ಆರೋಗ್ಯಕರ ಜೀವನ ನಡೆಸಲು ಬಯಸಿದರೆ ಈ ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ – Kannada News | These small habits of daily life can have big effects on health

ನಮ್ಮ ಅಭ್ಯಾಸಗಳು ಕೂಡ ನಮ್ಮ ಆರೋಗ್ಯದ (health) ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತವೆ.  ವ್ಯಾಯಾಮ ಮಾಡುವುದು, ಆರೋಗ್ಯಕರ ಆಹಾರ ಸೇವನೆ ಮಾಡುವುದು, ಮೊಬೈಲ್‌ ಫೋನ್‌ನ ಮಿತ ಬಳಕೆ, ರಾತ್ರಿ ಬೇಗ ಮಲಗುವುದು ಈ ಎಲ್ಲಾ ಅಭ್ಯಾಸಗಳು ಆರೋಗ್ಯದ ಮೇಲೆ ಸಕಾರಾತ್ಮಕ ರೀತಿಯಲ್ಲಿ ಪರಿಣಾಮ ಬೀರುವಂತೆ ತಿಳಿದೋ ತಿಳಿಯದೆಯೋ ಮಾಡುವ ಕೆಲವೊಂದು ತಪ್ಪುಗಳು, ದೈನಂದಿನ ಅಭ್ಯಾಸಗಳು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಕಾಲಾನಂತರದಲ್ಲಿ, ಈ ಅಭ್ಯಾಸಗಳು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಹಾಗಾಗಿ ಈ ಕೆಲವೊಂದು ದೈನಂದಿನ ಅಭ್ಯಾಸಗಳನ್ನು ತ್ಯಜಿಸುವ ಮೂಲಕ ಆರೋಗ್ಯಕ ಜೀವನವನ್ನು ನಡೆಸಿ.

ಆರೋಗ್ಯಕರ ಜೀವನಕ್ಕಾಗಿ ಇಂದೇ ಈ ಅಭ್ಯಾಸಗಳನ್ನು ತ್ಯಜಿಸಿ:

 ದೀರ್ಘಕಾಲದವರೆಗೆ ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದು: ಅನೇಕ ಸಂದರ್ಭದಲ್ಲಿ ಹೆಚ್ಚಿನವರು ಮೂತ್ರವನ್ನು ತಡೆದಿಟ್ಟುಕೊಳ್ಳುತ್ತಾರೆ. ಆ ಕ್ಷಣಕ್ಕೆ ಇದರ ಪರಿಣಾಮ ಆರೋಗ್ಯದ ಮೇಲೆ ಬೀರದಿದ್ದರೂ ನಂತರದಲ್ಲಿ ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ವಾಸ್ತವವಾಗಿ, ಮೂತ್ರವು ಮೂತ್ರಕೋಶದಲ್ಲಿ ಸಿಕ್ಕಿಹಾಕಿಕೊಂಡಾಗ, ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯಬಹುದು, ಇದು ಮೂತ್ರನಾಳದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಮೂತ್ರವನ್ನು ತಡೆದಿಟ್ಟುಕೊಳ್ಳುವ ಅಭ್ಯಾಸವನ್ನು ಬಿಟ್ಟು ಬಿಡಿ.

ಬಾಯಿ ತೆರೆದು ಮಲಗುವುದು: ಕೆಲವರು ಬಾಯಿ ತೆರೆದು ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದು ಸಣ್ಣದಾಗಿ ಕಂಡರೂ ಇದು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಬಾಯಿ ತೆರೆದು ಮಲಗುವುದರಿಂದ ನಿದ್ರೆಯ ಗುಣಮಟ್ಟ ಕಡಿಮೆಯಾಗಬಹುದು ಅಲ್ಲದೆ ಈ ಸ್ಥಿತಿಯು ಹೃದಯರಕ್ತನಾಳದ ಕಾಯಿಲೆ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ದೀರ್ಘಕಾಲ ತಪ ಸ್ಥಾನದಲ್ಲಿ ಕುಳಿತುಕೊಳ್ಳುವುದು: ದೀರ್ಘಕಾಲ ಒಂದೇ ಸ್ಥಾನದಲ್ಲಿ ಅಥವಾ  ತಪ್ಪು ಸ್ಥಾನದಲ್ಲಿ ಕುಳಿತುಕೊಳ್ಳುವುದು ಕೂಡ ಆರೋಗ್ಯಕ್ಕೆ ಹಾನಿಕಾರಕ. ಉದಾಹರಣೆಗೆ ದೀರ್ಘ ಕಾಲ ಬಾಗಿ ಕುಳಿತುಕೊಳ್ಳುವುದು ಅಥವಾ ಕೆಲಸ ಮಾಡುವುದು, ಇದು ಬೆನ್ನು ಮತ್ತು ಕುತ್ತಿಗೆಯ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ. ಇದಲ್ಲದೆ, ದೀರ್ಘಕಾಲದವರೆಗೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ನಂತರ ಇದು ಕೀಲುಗಳ ಸಮಸ್ಯೆಗಳಿಗೂ ಕಾರಣವಾಗಬಹುದು.

ಶೌಚಾಲಯದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು:  ಹೆಚ್ಚಿನ ಜನರು ಮೊಬೈಲ್ ಫೋನ್ ನೋಡುತ್ತಾ ಶೌಚಾಲಯದಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಹೀಗೆ ದೀರ್ಘಕಾಲ ಶೌಚಾಲಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದಲ್ಲ. ಹೆಚ್ಚು ಹೊತ್ತು ಶೌಚಾಲಯದಲ್ಲಿ ಕುಳಿತುಕೊಳ್ಳುವುದರಿಂದ ರಕ್ತನಾಳಗಳ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ, ಇದು ಮೂಲವ್ಯಾಧಿ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಅಬ್ಬಬ್ಬಾ… ಮನೆಯಲ್ಲಿ ನಾಯಿ ಸಾಕುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

ಮುಖವನ್ನು ಆಗಾಗ್ಗೆ ಮುಟ್ಟುವುದು: ನಿಮ್ಮ ಮುಖವನ್ನು ಆಗಾಗ್ಗೆ ಸ್ಪರ್ಶಿಸುವ ಅಭ್ಯಾಸವಿದ್ದರೆ, ಇಂದೇ ಈ ಅಭ್ಯಾಸವನ್ನು ಬದಲಾಯಿಸಿ. ಏಕೆಂದರೆ ನಮ್ಮ ಕೈಗಳು ದಿನವಿಡೀ ಅನೇಕ ವಸ್ತುಗಳನ್ನು ಸ್ಪರ್ಶಿಸುತ್ತವೆ, ಅವು ಬ್ಯಾಕ್ಟೀರಿಯಾಗಳನ್ನು ಸಂಗ್ರಹಿಸುತ್ತವೆ. ಅದೇ ಕೈಗಳಿಂದ ನಿಮ್ಮ ಮುಖವನ್ನು ಸ್ಪರ್ಶಿಸುವುದರಿಂದ ಚರ್ಮದ ಸೋಂಕು, ದದ್ದುಗಳು ಮತ್ತು ಕಿರಿಕಿರಿ ಉಂಟಾಗುತ್ತದೆ.

ಅವಸರದಲ್ಲಿ ತಿನ್ನುವುದು: ನಮ್ಮಲ್ಲಿ ಅನೇಕರು ಆಹಾರವನ್ನು ಗಡಿಬಿಡಿಯಲ್ಲಿ ಬೇಗ ಬೇಗನೇ ತಿಂದು ಮುಗಿಸುತ್ತಾರೆ. ಈ ಅಭ್ಯಾಸ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದು ಅಗತ್ಯಕ್ಕಿಂತ ಹೆಚ್ಚು ತಿನ್ನುವಂತೆ ಮಾಡುತ್ತದೆ, ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ. ಹಾಗಾಗಿ ಯಾವಾಗಲೂ ನಿಧಾನವಾಗಿ ಜಗಿದು ಆಹಾರವನ್ನು ಸೇವಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 Kannada News Live: ಶೆಡ್​​ಗೆ ಬೆಂಕಿ ತಗುಲಿ ಮಕ್ಕಳಿಬ್ಬರು ದಹನ; ಬೆಟ್ಟದಿಂದ ಜಿಗಿದು ಇಂಜಿನಿಯರ್ ಆತ್ಮಹತ್ಯೆ – Kannada News | TV9 Kannada News Live: Two Children Die in Bengaluru Fire Accident; Engineer Dies by Suicide After Jumping Off Hill

ಅತ್ನಿ ಅವಘಡ, ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರ್ Image Credit source: tv9 kannada

ಬೆಂಗಳೂರು, ಮೇ 11: ನಗರದ ಕೊತ್ತನೂರು ಸಮೀಪದ ನಾರಾಯಣಪುರದಲ್ಲಿ ಶೆಡ್‌ಗೆ ಬೆಂಕಿ (fire tragedy) ತಗುಲಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಅರ್ಜುನ್ (5) ಮತ್ತು ಆಶಾ (3) ಮೃತ ಮಕ್ಕಳು. ಮತ್ತೊಂದು ಪ್ರಕರಣದಲ್ಲಿ PWD ಸಹಾಯಕ ಇಂಜಿನಿಯರ್​​ ಬೆಟ್ಟದಿಂದ ಜಿಗಿದು ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ತುಮಕೂರು ತಾಲೂಕಿನ ದೇವರಾಯನದುರ್ಗ ಬೆಟ್ಟದಲ್ಲಿ ನಡೆದಿದೆ. ಮಂಜುಪ್ರಸಾದ್​​ (33) ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರ್​.

ನಡೆದಿದ್ದೇನು?

ದುರ್ಗಪ್ಪ ಮತ್ತು ಸಾವಿತ್ರಿ ದಂಪತಿ ಕಳೆದ ಆರು ತಿಂಗಳಿಂದ ಇಬ್ಬರು ಮಕ್ಕಳೊಂದಿಗೆ ನಾರಾಯಣಪುರದ ಶೆಡ್‌ಗಳಲ್ಲಿ ವಾಸವಾಗಿದ್ದರು. ಜೆಸಿಎಸ್ ಕಂಪನಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ದಂಪತಿ, ಕಳೆದ ಒಂದು ವಾರದಿಂದ ಊರಿಗೆ ಹೋಗಿದ್ದರು. ಕೆಲಸ ಅಂತ ಇಂದು ಬೆಂಗಳೂರಿಗೆ ಮರಳಿದ್ದಾರೆ. ಕೆಲಸ ಮಾಡುವ ಸ್ಥಳಕ್ಕೆ ಮಕ್ಕಳನ್ನು ಕರೆದುಕೊಂಡು ಬರಬೇಡಿ ಎಂದು ಮೇಸ್ತ್ರಿ ಸೂಚಿಸಿದ್ದರಿಂದ ತಾಯಿ ಮಕ್ಕಳನ್ನು ಅಜ್ಜಿಯ ಜೊತೆ ಶೆಡ್‌ನಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದರು.

ಮಧ್ಯಾಹ್ನ ಸುಮಾರು 1 ಗಂಟೆಗೆ ಅಜ್ಜಿ ಮಕ್ಕಳನ್ನು ಶೆಡ್‌ನಲ್ಲಿ ಬಿಟ್ಟು ಬಹಿರ್ದೆಸೆಗೆ ಹೋಗಿದ್ದಾರೆ. ಅವರು ಹಿಂತಿರುಗಿ ಬರುವಷ್ಟರಲ್ಲಿ ಶೆಡ್‌ಗೆ ಬೆಂಕಿ ಹೊತ್ತಿಕೊಂಡು ಇಬ್ಬರು ಮಕ್ಕಳು ಸಜೀವ ದಹನವಾಗಿದ್ದಾರೆ. ಸದ್ಯ ಸ್ಥಳಕ್ಕೆ ಕೊತ್ತನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಿದ್ದಾರೆ.

ಬೆಟ್ಟದಿಂದ ಜಿಗಿದು PWD ಸಹಾಯಕ ಇಂಜಿನಿಯರ್ ಆತ್ಮಹತ್ಯೆ

ಪಾವಗಡ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುಪ್ರಸಾದ್ (33) ದೇವರಾಯನದುರ್ಗ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರಿನ ಸತ್ಯಮಂಗಲ ನಿವಾಸಿಯಾಗಿದ್ದ ಮಂಜುಪ್ರಸಾದ್, ಅವರ ತಾಯಿ ಒಂದೂವರೆ ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ತಾಯಿಯ ನಿಧನದ ಬಳಿಕ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಮಂಜುಪ್ರಸಾದ್, ಕೊರಟಗೆರೆಯಲ್ಲಿ ಸಂಬಂಧಿಕರಿಗೆ ಮೊಬೈಲ್ ಮತ್ತು ಮನೆಯ ಕೀ ಕೊಟ್ಟಿದ್ದರು. ಬಳಿಕ ಮೀಟಿಂಗ್ ಇದೆ ಎಂದು ಹೇಳಿ ದೇವರಾಯನದುರ್ಗಕ್ಕೆ ಬಂದು ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನ ಓದಿ: ಇನ್​ಸ್ಟಾಗ್ರಾಂನಲ್ಲಿ ಪರಿಚಯವಾದವಳ ಜೊತೆ ಲಿವಿನ್ ರಿಲೇಶನ್​ಶಿಪ್; ರೀಲ್ಸ್ ರಾಣಿ ಕಾಟಕ್ಕೆ ಯುವಕ ಬಲಿ?

ಕುಟುಂಬಸ್ಥರು ಅನುಮಾನಗೊಂಡು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದ ಕೂಡಲೇ ಕ್ಯಾತ್ಸಂದ್ರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಹುಟ್ಟುಹಬ್ಬದ ದಿನವೇ ನೇಣುಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ

ಹುಟ್ಟು ಹಬ್ಬದ ದಿನವೇ ನೇಣುಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಳಗಾವಿ ನಗರದ ಅಜಂ ನಗರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಮೆಟ್ರಿಕ್ ನಂತರದ ಬಾಲಕಿಯರು ವಸತಿ ನಿಲಯದಲ್ಲಿ ನಡೆದಿದೆ. ಹುಕ್ಕೇರಿ ತಾಲೂಕಿನ ಕಟಾಬಳ್ಳಿ ಗ್ರಾಮದ ಕಾವೇರಿ ಉಮೇಶ್ ನಾಯಕ(21) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ. ಕಾವೇರಿ ಬಿಎಸ್‌ಸಿ ಅಂತಿಮ‌ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಇನ್ನು ಮೂರು ತಿಂಗಳ ಹಿಂದಷ್ಟೇ ವಿದ್ಯಾರ್ಥಿನಿಗೆ ಎಂಗೇಜ್ಮೆಂಟ್ ಆಗಿತ್ತು. ಪೊಲೀಸ ಪೇದೆಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಮಗಳನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮನೆ ಬಳಿ ಕಾರ್ಯಕ್ರಮ ಆಯೋಜನೆ ವಿಚಾರಕ್ಕೆ ಗಲಾಟೆ: ಸೋದರರ ನಡುವೆ ಮಾರಾಮಾರಿ

ಮನೆ ಬಳಿ ಸಂಗೀತ ಕಾರ್ಯಕ್ರಮ ಆಯೋಜಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸೋದರರ ನಡುವೆ ಗಲಾಟೆ ನಡೆದು ಹಲ್ಲೆ ನಡೆದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಲಗಾರ ವಡ್ಡು ಗ್ರಾಮದಲ್ಲಿ ನಡೆದಿದೆ. ಚಂದ್ರಶೇಖರ ಮತ್ತು ನೆತ್ರಾವತಿ, ಮಂಜುನಾಥ್ ಹಾಗೂ ಭಾರತಿ ದಂಪತಿ ಮೇಲೆ ಕೋಲಿನಿಂದ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ.

ಇದನ್ನೂ ಓದಿ: ನಾಪತ್ತೆಯಾಗಿದ್ದ ದಲಿತ ಮಹಿಳೆ ಮೂರು ದಿನದ ಬಳಿಕ ಶವವಾಗಿ ಪತ್ತೆ: ಸಾವಿನ ಸುತ್ತ ಹತ್ತಾರು ಅನುಮಾನ

ಮನೆಯಂಗಳದಲ್ಲಿ ಸಂಗೀತ ಕಾರ್ಯಕ್ರಮ ಮಾಡಲು ಚಂದ್ರಶೇಖರ ಯೋಜಿಸಿದ್ದರು. ಆದರೆ ನಮಗೆ ವಯಸ್ಸಾಗಿದೆ, ಇಲ್ಲಿ ಬೇಡ ಎಂದು ಮಂಜುನಾಥ್ ವಿರೋಧ ವ್ಯಕ್ತಪಡಿಸಿದ್ದರು. ಆದರೂ ನಾವು ಇಲ್ಲೇ ಮಾಡುತ್ತೇವೆ ಎಂದು ಚಂದ್ರಶೇಖರ ಪಟ್ಟು ಹಿಡಿದಿದ್ದರು. ಈ ವಿವಾದಕ್ಕೆ ಸಂಬಂಧಿಸಿ ಮಂಜುನಾಥ್ ಠಾಣೆ ಮೆಟ್ಟಿಲೇರಿದ್ದರೂ ನ್ಯಾಯ ಸಿಕ್ಕಿರಲಿಲ್ಲ. ಪೊಲೀಸರಿಂದ ಚಂದ್ರಶೇಖರ್​​ಗೆ ಬೆಂಬಲ ಸಿಗುತ್ತಿದ್ದಂತೆ ಹಲ್ಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೊನೆಯ ಎಸೆತದಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡಗಳ ಪಟ್ಟಿಯಲ್ಲಿ ಆರ್​ಸಿಬಿಗೆ ಯಾವ ಸ್ಥಾನ? – Kannada News | IPL Last Ball Wins: RCB Now 4th After Raipur Victory Over Mumbai Indians

ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್‌ನಲ್ಲಿ ಕೊನೆಯ ಎಸೆತದಲ್ಲಿ ಒಂಬತ್ತು ಪಂದ್ಯಗಳನ್ನು ಗೆದ್ದುಕೊಂಡಿದೆ. ಚೆನ್ನೈ ತಂಡವು 2008 ರಲ್ಲಿ ಕೊನೆಯ ಎಸೆತದಲ್ಲಿ ಮೊದಲ ಗೆಲುವು ಸಾಧಿಸಿತು. ನಂತರ, 2012 ರಲ್ಲಿ ಮೂರು ಗೆಲುವು, 2019, 2020, 2021, 2022 ಮತ್ತು 2023 ರಲ್ಲಿಯೂ ಒಂದೊಂದು ಪಂದ್ಯಗಳನ್ನು ಗೆದ್ದುಕೊಂಡಿದೆ (PC- IPL X).

Source link

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದಾಖಲೆಯ ಆದಾಯ, ಸತತ 15 ವರ್ಷಗಳ ಕಾಲ ನಂ.1 – Kannada News | Mangaluru Kukke Subrahmanya Temple records Rs 167.89 crore annual income, retains top spot for 15th consecutive year

ಮಂಗಳೂರು, (ಮೇ 11): ಕರ್ನಾಟಕ ಮುಜರಾಯಿ ಇಲಾಖೆ (karnataka muzrai department) ಆಧೀನದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು (Kukke subramanya Temple) ಸತತ 15ನೇ ವರ್ಷವು ಸಹ ಆದಾಯ ಗಳಿಕೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಹೌದು.. 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬರೋಬ್ಬರಿ 167.89 ಲಕ್ಷ ರೂಪಾಯಿ ಆದಾಯ ಹರಿದುಬಂದಿದೆ. 2025ರ ಏಪ್ರಿಲ್ 1ರಿಂದ 2026ರ ಮಾರ್ಚ್ 31ರವರೆಗೆ ದೇವಾಲಯವು ಒಟ್ಟು 167.89 ಕೋಟಿ ರೂಪಾಯಿ ಆದಾಯ ಗಳಿಸಿದ್ದು, ಇದರಲ್ಲಿ 85.20 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಮೂಲಕ ಕಳೆದ 2024-25ನೇ ಸಾಲಿನ 155 ಕೋಟಿ ರೂ. ಆದಾಯವನ್ನು ಮೀರಿ ಸುಮಾರು 12 ಕೋಟಿ ರೂ. ಹೆಚ್ಚುವರಿ ಆದಾಯ ದಾಖಲಿಸಿದೆ.

  • 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಕ್ಕೆ 167,89,09,080.77 ರು. ಆದಾಯ.
  • ಈ ಮೂಲಕ ಸತತ 15ನೇ ವರ್ಷ ಆದಾಯ ಗಳಿಕೆಯಲ್ಲಿ ಮುಜರಾಯಿ ದೇವಸ್ಥಾನಗಳ ಪೈಕಿ ಮೊದಲ ಸ್ಥಾನ.
  • 2025ರ ಏಪ್ರಿಲ್ 1ರಿಂದ 2026ರ ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ ದೇವಳಕ್ಕೆ ಈ ಆದಾಯ

2024-2025ನೇ ಸಾಲಿನಲ್ಲಿ 155.95 ಕೋಟಿ ರೂ. ಆದಾಯ ಗಳಿಸಿದ್ದ  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು 2025-26ನೇ ಹಣಕಾಸು ವರ್ಷದಲ್ಲಿ 167.89 ಕೋಟಿ ರೂ. ದಾಖಲೆಯ ಆದಾಯ ಗಳಿಸುವ ಮೂಲಕ ಸತತ 15ನೇ ವರ್ಷವೂ ರಾಜ್ಯದ ನಂ.1 ಮುಜರಾಯಿ ದೇವಾಲಯವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಹರಕೆ, ಕಾಣಿಕೆ ಹುಂಡಿ, ಹೂಡಿಕೆಗಳಿಂದ ಬರುವ ಬಡ್ಡಿ ಆದಾಯದ ಪ್ರಮುಖ ಮೂಲಗಳಾಗಿವೆ.

ಇದನ್ನೂ ಓದಿ: ಅಂಜನಾದ್ರಿಗೆ 2 ಕೋಟಿ ರೂ. ಚಿನ್ನಾಭರಣ ಕಾಣಿಕೆ: ಹಲವು ಅನುಮಾನಗಳಿಗೆ ಕಾರಣವಾಯ್ತು ಉದ್ಯಮಿಯ ಬಿಲ್

ಪ್ರಥಮ ಬಾರಿಗೆ 167 ಕೋಟಿ ರೂ.ಗೂ ಅಧಿಕ ಆದಾಯ

ಒಟ್ಟು 167.89 ಕೋಟಿ ರೂಪಾಯಿ ಆದಾಯದಲ್ಲಿ 85,20,14,531.42 ರು. ಖರ್ಚಾಗಿದೆ. 2024-2025ನೇ ಸಾಲಿನಲ್ಲಿ 155 ಕೋಟಿ ರೂ ಆದಾಯ ಗಳಿಸಿತ್ತು. ಈ ಬಾರಿ 167,89,09,080.77 ರೂ. ಆದಾಯ ಗಳಿಸುವ ಮೂಲಕ ಈ ಆರ್ಥಿಕ ವರ್ಷದಲ್ಲಿ ಕಳೆದ ಆರ್ಥಿಕ ವರ್ಷದಿಂದ ಸುಮಾರು 12 ಕೋಟಿ ರೂ. ಅಧಿಕ ಆದಾಯ ಗಳಿಸಿದೆ. ದೇವಸ್ಥಾನಕ್ಕೆ ಮುಖ್ಯವಾಗಿ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯ ಬರುತ್ತದೆ. ಕಳೆದ 14 ವರ್ಷಗಳಿಂದ ನಿರಂತರವಾಗಿ ಆದಾಯ ಗಳಿಕೆಯಲ್ಲಿ ರಾಜ್ಯದ ನಂಬರ್ ದೇವಸ್ಥಾನವಾಗಿ ಹೊರ ಹೊಮ್ಮಿರುವ ಕುಕ್ಕೆ, 15ನೇ ವರ್ಷವೂ ತನ್ನ ಅಗ್ರಸ್ಥಾನವನ್ನು ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ.

ಯಾವುದರಿಂದ ಎಷ್ಟು ಆದಾಯ?

ಗುತ್ತಿಗೆಗಳಿಂದ 2,53,09,230.00 ರೂ., ಧಾನ್ಯಗಳ ಇಳುವರಿ ಮತ್ತು ತೋಟದ ಉತ್ಪನ್ನದಿಂದ 10,50,323.00 ರೂ., ಕಟ್ಟಡ ಮತ್ತು ಅಂಗಡಿಗಳ ಬಾಡಿಗೆಯಿಂದ 94,46,470.00 ರೂ., ಕಾಣಿಕೆಯಿಂದ 5,47,43,244.45 ರೂ., ಇ ಹುಂಡಿಯಿಂದ 38,01,676.80 ರೂ., ಕಾಣಿಕೆ ಹುಂಡಿಯಿಂದ 24,69,63,576.00 ರೂ, ಹರಿಕೆ ಸೇವೆಗಳಿಂದ 64,08,90,940.51 ರೂ., ಅನುದಾನದಿಂದ 1,67,956.00 ರೂ., ಹೂಡಿಕೆಯಿಂದ ಬಂದ ಬಡ್ಡಿ 49,11,07,412 ರೂ., ಉಳಿತಾಯ ಖಾತೆ ಹಾಗೂ ಇತರ ಬಡ್ಡಿ 41,80,588.00 ರೂ., ಸ್ವೀಪ್ ವ್ಯವಹಾದಿಂದ ಬಂದ ಬಡ್ಡಿ 12,90,390.00 ರೂ., ಇತರ ಬಾಬ್ತುಗಳು 3,20,31,937.00 ರೂ., ಛತ್ರ ಸಂರಕ್ಷಣಾ ವಂತಿಗೆ 6,93,66,026.00 ರೂ., ಅನ್ನಸಂತರ್ಪಣೆ ನಿಧಿಯಿಂದ 9,14,71,606.01 ರೂ., ಅಭಿವೃದ್ದಿ ನಿಧಿ 14,17,284.00 ರೂ., ಶಾಶ್ವತ ಸೇವಾ ಮೂಲ ಧನ 56,70,421 ರೂ. ಹೀಗೆ ಒಟ್ಟು 167 ಕೋಟಿ 89 ಲಕ್ಷದ 09 ಸಾವಿರದ 080.77 ರೂ. ಆದಾಯ ದೇವಳಕ್ಕೆ ಬಂದಿದೆ.

ಯಾವ ವರ್ಷ ಎಷ್ಟು ಆದಾಯ?

2006-07ರಲ್ಲಿ ದೇವಳದ ಆದಾಯವು 19.76 ಕೋಟಿ ರೂ., 2007-08ರಲ್ಲಿ 24.44 ಕೋಟಿ ರೂ., 2008-09ರಲ್ಲಿ 31 ಕೋಟಿ ರೂ., 2009-10ರಲ್ಲಿ 38.51 ಕೋಟಿ ರೂ., 2011-12ರಲ್ಲಿ 56.24 ಕೋಟಿ ರೂ., 2012-13ರಲ್ಲಿ 66.76 ಕೋಟಿ ರೂ., 2013-14ರಲ್ಲಿ 68 ಕೋಟಿ ರೂ., 2014-15ರಲ್ಲಿ 77 ಕೋಟಿ 60 ಲಕ್ಷ ರೂ., 2015-16ರಲ್ಲಿ 88 ಕೋಟಿ 83 ಲಕ್ಷ, 2016-17ರಲ್ಲಿ 89 ಕೋಟಿ 65 ಲಕ್ಷ ರೂ., 2017-18ರಲ್ಲಿ 95 ಕೋಟಿ 92 ಲಕ್ಷ ರೂ., 2018-19ರಲ್ಲಿ 92 ಕೋಟಿ 09 ಲಕ್ಷ ರೂ, 2019-20ರಲ್ಲಿ 98 ಕೋಟಿ 92 ಲಕ್ಷ, 2020-21ರಲ್ಲಿ 68 ಕೋಟಿ 94 ಲಕ್ಷ., 2021-22 ರಲ್ಲಿ 72 ಕೋಟಿ 73 ಲಕ್ಷ, 2022-23ರಲ್ಲಿ 123 ಕೋಟಿ 64 ಲಕ್ಷ, 2023-24ನೇ ಸಾಲಿನಲ್ಲಿ 146 ಕೋಟಿ 1 ಲಕ್ಷ, 2024-25ನೇ ಸಾಲಿನಲ್ಲಿ 155 ಕೋಟಿ 95 ಲಕ್ಷ ಆದಾಯ ಗಳಿಸಿ ಸತತ 14 ವರ್ಷ ರಾಜ್ಯದ ನಂಬರ್ ವನ್ ಆದಾಯ ಗಳಿಕೆಯ ದೇವಸ್ಥಾನವಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಎಸ್​ಐಆರ್​ ಬಂಗಾಳದ ಚುನಾವಣೆ ಫಲಿತಾಂಶವನ್ನೇ ಬದಲಾಯಿಸಿದೆ; ಸುಪ್ರೀಂ ಕೋರ್ಟ್​ನಲ್ಲಿ ಟಿಎಂಸಿ ಆರೋಪ – Kannada News | TMC Says West Bengal SIR Deleted Votes impacted Election Results Supreme Court Seeks Fresh Plea

