ಸಿಬಿಲ್ ಸ್ಕೋರ್ ಎಷ್ಟಿದರೆ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತೆ – Kannada News | Bank Loan: If your CIBIL score is excellent, you can get a loan at a low interest rate.

ಸಾಲ (Loan) ತಕೊಳ್ಳುವುದಕ್ಕಿಂತ ಅದನ್ನು ಮರುಪಾವತಿ ಮಾಡುವುದೇ ದೊಡ್ಡ ತಲೆ ನೋವು. ಹೀಗಾಗಿ ಬಡ್ಡಿದರ ಕಡಿಮೆ ಇರುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಸಾಲ ಪಡೆಯಲು ಮುಂದಾಗುವುದೇ ಹೆಚ್ಚು. ಆದರೆ ಈ ಸಾಲದ ಬಡ್ಡಿಯು ಸಿಬಿಲ್ ಸ್ಕೋರ್ ಮೇಲೆ ಅವಲಂಬಿತವಾಗಿರುತ್ತದೆ. ಸಿಬಿಲ್ ಸ್ಕೋರ್ ಹೆಚ್ಚಿದರೆ ಮಾತ್ರ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯುತ್ತದೆ. ಹಾಗಾದ್ರೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗಬೇಕು ಅಂತಾದ್ರೆ ಸಿಬಿಲ್ ಸ್ಕೋರ್ ಎಷ್ಟಿರಬೇಕು ಎಂಬುದು ತಿಳಿದಿದೆಯೇ. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ಸಿಬಿಲ್ ಸ್ಕೋರ್ ಯಾಕೆ ಮುಖ್ಯ?

ಗೃಹ ಸಾಲ, ವೈಯಕ್ತಿಕ ಸಾಲ ಸೇರಿದಂತೆ ಯಾವುದೇ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ಬ್ಯಾಂಕ್‌ಗಳು ಮೊದಲು ನೋಡುವುದೇ ಈ ಸಿಬಿಲ್ ಸ್ಕೋರ್. ನಿಮ್ಮ ಸಿಬಿಲ್ ಸ್ಕೋರ್ 750 ಕ್ಕಿಂತ ಹೆಚ್ಚಿದ್ದರೆ ಬ್ಯಾಂಕ್ ಸಾಲವನ್ನು ಸುಲಭವಾಗಿ ನೀಡುತ್ತವೆ.

ಸಿಬಿಲ್ ಸ್ಕೋರ್ ಮೇಲೆ ಅವಲಂಬಿತವಾಗಿರುತ್ತೆ ಸಾಲದ ಬಡ್ಡಿದರ

750 – 900 (ಅತ್ಯುತ್ತಮ): ಸಿಬಿಲ್ ಸ್ಕೋರ್ 750 – 900 ನಡುವೆ ಇದ್ದರೆ ಬ್ಯಾಂಕುಗಳು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಮತ್ತು ಸುಲಭವಾಗಿ ಸಾಲ ನೀಡುತ್ತವೆ.

700 – 749 (ಉತ್ತಮ): ಈ ಸ್ಕೋರ್‌ನಲ್ಲಿ ಸಾಲ ಸಿಗುತ್ತದೆ. ಆದರೆ ಬಡ್ಡಿದರವು ಸರಾಸರಿಯಾಗಿರಬಹುದು. ಸ್ವಲ್ಪ ಹೆಚ್ಚಿರುತ್ತದೆ.

700 ಕ್ಕಿಂತ ಕಡಿಮೆ (ಕಳಪೆ): ಸಿಬಿಲ್ ಸ್ಕೋರ್ 700 ಕ್ಕಿಂತ ಕಡಿಮೆ ಇದ್ದಲ್ಲಿ ಸಾಲ ಸಿಗುವುದು ಕಷ್ಟ. ಸಿಬಿಲ್ ಸ್ಕೋರ್ ಕಡಿಮೆಯಿದ್ದು ಸಾಲ ನೀಡಿದ್ರೂ ಬ್ಯಾಂಕ್ ಸಾಲ ನೀಡಿದರೂ ಬಡ್ಡಿದರವನ್ನು ಹೆಚ್ಚು ವಿಧಿಸುತ್ತದೆ.

ಇದನ್ನೂ ಓದಿ: ಲೋನ್ ಅಕೌಂಟ್‌ನಲ್ಲಿನ ನಾಮಿನಿ ಹೆಸರನ್ನು ಬದಲಾಯಿಸಲು ಹೀಗೆ ಮಾಡಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಬ್ಯಾಂಕ್‌ನಲ್ಲಿ ಸಾಲ ಪಡೆಯಲು ಸಿಬಿಲ್ ಸ್ಕೋರ್ ಯಾಕೆ ಮುಖ್ಯ?

ಉತ್ತರ: ಭಾರತೀಯ ರಿಸರ್ವ್ ಬ್ಯಾಂಕ್ ಸಾಲ ಪಡೆಯಲು ಸಿಬಿಲ್ ಸ್ಕೋರ್‌ನ್ನು ಕಡ್ಡಾಯಗೊಳಿಸಿದೆ.

ಪ್ರಶ್ನೆ: ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗ್ಬೇಕು ಅಂತಾದ್ರೆ ಸಿಬಿಲ್ ಸ್ಕೋರ್ ಎಷ್ಟಿರಬೇಕು?

ಉತ್ತರ: ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗ್ಬೇಕು ಅಂತಾದ್ರೆ ಸಿಬಿಲ್ ಸ್ಕೋರ್ 750 ಕ್ಕಿಂತ ಹೆಚ್ಚಿರಬೇಕು.

ಪ್ರಶ್ನೆ: ಸಿಬಿಲ್ ಸ್ಕೋರ್ ಕಡಿಮೆಯಾದರೆ ಏನಾಗುತ್ತದೆ?

ಉತ್ತರ:ಸಿಬಿಲ್ ಸ್ಕೋರ್ ಕಡಿಮೆಯಾದರೆ ಬ್ಯಾಂಕ್‌ಗಳಲ್ಲಿ ಸಾಲ ಸಿಗುವುದು ಕಷ್ಟ. ಒಂದು ವೇಳೆ ಸಾಲ ಸಿಕ್ಕರೂ ಬಡ್ಡಿದರ ಹೆಚ್ಚಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

9, 10ನೇ ತರಗತಿ ವಿದ್ಯಾರ್ಥಿಗಳಿಗೆ ಪಿಯುಸಿ ಉಪನ್ಯಾಸಕರಿಂದ ಪಾಠ: ಸರ್ಕಾರದ ನಿರ್ಧಾರಕ್ಕೆ ವಿಜಯೇಂದ್ರ ವಿರೋಧ – Kannada News | BY Vijayendra Slams Karnataka Govt’s Decision to Deploy PUC Lecturers for Classes 9 and 10

ಬೆಂಗಳೂರು, ಜುಲೈ 16: ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) ನಿಯಮಗಳ ಕುರಿತ ಅಧಿಸೂಚನೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪಿಯುಸಿ ಉಪನ್ಯಾಸಕರನ್ನು ಪ್ರೌಢಶಾಲೆಯ 9 ಮತ್ತು 10 ನೇ ತರಗತಿಗೆ ಬೋಧನೆಗೆ ನಿಯೋಜಿಸಲು ಅವಕಾಶ ಮಾಡಿಕೊಡುವ ಈ ಅಧಿಸೂಚನೆ ಬಗ್ಗೆ ಕಿಡಿ ಕಾರಿರುವ ಅವರು, ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ ಎಂಬ ನೆಪವೊಡ್ಡಿ ಪಿಯುಸಿ ಉಪನ್ಯಾಸಕರನ್ನು ನಿಯೋಜಿಸಲು ಸರ್ಕಾರ ಮುಂದಾಗಿದೆ. ಕೂಡಲೇ ಈ ನಿರ್ಧಾರವನ್ನು ರಾಜ್ಯ ಸರ್ಕಾರ ಕೈ ಬಿಡಬೇಕೆಂದು ಆಗ್ರಹಿಸಿದ್ದಾರೆ.

ವಿಜಯೇಂದ್ರ ವಿರೋಧ ಯಾಕೆ?

ಸರ್ಕಾರ ಹೊರಡಿಸಿರುವ ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) ಆದೇಶ ಸಮರ್ಥನಿಯವಲ್ಲ. ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಸಹಸ್ರಾರು ಉಪನ್ಯಾಸಕರ ಮೇಲೆ ನೇರ ಪರಿಣಾಮ ಬೀರುವ ಈ ಮಹತ್ವದ ನಿರ್ಧಾರವನ್ನು ಸರ್ಕಾರ ಉಪನ್ಯಾಸಕರು, ಪ್ರಾಚಾರ್ಯರು, ವಿದ್ಯಾರ್ಥಿಗಳು, ಪಾಲಕರೊಂದಿಗೆ ಚರ್ಚಿಸದೇ ಶಿಕ್ಷಣ ತಜ್ಞರು ಹಾಗೂ ಇತರ ಹಿತಾಸಕ್ತ ಪಕ್ಷಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸದೇ, ಅಧ್ಯಯನ ಕೈಗೊಳ್ಳದೇ ಏಕಪಕ್ಷೀಯವಾಗಿ ಪ್ರಕಟಿಸಿರುವುದು ಅಸಹನೀಯ ಮತ್ತು ಪ್ರಜಾಸತ್ತಾತ್ಮಕ ಸರ್ಕಾರದ ಲಕ್ಷಣವಲ್ಲ. ಹೀಗಾಗಿ ಇದನ್ನು ಬಲವಾಗಿ ವಿರೋಧಿಸೋದಾಗಿ ವಿಜಯೇಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬ; ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ ಹರಿಪ್ರಸಾದ್

ಉಪನ್ಯಾಸಕರ ಗಮನವನ್ನು ಪ್ರೌಢಶಾಲೆಗಳತ್ತ ಹರಿಸಿದರೆ ಇತ್ತ ಪಿಯುಸಿ ವಿದ್ಯಾರ್ಥಿಗಳಿಗೂ ಇಲ್ಲ ಹಾಗೂ ಅತ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಇಲ್ಲ ಎಂಬಂತಾಗಿ ಎಲ್ಲರಿಗೂ ಅರೆಬರೆ ಶಿಕ್ಷಣ ನೀಡಿದಂತಾಗುತ್ತದೆ. ಇಂತಹ ಮೂರ್ಖ ಆದೇಶ ಹೊರಡಿಸುವ ಮೂಲಕ ವಿದ್ಯಾರ್ಥಿ ಹಾಗೂ ಉಪನ್ಯಾಸಕ ವಿರೋಧಿಯಾಗಿದೆ. ಶಿಕ್ಷಣ ಸಚಿವರೇ ಇಲ್ಲದ ಸರ್ಕಾರ ಇನ್ನೂ ಹೇಗೆ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಈ ಸಂಬಂಧ ಜೂನ್ ತಿಂಗಳಲ್ಲೇ ಅಧಿಸೂಚನೆ ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸಿದ್ದ ರಾಜ್ಯ ಸರ್ಕಾರ, ಇದೀಗ ನಿಯಮಗಳಿಗೆ ತಿದ್ದುಪಡಿ ತಂದಿದೆ. ನೇರ ನೇಮಕಾತಿ ಮತ್ತು ಬಡ್ತಿಯ ಮೂಲಕ ಇನ್ನು ಮುಂದೆ ನೇಮಕಗೊಳ್ಳುವ ಉಪನ್ಯಾಸಕರು ಸರ್ಕಾರ ನಿರ್ದಿಷ್ಟಪಡಿಸಿದ ಶಿಕ್ಷಣ ಸಂಸ್ಥೆಗಳಲ್ಲಿ 9 ಮತ್ತು 10ನೇ ತರಗಳನ್ನು ಬೋಧಿಸಬೇಕು ಎಂಬ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಿರುವ ಬಗ್ಗೆಯೀಗ ಆಕ್ಷೇಪಗಳು ಕೇಳಿಬಂದಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಜಿ. ಪರಮೇಶ್ವರ್ ಪತ್ರ, ತಕ್ಷಣ ನೆರವಿಗೆ ಮನವಿ – Kannada News | Karnatakas DyCM Minister G. Parmeshwar Urges PM Modi for Drought Relief Aid

ಬೆಂಗಳೂರು, ಜುಲೈ 16: ಕರ್ನಾಟಕದಲ್ಲಿನ ಭೀಕರ ಬರಗಾಲದ ಪರಿಸ್ಥಿತಿ ಕುರಿತು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ತಕ್ಷಣದ ಪರಿಹಾರ ಮತ್ತು ಆರ್ಥಿಕ ನೆರವಿಗೆ ಮನವಿ ಮಾಡಿದ್ದಾರೆ. ಮೋದಿಗೆ ಮುಖ್ಯಮಂತ್ರಿಗಳ ಮನವಿಯ ಬೆನ್ನಲ್ಲೇ, ಡಿಸಿಎಂ ಪರಮೇಶ್ವರ್ ಅವರು ರಾಜ್ಯಕ್ಕೆ ವಿಶೇಷ ಅನುದಾನ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಅಡಿಯಲ್ಲಿ ಮುಂಗಡ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಕೇಂದ್ರ ಗೃಹ ಸಚಿವರು ಮತ್ತು ಕೃಷಿ ಸಚಿವರಿಗೂ ಪತ್ರ ಬರೆದಿರುವುದಾಗಿ ಅವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

IND vs ENG: 2ನೇ ಏಕದಿನದಲ್ಲಿ ಕಣಕ್ಕಿಳಿದ ಕೂಡಲೇ ವಿಶೇಷ ಶತಕ ಪೂರೈಸಿದ ಕೊಹ್ಲಿ – Kannada News | Virat Kohli’s Historic 100th ODI in SENA Countries: Records and India vs England Series

ಕಾರ್ಡಿಫ್ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮೈದಾನಕ್ಕಿಳಿದ ತಕ್ಷಣ ವಿರಾಟ್ ಕೊಹ್ಲಿ SENA ದೇಶಗಳಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) 100 ಏಕದಿನ ಪಂದ್ಯಗಳನ್ನು ಪೂರ್ಣಗೊಳಿಸಿದ ಸಾಧನೆ ಮಾಡಿದರು(PC-PTI).

Source link

Karnataka Weather Update: ಬೆಂಗಳೂರಿಗರಿಗೆ ಕೊನೆಗೂ ತಂಪೆರೆದ ವರುಣ; ರಾಜ್ಯದ ಹಲವೆಡೆಯೂ ಮಳೆ ಮುನ್ಸೂಚನೆ – Kannada News | Weather Update: Bengaluru Witnesses Widespread Rainfall; More Rain Likely Across Karnataka

ಬೆಂಗಳೂರಲ್ಲಿ ಮಳೆImage Credit source: Farman Ali khan X Account

ಬೆಂಗಳೂರು, ಜುಲೈ 16: ಜುಲೈ ತಿಂಗಳಿನಲ್ಲಿ ಶತಮಾನದ ಬಳಿಕ ದಾಖಲೆಯ ತಾಪಮಾನ ಕಂಡಿದ್ದ ಬೆಂಗಳೂರಿಗರ (Bengaluru) ಮೇಲೆ ಕೊನೆಗೂ ವರುಣ (Rain) ಕೊಂಚ ಕೃಪೆ ತೋರಿದ್ದಾನೆ. ಮಹಾನಗರದ ಹಲವೆಡೆ ಮಳೆಯಾಗಿದ್ದು, ಏಕಾಏಕಿ ವರ್ಷದಾರೆಯ ಪರಿಣಾಮ, ಸಾರ್ವಜನಿಕರು ಪರದಾಟ ನಡೆಸಿದ್ದಾರೆ. ರಾಜಾಜಿನಗರ, ಮಲ್ಲೇಶ್ವರಂ, ಕುರುಬರಹಳ್ಳಿ, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ  ಜನರು ಬಸ್ ನಿಲ್ದಾಣ, ಅಂಡರ್​ಪಾಸ್​ಗಳಲ್ಲಿ ಆಶ್ರಯ ಪಡೆದ ದೃಶ್ಯಗಳು ಕಂಡುಬಂದಿವೆ.

ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ

ನೈಋತ್ಯ ಮುಂಗಾರಿನ ಅಭಾವದ ಕಾರಣ ರಾಜ್ಯದ ಬಹುತೇಕ ಜಿಲ್ಲೆಗಳ ತಾಪಮಾನದಲ್ಲಿ ಹೆಚ್ಚಳದ ನಡುವೆಯೂ ಕೆಲ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ. ವೇಗದ ಗಾಳಿಯ ಜೊತೆಗೆ ಸಾಧಾರಣ ಮಳೆಯಾಗಲಿದೆ. ಹಾಗೆಯೇ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಮಳೆ ಸಾಧ್ಯತೆ ಅಂದಾಜಿಸಲಾಗಿದೆ.

ಇದನ್ನೂ ಓದಿ: ನೇರವಾಗಿ ಮಳೆ ನೀರು ಕುಡಿಯುವುದು ಸುರಕ್ಷಿತವೇ? ತಜ್ಞರು ಹೇಳಿದ ಸತ್ಯ

ಹೇಗಿರಲಿದೆ ಮುಂದಿನ 7 ದಿನಗಳ ವಾತಾವರಣ?

ಮುಂದಿನ 7 ದಿನಗಳ ಕಾಲ ಕರ್ನಾಟಕದಾದ್ಯಂತ ದುರ್ಬಲ ಮುಂಗಾರು ಮುಂದುವರಿಯಲಿದ್ದು, ಗರಿಷ್ಠ ಉಷ್ಣಾಂಶ ಏರಿಕೆಯಾಗಲಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಜೋರಾದ ಗಾಳಿಯೊಂದಿಗೆ ಹಗುರ ಮಳೆ ಮತ್ತು ಒಳನಾಡು ಜಿಲ್ಲೆಗಳಲ್ಲಿ ಬಿಸಿಲು, ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ ಎಂದು ಇಲಾಖೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:11 pm, Thu, 16 July 26

Source link

ಇಪಿಎಫ್​ಒ ಅಪ್​​ಡೇಟ್; ಪಿಎಫ್ ಖಾತೆಗೆ ಬರುತ್ತಿದೆ ಬಡ್ಡಿ ಹಣ; ನಿಮಗೆ ಬಂದಿದೆಯಾ, ಪರಿಶೀಲಿಸುವುದು ಹೇಗೆ? – Kannada News | EPFO update, interest credit starts, various ways to know PF account Balance

ನವದೆಹಲಿ, ಜುಲೈ 16: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ಕೋಟ್ಯಂತರ ಪಿಎಫ್ ಚಂದಾದಾರರ ಖಾತೆಗಳಿಗೆ 2025-26ನೇ ಹಣಕಾಸು ವರ್ಷದ ವಾರ್ಷಿಕ ಬಡ್ಡಿಯನ್ನು ಜಮೆ ಮಾಡಲು ನಿನ್ನೆಯೇ (ಜುಲೈ 15) ಅಧಿಕೃತವಾಗಿ ಚಾಲನೆ ನೀಡಿದೆ. ಈ ಬಾರಿ ಇಪಿಎಫ್‌ಒ ಕೇಂದ್ರಿಕೃತ ಐಟಿ ವ್ಯವಸ್ಥೆಯ (CITES) ಅಡಿಯಲ್ಲಿ ಸ್ವಯಂಚಾಲಿತವಾಗಿ ಒಂದೇ ಬ್ಯಾಚ್‌ನಲ್ಲಿ ಸುಮಾರು 34 ಕೋಟಿ ಖಾತೆಗಳಿಗೆ ಶೇ. 8.25 ರಷ್ಟು ಬಡ್ಡಿದರದ ಹಣವನ್ನು ಜಮೆ ಮಾಡುತ್ತಿದೆ.

ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಅವರ ಪ್ರಕಾರ, ಒಟ್ಟು 1.44 ಲಕ್ಷ ಕೋಟಿ ರೂಪಾಯಿಗೂ ಅಧಿಕ ಬಡ್ಡಿ ಹಣವನ್ನು ಅರ್ಹ ಚಂದಾದಾರರ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ. ನಿಮ್ಮ ಖಾತೆಗೆ ಬಡ್ಡಿ ಹಣ ಜಮೆಯಾಗಿದೆಯೇ ಇಲ್ಲವೇ ಎಂಬುದನ್ನು ಮನೆಯಲ್ಲೇ ಕುಳಿತು ಸುಲಭವಾಗಿ ಪರಿಶೀಲಿಸಲು 4 ಸರಳ ಮಾರ್ಗಗಳು ಇಲ್ಲಿವೆ:

ಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವ 4 ಸುಲಭ ವಿಧಾನಗಳು

1. ಇಪಿಎಫ್‌ಒ ಪೋರ್ಟಲ್ ಮೂಲಕ ಪಿಎಫ್ ಬ್ಯಾಲನ್ಸ್ ಪರಿಶೀಲನೆ:

  • ಮೊದಲಿಗೆ ಇಪಿಎಫ್‌ಒ ಅಧಿಕೃತ ಪಾಸ್‌ಬುಕ್ ಪೋರ್ಟಲ್‌ಗೆ (EPFO Member Passbook) ಭೇಟಿ ನೀಡಿ: unifiedportal-mem.epfindia.gov.in
  • ನಿಮ್ಮ 12 ಅಂಕಿಯ ಯುಎಎನ್ (UAN) ಸಂಖ್ಯೆ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ ಲಾಗಿನ್ ಆಗಿ.
  • ನಿಮ್ಮ ಆಧಾರ್ ಲಿಂಕ್ ಆಗಿರುವ ಮೊಬೈಲ್‌ಗೆ ಬರುವ ಒಟಿಪಿ (OTP) ನಮೂದಿಸಿ ವೆರಿಫೈ ಮಾಡಿ.
  • ಲಾಗಿನ್ ಆದ ನಂತರ ‘View’ ವಿಭಾಗಕ್ಕೆ ಹೋಗಿ ‘Passbook Lite’ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಇತ್ತೀಚಿನ ಪಿಎಫ್ ಕೊಡುಗೆಗಳು ಮತ್ತು ಜಮೆಯಾಗಿರುವ ಬಡ್ಡಿಯ ವಿವರಗಳನ್ನು ಕಾಣಬಹುದು.

ಇದನ್ನೂ ಓದಿ: ಐಟಿ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನ; ಡೆಡ್​ಲೈನ್ ಮಿಸ್ ಆದರೆ ಏನೆಲ್ಲಾ ದಂಡ, ಶುಲ್ಕಗಳಿವೆ ಗೊತ್ತಾ?

2. ಉಮಾಂಗ್ ಆಪ್ ಮೂಲಕ ಪಿಎಫ್ ಬ್ಯಾಲನ್ಸ್ ಪರಿಶೀಲನೆ:

  • ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸರ್ಕಾರದ ಅಧಿಕೃತ ‘UMANG’ ಆಪ್ ಅನ್ನು ಡೌನ್‌ಲೋಡ್ ಮಾಡಿ ಓಪನ್ ಮಾಡಿ.
  • ಆಪ್‌ನಲ್ಲಿ ಲಭ್ಯವಿರುವ ಸೇವೆಗಳಲ್ಲಿ ‘EPFO’ ಆಯ್ಕೆ ಮಾಡಿ.
  • ಮುಂದೆ ‘Employee Centric Services’ ಅಡಿಯಲ್ಲಿ ‘View Passbook’ ಕ್ಲಿಕ್ ಮಾಡಿ.
  • ನಿಮ್ಮ UAN ಸಂಖ್ಯೆಯನ್ನು ನಮೂದಿಸಿ, ಮೊಬೈಲ್‌ಗೆ ಬರುವ OTP ದಾಖಲಿಸಿದರೆ ನಿಮ್ಮ ಒಟ್ಟು ಪಿಎಫ್ ಬ್ಯಾಲೆನ್ಸ್ ಪರದೆಯ ಮೇಲೆ ಮೂಡುತ್ತದೆ. ಇಲ್ಲಿಂದ ನೀವು ಪಾಸ್‌ಬುಕ್ ಅನ್ನು PDF ರೂಪದಲ್ಲೂ ಡೌನ್‌ಲೋಡ್ ಮಾಡಿಕೊಳ್ಳಬಹುದು.

3. ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲನ್ಸ್ ಪರಿಶೀಲನೆ:

ನಿಮ್ಮ ಮೊಬೈಲ್‌ನಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಕೇವಲ ಒಂದು ಮಿಸ್ಡ್ ಕಾಲ್ (Missed Call) ನೀಡಿ ಬ್ಯಾಲೆನ್ಸ್ ತಿಳಿಯಬಹುದು.

  • ನಿಮ್ಮ UAN ಸಂಖ್ಯೆಗೆ ನೋಂದಾಯಿತವಾಗಿರುವ ಮೊಬೈಲ್ ಸಂಖ್ಯೆಯಿಂದ 9966044425 ಗೆ ಮಿಸ್ಡ್ ಕಾಲ್ ಕೊಡಿ.
  • ಎರಡು ರಿಂಗ್ ಆದ ನಂತರ ಕರೆ ಸ್ವಯಂಚಾಲಿತವಾಗಿ ಕಟ್ ಆಗುತ್ತದೆ.

ಕೆಲವೇ ಸೆಕೆಂಡುಗಳಲ್ಲಿ ಇಪಿಎಫ್‌ಒನಿಂದ ನಿಮ್ಮ ಫೋನ್‌ಗೆ ಎಸ್‌ಎಂಎಸ್ ಬರಲಿದ್ದು, ಅದರಲ್ಲಿ ನಿಮ್ಮ ಕೊನೆಯ ಕೊಡುಗೆ ಮತ್ತು ಒಟ್ಟು ಬ್ಯಾಲೆನ್ಸ್ ವಿವರ ಇರುತ್ತದೆ. ಈ ಸೇವೆ ಸಿಗಬೇಕೆಂದರೆ ನಿಮ್ಮ UAN ನೊಂದಿಗೆ ಆಧಾರ್, ಪ್ಯಾನ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು.

ಇದನ್ನೂ ಓದಿ: ಹೊಸ ಐಆರ್​ಸಿಟಿಸಿ ವೆಬ್​ಸೈಟ್ ಸಿದ್ಧ; ಬೀಟಾ ಆವೃತ್ತಿ ಬಿಡುಗಡೆ; ರೈಲ್ವೆ ಟಿಕೆಟ್ ಬುಕಿಂಗ್ ಇನ್ಮುಂದೆ ಸರಳ

4. ಕೇವಲ ಒಂದು ಎಸ್‌ಎಂಎಸ್ (SMS) ಕಳುಹಿಸುವ ಮೂಲಕ:

ಚಂದಾದಾರರು ತಮ್ಮ ನೋಂದಾಯಿತ ಮೊಬೈಲ್‌ನಿಂದ ಮೆಸೇಜ್ ಕಳುಹಿಸುವ ಮೂಲಕವೂ ಮಾಹಿತಿ ಪಡೆಯಬಹುದು.

ನಿಮ್ಮ ಮೊಬೈಲ್‌ನ ಮೆಸೇಜ್ ಬಾಕ್ಸ್‌ನಲ್ಲಿ EPFOHO UAN KAN ಎಂದು ಟೈಪ್ ಮಾಡಿ (ಇಲ್ಲಿ UAN ಜಾಗದಲ್ಲಿ ನಿಮ್ಮ 12 ಅಂಕಿಯ ನೈಜ ಯುಎಎನ್ ಸಂಖ್ಯೆ ಬರೆಯಿರಿ. ಕೊನೆಯಲ್ಲಿ ‘KAN’ ಎಂದು ಬರೆದರೆ ನಿಮಗೆ ಕನ್ನಡದಲ್ಲೇ ಮಾಹಿತಿ ಸಿಗುತ್ತದೆ).

