Headlines

ಚೆನ್ನಮ್ಮ ದೇವೇಗೌಡ ನಿಧನ: ಸೋಮವಾರ ಈ ತಾಲೂಕಿನ ಶಾಲೆ-ಕಾಲೇಜ್​ಗಳಿಗೆ ರಜೆ ಘೋಷಣೆ! – Kannada News | Holiday declared for school and colleges in holenarasipura On July 20 Over Chennamma Devegowda funeral

ಹಾಸನ, (ಜುಲೈ 19) : ಮಾಜಿ ಪ್ರಧಾನಿ ದೇವೇಗೌಡರ (HD Deve Gowda) ಪತ್ನಿ ಚೆನ್ನಮ್ಮ (Chennamma Devegowda) ನಿಧನರಾಗಿದ್ದು, ನಾಳೆ ಅಂದರೆ ಜುಲೈ 20ರಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಶ್ರೀರಂಗನಾಥಸ್ವಾಮಿ ಬೆಟ್ಟದ ತಪ್ಪಲು ಪ್ರದೇಶದಲ್ಲಿರುವ ಕ್ಯಾತನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಹಾಸನ ಜಿಲ್ಲಾಡಳಿತ ಸಹ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ (school and colleges) ರಜೆ ಘೋಷಣೆ ಮಾಡಿದೆ. ಹೌದು..ಸೋಮವಾರ…

Read More

IND vs ENG: 47 ವರ್ಷಗಳ ಹಳೆಯ ದಾಖಲೆ ಮುರಿದ ಬೆನ್ ಡಕೆಟ್

ಇಂಗ್ಲೆಂಡ್‌ನ ಆರಂಭಿಕ ಆಟಗಾರ ಬೆನ್ ಡಕೆಟ್ ಕ್ರಿಕೆಟ್‌ನ ಐತಿಹಾಸಿಕ ಮೆಕ್ಕಾದ ಲಾರ್ಡ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಭಾರತದ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ, ಡಕೆಟ್ ಬರೋಬ್ಬರಿ 141 ರನ್​ಗಳ ಐತಿಹಾಸಿಕ ಇನ್ನಿಂಗ್ಸ್ ಆಡುವ ಮೂಲಕ 47 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಹಾಗೆಯೇ ಆರಂಭಿಕ ಜೊತೆಯಾಟದ ಮೂಲಕ 36 ವರ್ಷಗಳ ಹಳೆಯ ದಾಖಲೆಯನ್ನು ಧ್ವಂಸಗೊಳಿಸಿದರು(PC-PTI). ಬೆನ್ ಡಕೆಟ್ ಆರಂಭದಿಂದಲೂ ಉತ್ತಮ ಲಯದಲ್ಲಿ ಕಾಣಿಸಿಕೊಂಡರು. ಹೀಗಾಗಿ ಡಕೆಟ್ ಲಾರ್ಡ್ಸ್‌ನಲ್ಲಿ ಸ್ಮರಣೀಯ ಶತಕ ಸಿಡಿಸಿದಲ್ಲೆ 135 ಎಸೆತಗಳಲ್ಲಿ 141 ರನ್ ಬಾರಿಸುವ…

Read More

ಭಾರತದಲ್ಲಿ ಬ್ಲಾಕ್ ಬಸ್ಟರ್ ಆಗುವ ಹಾದಿಯಲ್ಲಿ ಹಾಲಿವುಡ್ ಸಿನಿಮಾ ‘ದಿ ಆಡಸ್ಸಿ’, ಗಳಿಸಿರುವುದೆಷ್ಟು? – Kannada News | The Odyssey movie box office collection in India

ವಿಶ್ವ ಸಿನಿಮಾ (Cinema) ರಂಗದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದ್ದ ‘ದಿ ಆಡಸ್ಸಿ’ ಬಿಡುಗಡೆ ಆಗಿ ಎರಡು ದಿನಗಳಾಗಿವೆ. ಭಾರತದಲ್ಲೂ ಸಹ ಈ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದವು. ಭಾರತದ ಪ್ರಮುಖ ಮೆಟ್ರೊ ನಗರಗಳಲ್ಲಿ ಮಾತ್ರವೇ ‘ದಿ ಆಡಸ್ಸಿ’ ಸಿನಿಮಾ ಬಿಡುಗಡೆ ಆಗಿದೆಯಾದರೂ, ಸಿನಿಮಾ ಭರ್ಜರಿ ಗಳಿಕೆಯನ್ನೇ ಮಾಡುತ್ತಿದೆ. ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ದಾಖಲೆ ಮೊತ್ತವನ್ನು ‘ದಿ ಆಡಸ್ಸಿ’ ಸಿನಿಮಾ ಬಾಚಿಕೊಳ್ಳುತ್ತಿದೆ. ಅದರ ಜೊತೆಗೆ ಭಾರತದಲ್ಲಿಯೂ ಸಹ ಬಾಕ್ಸ್ ಆಫೀಸ್​​ನಲ್ಲಿ ಭರವಸೆಯ ಓಟ ಓಡುತ್ತಿದೆ ಈ ಸಿನಿಮಾ….

