ಬಲೂಚಿಸ್ತಾನ ಸ್ವಾತಂತ್ರ್ಯ ಘೋಷಣೆ; ಈ ಪ್ರಾಂತ್ಯ ಕೈತಪ್ಪಿದರೆ ಪಾಕಿಸ್ತಾನದ ಅರ್ಧಶಕ್ತಿ ಕುಂದಿದಂತಾಗುತ್ತಾ? – Kannada News | Balochistan declares independence, know why this matter worries Pakistan more

ಬಲೂಚಿಸ್ತಾನದ ಬುಗ್ತಿ ಹೋರಾಟಗಾರರುImage Credit source: Getty Images

ಇಸ್ಲಾಮಾಬಾದ್, ಜುಲೈ 19: ಭಾರತವನ್ನು ನೂರು ಹೋಳುಗಳಾಗಿ ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದ ಪಾಕಿಸ್ತಾನ ಈಗ ಆಂತರಿಕ ಸಮಸ್ಯೆಗಳಿಂದ ಜರ್ಝರಿತವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಬಲೂಚಿಸ್ತಾನದಲ್ಲಿ ಪ್ರತ್ಯೇಕತೆಯ ಕೂಗು ಪ್ರತಿಧ್ವನಿಸುತ್ತಲೇ ಇರುತ್ತದೆ. ಇದೇ ವೇಳೆ, ಬಲೂಚಿಸ್ತಾನ (Balochistan) ಮೂರು ದಿನಗಳ ಹಿಂದೆ ಸ್ವಾತಂತ್ರ್ಯ ಘೋಷಿಸಿಕೊಂಡಿದೆ. ದಶಕಗಳಿಂದ ನಡೆಯುತ್ತಿರುವ ಸಶಸ್ತ್ರ ಹೋರಾಟದ ಮುಂದುವರಿದ ಭಾಗವಾಗಿ ಈ ಘೋಷಣೆ ನಡೆದಿದೆ. ಈ ಬಲೂಚಿಸ್ತಾನದ ಸ್ವಾತಂತ್ರ್ಯದ ವಿಷಯವು ಪಾಕಿಸ್ತಾನದ ಆಂತರಿಕ ಭದ್ರತೆ ಮತ್ತು ಭೌಗೋಳಿಕ ರಾಜಕೀಯದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಮತ್ತು ಗಂಭೀರ ವಿಚಾರವಾಗಿದೆ. ಪಾಕಿಸ್ತಾನಕ್ಕೆ ಪಿಒಕೆಗಿಂತ ಹೆಚ್ಚಾಗಿ ಬಲೂಚಿಸದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ವಿಷಯಕ್ಕಿಂತಲೂ ಬಲೂಚಿಸ್ತಾನದ ಬೆಳವಣಿಗೆಗಳು ಇಸ್ಲಾಮಾಬಾದ್‌ಗೆ ಏಕೆ ಹೆಚ್ಚು ಆತಂಕಕಾರಿ ಎಂಬುದಕ್ಕೆ ಕೆಲವು ಪ್ರಮುಖ ಕಾರಣಗಳಿವೆ.

ಬಲೂಚಿಸ್ತಾನ ನೈಸರ್ಗಿಕ ಸಂಪನ್ಮೂಲಗಳ ಆಗರ

ಬಲೂಚಿಸ್ತಾನವು ಪಾಕಿಸ್ತಾನದ ಒಟ್ಟು ಭೂಪ್ರದೇಶದ ಸುಮಾರು 44% ರಷ್ಟನ್ನು ಹೊಂದಿದೆ. ಇದು ನೈಸರ್ಗಿಕ ಅನಿಲ (Gas), ತಾಮ್ರ ಮತ್ತು ಚಿನ್ನದಂತಹ ಅಪಾರ ಖನಿಜ ಸಂಪನ್ಮೂಲಗಳನ್ನು ಹೊಂದಿದೆ. ಪಾಕಿಸ್ತಾನದ ಆರ್ಥಿಕತೆಯು ಈ ಸಂಪನ್ಮೂಲಗಳ ಮೇಲೆ ಬಹಳಷ್ಟು ಅವಲಂಬಿತವಾಗಿದೆ. ಬಲೂಚಿಸ್ತಾನ ಕೈತಪ್ಪಿದರೆ ಪಾಕಿಸ್ತಾನದ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬೀಳುತ್ತದೆ.

ಇದನ್ನೂ ಓದಿ: ಮೊಜ್ತಬಾ ಖಮೇನಿ ಇರಾನ್‌ನಲ್ಲಿಯೇ ಇಲ್ಲವಂತೆ; ಇಸ್ರೇಲ್ ಹೇಳಿದ್ದೇನು?

ಗ್ವಾದರ್ ಬಂದರು ಮತ್ತು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC)

ಚೀನಾದ ಮಹತ್ವಾಕಾಂಕ್ಷೆಯ ಯೋಜನೆಯಾದ CPEC ಮತ್ತು ಗ್ವಾದರ್ ಬಂದರು ಬಲೂಚಿಸ್ತಾನದಲ್ಲಿದೆ. ಪಾಕಿಸ್ತಾನ ಮತ್ತು ಚೀನಾ ಎರಡಕ್ಕೂ ಈ ಪ್ರದೇಶ ಆರ್ಥಿಕವಾಗಿ ಮತ್ತು ತಂತ್ರಾತ್ಮಕವಾಗಿ (Strategically) ಬಹಳ ಮುಖ್ಯ. ಬಲೂಚಿಸ್ತಾನದಲ್ಲಿ ಅಶಾಂತಿ ಉಂಟಾದರೆ ಈ ಯೋಜನೆಗಳಿಗೆ ಭಾರಿ ಅಡಚಣೆಯಾಗುತ್ತದೆ, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಜುಗರವನ್ನುಂಟು ಮಾಡುತ್ತದೆ.

ಬಲೂಚಿಸ್ತಾನದ ಸುದೀರ್ಘ ಇತಿಹಾಸ ಮತ್ತು ದಂಗೆ

ಬಲೂಚಿಸ್ತಾನದ ವಿಲೀನವು (1948ರಲ್ಲಿ ಕಲಾತ್ ಸಂಸ್ಥಾನದ ವಿಲೀನ) ವಿವಾದಾತ್ಮಕವಾಗಿದೆ. ಅಲ್ಲಿನ ಜನರಲ್ಲಿ ತಾವು ಪಾಕಿಸ್ತಾನದ ಭಾಗವಲ್ಲ ಎಂಬ ಭಾವನೆ ದಶಕಗಳಿಂದ ಇದೆ. ಅಲ್ಲಿನ ಸ್ಥಳೀಯರು ಸಂಪನ್ಮೂಲಗಳ ಶೋಷಣೆ ಮತ್ತು ಅಭಿವೃದ್ಧಿಯ ಕೊರತೆಯ ಬಗ್ಗೆ ದಶಕಗಳಿಂದ ದೂರು ನೀಡುತ್ತಿದ್ದಾರೆ. ಬಲೂಚಿಸ್ತಾನ ಲಿಬರೇಶನ್ ಆರ್ಮಿ (BLA) ನಂತಹ ಸಂಘಟನೆಗಳು ಪಾಕಿಸ್ತಾನದ ವಿರುದ್ಧ ಸಶಸ್ತ್ರ ಹೋರಾಟ ನಡೆಸುತ್ತಿವೆ.

