PBKS vs DC IPL 2026 Live Score: ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ – Kannada News | Punjab Kings vs Delhi Capitals IPL 2026 Live Cricket Score PBKS vs DC Match on 11th May latest news in Kannada

ಐಪಿಎಲ್ 2026 ರ 55 ನೇ ಪಂದ್ಯ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯುತ್ತಿದೆ. 19 ನೇ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಎರಡೂ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಶ್ರೇಯಸ್ ಅಯ್ಯರ್ ಪಂಜಾಬ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಕ್ಷರ್ ಪಟೇಲ್ ದೆಹಲಿ ತಂಡದ ನಾಯಕರಾಗಿದ್ದಾರೆ. ಪಂಜಾಬ್ ಈ ಪಂದ್ಯವನ್ನು ಗೆದ್ದು ಪ್ಲೇಆಫ್‌ಗೆ ಹತ್ತಿರವಾಗುವ ಅವಕಾಶವನ್ನು ಹೊಂದಿದೆ. ಏತನ್ಮಧ್ಯೆ, ದೆಹಲಿ ತಂಡವು ತಮ್ಮ ಕೊನೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ.

Source link

PBKS vs DC IPL 2026 Live Score: ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ – Kannada News | Punjab kings vs delhi capitals ipl 2026 live cricket score pbks vs dc match on 11th may latest news in kannada

ಐಪಿಎಲ್ 2026 ರ 55 ನೇ ಪಂದ್ಯ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯುತ್ತಿದೆ. 19 ನೇ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಎರಡೂ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಶ್ರೇಯಸ್ ಅಯ್ಯರ್ ಪಂಜಾಬ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಕ್ಷರ್ ಪಟೇಲ್ ದೆಹಲಿ ತಂಡದ ನಾಯಕರಾಗಿದ್ದಾರೆ. ಪಂಜಾಬ್ ಈ ಪಂದ್ಯವನ್ನು ಗೆದ್ದು ಪ್ಲೇಆಫ್‌ಗೆ ಹತ್ತಿರವಾಗುವ ಅವಕಾಶವನ್ನು ಹೊಂದಿದೆ. ಏತನ್ಮಧ್ಯೆ, ದೆಹಲಿ ತಂಡವು ತಮ್ಮ ಕೊನೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ.

Source link

ಬೆಂಗಳೂರಿನ ಕನಸಿನ ಯೋಜನೆಗೆ ಸಿಕ್ತು ವೇಗ: 153 ಮೆಟ್ರೋ ಕೋಚ್‌ ಖರೀದಿಗೆ ಐಸಿಎಫ್ ಜೊತೆ ಒಪ್ಪಂದ – Kannada News | Bengaluru Suburban Rail Project: K RIDE Signs Deal with ICF to Procure 153 Metro Coaches

ಬೆಂಗಳೂರು, ಮೇ 11: ಬೆಂಗಳೂರಿನ (Bangaluru) ಮಹತ್ವಾಕಾಂಕ್ಷಿ ಉಪನಗರ ರೈಲು ಯೋಜನೆಗೆ (Suburban Rail Project) ಮಹತ್ವದ ವೇಗ ದೊರೆತಿದ್ದು, 153 ಹವಾನಿಯಂತ್ರಿತ ಮೆಟ್ರೋ ಮಾದರಿಯ ಬೋಗಿಗಳನ್ನು ಪೂರೈಸಲು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಜೊತೆ ಕರ್ನಾಟಕ ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಎಂಟರ್‌ಪ್ರೈಸ್ (ಕೆ-ರೈಡ್) 1,513.75 ಕೋಟಿ ರೂ ವೆಚ್ಚದ ಒಪ್ಪಂದ ಮಾಡಿಕೊಂಡಿದೆ.

ಮುಖ್ಯಾಂಶಗಳು

  • 1,513.75 ಕೋಟಿ ರೂ ಬೃಹತ್ ಕಾರ್ಯಾದೇಶ
  • 153 ಹವಾನಿಯಂತ್ರಿತ ‘ಬ್ರಾಡ್-ಗೇಜ್ ಮೆಟ್ರೋ ಮಾದರಿಯ ಬೋಗಿಗಳು ಒದಗಿಸಲು ಒಪ್ಪಂದ
  • ಮುಂದಿನ 18 ತಿಂಗಳೊಳಗೆ ಬೋಗಿಗಳ ಪೂರೈಕೆ ಮಾಡುವುದು

ಇದನ್ನೂ ಓದಿ: ಮಲ್ಟಿ ಟ್ರ್ಯಾಕಿಂಗ್ ರೈಲ್ವೆ ಯೋಜನೆಗೆ ಕೇಂದ್ರ ಒಪ್ಪಿಗೆ: ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಬಂಪರ್ ಕೊಡುಗೆ

ಒಟ್ಟು 1,513.75 ಕೋಟಿ ರೂ ಮೊತ್ತದ ಕಾರ್ಯಾದೇಶವನ್ನು ಮೇ 6ರಂದು ಐಸಿಎಫ್‌ಗೆ ನೀಡಲಾಗಿದೆ. ಯೋಜನೆಯ ಕಾರಿಡಾರ್-2 ಮತ್ತು ಕಾರಿಡಾರ್-4ಕ್ಕೆ ಬ್ರಾಡ್-ಗೇಜ್ ಮೆಟ್ರೋ ಮಾದರಿಯ 153 ಬೋಗಿಗಳನ್ನು ಪೂರೈಸಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

ಒಪ್ಪಂದದ ಪ್ರಕಾರ ಮುಂದಿನ 18 ತಿಂಗಳೊಳಗೆ ಐಸಿಎಫ್ ಸಂಸ್ಥೆ ಕಡ್ಡಾಯವಾಗಿ ಬೋಗಿಗಳ ಪೂರೈಕೆ ಆರಂಭಿಸಬೇಕಿದೆ. ಏಕೆಂದರೆ ಕಾರಿಡಾರ್-2 ವ್ಯಾಪ್ತಿಯ ಚಿಕ್ಕಬಾಣಾವರ ಟು ಯಶವಂತಪುರ ಮಾರ್ಗವನ್ನು ನಿಗದಿತ ಸಮಯದಲ್ಲಿಯೇ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ. ಶೀಘ್ರದಲ್ಲೇ ಉಭಯ ಸಂಸ್ಥೆಗಳ ನಡುವೆ ಅಧಿಕೃತ ಒಡಂಬಡಿಕೆಗೆ (ಎಂಒಯು) ಸಹಿ ಬೀಳಲಿದೆ.

ಕಾರ್ಯಾದೇಶದ ಪ್ರಮುಖ ಅಂಶಗಳು

ಚೆನ್ನೈನ ಐಸಿಎಫ್‌ಗೆ ನೀಡಲಾದ ಈ ಸಮಗ್ರ ಗುತ್ತಿಗೆಯು ಕೇವಲ ಬೋಗಿಗಳ ನಿರ್ಮಾಣವನ್ನಷ್ಟೇ ಅಲ್ಲದೆ, ಈ ಕೆಳಗಿನ ಜವಾಬ್ದಾರಿಗಳನ್ನು ಒಳಗೊಂಡಿದೆ.

  • ರೈಲು ಬೋಗಿಗಳ ವಿನ್ಯಾಸ ಮತ್ತು ಸಂಪೂರ್ಣ ಉತ್ಪಾದನೆ
  • ಗುಣಮಟ್ಟ ಪರಿಶೀಲನೆ, ಜೋಡಣೆ, ಪರೀಕ್ಷೆ ಹಾಗೂ ಕಾರ್ಯಾರಂಭ
  • ಆರ್‌ಡಿಎಸ್‌ಒನಿಂದ ಅಗತ್ಯವಿರುವ ಶಾಸನಬದ್ಧ ಅನುಮೋದನೆಗಳನ್ನು ಪಡೆಯುವುದು
  • ಸಿಗ್ನಲಿಂಗ್, ವಿದ್ಯುತ್ ಪೂರೈಕೆ, ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ ಗುತ್ತಿಗೆಗಳೊಂದಿಗೆ ಸುಗಮ ಸಮನ್ವಯ
  • ಕಾರಿಡಾರ್‌ಗಳ ಯಶಸ್ವಿ ಕಾರ್ಯಾಚರಣೆಗೆ ಕಡ್ಡಾಯವಾಗಿರುವ ವಿಶ್ವಾಸಾರ್ಹತೆ, ಲಭ್ಯತೆ, ನಿರ್ವಹಣೆ ಮತ್ತು ಸುರಕ್ಷತಾ ಮಾನದಂಡಗಳ ಪೂರೈಕೆ ಮಾಡುವುದು

ಇದನ್ನೂ ಓದಿ: ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡ ಕಡೆಗಣನೆ: ರಾಜ್ಯಾದ್ಯಂತ ರೈಲು ಸಂಚಾರ ಬಂದ್ ಮಾಡುವ ಎಚ್ಚರಿಕೆ ನೀಡಿದ ಕರವೇ

ಈ ಬೃಹತ್ ಕಾರ್ಯಾದೇಶದಿಂದ ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿಗೆ ಮತ್ತಷ್ಟು ವೇಗ ದೊರೆಯುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪೆಟ್ರೋಲ್, ಡೀಸೆಲ್ ಕೊರತೆ ಇಲ್ಲ; ಪ್ರಧಾನಿ ಮೋದಿ ಮನವಿಯ ಬಳಿಕ ಸರ್ಕಾರ ಸ್ಪಷ್ಟನೆ – Kannada News | No Shortage Of Petrol and Diesel Petroleum Ministry Reassures After PM Modis Energy Conservation Appeal

ನವದೆಹಲಿ, ಮೇ 11: ಜಾಗತಿಕ ಪೂರೈಕೆ ಅಡಚಣೆಗಳ ನಡುವೆಯೂ ಇಂಧನ, ಎಲ್‌ಪಿಜಿ ದಾಸ್ತಾನುಗಳು ಸಾಕಷ್ಟು ಇವೆ ಎಂದು ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟನೆ ನೀಡಿದೆ. ಹಾಗೇ, ಇಂಧನವನ್ನು ಕಡಿಮೆ ಪ್ರಮಾಣದಲ್ಲಿ ಬಳಸಲು ನಾಗರಿಕರಿಗೆ ಮನವಿ ಮಾಡಿದೆ. ದೆಹಲಿಯಲ್ಲಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ (ಮಾರುಕಟ್ಟೆ ಮತ್ತು ತೈಲ ಸಂಸ್ಕರಣಾಗಾರ) ಸುಜಾತಾ ಶರ್ಮಾ, ಗ್ರಾಹಕರಿಗೆ ನಿರಂತರ ಇಂಧನ ಪೂರೈಕೆಯನ್ನು ಒದಗಿಸಲು ಸರ್ಕಾರ ಹಲವಾರು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.

“ಭಾರತ ಸರ್ಕಾರ ಹಲವಾರು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಸಾಮಾನ್ಯ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಇಂಧನ ಸರಬರಾಜುಗಳನ್ನು ಮಾಡಲಾಗುತ್ತಿದೆ” ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ (ಮಾರುಕಟ್ಟೆ ಮತ್ತು ತೈಲ ಸಂಸ್ಕರಣಾಗಾರ) ಸುಜಾತಾ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಕರೆಗೆ ಏರ್​ಟೆಲ್ ಮುಖ್ಯಸ್ಥರ ಬೆಂಬಲ; ಭಾರತದಲ್ಲಿ ಹೂಡಿಕೆ ಹೆಚ್ಚಿಸುವಂತೆ ಭಾರತೀಯ ಉದ್ಯಮಗಳಿಗೆ ಸುನೀಲ್ ಮಿತ್ತಲ್ ಕರೆ

“ಇರಾನ್ ಯುದ್ಧ ಪ್ರಾರಂಭವಾದಾಗಿನಿಂದ ಇತ್ತೀಚಿನ ದಿನಗಳಲ್ಲಿ ಮನೆಗಳಿಗೆ ವಿತರಿಸಲಾದ ಎಲ್‌ಪಿಜಿ ಸಿಲಿಂಡರ್‌ಗಳ ಸ್ಥಿತಿಯನ್ನು ವಿವರಿಸಿದ ಶರ್ಮಾ, “ಕಳೆದ ಮೂರು ದಿನಗಳಲ್ಲಿ 1 ಕೋಟಿ 14 ಲಕ್ಷ ಬುಕಿಂಗ್‌ಗಳಾಗಿದೆ. 1 ಕೋಟಿ 26 ಲಕ್ಷ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮನೆಗಳಿಗೆ ತಲುಪಿಸಲಾಗಿದೆ. ಅದೇ ರೀತಿ, ಕಳೆದ ಮೂರು ದಿನಗಳಲ್ಲಿ ಕಮರ್ಷಿಯಲ್ ಎಲ್‌ಪಿಜಿ ಮಾರಾಟವು 17,000 ಟನ್‌ಗಳನ್ನು ಮೀರಿದೆ. ಆಟೋ ಎಲ್‌ಪಿಜಿ ಮಾರಾಟವು ಸಹ 762 ಟನ್‌ಗಳನ್ನು ಮೀರಿದೆ.” ಎಂದು ಸುಜಾತಾ ಶರ್ಮಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚಿನ್ನ ಕೊಳ್ಳಬೇಡಿ, ವರ್ಕ್ ಫ್ರಂ ಹೋಮ್ ಮಾಡಿ, ಎಣ್ಣೆ ಹೆಚ್ಚು ಬಳಸದಿರಿ ಎಂದೆಲ್ಲಾ ಮೋದಿ ಅಂದಿದ್ದು ಯಾಕೆ? ಇಲ್ಲಿದೆ ನಿಜ ಕಾರಣ

ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲಿಯಂ ಉತ್ಪನ್ನಗಳನ್ನು ಎಚ್ಚರಿಕೆಯಿಂದ, ಮಿತವಾಗಿ ಬಳಸುವಂತೆ ನಾಗರಿಕರಿಗೆ ಮನವಿ ಮಾಡಿದ್ದರು. ಸಾಂಕ್ರಾಮಿಕ ರೋಗದ ಸಮಯದಲ್ಲಿರುವಂತೆ ವರ್ಕ್ ಫ್ರಂ ಹೋಂ, ಆನ್‌ಲೈನ್ ಮೀಟಿಂಗ್ ಮತ್ತು ವರ್ಚುವಲ್ ಸಭೆಗಳಿಗೆ ಆದ್ಯತೆ ನೀಡುವ ಬಗ್ಗೆಯೂ ಅವರು ಒತ್ತಿ ಹೇಳಿದ್ದರು.

“ಪೆಟ್ರೋಲ್ ಮತ್ತು ಡೀಸೆಲ್ ಜಾಗತಿಕವಾಗಿ ತುಂಬಾ ದುಬಾರಿಯಾಗಿರುವುದರಿಂದ ನಾವು ವಿದೇಶಿ ವಿನಿಮಯವನ್ನು ಉಳಿಸುವತ್ತ ಆದ್ಯತೆ ನೀಡಬೇಕು. ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಲು ಖರ್ಚು ಮಾಡುವ ವಿದೇಶಿ ಕರೆನ್ಸಿಯನ್ನು ಉಳಿಸುವುದು ನಮ್ಮ ಜವಾಬ್ದಾರಿಯಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೃಂಗೇರಿ ಅಂಚೆ ಮತ ವಿವಾದ: ಮರಳಿ ಶಾಸಕ ಸ್ಥಾನ ದೊರೆತಿರುವುದಕ್ಕೆ ಕಾಂಗ್ರೆಸ್​​ನ ರಾಜೇಗೌಡ ಫುಲ್ ಖುಷ್ – Kannada News | Sringeri postal vote controversy: Congress Rajegowda Talks after supreme court Stay On High court Order

ನವದೆಹಲಿ, (ಮೇ 11): ಶೃಂಗೇರಿ (sringeri) ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ‘ಯಥಾಸ್ಥಿತಿ’ ಕಾಯ್ದುಕೊಳ್ಳಲು ಆದೇಶಿಸಿದೆ. ಈ ಆದೇಶದಿಂದಾಗಿ, ಟಿ.ಡಿ. ರಾಜೇಗೌಡ ಅವರು ಶಾಸಕರಾಗಿ ಮುಂದುವರಿಯಲಿದ್ದು, ಇತ್ತೀಚೆಗೆ ಗೆದ್ದಿದ್ದ ಡಿ.ಎನ್. ಜೀವರಾಜ್ ಶಾಸಕ ಸ್ಥಾನಕ್ಕೆ ಹಿನ್ನಡೆಯಾಗಿದೆ. ಇನ್ನು ಅಂಚೆ ಮತ ಮರು ಎಣಿಕೆ ಆದೇಶಕ್ಕೆ ಸುಪ್ರೀಂಕೋರ್ಟ್​ ತಡೆ ನೀಡಿದ್ದಕ್ಕೆ ರಾಜೇಗೌಡ ಅವರು ಫುಲ್ ಖುಷ್ ಆಗಿದ್ದಾರೆ.

