ಗ್ರಾಹಕರಿಗೆ DND ಆಯ್ಕೆ ತೋರಿಸಿ, ಬ್ಲಾಕ್ಡ್ ಬ್ಯಾಡ್ಜ್ ಅಲ್ಲ; ಟ್ರೂಕಾಲರ್ಗೆ ಸರ್ಕಾರ ನಿರ್ದೇಶನ – Kannada News | Trai directs Truecaller to Show DND Do Not Disturb choice, but not Frequently Blocked tag
ನವದೆಹಲಿ, ಜುಲೈ 19: ಟ್ರೂಕಾಲರ್ ಆಪ್‌ನಲ್ಲಿ ಇನ್‌ಕಮಿಂಗ್ ಕರೆಗಳಿಗೆ ತೋರಿಸುವ “Frequently Blocked” (ಅತಿಯಾಗಿ ಬ್ಲಾಕ್ ಮಾಡಲಾದ ನಂಬರ್) ಎಂಬ ಲೇಬಲ್ ಅಥವಾ ಟ್ಯಾಗ್ ಅನ್ನು ತೋರಿಸುವುದನ್ನು ನಿಲ್ಲಿಸುವಂತೆ ಟ್ರಾಯ್ (Trai) ಸೂಚಿಸಿದೆ. ಇಂತಹ ಟ್ಯಾಗ್‌ಗಳು ಬಳಕೆದಾರರಿಗೆ ಗೊಂದಲವನ್ನು ಉಂಟುಮಾಡಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ನಿಜವಾದ (Genuine) ಕರೆಗಳನ್ನು ಸಹ ಬಳಕೆದಾರರು ಬ್ಲಾಕ್ ಮಾಡಲು ಕಾರಣವಾಗಬಹುದು ಎಂಬುದು ಟ್ರಾಯ್‌ನ ಆತಂಕ. ಈ ಟ್ಯಾಗ್‌ಗಳ ಬದಲಿಗೆ, ಬಳಕೆದಾರರಿಗೆ ಆ ಕರೆ ಅಥವಾ ನಂಬರ್ ಬಗ್ಗೆ ‘ಡೂ ನಾಟ್ ಡಿಸ್ಟರ್ಬ್’…