ಕಾಕ್ರೋಚ್ ಜನತಾ ಪಕ್ಷದ ‘ಚಲೋ ಸಂಸತ್’ ಮೆರವಣಿಗೆಗೆ ನಿರ್ಬಂಧ, ದಿಲ್ಲಿ ಪೊಲೀಸ್ ಖಡಕ್ ಎಚ್ಚರಿಕೆ

ನವದೆಹಲಿ, (ಜುಲೈ 19): ನಾಳೆಯಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಇನ್ನು ಜುಲೈ 20ರಂದು ಕಾಕ್ರೋಚ್ ಜನತಾ ಪಕ್ಷ (CJP) ನಡೆಸಲು ಉದ್ದೇಶಿಸಿದ್ದ ‘ಚಲೋ ಸಂಸದ್’ ಮೆರವಣಿಗೆಯನ್ನು ದೆಹಲಿ ಪೊಲೀಸರು ನಿರ್ಬಂಧಿಸಿದ್ದಾರೆ. ಕಾಕ್ರೋಚ್ ಜನತಾ ಪಕ್ಷ (CJP) ನಡೆಸಲು ಉದ್ದೇಶಿಸಿದ್ದ ‘ಚಲೋ ಸಂಸದ್’ ಮೆರವಣಿಗೆ ಸಂಬಂಧ ದೆಹಲಿ ಪೊಲೀಸರಿಗೆ ಯಾವುದೇ ಅನುಮತಿ ಕೋರಿ ಅರ್ಜಿ ನೀಡಿಲ್ಲ. ಪ್ರತಿಭಟನಾ ಮೆರವಣಿಗೆಗಾಗಿ ಸಂಘಟನೆಯಿಂದ ಯಾವುದೇ ಅನುಮತಿಯನ್ನು ಕೋರಿಲ್ಲ ಅಥವಾ ಪೊಲೀಸ್ ಆಡಳಿತದಿಂದ ಅಂತಹ ಯಾವುದೇ ಅನುಮತಿಯನ್ನು ನೀಡಲಾಗಿಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅನುಮತಿಯಿಲ್ಲದೆ ಬೀದಿಗಿಳಿಯುವ ಪ್ರತಿಭಟನಾಕಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ, ಹಿರಿಯ ನಟ ತಗಾದೆ – Kannada News | Annu Kapoor says Sai Pallavi is not suited for Sita role in Ramayana

ರಾಮಾಯಣ’ (Ramayana) ಸಿನಿಮಾ ಇದೇ ದೀಪಾವಳಿಗೆ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಆರಂಭಿಸಿದೆ. ಸಿನಿಮಾನಲ್ಲಿ ರಾಮನ ಪಾತ್ರದಲ್ಲಿ ರಣ್​​ಬೀರ್ ಕಪೂರ್ ನಟಿಸಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ನಟಿಸಿದ್ದಾರೆ. ಸೀತೆಯ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ ನಟಿಸಿದ್ದಾರೆ. ಇದೀಗ ಹಿರಿಯ ನಟರೊಬ್ಬರು, ಸೀತೆ ಪಾತ್ರಕ್ಕೆ ನಟಿ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಿರುವುದಕ್ಕೆ ತಕರಾರು ತೆಗೆದಿದ್ದಾರೆ. ನಿರ್ದೇಶಕರ ಆಯ್ಕೆಯನ್ನು ಪ್ರಶ್ನೆ ಮಾಡಿದ್ದಾರೆ.

‘ರಾಮಾಯಣ’ ಕತೆ ಸಿನಿಮಾ ಆಗುತ್ತಿದೆ ಎಂದರೆ ವಿಮರ್ಶಕರು, ಟೀಕಾಕಾರರು, ಸಂಸ್ಕೃತಿ ರಕ್ಷಕರು ಗಲ್ಲಿಗೆ ಒಬ್ಬೊಬ್ಬರು ಹುಟ್ಟಿಕೊಳ್ಳುತ್ತಾರೆ. ಈ ಬಾರಿಯೂ ಅದೇ ಆಗುತ್ತಿದೆ. ಹಿಂದಿ ಚಿತ್ರರಂಗದ ಹಿರಿಯ ನಟರೊಬ್ಬರು, ‘ರಾಮಾಯಣ’ ಸಿನಿಮಾದ ಬಗ್ಗೆ ಅಸಮಾಧಾನ ಹೊರಹಾಕುವ ಜೊತೆಗೆ ಸಾಯಿ ಪಲ್ಲವಿ ಅವರನ್ನು ಸೀತಾಮಾತೆಯ ಪಾತ್ರಕ್ಕೆ ಆಯ್ಕೆ ಮಾಡಿರುವ ಬಗ್ಗೆಯೂ ತಕರಾರು ತೆಗೆದಿದ್ದಾರೆ.

ಹಲವು ಧಾರಾವಾಹಿ, ಸಿನಿಮಾ, ಜಾಹೀರಾತುಗಳಲ್ಲಿ ನಟಿಸಿರುವ ನಟ ಅನ್ನು ಕಪೂರ್, ಸಾಯಿ ಪಲ್ಲವಿ ಬಗ್ಗೆ ತಗಾದೆ ತೆಗೆದಿದ್ದಾರೆ. ಮಾಧ್ಯಮದ ಜೊತೆಗೆ ಮಾತನಾಡಿದ ಅನ್ನು ಕಪೂರ್, ‘ರಾಮಾಯಣ’ ಸಿನಿಮಾ ಬಗ್ಗೆ ಅತೃಪ್ತಿಯನ್ನು ವ್ಯಕ್ತಪಡಿಸಿದರು ಮತ್ತು ಇದು ಪ್ರಸ್ತುತ ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿದರು. ಚಿತ್ರವು ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆಯೇ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು. ನಂತರ ಸೀತಾ ಪಾತ್ರದಲ್ಲಿ ಸಾಯಿ ಪಲ್ಲವಿಯವರ ಆಯ್ಕೆಯ ಬಗ್ಗೆ ಮಾತನಾಡಿ, ಇಂತಹ ಐಕಾನಿಕ್ ಪಾತ್ರಗಳೊಂದಿಗೆ ಸಂಬಂಧ ಹೊಂದಿರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಬಗ್ಗೆ ಚಿತ್ರ ನಿರ್ಮಾಪಕರು ಹೆಚ್ಚು ಜಾಗರೂಕರಾಗಿರಬೇಕು ಎಂದು ಹೇಳಿದರು.

ಇದನ್ನೂ ಓದಿ:ಮತ್ತೊಂದು ಸಿನಿಮಾ ಕಳೆದುಕೊಂಡರೆ ನಟಿ ಸಾಯಿ ಪಲ್ಲವಿ?

“ಆದರೆ ನೀವು ಸೀತಾ ಪಾತ್ರಕ್ಕಾಗಿ ಯಾರನ್ನು ಆಯ್ಕೆ ಮಾಡಿದ್ದೀರಿ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಸೀತಾ ದೇವಿಯನ್ನು ತಾಯಿಯಂತೆ ಪೂಜಿಸಲಾಗುತ್ತದೆ. ಈ ದೇಶದ ಜನರು ಭಗವಾನ್ ರಾಮನನ್ನು ನಾರಾಯಣನ ಅವತಾರವೆಂದು ಪೂಜಿಸುತ್ತಾರೆ. ಈ ಕಾಸ್ಟಿಂಗ್ ಸಾಕಷ್ಟು ಪ್ರಶ್ನಾರ್ಹವಾಗಿದೆ. ಮೊದಲು ಚಿತ್ರ ಬಿಡುಗಡೆಯಾಗಲಿ, ಆಮೇಲೆ ಇನ್ನಷ್ಟು ಚರ್ಚೆ ಆಗಲಿದೆ” ಎಂದು ಅವರು ಹೇಳಿದರು.

ಮುಂದುವರೆದು ಮಾತನಾಡಿದ ಅರು, ಇದು ರಾಮಾನಂದ ಸಾಗರ್ ಅವರ ಜನಪ್ರಿಯ ದೂರದರ್ಶನ ಧಾರಾವಾಹಿಯ ತಾಂತ್ರಿಕವಾಗಿ ಸುಧಾರಿತ ಮತ್ತು ಭವ್ಯವಾದ ಆವೃತ್ತಿಯಾಗಿರುತ್ತದೆ ಎಂದರು. ‘ಅವರು ಏನು ಮಾಡಿದರೂ, ರಾಮಾನಂದ ಸಾಗರ್ ಅವರ ರಾಮಾಯಣವನ್ನು ತಾಂತ್ರಿಕವಾಗಿ ಅಪ್‌ಗ್ರೇಡ್ ಮಾಡಿ ಅದರ ವ್ಯಾಪ್ತಿಯನ್ನು ಹೆಚ್ಚಿಸುತ್ತಾರಷ್ಟೆ’ ಎಂದು ಅವರು ಹೇಳಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನ ಮಾಡಿರುವ ‘ರಾಮಾಯಣ’ ಸಿನಿಮಾ ಭಾರತದಲ್ಲಿ ಈ ವರೆಗೆ ನಿರ್ಮಾಣ ಆಗಿರುವ ಸಿನಿಮಾಗಳಲ್ಲಿಯೇ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ. ಈ ಸಿನಿಮಾದ ಎರಡು ಭಾಗಗಳಿಗೆ ಒಟ್ಟು 4000 ಕೋಟಿ ರೂಪಾಯಿ ಬಜೆಟ್ ಹೂಡಿಕೆ ಮಾಡಲಾಗಿದೆಯಂತೆ. ಈ ಸಿನಿಮಾ ಇದೇ ದೀಪಾವಳಿಗೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜಿಲ್ಲಾ ಪಂಚಾಯತ್ ರಾಯಚೂರು ನೇಮಕಾತಿ 2026: 5 ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | Raichur Zilla Panchayat Recruitment 2026: PUC Pass Candidates Can Apply

ಉದ್ಯೋಗಾಕಾಂಕ್ಷಿಗಳಿಗೆ ಜಿಲ್ಲಾ ಪಂಚಾಯತ್ ರಾಯಚೂರು (Zilla Panchayat Raichur) ಉತ್ತಮ ಅವಕಾಶ ನೀಡಿದೆ. ಗ್ರಂಥಾಲಯ ಮೇಲ್ವಿಚಾರಕ (Library Supervisor) ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದ್ದು, ಒಟ್ಟು 5 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಜುಲೈ 29, 2026ರೊಳಗೆ ಅರ್ಜಿ ಸಲ್ಲಿಸಬಹುದು.

ಗ್ರಾಮ ಪಂಚಾಯತ್‌ವಾರು ಹುದ್ದೆಗಳ ಹಂಚಿಕೆ

  • ಮಸರಕಲ್- 1
  • ಭೋಗಾವತಿ-1
  • ಮಾರ್ಕೆಟ್ ಸ್ಟಾಲ್- 1
  • ಗಾಣದಿನ್ನಿ- 1
  • ಜೇರಬಂಡಿ- 1

ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಯು ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ಸಂಸ್ಥೆಯಿಂದ ಪಿಯಿಸಿ (12ನೇ ತರಗತಿ) ಉತ್ತೀರ್ಣರಾಗಿರಬೇಕು.

ವಯೋಮಿತಿ

ಕನಿಷ್ಠ ವಯಸ್ಸು – 18 ವರ್ಷ
ಗರಿಷ್ಠ ವಯಸ್ಸು – 40 ವರ್ಷ
ವಯೋಮಿತಿ ಸಡಿಲಿಕೆ
2A, 2B, 3A, 3B ಅಭ್ಯರ್ಥಿಗಳಿಗೆ – 3 ವರ್ಷ
SC/ST ಹಾಗೂ ವರ್ಗ-1 ಅಭ್ಯರ್ಥಿಗಳಿಗೆ – 5 ವರ್ಷ

ಇದನ್ನೂ ಓದಿ: ಯಾದಗಿರಿ ಜಿಲ್ಲಾ ಪಂಚಾಯತ್ ನೇಮಕಾತಿ 2026: 12 ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ:

ಸಾಮಾನ್ಯ ಅಭ್ಯರ್ಥಿಗಳು ರೂ. 500
2A, 2B, 3A, 3B ರೂ. 300
SC/ST, ವರ್ಗ-1, ಮಾಜಿ ಸೈನಿಕರು ರೂ. 200
ವಿಶೇಷ ಚೇತನ (PwD) ಅಭ್ಯರ್ಥಿಗಳು ರೂ. 100

ಆಯ್ಕೆ ಪ್ರಕ್ರಿಯೆ

ಅರ್ಹತಾ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್
ಸಂದರ್ಶನ (Interview)

ಅರ್ಜಿ ಸಲ್ಲಿಸುವ ವಿಧಾನ – ಹಂತ ಹಂತವಾಗಿ

ಹಂತ 1: ಜಿಲ್ಲಾ ಪಂಚಾಯತ್ ರಾಯಚೂರು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತೆ ಪರಿಶೀಲಿಸಿ.

ಹಂತ 2: ಅರ್ಜಿಗೆ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಆಧಾರ್/ಗುರುತಿನ ಚೀಟಿ, ಪಿಯಿಸಿ ಅಂಕಪಟ್ಟಿ, ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ), ಜನ್ಮ ದಾಖಲೆ, ಪಾಸ್‌ಪೋರ್ಟ್ ಗಾತ್ರದ ಫೋಟೋ, ಸಹಿ

ಹಂತ 3: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ Library Supervisor Recruitment 2026 ಆನ್‌ಲೈನ್ ಅರ್ಜಿ ಲಿಂಕ್ ತೆರೆಯಿರಿ.

ಹಂತ 4: ಅರ್ಜಿಯಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.

ಹಂತ 5: ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.

ಹಂತ 6: ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.

ಹಂತ 7: ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಿ.

ಹಂತ 8: ಅರ್ಜಿಯ ಸಂಖ್ಯೆ ಹಾಗೂ ಸಲ್ಲಿಕೆಯ ಪ್ರಿಂಟ್/ಪಿಡಿಎಫ್ ಅನ್ನು ಭವಿಷ್ಯದ ಬಳಕೆಗೆ ಸೇಫ್ ಆಗಿ ಇಟ್ಟುಕೊಳ್ಳಿ.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (FAQ)

ಪ್ರಶ್ನೆ: ಜಿಲ್ಲಾ ಪಂಚಾಯತ್ ರಾಯಚೂರು ನೇಮಕಾತಿ 2026ರಲ್ಲಿ ಎಷ್ಟು ಹುದ್ದೆಗಳಿವೆ?

ಉತ್ತರ: ಒಟ್ಟು 5 ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳು ಭರ್ತಿಯಾಗಲಿವೆ.

ಪ್ರಶ್ನೆ: ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಹತೆ ಏನು?

ಉತ್ತರ: ಅಭ್ಯರ್ಥಿಯು PUC (12ನೇ ತರಗತಿ) ಉತ್ತೀರ್ಣರಾಗಿರಬೇಕು.

ಪ್ರಶ್ನೆ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಉತ್ತರ: 29 ಜುಲೈ 2026 ಕೊನೆಯ ದಿನವಾಗಿದೆ.

Source link

IND vs ENG: ಲಾರ್ಡ್ಸ್‌ನಲ್ಲಿ ಏಕದಿನ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ರೋಹಿತ್ – Kannada News | Rohit Sharma Century at Lord’s: India’s 47 Year Wait Ends vs England in Decider

ಸರಣಿ ನಿರ್ಧಾರಕ ಪಂದ್ಯದಲ್ಲಿ ಇಂಗ್ಲೆಂಡ್‌ ನೀಡಿರುವ 387 ರನ್​ಗಳ ದಾಖಲೆಯ ಗುರಿಯನ್ನು ಬೆನ್ನಟ್ಟಿರುವ ಟೀಂ ಇಂಡಿಯಾಕ್ಕೆ ಆರಂಭಿಕರಿಬ್ಬರು ಅದ್ಭುತ ಆರಂಭವನ್ನು ಒದಗಿಸಿಕೊಟ್ಟರು. ಕಳೆದೆರಡು ಪಂದ್ಯಗಳಲ್ಲಿ ರನ್ ಗಳಿಸುವಲ್ಲಿ ವಿಫಲರಾಗಿದ್ದ ಮಾಜಿ ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಐತಿಹಾಸಿಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಲಾರ್ಡ್ಸ್‌ ಅಂಗಳದಲ್ಲಿ ಏಕದಿನ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಮೂಲಕ ಟೀಂ ಇಂಡಿಯಾದ 47 ವರ್ಷಗಳ ಶತಕದ ಬರವನ್ನು ನೀಗಿಸಿದ್ದಾರೆ. ಇದರ ಜೊತೆಗೆ ತನ್ನ ಫಾರ್ಮ್​ಗೆ ಸಾಕಷ್ಟು ಟೀಕೆಗಳನ್ನು ಮಾಡುತ್ತಿದ್ದವರಿಗೆ ತನ್ನ ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ.

Published On – 10:17 pm, Sun, 19 July 26

Source link

ಚೆನ್ನಮ್ಮ ದೇವೇಗೌಡ ನಿಧನ: ಸೋಮವಾರ ಈ ತಾಲೂಕಿನ ಶಾಲೆ-ಕಾಲೇಜ್​ಗಳಿಗೆ ರಜೆ ಘೋಷಣೆ! – Kannada News | Holiday declared for school and colleges in holenarasipura On July 20 Over Chennamma Devegowda funeral

ಹಾಸನ, (ಜುಲೈ 19) : ಮಾಜಿ ಪ್ರಧಾನಿ ದೇವೇಗೌಡರ (HD Deve Gowda) ಪತ್ನಿ ಚೆನ್ನಮ್ಮ (Chennamma Devegowda) ನಿಧನರಾಗಿದ್ದು, ನಾಳೆ ಅಂದರೆ ಜುಲೈ 20ರಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಶ್ರೀರಂಗನಾಥಸ್ವಾಮಿ ಬೆಟ್ಟದ ತಪ್ಪಲು ಪ್ರದೇಶದಲ್ಲಿರುವ ಕ್ಯಾತನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಹಾಸನ ಜಿಲ್ಲಾಡಳಿತ ಸಹ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ (school and colleges) ರಜೆ ಘೋಷಣೆ ಮಾಡಿದೆ. ಹೌದು..ಸೋಮವಾರ ಜುಲೈ 20ರಂದು ಹೊಳೆನರಸೀಪುರ ತಾಲ್ಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಲತಾಕುಮಾರಿ ಘೋಷಣೆ ಮಾಡಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಣೆ

ಮಾಜಿ ಪ್ರಧಾನಿ ಪತ್ನಿಯಾಗಿರುವುದರಿಂದ ಚೆನ್ನಮ್ಮನ ಅಂತ್ಯಕ್ರಿಯೆಗೆ ಅನೇಕ ಗಣ್ಯರು, ರಾಜಕೀಯ ನಾಯಕರು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಅವರ ಅಭಿಮಾನಿಗಳು ಬರಲಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಸಂಚಾರಕ್ಕೆ ತೊಡಕಾಗುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೋಮವಾರ ಹೊಳೆನರಸೀಪುರ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಇದನ್ನು ನೋಡಿ: ಬೆಟ್ಟದ ರಂಗನಾಥನ ತಪ್ಪಲಿನಲ್ಲೇ ಚೆನ್ನಮ್ಮನ ಅಂತ್ಯಕ್ರಿಯೆ ಏಕೆ? ಕಾರಣ ಬಿಚ್ಚಿಟ್ಟ ಅಳಿಯ

ಹೊಳೆನರಸೀಪುರ ಪಟ್ಟಣ ಬಂದ್

ಚೆನ್ನಮ್ಮ ನಿಧನ ಹಿನ್ನೆಲೆ ನಾಳೆ (ಜುಲೈ 20) ಹೊಳೆನರಸೀಪುರ ಪಟ್ಟಣದ ಅಂಗಡಿ ಮುಗ್ಗಟ್ಟು ಬಂದ್ ಆಗಲಿವೆ. ವರ್ತಕರು ತಮ್ಮ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಚನ್ನಮ್ಮರಿಗೆ ಸಂತಾಪ ಸೂಚಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಹೊಳೆನರಸೀಪುರ ಪಟ್ಟಣ ಸಂಪೂರ್ಣ ಸ್ತಬ್ಧವಾಗಲಿದೆ. ಇನ್ನು ಈಗಾಗಲೇ ಇಂದು ಮತ್ತು ನಾಳೆ (ಸೋಮವಾರ) ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಶ್ರೀರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚೆನ್ನಮ್ಮ ಅಂತ್ಯಕ್ರಿಯೆ

ನಾಳೆ ಹೊಳೆನರಸೀಪುರದಲ್ಲೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ 9:30ರವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ. ಬಳಿಕ 11:30ಕ್ಕೆ ಮಾವಿನಕೆರೆ ಶ್ರೀರಂಗನಾಥಸ್ವಾಮಿ ಬೆಟ್ಟದ ತಪ್ಪಲು ಪ್ರದೇಶದಲ್ಲಿರುವ ಕ್ಯಾತನಹಳ್ಳಿಗೆ ಮೃತದೇಹ ತಲುಪಲಿದೆ. ನಂತರ ಮಧ್ಯಾಹ್ನ 2 ರಿಂದ ಸಂಜೆ 4:15ರವರೆಗೆ ವಾಸ್ತು ಪ್ರಕಾರವೇ ಅಂತ್ಯಕ್ರಿಯೆ ನಡೆಯಲಿದೆ. ಪುರೋಹಿತರಾದ ಕಣ್ಣನ್‌ ಶರ್ಮಾ, ಮಹೇಶ್‌ ಶರ್ಮಾ, ನರಸಿಂಹಸ್ವಾಮಿ ಅಂತಿಮ ವಿಧಿವಿಧಾನ ನೆರವೇರಿಸಿ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.

ಗಣ್ಯರಿಗಾಗಿ 5 ಹೆಲಿಪ್ಯಾಡ್, 2 ಸಾವಿರ ಪೊಲೀಸ್‌ ಭದ್ರತೆ

ಹೊಳೆನರಸೀಪುರದ ರೇವಣ್ಣ ನಿವಾಸಕ್ಕೆ ಚೆನ್ನಮ್ಮ ಪಾರ್ಥಿವ ಶರೀರ ಆಗಮಿಸಲಿದು,. ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರೇವಣ್ಣ ನಿವಾಸದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಡಾಗ್ ಸ್ಕ್ವಾಡ್ ಹಾಗೂ ಬಾಂಬ್ ನಿಷ್ಕ್ರೀಯ ದಳ ಪರಿಶೀಲನೆ ಮಾಡಿದೆ. ಇನ್ನು  5 ಎಸ್ಪಿಗಳ ನೇತೃತ್ವದಲ್ಲಿ 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ. ಇನ್ನು ಅಂತ್ಯಕ್ರಿಯೆ ಬರುವ ಗಣ್ಯರಿಗಾಗಿ ಒಟ್ಟು ಐದು ಹೆಲಿಪ್ಯಾಡ್​​​ಗಳನ್ನು ನಿರ್ಮಾನಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs ENG: 47 ವರ್ಷಗಳ ಹಳೆಯ ದಾಖಲೆ ಮುರಿದ ಬೆನ್ ಡಕೆಟ್

Source link

ಭಾರತದಲ್ಲಿ ಬ್ಲಾಕ್ ಬಸ್ಟರ್ ಆಗುವ ಹಾದಿಯಲ್ಲಿ ಹಾಲಿವುಡ್ ಸಿನಿಮಾ ‘ದಿ ಆಡಸ್ಸಿ’, ಗಳಿಸಿರುವುದೆಷ್ಟು? – Kannada News | The Odyssey movie box office collection in India

ವಿಶ್ವ ಸಿನಿಮಾ (Cinema) ರಂಗದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದ್ದ ‘ದಿ ಆಡಸ್ಸಿ’ ಬಿಡುಗಡೆ ಆಗಿ ಎರಡು ದಿನಗಳಾಗಿವೆ. ಭಾರತದಲ್ಲೂ ಸಹ ಈ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದವು. ಭಾರತದ ಪ್ರಮುಖ ಮೆಟ್ರೊ ನಗರಗಳಲ್ಲಿ ಮಾತ್ರವೇ ‘ದಿ ಆಡಸ್ಸಿ’ ಸಿನಿಮಾ ಬಿಡುಗಡೆ ಆಗಿದೆಯಾದರೂ, ಸಿನಿಮಾ ಭರ್ಜರಿ ಗಳಿಕೆಯನ್ನೇ ಮಾಡುತ್ತಿದೆ. ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ದಾಖಲೆ ಮೊತ್ತವನ್ನು ‘ದಿ ಆಡಸ್ಸಿ’ ಸಿನಿಮಾ ಬಾಚಿಕೊಳ್ಳುತ್ತಿದೆ. ಅದರ ಜೊತೆಗೆ ಭಾರತದಲ್ಲಿಯೂ ಸಹ ಬಾಕ್ಸ್ ಆಫೀಸ್​​ನಲ್ಲಿ ಭರವಸೆಯ ಓಟ ಓಡುತ್ತಿದೆ ಈ ಸಿನಿಮಾ. ಭಾರತದಲ್ಲಿ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗುವ ಎಲ್ಲ ಭರವಸೆಗಳನ್ನೂ ಮೂಡಿಸಿದೆ.

ಮೊದಲ ದಿನ ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 17.40 ಕೋಟಿ ರೂಪಾಯಿ ಹಣ ಗಳಿಕೆ ಮಾಡಿತ್ತು. ಆದರೆ ಎರಡನೇ ದಿನ ಗಳಿಕೆಯ ಮೊತ್ತದಲ್ಲಿ ಸುಮಾರು 30% ಏರಿಕೆ ಆಗಿದ್ದು, ಎರಡನೇ ದಿನದ ಕಲೆಕ್ಷನ್ ಸುಮಾರು 25.50 ಕೋಟಿ ರೂಪಾಯಿಗಳಾಗಿವೆ. ಆ ಮೂಲಕ ಎರಡು ದಿನಕ್ಕೆ ‘ದಿ ಆಡಸ್ಸಿ’ ಹಾಲಿವುಡ್ ಸಿನಿಮಾ ಭಾರತದಲ್ಲಿ 45 ಕೋಟಿಗೂ ಹೆಚ್ಚು ಮೊತ್ತ ಕಲೆಹಾಕಿದ್ದು, ಭಾನುವಾರದ ಗಳಿಕೆ ಈ ಸಿನಿಮಾವನ್ನು ಅರ್ಧ ಶತಕ ದಾಟಿಸುವುದು ಖಾತ್ರಿ ಆಗಿದೆ.

ಇದನ್ನೂ ಓದಿ:ಮೊದಲ ದಿನವೇ 480 ಕೋಟಿ ಗಳಿಸಿದ ‘ಆಡಸ್ಸಿ’, ಭಾರತದಲ್ಲಿ ಗಳಿಸ್ಸಿದ್ದೆಷ್ಟು?

ಮ್ಯಾಟ್ ಡ್ಯಾಮನ್, ಟಾಮ್ ಹಾಲೆಂಡ್, ಅನ್ನಾ ಹಾಥ್ವೇ ಮತ್ತು ಝೆಂಡಾಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ, ಭಾರತದಲ್ಲಿ ತನ್ನ ಮೊದಲ ವಾರಾಂತ್ಯಕ್ಕೆ ಸುಮಾರು 70 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆ ಇದೆ. ಭಾನುವಾರದ ಕಲೆಕ್ಷನ್, ಶನಿವಾರಕ್ಕಿಂತಲೂ ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಒಟ್ಟಾರೆ ಭಾರತದಲ್ಲಿ ಈ ಸಿನಿಮಾ ನೂರು ಕೋಟಿ ಗಳಿಕೆ ದಾಟುವ ಸಾಧ್ಯತೆ ದಟ್ಟವಾಗಿದೆ.

‘ದಿ ಆಡಸ್ಸಿ’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಸಹ ದೊಡ್ಡ ಗಳಿಕೆ ಮಾಡುತ್ತಿದೆ. ಕೇವಲ ಎರಡೇ ದಿನದಲ್ಲಿ ಈ ಸಿನಿಮಾ 2 ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡಿದೆ. ಆ ಮೂಲಕ ಕ್ರಿಸ್ಟೊಫರ್ ನೋಲನ್ ನಿರ್ದೇಶನದ ಸಿನಿಮಾಗಳಲ್ಲಿಯೇ ಅತಿ ಹೆಚ್ಚು ಹಣ ಬಾಚಿದ ಸಿನಿಮಾ ಇದೆನಿಸಿಕೊಂಡಿದೆ. ಈ ಸಿನಿಮಾವು ಹೋಮರ್ ಎಂಬ ಕುರುಡ ಸಾಹಿತಿ ನೂರಾರು ವರ್ಷಗಳ ಹಿಂದೆ ಬರೆದಿದ್ದ ಸಾಹಿತ್ಯವನ್ನು ಆಧರಿಸಿ ನಿರ್ಮಿಸಲಾಗಿರುವ ಸಿನಿಮಾ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:03 pm, Sun, 19 July 26

Source link

ದೇವೇಗೌಡರ ಪತ್ನಿ ಚೆನ್ನಮ್ಮ ಅಂತಿಮ ದರ್ಶನ ಪಡೆದ ಡಾಲಿ, ದೊಡ್ಡಣ್ಣ: ವಿಡಿಯೋ – Kannada News | Daali Dhananjay and Doddanna pay’s last respect to Chennamma Deve Gowda

ಮಾಜಿ ಪ್ರಧಾನಿ ದೇವೇಗೌಡ (Deve Gowda) ಅವರ ಪತ್ನಿ ಚೆನ್ನಮ್ಮ ಅವರು ನಿನ್ನೆ (ಜುಲೈ 18) ನಿಧನ ಹೊಂದಿದ್ದಾರೆ. ಅವರ ಅಂತಿಮ ದರ್ಶನವನ್ನು ಇಂದು ಸಾವಿರಾರು ಜನ ಸಾರ್ವಜನಿಕರು, ರಾಜಕಾರಣಿಗಳು, ಸಿನಿಮಾ ಪ್ರಮುಖರು ಮಾಡಿದ್ದಾರೆ. ನಟ ಡಾಲಿ ಧನಂಜಯ್ ಸಹ ಇಂದು (ಜುಲೈ 19) ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದರು. ಹಿರಿಯ ನಟ ದೊಡ್ಡಣ್ಣ ಸಹ ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದುಕೊಂಡರು. ಈ ವೇಳೆ ಇಬ್ಬರೂ ನಟರು, ಚೆನ್ನಮ್ಮನವರ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದರು. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಷೇರುಬಜಾರಿನಲ್ಲಿ ಈ ವಾರ ಕಲರವ; 7 ಹೊಸ ಐಪಿಒಗಳು ಶುರು; 5 ಷೇರುಗಳ ಲಿಸ್ಟಿಂಗ್ – Kannada News | Indian stock market this week, 7 new IPOs and 5 listings, details here

ನವದೆಹಲಿ, ಜುಲೈ 19: ಭಾರತೀಯ ಷೇರು ಮಾರುಕಟ್ಟೆಯ (Stock Market) ಪ್ರಾಥಮಿಕ ಮಾರುಕಟ್ಟೆಯಲ್ಲಿ (Primary Market) ಐಪಿಒಗಳ ಹಬ್ಬ ಮುಂದುವರಿದಿದೆ. ಮುಂಬರುವ ವಾರದಲ್ಲಿ ಹೂಡಿಕೆದಾರರಿಗೆ ಬಂಪರ್ ಅವಕಾಶಗಳು ಕಾಯುತ್ತಿದ್ದು, ಒಟ್ಟು ಏಳು ಹೊಸ ಐಪಿಒಗಳು ಮಾರುಕಟ್ಟೆಗೆ ಬರಲು ಸಜ್ಜಾಗಿವೆ. ಇದರ ಜೊತೆಗೆ, ಈಗಾಗಲೇ ಸಬ್‌ಸ್ಕ್ರಿಪ್ಷನ್ ಮುಗಿಸಿರುವ ಐದು ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ (List) ಆಗಲಿವೆ. ಇಲ್ಲಿ ಐಪಿಒ ಪ್ರಾಥಮಿಕ ಮಾರುಕಟ್ಟೆಯಾದರೆ, ಬಿಎಸ್​ಇ ಮತ್ತು ಎನ್​ಎಸ್​ಇಗಳು ಸೆಕೆಂಡರಿ ಮಾರುಕಟ್ಟೆ ಎನಿಸುತ್ತವೆ.

ಮಾರುಕಟ್ಟೆಗೆ ಲಗ್ಗೆ ಇಡಲಿರುವ 7 ಹೊಸ ಐಪಿಒಗಳು ಮತ್ತು ದಿನಾಂಕ

  1. ಗಲ್ಫ್ ಲಾಯ್ಡ್ಸ್ ಇಂಡಿಯಾ, ಜುಲೈ 20ರಿಂದ 22ರವರೆಗೆ
  2. ಮೆಟಾಲಿಕ್ ಟೆಕ್ನೋಫೋರ್ಜ್, ಜುಲೈ 21ರಿಂದ 23ರವರೆಗೆ
  3. ಶ್ರೀ ಬಾಲಾಜಿ ಮಾಲಾ ಟೆಕ್ಸ್​ಟೈಲ್ಸ್, ಜುಲೈ 22ರಿಂದ 24ರವರೆಗೆ
  4. ಕ್ಯೂಬ್ ಹೈವೇಸ್ ಟ್ರಸ್ಟ್ InvIT, ಜುಲೈ 22ರಿಂದ 24ರವರೆಗೆ
  5. ಇಂಡೋ ಎಂಐಎಂ, ಜುಲೈ 23ರಿಂದ 27ರವರೆಗೆ
  6. ಲೋಹಿಯಾ ಕಾರ್ಪ್, ಜುಲೈ 23ರಿಂದ 27ರವರೆಗೆ
  7. ಎಕ್ಸ್​ಟ್ರಾನೆಟ್ ಟೆಕ್ನಾಲಜೀಸ್, ಜುಲೈ 23ರಿಂದ 27ರವರೆಗೆ

ಇದನ್ನೂ ಓದಿ: ಕಷ್ಟಕಾಲಕ್ಕೆ ಚಿನ್ನ ಎನ್ನುತ್ತಾರೆ; ಬಿಕ್ಕಟ್ಟಿನಲ್ಲಿ ಬಂಗಾರದ ದರ ಏರುವ ಬದಲು ಇಳಿಯುತ್ತಿರುವುದು ಯಾಕೆ? ಇಲ್ಲಿದೆ ಸಂಭಾವ್ಯ ಕಾರಣಗಳು

ಮುಂದಿನ ವಾರ ಸಾರ್ವಜನಿಕ ಬಿಡ್ಡಿಂಗ್‌ಗಾಗಿ (Bidding) ಮುಕ್ತವಾಗಲಿರುವ ಈ 7 ಐಪಿಒಗಳಲ್ಲಿ ಮೇನ್-ಬೋರ್ಡ್ (Main-board) ಮತ್ತು ಎಸ್‌ಎಮ್‌ಇ (SME) ಎರಡು ವಿಭಾಗದ ಕಂಪನಿಗಳೂ ಸೇರಿವೆ. ಈ ಕಂಪನಿಗಳು ಮಾರುಕಟ್ಟೆಯಿಂದ ಒಟ್ಟಾರೆ ಕೋಟ್ಯಂತರ ರೂಪಾಯಿಗಳ ಬಂಡವಾಳವನ್ನು ಹೊಸ ಷೇರುಗಳ ವಿತರಣೆ (Fresh Issue) ಮತ್ತು ಆಫರ್ ಫಾರ್ ಸೇಲ್ (OFS) ಮೂಲಕ ಸಂಗ್ರಹಿಸಲು ಯೋಜಿಸಿವೆ.

ಇಂಡೋ ಎಂಐಎಂ ಮತ್ತು ಲೋಹಿಯಾ ಕಾರ್ಪ್ ಬಿಟ್ಟು ಉಳಿದ ಐದು ಕಂಪನಿಗಳು ಒಟ್ಟು 5,254 ಕೋಟಿ ರೂ ಮೊತ್ತದ ಬಂಡವಾಳ ಸಂಗ್ರಹದ ನಿರೀಕ್ಷೆಯಲ್ಲಿವೆ. ಇಂಡೋ ಎಂಐಎಂ ಬೆಂಗಳೂರು ಮೂಲದ ಪ್ರಿಸಿಶನ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯಾಗಿದೆ.

ಮಾರುಕಟ್ಟೆಯಲ್ಲಿ 5 ಹೊಸ ಲಿಸ್ಟಿಂಗ್ಸ್, ಮತ್ತು ದಿನಾಂಕ

ಕಳೆದ ವಾರ ಐಪಿಒ ಮುಗಿಸಿದ ಐದು ಹೊಸ ಕಂಪನಿಗಳು ಈ ವಾರ ಷೇರು ಮಾರುಕಟ್ಟೆಗೆ ಪದಾರ್ಪಣೆ ಮಾಡಲಿವೆ. ಈ ಕಂಪನಿಗಳ ಷೇರು ಲಿಸ್ಟಿಂಗ್ ದಿನಾಂಕ ಇಲ್ಲಿದೆ:

  1. ಎಸ್​ಬಿಐ ಫಂಡ್ಸ್ ಮ್ಯಾನೇಜ್ಮೆಂಟ್, ಜುಲೈ 21
  2. ಆಲ್ಪೈನ್ ಟೆಕ್ಸ್​ವರ್ಲ್ಡ್, ಜುಲೈ 21
  3. ಮಿಲ್​ವರ್ಕ್ಸ್ ಟೆಕ್ನಾಲಜೀಸ್, ಜುಲೈ 21
  4. ಕ್ಯಾಲಿಬರ್ ಮೈನಿಂಗ್ ಅಂಡ್ ಲಾಜಿಸ್ಟಿಕ್ಸ್
  5. ಸೋಟೆಫಿನ್ ಭಾರತ್

ಲಿಸ್ಟಿಂಗ್ ಗೇನ್ ನಿರೀಕ್ಷೆ: ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರೇ ಮಾರ್ಕೆಟ್ ಪ್ರೀಮಿಯಂ (GMP) ಉತ್ತಮವಾಗಿದ್ದು, ಹೂಡಿಕೆದಾರರು ಈ ಲಿಸ್ಟಿಂಗ್‌ಗಳಿಂದ ಉತ್ತಮ ಲಾಭ (Listing Gains) ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: ಗ್ರಾಹಕರಿಗೆ DND ಆಯ್ಕೆ ತೋರಿಸಿ, ಬ್ಲಾಕ್ಡ್ ಬ್ಯಾಡ್ಜ್ ಅಲ್ಲ; ಟ್ರೂಕಾಲರ್​ಗೆ ಸರ್ಕಾರ ನಿರ್ದೇಶನ

ಹೂಡಿಕೆದಾರರು ಗಮನಿಸಬೇಕಾದ ಪ್ರಮುಖ ದಿನಾಂಕಗಳು

  • ಐಪಿಒ ಬಿಡ್ಡಿಂಗ್ ಅವಧಿ: ಸಾಮಾನ್ಯವಾಗಿ ಪ್ರತಿಯೊಂದು ಐಪಿಒ ಕೂಡ ಹೂಡಿಕೆದಾರರಿಗೆ ಅರ್ಜಿ ಸಲ್ಲಿಸಲು 3 ಕೆಲಸದ ದಿನಗಳ ಕಾಲ ಮುಕ್ತವಾಗಿರುತ್ತದೆ.
  • ಅಲಾಟ್‌ಮೆಂಟ್ ಮತ್ತು ರಿಫಂಡ್: ಬಿಡ್ಡಿಂಗ್ ಮುಗಿದ ನಂತರದ ದಿನಗಳಲ್ಲಿ ಷೇರುಗಳ ಹಂಚಿಕೆ (Allotment) ಪ್ರಕ್ರಿಯೆ ನಡೆಯಲಿದ್ದು, ಷೇರು ಸಿಗದ ಹೂಡಿಕೆದಾರರಿಗೆ ಹಣದ ಮರುಪಾವತಿ (Refund) ಪ್ರಕ್ರಿಯೆ ಆರಂಭವಾಗುತ್ತದೆ.

ಗಮನಿಸಿ: ಪ್ರಸ್ತುತ ಪ್ರಾಥಮಿಕ ಮಾರುಕಟ್ಟೆಯಲ್ಲಿ ತೀವ್ರ ಚಟುವಟಿಕೆ ಕಂಡುಬರುತ್ತಿರುವುದರಿಂದ ಹೂಡಿಕೆದಾರರು ಮುಗಿಬಿದ್ದು ಹಣ ಹೂಡುವ ಮುನ್ನ ಎಚ್ಚರ ವಹಿಸಬೇಕು. ಯಾವುದೇ ಐಪಿಒಗೆ ಅರ್ಜಿ ಸಲ್ಲಿಸುವ ಮೊದಲು ಕಂಪನಿಯ ಆರ್ಥಿಕ ಸ್ಥಿತಿ (Financial Health), ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (RHP), ಮಾರುಕಟ್ಟೆಯಲ್ಲಿನ ಅದರ ವ್ಯಾಪಾರ ಭವಿಷ್ಯ ಮತ್ತು ಗ್ರೇ ಮಾರ್ಕೆಟ್ ಟ್ರೆಂಡ್ ಅನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸೇವಾಶುಲ್ಕ ಗ್ರಾಹಕರ ಪ್ರೀತಿ, ಕಡ್ಡಾಯವಲ್ಲ: ಹೋಟೆಲ್‌, ಬಾರ್‌-ರೆಸ್ಟೋರೆಂಟ್‌ ಬಿಸಿ ಮುಟ್ಟಿಸಿದ CCPA – Kannada News | CCPA Penalises 41 Restaurants after pralhad joshi instructions For Levying Service Charges By Default

ನವದೆಹಲಿ, (ಜುಲೈ 19): ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ (pralhad joshi) ಅವರ ಸೂಚನೆ ಮೇರೆಗೆ CCPA 41 ರೆಸ್ಟೋರೆಂಟ್‌ಗಳ ವಿರುದ್ಧ ಸ್ವಯಂ ದೂರು ದಾಖಲಿಸಿಕೊಂಡು ಕ್ರಮ ಕೈಗೊಂಡಿದೆ. ಗ್ರಾಹಕರಿಗೆ ಪೂರ್ವನಿಯೋಜಿತವಾಗಿ ʼಸೇವಾ ಶುಲ್ಕʼ ವಿಧಿಸುತ್ತಿದ್ದ ಹಿನ್ನೆಲೆಯಲ್ಲಿ Chaayos, Barbeque Nation, L’Opera French Bakery Private Limited ಮತ್ತಿತರರಿಗೆ ದಂಡ ವಿಧಿಸಿದೆ. ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH)ಗೆ ಬಂದ ದೂರುಗಳ ಆಧಾರದ ಮೇಲೆ ಗ್ರಾಹಕರಿಗೆ ಬಿಲ್‌ನಲ್ಲಿ ಪೂರ್ವನಿಯೋಜಿತವಾಗಿ ʼಸೇವಾ ಶುಲ್ಕ (service charge)ʼ ವಿಧಿಸುತ್ತಿದ್ದ 41 ರೆಸ್ಟೋರೆಂಟ್‌ಗಳ ವಿರುದ್ಧ CCPA ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಸೇವಾ ಶುಲ್ಕ ಗ್ರಾಹಕರಿಗೆ ಐಚ್ಛಿಕವಾಗಿದ್ದು, ಕಡ್ಡಾಯವಲ್ಲ. ಅವರೇ ಸ್ವಯಂಪ್ರೇರಿತವಾಗಿ ನೀಡಿದರೆ ಮಾತ್ರ ಸ್ವೀಕರಿಸತಕ್ಕದ್ದು ಎಂದು CCPA ಈ ಹಿಂದೆಯೇ ಆದೇಶಿಸಿದೆ. ಹಾಗಿದ್ದರೂ ನಿಯಮ ಉಲ್ಲಂಘಿಸಿ ಗ್ರಾಹಕರಿಗೆ ಕೊಡುವ ಬಿಲ್‌ನಲ್ಲಿ ಮೊದಲೇ ಸೇವಾ ಶುಲ್ಕ ಸೇರಿಸಿಯೇ ಕೊಡುತ್ತಿರುವುದು ಗಮನಕ್ಕೆ ಬಂದಿದ್ದು, ಯಾವುದೇ ಕಾರಣಕ್ಕೂ ಸ್ವಯಂ ಆಗಿ ಸೇವಾಶುಲ್ಕ ವಿಧಿಸುವಂತಿಲ್ಲ. ಇದನ್ನು ತಕ್ಷಣವೇ ನಿಲ್ಲಿಸಬೇಕು ಎಂದು CCPA ಕಟ್ಟೆಚ್ಚರ ನೀಡಿದೆ.

ಇದನ್ನೂ ಓದಿ: ಡಾರ್ಕ್ ಪ್ಯಾಟರ್ನ್​ ಪ್ರದರ್ಶಿಸಿದ್ದಕ್ಕೆ ಸ್ಪೈಸ್‌ಜೆಟ್​ಗೆ 1 ಲಕ್ಷ ರೂ ದಂಡ: ಪ್ರಲ್ಹಾದ ಜೋಶಿ ಸೂಚನೆ ಬೆನ್ನಲ್ಲೇ ಕಠಿಣ ಕ್ರಮ

ಸೇವಾ ಶುಲ್ಕ ಭರಿಸುವುದು ಸಂಪೂರ್ಣವಾಗಿ ಗ್ರಾಹಕರ ವಿವೇಚನೆಗೆ ಬಿಟ್ಟ ವಿಚಾರ. ಇದರಲ್ಲಿ ಒತ್ತಡ, ಒತ್ತಾಯ ಹಾಕುವಂತಿಲ್ಲ. ಬಿಲ್‌ನಲ್ಲೂ ಮೊದಲೇ ನಮೂದಿಸುವಂತಿಲ್ಲ ಎಂಬುದನ್ನು ಪುನರುಚ್ಚರಿಸಿರುವ CCPA, ಗ್ರಾಹಕ ಸಂರಕ್ಷಣಾ ಕಾನೂನನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸೂಚಿಸಿದೆ. ಅಲ್ಲದೇ, ಇಂತಹ ಅನ್ಯಾಯ ಕಂಡುಬಂದಲ್ಲಿ ಗ್ರಾಹಕರು ನೇರವಾಗಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (1915)ಗೆ ದೂರು ನೀಡುವಂತೆಯೂ ತಿಳಿಸಿದೆ.

ಸೇವಾಶುಲ್ಕ ಗ್ರಾಹಕರ ಪ್ರೀತಿ: ಸೇವಾಶುಲ್ಕ ಎನ್ನುವುದು ಅತ್ಯುತ್ತಮ ಸೇವೆಗೆ ಗ್ರಾಹಕರು ಪ್ರೀತಿಯಿಂದ ಕೊಡುವುದಾಗಿದೆ. ಅದನ್ನು ಒತ್ತಾಯದಿಂದ ಪಡೆಯುವುದು ಮತ್ತು ಪೂರ್ವನಿಯೋಜಿತವಾಗಿ ವಿಧಿಸುವುದನ್ನು ತರವಲ್ಲ. ಮತ್ತಿದನ್ನು ಸಹಿಸುವುದಿಲ್ಲ. ಹೋಟೆಲ್‌, ರೆಸ್ಟೋರೆಂಟ್‌, ಕ್ಯಾಂಟೀನ್‌ ನ್ಯಾಯಯುತ, ಪಾರದರ್ಶಕ ಮತ್ತು ಗ್ರಾಹಕ-ಸ್ನೇಹಿ ಪದ್ಧತಿಗಳನ್ನು ಅನುಸರಿಸಬೇಕು. ಗ್ರಾಹಕರ ಹಕ್ಕುಗಳ ಉಲ್ಲಂಘನೆ ಬದಲು ಗ್ರಾಹಕರ ಹಿತ ಕಾಯಬೇಕು ಎಂದಿದ್ದಾರೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version