Headlines

Puja Rituals: ಪೂಜೆ ಮುಗಿದ ನಂತರ ಕ್ಷಮೆಯಾಚಿಸುವುದು ಏಕೆ ಕಡ್ಡಾಯ ಗೊತ್ತೇ? ಇಲ್ಲಿದೆ ಮಾಹಿತಿ – Kannada News | Sanatana Puja Forgiveness: Importance of Seeking Pardon After Worship for Full Blessings

ಸನಾತನ ಸಂಪ್ರದಾಯದಲ್ಲಿ, ಪೂಜೆ ಎಂದರೆ ಕೇವಲ ದೀಪ ಹಚ್ಚುವುದು, ಹೂವುಗಳನ್ನು ಅರ್ಪಿಸುವುದು ಅಥವಾ ಆರತಿ ಮಾಡುವುದು ಮಾತ್ರವಲ್ಲ. ಮಂತ್ರಗಳನ್ನು ಪಠಿಸುವುದು, ಧ್ಯಾನ ಮಾಡುವುದು, ಸಂಕಲ್ಪ ಮಾಡುವುದು ಮತ್ತು ನಿಜವಾದ ಭಕ್ತಿಯಿಂದ ದೇವರಿಗೆ ಶರಣಾಗುವುದರಲ್ಲಿಯೂ ಪೂಜೆಯು ಆಳವಾದ ಮಹತ್ವವನ್ನು ಹೊಂದಿದೆ. ಸಾಮಾನ್ಯವಾಗಿ ನಾವು ಪೂಜೆ ಪೂರ್ಣಗೊಂಡ ತಕ್ಷಣ ಎದ್ದು ಹೊರಡುತ್ತೇವೆ. ಆದರೆ ನಮ್ಮ ಧಾರ್ಮಿಕ ಸಂಪ್ರದಾಯಗಳ ಪ್ರಕಾರ, ಪೂಜೆಯ ಕೊನೆಯಲ್ಲಿ ದೇವರಲ್ಲಿ ಕ್ಷಮೆ ಯಾಚಿಸುವ ಅಭ್ಯಾಸ ಅತ್ಯಂತ ಮುಖ್ಯವಾದುದು. ಶಾಸ್ತ್ರಗಳ ಪ್ರಕಾರ, ಕೊನೆಯಲ್ಲಿ ಕ್ಷಮೆಗಾಗಿ ಪ್ರಾರ್ಥಿಸದಿದ್ದರೆ ನಮ್ಮ ಪ್ರಾರ್ಥನೆಗಳು…

Read More

Independence Day 2026: ಧ್ವಜಾರೋಹಣಕ್ಕೆ ವಿನಾಯಿತಿ ಕೋರಿ ಸಿಎಂಗೆ ಸಚಿವ ಜಮೀರ್ ಪತ್ರ; ಮನವಿಯಂತೆ ಜಮೀರ್​ ಹೆಸರನ್ನ ಕೈಬಿಟ್ಟ ಸಿಎಂ ಡಿ.ಕೆ.ಶಿವಕುಮಾರ್ – Kannada News | Independence Day 2026: Minister Zameer Ahmed Skips Flag Hoisting