PoK vs ಬಲೂಚಿಸ್ತಾನ

ಪಾಕ್ ಆಕ್ರಮಿಕ ಕಾಶ್ಮೀರವು ಮುಖ್ಯವಾಗಿ ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಮತ್ತು ಪ್ರಾದೇಶಿಕ ವಿವಾದ. ಅಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದರೂ, ಬಲೂಚಿಸ್ತಾನದಷ್ಟು ತೀವ್ರವಾದ ಮತ್ತು ದೀರ್ಘಕಾಲೀನ ಸಶಸ್ತ್ರ ಬಂಡಾಯದ ಇತಿಹಾಸ ಅಲ್ಲಿಲ್ಲ. ಭಾರತದ ವಿರುದ್ಧ ರಕ್ಷಣಾತ್ಮಕವಾಗಿ ಇರಲು ಅಥವಾ ಆಕ್ರಮಣಕಾರಿಯಾಗಿ ಇರಲು ಪಾಕಿಸ್ತಾನಕ್ಕೆ ಪಿಒಕೆ ಅಗತ್ಯ ಇದೆ. ಅದು ಬಿಟ್ಟರೆ ಆ ಭೂಭಾಗದಿಂದ ಪಾಕಿಸ್ತಾನಕ್ಕೆ ಅಂಥದ್ದೇನು ಆಗಬೇಕಾದ್ದಿಲ್ಲ ಎಂಬುದು ಕೆಲ ತಜ್ಞರ ಅನಿಸಿಕೆ.

ಇದನ್ನೂ ಓದಿ: ಸ್ಕೂಲ್​ನಲ್ಲಿ ಫೇಲ್, ಬ್ಯುಸಿನೆಸ್​ನಲ್ಲಿ ವಿನ್; ದೊಡ್ಡ ಬ್ಯುಸಿನೆಸ್ ಸಾಮ್ರಾಜ್ಯ ಕಟ್ಟಿದ ರೋನಿ ಸ್ಕ್ರೂವಾಲಾ ಅವರ ಯಶೋಗಾಥೆ

ಆದರೆ, ಬಲೂಚಿಸ್ತಾನವು ಪಾಕಿಸ್ತಾನದ ‘ಅಖಂಡತೆ’ಗೇ ನೇರ ಸವಾಲಾಗಿ ಪರಿಣಮಿಸಿದೆ. ಬಲೂಚಿಸ್ತಾನದ ಬಂಡುಕೋರರು ಸ್ವಾತಂತ್ರ್ಯವನ್ನೇ ಗುರಿಯಾಗಿಸಿಕೊಂಡಿದ್ದಾರೆ, ಇದು ಪಾಕಿಸ್ತಾನದ ಅಸ್ತಿತ್ವಕ್ಕೆ ದೊಡ್ಡ ಸವಾಲಾಗಿದೆ. ಈ ಬಲೂಚಿಗಳು ಸ್ವಾತಂತ್ರ್ಯ ಘೋಷಣೆ ಮಾಡಿರುವುದು ಪಾಕಿಸ್ತಾನಕ್ಕೆ ಹೊಸ ಸವಾಲು ತಂದಿದೆ.

ಪಾಕಿಸ್ತಾನಕ್ಕೆ ಬಲೂಚಿಸ್ತಾನ ಕೇವಲ ಒಂದು ಪ್ರದೇಶವಲ್ಲ; ಅದು ಅವರ ಆರ್ಥಿಕತೆಯ ಬೆನ್ನೆಲುಬು ಮತ್ತು ಕಾರ್ಯತಂತ್ರದ ಪ್ರಮುಖ ಕೇಂದ್ರ. ಅಲ್ಲಿನ ಸ್ವಾತಂತ್ರ್ಯದ ಕೂಗು ಮತ್ತು ಸಶಸ್ತ್ರ ಬಂಡಾಯವು ಪಾಕಿಸ್ತಾನದ ಸರ್ಕಾರದ ಮೇಲೆ ಭಾರಿ ಒತ್ತಡವನ್ನು ಹೇರುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಈ ವಿಷಯವು ಪಾಕಿಸ್ತಾನದ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಆಡಳಿತ ವೈಫಲ್ಯದ ಬಗ್ಗೆ ಚರ್ಚೆಗೆ ಕಾರಣವಾಗುತ್ತಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗರ ಲೂಟಿ ಮಾಡುತ್ತಿರುವ ತಮಿಳು ಸಿನಿಮಾ ‘ಜನ ನಾಯಗನ್’ – Kannada News | Jana Naayagan Bengaluru Ticket Price Loot: Vijay Movie Premier Shows Shock Fans

ತಮಿಳುನಾಡು ಸಿಎಂ ವಿಜಯ್ (Vijay) ನಟನೆಯ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಆಗಲಿದೆ. ಜುಲೈ 23ಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದ್ದು, ಇದು ವಿಜಯ್ ಅವರ ಕೊನೆಯ ಸಿನಿಮಾ ಎಂದು ಚಿತ್ರತಂಡ ಮೊದಲೇ ಪ್ರಚಾರ ಮಾಡಿತ್ತು. ಸಹಜವಾಗಿಯೇ ಸಿನಿಮಾ ಅಭಿಮಾನಿಗಳು, ವಿಜಯ್ ಅವರ ಅಭಿಮಾನಿಗಳು ಸಿನಿಮಾ ವೀಕ್ಷಣೆಗೆ ಮುಗಿ ಬೀಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಬೇರೆ ನಗರಗಳಲ್ಲಿ ಸಾಧಾರಣವಾಗಿರುವ ಟಿಕೆಟ್ ದರ, ಬೆಂಗಳೂರಿನಲ್ಲಿ ಮಾತ್ರ ಗಗನಕ್ಕೇರಿದೆ. ಆ ಮೂಲಕ ಬೆಂಗಳೂರಿಗರ ಲೂಟಿ ಮಾಡುತ್ತಿದ್ದಾನೆ, ‘ಜನ ನಾಯಕ’.

‘ಜನ ನಾಯಗನ್’ ಸಿನಿಮಾದ ಪ್ರೀಮಿಯರ್ ಶೋ ಅಡ್ವಾನ್ಸ್ ಬುಕಿಂಗ್ ಬೆಂಗಳೂರಿನಲ್ಲಿ ಓಪನ್ ಆಗಿದೆ. ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಪ್ರೀಮಿಯರ್ ಶೋ ಟಿಕೆಟ್ ಬೆಲೆ ಹಲವು ಪಟ್ಟು ಹೆಚ್ಚಿದೆ. ಬೆಂಗಳೂರಿನಲ್ಲಿ ‘ಜನ ನಾಯನಗ್’ ಸಿನಿಮಾವನ್ನು ಜುಲೈ 23ರ ಬೆಳಿಗಿನ ಜಾವ 6:30 ಕ್ಕೆ ಪ್ರದರ್ಶಿಸಲಾಗುತ್ತಿದೆ. ಸದ್ಯಕ್ಕೆ ಈ ಶೋಗಳಿಗೆ ಮಾತ್ರವೇ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ಈ ಪ್ರೀಮಿಯರ್ ಶೋ ಟಿಕೆಟ್​​ಗಳ ಬೆಲೆಯನ್ನು ಗಗನಕ್ಕೇರಿಸಲಾಗಿದೆ.

