ಸವದತ್ತಿ ಯಲ್ಲಮ್ಮನ ಜಾತ್ರೆಗೆ ಜನಸ್ತೋಮ! ಮಹಾರಾಷ್ಟ್ರ, ಗೋವಾದಿಂದಲೂ ಬಂದ ಲಕ್ಷಾಂತರ ಭಕ್ತರು – Kannada News | Lakhs of devotees came for Savadatti Renuka Yellamma Fair
ಬೆಳಗಾವಿ, ಫೆಬ್ರುವರಿ 01: ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಭರತ ಹುಣ್ಣಿಮೆ ಜಾತ್ರೆ ಗೆ ಭಕ್ತಸಾಗರವೇ ಹರಿದುಬಂತು. ಉತ್ತರ ಕರ್ನಾಟಕ ಭಾಗದಲ್ಲೇ ಅತಿದೊಡ್ಡ ಮಟ್ಟದಲ್ಲಿ ನಡೆಯುವ ಈ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಕರ್ನಾಟಕದ ವಿವಿಧ ಜಿಲ್ಲೆಗಳ ಜೊತೆಗೆ ಮಹಾರಾಷ್ಟ್ರ, ಗೋವಾ ಹಾಗೂ ತೆಲಂಗಾಣ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದು, ದೇವಾಲಯ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಜನಸಾಗರ ಕಂಡುಬಂದಿದೆ. ಭಕ್ತರ ಭಾರೀ ಆಗಮನದ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿ…