ಬೆಂಗಳೂರಿನಲ್ಲಿ ಡಿಜಿಟಲ್ ಹೋರ್ಡಿಂಗ್ಸ್‌ಗಳ ಹಾವಳಿ: ಹೊಸ ಜಾಹೀರಾತು ನೀತಿ ಹೆಸರಲ್ಲಿ ಕೋಟ್ಯಂತರ ರೂ ತೆರಿಗೆ ವಂಚನೆ – Kannada News | Bengaluru’s Illegal Digital Hoardings: Tax Evasion and Road Safety Concerns

ಡಿಜಿಟಲ್ ಹೋರ್ಡಿಂಗ್ಸ್‌Image Credit source: tv9 kannada

ಬೆಂಗಳೂರು, ಜುಲೈ 15: ನಗರವನ್ನು ‘ಫ್ಲೆಕ್ಸ್ ಮುಕ್ತ’ ಮಾಡುವುದಾಗಿ ಹೊರಟಿರುವ ಬೆಂಗಳೂರು (bengaluru) ನಗರ ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡರಿಗೆ ಇದೀಗ ಅನಧಿಕೃತ ಡಿಜಿಟಲ್ ಹೋರ್ಡಿಂಗ್ಸ್ (illegal hoardings) ಹೊಸ ತಲೆನೋವಾಗಿ ಪರಿಣಮಿಸಿದೆ. ಸಿಲಿಕಾನ್ ಸಿಟಿಯಲ್ಲಿ ಹೊಸ ಜಾಹೀರಾತು ನೀತಿಯನ್ನು ಬಂಡವಾಳ ಮಾಡಿಕೊಂಡು ದೊಡ್ಡ ದಂಧೆಯೇ ಆರಂಭವಾಗಿದ್ದು, ನಿಯಮಗಳನ್ನು ಗಾಳಿಗೆ ತೂರಿ ರಸ್ತೆ ರಸ್ತೆಗಳಲ್ಲೂ ಅನಧಿಕೃತ ಡಿಜಿಟಲ್ ಸ್ಕ್ರೀನ್‌ಗಳು ತಲೆಎತ್ತುತ್ತಿವೆ. ತೆರಿಗೆ ಪಾವತಿಸಿ, ಲೈಸೆನ್ಸ್ ಪಡೆದು ಅಧಿಕೃತವಾಗಿ ಹೋರ್ಡಿಂಗ್ಸ್ ಅಳವಡಿಸಬೇಕು ಎಂಬ ನಿಯಮ ಕೇವಲ ಕಾಗದದ ಮೇಲಷ್ಟೇ ಉಳಿದಿದ್ದು, ಎಲ್ಲೆಂದರಲ್ಲಿ ಭಾರೀ ಗಾತ್ರದ ಡಿಜಿಟಲ್ ಬೋರ್ಡ್‌ಗಳು ರಾರಾಜಿಸುತ್ತಿವೆ.

ಜಿಬಿಎ ಬೊಕ್ಕಸಕ್ಕೆ ಕೋಟ್ಯಂತರ ರೂ ತೆರಿಗೆ ವಂಚನೆ

ನಗರದ ಪ್ರಮುಖ ರಸ್ತೆಗಳು, ಜಂಕ್ಷನ್‌ಗಳು ಹಾಗೂ ಫ್ಲೈ ಓವರ್‌ಗಳ ಪಕ್ಕದಲ್ಲಿ ತಲೆಎತ್ತಿರುವ ಈ ಡಿಜಿಟಲ್ ಹೋರ್ಡಿಂಗ್ಸ್‌ಗಳಲ್ಲಿ ಬಹುತೇಕ ಬೋರ್ಡ್‌ಗಳಿಗೆ ಯಾವುದೇ ಅಧಿಕೃತ ಅನುಮತಿ ಇಲ್ಲ. ಈ ಅಕ್ರಮ ದಂಧೆಯಿಂದಾಗಿ ಜಿಬಿಎ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆಯಾಗುತ್ತಿದೆ. ಇಷ್ಟೇ ಅಲ್ಲದೆ, ನಿಯಮಗಳ ಪ್ರಕಾರ ಹೆದ್ದಾರಿ ಹಾಗೂ ಪ್ರಮುಖ ಜಂಕ್ಷನ್‌ಗಳಲ್ಲಿ ವಾಹನ ಸವಾರರ ಗಮನ ಕದಡುವಂತಹ ಸ್ಕ್ರೀನ್‌ಗಳನ್ನು ಹಾಕುವಂತಿಲ್ಲ. ಆದರೆ, ರಾತ್ರಿ ವೇಳೆ ಕಣ್ಣು ಕೋರೈಸುವ ಈ ಸ್ಕ್ರೀನ್‌ಗಳಿಂದಾಗಿ ವಾಹನ ಸವಾರರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗುವ ಭೀತಿ ಎದುರಾಗಿದ್ದು, ಸಾರ್ವಜನಿಕರ ಪ್ರಾಣದ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಟ್ರಾಫಿಕ್​​ ಸಮಸ್ಯೆ ನಿವಾರಣೆಗೆ ಕ್ರಮ: ಸಿಗ್ನಲ್​​ ಸಮೀಪವಿರುವ ಬಸ್​​ ನಿಲ್ದಾಣಗಳ ತೆರವಿಗೆ ಸಚಿವ ಕೃಷ್ಣ ಭೈರೇಗೌಡ ಸೂಚನೆ

ಮತ್ತೊಂದೆಡೆ, ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿರುವ ಹಾಗೂ ಪಾಲಿಕೆಗೆ ನಷ್ಟ ಉಂಟುಮಾಡುತ್ತಿರುವ ಈ ಅನಧಿಕೃತ ಹೋರ್ಡಿಂಗ್ಸ್‌ಗಳಿಗೆ ಬ್ರೇಕ್ ಹಾಕಲು ಜಿಬಿಎ ಅಧಿಕಾರಿಗಳು ಕಣಕ್ಕಿಳಿಯಲಿದ್ದಾರೆ. ಹೊಸ ನಿಯಮಾವಳಿಗಳ ಪ್ರಕಾರ ಅಧಿಕೃತ ಪರವಾನಗಿ ಪಡೆದು, ನಿಯಮಿತ ತೆರಿಗೆ ಪಾವತಿಸಿ ಮಾತ್ರ ಡಿಜಿಟಲ್ ಸ್ಕ್ರೀನ್ ಅಳವಡಿಸಬೇಕಾಗುತ್ತದೆ.

ಅಕ್ರಮ ಬೋರ್ಡ್‌ಗಳನ್ನು ಕಿತ್ತೆಸೆಯಲು ಮುಂದಾದ ಜಿಬಿಎ 

ಇದನ್ನು ಮೀರಿ ರಾತ್ರೋರಾತ್ರಿ ತಲೆಎತ್ತುವ ಅಕ್ರಮ ಬೋರ್ಡ್‌ಗಳನ್ನು ಕಿತ್ತೆಸೆಯಲು ಪಾಲಿಕೆ ಸಜ್ಜಾಗುತ್ತಿದೆ. ಆದರೆ, ಅನಧಿಕೃತ ಹೋರ್ಡಿಂಗ್ಸ್‌ಗಳ ವಿರುದ್ಧ ಜಿಬಿಎ ಯುದ್ಧ ಸಾರುತ್ತಾ ಅಥವಾ ಹೊಸ ಅಡ್ವರ್ಟೈಸ್‌ಮೆಂಟ್ ಪಾಲಿಸಿಯ ಹೆಸರಲ್ಲಿ ಈ ದಂಧೆಗೆ ಮತ್ತಷ್ಟು ರಹದಾರಿ ಮಾಡಿಕೊಡುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಜಯನಗರದಲ್ಲಿ ಪೊಲೀಸರಿಂದಲೇ ನಿಯಮ ಉಲ್ಲಂಘನೆ: ಸೀಜ್ ವಾಹನಗಳಿಂದ ಅರ್ಧ ರಸ್ತೆ ಬ್ಲಾಕ್!

ರಸ್ತೆ ನಿಯಮ ಪಾಲಿಸುವಂತೆ ಸಾರ್ವಜನಿಕರಿಗೆ ಪಾಠ ಹೇಳುವ ಪೊಲೀಸರೇ ಜಯನಗರದಲ್ಲಿ ನಿಯಮ ಉಲ್ಲಂಘಿಸುತ್ತಿದ್ದಾರೆ. ಜಯನಗರದ ಪ್ರಮುಖ ರಸ್ತೆಯೊಂದರಲ್ಲಿ ಪೊಲೀಸರು ಸೀಜ್ ಮಾಡಿರುವ ನೂರಾರು ವಾಹನಗಳು ವರ್ಷಗಳಿಂದ ಧೂಳು ಹಿಡಿದು ರಸ್ತೆ ಬದಿಯಲ್ಲೇ ನಿಂತಿವೆ. ಇವುಗಳಿಂದಾಗಿ ಅರ್ಧ ರಸ್ತೆಯೇ ಆಕ್ರಮಣಗೊಂಡಿದ್ದು, ನಿತ್ಯ ವಾಹನ ಸಂಚಾರಕ್ಕೆ ತೀವ್ರ ಕಿರಿಕಿರಿ ಉಂಟಾಗಿದೆ.