ಬೆಂಗಳೂರಿನಲ್ಲಿ ಜುಲೈ 23ರ ಬೆಳಿಗಿನ ಶೋಗಳಿಗೆ ಕನಿಷ್ಟ ಟಿಕೆಟ್ ದರ 1000 ರೂಪಾಯಿಗಳಿವೆ. ಗರಿಷ್ಠ ಟಿಕೆಟ್ ದರ 2500 ರೂಪಾಯಿಗಳು. ಕೆಲ ಮಲ್ಟಿಪ್ಲೆಕ್ಸ್​​ಗಳಂತೂ ಕನಿಷ್ಟ ಟಿಕೆಟ್ ಬೆಲೆ 1500 ರೂಪಾಯಿಗಳಿವೆ, ಕೆಲವುಗಳಲ್ಲಿ 1700. ಸಿಂಗಲ್ ಸ್ಕ್ರೀನ್​​ಗಳು ಸಹ ಬೆಲೆ ಏರಿಸುವುದರಲ್ಲಿ ಹಿಂದೆ ಬಿದ್ದಿಲ್ಲ, ಸಿಂಗಲ್ ಸ್ಕ್ರೀನ್​​ಗಳಲ್ಲಿ ‘ಜನ ನಾಯಗನ್’ ಸಿನಿಮಾ ಕನಿಷ್ಟ ಟಿಕೆಟ್ ಬೆಲೆ 800 ಹಾಗೂ 900 ರೂಪಾಯಿಗಳು. ಕೆಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಮಲ್ಟಿಪ್ಲೆಕ್ಸ್​​ಗಳಿಗೂ ಕಾಂಪಿಟೇಷನ್ ಕೊಟ್ಟಿವೆ ಬೆಲೆ ಏರಿಸುವುದರಲ್ಲಿ.

ಇದನ್ನೂ ಓದಿ:ಬಹಿರಂಗವಾಗಿ ವಿಜಯ್, ತ್ರಿಷಾ ಬಗ್ಗೆ ಹಾಸ್ಯ ಮಾಡಿದ ಮಲಯಾಳಂ ನಟ; ವಿಡಿಯೋ ವೈರಲ್

ಚೆನ್ನೈನಲ್ಲಿ ‘ಜನ ನಾಯಗನ್’ ಸಿನಿಮಾದ ಗರಿಷ್ಠ ಟಿಕೆಟ್ ದರ 190 ರೂಪಾಯಿಗಳು. ಬಾಲ್ಕನಿ ವಿತ್ ಎಸಿ ಟಿಕೆಟ್ ಖರೀದಿಸಿದರೂ ಸಹ ನೀವು ಕೊಡಬೇಕಿರುವ ಹಣ 190 ರೂಪಾಯಿಗಳು ಮಾತ್ರ. ಇನ್ನು ಹೈದರಾಬಾದ್​​ನಲ್ಲಿ ಇದೇ ಸಿನಿಮಾದ ಗರಿಷ್ಟ ಟಿಕೆಟ್ ದರ 300 ರೂಪಾಯಿ ಇಲ್ಲೂ ಸಹ 300 ರೂಪಾಯಿ ಕೊಟ್ಟರೆ ನಿಮಗೆ ಏಸಿ-ಬಾಲ್ಕನಿ ಟಿಕೆಟ್ ದೊರಕುತ್ತದೆ. ಮುಂಬೈನಲ್ಲೂ ಸಹ ಟಿಕೆಟ್ ದರ ಹೆಚ್ಚೇನೂ ಇಲ್ಲ. ಅಲ್ಲಿಯೂ ಸಹ ಗರಿಷ್ಠ ಟಿಕೆಟ್ ದರ 300 ರೂಪಾಯಿ ತೀರಾ ಹೆಚ್ಚೆಂದರೆ 350 ರೂಪಾಯಿಗಳು. ವಿಶೇಷವೆಂದರೆ ಮುಂಬೈನಲ್ಲಿ ಸಹ ಬೆಂಗಳೂರಿನಂತೆ ಬೆಳ್ಳಂಬೆಳಿಗ್ಗೆ ಶೋ ಪ್ರದರ್ಶಿಸಲಾಗುತ್ತಿದೆ. ಆದರೂ ಸಹ 300 ರೂಪಾಯಿಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಕನಿಷ್ಠ ಟಿಕೆಟ್ ದರವೇ 1000ಕ್ಕೂ ಮೇಲಿದೆ. ಇದೇಂಥಹಾ ನ್ಯಾಯ?

ಬೆಂಗಳೂರಿನ ಸಿನಿಮಾ ಪ್ರೇಮಿಗಳನ್ನು ಪರ ಭಾಷೆ ಸಿನಿಮಾ ಮಂದಿ ಹೀಗೆ ಹರಕೆಯ ಕುರಿ ಮಾಡುತ್ತಿರುವುದು ಇದು ಮೊದಲೇನೂ ಅಲ್ಲ. ಪ್ರತಿ ಬಾರಿ ಪರಭಾಷೆಯ ದೊಡ್ಡ ಸಿನಿಮಾ ಬಿಡುಗಡೆ ಆದಾಗ ಇದೇ ಕತೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏಕರೂಪ ಟಿಕೆಟ್ ದರದ ಚರ್ಚೆ ಆಗಿತ್ತು, ಆದರೆ ಕನ್ನಡದ ಕೆಲ ನಿರ್ಮಾಣ ಸಂಸ್ಥೆಗಳೇ ನ್ಯಾಯಾಲಯಕ್ಕೆ ಹೋಗಿ ಅದಕ್ಕೆ ತಡೆ ತಂದವು. ಅದರ ಪರಿಣಾಮವನ್ನು ಕನ್ನಡ ಸಿನಿಮಾ ಪ್ರೇಮಿಗಳು ಅನುಭವಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಟ್ರೈಲರ್ ಬಿಡುಗಡೆಗೆ ನಿಗದಿಯಾಯ್ತು ದಿನಾಂಕ, ಸ್ಥಳ ಎಲ್ಲಿ? – Kannada News | Toxic movie trailer may release on August 28

ಟಾಕ್ಸಿಕ್’ (Toxic) ಪ್ರಸ್ತುತ ಭಾರತದ ಬಹು ನಿರೀಕ್ಷಿತ ಸಿನಿಮಾ. ಯಶ್ ನಟಿಸಿ, ಸಹ ನಿರ್ಮಾಣ ಸಹ ಮಾಡಿರುವ ಈ ಸಿನಿಮಾಕ್ಕಾಗಿ ದೇಶ, ವಿದೇಶಗಳ ಸಿನಿಮಾ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾದ ಟೀಸರ್, ಪೋಸ್ಟರ್, ಹಾಡುಗಳು ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ. ಜೊತೆಗೆ ಸಿನಿಮಾದ ಕತೆ ಏನಿರಬಹುದೆಂಬ ಕುತೂಹಲವನ್ನೂ ಹುಟ್ಟು ಹಾಕಿವೆ. ಈಗಾಗಲೇ ಪೋಸ್ಟರ್ ಇನ್ನಿತರೆ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ಟ್ರೈಲರ್ ಬಿಡುಗಡೆಗೂ ಮುಹೂರ್ತ ನಿಗದಿ ಪಡಿಸಿದ್ದಾರೆ.

