CWRC ಸಭೆ: ತಮ್ಮ ಪಾಲಿನ ನೀರು ಬಿಡುವಂತೆ ತಮಿಳುನಾಡು ಪಟ್ಟು; ಸಾಧ್ಯವೇ ಇಲ್ಲ ಎಂದ ಕರ್ನಾಟಕ – Kannada News | CWRC Meeting: Tamil Nadu Demands Cauvery Water Share; Karnataka Refuses Citing Severe Drought and Drinking Water Crisis

ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆImage Credit source: cwma cwc X account

ದೆಹಲಿ, ಜುಲೈ 15: ನೈರುತ್ಯ ಮುಂಗಾರು ಮಳೆಯ ಕೊರತೆಯಿಂದಾಗಿ ಕರ್ನಾಟಕ  ನೀರಿಲ್ಲದೆ ಅಕ್ಷರಶಃ ತತ್ತರಿಸತೊಡಗಿದೆ. ಬರ ಅಧ್ಯಯನ ತಂಡವನ್ನು ರಾಜ್ಯಕ್ಕೆ ಕಳುಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಡಿಕೆಶಿ ಪತ್ರ ಕೂಡ ಬರೆದಿದ್ದಾರೆ. ಈ ನಡುವೆ ಇಂದು (ಜುಲೈ 15) ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಮಹತ್ವದ ಸಭೆ ನಡೆದಿದ್ದು, ಕಾವೇರಿ ಜಲಾನಯನ ಪ್ರದೇಶದ ವಾಸ್ತವ ಸ್ಥಿತಿಯನ್ನು ಅಧಿಕಾರಿಗಳು ವಿವರಿಸಿದ್ದಾರೆ. ಹೀಗಿದ್ದರೂ ತಮ್ಮ ಪಾಲಿನ ನೀರು ಬಿಡುವಂತೆ ತಮಿಳುನಾಡು ವಾದಿಸಿದೆ. ಆದರೆ ಇದಕ್ಕೆ ಕೌಂಟರ್​​ ನೀಡಿರುವ ಕರ್ನಾಟಕ ಅದು ಸಾಧ್ಯವೇ ಇಲ್ಲ ಎಂದು ತಿಳಿಸಿದೆ.

ಕರ್ನಾಟಕದ ವಾದವೇನು?

ಕೆಆರ್​ಎಸ್​ನಿಂದ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲವೆಂದು CWRC ಸಭೆಯಲ್ಲಿ ಕರ್ನಾಟಕ ವಾದಿಸಿದೆ. ಕಾವೇರಿ ಕೊಳ್ಳದಲ್ಲಿ ಮಳೆ ಅಭಾವ ಆಗಿದೆ. ಜೂನ್ ತಿಂಗಳಲ್ಲಿ ಜಲಾಶಯಗಳಿಗೆ ಶೂನ್ಯ ಒಳಹರಿವಿದ್ದು, ಜುಲೈ ತಿಂಗಳಲ್ಲಿ ಹಲವೆಡೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ಬರಿದಾದ ಡ್ಯಾಂಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಈ ನಡುವೆ ಮಾನ್ಸೂನ್ ಮತ್ತೆ ಚುರುಕು ಪಡೆಯುವ ಯಾವ ಮುನ್ಸೂಚನೆ ಇಲ್ಲ. ಹೀಗಾಗಿ ಸದ್ಯ ಸಂಗ್ರಹವಿರುವ ನೀರನ್ನು ಮುಂದಿನ ಮಾನ್ಸೂನ್​ವರೆಗೂ ಕುಡಿಯಲು ಬಳಸಿಕೊಳ್ಳಬೇಕು. ಕರ್ನಾಟಕದಲ್ಲಿ ರೈತರು ಕೃಷಿಗೆ ನೀರು ಕೇಳುತ್ತಿದ್ದಾರೆ, ಆದರೆ ನಾವು ಬಿಡುತ್ತಿಲ್ಲ. ರಾಜ್ಯದಲ್ಲಿ ಸಂಪೂರ್ಣ ಬರ ಆವರಿಸಿದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ. ತಮಿಳುನಾಡಲ್ಲಿ ಮಳೆ ಬೀಳಲಿದೆ, ಆದ್ರೂ ಕೃಷಿಗೆ ನೀರು ಕೇಳ್ತಿದ್ದಾರೆ. ನಮಗೆ ಇಲ್ಲಿ ಕುಡಿಯಲೂ ನೀರಿಲ್ಲ ಎಂದು ಕರ್ನಾಟಕ ತಿಳಿಸಿದೆ.

ಇದನ್ನೂ ಓದಿ: ಕಾವೇರಿ ಜಲ ವಿವಾದ; ತಮಿಳುನಾಡು ವಿಧಾನಸಭೆ ವಿಪಕ್ಷ ನಾಯಕ ಉದಯನಿಧಿ ಆರೋಪಕ್ಕೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು

ನೀರು ಬಿಡುವಂತೆ ಸ್ಪಷ್ಟ ಸೂಚನೆ ನೀಡದ CWRC

ತಮ್ಮ ಪಾಲಿನ ನೀರಿಗಾಗಿ ತಮಿಳುನಾಡು ವಾದ ಮಂಡಿಸಿದ್ದರೂ ನೀರು ಬಿಡುವಂತೆ ಕರ್ನಾಟಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಸ್ಪಷ್ಟ ಸೂಚನೆ ನೀಡಿಲ್ಲ ಎನ್ನಲಾಗಿದೆ. CWRC ಸಭೆ ಮುಕ್ತಾಯದ ಬೆನ್ನಲ್ಲೇ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳ ಜೊತೆ ಸಭೆ ನಡಿಸಿದ್ದು, ಕಾವೇರಿ ನೀರು ನಿಯಂತ್ರಣ ಸಮಿತಿಯ ಮೀಟಿಂಗ್​​ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:04 pm, Wed, 15 July 26

Source link

ಬಿಡದಿ ಟೌನ್​ಶಿಪ್ ವಿವಾದ: ವಿರೋಧದ ಮಧ್ಯೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಬಿಡುಗಡೆ ಮಾಡಿದ ಸರ್ಕಾರ – Kannada News | Bidadi Township Controversy: Karnataka Government Issues Final Land Acquisition Notification Amid Opposition

ಬಿಡದಿ ಟೌನ್​ಶಿಪ್ ಯೋಜನೆImage Credit source: tv9 kannada

ರಾಮನಗರ, ಜುಲೈ 15: ಬಿಡದಿ ಟೌನ್​ಶಿಪ್​​​ ಯೋಜನೆ ವಿವಾದ (Bidadi Township Row) ಸಂಘರ್ಷ ಜೋರಾಗಿದೆ. ಇತ್ತೀಚೆಗೆ ಸರ್ವೆ ಮಾಡಲು ಬಂದಿದ್ದ ಜಿಬಿಎ ಅಧಿಕಾರಿಗಳಿಗೆ ಪ್ರತಿಭಟನಾನಿರತ ಮಹಿಳೆಯರು ಪೊರಕೆ ಏಟು ನೀಡಿದ್ದರು. ಕಲ್ಲು ತೂರಿ ಕಾರು ಜಖಂ ಗೊಳಿಸಿದ್ದರು. ಮತ್ತೊಂದೆಡೆ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಸಿಎಂ ಡಿಕೆ ಶಿವಕುಮಾರ್‌ಗೆ (DK Shivakumar) ಪತ್ರ ಬರೆಯುವ ಮೂಲಕ ಯೋಜನೆ ಕೈಬಿಡುವಂತೆ ಆಗ್ರಹಿಸಿದ್ದಾರೆ. ಇಷ್ಟೆಲ್ಲಾ ವಿರೋಧದ ಮಧ್ಯೆ ಇದೀಗ ಸರ್ಕಾರ ಎರಡನೇ ಹಂತದ ಅಂತಿಮ ಅಧಿಸೂಚನೆ  ಬಿಡುಗಡೆ ಮಾಡಿದೆ.

ರಾಮನಗರ ಜಿಲ್ಲೆಯ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎರಡನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಬಿಡದಿ ಹೋಬಳಿಯ ಪ್ರಮುಖ ಮೂರು ಗ್ರಾಮಗಳ ಒಟ್ಟು 2,550 ಎಕರೆ ಜಮೀನನ್ನು ಈ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಭೂಸ್ವಾಧೀನಕ್ಕೊಳಪಟ್ಟ ಗ್ರಾಮಗಳು ಮತ್ತು ವಿಸ್ತೀರ್ಣದ ವಿವರ

  • ಕೆಜಿ ಗೊಲ್ಲರಪಾಳ್ಯ: ಒಟ್ಟು 315 ಎಕರೆ (ಇದರಲ್ಲಿ 5 ಎಕರೆ ಕರಾಬು ಜಮೀನು ಸೇರಿದೆ).
  • ಬನ್ನಿಗಿರಿ ಗ್ರಾಮ: ಒಟ್ಟು 775 ಎಕರೆ 6 ಗುಂಟೆ (ಇದರಲ್ಲಿ 99 ಎಕರೆ ಕರಾಬು ಜಮೀನು ಸೇರಿದೆ).
  • ಅರಳಾಳುಸಂದ್ರ: ಒಟ್ಟು 1,460 ಎಕರೆ 21 ಗುಂಟೆ (ಇದರಲ್ಲಿ 30 ಎಕರೆ ಕರಾಬು ಜಮೀನು ಸೇರಿದೆ).

ಯಾರ ಆಸ್ತಿಯನ್ನೂ ಬಲವಂತವಾಗಿ ತೆಗೆದುಕೊಳ್ಳಲ್ಲ: ಸಿಎಂ ಡಿಕೆ ಶಿವಕುಮಾರ್​

ಇನ್ನು ಇತ್ತ ಬೆಂಗಳೂರಿನಲ್ಲಿ ಟೌನ್​ಶಿಪ್​ ಯೋಜನೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್​, ‘‘ ಬಿಡದಿ ಟೌನ್​ಶಿಪ್​ ನನ್ನ ಕನಸಿನ ಯೋಜನೆ ಅಲ್ಲ. ಈ ಯೋಜನೆಗೆ ನಾನು ಪಿತಾಮಹ ಆಗಲು ಇಷ್ಟಪಡುವುದಿಲ್ಲ. ಯಾರ ಆಸ್ತಿಯನ್ನೂ ಬಲವಂತವಾಗಿ ತೆಗೆದುಕೊಳ್ಳಲ್ಲ. ಸ್ವಇಚ್ಛೆಯಿಂದ ರೈತರು ಕೊಟ್ಟರೆ ಮಾತ್ರ ಭೂಸ್ವಾಧೀನ ಮಾಡುತ್ತೇವೆ. ಜಮೀನು ಕೊಡುವಂತೆ ರೈತರಿಗೆ ನಾವು ಒತ್ತಾಯ ಮಾಡಲ್ಲ’’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಡದಿ ಟೌನ್​​ಶಿಪ್​​ ವಿವಾದ: ಯೋಜನೆ ಕೈಬಿಡುವಂತೆ ಸಿಎಂಗೆ ಮಾಜಿ ಪ್ರಧಾನಿ ದೇವೇಗೌಡರಿಂದ ಪತ್ರ

‘‘ರಾಜ್ಯದ ವಿವಿಧ ಯೋಜನೆಗಳಿಗೆ ಭೂ ಸ್ವಾಧೀನ ಆಗಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಸ್ವಾಧೀನ ನಾನೇ ಮಾಡಿದ್ದೇನೆ. ಎಸ್​.ಎಂ.ಕೃಷ್ಣ, ಮೊಯ್ಲಿ ಕಾಲದಲ್ಲಿ ಏನಾಗಿದೆ ಎಲ್ಲಾ ನೋಡಿದ್ದೇವೆ. ಬಿಎಸ್​ ಯಡಿಯೂರಪ್ಪ ಕಾಲದಲ್ಲಿ ಹೆಚ್​ಡಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಯೋಜನೆಯನ್ನು ರೂಪಿಸಲಾಯಿತು. 5 ಉಪನಗರಗಳ ಯೋಜನೆ ಆಗಬೇಕೆಂದು ಸಮ್ಮಿಶ್ರ ಸರ್ಕಾರದಲ್ಲೇ HD ಕುಮಾರಸ್ವಾಮಿ ಯೋಜನೆ ಮಾಡಿದ್ದರು. ನಿನ್ನೆ ಗಲಾಟೆ ಆದ ಜಾಗಗಳನ್ನು ಹೊಸದಾಗಿ ಸೇರ್ಪಡೆ ಮಾಡಿದರು’’ ಎಂದಿದ್ದಾರೆ.

ಬಿಡದಿ ಟೌನ್​ಶಿಪ್​ ಯೋಜನೆಗೆ ನಾನು ಫೌಂಡೇಶನ್ ಹಾಕಿಲ್ಲ ಎಂದ ಸಿಎಂ

ಇನ್ನು ಟೌನ್​ಶಿಪ್​ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು, ‘‘ದೇವೇಗೌಡರು ನನಗೆ ಪತ್ರ ಬರೆದಿದ್ದಾರೆ. ಅವರ ಸುಪುತ್ರರ ಸುದ್ದಿಗೋಷ್ಠಿ ನೋಡಿದ್ದೇನೆ. ನಿನ್ನೆ ಬಿಡದಿಯಲ್ಲಿ ನಡೆದ ಘಟನೆಯಿಂದ ಮನಸ್ಸಿಗೆ ನೋವಾಗಿದೆ. ರಾಜಕೀಯ ಕುಮ್ಮಕ್ಕಿನಿಂದ ಈ ಘಟನೆ ನಡೆದಿದೆ. ರೈತರನ್ನು ತಪ್ಪು ದಾರಿಗೆ ಎಳೆಯುವ ಸಂಚು ನಡೆಯುತ್ತಿದೆ. ಬಿಡದಿ ಟೌನ್​ಶಿಪ್​ ಯೋಜನೆಗೆ ನಾನು ಫೌಂಡೇಶನ್ ಹಾಕಿಲ್ಲ’’ ಎಂದು ಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಏಕದಿನ ವಿಶ್ವಕಪ್​ನಿಂದ 2 ತಂಡಗಳನ್ನು ಕೈ ಬಿಡಲು ಮುಂದಾದ ಐಸಿಸಿ! – Kannada News | ICC explores 12 team ODI World Cup 2027

2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಿಂದ ಎರಡು ತಂಡಗಳನ್ನು ಕೈ ಬಿಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಗಂಭೀರ ಚಿಂತನೆ ನಡೆಸಿದೆ. ಇತ್ತೀಚೆಗೆ ಸ್ಕಾಟ್‌ಲ್ಯಾಂಡ್‌ನ ಎಡಿನ್‌ಬರ್ಗ್‌ನಲ್ಲಿ ನಡೆದ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಈ ಪ್ರಮುಖ ಪ್ರಸ್ತಾಪದ ಬಗ್ಗೆ ಆಡಳಿತ ಮಂಡಳಿ ಸುದೀರ್ಘ ಚರ್ಚೆ ನಡೆಸಿದ್ದು, ಈ ಚರ್ಚೆಯಂತೆ ಮುಂದಿನ ವಿಶ್ವಕಪ್​ನಿಂದ ಎರಡು ತಂಡಗಳನ್ನು ಕೈ ಬಿಡುವ ಸಾಧ್ಯತೆಯಿದೆ.

ಏಕಪಕ್ಷೀಯ ಪಂದ್ಯಗಳ ಕಡಿತ:

ವಿಶ್ವಕಪ್‌ನಲ್ಲಿ ತಂಡಗಳ ಸಂಖ್ಯೆ ಹೆಚ್ಚಾದಾಗ ಬಲಿಷ್ಠ ತಂಡಗಳು ಹಾಗೂ ತೀರಾ ಕೆಳಹಂತದ ತಂಡಗಳ ನಡುವೆ ಪಂದ್ಯಗಳು ನಡೆದು, ಅವು ತೀರಾ ನೀರಸ ಅಥವಾ ಏಕಪಕ್ಷೀಯವಾಗಿ ಮುಗಿಯುವ ಸಾಧ್ಯತೆ ಇರುತ್ತದೆ. ಇದು ಪ್ರಸಾರಕರಿಗೆ ಮತ್ತು ಜಾಹೀರಾತುದಾರರಿಗೆ ನಷ್ಟ ಉಂಟುಮಾಡಬಹುದು ಎಂಬ ಆತಂಕ ಐಸಿಸಿಗಿದೆ. ಇದೇ ಕಾರಣದಿಂದಾಗಿ ಎರಡು ತಂಡಗಳಿಗೆ ಕೋಕ್ ನೀಡಲು ಚಿಂತಿಸಲಾಗಿದೆ.

  • 2027ರ ಏಕದಿನ ವಿಶ್ವಕಪ್​ನಲ್ಲಿ ಒಟ್ಟು 14 ತಂಡಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿತ್ತು.
  • ಐಸಿಸಿ ಇದೀಗ ತನ್ನ ನಿರ್ಧಾರ ಬದಲಿಸಿ, 12 ತಂಡಗಳಿಗೆ ಮಾತ್ರ ಅವಕಾಶ ನೀಡಲು ಮುಂದಾಗಿದೆ.

ವಾಣಿಜ್ಯ ಲಾಭಕ್ಕಾಗಿ ಮಾಸ್ಟರ್ ಪ್ಲ್ಯಾನ್:

ಮೂಲಗಳ ಪ್ರಕಾರ, ಮುಂಬರುವ ಜಾಗತಿಕ ಪ್ರಸಾರ ಹಕ್ಕುಗಳ ಮಾತುಕತೆಯ ವೇಳೆ ಗರಿಷ್ಠ ವಾಣಿಜ್ಯ ಲಾಭ ಗಳಿಸುವುದು ಐಸಿಸಿಯ ಮುಖ್ಯ ಉದ್ದೇಶವಾಗಿದೆ. ಟೂರ್ನಿಯಲ್ಲಿ ರೋಮಾಂಚನವನ್ನು ಹೆಚ್ಚಿಸಲು ಹಳೆಯ ‘ಸೂಪರ್ ಸಿಕ್ಸ್’ ಹಂತದ ಬದಲಿಗೆ ಹೊಸದಾಗಿ ‘ಸೂಪರ್ ಸೆವೆನ್’ ಹಂತವನ್ನು ಪರಿಚಯಿಸಲು ಯೋಜಿಸಲಾಗುತ್ತಿದೆ.

ಈ ಹೊಸ ಮಾದರಿಯಿಂದಾಗಿ ಕ್ರಿಕೆಟ್ ಜಗತ್ತಿನ ಅತ್ಯಂತ ದೊಡ್ಡ ಹೈ-ವೋಲ್ಟೇಜ್ ಪಂದ್ಯವಾದ ‘ಭಾರತ ಮತ್ತು ಪಾಕಿಸ್ತಾನ’ ನಡುವಿನ ಹಣಾಹಣಿಗಳು ಹೆಚ್ಚು ಬಾರಿ ಎದುರಾಗುವ ಸಾಧ್ಯತೆ ಇರುತ್ತದೆ. ಇದು ದೂರದರ್ಶನ ಮತ್ತು ಡಿಜಿಟಲ್ ಪ್ರಸಾರಕರಿಗೆ ಭಾರಿ ಜಾಹೀರಾತು ಆದಾಯ ತಂದುಕೊಡಲಿದೆ.

ಸಹವರ್ತಿ ದೇಶಗಳ ಆಕ್ರೋಶ:

ಐಸಿಸಿಯ ಈ ಹಠಾತ್ ನಿರ್ಧಾರವು ಉದಯೋನ್ಮುಖ ಮತ್ತು ಸಹವರ್ತಿ ಕ್ರಿಕೆಟ್ ರಾಷ್ಟ್ರಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. 2019 ಮತ್ತು 2023 ರ ವಿಶ್ವಕಪ್‌ಗಳಲ್ಲಿ ಕೇವಲ 10 ತಂಡಗಳಿಗೆ ಮಾತ್ರ ಅವಕಾಶ ನೀಡಿ ವ್ಯಾಪಕ ಟೀಕೆಗೆ ಒಳಗಾಗಿದ್ದ ಐಸಿಸಿ, ಬಳಿಕ 2027 ರ ಆವೃತ್ತಿಗೆ 14 ತಂಡಗಳನ್ನು ಘೋಷಿಸಿತ್ತು.

ಆದರೆ ಈಗ ಮತ್ತೆ ತಂಡಗಳ ಸಂಖ್ಯೆಯನ್ನು 12 ಕ್ಕೆ ಇಳಿಸಲು ಮುಂದಾಗಿರುವುದು ಕ್ರಿಕೆಟ್‌ನ ಜಾಗತಿಕ ಬೆಳವಣಿಗೆಗೆ ಮಾರಕ ಎಂದು ಸಣ್ಣ ದೇಶಗಳ ಕ್ರಿಕೆಟ್ ಮಂಡಳಿಗಳು ಆಕ್ರೋಶ ಹೊರಹಾಕಿವೆ.

ಇದನ್ನೂ ಓದಿ: ಸೋಲರಿಯದ ಸರದಾರರು: 37 ಪಂದ್ಯಗಳ ‘ಸ್ಪೇನ್’ ಸಾಮ್ರಾಜ್ಯ!

ಹೊಸ ನಿಯಮದ ಪ್ರಕಾರ, ಜಾಗತಿಕ ಅರ್ಹತಾ ಸುತ್ತಿನಿಂದ ವಿಶ್ವಕಪ್‌ಗೆ ಆಯ್ಕೆಯಾಗುವ ತಂಡಗಳ ಸಂಖ್ಯೆ 4 ರಿಂದ ಕೇವಲ 2 ಕ್ಕೆ ಕುಸಿಯಲಿದೆ. ಆತಿಥೇಯ ರಾಷ್ಟ್ರಗಳಾದ ಸೌತ್ ಆಫ್ರಿಕಾ ಮತ್ತು ಝಿಂಬಾಬ್ವೆ ನೇರ ಅರ್ಹತೆ ಪಡೆದರೆ, ಮತ್ತೊಂದು ಆತಿಥೇಯ ದೇಶ ನಮೀಬಿಯಾ ಹಾಗೂ ಉಳಿದ ಸಹವರ್ತಿ ದೇಶಗಳು ಕೇವಲ 2 ಸ್ಥಾನಗಳಿಗಾಗಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ. ಇದರಿಂದಾಗಿ ಸಣ್ಣ ದೇಶಗಳು ವಿಶ್ವಕಪ್‌ನಿಂದ ಸಂಪೂರ್ಣವಾಗಿ ಹೊರಗುಳಿಯುವ ಅಪಾಯ ಎದುರಾಗಿದೆ.

Source link

ತಾಜ್​ ಮಹಲ್​ನಲ್ಲಿ ಅರ್ಜೆಂಟೀನಾ ಮಹಿಳೆಗೆ ಸೀರೆ ಉಡಿಸಿದ ಮಹಿಳಾ ಪೊಲೀಸ್ – Kannada News | Taj Mahal Saree Moment: UP Police Helps Argentine Tourist, Video Goes Viral

ಆಗ್ರಾ, ಜುಲೈ 15: ತಾಜ್​ಮಹಲ್(Taj Mahal)​ಗೆ ಬಂದಿದ್ದೀನಿ ಭಾರತೀಯ ಮಹಿಳೆಯಂತೆ ಸೀರೆಯುಟ್ಟು ಫೋಟೊ ತೆಗೆಸಿಕೊಳ್ಳಬೇಕೆಂಬುದು ಅರ್ಜೆಂಟೀನಾ ಮಹಿಳೆಯ ಆಸೆ. ಆದರೆ ಸೀರೆಯುಡಲು ಬರದೆ ಪರದಾಡುತ್ತಿದ್ದ ಆಕೆಯ ಸಹಾಯಕ್ಕೆ ಬಂದಿದ್ದು ಮಹಿಳೆ ಪೊಲೀಸ್(Police) ಕಾನ್​ಸ್ಟೆಬಲ್.ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕರ್ತವ್ಯದ ಜೊತೆಗೆ ಆತಿಥ್ಯ ಮೆರೆದ ಕಾನ್‌ಸ್ಟೆಬಲ್

ವಿದೇಶಿ ಮಹಿಳೆ ಸೀರೆ ಧರಿಸಲು ಮುಜುಗರ ಹಾಗೂ ಅನನುಕೂಲ ಅನುಭವಿಸುತ್ತಿರುವುದನ್ನು ತಾಜ್ ಭದ್ರತೆಯಲ್ಲಿದ್ದ ಮಹಿಳಾ ಕಾನ್‌ಸ್ಟೆಬಲ್ ಗುಡ್ಡಿ ದೇವಿ ತಕ್ಷಣವೇ ಗಮನಿಸಿದ್ದಾರೆ. ಯಾವುದೇ ಹಿಂಜರಿಕೆಯಿಲ್ಲದೆ ಮುಂದೆ ಬಂದ ಅವರು, ಆಕೆಯ ಸೀರೆಯನ್ನು ಅತ್ಯಂತ ಎಚ್ಚರಿಕೆಯಿಂದ ಸರಿಪಡಿಸಿ, ಆರಾಮದಾಯಕವಾಗಿ ಉಡಲು ನೆರವಾದರು.

ಸೀರೆ ಉಟ್ಟ ತಕ್ಷಣ ಆ ಅರ್ಜೆಂಟೀನಾ ಮಹಿಳೆಯ ಮುಖದಲ್ಲಿ ಮೂಡಿದ ಆತ್ಮವಿಶ್ವಾಸ ಮತ್ತು ಸಂತೋಷ ಅಪಾರವಾಗಿತ್ತು. ಭದ್ರತಾ ಅಧಿಕಾರಿಯ ಈ ಚಿಂತನಶೀಲ ಕೃತ್ಯಕ್ಕೆ ಮನಸೋತ ಪ್ರವಾಸಿ ಮಹಿಳೆ, ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ಕಾನ್‌ಸ್ಟೆಬಲ್ ಗುಡ್ಡಿ ದೇವಿಯವರ ಹೆಗಲ ಮೇಲೆ ಕೈಹಾಕಿ ಅತ್ಯಂತ ಸ್ಮರಣೀಯ ಛಾಯಾಚಿತ್ರಕ್ಕೆ ಪೋಸ್ ಕೊಟ್ಟಿದ್ದಾರೆ. ಉತ್ತರ ಪ್ರದೇಶ ಪೊಲೀಸರು ಈ ಸುಂದರ ಕ್ಷಣವನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ತಕ್ಷಣ ನೆಟ್ಟಿಗರು ಕರಗಿ ಹೋಗಿದ್ದಾರೆ.

ಮತ್ತಷ್ಟು ಓದಿ: ಅರೆಸ್ಟ್​​ ಆಗಿದ್ದ ಆರೋಪಿ 6 ಗಂಟೆಯಲ್ಲೇ ಪೊಲೀಸ್​ ಠಾಣೆಯಿಂದ ಎಸ್ಕೇಪ್! ನಿರ್ಲಕ್ಷ್ಯ ಆರೋಪ

‘ಅತಿಥಿ ದೇವೋ ಭವ’
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ತಾಜ್ ಮಹಲ್‌ಗೆ ಬರುವ ದೇಶೀಯ ಹಾಗೂ ವಿದೇಶಿ ಪ್ರವಾಸಿಗರಿಗೆ ಕೇವಲ ಭದ್ರತೆ ನೀಡುವುದಷ್ಟೇ ಅಲ್ಲದೆ, ಅಗತ್ಯವಿದ್ದಾಗ ಮಾನವೀಯ ನೆರವು ನೀಡಲು ಸಹ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಭಾರತದ ಸನಾತನ ಸಂಸ್ಕೃತಿಯಾದ ಅತಿಥಿ ದೇವೋ ಭವ ಮತ್ತು ವಸುಧೈವ ಕುಟುಂಬಕಂ  ಎಂಬುದಕ್ಕೆ ಈ ಘಟನೆ ಅತ್ಯುತ್ತಮ ಉದಾಹರಣೆಯಾಗಿದೆ.

ವಿಡಿಯೋ

ತಾಜ್ ಮಹಲ್‌ನಲ್ಲಿ ವಿದೇಶಿಗರ ಸೀರೆ ಕ್ರೇಜ್
ಇತ್ತೀಚಿನ ವರ್ಷಗಳಲ್ಲಿ ತಾಜ್ ಮಹಲ್‌ಗೆ ಭೇಟಿ ನೀಡುವ ಅಮೆರಿಕ, ಯುರೋಪ್ ಹಾಗೂ ಆಸ್ಟ್ರೇಲಿಯಾದ ಮಹಿಳಾ ಪ್ರವಾಸಿಗರು ಭಾರತದ ಸಾಂಪ್ರದಾಯಿಕ ಉಡುಗೆಯಾದ ಸೀರೆ ಮತ್ತು ಲೆಹೆಂಗಾಗಳನ್ನು ಧರಿಸಿ ತಾಜ್ ಮಹಲ್ ಮುಂಭಾಗದಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುವುದನ್ನು ಒಂದು ದೊಡ್ಡ ಹವ್ಯಾಸ ಹಾಗೂ ಟ್ರೆಂಡ್ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಆಗ್ರಾದ ಸ್ಮಾರಕದ ಸುತ್ತಮುತ್ತ ಸೀರೆಗಳನ್ನು ಬಾಡಿಗೆಗೆ ನೀಡುವ ಮತ್ತು ಉಡಿಸಲು ಸಹಾಯ ಮಾಡುವ ನೂರಾರು ಸಣ್ಣ ಉದ್ಯಮಗಳು ಸಹ ಬೆಳೆದುಬಂದಿವೆ.

ಸಾಮಾನ್ಯವಾಗಿ ಪೊಲೀಸ್ ಎಂದರೆ ಕಟ್ಟುನಿಟ್ಟಾದ, ಗಂಭೀರ ಮುಖಭಾವ ನೆನಪಾಗುತ್ತದೆ. ಆದರೆ, ಕರ್ತವ್ಯದ ನಡುವೆಯೂ ಮಹಿಳಾ ಕಾನ್‌ಸ್ಟೆಬಲ್ ತೋರಿದ ಈ ಮೃದು ಧೋರಣೆ ಮತ್ತು ಸಹಾನುಭೂತಿಯು ಜಾಗತಿಕ ಮಟ್ಟದಲ್ಲಿ ಭಾರತದ ಪ್ರವಾಸೋದ್ಯಮ ಹಾಗೂ ಸಾರ್ವಜನಿಕ ಸೇವೆಯ ಇಮೇಜ್ ಅನ್ನು ಮತ್ತಷ್ಟು ಬಲಪಡಿಸಿದೆ. ನೆಟ್ಟಿಗರು ಕೂಡ ಈ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಳಗಾವಿಯಲ್ಲಿ ಮತ್ತೊಂದು ಬಹುಕೊಟಿ ವಂಚನೆ ಪ್ರಕರಣ: 165 ಕೋಟಿ ರೂ. ದೋಖಾ – Kannada News | Belagavis ₹165 Crore Investment Scam: Apex Bizcorp LLP Owners Flee, Investors Duped

ಬೆಳಗಾವಿ, ಜುಲೈ 15: ನಗರದಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಹೆಚ್ಚಿ‌ನ ಬಡ್ಡಿ ಆಮಿಷವೊಡ್ಡಿ ಗ್ರಾಹಕರಿಗೆ 165 ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದೆ. ಅಪೆಕ್ಸ್​ ಬಿಜ್ ಕಾರ್ಪ್ LLP  ಸಂಸ್ಥೆಯಿಂದ ಮೋಸ ನಡೆದಿರೋದಾಗಿ ಬೆಳಗಾವಿ ನಗರ ಪೊಲೀಸ್ ಕಮಿಷನರ್​ ಭೂಷಣ್ ಬೊರಸೆ ಹೇಳಿಕೆ ನೀಡಿದ್ದಾರೆ. ವಂಚನೆ ಬಗ್ಗೆ ಅಶೋಕ ಬಿಸಗುಪ್ಪಿ ಎಂಬವರು ಜುಲೈ 13ರಂದು ಬೆಳಗಾವಿಯ ಟಿಳಕವಾಡಿ ಠಾಣೆ ದೂರು ನೀಡಿದ್ದರು. ಅಪೆಕ್ಸ್ ಕಂಪನಿಯಲ್ಲಿ ಸಾವಿರಾರು ಜನರು ಇನ್ವೆಸ್ಟ್ ಮಾಡಿದ್ದು, ಶೇ.4ರಷ್ಟು ಬಡ್ಡಿ ಆಮಿಷವೊಡ್ಡಿ ಜನರಿಂದ ಹಣ ಸಂಗ್ರಹಿಸಿದ್ದಾರೆ. ಹ್ಯಾಂಡ್ ಲೋನ್ ಅಗ್ರಿಮೆಂಟ್ ಮತ್ತು ಚೆಕ್ ಕೊಟ್ಟಿದ್ದಾರೆ. ಆದರೆ ಹಣ ವಾಪಸ್​​ ನೀಡದೆ ಪರಾರಿಯಾಗಿದ್ದಾರೆ. ಹೂಡಿಕೆದಾರರ ದೂರಿನನ್ವಯ ಎಫ್ಐಆರ್ ದಾಖಲಾಗಿದ್ದು, ಕಾಶಿನಾಥ್​ ವಾಗ್ಮರೆ ಹಾಗೂ ಗಣೇಶ್​​ ಬಂಡಾರಿ ದಂಪತಿಗಳು ಇದರಲ್ಲಿ ಭಾಗಿಯಾಗಿದ್ದಾರೆ. 50 ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿರುವುದರಿಂದ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗುತ್ತೆ. ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Apply Now: ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್; ಬ್ಯಾಂಕ್ ಆಫ್ ಬರೋಡಾದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ – Kannada News | Bank of Baroda AVP Recruitment 2026: Specialist Officer Jobs, Apply Online Now!

ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್Image Credit source: Getty Images

ಬ್ಯಾಂಕಿಂಗ್ ವಲಯದಲ್ಲಿ ಉನ್ನತ ಮಟ್ಟದ ಕಾರ್ಯನಿರ್ವಾಹಕ ಹುದ್ದೆಯಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಬ್ಯಾಂಕ್ ಆಫ್ ಬರೋಡಾ ಒಂದು ಸುವರ್ಣಾವಕಾಶವನ್ನು ನೀಡಿದೆ. ಬ್ಯಾಂಕ್ ಆಫ್ ಬರೋಡಾ ತನ್ನ ಹಿಂದಿನ ನೇಮಕಾತಿ ಅಭಿಯಾನದ ಸಮಯದಲ್ಲಿ ಖಾಲಿ ಉಳಿದಿದ್ದ ಸಹಾಯಕ ಉಪಾಧ್ಯಕ್ಷ (AVP) ಮಟ್ಟದ ವಿವಿಧ ತಜ್ಞ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಜುಲೈ 11 ರಿಂದಲೇ ಪ್ರಾರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಭರ್ತಿ ಮಾಡಲಾಗುತ್ತಿರುವ ಪ್ರಮುಖ ಹುದ್ದೆಗಳು:

ಬ್ಯಾಂಕ್ ಆಫ್ ಬರೋಡಾ ತನ್ನ ಕಾರ್ಯನಿರ್ವಾಹಕ ವಿಭಾಗವನ್ನು ಬಲಪಡಿಸಲು ಈ ಕೆಳಗಿನ ಪ್ರಮುಖ ರಂಗಗಳಲ್ಲಿ ಸಹಾಯಕ ಉಪಾಧ್ಯಕ್ಷರನ್ನು (AVPs) ನೇಮಕ ಮಾಡಿಕೊಳ್ಳುತ್ತಿದೆ:

  • ಡೇಟಾ ವಿಶ್ಲೇಷಕ / ಡೇಟಾ ವಿಜ್ಞಾನಿ (Data Analyst / Data Scientist)
  • ಯೋಜನಾ ನಿರ್ವಹಣಾ ತಜ್ಞರು (Project Management Specialists)
  • Agile Transformation Specialists
  • ವ್ಯವಹಾರ ಹಣಕಾಸು ವಿಶ್ಲೇಷಕರು (Business Finance Analysts)

ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಷರತ್ತುಗಳು:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಐಟಿ, ಡೇಟಾ ಸೈನ್ಸ್, ಎಂಸಿಎ, ಎಂಬಿಎ ಅಥವಾ ಪಿಜಿಡಿಎಂ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಹುದ್ದೆಗಳಿಗೆ ಅನುಗುಣವಾಗಿ ಅನುಭವದ ಮಾನದಂಡಗಳು ಈ ಕೆಳಗಿನಂತಿವೆ:

  • ಡೇಟಾ ಸೈನ್ಸ್ ಮತ್ತು ಯೋಜನಾ ನಿರ್ವಹಣೆ ಹುದ್ದೆಗಳಿಗೆ: ಸುಮಾರು 8 ವರ್ಷಗಳ ಸಂಬಂಧಿತ ಕೆಲಸದ ಅನುಭವದ ಅಗತ್ಯವಿರುತ್ತದೆ.
  • ಅಗೈಲ್ ಟ್ರಾನ್ಸ್‌ಫರ್ಮೇಷನ್ ಮತ್ತು ಬಿಸಿನೆಸ್ ಫೈನಾನ್ಸ್ ಹುದ್ದೆಗಳಿಗೆ: ಕನಿಷ್ಠ 5 ವರ್ಷಗಳ ಸಂಬಂಧಿತ ಕೆಲಸದ ಅನುಭವದ ಅಗತ್ಯವಿರುತ್ತದೆ.
  • ಹಣಕಾಸು ಸೇವೆಗಳು, ಬ್ಯಾಂಕಿಂಗ್ ಮತ್ತು ಸಲಹಾ (Consulting) ರಂಗದಲ್ಲಿ ಮೊದಲೇ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಹೆಚ್ಚುವರಿ ಆದ್ಯತೆ ನೀಡಲಾಗುವುದು.

ಅಭ್ಯರ್ಥಿಗಳ ಆಯ್ಕೆ ವಿಧಾನ:

ಅಭ್ಯರ್ಥಿಗಳನ್ನು ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡದೆ, ವಿವಿಧ ಹಂತಗಳ ಪರಿಶೀಲನೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿಗಳ ಪರಿಶೀಲನೆ (Screening), ಆನ್‌ಲೈನ್ ಪರೀಕ್ಷೆ, ಸೈಕೋಮೆಟ್ರಿಕ್ ಪರೀಕ್ಷೆ, ಗುಂಪು ಚರ್ಚೆ (Group Discussion) ಮತ್ತು ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಬ್ಯಾಂಕ್ ತನ್ನ ಅಗತ್ಯಕ್ಕೆ ತಕ್ಕಂತೆ ಆಯ್ಕೆ ಪ್ರಕ್ರಿಯೆಯನ್ನು ಮಾರ್ಪಡಿಸುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಉದ್ಯೋಗ 2026: 10ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ

ಅರ್ಜಿ ಸಲ್ಲಿಸುವ ಸುಲಭ ವಿಧಾನ:

ಆಸಕ್ತ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ bankofbaroda.bank.in ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಅಲ್ಲಿ ತಮ್ಮ ವೈಯಕ್ತಿಕ ಮಾಹಿತಿ ಹಾಗೂ ಶೈಕ್ಷಣಿಕ ವಿವರಗಳನ್ನು ನಮೂದಿಸಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಕೊನೆಯದಾಗಿ ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಿ, ಫಾರ್ಮ್ ಅನ್ನು ಸಲ್ಲಿಸಬೇಕು. ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳುವುದನ್ನು ಮರೆಯದಿರಿ. ನೇಮಕಾತಿಗೆ ಸಂಬಂಧಿಸಿದ ಮುಂದಿನ ಎಲ್ಲಾ ಅಧಿಕೃತ ಪ್ರಕಟಣೆಗಳನ್ನು ಬ್ಯಾಂಕಿನ ವೆಬ್‌ಸೈಟ್‌ದಲ್ಲಿಯೇ ಪ್ರಕಟಿಸಲಾಗುತ್ತದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಯಾಗಿ ಜವಾಬ್ದಾರಿಯುತ ಹುದ್ದೆಯನ್ನು ನಿಭಾಯಿಸುವ ಕನಸು ಹೊಂದಿರುವ ತಜ್ಞರಿಗೆ ಇದು ಸೂಕ್ತ ವೇದಿಕೆಯಾಗಿದೆ. ಅರ್ಹ ಅಭ್ಯರ್ಥಿಗಳು ತಡಮಾಡದೆ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಮೂಲಕ ಇಂದೇ ಅರ್ಜಿ ಸಲ್ಲಿಸಿ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

‘ದಿ ಆಡಸ್ಸಿ’ ಅಡ್ವಾನ್ಸ್ ಬುಕಿಂಗ್: ಐಮ್ಯಾಕ್ಸ್ ಟಿಕೆಟ್​​ಗಳು ಸೋಲ್ಡ್ ಔಟ್ – Kannada News | The Odyssey advance booking status in India

ಕ್ರಿಸ್ಟೊಫರ್ ನೋಲನ್ (christopher nolan) ನಿರ್ದೇಶಿಸಿ ಹಲವು ಸೂಪರ್ ಸ್ಟಾರ್ ಹಾಲಿವುಡ್ ನಟ-ನಟಿಯರು ನಟಿಸಿರುವ ‘ದಿ ಆಡಸ್ಸಿ’ ಸಿನಿಮಾ ಬಿಡುಗಡೆಗೆ ಎರಡು ದಿನಗಳಷ್ಟೆ ಬಾಕಿ ಇದೆ. ಕೆಲ ದಿನಗಳ ಹಿಂದಷ್ಟೆ ಕ್ರಿಸ್ಟೊಫರ್ ನೋಲನ್ ಅವರು ಮುಂಬೈನ ಐಮ್ಯಾಕ್ಸ್ ನಲ್ಲಿ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಿದ್ದರು. ಆದರೆ ಸಿನಿಮಾ ಅಧಿಕೃತವಾಗಿ ಜುಲೈ 17ರಂದು ಭಾರತದಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿ ಈಗಾಗಲೇ ಹಲವು ದಿನಗಳಾಗಿದ್ದು, ಬಿಡುಗಡೆ ದಿನ ಹತ್ತಿರ ಬಂದಷ್ಟೂ ಬುಕಿಂಗ್ ಜೋರಾಗುತ್ತಿದೆ.

‘ದಿ ಆಡಸ್ಸಿ’ ಸಿನಿಮಾ ಬಿಡುಗಡೆಗೆ ಎರಡು ದಿನಗಳಿರುವಾಗ ಮಲ್ಟಿಪ್ಲೆಕ್ಸ್​​ಗಳಲ್ಲಿ 75,000 ಟಿಕೆಟ್‌ಗಳನ್ನು ಮುಂಗಡವಾಗಿ ಮಾರಾಟ ಮಾಡಲಾಗಿದೆ. ಇದು ಭಾರಿ ದೊಡ್ಡ ಸಂಖ್ಯೆ ಅಲ್ಲದಿದ್ದರೂ ಹಾಲಿವುಡ್ ಸಿನಿಮಾ ಒಂದು ಹೀಗೆ 75 ಸಾವಿರ ಟಿಕೆಟ್ ಮುಂಗಡವಾಗಿ ಮಾರಾಟ ಮಾಡಿರುವುದು ಸಣ್ಣ ಸಾಧನೆ ಅಲ್ಲ. ಬಿಡುಗಡೆಗೆ ಇನ್ನೂ ಎರಡು ದಿನಗಳು ಇರುವ ಕಾರಣದಿಂದಾಗಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

‘ದಿ ಆಡಸ್ಸಿ’ ಸಿನಿಮಾವನ್ನು ಸಂಪೂರ್ಣವಾಗಿ ಐಮ್ಯಾಕ್ಸ್ ರೀಲ್ ಬಳಸಿ, ಐಮ್ಯಾಕ್ಸ್ ಕ್ಯಾಮೆರಾನಲ್ಲಿ ಶೂಟ್ ಮಾಡಲಾಗಿದ್ದು, ಹೀಗೆ ಸಂಪೂರ್ಣ ಐಮ್ಯಾಕ್ಸ್ ಬಳಸಿ ಶೂಟ್ ಮಾಡಿದ ಮೊದಲ ಸಿನಿಮಾ ಎನಿಸಿಕೊಂಡಿದೆ. ಸಿನಿಮಾವನ್ನು ಐಮ್ಯಾಕ್ಸ್ ಸ್ಕ್ರೀನ್​​​ಗಳಿಗಾಗಿಯೇ ಮಾಡಲಾಗಿದೆ. ಹಾಗಾಗಿ ಪ್ರೇಕ್ಷಕರು ಸಹ ಐಮ್ಯಾಕ್ಸ್ 2ಡಿ, ಐಮ್ಯಾಕ್ಸ್ 2ಡಿ ಸ್ಕ್ರೀನ್​​ಗಳಲ್ಲಿ ಮಾತ್ರವೇ ಟಿಕೆಟ್ ಬುಕಿಂಗ್ ಮಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಪರಿಪೂರ್ಣ ಐಮ್ಯಾಕ್ಸ್ ಸ್ಕ್ರೀನ್​​ಗಳ ಸಂಖ್ಯೆ ಬಹಳ ಕಡಿಮೆ ಇದೆ. ಹಾಗಾಗಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ತುಸು ಕಡಿಮೆ ಆಗಿರುವ ಸಾಧ್ಯತೆಯೂ ಇದೆ. ಪ್ರೇಕ್ಷಕರು ಈ ಸಿನಿಮಾವನ್ನು ಐಮ್ಯಾಕ್ಸ್​​​ನಲ್ಲಿಯೇ ನೋಡಲು ಕಾತರರಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ:ಹೊಸ ಹಾಲಿವುಡ್ ಸಿನಿಮಾ ಘೋಷಿಸಿದ ನಟಿ ಪ್ರಿಯಾಂಕಾ ಚೋಪ್ರಾ

ಬೆಂಗಳೂರಿನಲ್ಲಿ ಆರು ಐಮ್ಯಾಕ್ಸ್ 2ಡಿ ಸ್ಕ್ರೀನುಗಳಲ್ಲಿ ‘ದಿ ಆಡಸ್ಸಿ’ಗೆ ಸಿನಿಮಾ ಪ್ರದರ್ಶಿಸಲಾಗುತ್ತಿದ್ದು, ಈ ಆರು ಸ್ಕ್ರೀನ್​​ಗಳ ಮೊದಲ ದಿನದ ಎಲ್ಲ ಟಿಕೆಟ್​​ಗಳು ಮಾರಾಟ ಆಗಿವೆ. ಆದರೆ ಐಮ್ಯಾಕ್ಸ್ ಹೊರತುಪಡಿಸಿ ಬೇರೆ ಸ್ಕ್ರೀನ್​​ಗಳ ಶೋಗಳು ಮಾರಾಟ ಆಗಿಲ್ಲ. ಬೆಂಗಳೂರಿನಲ್ಲಿ ಐಮ್ಯಾಕ್ಸ್​ ಸ್ಕ್ರೀನ್​​ಗಳ ಮುಂದಿನ ಮೂರು ದಿನದ ಟಿಕೆಟ್​​ಗಳು ಮುಂಗಡವಾಗಿ ಸೋಲ್ಡ್ ಔಟ್ ಆಗಿವೆ. ಮುಂಬೈನಲ್ಲೂ ಇದೇ ಪರಿಸ್ಥಿತಿ ಇದೆ. ಐಮ್ಯಾಕ್ಸ್ ಹೊರತಾಗಿ ಬೇರೆ ಸ್ಕ್ರೀನ್​​ಗಳಲ್ಲಿ ಜನ ಈ ಸಿನಿಮಾ ನೋಡಲು ಆಸಕ್ತಿ ತೋರುತ್ತಿಲ್ಲ. ಹಾಗಾಗಿ ಸಿನಿಮಾದ ಮುಂಗಡ ಬುಕಿಂಗ್ ತುಸು ನಿಧಾನಕ್ಕೆ ನಡೆಯುತ್ತಿದೆ.

‘ದಿ ಆಡಸ್ಸಿ’ ಸಿನಿಮಾ ಅನ್ನು ಕ್ರಿಸ್ಟೊಫರ್ ನೋಲನ್ ನಿರ್ದೇಶಿಸಿದ್ದು, ಸಿನಿಮಾನಲ್ಲಿ ಮ್ಯಾಟ್ ಡೇಮನ್, ಸ್ಪೈಡರ್​ಮ್ಯಾನ್ ಖ್ಯಾತಿಯ ಟಾಮ್ ಹಾಲಂಡ್, ಅನ್ನಾ ಹಾತ್​​ವೇ, ಜೆಂಡೆಯಾ, ರಾಬರ್ಟ್ ಪ್ಯಾಟಿನ್​ಸನ್, ಟ್ರೈವಿಸ್ ಸ್ಕಾಟ್ ಇನ್ನೂ ಹಲವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಏರ್ ಇಂಡಿಯಾ ಅಪಘಾತ: ಬ್ಲ್ಯಾಕ್ ಬಾಕ್ಸ್ ಆಡಿಯೋ ಬಹಿರಂಗಪಡಿಸಲು ಸಾಧ್ಯವಿಲ್ಲ, ಸುಪ್ರೀಂಗೆ ತನಿಖಾ ಸಂಸ್ಥೆಯ ಉತ್ತರ – Kannada News | Air India Crash CVR: AAIB Tells SC Audio is Confidential Under Law

ನವದೆಹಲಿ, ಜುಲೈ 15: ಅಹಮದಾಬಾದಿನಲ್ಲಿ 2025ರ ಜೂನ್ 12ರಂದು ನಡೆದ ಏರ್ ಇಂಡಿಯಾ(Air India) ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ವಿಮಾನದ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಆಡಿಯೋ ಸೇರಿದಂತೆ ಯಾವುದೇ ನಿರ್ಣಾಯಕ ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸುಪ್ರೀಂ ಕೋರ್ಟ್‌ಗೆ ಅಧಿಕೃತವಾಗಿ ತಿಳಿಸಿದೆ.

ಅಪಘಾತದಲ್ಲಿ ಮೃತಪಟ್ಟ ಪೈಲಟ್‌ನ ತಂದೆ ಪುಷ್ಕರ್ ರಾಜ್ ಸಭರ್ವಾಲ್ ಅವರು ತನಿಖೆಯ ವಿವರಗಳನ್ನು ಕೋರಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಎಎಐಬಿ ಸುಪ್ರೀಂ ಕೋರ್ಟ್‌ನಲ್ಲಿ ಈ ಅಫಿಡವಿಟ್ ಸಲ್ಲಿಸಿದೆ. ಇಂತಹ ಸೂಕ್ಷ್ಮ ಮಾಹಿತಿಯನ್ನು ಬಿಡುಗಡೆ ಮಾಡುವುದನ್ನು ಭಾರತೀಯ ಹಾಗೂ ಅಂತಾರಾಷ್ಟ್ರೀಯ ವಾಯುಯಾನ ಕಾನೂನುಗಳು ಕಟ್ಟುನಿಟ್ಟಾಗಿ ನಿಷೇಧಿಸುತ್ತವೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಗೌಪ್ಯತೆ ಏಕೆ ಅಗತ್ಯ? ಅಫಿಡವಿಟ್‌ನಲ್ಲೇನಿದೆ?
ವಿಮಾನ ಅಪಘಾತದ ಸಮಯದಲ್ಲಿ ಪೈಲಟ್‌ಗಳು ಆಡುವ ಕೊನೆಯ ಮಾತುಗಳು, ವಿಮಾನದ ಒಳಗಿನ ದೃಶ್ಯಾವಳಿಗಳು, ಸಿಬ್ಬಂದಿ ಸದಸ್ಯರ ಹೇಳಿಕೆಗಳು ಮತ್ತು ಬಲಿಪಶುಗಳ ವೈಯಕ್ತಿಕ ಮಾಹಿತಿಯನ್ನು ಜಗತ್ತಿನೆದುರು ಇಡುವುದು ಕಾನೂನುಬಾಹಿರ ಎಂದು ಎಎಐಬಿ ಹೇಳಿದೆ.

ನ್ಯಾಯಯುತ ತನಿಖೆಗೆ ಪೂರಕ: ಯಾವುದೇ ಬಾಹ್ಯ ಒತ್ತಡಗಳಿಲ್ಲದೆ, ಅತ್ಯಂತ ಪಾರದರ್ಶಕ ಹಾಗೂ ನ್ಯಾಯಯುತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಈ ಕಾನೂನು ನಿರ್ಬಂಧಗಳು ಜಾರಿಯಲ್ಲಿವೆ.

ಒಪ್ಪಂದಗಳ ಉಲ್ಲಂಘನೆ: ವಿಮಾನ ಅಪಘಾತಗಳ ತನಿಖೆಯು ಕೇವಲ ಒಂದು ದೇಶದ ಪೊಲೀಸ್ ತನಿಖೆಯಂತಲ್ಲ. ಇದು ಜಾಗತಿಕ ವಾಯುಯಾನ ಸಂಸ್ಥೆಯ (ICAO) ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಒಳಪಟ್ಟಿರುತ್ತದೆ ಎಂದು ಸಂಸ್ಥೆ ವಿವರಿಸಿದೆ.

ಜಾಗತಿಕ ನಿಯಮಗಳು ಏನು ಹೇಳುತ್ತವೆ?
ವಿಮಾನ ಅಪಘಾತಗಳ ತನಿಖೆಗೆ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಅನುಬಂಧ 13ರ ಪ್ರಕಾರ ಪ್ರಮಾಣಿತ ಕಾರ್ಯವಿಧಾನಗಳನ್ನು ನಿಗದಿಪಡಿಸಲಾಗಿದೆ. ಭಾರತದಲ್ಲಿ ಇದರ ಅನ್ವಯ ವಿಮಾನ ನಿಯಮಗಳು, 2025 ರ ಪ್ರಕಾರ ತನಿಖೆ ನಡೆಯುತ್ತದೆ.

ಬಹುದೇಶಗಳ ಪಾಲ್ಗೊಳ್ಳುವಿಕೆ: ಘಟನೆ ನಡೆದ ದೇಶವು ತನಿಖೆಯ ಜವಾಬ್ದಾರಿ ಹೊರಬೇಕಾಗುತ್ತದೆ. ಇದರಲ್ಲಿ ವಿಮಾನ ನೋಂದಣಿಯಾದ ದೇಶ, ವಿಮಾನಯಾನ ಸಂಸ್ಥೆಯ ದೇಶ, ವಿಮಾನವನ್ನು ವಿನ್ಯಾಸಗೊಳಿಸಿದ ಮತ್ತು ಅದನ್ನು ತಯಾರಿಸಿದ ದೇಶಗಳು ಭಾಗವಹಿಸುತ್ತವೆ.

ಸಾರ್ವಜನಿಕ ಪ್ರದರ್ಶನಕ್ಕಿಲ್ಲ: ಈ ಎಲ್ಲಾ ದೇಶಗಳ ತಾಂತ್ರಿಕ ಪ್ರತಿನಿಧಿಗಳು ಒಟ್ಟಾಗಿ ತನಿಖೆ ನಡೆಸುವುದರಿಂದ, ಬ್ಲ್ಯಾಕ್ ಬಾಕ್ಸ್‌ನ ರಹಸ್ಯಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದು ಅಂತಾರಾಷ್ಟ್ರೀಯ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಎಎಐಬಿ ವಾದಿಸಿದೆ.

ಏನಿದು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR)
ವಿಮಾನದ ಸುರಕ್ಷತೆಯಲ್ಲಿ ಬ್ಲ್ಯಾಕ್ ಬಾಕ್ಸ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಎರಡು ಭಾಗಗಳಿರುತ್ತವೆ

ಫ್ಲೈಟ್ ಡೇಟಾ ರೆಕಾರ್ಡರ್ (FDR): ಇದು ವಿಮಾನದ ವೇಗ, ಎತ್ತರ, ಇಂಜಿನ್ ಕಾರ್ಯಕ್ಷಮತೆ ಮುಂತಾದ ತಾಂತ್ರಿಕ ಮಾಹಿತಿಯನ್ನು ಸಂಗ್ರಹಿಸುತ್ತದೆ.

ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR): ಇದು ಪೈಲಟ್‌ಗಳು ಪರಸ್ಪರ ಆಡುವ ಮಾತುಗಳು, ಏರ್ ಟ್ರಾಫಿಕ್ ಕಂಟ್ರೋಲ್ (ATC) ಜೊತೆಗಿನ ಸಂಭಾಷಣೆ ಹಾಗೂ ಕಾಕ್‌ಪಿಟ್‌ನಲ್ಲಿ ಕೇಳಿಬರುವ ಪ್ರತಿಯೊಂದು ಸಣ್ಣ ಶಬ್ದವನ್ನೂ ರೆಕಾರ್ಡ್ ಮಾಡುತ್ತದೆ.

ಅಪಘಾತದ ಕೊನೆಯ ಕ್ಷಣಗಳಲ್ಲಿ ಪೈಲಟ್‌ಗಳು ಅನುಭವಿಸುವ ಮಾನಸಿಕ ಒತ್ತಡ ಹಾಗೂ ಪರಿಸ್ಥಿತಿಯ ಗಂಭೀರತೆ ಈ ಆಡಿಯೋದಲ್ಲಿ ಇರುವುದರಿಂದ, ಮಾನವೀಯ ನೆಲೆಗಟ್ಟಿನಲ್ಲಿ ಹಾಗೂ ವಾಯುಯಾನ ರಂಗದ ಸುರಕ್ಷತೆಯ ಹಿತದೃಷ್ಟಿಯಿಂದ ಜಗತ್ತಿನ ಯಾವುದೇ ದೇಶದಲ್ಲೂ ಸಿವಿಆರ್ (CVR) ಆಡಿಯೋವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದಿಲ್ಲ. ಕೇವಲ ತನಿಖಾಧಿಕಾರಿಗಳು ಮಾತ್ರ ಇದನ್ನು ಆಲಿಸಿ ಅಪಘಾತಕ್ಕೆ ತಾಂತ್ರಿಕ ಕಾರಣ ಏನೆಂಬುದನ್ನು ಪತ್ತೆಹಚ್ಚುತ್ತಾರೆ. ಸುಪ್ರೀಂ ಕೋರ್ಟ್ ಈ ವರದಿಯನ್ನು ಪೂರ್ಣವಾಗಿ ಪರಿಶೀಲಿಸಿದ ನಂತರ ತನ್ನ ಮುಂದಿನ ಆದೇಶವನ್ನು ಪ್ರಕಟಿಸಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಪಾರ್ಟ್‌ಮೆಂಟ್ ಮಾಲೀಕರೊಂದಿಗೆ ಸಿಎಂ ಸಂವಾದ: ಆಸ್ತಿಯ ಸಂಪೂರ್ಣ ಹಕ್ಕು ಮಾಲೀಕರಿಗಿರಬೇಕು ಎಂದ ಡಿ.ಕೆ.ಶಿವಕುಮಾರ್ – Kannada News | DK Shivakumar Interacts with Apartment Associations, Promises Absolute Ownership Rights to Buyers

ಬೆಂಗಳೂರು, ಜುಲೈ 15: “ಕಷ್ಟಪಟ್ಟು ಗಳಿಸಿದ ಆಸ್ತಿಯ ಸಂಪೂರ್ಣ ಹಕ್ಕು ಅದರ ಮಾಲೀಕರಿಗೇ ಸೇರಬೇಕು. ಆಸ್ತಿ ಖರೀದಿ ಮತ್ತು ನಿರ್ವಹಣೆಯಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಮ್ಮ ಸರ್ಕಾರಕ್ಕೆ ಸಂಪೂರ್ಣ ಅರಿವಿದೆ” ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬುಧವಾರ ವಿಕಾಸಸೌಧದಲ್ಲಿ ನಡೆದ ‘ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಕರಡು ವಿಧೇಯಕ 2026’ ಕುರಿತಾದ ಅಪಾರ್ಟ್‌ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗಿನ ಮಹತ್ವದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ. ಈ ಮಹತ್ವದ ಸಂವಾದ ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಕೆ.ಜೆ. ಜಾರ್ಜ್, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಹಾಗೂ ಅಪಾರ್ಟ್‌ಮೆಂಟ್ ಸಂಘಗಳ ಒಕ್ಕೂಟದ ಅಧ್ಯಕ್ಷ ರಾಜೀವ್ ಗೌಡ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇ-ಖಾತಾ ಕ್ರಾಂತಿ ಹಾಗೂ ದಾಖಲೆಗಳ ಸುಲಭ ವರ್ಗಾವಣೆ

“ಜನರು ಕಷ್ಟಪಟ್ಟು ತಲೆಯ ಮೇಲೆ ಸೂರು ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ. ಮಾಲೀಕರು ಆಸ್ತಿಯನ್ನು ಯಾವುದೇ ಅಡೆತಡೆಯಿಲ್ಲದೆ ಅನುಭವಿಸಬೇಕು ಎನ್ನುವುದು ನಮ್ಮ ಆಶಯ. ಇದಕ್ಕಾಗಿ ರಾಜ್ಯದಲ್ಲಿ ಮನೆ ಬಾಗಿಲಿಗೆ ಇ-ಖಾತಾ ನೀಡುವ ಕ್ರಾಂತಿಕಾರಿ ವ್ಯವಸ್ಥೆ ತರಲಾಗಿದೆ. ಬೆಂಗಳೂರಿನ 40 ಲಕ್ಷ ಆಸ್ತಿಗಳ ಪೈಕಿ ಈಗಾಗಲೇ 26 ಲಕ್ಷ ಆಸ್ತಿಗಳಿಗೆ ಇ-ಖಾತಾ ಮಾಡಿಕೊಡಲಾಗಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ (STP) ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ನಿವಾರಣೆಗೆ ಸುಧಾರಣೆ ತರಲಾಗಿದ್ದು, ಕೆಲವು ಡೆವಲಪರ್‌ಗಳು ಸೃಷ್ಟಿಸುವ ಗೊಂದಲಗಳನ್ನು ಬಗೆಹರಿಸಿ, ಮಾಲೀಕರಿಗೆ ದಾಖಲಾತಿಗಳ ಸರಾಗ ವರ್ಗಾವಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು” ಎಂದು ಸಿಎಂ ಭರವಸೆ ನೀಡಿದ್ದಾರೆ.

