Set Incident: Anupama Parameswaran Reacts On Bison Kaalamaadan Sets

ತಮಿಳಿನ ಬಹುನಿರೀಕ್ಷಿತ ‘ಬೈಸನ್ ಕಾಳಮಾಡನ್’ ಸಿನಿಮಾದಲ್ಲಿ ನಟ ಧ್ರುವ ವಿಕ್ರಮ್ ಹಾಗೂ ನಟಿ ಅನುಪಮಾ ಪರಮೇಶ್ವರನ್ ಜೋಡಿಯಾಗಿ ನಟಿಸಿದ್ದರು. ಈ ಸಿನಿಮಾ 2025ರಲ್ಲಿ ರಿಲೀಸ್ ಆಯಿತು. ಆ ಸಮಯದಲ್ಲಿ ನಡೆದ ಚಾಟ್ ಶೋ ಒಂದರಲ್ಲಿ ಪಾಲ್ಗೊಂಡಿದ್ದ ಈ ಜೋಡಿ, ಶೂಟಿಂಗ್ ಸೆಟ್‌ನಲ್ಲಿ ನಡೆದಿದ್ದ ಅತ್ಯಂತ ತಮಾಷೆಯ ಹಾಗೂ ಆಘಾತಕಾರಿ ಘಟನೆಯೊಂದನ್ನು ನೆನಪಿಸಿಕೊಂಡಿತ್ತು. ಆ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ.

ಸೆಟ್‌ನಲ್ಲಿ ನಡೆದಿದ್ದೇನು?

ಸಂದರ್ಶನದಲ್ಲಿ ಮಾತನಾಡಿದ ಧ್ರುವ ವಿಕ್ರಮ್, ‘ನಟಿ ಅನುಪಮಾ ಸೆಟ್‌ನಲ್ಲಿ ಮೇಕೆ ಮರಿಯೊಂದರ ಜೊತೆ ಆಟವಾಡುತ್ತಿದ್ದರು. ಆದರೆ ಅದೇ ದಿನ ಸಂಜೆ ಅವರು ಅದೇ ಮೇಕೆಯ ಮಾಂಸವನ್ನು ತಿಂದರು’ ಎಂದು ತಮಾಷೆಯಾಗಿ ಕಾಲೆಳೆದರು.

ಇದಕ್ಕೆ ಸ್ಪಷ್ಟನೆ ನೀಡಿದ ನಟಿ ಅನುಪಮಾ ಪರಮೇಶ್ವರನ್, ‘ಶೂಟಿಂಗ್ ಸೆಟ್‌ನಲ್ಲಿ ಮೇಕೆ ಮರಿಗಳಿದ್ದವು, ನಾನು ಅವುಗಳ ಜೊತೆ ಆಟವಾಡುತ್ತಿದ್ದೆ. ಮಧ್ಯಾಹ್ನದ ಊಟಕ್ಕೆ ನನಗೆ ಮಟನ್ ಬಿರಿಯಾನಿ ನೀಡಲಾಗಿತ್ತು. ಎರಡು ತುತ್ತು ತಿಂದ ನಂತರ ನನ್ನ ಅಸಿಸ್ಟೆಂಟ್ ಬಂದು ‘ಮ್ಯಾಮ್, ನೀವು ಬೆಳಿಗ್ಗೆ ಆಟವಾಡುತ್ತಿದ್ದರಲ್ಲ ಅದೇ ಮೇಕೆ ಬಿರಿಯಾನಿ ಇದು ಎಂದು ನಗುತ್ತಾ ಹೇಳಿದರು’ಎಂದು ಘಟನೆಯನ್ನು ವಿವರಿಸಿದರು.

ಅಂದಿನಿಂದ ಮಟನ್ ತಿಂದಿಲ್ಲ!

ಅಸಿಸ್ಟೆಂಟ್ ಹೇಳಿದ ಮಾತಿನಿಂದ ದಿಗ್ಭ್ರಮೆಗೊಂಡ ಅನುಪಮಾ, ತಕ್ಷಣವೇ ವಾಂತಿ ಮಾಡಿಕೊಂಡರಂತೆ. ‘ಆ ಘಟನೆ ನನಗೆ ತುಂಬಾ ಆಘಾತ ನೀಡಿತು. ಆ ಘಟನೆಯ ನಂತರ ನಾನು ಇದುವರೆಗೂ ಮತ್ತೆ ಎಂದಿಗೂ ಮಟನ್ ಮುಟ್ಟಿಲ್ಲ’ ಎಂದು ಅನುಪಮಾ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ‘ನನ್ನ ಸೋಶಿಯಲ್ ಮೀಡಿಯಾ, ನಾನು ಏನು ಬೇಕಾದ್ರೂ ಪೋಸ್ಟ್ ಮಾಡ್ತೀನಿ’; ಅನುಪಮಾ ಪರಮೇಶ್ವರನ್

ಅನುಪಮಾ ಪರಮೇಶ್ವರನ್ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಅವರು ಬ್ರೇಕಪ್ ಬಗ್ಗೆ ಹಾಗೂ ಟಾಕ್ಸಿಕ್ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಈ ಮೊದಲು ಧ್ರುವ್ ಜೊತೆ ಅವರು ರಿಲೇಶನ್​ಶಿಪ್​ನಲ್ಲಿ ಇದ್ದರು ಎಂದು ಕೂಡ ಹೇಳಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಲಬುರಗಿಯಲ್ಲಿ ದೇಶವಿರೋಧಿ ಕೃತ್ಯ ಎಸಗುತ್ತಿದ್ದ ಮಹಮ್ಮದ್ ಸಮೀರ್ ಬಂಧನ: ತನಿಖೆ ವೇಳೆ ಬೆಚ್ಚಿಬಿದ್ದ ಪೊಲೀಸ್ ಅಧಿಕಾರಿಗಳು – Kannada News | Pakistan Terror Ties: Kalaburagi Police Nab Man for Anti National Digital Activities