ಈ ಬಗ್ಗೆ ನವದೆದೆಹಲ್ಲಿ ಮಾತನಾಡಿ ರಾಜೇಗೌಡ , ಹೈಕೋರ್ಟ್ ಆದೇಶ ಮತ್ತು ನಂತರದ ಪ್ರಕ್ರಿಯೆಗೆ ತಡೆ ನೀಡಿದ್ದು, ಸುಪ್ರೀಂಕೋರ್ಟ್​ನಲ್ಲಿ‌ ನನಗೆ ನ್ಯಾಯ ಸಿಕ್ಕಿದೆ. ಅಂಚೆ ಮತ ಎಣಿಕೆಯಲ್ಲಿ 2 ಮತ ನನ್ನ ಪರವಾಗಿ ಬಂದಿತ್ತು. ನನ್ನ ಮತಗಳು ಹೆಚ್ಚಾಗುವ ಬದಲು ಕಡಿಮೆ‌ ತೋರಿಸಲಾಗಿತ್ತು. ಈ‌ ಹಂತದಲ್ಲಿ ‌ಅಕ್ರಮವಾಗಿದೆ ಎಂದು ಅನುಮಾನ ಇತ್ತು. ಹೀಗಾಗಿ ನಾನು ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ದೆ. ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಇದರಿಂದ ನ್ಯಾಯ ಸಿಕ್ಕಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ: ಕಾಂಗ್ರೆಸ್​​ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ ಸ್ಥಾನ

Source link

Video: ಬೆಂಗಳೂರಿನಲ್ಲಿ ಯೋಗ್ಯ ಜೀವನಕ್ಕೆ ತಿಂಗಳಿಗೆ 51,000 ರೂ ಬೇಕೇ ಬೇಕು; ಅಮೆಜಾನ್ ಉದ್ಯೋಗಿ ಹೀಗೆಂದಿದ್ದೇಕೆ? – Kannada News | Bengaluru: Amazon employee says he spends Rs 51,000 per month to live a decent life in Bengaluru

ಬೆಂಗಳೂರು, ಮೇ 11: ಇಂದಿನ ದುಬಾರಿ ದುನಿಯಾದಲ್ಲಿ ಬದುಕೋದೇ ಕಷ್ಟ. ಅದಲ್ಲದೇ, ಲಕ್ಷ ಲಕ್ಷ ಸಂಬಳ ಬರ್ತಾ ಇದ್ರು ತಿಂಗಳ ಕೊನೆಯಲ್ಲಿ ದುಡ್ಡು ಉಳಿಯಲ್ಲ ಎಂದು ಹೇಳೋದನ್ನು ಕೇಳಿದ್ದೀರಬಹುದು. ಅಮೆಜಾನ್‌ ಉದ್ಯೋಗಿಯೊಬ್ಬರು ಬೆಂಗಳೂರಿನಲ್ಲಿ (Bengaluru) ತಮ್ಮ ಮಾಸಿಕ ಖರ್ಚು ವೆಚ್ಚಗಳ ಬಗ್ಗೆ ಮಾತನಾಡಿದ್ದಾರೆ. ಯೋಗ್ಯ ಜೀವನಕ್ಕಾಗಿ ತಿಂಗಳಿಗೆ 50 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡುವುದಾಗಿ ರಿವೀಲ್‌ ಮಾಡಿದ್ದಾರೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ಚರ್ಚೆ ಹುಟ್ಟುಹಾಕಿದೆ.

ಕಾರ್ತಿಕ್ ಸಿಂಗ್ ಪರಿಹಾರ್ (trainlikekartik) ಎಂಬ 26 ವರ್ಷದ ಯುವಕ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಇದು ಬೆಂಗಳೂರಿನಲ್ಲಿ ನನ್ನ 10 ವರ್ಷಗಳ ಅನುಭವ ಎಂಬ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋದಲ್ಲಿ ಉತ್ತಮ ಜೀವನವನ್ನು ಕಾಪಾಡಿಕೊಳ್ಳಲು ತಿಂಗಳಿಗೆ ಸುಮಾರು 51,000 ರೂ ವೆಚ್ಚವಾಗುತ್ತದೆ ಎಂದು ಹೇಳಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ

ಹೆಚ್ ಎಸ್ ಆರ್ ಲೇಔಟ್‌ನಲ್ಲಿ 1ಬಿ ಹೆಚ್ ಕೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದು 20,000 ರೂ ಬಾಡಿಗೆ ಪಾವತಿಸುತ್ತೇನೆ. ಬೆಂಗಳೂರಿನ ಇತರ ಭಾಗಗಳಿಗೆ ಭೇಟಿ ನೀಡಿದ ನಂತರ, ಹೆಚ್‌ಎಸ್‌ಆರ್‌ನಲ್ಲಿ ಹಣಕ್ಕೆ ಮನೆ ಯೋಗ್ಯವಾಗಿದೆ ಎಂದು ನಾನು ಭಾವಿಸುತ್ತೇನೆ. ಬಾಡಿಗೆಯ ಹೊರತಾಗಿ, ಸೋಫಾ, ಫ್ರಿಡ್ಜ್ ಮತ್ತು ಹಾಸಿಗೆ ಸೇರಿದಂತೆ ಪೀಠೋಪಕರಣಗಳ ಬಾಡಿಗೆಗೆ 4,000 ರೂ ಆಗುತ್ತದೆ ಎಂದು ಹೇಳಿದ್ದಾರೆ.

ವಾರಕ್ಕೆ ಸುಮಾರು 1,000 ರೂ ದಿನಸಿಗಾಗಿ ಖರ್ಚು ಮಾಡುತ್ತೇನೆ, ಇದರಿಂದಾಗಿ ಮಾಸಿಕ ಪಡಿತರ ಖರ್ಚು 4,000 ರೂ ಆಗುತ್ತದೆ. ಆಫೀಸಿನಲ್ಲಿ ಊಟ ತಿಂಡಿಗಾಗಿ ತಿಂಗಳಿಗೆ 5,000 ರೂ ಆಗುತ್ತದೆ. ವಾರಾಂತ್ಯದಲ್ಲಿ ಕನಿಷ್ಠ ಒಂದು ಅಥವಾ ಎರಡು ಬಾರಿ ಹೊರಗೆ ಊಟ ಮಾಡುತ್ತೇನೆ. ವಾರಾಂತ್ಯಕ್ಕೆ ಸುಮಾರು 1,000 ರೂ ಖರ್ಚು ಮಾಡುತ್ತೇನೆ. ಅಂದರೆ ಮಾಸಿಕ ವೆಚ್ಚಗಳಿಗೆ ಹೆಚ್ಚುವರಿಯಾಗಿ 4,000 ರೂ ಸೇರುತ್ತದೆ ಎಂದಿದ್ದಾರೆ.