Read More

ದೇವೇಗೌಡರ ಪತ್ನಿ ಚೆನ್ನಮ್ಮ ಅಂತಿಮ ದರ್ಶನ ಪಡೆದ ಡಾಲಿ, ದೊಡ್ಡಣ್ಣ: ವಿಡಿಯೋ – Kannada News | Daali Dhananjay and Doddanna pay’s last respect to Chennamma Deve Gowda

ಮಾಜಿ ಪ್ರಧಾನಿ ದೇವೇಗೌಡ (Deve Gowda) ಅವರ ಪತ್ನಿ ಚೆನ್ನಮ್ಮ ಅವರು ನಿನ್ನೆ (ಜುಲೈ 18) ನಿಧನ ಹೊಂದಿದ್ದಾರೆ. ಅವರ ಅಂತಿಮ ದರ್ಶನವನ್ನು ಇಂದು ಸಾವಿರಾರು ಜನ ಸಾರ್ವಜನಿಕರು, ರಾಜಕಾರಣಿಗಳು, ಸಿನಿಮಾ ಪ್ರಮುಖರು ಮಾಡಿದ್ದಾರೆ. ನಟ ಡಾಲಿ ಧನಂಜಯ್ ಸಹ ಇಂದು (ಜುಲೈ 19) ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದರು. ಹಿರಿಯ ನಟ ದೊಡ್ಡಣ್ಣ ಸಹ ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದುಕೊಂಡರು. ಈ ವೇಳೆ ಇಬ್ಬರೂ ನಟರು, ಚೆನ್ನಮ್ಮನವರ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದರು….

Read More

ಷೇರುಬಜಾರಿನಲ್ಲಿ ಈ ವಾರ ಕಲರವ; 7 ಹೊಸ ಐಪಿಒಗಳು ಶುರು; 5 ಷೇರುಗಳ ಲಿಸ್ಟಿಂಗ್ – Kannada News | Indian stock market this week, 7 new IPOs and 5 listings, details here

ನವದೆಹಲಿ, ಜುಲೈ 19: ಭಾರತೀಯ ಷೇರು ಮಾರುಕಟ್ಟೆಯ (Stock Market) ಪ್ರಾಥಮಿಕ ಮಾರುಕಟ್ಟೆಯಲ್ಲಿ (Primary Market) ಐಪಿಒಗಳ ಹಬ್ಬ ಮುಂದುವರಿದಿದೆ. ಮುಂಬರುವ ವಾರದಲ್ಲಿ ಹೂಡಿಕೆದಾರರಿಗೆ ಬಂಪರ್ ಅವಕಾಶಗಳು ಕಾಯುತ್ತಿದ್ದು, ಒಟ್ಟು ಏಳು ಹೊಸ ಐಪಿಒಗಳು ಮಾರುಕಟ್ಟೆಗೆ ಬರಲು ಸಜ್ಜಾಗಿವೆ. ಇದರ ಜೊತೆಗೆ, ಈಗಾಗಲೇ ಸಬ್‌ಸ್ಕ್ರಿಪ್ಷನ್ ಮುಗಿಸಿರುವ ಐದು ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ (List) ಆಗಲಿವೆ. ಇಲ್ಲಿ ಐಪಿಒ ಪ್ರಾಥಮಿಕ ಮಾರುಕಟ್ಟೆಯಾದರೆ, ಬಿಎಸ್​ಇ ಮತ್ತು ಎನ್​ಎಸ್​ಇಗಳು ಸೆಕೆಂಡರಿ ಮಾರುಕಟ್ಟೆ ಎನಿಸುತ್ತವೆ. ಮಾರುಕಟ್ಟೆಗೆ ಲಗ್ಗೆ ಇಡಲಿರುವ 7 ಹೊಸ…

