Headlines

ಬಲೂಚಿಸ್ತಾನ ಸ್ವಾತಂತ್ರ್ಯ ಘೋಷಣೆ; ಈ ಪ್ರಾಂತ್ಯ ಕೈತಪ್ಪಿದರೆ ಪಾಕಿಸ್ತಾನದ ಅರ್ಧಶಕ್ತಿ ಕುಂದಿದಂತಾಗುತ್ತಾ? – Kannada News | Balochistan declares independence, know why this matter worries Pakistan more

ಬಲೂಚಿಸ್ತಾನದ ಬುಗ್ತಿ ಹೋರಾಟಗಾರರುImage Credit source: Getty Images ಇಸ್ಲಾಮಾಬಾದ್, ಜುಲೈ 19: ಭಾರತವನ್ನು ನೂರು ಹೋಳುಗಳಾಗಿ ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದ ಪಾಕಿಸ್ತಾನ ಈಗ ಆಂತರಿಕ ಸಮಸ್ಯೆಗಳಿಂದ ಜರ್ಝರಿತವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಬಲೂಚಿಸ್ತಾನದಲ್ಲಿ ಪ್ರತ್ಯೇಕತೆಯ ಕೂಗು ಪ್ರತಿಧ್ವನಿಸುತ್ತಲೇ ಇರುತ್ತದೆ. ಇದೇ ವೇಳೆ, ಬಲೂಚಿಸ್ತಾನ (Balochistan) ಮೂರು ದಿನಗಳ ಹಿಂದೆ ಸ್ವಾತಂತ್ರ್ಯ ಘೋಷಿಸಿಕೊಂಡಿದೆ. ದಶಕಗಳಿಂದ ನಡೆಯುತ್ತಿರುವ ಸಶಸ್ತ್ರ ಹೋರಾಟದ ಮುಂದುವರಿದ ಭಾಗವಾಗಿ ಈ ಘೋಷಣೆ ನಡೆದಿದೆ. ಈ ಬಲೂಚಿಸ್ತಾನದ ಸ್ವಾತಂತ್ರ್ಯದ ವಿಷಯವು ಪಾಕಿಸ್ತಾನದ ಆಂತರಿಕ…

Read More

ಬೆಂಗಳೂರಿಗರ ಲೂಟಿ ಮಾಡುತ್ತಿರುವ ತಮಿಳು ಸಿನಿಮಾ ‘ಜನ ನಾಯಗನ್’ – Kannada News | Jana Naayagan Bengaluru Ticket Price Loot: Vijay Movie Premier Shows Shock Fans

ತಮಿಳುನಾಡು ಸಿಎಂ ವಿಜಯ್ (Vijay) ನಟನೆಯ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಆಗಲಿದೆ. ಜುಲೈ 23ಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದ್ದು, ಇದು ವಿಜಯ್ ಅವರ ಕೊನೆಯ ಸಿನಿಮಾ ಎಂದು ಚಿತ್ರತಂಡ ಮೊದಲೇ ಪ್ರಚಾರ ಮಾಡಿತ್ತು. ಸಹಜವಾಗಿಯೇ ಸಿನಿಮಾ ಅಭಿಮಾನಿಗಳು, ವಿಜಯ್ ಅವರ ಅಭಿಮಾನಿಗಳು ಸಿನಿಮಾ ವೀಕ್ಷಣೆಗೆ ಮುಗಿ ಬೀಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಬೇರೆ ನಗರಗಳಲ್ಲಿ ಸಾಧಾರಣವಾಗಿರುವ ಟಿಕೆಟ್ ದರ, ಬೆಂಗಳೂರಿನಲ್ಲಿ ಮಾತ್ರ ಗಗನಕ್ಕೇರಿದೆ. ಆ ಮೂಲಕ ಬೆಂಗಳೂರಿಗರ ಲೂಟಿ ಮಾಡುತ್ತಿದ್ದಾನೆ, ‘ಜನ…

Read More

‘ಟಾಕ್ಸಿಕ್’ ಟ್ರೈಲರ್ ಬಿಡುಗಡೆಗೆ ನಿಗದಿಯಾಯ್ತು ದಿನಾಂಕ, ಸ್ಥಳ ಎಲ್ಲಿ? – Kannada News | Toxic movie trailer may release on August 28