ಪೆಟ್ರೋಲ್‌ಗೆ ತಿಂಗಳಿಗೆ ಸುಮಾರು 1,500 ರೂ ಖರ್ಚು ತಗಲುತ್ತದೆ. ಜಿಮ್ ಸದಸ್ಯತ್ವಕ್ಕೆ ವಾರ್ಷಿಕ ಮೊತ್ತ 16,000 ರೂ ಅಂದರೆ ತಿಂಗಳಿಗೆ ಸುಮಾರು 1,300 ರೂ ವೆಚ್ಚ ಬರುತ್ತದೆ. ಬಟ್ಟೆಗಾಗಿ 2,000 ರೂ, ಪ್ರಯಾಣಕ್ಕಾಗಿ ತಿಂಗಳಿಗೆ 10,000 ರೂ ಮೀಸಲಿಡುತ್ತೇನೆ. ವಿದ್ಯುತ್ ಬಿಲ್ ತಿಂಗಳಿಗೆ ಸುಮಾರು 500 ರೂ ಬರುತ್ತದೆ. ಬೆಂಗಳೂರಿನಲ್ಲಿ 26 ವರ್ಷದ ಯುವಕನಾಗಿ ಯೋಗ್ಯ ಜೀವನವನ್ನು ನಡೆಸಲು ತಿಂಗಳಿಗೆ ಖರ್ಚು ಮಾಡುವ ಒಟ್ಟು ಮೊತ್ತ 51,000 ರೂ ಎಂದು ಹೇಳಿರುವುದನ್ನು ಕಾಣಬಹುದು.

ಇದನ್ನೂ ಓದಿ: ಬೆಳ್ಳಂದೂರಿನಿಂದ ಏರ್​​ಪೋರ್ಟ್​​ಗೆ ತೆರಳಲು ಮೂರುವರೆ ಗಂಟೆ!: ಬೆಂಗಳೂರು ಟ್ರಾಫಿಕ್​​ ಭೀಕರತೆ ತೆರೆದಿಟ್ಟ ಯುವತಿಯ ವಿಡಿಯೋ ವೈರಲ್​​

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಹೆಚ್ ಎಸ್ ಆರ್ ನಲ್ಲಿ ಬಾಡಿಗೆ ದುಬಾರಿಯಾಗಿದೆ, ಆದರೆ ಸ್ಥಳವು ಖಂಡಿತವಾಗಿ ವಾಸಕ್ಕೆ ಯೋಗ್ಯವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮೆಟ್ರೋ ನಗರಗಳಲ್ಲಿ ಹಣವನ್ನು ಉಳಿಸುವುದು ತುಂಬಾ ಕಷ್ಟಕರ ಎಂದು ಹೇಳಿದ್ದಾರೆ. ಮತ್ತೊಬ್ಬರು, ಪ್ರಯಾಣ ಮತ್ತು ಜೀವನಶೈಲಿಯ ವೆಚ್ಚಗಳು ಮೂಲಭೂತ ಅಗತ್ಯಗಳಲ್ಲ, ವೈಯಕ್ತಿಕ ಆಯ್ಕೆಗಳು ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಐನಿಂದ ಉದ್ಯೋಗಗಳು ಹೋಗೋದು ಸುಳ್ಳಾ? ಕೆಲಸ ಸೇರುವ ಸಮಯ ಇದು ಎನ್ನುತ್ತಾರೆ ಜೆನ್ಸೆನ್ ಹುವಾಂಗ್ – Kannada News | Jensen Huang tells youth that AI won’t replace them, but someone using AI better than they will

ನವದೆಹಲಿ, ಮೇ 11: ಟೆಕ್ ಕಂಪನಿಗಳು ಕಳೆದ ಕೆಲ ತಿಂಗಳಿಂದ ಲಕ್ಷದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ. ಕಳೆದ ಐದಾರು ವರ್ಷಗಳಿಂದಲೂ ಈ ಟ್ರೆಂಡ್ ಇದೆ. ಕೋವಿಡ್ ಕಾರಣವೊಡ್ಡಿ ಲೇ ಆಫ್ ಮಾಡಲಾಯಿತು, ಕಾಸ್ಟ್ ಕಟ್ಟಿಂಗ್ ಎಂದು ಹೇಳಿ ಮಾಡಲಾಯಿತು. ಈಗ ಎಐ ಕಾರಣ ನೀಡಲಾಗುತ್ತಿದೆ. ಎಐ ಪ್ರಬಲವಾಗಿ ಬೆಳೆಯುತ್ತಿರುವುದು ಹೌದು. ಆದರೆ, ಎಐನದ್ದೇ ಕಾರಣಕ್ಕೆ ಉದ್ಯೋಗಗಳು ನಶಿಸುತ್ತಿವೆಯಾ? ಟೆಕ್ ಪಂಡಿತರ ನಡುವೆಯೇ ಭಿನ್ನಾಭಿಪ್ರಾಯಗಳಿವೆ. ಇಲಾನ್ ಮಸ್ಕ್ ಅವರಂತಹ ದೊಡ್ಡ ಟೆಕ್ ಉದ್ಯಮಿಗಳೇ ಎಐನಿಂದ ಕೆಲಸ ಹೋಗುತ್ತೆ ಎಂತಿದ್ದಾರೆ. ಆದರೆ, ಇನ್ನೂ ಕೆಲವರು, ಎಐನಿಂದ ಕೆಲಸ ಹೋಗೋದು ನಿಜ. ಆದರೆ, ಹೊಸ ರೀತಿಯ ಉದ್ಯೋಗಗಳ ಸೃಷ್ಟಿಯಾಗುತ್ತೆ ಎಂತಿದ್ದಾರೆ. ಈ ಎರಡನೇ ವರ್ಗದವರ ಮಾತಿಗೆ ಎನ್​ವಿಡಿಯಾ ಸಂಸ್ಥಾಪಕ ಜೆನ್ಸೆನ್ ಹುವಾಂಗ್ (NVidia founder Jensen Huang) ಧ್ವನಿಗೂಡಿಸಿದ್ದಾರೆ.