ನವದೆಹಲಿ, ಮೇ 11: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಸಮಯದ ಹೆಸರುಗಳ ಡಿಲೀಟ್ ಮಾಡುವಿಕೆ ರಾಜ್ಯದ ಹಲವಾರು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಫಲಿತಾಂಶಗಳ ಮೇಲೆ ಪರಿಣಾಮ ಬೀರಿದೆ ಎಂಬ ಹೇಳಿಕೆಗಳ ಕುರಿತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಇತರರು ಹೊಸ ಅರ್ಜಿಗಳನ್ನು ಸಲ್ಲಿಸಲು ಸ್ವತಂತ್ರರು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಎಸ್​ಐಆರ್ ವಿರುದ್ಧ ಮಮತಾ ಬ್ಯಾನರ್ಜಿಗೆ ಮತ್ತೊಮ್ಮೆ ಹೊಸ ಅರ್ಜಿ ಸಲ್ಲಿಸಲು ಅವಕಾಶ ಸಿಕ್ಕಂತಾಗಿದೆ.

ಟಿಎಂಸಿ ಪರವಾಗಿ ಹಾಜರಾದ ಹಿರಿಯ ವಕೀಲ ಕಲ್ಯಾಣ್ ಬ್ಯಾನರ್ಜಿ ನ್ಯಾಯಾಲಯಕ್ಕೆ ತಿಳಿಸಿದ್ದು, ಕನಿಷ್ಠ 31 ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್ಐಆರ್ ಪ್ರಕ್ರಿಯೆಯ ಸಮಯದಲ್ಲಿ ತೆಗೆದುಹಾಕಲಾದ ಮತದಾರರ ಸಂಖ್ಯೆಗಿಂತ ಗೆಲುವಿನ ಅಂತರ ಕಡಿಮೆಯಾಗಿದೆ ಎಂದು ಆರೋಪಿಸಿದ್ದಾರೆ. ಒಬ್ಬ ಟಿಎಂಸಿ ಅಭ್ಯರ್ಥಿ ಕೇವಲ 862 ಮತಗಳಿಂದ ಸೋತಿದ್ದಾರೆ, ಆ ಕ್ಷೇತ್ರವೊಂದರಲ್ಲೇ 5,000ಕ್ಕೂ ಹೆಚ್ಚು ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಅವರು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸರ್ಕಾರ ಟಿಎಂಸಿ ಗೂಂಡಾಗಳ ದೌರ್ಜನ್ಯವನ್ನು ಸಹಿಸುವುದಿಲ್ಲ; ಸುವೇಂದು ಅಧಿಕಾರಿ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವಿನ ಒಟ್ಟಾರೆ ಮತಗಳ ವ್ಯತ್ಯಾಸವು ಸುಮಾರು 32 ಲಕ್ಷ ಮತಗಳಾಗಿದ್ದು, ಮತದಾರರ ಹೆಸರುಗಳನ್ನು ತೆಗೆದುಹಾಕುವುದನ್ನು ಪ್ರಶ್ನಿಸುವ 35 ಲಕ್ಷಕ್ಕೂ ಹೆಚ್ಚು ಮೇಲ್ಮನವಿಗಳು ಇನ್ನೂ ವಿಲೇವಾರಿಗೆ ಬಾಕಿ ಇವೆ ಎಂದು ಅವರು ವಾದಿಸಿದರು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ನ್ಯಾಯಪೀಠವು ಈ ವಿಷಯವನ್ನು ವಿಚಾರಣೆ ನಡೆಸಿತು. ಸೋಲಿನ ಅಂತರವು ಡಿಲೀಟ್ ಮಾಡಲಾದ ಮತದಾರರ ಸಂಖ್ಯೆಗಿಂತ ನಿಜವಾಗಿಯೂ ಕಡಿಮೆಯಿದ್ದರೆ, ಬಾಧಿತ ಪಕ್ಷಗಳು ನ್ಯಾಯಾಲಯದ ಮುಂದೆ ಸೂಕ್ತ ಅರ್ಜಿಯನ್ನು ಸಲ್ಲಿಸಲು ಮುಕ್ತವಾಗಿವೆ ಎಂದು ಪೀಠವು ಹೇಳಿದೆ.

ಇದನ್ನೂ ಓದಿ: West Bengal CM: ಬಂಗಾಳದಲ್ಲಿ ಬಿಜೆಪಿ ಯುಗ ಆರಂಭ; ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿ, 207 ಸ್ಥಾನಗಳಲ್ಲಿ ಜಯ ಗಳಿಸಿತು. ಈ ಮೂಲಕ ಟಿಎಂಸಿಯ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿತು. ಟಿಎಂಸಿ ಕೇವಲ 80 ಸ್ಥಾನಗಳನ್ನು ಪಡೆದುಕೊಂಡಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಉಪೇಂದ್ರ’ ಸಿನಿಮಾ ಮರುಬಿಡುಗಡೆ: ಸರಿಯಾದ ಉತ್ತರ ನೀಡಿದರೆ 1 ಕೋಟಿ ರೂ. ಬಹುಮಾನ – Kannada News | Upendra Kannada movie re release contest 1 Crore Prize Money details

ಕನ್ನಡ ಚಿತ್ರರಂಗದಲ್ಲಿ ಡಿಫರೆಂಟ್ ಸಿನಿಮಾ ಎನಿಸಿಕೊಂಡ ‘ಉಪೇಂದ್ರ’ (Upendra) ಚಿತ್ರ ಈಗ ಮತ್ತೆ ಸುದ್ದಿಯಲ್ಲಿದೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿದ್ದ ಈ ಸಿನಿಮಾ ಮತ್ತೆ ತೆರೆಗೆ ಬರಲಿದೆ. ಇತ್ತೀಚೆಗೆ ಹಳೆಯ ಸಿನಿಮಾಗಳನ್ನು ಮರುಬಿಡುಗಡೆ ಮಾಡುವ ಟ್ರೆಂಡ್ ಜೋರಾಗಿದೆ. ಆದ್ದರಿಂದ ‘ಉಪೇಂದ್ರ’ ಸಿನಿಮಾವನ್ನು ಮರು ಬಿಡುಗಡೆ ಮಾಡಲು ಪ್ಲ್ಯಾನ್ ಸಿದ್ಧವಾಗಿದೆ. ಈ ಬಾರಿ ಪ್ರೇಕ್ಷಕರಿಗೆ ನಗದು ರೂಪದಲ್ಲಿ ಭರ್ಜರಿ ಬಹುಮಾನ ಸಿಗಲಿದೆ ಎಂಬುದು ವಿಶೇಷ.