ಧ್ವಜಾರೋಹಣಕ್ಕೆ ವಿನಾಯಿತಿ ಕೋರಿ ಸಿಎಂಗೆ ಸಚಿವ ಜಮೀರ್ ಪತ್ರ ಬೆಂಗಳೂರು, ಆಗಸ್ಟ್ 14: ಸ್ವಾತಂತ್ರ್ಯ ದಿನಾಚರಣೆಯ (Independence Day) ಹಿನ್ನೆಲೆ ವಿಜಯನಗರ ಜಿಲ್ಲೆಯಲ್ಲಿ ಧ್ವಜಾರೋಹಣ ನೆರವೇರಿಸಲು ನಿಯೋಜನೆಗೊಂಡಿದ್ದ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಮಗೆ ಈ ಜವಾಬ್ದಾರಿಯಿಂದ ವಿನಾಯಿತಿ ನೀಡುವಂತೆ ಕೋರಿ ಮುಖ್ಯಮಂತ್ರಿಯವರಿಗೆ ಅಧಿಕೃತ ಪತ್ರ ಬರೆದಿದ್ದಾರೆ. ಜಮೀರ್ ಅವರ ಮನವಿಯನ್ನು ಪುರಸ್ಕರಿಸಿರುವ ಮುಖ್ಯಮಂತ್ರಿಗಳು, ಅವರ ಬದಲಿಗೆ ಸಚಿವ ರಿಜ್ವಾನ್ ಅರ್ಷದ್ ಹಾಗೂ ಸಚಿವ ಬಸವಂತಪ್ಪ ಅವರಿಗೆ ಜವಾಬ್ದಾರಿ ನೀಡಿ…

Read More

ಮಂಡ್ಯದ ಆರತಿ ಉಕ್ಕಡದಲ್ಲಿ ಶಾಸಕ ಸುರೇಶ್‌ಗೌಡ ಪುತ್ರಿ ದರ್ಪ: ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ – Kannada News | Srirangapatna Temple Assault: MLA B. Sureshgouda’s Daughter Booked for Attacking PSI

ಮಂಡ್ಯ, ಆ.14: ಶಾಸಕ ಪುತ್ರಿ ದೇವಸ್ಥಾನದಲ್ಲಿ ಕರ್ತವ್ಯನಿರತ ಮಹಿಳಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (PSI) ಮೇಲೆ ಹಲ್ಲೆ ನಡೆಸಿ, ಕಪಾಳಮೋಕ್ಷ ಮಾಡಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಗ್ರಾಮದಲ್ಲಿ ನಡೆದಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ ವಿರುದ್ಧ ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಬುಧವಾರ (ಆ.12) ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಆರತಿ ಉಕ್ಕಡದ ಪ್ರಸಿದ್ಧ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ…

Read More

ಮುದ್ದಾಡಿದ ಮೇಕೆಯೇ ಮಧ್ಯಾಹ್ನ ಬಿರಿಯಾನಿ; ಸತ್ಯ ತಿಳಿದು ವಾಂತಿ ಮಾಡಿಕೊಂಡ ನಟಿ ಅನುಪಮಾ – Kannada News | Dhruv Vikram Reveals Shocking Set Incident: Anupama Parameswaran Reacts On Bison Kaalamaadan Sets

ತಮಿಳಿನ ಬಹುನಿರೀಕ್ಷಿತ ‘ಬೈಸನ್ ಕಾಳಮಾಡನ್’ ಸಿನಿಮಾದಲ್ಲಿ ನಟ ಧ್ರುವ ವಿಕ್ರಮ್ ಹಾಗೂ ನಟಿ ಅನುಪಮಾ ಪರಮೇಶ್ವರನ್ ಜೋಡಿಯಾಗಿ ನಟಿಸಿದ್ದರು. ಈ ಸಿನಿಮಾ 2025ರಲ್ಲಿ ರಿಲೀಸ್ ಆಯಿತು. ಆ ಸಮಯದಲ್ಲಿ ನಡೆದ ಚಾಟ್ ಶೋ ಒಂದರಲ್ಲಿ ಪಾಲ್ಗೊಂಡಿದ್ದ ಈ ಜೋಡಿ, ಶೂಟಿಂಗ್ ಸೆಟ್‌ನಲ್ಲಿ ನಡೆದಿದ್ದ ಅತ್ಯಂತ ತಮಾಷೆಯ ಹಾಗೂ ಆಘಾತಕಾರಿ ಘಟನೆಯೊಂದನ್ನು ನೆನಪಿಸಿಕೊಂಡಿತ್ತು. ಆ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ. ಸೆಟ್‌ನಲ್ಲಿ ನಡೆದಿದ್ದೇನು? ಸಂದರ್ಶನದಲ್ಲಿ ಮಾತನಾಡಿದ ಧ್ರುವ ವಿಕ್ರಮ್, ‘ನಟಿ ಅನುಪಮಾ ಸೆಟ್‌ನಲ್ಲಿ ಮೇಕೆ ಮರಿಯೊಂದರ ಜೊತೆ…