ಅಮೆರಿಕದ ಪಿನ್ಸೆಲ್ವಿನೇಯಾದ ಕಾರ್ನೆಜೀ ಮೆಲ್ಲಾನ್ ಯೂನಿವರ್ಸಿಟಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ತೈವಾನ್ ಮೂಲದ ಅಮೆರಿಕನ್ ಉದ್ಯಮಿ ಜೆನ್ಸೆನ್ ಹುವಾಂಗ್, ಯುವಜನರಿಗೆ ಕೆಲಸ ಮಾಡಲು ಇದು ಪ್ರಶಸ್ತ ಸಮಯ ಎಂದಿದ್ದಾರೆ.

ಇದನ್ನೂ ಓದಿ: ಮೋದಿ ಕರೆಗೆ ಏರ್​ಟೆಲ್ ಮುಖ್ಯಸ್ಥರ ಬೆಂಬಲ; ಭಾರತದಲ್ಲಿ ಹೂಡಿಕೆ ಹೆಚ್ಚಿಸುವಂತೆ ಭಾರತೀಯ ಉದ್ಯಮಗಳಿಗೆ ಸುನೀಲ್ ಮಿತ್ತಲ್ ಕರೆ

‘ನಿಮ್ಮ ಕನಸುಗಳನ್ನು ಸಾಕಾರಗೊಳಿಸುವ ಸಮಯ ಈಗ ಬಂದಿದೆ. ಇದಕ್ಕಿಂತ ಹೆಚ್ಚು ಪ್ರಶಸ್ತ ಸಮಯ ಸಿಕ್ಕಲ್ಲ’ ಎಂದು ಶಕ್ತಿಶಾಲಿ ಜಿಪಿಯುಗಳನ್ನು ತಯಾರಿಸುವ ಎನ್​ವಿಡಿಯಾ ಕಂಪನಿಯ ಸಂಸ್ಥಾಪಕರು ಅಭಿಪ್ರಾಯಪಟ್ಟಿದ್ದಾರೆ.

ವಿವಿಧ ವರ್ಗಗಳ ಮಧ್ಯೆ ಇದ್ದ ತಂತ್ರಜ್ಞಾನ ಅಂತರವನ್ನು ಎಐ ತಗ್ಗಿಸುತ್ತಿದೆ ಎಂದು ಹೇಳಿದ ಹುವಾಂಗ್, ಎಲ್ಲಾ ರೀತಿಯ ಜನರು ಏನಾದರೂ ಉಪಯುಕ್ತವಾದುದನ್ನು ನಿರ್ಮಿಸಲು ಎಐ ಅವಕಾಶ ಕೊಡುತ್ತದೆ. ಇದರಿಂದ ಯುವಜನರಿಗೆ ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ ಎಂದು ನಿರೀಕ್ಷಿಸಿದ್ದಾರೆ.

ಇದನ್ನೂ ಓದಿ: ಚಿನ್ನದ ಮೇಲೆ ಆಮದು ಸುಂಕ ಏರಿಕೆಯಾಗುತ್ತಾ? ಆಭರಣ ಪ್ರಿಯರಿಗೆ ನಿರಾಳ ತರುವ ಸುದ್ದಿ

ಎಐನಿಂದ ನಿಮ್ಮ ಕೆಲಸ ಹೋಗೋದಿಲ್ಲ…

ಕಾರ್ನೆಜೀ ಮೆಲ್ಲೋನ್ ಯೂನಿವರ್ಸಿಟಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಜೆನ್ಸೆನ್ ಹುವಾಂಗ್, ಎಐ ನಿಮ್ಮ ಕೆಲಸ ಕಿತ್ತುಕೊಳ್ಳುವುದಿಲ್ಲ. ಆದರೆ, ನಿಮಗಿಂತ ಚೆನ್ನಾಗಿ ಎಐ ಅನ್ನು ಬಳಸುವವರು ನಿಮ್ಮ ಕೆಲಸ ಕಸಿಯುತ್ತಾರೆ ಎಂದು ಹುವಾಂಗ್ ಎಚ್ಚರಿಸಿದ್ದಾರೆ.

ಇದೇ ವೇಳೆ, ಎಐನಿಂದಾಗಿ ಯಾರಿಗೂ ಕೆಲಸವೇ ಇರುವುದಿಲ್ಲ ಎಂದು ಹೇಳುವ ಕೆಲ ಟೆಕ್ ನಾಯಕರ ಅನಿಸಿಕೆಗಳಿಗೆ ಜೆನ್ಸೆನ್ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಮಾತುಗಳು ಸರಿಯಲ್ಲ. ನನ್ನಂತೆ ಸಿಇಒಗಳಾಗಿರುವವರಿಂದ ಈ ಮಾತುಗಳು ಬರುತ್ತಿವೆ. ಸಿಇಒ ಆದಾಕ್ಷಣ ದೇವರಾದರಂತೆ ತಿಳಿದುಬಿಡುತ್ತಾರೆ. ಒಂದು ವಿಚಾರ ತಿಳಿಯುವ ಮುನ್ನವೇ ಎಲ್ಲಾ ತಿಳಿದಿದೆ ಎಂದು ಭಾವಿಸಿಬಿಡುತ್ತಾರೆ ಎಂದು ಎನ್​ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಲೇವಡಿ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಗತ್ಯಸೇವೆಗಳು ಕೂಡ ದುಬಾರಿ ಆಗಬಹುದು ಎಂದ ಆರ್ಥಿಕ ತಜ್ಞ – Kannada News | Daily necessities things price hike Over Fuel Crisis says Finance Expert Rudramurth