ಕಲಬುರಗಿ, ಆ.14: ಸಾಮಾಜಿಕ ಜಾಲತಾಣಗಳಲ್ಲಿ ದೇಶವಿರೋಧಿ ಪೇಜ್‌ಗಳು ಹಾಗೂ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಮಹಮ್ಮದ್ ಸಮೀರ್ (23) ಎಂಬಾತನನ್ನು ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದರು. ಮೂಲತಃ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯವನಾದ ಈತ, ಕಳೆದ ಕೆಲವು ತಿಂಗಳುಗಳಿಂದ ಕಲಬುರಗಿಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆರೋಪಿಯ ಮೊಬೈಲ್ ಫೋನ್ ಪರಿಶೀಲನೆ ನಡೆಸಿದ ವೇಳೆ ಬೆಚ್ಚಿಬೀಳಿಸುವ ರೋಚಕ ಹಾಗೂ ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬಂದಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಆರೋಪಿ ಸಮೀರ್ ಭಾರತದಲ್ಲಿದ್ದುಕೊಂಡೇ ವಿದೇಶಿ ಮೂಲದ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ವಾಟ್ಸಪ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನು ನಿರ್ವಹಿಸುತ್ತಿದ್ದ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಿಗೆ ಸೇರಿದ ಅಬೀದ್ ಜಟ್ ಹಾಗೂ ಶಹಜಾದ್ ಭಟ್ಟಿ ಎಂಬ ಹ್ಯಾಂಡ್ಲರ್‌ಗಳ ಜೊತೆ ಈತ ನಿರಂತರ ಸಂಪರ್ಕದಲ್ಲಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈತ ‘ವೆಮನ್ ಮತ್ತು ಜಟ್ 333’ ಹಾಗೂ ‘ರಾಣಾ ಭಾಯ್ 333’ ಸೇರಿದಂತೆ ಹಲವು ದೇಶವಿರೋಧಿ ಮತ್ತು ಮತೀಯ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ವಾಟ್ಸಪ್ ಗ್ರೂಪ್‌ಗಳಲ್ಲಿ ಸಕ್ರಿಯ ಸದಸ್ಯನಾಗಿದ್ದ.

ಪೊಲೀಸರು ಸಮೀರ್‌ನ ಮೊಬೈಲ್ ವಶಪಡಿಸಿಕೊಂಡು ಡಿಜಿಟಲ್ ಫೋರೆನ್ಸಿಕ್ ತನಿಖೆಗೆ ಒಳಪಡಿಸಿದಾಗ, ಭಾರತ ವಿರೋಧಿ ಪ್ರಚೋದನಾತ್ಮಕ ವಿಡಿಯೋಗಳು ಪತ್ತೆಯಾಗಿವೆ. ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ನಕ್ಷೆಯಿಂದ ಹೊರಗಿಟ್ಟು, ಅದನ್ನು ಪಾಕಿಸ್ತಾನದ ಭೂಭಾಗಕ್ಕೆ ಜೋಡಿಸಿ ಚಿತ್ರಿಸಲಾಗಿರುವ ತಂಟೆಯುಕ್ತ ವಿಡಿಯೋಗಳು ಈತನ ಮೊಬೈಲ್‌ನಲ್ಲಿ ಪತ್ತೆಯಾಗಿವೆ. ದೇಶದ ಅಖಂಡತೆಗೆ ಧಕ್ಕೆ ತರುವ ಮತ್ತು ಸಮಾಜದಲ್ಲಿ ಶಾಂತಿ ಕದಡುವಂತಹ ವಿಷಯಗಳನ್ನು ಈತ ಶೇರ್ ಮಾಡುತ್ತಿದ್ದ.

ಇದನ್ನೂ ಓದಿ: ಪಾಕಿಸ್ತಾನ, ಐಸಿಸ್ ಜತೆ ನಂಟು: ಕಲಬುರಗಿಯಲ್ಲಿ ಇಬ್ಬರು ಶಂಕಿತರು ಪೊಲೀಸ್​ ವಶಕ್ಕೆ

ಕಲಬುರಗಿ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್‌ಡಿ ಅವರ ಮಾರ್ಗದರ್ಶನದಲ್ಲಿ ತಾಂತ್ರಿಕ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಮೂಲಕ ಈ ಜಾಲವನ್ನು ಪತ್ತೆಹಚ್ಚಲಾಗಿದೆ. ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 113(3) (ಭಯೋತ್ಪಾದನಾ ಕೃತ್ಯ) ಹಾಗೂ ಸೆಕ್ಷನ್ 197 (ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಪ್ರಕರಣವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿರುವುದರಿಂದ ಕೇಂದ್ರೀಯ ತನಿಖಾ ಸಂಸ್ಥೆಗಳಿಗೂ ಮಾಹಿತಿ ರವಾನಿಸಲಾಗಿದ್ದು, ಹೆಚ್ಚಿನ ವಿಚಾರಣೆ ಕಾಯ್ದಿರಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅಮೆರಿಕಾ ಅಮೆರಿಕಾ 2’ ವೇದಿಕೆ ಮೇಲೆ ‘ಯಾವ ಮೋಹನ’ ಹಾಡಿನ ಬಗ್ಗೆ ನಾಗತಿಹಳ್ಳಿ ಮಾತು – Kannada News | America America 2 Press Meet: Director Nagathihalli Chandrashekhar Remembers Yava Mohana Song