Read More

ಕಲಬುರಗಿಯಲ್ಲಿ ದೇಶವಿರೋಧಿ ಕೃತ್ಯ ಎಸಗುತ್ತಿದ್ದ ಮಹಮ್ಮದ್ ಸಮೀರ್ ಬಂಧನ: ತನಿಖೆ ವೇಳೆ ಬೆಚ್ಚಿಬಿದ್ದ ಪೊಲೀಸ್ ಅಧಿಕಾರಿಗಳು – Kannada News | Pakistan Terror Ties: Kalaburagi Police Nab Man for Anti National Digital Activities

ಕಲಬುರಗಿ, ಆ.14: ಸಾಮಾಜಿಕ ಜಾಲತಾಣಗಳಲ್ಲಿ ದೇಶವಿರೋಧಿ ಪೇಜ್‌ಗಳು ಹಾಗೂ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಮಹಮ್ಮದ್ ಸಮೀರ್ (23) ಎಂಬಾತನನ್ನು ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದರು. ಮೂಲತಃ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯವನಾದ ಈತ, ಕಳೆದ ಕೆಲವು ತಿಂಗಳುಗಳಿಂದ ಕಲಬುರಗಿಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆರೋಪಿಯ ಮೊಬೈಲ್ ಫೋನ್ ಪರಿಶೀಲನೆ ನಡೆಸಿದ ವೇಳೆ ಬೆಚ್ಚಿಬೀಳಿಸುವ ರೋಚಕ ಹಾಗೂ ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬಂದಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳೇ…

Read More

‘ಅಮೆರಿಕಾ ಅಮೆರಿಕಾ 2’ ವೇದಿಕೆ ಮೇಲೆ ‘ಯಾವ ಮೋಹನ’ ಹಾಡಿನ ಬಗ್ಗೆ ನಾಗತಿಹಳ್ಳಿ ಮಾತು – Kannada News | America America 2 Press Meet: Director Nagathihalli Chandrashekhar Remembers Yava Mohana Song

‘ಅಮೆರಿಕಾ ಅಮೆರಿಕಾ 2’ ಚಿತ್ರ ಸಿದ್ಧವಾಗಿದೆ. ಅಮೆರಿಕಾ ಅಮೆರಿಕಾ ಹಿಟ್ ಆದ ಬಳಿಕ ತೆರೆಗೆ ಬರುತ್ತಿರುವ ಸಿನಿಮಾ ಇದು. ಈ ಚಿತ್ರವನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರೇ ನಿರ್ದೇಶನ ಮಾಡಿದ್ದಾರೆ. ಅವರು ಮೊದಲ ಚಿತ್ರದ ಹಾಡಿನ ಬಗ್ಗೆ ಮಾತನಾಡಿದ್ದಾರೆ. ‘ಯಾವ ಮೋಹನ ಹಾಡು ಬೇರೆ ಬೇರೆ ಅರ್ಥವನ್ನು ಕೊಡುವ ಗೀತೆ. ಅದನ್ನು ಗೋಪಾಲಕೃಷ್ಣ ಅಡಿಗರು ನನಗೆ ಬೇಕಾಗಬಹುದು ಎಂಬ ರೀತಿ ಬರೆದಿಟ್ಟು ಹೋದಂತೆ ಇದೆ. ನೂರು ಜನ್ಮಕೂ ಹಿಟ್ ಆದಷ್ಟೇ ಯಾವ ಮೋಹನ ಹಾಡು ಹಿಟ್ ಆಗಿತ್ತು’ ಎಂದು…