ಕೆಲ ಮೂಲಗಳ ಪ್ರಕಾರ, ಸಿನಿಮಾದ ಟ್ರೈಲರ್ ಅನ್ನು ಈ ತಿಂಗಳಲ್ಲಿ ಬಿಡುಗಡೆ ಮಾಡುತ್ತಿಲ್ಲ, ಬದಲಿಗೆ ಮುಂದಿನ ತಿಂಗಳ ಎರಡನೇ ವಾರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ, ಆಗಸ್ಟ್ 8 ರಂದು ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದೆ ಎಂಬ ಸುದ್ದಿ ದಟ್ಟವಾಗಿ ಕೇಳಿ ಬರುತ್ತಿದೆ.

ಸಿನಿಮಾದ ಟ್ರೈಲರ್ ಬಿಡುಗಡೆಗಾಗಿ ಬೆಂಗಳೂರಿನಲ್ಲಿ ಯಶ್ ಅದ್ಧೂರಿಯಾದ ಕಾರ್ಯಕ್ರಮವನ್ನು ಆಯೋಜನೆ ಮಾಡಲಿದ್ದಾರಂತೆ. ಈ ಕಾರ್ಯಕ್ರಮದಲ್ಲಿ ಯಶ್ ಹಾಗೂ ಸಿನಿಮಾದ ಇತರೆ ಪ್ರಮುಖ ನಟಿಯರು, ನಟರು, ತಂತ್ರಜ್ಞರು ಎಲ್ಲರೂ ಭಾಗಿ ಆಗಲಿದ್ದಾರೆ. ಕಾರ್ಯಕ್ರಮದಲ್ಲಿ ಕೆಲ ಪ್ರಮುಖ ವ್ಯಕ್ತಿಗಳನ್ನು ಅತಿಥಿಗಳನ್ನಾಗಿ ಕರೆದುಕೊಂಡು ಬರಲು ಸಹ ಯಶ್ ಯೋಜನೆ ಹಾಕಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಟಾಕ್ಸಿಕ್’ನ ‘ತಬಾಹಿ’ ವೈರಲ್: ಹಾಡು ಬರೆದಿರುವ ಭಟ್ಟರು ಹೇಳಿದ್ದೇನು?

ಸಿನಿಮಾದ ಟ್ರೈಲರ್ ಬಿಡುಗಡೆಗೂ ಮುಂಚೆ ಯಶ್ ಅವರು ದೇಶದಾದ್ಯಂತ ಸಂಚರಿಸಿ ಸಿನಿಮಾದ ಪರ ಪ್ರಚಾರ ಮಾಡಲಿದ್ದಾರೆ. ಎಲ್ಲ ಪ್ರಮುಖ ರಾಜ್ಯಗಳ ಪ್ರಮುಖ ನಗರಗಳಲ್ಲಿಯೂ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ದೇಶ ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಸಹ ಯಶ್ ಹಾಗೂ ತಂಡ ಅದ್ಧೂರಿ ಪ್ರಚಾರವನ್ನು ಮಾಡಲಿದೆ.

‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದು, ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಸಿನಿಮಾನಲ್ಲಿ ನಯನತಾರಾ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾ ಆಗಸ್ಟ್ 26ಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೈಹಿಕ ಕಿರುಕುಳ ಆರೋಪ; ಅಭಿಷೇಕ್ ಪೊರೆಲ್ ಬಂಧನಕ್ಕೆ ಹೈಕೋರ್ಟ್ ಆದೇಶ – Kannada News | Abhishek Porel Arrest: Kolkata HC Orders Custody in physical attack, Threat Case

ಕಳೆದ ತಿಂಗಳಷ್ಟೇ, ಮಹಿಳೆಯೊಬ್ಬರು, ಅಭಿಷೇಕ್ ಪೊರೆಲ್ ಅವರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದು, ಮದುವೆಯ ಸುಳ್ಳು ಭರವಸೆ ನೀಡಿ ಅಭಿಷೇಕ್ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದರು. ಇದೀಗ ಮದುವೆಯಾಗುವಂತೆ ಕೇಳಲು ಹೋದರೆ ಅಭಿಷೇಕ್ ನನ್ನ ಮೇಲೆ ಹಲ್ಲೆ ಮಾಡಿದ್ದು, ಬೆದರಿಕೆಯನ್ನು ಹಾಕಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ(PC-PTI).

Source link

ಕಷ್ಟಕಾಲಕ್ಕೆ ಚಿನ್ನ ಎನ್ನುತ್ತಾರೆ; ಬಿಕ್ಕಟ್ಟಿನಲ್ಲಿ ಬಂಗಾರದ ದರ ಏರುವ ಬದಲು ಇಳಿಯುತ್ತಿರುವುದು ಯಾಕೆ? ಇಲ್ಲಿದೆ ಸಂಭಾವ್ಯ ಕಾರಣಗಳು – Kannada News | Gold Rates rise when chips are down, but why the prices of yellow metal going down during West Asia crisis

ನವದೆಹಲಿ, ಜುಲೈ 19: ಜಾಗತಿಕವಾಗಿ ಏನಾದರೂ ಬಿಕ್ಕಟ್ಟು (Crisis) ಅಥವಾ ಯುದ್ಧದ ಪರಿಸ್ಥಿತಿ ಎದುರಾದರೆ ಹೂಡಿಕೆದಾರರು ಸಾಮಾನ್ಯವಾಗಿ ಸುರಕ್ಷಿತ ಹೂಡಿಕೆಯಾಗಿ ಚಿನ್ನ ಮತ್ತು ಬೆಳ್ಳಿಯ ಕಡೆಗೆ ಮುಖ ಮಾಡುತ್ತಾರೆ. ಇದರಿಂದ ಚಿನ್ನದ ಬೆಲೆ (Gold Price) ಹೆಚ್ಚಾಗುತ್ತದೆ. ಆದರೆ, ಇತ್ತೀಚಿನ ಪಶ್ಚಿಮ ಏಷ್ಯಾ ಸಂಘರ್ಷದ ಅವಧಿಯಲ್ಲಿ ಚಿನ್ನದ ಬೆಲೆ ಸುಮಾರು 27% ರಷ್ಟು ಮತ್ತು ಬೆಳ್ಳಿಯ ಬೆಲೆ ಬರೋಬ್ಬರಿ 52% ರಷ್ಟು ಕುಸಿದಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲೂ ಚಿನ್ನದ ಬೆಲೆ ಕುಸಿಯಲು ಕಾರಣವೇನು?

ಹಣಕಾಸು ತಜ್ಞರ ಪ್ರಕಾರ, ಆರ್ಥಿಕತೆಯಲ್ಲಿ ಎರಡು ರೀತಿಯ ಬಿಕ್ಕಟ್ಟುಗಳು ಇರುತ್ತವೆ, ಹಣಕಾಸು ಮಾರುಕಟ್​ಟೆ ಬಿಕ್ಕಟ್ಟು ಮತ್ತು ಭೌತಿಕ ಕೊರತೆಯ ಬಿಕ್ಕಟ್ಟು. ಇವೆರಡು ಸಂದರ್ಭದಲ್ಲಿ ಚಿನ್ನದ ಬೆಲೆ ಏರುವುದುಂಟು.