‘ಅಮೆರಿಕಾ ಅಮೆರಿಕಾ 2’ ಚಿತ್ರ ಸಿದ್ಧವಾಗಿದೆ. ಅಮೆರಿಕಾ ಅಮೆರಿಕಾ ಹಿಟ್ ಆದ ಬಳಿಕ ತೆರೆಗೆ ಬರುತ್ತಿರುವ ಸಿನಿಮಾ ಇದು. ಈ ಚಿತ್ರವನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರೇ ನಿರ್ದೇಶನ ಮಾಡಿದ್ದಾರೆ. ಅವರು ಮೊದಲ ಚಿತ್ರದ ಹಾಡಿನ ಬಗ್ಗೆ ಮಾತನಾಡಿದ್ದಾರೆ. ‘ಯಾವ ಮೋಹನ ಹಾಡು ಬೇರೆ ಬೇರೆ ಅರ್ಥವನ್ನು ಕೊಡುವ ಗೀತೆ. ಅದನ್ನು ಗೋಪಾಲಕೃಷ್ಣ ಅಡಿಗರು ನನಗೆ ಬೇಕಾಗಬಹುದು ಎಂಬ ರೀತಿ ಬರೆದಿಟ್ಟು ಹೋದಂತೆ ಇದೆ. ನೂರು ಜನ್ಮಕೂ ಹಿಟ್ ಆದಷ್ಟೇ ಯಾವ ಮೋಹನ ಹಾಡು ಹಿಟ್ ಆಗಿತ್ತು’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕುದುರೆಮುಖದಲ್ಲಿ ಸ್ವತಂತ್ರ ದಿನಾಚರಣೆ ವಿಶೇಷ ಆಫ್ ರೋಡ್ ಸಾಹಸಯಾತ್ರೆ: ಆಯೋಜಕರಿಗೆ ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ – Kannada News | Kudremukh Off Road Drive: Karnataka Govt Warns Organizers Against I Day Adventure Event

ಚಿಕ್ಕಮಗಳೂರು, ಆಗಸ್ಟ್ 14: ಜಿಲ್ಲೆಯ ಕುದುರೆಮುಖದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ‘ಆಫ್-ರೋಡ್ ಅಡ್ವೆಂಚರ್ ಡ್ರೈವ್’ (Off-road Adventure Drive) ಸಾಹಸಯಾತ್ರೆಗೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಈವೆಂಟ್‌ನಿಂದಾಗಿ ಗ್ರಾಮೀಣ ರಸ್ತೆಗಳಿಗೆ ಹಾನಿಯಾದರೂ ಅಥವಾ ಜಲಮೂಲಗಳು ಕಲುಷಿತಗೊಂಡರೂ ಆಯೋಜಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಪರಿಸರ ಸಚಿವ ಈಶ್ವರ್ ಖಂಡ್ರೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈಶ್ವರ್ ಖಂಡ್ರೆ ಅವರು ಲಿಖಿತ ನಿರ್ದೇಶನ

ಬೆಂಗಳೂರು ಮೂಲದ ಸಾಹಸ ಹವ್ಯಾಸಿಗಳ ಗುಂಪೊಂದು ಕುದುರೆಮುಖ ಭಾಗದಲ್ಲಿ ಈ ಆಫ್-ರೋಡ್ ಚಾಲನಾ ಈವೆಂಟ್ ಅನ್ನು ಆಯೋಜಿಸಿದೆ ಎನ್ನಲಾಗಿದೆ. ಮಳೆಯಿಂದಾಗಿ ಈಗಾಗಲೇ ಕೆಸರಾಗಿರುವ ಕಡಿದಾದ ಗುಡ್ಡಗಾಡು ಪ್ರದೇಶಗಳು, ನದಿ ಮತ್ತು ತೊರೆಗಳನ್ನು ದಾಟುವಂತಹ ಸಾಹಸ ಕೃತ್ಯಗಳು ಇದರಲ್ಲಿ ಸೇರಿವೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ (CEO) ಸಚಿವ ಈಶ್ವರ್ ಖಂಡ್ರೆ ಅವರು ಲಿಖಿತ ನಿರ್ದೇಶನ ನೀಡಿದ್ದಾರೆ. ಈ ಸಾಹಸ ಕೃತ್ಯವು ಯಾವುದೇ ಕಾರಣಕ್ಕೂ ಪರಿಸರಕ್ಕೆ ಮಾರಕವಾಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ. ಪ್ರಮುಖವಾಗಿ ಕುಡಿಯುವ ನೀರಿನ ಮೂಲಗಳಾಗಿರುವ ನದಿಗಳು, ತೊರೆಗಳು ಮತ್ತು ನಾಲೆಗಳಿಗೆ ಇಂತಹ ಆಫ್-ರೋಡ್ ವಾಹನಗಳು ಪ್ರವೇಶಿಸದಂತೆ ತಡೆಯಲು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ.

ಪರಿಸರ ರಕ್ಷಣೆ ಬಗ್ಗೆ ಸಚಿವರ ಆದೇಶ

ಮಾರ್ಪಾಡು ಮಾಡಲಾದ (Modified) ಮತ್ತು ದೊಡ್ಡ ಆಫ್-ರೋಡ್ ಟೈರ್‌ಗಳನ್ನು ಹೊಂದಿರುವ ಇಂತಹ ವಾಹನಗಳನ್ನು ಮಳೆಯಿಂದ ತೇವಗೊಂಡಿರುವ ಗ್ರಾಮೀಣ ರಸ್ತೆಗಳಲ್ಲಿ ಅತಿ ವೇಗವಾಗಿ ಮತ್ತು ಆಕ್ರಮಣಕಾರಿಯಾಗಿ ಚಲಾಯಿಸುವುದರಿಂದ ರಸ್ತೆಗಳು ಸಂಪೂರ್ಣವಾಗಿ ಹಾಳಾಗುತ್ತವೆ. ಅಷ್ಟೇ ಅಲ್ಲದೆ, ಇದು ತೀವ್ರ ಮಣ್ಣಿನ ಸವೆತಕ್ಕೂ (Soil Erosion) ಕಾರಣವಾಗುತ್ತದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ.