ಈ ಸಂದೇಶವನ್ನು 7738299899 ಸಂಖ್ಯೆಗೆ ಕಳುಹಿಸಿ. ತಕ್ಷಣವೇ ನಿಮ್ಮ ಖಾತೆಯ ವಿವರಗಳು ಎಸ್‌ಎಂಎಸ್ ಮೂಲಕ ಲಭ್ಯವಾಗುತ್ತವೆ.

ಬಡ್ಡಿ ಜಮೆ ವಿಳಂಬವಾದರೆ ನಷ್ಟವಿಲ್ಲ

ಒಂದು ವೇಳೆ ನಿಮ್ಮ ಖಾತೆಗೆ ತಾಂತ್ರಿಕ ಕಾರಣಗಳಿಂದ ಬಡ್ಡಿ ಹಣ ತಡವಾಗಿ ಕ್ರೆಡಿಟ್ ಆದರೂ ಚಂದಾದಾರರಿಗೆ ಯಾವುದೇ ನಷ್ಟವಾಗುವುದಿಲ್ಲ. ಇಪಿಎಫ್ ನಿಯಮಾವಳಿಗಳ ಪ್ರಕಾರ, ಬಡ್ತಿಯನ್ನು ನಿಮ್ಮ ಮಾಸಿಕ ಚಾಲ್ತಿ ಬ್ಯಾಲೆನ್ಸ್ ಮೇಲೆಯೇ ಲೆಕ್ಕ ಹಾಕಲಾಗುವುದರಿಂದ, ಹಣ ತಡವಾಗಿ ಕಾಣಿಸಿಕೊಂಡರೂ ಪೂರ್ಣ ಬಡ್ಡಿ ಮೊತ್ತ ಸುರಕ್ಷಿತವಾಗಿ ಖಾತೆ ಸೇರಲಿದೆ ಎಂದು ಇಪಿಎಫ್‌ಒ ಸ್ಪಷ್ಟಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್ ಹೀಗೆ ಹೇಳಿದ್ದೇಕೆ? – Kannada News | Daali Dhananjay talks about Mother Promise movie Negative Reviews and Court Order

ನಟ ಡಾಲಿ ಧನಂಜಯ (Daali Dhananjay) ಅವರು ನಟಿಸಿ, ನಿರ್ಮಾಣ ಮಾಡಿರುವ ‘ಮದರ್ ಪ್ರಾಮಿಸ್’ ಸಿನಿಮಾ ಬಿಡುಗಡೆ ಆಗಿದ್ದು, ಕೆಲವರು ನೆಗೆಟಿವ್ ಪ್ರಚಾರ ಮಾಡಿದ್ದಾರೆ. ಆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಧನಂಜಯ ಅವರು ಮಾತನಾಡಿದ್ದಾರೆ. ‘ನೆಗೆಟಿವ್ ವಿಮರ್ಶೆ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಅದರ ಬಗ್ಗೆ ಪ್ರತಿಕ್ರಿಯೆ ನೀಡಲು ನನಗೆ ಇಷ್ಟ ಇರಲಿಲ್ಲ. ತಮ್ಮ ತಂಡದವರು ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದೆ. ನಮ್ಮ ಈ ಹಿಂದಿನ ಸಿನಿಮಾಗಳು ಚೆನ್ನಾಗಿ ಪ್ರದರ್ಶನ ಕಾಣುತ್ತಿರುವಾಗಲೂ ಕೆಲವರು ನೆಗೆಟಿವ್ ಮಾಡಿದ್ದರು. ನಮ್ಮ ಸಿನಿಮಾಗೆ ಮಾತ್ರವಲ್ಲ, ಬೇರೆ ನಟರ ಸಿನಿಮಾಗಳಿಗೂ ಈ ರೀತಿ ಅಪಪ್ರಚಾರ ಮಾಡುವ ಒಂದು ವರ್ಗ ಇದ್ದೇ ಇರುತ್ತದೆ. ಸಿನಿಮಾ ಚೆನ್ನಾಗಿ ಇದ್ದಾಗ ಅದನ್ನು ಯಾರೂ ತಡೆಯೋಕೆ ಆಗಲ್ಲ. ವಿಮರ್ಶೆಗಳನ್ನು ನಾವು ತೆಗೆದುಕೊಳ್ಳಬೇಕು. ಆದರೆ ಸಿನಿಮಾವನ್ನು ಸಂಪೂರ್ಣ ತೆಗೆದುಹಾಕುವುದು ಬೇರೆ. ಮುಂದಿನ ಸಿನಿಮಾಗಳನ್ನು ನಾವು ರಿಲೀಸ್ ಮಾಡುವಾಗ ಕೋರ್ಟ್ ಆರ್ಡರ್ ಇಟ್ಟುಕೊಳ್ಳಬೇಕಾಗುತ್ತದೆ. ಅದರಿಂದ ನೆಗೆಟಿವ್ ಮಾಡುವವರ ಕಂಟೆಂಟ್ ಡಿಲೀಟ್ ಆಗುತ್ತದೆ. ಪ್ರೇಕ್ಷಕರ ಮೇಲೆ ಸಿನಿಮಾ ನಿಂತುಕೊಳ್ಳುತ್ತದೆ’ ಎಂದು ಧನಂಜಯ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs ENG: ಟಾಸ್ ಗೆದ್ದ ಇಂಗ್ಲೆಂಡ್‌; ಉಭಯ ತಂಡಗಳ ಪ್ಲೇಯಿಂಗ್ 11ನಲ್ಲಿ ಬದಲಾವಣೆ – Kannada News | IND vs ENG 2nd ODI Live: Team India Bats First in Cardiff; Rahul Out, Kishan In

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್‌ನಲ್ಲಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಏಕಪಕ್ಷೀಯವಾಗಿ ಗೆದ್ದುಕೊಂಡಿತ್ತು. ಇದೀಗ ಎರಡನೇ ಏಕದಿನ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸುವ ಗುರಿಯನ್ನು ಟೀಂ ಇಂಡಿಯಾ ಹೊಂದಿದೆ. ಇತ್ತ ಆತಿಥೇಯ ಇಂಗ್ಲೆಂಡ್ ತಂಡವು ಈ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಸರಣಿಯಲ್ಲಿ ಜೀವಂತವಾಗಿರಲು ಪ್ರಯತ್ನಿಸಲಿದೆ.

ಟಾಸ್ ಗೆದ್ದ ಇಂಗ್ಲೆಂಡ್

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್‌ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್‌ ಮಾಡಲಿದೆ. ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಎರಡೂ ತಂಡಗಳಲ್ಲಿ ತಲಾ ಒಂದೊಂದು ಬದಲಾವಣೆಗಳನ್ನು ಮಾಡಲಾಗಿದೆ. ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅನಾರೋಗ್ಯದ ಕಾರಣದಿಂದಾಗಿ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರ ಬದಲಿಗೆ ಇಶಾನ್ ಕಿಶನ್ ಅವರನ್ನು ಆಡಿಸಲಾಗುತ್ತಿದೆ.