Read More

ಸೇವಾಶುಲ್ಕ ಗ್ರಾಹಕರ ಪ್ರೀತಿ, ಕಡ್ಡಾಯವಲ್ಲ: ಹೋಟೆಲ್‌, ಬಾರ್‌-ರೆಸ್ಟೋರೆಂಟ್‌ ಬಿಸಿ ಮುಟ್ಟಿಸಿದ CCPA – Kannada News | CCPA Penalises 41 Restaurants after pralhad joshi instructions For Levying Service Charges By Default

ನವದೆಹಲಿ, (ಜುಲೈ 19): ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ (pralhad joshi) ಅವರ ಸೂಚನೆ ಮೇರೆಗೆ CCPA 41 ರೆಸ್ಟೋರೆಂಟ್‌ಗಳ ವಿರುದ್ಧ ಸ್ವಯಂ ದೂರು ದಾಖಲಿಸಿಕೊಂಡು ಕ್ರಮ ಕೈಗೊಂಡಿದೆ. ಗ್ರಾಹಕರಿಗೆ ಪೂರ್ವನಿಯೋಜಿತವಾಗಿ ʼಸೇವಾ ಶುಲ್ಕʼ ವಿಧಿಸುತ್ತಿದ್ದ ಹಿನ್ನೆಲೆಯಲ್ಲಿ Chaayos, Barbeque Nation, L’Opera French Bakery Private Limited ಮತ್ತಿತರರಿಗೆ ದಂಡ ವಿಧಿಸಿದೆ. ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH)ಗೆ ಬಂದ ದೂರುಗಳ ಆಧಾರದ ಮೇಲೆ ಗ್ರಾಹಕರಿಗೆ ಬಿಲ್‌ನಲ್ಲಿ ಪೂರ್ವನಿಯೋಜಿತವಾಗಿ ʼಸೇವಾ ಶುಲ್ಕ (service charge)ʼ…

Read More

ಹೊಟ್ಟೆ ಸರಿಯಾಗಿ ಕ್ಲೀನ್ ಆಗದಿದ್ದರೆ ರಾತ್ರಿ ಮಲಗುವ ಮುನ್ನ ಈ ಒಂದು ಅಭ್ಯಾಸ ರೂಢಿಸಿಕೊಂಡು ಮಲಬದ್ಧತೆಗೆ ಗುಡ್‌ಬೈ ಹೇಳಿ! – Kannada News | Constipation Relief: Natural Ways To Improve Your Morning Bowel Movement

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ (Constipation) ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಅನಿಯಮಿತ ಆಹಾರ ಪದ್ಧತಿ, ಕಡಿಮೆ ನೀರು ಕುಡಿಯುವುದು, ಫೈಬರ್ ಕೊರತೆ, ದೈಹಿಕ ಚಟುವಟಿಕೆ ಇಲ್ಲದಿರುವುದು ಹಾಗೂ ಒತ್ತಡದ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಬೆಳಗ್ಗೆ ಹೊಟ್ಟೆ ಸಂಪೂರ್ಣ ಖಾಲಿಯಾಗದಿದ್ದರೆ ದಿನವಿಡೀ ಹೊಟ್ಟೆ ಉಬ್ಬರ, ಅಸಹನೆ, ಗ್ಯಾಸ್ಟ್ರಿಕ್‌, ಆಯಾಸ ಮತ್ತು ಹಸಿವು ಕಡಿಮೆಯಾಗುವಂತಹ ಸಮಸ್ಯೆಗಳು ಕಾಣಿಸಬಹುದು. ಇದಕ್ಕೆ ಕೆಲವು ಔಷಧಿಗಳನ್ನು ಸೇವಿಸುವ ಬದಲು, ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದರಿಂದ ಜೀರ್ಣಾಂಗದ ಆರೋಗ್ಯವನ್ನು ಉತ್ತಮವಾಗಿಡಬಹುದು. ತಜ್ಞರ ಪ್ರಕಾರ, ಜೀವನಶೈಲಿಯಲ್ಲಿ…

Read More

ಗೃಹಲಕ್ಷ್ಮಿ ಯೋಜನೆ ಬಗ್ಗೆ ಡಿಕೆಶಿ ಬಿಗ್ ಅಪ್ಡೇಟ್: 2000 ರೂ.ಬೇಕು ಅಂದ್ರೆ ಈ ನಿಯಮಗಳನ್ನ ಪಾಲಿಸಲೇಬೇಕು – Kannada News | Biometric, Mobile Number And Bank Account mandatory for gruhalakshmi scheme Says DK Shivakumar