‘ಟಾಕ್ಸಿಕ್’ (Toxic) ಪ್ರಸ್ತುತ ಭಾರತದ ಬಹು ನಿರೀಕ್ಷಿತ ಸಿನಿಮಾ. ಯಶ್ ನಟಿಸಿ, ಸಹ ನಿರ್ಮಾಣ ಸಹ ಮಾಡಿರುವ ಈ ಸಿನಿಮಾಕ್ಕಾಗಿ ದೇಶ, ವಿದೇಶಗಳ ಸಿನಿಮಾ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾದ ಟೀಸರ್, ಪೋಸ್ಟರ್, ಹಾಡುಗಳು ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ. ಜೊತೆಗೆ ಸಿನಿಮಾದ ಕತೆ ಏನಿರಬಹುದೆಂಬ ಕುತೂಹಲವನ್ನೂ ಹುಟ್ಟು ಹಾಕಿವೆ. ಈಗಾಗಲೇ ಪೋಸ್ಟರ್ ಇನ್ನಿತರೆ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ಟ್ರೈಲರ್ ಬಿಡುಗಡೆಗೂ ಮುಹೂರ್ತ ನಿಗದಿ ಪಡಿಸಿದ್ದಾರೆ. ಕೆಲ ಮೂಲಗಳ…

Read More

ದೈಹಿಕ ಕಿರುಕುಳ ಆರೋಪ; ಅಭಿಷೇಕ್ ಪೊರೆಲ್ ಬಂಧನಕ್ಕೆ ಹೈಕೋರ್ಟ್ ಆದೇಶ – Kannada News | Abhishek Porel Arrest: Kolkata HC Orders Custody in physical attack, Threat Case

ಕಳೆದ ತಿಂಗಳಷ್ಟೇ, ಮಹಿಳೆಯೊಬ್ಬರು, ಅಭಿಷೇಕ್ ಪೊರೆಲ್ ಅವರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದು, ಮದುವೆಯ ಸುಳ್ಳು ಭರವಸೆ ನೀಡಿ ಅಭಿಷೇಕ್ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದರು. ಇದೀಗ ಮದುವೆಯಾಗುವಂತೆ ಕೇಳಲು ಹೋದರೆ ಅಭಿಷೇಕ್ ನನ್ನ ಮೇಲೆ ಹಲ್ಲೆ ಮಾಡಿದ್ದು, ಬೆದರಿಕೆಯನ್ನು ಹಾಕಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ(PC-PTI). Source link

Read More

ಕಷ್ಟಕಾಲಕ್ಕೆ ಚಿನ್ನ ಎನ್ನುತ್ತಾರೆ; ಬಿಕ್ಕಟ್ಟಿನಲ್ಲಿ ಬಂಗಾರದ ದರ ಏರುವ ಬದಲು ಇಳಿಯುತ್ತಿರುವುದು ಯಾಕೆ? ಇಲ್ಲಿದೆ ಸಂಭಾವ್ಯ ಕಾರಣಗಳು – Kannada News | Gold Rates rise when chips are down, but why the prices of yellow metal going down during West Asia crisis

ನವದೆಹಲಿ, ಜುಲೈ 19: ಜಾಗತಿಕವಾಗಿ ಏನಾದರೂ ಬಿಕ್ಕಟ್ಟು (Crisis) ಅಥವಾ ಯುದ್ಧದ ಪರಿಸ್ಥಿತಿ ಎದುರಾದರೆ ಹೂಡಿಕೆದಾರರು ಸಾಮಾನ್ಯವಾಗಿ ಸುರಕ್ಷಿತ ಹೂಡಿಕೆಯಾಗಿ ಚಿನ್ನ ಮತ್ತು ಬೆಳ್ಳಿಯ ಕಡೆಗೆ ಮುಖ ಮಾಡುತ್ತಾರೆ. ಇದರಿಂದ ಚಿನ್ನದ ಬೆಲೆ (Gold Price) ಹೆಚ್ಚಾಗುತ್ತದೆ. ಆದರೆ, ಇತ್ತೀಚಿನ ಪಶ್ಚಿಮ ಏಷ್ಯಾ ಸಂಘರ್ಷದ ಅವಧಿಯಲ್ಲಿ ಚಿನ್ನದ ಬೆಲೆ ಸುಮಾರು 27% ರಷ್ಟು ಮತ್ತು ಬೆಳ್ಳಿಯ ಬೆಲೆ ಬರೋಬ್ಬರಿ 52% ರಷ್ಟು ಕುಸಿದಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲೂ ಚಿನ್ನದ ಬೆಲೆ ಕುಸಿಯಲು ಕಾರಣವೇನು? ಹಣಕಾಸು ತಜ್ಞರ ಪ್ರಕಾರ,…

Read More

ನಾಗಾಲ್ಯಾಂಡ್‌ನಲ್ಲಿ ಭೀಕರ ಭೂಕುಸಿತ; 4 ಜನ ಸಾವು, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ – Kannada News | 4 Killed In Massive Landslide In Nagaland, More Feared Dead

ಗುವಾಹಟಿ, ಜುಲೈ 19: ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೀಕರ ಭೂಕುಸಿತ (Landlside) ಸಂಭವಿಸಿದ್ದು, ಮಕ್ಕಳು ಸೇರಿದಂತೆ 4 ಜನರು ಸಾವನ್ನಪ್ಪಿದ್ದಾರೆ. ಭಾರಿ ಮಳೆಯಿಂದಾಗಿ ಈ ಪ್ರದೇಶದಲ್ಲಿ ದಿಢೀರ್ ಪ್ರವಾಹವೂ ಉಂಟಾಗಿದೆ. ಭೂಕುಸಿತದ ಭೀಕರತೆಗೆ ಹಲವು ಮನೆಗಳು ಕೊಚ್ಚಿಹೋಗಿವೆ. ಮಣ್ಣಿನ ರಾಶಿಯ ಅಡಿಯಲ್ಲಿ ಸಿಲುಕಿಕೊಂಡಿರಬಹುದಾದ ಜನರಿಗಾಗಿ ರಕ್ಷಣಾ ಸಿಬ್ಬಂದಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಭೂಕುಸಿತದ ಬೆನ್ನಲ್ಲೇ ಈ ಪ್ರದೇಶಕ್ಕೆ ಭಾರಿ ಪ್ರಮಾಣದ ನೀರು ನುಗ್ಗುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಗಿದೆ ಎಂದು ಪೊಲೀಸ್ ಮೂಲಗಳು…

Read More

ಅಮ್ಮ-ತಂದೆಯ ಬಾಂಧ್ಯವ್ಯವನ್ನ ಬಿಚ್ಚಿಟ್ಟ ಪುತ್ರಿ ಅನುಸೂಯ – Kannada News | Daughter anasuya Talks about Her demise Mother Chennamma

ಬೆಂಗಳೂರು, (ಜುಲೈ 19): ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ (Chennamma Deve Gowda) ಅವರ ಅಂತ್ಯಕ್ರಿಯೆ ನಾಳೆ (ಜುಲೈ 20) ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದ ಸಮೀಪವಿರುವ ಕ್ಯಾತನಹಳ್ಳಿ ಗ್ರಾಮದ ಜಮೀನಿನಲ್ಲಿ ನಡೆಯಲಿದೆ. ಬೆಂಗಳೂರಿನ ನಿವಾಸದಿಂದ ಚೆನ್ನಮ್ಮರ ಪಾರ್ಥಿವ ಶರೀರವನ್ನು ಕೊಂಡೊಯ್ಯುವ ವೇಳೆ ದೇವೇಗೌಡ್ರು ಬಿಕ್ಕಿ ಬಿಕ್ಕ ಅತ್ತರು. ಇನ್ನು ಪುತ್ರಿ ಅನುಸೂಯ ತಾಯಿ ಚೆನ್ನಮ್ಮ ಬಗ್ಗೆ ಟಿವಿ9ನ ಜೊತೆ ಹಂಚಿಕೊಂಡಿದ್ದು, ಅಮ್ಮ ಮುತ್ತೈದೆ ಸಾವನ್ನ ಬಯಸಿದ್ದರು. ಅದರಂತೆ ಮುತ್ತೈದೆಯಾಗಿ ಪ್ರಾಣ ಬಿಟ್ಟಿದ್ದಾರೆ. ಒಂದು ಕಡೆ…