ಇದನ್ನೂ ಓದಿ: ರಸ್ತೆ ಬದಿಯಲ್ಲಿ ಬಿಡಾಡಿ ವಾಹನಗಳ ತೆರವು ಮಧ್ಯೆ ಪೊಲೀಸರಿಂದಲೇ ನಿಯಮ ಉಲ್ಲಂಘನೆ

ಒಂದು ಕಡೆ ರಸ್ತೆ ಬದಿಯಲ್ಲಿ ದೀರ್ಘಕಾಲ ನಿಲ್ಲಿಸುವ ಸಾಮಾನ್ಯರ ವಾಹನಗಳಿಗೆ ಪೊಲೀಸರು ಸ್ಟಿಕ್ಕರ್ ಅಂಟಿಸಿ ತೆರವುಗೊಳಿಸುತ್ತಿದ್ದಾರೆ. ಆದರೆ, ಇಲಾಖೆಯ ವಶದಲ್ಲಿರುವ ಸೀಜ್ ವಾಹನಗಳ ತೆರವಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. “ಸಾಮಾನ್ಯರಿಗೊಂದು ನ್ಯಾಯ, ಸರ್ಕಾರಿ ಇಲಾಖೆಗೊಂದು ನ್ಯಾಯವೇ?” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಪಾಲಿಗೆ ರಾಧಾ ಪಾತ್ರ ಒಲಿದು ಬಂದಿದ್ದು ಹೇಗೆ? – Kannada News | Bigg Boss Kannada fame Mokshitha Pai on playing Radha Character in Rukmini Radha Krishna movie

‘ಪಾರು’ ಸೀರಿಯಲ್ ಮತ್ತು ‘ಬಿಗ್ ಬಾಸ್’ ರಿಯಾಲಿಟಿ ಶೋ ಖ್ಯಾತಿಯ ನಟಿ ಮೋಕ್ಷಿತಾ ಪೈ (Mokshitha Pai) ಅವರು ‘ರುಕ್ಮಿಣಿ ರಾಧಾಕೃಷ್ಣ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಅವರು ರಾಧಾ ಎಂಬ ಪಾತ್ರ ಮಾಡಿದ್ದಾರೆ. ಆ ಕುರಿತು ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ಈ ರೀತಿಯ ಪಾತ್ರಗಳು ನನ್ನನ್ನು ಅರಸಿ ಬರುತ್ತಿವೆ. ಜನರು ನನ್ನನ್ನು ಅದೇ ರೀತಿ ನೋಡಲು ಇಷ್ಟಪಡುತ್ತಿದ್ದಾರೆ ಎನಿಸುತ್ತದೆ. ರುಕ್ಮಿಣಿ ಮತ್ತು ರಾಧಾ ಪಾತ್ರಗಳಲ್ಲಿ ನನಗೆ ಯಾವುದು ಇಷ್ಟವೋ ಅದನ್ನೇ ಆಯ್ಕೆ ಮಾಡಿಕೊಳ್ಳಲು ನಿರ್ದೇಶಕರು ಅವಕಾಶ ನೀಡಿದರು. ನಾನು ರಾಧಾ ಪಾತ್ರವನ್ನು ಆಯ್ಕೆ ಮಾಡಿಕೊಂಡೆ. ವೈಯಕ್ತಿಕವಾಗಿ ನನಗೆ ಆ ಪಾತ್ರ ಕನೆಕ್ಟ್ ಆಗುತ್ತದೆ. ರಾಧೆಯ ಪ್ರೀತಿ ನಿಷ್ಕಲ್ಮಶವಾದದ್ದು. ಆ ರೀತಿಯ ಪ್ರೀತಿ ನಮಗೆ ಅಮ್ಮಂದಿರ ಮೇಲೆ ಬರುತ್ತದೆ’ ಎಂದು ಮೋಕ್ಷಿತಾ ಪೈ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟೊಮೆಟೊ, ದಾಳಿಂಬೆ ಬೆನ್ನಲ್ಲೇ ದ್ರಾಕ್ಷಿ ಮೇಲೆ ಕಳ್ಳರ ಕಣ್ಣು: ರಾತ್ರೋರಾತ್ರಿ ಕೈಚಳಕ ತೋರಿಸಿದ ಖದೀಮರು! – Kannada News | Grape Theft: Red Globe Grapes Stolen Amid Price Surge

ಚಿಕ್ಕಬಳ್ಳಾಪುರ, ಜುಲೈ 15: ಚಿನ್ನ, ಬೆಳ್ಳಿ, ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳ ಕಳ್ಳತನ ಸಾಮಾನ್ಯ. ಆದರೆ ಇದೀಗ ಕಳ್ಳರ ಕಣ್ಣು ರೈತರ ತೋಟಗಳ ಮೇಲೆ ಬಿದ್ದಿದೆ. ಟೊಮೆಟೊ, ದಾಳಿಂಬೆ ಬಳಿಕ ದ್ರಾಕ್ಷಿ (grape theft) ತೋಟಕ್ಕೆ ನುಗ್ಗಿರುವ ಕಳ್ಳರು ರಾತ್ರೋರಾತ್ರಿ ಲಕ್ಷಾಂತರ ರೂ ಮೌಲ್ಯದ ದ್ರಾಕ್ಷಿಯನ್ನು ಕದ್ದೊಯ್ದಿರುವಂತಹ ಘಟನೆ ಚಿಕ್ಕಬಳ್ಳಾಪುರ (chikkaballapur) ತಾಲೂಕಿನ ಕೊಳವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸದ್ಯ ಇದರಿಂದ ಆತಂಕಗೊಂಡಿರುವ ರೈತರು, ಕಳ್ಳರ ಪತ್ತೆಗೆ ಪೊಲೀಸರ ಮೊರೆ ಹೋಗಿದ್ದಾರೆ.

ನಡೆದಿದ್ದೇನು?

ಚಿಕ್ಕಬಳ್ಳಾಪುರ ತಾಲೂಕಿನ ಕೊಳವನಹಳ್ಳಿ ಗ್ರಾಮದ ಬಸವರಾಜ್ ಎಂಬುವವರಿಗೆ ಸೇರಿದ ತೋಟದಲ್ಲಿ ನಿನ್ನೆ ಕಳ್ಳತನ ನಡೆದಿದೆ. ಬಸವರಾಜ್ ಅವರು ತಮ್ಮ ತೋಟದಲ್ಲಿ ರೆಡ್ ಗ್ಲೋಬ್ ತಳಿಯ ದ್ರಾಕ್ಷಿಯನ್ನು ಬೆಳೆದಿದ್ದರು. ಪ್ರಸ್ತುತ ಮಾರುಕಟ್ಟೆಯಲ್ಲಿ 1 ಕೆಜಿ ರೆಡ್ ಗ್ಲೋಬ್ ದ್ರಾಕ್ಷಿಗೆ ಬರೋಬ್ಬರಿ 150 ರೂ ಬಂಪರ್ ಬೆಲೆ ಹಾಗೂ ಭಾರೀ ಬೇಡಿಕೆ ಇದೆ. ದ್ರಾಕ್ಷಿಯ ಒಂದೊಂದು ಗೊಂಚಲು ಒಂದೂವರೆಯಿಂದ ಎರಡೂವರೆ ಕೆಜಿಯಷ್ಟು ತೂಕ ಬರುವಂತೆ ನಳನಳಿಸುತ್ತಿದ್ದವು. ಈ ದ್ರಾಕ್ಷಿಯನ್ನು ಖರೀದಿಸಲು ವರ್ತಕರು ರೈತರು ಕೇಳಿದಷ್ಟು ಬೆಲೆ ನೀಡಿ ತೋಟದಲ್ಲೇ ಕಟಾವು ಮಾಡಿಕೊಂಡು ಹೋಗುತ್ತಿದ್ದರು. ಆದರೆ, ನಿನ್ನೆ ರಾತ್ರಿ ಬಸವರಾಜ್ ಅವರ ತೋಟಕ್ಕೆ ನುಗ್ಗಿದ ಕಳ್ಳರು ರಾತ್ರೋರಾತ್ರಿ ಸುಮಾರು ಮೂರು ಟನ್ ದ್ರಾಕ್ಷಿಯನ್ನು ಕಟಾವು ಮಾಡಿಕೊಂಡು ಪರಾರಿಯಾಗಿದ್ದಾರೆ.

ಕಳ್ಳರ ವಿರುದ್ಧ ಕಠಿಣ ಕ್ರಮಕೈ ಒತ್ತಾಯ

ಈ ಬಾರಿ ದ್ರಾಕ್ಷಿಗೆ ಎಲ್ಲಿಲ್ಲದ ಬೆಲೆ ಬಂದಿದೆ. ಈ ಹಿಂದೆ ಟೊಮೆಟೊ ಹಾಗೂ ದಾಳಿಂಬೆ ಬೆಲೆ ಏರಿಕೆಯಾದ ಸಂದರ್ಭದಲ್ಲೂ ಕಳ್ಳರು ತೋಟಗಳಿಗೆ ನುಗ್ಗಿ ತಮ್ಮ ಕೈಚಳಕ ತೋರಿಸಿದ್ದರು. ಆದರೆ ದ್ರಾಕ್ಷಿ ತೋಟದ ಮೇಲೆ ದಾಳಿ ನಡೆದಿರುವುದು ಇದೇ ಮೊದಲ ಬಾರಿ ಎನ್ನಲಾಗುತ್ತಿದೆ. ಇದರಿಂದ ರೈತರು ತೀವ್ರ ಆತಂಕಕ್ಕೀಡಾಗಿದ್ದು, ತೋಟಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮತ್ತು ಕಳ್ಳರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಸುಮಾರು 3 ಲಕ್ಷ ರೂ ಮೌಲ್ಯದ ದ್ರಾಕ್ಷಿ ಕಳುವು

ಕಳುವಾದ ದ್ರಾಕ್ಷಿಯ ಒಟ್ಟು ಮೌಲ್ಯ ಸುಮಾರು 3 ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ನಂದಿಗಿರಿಧಾಮ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ತೋಟದ ಹಿಂಭಾಗದಲ್ಲಿರುವ ಕೆರೆಯ ಬಳಿ, ವಾಹನ ನಿಲ್ಲಿಸಿ ಅಲ್ಲಿಂದಲೇ ದ್ರಾಕ್ಷಿಯನ್ನು ಸಾಗಿಸಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಬರದ ಛಾಯೆ: ಕುರಿಗಳಿಗೆ ಮೇವು, ನೀರು ಸಿಗದೇ ಕುರಿಗಾಹಿಗಳು ಕಂಗಾಲು

