Headlines

‘ಲಗಾನ್’ ಸಿನಿಮಾಕ್ಕೆ 25ರ ಸಂಭ್ರಮ, ಮತ್ತೆ ಜೊತೆಯಾದ ಹಳೆಯ ‘ತಂಡ’ – Kannada News | 25 years for Lagaan, movie re release in many cities

ಭಾರತೀಯ ಚಿತ್ರರಂಗದ ಐಕಾನಿಕ್ ಸಿನಿಮಾ ‘ಲಗಾನ್’ (Lagaan). ಆಸ್ಕರ್​​ಗೆ ನಾಮಿನೇಟ್ ಆಗಿದ್ದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆ ಪಡೆದ ಈ ಸಿನಿಮಾ ಬಿಡುಗಡೆಯಾಗಿ 25 ವರ್ಷಗಳು ಪೂರ್ಣಗೊಂಡಿವೆ. ಇದೇ ಖುಷಿಯಲ್ಲಿ ‘ಲಗಾನ್’ ಸಿನಿಮಾ ಮರು ಬಿಡುಗಡೆ ಆಗಿದೆ. ಮುಂಬೈ, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಸಿನಿಮಾ ಮರು ಬಿಡುಗಡೆ ಆಗಿದ್ದು, ಅಭಿಮಾನಿಗಳು ತಂಡೋಪತಂಡವಾಗಿ ಸಿನಿಮಾಕ್ಕೆ ಹೋಗಿ ಎಂಜಾಯ್ ಮಾಡುತ್ತಿದ್ದಾರೆ. ಮಾತ್ರವಲ್ಲದೆ, ಸಿನಿಮಾದ ಮರು ಬಿಡುಗಡೆ ಖುಷಿಯಲ್ಲಿ ‘ಲಗಾನ್’ ಚಿತ್ರತಂಡವೂ ಸಹ ಮತ್ತೆ ಒಂದಾಗಿ ಸಂವಾದ ನಡೆಸಿದೆ. ಆಮಿರ್…

Read More

W,W,W..ಆಂಗ್ಲರ ನೆಲದಲ್ಲೂ ಮಿಂಚಿದ ಮಾನವ್ ಸುತಾರ್

ಅಫ್ಘಾನಿಸ್ತಾನ ವಿರುದ್ಧದ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮೂಲಕ ಸಂಚಲನ ಮೂಡಿಸಿದ್ದ ಭಾರತದ ಯುವ ಸ್ಪಿನ್ನರ್ ಮಾನವ್ ಸುತಾರ್ ಈಗ ಇಂಗ್ಲಿಷ್ ಪಿಚ್‌ನಲ್ಲೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇಂಗ್ಲಿಷ್ ಕೌಂಟಿ ಕ್ರಿಕೆಟ್ ಆಡುತ್ತಿರುವ ಸುತಾರ್, ವಾರ್ವಿಕ್‌ಷೈರ್ ತಂಡದ ಪರ 3 ವಿಕೆಟ್ ಪಡೆದು ಮಿಂಚಿದರು (PC-PTI). ವಾಸ್ತವವಾಗಿ ಜೂನ್ 6 ರಂದು ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಪಾದಾರ್ಪಣೆ ಮಾಡಿದ ಸುತಾರ್, ಈ ಪಂದ್ಯದಲ್ಲಿ ಏಳು…

Read More

ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್​​​ ಖಡಕ್​ ಸೂಚನೆ

ಬೆಂಗಳೂರು, ಜೂನ್​ 13: ಸಿಎಂ ಡಿಕೆ ಶಿವಕುಮಾರ್​​ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯದ ಡಿಸಿ, ಎಸ್​​ಪಿ ಮತ್ತು ಸಿಇಒಗಳ ಜೊತೆ ಮಹತ್ವದ ಸಭೆ ಮಾಡಿದರು. ಸುಮಾರು ಏಳು ಗಂಟೆಗಳ ಕಾಲ ನಡೆದ ಸಭೆಯಲ್ಲಿ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಭಾಗವಹಿಸುವ ಎಲ್ಲ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್​, ರಾಜ್ಯದ ಜನರು ನಮ್ಮ ಮೇಲೆ ಬಹಳ ನಿರೀಕ್ಷೆಗಳನ್ನಿಟ್ಟಿದ್ದಾರೆ. ಕಚೇರಿಗಳಿಗೆ ಬಂದ ಜನರಿಗೆ ಅಧಿಕಾರಿಗಳು ಸ್ಪಂದಿಸಬೇಕು. ಹಾಗಾಗಿ ಎಲ್ಲ ಇಲಾಖೆಯ ಅಧಿಕಾರಿಗಳು…

Read More

ಮತ್ತೆ ವಿದೇಶಕ್ಕೆ ತೆರಳಿದ ಪ್ರಧಾನಿ ಮೋದಿ; ಫ್ರಾನ್ಸ್​, ಸ್ಲೋವಾಕಿಯಾಗೆ ಭೇಟಿ

ನವದೆಹಲಿ, ಜೂನ್ 13: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು (ಶನಿವಾರ) ಫ್ರಾನ್ಸ್ ಮತ್ತು ಸ್ಲೋವಾಕಿಯಾ ದೇಶಗಳಿಗೆ ಒಂದು ವಾರದ ಸುದೀರ್ಘ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸದ ಅವಧಿಯಲ್ಲಿ ಅವರು ಜಿ7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ವಿವಿಧ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಕುರಿತು ವಿಶ್ವ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ತಮ್ಮ ವಿದೇಶಿ ಪ್ರವಾಸಕ್ಕೂ ಮುನ್ನ ನೀಡಿದ ಹೇಳಿಕೆಯಲ್ಲಿ ಪ್ರಧಾನಿ ಮೋದಿ (PM Modi) ಭಾರತದ ಕಾರ್ಯತಂತ್ರದ ದೃಷ್ಟಿಕೋನದಲ್ಲಿ ಫ್ರಾನ್ಸ್ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಹೇಳಿದ್ದಾರೆ….

Read More

ರಾತ್ರಿ ಊಟ ಮಾಡದೆ ಖಾಲಿ ಹೊಟ್ಟೆಯಲ್ಲಿ ಮಲಗುವ ಅಭ್ಯಾಸ ಎಷ್ಟು ಡೇಂಜರಸ್‌ ಗೊತ್ತಾ? – Kannada News | What happens if you sleep on an empty stomach at night?

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿದಾಯಕ ಆಹಾರವನ್ನು ಸೇವಿಸುವಂತೆ ರಾತ್ರಿ ಹಗುರವಾದ ಆಹಾರವನ್ನು ಸೇವನೆ ಮಾಡಬೇಕು ಎಂದು ಹೇಳುತ್ತಾರೆ. ಆದರೆ ಕೆಲಸದ ಒತ್ತಡ, ಆಯಾಸ ಮತ್ತು ಕೆಲವೊಮ್ಮೆ ಕೋಪದಿಂದಾಗಿ ಅನೇಕ ಜನರು ರಾತ್ರಿ (night) ಊಟ ಮಾಡದೆ ಖಾಲಿ ಹೊಟ್ಟೆಯಲ್ಲಿ ಮಲಗುತ್ತಾರೆ. ಇನ್ನೂ ಕೆಲವರು ತೂಕ ಇಳಿಸಿಕೊಳ್ಳುವ ಸಲುವಾಗಿ ರಾತ್ರಿ ಊಟವನ್ನು ಸ್ಕಿಪ್‌ ಮಾಡುತ್ತಾರೆ. ರಾತ್ರಿ ಊಟ ಮಾಡದೆ  ಖಾಲಿ ಹೊಟ್ಟೆಯಲ್ಲಿ ಮಲಗುವ ಈ ಅಭ್ಯಾಸವು ದೇಹಕ್ಕೆ ತುಂಬಾ ಹಾನಿಕಾರಕವಂತೆ. ಹಾಗಿದ್ದರೆ ಊಟ ಮಾಡದೆ ಮಲಗುವುದರಿಂದ ಏನೆಲ್ಲಾ ತೊಂದರೆಗಳು…

Read More

ಕ್ಷಮೆ ಕೇಳಿದ ಕಮಿಡಿಯನ್ ಪ್ರಣಿತ್, ಝಾಡಿಸಿದ ‘ಕಿರಿಕ್’ ಹುಡುಗಿ ಸಂಯುಕ್ತ – Kannada News | Samyuktha Hegde slams Pranit More’s apology over 370 biryani row, calling it shameful