ಸಲಹೆ ನೀಡಲು ಆಗಸ್ಟ್ 6 ರವರೆಗೆ ಕಾಲಾವಕಾಶ

ಆಸ್ತಿ ಕೊಳ್ಳುವವರಿಗೆ ಅನುಕೂಲ ಕಲ್ಪಿಸಲು ಈ ನೂತನ ವಿಧೇಯಕವನ್ನು ತರಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಕಾನೂನಿನ ಚೌಕಟ್ಟಿನಲ್ಲಿರುವ ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ಆಗಸ್ಟ್ 6 ರವರೆಗೆ ನಗರಾಭಿವೃದ್ಧಿ ಸಚಿವರಿಗೆ ಬರೆದು ಕಳುಹಿಸಬಹುದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಹಾಗೂ ಮರು ಅಭಿವೃದ್ಧಿ

ಆಡಳಿತ ವಿಕೇಂದ್ರೀಕರಣ ಹಾಗೂ ಈಸ್ ಆಫ್ ಬಿಸಿನೆಸ್‌ಗಾಗಿ ನಗರದಲ್ಲಿ ಐದು ಪ್ರತ್ಯೇಕ ಕಾರ್ಪೊರೇಷನ್‌ಗಳನ್ನು ರಚಿಸಲಾಗಿದೆ. ಬೆಂಗಳೂರಿನಲ್ಲಿ ಹೈ-ರೈಸ್ (ಎತ್ತರದ) ಕಟ್ಟಡಗಳ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದ್ದು, ರಸ್ತೆ ವಿಸ್ತರಣೆಗೂ ಕ್ರಮ ಕೈಗೊಳ್ಳಲಾಗುತ್ತಿದೆ. ನಗರದಲ್ಲಿ 132 ಕಿಲೋಮೀಟರ್ ಉದ್ದದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪೆರಿಫೆರಲ್ ವರ್ತುಲ ರಸ್ತೆ) ನಿರ್ಮಾಣವಾಗುತ್ತಿದ್ದು, ಭೂಸ್ವಾಧೀನಕ್ಕಾಗಿ ರೈತರಿಗೆ ದೇಶದಲ್ಲೇ ಗರಿಷ್ಠ ಪರಿಹಾರ ನೀಡಲಾಗುತ್ತಿದೆ. ಇದರೊಂದಿಗೆ ಹಳೆಯ ಕಟ್ಟಡಗಳ ಮರು ಅಭಿವೃದ್ಧಿ (Re-development) ವಿಚಾರದಲ್ಲಿರುವ ಸಮಸ್ಯೆಗಳ ನಿವಾರಣೆಗೆ ಹಾಗೂ ಬಡವರು ಮನೆ ಕಟ್ಟಿಕೊಳ್ಳಲು ಅಗತ್ಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಇದನ್ನೂ ಓದಿ ಕಾಂಗ್ರೆಸ್ ಮನೆಯಲ್ಲಿ ಗರಿಗೆದರಿಂದ ಸಂಪುಟ ವಿಸ್ತರಣೆ ಕಸರತ್ತು: ಆರ್. ಅಶೋಕ್ ಲೇವಡಿ

ವಿದೇಶಿ ಹೂಡಿಕೆದಾರರ ನೆಚ್ಚಿನ ತಾಣ ಬೆಂಗಳೂರು

ದಾವೋಸ್ ಪ್ರವಾಸದ ವೇಳೆ ವಿಶ್ವದ ಪ್ರಮುಖ ಹೂಡಿಕೆದಾರರು ಬೆಂಗಳೂರಿನಲ್ಲಿ ಬಂಡವಾಳ ಹೂಡಲು ತೀವ್ರ ಆಸಕ್ತಿ ತೋರಿಸಿದ್ದಾರೆ. ಮುಂಬೈಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಆಸ್ತಿಗಳ ದರ ನಿಯಂತ್ರಣದಲ್ಲಿದೆ. ಹೀಗಾಗಿ ವಿಶ್ವದ ನಾಯಕರು ನಮ್ಮ ನಗರದತ್ತ ನೋಡುತ್ತಿದ್ದಾರೆ. ಭವಿಷ್ಯದಲ್ಲಿ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣವೂ ಬರಲಿದ್ದು, ಉದ್ಯಮ ಜಗತ್ತಿನ ಪ್ರಮುಖ ಕೇಂದ್ರವಾಗಲಿದೆ. ನಗರದ ರಸ್ತೆ ಗುಂಡಿ ಮುಚ್ಚಲು ಈಗಾಗಲೇ 4000 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಸಿಎಂ ವಿವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಷಾಢ ಶುಕ್ರವಾರಕ್ಕೆ ದಿನಗಣನೆ: ಚಾಮುಂಡಿ ಬೆಟ್ಟಕ್ಕೆ ಬರುವ ವಿಐಪಿಗಳಿಗೆ ವಿಶೇಷ ದರ್ಶನ ವ್ಯವಸ್ಥೆ, ಸಮಯ ನಿಗದಿ – Kannada News | Ashada Friday 2026: Mysuru Chamundi Hill Introduces VIP Darshan Timings, Special Entry Rules Announced

ಮೈಸೂರು, ಜುಲೈ 15: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಜುಲೈ 17 ರಿಂದ ಆಷಾಢ ಶುಕ್ರವಾರದ ಪೂಜೆ ಆರಂಭವಾಗಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು (ಬುಧವಾರ) ಬೆಟ್ಟಕ್ಕೆ ಭೇಟಿ ನೀಡಿ ಪೂರ್ವಭಾವಿ ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಅನುಷ್ಠಾನವನ್ನು ಪರಿಶೀಲಿಸಿದರು. ವಿಐಪಿ ದರ್ಶನಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಬೆಳಗ್ಗೆ 5:30ರಿಂದ 9:30ರವರೆಗೆ ಮಾತ್ರ ವಿಐಪಿಗಳಿಗೆ ದರ್ಶನಕ್ಕೆ ಅವಕಾಶವಿರುತ್ತದೆ. ಶಿಫಾರಸ್ಸು ಪತ್ರ ತಂದವರಿಗೆ ಕೂಡ ಬೆಟ್ಟಕ್ಕೆ ವಾಹನ ಪ್ರವೇಶವನ್ನು ನಿಷೇಧಿಸಲಾಗಿದೆ. ಎಂಎಲ್‌ಎಗಳು, ನ್ಯಾಯಾಧೀಶರು, ಸಚಿವರು ಹಾಗೂ ಅವರ ಕುಟುಂಬಸ್ಥರಿಗೆ ಮಾತ್ರ ಬೆಟ್ಟದ ಮೇಲೆ ವಾಹನ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಶಿಫಾರಸ್ಸು ಪತ್ರಗಳೊಂದಿಗೆ ಬರುವವರು ಲಲಿತ ಮಹಲ್ ಬಳಿ ವಾಹನ ನಿಲ್ಲಿಸಿ, ಅಲ್ಲಿಂದ ಬಸ್‌ನಲ್ಲಿ ಬೆಟ್ಟಕ್ಕೆ ಬರಬೇಕಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಬಾರಿ 300 ರೂಪಾಯಿ ವಿಶೇಷ ದರ್ಶನ ಟಿಕೆಟ್ ಅನ್ನು ರದ್ದುಪಡಿಸಲಾಗಿದೆ. ಸಾಮಾನ್ಯ ಭಕ್ತರಿಗೆ ಸರಳವಾಗಿ ಮತ್ತು ಸುಗಮವಾಗಿ ದರ್ಶನ ಸಿಗುವುದಕ್ಕೆ ಆದ್ಯತೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಮೊದಲ ವಾರದ ಅನುಭವದ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಅಗತ್ಯ ಬದಲಾವಣೆಗಳನ್ನು ಪರಿಗಣಿಸಲಾಗುವುದು ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version