ಒಂದೇ ರಾತ್ರಿಯಲ್ಲಿ ಲಕ್ಷಾಂತರ ರೂ ಮೌಲ್ಯದ ದ್ರಾಕ್ಷಿ ಬೆಳೆ ಕಳುವಾಗಿರುವುದು ಜಿಲ್ಲೆಯ ರೈತರನ್ನು ಬೆಚ್ಚಿಬೀಳಿಸಿದೆ. ತೋಟಗಾರಿಕಾ ಬೆಳೆಗಳ ಮೇಲೆ ನಿರಂತರವಾಗಿ ಕಳ್ಳರ ಕಣ್ಣು ಬೀಳುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದ್ದು, ಪೊಲೀಸರು ಶೀಘ್ರವಾಗಿ ಕಳ್ಳರನ್ನು ಬಂಧಿಸಿ ತಮಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಸ್ಥಳೀಯ ರೈತರಾದ ಮಂಜುನಾಥ್ ಸೇರಿದಂತೆ ಹಲವರು ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಎಲ್ಲ ಸರ್ಕಾರಿ ಕಚೇರಿ, ಶಾಲೆ, ಕಾಲೇಜುಗಳಲ್ಲಿ ಅಜಿತ್ ಪವಾರ್ ಜನ್ಮ ದಿನಾಚರಣೆ ಆಚರಣೆ; ಮಹಾರಾಷ್ಟ್ರ ಸರ್ಕಾರ ಘೋಷಣೆ – Kannada News | Maharashtra government orders celebration of NCP Leader Ajit Pawars birthday in all government offices, schools and colleges

ಮುಂಬೈ, ಜುಲೈ 15: ಮಹಾರಾಷ್ಟ್ರ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ದಿವಂಗತ ನಾಯಕ ಅಜಿತ್ ಪವಾರ್ (Ajit Pawar) ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಗುವುದು. ರಾಜ್ಯ ಸರ್ಕಾರ ತೆಗೆದುಕೊಂಡ ಮಹತ್ವದ ನಿರ್ಧಾರದ ಪ್ರಕಾರ, ಮಾಜಿ ಉಪಮುಖ್ಯಮಂತ್ರಿ ದಿವಂಗತ ಅಜಿತ್ ಪವಾರ್ ಅವರ ಜನ್ಮ ದಿನಾಚರಣೆಯನ್ನು ಈಗ ಸರ್ಕಾರಿ ಮಟ್ಟದಲ್ಲಿ ರಾಷ್ಟ್ರೀಯ ನಾಯಕರು ಮತ್ತು ಮಹಾನ್ ವ್ಯಕ್ತಿಗಳ ಅಧಿಕೃತ ಜನ್ಮ ದಿನಾಚರಣೆ ಕಾರ್ಯಕ್ರಮಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಕುರಿತು ಸರ್ಕಾರದಿಂದ ಇಂದು ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ.

ಹಿರಿಯ ಎನ್‌ಸಿಪಿ ನಾಯಕರಾದ ಹಸನ್ ಮುಶ್ರಿಫ್ ಮತ್ತು ಛಗನ್ ಭುಜಬಲ್ ಅವರು ಮುಖ್ಯಮಂತ್ರಿಯವರಿಗೆ ಈ ಕುರಿತು ಬೇಡಿಕೆಯನ್ನು ಇಟ್ಟಿದ್ದರು. ಅವರ ಬೇಡಿಕೆಗೆ ಒಪ್ಪಿರುವ ಸರ್ಕಾರ 6 ತಿಂಗಳ ಹಿಂದೆ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮಹಾರಾಷ್ಟ್ರದ ಅಭಿವೃದ್ಧಿಗೆ ನೀಡಿದ ಅಭೂತಪೂರ್ವ ಕೊಡುಗೆಗೆ ಗೌರವವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಜಿತ್‌ ಪವಾರ್ ಅವರ ಮೊದಲ ಜನ್ಮ ದಿನಾಚರಣೆಯನ್ನು ಜುಲೈ 22ರಂದು ರಾಜ್ಯಾದ್ಯಂತ ಸರ್ಕಾರಿ ಮಟ್ಟದಲ್ಲಿ ಆಚರಿಸಲಾಗುವುದು.

ಇದನ್ನೂ ಓದಿ: ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದ್ದು ಹೇಗೆ? ತನಿಖೆಯಲ್ಲಿ ಬಯಲಾದ ಸಂಗತಿಗಳಿವು

ಸುತ್ತೋಲೆಯಲ್ಲಿರುವ ಪ್ರಮುಖ ಅಂಶಗಳು:

ಜುಲೈ 22ರಂದು ಸಚಿವಾಲಯ ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು, ಜಿಲ್ಲಾಧಿಕಾರಿ ಕಚೇರಿಗಳು ಮತ್ತು ಸ್ಥಳೀಯ ಸಂಸ್ಥೆಗಳು ದಾದಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಿವೆ. ರಾಜ್ಯದ ಎಲ್ಲಾ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳು ಮತ್ತು ಕಾಲೇಜುಗಳಿಗೂ ಈ ಆದೇಶವನ್ನು ಕಡ್ಡಾಯಗೊಳಿಸಲಾಗಿದೆ. ಅಜಿತ್ ಪವಾರ್ ಅವರ ಜೀವನ ಪ್ರಯಾಣವನ್ನು ಆಧರಿಸಿದ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ಸಹ ಅಲ್ಲಿ ಆಯೋಜಿಸಲಾಗುವುದು.

ಅಜಿತ್‌ ಪವಾರ್ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ರಾಜ್ಯದ ಉಪಮುಖ್ಯಮಂತ್ರಿ, ಹಣಕಾಸು ಸಚಿವ ಮತ್ತು ಜಲಸಂಪನ್ಮೂಲ ಸಚಿವರಂತಹ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. ಅವರ ಕೆಲಸದ ಶಿಸ್ತು, ಆಡಳಿತದ ಮೇಲಿನ ಬಿಗಿ ಹಿಡಿತ, ಬೆಳಿಗ್ಗೆ ಬೇಗನೆ ಕೆಲಸ ಪ್ರಾರಂಭಿಸುವ ವಿಶಿಷ್ಟ ವಿಧಾನ ಮತ್ತು ‘ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಾಯಕ’ ಎಂಬ ಅವರ ಖ್ಯಾತಿ ಮಹಾರಾಷ್ಟ್ರದಾದ್ಯಂತ ಪ್ರಸಿದ್ಧವಾಗಿದೆ.

ಇದನ್ನೂ ಓದಿ: ಅಜಿತ್ ಪವಾರ್ ವಿಮಾನ ಅಪಘಾತಕ್ಕೀಡಾದ ಬಾರಾಮತಿಯ ಗ್ರಾಮದಲ್ಲೇ ಮತ್ತೊಂದು ವಿಮಾನ ಪತನ

ದಾದಾ ದುರಂತ ಅಂತ್ಯ:

ಜನವರಿ 28ರಂದು ನಡೆದ ವಿಮಾನ ಅಪಘಾತದ ನಂತರ ಅಜಿತ್ ಪವಾರ್ ದುರಂತವಾಗಿ ಮೃತಪಟ್ಟಿದ್ದರು. ಅವರ ಮರಣದ ನಂತರ, ಇಡೀ ಮಹಾರಾಷ್ಟ್ರ ಆಘಾತಕ್ಕೊಳಗಾಯಿತು. ಈಗ, ಅವರ ಮೊದಲ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ಈ ನಿರ್ಧಾರವು ದಾದಾ ಅವರ ಸಾರ್ವಜನಿಕ ಸೇವೆಯ ಪರಂಪರೆ ಮತ್ತು ‘ನವ ಮಹಾರಾಷ್ಟ್ರ’ವನ್ನು ರಚಿಸುವ ಅವರ ಧ್ಯೇಯಕ್ಕೆ ಸರ್ಕಾರಿ ಮಟ್ಟದಲ್ಲಿ ಸಲ್ಲಿಸುವ ಅತಿದೊಡ್ಡ ಗೌರವವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಮಿರ್ ಖಾನ್‌ಗೆ ಕೊಲೆ ಬೆದರಿಕೆ; ಕೊಂದವರಿಗೆ 5 ಕೋಟಿ ರೂ. ಬಹುಮಾನ ಘೋಷಿಸಿದ ಅಯೋಧ್ಯೆ ಧಾರ್ಮಿಕ ಮುಖಂಡ – Kannada News | Aamir Khan faces Death Threat Rs 5 Cr Bounty from Ayodhya Priest over 3rd Marriage Love Jihad

ಬಾಲಿವುಡ್‌ನ ಖ್ಯಾತ ನಟ ಆಮಿರ್ ಖಾನ್ (Aamir Khan) ಜುಲೈ 5ರಂದು ಗೌರಿ ಸ್ಪ್ರ್ಯಾಟ್ (Gauri Spratt) ಅವರೊಂದಿಗೆ ಮೂರನೇ ವಿವಾಹವಾದ ಬೆನ್ನಲ್ಲೇ ಅವರ ಸುತ್ತಲಿನ ವಿವಾದಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ಆರಂಭದಲ್ಲಿ ಬಜರಂಗದಳದ ಪ್ರತಿಭಟನೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದ್ದ ತೀವ್ರ ಆಕ್ರೋಶಗಳು ಈಗ ಕೊಲೆ ಬೆದರಿಕೆಯ ಹಂತಕ್ಕೆ ಬಂದು ತಲುಪಿವೆ. ಅಯೋಧ್ಯೆಯ ತಪಸ್ವಿ ಛಾವಣಿಯ ಪೀಠಾಧೀಶರಾದ ಜಗದ್ಗುರು ಪರಮಹಂಸ ಆಚಾರ್ಯ (Jagadguru Paramhans Acharya) ಅವರು ಆಮಿರ್ ಖಾನ್ ಅವರನ್ನು ಕೊಲ್ಲುವವರಿಗೆ ಬರೋಬ್ಬರಿ 5 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