ಜೊತೆಗೆ, ಇಂತಹ ಚಟುವಟಿಕೆಗಳಿಂದ ಉಂಟಾಗುವ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯವು ಸ್ಥಳೀಯ ವನ್ಯಜೀವಿಗಳಿಗೆ ತೊಂದರೆ ಉಂಟುಮಾಡಲಿದೆ. ಸಂವಿಧಾನದ ವಿಧಿ 51A(g) ಅನ್ನು ಉಲ್ಲೇಖಿಸಿರುವ ಸಚಿವರು, ಅರಣ್ಯ, ನದಿ, ಸರೋವರ ಹಾಗೂ ವನ್ಯಜೀವಿಗಳನ್ನು ಒಳಗೊಂಡ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ ಎಂದು ನೆನಪಿಸಿದ್ದಾರೆ. ಈ ಹಿಂದೆ ಹಾಸನದ ಸಕಲೇಶಪುರ ಹಾಗೂ ಚಿಕ್ಕಮಗಳೂರಿನ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಇಂತಹ ಆಫ್-ರೋಡಿಂಗ್ ನಡೆಸುತ್ತಿದ್ದವರ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮ ಜರುಗಿಸಿ, 40ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಿತ್ತು ಎಂಬುದು ಇಲ್ಲಿ ಗಮನಾರ್ಹ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gemstones: ನೀವು ಧರಿಸಿದ ರತ್ನ ತನ್ನ ಪರಿಣಾಮವನ್ನು ತೋರಿಸಲು ಎಷ್ಟು ದಿನ ತೆಗೆದುಕೊಳ್ಳುತ್ತದೆ ಗೊತ್ತೇ? – Kannada News | Astrological Gemstones: How Long Before Navaratna Effects Start?

ವೈದಿಕ ಜ್ಯೋತಿಷ್ಯದಲ್ಲಿ ಮಾನವ ನಾಗರಿಕತೆಯ ಆರಂಭದಿಂದಲೂ ರತ್ನಗಳಿಗೆ ಅತ್ಯಂತ ಪ್ರಮುಖ ಹಾಗೂ ಪವಿತ್ರವಾದ ಸ್ಥಾನ ನೀಡಲಾಗಿದೆ. ರತ್ನಗಳು ಕೇವಲ ಆಭರಣಗಳಿಗಾಗಿ ಬಳಸುವ ಸುಂದರವಾದ, ಹೊಳೆಯುವ ಕಲ್ಲುಗಳಷ್ಟೇ ಅಲ್ಲ; ಅವು ಅಪಾರವಾದ ಬ್ರಹ್ಮಾಂಡದ ಶಕ್ತಿಯನ್ನು ಹೊಂದಿರುವ ಶಕ್ತಿ ಮೂಲಗಳು ಎಂದು ನಂಬಲಾಗಿದೆ. ನಮ್ಮ ಜೀವನದ ಮೇಲೆ ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾದ ಒಂಬತ್ತು ಗ್ರಹಗಳು ಆಳವಾದ ಪ್ರಭಾವ ಬೀರುತ್ತವೆ. ಈ ಒಂಬತ್ತು ಗ್ರಹಗಳನ್ನು ಪ್ರತಿನಿಧಿಸುವ ‘ನವರತ್ನಗಳು’ ಸರಿಯಾದ ಬೆರಳಿಗೆ ಧರಿಸಿದಾಗ, ಧರಿಸಿದವರನ್ನು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸಿ, ಅವರಲ್ಲಿ ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತವೆ.

ಆದರೆ, ರತ್ನವನ್ನು ಧರಿಸಿದ ತಕ್ಷಣವೇ ಅದರ ಸಂಪೂರ್ಣ ಫಲಿತಾಂಶ ಸಿಗುತ್ತದೆಯೇ ಅಥವಾ ಪ್ರತಿಯೊಂದು ರತ್ನವೂ ತನ್ನ ಪ್ರಭಾವವನ್ನು ತೋರಿಸಲು ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತದೆಯೇ ಎಂಬ ಗೊಂದಲ ಹಲವರಲ್ಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ರತ್ನ ತನ್ನ ಪರಿಣಾಮವನ್ನು ತೋರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

ಶನಿ, ಕೇತು ಮತ್ತು ಚಂದ್ರನ ರತ್ನಗಳು (ಕ್ಷಿಪ್ರ ಪರಿಣಾಮ):

ಕೆಲವು ರತ್ನಗಳು ಧರಿಸಿದ ಕೆಲವೇ ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ತಮ್ಮ ಪ್ರಭಾವವನ್ನು ತೋರಿಸಲು ಪ್ರಾರಂಭಿಸುತ್ತವೆ. ಶನಿ ಗ್ರಹಕ್ಕೆ ಸಂಬಂಧಿಸಿದ ನೀಲಮಣಿ ಅತ್ಯಂತ ವೇಗವಾಗಿ ಅಂದರೆ ಕೇವಲ 24 ರಿಂದ 72 ಗಂಟೆಗಳಲ್ಲಿ ತನ್ನ ಪರಿಣಾಮವನ್ನು ತೋರಿಸುತ್ತದೆ. ಅದೇ ರೀತಿ ಕೇತುವಿನ ರತ್ನವಾದ ಬೆಕ್ಕಿನ ಕಣ್ಣು (Cat’s Eye) 24 ರಿಂದ 48 ಗಂಟೆಗಳಲ್ಲಿ ತನ್ನ ಶಕ್ತಿಯನ್ನು ಅನುಭವಕ್ಕೆ ತರುತ್ತದೆ. ಇನ್ನು ಮನಸ್ಸಿನ ಕಾರಕನಾದ ಚಂದ್ರನಿಗೆ ಸಂಬಂಧಿಸಿದ ಮುತ್ತು ತನ್ನ ಪ್ರಭಾವ ಬೀರಿ ಫಲಿತಾಂಶ ನೀಡಲು 2 ರಿಂದ 3 ದಿನಗಳ ಕಾಲ ತೆಗೆದುಕೊಳ್ಳುತ್ತದೆ.

ಬುಧ ಮತ್ತು ಮಂಗಳನ ರತ್ನಗಳು (ಮಧ್ಯಮ ಸಮಯ):

ಬುಧ ಗ್ರಹದ ಪ್ರಭಾವ ಹೆಚ್ಚಿಸುವ ಪಚ್ಚೆ (Emerald) ರತ್ನವು ತನ್ನ ಕಾರ್ಯವನ್ನು ಪ್ರಾರಂಭಿಸಲು ಸಾಮಾನ್ಯವಾಗಿ 5 ರಿಂದ 7 ದಿನಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ಅದೇ ರೀತಿ ಧೈರ್ಯ ಮತ್ತು ಶೌರ್ಯದ ಸಂಕೇತವಾದ ಮಂಗಳ ಗ್ರಹಕ್ಕೆ ಸಂಬಂಧಿಸಿದ ಹವಳ (Coral) ರತ್ನವು ಧರಿಸಿದ 7 ರಿಂದ 10 ದಿನಗಳ ಒಳಗೆ ತನ್ನ ಜ್ಯೋತಿಷ್ಯ ಪರಿಣಾಮಗಳನ್ನು ತೋರಿಸಲು ಪ್ರಾರಂಭಿಸುತ್ತದೆ.

ಗುರು, ಸೂರ್ಯ, ಶುಕ್ರ ಮತ್ತು ರಾಹುವಿನ ರತ್ನಗಳು (ದೀರ್ಘಾವಧಿ):

ಕೆಲವು ರತ್ನಗಳ ಸಕಾರಾತ್ಮಕ ಪರಿಣಾಮವನ್ನು ಸರಿಯಾಗಿ ಗ್ರಹಿಸಲು ಕನಿಷ್ಠ ಒಂದು ವಾರದಿಂದ ಹದಿನೈದು ದಿನಗಳ ಸಮಯ ಬೇಕಾಗುತ್ತದೆ. ಜ್ಞಾನ ಮತ್ತು ಗುರು ಗ್ರಹಕ್ಕೆ ಸಂಬಂಧಿಸಿದ ಪುಷ್ಯರಾಗ (Sapphire) ಹಾಗೂ ಆತ್ಮಕಾರಕ ಸೂರ್ಯನ ರತ್ನವಾದ ಮಾಣಿಕ್ಯ (Ruby) ತಮ್ಮ ಪರಿಣಾಮ ತೋರಿಸಲು 7 ರಿಂದ 15 ದಿನಗಳನ್ನು ತೆಗೆದುಕೊಳ್ಳುತ್ತವೆ. ಶುಕ್ರ ಗ್ರಹದ ರತ್ನವಾದ ವಜ್ರ (Diamond) ಮತ್ತು ರಾಹು ಗ್ರಹಕ್ಕೆ ಸಂಬಂಧಿಸಿದ ಗೋಮೇಧಿಕ (Hessonite) ರತ್ನಗಳು ತಮ್ಮ ಪೂರ್ಣ ಪ್ರಮಾಣದ ಸಕಾರಾತ್ಮಕ ಪ್ರಭಾವವನ್ನು ತೋರಿಸಲು 10 ರಿಂದ 15 ದಿನಗಳ ಕಾಲ ಸಮಯ ತೆಗೆದುಕೊಳ್ಳುತ್ತವೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ರತ್ನವು ನಿಮ್ಮ ಮೇಲೆ ಕೆಲಸ ಮಾಡುತ್ತಿದೆ ಎಂದು ತಿಳಿಯುವುದು ಹೇಗೆ?

ನೀವು ಜ್ಯೋತಿಷಿಯ ಸರಿಯಾದ ಸಲಹೆಯ ಮೇರೆಗೆ ರತ್ನವನ್ನು ಧರಿಸಿದಾಗ, ಅದು ನಿಮ್ಮ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದೆ ಎಂಬುದನ್ನು ಕೆಲವು ಪ್ರತ್ಯಕ್ಷ ಚಿಹ್ನೆಗಳ ಮೂಲಕ ಗುರುತಿಸಬಹುದು. ಮೊದಲನೆಯದಾಗಿ, ನಿಮ್ಮ ಮನಸ್ಸು ಶಾಂತವಾಗಲು ಪ್ರಾರಂಭಿಸುತ್ತದೆ ಮತ್ತು ಅನಗತ್ಯ ಒತ್ತಡ ಹಾಗೂ ಆತಂಕಗಳು ಕಡಿಮೆಯಾಗುತ್ತವೆ. ಧನಾತ್ಮಕ ಶಕ್ತಿಯ ಪ್ರಭಾವದಿಂದಾಗಿ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ.

ಇದರ ಜೊತೆಗೆ, ಯಾವುದೇ ಕಷ್ಟಕರ ಸಂದರ್ಭಗಳಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಿಮಗೆ ಸುಲಭವೆನಿಸುತ್ತದೆ. ನಿಮ್ಮ ಯೋಚಿಸುವ, ಅರ್ಥಮಾಡಿಕೊಳ್ಳುವ ಮತ್ತು ಕಾರ್ಯನಿರ್ವಹಿಸುವ ಸಾಮರ್ಥ್ಯದಲ್ಲಿ ಗಮನಾರ್ಹವಾದ ಧನಾತ್ಮಕ ಬದಲಾವಣೆಗಳು ಕಂಡುಬಂದರೆ, ಆ ರತ್ನವು ತನ್ನ ಸಕಾರಾತ್ಮಕ ಶಕ್ತಿಯನ್ನು ನೀಡಲು ಪ್ರಾರಂಭಿಸಿದೆ ಎಂದರ್ಥ.