ಮುಖಾಮುಖಿ ದಾಖಲೆ

ಇನ್ನು ಈ ಮೈದಾನದಲ್ಲಿ ಟೀಂ ಇಂಡಿಯಾದ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ಇದುವರೆಗೆ ನಾಲ್ಕು ಏಕದಿನ ಪಂದ್ಯಗಳನ್ನು ಆಡಿರುವ ಭಾರತ ಮೂರರಲ್ಲಿ ಗೆದ್ದಿದ್ದರೆ, ಒಂದನ್ನು ಸೋತಿದೆ. ಟೀಂ ಇಂಡಿಯಾ ಚೇಸಿಂಗ್ ಮಾಡುವಾಗ ಒಂದು ಪಂದ್ಯವನ್ನು ಗೆದ್ದಿದ್ದರೆ, ಎರಡು ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ಮಾಡುವ ಮೂಲಕ ಗೆದ್ದಿದೆ. ಹಾಗೆಯೇ ಭಾರತ ತಂಡವು ಕಾರ್ಡಿಫ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಎರಡು ಏಕದಿನ ಪಂದ್ಯಗಳನ್ನು ಆಡಿದ್ದು, ಒಂದು ಪಂದ್ಯದಲ್ಲಿ ಗೆದ್ದು, ಒಂದು ಪಂದ್ಯದಲ್ಲಿ ಸೋತಿದೆ. 2014 ರ ನಂತರ ಟೀಂ ಇಂಡಿಯಾ ಕಾರ್ಡಿಫ್‌ನಲ್ಲಿ ಮೊದಲ ಬಾರಿಗೆ ಏಕದಿನ ಪಂದ್ಯವನ್ನು ಆಡಲಿದೆ.

ಉಭಯ ತಂಡಗಳ ಪ್ಲೇಯಿಂಗ್ 11

ಭಾರತದ ಪ್ಲೇಯಿಂಗ್ 11: ಶುಭ್​ಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್.

ಇಂಗ್ಲೆಂಡ್‌ ಪ್ಲೇಯಿಂಗ್ 11: ಜಾಕೋಬ್ ಬೆಥೆಲ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜೋಶ್ ಟಂಗ್, ಆದಿಲ್ ರಶೀದ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:13 pm, Thu, 16 July 26

Source link

‘ಸತ್ಲುಜ್’ ಸಿನಿಮಾ ನೋಡದೆಯೇ ನಿಷೇಧ ಹೇರಿದ ಸೆನ್ಸಾರ್ ಮಂಡಳಿ ಅಧ್ಯಕ್ಷ? ಅನುರಾಗ್ ಕಶ್ಯಪ್ ಆರೋಪ – Kannada News | Anurag Kashyap allegations CBFC Prasoon Joshi objected Diljit Dosanjh Movie Satluj

ದಿಲ್ಜಿತ್ ದೋಸಾಂಜ್ ನಟನೆಯ ‘ಸತ್ಲುಜ್’ (Satluj) ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ ಒಟಿಟಿಯಿಂದ ಬ್ಯಾನ್ ಆಗಿರುವುದು ಸದ್ಯ ಭಾರತೀಯ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸೆನ್ಸಾರ್ ಮಂಡಳಿಯ (CBFC) ಈ ಸರ್ವಾಧಿಕಾರಿ ಧೋರಣೆಯ ವಿರುದ್ಧ ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸಿಬಿಎಫ್‌ಸಿ ಅಧ್ಯಕ್ಷ ಪ್ರಸೂನ್ ಜೋಶಿ ಅವರು ಸಿನಿಮಾ ನೋಡದೆಯೇ ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಅನುರಾಗ್ ಗಂಭೀರ ಆರೋಪ ಮಾಡಿದ್ದಾರೆ.

ಸಿನಿಮಾ ನೋಡದೆಯೇ ಅಡ್ಡಿಪಡಿಸಿದ ಪ್ರಸೂನ್ ಜೋಶಿ?

‘ಸತ್ಲುಜ್ ಚಿತ್ರದ ನಿರ್ದೇಶಕ ಹನಿ ಟ್ರೆಹಾನ್ ನನ್ನ ಬಳಿ ಸೆನ್ಸಾರ್ ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಾ ಬೇಸರ ಹಂಚಿಕೊಂಡಿದ್ದರು. ಸಿಬಿಎಫ್‌ಸಿ ಅಧ್ಯಕ್ಷ ಪ್ರಸೂನ್ ಜೋಶಿ ಅವರಿಗೆ ಈ ಚಿತ್ರದ ಬಗ್ಗೆ ತೀವ್ರ ಆಕ್ಷೇಪವಿತ್ತು. ಆದರೆ ಆಶ್ಚರ್ಯ ಎಂದರೆ, ಅವರು ಸಿನಿಮಾವನ್ನು ನೋಡಿಯೇ ಇರಲಿಲ್ಲ! ಬರೀ ಈ ಸಿನಿಮಾ ಮಾತ್ರವಲ್ಲ, ಬೇರೆ ಹಲವು ಚಿತ್ರಗಳ ವಿಷಯದಲ್ಲೂ ಅಧ್ಯಕ್ಷರು ಸಿನಿಮಾವನ್ನು ವೀಕ್ಷಿಸುವುದೇ ಇಲ್ಲ ಎಂಬುದು ನನಗೆ ಗೊತ್ತು’ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.

ಪರಿಶೀಲನಾ ಸಮಿತಿ ವರದಿ ಆಧಾರದ ಮೇಲೆ ನಿರ್ಧಾರ?

ಮುಂದುವರಿದು ಮಾತನಾಡಿದ ಅನುರಾಗ್ ಕಶ್ಯಪ್, ‘ಸಿಬಿಎಫ್‌ಸಿ ಅಧ್ಯಕ್ಷರು ಸ್ವತಃ ಸಿನಿಮಾಗಳನ್ನು ನೋಡುವುದಿಲ್ಲ. ಕೇವಲ ಪರಿಶೀಲನಾ ಸಮಿತಿ ನೀಡುವ ವರದಿಯನ್ನಷ್ಟೇ ನಂಬುತ್ತಾರೆ. ಆ ವರದಿಯ ಆಧಾರದ ಮೇಲೆ ಏಕಪಕ್ಷೀಯವಾಗಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಹೀಗಾಗಿಯೇ ಸತ್ಲುಜ್ ಸಿನಿಮಾವನ್ನು ಯಾವುದೇ ಸ್ಪಷ್ಟ ಕಾರಣ ನೀಡದೆ ಒಟಿಟಿಯಿಂದ ಏಕಾಏಕಿ ಹಿಂಪಡೆಯಲಾಗಿದೆ. ಈ ಬಗ್ಗೆ ನಿರ್ದೇಶಕ ಹನಿ ಟ್ರೆಹಾನ್‌ಗೂ ಯಾವುದೇ ಅಧಿಕೃತ ವಿವರಣೆ ಸಿಕ್ಕಿಲ್ಲ’ ಎಂದು ಕಿಡಿಕಾರಿದ್ದಾರೆ.

ಎರಡೇ ದಿನಕ್ಕೆ ಒಟಿಟಿಯಿಂದ ಮಾಯವಾದ ಸಿನಿಮಾ

ಹಿಂದೆ ‘ಪಂಜಾಬ್ 95’ ಎಂಬ ಹೆಸರಿದ್ದ ‘ಸತ್ಲುಜ್’ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗಬೇಕಿತ್ತು. ಬರೋಬ್ಬರಿ ಮೂರು ವರ್ಷಗಳ ಕಾಲ ಸೆನ್ಸಾರ್ ಮಂಡಳಿಯ ಜೊತೆ ಹೋರಾಟ ನಡೆಸಿದ ಚಿತ್ರತಂಡ, ಕೊನೆಗೂ ಜುಲೈ 3ರಂದು ಜೀ5 (Zee5) ಒಟಿಟಿಯಲ್ಲಿ ಸಿನಿಮಾವನ್ನು ಸದ್ದಿಲ್ಲದೆ ರಿಲೀಸ್ ಮಾಡಿತ್ತು. ಆದರೆ ಬಿಡುಗಡೆಯಾದ ಎರಡೇ ದಿನಕ್ಕೆ, ಅಂದರೆ ಜುಲೈ 5ರಂದು ಒಟಿಟಿ ಪ್ಲಾಟ್‌ಫಾರ್ಮ್‌ನಿಂದ ಈ ಚಿತ್ರವನ್ನು ಸಂಪೂರ್ಣವಾಗಿ ಡಿಲೀಟ್ ಮಾಡಲಾಯಿತು.

ಇದನ್ನೂ ಓದಿ: ಒಟಿಟಿ ಸಿನಿಮಾಗಳಿಗೂ ಸೆನ್ಸಾರ್ ಪ್ರಮಾಣಪತ್ರ ಕಡ್ಡಾಯ? ‘ಸತ್ಲುಜ್’ ವಿವಾದದ ಬೆನ್ನಲ್ಲೇ ಕೇಂದ್ರದ ಚಿಂತನೆ

ಈ ವಿವಾದದ ಬಗ್ಗೆ ಒಟಿಟಿ ಸಂಸ್ಥೆ ಜೀ5 ಅಧಿಕೃತ ಪ್ರಕಟಣೆ ಹೊರಡಿಸಿದ್ದು, ‘ಕೆಲವು ಬೆಳವಣಿಗೆಗಳ ಕಾರಣದಿಂದ ಸತ್ಲುಜ್ ಸಿನಿಮಾ ಸದ್ಯಕ್ಕೆ ಭಾರತದಲ್ಲಿ ಲಭ್ಯವಿರುವುದಿಲ್ಲ. ಕಾನೂನುಬದ್ಧ ಪ್ರಕ್ರಿಯೆಗಳ ಮೂಲಕ ಶೀಘ್ರದಲ್ಲೇ ಸಿನಿಮಾವನ್ನು ವೀಕ್ಷಕರಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ತಿಳಿಸಿದೆ. ಆದರೆ, ಚಿತ್ರದ ನಿರ್ದೇಶಕ ಹನಿ ಟ್ರೆಹಾನ್ ಈ ಬಗ್ಗೆ ಪ್ರತಿಕ್ರಿಯಿಸಿ, ‘ಸಿನಿಮಾವನ್ನು ಡಿಲೀಟ್ ಮಾಡುವ ಮುನ್ನ ನಮಗಾಗಲಿ ಅಥವಾ ಚಿತ್ರದ ನಿರ್ಮಾಪಕರಿಗಾಗಲಿ ಯಾವುದೇ ಫೋನ್ ಕರೆ ಬಂದಿರಲಿಲ್ಲ. ಆದರೆ ಜೀ5 ಸಂಸ್ಥೆಗೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಸಿನಿಮಾ ಪ್ರದರ್ಶನ ತಡೆಯುವಂತೆ ಪತ್ರ ಬಂದಿತ್ತು ಎಂಬ ಮಾಹಿತಿ ನಮಗೆ ಲಭ್ಯವಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಕ್ಕಳಲ್ಲಿ ಹೆಚ್ಚುತ್ತಿರುವ ಕೈ, ಕಾಲು, ಬಾಯಿ ಸೋಂಕಿನ ಲಕ್ಷಣಗಳು ಹೇಗಿರುತ್ತವೆ, ಇದನ್ನು ತಡೆಗಟ್ಟಲು ಏನು ಮಾಡಬೇಕು ತಿಳಿದುಕೊಳ್ಳಿ – Kannada News | How to Protect Children from Hand, Foot and Mouth Disease: Doctors Explain

ರಾಜ್ಯದಲ್ಲಿ ಹವಾಮಾನ ವೈಪರೀತ್ಯದ ಪರಿಣಾಮ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿದೆ. ಅದರಲ್ಲಿಯೂ ಮಕ್ಕಳಲ್ಲಿ ತೀವ್ರವಾಗಿ ಹರಡುತ್ತಿರುವ ಕೈ, ಕಾಲು ಮತ್ತು ಬಾಯಿ ರೋಗದ ಬಗ್ಗೆ (Hand, Foot and Mouth Disease) ಪಾಲಕರು ಸರಿಯಾಗಿ ತಿಳಿದುಕೊಂಡು ಮಕ್ಕಳ ಆರೋಗ್ಯ ಕಾಪಾಡುವುದು ಬಹಳ ಮುಖ್ಯವಾಗಿದೆ. ಇದು ಕಾಕ್ಸಾಕಿ ವೈರಸ್ (Coxsackie virus) ಅಥವಾ ಇತರ ಎಂಟರೋವೈರಸ್‌ಗಳಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದ್ದು, ಸಾಮಾನ್ಯವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ, ಆದರೆ ಕೆಲವೊಮ್ಮೆ ದೊಡ್ಡ ಮಕ್ಕಳಲ್ಲೂ ಹಾಗೂ ವಯಸ್ಕರಲ್ಲೂ ಕಾಣಿಸಬಹುದು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಬೆಂಗಳೂರು ಎಸ್.ಡಿ.ಎಂ. ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮತ್ತು ಆಸ್ಪತ್ರೆಯ ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರಾದ ಡಾ. ರೀನಾ ಕುಲಕರ್ಣಿ ಮತ್ತು ಸಹ ಪ್ರಾಧ್ಯಾಪಕರಾಗಿರುವ ಡಾ. ಶ್ರೀಲಕ್ಷ್ಮಿ ಅವರು ಟಿವಿ9 ಕನ್ನಡಕ್ಕೆ ನೀಡಿದ್ದು ಈ ರೋಗ ಹೇಗೆ ಹರಡುತ್ತದೆ, ಇದರ ಲಕ್ಷಣಗಳೇನು, ತಡೆಗಟ್ಟಲು ಏನು ಮಾಡಬೇಕು ಎಂಬುದರ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ.

ರೋಗ ಹೇಗೆ ಹರಡುತ್ತದೆ?

ಡಾ. ರೀನಾ ಕುಲಕರ್ಣಿ ಮತ್ತು ಡಾ. ಶ್ರೀಲಕ್ಷ್ಮಿ ಅವರು ಹೇಳುವ ಪ್ರಕಾರ, ಈ ರೋಗವು ಸೋಂಕಿತ ಮಗುವಿನ ಉಗುಳು, ಮೂಗಿನ ಸ್ರಾವ, ಕೆಮ್ಮು-ಸೀನುವ ಹನಿಗಳು, ಬಾಯಿಯ ಅಥವಾ ಚರ್ಮದ ಗುಳ್ಳೆಗಳಲ್ಲಿರುವ ದ್ರವ ಹಾಗೂ ಮಲದ ಸಂಪರ್ಕದಿಂದ ಮತ್ತೊಬ್ಬರಿಗೆ ಹರಡುತ್ತದೆ. ಮಕ್ಕಳ ಆಟಿಕೆಗಳು, ಪಾತ್ರೆಗಳು ಹಾಗೂ ಆಗಾಗ ಸ್ಪರ್ಶಿಸುವ ವಸ್ತುಗಳ ಮೂಲಕವೂ ಸೋಂಕು ಹರಡಬಹುದು. ಇದು ಸಾಮಾನ್ಯವಾಗಿ ಗಂಭೀರವಾದ ಕಾಯಿಲೆಯಲ್ಲದಿದ್ದರೂ ಅತ್ಯಂತ ಸಾಂಕ್ರಾಮಿಕವಾಗಿದ್ದು, ಶಾಲೆ, ಅಂಗನವಾಡಿಗಳು, ಡೇ-ಕೇರ್ ಕೇಂದ್ರಗಳು ಹಾಗೂ ಆಟದ ಮೈದಾನಗಳಂತಹ ಮಕ್ಕಳ ಗುಂಪು ಸೇರುವ ಸ್ಥಳಗಳಲ್ಲಿ ವೇಗವಾಗಿ ಹರಡುತ್ತದೆ.

ಕೈ-ಕಾಲು-ಬಾಯಿ ರೋಗದ ಲಕ್ಷಣಗಳು:

  • ಜ್ವರ (ಸಾಮಾನ್ಯವಾಗಿ ಆರಂಭಿಕ ಲಕ್ಷಣ)
  • ಗಂಟಲು ನೋವು
  • ಹಸಿವು ಕಡಿಮೆಯಾಗುವುದು
  • ಆಯಾಸ ಮತ್ತು ಅಸ್ವಸ್ಥತೆ
  • ಬಾಯಿಯ ಒಳಭಾಗ, ನಾಲಿಗೆ, ಒಸಡು ಮತ್ತು ಕೆನ್ನೆಯ ಒಳಭಾಗದಲ್ಲಿ ನೋವಿನ ಸಣ್ಣ ಗುಳ್ಳೆಗಳು ಅಥವಾ ಹುಣ್ಣುಗಳು
  • ಕೈಗಳ ಅಂಗೈ, ಕಾಲಿನ ಅಡಿಭಾಗ ಹಾಗೂ ಕೆಲವೊಮ್ಮೆ ಸೊಂಟ, ಮೊಣಕಾಲು ಅಥವಾ ಬೆನ್ನು ಭಾಗದಲ್ಲಿ ಕೆಂಪು ಗುಳ್ಳೆಗಳು ಅಥವಾ ನೀರಿನ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.
  • ಚಿಕ್ಕ ಮಕ್ಕಳಲ್ಲಿ ಕಿರಿಕಿರಿ, ಅಳುವುದು ಮತ್ತು ಬಾಯಿನ ನೋವಿನಿಂದ ಆಹಾರ ಅಥವಾ ನೀರು ಕುಡಿಯಲು ನಿರಾಕರಿಸುವುದು
    ಕೆಲವೊಮ್ಮೆ ವಾಂತಿ ಅಥವಾ ಭೇದಿ

ಇದನ್ನೂ ಓದಿ: ಪಾಲಕರೇ ಗಮನಿಸಿ: ಮಕ್ಕಳಲ್ಲಿ ಹೆಚ್ಚುತ್ತಿದೆ ‘ಕೈ, ಕಾಲು, ಬಾಯಿ’ ಸೋಂಕು!

ಈ ರೋಗಕ್ಕೆ ವಿಶೇಷ ವೈರಸ್ ವಿರೋಧಿ ಔಷಧಿ ಇಲ್ಲ. ಹೆಚ್ಚಿನ ಮಕ್ಕಳು 7 ರಿಂದ 10 ದಿನಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ. ಜ್ವರ ಮತ್ತು ನೋವನ್ನು ಕಡಿಮೆ ಮಾಡುವ ಔಷಧಿಗಳನ್ನು ವೈದ್ಯರ ಸಲಹೆಯಂತೆ ನೀಡಬೇಕು. ಸಾಕಷ್ಟು ದ್ರವ ಆಹಾರ, ನೀರು, ತಂಪಾದ ಮೃದುವಾದ ಆಹಾರವನ್ನು ನೀಡುವುದು ಮುಖ್ಯ. ಮಗು ಸಂಪೂರ್ಣ ಗುಣಮುಖವಾಗುವವರೆಗೆ ಖಾರ, ಹುಳಿ ಹಾಗೂ ಮಸಾಲೆಯುಕ್ತ ಆಹಾರವನ್ನು ನೀಡಬಾರದು.

ತಡೆಗಟ್ಟುವ ಕ್ರಮಗಳು

  • ಮಕ್ಕಳ ಕೈಗಳನ್ನು ಆಗಾಗ ಸಾಬೂನಿನಿಂದ ತೊಳೆಯಬೇಕು.
  • ಆಟಿಕೆಗಳು ಮತ್ತು ಪದೇ ಪದೇ ಮುಟ್ಟುವ ವಸ್ತುಗಳನ್ನು ಸ್ವಚ್ಛವಾಗಿಡಬೇಕು.
  • ಸೋಂಕಿತ ಮಗುವನ್ನು ಸಂಪೂರ್ಣ ಗುಣಮುಖವಾಗುವವರೆಗೆ ಇತರ ಮಕ್ಕಳಿಂದ ದೂರವಿಡಬೇಕು.
  • ಆಹಾರ ಸೇವಿಸುವ ಮೊದಲು ಮತ್ತು ಶೌಚಾಲಯದ ನಂತರ ಕೈ ತೊಳೆಯುವ ಅಭ್ಯಾಸ ಬೆಳೆಸಬೇಕು.
  • ವೈಯಕ್ತಿಕ ಬಟ್ಟೆ ಮತ್ತು ಟವೆಲ್‌ಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಬೇಕು.

ಗಮನಿಸಿ: ಹೆಚ್ಚಿನ ಮಕ್ಕಳಲ್ಲಿ ಈ ರೋಗವು 7–10 ದಿನಗಳಲ್ಲಿ ವೈದ್ಯರು ನೀಡುವ ಔಷಧಿಗಳ ಮೂಲಕ ತಾನಾಗಿಯೇ ಗುಣವಾಗುತ್ತದೆ. ಆದರೆ ತೀವ್ರ ಜ್ವರ, ಅತಿಯಾದ ನಿದ್ರೆ, ತೀವ್ರ ಆಯಾಸ, ಉಸಿರಾಟದ ತೊಂದರೆ ಕಂಡುಬಂದರೆ ತಡಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:48 pm, Thu, 16 July 26

Source link

Exit mobile version