Read More

ಕುದುರೆಮುಖದಲ್ಲಿ ಸ್ವತಂತ್ರ ದಿನಾಚರಣೆ ವಿಶೇಷ ಆಫ್ ರೋಡ್ ಸಾಹಸಯಾತ್ರೆ: ಆಯೋಜಕರಿಗೆ ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ – Kannada News | Kudremukh Off Road Drive: Karnataka Govt Warns Organizers Against I Day Adventure Event

ಚಿಕ್ಕಮಗಳೂರು, ಆಗಸ್ಟ್ 14: ಜಿಲ್ಲೆಯ ಕುದುರೆಮುಖದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ‘ಆಫ್-ರೋಡ್ ಅಡ್ವೆಂಚರ್ ಡ್ರೈವ್’ (Off-road Adventure Drive) ಸಾಹಸಯಾತ್ರೆಗೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಈವೆಂಟ್‌ನಿಂದಾಗಿ ಗ್ರಾಮೀಣ ರಸ್ತೆಗಳಿಗೆ ಹಾನಿಯಾದರೂ ಅಥವಾ ಜಲಮೂಲಗಳು ಕಲುಷಿತಗೊಂಡರೂ ಆಯೋಜಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಪರಿಸರ ಸಚಿವ ಈಶ್ವರ್ ಖಂಡ್ರೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈಶ್ವರ್ ಖಂಡ್ರೆ ಅವರು ಲಿಖಿತ ನಿರ್ದೇಶನ ಬೆಂಗಳೂರು ಮೂಲದ…

Read More

Gemstones: ನೀವು ಧರಿಸಿದ ರತ್ನ ತನ್ನ ಪರಿಣಾಮವನ್ನು ತೋರಿಸಲು ಎಷ್ಟು ದಿನ ತೆಗೆದುಕೊಳ್ಳುತ್ತದೆ ಗೊತ್ತೇ? – Kannada News | Astrological Gemstones: How Long Before Navaratna Effects Start?

ವೈದಿಕ ಜ್ಯೋತಿಷ್ಯದಲ್ಲಿ ಮಾನವ ನಾಗರಿಕತೆಯ ಆರಂಭದಿಂದಲೂ ರತ್ನಗಳಿಗೆ ಅತ್ಯಂತ ಪ್ರಮುಖ ಹಾಗೂ ಪವಿತ್ರವಾದ ಸ್ಥಾನ ನೀಡಲಾಗಿದೆ. ರತ್ನಗಳು ಕೇವಲ ಆಭರಣಗಳಿಗಾಗಿ ಬಳಸುವ ಸುಂದರವಾದ, ಹೊಳೆಯುವ ಕಲ್ಲುಗಳಷ್ಟೇ ಅಲ್ಲ; ಅವು ಅಪಾರವಾದ ಬ್ರಹ್ಮಾಂಡದ ಶಕ್ತಿಯನ್ನು ಹೊಂದಿರುವ ಶಕ್ತಿ ಮೂಲಗಳು ಎಂದು ನಂಬಲಾಗಿದೆ. ನಮ್ಮ ಜೀವನದ ಮೇಲೆ ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾದ ಒಂಬತ್ತು ಗ್ರಹಗಳು ಆಳವಾದ ಪ್ರಭಾವ ಬೀರುತ್ತವೆ. ಈ ಒಂಬತ್ತು ಗ್ರಹಗಳನ್ನು ಪ್ರತಿನಿಧಿಸುವ ‘ನವರತ್ನಗಳು’ ಸರಿಯಾದ ಬೆರಳಿಗೆ ಧರಿಸಿದಾಗ, ಧರಿಸಿದವರನ್ನು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸಿ, ಅವರಲ್ಲಿ ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತವೆ….

Read More

ನೀರಿನ ಹಕ್ಕು ಕಸಿದರೆ ಸುಮ್ಮನಿರಲ್ಲ: ಭಾರತದ ವಿರುದ್ಧ ಮತ್ತೆ ವಿಷ ಕಾರಿದ ಶೆಹಬಾಜ್ ಷರೀಫ್ – Kannada News | Indus Waters Treaty Dispute: Pakistan Threatens India Amidst IWT Status Row

ಇಸ್ಲಾಮಾಬಾದ್, ಆ.14: ಸಿಂಧೂ ನದಿ ನೀರು ಹಂಚಿಕೆ ಒಪ್ಪಂದಕ್ಕೆ (Indus Waters Treaty) ಸಂಬಂಧಿಸಿದಂತೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಭಾರತಕ್ಕೆ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. “ಪಾಕಿಸ್ತಾನಕ್ಕೆ ಸೇರಬೇಕಾದ ನೀರಿನ ಪ್ರತಿಯೊಂದು ಹನಿಯೂ ನಮಗೆ ‘ರೆಡ್ ಲೈನ್’ಿದ್ದಂತೆ. ನಮ್ಮ ನೀರಿನ ಹಕ್ಕನ್ನು ಕಸಿಯಲು ಯತ್ನಿಸಿದರೆ ನೇರ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ. ಗುರುವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಷರೀಫ್, ಪಾಕಿಸ್ತಾನವು ಶಾಂತಿಯನ್ನು ಬಯಸುತ್ತದೆ. ಆದರೆ ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಯಾವುದೇ ಪ್ರಯತ್ನ ನಡೆದರೂ…

Read More

Jupiter’s Full Power: ಗುರುವಿನ ಪೂರ್ಣಬಲ, ಈ ಐದು ರಾಶಿಗಳಿಗೆ ಅನೇಕ ಶುಭಗಳ ಸಮ್ಮಿಲನ… – Kannada News | Jupiter’s Full Power: 5 Zodiac Signs Experience Auspicious Blessings and Good Fortune

ಗುರುವು ನವಗ್ರಹರುಗಳಲ್ಲಿ ಅತ್ಯಂತ ಶ್ರೇಷ್ಠ ಗ್ರಹ. ಶುಭ ಗ್ರಹವೆಂದು ಪ್ರಸಿದ್ಧಿ ಪಡೆದಿದೆ. ಗುರುವಿನ ದೃಷ್ಟಿ ಅಥವಾ ಯೋಗ ಬಂದರೆ ಅಶುಭವು ನಾಶವಾಗಿ ಶುಭವಾಗಲಿದೆ. ಅಂತಹ ಶುಭಗ್ರಹ ಸದ್ಯ ಉಚ್ಚಸ್ಥಾನದಲ್ಲಿದ್ದು ಪೂರ್ಣ ಬಲವುಳ್ಳವನಾಗಿದ್ದಾನೆ. ಹೀಗಿರುವಾಗ ಶುಭಫಲಗಳೇ ಈ ತಿಂಗಳಲ್ಲಿ ಇರಲಿದೆ. ​ಉಚ್ಚ ಗುರುವಿನ ಸ್ಥಾನ: ಧನು ಲಗ್ನಕ್ಕೆ ಅಧಿಪತಿಯೇ ಬೃಹಸ್ಪತಿ ಲಗ್ನಾಧಿಪತಿಯು ಧರ್ಮ, ಜ್ಞಾನ, ವ್ಯಕ್ತಿತ್ವ, ಆರೋಗ್ಯ ಮತ್ತು ಆತ್ಮವಿಶ್ವಾಸದ ಸಂಕೇತ. ಕರ್ಕಾಟಕ, ವೃಶ್ಚಿಕ, ಧನು, ಮಕರ, ಮೀನ ಈ ರಾಶಿಯವರಿಗೆ ಶುಭದಾಯಕವಾಗಲಿದೆ… ​ಗುರುವು ಕರ್ಕಾಟಕ ರಾಶಿಯಲ್ಲಿ ಉಚ್ಚನಾಗಿದ್ದಾನೆ….

Read More