‘ಲವ್ ಜಿಹಾದ್‌ನ ಬ್ರ್ಯಾಂಡ್ ಅಂಬಾಸಿಡರ್’

ಮಹಾರಾಷ್ಟ್ರದ ಬಿಜೆಪಿ ಸಚಿವ ನಿತೇಶ್ ರಾಣೆ ಅವರು ಇತ್ತೀಚೆಗೆ ಆಮಿರ್ ಖಾನ್ ಅವರನ್ನು ‘ಲವ್ ಜಿಹಾದ್‌ನ ಬ್ರ್ಯಾಂಡ್ ಅಂಬಾಸಿಡರ್’ ಎಂದು ಕರೆದಿದ್ದರು. ಸಚಿವರ ಈ ಹೇಳಿಕೆಯನ್ನು ಬೆಂಬಲಿಸಿ ಮಾತನಾಡಿರುವ ಅಯೋಧ್ಯೆಯ ಧಾರ್ಮಿಕ ಮುಖಂಡ ಜಗದ್ಗುರು ಪರಮಹಂಸ ಆಚಾರ್ಯ ಅವರು ಆಮಿರ್ ಖಾನ್ ವಿರುದ್ಧ ಕಿಡಿಕಾರಿದ್ದಾರೆ. ಆಮಿರ್ ಖಾನ್ ಅವರನ್ನು ಹತ್ಯೆ ಮಾಡುವಂತೆ ಬಹಿರಂಗ ಕರೆ ನೀಡಿದ್ದಾರೆ.

ಧಾರ್ಮಿಕ ಮುಖಂಡನ ವಿವಾದಾತ್ಮಕ ಹೇಳಿಕೆ:

‘ಆಮಿರ್ ಖಾನ್ ಮೂರು ಬಾರಿ ಮದುವೆಯಾಗಿದ್ದು, ಅವರ ಮೂರೂ ಪತ್ನಿಯರು ಹಿಂದೂ ಮಹಿಳೆಯರಾಗಿದ್ದಾರೆ. ಹೀಗಾಗಿ ನಿತೇಶ್ ರಾಣೆ ಅವರ ಹೇಳಿಕೆ ಕೇವಲ ಆರೋಪವಲ್ಲ, ಅದು ವಾಸ್ತವ. ಇಂತಹ ವ್ಯಕ್ತಿಗಳು ಸಮಾಜದಲ್ಲಿ ವೈಷಮ್ಯ ಮೂಡಿಸುತ್ತಿದ್ದಾರೆ. ಭಗವಾನ್ ರಾಮ ಹುಟ್ಟಿದ ಪವಿತ್ರ ಅಯೋಧ್ಯೆ ಧಾಮದಿಂದ ನಾನು ಘೋಷಿಸುತ್ತಿದ್ದೇನೆ. ಯಾರು ಆಮಿರ್ ಖಾನ್‌ನನ್ನು ಕೊಲ್ಲುತ್ತಾರೋ ಅವರಿಗೆ 5 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಮತ್ತು ಅವರ ಮೇಲಾಗುವ ಎಲ್ಲಾ ಕಾನೂನು ಹೋರಾಟದ ವೆಚ್ಚವನ್ನು ನಾನೇ ಭರಿಸುತ್ತೇನೆ’ ಎಂದು ಪರಮಹಂಸ ಆಚಾರ್ಯ ಅವರು ಹೇಳಿದ್ದಾರೆ.

ಸತ್ಯ ಬಿಚ್ಚಿಟ್ಟಿದ್ದ ಆಮಿರ್ ಖಾನ್:

ತಮ್ಮ ಮದುವೆಯ ಸುತ್ತ ಎದ್ದಿರುವ ‘ಲವ್ ಜಿಹಾದ್’ ಆರೋಪಗಳಿಗೆ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ ಆಮಿರ್ ಖಾನ್, ‘ನನ್ನ ಯಾವುದೇ ಪತ್ನಿಯರು ಧರ್ಮ ಬದಲಾಯಿಸಿಲ್ಲ. ನಾವೆಲ್ಲರೂ ಸಿವಿಲ್ ಕಾನೂನಿನ ಅಡಿಯಲ್ಲಿ ಮದುವೆಯಾಗಿದ್ದೇವೆ. ಮೊದಲ ಪತ್ನಿ ರೀನಾ ಮತ್ತು ಎರಡನೇ ಪತ್ನಿ ಕಿರಣ್ ಅವರು ಮತಾಂತರ ಆಗಿಲ್ಲ. ಇತ್ತೀಚೆಗೆ ನಾನು ಮದುವೆಯಾದ ಗೌರಿ ಸ್ಪ್ರ್ಯಾಟ್ ಕೂಡ ಹಿಂದೂ ಅಲ್ಲ. ಅವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು’ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಸರಳವಾಗಿ ನಡೆದ ಆಮಿರ್ ಖಾನ್ ಮೂರನೇ ಮದುವೆ, ಅತಿಥಿಗಳು ಯಾರ್ಯಾರು?

ಆಮಿರ್ ಖಾನ್ ಅವರು ಈ ಮೊದಲು ರೀನಾ ದತ್ತಾ (1986-2002) ಮತ್ತು ಕಿರಣ್ ರಾವ್ (2005-2021) ಅವರೊಂದಿಗೆ ವಿವಾಹವಾಗಿದ್ದು, ಬಳಿಕ ವಿಚ್ಛೇದನ ಪಡೆದಿದ್ದರು. ಇದೀಗ ಜುಲೈ 5ರಂದು ಬೆಂಗಳೂರು ಮೂಲದ ಬ್ಯೂಟಿ ಮತ್ತು ವೆಲ್ನೆಸ್ ಉದ್ಯಮಿ ಗೌರಿ ಸ್ಪ್ರ್ಯಾಟ್ ಅವರನ್ನು ವಿವಾಹವಾಗಿದ್ದಾರೆ. ಈ ಮದುವೆಯ ಬಳಿಕ ಲವ್ ಜಿಹಾದ್ ಆರೋಪ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:04 pm, Wed, 15 July 26

Source link

ರಾತ್ರಿ ಊಟದ ನಂತರ ಈ ತಪ್ಪುಗಳನ್ನು ಮಾಡಬೇಡಿ; ಜೀರ್ಣಕ್ರಿಯೆ ಹಾಳಾಗಬಹುದು – Kannada News | Never Make These Mistakes Right After Eating: Protect Your Digestion

ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯಕರ ಆಹಾರ ಸೇವಿಸುವುದು ಎಷ್ಟು ಮುಖ್ಯವೋ, ಆಹಾರ ಸೇವಿಸಿದ ನಂತರ ಪಾಲಿಸುವ ಅಭ್ಯಾಸಗಳೂ ಅಷ್ಟೇ ಮುಖ್ಯ. ಹಲವರು ರಾತ್ರಿ ಊಟ ಮಾಡಿದ ತಕ್ಷಣವೇ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಅಜೀರ್ಣ, ಹೊಟ್ಟೆ ಉಬ್ಬರ, ಆಸಿಡ್ ರಿಫ್ಲಕ್ಸ್, ಗ್ಯಾಸ್ಟ್ರಿಕ್ ಹಾಗೂ ನಿದ್ರೆ ಸರಿಯಾಗಿ ಬರದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅದರಲ್ಲಿಯೂ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಊಟದ ನಂತರದ ಮೊದಲ 2– 3 ಗಂಟೆಗಳು ಜೀರ್ಣಕ್ರಿಯೆಗೆ ಅತ್ಯಂತ ಪ್ರಮುಖ ಸಮಯವಾಗಿದ್ದು ಈ ಸಮಯದಲ್ಲಿ ಕೆಲವು ಆರೋಗ್ಯ ಹಾಳು ಮಾಡುವ ಅಭ್ಯಾಸಗಳನ್ನು ರೂಢಿಸಿಕೊಳ್ಳಬಾರದು.

ಊಟ ಮಾಡಿದ ತಕ್ಷಣ ಈ ತಪ್ಪುಗಳನ್ನು ಮಾಡಬೇಡಿ

ತಕ್ಷಣ ಮಲಗಬೇಡಿ: ರಾತ್ರಿ ಊಟ ಮಾಡಿದ ಕೂಡಲೇ ಮಲಗುವುದರಿಂದ ಹೊಟ್ಟೆಯಲ್ಲಿರುವ ಆಮ್ಲವು ಆಹಾರ ನಾಳದ ಕಡೆಗೆ ಮರಳುವ (Acid Reflux) ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ಎದೆ ಉರಿ, ಗಂಟಲಲ್ಲಿ ಉರಿ ಮತ್ತು ಅಜೀರ್ಣದ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಮಲಗುವ ಮೊದಲು ಕನಿಷ್ಠ 2– 3 ಗಂಟೆಗಳ ಅಂತರ ಇರಲಿ.

ವ್ಯಾಯಾಮ ಬೇಡ: ಊಟದ ನಂತರ ತಕ್ಷಣ ಜಿಮ್, ಓಟ ಅಥವಾ ಹೆಚ್ಚು ಶ್ರಮದ ವ್ಯಾಯಾಮ ಮಾಡುವುದರಿಂದ ಹೊಟ್ಟೆನೋವು, ವಾಕರಿಕೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಭಾರೀ ವ್ಯಾಯಾಮ ಮಾಡಲು 1.5 ರಿಂದ 2 ಗಂಟೆಗಳ ಅಂತರ ಇರಬೇಕು.

