ಜೆನ್ ಜೀ ಪ್ರೇಕ್ಷಕರ ಮನಗೆಲ್ಲುವ ಪ್ರಯತ್ನ; ಅಗಸ್ತ್ಯ ಹೊಸ ಸಿನಿಮಾ ‘ಡಿಂಚಕ್ ಡಿಂಚಕ್’ – Kannada News | Jotheyagi Hithavagi fame actor Agasthya new Kannada movie title Dinchak Dinchak
‘ಜೊತೆಯಾಗಿ ಹಿತವಾಗಿ’ ಎಂಬ ಕಾವ್ಯಾತ್ಮಕ ಚಿತ್ರದ ಮೂಲಕ ಸದ್ದಿಲ್ಲದೆ ಸ್ಯಾಂಡಲ್‌ವುಡ್ ಪ್ರವೇಶಿಸಿ ಪ್ರೇಕ್ಷಕರ ಗಮನ ಸೆಳೆದಿದ್ದ ಹೊಸ ನಟ ಅಗಸ್ತ್ಯ (Agasthya) ಅವರು ಈಗ ತಮ್ಮ ಎರಡನೇ ಸಿನಿಮಾದೊಂದಿಗೆ ಪ್ರೇಕ್ಷಕರ ಎದುರು ಬರಲು ಸಿದ್ಧತೆ ಮಾಡಿಕೊಂಡಿದ್ದಾರೆ. ವಿಭಿನ್ನ ಶೀರ್ಷಿಕೆಯ ಮೂಲಕ ಕುತೂಹಲ ಮೂಡಿಸುವ ಪ್ರಯತ್ನ ಅವರದ್ದಾಗಿದೆ. ಈ ಸಿನಿಮಾಗೆ ‘ಡಿಂಚಕ್ ಡಿಂಚಕ್’ (Dinchak Dinchak) ಎಂದು ಹೆಸರಿಡಲಾಗಿದೆ. ಹದಿಹರೆಯದವರ ತರಲೆ-ತಮಾಷೆ ಹಾಗೂ ಕೌಟುಂಬಿಕ ಭಾವನೆಗಳನ್ನೊಳಗೊಂಡ ಅಚ್ಚುಕಟ್ಟಾದ ಕಥಾ ಎಳೆಯನ್ನು ಅಗಸ್ತ್ಯ ಸಿದ್ಧಪಡಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ…