ಚೆನ್ನಮ್ಮ ದೇವೇಗೌಡ ನಿಧನ: ಸೋಮವಾರ ಈ ತಾಲೂಕಿನ ಶಾಲೆ-ಕಾಲೇಜ್​ಗಳಿಗೆ ರಜೆ ಘೋಷಣೆ! – Kannada News | Holiday declared for school and colleges in holenarasipura On July 20 Over Chennamma Devegowda funeral

ಹಾಸನ, (ಜುಲೈ 19) : ಮಾಜಿ ಪ್ರಧಾನಿ ದೇವೇಗೌಡರ (HD Deve Gowda) ಪತ್ನಿ ಚೆನ್ನಮ್ಮ (Chennamma Devegowda) ನಿಧನರಾಗಿದ್ದು, ನಾಳೆ ಅಂದರೆ ಜುಲೈ 20ರಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಶ್ರೀರಂಗನಾಥಸ್ವಾಮಿ ಬೆಟ್ಟದ ತಪ್ಪಲು ಪ್ರದೇಶದಲ್ಲಿರುವ ಕ್ಯಾತನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಹಾಸನ ಜಿಲ್ಲಾಡಳಿತ ಸಹ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ (school and colleges) ರಜೆ ಘೋಷಣೆ ಮಾಡಿದೆ. ಹೌದು..ಸೋಮವಾರ ಜುಲೈ 20ರಂದು ಹೊಳೆನರಸೀಪುರ ತಾಲ್ಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಲತಾಕುಮಾರಿ ಘೋಷಣೆ ಮಾಡಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಣೆ

ಮಾಜಿ ಪ್ರಧಾನಿ ಪತ್ನಿಯಾಗಿರುವುದರಿಂದ ಚೆನ್ನಮ್ಮನ ಅಂತ್ಯಕ್ರಿಯೆಗೆ ಅನೇಕ ಗಣ್ಯರು, ರಾಜಕೀಯ ನಾಯಕರು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಅವರ ಅಭಿಮಾನಿಗಳು ಬರಲಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಸಂಚಾರಕ್ಕೆ ತೊಡಕಾಗುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೋಮವಾರ ಹೊಳೆನರಸೀಪುರ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಇದನ್ನು ನೋಡಿ: ಬೆಟ್ಟದ ರಂಗನಾಥನ ತಪ್ಪಲಿನಲ್ಲೇ ಚೆನ್ನಮ್ಮನ ಅಂತ್ಯಕ್ರಿಯೆ ಏಕೆ? ಕಾರಣ ಬಿಚ್ಚಿಟ್ಟ ಅಳಿಯ

ಹೊಳೆನರಸೀಪುರ ಪಟ್ಟಣ ಬಂದ್

ಚೆನ್ನಮ್ಮ ನಿಧನ ಹಿನ್ನೆಲೆ ನಾಳೆ (ಜುಲೈ 20) ಹೊಳೆನರಸೀಪುರ ಪಟ್ಟಣದ ಅಂಗಡಿ ಮುಗ್ಗಟ್ಟು ಬಂದ್ ಆಗಲಿವೆ. ವರ್ತಕರು ತಮ್ಮ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಚನ್ನಮ್ಮರಿಗೆ ಸಂತಾಪ ಸೂಚಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಹೊಳೆನರಸೀಪುರ ಪಟ್ಟಣ ಸಂಪೂರ್ಣ ಸ್ತಬ್ಧವಾಗಲಿದೆ. ಇನ್ನು ಈಗಾಗಲೇ ಇಂದು ಮತ್ತು ನಾಳೆ (ಸೋಮವಾರ) ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಶ್ರೀರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚೆನ್ನಮ್ಮ ಅಂತ್ಯಕ್ರಿಯೆ

ನಾಳೆ ಹೊಳೆನರಸೀಪುರದಲ್ಲೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ 9:30ರವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ. ಬಳಿಕ 11:30ಕ್ಕೆ ಮಾವಿನಕೆರೆ ಶ್ರೀರಂಗನಾಥಸ್ವಾಮಿ ಬೆಟ್ಟದ ತಪ್ಪಲು ಪ್ರದೇಶದಲ್ಲಿರುವ ಕ್ಯಾತನಹಳ್ಳಿಗೆ ಮೃತದೇಹ ತಲುಪಲಿದೆ. ನಂತರ ಮಧ್ಯಾಹ್ನ 2 ರಿಂದ ಸಂಜೆ 4:15ರವರೆಗೆ ವಾಸ್ತು ಪ್ರಕಾರವೇ ಅಂತ್ಯಕ್ರಿಯೆ ನಡೆಯಲಿದೆ. ಪುರೋಹಿತರಾದ ಕಣ್ಣನ್‌ ಶರ್ಮಾ, ಮಹೇಶ್‌ ಶರ್ಮಾ, ನರಸಿಂಹಸ್ವಾಮಿ ಅಂತಿಮ ವಿಧಿವಿಧಾನ ನೆರವೇರಿಸಿ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.

ಗಣ್ಯರಿಗಾಗಿ 5 ಹೆಲಿಪ್ಯಾಡ್, 2 ಸಾವಿರ ಪೊಲೀಸ್‌ ಭದ್ರತೆ

ಹೊಳೆನರಸೀಪುರದ ರೇವಣ್ಣ ನಿವಾಸಕ್ಕೆ ಚೆನ್ನಮ್ಮ ಪಾರ್ಥಿವ ಶರೀರ ಆಗಮಿಸಲಿದು,. ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರೇವಣ್ಣ ನಿವಾಸದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಡಾಗ್ ಸ್ಕ್ವಾಡ್ ಹಾಗೂ ಬಾಂಬ್ ನಿಷ್ಕ್ರೀಯ ದಳ ಪರಿಶೀಲನೆ ಮಾಡಿದೆ. ಇನ್ನು  5 ಎಸ್ಪಿಗಳ ನೇತೃತ್ವದಲ್ಲಿ 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ. ಇನ್ನು ಅಂತ್ಯಕ್ರಿಯೆ ಬರುವ ಗಣ್ಯರಿಗಾಗಿ ಒಟ್ಟು ಐದು ಹೆಲಿಪ್ಯಾಡ್​​​ಗಳನ್ನು ನಿರ್ಮಾನಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs ENG: 47 ವರ್ಷಗಳ ಹಳೆಯ ದಾಖಲೆ ಮುರಿದ ಬೆನ್ ಡಕೆಟ್

Source link

ಭಾರತದಲ್ಲಿ ಬ್ಲಾಕ್ ಬಸ್ಟರ್ ಆಗುವ ಹಾದಿಯಲ್ಲಿ ಹಾಲಿವುಡ್ ಸಿನಿಮಾ ‘ದಿ ಆಡಸ್ಸಿ’, ಗಳಿಸಿರುವುದೆಷ್ಟು? – Kannada News | The Odyssey movie box office collection in India

ವಿಶ್ವ ಸಿನಿಮಾ (Cinema) ರಂಗದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದ್ದ ‘ದಿ ಆಡಸ್ಸಿ’ ಬಿಡುಗಡೆ ಆಗಿ ಎರಡು ದಿನಗಳಾಗಿವೆ. ಭಾರತದಲ್ಲೂ ಸಹ ಈ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದವು. ಭಾರತದ ಪ್ರಮುಖ ಮೆಟ್ರೊ ನಗರಗಳಲ್ಲಿ ಮಾತ್ರವೇ ‘ದಿ ಆಡಸ್ಸಿ’ ಸಿನಿಮಾ ಬಿಡುಗಡೆ ಆಗಿದೆಯಾದರೂ, ಸಿನಿಮಾ ಭರ್ಜರಿ ಗಳಿಕೆಯನ್ನೇ ಮಾಡುತ್ತಿದೆ. ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ದಾಖಲೆ ಮೊತ್ತವನ್ನು ‘ದಿ ಆಡಸ್ಸಿ’ ಸಿನಿಮಾ ಬಾಚಿಕೊಳ್ಳುತ್ತಿದೆ. ಅದರ ಜೊತೆಗೆ ಭಾರತದಲ್ಲಿಯೂ ಸಹ ಬಾಕ್ಸ್ ಆಫೀಸ್​​ನಲ್ಲಿ ಭರವಸೆಯ ಓಟ ಓಡುತ್ತಿದೆ ಈ ಸಿನಿಮಾ. ಭಾರತದಲ್ಲಿ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗುವ ಎಲ್ಲ ಭರವಸೆಗಳನ್ನೂ ಮೂಡಿಸಿದೆ.

ಮೊದಲ ದಿನ ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 17.40 ಕೋಟಿ ರೂಪಾಯಿ ಹಣ ಗಳಿಕೆ ಮಾಡಿತ್ತು. ಆದರೆ ಎರಡನೇ ದಿನ ಗಳಿಕೆಯ ಮೊತ್ತದಲ್ಲಿ ಸುಮಾರು 30% ಏರಿಕೆ ಆಗಿದ್ದು, ಎರಡನೇ ದಿನದ ಕಲೆಕ್ಷನ್ ಸುಮಾರು 25.50 ಕೋಟಿ ರೂಪಾಯಿಗಳಾಗಿವೆ. ಆ ಮೂಲಕ ಎರಡು ದಿನಕ್ಕೆ ‘ದಿ ಆಡಸ್ಸಿ’ ಹಾಲಿವುಡ್ ಸಿನಿಮಾ ಭಾರತದಲ್ಲಿ 45 ಕೋಟಿಗೂ ಹೆಚ್ಚು ಮೊತ್ತ ಕಲೆಹಾಕಿದ್ದು, ಭಾನುವಾರದ ಗಳಿಕೆ ಈ ಸಿನಿಮಾವನ್ನು ಅರ್ಧ ಶತಕ ದಾಟಿಸುವುದು ಖಾತ್ರಿ ಆಗಿದೆ.

ಇದನ್ನೂ ಓದಿ:ಮೊದಲ ದಿನವೇ 480 ಕೋಟಿ ಗಳಿಸಿದ ‘ಆಡಸ್ಸಿ’, ಭಾರತದಲ್ಲಿ ಗಳಿಸ್ಸಿದ್ದೆಷ್ಟು?

ಮ್ಯಾಟ್ ಡ್ಯಾಮನ್, ಟಾಮ್ ಹಾಲೆಂಡ್, ಅನ್ನಾ ಹಾಥ್ವೇ ಮತ್ತು ಝೆಂಡಾಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ, ಭಾರತದಲ್ಲಿ ತನ್ನ ಮೊದಲ ವಾರಾಂತ್ಯಕ್ಕೆ ಸುಮಾರು 70 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆ ಇದೆ. ಭಾನುವಾರದ ಕಲೆಕ್ಷನ್, ಶನಿವಾರಕ್ಕಿಂತಲೂ ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಒಟ್ಟಾರೆ ಭಾರತದಲ್ಲಿ ಈ ಸಿನಿಮಾ ನೂರು ಕೋಟಿ ಗಳಿಕೆ ದಾಟುವ ಸಾಧ್ಯತೆ ದಟ್ಟವಾಗಿದೆ.

‘ದಿ ಆಡಸ್ಸಿ’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಸಹ ದೊಡ್ಡ ಗಳಿಕೆ ಮಾಡುತ್ತಿದೆ. ಕೇವಲ ಎರಡೇ ದಿನದಲ್ಲಿ ಈ ಸಿನಿಮಾ 2 ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡಿದೆ. ಆ ಮೂಲಕ ಕ್ರಿಸ್ಟೊಫರ್ ನೋಲನ್ ನಿರ್ದೇಶನದ ಸಿನಿಮಾಗಳಲ್ಲಿಯೇ ಅತಿ ಹೆಚ್ಚು ಹಣ ಬಾಚಿದ ಸಿನಿಮಾ ಇದೆನಿಸಿಕೊಂಡಿದೆ. ಈ ಸಿನಿಮಾವು ಹೋಮರ್ ಎಂಬ ಕುರುಡ ಸಾಹಿತಿ ನೂರಾರು ವರ್ಷಗಳ ಹಿಂದೆ ಬರೆದಿದ್ದ ಸಾಹಿತ್ಯವನ್ನು ಆಧರಿಸಿ ನಿರ್ಮಿಸಲಾಗಿರುವ ಸಿನಿಮಾ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:03 pm, Sun, 19 July 26

Source link

ದೇವೇಗೌಡರ ಪತ್ನಿ ಚೆನ್ನಮ್ಮ ಅಂತಿಮ ದರ್ಶನ ಪಡೆದ ಡಾಲಿ, ದೊಡ್ಡಣ್ಣ: ವಿಡಿಯೋ – Kannada News | Daali Dhananjay and Doddanna pay’s last respect to Chennamma Deve Gowda

ಮಾಜಿ ಪ್ರಧಾನಿ ದೇವೇಗೌಡ (Deve Gowda) ಅವರ ಪತ್ನಿ ಚೆನ್ನಮ್ಮ ಅವರು ನಿನ್ನೆ (ಜುಲೈ 18) ನಿಧನ ಹೊಂದಿದ್ದಾರೆ. ಅವರ ಅಂತಿಮ ದರ್ಶನವನ್ನು ಇಂದು ಸಾವಿರಾರು ಜನ ಸಾರ್ವಜನಿಕರು, ರಾಜಕಾರಣಿಗಳು, ಸಿನಿಮಾ ಪ್ರಮುಖರು ಮಾಡಿದ್ದಾರೆ. ನಟ ಡಾಲಿ ಧನಂಜಯ್ ಸಹ ಇಂದು (ಜುಲೈ 19) ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದರು. ಹಿರಿಯ ನಟ ದೊಡ್ಡಣ್ಣ ಸಹ ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದುಕೊಂಡರು. ಈ ವೇಳೆ ಇಬ್ಬರೂ ನಟರು, ಚೆನ್ನಮ್ಮನವರ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದರು. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಷೇರುಬಜಾರಿನಲ್ಲಿ ಈ ವಾರ ಕಲರವ; 7 ಹೊಸ ಐಪಿಒಗಳು ಶುರು; 5 ಷೇರುಗಳ ಲಿಸ್ಟಿಂಗ್ – Kannada News | Indian stock market this week, 7 new IPOs and 5 listings, details here

ನವದೆಹಲಿ, ಜುಲೈ 19: ಭಾರತೀಯ ಷೇರು ಮಾರುಕಟ್ಟೆಯ (Stock Market) ಪ್ರಾಥಮಿಕ ಮಾರುಕಟ್ಟೆಯಲ್ಲಿ (Primary Market) ಐಪಿಒಗಳ ಹಬ್ಬ ಮುಂದುವರಿದಿದೆ. ಮುಂಬರುವ ವಾರದಲ್ಲಿ ಹೂಡಿಕೆದಾರರಿಗೆ ಬಂಪರ್ ಅವಕಾಶಗಳು ಕಾಯುತ್ತಿದ್ದು, ಒಟ್ಟು ಏಳು ಹೊಸ ಐಪಿಒಗಳು ಮಾರುಕಟ್ಟೆಗೆ ಬರಲು ಸಜ್ಜಾಗಿವೆ. ಇದರ ಜೊತೆಗೆ, ಈಗಾಗಲೇ ಸಬ್‌ಸ್ಕ್ರಿಪ್ಷನ್ ಮುಗಿಸಿರುವ ಐದು ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ (List) ಆಗಲಿವೆ. ಇಲ್ಲಿ ಐಪಿಒ ಪ್ರಾಥಮಿಕ ಮಾರುಕಟ್ಟೆಯಾದರೆ, ಬಿಎಸ್​ಇ ಮತ್ತು ಎನ್​ಎಸ್​ಇಗಳು ಸೆಕೆಂಡರಿ ಮಾರುಕಟ್ಟೆ ಎನಿಸುತ್ತವೆ.

ಮಾರುಕಟ್ಟೆಗೆ ಲಗ್ಗೆ ಇಡಲಿರುವ 7 ಹೊಸ ಐಪಿಒಗಳು ಮತ್ತು ದಿನಾಂಕ

  1. ಗಲ್ಫ್ ಲಾಯ್ಡ್ಸ್ ಇಂಡಿಯಾ, ಜುಲೈ 20ರಿಂದ 22ರವರೆಗೆ
  2. ಮೆಟಾಲಿಕ್ ಟೆಕ್ನೋಫೋರ್ಜ್, ಜುಲೈ 21ರಿಂದ 23ರವರೆಗೆ
  3. ಶ್ರೀ ಬಾಲಾಜಿ ಮಾಲಾ ಟೆಕ್ಸ್​ಟೈಲ್ಸ್, ಜುಲೈ 22ರಿಂದ 24ರವರೆಗೆ
  4. ಕ್ಯೂಬ್ ಹೈವೇಸ್ ಟ್ರಸ್ಟ್ InvIT, ಜುಲೈ 22ರಿಂದ 24ರವರೆಗೆ
  5. ಇಂಡೋ ಎಂಐಎಂ, ಜುಲೈ 23ರಿಂದ 27ರವರೆಗೆ
  6. ಲೋಹಿಯಾ ಕಾರ್ಪ್, ಜುಲೈ 23ರಿಂದ 27ರವರೆಗೆ
  7. ಎಕ್ಸ್​ಟ್ರಾನೆಟ್ ಟೆಕ್ನಾಲಜೀಸ್, ಜುಲೈ 23ರಿಂದ 27ರವರೆಗೆ

ಇದನ್ನೂ ಓದಿ: ಕಷ್ಟಕಾಲಕ್ಕೆ ಚಿನ್ನ ಎನ್ನುತ್ತಾರೆ; ಬಿಕ್ಕಟ್ಟಿನಲ್ಲಿ ಬಂಗಾರದ ದರ ಏರುವ ಬದಲು ಇಳಿಯುತ್ತಿರುವುದು ಯಾಕೆ? ಇಲ್ಲಿದೆ ಸಂಭಾವ್ಯ ಕಾರಣಗಳು

ಮುಂದಿನ ವಾರ ಸಾರ್ವಜನಿಕ ಬಿಡ್ಡಿಂಗ್‌ಗಾಗಿ (Bidding) ಮುಕ್ತವಾಗಲಿರುವ ಈ 7 ಐಪಿಒಗಳಲ್ಲಿ ಮೇನ್-ಬೋರ್ಡ್ (Main-board) ಮತ್ತು ಎಸ್‌ಎಮ್‌ಇ (SME) ಎರಡು ವಿಭಾಗದ ಕಂಪನಿಗಳೂ ಸೇರಿವೆ. ಈ ಕಂಪನಿಗಳು ಮಾರುಕಟ್ಟೆಯಿಂದ ಒಟ್ಟಾರೆ ಕೋಟ್ಯಂತರ ರೂಪಾಯಿಗಳ ಬಂಡವಾಳವನ್ನು ಹೊಸ ಷೇರುಗಳ ವಿತರಣೆ (Fresh Issue) ಮತ್ತು ಆಫರ್ ಫಾರ್ ಸೇಲ್ (OFS) ಮೂಲಕ ಸಂಗ್ರಹಿಸಲು ಯೋಜಿಸಿವೆ.

ಇಂಡೋ ಎಂಐಎಂ ಮತ್ತು ಲೋಹಿಯಾ ಕಾರ್ಪ್ ಬಿಟ್ಟು ಉಳಿದ ಐದು ಕಂಪನಿಗಳು ಒಟ್ಟು 5,254 ಕೋಟಿ ರೂ ಮೊತ್ತದ ಬಂಡವಾಳ ಸಂಗ್ರಹದ ನಿರೀಕ್ಷೆಯಲ್ಲಿವೆ. ಇಂಡೋ ಎಂಐಎಂ ಬೆಂಗಳೂರು ಮೂಲದ ಪ್ರಿಸಿಶನ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯಾಗಿದೆ.

ಮಾರುಕಟ್ಟೆಯಲ್ಲಿ 5 ಹೊಸ ಲಿಸ್ಟಿಂಗ್ಸ್, ಮತ್ತು ದಿನಾಂಕ

ಕಳೆದ ವಾರ ಐಪಿಒ ಮುಗಿಸಿದ ಐದು ಹೊಸ ಕಂಪನಿಗಳು ಈ ವಾರ ಷೇರು ಮಾರುಕಟ್ಟೆಗೆ ಪದಾರ್ಪಣೆ ಮಾಡಲಿವೆ. ಈ ಕಂಪನಿಗಳ ಷೇರು ಲಿಸ್ಟಿಂಗ್ ದಿನಾಂಕ ಇಲ್ಲಿದೆ:

  1. ಎಸ್​ಬಿಐ ಫಂಡ್ಸ್ ಮ್ಯಾನೇಜ್ಮೆಂಟ್, ಜುಲೈ 21
  2. ಆಲ್ಪೈನ್ ಟೆಕ್ಸ್​ವರ್ಲ್ಡ್, ಜುಲೈ 21
  3. ಮಿಲ್​ವರ್ಕ್ಸ್ ಟೆಕ್ನಾಲಜೀಸ್, ಜುಲೈ 21
  4. ಕ್ಯಾಲಿಬರ್ ಮೈನಿಂಗ್ ಅಂಡ್ ಲಾಜಿಸ್ಟಿಕ್ಸ್
  5. ಸೋಟೆಫಿನ್ ಭಾರತ್

ಲಿಸ್ಟಿಂಗ್ ಗೇನ್ ನಿರೀಕ್ಷೆ: ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರೇ ಮಾರ್ಕೆಟ್ ಪ್ರೀಮಿಯಂ (GMP) ಉತ್ತಮವಾಗಿದ್ದು, ಹೂಡಿಕೆದಾರರು ಈ ಲಿಸ್ಟಿಂಗ್‌ಗಳಿಂದ ಉತ್ತಮ ಲಾಭ (Listing Gains) ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: ಗ್ರಾಹಕರಿಗೆ DND ಆಯ್ಕೆ ತೋರಿಸಿ, ಬ್ಲಾಕ್ಡ್ ಬ್ಯಾಡ್ಜ್ ಅಲ್ಲ; ಟ್ರೂಕಾಲರ್​ಗೆ ಸರ್ಕಾರ ನಿರ್ದೇಶನ

ಹೂಡಿಕೆದಾರರು ಗಮನಿಸಬೇಕಾದ ಪ್ರಮುಖ ದಿನಾಂಕಗಳು

  • ಐಪಿಒ ಬಿಡ್ಡಿಂಗ್ ಅವಧಿ: ಸಾಮಾನ್ಯವಾಗಿ ಪ್ರತಿಯೊಂದು ಐಪಿಒ ಕೂಡ ಹೂಡಿಕೆದಾರರಿಗೆ ಅರ್ಜಿ ಸಲ್ಲಿಸಲು 3 ಕೆಲಸದ ದಿನಗಳ ಕಾಲ ಮುಕ್ತವಾಗಿರುತ್ತದೆ.
  • ಅಲಾಟ್‌ಮೆಂಟ್ ಮತ್ತು ರಿಫಂಡ್: ಬಿಡ್ಡಿಂಗ್ ಮುಗಿದ ನಂತರದ ದಿನಗಳಲ್ಲಿ ಷೇರುಗಳ ಹಂಚಿಕೆ (Allotment) ಪ್ರಕ್ರಿಯೆ ನಡೆಯಲಿದ್ದು, ಷೇರು ಸಿಗದ ಹೂಡಿಕೆದಾರರಿಗೆ ಹಣದ ಮರುಪಾವತಿ (Refund) ಪ್ರಕ್ರಿಯೆ ಆರಂಭವಾಗುತ್ತದೆ.

ಗಮನಿಸಿ: ಪ್ರಸ್ತುತ ಪ್ರಾಥಮಿಕ ಮಾರುಕಟ್ಟೆಯಲ್ಲಿ ತೀವ್ರ ಚಟುವಟಿಕೆ ಕಂಡುಬರುತ್ತಿರುವುದರಿಂದ ಹೂಡಿಕೆದಾರರು ಮುಗಿಬಿದ್ದು ಹಣ ಹೂಡುವ ಮುನ್ನ ಎಚ್ಚರ ವಹಿಸಬೇಕು. ಯಾವುದೇ ಐಪಿಒಗೆ ಅರ್ಜಿ ಸಲ್ಲಿಸುವ ಮೊದಲು ಕಂಪನಿಯ ಆರ್ಥಿಕ ಸ್ಥಿತಿ (Financial Health), ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (RHP), ಮಾರುಕಟ್ಟೆಯಲ್ಲಿನ ಅದರ ವ್ಯಾಪಾರ ಭವಿಷ್ಯ ಮತ್ತು ಗ್ರೇ ಮಾರ್ಕೆಟ್ ಟ್ರೆಂಡ್ ಅನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸೇವಾಶುಲ್ಕ ಗ್ರಾಹಕರ ಪ್ರೀತಿ, ಕಡ್ಡಾಯವಲ್ಲ: ಹೋಟೆಲ್‌, ಬಾರ್‌-ರೆಸ್ಟೋರೆಂಟ್‌ ಬಿಸಿ ಮುಟ್ಟಿಸಿದ CCPA – Kannada News | CCPA Penalises 41 Restaurants after pralhad joshi instructions For Levying Service Charges By Default

ನವದೆಹಲಿ, (ಜುಲೈ 19): ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ (pralhad joshi) ಅವರ ಸೂಚನೆ ಮೇರೆಗೆ CCPA 41 ರೆಸ್ಟೋರೆಂಟ್‌ಗಳ ವಿರುದ್ಧ ಸ್ವಯಂ ದೂರು ದಾಖಲಿಸಿಕೊಂಡು ಕ್ರಮ ಕೈಗೊಂಡಿದೆ. ಗ್ರಾಹಕರಿಗೆ ಪೂರ್ವನಿಯೋಜಿತವಾಗಿ ʼಸೇವಾ ಶುಲ್ಕʼ ವಿಧಿಸುತ್ತಿದ್ದ ಹಿನ್ನೆಲೆಯಲ್ಲಿ Chaayos, Barbeque Nation, L’Opera French Bakery Private Limited ಮತ್ತಿತರರಿಗೆ ದಂಡ ವಿಧಿಸಿದೆ. ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH)ಗೆ ಬಂದ ದೂರುಗಳ ಆಧಾರದ ಮೇಲೆ ಗ್ರಾಹಕರಿಗೆ ಬಿಲ್‌ನಲ್ಲಿ ಪೂರ್ವನಿಯೋಜಿತವಾಗಿ ʼಸೇವಾ ಶುಲ್ಕ (service charge)ʼ ವಿಧಿಸುತ್ತಿದ್ದ 41 ರೆಸ್ಟೋರೆಂಟ್‌ಗಳ ವಿರುದ್ಧ CCPA ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಸೇವಾ ಶುಲ್ಕ ಗ್ರಾಹಕರಿಗೆ ಐಚ್ಛಿಕವಾಗಿದ್ದು, ಕಡ್ಡಾಯವಲ್ಲ. ಅವರೇ ಸ್ವಯಂಪ್ರೇರಿತವಾಗಿ ನೀಡಿದರೆ ಮಾತ್ರ ಸ್ವೀಕರಿಸತಕ್ಕದ್ದು ಎಂದು CCPA ಈ ಹಿಂದೆಯೇ ಆದೇಶಿಸಿದೆ. ಹಾಗಿದ್ದರೂ ನಿಯಮ ಉಲ್ಲಂಘಿಸಿ ಗ್ರಾಹಕರಿಗೆ ಕೊಡುವ ಬಿಲ್‌ನಲ್ಲಿ ಮೊದಲೇ ಸೇವಾ ಶುಲ್ಕ ಸೇರಿಸಿಯೇ ಕೊಡುತ್ತಿರುವುದು ಗಮನಕ್ಕೆ ಬಂದಿದ್ದು, ಯಾವುದೇ ಕಾರಣಕ್ಕೂ ಸ್ವಯಂ ಆಗಿ ಸೇವಾಶುಲ್ಕ ವಿಧಿಸುವಂತಿಲ್ಲ. ಇದನ್ನು ತಕ್ಷಣವೇ ನಿಲ್ಲಿಸಬೇಕು ಎಂದು CCPA ಕಟ್ಟೆಚ್ಚರ ನೀಡಿದೆ.

ಇದನ್ನೂ ಓದಿ: ಡಾರ್ಕ್ ಪ್ಯಾಟರ್ನ್​ ಪ್ರದರ್ಶಿಸಿದ್ದಕ್ಕೆ ಸ್ಪೈಸ್‌ಜೆಟ್​ಗೆ 1 ಲಕ್ಷ ರೂ ದಂಡ: ಪ್ರಲ್ಹಾದ ಜೋಶಿ ಸೂಚನೆ ಬೆನ್ನಲ್ಲೇ ಕಠಿಣ ಕ್ರಮ

ಸೇವಾ ಶುಲ್ಕ ಭರಿಸುವುದು ಸಂಪೂರ್ಣವಾಗಿ ಗ್ರಾಹಕರ ವಿವೇಚನೆಗೆ ಬಿಟ್ಟ ವಿಚಾರ. ಇದರಲ್ಲಿ ಒತ್ತಡ, ಒತ್ತಾಯ ಹಾಕುವಂತಿಲ್ಲ. ಬಿಲ್‌ನಲ್ಲೂ ಮೊದಲೇ ನಮೂದಿಸುವಂತಿಲ್ಲ ಎಂಬುದನ್ನು ಪುನರುಚ್ಚರಿಸಿರುವ CCPA, ಗ್ರಾಹಕ ಸಂರಕ್ಷಣಾ ಕಾನೂನನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸೂಚಿಸಿದೆ. ಅಲ್ಲದೇ, ಇಂತಹ ಅನ್ಯಾಯ ಕಂಡುಬಂದಲ್ಲಿ ಗ್ರಾಹಕರು ನೇರವಾಗಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (1915)ಗೆ ದೂರು ನೀಡುವಂತೆಯೂ ತಿಳಿಸಿದೆ.

ಸೇವಾಶುಲ್ಕ ಗ್ರಾಹಕರ ಪ್ರೀತಿ: ಸೇವಾಶುಲ್ಕ ಎನ್ನುವುದು ಅತ್ಯುತ್ತಮ ಸೇವೆಗೆ ಗ್ರಾಹಕರು ಪ್ರೀತಿಯಿಂದ ಕೊಡುವುದಾಗಿದೆ. ಅದನ್ನು ಒತ್ತಾಯದಿಂದ ಪಡೆಯುವುದು ಮತ್ತು ಪೂರ್ವನಿಯೋಜಿತವಾಗಿ ವಿಧಿಸುವುದನ್ನು ತರವಲ್ಲ. ಮತ್ತಿದನ್ನು ಸಹಿಸುವುದಿಲ್ಲ. ಹೋಟೆಲ್‌, ರೆಸ್ಟೋರೆಂಟ್‌, ಕ್ಯಾಂಟೀನ್‌ ನ್ಯಾಯಯುತ, ಪಾರದರ್ಶಕ ಮತ್ತು ಗ್ರಾಹಕ-ಸ್ನೇಹಿ ಪದ್ಧತಿಗಳನ್ನು ಅನುಸರಿಸಬೇಕು. ಗ್ರಾಹಕರ ಹಕ್ಕುಗಳ ಉಲ್ಲಂಘನೆ ಬದಲು ಗ್ರಾಹಕರ ಹಿತ ಕಾಯಬೇಕು ಎಂದಿದ್ದಾರೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೊಟ್ಟೆ ಸರಿಯಾಗಿ ಕ್ಲೀನ್ ಆಗದಿದ್ದರೆ ರಾತ್ರಿ ಮಲಗುವ ಮುನ್ನ ಈ ಒಂದು ಅಭ್ಯಾಸ ರೂಢಿಸಿಕೊಂಡು ಮಲಬದ್ಧತೆಗೆ ಗುಡ್‌ಬೈ ಹೇಳಿ! – Kannada News | Constipation Relief: Natural Ways To Improve Your Morning Bowel Movement

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ (Constipation) ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಅನಿಯಮಿತ ಆಹಾರ ಪದ್ಧತಿ, ಕಡಿಮೆ ನೀರು ಕುಡಿಯುವುದು, ಫೈಬರ್ ಕೊರತೆ, ದೈಹಿಕ ಚಟುವಟಿಕೆ ಇಲ್ಲದಿರುವುದು ಹಾಗೂ ಒತ್ತಡದ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಬೆಳಗ್ಗೆ ಹೊಟ್ಟೆ ಸಂಪೂರ್ಣ ಖಾಲಿಯಾಗದಿದ್ದರೆ ದಿನವಿಡೀ ಹೊಟ್ಟೆ ಉಬ್ಬರ, ಅಸಹನೆ, ಗ್ಯಾಸ್ಟ್ರಿಕ್‌, ಆಯಾಸ ಮತ್ತು ಹಸಿವು ಕಡಿಮೆಯಾಗುವಂತಹ ಸಮಸ್ಯೆಗಳು ಕಾಣಿಸಬಹುದು. ಇದಕ್ಕೆ ಕೆಲವು ಔಷಧಿಗಳನ್ನು ಸೇವಿಸುವ ಬದಲು, ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದರಿಂದ ಜೀರ್ಣಾಂಗದ ಆರೋಗ್ಯವನ್ನು ಉತ್ತಮವಾಗಿಡಬಹುದು. ತಜ್ಞರ ಪ್ರಕಾರ, ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳೇ ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಕಾರಿ.

ರಾತ್ರಿ ಮಲಗುವ ಮುನ್ನ ಈ ಅಭ್ಯಾಸಗಳನ್ನು ಮಾಡಿ

ಬೆಚ್ಚಗಿನ ನೀರಿನೊಂದಿಗೆ ತ್ರಿಫಲಾ ಸೇವನೆ: ಯುರ್ವೇದದಲ್ಲಿ ತ್ರಿಫಲಾ ಚೂರ್ಣವನ್ನು ಜೀರ್ಣಾಂಗದ ಆರೋಗ್ಯಕ್ಕೆ ಉತ್ತಮ ಔಷಧಿಯೆಂದು ಪರಿಗಣಿಸಲಾಗುತ್ತದೆ. ಇದು ಕರುಳಿನ ಚಲನೆಯನ್ನು ಉತ್ತೇಜಿಸಿ ಬೆಳಗ್ಗೆ ಮಲ ವಿಸರ್ಜನೆ ಸುಲಭವಾಗುವಂತೆ ಮಾಡುತ್ತದೆ. ಆದರೆ ವೈದ್ಯರ ಸಲಹೆಯಂತೆ ರಾತ್ರಿ ಮಲಗುವ ಮುನ್ನ ಒಂದು ಟೀ ಸ್ಪೂನ್ ತ್ರಿಫಲಾ ಚೂರ್ಣವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸಬಹುದು.

ಬೆಚ್ಚಗಿನ ನೀರು ಮತ್ತು ನಿಂಬೆ ರಸ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆ ರಸ ಸೇರಿಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಚುರುಕಾಗುತ್ತದೆ. ಇದು ಕರುಳಿನ ಚಲನೆಯನ್ನು ಸುಧಾರಿಸಲು ನೆರವಾಗಬಹುದು.

ಫೈಬರ್‌ಯುಕ್ತ ಆಹಾರ ಹೆಚ್ಚಿಸಿ: ಮಲಬದ್ಧತೆಯ ಪ್ರಮುಖ ಕಾರಣಗಳಲ್ಲಿ ಫೈಬರ್ ಕೊರತೆಯೂ ಒಂದು. ಹಾಗಾಗಿ ಸೇವಿಸುವ ಆಹಾರದಲ್ಲಿ ಪಪ್ಪಾಯಿ, ಸೀಬೆಹಣ್ಣು, ಬಾಳೆಹಣ್ಣು, ಓಟ್ಸ್, ಸಂಪೂರ್ಣ ಧಾನ್ಯಗಳು, ಹಸಿರು ಸೊಪ್ಪು, ಬೀನ್ಸ್ ಹಾಗೂ ಬೇಳೆಕಾಳುಗಳು ಮತ್ತು ರಾತ್ರಿ ನೆನೆಸಿದ ಒಣದ್ರಾಕ್ಷಿ ಹಾಗೂ ಅಂಜೂರದಂತಹ ಆಹಾರಗಳನ್ನು ಸೇವಿಸಿ. ಇವು ಮಲವನ್ನು ಮೃದುವಾಗಿಸಿ ಸುಲಭವಾಗಿ ಹೊರಬರಲು ಸಹಾಯ ಮಾಡುತ್ತವೆ.

ಹರಳೆಣ್ಣೆ (Castor Oil) ವೈದ್ಯರ ಸಲಹೆಯೊಂದಿಗೆ ಮಾತ್ರ: ಹರಳೆಣ್ಣೆಯನ್ನು ಹಿಂದಿನಿಂದಲೂ ನೈಸರ್ಗಿಕ ಲ್ಯಾಕ್ಸೇಟಿವ್ ಆಗಿ ಬಳಸಲಾಗುತ್ತಿತ್ತು. ಆದರೆ ಗರ್ಭಿಣಿಯರು, ಮಕ್ಕಳು ಅಥವಾ ದೀರ್ಘಕಾಲದ ಆರೋಗ್ಯ ಸಮಸ್ಯೆಯಿರುವವರು ವೈದ್ಯರ ಸಲಹೆಯಿಲ್ಲದೆ ಇದನ್ನು ಬಳಸಬಾರದು.

ಇದನ್ನೂ ಓದಿ: ರಾತ್ರಿ ಊಟದ ನಂತರ ಈ ತಪ್ಪುಗಳನ್ನು ಮಾಡಬೇಡಿ; ಜೀರ್ಣಕ್ರಿಯೆ ಹಾಳಾಗಬಹುದು

ಸಾಕಷ್ಟು ನೀರು ಕುಡಿಯಿರಿ: ದಿನಕ್ಕೆ ಕನಿಷ್ಠ 2.5 ರಿಂದ 3 ಲೀಟರ್ ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುವುದಿಲ್ಲ. ಇದರಿಂದ ಮಲ ಗಟ್ಟಿಯಾಗುವುದನ್ನು ತಡೆಯಬಹುದು.

ಪ್ರತಿದಿನ ಸ್ವಲ್ಪ ವ್ಯಾಯಾಮ ಮಾಡಿ: ಪ್ರತಿದಿನ 20– 30 ನಿಮಿಷ ವೇಗದ ನಡಿಗೆ, ಯೋಗ ಅಥವಾ ಸಣ್ಣ ವ್ಯಾಯಾಮ ಮಾಡುವುದರಿಂದ ಕರುಳಿನ ಚಲನೆ ಉತ್ತಮಗೊಳ್ಳುತ್ತದೆ.

ಮಲಬದ್ಧತೆಯನ್ನು ಕಡಿಮೆ ಮಾಡಲು ಸಲಹೆಗಳು

  • ಪ್ರತಿದಿನ ಒಂದೇ ಸಮಯಕ್ಕೆ ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.
  • ಬೆಳಗಿನ ಉಪಹಾರವನ್ನು ತಪ್ಪಿಸಬೇಡಿ.
  • ಊಟವನ್ನು ನಿಧಾನವಾಗಿ ಚೆನ್ನಾಗಿ ಜಗಿದು ಸೇವಿಸಿ.
  • ಹೆಚ್ಚು ಸಂಸ್ಕರಿತ ಆಹಾರ, ಬೇಕರಿ ಪದಾರ್ಥಗಳು ಮತ್ತು ಫಾಸ್ಟ್‌ಫುಡ್ ಸೇವನೆಯನ್ನು ಕಡಿಮೆ ಮಾಡಿ.
  • ದೀರ್ಘಕಾಲ ಕುಳಿತು ಕೆಲಸ ಮಾಡುವವರು ಪ್ರತಿ ಗಂಟೆಗೆ ಒಮ್ಮೆ ಎದ್ದು 5 ನಿಮಿಷ ನಡೆಯಿರಿ.
  • ಶೌಚಕ್ಕೆ ಹೋಗಬೇಕು ಎಂದು ಅನಿಸುವುದನ್ನು ತಡೆಯಬೇಡಿ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಒಂದು ವಾರಕ್ಕಿಂತ ಹೆಚ್ಚು ಕಾಲ ಮಲಬದ್ಧತೆ ಮುಂದುವರಿದರೆ, ಮಲದಲ್ಲಿ ರಕ್ತ ಕಾಣಿಸಿದರೆ, ತೀವ್ರ ಹೊಟ್ಟೆನೋವು ಅಥವಾ ವಾಂತಿ ಕಂಡುಬಂದರೆ, ತೂಕ ಅನಿರೀಕ್ಷಿತವಾಗಿ ಕಡಿಮೆಯಾಗುತ್ತಿದ್ದರೆ, ನಿರಂತರವಾಗಿ ಲ್ಯಾಕ್ಸೇಟಿವ್ ಬಳಸಬೇಕಾದ ಪರಿಸ್ಥಿತಿಯಂತಹ ಲಕ್ಷಣಗಳು ಕಂಡುಬಂದರೆ ಗ್ಯಾಸ್ಟ್ರೋಎಂಟರಾಲಜಿಸ್ಟ್‌ರನ್ನು ಸಂಪರ್ಕಿಸುವುದು ಅಗತ್ಯ.

ಸೂಚನೆ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಔಷಧಿ ಅಥವಾ ಆಯುರ್ವೇದ ಉತ್ಪನ್ನಗಳನ್ನು ವೈದ್ಯರ ಸಲಹೆಯಿಲ್ಲದೆ ನಿಯಮಿತವಾಗಿ ಸೇವಿಸಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:54 pm, Sun, 19 July 26

Source link

ಗೃಹಲಕ್ಷ್ಮಿ ಯೋಜನೆ ಬಗ್ಗೆ ಡಿಕೆಶಿ ಬಿಗ್ ಅಪ್ಡೇಟ್: 2000 ರೂ.ಬೇಕು ಅಂದ್ರೆ ಈ ನಿಯಮಗಳನ್ನ ಪಾಲಿಸಲೇಬೇಕು – Kannada News | Biometric, Mobile Number And Bank Account mandatory for gruhalakshmi scheme Says DK Shivakumar

ಬೆಂಗಳೂರು, (ಜುಲೈ 19): ಗೃಹಲಕ್ಷ್ಮೀ ಯೋಜನಯನ್ನು (gruhalakshmi scheme) ಪರಿಷ್ಕರಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಇಂದು (ಜುಲೈ 19) ನಡೆದ ಸಚಿವ ಸಂಪುಟದಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ಆಗಿದೆ. ಹೌದು…ಗೃಹಲಕ್ಷ್ಮಿ ಫಲಾನುಭವಿಗಳ ಮರುಪರಿಶೀಲನೆ ನಡೆಸಲು ಸರ್ಕಾರ ಸಜ್ಜಾಗಿದ್ದು, ಗೃಹಲಕ್ಷ್ಮೀ ಹಣಕ್ಕೆ ಬಯೋಮೆಟ್ರಿಕ್ ಕಡ್ಡಾಯಗೊಳಿಸಲು ಸಚಿವ ಸಂಪುಟ  ಸಭೆಯಲ್ಲಿ (Cabinet Meeting) ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿ ಒಂದು ಕುಟುಂಬದ ಯಜಮಾನಿಗೆ 2000 ರೂ. ಆರ್ಥಿಕ ನೆರವು ನೀಡುವ ಯೋಜನೆಯೇ ಗೃಹಲಕ್ಷ್ಮಿ. ಆದ್ರೆ ಅನರ್ಹರು ಕೂಡ ಯೋಜನೆಯ ಲಾಭ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಪರಿಷ್ಕರಣೆಗೆ ಮುಂದಾಗಿದ್ದು, ಅರ್ಹ ಫಲಾನುಭವಿಗಳ ಮೊಬೈಲ್ ನಂಬರ್ ಹಾಗೂ ಬ್ಯಾಂಕ್ ಖಾತೆ ಇರುವುದು ಕಡ್ಡಾಯಗೊಳಿಸಲಾಗಿದೆ.

ಸಚಿವ ಸಂಪುಟ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಗೃಹಲಕ್ಷ್ಮೀ ಹಣಕ್ಕೆ ಬಯೋಮೆಟ್ರಿಕ್ ಕಡ್ಡಾಯವಾಗಿದೆ. ಅವರದ್ದೇ ಫೋನ್ ನಂಬರ್ ಇರಬೇಕು. ಯಾರದ್ದೋ ನಂಬರ್ ಕೊಟ್ಟು ಅವರಿಗೆ ಮೆಸೇಜ್ ಹೋಗಬಾರದು. ಗಂಡನ ಖಾತೆ ಮತ್ತು ಮಕ್ಕಳ ಖಾತೆ ಕೂಡ ಇರಬಾರದು. ಮಹಿಳೆಯರ ಅಕೌಂಟ್​ಗೆ ಸರ್ಕಾರದ ಹಣ​​​ ಹೋಗಬೇಕು ಎಂದು ವಿವರಿಸಿದರು.

ನಮ್ಮ ಗ್ಯಾರಂಟಿ ತಂಡ ಹೋಗಿ ಮಾಹಿತಿ ಪಡೆಯಬೇಕು. ಇದಕ್ಕಾಗಿ 20 ಕೋಟಿ ರೂಪಾಯಿ ಇಟ್ಟಿದ್ದೇವೆ.
ಫಾರಂ ಯಾವ ರೀತಿ ಇರಬೇಕು ಅಂತ ಚರ್ಚಿಸಲಾಗಿದ್ದು, ಗಂಡನ ಖಾತೆ ಮತ್ತು ಮಕ್ಕಳ ಖಾತೆ ಕೂಡ ಇರಬಾರದು. ಮಹಿಳೆಯರ ಅಕೌಂಟ್​ಗೆ ಸರ್ಕಾರದ ಹಣ​​​ ಹೋಗಬೇಕು. ಯೋಜನೆಯಿಂದ ಯಾರನ್ನು ತೆಗೆಯುವ ಉದ್ದೇಶವಿಲ್ಲ.ನಾವು ಕೊಡುವ ಹಣ ಅವರಿಗೆ ಸರಿಯಾಗಿ ತಲುಪಬೇಕು ಎಂದು ಸ್ಪಷ್ಟಪಡಿಸಿದರು.

ಆಪರೇಷನ್ ಗೃಹಲಕ್ಷ್ಮಿ

ಸರ್ಕಾರ “ಆಪರೇಷನ್ ಗೃಹಲಕ್ಷ್ಮಿ” ಹೆಸರಿನಲ್ಲಿ ನಿಜವಾದ ಫಲಾನುಭವಿಗಳನ್ನು ಗುರುತು ಮಾಡುವ ಕೆಲಸ ಮಾಡ್ತಿದೆ. ಪ್ರತಿ ಒಂದು ಕುಟುಂಬದ ಯಜಮಾನಿಗೆ 2000 ರೂ. ಆರ್ಥಿಕ ನೆರವು ನೀಡುವ ಯೋಜನೆಯೇ ಗೃಹಲಕ್ಷ್ಮಿ. ಆದ್ರೆ ಅನರ್ಹರು ಕೂಡ ಯೋಜನೆಯ ಲಾಭ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಪರಿಷ್ಕರಣೆಗೆ ಮುಂದಾಗಿದೆ. ಒಟ್ಟು 1.20 ಕೋಟಿಗೂ ಅಧಿಕ ಫಲಾನುಭವಿಗಳಿದ್ದು, ಮೃತಪಟ್ಟವರನ್ನು ಕೈಬಿಡಲಾಗಿದೆ. ಸದ್ಯ 4.30 ಲಕ್ಷ ಫಲಾನುಭವಿಗಳ ಹೆಸರನ್ನು ಡಿಲೀಟ್ ಮಾಡಲಾಗಿದ್ದು, ಈ ಮೂಲಕ ನೂರಾರು ಕೋಟಿ ರೂ. ಉಳಿತಾಯ ಆಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಇಂಗ್ಲೆಂಡ್‌ ಬ್ಯಾಟರ್​ಗಳ ಅಬ್ಬರ; ಭಾರತಕ್ಕೆ ದಾಖಲೆಯ ಗುರಿ – Kannada News | Lord’s Record: England’s 387/3 Against India in Final ODI – Duckett, Bethell Shine

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ (England vs India) ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆತಿಥೇಯ ಇಂಗ್ಲೆಂಡ್ ಲಾರ್ಡ್ಸ್‌ ಅಂಗಳದಲ್ಲಿ ಹಿಂದೆಂದೂ ದಾಖಲಾಗದ ಮೊತ್ತವನ್ನು ದಾಖಲಿಸಿದೆ. ಭಾರತದ ದುರ್ಬಲ ಬೌಲಿಂಗ್ ವಿಭಾಗದ ಮೇಲೆ ಆರಂಭದಿಂದಲೂ ಸವಾರಿ ಮಾಡಿದ ಇಂಗ್ಲೆಂಡ್‌ ಬ್ಯಾಟರ್​ಗಳು ನಿಗದಿತ 50 ಓವರ್‌ಗಳಲ್ಲಿ ದಾಖಲೆಯ 387 ರನ್​ ಕಲೆಹಾಕಿದ್ದಾರೆ. ಅದು ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು. ಇಂಗ್ಲೆಂಡ್‌ ಪರ ಡಕೆಟ್ ಸ್ಫೋಟಕ ಶತಕ ಬಾರಿಸಿದರೆ. ಬೆಥೆಲ್ ಹಾಗೂ ರೂಟ್ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಇತ್ತ ಭಾರತದ ಪರ ಪ್ರಸಿದ್ಧ್ ಹೊರತುಪಡಿಸಿ ಬೇರೆ ಯಾವ ಬೌಲರ್​ಗೂ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ.

ಬೆನ್ ಡಕೆಟ್ ದಾಖಲೆಯ ಶತಕ

ಇಂಗ್ಲೆಂಡ್ ಪರ ಬೆನ್ ಡಕೆಟ್ ಮತ್ತು ಜಾಕೋಬ್ ಬೆಥೆಲ್ ಉತ್ತಮ ಆರಂಭ ನೀಡಿದರು . ಈ ಜೋಡಿ ಮೊದಲ ವಿಕೆಟ್‌ಗೆ 192 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿತು. ಜಾಕೋಬ್ ಬೆಥೆಲ್ 93 ಎಸೆತಗಳಲ್ಲಿ 91 ರನ್ ಗಳಿಸಿ ಔಟಾದರು. ಅವರ ಈ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ನಂತರ ಜೊತೆಯಾದ ಬೆನ್ ಡಕೆಟ್ ಮತ್ತು ಜೋ ರೂಟ್ ಭಾರತೀಯ ಬೌಲರ್‌ಗಳ ಮೇಲೆ ವಾರಿ ನಡೆಸಿದರು. ಈ ಜೋಡಿ 80 ಎಸೆತಗಳಲ್ಲಿ 101 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿತು.

ಕೊನೆಯಲ್ಲಿ ಅಬ್ಬರಿಸಿದ ಬಟ್ಲರ್

ಈ ಸಮಯದಲ್ಲಿ, ಬೆನ್ ಡಕೆಟ್ ಶತಕ ಕೂಡ ಪೂರೈಸಿದರು. ಅಂತಿಮವಾಗಿ ಡಕೆಟ್ 135 ಎಸೆತಗಳಲ್ಲಿ 18 ಬೌಂಡರಿ ಮತ್ತು 1 ಸಿಕ್ಸರ್‌ಗಳೊಂದಿಗೆ 141 ರನ್‌ಗಳಿಸಿ ಔಟಾದರು. ಜೋ ರೂಟ್ ಒಂದು ಕಡೆ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ಅರ್ಧಶತಕವನ್ನೂ ಸಿಡಿಸಿದರು. ಆದರೆ ನಾಯಕ ಹ್ಯಾರಿ ಬ್ರೂಕ್ 12 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಬಟ್ಲರ್ 13 ಎಸೆತಗಳಲ್ಲಿ 41 ರನ್ ಬಾರಿಸಿ ಇಂಗ್ಲೆಂಡ್‌ ತಂಡವನ್ನು ದಾಖಲೆಯ ಮೊತ್ತಕ್ಕೆ ಕೊಂಡೊಯ್ದರು.

IND vs ENG: ಲಾರ್ಡ್ಸ್‌ನಲ್ಲಿ ಆಂಗ್ಲರ ಆರ್ಭಟ; 36 ವರ್ಷಗಳ ದಾಖಲೆ ಉಡೀಸ್

ಭಾರತದ ಕಳಪೆ ಬೌಲಿಂಗ್

ಇಂಗ್ಲೆಂಡ್ ವಿರುದ್ಧ ಭಾರತದ ಐದು ಬೌಲರ್‌ಗಳು ಬೌಲಿಂಗ್ ಮಾಡಿದರು. ಆದರೆ ಪ್ರಸಿದ್ಧ್ ಕೃಷ್ಣ ಮತ್ತು ಪ್ರಿನ್ಸ್ ಯಾದವ್ ಹೊರತುಪಡಿಸಿ, ಯಾವುದೇ ಬೌಲರ್ ಯಶಸ್ವಿಯಾಗಲಿಲ್ಲ. ಅರ್ಶ್ದೀಪ್ ಸಿಂಗ್ 10 ಓವರ್‌ಗಳಲ್ಲಿ 72 ರನ್‌ಗಳನ್ನು ಬಿಟ್ಟುಕೊಟ್ಟರೆ, ಗುರ್ನೂರ್ ಬ್ರಾರ್ ಅತ್ಯಂತ ದುಬಾರಿ ಬೌಲರ್ ಆದರು. ಅವರು 10 ಓವರ್‌ಗಳಲ್ಲಿ 97 ರನ್‌ಗಳನ್ನು ಬಿಟ್ಟುಕೊಟ್ಟರು. ಅಕ್ಷರ್ ಪಟೇಲ್ ಸ್ಪಿನ್‌ನ ಶಕ್ತಿಯಿಂದ ಇಂಗ್ಲೆಂಡ್‌ನ ರನ್‌ರೇಟ್‌ಗೆ ಸ್ವಲ್ಪ ಮಟ್ಟಿಗೆ ಬ್ರೇಕ್ ಹಾಕಿದರು. ಅವರು 10 ಓವರ್‌ಗಳಲ್ಲಿ 61 ರನ್‌ಗಳನ್ನು ನೀಡಿದರು. ಈ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್ ಪರಿಣಾಮಕಾರಿಯಾಗಿತ್ತು. ಪ್ರಸಿದ್ಧ್ ಕೃಷ್ಣ 10 ಓವರ್‌ಗಳಲ್ಲಿ 69 ರನ್‌ಗಳನ್ನು ನೀಡಿ ಎರಡು ವಿಕೆಟ್‌ಗಳನ್ನು ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:32 pm, Sun, 19 July 26

Source link

ಬೆಟ್ಟದ ರಂಗನಾಥನ ತಪ್ಪಲಿನಲ್ಲೇ ಚೆನ್ನಮ್ಮನ ಅಂತ್ಯಕ್ರಿಯೆ ಏಕೆ? ಕಾರಣ ಬಿಚ್ಚಿಟ್ಟ ಅಳಿಯ – Kannada News | Dr Manjunath Gives Reasons about Why Chennamma Funeral Nearr Bettada Ranganath Temple

ಹಾಸನ, (ಜುಲೈ 19): ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ (Chennamma Deve Gowda) ಅವರ ಅಂತ್ಯಕ್ರಿಯೆ ನಾಳೆ (ಜುಲೈ 20) ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದ ಸಮೀಪವಿರುವ ಕ್ಯಾತನಹಳ್ಳಿ ಗ್ರಾಮದ ಬೆಟ್ಟದ ರಂಗನಾಥ ಸ್ವಾಮಿ ತಪ್ಪಲಿನಲ್ಲಿ ನಡೆಯಲಿದೆ. ಸಕಲ ಸರ್ಕಾರಿ ಗೌರವಗೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಈಗಾಗಲೇ ಹಾಸನ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇನ್ನು ಅಂತ್ಯಕ್ರಿಯೆ ಸ್ಥಳಕ್ಕೆ ಖುದ್ದು ದೇವೇಗೌಡ, ಅಳಿಯ ಡಾ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಇನ್ನು ಇದೇ ವೇಳೆ ಚೆನ್ನಮ್ಮನವರ ಅಂತ್ಯಕ್ರಿಯೆ ಬೆಟ್ಟದ ರಂಗನಾಥ ಸ್ವಾಮಿ ತಪ್ಪಲಿನಲ್ಲೇ ಏಕೆ ಮಾಡಲಾಗುತ್ತಿದೆ? ಬೇರೆ ಸ್ಥಳದಲ್ಲಿ ಏಕೆ ಮಾಡಲಿಲ್ಲ? ಇಲ್ಲೇ ಮಾಡುವುದರ ಇಂದಿನ ಉದ್ದೇಶ ಏನು ಎನ್ನುವುದನ್ನು ಡಾ ಮಂಜುನಾಥ್ ಅವರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version