ಬೆಂಗಳೂರು, (ಜುಲೈ 19): ಗೃಹಲಕ್ಷ್ಮೀ ಯೋಜನಯನ್ನು (gruhalakshmi scheme) ಪರಿಷ್ಕರಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಇಂದು (ಜುಲೈ 19) ನಡೆದ ಸಚಿವ ಸಂಪುಟದಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ಆಗಿದೆ. ಹೌದು…ಗೃಹಲಕ್ಷ್ಮಿ ಫಲಾನುಭವಿಗಳ ಮರುಪರಿಶೀಲನೆ ನಡೆಸಲು ಸರ್ಕಾರ ಸಜ್ಜಾಗಿದ್ದು, ಗೃಹಲಕ್ಷ್ಮೀ ಹಣಕ್ಕೆ ಬಯೋಮೆಟ್ರಿಕ್ ಕಡ್ಡಾಯಗೊಳಿಸಲು ಸಚಿವ ಸಂಪುಟ  ಸಭೆಯಲ್ಲಿ (Cabinet Meeting) ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿ ಒಂದು ಕುಟುಂಬದ ಯಜಮಾನಿಗೆ 2000 ರೂ. ಆರ್ಥಿಕ ನೆರವು ನೀಡುವ ಯೋಜನೆಯೇ ಗೃಹಲಕ್ಷ್ಮಿ. ಆದ್ರೆ ಅನರ್ಹರು ಕೂಡ ಯೋಜನೆಯ…

Read More

IND vs ENG: ಇಂಗ್ಲೆಂಡ್‌ ಬ್ಯಾಟರ್​ಗಳ ಅಬ್ಬರ; ಭಾರತಕ್ಕೆ ದಾಖಲೆಯ ಗುರಿ – Kannada News | Lord’s Record: England’s 387/3 Against India in Final ODI – Duckett, Bethell Shine

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ (England vs India) ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆತಿಥೇಯ ಇಂಗ್ಲೆಂಡ್ ಲಾರ್ಡ್ಸ್‌ ಅಂಗಳದಲ್ಲಿ ಹಿಂದೆಂದೂ ದಾಖಲಾಗದ ಮೊತ್ತವನ್ನು ದಾಖಲಿಸಿದೆ. ಭಾರತದ ದುರ್ಬಲ ಬೌಲಿಂಗ್ ವಿಭಾಗದ ಮೇಲೆ ಆರಂಭದಿಂದಲೂ ಸವಾರಿ ಮಾಡಿದ ಇಂಗ್ಲೆಂಡ್‌ ಬ್ಯಾಟರ್​ಗಳು ನಿಗದಿತ 50 ಓವರ್‌ಗಳಲ್ಲಿ ದಾಖಲೆಯ 387 ರನ್​ ಕಲೆಹಾಕಿದ್ದಾರೆ. ಅದು ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು. ಇಂಗ್ಲೆಂಡ್‌ ಪರ ಡಕೆಟ್ ಸ್ಫೋಟಕ ಶತಕ ಬಾರಿಸಿದರೆ….

Read More

ಬೆಟ್ಟದ ರಂಗನಾಥನ ತಪ್ಪಲಿನಲ್ಲೇ ಚೆನ್ನಮ್ಮನ ಅಂತ್ಯಕ್ರಿಯೆ ಏಕೆ? ಕಾರಣ ಬಿಚ್ಚಿಟ್ಟ ಅಳಿಯ – Kannada News | Dr Manjunath Gives Reasons about Why Chennamma Funeral Nearr Bettada Ranganath Temple

ಹಾಸನ, (ಜುಲೈ 19): ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ (Chennamma Deve Gowda) ಅವರ ಅಂತ್ಯಕ್ರಿಯೆ ನಾಳೆ (ಜುಲೈ 20) ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದ ಸಮೀಪವಿರುವ ಕ್ಯಾತನಹಳ್ಳಿ ಗ್ರಾಮದ ಬೆಟ್ಟದ ರಂಗನಾಥ ಸ್ವಾಮಿ ತಪ್ಪಲಿನಲ್ಲಿ ನಡೆಯಲಿದೆ. ಸಕಲ ಸರ್ಕಾರಿ ಗೌರವಗೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಈಗಾಗಲೇ ಹಾಸನ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇನ್ನು ಅಂತ್ಯಕ್ರಿಯೆ ಸ್ಥಳಕ್ಕೆ ಖುದ್ದು ದೇವೇಗೌಡ, ಅಳಿಯ ಡಾ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಇನ್ನು ಇದೇ…

Read More