ಕಮಿಡಿಯನ್​ಗಳು ಕೆಲವರು ಪದೇ ಪದೇ ಋಣಾತ್ಮಕ ಕಾರಣಕ್ಕೆ ಸುದ್ದಿ ಆಗುತ್ತಲೇ ಇದ್ದಾರೆ. ಕೆಲ ಕಮಿಡಿಯನ್​​ಗಳು ಹಾಸ್ಯದ ಹೆಸರಲ್ಲಿ ತೀರ ಅಶ್ಲೀಲ, ನೈತಿಕವಲ್ಲದ ವಿಷಯಗಳನ್ನು ಮಾತನಾಡಿ ಇಕ್ಕಟ್ಟಿಗೆ ಸಿಲುಕಿದ್ದಾರೆ ಮತ್ತು ಕಾನೂನಿನಂದ ಹಾಗೂ ಸಮಾಜದಿಂದ ತೀವ್ರ ಟೀಕೆ ಮತ್ತು ವಿಮರ್ಶೆಗೆ ಒಳಗಾಗುತ್ತಿದ್ದಾರೆ. ಕಮಿಡಿಯನ್ ಪ್ರಣಿತ್ ಮೋರೆ (Pranit More) ಇದೀಗ ಇಂಥಹದ್ದೇ ಒಂದು ಇಕ್ಕಟ್ಟಿಗೆ ಸಿಲುಕಿದ್ದಾರೆ. ಬಿಗ್​​ಬಾಸ್​​ಗೆ ಸಹ ಹೋಗಿ ಬಂದಿರುವ ಪ್ರಣಿತ್ ಮೋರೆ, ನಡೆಸಿಕೊಡುವ ಶೋ ಒಂದರಲ್ಲಿ ವ್ಯಕ್ತಿಯೊಬ್ಬ 370 ರೂಪಾಯಿ ಬಿರಿಯಾನಿ ಕೊಡಿಸಿ, ಯುವತಿಯನ್ನು ಹೇಗೆಲ್ಲ…

Read More

ಟ್ರಾವೆಲ್ ಮಾಡುವಾಗ ವಾಂತಿಯಾಗುತ್ತಾ? ಹಾಗಿದ್ರೆ ಈ ಸಮಸ್ಯೆ ತಡೆಗಟ್ಟಲು ಈ ರೀತಿ ಮಾಡಿ – Kannada News | Motion Sickness Symptoms And Prevention Tips By Health Expert

ಪ್ರಯಾಣ (Travel) ಎಂದರೆ ಬಹುತೇಕರಿಗೆ ಸಂತೋಷ. ಆದರೆ ಕೆಲವರಿಗೆ ಬಸ್‌, ಕಾರು ಅಥವಾ ಘಾಟ್‌ ರಸ್ತೆ ಪ್ರಯಾಣ ಎಂದರೆ ವಾಂತಿ, ತಲೆಸುತ್ತು, ಹೊಟ್ಟೆಯಲ್ಲಿ ಒಂದು ರೀತಿಯ ಸಂಕಟ ಆರಂಭವಾಗುತ್ತದೆ. ಈ ಸ್ಥಿತಿಯನ್ನು ‘ಮೋಶನ್ ಸಿಕ್ನೆಸ್’ (Motion Sickness) ಎಂದು ಕರೆಯಲಾಗುತ್ತದೆ. ಸರಿಯಾದ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಪ್ರಯಾಣದ ಉತ್ಸಾಹವೇ ಕಡಿಮೆಯಾಗಬಹುದು. ಜೊತೆಗೆ ಸುಸ್ತು ಸೇರಿದಂತೆ ಮತ್ತಿತರ ಸಮಸ್ಯೆ ಕಂಡುಬರಬಹುದು. ಹಾಗಾಗಿ ಈ ರೀತಿ ಸಮಸ್ಯೆಗೆ ಕಾರಣವೇನು, ಲಕ್ಷಣಗಳು ಹೇಗಿರುತ್ತವೆ ಮತ್ತು ವಾಂತಿಯಾಗದಂತೆ ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ…

Read More

ಮನಾಲಿಗೆ ಹೊರಟ ಪ್ರವಾಸಿಗರಿಂದ ಕುಲು-ಮಂಡಿ ಮಾರ್ಗದಲ್ಲಿ ಕಿಲೋಮೀಟರ್​​ಗಟ್ಟಲೆ ಟ್ರಾಫಿಕ್ ಜಾಮ್ – Kannada News | Long queue of cars on Mandi Kullu road as tourists crowd head towards Manali