ಪ್ರಮುಖ ಸೂಚನೆ: ರತ್ನಗಳು ಅತ್ಯಂತ ಶಕ್ತಿಶಾಲಿಯಾಗಿರುವುದರಿಂದ, ಅರ್ಹ ಜ್ಯೋತಿಷಿಗಳ ಸಲಹೆ ಮತ್ತು ಜಾತಕ ವಿಶ್ಲೇಷಣೆ ಇಲ್ಲದೆ ಎಂದಿಗೂ ಯಾವುದೇ ರತ್ನವನ್ನು ಧರಿಸಬಾರದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:00 am, Fri, 14 August 26

Source link

ನೀರಿನ ಹಕ್ಕು ಕಸಿದರೆ ಸುಮ್ಮನಿರಲ್ಲ: ಭಾರತದ ವಿರುದ್ಧ ಮತ್ತೆ ವಿಷ ಕಾರಿದ ಶೆಹಬಾಜ್ ಷರೀಫ್ – Kannada News | Indus Waters Treaty Dispute: Pakistan Threatens India Amidst IWT Status Row

ಇಸ್ಲಾಮಾಬಾದ್, ಆ.14: ಸಿಂಧೂ ನದಿ ನೀರು ಹಂಚಿಕೆ ಒಪ್ಪಂದಕ್ಕೆ (Indus Waters Treaty) ಸಂಬಂಧಿಸಿದಂತೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಭಾರತಕ್ಕೆ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. “ಪಾಕಿಸ್ತಾನಕ್ಕೆ ಸೇರಬೇಕಾದ ನೀರಿನ ಪ್ರತಿಯೊಂದು ಹನಿಯೂ ನಮಗೆ ‘ರೆಡ್ ಲೈನ್’ಿದ್ದಂತೆ. ನಮ್ಮ ನೀರಿನ ಹಕ್ಕನ್ನು ಕಸಿಯಲು ಯತ್ನಿಸಿದರೆ ನೇರ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.

ಗುರುವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಷರೀಫ್, ಪಾಕಿಸ್ತಾನವು ಶಾಂತಿಯನ್ನು ಬಯಸುತ್ತದೆ. ಆದರೆ ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಯಾವುದೇ ಪ್ರಯತ್ನ ನಡೆದರೂ ಪ್ರತ್ಯುತ್ತರ ನೀಡಲಾಗುವುದು ಎಂದು ಹೇಳಿದ್ದಾರೆ. 2025ರ ಮೇ ತಿಂಗಳಿನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಏರ್ಪಟ್ಟಿದ್ದ ಸೀಜ್‌ಫೈರ್ (ಯುದ್ಧವಿರಾಮ) ಒಪ್ಪಂದದಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶೆಹಬಾಜ್ ಷರೀಫ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ರಾಜತಾಂತ್ರಿಕ ಮಾತುಕತೆಗಳ ನಂತರ ಭಾರತ ಹಾಗೂ ಪಾಕಿಸ್ತಾನ ತಕ್ಷಣದ ಯುದ್ಧವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಮೇ 2025ರಲ್ಲಿ ಟ್ರಂಪ್ ಘೋಷಿಸಿದ್ದರು. ಅಮೆರಿಕದ ನಾಯಕತ್ವ ಮತ್ತು ಸಕ್ರಿಯ ಪಾತ್ರಕ್ಕೆ ಷರೀಫ್ ಧನ್ಯವಾದ ಅರ್ಪಿಸಿದ್ದರು. ಆದರೆ ಭಾರತವು ಮೂರನೇ ವ್ಯಕ್ತಿ ಅಥವಾ ದೇಶದ ಮಧ್ಯಸ್ಥಿಕೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ಎರಡೂ ದೇಶಗಳ ಮಿಲಿಟರಿ ಸೇನೆಗಳ ನಡುವಿನ ನೇರ ಮಾತುಕತೆಯ ಮೂಲಕವೇ ಯುದ್ಧವಿರಾಮ ತೀರ್ಮಾನಕ್ಕೆ ಬರಲಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಜೈಲಿನಲ್ಲಿದ್ದ ಇಮ್ರಾನ್ ಖಾನ್ ನಿಜವಾಗಿಯೂ ಸತ್ತಿದ್ದಾರಾ? ಕೊನೆಗೂ ಮೌನ ಮುರಿದ ಪಾಕಿಸ್ತಾನ

ಕಾಶ್ಮೀರ ವಿಷಯ ಹಾಗೂ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಷರೀಫ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತವು 2025ರ ಏಪ್ರಿಲ್‌ನಲ್ಲಿ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ತಡೆಹಿಡಿಯಲಾಗಿದೆ (in abeyance) ಎಂದು ಅಧಿಕೃತವಾಗಿ ಪ್ರಕಟಿಸಿತ್ತು. ಆದರೆ ಪಾಕಿಸ್ತಾನವು ಈ ಒಪ್ಪಂದವು ಕಾನೂನುಬದ್ಧವಾಗಿ ಇಂದಿಗೂ ಜಾರಿಯಲ್ಲಿದೆ ಎಂದು ವಾದಿಸುತ್ತಿದ್ದು, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ವಿಷಯವನ್ನು ಎತ್ತುತ್ತಲೇ ಬಂದಿದೆ.

ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Jupiter’s Full Power: ಗುರುವಿನ ಪೂರ್ಣಬಲ, ಈ ಐದು ರಾಶಿಗಳಿಗೆ ಅನೇಕ ಶುಭಗಳ ಸಮ್ಮಿಲನ… – Kannada News | Jupiter’s Full Power: 5 Zodiac Signs Experience Auspicious Blessings and Good Fortune

ಗುರುವು ನವಗ್ರಹರುಗಳಲ್ಲಿ ಅತ್ಯಂತ ಶ್ರೇಷ್ಠ ಗ್ರಹ. ಶುಭ ಗ್ರಹವೆಂದು ಪ್ರಸಿದ್ಧಿ ಪಡೆದಿದೆ. ಗುರುವಿನ ದೃಷ್ಟಿ ಅಥವಾ ಯೋಗ ಬಂದರೆ ಅಶುಭವು ನಾಶವಾಗಿ ಶುಭವಾಗಲಿದೆ. ಅಂತಹ ಶುಭಗ್ರಹ ಸದ್ಯ ಉಚ್ಚಸ್ಥಾನದಲ್ಲಿದ್ದು ಪೂರ್ಣ ಬಲವುಳ್ಳವನಾಗಿದ್ದಾನೆ. ಹೀಗಿರುವಾಗ ಶುಭಫಲಗಳೇ ಈ ತಿಂಗಳಲ್ಲಿ ಇರಲಿದೆ.

​ಉಚ್ಚ ಗುರುವಿನ ಸ್ಥಾನ:

ಧನು ಲಗ್ನಕ್ಕೆ ಅಧಿಪತಿಯೇ ಬೃಹಸ್ಪತಿ ಲಗ್ನಾಧಿಪತಿಯು ಧರ್ಮ, ಜ್ಞಾನ, ವ್ಯಕ್ತಿತ್ವ, ಆರೋಗ್ಯ ಮತ್ತು ಆತ್ಮವಿಶ್ವಾಸದ ಸಂಕೇತ. ಕರ್ಕಾಟಕ, ವೃಶ್ಚಿಕ, ಧನು, ಮಕರ, ಮೀನ ಈ ರಾಶಿಯವರಿಗೆ ಶುಭದಾಯಕವಾಗಲಿದೆ…

​ಗುರುವು ಕರ್ಕಾಟಕ ರಾಶಿಯಲ್ಲಿ ಉಚ್ಚನಾಗಿದ್ದಾನೆ. ೮ನೇ ರಾಶಿಯಲ್ಲಿ ಆಯುಷ್ಯ, ಗೂಢ ವಿದ್ಯೆ, ಸಂಶೋಧನೆ, ಹಠಾತ್ ಲಾಭ ಅಥವಾ ಹಠಾತ್ ಪರಿವರ್ತನೆಯ ಸ್ಥಾನ. ೮ನೇ ಮನೆಯು ಸಾಧಾರಣವಾಗಿ ದುಃಸ್ಥಾನವೆಂದು ಪರಿಗಣಿತವಾದರೂ, ಲಗ್ನಾಧಿಪತಿಯೇ ಅಲ್ಲಿ ಉಚ್ಛನಾಗಿರುವುದರಿಂದ ಕೆಟ್ಟ ಫಲಗಳಿಗಿಂತ ಶುಭ ಫಲಗಳೇ ಹೆಚ್ಚಿರುತ್ತವೆ. ಜಾತಕರಿಗೆ ಅದ್ಭುತವಾದ ಸಹಜ ಜ್ಞಾನ, ರಹಸ್ಯ ಶಾಸ್ತ್ರಗಳಲ್ಲಿ ಜ್ಯೋತಿಷ್ಯ, ವೇದ, ಮಂತ್ರ ಶಾಸ್ತ್ರ, ಸಂಶೋಧನೆ ಅಪಾರ ಆಸಕ್ತಿ ಮತ್ತು ಪಾಂಡಿತ್ಯ ಸಿದ್ಧಿಸುತ್ತದೆ. ಹಠಾತ್ ಧನಲಾಭ ಅಥವಾ ಪಿತ್ರಾರ್ಜಿತ ಆಸ್ತಿ ಲಭಿಸುವ ಯೋಗವೂ ಉಂಟಾಗುತ್ತದೆ.

​ಗುರುವು ಕರ್ಕಾಟಕದಿಂದ ಮೂರು ಪ್ರಮುಖ ಭಾವಗಳ ಮೇಲೆ ತನ್ನ ಶುಭ ದೃಷ್ಟಿಯನ್ನು ಬೀರುತ್ತಿದ್ದಾನೆ. ೧೨ನೇ ಮನೆ ಮೋಕ್ಷ ಮತ್ತು ವಿದೇಶಿ ಪ್ರಯಾಣದ ಮನೆ. ಗುರುವಿನ ಶುಭ ದೃಷ್ಟಿಯಿಂದಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ, ದೇವತಾ ಕಾರ್ಯಗಳಿಗೆ ಮತ್ತು ದಾನ-ಧರ್ಮಗಳಿಗೆ ಹಣ ವಿನಿಯೋಗವಾಗುತ್ತದೆ. ಉದ್ಯೋಗ, ಶಿಕ್ಷಣ ಅಥವಾ ತೀರ್ಥಯಾತ್ರೆಗಾಗಿ ದೂರದ ಊರುಗಳಿಗೆ ಅಥವಾ ವಿದೇಶಕ್ಕೆ ಪ್ರಯಾಣಿಸುವ ಅವಕಾಶ ಒದಗಿಬರುತ್ತದೆ.

​೨ನೇ ಭಾವಕ್ಕೆ ಗುರುವಿನ ನೇರ ದೃಷ್ಟಿ ಇರುವುದರಿಂದ ಆರ್ಥಿಕ ಮುಗ್ಗಟ್ಟುಗಳು ನಿವಾರಣೆಯಾಗುತ್ತವೆ. ಹಣ ಉಳಿತಾಯ ಮಾಡುವ ಯೋಜನೆಗಳು ಯಶಸ್ವಿಯಾಗುತ್ತವೆ. ಜಾತಕರ ಮಾತಿನಲ್ಲಿ ಗಾಂಭೀರ್ಯ, ಸತ್ಯಸಂಧತೆ ಮತ್ತು ಗೌರವ ಹೆಚ್ಚಾಗುತ್ತದೆ. ನಿಮ್ಮ ಸಲಹೆಗಳಿಗೆ ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ. ಕುಟುಂಬದಲ್ಲಿ ಇದ್ದ ಮನಸ್ತಾಪಗಳು ದೂರವಾಗಿ ಶಾಂತಿ ನೆಲೆಸುತ್ತದೆ.