ಬೆಂಗಳೂರು, (ಮೇ 11):  ಮಧ್ಯಪ್ರಾಚ್ಯ ಯುದ್ದದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ (Petrol and diesel) ಬೆಲೆ ಏರಿಕೆಯ ಭೀತಿ ಉಂಟಾಗಿರುವ ನಡುವೆಯೇ, ಎಚ್ಚರಿಕೆಯ ನುಡಿಗಳನ್ನು ಆಡಿರುವ ಪ್ರಧಾನಿ ನರೇಂದ್ರ ಮೋದಿ, ‘ಅಂತಾರಾಷ್ಟ್ರೀಯ ಸಂಘ ರ್ಷಗಳಿಂದ ಆಗುತ್ತಿರುವ ಬೆಲೆ ಏರಿಕೆಗಳನ್ನು ಎದುರಿಸಲು ಎಲ್ಲರಸಾಮೂಹಿಕ ಭಾಗೀದಾರಿಕೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸನ್ನಿಹಿತವಾಗಿದೆ ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಮೋದಿ ಅವರ ಈ ಹೇಳಿಕೆ ನಾನಾ ರೀತಿಯ ಚರ್ಚೆಗಳು ಶುರುವಾಗಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳವಾಗಲಿದೆ ಎನ್ನಲಾಗಿದೆ. ಇದರ ಮಧ್ಯೆ ಆರ್ಥಿಕ ತಜ್ಞ ರುದ್ರಮೂರ್ತಿ ಅವರು ಟಿವಿ9 ಜೊತೆ ಮಾತನಾಡಿ, ಅಗತ್ಯ ವಸ್ತುಗಳ ಬಗ್ಗೆ ಬೆಲೆ ಏರಿಕೆಯಾಗಲಿದೆ ಎಂದಿದ್ದಾರೆ.

ಇದನ್ನೂ ನೋಡಿ: ಪ್ರಧಾನಿ ಮೋದಿ ಸಲಹೆ ಪಾಲಿಸದಿದ್ರೆ ದೇಶಕ್ಕೆ ಸಂಕಷ್ಟ ಎಂದ ರುದ್ರಮೂರ್ತಿ

Source link

ಜೆನ್ ಜೀ ಪ್ರೇಕ್ಷಕರ ಮನಗೆಲ್ಲುವ ಪ್ರಯತ್ನ; ಅಗಸ್ತ್ಯ ಹೊಸ ಸಿನಿಮಾ ‘ಡಿಂಚಕ್ ಡಿಂಚಕ್’ – Kannada News | Jotheyagi Hithavagi fame actor Agasthya new Kannada movie title Dinchak Dinchak

‘ಜೊತೆಯಾಗಿ ಹಿತವಾಗಿ’ ಎಂಬ ಕಾವ್ಯಾತ್ಮಕ ಚಿತ್ರದ ಮೂಲಕ ಸದ್ದಿಲ್ಲದೆ ಸ್ಯಾಂಡಲ್‌ವುಡ್ ಪ್ರವೇಶಿಸಿ ಪ್ರೇಕ್ಷಕರ ಗಮನ ಸೆಳೆದಿದ್ದ ಹೊಸ ನಟ ಅಗಸ್ತ್ಯ (Agasthya) ಅವರು ಈಗ ತಮ್ಮ ಎರಡನೇ ಸಿನಿಮಾದೊಂದಿಗೆ ಪ್ರೇಕ್ಷಕರ ಎದುರು ಬರಲು ಸಿದ್ಧತೆ ಮಾಡಿಕೊಂಡಿದ್ದಾರೆ. ವಿಭಿನ್ನ ಶೀರ್ಷಿಕೆಯ ಮೂಲಕ ಕುತೂಹಲ ಮೂಡಿಸುವ ಪ್ರಯತ್ನ ಅವರದ್ದಾಗಿದೆ. ಈ ಸಿನಿಮಾಗೆ ‘ಡಿಂಚಕ್ ಡಿಂಚಕ್’ (Dinchak Dinchak) ಎಂದು ಹೆಸರಿಡಲಾಗಿದೆ. ಹದಿಹರೆಯದವರ ತರಲೆ-ತಮಾಷೆ ಹಾಗೂ ಕೌಟುಂಬಿಕ ಭಾವನೆಗಳನ್ನೊಳಗೊಂಡ ಅಚ್ಚುಕಟ್ಟಾದ ಕಥಾ ಎಳೆಯನ್ನು ಅಗಸ್ತ್ಯ ಸಿದ್ಧಪಡಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ವಿಚಿತ್ರ ಎನಿಸಿದರೂ, ಇಂದಿನ ತಲೆಮಾರಿಗೆ ಹತ್ತಿರವಾಗುವ ಶೀರ್ಷಿಕೆಗಳು ಹೆಚ್ಚು ಆಕರ್ಷಕ ಎನಿಸಿಕೊಳ್ಳುತ್ತಿವೆ ಎಂಬುದು ಚಿತ್ರತಂಡದ ನಂಬಿಕೆ. ಇದೇ ಹಾದಿಯಲ್ಲಿ ಹೊರಟಿರುವ ‘ಡಿಂಚಕ್ ಡಿಂಚಕ್’ ಚಿತ್ರತಂಡ, ಪ್ರಮುಖವಾಗಿ ಜನ್-ಜೀ (Gen-Z) ಮತ್ತು ಜನ್ ಆಲ್ಫಾ (Gen-Alpha) ವರ್ಗದವರನ್ನು ಗಮನದಲ್ಲಿ ಇಟ್ಟುಕೊಂಡಿದೆ.

ಕಳೆದ ವರ್ಷ ಬಿಡುಗಡೆಯಾಗಿದ್ದ ‘ಜೊತೆಯಾಗಿ ಹಿತವಾಗಿ’ ಸಿನಿಮಾ ಸೀಮಿತ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದರೂ, ಅಗಸ್ತ್ಯ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಎರಡನೇ ಚಿತ್ರದಲ್ಲಿ ನಟನೆಯ ಜೊತೆಗೆ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನೂ ತಮ್ಮ ತಂಡದೊಂದಿಗೆ ಹಂಚಿಕೊಂಡು ಸಾಗಲು ಅಗಸ್ತ್ಯ ಅಣಿಯಾಗಿದ್ದಾರೆ ಎಂಬುದು ವಿಶೇಷ.

‘ಶ್ರೀರತ್ನ ಫಿಲ್ಮ್ ಕಂಪನಿ’ ಮೂಲಕ ಈ ಸಿನಿಮಾ ನಿರ್ಮಾಣ ಆಗಲಿದೆ. ಆನಂದ್ ರಾಜ ವಿಕ್ರಮ ಅವರು ಸಂಗೀತ ನೀಡುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಭಿನ್ನ ಶೈಲಿಯ ಹಾಡುಗಳು ಇರಲಿವೆ ಎನ್ನಲಾಗಿದೆ. ಅಭಿರೇಖ ಕೃಷ್ಣ ಅವರು ಕಾಸ್ಟ್ಯೂಮ್ ಡಿಸೈನ್ ಮಾಡಲಿದ್ದಾರೆ. ಉತ್ತಮ ಮೇಕಿಂಗ್ ಸಲುವಾಗಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ ಎಂದು ಕ್ರಿಯೇಟಿವ್ ಹೆಡ್ ಪ್ರಶಾಂತ್ ಬಾಗೂರು ತಿಳಿಸಿದ್ದಾರೆ.

ಇದನ್ನೂ ಓದಿ: ಕನ್ನಡದ ಕಲಾವಿದರು ನಟಿಸಿದ ‘ಕೃಷ್ಣಾವತಾರಂ’ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿ

ಈಗ ‘ಡಿಂಚಕ್ ಡಿಂಚಕ್’ ಸಿನಿಮಾದ ಚಿತ್ರೀಕರಣಕ್ಕೆ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಉಳಿದ ತಾಂತ್ರಿಕ ವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ವಿಭಿನ್ನ ಶೀರ್ಷಿಕೆಯೊಂದಿಗೆ ಸೆಟ್ಟೇರಲಿರುವ ‘ಡಿಂಚಕ್ ಡಿಂಚಕ್’ ಸಿನಿಮಾ ಎಷ್ಟು ಡಿಫರೆಂಟ್ ಆಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಸ್ತೆ ಅಪಘಾತದಲ್ಲಿ ತೆಲುಗು ನಟ ಭರತ್ ಕಾಂತ್ ನಿಧನ; ಚಿತ್ರರಂಗದ ಕಂಬನಿ – Kannada News | Telugu actor Bharath Kanth dies in Car Accident in Hyderabad Outer Ring Road

ತೆಲುಗು ಚಿತ್ರರಂಗದ ಉದಯೋನ್ಮುಖ ನಟ ಭರತ್ ಕಾಂತ್ (31) ಅವರು ಹೈದರಾಬಾದ್‌ನ ಹೊರವರ್ತುಲ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Car Accident) ನಿಧನರಾಗಿದ್ದಾರೆ. ಭರತ್ ಅವರೊಂದಿಗೆ ಪ್ರಯಾಣಿಸುತ್ತಿದ್ದ ಸಾಯಿ ತ್ರಿಲೋಕ್ ಎಂಬುವವರು ಕೂಡ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅದಿಬಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಸಿಟ್ ನಂ. 12ರ ಬಳಿ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಭರತ್ ಕಾಂತ್ (Bharath Kanth), ಸಾಯಿ ತ್ರಿಲೋಕ್ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಟ್ರಕ್‌ಗೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಭರತ್ ಕಾಂತ್ ಮತ್ತು ಸಾಯಿ ತ್ರಿಲೋಕ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಭರತ್ ಕಾಂತ್ ಮತ್ತು ಸಾಯಿ ತ್ರಿಲೋಕ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಭರತ್ ಕಾಂತ್ ಅವರು ‘ಗ್ರಾಮಂ’ ಮತ್ತು ‘ಟೆನೆಂಟ್’ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದರು. ಕೇವಲ ಸಿನಿಮಾಗಳಲ್ಲದೇ ‘ಗೀತಾಂಜಲಿ’ ಮತ್ತು ‘ಪಾರ್ವತಿ ಪರಮೇಶ್ವರಲು’ ಮುಂತಾದ ಜನಪ್ರಿಯ ವೆಬ್ ಸರಣಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಅವರೊಂದಿಗೆ ಮೃತಪಟ್ಟ ಸಾಯಿ ತ್ರಿಲೋಕ್ ಅವರು ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರು.

ಭರತ್ ಅವರ ಆಪ್ತ ಗೆಳತಿ ಹಾಗೂ ನಟಿ ಆಶು ರೆಡ್ಡಿ ಈ ಸಾವಿನ ಸುದ್ದಿಯಿಂದ ದಿಗ್ಭ್ರಾಂತರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಭರತ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿರುವ ಅವರು, ‘ಇದು ನನಗೆ ವೈಯಕ್ತಿಕ ನಷ್ಟ. ನನ್ನ ಆತ್ಮೀಯ ಗೆಳೆಯ, ನನ್ನ ಎಮರ್ಜೆನ್ಸಿ ಕಾಂಟ್ಯಾಕ್ಟ್ ಮತ್ತು ನನ್ನ ಕುಟುಂಬದಂತಿದ್ದ ವ್ಯಕ್ತಿ ಈಗ ನಿಧನರಾಗಿದ್ದಾರೆ. ನೀನು ಹೋದ ಜಾಗಕ್ಕೆ ಈ ಸಂದೇಶ ತಲುಪುವುದಿಲ್ಲ ಎಂದು ಗೊತ್ತಿದ್ದರೂ ಬರೆಯುತ್ತಿದ್ದೇನೆ. ನಿನ್ನ ನಗು ಯಾವಾಗಲೂ ನೆನಪಿರುತ್ತದೆ’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಭೀಕರ ಅಪಘಾತ: ಪ್ರಭಾಸ್ ನಟನೆಯ ‘ಫೌಜಿ’ ಚಿತ್ರತಂಡದ ಸದಸ್ಯ ಸಾವು; ಶೂಟಿಂಗ್ ಸ್ಥಗಿತ

ಕಾರು ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತರ ದೇಹಗಳನ್ನು ಉಸ್ಮಾನಿಯಾ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ದೇಹಗಳನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version