ದೇಶಗಳು ಅತಿಯಾದ ಸಾಲ ಮಾಡುವುದರಿಂದ, ಬ್ಯಾಂಕುಗಳ ನಷ್ಟದಿಂದ ಅಥವಾ ತಪ್ಪು ಆರ್ಥಿಕ ನೀತಿಗಳಿಂದಾಗಿ ಹಣದುಬ್ಬರ (Inflation) ಹೆಚ್ಚಾದಾಗ ಹಣಕಾಸು ಮಾರುಕಟ್ಟೆಯ ಬಿಕ್ಕಟ್ಟು (Financial Market Crisis) ಸಂಭವಿಸುತ್ತದೆ. ಇಂತಹ ಸಮಯದಲ್ಲಿ ಕರೆನ್ಸಿಯ (ಹಣದ) ಮೌಲ್ಯ ಕುಸಿಯುತ್ತದೆ. ಆಗ ಹೂಡಿಕೆದಾರರು ಚಿನ್ನವನ್ನು ಖರೀದಿಸುತ್ತಾರೆ ಮತ್ತು ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತದೆ.

ಇದನ್ನೂ ಓದಿ: ಗ್ರಾಹಕರಿಗೆ DND ಆಯ್ಕೆ ತೋರಿಸಿ, ಬ್ಲಾಕ್ಡ್ ಬ್ಯಾಡ್ಜ್ ಅಲ್ಲ; ಟ್ರೂಕಾಲರ್​ಗೆ ಸರ್ಕಾರ ನಿರ್ದೇಶನ

ಭೌತಿಕ ಕೊರತೆಯ ಪರಿಸ್ಥಿತಿಯು ತೈಲ (Oil), ಗ್ಯಾಸ್ ಅಥವಾ ಇತರ ಅಗತ್ಯ ವಸ್ತುಗಳ ಭೌತಿಕ ಕೊರತೆಯಿಂದ ಉಂಟಾಗುವ ಬಿಕ್ಕಟ್ಟು (Physical Shortage Crisis). ಪ್ರಸ್ತುತ ಜಗತ್ತು ಎದುರಿಸುತ್ತಿರುವುದು ಇದೇ ರೀತಿಯ ಬಿಕ್ಕಟ್ಟನ್ನು. ಇತ್ತೀಚೆಗೆ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $135 ದಾಟಿದಾಗ ಇಂಧನ ವೆಚ್ಚ ಗಗನಕ್ಕೇರಿತು. ಈ ಬಿಕ್ಕಟ್ಟಿನಲ್ಲಿ ಚಿನ್ನದ ಬೆಲೆ ಕುಸಿಯುತ್ತಿದೆ. ಇದಕ್ಕೆ ಕಾರಣ ಇದೆ.

ಇಂಧನ ಬಿಕ್ಕಟ್ಟಿನಲ್ಲಿ ಚಿನ್ನದ ಬೆಲೆ ಕುಸಿಯುವುದೇಕೆ?

ಪ್ರಸ್ತುತ ಇಂಧನ ಬಿಕ್ಕಟ್ಟಿನಲ್ಲಿ ಚಿನ್ನದ ಬೆಲೆ ಇಳಿಯಲು ಎರಡು ಪ್ರಮುಖ ಸಂಭವನೀಯ ಕಾರಣಗಳಿವೆ:

ಅಗತ್ಯದ ಆದ್ಯತೆ: ಇಂಧನ (ಶಕ್ತಿ/ಎನರ್ಜಿ) ಎಂಬುದು ಪ್ರತಿಯೊಬ್ಬರಿಗೂ ಅತ್ಯಗತ್ಯ ವಸ್ತು, ಆದರೆ ಚಿನ್ನ ಹಾಗಿಲ್ಲ. ಇಂಧನದ ಬೆಲೆ ಹೆಚ್ಚಾದಾಗ ಸರ್ಕಾರಗಳು ಮತ್ತು ಜನರು ತಮ್ಮ ಬಹುಪಾಲು ಹಣವನ್ನು ತೈಲ ಇಂಪೋರ್ಟ್ (ಆಮದು) ಮಾಡಲು ಮತ್ತು ದೈನಂದಿನ ಇಂಧನ ವೆಚ್ಚಗಳಿಗಾಗಿಯೇ ಖರ್ಚು ಮಾಡಬೇಕಾಗುತ್ತದೆ.

ಚಿನ್ನದ ಆಮದು ಇಳಿಕೆ: ಇಂಧನಕ್ಕಾಗಿ ಹಣ ಹೆಚ್ಚು ಖರ್ಚಾಗುವುದರಿಂದ, ಚಿನ್ನದ ಮೇಲೆ ಹೂಡಿಕೆ ಮಾಡಲು ಜನರ ಬಳಿ ಹಣ ಕಡಿಮೆ ಉಳಿಯುತ್ತದೆ. ಜೊತೆಗೆ, ಸರ್ಕಾರಗಳು ಚಿನ್ನದ ಆಮದನ್ನು ಕಡಿಮೆ ಮಾಡಲು ಅದರ ಮೇಲಿನ ತೆರಿಗೆಯನ್ನು ಹೆಚ್ಚಿಸಿವೆ. ಇದರ ಪರಿಣಾಮವಾಗಿ ಚಿನ್ನದ ಬೇಡಿಕೆ (Demand) ಅರ್ಧಕ್ಕರ್ಧ ಕಡಿಮೆಯಾಗಿ ಬೆಲೆ ಕುಸಿದಿರಬಹುದು.

ಮುಂದಿನ ದಿನಗಳಲ್ಲಿ ಬಂಗಾರದ ದರ ಏರುತ್ತಾ, ಇಳಿಯುತ್ತಾ?

ಚಿನ್ನದ ಮುಂದಿನ ಬೆಲೆ ಏರಿಳಿತಗಳು ಅಮೆರಿಕಾದ ಸೆಂಟ್ರಲ್ ಬ್ಯಾಂಕ್ (US Federal Reserve) ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿವೆ:

  • ಒಂದು ವೇಳೆ ಹಣದುಬ್ಬರ ನಿಯಂತ್ರಿಸಲು ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚೇ ಇಟ್ಟರೆ, ಚಿನ್ನದ ಬೆಲೆ ಇನ್ನೂ ಕುಸಿಯಬಹುದು.
  • ಒಂದು ವೇಳೆ ಆರ್ಥಿಕ ಕುಸಿತ ತಡೆಯಲು ಬಡ್ಡಿದರಗಳನ್ನು ಕಡಿಮೆ ಮಾಡಿದರೆ, ಅದು ಮತ್ತೆ ಹಣದುಬ್ಬರಕ್ಕೆ ಕಾರಣವಾಗಿ ಚಿನ್ನದ ಬೆಲೆ ಏರಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ದಿನಸಿ ವಸ್ತುವಿನಂತೆ ಮನೆಬಾಗಿಲಿಗೆ ಬರುತ್ತೆ ಸಣ್ಣ ಎಲ್​ಪಿಜಿ ಸಿಲಿಂಡರ್; ಎಚ್​ಪಿ ನಂತರ ಈಗ ಭಾರತ್ ಗ್ಯಾಸ್​ನಿಂದಲೂ ಸಪ್ಲೈ ಶುರು

ಚಿನ್ನ, ಬೆಳ್ಳಿಯಲ್ಲಿ ಹೂಡಿಕೆ ಮಾಡಬೇಕೆನ್ನುವವರಿಗೆ ಸಲಹೆ

ಕರೆನ್ಸಿ ಅಪಮೌಲ್ಯದ ವಿರುದ್ಧ ಚಿನ್ನ ಮತ್ತು ಬೆಳ್ಳಿ ಸದಾ ರಕ್ಷಣೆ ನೀಡುತ್ತವೆ. ಇಂದಿನ ಅಗತ್ಯ ವಸ್ತುಗಳ ಕೊರತೆಯ ಬಿಕ್ಕಟ್ಟು ನಾಳೆ ಮತ್ತೆ ಸಾಲದ ಬಿಕ್ಕಟ್ಟಾಗಿ ಬದಲಾಗಬಹುದು. ಆದ್ದರಿಂದ ದೀರ್ಘಾವಧಿಯ ದೃಷ್ಟಿಯಿಂದ ಪೋರ್ಟ್‌ಫೋಲಿಯೊದಲ್ಲಿ ಸ್ವಲ್ಪ ಭಾಗವನ್ನು ಚಿನ್ನದಲ್ಲಿ ಹೂಡಿಕೆ ಮಾಡುವುದು ಇನ್ನೂ ಬುದ್ಧಿವಂತಿಕೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಾಗಾಲ್ಯಾಂಡ್‌ನಲ್ಲಿ ಭೀಕರ ಭೂಕುಸಿತ; 4 ಜನ ಸಾವು, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ – Kannada News | 4 Killed In Massive Landslide In Nagaland, More Feared Dead

ಗುವಾಹಟಿ, ಜುಲೈ 19: ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೀಕರ ಭೂಕುಸಿತ (Landlside) ಸಂಭವಿಸಿದ್ದು, ಮಕ್ಕಳು ಸೇರಿದಂತೆ 4 ಜನರು ಸಾವನ್ನಪ್ಪಿದ್ದಾರೆ. ಭಾರಿ ಮಳೆಯಿಂದಾಗಿ ಈ ಪ್ರದೇಶದಲ್ಲಿ ದಿಢೀರ್ ಪ್ರವಾಹವೂ ಉಂಟಾಗಿದೆ. ಭೂಕುಸಿತದ ಭೀಕರತೆಗೆ ಹಲವು ಮನೆಗಳು ಕೊಚ್ಚಿಹೋಗಿವೆ. ಮಣ್ಣಿನ ರಾಶಿಯ ಅಡಿಯಲ್ಲಿ ಸಿಲುಕಿಕೊಂಡಿರಬಹುದಾದ ಜನರಿಗಾಗಿ ರಕ್ಷಣಾ ಸಿಬ್ಬಂದಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಭೂಕುಸಿತದ ಬೆನ್ನಲ್ಲೇ ಈ ಪ್ರದೇಶಕ್ಕೆ ಭಾರಿ ಪ್ರಮಾಣದ ನೀರು ನುಗ್ಗುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮ್ಮ-ತಂದೆಯ ಬಾಂಧ್ಯವ್ಯವನ್ನ ಬಿಚ್ಚಿಟ್ಟ ಪುತ್ರಿ ಅನುಸೂಯ – Kannada News | Daughter anasuya Talks about Her demise Mother Chennamma

ಬೆಂಗಳೂರು, (ಜುಲೈ 19): ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ (Chennamma Deve Gowda) ಅವರ ಅಂತ್ಯಕ್ರಿಯೆ ನಾಳೆ (ಜುಲೈ 20) ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದ ಸಮೀಪವಿರುವ ಕ್ಯಾತನಹಳ್ಳಿ ಗ್ರಾಮದ ಜಮೀನಿನಲ್ಲಿ ನಡೆಯಲಿದೆ. ಬೆಂಗಳೂರಿನ ನಿವಾಸದಿಂದ ಚೆನ್ನಮ್ಮರ ಪಾರ್ಥಿವ ಶರೀರವನ್ನು ಕೊಂಡೊಯ್ಯುವ ವೇಳೆ ದೇವೇಗೌಡ್ರು ಬಿಕ್ಕಿ ಬಿಕ್ಕ ಅತ್ತರು. ಇನ್ನು ಪುತ್ರಿ ಅನುಸೂಯ ತಾಯಿ ಚೆನ್ನಮ್ಮ ಬಗ್ಗೆ ಟಿವಿ9ನ ಜೊತೆ ಹಂಚಿಕೊಂಡಿದ್ದು, ಅಮ್ಮ ಮುತ್ತೈದೆ ಸಾವನ್ನ ಬಯಸಿದ್ದರು. ಅದರಂತೆ ಮುತ್ತೈದೆಯಾಗಿ ಪ್ರಾಣ ಬಿಟ್ಟಿದ್ದಾರೆ. ಒಂದು ಕಡೆ ಅವರ ಅಗಲಿಕೆ ನೋವಿದ್ದರೆ ಮತ್ತೊಂದೆಡೆ ಮುತ್ತೈದೆಯಾಗಿ ಸಾವನಪ್ಪಿರೋದು ತೃಪ್ತಿ ಇದೆ. ಅಪ್ಪ ಯಾವಾಗಲೂ ಹೇಳುತ್ತಿದ್ದರು ಮೊದಲು ನೀನು ಹೋಗು ಹಿಂದೆ ನಾನು ಬರುತ್ತೇನೆ ಎಂದು ಅದೇ ರೀತಿ ಮುತ್ತೈದೆಯಾಗಿ ಹೋಗಿದ್ದಾರೆ ಎಂದರು.

ಪ್ರತಿ ವಿಚಾರದಲ್ಲೂ ಮಕ್ಕಳಿಗೆ ಅಮ್ಮ ಸಪೋರ್ಟ್ ಮಾಡಿದ್ದಾರೆ. ಅಪ ರಾಜಕೀಯವಾಗಿ ಹೊರಗಡೆ ಇದ್ದಾಗ 70 ಪರ್ಸೆಂಟ್ ಅಮ್ಮನೇ ನಮ್ಮನ್ನ ಬೆಳೆಸಿ ನೋಡಿದ್ದಾರೆ . ಸುದೀರ್ಘ 72 ವರ್ಷಗಳ ಕಾಲ ಅಪ್ಪ ಅಮ್ಮ ಜೀವನ ನಡೆಸಿದ್ದಾರೆ ಒಂದು ದಿನವೂ ಜಗಳ ಆಡಿಲ್ಲ ಎಂದು ತಾಯಿ ಚೆನ್ನಮ್ಮನ ಬಗ್ಗೆ ಎಳೆ ಎಳೆಯಾಗಿ ಬಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಲಾರ್ಡ್ಸ್‌ನಲ್ಲಿ ಆಂಗ್ಲರ ಆರ್ಭಟ; 36 ವರ್ಷಗಳ ದಾಖಲೆ ಉಡೀಸ್

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಆತಿಥೇಯ ಇಂಗ್ಲೆಂಡ್​ಗೆ ಭರ್ಜರಿ ಆರಂಭ ಸಿಕ್ಕಿದೆ. ಆರಂಭಿಕರಾದ ಜಾಕೋಬ್ ಬೆಥೆಲ್ ಹಾಗೂ ಬೆನ್ ಡಕೆಟ್ ಈಗಾಗಲೇ ಅರ್ಧಶತಕ ಬಾರಿಸಿದ್ದು ಶತಕದ ಸನಿಹದಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಭಾರತದ ಅನಾನುಭವಿ ಬೌಲಿಂಗ್ ವಿಭಾಗವನ್ನು ಸರಿಯಾಗಿ ದಂಡಿಸುತ್ತಿರುವ ಇಂಗ್ಲೆಂಡ್‌ನ ಆರಂಭಿಕರು ಮೈದಾನದಾದ್ಯಂತ ರನ್‌ಗಳ ಮಳೆ ಸುರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಇಂಗ್ಲೆಂಡ್‌ ತಂಡ 30 ಓವರ್​ಗಳ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 192 ರನ್​ಗಳ ಜೊತೆಯಾಟವನ್ನಾಡಿದೆ.

Source link

Parliament Monsoon Session 2026: ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ; ಎನ್​ಡಿಎ ಮುಂದಿದೆ ಹಲವು ಸವಾಲು – Kannada News | Parliament Monsoon Session 2026 to Be Held from July 20 to August 13

ನವದೆಹಲಿ, ಜುಲೈ 19: ಸಂಸತ್ತಿನ ಮುಂಗಾರು ಅಧಿವೇಶನವು (Monsoon Session 2026) ಜುಲೈ 20ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಭಾರಿ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗಿದೆ. ಕೇಂದ್ರ ಸರ್ಕಾರವು ಹಲವು ಪ್ರಮುಖ ಮಸೂದೆಗಳನ್ನು ಅಂಗೀಕರಿಸಲು ಸಜ್ಜಾಗಿದ್ದರೆ, ಇತ್ತ ವಿರೋಧ ಪಕ್ಷಗಳು ವಿವಿಧ ರಾಜಕೀಯ ಮತ್ತು ಆಡಳಿತಾತ್ಮಕ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ಧತೆ ನಡೆಸಿವೆ. ಈ ಬಾರಿಯ ಮುಂಗಾರು ಅಧಿವೇಶನವು ಪೇಪರ್ ಲೀಕ್, ಭ್ರಷ್ಟಾಚಾರದ ಆರೋಪಗಳು ಮತ್ತು ಪಕ್ಷಾಂತರದ ವಿವಾದಗಳ ಹಿನ್ನೆಲೆಯಲ್ಲಿ ತೀವ್ರ ವಾಕ್ಸಮರಕ್ಕೆ ಸಾಕ್ಷಿಯಾಗುವ ಎಲ್ಲಾ ಮುನ್ಸೂಚನೆಗಳು ಸಿಕ್ಕಿವೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಅಧಿವೇಶನವನ್ನು ಶಾಂತಿಯುತವಾಗಿ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳ ಸಹಕಾರ ಕೋರಿದ್ದಾರೆ. “ಸಂಸತ್ತು ಎಲ್ಲರಿಗೂ ಸೇರಿದ್ದಾಗಿದೆ. ಆಡಳಿತ ಮತ್ತು ವಿರೋಧ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕಿದೆ. ನಾವು ವಿರೋಧ ಪಕ್ಷಗಳ ಧ್ವನಿಯನ್ನು ಕೇಳಲು ಸಿದ್ಧರಿದ್ದೇವೆ, ಅದೇ ರೀತಿ ಅವರು ನಮ್ಮ ಮಾತನ್ನು ಕೇಳುತ್ತಾರೆ ಎಂಬ ಭರವಸೆ ಇದೆ. ಸಂಸತ್ತು ಎಷ್ಟು ಚೆನ್ನಾಗಿ ನಡೆಯುತ್ತದೆಯೋ ದೇಶಕ್ಕೆ ಅಷ್ಟೇ ಒಳ್ಳೆಯದು” ಎಂದು ಕಿರಣ್ ರಿಜಿಜು ಹೇಳಿದ್ದಾರೆ.

ಇದನ್ನೂ ಓದಿ: Parliament Monsoon Session: ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ, ತೆರಿಗೆ, ಉದ್ಯಮ ಸುಧಾರಣೆ ಸೇರಿ 5 ಹೊಸ ಮಸೂದೆ ಮಂಡನೆಗೆ ಸಜ್ಜು

ಅಧಿವೇಶನದಲ್ಲಿ ಕೇಂದ್ರ ಸರ್ಕಾರವನ್ನು ಕಟ್ಟಿಹಾಕಲು ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಬೃಹತ್ ಕಾರ್ಯತಂತ್ರ ರೂಪಿಸಿದ್ದು, ಮುಖ್ಯವಾಗಿ ಈ ಕೆಳಗಿನ ವಿಷಯಗಳನ್ನು ಪ್ರಸ್ತಾಪಿಸಲಿವೆ.

ಅಯೋಧ್ಯೆ ರಾಮಮಂದಿರ ದೇಣಿಗೆ ಅಕ್ರಮ:

ರಾಮಮಂದಿರದ ಕಾಣಿಕೆ ಹಣ ಕಳ್ಳತನದ ಆರೋಪದ ಮೇಲೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಗೆ ಜಂಟಿ ಪತ್ರ ಬರೆದಿದ್ದು, ಅಧಿವೇಶನದಲ್ಲಿ ಈ ಕುರಿತು ಪ್ರಧಾನಿ ಮೌನ ಮುರಿಯಬೇಕೆಂದು ಒತ್ತಾಯಿಸಿದ್ದಾರೆ. ರಾಮ ಮಂದಿರದ ದೇಣಿಗೆ ಹಗರಣವನ್ನು ಮುಂದಿಟ್ಟುಕೊಂಡು ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ವಿಪಕ್ಷಗಳು ಎನ್​ಡಿಎ ಸರ್ಕಾರದ ವಿರುದ್ಧ ದಾಳಿ ನಡೆಸಲು ಸಿದ್ಧತೆ ನಡೆಸಿವೆ.

ಇದನ್ನೂ ಓದಿ: Parliament Monsoon Session: ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ

ನೀಟ್ (NEET) ಪೇಪರ್ ಲೀಕ್ ಹಗರಣ:

ದೇಶಾದ್ಯಂತ ಸೃಷ್ಟಿಯಾಗಿರುವ ನೀಟ್ ಪರೀಕ್ಷೆ ಅಕ್ರಮದ ಕುರಿತು ಜಂಟಿ ತನಿಖೆಗೆ ಒತ್ತಾಯವೂ ಕೇಳಿಬಂದಿದೆ. ಈ ಕುರಿತು ಕೂಡ ಸದನದಲ್ಲಿ ಪ್ರಸ್ತಾಪವಾಗುವ ಸಾಧ್ಯತೆಯಿದೆ.

ಎಥನಾಲ್ ವಿವಾದ:

ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣದ (E20) ಗೊಂದಲ ಹಾಗೂ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತಪಡಿಸಲು ವಿಪಕ್ಷಗಳು ತೀರ್ಮಾನಿಸಿವೆ ಎನ್ನಲಾಗಿದೆ. ಇದಿಷ್ಟೂ ಅಲ್ಲದೆ ಇನ್ನೂ ಹಲವು ವಿಷಯಗಳು ಎನ್​ಡಿಎ ವಿರುದ್ಧ ವಿಪಕ್ಷಗಳಿರುವ ಅಸ್ತ್ರಗಳಾಗಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಬಿಡುಗಡೆ ಮುಂಚೆ ತಮಿಳುನಾಡು ಚಿತ್ರಮಂದಿರಗಳಿಗೆ ಎಚ್ಚರಿಕೆ – Kannada News | Jana Nayagan movie release, producer gave warnings to theater owners

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ವರ್ಷದ ಮೊದಲ ತಿಂಗಳಲ್ಲೇ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಹಲವಾರು ಅಡೆ-ತಡೆಗಳ ಬಳಿಕ ಕೊನೆಗೂ ಜುಲೈ 23 ರಂದು ರಿಲೀಸ್ ಆಗುತ್ತಿದೆ. ಸಿಎಂ ವಿಜಯ್ ಅವರ ಕೊನೆಯ ಸಿನಿಮಾ ಇದೆಂದು ಪ್ರಚಾರ ಮಾಡಲಾಗಿದ್ದ ಕಾರಣ, ಭಾರಿ ಸಂಖ್ಯೆಯ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬೀಳುವ ಸಾಧ್ಯತೆ ಇದೆ. ಹೀಗಾಗಿ ಸಿನಿಮಾ ಬಿಡುಗಡೆಗೆ ಮುಂಚೆ ತಮಿಳುನಾಡಿನ ಚಿತ್ರಮಂದಿರಗಳಿಗೆ ಕೆಲವು ಶಿಸ್ತಿನ ಎಚ್ಚರಿಕೆಗಳನ್ನು ನೀಡಲಾಗಿದೆ.

ವಿಶ್ವದಾದ್ಯಂತ ಸುಮಾರು 3000 ಸ್ಕ್ರೀನ್​​ಗಳಲ್ಲಿ ‘ಜನ ನಾಯಗನ್’ ಸಿನಿಮಾವನ್ನು ಕೆವಿಎನ್ ನಿರ್ಮಾಣ ಸಂಸ್ಥೆಯು ಬಿಡುಗಡೆ ಮಾಡಲು ಮುಂದಾಗಿದೆ. ತಮಿಳುನಾಡು ಒಂದರಲ್ಲೇ 950 ಸ್ಕ್ರೀನ್​​ಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಸಹ ಈಗಾಗಲೇ ಆರಂಭ ಆಗಿದೆ. ಈ ನಡುವೆ ‘ಜನ ನಾಯಗನ್’ ಬಿಡುಗಡೆ ಮಾಡುತ್ತಿರುವ ತಮಿಳುನಾಡಿನ ಚಿತ್ರಮಂದಿರಗಳಿಗೆ ಎಚ್ಚರಿಕೆ ನೀಡಲಾಗಿದೆ.

‘ಜನ ನಾಯಗನ್’ ಸಿನಿಮಾ ಬಿಡುಗಡೆ ಮಾಡುವ ತಮಿಳುನಾಡಿನ ಯಾವುದೇ ಚಿತ್ರಮಂದಿರಗಳು ಹೆಚ್ಚುವರಿ ಟಿಕೆಟ್ ದರವನ್ನು ಪ್ರೇಕ್ಷಕರಿಂದ ಪಡೆಯುವಂತಿಲ್ಲ ಎಂದು ನಿರ್ಮಾಪಕರು ಎಚ್ಚರಿಸಿದ್ದಾರೆ. ಸರ್ಕಾರ ಯಾವ ಟಿಕೆಟ್ ದರವನ್ನು ನಿಗದಿ ಮಾಡಿದೆಯೋ ಅದೇ ದರವನ್ನು ಚಿತ್ರಮಂದಿರದವರು ಪಡೆಯಬೇಕಿದೆ. ಅಲ್ಲದೆ, ಟಿಕೆಟ್ ದರ ಹೆಚ್ಚಳಕ್ಕೆ ನಿರ್ಮಾಪಕರು ಸಹ ಅರ್ಜಿ ಹಾಕಿಲ್ಲ, ಆಂಧ್ರ ಮತ್ತು ತೆಲಂಗಾಣಗಳಲ್ಲಿ ಟಿಕೆಟ್ ದರ ಹೆಚ್ಚಳಕ್ಕೆ ಅರ್ಜಿ ಹಾಕಿ ಅನುಮತಿ ಪಡೆಯಲಾಗುತ್ತದೆ. ಆದರೆ ವಿಜಯ್ ಮನವಿಯ ಮೇರೆಗೆ ಅಲ್ಲಿಯೂ ಸಹ ದರ ಹೆಚ್ಚಳಕ್ಕೆ ಅನುಮತಿ ಪಡೆದಿಲ್ಲವಂತೆ.

ಇದನ್ನೂ ಓದಿ:ಜುಲೈ 23ಕ್ಕೆ ಬಿಡುಗಡೆ ಆಗಲಿದೆ ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’

ಸಿನಿಮಾದ ಬಿಡುಗಡೆ ಬಗ್ಗೆ ವಿಪಕ್ಷಗಳು ಹದ್ದಿನ ಕಣ್ಣೀಟ್ಟಿದ್ದು, ಅವರ ಟೀಕೆಗೆ ಆಹಾರ ಆಗುವ ಯಾವುದೇ ಅಹಿತಕರ ನಡೆಯದಂತೆ ಮುನ್ನೆಚ್ಚರಿಕೆಯನ್ನು ವಿಜಯ್ ಪರವಾಗಿ ಕೆವಿಎನ್ ನಿರ್ಮಾಣ ಸಂಸ್ಥೆಯು ಜವಾಬ್ದಾರಿ ಹೊತ್ತುಕೊಂಡಿದೆ. ಯಾವುದೇ ಕಾರಣಕ್ಕೆ ಅಹಿತಕರ ಘಟನೆಗಳು ನಡೆಯದಂತೆ, ಹೆಚ್ಚು ಟಿಕೆಟ್ ದರ ವಸೂಲಿ ಆಗದಂತೆ, ಹಾಗೂ ‘ಎ’ ಸರ್ಟಿಫಿಕೇಟ್ ಸಿಕ್ಕಿರುವ ಕಾರಣ ಯಾವುದೇ ಕಾರಣಕ್ಕೂ 18 ವರ್ಷದೊಳಗಿನವರಿಗೆ ಟಿಕೆಟ್ ಮಾರಾಟ ಮಾಡದಂತೆ ನೋಡಿಕೊಳ್ಳಬೇಕು ಎಂದು ನಿರ್ಮಾಪಕರು ಮತ್ತು ಅವರ ತಂಡ ವಿತರಕರಿಗೆ ಮತ್ತು ಚಿತ್ರಮಂದಿರ ಮಾಲೀಕರಿಗೆ ಮೌಖಿಕ ಎಚ್ಚರಿಕೆಗಳನ್ನು ನೀಡಿದ್ದಾರೆ.

‘ಜನ ನಾಯಗನ್’ ಸಿನಿಮಾ, ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗಿತ್ತು. ಈ ಸಿನಿಮಾ ಜನವರಿ 12 ರಂದೇ ಬಿಡುಗಡೆ ಆಗಬೇಕಿತ್ತು. ಆದರೆ ಸಿಬಿಎಫ್​​ಸಿ, ಪ್ರಮಾಣ ಪತ್ರ ನೀಡಲು ನಿರಾಕರಿಸಿದ ಕಾರಣ ಸಿನಿಮಾ ಬಿಡುಗಡೆ ತಡವಾಯ್ತು. ಇದೀಗ ಕಾನೂನು ಹೋರಾಟ, ಇನ್ನಿತರೆಗಳ ಬಳಿಕ ಜುಲೈ 23ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಪೂಜಾ ಹೆಗ್ಡೆ ಮತ್ತು ಮಮಿತಾ ಬಿಜು ನಾಯಕಿ. ಅನಿರುದ್ಧ್ ರವಿಚಂದ್ರನ್ ಸಂಗೀತ ಸಿನಿಮಾಕ್ಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version