ಒಂದೇ ಬಾರಿ ಹೆಚ್ಚು ನೀರು ಕುಡಿಯಬೇಡಿ: ಊಟದ ತಕ್ಷಣ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಕೆಲವರಿಗೆ ಹೊಟ್ಟೆ ತುಂಬಿದ ಅನುಭವ, ಉಬ್ಬರ ಮತ್ತು ಅಸಹಜತೆ ಉಂಟಾಗಬಹುದು. ಅಗತ್ಯವಿದ್ದರೆ ಸ್ವಲ್ಪ ಸ್ವಲ್ಪವಾಗಿ ನೀರು ಕುಡಿಯುವುದು ಉತ್ತಮ.

ಧೂಮಪಾನ ಮತ್ತು ಮದ್ಯಪಾನ ತಪ್ಪಿಸಿ: ಊಟದ ತಕ್ಷಣ ಧೂಮಪಾನ ಅಥವಾ ಮದ್ಯಪಾನ ಮಾಡುವುದರಿಂದ ಜೀರ್ಣಾಂಗಗಳ ಮೇಲೆ ಒತ್ತಡ ಹೆಚ್ಚಾಗಿ ಗ್ಯಾಸ್ಟ್ರಿಕ್ ಹಾಗೂ ಆಸಿಡ್ ಸಮಸ್ಯೆಗಳು ಹೆಚ್ಚಾಗಬಹುದು.

ಅತಿಯಾಗಿ ತಿನ್ನಬೇಡಿ: ಒಂದೇ ಬಾರಿ ಅತಿಯಾಗಿ ಆಹಾರ ಸೇವಿಸುವುದರಿಂದ ಹೊಟ್ಟೆ ಭಾರವಾಗುವುದು, ಗ್ಯಾಸ್, ಅಜೀರ್ಣ ಮತ್ತು ತೂಕ ಹೆಚ್ಚುವ ಸಾಧ್ಯತೆ ಹೆಚ್ಚಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಸಮತೋಲಿತ ಆಹಾರ ಸೇವಿಸುವುದು ಉತ್ತಮ.

ಇದನ್ನೂ ಓದಿ: ಗಾಣದ ಎಣ್ಣೆ Vs ರಿಫೈನ್ಡ್ ಎಣ್ಣೆ: ಆರೋಗ್ಯಕ್ಕೆ ಯಾವುದು ಒಳ್ಳೆಯದು ತಿಳಿದುಕೊಳ್ಳಿ

ಊಟದ ನಂತರ ಏನು ಮಾಡಬೇಕು?

  • 10– 15 ನಿಮಿಷ ನಿಧಾನವಾಗಿ ನಡೆಯಿರಿ.
  • ಆಹಾರವನ್ನು ಚೆನ್ನಾಗಿ ಜಗಿದು ಸೇವಿಸಿ.
  • ಊಟವಾದ ತಕ್ಷಣ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮುಂದೆ ದೀರ್ಘ ಸಮಯ ಕುಳಿತುಕೊಳ್ಳಬೇಡಿ.
  • ಹಣ್ಣುಗಳನ್ನು ಊಟದ ತಕ್ಷಣ ಸೇವಿಸುವ ಬದಲು 1- 2 ಗಂಟೆಗಳ ನಂತರ ಸೇವಿಸಿ.
  • ಪ್ರತಿದಿನ ಒಂದೇ ಸಮಯಕ್ಕೆ ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.

ಜೀರ್ಣಕ್ರಿಯೆ ಸರಿಯಾಗಿ ಇರಲು ಈ ಸಲಹೆಗಳನ್ನು ಪಾಲಿಸಿ:

ಆಹಾರದಲ್ಲಿ ಫೈಬರ್, ಪ್ರೋಟೀನ್ ಮತ್ತು ತರಕಾರಿಗಳನ್ನು ಸಮತೋಲನವಾಗಿ ಸೇರಿಸುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ರಾತ್ರಿ ವೇಳೆ ಅತಿಯಾದ ಎಣ್ಣೆ, ಕರಿದ ಆಹಾರ ಹಾಗೂ ಸಕ್ಕರೆ ಅಧಿಕ ಇರುವ ಸಿಹಿತಿಂಡಿಗಳನ್ನು ಕಡಿಮೆ ಮಾಡುವುದು ಉತ್ತಮ. ಗ್ರೀನ್ ಟೀ ಅಥವಾ ಕಾಫಿಯನ್ನು ಊಟದ ತಕ್ಷಣ ಕುಡಿಯುವುದಕ್ಕಿಂತ ಕನಿಷ್ಠ ಒಂದು ಗಂಟೆಯ ನಂತರ ಸೇವಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಊಟದ ನಂತರ ಪದೇಪದೇ ಎದೆ ಉರಿ, ಹೊಟ್ಟೆ ಉಬ್ಬರ, ಅಜೀರ್ಣ, ಗ್ಯಾಸ್ಟ್ರಿಕ್, ವಾಕರಿಕೆ ಅಥವಾ ಆಹಾರ ನುಂಗಲು ತೊಂದರೆ ಕಾಣಿಸಿಕೊಂಡರೆ ಗ್ಯಾಸ್ಟ್ರೋಎಂಟರಾಲಜಿಸ್ಟ್ ಅಥವಾ ಅರ್ಹ ವೈದ್ಯರನ್ನು ಸಂಪರ್ಕಿಸಬೇಕು. ಸರಿಯಾದ ಆಹಾರ ಪದ್ಧತಿ ಮತ್ತು ಆರೋಗ್ಯಕರ ಜೀವನಶೈಲಿಯೇ ಉತ್ತಮ ಆರೋಗ್ಯದ ಗುಟ್ಟು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊಬೈಲ್ ಫೋನ್ ಮ್ಯಾನುಫ್ಯಾಕ್ಚರಿಂಗ್ ಸ್ಕೀಮ್; ಗೇಮ್ ಚೇಂಜರ್ ಯೋಜನೆ; ಏನಿದರ ವಿಶೇಷತೆ? – Kannada News | India’s new Mobile Phone Manufacturing Scheme might give big boost to electronics industry

ಮೊಬೈಲ್ ಫೋನ್ ಮ್ಯಾನುಫ್ಯಾಕ್ಚರಿಂಗ್Image Credit source: Getty Images

ನವದೆಹಲಿ, ಜುಲೈ 15: ಕೇಂದ್ರ ಸಂಪುಟ ಇವತ್ತು ಅನುಮೋದನೆ ನೀಡಿರುವ 2.19 ಲಕ್ಷ ಕೋಟಿ ರೂ ವೆಚ್ಚದ ಏಳು ಯೋಜನೆಗಳಲ್ಲಿ ಬಹಳ ಮುಖ್ಯವೆನಿಸಿರುವುದು ಮೊಬೈಲ್ ಪಿಎಲ್​ಐ 2.0 ಸ್ಕೀಮ್. ಇದು 62,500 ಕೋಟಿ ರೂ ಬಜೆಟ್ ವೆಚ್ಚದ್ದಾಗಿದ್ದು, ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಗೇಮ್ ಚೇಂಜರ್ ಎನಿಸಲಿದೆ. ಈಗಾಗಲೇ ಮೊಬೈಲ್ ತಯಾರಿಕೆಗೆ ಪಿಎಲ್​ಐ ಸ್ಕೀಮ್ ಇದ್ದು ಅದರ ಅವಧಿ ಮುಗಿದಿದೆ. ಈಗ ಎರಡನೇ ಆವೃತ್ತಿಯ ಸ್ಕೀಮ್ ಇದಾಗಿದೆ. ಈ ನೂತನ ‘ಮೊಬೈಲ್ ಫೋನ್ ಉತ್ಪಾದನಾ ಯೋಜನೆ’ (Mobile Phone Manufacturing Scheme – MPMS) ಕೇವಲ ಮೊಬೈಲ್‌ಗಳನ್ನು ಜೋಡಿಸುವ (ಅಸೆಂಬ್ಲಿಂಗ್) ಕೆಲಸಕ್ಕೆ ಸೀಮಿತವಾಗಿರದೆ, ಭಾರತವನ್ನು ಜಾಗತಿಕ ಮಟ್ಟದ ಸ್ವಾವಲಂಬಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಹಬ್ ಆಗಿ ರೂಪಿಸುವ ಮತ್ತು ಪ್ರಮುಖವಾಗಿ ಭಾರತದ್ದೇ ಆದ ಸ್ವಂತ ಮೊಬೈಲ್ ಬ್ರಾಂಡ್‌ಗಳನ್ನು ಜಾಗತಿಕವಾಗಿ ಬೆಳೆಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ.

60,000 ಕ್ಕೂ ಹೆಚ್ಚು ನೇರ ಉದ್ಯೋಗಗಳ ಸೃಷ್ಟಿ

ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ ಅವರ ಪ್ರಕಾರ, ಮುಂದಿನ 5 ವರ್ಷಗಳಲ್ಲಿ (ಹಣಕಾಸು ವರ್ಷ 2026-27 ರಿಂದ 2030-31ರ ವರೆಗೆ) ಈ ಯೋಜನೆಯ ಜಾರಿಯಿಂದ ದೇಶದಲ್ಲಿ ಸುಮಾರು 60,000 ಹೊಸ ನೇರ ಉದ್ಯೋಗಗಳು (Direct Jobs) ಸೃಷ್ಟಿಯಾಗಲಿವೆ. ಇದರ ಜೊತೆಗೆ ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.

ಇದನ್ನೂ ಓದಿ: ಸೆಮಿಕಂಡಕ್ಟರ್, ಮೂಲಸೌಕರ್ಯ, ಮೊಬೈಲ್ ಫೋನ್ ಉತ್ಪಾದನೆ ಸೇರಿದಂತೆ ಏಳು ಪ್ರಮುಖ ಯೋಜನೆಗಳಿಗೆ ಸರ್ಕಾರದ ಅನುಮೋದನೆ

ಹಣ ಹಂಚಿಕೆ ಮತ್ತು ಉತ್ಪಾದನೆಯ ಗುರಿ

ಯೋಜನೆಗಾಗಿ ಸರ್ಕಾರ ರೂ. 62,500 ಕೋಟಿ ಅನುದಾನವನ್ನು ಮೀಸಲಿಟ್ಟಿದೆ. ಈ 5 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಸುಮಾರು 39 ಲಕ್ಷ ಕೋಟಿ ರೂ ಮೌಲ್ಯದ ಮೊಬೈಲ್ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಈ ಯೋಜನೆಯಿಂದ ಸುಮಾರು ರೂ. 15 ಲಕ್ಷ ಕೋಟಿ ರೂ ಮೌಲ್ಯದ ಮೊಬೈಲ್ ಫೋನ್‌ಗಳು ವಿದೇಶಕ್ಕೆ ರಫ್ತಾಗುವ ಗುರಿ ಹೊಂದಲಾಗಿದೆ.

ಉದ್ಯಮದ ಬೆಳವಣಿಗೆಗೆ ಸರ್ಕಾರದಿಂದ ಇನ್ಸೆಂಟಿವ್ಸ್

ಮೊಬೈಲ್ ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರವು ಅತ್ಯಂತ ಆಕರ್ಷಕವಾದ ಸಬ್ಸಿಡಿ/ಪ್ರೋತ್ಸಾಹ ಧನವನ್ನು ಘೋಷಿಸಿದೆ. ಈ ಪ್ರೋತ್ಸಾಹ ಧನದ ವಿವರ, ಶೇಕಡವಾರು ದರ ಮತ್ತು ಅದನ್ನು ಯಾಕಾಗಿ ನೀಡಲಾಗುತ್ತಿದೆ ಎನ್ನುವ ಮಾಹಿತಿ ಈ ಕೆಳಕಂಡಂತಿದೆ:

  • ಮೂಲ ಉತ್ಪಾದನಾ ಸಬ್ಸಿಡಿ: 2.25% ರಿಂದ 5% (ಭಾರತದಲ್ಲಿ ಮೊಬೈಲ್ ಉತ್ಪಾದಿಸಿ ಮಾರಾಟ ಮಾಡುವುದಕ್ಕಾಗಿ)
  • ಸ್ಥಳೀಯ ಬಿಡಿಭಾಗಗಳ ಬಳಕೆ: ಹೆಚ್ಚುವರಿ 1.5% ವರೆಗೆ (ಮೊಬೈಲ್‌ನ ಪ್ರಮುಖ ಬಿಡಿಭಾಗಗಳನ್ನು ಭಾರತದಲ್ಲೇ ಖರೀದಿಸಿ ಬಳಸುವುದಕ್ಕಾಗಿ)
  • ಭಾರತೀಯ ಬ್ರಾಂಡ್‌ಗಳಿಗೆ ವಿಶೇಷ ಉತ್ತೇಜನ: ಹೆಚ್ಚುವರಿ 3% (ಭಾರತೀಯ ಕಂಪನಿಗಳು ಸ್ವಂತ ಡಿಸೈನ್ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿ).

ಇದನ್ನೂ ಓದಿ: ಐಬಿಎಂ ಮಹಾಪತನ; ಆರು ದಶಕದಲ್ಲೇ ಹೀನಾಯ ಪ್ರದರ್ಶನ; 6.7 ಲಕ್ಷ ಕೋಟಿ ರೂ ಮೌಲ್ಯನಷ್ಟ; ಈ ಕುಸಿತಕ್ಕೆ ಏನು ಕಾರಣ?

‘ಮೇಕ್ ಇನ್ ಇಂಡಿಯಾ’ ಯಶಸ್ಸಿನ ಹೆಜ್ಜೆ

  • ಪ್ರಸ್ತುತ ಭಾರತದಲ್ಲಿ ಬಳಕೆಯಾಗುತ್ತಿರುವ ಶೇ. 99.2 ರಷ್ಟು ಮೊಬೈಲ್ ಫೋನ್‌ಗಳು ಭಾರತದಲ್ಲೇ ತಯಾರಾಗುತ್ತಿವೆ.
  • ಭಾರತವು ಸದ್ಯ ಜಗತ್ತಿನಲ್ಲೇ ಎರಡನೇ ಅತಿ ದೊಡ್ಡ ಮೊಬೈಲ್ ಉತ್ಪಾದಕ ದೇಶವಾಗಿದೆ.
  • 2025 ರ ಹೊತ್ತಿಗೆ ಮೊಬೈಲ್ ಫೋನ್‌ಗಳು ಭಾರತದಿಂದ ರಫ್ತಾಗುವ ಅತಿ ದೊಡ್ಡ ಏಕೈಕ ಉತ್ಪನ್ನವಾಗಿ ಹೊರಹೊಮ್ಮಿವೆ. ಇದು ಡೀಸೆಲ್ ಇಂಧನ ಮತ್ತು ಕತ್ತರಿಸಿದ ವಜ್ರಗಳ ರಫ್ತಿನ ಮೌಲ್ಯವನ್ನು ಹಿಂದಿಕ್ಕಿದೆ.

ಮೊಬೈಲ್ ಪಿಎಲ್​ಐ 2.0 ಯೋಜನೆಯ ಮುಖ್ಯ ಆಶಯ

ಭಾರತವು ಜಾಗತಿಕವಾಗಿ ಕೇವಲ ಮೊಬೈಲ್‌ಗಳನ್ನು ಜೋಡಿಸುವ ದೇಶವಾಗುಳಿಯದೆ, ತನ್ನದೇ ಆದ ಪೇಟೆಂಟ್‌ಗಳನ್ನು (H/W Patents) ಹೊಂದಿ, ತಂತ್ರಜ್ಞಾನದ ಸಾರ್ವಭೌಮತ್ವವನ್ನು (Technological Sovereignty) ಸಾಧಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಅಂತ್ಯ ನೋಡುವವರೆಗೂ ನಾನು ಸಾಯೋದಿಲ್ಲ; ಬಿಜೆಪಿಗೆ ಮಮತಾ ಬ್ಯಾನರ್ಜಿ ತಿರುಗೇಟು! – Kannada News | BJP want me to have heart attack and die Mamata Banerjee hits back

ಕೊಲ್ಕತ್ತಾ, ಜುಲೈ 15: ಪಶ್ಚಿಮ ಬಂಗಾಳದಲ್ಲಿ ದಶಕಗಳ ಕಾಲ ಅಧಿಕಾರ ನಡೆಸಿದ್ದ ಟಿಎಂಸಿಯಲ್ಲಿ ಇದೀಗ ತೀವ್ರ ಬಿಕ್ಕಟ್ಟು ಎದುರಾಗಿದೆ. ಪಕ್ಷ ಈಗಾಗಲೇ ಎರಡು ಪಾಲಾಗಿದ್ದು, ರೆಬೆಲ್ ನಾಯಕರು ಮಮತಾ ಬ್ಯಾನರ್ಜಿಯನ್ನು (Mamata Banerjee) ದೂರವೇ ಇಟ್ಟಿದ್ದಾರೆ. ತೃಣಮೂಲ ಕಾಂಗ್ರೆಸ್ (TMC) ಹಿರಿಯ ನಾಯಕ ಮದನ್ ಮಿತ್ರ ಅವರು ಬಂಡಾಯ ಬಣ ಸೇರಿದ ಬೆನ್ನಲ್ಲೇ ತೀವ್ರ ಆಕ್ರೋಶ ಹೊರಹಾಕಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಬಿಜೆಪಿ ಹಾಗೂ ಪಕ್ಷಾಂತರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಕ್ಷ ಬಿಟ್ಟು ಹೋಗುವವರು ಹೋಗಬಹುದು ಎಂದು ಹೇಳಿರುವ ಅವರು, “ನನಗೆ ಹೃದಯಾಘಾತ ಆಗಲಿ ಎಂದು ಬಿಜೆಪಿ ಬಯಸುತ್ತಿದೆ. ಆದರೆ, ಅವರ ಅಂತ್ಯ ನೋಡುವವರೆಗೂ ನಾನು ಬದುಕಿರುತ್ತೇನೆ” ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಟಿಎಂಸಿ ನಾಯಕ ಮದನ್ ಮಿತ್ರ ಅತೃಪ್ತರ ಬಣ ಸೇರಿದ ನಂತರ ಫೇಸ್‌ಬುಕ್ ಲೈವ್ ಮೂಲಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಆಕ್ರೋಶದಿಂದ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

ನಾನು ಸುಲಭವಾಗಿ ಸಾಯೋದಿಲ್ಲ:

“ನನಗೆ ಹಾರ್ಟ್ ಅಟ್ಯಾಕ್ ಆಗಬೇಕು ಅಂತ ಬಿಜೆಪಿ ಬಯಸುತ್ತಿದೆ. ಆದರೆ ನಾನು ಬಿಜೆಪಿಯ ರಾಜಕೀಯ ಅಂತ್ಯವನ್ನು ಕಣ್ಣಾರೆ ನೋಡುವವರೆಗೂ ಜೀವಂತವಾಗಿ ಇರುತ್ತೇನೆ. ಈ ದ್ರೋಹಿಗಳ ಪರವಾಗಿ ನಾನು ಬಂಗಾಳದ ಜನತೆಯಲ್ಲಿ ಕ್ಷಮೆ ಯಾಚಿಸುತ್ತೇನೆ. ರಾಜಕೀಯ ಉಳಿವಿಗಾಗಿ ನಾನು ಎಂದಿಗೂ ನನ್ನ ವಿವೇಕವನ್ನು ಮಾರಿಕೊಂಡಿಲ್ಲ” ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ತಾಳ್ಮೆಗೆಟ್ಟು ತನ್ನದೇ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಧೋರಣೆಯಿಂದಲೇ ತಾವು ಪಕ್ಷ ಬಿಟ್ಟಿರುವುದಾಗಿ ಮದನ್ ಮಿತ್ರ ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ, ಅಭಿಷೇಕ್ ಅವರನ್ನು ಕೇವಲ ಒಂದು ನೆಪವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. “ಮದನ್ ಮಿತ್ರ ಅವರ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ಜಾರಿ ನಿರ್ದೇಶನಾಲಯ (ED) ಮಂಗಳವಾರ ಸಮನ್ಸ್ ಜಾರಿ ಮಾಡಿದೆ. ಆ ಭಯದಿಂದಲೇ ಅವರು ಪಕ್ಷ ತೊರೆದಿದ್ದಾರೆ. ಇದರಲ್ಲಿ ಅಭಿಷೇಕ್ ಬ್ಯಾನರ್ಜಿ ಅವರದ್ದೇನೂ ತಪ್ಪಿಲ್ಲ” ಎಂದು ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.

ಅಭಿಷೇಕ್ ಬಗ್ಗೆ ಶ್ಲಾಘನೆ:

“ಅಭಿಷೇಕ್ ಹಾಗೂ ಅವರ ಕುಟುಂಬದವರ ಮೇಲೂ ಸರಣಿ ಸಮನ್ಸ್‌ಗಳನ್ನು ಜಾರಿ ಮಾಡಲಾಗಿತ್ತು. ಅವರು ಮನಸ್ಸು ಮಾಡಿದ್ದರೆ ಕೇಂದ್ರದೊಂದಿಗೆ ರಾಜಿ ಮಾಡಿಕೊಂಡು ನೆಮ್ಮದಿ ಪಡೆಯಬಹುದಿತ್ತು. ಆದರೆ ಅವರು ರಣರಂಗದಿಂದ ಓಡಿಹೋಗಲಿಲ್ಲ, ಸತತವಾಗಿ ಹೋರಾಡುತ್ತಿದ್ದಾರೆ. ಅವರು ಹೋರಾಡುತ್ತಿರುವ ರೀತಿಯನ್ನು ನೋಡಿದರೆ, ಅವರ ಎಲ್ಲಾ ತಪ್ಪುಗಳನ್ನೂ ಕ್ಷಮಿಸಬಹುದಾಗಿದೆ” ಎಂದು ಅಭಿಷೇಕ್ ಪರವಾಗಿ ಮಮತಾ ಬ್ಯಾಟಿಂಗ್ ಮಾಡಿದ್ದಾರೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಮತ್ತೊಂದು ಹಿನ್ನಡೆ; ಪಕ್ಷದ ಎಲ್ಲ ಹುದ್ದೆಗೂ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಬಿಜೆಪಿಯು ತನಿಖಾ ಸಂಸ್ಥೆಗಳು ಮತ್ತು ಪೊಲೀಸರನ್ನು ದುರುಪಯೋಗಪಡಿಸಿಕೊಂಡು ಟಿಎಂಸಿ ನಾಯಕರನ್ನು ಹೆದರಿಸುತ್ತಿದೆ ಎಂದು ಮಮತಾ ಆರೋಪಿಸಿದ್ದಾರೆ. “ನಾವು ರಾಜಿ ಮಾಡಿಕೊಳ್ಳದ ಕಾರಣಕ್ಕಾಗಿಯೇ ನನ್ನನ್ನು ಮತ್ತು ನನ್ನ ಕುಟುಂಬವನ್ನು ಇಷ್ಟು ರಾಜಕೀಯವಾಗಿ ಹಿಂಸಿಸಲಾಗುತ್ತಿದೆ. ಒಂದು ವೇಳೆ ನಾನು ರಾಜಿ ಮಾಡಿಕೊಂಡಿದ್ದರೆ ನಮಗೆ ಇಷ್ಟೊಂದು ತೊಂದರೆ ಇರುತ್ತಿರಲಿಲ್ಲ. ಯಾರು ಈಗ ಪಕ್ಷಾಂತರ ಮಾಡಿದವರೆಲ್ಲರೂ ಸಾಕಷ್ಟು ಕಪ್ಪುಹಣದ ಲಗೇಜುಗಳನ್ನು ಹೊತ್ತವರೇ. ನಮಗೆ ಇಂದಿಗೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ 18 ಸಂಸದರ ಬಲವಿದೆ. ಬಿಜೆಪಿಯ ಕಡೆ ಸೇರಿರುವ ಸಂಸದರು ಕೇವಲ ಪೊಲೀಸರ ಭೀತಿಯಿಂದ ಅಲ್ಲಿಗೆ ಓಡಿ ಹೋಗಿದ್ದಾರೆ” ಎಂದು ದೀದಿ ವ್ಯಂಗ್ಯವಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಲಬುರಗಿ ಜೈಲಿಂದ ಕೈದಿಗಳು ಪರಾರಿ ಕೇಸ್​​: ಪ್ರಿಯಾಂಕ್​​-ವಿಜಯೇಂದ್ರ ನಡುವೆ ಸೋಷಿಯಲ್ ಮೀಡಿಯಾ ಪೋಸ್ಟ್​​ ವಾರ್​​ – Kannada News | Kalaburagi Jailbreak Row: BY Vijayendra and Priyank Kharge Exchange Barbs on Social Media

ಪ್ರಿಯಾಂಕ್​​-ವಿಜಯೇಂದ್ರ ನಡುವೆ ಸೋಷಿಯಲ್ ಮೀಡಿಯಾ ಪೋಸ್ಟ್​​ ವಾರ್​​

ಬೆಂಗಳೂರು, ಜುಲೈ 15: ಕಲಬುರಗಿ (Kalaburagi) ಕೇಂದ್ರ ಕಾರಾಗೃಹದಿಂದ ಮೂರು ಖೈದಿಗಳು ತಪ್ಪಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿ ಬಿದ್ದಿವೆ. ಅದರಲ್ಲೂ ಗೃಹ ಸಚಿವ ವಿರುದ್ಧ ಟೀಕಾ ಪ್ರಹಾರಗಳೇ ನಡೆಯುತ್ತಿವೆ. ಇವುಗಳಿಗೆಲ್ಲ ಪ್ರಿಯಾಂಕ್​​ ಖರ್ಗೆ (Priyank Kharge) ಕೌಂಟರ್​​ ಕೊಟ್ಟಿದ್ದು, ಟೀಕೆಗಳಿಗೆ ಬಾಯ್ತೆರೆದು ಕುಳಿತಿರುವ ಬಿಜೆಪಿ ನಾಯಕರು ಒಮ್ಮೆ ತಮ್ಮ ಅವಧಿಯಲ್ಲಿ ರಾಜ್ಯದ ಜೈಲುಗಳ ಸ್ಥಿತಿ ಹೇಗಿತ್ತು ಎಂಬುದನ್ನು ಅವಲೋಕನ ಮಾಡಿಕೊಂಡರೆ ಒಳಿತು ಎಂದಿದ್ದಾರೆ.

ಬಿಜೆಪಿಗೆ ಇತಿಹಾಸ ನೆನಪಿಸಿದ ಪ್ರಿಯಾಂಕ್​​

2010ರಲ್ಲಿ ಇದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಪ್ಪಳ ಜಿಲ್ಲಾ ಕಾರಾಗೃಹದಿಂದ 8 ಖೈದಿಗಳು ಪರಾರಿಯಾಗಿದ್ದರು. ರಾಜ್ಯದ ಇತಿಹಾಸದಲ್ಲೇ ಇದು ದೊಡ್ಡ ಪ್ರಕರಣ ಎಂದು ಪರಿಗಣಿಸಬಹುದು. ಇದು ಅಂದಿನ ಗೃಹಸಚಿವರ ವೈಫಲ್ಯವೆಂದು ಬಿಜೆಪಿ ಹೇಳುತ್ತದೆಯೇ? ಬಿಜೆಪಿ ಅವಧಿಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಅತಿಥಿ ಗೃಹವಾಗಿ ಬದಲಾಗಿ ಖೈದಿಗಳಿಗೆ ಸಕಲ ಸವಲತ್ತುಗಳು ದೊರಕುತ್ತಿದ್ದ ಸುದ್ದಿಗಳನ್ನು ರಾಜ್ಯ ನೋಡಿದೆ. ಇದನ್ನು ಬಿಜೆಪಿ ಸರ್ಕಾರದ ವೈಫಲ್ಯ ಎಂಬುದನ್ನು ಒಪ್ಪಿಕೊಳ್ಳುತ್ತಾರಾ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ ಸೆಂಟ್ರಲ್ ಜೈಲಿನಿಂದ ಕೈದಿಗಳು ಪರಾರಿ ಕೇಸ್; 8 ಜೈಲಧಿಕಾರಿಗಳ ಅಮಾನತು

ಗೃಹ ಸಚಿವರ ಆರೋಪಕ್ಕೆ ವಿಜಯೇಂದ್ರ ಕೌಂಟರ್

ಈ ಬೆನ್ನಲ್ಲೇ ಪ್ರಿಯಾಂಕ್​​ ಖರ್ಗೆ ಆರೋಪಗಳಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಯೇಂದ್ರ ಕೌಂಟರ್​​ ಕೊಟ್ಟಿದ್ದಾರೆ. ಐಸಿಸ್ ಉಗ್ರನಿಗೆ ರಾಜಾತಿಥ್ಯ ನೀಡಿದ ಮಹಾನ ಸರ್ಕಾರದ ಮಹಾನ್ ಗೃಹ ಸಚಿವರೇ, ನೀವು RSS ಬಗ್ಗೆ ಚಿಂತೆ ಮಾಡುವುದನ್ನು ಬಿಡಿ. ನಿಮ್ಮ ತವರು ಜಿಲ್ಲೆಯಲ್ಲಿಯೇ ಜೈಲಿನಿಂದ ಕೈದಿಗಳು ತಪ್ಪಿಸಿಕೊಂಡಿದ್ದು ನಿಮ್ಮ ಆಡಳಿತಕ್ಕೆ ಹಿಡಿದ ಕೈಗನ್ನಡಿ. 2010ರಲ್ಲಿ ಆಯಿತು ಅಂತ ಈಗ ನೀವು ಜೈಲಿನಿಂದ ತಪ್ಪಿಸಿಕೊಳ್ಳಲು ಬಿಟ್ಟಿದ್ದೀರಾ? ನಿಮ್ಮ ವೈಪಲ್ಯ ಮರೆ ಮಾಚಲು ಕಾಗಕ್ಕ ಗುಬ್ಬಕ್ಕ ಕಥೆ ಹೇಳಬೇಡಿ. ಪಾಪ, ನಿಮಗೆ RSS ಬಗ್ಗೆ ಅಧ್ಯಯನ ಮಾಡೋಕೆ ಸಮಯ ಸಿಗುತ್ತಿಲ್ಲ, ಇನ್ನೂ ಜೈಲು, ಕಾನೂನು ಸುವವ್ಯಸ್ಥೆ ಕಾಪಾಡೋಕೆ ಸಮಯ ಎಲ್ಲಿದೆ ಸ್ವಾಮಿ ಎಂದು ವ್ಯಂಗ್ಯವಾಡಿದ್ದಾರೆ.