ಮಂಡಿ, ಜೂನ್ 13: ಹಿಮಾಚಲ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮನಾಲಿಯ (Manali) ಕಡೆಗೆ ಹೋಗುತ್ತಿರುವುದರಿಂದ ಮಂಡಿ-ಕುಲು ರಸ್ತೆಯಲ್ಲಿ ಕಾರುಗಳ ಉದ್ದನೆಯ ಸರತಿ ಸಾಲು ಉಂಟಾಗಿದೆ. ಪೊಲೀಸ್ ಸಿಬ್ಬಂದಿಯನ್ನು ಮೈದಾನದಲ್ಲಿ ನಿಯೋಜಿಸಲಾಗಿದ್ದು, ನಿರ್ಣಾಯಕ ಸ್ಥಳಗಳಲ್ಲಿ ಸಂಚಾರವನ್ನು ನಿರ್ವಹಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮನಾಲಿ ಕಡೆಗೆ ತೆರಳುತ್ತಿರುವುದರಿಂದ ಮಂಡಿ-ಕುಲು ಹೆದ್ದಾರಿಯಲ್ಲಿ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲಾಗಿ ನಿಲ್ಲುತ್ತಿವೆ. ಮನಾಲಿ ಪಟ್ಟಣದ ಪ್ರವೇಶ ದ್ವಾರ, ಸೋಲಾಂಗ್ ವ್ಯಾಲಿ, ಅಟಲ್ ಟನಲ್ ಮತ್ತು ರೋಹ್ಟಂಗ್ ಪಾಸ್ ಕಡೆಗೆ ಹೋಗುವ ರಸ್ತೆಗಳಲ್ಲಿ ವಾಹನಗಳು ಗಂಟೆಗಟ್ಟಲೆ…

Read More

ಹೆಚ್​ಡಿ ಕುಮಾರಸ್ವಾಮಿ ಮಾರ್ಗದರ್ಶನದಂತೆ ಬಿಡದಿ ಟೌನ್​ಶಿಪ್ ನಿರ್ಮಾಣ ಯೋಜನೆ ಮುಂದುವರೆಸುತ್ತಿದ್ದೇವೆ: ಸಿಎಂ ಡಿಕೆ ಶಿವಕುಮಾರ್​​ – Kannada News | Bidadi Township Project Being Continued Under HD Kumaraswamy’s Guidance, Says CM DK Shivakumar

ಸಿಎಂ ಡಿಕೆ ಶಿವಕುಮಾರ್​​ Image Credit source: tv9 kannada ಬೆಂಗಳೂರು, ಜೂನ್​​ 13: ಬಿಡದಿ ಬಳಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ವಿಚಾರ ಸದ್ಯ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಜೂನ್ 22ಕ್ಕೆ ಬೃಹತ್ ಪ್ರತಿಭಟನೆಗೆ ರೈತರು ಮುಂದಾಗಿದೆ. ಸದ್ಯ ಈ ವಿಚಾರವಾಗಿ ಸಿಎಂ ಡಿಕೆ ಶಿವಕುಮಾರ್ (DK Shivakumar)​ ಪ್ರತಿಕ್ರಿಯಿಸಿದ್ದು, ಹೆಚ್​​ಡಿ ಕುಮಾರಸ್ವಾಮಿ (HD Kumaraswamy) ಮಾರ್ಗದರ್ಶನದಂತೆ ನಾವು ಈ ಯೋಜನೆ ಮುಂದುವರೆಸುತ್ತಿದ್ದೇವೆ. ದೆಹಲಿ ಭೇಟಿ ವೇಳೆ ಬಿಡದಿ ಟೌನ್​ಶಿಪ್ ಬಗ್ಗೆ ಚರ್ಚೆ ಮಾಡಿದ್ದೇನೆ. ಪ್ರಧಾನಿ…

Read More

ಪ್ರಥಮ ದರ್ಜೆ ನೌಕರನಿಗೆ ಚಪ್ಪಲಿ ಏಟು ಕೊಟ್ಟ ರೈತ! ಯಾಕೆ ಗೊತ್ತಾ? – Kannada News | Government Official Assaulted With Slipper by Farmer at Town Development Authority Office

ಬಾಗಲಕೋಟೆ, ಜೂನ್ 13: ಜಿಲ್ಲೆಯ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಸಿ) ನೀಲಕಂಠ ಅಂಗಡಿ ಅವರ ಮೇಲೆ ರೈತ ಬಸಪ್ಪ ದೊಡ್ಡಮನಿ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ಆತಂಕ ಮೂಡಿಸಿದೆ. ಪರಿಹಾರ ಹಣದ ವಿಳಂಬ ಹಾಗೂ ತಾರತಮ್ಯ ಆರೋಪದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ. ಘಟನೆ ಕುರಿತು ಟಿವಿ9ಗೆ ಮಾಹಿತಿ ನೀಡಿದ ನೀಲಕಂಠ ಅಂಗಡಿ, ಘಟನೆ ಸುಮಾರು 12 ಗಂಟೆಗೆ ನಡೆದಿದೆ. ಹಕ್ಕುಪತ್ರ ಮತ್ತು ಇ-ಖಾತೆ ವಿತರಣಾ ಕಾರ್ಯಕ್ರಮ ನಡೆಯುತ್ತಿತ್ತು….

Read More