ಈ ಬಾರಿ ಸಿನಿಮಾ ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ‘ISH MYRA Producer’ ಕಂಪನಿಯ ಪರಮೇಶ್ವರ್ ಬಿ. ಅವರು ಪ್ರೇಕ್ಷಕರಿಗೆ ಬಂಪರ್ ಆಫರ್ ನೀಡಿದ್ದಾರೆ. ಜೂನ್ 4ರಂದು ರಾಜ್ಯದಾದ್ಯಂತ ಸುಮಾರು 100 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರ ನೋಡುವ ಪ್ರೇಕ್ಷಕರಿಗೆ ಪ್ರತಿ ಶೋ ಮುಗಿದ ನಂತರ 10 ನಿಮಿಷಗಳ ಕಾಲ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಲಿದೆ.

ಆಯಾ ಶೋನಲ್ಲಿ ಕೇಳಲಾಗುವ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದ ಪ್ರೇಕ್ಷಕರಿಗೆ, ಆ ನಿರ್ದಿಷ್ಟ ಶೋನ ಒಟ್ಟು ಕಲೆಕ್ಷನ್ ಹಣವನ್ನು ಬಹುಮಾನವಾಗಿ ನೀಡಲಾಗುತ್ತದೆ. ಸಿನಿಮಾ ಪ್ರದರ್ಶನದ 25ನೇ ದಿನದಂದು ಕೇಳಲಾಗುವ ಪ್ರಶ್ನೆಗೆ ನಿಖರ ಉತ್ತರ ನೀಡುವ ಒಬ್ಬ ಅದೃಷ್ಟಶಾಲಿ ಪ್ರೇಕ್ಷಕನಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಪರಮೇಶ್ವರ್ ಘೋಷಿಸಿದ್ದಾರೆ.

ಈ ಸಾಹಸಮಯ ಯೋಜನೆಯ ಹಿಂದಿರುವ ಪ್ರಮುಖ ಉದ್ದೇಶಗಳನ್ನು ಕೂಡ ಪರಮೇಶ್ವರ್ ಹಂಚಿಕೊಂಡಿದ್ದಾರೆ. ಪ್ರಸ್ತುತ ಸಂಕಷ್ಟದಲ್ಲಿರುವ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಮರಳಿ ಕರೆತರುವುದು. ಇಂದಿನ ತಲೆಮಾರಿನ ಪ್ರೇಕ್ಷಕರಿಗೆ ಹಾಗೂ ಯುವ ಸಿನಿಮಾ ಮೇಕರ್‌ಗಳಿಗೆ ಕನ್ನಡ ಚಿತ್ರರಂಗದ ಮೈಲಿಗಲ್ಲು ಚಿತ್ರಗಳನ್ನು ಪರಿಚಯಿಸುವುದು. ಸಿನಿಮಾ ಬಿಡುಗಡೆಯಿಲ್ಲದ ಸಮಯದಲ್ಲಿ ಚಿತ್ರಮಂದಿರಗಳಿಗೆ ಚೈತನ್ಯ ತುಂಬುವುದು ಉದ್ದೇಶ ಎಂದು ಹೇಳಲಾಗಿದೆ.

ಇದನ್ನೂ ಓದಿ: ‘ಕತ್ತರಿಗುಪ್ಪೆಯಲ್ಲಿ ನಾನು ಚುನಾವಣೆಗೆ ನಿಲ್ಲಬಹುದು’: ಏನಿದು ಉಪೇಂದ್ರ ಪ್ಲ್ಯಾನ್?

ಈ ವಿಶೇಷ ಮರುಬಿಡುಗಡೆಗೆ ‘ಉಪೇಂದ್ರ’ ಚಿತ್ರದ ಮೂಲ ನಿರ್ಮಾಪಕರಾದ ಶಿಲ್ಪಾ ಶ್ರೀನಿವಾಸ್ ಅವರು ಸಮ್ಮತಿ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಮತ್ತೊಂದು ಸುದ್ದಿಗೋಷ್ಠಿಯಲ್ಲಿ ಸ್ವತಃ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿರ್ಮಾಪಕರು ಭಾಗವಹಿಸಿ, ಯೋಜನೆಯ ಸಂಪೂರ್ಣ ನಿಯಮ ಮತ್ತು ವಿವರಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತದ ಆರ್ಥಿಕ ಬೆಳವಣಿಗೆಯ ದರ ಶೇ. 6ಕ್ಕೆ ಇಳಿಕೆ? ಎಚ್‌ಎಸ್‌ಬಿಸಿ (HSBC) ಭವಿಷ್ಯವಾಣಿ ಮತ್ತು ಆರ್‌ಬಿಐ ಬಡ್ಡಿ ದರ ಏರಿಕೆ ಸಾಧ್ಯತೆ – Kannada News | HSBC Warns: India’s GDP Growth May Plunge to 6% by FY27 Amid Energy & Climate Crises

ಭಾರತದ ಆರ್ಥಿಕ ಬೆಳವಣಿಗೆImage Credit source: Shutterstock

ಮುಂಬೈ, ಮೇ 11: ಜಾಗತಿಕ ಹಣಕಾಸು ಸಂಸ್ಥೆಯಾದ ಎಚ್‌ಎಸ್‌ಬಿಸಿ (HSBC) ಭಾರತದ ಆರ್ಥಿಕತೆಯ ಬಗ್ಗೆ ಆತಂಕಕಾರಿ ವರದಿಯೊಂದನ್ನು ನೀಡಿದೆ. 2026-27ರ ಹಣಕಾಸು ವರ್ಷದಲ್ಲಿ (FY27) ಭಾರತದ ಒಟ್ಟು ಆಂತರಿಕ ಉತ್ಪನ್ನ (GDP) ಬೆಳವಣಿಗೆಯ ದರವು ಕೇವಲ ಶೇ. 6ಕ್ಕೆ ಕುಸಿಯಬಹುದು ಎಂದು ಅಂದಾಜಿಸಿದೆ. ಈ ಹಿಂದೆ ನೀಡಿದ್ದ ಅಂದಾಜುಗಳನ್ನು ಪರಿಷ್ಕರಿಸಿರುವ ಎಚ್‌ಎಸ್‌ಬಿಸಿ, ಇಂಧನ ಬಿಕ್ಕಟ್ಟು ಮತ್ತು ಅನಿಶ್ಚಿತ ಹವಾಮಾನದ (ಮಳೆ ಕೊರತೆ) ಕಾರಣದಿಂದಾಗಿ ಭಾರತದ ಆರ್ಥಿಕ ವೇಗ ಕುಂಠಿತಗೊಳ್ಳಲಿದೆ ಎಂದು ತಿಳಿಸಿದೆ.

ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ಹಣಕಾಸು ವರ್ಷದಲ್ಲಿ ಎರಡು ಬಾರಿ ರೆಪೊ ದರಗಳನ್ನು (Repo Rate Hikes) ಏರಿಕೆ ಮಾಡುವ ಸಾಧ್ಯತೆಯಿದೆ ಎಂದು ಬ್ಯಾಂಕ್ ಅಂದಾಜಿಸಿದೆ. ಇದು ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳಕ್ಕೆ ಕಾರಣವಾಗಬಹುದು.

ಜಾಗತಿಕ ಮತ್ತು ಹವಾಮಾನ ಕಾರಣಗಳು

ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ ತೈಲ ಬೆಲೆ ಏರಿಕೆ ಮತ್ತು ‘ಎಲ್ ನಿನೊ’ ಪ್ರಭಾವದಿಂದಾಗಿ ಮಳೆಯ ಕೊರತೆಯು ದೇಶದ ಕೃಷಿ ಹಾಗೂ ಗ್ರಾಮೀಣ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ: ಎಐನಿಂದ ಉದ್ಯೋಗಗಳು ಹೋಗೋದು ಸುಳ್ಳಾ? ಕೆಲಸ ಸೇರುವ ಸಮಯ ಇದು ಎನ್ನುತ್ತಾರೆ ಜೆನ್ಸೆನ್ ಹುವಾಂಗ್

ಬೆಲೆ ಏರಿಕೆ ಮತ್ತು ಬೇಡಿಕೆಯ ಕೊರತೆಯಿಂದಾಗಿ ದೇಶದ ಸಣ್ಣ ಉದ್ಯಮಗಳು ಮತ್ತು ಗ್ರಾಮೀಣ ಕುಟುಂಬಗಳು ಹೆಚ್ಚಿನ ಆರ್ಥಿಕ ಒತ್ತಡಕ್ಕೆ ಒಳಗಾಗಬಹುದು ಎಂದೂ ವರದಿ ಎಚ್ಚರಿಸಿದೆ.

2025-26ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 7.4ರಷ್ಟು ಹೆಚ್ಚಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದರ ಬೆಳವಣಿಗೆ ಶೇ. 6ಕ್ಕೆ ಸೀಮಿತಗೊಂಡರೆ ಆರ್ಥಿಕತೆಯ ಓಟಕ್ಕೆ ಹಿನ್ನಡೆ ಬಂದಂತಾಗಬಹುದು. ಆದರೆ, 2026-27ಕ್ಕೆ ಭಾರತದಿಂದ ಇಷ್ಟು ಕಡಿಮೆ ಜಿಡಿಪಿ ಬೆಳವಣಿಗೆ ನಿರೀಕ್ಷಿಸಿರುವ ಸಂಸ್ಥೆ ಎಚ್​ಎಸ್​ಬಿಸಿ ಮಾತ್ರವೇ. ಆರ್​ಬಿಐ ಶೇ. 6.9 ಬೆಳವಣಿಗೆ ನಿರೀಕ್ಷಿಸಿದೆ. ಇತರ ಅಂತರರಾಷ್ಟ್ರೀಯ ಏಜೆನ್ಸಿಗಳು ಕೂಡ ಹೆಚ್ಚಿನ ಆರ್ಥಿಕ ಪ್ರಗತಿಯನ್ನು ಅಂದಾಜಿಸಿವೆ.

ಇದನ್ನೂ ಓದಿ: ಮೋದಿ ಕರೆಗೆ ಏರ್​ಟೆಲ್ ಮುಖ್ಯಸ್ಥರ ಬೆಂಬಲ; ಭಾರತದಲ್ಲಿ ಹೂಡಿಕೆ ಹೆಚ್ಚಿಸುವಂತೆ ಭಾರತೀಯ ಉದ್ಯಮಗಳಿಗೆ ಸುನೀಲ್ ಮಿತ್ತಲ್ ಕರೆ

ಡಿಸೆಂಬರ್, ಮಾರ್ಚ್​ನಲ್ಲಿ ರಿಪೋ ದರ ಏರಿಕೆ?

ಅಕ್ಟೋಬರ್​ನಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ರಿಸರ್ವ್ ಬ್ಯಾಂಕ್ ತನ್ನ ರಿಪೋ ದರಗಳನ್ನು ಏರಿಸುವ ಸಾಧ್ಯತೆ ಇದೆ ಎಂದು ಎಚ್​ಎಸ್​ಬಿಸಿ ಹೇಳಿದೆ. ಹಣದುಬ್ಬರ ಏರಿಕೆ ಸಾಧ್ಯತೆ ಇರುವುದರಿಂದ ಆರ್​ಬಿಐ ಈ ಕ್ರಮ ತೆಗೆದುಕೊಳ್ಳಬಹುದು. ಆದರೆ, ಜೂನ್​ನಲ್ಲಿ ನಡೆಯುವ ಎಂಪಿಸಿ ಸಭೆಯಲ್ಲಿ ರಿಪೋ ದರ ಏರಿಕೆ ಸಾಧ್ಯತೆ ಇಲ್ಲ ಎಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

PBKS vs DC IPL 2026 Live Score: ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ – Kannada News | Punjab Kings vs Delhi Capitals IPL 2026 Live Cricket Score PBKS vs DC Match on 11th May latest news in Kannada

ಐಪಿಎಲ್ 2026 ರ 55 ನೇ ಪಂದ್ಯ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯುತ್ತಿದೆ. 19 ನೇ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಎರಡೂ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಶ್ರೇಯಸ್ ಅಯ್ಯರ್ ಪಂಜಾಬ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಕ್ಷರ್ ಪಟೇಲ್ ದೆಹಲಿ ತಂಡದ ನಾಯಕರಾಗಿದ್ದಾರೆ. ಪಂಜಾಬ್ ಈ ಪಂದ್ಯವನ್ನು ಗೆದ್ದು ಪ್ಲೇಆಫ್‌ಗೆ ಹತ್ತಿರವಾಗುವ ಅವಕಾಶವನ್ನು ಹೊಂದಿದೆ. ಏತನ್ಮಧ್ಯೆ, ದೆಹಲಿ ತಂಡವು ತಮ್ಮ ಕೊನೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ.

Source link

PBKS vs DC IPL 2026 Live Score: ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ – Kannada News | Punjab kings vs delhi capitals ipl 2026 live cricket score pbks vs dc match on 11th may latest news in kannada

ಐಪಿಎಲ್ 2026 ರ 55 ನೇ ಪಂದ್ಯ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯುತ್ತಿದೆ. 19 ನೇ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಎರಡೂ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಶ್ರೇಯಸ್ ಅಯ್ಯರ್ ಪಂಜಾಬ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಕ್ಷರ್ ಪಟೇಲ್ ದೆಹಲಿ ತಂಡದ ನಾಯಕರಾಗಿದ್ದಾರೆ. ಪಂಜಾಬ್ ಈ ಪಂದ್ಯವನ್ನು ಗೆದ್ದು ಪ್ಲೇಆಫ್‌ಗೆ ಹತ್ತಿರವಾಗುವ ಅವಕಾಶವನ್ನು ಹೊಂದಿದೆ. ಏತನ್ಮಧ್ಯೆ, ದೆಹಲಿ ತಂಡವು ತಮ್ಮ ಕೊನೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ.