Read More

IND vs ENG: ಲಾರ್ಡ್ಸ್‌ನಲ್ಲಿ ಆಂಗ್ಲರ ಆರ್ಭಟ; 36 ವರ್ಷಗಳ ದಾಖಲೆ ಉಡೀಸ್

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಆತಿಥೇಯ ಇಂಗ್ಲೆಂಡ್​ಗೆ ಭರ್ಜರಿ ಆರಂಭ ಸಿಕ್ಕಿದೆ. ಆರಂಭಿಕರಾದ ಜಾಕೋಬ್ ಬೆಥೆಲ್ ಹಾಗೂ ಬೆನ್ ಡಕೆಟ್ ಈಗಾಗಲೇ ಅರ್ಧಶತಕ ಬಾರಿಸಿದ್ದು ಶತಕದ ಸನಿಹದಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಭಾರತದ ಅನಾನುಭವಿ ಬೌಲಿಂಗ್ ವಿಭಾಗವನ್ನು ಸರಿಯಾಗಿ ದಂಡಿಸುತ್ತಿರುವ ಇಂಗ್ಲೆಂಡ್‌ನ ಆರಂಭಿಕರು ಮೈದಾನದಾದ್ಯಂತ ರನ್‌ಗಳ ಮಳೆ ಸುರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಇಂಗ್ಲೆಂಡ್‌ ತಂಡ 30 ಓವರ್​ಗಳ ಅಂತ್ಯಕ್ಕೆ ಯಾವುದೇ…

Read More

Parliament Monsoon Session 2026: ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ; ಎನ್​ಡಿಎ ಮುಂದಿದೆ ಹಲವು ಸವಾಲು – Kannada News | Parliament Monsoon Session 2026 to Be Held from July 20 to August 13

ನವದೆಹಲಿ, ಜುಲೈ 19: ಸಂಸತ್ತಿನ ಮುಂಗಾರು ಅಧಿವೇಶನವು (Monsoon Session 2026) ಜುಲೈ 20ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಭಾರಿ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗಿದೆ. ಕೇಂದ್ರ ಸರ್ಕಾರವು ಹಲವು ಪ್ರಮುಖ ಮಸೂದೆಗಳನ್ನು ಅಂಗೀಕರಿಸಲು ಸಜ್ಜಾಗಿದ್ದರೆ, ಇತ್ತ ವಿರೋಧ ಪಕ್ಷಗಳು ವಿವಿಧ ರಾಜಕೀಯ ಮತ್ತು ಆಡಳಿತಾತ್ಮಕ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ಧತೆ ನಡೆಸಿವೆ. ಈ ಬಾರಿಯ ಮುಂಗಾರು ಅಧಿವೇಶನವು ಪೇಪರ್ ಲೀಕ್, ಭ್ರಷ್ಟಾಚಾರದ ಆರೋಪಗಳು ಮತ್ತು ಪಕ್ಷಾಂತರದ ವಿವಾದಗಳ ಹಿನ್ನೆಲೆಯಲ್ಲಿ…

Read More

‘ಜನ ನಾಯಗನ್’ ಬಿಡುಗಡೆ ಮುಂಚೆ ತಮಿಳುನಾಡು ಚಿತ್ರಮಂದಿರಗಳಿಗೆ ಎಚ್ಚರಿಕೆ – Kannada News | Jana Nayagan movie release, producer gave warnings to theater owners

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ವರ್ಷದ ಮೊದಲ ತಿಂಗಳಲ್ಲೇ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಹಲವಾರು ಅಡೆ-ತಡೆಗಳ ಬಳಿಕ ಕೊನೆಗೂ ಜುಲೈ 23 ರಂದು ರಿಲೀಸ್ ಆಗುತ್ತಿದೆ. ಸಿಎಂ ವಿಜಯ್ ಅವರ ಕೊನೆಯ ಸಿನಿಮಾ ಇದೆಂದು ಪ್ರಚಾರ ಮಾಡಲಾಗಿದ್ದ ಕಾರಣ, ಭಾರಿ ಸಂಖ್ಯೆಯ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬೀಳುವ ಸಾಧ್ಯತೆ ಇದೆ. ಹೀಗಾಗಿ ಸಿನಿಮಾ ಬಿಡುಗಡೆಗೆ ಮುಂಚೆ ತಮಿಳುನಾಡಿನ ಚಿತ್ರಮಂದಿರಗಳಿಗೆ ಕೆಲವು ಶಿಸ್ತಿನ ಎಚ್ಚರಿಕೆಗಳನ್ನು…

Read More