​ಗುರುವಿನ ಶುಭ ದೃಷ್ಟಿ ಚಂದ್ರನ ಮೇಲೆ ಬೀಳುವುದರಿಂದ ಮಾನಸಿಕ ಒತ್ತಡ, ಆತಂಕಗಳು ನಿವಾರಣೆಯಾಗಿ ಮನಸ್ಸಿಗೆ ಶಾಂತಿ ಲಭಿಸುತ್ತದೆ. ತಾಯಿಯ ಆರೋಗ್ಯ ಸುಧಾರಿಸುತ್ತದೆ. ಶನಿ-ಗುರುಗಳ ಈ ಸಂಬಂಧವು ವೃತ್ತಿಜೀವನದಲ್ಲಿ ಸ್ಥಿರತೆಯನ್ನು ತರುತ್ತದೆ. ಆಸ್ತಿ, ಜಮೀನು ಅಥವಾ ಹೊಸ ವಾಹನ/ಮನೆ ಖರೀದಿ ಮಾಡುವ ಕನಸು ನನಸಾಗುತ್ತದೆ. ಕಠಿಣ ಪರಿಶ್ರಮಕ್ಕೆ ಸೂಕ್ತ ಫಲ ಮತ್ತು ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ.

ಇದನ್ನೂ ಓದಿ: ಬುಧ ಸಂಚಾರ ಫಲ: ಈ ರಾಶಿಯವರಿಗೆ ಒಲಿಯಲಿದೆ ದಿಢೀರ್ ಧನಯೋಗ ಹಾಗೂ ವೃತ್ತಿ ಪ್ರಗತಿ

​​ಮಂಗಳನು ೫ನೇ ಮತ್ತು ೧೨ನೇ ಭಾವಾಧಿಪತಿಯಾಗಿದ್ದು, ಜ್ಞಾನ ಮತ್ತು ಶಕ್ತಿಯ ಕಾರಕ. ಈ ಸಪ್ತಮ ದೃಷ್ಟಿ ಸಂಬಂಧವು ಜಾತಕರಿಗೆ ಅಸಾಧಾರಣ ನಾಯಕತ್ವ ಗುಣ, ಧೈರ್ಯ ಮತ್ತು ತಾಂತ್ರಿಕ/ಆಡಳಿತಾತ್ಮಕ ಕ್ಷೇತ್ರದಲ್ಲಿ ಯಶಸ್ಸನ್ನು ನೀಡುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿರುವವರಿಗೆ ಅಥವಾ ಉನ್ನತ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ ಇದು ಅತ್ಯಂತ ಅನುಕೂಲಕರ ಸಮಯ.

ನಾಯಕತ್ವದ ಜವಾಬ್ದಾರಿಗಳು ಸಿಗಲಿವೆ. ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳ ಮತ್ತು ಸಹೋದ್ಯೋಗಿಗಳ ಸಂಪೂರ್ಣ ಸಹಕಾರ ದೊರೆಯುತ್ತದೆ. ಬಡ್ತಿ ಹಾಗೂ ಆದಾಯ ಹೆಚ್ಚಳ ಸಾಧ್ಯ. ಉನ್ನತ ಶಿಕ್ಷಣ, ಪರೀಕ್ಷೆಗಳು ಹಾಗೂ ಸಂಶೋಧನಾ ಕ್ಷೇತ್ರದಲ್ಲಿದ್ದವರಿಗೆ ಅತ್ಯುತ್ತಮ ಫಲಿತಾಂಶ ಸಿಗಲಿದೆ.

ಲಗ್ನಾಧಿಪತಿ ಉಚ್ಛನಾಗಿರುವುದರಿಂದ ದೈಹಿಕ ಬಲ ಹೆಚ್ಚುತ್ತದೆ. ಆದರೆ ೮ನೇ ಮನೆಯಲ್ಲಿ ಗುರು ಇರುವುದರಿಂದ ಜೀರ್ಣಾಂಗ ವ್ಯೂಹ ಅಥವಾ ಯಕೃತ್ತಿಗೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ಜಾಗ್ರತೆ ವಹಿಸುವುದು ಒಳಿತು.

​ಪರಿಹಾರ :

​ಗುರುದಶೆಯ ಗರಿಷ್ಠ ಶುಭ ಫಲಗಳನ್ನು ಪಡೆಯಲು ಈ ಕೆಳಗಿನ ಸರಳ ದೈವಿಕ ಕ್ರಮಗಳು ಸಹಕಾರಿ. ಪ್ರತಿದಿನ ಅಥವಾ ಪ್ರತಿ ಗುರುವಾರ ವಿಷ್ಣು ಸಹಸ್ರನಾಮ ಅಥವಾ ದತ್ತಾತ್ರೇಯ ಸ್ತೋತ್ರವನ್ನು ಜಪಿಸುವುದು. ಗುರುವಾರದಂದು ಹಳದಿ ಬಣ್ಣದ ಕಡಲೆ ಬೇಳೆ, ಬಾಳೆಹಣ್ಣು ಅಥವಾ ಹಳದಿ ವಸ್ತ್ರವನ್ನು ಬ್ರಾಹ್ಮಣರಿಗೆ/ದೇವಸ್ಥಾನಕ್ಕೆ ದಾನ ಮಾಡುವುದು. ಹಸುಗಳಿಗೆ ಹಸಿರು ಹುಲ್ಲು ಅಥವಾ ಬೆಲ್ಲ-ಅನ್ನ ನೀಡುವುದು ಶುಭ ತರುತ್ತದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version