Source link

ಬೆಂಗಳೂರಿನ ಕನಸಿನ ಯೋಜನೆಗೆ ಸಿಕ್ತು ವೇಗ: 153 ಮೆಟ್ರೋ ಕೋಚ್‌ ಖರೀದಿಗೆ ಐಸಿಎಫ್ ಜೊತೆ ಒಪ್ಪಂದ – Kannada News | Bengaluru Suburban Rail Project: K RIDE Signs Deal with ICF to Procure 153 Metro Coaches

ಬೆಂಗಳೂರು, ಮೇ 11: ಬೆಂಗಳೂರಿನ (Bangaluru) ಮಹತ್ವಾಕಾಂಕ್ಷಿ ಉಪನಗರ ರೈಲು ಯೋಜನೆಗೆ (Suburban Rail Project) ಮಹತ್ವದ ವೇಗ ದೊರೆತಿದ್ದು, 153 ಹವಾನಿಯಂತ್ರಿತ ಮೆಟ್ರೋ ಮಾದರಿಯ ಬೋಗಿಗಳನ್ನು ಪೂರೈಸಲು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಜೊತೆ ಕರ್ನಾಟಕ ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಎಂಟರ್‌ಪ್ರೈಸ್ (ಕೆ-ರೈಡ್) 1,513.75 ಕೋಟಿ ರೂ ವೆಚ್ಚದ ಒಪ್ಪಂದ ಮಾಡಿಕೊಂಡಿದೆ.

ಮುಖ್ಯಾಂಶಗಳು

  • 1,513.75 ಕೋಟಿ ರೂ ಬೃಹತ್ ಕಾರ್ಯಾದೇಶ
  • 153 ಹವಾನಿಯಂತ್ರಿತ ‘ಬ್ರಾಡ್-ಗೇಜ್ ಮೆಟ್ರೋ ಮಾದರಿಯ ಬೋಗಿಗಳು ಒದಗಿಸಲು ಒಪ್ಪಂದ
  • ಮುಂದಿನ 18 ತಿಂಗಳೊಳಗೆ ಬೋಗಿಗಳ ಪೂರೈಕೆ ಮಾಡುವುದು

ಇದನ್ನೂ ಓದಿ: ಮಲ್ಟಿ ಟ್ರ್ಯಾಕಿಂಗ್ ರೈಲ್ವೆ ಯೋಜನೆಗೆ ಕೇಂದ್ರ ಒಪ್ಪಿಗೆ: ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಬಂಪರ್ ಕೊಡುಗೆ

ಒಟ್ಟು 1,513.75 ಕೋಟಿ ರೂ ಮೊತ್ತದ ಕಾರ್ಯಾದೇಶವನ್ನು ಮೇ 6ರಂದು ಐಸಿಎಫ್‌ಗೆ ನೀಡಲಾಗಿದೆ. ಯೋಜನೆಯ ಕಾರಿಡಾರ್-2 ಮತ್ತು ಕಾರಿಡಾರ್-4ಕ್ಕೆ ಬ್ರಾಡ್-ಗೇಜ್ ಮೆಟ್ರೋ ಮಾದರಿಯ 153 ಬೋಗಿಗಳನ್ನು ಪೂರೈಸಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

ಒಪ್ಪಂದದ ಪ್ರಕಾರ ಮುಂದಿನ 18 ತಿಂಗಳೊಳಗೆ ಐಸಿಎಫ್ ಸಂಸ್ಥೆ ಕಡ್ಡಾಯವಾಗಿ ಬೋಗಿಗಳ ಪೂರೈಕೆ ಆರಂಭಿಸಬೇಕಿದೆ. ಏಕೆಂದರೆ ಕಾರಿಡಾರ್-2 ವ್ಯಾಪ್ತಿಯ ಚಿಕ್ಕಬಾಣಾವರ ಟು ಯಶವಂತಪುರ ಮಾರ್ಗವನ್ನು ನಿಗದಿತ ಸಮಯದಲ್ಲಿಯೇ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ. ಶೀಘ್ರದಲ್ಲೇ ಉಭಯ ಸಂಸ್ಥೆಗಳ ನಡುವೆ ಅಧಿಕೃತ ಒಡಂಬಡಿಕೆಗೆ (ಎಂಒಯು) ಸಹಿ ಬೀಳಲಿದೆ.

ಕಾರ್ಯಾದೇಶದ ಪ್ರಮುಖ ಅಂಶಗಳು

ಚೆನ್ನೈನ ಐಸಿಎಫ್‌ಗೆ ನೀಡಲಾದ ಈ ಸಮಗ್ರ ಗುತ್ತಿಗೆಯು ಕೇವಲ ಬೋಗಿಗಳ ನಿರ್ಮಾಣವನ್ನಷ್ಟೇ ಅಲ್ಲದೆ, ಈ ಕೆಳಗಿನ ಜವಾಬ್ದಾರಿಗಳನ್ನು ಒಳಗೊಂಡಿದೆ.

  • ರೈಲು ಬೋಗಿಗಳ ವಿನ್ಯಾಸ ಮತ್ತು ಸಂಪೂರ್ಣ ಉತ್ಪಾದನೆ
  • ಗುಣಮಟ್ಟ ಪರಿಶೀಲನೆ, ಜೋಡಣೆ, ಪರೀಕ್ಷೆ ಹಾಗೂ ಕಾರ್ಯಾರಂಭ
  • ಆರ್‌ಡಿಎಸ್‌ಒನಿಂದ ಅಗತ್ಯವಿರುವ ಶಾಸನಬದ್ಧ ಅನುಮೋದನೆಗಳನ್ನು ಪಡೆಯುವುದು
  • ಸಿಗ್ನಲಿಂಗ್, ವಿದ್ಯುತ್ ಪೂರೈಕೆ, ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ ಗುತ್ತಿಗೆಗಳೊಂದಿಗೆ ಸುಗಮ ಸಮನ್ವಯ
  • ಕಾರಿಡಾರ್‌ಗಳ ಯಶಸ್ವಿ ಕಾರ್ಯಾಚರಣೆಗೆ ಕಡ್ಡಾಯವಾಗಿರುವ ವಿಶ್ವಾಸಾರ್ಹತೆ, ಲಭ್ಯತೆ, ನಿರ್ವಹಣೆ ಮತ್ತು ಸುರಕ್ಷತಾ ಮಾನದಂಡಗಳ ಪೂರೈಕೆ ಮಾಡುವುದು

ಇದನ್ನೂ ಓದಿ: ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡ ಕಡೆಗಣನೆ: ರಾಜ್ಯಾದ್ಯಂತ ರೈಲು ಸಂಚಾರ ಬಂದ್ ಮಾಡುವ ಎಚ್ಚರಿಕೆ ನೀಡಿದ ಕರವೇ

ಈ ಬೃಹತ್ ಕಾರ್ಯಾದೇಶದಿಂದ ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿಗೆ ಮತ್ತಷ್ಟು ವೇಗ ದೊರೆಯುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version