ಮಹತ್ವದ ಇಲಾಖೆಯ ಜವಾಬ್ದಾರಿ ಹೊತ್ತಿರುವ ತಾವು ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡುವುದು ನಿಮ್ಮ ಯೋಗ್ಯತೆಯನ್ನು ತೋರಿಸುತ್ತದೆ. ತಮ್ಮ ಸರ್ಕಾರದ ಮೂರು ವರ್ಷಗಳ ಅವಧಿಯಲ್ಲಿ ಜೈಲಿನಲ್ಲಿ ಏನೇನಾಗಿತ್ತು ಎನ್ನುವದು ಇಡೀ ದೇಶದ ಜನತೆಗೆ ಗೊತ್ತಿದೆ ಮಿಸ್ಟರ್ ಹೋಮ್ ಮಿನಿಸ್ಟರ್. ನಾಚಿಕೆ ಆಗಬೇಕು ನಿಮಗೆ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡೋಕೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಿರುದ್ಯೋಗಿಗಳೇ ಇವರ ಟಾರ್ಗೆಟ್: MNC ಕಂಪನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ರೂ ವಂಚನೆ – Kannada News | Job Scam in Whitefield: MNC Recruitment Fraud Targets Unemployed Youth

ಬೆಂಗಳೂರು, ಜುಲೈ 15: “ಎಂಎನ್‌ಸಿ ಕಂಪನಿಗಳಲ್ಲಿ ಕೈತುಂಬಾ ಸಂಬಳ, ವರ್ಷ ವರ್ಷವೂ ಭರ್ಜರಿ ಹೈಕ್ ನೀಡಲಾಗುವುದು. ನಮ್ಮ ಸಂಸ್ಥೆಗೆ ಬಂದರೆ ನಿಮ್ಮ ಭವಿಷ್ಯವೇ ಬದಲಾಗುತ್ತದೆ” ಎಂಬ ಆಕರ್ಷಕ ಜಾಹೀರಾತುಗಳನ್ನು ನಂಬಿ ಇಂಟರ್ವಿವ್ಯೂಗೆ ಹೋಗುವ ಮುನ್ನ ನಿರುದ್ಯೋಗಿಗಳು ಎಚ್ಚರ ವಹಿಸಬೇಕಾಗಿದೆ. ಏಕೆಂದರೆ, ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ (job scam) ಕೊಡಿಸುವುದಾಗಿ ನಂಬಿಸಿ ಯುವಕ-ಯುವತಿಯರಿಗೆ ಲಕ್ಷಾಂತರ ರೂ ವಂಚಿಸುತ್ತಿದ್ದ ಜಾಲವೊಂದನ್ನು ಬೆಂಗಳೂರಿನ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಭೇದಿಸಿದ್ದಾರೆ. ಉದ್ಯೋಗದ ಆಸೆಗೆ ಬಿದ್ದ ನೂರಾರು ವಿದ್ಯಾವಂತರು ಹಣ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ.

ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿದ್ದ ಗ್ಯಾಂಗ್ 

ವಂಚಕರು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ನಕಲಿ ಕಂಪನಿಯ ಕಚೇರಿಯನ್ನು ತೆರೆದು, ದೇಶದ ವಿವಿಧ ರಾಜ್ಯಗಳ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಕೊಡಿಸುವುದಾಗಿ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಪ್ರಚಾರ ಮಾಡುತ್ತಿದ್ದರು. ಉದ್ಯೋಗ ಆಕಾಂಕ್ಷಿಗಳನ್ನು ಆಕರ್ಷಿಸಿ, ಅವರಿಗೆ ಪರೀಕ್ಷೆಯ ನೆಪ ಒಡ್ಡಿ ತಲಾ 2,000 ದಿಂದ 3,000 ರೂ. ಗಳವರೆಗೆ ಪ್ರವೇಶ ಶುಲ್ಕವನ್ನು ವಸೂಲಿ ಮಾಡುತ್ತಿದ್ದರು. ನಿಗದಿತ ದಿನದಂದು ಒಂದೇ ಹಾಲ್‌ನಲ್ಲಿ 30 ರಿಂದ 40 ಜನರಿಗೆ ಪರೀಕ್ಷೆ ಬರೆಸಿ, ಫಲಿತಾಂಶ ಬಂದ ನಂತರ ಕರೆ ಮಾಡುವುದಾಗಿ ಹೇಳಿ ಕಳುಹಿಸುತ್ತಿದ್ದರು.

ಹಲವು ವರ್ಷಗಳಿಂದ ಲಕ್ಷಾಂತರ ರೂ ಲೂಟಿ 

ಪರೀಕ್ಷೆ ಮುಗಿದು ವಾರ ಕಳೆದರೂ ಕಂಪನಿಯಿಂದ ಯಾವುದೇ ಕರೆ ಬಾರದಿದ್ದಾಗ ಅಭ್ಯರ್ಥಿಗಳೇ ಸ್ವತಃ ಕರೆ ಮಾಡಿದ್ದಾರೆ. ಈ ವೇಳೆ ವಂಚಕರು, “ನೀವು ಪರೀಕ್ಷೆಯನ್ನು ಸರಿಯಾಗಿ ಬರೆದಿಲ್ಲ, ಹೀಗಾಗಿ ಆಯ್ಕೆಯಾಗಿಲ್ಲ. ಆ ಹುದ್ದೆಗೆ ಮತ್ತೊಬ್ಬರನ್ನು ನೇಮಕ ಮಾಡಿಕೊಳ್ಳಲಾಗಿದೆ. ಬೇಕಿದ್ದರೆ ಮುಂದಿನ ಬಾರಿ ಮತ್ತೊಮ್ಮೆ ಪ್ರಯತ್ನಿಸಿ” ಎಂದು ಹಾರಿಕೆ ಉತ್ತರ ನೀಡುತ್ತಿದ್ದರು. ಹಣ ಕಳೆದುಕೊಂಡವರು ಕೇವಲ ಎರಡು-ಮೂರು ಸಾವಿರ ರೂ ತಾನೇ ಎಂದು ಭಾವಿಸಿ, ಕಂಪನಿಯನ್ನು ಪ್ರಶ್ನಿಸದೆ ಸುಮ್ಮನೆ ವಾಪಸ್ ಹೋಗುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಕಳೆದ ಕೆಲವು ವರ್ಷಗಳಿಂದ ಲಕ್ಷಾಂತರ ರೂ ಲೂಟಿ ಮಾಡಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ ಪ್ರಯಾಣಿಕರೇ ಎಚ್ಚರ: ಪ್ರಯಾಣಿಕರ ಸೋಗಿನಲ್ಲಿ ಬಂದು ಕಂಡಕ್ಟರ್ ಬ್ಯಾಗನ್ನೇ ಎಗಿರಿಸಿದ ಮಹಿಳೆ, ವಿಡಿಯೋ ವೈರಲ್

ಇನ್ನು ಇತ್ತೀಚೆಗೆ ಮೋಸಹೋದ ಕೆಲವು ಅಭ್ಯರ್ಥಿಗಳು ತಾವು ಬರೆದಿರುವ ಪರೀಕ್ಷಾ ಪತ್ರಿಕೆಗಳನ್ನು  ತೋರಿಸುವಂತೆ ಪಟ್ಟು ಹಿಡಿದಿದ್ದಾರೆ. ಇದಕ್ಕೆ ಕಚೇರಿಯ ಸಿಬ್ಬಂದಿ ಸರಿಯಾಗಿ ಸ್ಪಂದಿಸದಿದ್ದಾಗ ಅನುಮಾನಗೊಂಡು ಸಂತ್ರಸ್ತರು ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಮುಖ ಆರೋಪಿಯ ಬಂಧನ

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಇದೊಂದು ಸಂಪೂರ್ಣ ನಕಲಿ ಕಂಪನಿ ಎಂಬುದು ಬಯಲಾಗಿದೆ. ಸದ್ಯ ಈ ವಂಚನೆ ಜಾಲದ ಪ್ರಮುಖ ಆರೋಪಿ ಪವನ್ ಗೋಪಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ದಂಧೆಯ ಹಿಂದೆ ಇಡೀ ಗ್ಯಾಂಗ್ ಕೆಲಸ ಮಾಡುತ್ತಿರುವ ಶಂಕೆ ವ್ಯಕ್ತವಾಗಿದ್ದು, ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಸೈದುಲ್ಲು ಅಡಾವತ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version